ಮಂಗಳವಾರ, ಜನವರಿ 17, 2017

ಮನುಷ್ಯನ ದೇಹದ ಬಗ್ಗೆ 26 ವಿಚಿತ್ರ ಸತ್ಯಗಳು

1. ಗಂಡಸರಿಗೆ ದಿನಕ್ಕೆ 40 ಕೂದಲು ಉದುರಿದರೆ ಹೆಂಗಸರಿಗೆ 70 ಉದುರುತ್ತೆ
2. ಮನುಷ್ಯನಿಗೆ ನೀರಿನಿಂದ ಸಿಗುವಷ್ಟು ಶಕ್ತಿ ಆಹಾರ ಪದಾರ್ಥಗಳಿಂದ ಸಿಗಲ್ಲ
3. ದೇಹದಲ್ಲಿ ಅತ್ಯಂತ ಶಕ್ತಿಯುಳ್ಳ ಸ್ನಾಯು ಅಂದ್ರೆ ನಾಲಿಗೆ
4. ಸಾಮಾನ್ಯವಾಗಿ ನಾವು ದಿನಕ್ಕೆ 6 ಸಲಿ ಬಚ್ಚಲುಮನೆಗೆ ಹೋಗ್ತೀವಿ.
5. ನಾಲಿಗೆಯ ಟೇಸ್ಟ್ ಬಡ್ಸ್ ಜೀವಾವಧಿ ಸುಮಾರು 10 ದಿನ ಮಾತ್ರ. ನಂತರ ಬೇರೆ ಹುಟ್ಟುತ್ತವೆ.
6. ವಸಂತ ಋತುವಿನಲ್ಲಿ ಮಕ್ಕಳು ಹೆಚ್ಚು ಬೆಳೀತಾರೆ.
7. ಸೀನಿದಾಗ ದೇಹದ ಎಲ್ಲಾ ಕ್ರಿಯೆಗಳೂ ತಾತ್ಕಾಲಿಕವಾಗಿ ನಿಲ್ಲುತ್ತವೆ. ಎದೆ ಕೂಡ ಬಡಿದುಕೊಳ್ಳಲ್ಲ.
8. ತಲೆಬುರುಡೆಯಲ್ಲಿ 26 ಬೇರೆಬೇರೆ ಮೂಳೆಗಳಿರುತ್ತವೆ
9. ಬಿಸಿಲಲ್ಲಿ ಕೈ ಸುಡುತ್ತಿದ್ದರೆ ನಿಮ್ಮ ದೇಹದಲ್ಲಿ ಸಾಕಷ್ಟು ನೀರಿಲ್ಲ ಅಂತ ಅರ್ಥ. ಕುಡೀರಿ!
10. ಹೆಚ್ಚು ಉಪ್ಪು ತಿನ್ನುವುದರಿಂದ ಎಲ್ಲಾ ರೀತಿಯ ರೋಗಗಳು ಬರುತ್ತವೆ
ಸಕ್ಕರೆ ಖಾಯಿಲೆ, ಶ್ವಾಸಕೋಶ ಮತ್ತು ಕಿಡ್ನಿ ಸಮಸ್ಯೆಗಳು...
11. ಮನುಷ್ಯನ ದೇಹದಲ್ಲಿ ಸರಾಸರಿ 10,000 ಕೋಟಿ ನರಕೋಶ (ನರ್ವ್ ಸೆಲ್ಸ್) ಇರುತ್ತೆ
12. ಬೇಯಿಸದ ಅಡುಗೆ (ಉದಾ: ಕೋಸಂಬರಿ) ಬೇಯಿಸಿದ ಅಡುಗೆಗಿಂತ ಎರಡರಷ್ಟು ಬೇಗ ಅರಗುತ್ತದೆ
13. ಮಂಡಿಚಿಪ್ಪು (ನೀ ಕ್ಯಾಪ್) ಹುಟ್ಟುತ್ತಲೇ ಇರೋದಿಲ್ಲ. 2-6 ವರ್ಷ ಆಗುವಷ್ಟರಲ್ಲಿ ಬೆಳೆಯುತ್ತದೆ.
14. ಹೃದಯ ದಿನಕ್ಕೆ ಸುಮಾರು 1,000 ಸಲ ರಕ್ತವನ್ನು ಸುತ್ತು ಹಾಕಿಸುತ್ತದೆ
15. ನಮ್ಮ ಮೂಳೆಗಳಿಗೆ ಮನೆ ಕಟ್ಟಕ್ಕೆ ಬಳಸುವ ಸಿಮೆಂಟ್ ಕಾಂಕ್ರೀಟಿನ 4ರಷ್ಟು ಶಕ್ತಿಯಿರುತ್ತದೆ
16. ತಿಂದಿದ್ದು ಬಾಯಿಂದ ಹೊಟ್ಟೆ ವರೆಗೆ ಹೋಗಕ್ಕೆ 7 ಸೆಕೆಂಡ್ ತೊಗೊಳ್ಳುತ್ತೆ
17. ನಮಗೆ ಹುಟ್ಟಿದಾಗ 300 ಮೂಳೆಗಳಿರುತ್ತವೆ. ದೊಡ್ಡವರಾಗುತ್ತಿದ್ದಂತೆ ಅದು 206 ಆಗುತ್ತದೆ.
18. ಒಂದು ಕಣ್ಣಿನ ರೆಪ್ಪೆ ಸುಮಾರು 5 ತಿಂಗಳಿರುತ್ತದೆ. ಆಮೇಲೆ ಉದುರಿ ಹೋಗುತ್ತದೆ.
19. ಎರಡು ಹುಬ್ಬೂ ಸೇರಿದರೆ ಸುಮಾರು 1,000 ಕೂದಲಿರುತ್ತೆ
20. ಕಿವಿಯಲ್ಲಿ ದೇಹದ ಅತ್ಯಂತ ಚಿಕ್ಕ ಮೂಳೆಯಿರುತ್ತದೆ
21. ಮಕ್ಕಳ ನಾಲಿಗೆಯಲ್ಲಿ ದೊಡ್ಡೋರಿಗಿಂತ ಜಾಸ್ತಿ ಟೇಸ್ಟ್ ಬಡ್ಸ್ ಇರುತ್ತವೆ
22. ರಾತ್ರಿಗಿಂತ ಬೆಳಗ್ಗೆ ನಮ್ಮ ಉದ್ದ ಜಾಸ್ತಿಯಿರುತ್ತೆ
23. ದೇಹದ ಅತಿ ದೊಡ್ಡ ಸ್ನಾಯು ಇದು. ಹೌದು, ಸರಿಯಾಗಿ ನೋಡಿದ್ರಿ. ಇದೇ.
24. ವಯಸ್ಸಾಗುತ್ತಿದ್ದ ಹಾಗೆ ಕಣ್ಣು ದೊಡ್ಡದಾಗೋದಿಲ್ಲ. ಆದರೆ ಕಿವಿ ಮತ್ತು ಮೂಗು ಆಗುತ್ತಲೇ ಇರುತ್ತವೆ.
25. ಉಗುರು ಮತ್ತು ಕೂದಲು ಎರಡೂ ಒಂದೇ ವಸ್ತುವಿನಿಂದ ಕೂಡಿರುತ್ತವೆ
26. ಮೂಳೆಗೆ ಸಿಮೆಂಟ್ ಕಾಂಕ್ರೀಟಿನ 4ರಷ್ಟು ಶಕ್ತಿಯಿರುತ್ತದೆ
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಗಣೇಶನ ಶಕ್ತಿ

  ವಿಷ್ಣು ಲಕ್ಷ್ಮೀದೇವಿಯನ್ನು ವಿವಾಹವಾಗುವಾಗ ದೇವತೆಗಳಿಗೆಲ್ಲ ಒಂದೊಂದು ಕೆಲಸವನ್ನು ಒಪ್ಪಿಸುತ್ತಾನೆ. ದೇವತೆಗಳಿಗೆ ಗಣೇಶ ಮದುವೆಗೆ ಬರುವುದು ಇಷ್ಟವಾಗುವುದಿಲ್ಲ. ಹೀಗಾಗಿ ಅವರು ಗಣೇಶನನ್ನು ಯಾವುದಕ್ಕೂ ಕರೆಯುವುದಿಲ್ಲ.
   ಅವನ ದೊಡ್ಡ ಹೊಟ್ಟೆ, ಮೊರದಂಥ ಅಗಲ ಕಿವಿಗಳು, ಹೊಟ್ಟೆಗೆ ಸುತ್ತಿದ ಹಾವು ಅವನ ದಪ್ಪದಪ್ಪ ಕಾಲುಗಳು "ಅಯ್ಯೋ ಛೀ ಈ ಗಣೇಶ ಬೇಡಪ್ಪಾ,ನಮ್ಮ ಜೊತೆ ಬರುವುದು ಅವನೋ ಅವನ ವೇಷವೋ' ಎಂದು ಮೂಗು ಮುರಿಯುತ್ತಾರೆ. ವಿಷ್ಣುಗೂ ಗಣೇಶ ಮದುವೆಗೆ ಬರುವುದು ಬೇಡ ಎಂದು ಹೇಳಿಕೊಡುತ್ತಾರೆ. ವಿಷ್ಣುಗೆ ಇದು ಇಷ್ಟವಾಗದಿದ್ದರೂ ದೇವತೆಗಳ ಒತ್ತಾಯಕ್ಕೆ ಕಟ್ಟುಬಿದ್ದು ಗಣೇಶನನು,° "ನೀನು ಸ್ವರ್ಗವನ್ನು ನೋಡಿಕೊಂಡು ಇಲ್ಲೇ ಇರು. ಮದುವೆಗೆ ಬರುವುದು ಬೇಡ' ಎಂದು ಹೇಳುತ್ತಾನೆ.
    ಗಣೇಶನಿಗೆ ನಿರಾಶೆಯಾದರೂ ಒಪ್ಪಿಕೊಳ್ಳುತ್ತಾನೆ. ಎಲ್ಲರೂ ಮದುವೆಗೆ ಹೊರಟುಬಿಡುತ್ತಾರೆ.ಕಲಹ ಪ್ರಿಯನಾದ ನಾರದನಿಗೆ ಇದು ಗೊತ್ತಾಗುತ್ತದೆ. ದೇವತೆಗಳ ಹುನ್ನಾರವೂ ತಿಳಿಯುತ್ತದೆ. ಅವನು ಓಡೋಡಿ ಬಂದು ಗಣೇಶನ ಬಳಿ ಇದೆಲ್ಲವನ್ನೂ ಹೇಳುತ್ತಾನೆ. ನೀನು ಮದುವೆಗೆ ಹೊಗುವುದು ಬೇಡ ಎಂದ ದೇವತೆಗಳಿಗೆ ಪಾಠ ಕಲಿಸು ಎಂದು ಒಂದು ಉಪಾಯವನ್ನು ಹೇಳಿಕೊಡುತ್ತಾನೆ.
   ಅದರಂತೆ ಗಣೇಶ ತನ್ನ ವಾಹನವಾದ ಮೂಷಿಕವನ್ನು ಕರೆದು ವಿಷ್ಣು ಹಾಗೂ ಲಕ್ಷ್ಮಿಯ ಮೆರವಣಿಗೆ ಹೊರಡುವ ರಸ್ತೆಯನ್ನು ಹಳ್ಳಕೊಳ್ಳಗಳಿರುವಂತೆ ಮಾಡು ಎಂದು ಆಜ್ಞೆ ಮಾಡುತ್ತಾನೆ. ಮೂಷಿಕವು ತನ್ನ ಸೈನ್ಯದೊಡನೆ ರಸ್ತೆಯನ್ನು ಕೊರೆದು ಒಳಗಡೆ ಡೊಗರು ಮಾಡಿಬಿಡುತ್ತದೆ. ಮೇಲ್ನೋಟಕ್ಕೆ ರಸ್ತೆ ಸರಿಯಾಗಿ ಕಂಡರೂ ಮೆರವಣಿಗೆ ಬಂದಾಗ ರಥಗಳು ಕುದುರೆಗಳು ಎಲ್ಲವೂ ಆ ಹಳ್ಳದಲ್ಲಿ ಪಲ್ಟಿಹೊಡೆಯುತ್ತದೆ. ದೇವತೆಗಳು ಎಷ್ಟು ಪ್ರಯತ್ನಿಸಿದರೂ ರಥಗಳನ್ನು ಮೇಲೆತ್ತಲು ಆಗುವುದಿಲ್ಲ.
    ಆಗ ಅಲ್ಲಿಯೇ ಹೋಗುತ್ತಿದ್ದ ಆ ಊರಿನ ರೈತನೊಬ್ಬನು ಕಾಣುತ್ತಾನೆ. ಅವನನ್ನು ಕರೆದು ಸಹಾಯ ಮಾಡಲು ಕೇಳಿಕೊಳ್ಳುತ್ತಾರೆ. ಅವನು ಜೈ ಗಣೇಶ ಎಂದು ಜೋರಾಗಿ ಕೂಗುತ್ತಾ ರಥವನ್ನು ಮೇಲೆತ್ತುತ್ತಾನೆ.
ರಥ ಸುಲಭವಾಗಿ ಮೇಲೆ ಬರುತ್ತದೆ. ದೇವತೆಗಳಿಗೆ ಆಶ್ಚರ್ಯವಾಗುತ್ತದೆ. "ನೀನು ರಥವನ್ನು ಮೇಲಕ್ಕೆತ್ತುವಾಗ ಜೈ ಗಣೇಶ ಎಂದು ಏಕೆ ಕೂಗಿದೆ' ಎಂದು ರೈತನನ್ನು ಕೇಳುತ್ತಾರೆ.
  ಅದಕ್ಕೆ ರೈತ ಹೇಳುತ್ತಾನೆ, "ಗಣೇಶನನ್ನು ನೆನೆದು ಯಾವ ಕೆಲಸ ಮಾಡಿದರೂ ಜಯವಾಗುತ್ತದೆ, ಹಾಗೂ ಗಣೇಶ ವಿಘ್ನ ನಿವಾರಕ. ಅವನನ್ನು ನೆನೆದರೆ ನಮ್ಮ ಕೆಲಸದಲ್ಲಾಗುವ ವಿಘ್ನಗಳನ್ನು ತಪ್ಪಿಸುತ್ತಾನೆ. ಅವನನ್ನು ನೆನೆಯದೆ ನಾವು ಯಾವ ಕೆಲಸವನ್ನೂ ಮಾಡುವುದಿಲ್ಲ'  
   ಇದನ್ನು ಕೇಳಿ ದೇವತೆಗಳಿಗೆ ನಾಚಿಕೆಯಾಗುತ್ತದೆ. ತಮ್ಮ ತಪ್ಪಿನ ಅರಿವಾಗುತ್ತದೆ. ಗಣೇಶನನ್ನು ಮದುವೆಗೆ ಆಹ್ವಾನಿಸಲು ವಿಷ್ಣುಗೆ ಕೇಳಿಕೊಳ್ಳುತ್ತಾರೆ. ವಿಷ್ಣು ಮನದಲ್ಲೇ ದೇವತೆಗಳ ಅಜಾನಕ್ಕೆ ನಗುತ್ತಾ ಗಣಪತಿಯನ್ನು ಮದುವೆಗೆ ಆಹ್ವಾನಿಸುತ್ತಾನೆ.
   ಗಣಪತಿ ಬಂದ ತಕ್ಷಣ ರಸ್ತೆ ಮೊದಲಿನಂತೆ ಸಮತಟ್ಟಾಗುತ್ತದೆ. ಮದುವೆಯ ಮೆರವಣಿಗೆ ನಿರ್ವಿಘ್ನವಾಗಿ ಸಾಗುತ್ತದೆ. ದೇವತೆಗಳು ಗಣೇಶನ ಕ್ಷಮೆ ಕೇಳುತ್ತಾರೆ.
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಪ್ರಪಂಚದ ದೇಶಗಳು ಮತ್ತು ರಾಜಧಾನಿ

