ಶನಿವಾರ, ಮಾರ್ಚ್ 28, 2015

ಭೋಗೇನಾಗರಕೊಪ್ಪದ ಶಾಲ್ಮಲಾ ಧಬೆಧಬೆ..

ಕಲಘಟಗಿ :ತಾಲೂಕಿನ ಭೋಗೇನಾಗರಕೊಪ್ಪ ಗ್ರಾಮದಿಂದ 3 ಕಿ.ಮೀ.ದೂರದಲ್ಲಿರುವ ಭೋಗೇನಾಗರಕೊಪ್ಪ ಧಬೆಧಬೆ ಶಾಲ್ಮಲಾ ಆಣೆಕಟ್ಟು ಇದೆ.  ಭೋಗೇನಾಗರಕೊಪ್ಪ ಅಂದಿನ ದೇಸಗತಿ ವತನದಾರರಾದ ದಿ.ಬಸವಂತ.ಲಿಂಗೋ.ದೇಸಾಯಿ ಅವರ ಸಲಹೆ ಮೇರೆಗೆ 1857ರಲ್ಲಿ ಬ್ರಿಟಿಷರ ಸಕಾ೯ರ ಕೃಷಿ ಜಮೀನುಗಳ  ನೀರಾವರಿಗಾಗಿ ಕಟ್ಟಿಸಿದ್ದರು. ಇದು " ದಿ ಬಾಂಬೆ ಗೆಜೆಟಿಯರ್ ಆಫ್ ಧಾರವಾಡ  ಡಿಸ್ಟ್ರಿಕ್ಟ್"ನಲ್ಲಿ ದಾಖಲಾಗಿದೆ.  ಸುತ್ತಲಿನ ತೋಟಗಳು,ಹೊಲಗಳು ಈ ನೀರನ್ನು ಅವಲಂಬಿಸಿವೆ.ಮೊದಲು ಪರಿಶುಭ್ರ ನೀರು ಬರುತ್ತಿದ್ದಾಗ ಸಂಕ್ರಾಂತಿಗೆ,ಶ್ರಾವಣ ಮಾಸದಲ್ಲಿ ಜನ ಪುಣ್ಯ ಸ್ನಾನಕ್ಕೆ ಬರುತ್ತಿದ್ದರು.ಪಿಕ್ಽನಿಕ್ಽಗೆ ಬರುತ್ತಿದ್ದರು.ಶಾಲ್ಮಲಾ ನದಿ ತಟದಲ್ಲಿ ತ್ರ್ಯಯಂಬಕೇಶ್ವರನಂತೆ ಭೋಗೇನಾಗರಕೊಪ್ಪದ ನಂದೀಶ್ವರ,ಕಾಮಧೇನು ಕಲ್ಮೇಶ್ವರ,ಮಿಶ್ರಿಕೋಟಿ ರಾಮೇಶ್ವರ ಸುತ್ತುವರೆದಿವೆ.                        
   ಆದರೀಗ ಮಹಾಪೂರ ಬಂದಾಗ ಕಲುಷಿತ ನೀರು ಭೋಗ೯ರೆಯುತ್ತಿದೆ.ಕಾರಣ,ಹುಬ್ಬಳ್ಳಿಯ ಚರ಼ಂಡಿ ನೀರು,ಆಮ್ಲೀಯ ನೀರು ಮಿಶ್ರವಾಗಿ ಶಾಲ್ಮಲಾ ಮಲೀನವಾಗಿದೆ.ಆಗಿನ ನೀರಾವರಿ ಸಚಿವರಾದ ಬಸವರಾಜ.ಬೊಮ್ಮಾಯಿಗೆ 2ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.ಶುದ್ದ ನೀರಿಗೆ ಅಶುದ್ಧಗೊಳಿಸುವ ಹಕ್ಕನ್ನು ಕೊಟ್ಟವರಾರು.    
-ಹನುಮಂತ.ಮ.ದೇಶಕುಲಕಣಿ೯       
ಸಾ,ಭೋಗೇನಾಗರಕೊಪ್ಪ -581196 
   ತಾ.ಕಲಘಟಗಿ ಜಿ.ಧಾರವಾಡ

