ಮಂಗಳವಾರ, ಜನವರಿ 17, 2017

ಭಾರತ ಸೇರಿದಂತೆ ಬಹುತೇಕ ಬ್ರಿಟಿಷ್ ವಸಾಹತು ದೇಶಗಳಲ್ಲಿ ರಸ್ತೆಯ ಎಡ ಬದಿಯಲ್ಲಿ ವಾಹನ ಚಾಲನೆ ನಿಯಮ

ಭಾರತ ಸೇರಿದಂತೆ ಬಹುತೇಕ ಬ್ರಿಟಿಷ್ ವಸಾಹತು ದೇಶಗಳಲ್ಲಿ ರಸ್ತೆಯ ಎಡ ಬದಿಯಲ್ಲಿ ವಾಹನ ಚಾಲನೆ ನಿಯಮ ಅನುಸರಿಸಲಾಗಿದೆ. ಆದರೆ ಅಂಕಿಅಂಶಗಳನ್ನು ಅವಲೋಕಿಸಿದಾಗ ರಸ್ತೆ ಎಡಬದಿಯಲ್ಲಿ ವಾಹನ ಚಾಲನೆ ಮಾಡುವ ಪ್ರಮಾಣ ಕೇವಲ ಶೇಕಡಾ 35ರಷ್ಟು ಮಾತ್ರವಾಗಿದೆ. ಉಳಿದಂತೆ ಅಮೆರಿಕ, ಯುರೋಪ್ ನ ಬಹುಭಾಗ ಸೇರಿದಂತೆ ಜಗತ್ತಿನ ಶೇಕಡಾ 65ರಷ್ಟು ಕಡೆಗಳಲ್ಲಿ ರಸ್ತೆಯ ಬಲಭಾಗದಲ್ಲಿ ವಾಹನ ಚಾಲನೆ ಮಾಡಲಾಗುತ್ತದೆ. 

ಅಂದರೆ ವಿಶ್ವದ ಮೂರನೇ ಎರಡರಷ್ಟು ಭಾಗಗಳಲ್ಲಿ ರಸ್ತೆಯ ಬಲಭಾಗದಲ್ಲಿ ವಾಹನ ಚಾಲನೆ ಮಾಡಲಾಗುತ್ತದೆ. ಇನ್ನೊಂದೆಡೆ ಕೆನೆಡಾದಂತಹ ರಾಷ್ಟ್ರಗಳು ಗಡಿ ಭಾಗವನ್ನು ಹಂಚಿಕೊಳ್ಳುವುದರಿಂದ ಸುಗಮ ಟ್ರಾಫಿಕ್ ಗಾಗಿ ಎಡಬದಿಯ ಚಾಲನೆಯಿಂದ ಕ್ರಮೇಣ ಬಲಭಾಗಕ್ಕೆ ಒಗ್ಗಿಕೊಂಡಿದ್ದವು.

ಎಡ ಹಾಗೂ ಬಲ ಬದಿಯ ವಾಹನ ಚಾಲನೆಗಳು ಇತಿಹಾಸದ ಜೊತೆಗೆ ಗಾಢವಾದ ನಂಟನ್ನು ಹೊಂದಿದೆ. ಪ್ರಾಚೀನ ಕಾಲದಿಂದಲೂ ವಾಹನ ಸಾರಿಗೆ, ವ್ಯಾಪಾರ, ಯುದ್ಧ ಮತ್ತು ಇನ್ನಿತರ ಅವಶ್ಯಕತೆಗಳಿಗಾಗಿ ಕುದುರೆ ಗಾಡಿಗಳನ್ನು ಬಳಕೆ ಮಾಡಲಾಗುತ್ತಿದ್ದವು.

ಮಧ್ಯಕಾಲಘಟ್ಟದಲ್ಲಿ ವ್ಯಾಪಾರದ ಬೇಡಿಕೆ ಜಾಸ್ತಿಯಾಗಿತ್ತು. ಆರಂಭಿಕ ಕಾಲಘಟ್ಟದಲ್ಲಿ ರಸ್ತೆ ಎಡಭಾಗದಲ್ಲೇ ಕುದುರೆ ಸವಾರಿ ಮಾಡಲಾಗುತ್ತಿತ್ತು.

ಸೊಂಟದ ಎಡಭಾಗದಲ್ಲಿ ಖಡ್ಗವನ್ನಿಟ್ಟುಕೊಂಡು ಮುನ್ನುಗ್ಗುವ ಸೈನಿಕರು ಸುಲಭವಾಗಿ ವಿರುದ್ಧ ದಿಕ್ಕಿನಿಂದ ಬರುವ ಶತ್ರುಗಳನ್ನು ಹೊಡೆದುರುಳಿಸಲು ಸಾಧ್ಯವಾಗುತ್ತಿತ್ತು.