1. ಅಫ್ಘಾನಿಸ್ತಾನ -ಕಾಬೂಲ್.
2. ಅಕ್ರೋತಿರಿ ಮತ್ತು ಧೆಕೆಲಿಯಾ- ಎಪಿಸ್ಕೋಪಿ ಕಂಟೋನ್ಮೆಂಟ್.
3. ಅಲ್ಬೇನಿಯಾ -ಟಿರಾನಾ.
4. ಅಲ್ಜೀರಿಯಾ -ಅಲ್ಜೀರಿಸ್.
5. ಅಮೇರಿಕನ್ ಸಮೋವಾ ಪಾಗೋ- ಪಾಗೋ.
6. ಅಂಡೋರಾ- ಅಂಡೋರಾ ಲಾ ವೆಲ್ಲಾ.
7. ಅಂಗೋಲಾ- ಲುಆಂಡಾ.
8. ಆಂಗ್ವಿಲಾ- ದಿ ವ್ಯಾಲ್ಲಿ.
9. ಆಂಟಿಗುವಾ ಮತ್ತು ಬಾರ್ಬಡಾ -ಸೇಂಟ್ ಜಾನ್ಸ್.
10. ಅರ್ಜೆಂಟೀನಾ- ಬ್ಯುನೋಸ್ ಐರಿಸ್.
11. ಅರ್ಮೇನಿಯಾ- ಯೆರೆವಾನ್.
12. ಅರುಬಾ ಓರನ್- ಜೆಸ್ತಾದ್.
13. ಆಸ್ಟ್ರೇಲಿಯಾ -ಕ್ಯಾನ್ಬೆರಾ.
14. ಆಸ್ಟ್ರಿಯಾ- ವಿಯೆನ್ನಾ.
15. ಅಝರ್ಬೆಜಾನ್- ಬಾಕು.
16. ಬಹಾಮಾಸ್- ನಾಸ್ಸಾಉ.
17. ಬಹ್ರೇನ್ -ಮನಾಮಾ.
18. ಬಾಂಗ್ಲಾದೇಶ್ -ಢಾಕಾ.
19. ಬಾರ್ಬಡೋಸ್ -ಬ್ರಿಡ್ಜಟೌನ್.
20. ಬೆಲಾರೂಸ್ ಮಿನ್ಸ್ಕ್.
21. ಬೆಲ್ಜಿಯಮ್- ಬ್ರುಸ್ಸೆಲ್ಸ್.
22. ಬೆಲಿಝ್ -ಬೆಲ್ಮೊಪಾನ್.
23. ಬೆನಿನ್ ಪೊರ್ಟೋ-ನೋವೋ.
24. ಬರ್ಮುಡಾ -ಹ್ಯಾಮಿಲ್ಟನ್.
25. ಭೂತಾನ್ -ಥಿಂಪು.
26. ಬೊಲಿವಿಯಾ -ಸುಕ್ರೆ / ಲಾ ಪಾಝ್
27. ಬೋಸ್ನಿಯಾ ಮತ್ತು ಹರ್ಝೆಗೋವಿನಾ- ಸರಜೆವೋ.
28. ಬೋಟ್ಸ್ವಾನಾ -ಗೆಬರೋನ್.
29. ಬ್ರಾಝಿಲ್ -ಬ್ರಾಸಿಲಿಯಾ.
30. ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್- ರೋಡ್ ಟೌನ್.
31. ಬ್ರುನಿ ಬಂದಾರ್ ಸೇರಿ -ಬೇಗವಾನ್.
32. ಬಲ್ಗೇರಿಯಾ -ಸೋಫಿಯಾ.
33. ಬರ್ಕಿನಾ ಫಾಸೋ- ಉಆಗಡೌಗು.
34. ಬುರುಂಡಿ- ಬುಜುಂಬುರಾ.
35. ಕಾಂಬೋಡಿಯಾ- ಫೆನೋಮ್ ಪೆನ್.
36. ಕ್ಯಾಮರೂನ್- ಯಾಂಡೇ .
37. ಕೆನಡಾ -ಒಟ್ಟಾವಾ.
38. ಕೇಪ್ ವರ್ಡ್- ಪ್ರೈಯಾ .
39. ಕೇಮನ್ ಐಲ್ಯಾಂಡ್ಸ್ -ಜಾರ್ಜ್ ಟೌನ್.
40. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್- ಬಾಂಗೈ.
41. ಚಾಡ್ ಎನ್ ’ -ಜಮೇನಾ .
42. ಚಿಲಿ -ಸ್ಯಾಂಟಿಯಾಗೋ.
43. ಕ್ರಿಸ್ ಮಸ್ ಐಲ್ಯಾಂಡ್- ಫ್ಲಾಯಿಂಗ್ ಫಿಶ್ ಕೋವ್.
44. ಕೊಕೋಸ್ ಐಲ್ಯಾಂಡ್ - ವೆಸ್ಟ್ ಐಲ್ಯಾಂಡ್.
45. ಕೊಲಂಬಿಯ- ಬೊಗೊಟಾ.
46. ಕೊಮೊರೋಸ್- ಮೊರೊನಿ.
47. ಕುಕ್ ಐಲ್ಯಾಂಡ್ಸ್- ಅವರುಆ.
48. ಕೋಸ್ಟಾ ರಿಕಾ- ಸ್ಯಾನ್ ಜೋಸ್.
49. ಕ್ರೊಯೇಷಿಯಾ- ಝಾಗ್ರೇಬ್.
50. ಕ್ಯೂಬಾ- ಹವಾನಾ.
51. ಸಿಪ್ರಸ್- ನಿಕೋಸೊಯಾ.
52. ಝೆಕ್ ಗಣರಾಜ್ಯ -ಪ್ರೇಗ್.
53. ಕೋಟ್ ಡೆ ಐವರಿ- ಯಾಮೊಸೊಕ್ರೋ.
54. ಕಾಂಗೋ ಪ್ರಜಾ ಗಣರಾಜ್ಯ -ಕಿನ್ಸ್ಹಾಸಾ.
55. ಡೆನ್ಮಾರ್ಕ್ -ಕೋಪನ್ ಹೇಗನ್.
56. ಜಿಬೌತಿ -ಜಿಬೌತಿ.
57. ಡೊಮಿನಿಕಾ -ರೊಸ್ಯು.
58. ಡೊಮಿನಿಕಾ ಗಣರಾಜ್ಯ-ಸ್ಯಾಂಟೋ ಡೊಮಿಂಗೋ.
59. ಪೂರ್ವ ತಿಮೋರ್ -ಡಿಲಿ.
60. ಇಕ್ವೆಡಾರ್- ಕ್ವಿಟೋ.
61. ಈಜಿಪ್ಟ್ -ಕೈರೋ.
62. ಎಲ್ ಸಾಲ್ವಡೋರ್- ಸಾನ್ ಸಾಲ್ವಡೋರ್.
63. ಎಕ್ವೆಟೋರಿಯಲ್ ಗಿನಿಯಾ - ಮಲಬೊ.
64. ಎರಿತ್ರಿಯಾ -ಅಸ್ಮಾರಾ.
65. ಎಸ್ಟೋನಿಯಾ- ಟಾಲಿನ್.
66. ಇಥಿಯೋಪಿಯಾ- ಆಡಿಸ್ ಅಬಾಬಾ.
67. ಫಾಲ್ಕಲ್ಯಾಂಡ್ ದ್ವೀಪಗಳು- ಸ್ಟ್ಯಾನ್ಲಿ.
68. ಫೆರೋ ದ್ವೀಪಗಳು -ಟೋರ್ಶ್ವಾನ್.
69. ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಷಿಯಾ - ಪಾಲಿಕಿರ್.
70. ಫಿಜಿ -ಸುವಾ.
71. ಫಿನ್ ಲ್ಯಾಂಡ್- ಹೆಲ್ಸಿಂಕಿ.
72. ಫ್ರಾನ್ಸ್- ಪ್ಯಾರಿಸ್.
73. ಫ್ರೆಂಚ್ ಪಾಲಿನೇಷಿಯಾ- ಪಪೆಟ.
74. ಗಬೊನ್-ಲಿಬ್ರವಿಲ್ಲೆ.
75. ಗಾಂಬಿಯಾ- ಬಂಜುಲ್.
76. ಜಾರ್ಜಿಯಾ- ಬಿಲಿಸಿ.
77. ಜರ್ಮನಿ -ಬರ್ಲಿನ್.
78. ಘಾನಾ- ಆಕ್ರಾ .
79. ಜಿಬ್ರಾಲ್ಟರ್- ಜಿಬ್ರಾಲ್ಟರ್.
80. ಗ್ರೀಸ್- ಅಥೆನ್ಸ್.
81. ಗ್ರೀನ್ ಲ್ಯಾಂಡ್ -ನೂಕ್.
82. ಗ್ರೆನಾಡಾ -ಸೇಂಟ್ ಜಾರ್ಜ್.
83. ಗ್ವಾಮ್ -ಹಗತ್ನಾ.
84. ಗ್ವಾಟೆಮಾಲಾ -ಗ್ವಾಟೆಮಾಲಾ ನಗರ.
85. ಗೆರ್ನ್ಸೆ -ಸೇಂಟ್ ಪೀಟರ್ ಪೋರ್ಟ್.
86. ಗಿನಿಯಾ- ಕೊನಾಕ್ರಿ.
87. ಗಿನಿಯಾ- ಬಿಸಾಉ ಬಿಸಾಉ.
88. ಗಯಾನಾ- ಜಾರ್ಜ್ ಟೌನ್.
89. ಹೈಟಿ ಪೋರ್ಟ್- ಔ ಪ್ರಿನ್ಸ್.
90. ಹೊಂಡುರಾಸ್- ತೆಗುಸಿಗಲ್ಪಾ.
91. ಹಂಗರಿ- ಬುಡಾಪೆಸ್ಟ್.
92. ಐಸ್ ಲ್ಯಾಂಡ್ -ರೆಯ್ಕಜಾವಿಕ್.
93. ಭಾರತ -ನವದೆಹಲಿ.
94. ಇಂಡೋನೇಷಿಯಾ -ಜಕಾರ್ತಾ.
95. ಇರಾನ್- ತೆಹರಾನ್.
96. ಇರಾಕ್ -ಬಾಗ್ದಾದ್.
97. ಐರ್ ಲ್ಯಾಂಡ್- ಡಬ್ಲಿನ್.
98. ಐಲ್ ಆಫ್ ಮ್ಯಾನ್ -ಡಗ್ಲಾಸ್.
99. ಇಸ್ರೇಲ್- ಜೆರುಸಲೇಮ್.
100. ಇಟಲಿ- ರೋಮ್.
101. ಜಮೈಕಾ -ಕಿಂಗಸ್ಟನ್.
102. ಜಪಾನ್- ಟೊಕಿಯೋ.
103. ಜರ್ಸಿ- ಸೇಂಟ್ ಹೀಲರ್.
104. ಜೋರ್ಡಾನ್ -ಅಮ್ಮಾನ್.
105. ಕಝಕಿಸ್ತಾನ್- ಅಸ್ತಾನಾ.
106. ಕೀನ್ಯಾ- ನೈರೋಬಿ.
107. ಕಿರಿಬಾತಿ -ದಕ್ಷಿಣ ತರಾವಾ.
108. ಕೊಸೊವೋ- ಪ್ರಿಸ್ಟಿನಾ.
109. ಕುವೈತ್- ಕುವೈತ್ ನಗರ.
110. ಕಿರ್ಗಿಸ್ತಾನ್- ಬಿಶ್ಕೇಕ್.
111. ಲಾವೊಸ್- ವಿಯೆನ್ಶಿಯೇನ್.
112. ಲಾತ್ವಿಯಾ- ರಿಗಾ.
113. ಲೆಬನಾನ್ -ಬೀರತ್.
114. ಲೆಸೋತೊ- ಮಾಸೇರು.
115. ಲೈಬೀರಿಯಾ- ಮೊನ್ರೋವಿಯಾ.
116. ಲಿಬಿಯಾ- ತ್ರಿಪೋಲಿ.
117. ಲೀಶೆನ್ ಸ್ಟೈನ್ - ವಾಡುಝ್.
118. ಲಿಥುಯೇನಿಯಾ- ವಿಲ್ನಿಯಸ್.
119. ಲುಕ್ಸೆಂಬರ್ಗ್ -ಲುಕ್ಸೆಂಬರ್ಗ್ ನಗರ.
120. ಮಸಿಡೋನಿಯಾ- ಸ್ಕೋಜೆ.
121. ಮಡಗಾಸ್ಕರ್- ಅಂಟಾನನರಿವೊ.
122. ಮಾಲಾವಿ -ಲಿಲೊಂಗ್ವೆ.
123. ಮಲೇಷಿಯಾ- ಕೌಲಾಲಂಪುರ /
ಪುತ್ರಾಜಯಾ.
124. ಮಾಲ್ಡೀವ್ಸ್ -ಮಾಲೆ.
125. ಮಾಲಿ- ಬಮಾಕೊ.
126. ಮಾಲ್ಟಾ -ವೆಲೆಟ್ಟಾ.
127. ಮಾರ್ಷಲ್ ದ್ವೀಪಗಳು- ಮಜುರೊ.
128. ಮಾರಿಷಿಯಾನಾ- ನೌಕ್ಚೋಟ್.
129. ಮಾರಿಷಿಯಸ್ -ಪೋರ್ಟ್ ಲೂಯಿಸ್.
130. ಮೇಯೊಟ್ -ಮಾಮೌಡ್ಝು.
131. ಮೆಕ್ಸಿಕೋ -ಮೆಕ್ಸಿಕೋ ನಗರ.
132. ಮಾಲ್ಡೋವಾ- ಚಿಸಿನಾಉ.
133. ಮೊನಾಕೋ- ಮೊನಾಕೊ.
134. ಮಂಗೋಲಿಯಾ- ಉಲಾನ್ ಬತಾರ್.
135. ಮಾಂಟೆನೆಗ್ರೋ- ಪೊಡ್ಗೋರಿಕಾ.
136. ಮಾಂಟ್ಸೆರಾಟ್- ಪ್ಲೈಮೌಥ್.
137. ಮೊರೊಕ್ಕೋ -ರಾಬಾತ್.
138. ಮಾಝಾಂಬಿಕ್- ಮಾಪುಟೋ.
139. ಮಯನ್ಮಾರ್- ನೇಪಿಡಾ.
140. ನಮೀಬಿಯಾ -ವಿಂಢೋಕ್.
141. ನೌರು- ಯಾರೆನ್.
142. ನೇಪಾಳ -ಕಠ್ಮಂಡು.
143. ನೆದರ್ ಲ್ಯಾಂಡ್ಸ್- ಆ್ಯಮ್
ಸ್ಟರಡಾಮ್.
144. ನೆದರ್ ಲ್ಯಾಂಡ್ಸ್ ಆ್ಯಂಟಿಲ್ಸ್- ವಿಲ್ಲೆಮಸ್ಟಾಡ್.
145. ನ್ಯೂ ಕ್ಯಾಲೆಡೋನಿಯಾ -ನೌಮಿಯಾ
146. ನ್ಯೂಝೀಲ್ಯಾಂಡ್,- ವೆಲಿಂಗ್ಟನ್.
147. ನಿಕಾರಾಗುಆ- ಮನಾಗುಆ.
148. ನೈಗರ್- ನಿಯಾಮಿ.
149. ನೈಜೀರಿಯಾ- ಅಬುಜಾ.
150. ನ್ಯೂ (niue) -ಅಲೋಫಿ.
151. ನೊರ್ಫೋಕ್ ದ್ವೀಪಗಳು- ಕಿಂಗಸ್ಟನ್.
152. ಉತ್ತರ ಕೊರಿಯಾ,- ಪ್ಯೋಂಗ್ ಯಾಂಗ್.
153. ಉತ್ತರ ಸಿಪ್ರಸ್ -ನಿಕೋಸಿಯಾ.
154. ಉತ್ತರ ಐರ್ ಲ್ಯಾಂಡ್-ಬೆಲ್ಫಾಸ್ಟ್.
155. ಉತ್ತರ ಮರಿಯಾನಾ ದ್ವೀಪಗಳು- ಸೈಪಾನ್.
156. ನಾರ್ವೆ- ಓಸ್ಲೋ.
157. ಓಮನ್ -ಮಸ್ಕತ್.
158. ಪಾಕಿಸ್ತಾನ್- ಇಸ್ಲಾಮಾಬಾದ್.
159. ಪಲಾಉ ಗೆರುಲ್- ಮಡ್.
160. ಪ್ಯಾಲೆಸ್ತೀನ್ -ಉತ್ತರ
ಜೆರುಸಲೇಮ್.
161. ಪನಾಮಾ- ಪನಾಮಾ ನಗರ.
162. ಪಪುವಾ ನ್ಯೂ ಗಿನಿಯಾ- ಪೋರ್ಟ್ ಮಾರ್ಸ್ ಬೀ.
163. ಪೆರುಗ್ವೆ -ಅಸುನ್ಶಿಯಾನ್.
164. ಚೀನಾ- ಬೀಜಿಂಗ್.
165. ಪೆರು -ಲಿಮಾ.
166. ಫಿಲಿಪ್ಪೀನ್ಸ್ -ಮಣಿಲಾ.
167. ಪಿಟ್ ಕೇರ್ನ್ ದ್ವೀಪಗಳು- ಆ್ಯಡಮ್ಸ್ ಟೌನ್.
168. ಪೋಲಂಡ್- ವಾರ್ಸಾ.
169. ಪೋರ್ತುಗಲ್ -ಲಿಸ್ಬನ್.
170. ಪೋರ್ಟೋ ರಿಕೊ -ಸಾನ್ ಜುಆನ್.
172. ಕತಾರ್- ದೋಹಾ.
173. ತೈವಾನ್- ತೈಪೈ.
174. ಕಾಂಗೋ -ಬ್ರಾಝಾವಿಲ್ಲೆ.
175. ರೊಮಾನಿಯಾ -ಬುಕಾರೆಸ್ಟ್.
176. ರಷಿಯಾ -ಮಾಸ್ಕೋ.
177. ರ್ವಾಂಡ -ಕಿಗಾಲಿ.
178. ಸೇಂಟ್ ಬಾರ್ಥೆಲೆಮಿ- ಗುಸ್ತಾವಿಯಾ.
179. ಸೇಂಟ್ ಹೆಲೆನಾ -ಜೇಮ್ಸ್ ಟೌನ್.
180. ಸೆಂಟ್ ಕೀಟ್ಸ್ ಮತ್ತು ನೆವಿಸ್
-ಬ್ಯಾಸ್ಸೆಟೆರೆ.
181. ಸೇಂಟ್ ಲೂಯಿಸ್- ಕ್ಯಾಸ್ಟ್ರೀಸ್.
182. ಸೇಂಟ್ ಮಾರ್ಟಿನ್- ಮಾರಿಗೋಟ್.
183. ಸೇಂಟ್ ಪಿಯರೆ ಮತ್ತು ಮಿಕೆಲೋನ್- ಸೇಂಟ್ ಪಿಯರೆ.
184. ಸೇಂಟ್ ವಿನ್ಸೆಂಟ್ ಮತ್ತು ದಿ.
ಗ್ರೆನೆಡೈನ್ಸ್- ಕಿಂಗ್ಸ್ ಟೌನ್.
185. ಸಮೋವಾ -ಏಪಿಯಾ.
186. ಸಾನ್ ಮರಿನೋ- ಸಾನ್ ಮರಿನೋ.
187. ಸೌದಿ ಅರೇಬಿಯಾ- ರಿಯಾದ್.
188. ಸ್ಕಾಟ್ ಲ್ಯಾಂಡ್ -ಎಡಿನ್ ಬರೋ.
189. ಸೆನೆಗಲ್- ದಕಾರ್.
190. ಸರ್ಬಿಯಾ -ಬೆಲ್ಗ್ರೇಡ್.
191. ಸಿಶೆಲ್ಲಿಸ್ -ವಿಕ್ಟೋರಿಯಾ.
192. ಸಿಯೆರಾ ಲಿಯೋನ್ -ಫ್ರೀ ಟೌನ್.
193. ಸಿಂಗಾಪೂರ್- ಸಿಂಗಾಪುರ್.
194. ಸ್ಲೋವಾಕಿಯಾ -ಬ್ರತಿಸ್ಲಾವಾ.
195. ಸ್ಲೊವೇನಿಯಾ -ಜುಬ್ಲಜಾನಾ.
196. ಸೊಲೊಮನ್ ದ್ವೀಪಗಳು- ಹೊನಿಯಾರಾ.
197. ಸೊಮಾಲಿಯಾ,- ಮಾಗಾದಿಶು.
198. ಸೊಮಾಲಿಲ್ಯಾಂಡ್ -ಹರ್ಗೇಸಿಯಾ.
199. ದಕ್ಷಿಣ ಆಫ್ರಿಕಾ- ಪ್ರೆಟೋರಿಯಾ.
200. ದಕ್ಷಿಣ ಜಾರ್ಜಿಯಾ ಮತ್ತು ದಕ್ಷಿಣ.
ಸ್ಯಾಂಡ್ ವಿಚ್ ದ್ವೀಪಗಳು - ಗೃತ್ವಿಕೇನ್.
201. ದಕ್ಷಿಣ ಕೊರಿಯಾ- ಸಿಯೋಲ್.
202. ಸ್ಪೇನ್ -ಮ್ಯಾಡ್ರಿಡ್.
203. ಶ್ರೀಲಂಕಾ - ಶ್ರೀ ಜಯವರ್ಧನೆ ಪುರ.
204. ಸುಡಾನ್- ಖಾರ್ತೂಮ್.
205. ಸುರಿನಾಮಾ -ಪರಮರಿಬೊ.
206. ಸ್ವಾಝಿಲ್ಯಾಂಡ್- ಬಬಾನೆ.
207. ಸ್ವೀಡನ್- ಸ್ಟಾಕ್ ಹೋಮ್.
208. ಸ್ವಿಟ್ಜರಲ್ಯಾಂಡ್- ಬರ್ನ್.
209. ಸಿರಿಯಾ- ಡಮಾಸ್ಕಸ್.
210. ಸಾಓ ತೋಮೆ ಮತ್ತು ಪ್ರಿನ್ಸಿಪ್ ಸಾಓ -ತೋಮೆ.
211. ತಜಕಿಸ್ತಾನ್- ದುಶಾಂಬೆ.
212. ತಾಂಝಾನಿಯಾ -ಡೊಡೊಮೋ.
213. ಥಾಯ್ಲ್ಯಾಂಡ್ -ಬ್ಯಾಂಕಾಕ್.
214. ಟೋಗೋ- ಲೋಮೆ.
215. ಟೋಂಗಾ-ನುಕು ಅಲೋಫಾ.
216. ಟ್ರಾನ್ಸಿಸ್ಟ್ರಿಯಾ- ತಿರಾಸ್ಪೋಲ್.
217. ಟ್ರಿನಿಡಾಡ್ ಮತ್ತು ಟೊಬಾಗೋ - ಪೋರ್ಟ್ ಆಫ್ ಸ್ಪೇನ್.
218. ಟುನಿಸಿಯಾ- ಟ್ಯುನಿಸ್.
219. ಟರ್ಕಿ- ಅಂಕಾರಾ.
220. ತುರ್ಕಮೆನಿಸ್ತಾನ್ -ಅಶ್ಗಬಾತ್.
221. ಟರ್ಕ್ ಮತ್ತು ಕೈಕೋಸ್ ದ್ವೀಪಗಳು- ಕಾಕ್ ಬರ್ನ್ ಟೌನ್.
222. ತುವಾಲು- ಫುನಾಫುಟಿ.
223. ಉಗಾಂಡಾ- ಕಂಪಾಲಾ.
224. ಉಕ್ರೇನ್- ಕೀವ್.
225. ಅರಬ್ ಸಂಯುಕ್ತ ಸಂಸ್ಥಾನ- ಅಬು ಧಾಬಿ.
226. ಇಂಗ್ಲೆಂಡ್ -ಲಂಡನ್.
227. ಅಮೆರಿಕಾ ಸಂಯುಕ್ತ ಸಂಸ್ಥಾನ - ವಾಷಿಂಗ್ಟನ್
228. ಯುನೈಟೆಡ್ ಸ್ಟೇಟ್ಸ್ ವರ್ಜಿನ್ ದ್ವೀಪಗಳು -ಚಾರ್ಲೋಟ್
ಅಮೇಲೀ
229. ಉರುಗ್ವೆ -ಮಾಂಟೇ ವಿಡಿಯೋ
230. ಉಜ್ಬೇಕಿಸ್ತಾನ್ -ತಾಶ್ಕೆಂಟ್
231. ವನೌತು ಪೋರ್ಟ್ -ವಿಲಾ
232. ವ್ಯಾಟಿಕನ್ ನಗರ -ವ್ಯಾಟಿಕನ್ ನಗರ
233. ವೆನೆಝುವೆಲಾ- ಕಾರ್ಕಾಸ್
234. ವಿಯೆಟ್ನಾಂ- ಹನೋಯ್
235. ವೇಲ್ಸ್ -ಕಾರ್ಡಿಫ್
236. ವಾಲಿಸ್ ಮತ್ತು ಫ್ಯುಚುನಾ ಮಾಟಾ-ಉಟು
237. ದಕ್ಷಿಣ ಸಹಾರಾ-ಲಾಯೋನ್
238. ಯೆಮೆನ್- ಸನಾ
239. ಝಾಂಬಿಯಾ- ಲುಸಾಕಾ
240. ಝಿಂಬಾಬ್ವೆ- ಹರಾರೆ.
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಹೀಗೂ ಇದ್ದರು ನಮ್ಮ ಹೆಮ್ಮೆಯ ಕನ್ನಡ ಸಾಹಿತಿಗಳು...!!

