ಮಂಗಳವಾರ, ಜನವರಿ 17, 2017

8 ಚಾಣಾಕ್ಷ ಸೂತ್ರ

 ಯಾವುದೇ ಕ್ಷೇತ್ರಕ್ಕೆ ಸೇರಿದ ಸಂಸ್ಥೆಯಲ್ಲಿ ಕೆಲಸ ಮಾಡಿದರೂ, ಆಫೀಸುಗಳಲ್ಲಿ ರಾಜಕೀಯಗಳು ಇರುವುದು ಸಹಜ. ತಾನು ಬೆಳೆಯುವುದಕ್ಕಾಗಿ ಅಥವಾ ಇತರರನ್ನು ತುಳಿಯುವುದಕ್ಕಾಗಿಯೋ, ಇತರೆ ಕಾರಣಗಳಿಗಾಗಿ ಕೆಲವು ಉದ್ಯೋಗಿಗಳು ಯಾವುದೇ ಆಫೀಸ್’ನಲ್ಲಿ ಕೆಲಸ ಮಾಡಿದರೂ ರಾಜಕೀಯ ಮಾಡುತ್ತಿರುತ್ತಾರೆ. 

 ಬಾಸ್ ಜೊತೆಗೆ ಲಾಬಿ ಮಾಡಿ ಹೇಗಾದರೂ ಮಾಡಿ ತಾವು ಅಂದುಕೊಂಡಿದ್ದನ್ನು ಸಾಧಿಸಿಕೊಳ್ಳುತ್ತಾರೆ. ಆದರೆ ಆಫೀಸ್’ನಲ್ಲಿ ಎಲ್ಲರೂ ಹೀಗೆ ಇರುವುದಿಲ್ಲ. ಕೆಲವರು ಇಂತಹವುಕೆ ತಲೆ ಕೆಡಿಸಿಕೊಳ್ಳದೇ ತಮ್ಮಪಾಡಿಗೆ ತಾವು ಇರುತ್ತಾರೆ. ಆದರೆ ಅವರು ಕೂಡ ಇಂತಹ ರಾಜಕೀಯಗಳಿಗೆ ಬಲಿಯಾಗು ಸಂದರ್ಭ ಬಂದರೆ. ಏನು ಮಾಡಬೇಕು..? ಅದಕ್ಕಾಗಿ ಆಚಾರ್ಯ ಚಾಣಾಕ್ಷ ಕೆಲವು ಸೂತ್ರಗಳನ್ನು ತಿಳಿಸಿದ್ದಾನೆ. 

   ಅವುಗಳನ್ನು ಪಾಲಿಸಿದರೆ ಆಫಿಸ್ ರಾಜಕೀಯಗಳಲ್ಲಿ ನಿಮ್ಮದೇ ಮೇಲುಗೈ ಆಗಲಿದೆ. 

1. ಆಚಾರ್ಯ ಚಾಣಾಕ್ಷ ಹೇಳಿದ ಪ್ರಕಾರ ಪ್ರತಿಯೊಬ್ಬ ವ್ಯಕಿಯಲ್ಲೂ ಯಾವುದೋ ಒಂದು ಬಲಹೀನತೆ ಇರುತ್ತದೆ. ಅದನ್ನು ಪತ್ತೆಹಚ್ಚಿ ಅದಕ್ಕೆ ಅನುಗುಣವಾಗಿ ವರ್ತಿಸಿದರೆ ಆ ಬಲಹೀನತೆ ಇರುವ ವ್ಯಕ್ತಿ ನಮ್ಮ ವಶಕ್ಕೆ ಬರುತ್ತಾರೆ. ಹೀಗೆ ಆಫೀಸ್’ನಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಬಲಹೀನತೆಯನ್ನು ತಿಳಿದುಕೊಳ್ಳಬೇಕು. ಇದರಿಂದ ಅವರನ್ನು ನಮ್ಮ ಹಿಡಿತಕ್ಕೆ ತೆಗೆದುಕೊಳ್ಳಬೇಕು. ಆದರೆ ಅವರ ಬಲಹೀನತೆಯನ್ನು ತಿಳಿದುಕೊಳ್ಳಲು ಸ್ನೇಹಗಳಿಸಬೇಕು. ಹಾಗೆ ಮಾಡಿದರೆ ಅವರ ಮೇಲೆ ಅಧಿಪತ್ಯ ಸಾಧಿಸಲು ಅವಕಾಶವಿರುತ್ತದೆ.