ಎಡ ಕೈಯಿಂದ ಹಗ್ಗವನ್ನು ಹಿಡಿದು ಕುದುರೆಯನ್ನು ನಿಯಂತ್ರಿಸುವ ಸೈನಿಕರು ಎಡಭಾಗದಿಂದಲೇ ಮುನ್ನುಗ್ಗುತ್ತಾ ಬಲಭಾಗದತ್ತ ಯುದ್ಧ ತಂತ್ರಗಾರಿಕೆಯನ್ನು ಮುಂದುವರಿಸಿದ್ದರು.

ಕುದುರೆಗಳಲ್ಲಿ ಎಡಭಾಗದಲ್ಲಿ ಚಲಿಸಲು ಮಗದೊಂದು ಕಾರಣವಿದೆ. ಸಹಜವಾಗಿಯೇ ಎಲ್ಲ ಕೆಲಸ ಕಾರ್ಯಗಳನ್ನು ಬಲಗೈಯಿಂದಲೇ ನಿರ್ವಹಿಸುವ ಜನರು ಎಡಗೈಗಿಂತಲೂ ಹೆಚ್ಚು ಬಲಶಾಲಿಯೆನಿಸಿಕೊಂಡಿರುತ್ತದೆ.

ಕುದುರೆಗಳನ್ನು ಏರಲು ಮತ್ತು ಇಳಿಯಲು ಎಡಭಾಗದಲ್ಲಿ ಹೆಚ್ಚು ಅನುಕೂಲಕರವಾಗಿದೆ. ಇದು ಕೂಡ ಎಡಭಾಗವನ್ನು ಆಯ್ಕೆ ಮಾಡಲು ಕಾರಣವಾಗಿದೆ.

ಇನ್ನೊಂದೆಡೆ ಅಮೆರಿಕ ಸೇರಿದಂತೆ ಇತರೆ ಯುರೋಪ್ ಭಾಗಗಳಲ್ಲಿ ಕೃಷಿ, ವ್ಯಾಪಾರ ಚಟುವಟಿಕೆ ವ್ಯಾಪಿಸಿದ್ದಂತೆಯೇ ಹೆಚ್ಚಿನ ಸರಕುಗಳನ್ನು ಸಾಗಿಸಲು ಒಂದಕ್ಕಿಂತ ಹೆಚ್ಚು ಕುದುರೆಗಳ ಅವಶ್ಯಕತೆ ಎದುರಾಗಿತ್ತು.

ಒಂದರ ಹಿಂದೆ ಒಂದರಂತೆ ಬಂಧಿಸಲಾದ ಕುದುರೆಗಳ ಹಿಂದೆ ಗಾಡಿಯನ್ನು ಜೋಡಿಸಲಾಗಿತ್ತು. ಎಡಭಾಗದಲ್ಲಿ ಅತ್ಯಂತ ಹಿಂದಿನ ಕುದುರೆಯಲ್ಲಿ ಸವಾರಿ ಮಾಡುವ ಸವಾರ, ಬಲ ಕೈಯಿಂದ ಚಾವಟಿ ಹಿಡಿದು ಕುದುರೆಯನ್ನು ನಿಯಂತ್ರಿಸುತ್ತಾನೆ.

ಇದರಿಂದ ಮುಂಭಾಗದಿಂದ ಬರುವ ಗಾಡಿಗಳನ್ನು ಸುಲಭವಾಗಿ ಗುರುತಿಸಲು ಹಾಗೂ ಅನುಕೂಲಕರ ಚಾಲನೆಗೆ ನೆರವಾಗಿದೆ.

1800ರ ಶತಮಾನದಿಂದ ರಸ್ತೆ ನಿಯಮಗಳು ನಿಧಾನವಾಗಿ ಜಾರಿಯಾಗತೊಡಗಿದ್ದವು. ಭಾರತದಂತಹ ವಸಾಹತು ದೇಶಗಳಲ್ಲಿ ಬ್ರಿಟಿಷ್ ಪ್ರಭಾವದಿಂದಾಗಿ ಎಡಭಾಗದಲ್ಲೇ ಸಂಚಾರ ನಿಯಮ ಅನುಸರಿಸಲಾಯಿತು.

ಇದು ಬ್ರಿಟನ್ ಸೇರಿದಂತೆ ನಾಲ್ಕು ಯುರೋಪ್ ರಾಷ್ಟ್ರಗಳು ಮಾತ್ರ ಎಡಬದಿಯ ಚಾಲನಾ ನಿಮಯವನ್ನು ಅನುಸರಿಸುತ್ತಿದೆ.

ಸಾವಿರಾರು ವರ್ಷಗಳಿಂದ ಸಾರಿಗೆ ಸಂಚಾರ ಚಾಲ್ತಿಯಲ್ಲಿತ್ತು. ಮಧ್ಯಕಾಲಘಟ್ಟದಲ್ಲಿ ವ್ಯಾಪಾರ ಹಾದಿಗಳು ತೆರೆಯಲ್ಪಟ್ಟ ಬಳಿಕ ರಸ್ತೆ ನಿಯಮಗಳು ನಿಧಾನವಾಗಿ ಜಾರಿಗೆ ಬಂದಿದ್ದವು.