ಗಳಗನಾಥರು:-ಕನ್ನಡದ ಪುಸ್ತಕಗಳನ್ನು ತಲೆಯಲ್ಲಿ ಹೊತ್ತುಕೊಂಡು ಮಾರಾಟ ಮಾಡುತ್ತಿದ್ದ ಪುಣ್ಯಾತ್ಮರು ಇವರು.ಸತ್ತಮೇಲೆ ಅಂತ್ಯಸಂಸ್ಕಾರ ಮಾಡಲೂ ಇವರ ಮನೆಯವರ ಬಳಿ ಹಣವಿರಲಿಲ್ಲ. ಪುಸ್ತಕಗಳಿಂದಲೇ ಇವರ ಅಂತ್ಯಸಂಸ್ಕಾರ  ಮಾಡಬೇಕಷ್ಟೇಯೆಂದು ಅವರ ಮನೆಯವರು ಅ ಸಂದರ್ಭದಲ್ಲಿ ನೊಂದುಕೊಂಡು ನುಡಿದಿದ್ದರು.
ವಿ.ಸೀತಾರಾಮಯ್ಯ÷ಇವರು ದಿನಾ ಬೆಳಿಗ್ಗೆ ಹೊಟೇಲಿನಿಂದ ಹತ್ತು ಇಡ್ಲಿ ತರಿಸುತ್ತಿದ್ದರಂತೆ.ಅದರಲ್ಲಿ ಒಂದು ಇಡ್ಲಿಯನ್ನಷ್ಟೇ ತಾವು ತಿಂದು ಉಳಿದ ಒಂಬತ್ತು ಇಡ್ಲಿಯನ್ನು ಪ್ರಾಣಿ ಪಕ್ಷಿಗಳಿಗೆ ತಿನ್ನಿಸುತ್ತಿದ್ದರು.ಇದನ್ನು ಅವರು ತಮ್ಮ ಬದುಕಿನುದ್ದಕ್ಕೂ ದಿನಚರಿಯಂತೆ ಪಾಲಿಸುತ್ತಿದ್ದರು.
ದ.ರಾ.ಬೇಂದ್ರೆ:-ಇವರೊಮ್ಮೆ ದಾರಿಯಲ್ಲಿ ನಡೆದುಕೊಂಡು ಬರಬೇಕಾದರೆ ಚಪ್ಪಲಿ ಕಿತ್ತುಹೋಗುತ್ತದೆ.ಚಪ್ಪಲಿಯನ್ನು ಕೈಯಲ್ಲಿ ಹಿಡಿದು ಸ್ವಲ್ಪ ದೂರ ನಡೆದುಕೊಂಡು ಬಂದಮೇಲೆ,ದಾರಿಪಕ್ಕ ಕೂತಿದ್ದ ಚಮ್ಮಾರ ಸಿಗುತ್ತಾನೆ.ಬಿರುಬಿಸಿಲು ಆಗಿದ್ದರಿಂದ ಬೇಂದ್ರೆ ಅಜ್ಜ ಛತ್ರಿಬಿಡಿಸಿಕೊಂಡಿದ್ದರು.ಚಮ್ಮಾರ ತಮ್ಮ  ಚಪ್ಪಲಿಯನ್ನು ರಿಪೇರಿ ಮಾಡುವಾಗ ಅವರು ತಮ್ಮ ಛತ್ರಿಯನ್ನು ಬಿಸಿಲಲ್ಲಿದ್ದ ಚಮ್ಮಾರನಿಗೆ ಹಿಡಿದಿದ್ದರು..! ಇದರಿಂದ ಮುಜುಗರಗೊಂಡ ಚಮ್ಮಾರ,'ನಾನು ದಿನಾ ಬಿಸಿಲಲ್ಲೇ ಕೂತು ಕೆಲಸ ಮಾಡುವವನು ನನಗಿದೆಲ್ಲ ಬೇಡ'ಅಂದ.ಅದಕ್ಕೆ ಬೇಂದ್ರೆ ಅಜ್ಜ ನೀನಿಗ ನಿನ್ನ ಕೆಲಸ ಮಾಡುತ್ತಿದ್ದೀಯ,ನಾನೀಗ ನನ್ನ ಕೆಲಸ ಮಾಡುತ್ತಿದ್ದೇನೆ ಅಂದರಂತೆ...!
ಡಿವಿಜಿ:-ಡಿವಿಜಿಯವರು ತಮ್ಮ ಹೆಂಡತಿಯನ್ನು ಆಪ್ತರೊಬ್ಬರ ಮದುವೆಗೆ ಹೋಗಲು ಹೇಳಿ ತಾವು ಬೇರೊಂದು ಕಾರ್ಯಕ್ರಮಕ್ಕೆ ಹೋಗಿದ್ದರು.ಕಾರ್ಯಕ್ರಮ ಮುಗಿಸಿ ಮನೆಗೆ ಬಂದಾಗ ಹೆಂಡತಿ ಮನೆಯಲ್ಲಿರೋದನ್ನು ನೋಡಿ ಸಿಟ್ಟಾದ ಡಿವಿಜಿ,ಮದುವೆಗೆ ಯಾಕೆ ಹೋಗಲಿಲ್ಲವೆಂದು ಹೆಂಡತಿಯನ್ನು ಪ್ರಶ್ನಿಸಿದರು.ಅವರ ಪತ್ನಿ,'ಮಗನನ್ನು ಕಳಿಸಿದ್ದೇನೆ'ಅಂದರು.ಡಿವಿಜಿ,ಬಹಳ ಆತ್ಮೀಯರ ಮದುವೆ ಎಂದು ಹೇಳಿದ್ದೆನ್ನಲ್ಲ ನೀನೇ ಹೋಗಬೇಕಿತ್ತು ಎಂದು ಮತ್ತೊಮ್ಮೆ ಏರಿದ ಧ್ವನಿಯಲ್ಲಿ ಹೇಳಿದರು.ಆಗ ಅವರ ಪತ್ನಿ,'ನನ್ನತ್ರ ಇರೋದು ಒಂದೇ ಸೀರೆ.ಅದು ಕೂಡ ಅಲ್ಲಿ ಇಲ್ಲಿ ಹರಿದಿದೆ.ಅದನ್ನು ಉಟ್ಕೊಂಡು ಮದ್ವೆಗೆ ಹೋದ್ರೆ ನನ್ ಯಜಮಾನ್ರ ಮಾನ ಹೋಗುತ್ತೆ. ಅದ್ಕೆ ಮಗನನ್ನು ಕಳಿಸಿದೆ ಅಂದರಂತೆ.ಈ ಮಾತನ್ನು ಕೇಳಿದ ಡಿವಿಜಿಯವರಿಗೆ ಮರು ಮಾತನಾಡಲು ಅವಕಾಶವೇ ಇರಲಿಲ್ಲ.
ಮಾಸ್ತಿ:-ಜಿಲ್ಲಾಧಿಕಾರಿಯಾಗಿದ್ದ ಮಾಸ್ತಿಯವರು ಒಮ್ಮೆ ಊರಭೇಟಿಗೆ ತೆರಳಿರುತ್ತಾರೆ.ದಾರಿ ಮಧ್ಯೆ ಬಾಯಾರಿಕೆ ಆದ್ದರಿಂದ ಸಾರ್ವಜನಿಕ ಬಾವಿಯಿಂದ ನೀರು ಸೇದುತ್ತಿದ್ದ ವ್ಯಕ್ತಿಯ ಬಳಿ ಒಂದು ಬೊಗಸೆ ಕುಡಿಯಲು ನೀರು ಕೇಳುತ್ತಾರೆ.ಅವನು ನೀರನ್ನು ಸೇದಿ ಮಾಸ್ತಿಯವರಿಗೆ ಕೊಡುವ ಬದಲು ಪಕ್ಕದಲ್ಲಿರುವ ಟ್ಯಾಂಕಿಗೆ ಸುರಿಯುತ್ತಾನೆ.ಮಾಸ್ತಿಯವರಿಗೆ ಅವನು ನೀರು ಕೊಡದ್ದು ನೋಡಿ ಮುಜುಗರವಾಗುತ್ತದೆ.ಮತ್ತೆ ಅವನು ಕೊಡವನ್ನು ಬಾವಿಗಿಳಿಸಿ ನೀರು ಸೇದುತ್ತಾನೆ.ಈ ಬಾರಿ ಮಾಸ್ತಿಯವರನ್ನು ಕರೆದು ಬೊಗಸೆ ಹಿಡಿಯುವಂತೆ ಹೇಳಿ ನೀರು ಸುರಿಯುತ್ತಾನೆ.ಮಾಸ್ತಿಯವರು ಆಶ್ಚರ್ಯದಿಂದ ಕೇಳುತ್ತಾರೆ ಆಗಲೆ ಯಾಕೆ ನೀನು ನನಗೆ ನೀರು ಕೊಡಲಿಲ್ಲ ಎಂದು.ಅದಕ್ಕವನು ಸ್ವಾಮಿ ಈ ಬಾವಿ ತೋಡಿಸುವ ಮೊದಲು ಡಿಸಿಯವರು,ಯಾರೇ ನೀರು ಸೇದಿದರು ಮೊದಲ ಕೊಡವನ್ನು ಪಕ್ಕದಲ್ಲಿರುವ ಟ್ಯಾಂಕಿಗೆ ಸುರಿಯಬೇಕು,ಅ ನೀರು ಪ್ರಾಣಿಪಕ್ಷಿಗಳಿಗೆ ಕುಡಿಯೋಕೆ ಉಪಯೋಗವಾಗಬೇಕು ಎಂದಿದ್ದರು.ಹೀಗಾಗಿ ಈ ಊರಿನವರು ಅವರ ಅ ಮಾತನ್ನು ಪಾಲಿಸುತ್ತಿದ್ದೇವೆ ಎಂದ.ಅಂದಹಾಗೆ ಹಾಗೆ ಆದೇಶ ಮಾಡಿದ್ದ ಡಿಸಿ ಮಾಸ್ತಿಯವರೇ ಆಗಿದ್ದರು...!ಊರಿನವರ ಪ್ರಾಮಾಣಿಕತೆಯನ್ನು ನೋಡಿ ಮಾಸ್ತಿಯವರ ಕಣ್ಣುಗಳು ಒದ್ದೆಯಾಗಿದ್ದವು..!
-ಹನುಮಂತ. ಮ. ದೇಶಕುಲಕಣಿ೯
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ

ನೋಟಿನ್ಮನೆ_ಹುಡ್ಗ

ಸುಮ್ನ ಓದ್ರಿಬಿಡ್ರಪಾ... ಒಮ್ಮ ನಕ್ಕುಬಿಡ್ರಪಾ....
ಯಾಕ ಹುಡುಗ ಮೈಯಾಗ ಹ್ಯಾಂಗೈತಿ..
ಬರಿ ಐನೂರು ಸಾವಿರ ನೋಟ ಕೊಡತಿ..
ನನಗ ನೂರು ಸಾಕ
ಹೆಚ್ಚಿಗೆ ಯಾಕಬೇಕ...??
ಮೊದಲ ತಲಿಕೆಟೈತಿ ಹಂಗನಬ್ಯಾಡ
ಸಾವಿರ ನೋಟ ಕೊಟ್ಟ ಹುಚ್ಚ ಹಿಡಸತಿ ಮಗನ...
ನೂರು ಕೊಡಾಕ ಆಗಲ್ಲನಲೆ ನಿನಗ....??
ಸುಮ್ನ ಕೊಟ್ಟಬಿಡಪಾ
ಚಿಲ್ಲರೆ ತಂದು ಬಿಡಪಾ
ಇಲ್ಲಾ ತ್ರಾಸಾಕೈತಿ
ನೋಟು ತ್ರಾಸಾಕೈತಿ...!
ಯಾಕಾಕೈತಿ ತ್ರಾಸು ಯಾಕಾಕೈತಿ.....!
ಯಾಕ ಹುಡುಗಿ ಮೈಯಾಗ ಹ್ಯಾಂಗೈತಿ...??
ನಾಕು ನೋಟ ಸಾವಿರದೈತಿ.... ||
ಇಳಿಸಂಜಿಗಿ ಬರುವಾಗ ಸಾವಿರ ತರ್ಬಾರ್ದು
ಕೊಟ್ಟರೂ ಐದ್ನೂರು ಕಡಿಮೆ ಇರಬಾರ್ದು...
ನಮ್ಮ ನಾಚಿಕಿಗೆಲ್ರಪಾ ಬೆಲಿ ಐತಿ
ಸಾವಿರ ಇಟಗೊಂಡ
ಬಾಯಿ ಮುಚಗೊಂಡಿರಬೇಕ.... ||
ಐನೂರು ನೋಟ ಸುಮಸುಮಕ
ಹಾಳಾದ್ರ ಬೇಜಾರss ಬೇಜಾರss....
ಮರಲಾರ್ದ ಚಿಲ್ಲರ ಮಾಡ್ಸಿಟ್ಕೊ ಹೊಗ್ಲಿತಗಾ ಹೆಂಗಾರ ಹೆಂಗಾರ...
ಒಂದ್ ಸಾವಿರ ನೋಟರ
ಬದ್ಲಿ ಮಾಡಕೊ ಡಿಸೆಂಬರ್ ಮೂವತ್ತು ಮುಗಿಯುವುದರೊಳಗಾ.....!!😜
ನನಗಾ ಮೈನಡಕಾ
ಸಾವಿರ ನೋಟ ನೋಡಾಕ
ಇಲ್ಲಾ....
ತ್ರಾಸಾಕೈತಿ ನೋಡಾಕ ತ್ರಾಸಾಕೈತಿ...
ಒಂದೆಂಟ ಸಾವಿರ ಇಟಗೊಂಡಿನಿ ತಡದ
ಅಗ್ದಿ ಹೊಸ ನೋಟು...
ಅಂದದ ನೋಟಿಗೆ ಆಸೆಪಟ್ಟು
ಹುಚ್ಚಪ್ಯಾಲಿ ಆದ್ಯಾ ಮೈಮನಸ ಸುಟಗೊಂಡ...!!
ಹೊಸವು ಇದ್ದಾಗ ಕೊಡಬೇಕ
ಇಲ್ಲಿ ಕೇಳ ಇಲ್ಲಿ ಕೇಳsss
ಟೈಮು ಬಂದಾಗ ನೋಟ ಮುರಸಬೇಕ...
ರೊಕ್ಕ ಇದ್ದಾಗ ಮಜಾ ಮಾಡಬೇಕಂತ ಹೇಳಬೇಕನಲೆ ನಿನಗಾ.......???
ನನ ಕೈಗ ಕೊಟ್ಟಬಿಡಪಾ...
ನಿನ್ನಲಿ ಇಟಗೋಬ್ಯಾಡಪಾ...
ಇಲ್ಲಾ ತ್ರಾಸಾಕೈತಿ
ನಿನಗಾ ತ್ರಾಸಾಕೈತಿ...
ಬಾಳಾಗ್ಯಾವು ಆಲ್ರೆಡಿ ನಿನಗ ಕೊಟ್ಟ ಬಾಳಾಗ್ಯಾವು.....!!!
-ಹನುಮಂತ. ಮ. ದೇಶಕುಲಕಣಿ೯
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ

ಕನ್ನಡ ಸಾಹಿತ್ಯ ಸಮ್ಮೇಳನಗಳು

ಕ್ರಮಸಂಖ್ಯೆ  ವರ್ಷ ಸ್ಥಳ ಸಮ್ಮೇಳನಾಧ್ಯಕ್ಷರು.
೧ ೧೯೧೫ ಬೆಂಗಳೂರು ಎಚ್.ವಿ.ನಂಜುಂಡಯ್ಯ
೨ ೧೯೧೬ ಬೆಂಗಳೂರು ಎಚ್.ವಿ.ನಂಜುಂಡಯ್ಯ
೩ ೧೯೧೭ ಮೈಸೂರುಎಚ್.ವಿ.ನಂಜುಂಡಯ್ಯ
೪ ೧೯೧೮ ಧಾರವಾಡ ಆರ್.ನರಸಿಂಹಾಚಾರ್
೫ ೧೯೧೯ ಹಾಸನ ಕರ್ಪೂರ ಶ್ರೀನಿವಾಸರಾವ್
೬ ೧೯೨೦ ಹೊಸಪೇಟೆ ರೊದ್ದ ಶ್ರೀನಿವಾಸರಾವ
೭ ೧೯೨೧ ಚಿಕ್ಕಮಗಳೂರು ಕೆ.ಪಿ.ಪುಟ್ಟಣ್ಣ ಶೆಟ್ಟಿ
೮ ೧೯೨೨ ದಾವಣಗೆರೆ ಎಂ.ವೆಂಕಟಕೃಷ್ಣಯ್ಯ
೯ 1೯೨೩ ಬಿಜಾಪುರ ಸಿದ್ಧಾಂತಿ ಶಿವಶಂಕರಶಾಸ್ತ್ರಿ
೧೦ ೧೯೨೪ ಕೋಲಾರ ಹೊಸಕೋಟೆ ಕೃಷ್ಣಶಾಸ್ತ್ರಿ
೧೧ ೧೯೨೫ ಬೆಳಗಾವಿ ಬೆನಗಲ್ ರಾಮರಾವ್
೧೨ ೧೯೨೬ ಬಳ್ಳಾರಿ ಫ.ಗು.ಹಳಕಟ್ಟಿ
೧೩ ೧೯೨೭ ಮಂಗಳೂರು ಆರ್.ತಾತಾಚಾರ್ಯ
೧೪ ೧೯೨೮ ಕಲಬುರ್ಗಿಬಿ ಎಂ ಶ್ರೀ
೧೫ ೧೯೨೯ ಬೆಳಗಾವಿ ಮಾಸ್ತಿ ವೆಂಕಟೇಶಅಯ್ಯಂಗಾರ್
೧೬ ೧೯೩೦ ಮೈಸೂರು ಆಲೂರು ವೆಂಕಟರಾಯರು
೧೭ ೧೯೩೧ ಕಾರವಾರ ಮುಳಿಯ ತಿಮ್ಮಪ್ಪಯ್ಯ
೧೮ ೧೯೩೨ ಮಡಿಕೇರಿಡಿ ವಿ ಜಿ
೧೯ ೧೯೩೩ ಹುಬ್ಬಳ್ಳಿ ವೈ.ನಾಗೇಶ ಶಾಸ್ತ್ರಿ
೨೦ ೧೯೩೪ ರಾಯಚೂರು ಪಂಜೆ ಮಂಗೇಶರಾಯರು
೨೧ ೧೯೩೫ ಮುಂಬಯಿ ಎನ್.ಎಸ್.ಸುಬ್ಬರಾವ್
೨೨ ೧೯೩೭ ಜಮಖಂಡಿ ಬೆಳ್ಳಾವೆವೆಂಕಟನಾರಣಪ್ಪ
೨೩ ೧೯೩೮ ಬಳ್ಳಾರಿ ರಂಗನಾಥ ದಿವಾಕರ
೨೪ ೧೯೩೯ ಬೆಳಗಾವಿ ಮುದವೀಡುಕೃಷ್ಣರಾಯರು
೨೫ ೧೯೪೦ ಧಾರವಾಡ ವೈ.ಚಂದ್ರಶೇಖರ ಶಾಸ್ತ್ರಿ
೨೬ 1೯೪೧ ಹೈದರಾಬಾದ್ ಎ.ಆರ್.ಕೃಷ್ಣಶಾಸ್ತ್ರಿ
೨೭ ೧೯೪೩ ಶಿವಮೊಗ್ಗ ದ.ರಾ.ಬೇಂದ್ರೆ
೨೮ ೧೯೪೪ ರಬಕವಿ ಎಸ್.ಎಸ್.ಬಸವನಾಳ
೨೯ ೧೯೪೫ ಮದರಾಸು ಟಿ ಪಿ ಕೈಲಾಸಂ
೩೦ ೧೯೪೭ ಹರಪನಹಳ್ಳಿ ಸಿ.ಕೆ.ವೆಂಕಟರಾಮಯ್ಯ
೩೧ ೧೯೪೮ ಕಾಸರಗೋಡುತಿ.ತಾ.ಶರ್ಮ
೩೨ ೧೯೪೯ ಕಲಬುರ್ಗಿ ಉತ್ತಂಗಿ ಚನ್ನಪ್ಪ
೩೩ ೧೯೫೦ ಸೊಲ್ಲಾಪುರ ಎಮ್.ಆರ್.ಶ್ರೀನಿವಾಸಮೂರ್ತಿ
೩೪ ೧೯೫೧ ಮುಂಬಯಿ ಗೋವಿಂದ ಪೈ
೩೫ ೧೯೫೨ ಬೇಲೂರು ಎಸ್.ಸಿ.ನಂದೀಮಠ
೩೬ ೧೯೫೪ ಕುಮಟಾ ವಿ.ಸೀತಾರಾಮಯ್ಯ
೩೭ ೧೯೫೫ ಮೈಸೂರು ಶಿವರಾಮ ಕಾರಂತ
೩೮ ೧೯೫೬ ರಾಯಚೂರು ಶ್ರೀರಂಗ
೩೯ ೧೯೫೭ ಧಾರವಾಡ ಕುವೆಂಪು
೪೦ ೧೯೫೮ ಬಳ್ಳಾರಿ ವಿ.ಕೆ.ಗೋಕಾಕ
41 ೧೯೫೯ ಬೀದರ ಡಿ.ಎಲ್.ನರಸಿಂಹಾಚಾರ್
೪೨ ೧೯೬೦ ಮಣಿಪಾಲ ಅ.ನ. ಕೃಷ್ಣರಾಯ೪
೩೧೯೬೧ ಗದಗ ಕೆ.ಜಿ.ಕುಂದಣಗಾರ
೪೪ ೧೯೬೩ ಸಿದ್ದಗಂಗಾ ರಂ.ಶ್ರೀ.ಮುಗಳಿ
೪೫ ೧೯೬೫ಕಾರವಾರಕಡೆಂಗೋಡ್ಲು ಶಂಕರಭಟ್ಟ
೪೬ ೧೯೬೭ ಶ್ರವಣಬೆಳಗೊಳ ಆ.ನೇ.ಉಪಾಧ್ಯೆ
೪೭ ೧೯೭೦ ಬೆಂಗಳೂರು ದೇ.ಜವರೆಗೌಡ
೪೮ ೧೯೭೪ ಮಂಡ್ಯ ಜಯದೇವಿತಾಯಿ ಲಿಗಾಡೆ
೪೯ ೧೯೭೬ ಶಿವಮೊಗ್ಗ ಎಸ್.ವಿ.ರಂಗಣ್ಣ
೫೦ ೧೯೭೮ ದೆಹಲಿ ಜಿ.ಪಿ.ರಾಜರತ್ನಂ
೫೧ ೧೯೭೯ ಧರ್ಮಸ್ಥಳ ಗೋಪಾಲಕೃಷ್ಣ ಅಡಿಗ
೫೨ ೧೯೮೦ ಬೆಳಗಾವಿ ಬಸವರಾಜ ಕಟ್ಟೀಮನಿ
೫೩ ೧೯೮೧ ಚಿಕ್ಕಮಗಳೂರು ಪು.ತಿ.ನರಸಿಂಹಾಚಾರ್
೫೪ ೧೯೮೧ ಮಡಿಕೇರಿ ಶಂ.ಬಾ.ಜೋಶಿ
೫೫ ೧೯೮೨ ಶಿರಸಿ ಗೊರೂರು ರಾಮಸ್ವಾಮಿಐಯಂಗಾರ್
೫೬ ೧೯೮೪ ಕೈವಾರ ಎ.ಎನ್.ಮೂರ್ತಿ ರಾವ್
೫೭ ೧೯೮೫ ಬೀದರ್. ಹಾ.ಮಾ.ನಾಯಕ
೫೮ ೧೯೮೭ ಕಲಬುರ್ಗಿ ಸಿದ್ದಯ್ಯ ಪುರಾಣಿಕ
೫೯ ೧೯೯೦ ಹುಬ್ಬಳ್ಳಿ ಆರ್.ಸಿ.ಹಿರೇಮಠ
೬೦ ೧೯೯೧ ಮೈಸೂರು ಕೆ.ಎಸ್. ನರಸಿಂಹಸ್ವಾಮಿ
೬೧ ೧೯೯೨ ದಾವಣಗೆರೆ ಜಿ.ಎಸ್.ಶಿವರುದ್ರಪ್ಪ
೬೨ ೧೯೯೩ ಕೊಪ್ಪ್ಪಳ ಸಿಂಪಿ ಲಿಂಗಣ್ಣ
೬೩ ೧೯೯೪ ಮಂಡ್ಯ ಚದುರಂಗ
೬೫ ೧೯೯೬ ಹಾಸನ ಚನ್ನವೀರ ಕಣವಿ
೬೬ ೧೯೯೭ ಮಂಗಳೂರು ಕಯ್ಯಾರ ಕಿಞ್ಞಣ್ಣ ರೈ
೬೭ ೧೯೯೯ ಕನಕಪುರ ಎಸ್.ಎಲ್.ಭೈರಪ್ಪ
೬೮ ೨೦೦೦ ಬಾಗಲಕೋಟೆ ಶಾಂತಾದೇವಿ ಮಾಳವಾಡ
೬೯ ೨೦೦೨ ತುಮಕೂರು ಯು.ಆರ್. ಅನಂತಮೂರ್ತಿ
೭೦ ೨೦೦೩ ಮೂಡುಬಿದಿರೆ ಕಮಲಾ ಹಂಪನಾ
೭೨ ೨೦೦೬ ಬೀದರ್ ಶಾಂತರಸ ಹೆಂಬೆರಳು
೭೩ ೨೦೦೭ ಶಿವಮೊಗ್ಗ ನಿಸಾರ್ ಅಹಮ್ಮದ್
೭೪ ೨೦೦೮ ಉಡುಪಿ ಎಲ್. ಎಸ್. ಶೇಷಗಿರಿ ರಾವ್
೭೫ ೨೦೦೯ ಚಿತ್ರದುರ್ಗ ಎಲ್. ಬಸವರಾಜು
೭೬ ೨೦೧೦ ಗದಗ ಗೀತಾ ನಾಗಭೂಷಣ
೭೭ ೨೦೧೧ ಬೆಂಗಳೂರು ಜಿ. ವೆಂಕಟಸುಬ್ಬಯ್ಯ
೭೮ ೨೦೧೨ ಗಂಗಾವತಿ ಸಿ.ಪಿ ಕೃಷ್ಣಕುಮಾರ್
೭೯ ೨೦೧೩ ವಿಜಾಪುರ ಕೋ.ಚನ್ನಬಸಪ್ಪ
೮೦ ೨೦೧೪ ಕೊಡಗು ನಾ ಡಿಸೋಜ
೮೧ ೨೦೧೫ ಶ್ರವಣಬೆಳಗೊಳ ಡಾ. ಸಿದ್ದಲಿಂಗಯ್
೮೨ ೨೦೧೬ ರಾಯಚೂರು ಡಾ.ಬರಗೂರು ರಾಮಚಂದ್ರಪ್ಪ....
-ಹನುಮಂತ. ಮ. ದೇಶಕುಲಕಣಿ೯
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ

ಭಾರತ ಸೇರಿದಂತೆ ಬಹುತೇಕ ಬ್ರಿಟಿಷ್ ವಸಾಹತು ದೇಶಗಳಲ್ಲಿ ರಸ್ತೆಯ ಎಡ ಬದಿಯಲ್ಲಿ ವಾಹನ ಚಾಲನೆ ನಿಯಮ

ಭಾರತ ಸೇರಿದಂತೆ ಬಹುತೇಕ ಬ್ರಿಟಿಷ್ ವಸಾಹತು ದೇಶಗಳಲ್ಲಿ ರಸ್ತೆಯ ಎಡ ಬದಿಯಲ್ಲಿ ವಾಹನ ಚಾಲನೆ ನಿಯಮ ಅನುಸರಿಸಲಾಗಿದೆ. ಆದರೆ ಅಂಕಿಅಂಶಗಳನ್ನು ಅವಲೋಕಿಸಿದಾಗ ರಸ್ತೆ ಎಡಬದಿಯಲ್ಲಿ ವಾಹನ ಚಾಲನೆ ಮಾಡುವ ಪ್ರಮಾಣ ಕೇವಲ ಶೇಕಡಾ 35ರಷ್ಟು ಮಾತ್ರವಾಗಿದೆ. ಉಳಿದಂತೆ ಅಮೆರಿಕ, ಯುರೋಪ್ ನ ಬಹುಭಾಗ ಸೇರಿದಂತೆ ಜಗತ್ತಿನ ಶೇಕಡಾ 65ರಷ್ಟು ಕಡೆಗಳಲ್ಲಿ ರಸ್ತೆಯ ಬಲಭಾಗದಲ್ಲಿ ವಾಹನ ಚಾಲನೆ ಮಾಡಲಾಗುತ್ತದೆ. 

ಅಂದರೆ ವಿಶ್ವದ ಮೂರನೇ ಎರಡರಷ್ಟು ಭಾಗಗಳಲ್ಲಿ ರಸ್ತೆಯ ಬಲಭಾಗದಲ್ಲಿ ವಾಹನ ಚಾಲನೆ ಮಾಡಲಾಗುತ್ತದೆ. ಇನ್ನೊಂದೆಡೆ ಕೆನೆಡಾದಂತಹ ರಾಷ್ಟ್ರಗಳು ಗಡಿ ಭಾಗವನ್ನು ಹಂಚಿಕೊಳ್ಳುವುದರಿಂದ ಸುಗಮ ಟ್ರಾಫಿಕ್ ಗಾಗಿ ಎಡಬದಿಯ ಚಾಲನೆಯಿಂದ ಕ್ರಮೇಣ ಬಲಭಾಗಕ್ಕೆ ಒಗ್ಗಿಕೊಂಡಿದ್ದವು.

ಎಡ ಹಾಗೂ ಬಲ ಬದಿಯ ವಾಹನ ಚಾಲನೆಗಳು ಇತಿಹಾಸದ ಜೊತೆಗೆ ಗಾಢವಾದ ನಂಟನ್ನು ಹೊಂದಿದೆ. ಪ್ರಾಚೀನ ಕಾಲದಿಂದಲೂ ವಾಹನ ಸಾರಿಗೆ, ವ್ಯಾಪಾರ, ಯುದ್ಧ ಮತ್ತು ಇನ್ನಿತರ ಅವಶ್ಯಕತೆಗಳಿಗಾಗಿ ಕುದುರೆ ಗಾಡಿಗಳನ್ನು ಬಳಕೆ ಮಾಡಲಾಗುತ್ತಿದ್ದವು.

ಮಧ್ಯಕಾಲಘಟ್ಟದಲ್ಲಿ ವ್ಯಾಪಾರದ ಬೇಡಿಕೆ ಜಾಸ್ತಿಯಾಗಿತ್ತು. ಆರಂಭಿಕ ಕಾಲಘಟ್ಟದಲ್ಲಿ ರಸ್ತೆ ಎಡಭಾಗದಲ್ಲೇ ಕುದುರೆ ಸವಾರಿ ಮಾಡಲಾಗುತ್ತಿತ್ತು.

ಸೊಂಟದ ಎಡಭಾಗದಲ್ಲಿ ಖಡ್ಗವನ್ನಿಟ್ಟುಕೊಂಡು ಮುನ್ನುಗ್ಗುವ ಸೈನಿಕರು ಸುಲಭವಾಗಿ ವಿರುದ್ಧ ದಿಕ್ಕಿನಿಂದ ಬರುವ ಶತ್ರುಗಳನ್ನು ಹೊಡೆದುರುಳಿಸಲು ಸಾಧ್ಯವಾಗುತ್ತಿತ್ತು.

ಎಡ ಕೈಯಿಂದ ಹಗ್ಗವನ್ನು ಹಿಡಿದು ಕುದುರೆಯನ್ನು ನಿಯಂತ್ರಿಸುವ ಸೈನಿಕರು ಎಡಭಾಗದಿಂದಲೇ ಮುನ್ನುಗ್ಗುತ್ತಾ ಬಲಭಾಗದತ್ತ ಯುದ್ಧ ತಂತ್ರಗಾರಿಕೆಯನ್ನು ಮುಂದುವರಿಸಿದ್ದರು.

ಕುದುರೆಗಳಲ್ಲಿ ಎಡಭಾಗದಲ್ಲಿ ಚಲಿಸಲು ಮಗದೊಂದು ಕಾರಣವಿದೆ. ಸಹಜವಾಗಿಯೇ ಎಲ್ಲ ಕೆಲಸ ಕಾರ್ಯಗಳನ್ನು ಬಲಗೈಯಿಂದಲೇ ನಿರ್ವಹಿಸುವ ಜನರು ಎಡಗೈಗಿಂತಲೂ ಹೆಚ್ಚು ಬಲಶಾಲಿಯೆನಿಸಿಕೊಂಡಿರುತ್ತದೆ.

ಕುದುರೆಗಳನ್ನು ಏರಲು ಮತ್ತು ಇಳಿಯಲು ಎಡಭಾಗದಲ್ಲಿ ಹೆಚ್ಚು ಅನುಕೂಲಕರವಾಗಿದೆ. ಇದು ಕೂಡ ಎಡಭಾಗವನ್ನು ಆಯ್ಕೆ ಮಾಡಲು ಕಾರಣವಾಗಿದೆ.

