* ಅಂಗಡಿಯಲ್ಲಿ ಮಿಠಾಯಿಗಳು ಇವತ್ತಿಗೂ ಇವೆ, ಚಪ್ಪರಿಸಿ ತಿನ್ನಲು ಬಾಲ್ಯದ ಸ್ನೇಹಿತರಿಲ್ಲ
*ಕಲಿತ ಶಾಲೆಯ ಗುರುಗಳು ಇವತ್ತಿಗೂ ಇದ್ದಾರೆ, ಹೋಗಿ ಮಾತನಾಡಿ ಬರಲು ಪುರುಸೊತ್ತು ಇಲ್ಲ
* ಗೂಡಂಗಡಿಗಳು ಇನ್ನೂ ಉಸಿರಾಡುತ್ತಿವೆ, ಅಂಗಡಿ ಬಾಗಿಲ ಬಳಿ ಹೋಗಲು ಮಾಲ್ ಗಳು ಬಿಡುತ್ತಿಲ್ಲ
*ಅಂಚೆ ಕಛೇರಿಗಳು ಇಂದಿಗೂ ಇವೆ, ಕಾಗದ ಬರೆಯಲು ಮೊಬೈಲ್ ಗಳು ಬಿಡುತ್ತಿಲ್ಲ.
* ಕಾದಂಬರಿಗಳ ಪುಸ್ತಕಗಳು ಕಪಾಟುಗಳಲ್ಲಿ ಇನ್ನೂ ಇವೆ, ತೆರೆದು ಓದುವಷ್ಟು ಸಮಯವನ್ನು ಟಿ.ವಿ ಮಾಡಿಕೊಡುತ್ತಿಲ್ಲ
*ಹಕ್ಕಿಗಳು ಇಂದಿಗೂ ಹಾಡುತ್ತಿವೆ, ಕೂತು ಆಲಿಸುವ ವ್ಯವಧಾನವೇ ಇಲ್ಲ
* ಹೂ ಗಿಡದಲ್ಲಿ ಹೂವುಗಳು ಇವತ್ತಿಗೂ ಅರಳುತ್ತಿವೆ, ಮಕರಂದ ಹೀರುವ ದುಂಬಿಗಳ ನೋಡುವ ಮನಸ್ಸೇ ಇಲ್ಲ
* ಹಣ್ಬಿಟ್ಟ ಮರ, ಹಬ್ಬಿದ ಬಳ್ಳಿ, ಗುಬ್ಬಿ ಹಕ್ಕಿಯ ಕಣ್ಣೋಟ, ಹಬೆಯಾಡುವ ಚಹ ಎಲ್ಲವೂ ಇವೆ, ಸ್ಪಂದಿಸಲು ಬಿಡುವಿಲ್ಲ
* ಬಾನಲ್ಲಿ ನಕ್ಷತ್ರಗಳು ಇವತ್ತಿಗೂ ಇವೆ, ಕುಳಿತು ಲೆಕ್ಕ ಹಾಕುವುದಕ್ಕೆ ಸಮಯವೇ ಇಲ್ಲ
* ಬೆಳದಿಂಗಳ ರಾತ್ರಿ ಇಂದಿಗೂ ಇದೆ, ಸುರಿವ ಬೆಳದಿಂಗಳಲ್ಲಿ ಕುಳಿತು ಹಾಡಲು ಕಾಲ ಕೂಡಿಬರುತ್ತಿಲ್ಲ
* ಸಂಬಂಧ, ಬಾಂಧವ್ಯಗಳು ಇವತ್ತಿಗೂ ಇವೆ, ನಿಭಾಯಿಸಲು ಅಹಂ ಬಿಡುತ್ತಿಲ್ಲ
* ಬಾಲ್ಯದಲ್ಲಿದ್ದಂತೆ ಸಾಧಾರಣವಾಗಿ ಬದುಕಲು ಇವತ್ತಿಗೂ ಆಸೆಯಿದೆ, ಪರರ ವೈಭೋಗ ಹಾಗಿರಲು ಬಿಡುತ್ತಿಲ್ಲ
*ಅಮ್ಮನ ಕೈತುತ್ತು, ಅಪ್ಪನ ಗದರಿಕೆ, ಅಜ್ಜಿಯ ಪ್ರೀತಿ, ಅಜ್ಜನ ಕೆಮ್ಮು, ದೊಡ್ಡಪ್ಪನ ಠೀವಿ, ಚಿಕ್ಕಪ್ಪನ ಸ್ನೇಹಭಾವ, ಮಾವನ ಭಯ, ಅತ್ತೆಯ ಆರೈಕೆ, ಚಿಕ್ಕಮ್ಮನ ಮುದ್ದು ಓರಗೆಯವರೊಂದಿಗಿನ ಒಡನಾಟ ಎಲ್ಲವೂ ಇತ್ತು ಹಾಗೂ ಇದೆ... ನಿಭಾಯಿಸುವುದಕ್ಕೆ ವ್ಯವಧಾನವಿಲ್ಲ
ನಿಜಕ್ಕೂ ಕಳೆದ ಕಾಲ ಮರಳಿ ಬರುವುದಿಲ್ಲ... (ಕೃಪೆ:ಅಂತಜಾ೯ಲ)
ಹನುಮಂತ. ಮ. ದೇಶಕುಲಕಣಿ೯
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