 2. ನಮಗೆ ಶತ್ರುವಾಗಿರುವವರ ಬಲಹೀನತೆಯನ್ನು ತಿಳಿದುಕೊಳ್ಳುವುದಷ್ಟೇ ಅಲ್ಲ, ಸರಿಯಾದ ಸಮಯದಲ್ಲಿ ಅವುಗಳಿಂದ ಅವರ ಮೇಲೆ ಅಟ್ಯಾಕ್ ಮಾಡಿದರೆ ಫಲಿತಾಂಶವಿರುತ್ತದೆ. ಹಾಗೆ ಮಾಡದೇ ಇತರೆ ಪರಿಸ್ಥಿತಿಯಲ್ಲಿ ನಾವು ಏನು ಮಾಡಿದರೂ ಅದರಿಂದ ಅಷ್ಟೊಂದು ಉಪಯೋಗವಿರುವುದಿಲ್ಲ.

3. ಇತರರ ಬಗ್ಗೆ ನಮಗೆ ತಿಳಿದ ಬಲಹೀನತೆಗಳನ್ನು ಮತ್ತೊಬ್ಬರಿಗೆ ಯಾವುದೇ ಪರಿಸ್ಥಿತಿಯಲ್ಲೂ ಹೇಳಬಾರದು. ಹಾಗೆ ಮಾಡಿದರೆ ಅದರಿಂದ ಇತರೆ ವ್ಯಕ್ತಿಗಳು ನಮಗಿಂತ ಮುಂಚೆ ಅದರ ಲಾಭ ಪಡೆಯುತ್ತಾರೆ.

4. ಶತ್ರುಗಳು ಯಾವಾಗಲೂ ವ್ಯಕ್ತಿಯ ಬಲಹೀನತೆಯನ್ನು ಗುರಿಯಾಗಿಸಿಕೊಂಡು ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಇಂತಹವರನ್ನು ಎದುರಿಸಲು ಸಿದ್ದವಾಗಿರಬೇಕು.

5. ಶತ್ರುಗಳು ನಮಗೆ ಸಿಕ್ಕಾಗ ಅವರು ನಮ್ಮ ಜೊತೆ ಸ್ನೇಹ ಮಾಡಲು ಮುಂದೆ ಬಂದರೂ ಅವರನ್ನು ಯಾವುದೇ ಸಂದರ್ಭದಲ್ಲೂ ನಂಬಬಾರದು.

6. ಯಾವುದೇ ಸಂದರ್ಭದಲ್ಲಾದರೂ ನಾವು ಒಳ್ಳೆಯ ನಡವಳಿಕೆ, ವರ್ತನೆಯನ್ನು ತೋರ್ಪಡಿಸಿದಾಗಲ್ಲೇ ಇತರರು ನಮಗೆ ಗೌರವ ನೀಡುತ್ತಾರೆ. ಹಾಗೆ ಮಾಡದೇ ಇಷ್ಟ ಬಂದಂತೆ ವರ್ತಿಸಿದರೆ ಇತರರ ದೃಷ್ಟಿಯಲ್ಲಿ ನಾನು ಗೌರವ ಕಳೆದುಕೊಳ್ಳಬೇಕಾಗುತ್ತದೆ.

7. ಮೂರ್ಖರಿಗೆ ಯಾವುದೇ ಸಲಹೆಗಳನ್ನು ನೀಡಬಾರದು. ಒಂದು ವೇಳೆ ನೀಡಿದರೂ ಅವರು ಹೇಗೋ ಪಾಲಿಸುವುದಿಲ್ಲವದ್ದರಿಂದ, ನಮ್ಮ ಬೆಲೆಬಾಳುವ ಸಲಹೆಗಳು ನಿರುಪಯುಕ್ತವಾಗುತ್ತವೆ. ಹೊರತು ಯಾವುದೇ ಉಪಯೋಗ ವಾಗುವುದಿಲ್ಲ

8. ಹಾವಿಗೆ ಹಾಲು ಹಾಕಿ ಬೆಳೆಸಿದರೂ ಅದು ವಿಷವನ್ನೇ ಕಾರುವಂತೆ, ಕೆಟ್ಟ ವ್ಯಕ್ತಿಯ ಬಳಿ ಸ್ನೇಹವನ್ನು ಬೆಳೆಸಿದರೂ ಅವರು ಮಾತ್ರ ನಮಗೆ ಎಂದಿಗೂ ಕೆಟ್ಟದನ್ನೆ ಮಾಡುತ್ತಾರೆ . ಯಾಕೆಂದರೆ ಅವರಿಗೆ ಕೇಡು ಮಾಡುವುದರಲ್ಲೇ ತೃಪ್ತಿ ಸಿಗುತ್ತದೆ

-ಹನುಮಂತ. ಮ. ದೇಶಕುಲಕಣಿ೯

ಸಾ||ಭೋಗೇನಾಗರಕೊಪ್ಪ. ಮೊ.9731741397

ಪೊ|| ಗಂಜೀಗಟ್ಟಿ-581196

ತಾ||ಕಲಘಟಗಿ ಜಿ||ಧಾರವಾಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