ಇನ್ನೊಂದೆಡೆ ಅಮೆರಿಕ ಸೇರಿದಂತೆ ಇತರೆ ಯುರೋಪ್ ಭಾಗಗಳಲ್ಲಿ ಕೃಷಿ, ವ್ಯಾಪಾರ ಚಟುವಟಿಕೆ ವ್ಯಾಪಿಸಿದ್ದಂತೆಯೇ ಹೆಚ್ಚಿನ ಸರಕುಗಳನ್ನು ಸಾಗಿಸಲು ಒಂದಕ್ಕಿಂತ ಹೆಚ್ಚು ಕುದುರೆಗಳ ಅವಶ್ಯಕತೆ ಎದುರಾಗಿತ್ತು.

ಒಂದರ ಹಿಂದೆ ಒಂದರಂತೆ ಬಂಧಿಸಲಾದ ಕುದುರೆಗಳ ಹಿಂದೆ ಗಾಡಿಯನ್ನು ಜೋಡಿಸಲಾಗಿತ್ತು. ಎಡಭಾಗದಲ್ಲಿ ಅತ್ಯಂತ ಹಿಂದಿನ ಕುದುರೆಯಲ್ಲಿ ಸವಾರಿ ಮಾಡುವ ಸವಾರ, ಬಲ ಕೈಯಿಂದ ಚಾವಟಿ ಹಿಡಿದು ಕುದುರೆಯನ್ನು ನಿಯಂತ್ರಿಸುತ್ತಾನೆ.

ಇದರಿಂದ ಮುಂಭಾಗದಿಂದ ಬರುವ ಗಾಡಿಗಳನ್ನು ಸುಲಭವಾಗಿ ಗುರುತಿಸಲು ಹಾಗೂ ಅನುಕೂಲಕರ ಚಾಲನೆಗೆ ನೆರವಾಗಿದೆ.

1800ರ ಶತಮಾನದಿಂದ ರಸ್ತೆ ನಿಯಮಗಳು ನಿಧಾನವಾಗಿ ಜಾರಿಯಾಗತೊಡಗಿದ್ದವು. ಭಾರತದಂತಹ ವಸಾಹತು ದೇಶಗಳಲ್ಲಿ ಬ್ರಿಟಿಷ್ ಪ್ರಭಾವದಿಂದಾಗಿ ಎಡಭಾಗದಲ್ಲೇ ಸಂಚಾರ ನಿಯಮ ಅನುಸರಿಸಲಾಯಿತು.

ಇದು ಬ್ರಿಟನ್ ಸೇರಿದಂತೆ ನಾಲ್ಕು ಯುರೋಪ್ ರಾಷ್ಟ್ರಗಳು ಮಾತ್ರ ಎಡಬದಿಯ ಚಾಲನಾ ನಿಮಯವನ್ನು ಅನುಸರಿಸುತ್ತಿದೆ.

ಸಾವಿರಾರು ವರ್ಷಗಳಿಂದ ಸಾರಿಗೆ ಸಂಚಾರ ಚಾಲ್ತಿಯಲ್ಲಿತ್ತು. ಮಧ್ಯಕಾಲಘಟ್ಟದಲ್ಲಿ ವ್ಯಾಪಾರ ಹಾದಿಗಳು ತೆರೆಯಲ್ಪಟ್ಟ ಬಳಿಕ ರಸ್ತೆ ನಿಯಮಗಳು ನಿಧಾನವಾಗಿ ಜಾರಿಗೆ ಬಂದಿದ್ದವು.

ಕುದುರೆ ಸವಾರಿ ಮಾಡುವಾಗ ಆತ್ಮ ರಕ್ಷಣೆಯ ಭಾಗವಾಗಿ ರಸ್ತೆಯ ಎಡಭಾಗಗಳಲ್ಲಿ ಸಂಚರಿಸಲಾಗುತ್ತಿದ್ದವು. ಇದರಿಂದಾಗಿ ಶತ್ರುವನ್ನು ಎದುರಿಸಲು ಸಾಧ್ಯವಾಗುತ್ತಿದ್ದವು.

1700ರ ಶತಮಾನದ ವರೆಗೂ ಜಗತ್ತಿನ ನಾಗರಿಕ ಪರಂಪರೆ ಎಡಬದಿಯಲ್ಲಿಯೇ ಚಲಿಸುತ್ತಿದ್ದವು. ಈ ಹಂತದಲ್ಲಿ ಯುರೋಪ್ ವಸಾಹತುಶಾಹಿ ಆಡಳಿತವು ಇಡೀ ವಿಶ್ವವನ್ನೇ ವ್ಯಾಪಿಸಿತ್ತು.

ಫ್ರಾನ್ಸ್ ಕ್ರಾಂತಿಯ ಬಳಿಕ ಪ್ರಮುಖವಾಗಿಯೂ ನೆಪೋಲಿಯನ್ ಆಡಳಿತ ಕಾಲದಲ್ಲಿ ಬಲಬದಿಯ ರಸ್ತೆಯನ್ನು ಹೆಚ್ಚಾಗಿ ಬಳಕೆ ಮಾಡುವಂತೆ ದಬ್ಬಾಳಿಕೆ ಮಾಡಲಾಗಿತ್ತು ಎಂಬುದರ ಬಗ್ಗೆಯೂ ಇತಿಹಾಸ ಪುಟಗಳಲ್ಲಿ ಉಲ್ಲೇಖಿಸಲಾಗಿದೆ.

ಬ್ರಿಟಿಷ್ ಉಗಮದಿಂದ ಪಾರಾಗಲು ಅಮೆರಿಕದಲ್ಲಿ ಬಲದಿಯ ರಸ್ತೆ ಸಂಚಾರವನ್ನು ಅನುಸರಿಸಲಾಗಿತ್ತು. ಕ್ರಮೇಣ ಇದು ಅಮೆರಿಕ ವಾಹನ ಮಾರುಕಟ್ಟೆಯ ಮೇಲೂ ಪ್ರಭಾವ ಬೀರಿತ್ತು.


ಅಮೆರಿಕದಲ್ಲಿ ನಾಲ್ಕು ಕುದುರೆಗಳ ಚದರ ರಚನೆ ಆಕಾರದಲ್ಲಿ ಸಾರಿಗೆ ರೂಪಿಸಲಾಗಿತ್ತು. ಈ ಸವಾರಿ ಬಂಡಿಗೆ ನಿಯಂತ್ರಿಸುವ ವ್ಯಕ್ತಿಗೆ ಯಾವುದೇ ಸೀಟುಗಳಿರಲಿಲ್ಲ.

ಆತ ಹಿಂದಿನ ಕುದುರೆಯಲ್ಲಿ ಕುಳಿತುಕೊಂಡು ಬಲಗೈಯಲ್ಲಿ ಚಾವಟಿಯಿಂದ ಕುದುರೆಗಳನ್ನು ನಿಯಂತ್ರಿಸಬೇಕಿತ್ತು. ತನ್ಮೂಲಕ ಮುಂಬರುವ ಗಾಡಿಗಳ ಮೇಲೆ ನಿಗಾ ವಹಿಸುವ ಮೂಲಕ ಸುಗಮ ಚಾಲನೆ ಮಾಡಬಹುದಾಗಿತ್ತು.

ಒಟ್ಟಿನಲ್ಲಿ ರಸ್ತೆಯ ಎಡ ಮತ್ತು ಬಲ ಭಾಗದಲ್ಲಿ ಸಂಕ್ಷಿಪ್ತ ವಿವರಣೆ ನೀಡುವುದಾದ್ದಲ್ಲಿ, ಬ್ರಿಟನ್ ನಲ್ಲಿ ಖಡ್ಗ ಯುದ್ಧಕ್ಕಾಗಿ ಎಡಭಾಗದಲ್ಲೂ ಮತ್ತು ಅಮೆರಿಕದಲ್ಲಿ ಕುದುರೆಗಾಡಿಯನ್ನು ಪರಿಣಾಮಕಾರಿಯಾಗಿ ಚಾವಟಿಯಿಂದ ನಿರ್ವಹಿಸಲು ಬಲ ಬದಿಯನ್ನು ಬಳಕೆ ಮಾಡಲಾಗಿತ್ತು.

ಹನುಮಂತ. ಮ. ದೇಶಕುಲಕಣಿ೯
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ

ಉಪವಾಸವನ್ನು ಏಕಾದಶಿಯಂದೇ ಏಕೆ ಮಾಡಬೇಕು?

 ಉಪವಾಸವನ್ನು ಏಕಾದಶಿಯಂದೇ ಏಕೆ ಮಾಡಬೇಕು? ದ್ವಾದಶಿ, ಪಂಚಮಿ, ಪಾಢ್ಯ ಏಕಾಗಬಾರದು? ಈ ಪ್ರಶ್ನೆಗೂ ವೈಜ್ಞಾನಿಕ ತಳಹದಿಯಲ್ಲಿ ನೀಡಿರುವ ಉತ್ತರ.*
  ಖಗೋಳ ಶಾಸ್ತ್ರದ ಪ್ರಕಾರ ಚಂದ್ರನು ಭೂಮಿಯ ಸುತ್ತ ಸುತ್ತುವಾಗ 24 ಗಂಟೆಗಳ ಅವಧಿಯ ಅಂತರದಲ್ಲಿ 12 ಡಿಗ್ರಿಗಳಷ್ಟು ಸಂಚರಿಸುತ್ತಾನೆ. ಇದನ್ನೇ ಒಂದು ತಿಥಿ ಎನ್ನುವುದು. ಹೀಗೆ ಪೂರ್ಣಿಮೆ ಅಥವಾ ಅಮಾವಾಸ್ಯೆಯ ದಿನದಿಂದ ದಶಮಿ (10ನೇ ದಿನದ) ಹೊತ್ತಿಗೆ 120 ಡಿಗ್ರಿಗಳಷ್ಟು ಚಂದ್ರ ಸಂಚರಿಸಿರುತ್ತಾನೆ. ಅಂದರೆ ಏಕಾದಶಿಯ ಹೊತ್ತಿಗೆ ಚಂದ್ರನು 120 ಡಿಗ್ರಿಗೆ ಬಂದು 132 ಡಿಗ್ರಿ ಕೋನದಲ್ಲಿರುತ್ತಾನೆ. ಆಹೊತ್ತಿನಲ್ಲಿ ಭೂಮಿಯ ಮೇಲೆ ಚಂದ್ರನ ಆಕರ್ಷಣೆ ಹೆಚ್ಚು.
   ಈ ಅವಧಿಯಲ್ಲಿ ಚಂದ್ರನ ಆಕರ್ಷಣೆಯ ಪ್ರಭಾವ ಭೂಮಿಯ ಮೇಲೂ, ಜಲವರ್ಗಗಳ ಮೇಲೂ ಹೆಚ್ಚಾಗಿ ಉಂಟಾಗಿರುತ್ತದೆ. ಚಂದ್ರನು ಈ ಅವಧಿಯಲ್ಲಿ ಜಲ, ನೆಲ, ಗಾಳಿ, ಬೆಂಕಿ, ಆಕಾಶ ಎಂಬ ಪಂಚಭೂತಗಳಿಂದ ಆದ ಮಾನವನ ಶರೀರದ ಮೇಲೂ ಪರಿಣಾಮ ಉಂಟು ಮಾಡುತ್ತಾನೆ. ಮಾನವನ ಜೀರ್ಣಾಂಗಗಳು ಈ ಅವಧಿಯಲ್ಲಿ ಪ್ರಭಾವಕ್ಕೊಳಗಾಗಿರುತ್ತವೆ.
   ಹೀಗಾಗಿ ಏಕಾದಶಿಯಂದು ಉಪವಾಸ ಮಾಡುವುದರಿಂದ ಮಾನವನ ಆರೋಗ್ಯ ಸಮೃದ್ಧಿಯಾಗಿರುತ್ತದೆ. ಅಂದು ಊಟ ಮಾಡುವುದರಿಂದ ಚಂದ್ರ ಪ್ರಭಾವಕ್ಕೆ ಒಳಗಾದ ಜೀರ್ಣಾಂಗಗಳಿಂದಾಗಿ ಅಜೀರ್ಣ ಸಂಬಂಧಿತ ಕಾಯಿಲೆಗಳು ಬರುತ್ತವೆ ಎನ್ನುತ್ತಾರೆ ಅವರು.
   ಹುಣ್ಣಿಮೆಯ ದಿನ ಚಂದ್ರನ ಆಕರ್ಷಣೆಗೆ ಸಾಗರದಲ್ಲಿ ಅಲ್ಲಕಲ್ಲೋಲಗಳುಂಟಾಗಿ, ಉಬ್ಬರದ ಅಲೆಗಳು ಮೂಡುವುದನ್ನು ನೀವು ಒಪ್ಪುವುದಾದರೆ, ಜೀರ್ಣಾಂಗಗಳ ಮೇಲೂ ಚಂದ್ರ ಪ್ರಭಾವ ಇರುತ್ತದೆ ಎಂಬುದನ್ನು ಒಪ್ಪಲೇ ಬೇಕು ಎನ್ನುತ್ತಾರೆ ಅವರು. ಏಕಾದಶಿಯ ದಿನ ಉಪವಾಸ ಮಾಡುವುದರಿಂದ, ನಿದ್ರೆ ಕಡಿಮೆ ಆಗುತ್ತದೆ. (ಹಸಿದಾಗ ನಿದ್ದೆ ಬಾರದು ಎಂಬುದು ಸಾಬೀತಾಗಿರುವ ಸಿದ್ಧಾಂತ) ಜಾಗರಣೆ, ಉಪವಾಸ ಈ ಎರಡರಿಂದ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. ಈ ಅತಿ ಉಷ್ಣದಿಂದ ದೇಹದಲ್ಲಿರುವ ರೋಗಾಣುಗಳು (ವೈರಸ್‌ - ಬ್ಯಾಕ್ಟೀರಿಯಾ) ಸಾವನ್ನಪ್ಪಿ. ಆರೋಗ್ಯ ವರ್ಧಿಸುತ್ತದೆ ಎಂಬುದು ಅವರ ವಿಶ್ಲೇಷಣೆ.
   ಪಾರಣೆಯ ವಿಶೇಷ : ಇದಾದ ನಂತರ ದ್ವಾದಶಿಯಂದು ಮಾಡುವ ಪಾರಣೆಯಲ್ಲಿ ಹೆಸರು ಬೇಳೆ ಪಾಯಸ ಮಾಡುತ್ತಾರೆ. ಇದು ಹಿಂದಿನ ದಿನ ಶರೀರದಲ್ಲಿ ಉತ್ಪತ್ತಿಯಾದ ಉಷ್ಣವನ್ನು ಶಮನ ಮಾಡುತ್ತದಂತೆ. ಅಗಸೆ ಸೊಪ್ಪಂತೂ ಇನ್ನೂ ಉತ್ತಮ ಆರೋಗ್ಯ ನೀಡುತ್ತದಂತೆ. ಅಗಸೆ ಸೊಪ್ಪು ಅಲೋಪತಿಯ ಆ್ಯಂಟಿ ಬಯೋಟಿಕ್‌ ರೀತಿಯಲ್ಲಿ ವರ್ತಿಸುತ್ತದೆ ಎನ್ನುತ್ತಾರೆ ಅಳಲೆಕಾಯಿ ಪಂಡಿತರು.
   ನೀವು ಈ ಸಿದ್ಧಾಂತವನ್ನು ಒಪ್ಪುವುದಾದರೆ ಏಕಾದಶಿಯಂದು ಉಪವಾಸ ಮಾಡಿ. ಇದೊಂದು ಕಾಗಕ್ಕ ಗುಬ್ಬಕ್ಕನ ಕಥೆ ಎಂದು ನೀವೆನ್ನುವುದಾದರೆ, ಓದಿ ಮರೆತುಬಿಡಿ. ಇಲ್ಲವೇ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸಂಶೋಧನಗೆ ಸಿದ್ಧರಾಗಿ.*
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಒಳ್ಳೆಯ ವಿಷಯ ಕೇಳುವವರಾಗಿ