ಕುದುರೆ ಸವಾರಿ ಮಾಡುವಾಗ ಆತ್ಮ ರಕ್ಷಣೆಯ ಭಾಗವಾಗಿ ರಸ್ತೆಯ ಎಡಭಾಗಗಳಲ್ಲಿ ಸಂಚರಿಸಲಾಗುತ್ತಿದ್ದವು. ಇದರಿಂದಾಗಿ ಶತ್ರುವನ್ನು ಎದುರಿಸಲು ಸಾಧ್ಯವಾಗುತ್ತಿದ್ದವು.

1700ರ ಶತಮಾನದ ವರೆಗೂ ಜಗತ್ತಿನ ನಾಗರಿಕ ಪರಂಪರೆ ಎಡಬದಿಯಲ್ಲಿಯೇ ಚಲಿಸುತ್ತಿದ್ದವು. ಈ ಹಂತದಲ್ಲಿ ಯುರೋಪ್ ವಸಾಹತುಶಾಹಿ ಆಡಳಿತವು ಇಡೀ ವಿಶ್ವವನ್ನೇ ವ್ಯಾಪಿಸಿತ್ತು.

ಫ್ರಾನ್ಸ್ ಕ್ರಾಂತಿಯ ಬಳಿಕ ಪ್ರಮುಖವಾಗಿಯೂ ನೆಪೋಲಿಯನ್ ಆಡಳಿತ ಕಾಲದಲ್ಲಿ ಬಲಬದಿಯ ರಸ್ತೆಯನ್ನು ಹೆಚ್ಚಾಗಿ ಬಳಕೆ ಮಾಡುವಂತೆ ದಬ್ಬಾಳಿಕೆ ಮಾಡಲಾಗಿತ್ತು ಎಂಬುದರ ಬಗ್ಗೆಯೂ ಇತಿಹಾಸ ಪುಟಗಳಲ್ಲಿ ಉಲ್ಲೇಖಿಸಲಾಗಿದೆ.

ಬ್ರಿಟಿಷ್ ಉಗಮದಿಂದ ಪಾರಾಗಲು ಅಮೆರಿಕದಲ್ಲಿ ಬಲದಿಯ ರಸ್ತೆ ಸಂಚಾರವನ್ನು ಅನುಸರಿಸಲಾಗಿತ್ತು. ಕ್ರಮೇಣ ಇದು ಅಮೆರಿಕ ವಾಹನ ಮಾರುಕಟ್ಟೆಯ ಮೇಲೂ ಪ್ರಭಾವ ಬೀರಿತ್ತು.


ಅಮೆರಿಕದಲ್ಲಿ ನಾಲ್ಕು ಕುದುರೆಗಳ ಚದರ ರಚನೆ ಆಕಾರದಲ್ಲಿ ಸಾರಿಗೆ ರೂಪಿಸಲಾಗಿತ್ತು. ಈ ಸವಾರಿ ಬಂಡಿಗೆ ನಿಯಂತ್ರಿಸುವ ವ್ಯಕ್ತಿಗೆ ಯಾವುದೇ ಸೀಟುಗಳಿರಲಿಲ್ಲ.

ಆತ ಹಿಂದಿನ ಕುದುರೆಯಲ್ಲಿ ಕುಳಿತುಕೊಂಡು ಬಲಗೈಯಲ್ಲಿ ಚಾವಟಿಯಿಂದ ಕುದುರೆಗಳನ್ನು ನಿಯಂತ್ರಿಸಬೇಕಿತ್ತು. ತನ್ಮೂಲಕ ಮುಂಬರುವ ಗಾಡಿಗಳ ಮೇಲೆ ನಿಗಾ ವಹಿಸುವ ಮೂಲಕ ಸುಗಮ ಚಾಲನೆ ಮಾಡಬಹುದಾಗಿತ್ತು.

ಒಟ್ಟಿನಲ್ಲಿ ರಸ್ತೆಯ ಎಡ ಮತ್ತು ಬಲ ಭಾಗದಲ್ಲಿ ಸಂಕ್ಷಿಪ್ತ ವಿವರಣೆ ನೀಡುವುದಾದ್ದಲ್ಲಿ, ಬ್ರಿಟನ್ ನಲ್ಲಿ ಖಡ್ಗ ಯುದ್ಧಕ್ಕಾಗಿ ಎಡಭಾಗದಲ್ಲೂ ಮತ್ತು ಅಮೆರಿಕದಲ್ಲಿ ಕುದುರೆಗಾಡಿಯನ್ನು ಪರಿಣಾಮಕಾರಿಯಾಗಿ ಚಾವಟಿಯಿಂದ ನಿರ್ವಹಿಸಲು ಬಲ ಬದಿಯನ್ನು ಬಳಕೆ ಮಾಡಲಾಗಿತ್ತು.

ಹನುಮಂತ. ಮ. ದೇಶಕುಲಕಣಿ೯
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