ಒಂದು ದಿನ ಸಾಕ್ರಟಿಸ್
ಏಕಾಂಗಿಯಾಗಿ ತಮ್ಮ ಮನೆ ಅಂಗಳದಲ್ಲಿ ನಡೆದಾಡುತ್ತಿದ್ದಾಗ ಅವನಿಗೆ ಸ್ನೇಹಿತನೊಬ್ಬ,
‘ಸಾಕ್ರಟಿಸ್, ನಿಮ್ಮ ಶಿಷ್ಯನೊಬ್ಬನ ಬಗ್ಗೆ ನಾನೊಂದು ವಿಷಯ ಕೇಳಿದೆ,
ಆ ಸಂಗತಿ ನಿನಗೆ ಗೊತ್ತಿದೆಯಾ?’ ಎಂದು ಕೇಳಿದ.
ಅದಕ್ಕೆ ಸಾಕ್ರಟಿಸ್,
"ಒಂದು ನಿಮಿಷ ತಾಳು,
ನೀನು ಆ ವಿಷಯ ಹೇಳುವ ಮೊದಲು ನಿನಗೊಂದು ಮೂರು ಹಂತದ ಪರೀಕ್ಷೆಯೊಡ್ಡುತ್ತೇನೆ.
ನನ್ನ ಶಿಷ್ಯನ ಬಗ್ಗೆ ಹೇಳುವ ಮೊದಲು ಈ ಪರೀಕ್ಷೆಗೆ ನಿನ್ನನ್ನು ಒಳಪಡಿಸುವೆ" ಎಂದ.
ಅದಕ್ಕೆ ಆತ ಒಪ್ಪಿಕೊಂಡ.
‘ಮೊದಲ ಹಂತ ಅಂದ್ರೆ ಸತ್ಯ.
ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳುವ ಸಂಗತಿ ಸತ್ಯ ಎಂಬುದು ನಿನಗೆ ಮನವರಿಕೆಯಾಗಿರಬೇಕು, ಆಯಿತಾ?’ ಎಂದ ಸಾಕ್ರಟೀಸ್.
ಅದಕ್ಕೆ ಸ್ನೇಹಿತ
‘ಅದು ಸತ್ಯ ಹೌದೋ, ಅಲ್ಲವೋ ಎಂಬುದು ನನಗೆ ಗೊತ್ತಿಲ್ಲ.
ನನಗೆ ಯಾರೋ ಹೇಳಿದರು.
ನಾನು ಅದನ್ನು ಕೇಳಿದೆ ಅಷ್ಟೆ’ ಎಂದ.
ಅವನ ಮಾತಿಗೆ ಸಾಕ್ರಟಿಸ್,
‘ಹೌದಾ? ಆದರೆ ನೀನು ಹೇಳೋದು ಸತ್ಯವೋ, ಸುಳ್ಳೋ ಎಂಬುದು ನಿನಗೆ ಗೊತ್ತಿಲ್ಲ ಅಂತಾಯಿತು. ಪರವಾಗಿಲ್ಲ ಬಿಡು.
ಹಾಗಾದರೆ ಈಗ ಎರಡನೆ ಹಂತದ ಪರೀಕ್ಷೆ.
ಇದು goodness ಪರೀಕ್ಷೆ.
ಅಂದರೆ ನನ್ನ ಶಿಷ್ಯನ ಬಗ್ಗೆ ನೀನು ಹೇಳಲಿರುವ ಮಾತು ಒಳ್ಳೆಯದೋ, ಕೆಟ್ಟದ್ದೋ?’ ಎಂದು ಕೇಳಿದ.
ಅದಕ್ಕೆ ಸ್ನೇಹಿತ,
‘ಇಲ್ಲ…ಇಲ್ಲ… ಅದು ಒಳ್ಳೆಯ ವಿಷಯವಲ್ಲ’ ಎಂದ.
‘ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳಲಿರುವ ಸಂಗತಿ ಕೆಟ್ಟದ್ದು ಅಂತಾಯಿತು.
ಅಂದರೆ ಅದು ಸತ್ಯ ಸಂಗತಿ ಹೌದೋ ಅಲ್ಲವೋ ಎಂಬುದು ನಿನಗೆ ಗೊತ್ತಿರದಿದ್ದರೂ ಪರವಾಗಿಲ್ಲ.
ನೀನು ಅವನ ಬಗ್ಗೆ ಕೆಟ್ಟದನ್ನು ಹೇಳಬೇಕೆಂದು ಬಯಸಿದ್ದೀಯಾ ಅಂತಾಯಿತು’ ಎಂದ ಸಾಕ್ರಟಿಸ್.
ಈ ಮಾತನ್ನು ಕೇಳಿ ಸ್ನೇಹಿತನ ಮುಖ ಬಿಳುಚಿಕೊಂಡಿತು. ಒಂದು ಕ್ಷಣ ಆತ ತಬ್ಬಿಬ್ಬಾದ.
ಸಾಕ್ರಟಿಸ್ ಮುಂದುವರಿಸಿದ
‘ನನ್ನ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ನಿನಗೆ ಇನ್ನೂ ಒಂದು ಅವಕಾಶವಿದೆ. ಮೂರನೆ ಹಂತದ ಪರೀಕ್ಷೆಯನ್ನು ಒಡ್ಡುತ್ತೇನೆ. ಈ ಹಂತಕ್ಕೆ ಉಪಯುಕ್ತತೆ ಹಂತ ಎಂದು ಹೆಸರು.
ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳಲಿರುವ ಸಂಗತಿಯಿಂದ ನನಗಾಗಲಿ, ಸಮಾಜಕ್ಕಾಗಲಿ ಅಥವಾ ನಿನಗಾಗಲಿ ಯಾವುದಾದರೂ ರೀತಿಯಿಂದ ಪ್ರಯೋಜನವಾಗುತ್ತದೆ, ಉಪಯೋಗವಾಗುತ್ತದೆ ಎಂದು ನಿನಗೆ ಅನಿಸುತ್ತಿದೆಯಾ?’
ಅದಕ್ಕೆ ಸ್ನೇಹಿತ,
ಇಲ್ಲ ಅದರಿಂದ ಯಾರಿಗೂ ಲಾಭವಾಗುತ್ತದೆಂದು ನನಗೆ ಅನಿಸುತ್ತಿಲ್ಲ’ ಎಂದ.
ಆ ಸ್ನೇಹಿತನನ್ನು ಹತ್ತಿರಕ್ಕೆ ಕರೆದ ಸಾಕ್ರಟಿಸ್ ನುಡಿದ-‘ಅಯ್ಯಾ, ನೀನು ಹೇಳಲಿರುವ ಸಂಗತಿ ಸತ್ಯವೋ, ಸುಳ್ಳೋ ಎಂಬುದು ಗೊತ್ತಿಲ್ಲ. ಅದರಿಂದ ಯಾವ ಪುರುಷಾರ್ಥ ಸಾಧನೆಯಾಗುತ್ತದೆಂಬುದೂ ಗೊತ್ತಿಲ್ಲ. ಅದರಿಂದ ನನಗಾಗಲಿ, ನಿನಗಾಗಲಿ, ಸಮಾಜಕ್ಕಾಗಲಿ ಯಾವ ಪ್ರಯೋಜನವೂ ಇಲ್ಲ. ಹೀಗಿರುವಾಗ ಅಂಥ ವಿಷಯವನ್ನು ನನಗೇಕೆ ಹೇಳುತ್ತೀಯಾ?
ನಿನ್ನ ಬಾಯಿ ಚಪಲ ತೀರಿಸಿಕೊಳ್ಳಲು ಬೇರೆಯವರ ಬಗ್ಗೆ ಇಲ್ಲಸಲ್ಲದ ಸಂಗತಿ ಹೇಳ್ತೀಯಲ್ಲ, ನಿನಗೆ ನಾಚಿಕೆ ಆಗೊಲ್ಲವಾ? ನಾಲ್ಕು ಜನರಿಗೆ ಉಪಯೋಗವಾಗುವ ಕೆಲಸವಿದ್ದರೆ ಮಾಡು, ಇಲ್ಲದಿದ್ದರೆ ಇಲ್ಲಿಂದ ಜಾಗ ಖಾಲಿ ಮಾಡು"
ಎಂದು ಹೇಳಿದರು.
ಈ ದೃಷ್ಟಾಂತದ ಮೂಲಕ ಹೇಳಬಯಸುವುದೇನೆಂದರೆ...
ಸ್ನೇಹಿತರೆ,
*ಪ್ರತಿ ನಿತ್ಯ ಸಾಕ್ರೆಟಿಸ್‌ನಿಗೆ ಅವನ ಸ್ನೇಹಿತ ಹೇಳಲು ಬಂದಂತೆ ನಮಗೆಲ್ಲರಿಗೂ ನಮ್ಮ ಸ್ನೇಹಿತರು ಹಲವಾರು ವಿಷವಾಗುವ ವಿಷಯವನ್ನು ತರುತ್ತಿರುತ್ತಾರೆ. ಅದು ಎಷ್ಟು ಅವಶ್ಯಕ ಎಂಬುದನ್ನು ಅರಿತು ಆಲಿಸಬೇಕು. ಹಾಗೆಯೇ ನೀವು ಇನ್ನೊಬ್ಬರಿಗೆ ಮುಟ್ಟಿಸಬೇಕೆನ್ನುವ 'ವಿಷ'ಯ 'ವಿಷ'ವಾಗದಿರುವಂತೆ ಎಚ್ಚರ ವಹಿಸಬೇಕು. ಏಕೆಂದರೆ ಸಂಬಂಧಗಳು ಬಹಳ ಮುಖ್ಯ*
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಬಿಂದು ಜ್ನಾನವಷ್ಟೇ!’

ಒಮ್ಮೆ ಶಂಕರಾಚರ್ಯರು ಅವರ ಶಿಷ್ಯರ ಜೊತೆಗೆ ಹಿಮಾಲಯದತ್ತ ಯಾತ್ರೆ ಮಾಡುತ್ತಿದ್ದರು. ಮುಂದೆ ನಡೆಯುತ್ತಾ ಅಲಕನಂದಾ ನದಿಯ ತೀರಕ್ಕೆ ಅವರೆಲ್ಲರೂ ಬಂದು ಸೇರಿದರು. ಆಗ ಒಬ್ಬ ಶಿಷ್ಯನು ಅವರ ಸ್ತುತಿ ಮಾಡುತ್ತ ‘ಆಚಾರ್ಯರೆ, ನಿಮ್ಮ ಜ್ಞಾನವು ಎಷ್ಟು ಅಗಾಧವಾಗಿದೆ!ನಮ್ಮ ಮುಂದೆ ಪವಿತ್ರ ಅಲಕನಂದಾ ನದಿಯು ಹರಿಯುತ್ತಿದೆ. ನಿಮ್ಮ ಜ್ಞಾನವು ಈ ಅಲಕನಂದಾ ನದಿಯ ಪ್ರವಾಹಕ್ಕಿಂತಲೂ ಎಷ್ಟೊ ಪಟ್ಟುದೊಡ್ಡದಾಗಿರುವ ಆ ಮಹಾಸಾಗರದಂತೆ ಭಾಸವಾಗುತ್ತದೆ‘.
ಆಗ ಶಂಕರಾಚರ್ಯರು ಕೈಯಲ್ಲಿರುವ ದಂಡವನ್ನು ನೀರಿನಲ್ಲಿ ಮುಳುಗಿಸಿ ಹೊರತೆಗೆದರು. ಶಿಷ್ಯರಿಗೆ ತೋರಿಸಿ ಹೀಗೆ ಹೇಳಿದರು ‘ನೋಡು, ಈ ದಂಡವನ್ನು ಆ ಪವಿತ್ರ ನದಿಯಲ್ಲಿ ಅಡ್ಡಿ ತೆಗೆದಿದ್ದೇನೆ. ಆದರೆ ಇದಕ್ಕೆ ಒಂದೇ ಒಂದು ಹನಿ ನೀರು ಮಾತ್ರ ಅಂಟಿಕೊಂಡಿದೆ ಅಲ್ಲವೇ!’ನಗುತ್ತಲೇ ಶಂಕರಾಚಾರ್ಯರು ಮುಂದುವರಿಸಿದರು. ‘ಅರೆ ಹುಚ್ಚ, ನನ್ನ ಜ್ಞಾನದ ಪರಿಮಿತಿ ಏನು ಗೊತ್ತೇ? ಅಲಕನಂದೆಯಲ್ಲಿ ಎಷ್ಟೊಂದು ನೀರಿದೆ! ಆದರೆ ಅದಷ್ಟೂ ನೀರಿನಲ್ಲಿ ಈ ದಂಡವನ್ನು ಅಂಟಿಕೊಂಡಿದ್ದು ಕೇವಲ ಒಂದು ಬಿಂದು! ಅಂತಯೇ ಸಮಸ್ತ ಬ್ರಹ್ಮಾಂಡದಲ್ಲಿರುವ ಜ್ಞಾನಸಾಗರದಲ್ಲಿ ನನ್ನಲ್ಲಿರುವ ಕೇವಲ ಒಂದು ಬಿಂದು ಜ್ನಾನವಷ್ಟೇ!’
ಹನುಮಂತ. ಮ. ದೇಶಕುಲಕಣಿ೯
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ

ಪಂಚಗವ್ಯ'

ಪಂಚಗವ್ಯ' ವು ಕೇವಲ ಬಾಹ್ಯಶುದ್ದಿಯನ್ನು ಮಾತ್ರ ಮಾಡುವುದಿಲ್ಲ ಕಿಂತು ಚರ್ಮದಿಂದ ಹಿಡಿದು ಮೂಳೆಗಳಲ್ಲಿರುವ ಸಕಲ ರೋಗಗಳನ್ನು ದೂರಮಾಡಿ ನಮ್ಮನ್ನು ಎಲ್ಲ ರೀತಿಯಿಂದ ಪವಿತ್ರರನ್ನಾಗಿ ಮಾಡುತ್ತದೆ.

ಸಕಲರೋಗಗಳಿಗೂ "ರಾಮಬಾಣ" ಎನಿಸಿದೆ ಪ್ರತಿಜೈವಿಕ (antibiotic) ಔಷಧಿಗಳಿರುವಾಗ ಹಳೇಕಾಲದ ಈ ಪ್ರಾಣಿ ಮಲ-ಮೂತ್ರಗಳಿಂದ ಕೂಡಿದ "ಪಂಚಗವ್ಯ" ವನ್ನು ಸ್ವೀಕರಿಸುವುದು ಅಂಧವಿಶ್ವಾವಲ್ಲವೆ?

  ನಮ್ಮ ಶಾಸ್ತ್ರವು ಸರ್ವಥಾ ಅಂಧವಿಶ್ವಾವನ್ನು ಅವಲಂಬಿಸಿಲ್ಲ.ಸರಿಯಾದ ಕ್ರಮದಲ್ಲಿ ತಯಾರಿಸಿದ ಪಂಚಗವ್ಯ ಶಾರೀರಿಕ ಹಾಗೂ ಮಾನಸಿಕ ಸಕಲವ್ಯಾದಿಗಳನ್ನು ದೂರಮಾಡುವದು.ಪ್ರತಿಜೈವಿಕ (Antibiotic) ಔಷಧಿಗಳು ರೋಗಗಳನ್ನು ಗುಣಮಾಡುವ ಜೊತೆಯಲ್ಲಿ ಶರೀರದ ಸ್ವಾಭಾವಿಕ ಪ್ರಕ್ರಿಯೆಗೆ ಅಡ್ಡಿಯನ್ನೂ ಮಾಡುವುವು.ಪಂಚಗವ್ಯ ಯಾವ ಸ್ವಾಭಾವಿಕ ಪ್ರಕ್ರಿಯೆ ಗೂ ಹಾನಿ ಮಾಡದೇ ರೋಗಗಳನ್ನು ಮಾತ್ರ ದೂರ ಮಾಡುವವು.ಆರ್ಯವೇದ ಶಾಸ್ತ್ರಗಳು ಈ ಬಗ್ಗೆ ವಿಸ್ತ್ರೃತವಾದ ವಿವರಣೆಗಳನ್ನು ಕೊಟ್ಟಿವೆ.

   ಅವುಗಳ ವಿವರಣೆ ಈ ರೀತಿಯಾಗಿ ಇವೆ.

ಹಸುವಿನ ಮೂತ್ರ(ಗೋಮೂತ್ರ) ಹಾಗೂ ಹಸುವಿನ ಸೆಗಣೆ( ಗೋಮಯ) ಇವು ಹಸುವಿನ ಶರೀರದಿಂದ ಹೊರಟ ಹೊಲಸು ಅಲ್ಲ.ಅವುಗಳ ಉಪಯೋಗ ಈ ರೀತಿಯಾಗಿದೆ.

೧.ಗೋಮೂತ್ರ:-- ಇದು ತೀಕ್ಷ್ಣ,ಉಷ್ಣ, ಪಾಚಕ, ಜಠಾರಾಗ್ನಿ, ದೀಪಕ ಪಿತ್ತಕಾರಕ ಮೇಧಾಶಕ್ತಿ ವರ್ಧಕ, ಲೇಖನ ಶಕ್ತಿ ಮತ್ತು ಬುದ್ದಿಶಕ್ತಿಗಳನ್ನು ಬೆಳೆಸುತ್ತದೆ.

  ಹೊಟ್ಟೆಗೆ ಸಂಬಂಧಿಸಿದ ಎಲ್ಲ ರೋಗಗಳನ್ನು ನಿವಾರಿಸುತ್ತದೆ ಯಕೃತ್ ಅಥವಾ ಲಿವ್ಹರ್ ಗಳಿಗೆ ಸಂಬಂಧಿಸಿದ ಎಲ್ಲ ರೋಗಗಳಿಗೆ ರಾಮಬಾಣ ವಾಗಿದೆ.

 ಕಫರೋಗ, ಪಾಂಡುರೋಗ, ಕವಿ ಸೋರುವಿಕೆ, ಪ್ರಸೂತಿರೋ ಗ ಅರ್ಜೀಣಜ್ವರ, ಮೂತ್ರಕೃಚ್ಛ್ರ, ಹಾಗೂ ಕಣ್ಣುರೋಗಗಳಿಗೆ ಗೋಮೂತ್ರದ ಚಿಕಿತ್ಸೆಯು ಅತಿ ಲಾಭದಾಯಕವಾಗಿದೆ.

  ಹೊಲಗಳಲ್ಲಿ ಅಥವಾ ತೋಟದ ಗಿಡಗಳಿಗೆ ಕ್ರಿಮಿನಾಶಕಗಳನ್ನು (prestiside) ಸಿಂಪಡಿಸುವ ಬದಲು ಗೋಮೂತ್ರವನ್ನು ಸಿಂಪಡಿಸಿದರೆ ಸಸ್ಯಗಳು ಹಾಗೂ ಗಿಡ-ಮರಗಳು ಕ್ರಿಮಿಮುಕ್ತವಾಗುತ್ತವೆ.

ಗೋಮಯ:-- ಇದು ಶಕ್ತಿಪೂರ್ಣ ಕ್ರಿಮಿನಾಶಕವಾಗಿದೆ.ಕ್ಷಯ ಮೈಲಿಬೇನೆ (small pox) ಹಾಗೂ ಕಾಲರ ರೋಗಗಳ ಜಂತುಗಳನ್ನು ನಾಶಪಡಿಸಿ ಆ ರೋಗಗಳ ಹಬ್ಬುವಿಕೆಯನ್ನು ತಡೆಯುತ್ತದೆ.

Dr.Edwerd Jenner. ಎಂಬುವನು ಗೋಮಯದಿಂದ ತನಗೆ ತನ್ನ ಸೇವಕರಿಗೆ smallpox. ರೋಗದ ಸೋಂಕು ಆಗದಂತೆ ನೋಡಿಕೊಂಡು ಅನೇಕ ರೋಗಿಗಳ ರೋಗವನ್ನು ದೂರ ಮಾಡುವುದಲ್ಲದೇ ಈ ಮೈಲಿಬೇನೆ (smallpox)  ರೋಗವು ಆಗಬಾರದಂತೆ ಶರೀರದಲ್ಲಿ ರೋಗಪ್ರತಿರೋಧಕ ಶಕ್ತಿಯನ್ನು (immunity)  ಬೆಳೆಸುವ ಔಷಧಿಯನ್ನು ಹಸುವಿನ ಶರೀರದಿಂದ ತಯಾರಿಸಿ ಜಗತ್ತಿಗೆ ಉಪಕಾರವನ್ನು ಮಾಡಿರುವನು

  ಗೋಮಯದಿಂದ ಸಾರಿಸಿದ ನೆಲದಲ್ಲಿ ಗೋಮಯ ಲೇಪಿಸಿದ ಮನೆಯಲ್ಲಿ ವೈರಸ್ ಗಳು ಜೀವಿತವಾಗಿ ಉಳಿಯುವುದಿಲ್ಲ ಅಲ್ಲಿರುವ ವ್ಯಕ್ತಿಗಳಿಗೆ ಕ್ಷಯ ಹಾಗೂ ಮೈಲಿಬೇನೆ ಸೋಂಕು ಆಗುವುದಿಲ್ಲ.

"ಇಟಲಿ " ದೇಶದಲ್ಲಿ ಇಂದಿಗೂ ಬೇಸಿಗೆಯ ಕೊನೆಯಲ್ಲಿ ಹಾಗೂ ಮಳೆಗಾಲದ ಆರಂಭದಲ್ಲಿ "ಕಾಲರ" ರೋಗವು ಹಬ್ಬಬಾರದೆಂದು ನೀರಿನಲ್ಲಿ "ಗೋಮಯ"ದ ಮಿಶ್ರಣವನ್ನು ಕೂಡಿಸುತ್ತಾರೆ.

 ಎಲ್ಲ ರೋಗಗಳ ನಿವಾರಣೆಗಾಗಿ.ನಮ್ಮ ಪ್ರಾಚೀನ ಋಷಿಮುನಿಗಳು--

ಅಗ್ರಮಗ್ರಂ ಚರಂತೀನಾಂ ಓಷಧೀನಾಂ ವನೇ ವನೇ|
ತಾಸಾಂ ಋಷಭಪತ್ನೀನಾಂ ಪವಿತ್ರಂ ಕಾಯಶೋಧನಮ್||
ತನ್ಮೇ ರೋಗಾಂಶ್ಚ ಶೋಕಾಂಶ್ಚ ನುದ ಗೋಮಯ ಸರ್ವದಾ|

   ಎಂಬ ಮಂತ್ರ ಹೇಳಿ.ಗೋಮ ಯದಲ್ಲಿ ವಾಸಿಸಿರುವ ಮಹಾಲಕ್ಷ್ಮೀದೇವಿಯ ಸನ್ನಿಧಾ ನ ವನ್ನು ಸ್ಮರಿಸಿ, ಮೈಗೆಲ್ಲ ಗೋಮಯವನ್ನು ಲೇಪಿಸಿ ಕೊಂಡು ಅನಂತರ ಸ್ನಾನ.ಮಾಡುತ್ತಿದ್ದರು..

  ಈ ಬಗ್ಗೆ ನ್ಯೂಯಾರ್ಕ ಟೈಮ್ಸ್  ನಲ್ಲಿ ೧೯೮೪ ರಲ್ಲಿ ಡಾ|| ಮೈಕ್ ಫರ್ಸನ್ ರ ವಿಸ್ತೃತ ಸಂಶೋಧನಾತ್ಮಕ ಲೇಖವನ್ನು ಓದಿರಿ.ಎಂದು ಹಿಂದಿ ಭಾಷೆಯ "ಕಲ್ಯಾಣ" ಮಾಸಿಕವು ಸೂಚಿಸಿದೆ.

ಗೋದುಗ್ದ (ಹಸುವಿನ ಹಾಲು):--
ಇದು ಸ್ವಾಧಿಷ್ಟ, ಸ್ನಿಗ್ಧ, ಬಲಕಾರಕ ಅತಿಪಥ್ಯ ಕಾಂತಿ- ಬುದ್ದಿ-ಪ್ರಜ್ಞಾ ಹಾಗೂ ಮೇದಾವರ್ಧಕವಾಗಿದೆ.ತುಷ್ಟಿ-ಪುಷ್ಟಿ ಹಾಗೂ ವೀರ್ಯದಾಯಕವಾಗಿದೆ.

  ಹುಟ್ಟಿದ ಮಗುವಿಗೆ ತಾಯಿಯ ಹಾಲು ಕಡಿಮೆ ಬೀಳುತ್ತಿದ್ದರೆ ಹಸುವಿನ ಹಾಲನ್ನೂ ಪರ್ಯಾಯವಾಗಿ ಜಗತ್ತಿನ ಎಲ್ಲ ಕಡೆಗಳಲ್ಲಿ ಚಿಕ್ಕ ಮಕ್ಕಳಿಗೆ ಕುಡಿಸಲಾಗುತ್ತದೆ.

  ಅರ್ಧತೆಲೆನೋವು ಅನ್ನವಿಷಭಾದೆ (food poison)  ಅಜೀರ್ಣ, ಕಫರೋಗ ಅಜೀರ್ಣಜ್ವರ ಮೂತ್ರಕೃಚ್ಛ್ರ ಹೃದಯರೋಗ, ಶಿರೋವೇದನೆ, ಪಾಂಡುರೋಗ, ಕ್ಷಯರೋಗ ಸಂಗ್ರಹಿಣಿ ಇತ್ಯಾದಿ ರೋಗಗಳಲ್ಲಿ ರೋಗಶಾಮಕ ಶ್ರೇಷ್ಠ ಔಷಧಿ ಯಾಗಿದೆ...
ಹನುಮಂತ. ಮ. ದೇಶಕುಲಕಣಿ೯
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ

ನಿಜಕ್ಕೂ ಕಳೆದ ಕಾಲ ಮರಳಿ ಬರುವುದಿಲ್ಲ

* ಅಂಗಡಿಯಲ್ಲಿ ಮಿಠಾಯಿಗಳು ಇವತ್ತಿಗೂ ಇವೆ, ಚಪ್ಪರಿಸಿ ತಿನ್ನಲು ಬಾಲ್ಯದ ಸ್ನೇಹಿತರಿಲ್ಲ

*ಕಲಿತ ಶಾಲೆಯ ಗುರುಗಳು ಇವತ್ತಿಗೂ ಇದ್ದಾರೆ, ಹೋಗಿ ಮಾತನಾಡಿ ಬರಲು ಪುರುಸೊತ್ತು ಇಲ್ಲ

* ಗೂಡಂಗಡಿಗಳು ಇನ್ನೂ ಉಸಿರಾಡುತ್ತಿವೆ, ಅಂಗಡಿ ಬಾಗಿಲ ಬಳಿ ಹೋಗಲು ಮಾಲ್ ಗಳು ಬಿಡುತ್ತಿಲ್ಲ

*ಅಂಚೆ ಕಛೇರಿಗಳು ಇಂದಿಗೂ ಇವೆ, ಕಾಗದ ಬರೆಯಲು ಮೊಬೈಲ್ ಗಳು ಬಿಡುತ್ತಿಲ್ಲ.

* ಕಾದಂಬರಿಗಳ ಪುಸ್ತಕಗಳು ಕಪಾಟುಗಳಲ್ಲಿ ಇನ್ನೂ ಇವೆ, ತೆರೆದು ಓದುವಷ್ಟು ಸಮಯವನ್ನು ಟಿ.ವಿ ಮಾಡಿಕೊಡುತ್ತಿಲ್ಲ

*ಹಕ್ಕಿಗಳು ಇಂದಿಗೂ ಹಾಡುತ್ತಿವೆ, ಕೂತು ಆಲಿಸುವ ವ್ಯವಧಾನವೇ ಇಲ್ಲ

* ಹೂ ಗಿಡದಲ್ಲಿ ಹೂವುಗಳು ಇವತ್ತಿಗೂ ಅರಳುತ್ತಿವೆ, ಮಕರಂದ ಹೀರುವ ದುಂಬಿಗಳ ನೋಡುವ ಮನಸ್ಸೇ ಇಲ್ಲ

* ಹಣ್ಬಿಟ್ಟ ಮರ, ಹಬ್ಬಿದ ಬಳ್ಳಿ, ಗುಬ್ಬಿ ಹಕ್ಕಿಯ ಕಣ್ಣೋಟ, ಹಬೆಯಾಡುವ ಚಹ ಎಲ್ಲವೂ ಇವೆ, ಸ್ಪಂದಿಸಲು ಬಿಡುವಿಲ್ಲ

* ಬಾನಲ್ಲಿ ನಕ್ಷತ್ರಗಳು ಇವತ್ತಿಗೂ ಇವೆ, ಕುಳಿತು ಲೆಕ್ಕ ಹಾಕುವುದಕ್ಕೆ ಸಮಯವೇ ಇಲ್ಲ

* ಬೆಳದಿಂಗಳ ರಾತ್ರಿ ಇಂದಿಗೂ ಇದೆ, ಸುರಿವ ಬೆಳದಿಂಗಳಲ್ಲಿ ಕುಳಿತು ಹಾಡಲು ಕಾಲ ಕೂಡಿಬರುತ್ತಿಲ್ಲ

* ಸಂಬಂಧ, ಬಾಂಧವ್ಯಗಳು ಇವತ್ತಿಗೂ ಇವೆ, ನಿಭಾಯಿಸಲು ಅಹಂ ಬಿಡುತ್ತಿಲ್ಲ

* ಬಾಲ್ಯದಲ್ಲಿದ್ದಂತೆ ಸಾಧಾರಣವಾಗಿ ಬದುಕಲು ಇವತ್ತಿಗೂ ಆಸೆಯಿದೆ, ಪರರ ವೈಭೋಗ ಹಾಗಿರಲು ಬಿಡುತ್ತಿಲ್ಲ

*ಅಮ್ಮನ ಕೈತುತ್ತು, ಅಪ್ಪನ ಗದರಿಕೆ, ಅಜ್ಜಿಯ ಪ್ರೀತಿ, ಅಜ್ಜನ ಕೆಮ್ಮು, ದೊಡ್ಡಪ್ಪನ ಠೀವಿ, ಚಿಕ್ಕಪ್ಪನ ಸ್ನೇಹಭಾವ, ಮಾವನ ಭಯ, ಅತ್ತೆಯ ಆರೈಕೆ, ಚಿಕ್ಕಮ್ಮನ ಮುದ್ದು ಓರಗೆಯವರೊಂದಿಗಿನ ಒಡನಾಟ ಎಲ್ಲವೂ ಇತ್ತು ಹಾಗೂ ಇದೆ... ನಿಭಾಯಿಸುವುದಕ್ಕೆ ವ್ಯವಧಾನವಿಲ್ಲ

ನಿಜಕ್ಕೂ ಕಳೆದ ಕಾಲ ಮರಳಿ ಬರುವುದಿಲ್ಲ... (ಕೃಪೆ:ಅಂತಜಾ೯ಲ)

ಹನುಮಂತ. ಮ. ದೇಶಕುಲಕಣಿ೯
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ
ಹಾಲು , ಮೊಸರು , ತುಪ್ಪ , ಜೇನುತುಪ್ಪ ,
ಸಕ್ಕರೆ , ಬಾಳೆಹಣ್ಣು , ಎಳನೀರು , ನೀರು
ಮುಂತಾದ ವಸ್ತುಗಳಿಂದ ದೇವರ ವಿಗ್ರಹಕ್ಕೆ
ಅಭಿಷೇಕವನ್ನು ಮಾಡುತ್ತೇವೆ..
ತದನಂತರ ತೀರ್ಥವೆಂದು ಸೇವಿಸುತ್ತೇವೆ..
ಇದಕ್ಕೆ ಪಂಚಾಮೃತವೆಂದೂ ಕರೆಯುತ್ತಾರೆ..
ಪಂಚಾಮೃತ: 
ಬಾಳೆಹಣ್ಣು ಹಾಗೂ ಎಳನೀರಿನಲ್ಲಿ ಇರುವ
ಪೊಟ್ಯಾಶಿಯಂ ಹೃದಯ ಸಂಬಂಧಿ ಖಾಯಿಲೆಗಳು
ಬರದಂತೇ ತಡೆಯುತ್ತದೆ.
ಅಭಿಷೇಕವನ್ನು ಸಾಮಾನ್ಯವಾಗಿ ಸಾಲಿಗ್ರಾಮ ,
ಶಿವಲಿಂಗ ಅಥವಾ ಕಂಚು , ತಾಮ್ರ , 
ಕಬ್ಬಿಣ , ಚಿನ್ನ ಮುಂತಾದ ಪಂಚಲೋಹಗಳಿಂದ ಮಾಡಿದ ವಿಗ್ರಹಗಳ ಮೇಲೆ ಮಾಡುತ್ತಾರೆ..
ಇವುಗಳಲ್ಲಿರುವ ಔಷಧೀಯ
ಗುಣಗಳು ನೀರಿನೊಂದಿಗೆ ಸೇರುತ್ತವೆ..ಶುದ್ಧ ಸಾಲಿಗ್ರಾಮ ಹಾಗೂ ಶಿವಲಿಂಗಗಳು 
ಸಿಗುವುದು ಗಂಡಕಿ ಹಾಗೂ ನರ್ಮದಾ
ನದಿಗಳಲ್ಲಿ..ಈ ನದಿಗಳ ನೀರಿನಲ್ಲಿ ಸಿಲಿಕಾ ಹಾಗೂ 
ಕ್ಯಾಲ್ಸಿಯಂ ಅಂಶಗಳು ಜಾಸ್ತಿಯಾಗಿವೆ..
ಸಾಲಿಗ್ರಾಮ , ಶಿವಲಿಂಗಗಳ ಅಭಿಷೇಕದ ನೀರೂ ಸಹ ಈ ಅಂಶಗಳನ್ನು ಒಳಗೊಂಡಿರುತ್ತದೆ..ಇದು ದೃಷ್ಟಿ ಸಂಬಂಧಿ ನರಗಳ ಬಲವನ್ನು ಹೆಚ್ಚಿಸುತ್ತದೆಂದು ಸಾಬೀತಾಗಿದೆ..
   ಇದೇ ಕಾರಣದಿಂದ ಅಭಿಷೇಕವಾದ
ನಂತರ ಸಾಲಿಗ್ರಾಮ ಅಥವಾ ಶಿವಲಿಂಗವನ್ನು
ಕಣ್ಣುಗಳಿಗೆ ತಾಗಿಸಿ ನಮಸ್ಕರಿಸುತ್ತೇವೆ..ಇನ್ನು , ಪಂಚಲೋಹಗಳಿಗಂತೂ ನಮ್ಮಪೂರ್ವಜರು ಬಹಳ ಮಹತ್ವ ನೀಡಿದ್ದರು.
     ಬೆಳ್ಳಿಯ ತಟ್ಟೆಗಳಲ್ಲಿ ಆಹಾರವನ್ನು ಸೇವಿಸುತ್ತಿದ್ದರು.ತಾಮ್ರದ ಪಾತ್ರೆಗಳಲ್ಲಿ ನೀರನ್ನುಸಂಗ್ರಹಿಸಿ ಕುಡಿಯುತ್ತಿದ್ದರು..
ಲೋಹಗಳಲ್ಲಿ ವಿಶೇಷವಾದ ಶಕ್ತಿಯೆದೆಯೆಂದು
ತಿಳಿದಿದ್ದರು.ಅವುಗಳ ಮೂಲಕ ಆಹಾರವನ್ನು ಸೇವಿಸುವುದರಿಂದ ಆರೋಗ್ಯ ಚೆನ್ನಾಗಿರುತ್ತದೆಂದು ಅವರು ಅರಿತಿದ್ದರು.
ಹನುಮಂತ. ಮ. ದೇಶಕುಲಕಣಿ೯
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ

8 ಚಾಣಾಕ್ಷ ಸೂತ್ರ

 ಯಾವುದೇ ಕ್ಷೇತ್ರಕ್ಕೆ ಸೇರಿದ ಸಂಸ್ಥೆಯಲ್ಲಿ ಕೆಲಸ ಮಾಡಿದರೂ, ಆಫೀಸುಗಳಲ್ಲಿ ರಾಜಕೀಯಗಳು ಇರುವುದು ಸಹಜ. ತಾನು ಬೆಳೆಯುವುದಕ್ಕಾಗಿ ಅಥವಾ ಇತರರನ್ನು ತುಳಿಯುವುದಕ್ಕಾಗಿಯೋ, ಇತರೆ ಕಾರಣಗಳಿಗಾಗಿ ಕೆಲವು ಉದ್ಯೋಗಿಗಳು ಯಾವುದೇ ಆಫೀಸ್’ನಲ್ಲಿ ಕೆಲಸ ಮಾಡಿದರೂ ರಾಜಕೀಯ ಮಾಡುತ್ತಿರುತ್ತಾರೆ. 

 ಬಾಸ್ ಜೊತೆಗೆ ಲಾಬಿ ಮಾಡಿ ಹೇಗಾದರೂ ಮಾಡಿ ತಾವು ಅಂದುಕೊಂಡಿದ್ದನ್ನು ಸಾಧಿಸಿಕೊಳ್ಳುತ್ತಾರೆ. ಆದರೆ ಆಫೀಸ್’ನಲ್ಲಿ ಎಲ್ಲರೂ ಹೀಗೆ ಇರುವುದಿಲ್ಲ. ಕೆಲವರು ಇಂತಹವುಕೆ ತಲೆ ಕೆಡಿಸಿಕೊಳ್ಳದೇ ತಮ್ಮಪಾಡಿಗೆ ತಾವು ಇರುತ್ತಾರೆ. ಆದರೆ ಅವರು ಕೂಡ ಇಂತಹ ರಾಜಕೀಯಗಳಿಗೆ ಬಲಿಯಾಗು ಸಂದರ್ಭ ಬಂದರೆ. ಏನು ಮಾಡಬೇಕು..? ಅದಕ್ಕಾಗಿ ಆಚಾರ್ಯ ಚಾಣಾಕ್ಷ ಕೆಲವು ಸೂತ್ರಗಳನ್ನು ತಿಳಿಸಿದ್ದಾನೆ. 

   ಅವುಗಳನ್ನು ಪಾಲಿಸಿದರೆ ಆಫಿಸ್ ರಾಜಕೀಯಗಳಲ್ಲಿ ನಿಮ್ಮದೇ ಮೇಲುಗೈ ಆಗಲಿದೆ. 

1. ಆಚಾರ್ಯ ಚಾಣಾಕ್ಷ ಹೇಳಿದ ಪ್ರಕಾರ ಪ್ರತಿಯೊಬ್ಬ ವ್ಯಕಿಯಲ್ಲೂ ಯಾವುದೋ ಒಂದು ಬಲಹೀನತೆ ಇರುತ್ತದೆ. ಅದನ್ನು ಪತ್ತೆಹಚ್ಚಿ ಅದಕ್ಕೆ ಅನುಗುಣವಾಗಿ ವರ್ತಿಸಿದರೆ ಆ ಬಲಹೀನತೆ ಇರುವ ವ್ಯಕ್ತಿ ನಮ್ಮ ವಶಕ್ಕೆ ಬರುತ್ತಾರೆ. ಹೀಗೆ ಆಫೀಸ್’ನಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಬಲಹೀನತೆಯನ್ನು ತಿಳಿದುಕೊಳ್ಳಬೇಕು. ಇದರಿಂದ ಅವರನ್ನು ನಮ್ಮ ಹಿಡಿತಕ್ಕೆ ತೆಗೆದುಕೊಳ್ಳಬೇಕು. ಆದರೆ ಅವರ ಬಲಹೀನತೆಯನ್ನು ತಿಳಿದುಕೊಳ್ಳಲು ಸ್ನೇಹಗಳಿಸಬೇಕು. ಹಾಗೆ ಮಾಡಿದರೆ ಅವರ ಮೇಲೆ ಅಧಿಪತ್ಯ ಸಾಧಿಸಲು ಅವಕಾಶವಿರುತ್ತದೆ.

 2. ನಮಗೆ ಶತ್ರುವಾಗಿರುವವರ ಬಲಹೀನತೆಯನ್ನು ತಿಳಿದುಕೊಳ್ಳುವುದಷ್ಟೇ ಅಲ್ಲ, ಸರಿಯಾದ ಸಮಯದಲ್ಲಿ ಅವುಗಳಿಂದ ಅವರ ಮೇಲೆ ಅಟ್ಯಾಕ್ ಮಾಡಿದರೆ ಫಲಿತಾಂಶವಿರುತ್ತದೆ. ಹಾಗೆ ಮಾಡದೇ ಇತರೆ ಪರಿಸ್ಥಿತಿಯಲ್ಲಿ ನಾವು ಏನು ಮಾಡಿದರೂ ಅದರಿಂದ ಅಷ್ಟೊಂದು ಉಪಯೋಗವಿರುವುದಿಲ್ಲ.

3. ಇತರರ ಬಗ್ಗೆ ನಮಗೆ ತಿಳಿದ ಬಲಹೀನತೆಗಳನ್ನು ಮತ್ತೊಬ್ಬರಿಗೆ ಯಾವುದೇ ಪರಿಸ್ಥಿತಿಯಲ್ಲೂ ಹೇಳಬಾರದು. ಹಾಗೆ ಮಾಡಿದರೆ ಅದರಿಂದ ಇತರೆ ವ್ಯಕ್ತಿಗಳು ನಮಗಿಂತ ಮುಂಚೆ ಅದರ ಲಾಭ ಪಡೆಯುತ್ತಾರೆ.

4. ಶತ್ರುಗಳು ಯಾವಾಗಲೂ ವ್ಯಕ್ತಿಯ ಬಲಹೀನತೆಯನ್ನು ಗುರಿಯಾಗಿಸಿಕೊಂಡು ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಇಂತಹವರನ್ನು ಎದುರಿಸಲು ಸಿದ್ದವಾಗಿರಬೇಕು.

5. ಶತ್ರುಗಳು ನಮಗೆ ಸಿಕ್ಕಾಗ ಅವರು ನಮ್ಮ ಜೊತೆ ಸ್ನೇಹ ಮಾಡಲು ಮುಂದೆ ಬಂದರೂ ಅವರನ್ನು ಯಾವುದೇ ಸಂದರ್ಭದಲ್ಲೂ ನಂಬಬಾರದು.

6. ಯಾವುದೇ ಸಂದರ್ಭದಲ್ಲಾದರೂ ನಾವು ಒಳ್ಳೆಯ ನಡವಳಿಕೆ, ವರ್ತನೆಯನ್ನು ತೋರ್ಪಡಿಸಿದಾಗಲ್ಲೇ ಇತರರು ನಮಗೆ ಗೌರವ ನೀಡುತ್ತಾರೆ. ಹಾಗೆ ಮಾಡದೇ ಇಷ್ಟ ಬಂದಂತೆ ವರ್ತಿಸಿದರೆ ಇತರರ ದೃಷ್ಟಿಯಲ್ಲಿ ನಾನು ಗೌರವ ಕಳೆದುಕೊಳ್ಳಬೇಕಾಗುತ್ತದೆ.

7. ಮೂರ್ಖರಿಗೆ ಯಾವುದೇ ಸಲಹೆಗಳನ್ನು ನೀಡಬಾರದು. ಒಂದು ವೇಳೆ ನೀಡಿದರೂ ಅವರು ಹೇಗೋ ಪಾಲಿಸುವುದಿಲ್ಲವದ್ದರಿಂದ, ನಮ್ಮ ಬೆಲೆಬಾಳುವ ಸಲಹೆಗಳು ನಿರುಪಯುಕ್ತವಾಗುತ್ತವೆ. ಹೊರತು ಯಾವುದೇ ಉಪಯೋಗ ವಾಗುವುದಿಲ್ಲ

8. ಹಾವಿಗೆ ಹಾಲು ಹಾಕಿ ಬೆಳೆಸಿದರೂ ಅದು ವಿಷವನ್ನೇ ಕಾರುವಂತೆ, ಕೆಟ್ಟ ವ್ಯಕ್ತಿಯ ಬಳಿ ಸ್ನೇಹವನ್ನು ಬೆಳೆಸಿದರೂ ಅವರು ಮಾತ್ರ ನಮಗೆ ಎಂದಿಗೂ ಕೆಟ್ಟದನ್ನೆ ಮಾಡುತ್ತಾರೆ . ಯಾಕೆಂದರೆ ಅವರಿಗೆ ಕೇಡು ಮಾಡುವುದರಲ್ಲೇ ತೃಪ್ತಿ ಸಿಗುತ್ತದೆ

-ಹನುಮಂತ. ಮ. ದೇಶಕುಲಕಣಿ೯

ಸಾ||ಭೋಗೇನಾಗರಕೊಪ್ಪ. ಮೊ.9731741397

ಪೊ|| ಗಂಜೀಗಟ್ಟಿ-581196

ತಾ||ಕಲಘಟಗಿ ಜಿ||ಧಾರವಾಡ

ನೈವೇದ್ಯವನ್ನು ತಿನ್ನುವನೇನು?

ಆ ದೇವರು ನಾವಿಟ್ಟ ನೈವೇದ್ಯವನ್ನು ತಿನ್ನುವನೇನು? ಇದು ನಂಬಿಕೆಯಿಲ್ಲದವರ ಪ್ರಶ್ನೆ.  ಇದಕ್ಕೆ ಒಂದು ಕತೆಯ ಮೂಲಕ ವಿವರಣೆ. 
ಒಬ್ಬ ಗುರು ಮತ್ತು  ಶಿಷ್ಯರ ಸಂವಾದ ಹೀಗೆ ನಡೆದಿತ್ತು. ದೇವರನ್ನು ನಂಬದ ಶಿಷ್ಯನೊಬ್ಬ ತನ್ನ ಗುರುವನ್ನು " ದೇವರು ನಾವು ಮಾಡುವ ನೈವೇದ್ಯವನ್ನು ಸ್ವೀಕರಿಸುವನೇ? ಹಾಗೆ ನಾವು ನೀಡುವ ನೈವೇದ್ಯವನ್ನು ಸ್ವೀಕರಿಸಿದರೆ ನಾವು 'ಪ್ರಸಾದ' ವಿನಿಯೋಗ ಮಾಡುವುದು ಹೇಗೆ? ಆ ದೇವರು ನಾವು ನೀಡುವ ನೈವೇದ್ಯವನ್ನು ನಿಜವಾಗಿಯೂ ಸ್ವೀಕರಿಸುವನೇ ಗುರುಗಳೇ?" ಎಂದು ಪ್ರಶ್ನಿಸಿದ. 
   ಗುರುಗಳು ಯಾವ ಉತ್ತರವನ್ನೂ ನೀಡದೆ ಆ ಶಿಷ್ಯನಿಗೆ ತರಗತಿಗೆ  ತಯಾರಾಗಲು ಆದೇಶಿಸಿದರು.  ಆ ದಿನ ಗುರುಗಳು 'ಉಪನಿಷತ್ತು' ಗಳ ಪಾಠವನ್ನು ಆರಂಭಿಸಿದರು. ಶಿಷ್ಯರಿಗೆ ' ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ ...... ಎಂಬ ಮಂತ್ರದ ಬೋಧನೆಯನ್ನು ಮಾಡಿ, ಸೃಷ್ಟಿಯ ಎಲ್ಲವೂ ಪೂರ್ಣದಿಂದಲೇ ಆಗಿರುತ್ತದೆ, ಪೂರ್ಣಕ್ಕೆ ಪೂರ್ಣವನ್ನು ಸೇರಿಸಿದರೆ ಅಥವಾ ಪೂರ್ಣದಿಂದ ಪೂರ್ಣವನ್ನು ಕಳೆದರೆ ಪೂರ್ಣವೇ ಉಳಿಯುತ್ತದೆ, ಎಂದು ವಿವರಿಸಿದರು.   
   ನಂತರ ಎಲ್ಲರಿಗೂ ಈಶಾವಾಸ್ಯೋಪನಿಷತ್ತಿನ ಮಂತ್ರಗಳನ್ನು ಕಂಠಸ್ಥ ಮಾಡಿಕೊಳ್ಳಲು ಆದೇಶಿಸಿದರು. ಎಲ್ಲಾ ವಿದ್ಯಾರ್ಥಿಗಳೂ ಅಭ್ಯಾಸದಲ್ಲಿ ತೊಡಗಿದರು. ಹೀಗೆ ಎರಡು ಮೂರುದಿನಗಳ ಸತತ ಅಭ್ಯಾಸದ ನಂತರ, ಗುರುಗಳು, ಆ ನೈವೇದ್ಯದ ವಿಚಾರವಾಗಿ ತನ್ನ ಸಂದೇಹವನ್ನು ವ್ಯಕ್ತಪಡಿಸಿದ ಶಿಷ್ಯನನ್ನು ಕರೆದು, ಅಭ್ಯಾಸಮಾಡಿದ ಮಂತ್ರಗಳನ್ನು ಪುಸ್ತಕವನ್ನು ನೋಡದೆ ಹೇಳಲು, ಹೇಳಿದರು. ಆ ಶಿಷ್ಯ  ಕಂಠಸ್ಥ ಹೇಳಿ, ಒಪ್ಪಿಸಿದ.  
   ಆಗ, ಗುರುಗಳು ಮುಗುಳುನಗುತ್ತಾ ' ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಬಾಯಿಪಾಠ ಮಾಡಿದೆಯಾ?" ಎಂದು ಪ್ರಶ್ನಿಸಿದರು. ' ಹೌದು ಗುರುಗಳೇ  ನಾನು ಆ ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಆ ಮಂತ್ರಗಳ ಉಚ್ಛಾರಣೆ ಮಾಡಿದೆ, ಗುರುಗಳೇ' ಎಂದು ಉತ್ತರಿಸಿದ. 
   " ನೀನು ಆ ಪುಸ್ತಕದಲ್ಲಿನ ಎಲ್ಲಾ ಪದಗಳನ್ನೂ ನಿನ್ನ ಮನಸ್ಸಿಗೆ ತೆಗೆದುಕೊಂಡಿದ್ದೀಯೆ ಎಂದಮೇಲೆ ಆ ಪುಸ್ತಕದಲ್ಲಿ ಆ ಪದಗಳು ಇನ್ನೂ ಅಲ್ಲೇ ಇವೆಯಲ್ಲ?" ಎಂದು ಗುರುಗಳು ಕೇಳಿದರು. ಶಿಷ್ಯ ಪಿಳಿಪಿಳಿ ಕಣ್ಣುಬಿಡುತ್ತಾ ನಿಂತ. ಗುರುಗಳು  " ನಿನ್ನ ಮನಸ್ಸಿನಲ್ಲಿರುವ ಪದಗಳು ' ಸೂಕ್ಷ್ಮ ಸ್ಥಿತಿಯಲ್ಲಿವೆ' ಮತ್ತು ಪುಸ್ತಕದಲ್ಲಿನ ಪದಗಳು 'ಸ್ಥೂಲಸ್ಥಿತಿ' ಯಲ್ಲಿವೆ " ಎಂದರು.  
   ಹಾಗೆಯೇ ಆ ದೇವರೂ ಸಹ ' ಸೂಕ್ಷ್ಮ ಸ್ಥಿತಿ' ಯಲ್ಲಿದ್ದಾನೆ. ನಮ್ಮ ಕಣ್ಣಿಗೆ ಕಾಣುವುದಿಲ್ಲ. ನಾವು ಅವನಿಗೆ ಮಾಡುವ ನೈವೇದ್ಯ 'ಸ್ಥೂಲ ಸ್ಥಿತಿ'ಯಲ್ಲಿದೆ. ಆದ್ದರಿಂದ ಸೂಕ್ಷ್ಮ ಸ್ಥಿತಿಯಲ್ಲಿರುವ ಆ ದೇವರು ಸೂಕ್ಷ್ಮ ಸ್ಥಿತಿಯಲ್ಲಿಯೇ ಆ ನೈವೇದ್ಯವನ್ನು ಸ್ವೀಕರಿಸುವುದರಿಂದ, ನಾವು ಕೊಟ್ಟ ನೈವೇದ್ಯ ಅವನು ಸ್ವೀಕರಿಸಿದ ಮೇಲೂ ಕಿಂಚಿತ್ತೂ ಕಡಿಮೆಯಾಗುವುದಿಲ್ಲ.   
  "ನಾವು ಮಾಡಿದ ನೈವೇದ್ಯವನ್ನು ಆ ದೇವರು ಸೂಕ್ಷರೂಪದಲ್ಲಿ ಸ್ವೀಕರಿಸುತ್ತಾನೆ, ನಂತರ ನಾವು ಆ ನೈವೇದ್ಯವೆಂದೇ ' ಪ್ರಸಾದ' ವೆಂದು ಸ್ಥೂಲರೂಪದಲ್ಲಿ ಪಡೆಯುತ್ತೇವೆ" ಎಂದು ಗುರುಗಳು ವಿವರಿಸಿದರು. ಈ ಮಾತುಗಳನ್ನು ಕೇಳಿ ಆ ಶಿಷ್ಯ ' ದೇವರಲ್ಲಿ' ತನ್ನ ಅಪನಂಬಿಕೆಗೆ ನೊಂದು ಗುರುಗಳಿಗೆ ಶರಣಾದ. 

ಹನುಮಂತ. ಮ. ದೇಶಕುಲಕಣಿ೯
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ

ಕರ್ಪೂರ ಆರತಿ

ಪೂಜೆಯಲ್ಲಿ ಕರ್ಪೂರ ಆರತಿ ಮಾಡುವುದರ ಹಿಂದಿರುವ ವೈಜ್ಞಾನಿಕ ಕಾರಣವೇನೆಂದು ನಿಮಗೆ ಗೊತ್ತೇ?*
ಸಂಪ್ರದಾಯದಲ್ಲಿ ಅನೇಕ ಆಚರಣೆಗಳಿರುವ ವಿಷಯ ಎಲ್ಲರಿಗೂ ಗೊತ್ತು.ಅನಾದಿ ಕಾಲದಿಂದಲೂ ಹಿಂದೂಗಳು ಈ ಆಚರಣೆಗಳನ್ನು ತಪ್ಪದೇ ಪಾಲಿಸಿಕೊಂಡು ಬರುತ್ತಿದ್ದಾರೆ.ಮುಖ್ಯವಾಗಿ ದೇವರ ಪೂಜೆ ಮಾಡುವಾಗ ದೀಪ,ಅಗರ ಬತ್ತಿ ಬೆಳಗುವುದು ಕರ್ಪೂರ ಆರತಿ ಮಾಡುತ್ತೇವೆ.ಇವೆಲ್ಲದರ ಹಿಂದೆ ವೈಜ್ಙಾನಿಕ ಕಾರಣಗಳಿವೆಯೆಂಬುದನ್ನು ತಿಳಿದುಕೊಂಡಿದ್ದೇವೆ.ಕರ್ಪೂರ ಆರತಿ ಮಾಡುವುದಲ್ಲಿ ಅಡಗಿರುವ ವೈಜ್ಞಾನಿಕ ಕಾರಣಗಳೇನು,ಹಾಗೂ ಅದರಿಂದ ನಮಗಾಗುವ ಪ್ರಯೋಜನಗಳೇನು ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ಸಿನಮೋಮಮ್ ಕ್ಯಾಂಫೋರ( Cinnamomum Camphora) ಎಂಬ ವೃಕ್ಷದಿಂದ ಕರ್ಪೂರವನ್ನು ತಯಾರಿಸುತ್ತಾರೆ.ಆದರೆ,ಇದನ್ನು ಹೆಚ್ಚಾಗಿ ಹಿಂದೂಗಳು ಪೂಜಾ ಕಾರ್ಯಗಳಲ್ಲಿ ಉಪಯೋಗಿಸುತ್ತಾರೆ.ಪೂಜಾ ಸಮಯದಲ್ಲಿ ಕರ್ಪೂರವನ್ನು ಆರತಿಯ ರೂಪದಲ್ಲಿ ದೇವರಿಗೆ ಬೆಳಗುವ ಸಮಯದಲ್ಲಿ ಬರುವ ಹೊಗೆ ದೇಹದ ಆರೋಗ್ಯದ ಮೇಲೆ ಸತ್ಪರಿಣಾಮಗಲನ್ನು ಉಂಟುಮಾಡುತ್ತದೆ.
ಕರ್ಪೂರದಿಂದ ಬರುವ ಹೊಗೆಯಿಂದ ಅಸ್ತಮಾ,ಟೈಪಾಯಿಡ್, ಮನಸ್ಸಿನ ದುಗುಡ,ಬೆಚ್ಚಿ ಬೀಳುವಿಕೆ,ಹಿಸ್ಟೀರಿಯಾ,ಕೀಲುಗಳನೋವು ಮೊದಲಾದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.ಈ ಹೊಗೆಯಿಂದ ವಾತಾವರಣದಲ್ಲಿರುವ ಬ್ಯಾಕ್ಟೀರಿಯ,ಸಣ್ಣ ಕ್ರಿಮಿಗಳು,ವೈರಸ್ ಗಳು ನಾಶವಾಗುತ್ತವಂತೆ.ಜ್ಞಾಪಕ ಶಕ್ತಿ ವೃದ್ಧಿಸುತ್ತದೆ,ಚರ್ಮದ ಕಾಯಿಲೆಗಳು ಗುಣವಾಗುತ್ತವೆ.ಕರ್ಪೂರದ ವಾಸನೆ ಕೆಲವರಿಗೆ ಇಷ್ಟವಾಗುವುದಿಲ್ಲ.ಆದರೆ,ಕರ್ಪೂರದ ವಾಸನೆಯನ್ನು ಸ್ವರ್ಗ ಸುಖಕ್ಕೆ ಹೋಲಿಸುತ್ತಾರೆ.ಇದನ್ನು ಉರಿಸುವುದರಿಂದ ಬೂದಿಉಳಿಯದೆ ಸಂಪೂರ್ಣವಾಗಿ ಉರಿದು ಹೋಗುತ್ತದೆ.ಆದುದರಿಂದ ದೇವರ ಪೂಜೆಯಲ್ಲಿ ಉಪಯೋಗಿಸುತ್ತಾರಂತೆ.
   ಕರ್ಪೂರವನ್ನು ಉರಿಸುವುದರಿಂದ ವಾತಾವರಣದಲ್ಲಿ ಧನಾತ್ಮಕ ಶಕ್ತಿ ಏರ್ಪಟ್ಟು ಆ ಶಕ್ತಿ ನಮ್ಮಲ್ಲಿಪ್ರವೇಶಿಸಿ ನಮಗೆ ಒಳ್ಳೆಯದನ್ನುಂಟು ಮಾಡುತ್ತದಂತೆ.ಕರ್ಪೂರವನ್ನು ಉರಿಸಿದರೆ ಹೇಗೆ ಸಂಪೂರ್ಣವಾಗಿ ಉರಿದು ಹೋಗುತ್ತದೆಯೋ ಅದೇ ರೀತಿ ಅದರ ಎದುರಿಗೆ ನಿಂತಿರುವವರ ಅಹಂಕಾರವೂ ಉರಿದು ಹೋಗಿ ಪರಿಶುದ್ಧರಾಗುತ್ತಾರಂತೆ.

ಹನುಮಂತ. ಮ. ದೇಶಕುಲಕಣಿ೯
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