ಮಂಗಳವಾರ, ಮಾರ್ಚ್ 24, 2015

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ

ಅಜಾತಶತ್ರು ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದ ತನ್ನಿಮಿತ್ತ ಈ ಲೇಖನ .ಅಟಲ್ ಅವರು ಹುಟ್ಟಿದ್ದು , 25 ಡಿಸೆಂಬರ್ 1924 ರಲ್ಲಿ ಕೃಷ್ಣ ದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರಿಗೆ,  ಮಧ್ಯ ಪ್ರದೇಶದ ಗ್ವಾಲಿಯರ್  ಹತ್ತಿರದ  ಶಿಂದೆ ಕಿ ಚವ್ವಾಣಿ ಅನ್ನೋ ಹಳ್ಳಿಯಲ್ಲಿ, ತಂದೆ ಒಬ್ಬ ಕವಿ ಹಾಗೆ ಸಾಮಾನ್ಯ ಶಾಲೆಯ ಶಿಕ್ಷಕ ಹಾಗೆ ಅಟಲ್ ಅವರ ಅಜ್ಜ ಪಂಡಿತ್ ಶ್ಯಾಮ್ ಲಾಲ್  ವಾಜಪೇಯಿಯವರು. ಅಟಲ್ ಅವರ ಪದವಿಯನ್ನ ವಿಕ್ಟೋರಿಯಾ ಕಾಲೇಜಿನಿಂದ (ಈಗ ಲಕ್ಷ್ಮಿ ಬಾಯಿ ಕಾಲೇಜು) ಪಡೆದರು. ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ ಅಟಲ್  ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನ ಕಾನ್ಪುರದ ಡಿ. ಎ. ವಿ ಕಾಲೇಜಿನಿಂದ ಪಡೆದರು. ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ  (ಆರ್. ಎಸ್. ಎಸ್ )ವನ್ನು ಸೇರಿದರು. ವೀರ ಅರ್ಜುನ ಹಾಗೂಪಾಂಚಜನ್ಯ ಅನ್ನುವ ಎರಡು ಪತ್ರಿಕೆಗಳಿಗೆ ಪತ್ರಕರ್ತರಾಗಿ ಕವಿಯಾಗಿ ಸೇವೆ ಸಲ್ಲಿಸಿದರು….. ನಿಮಗೆ ಗೊತ್ತ? ಭಾರತದ  ಅವಿವಾಹಿತ ಪ್ರದಾನ ಮಂತ್ರಿ ಕೇವಲ ಅಟಲ್ ಜಿ ಮಾತ್ರ…..!!ಅಟಲ್ ಅವರ ಮೊದಲ ರಾಜಕೀಯ ಜೀವನ ಶುರುವಾಗಿದ್ದು 1942 ರಲ್ಲಿ ಕ್ವಿಟ್ ಇಂಡಿಯ (ಬ್ರಿಟಿಷರೇ ಬಾರತ ಬಿಟ್ಟು ತೊಲಗಿ) ಚಳುವಳಿಯಲ್ಲೀ ಭಾಗವಹಿಸುವ ಮೂಲಕ, ನಂತರ 23 ದಿನಗಳ ಕಾಲ ಜೈಲು ವಾಸ ಅನುಭವಿಸ ಬೇಕಾಯಿತು, 1953 ರಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪರಿಚಯ ಭಾರತೀಯ ಜನ ಸಂಘದ ಮೂಲಕ ಆಯಿತು. 1957 ರಲ್ಲಿ ಮೊದಲ ಬಾರಿಗೆ ಲೋಕ ಸಭೆಯ ಸದಸ್ಯರಾಗಿ ಆಯ್ಕೆ ಆದರು. ನಂತರದ ದಿನಗಳಲ್ಲಿ ಇವರ ಚತುರತೆಯನ್ನ ಕಂಡ ನೆಹರು ಜಿ ಹೇಳಿದ್ರಂತೆ, ಈ ವ್ಯಕ್ತಿ ಮುಂದೆ ಪ್ರದಾನಿ ಆಗ್ತಾರೆ ಅಂತ. ಅವರ ಅಸಾಮಾನ್ಯ ಬುದ್ದಿವಂತಿಕೆಯಿಂದಾಗಿ ಎಷ್ಟರ ಮಟ್ಟಿಗೆ ಬೆಳೆದರು ಎಂದರೆ ಜನ ಸಾಮಾನ್ಯರಲ್ಲಿ ಭಾರತೀಯ ಜನ ಸಂಘ ಅನ್ನುವ ಹೆಸರೇ ಕೇಳದ ಪಕ್ಷವನ್ನ ಬುಡದಿಂದ ಕಟ್ಟಿ ಬೆಳಸಿದರು ಅದಕ್ಕೆ ಸಾಥ್ ಕೊಟ್ಟವರು ಲಾಲ್ ಕೃಷ್ಣ ಅಡ್ವಾಣಿ, ನಾನಾಜಿ ದೇಶಮುಖ್ ಹಾಗೂ ಬಾಲರಾಜ್ ಮಧೋಕ್ ಅವರು.ವಿಶೇಷ ಇನ್ನೊಂದಿದೆ ಅವರು 3ನೇ, 10, ಹಾಗೂ 11ನೇ ಲೋಕ ಸಭೆಯನ್ನು ಬಿಟ್ಟು ಉಳಿದೆಲ್ಲ ಸಮಯದಲ್ಲಿ ಲೋಕ ಸಭೆಯ ಸದಸ್ಯರಾಗಿ ಇದ್ದರು. 1977 ರಲ್ಲಿ  ಜನತಾ ಸಂಘದ ಮೊದಲ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಆಯ್ಕೆ ಆದಾಗ  ಅವರು ಅಮೆರಿಕ ದ ಅಸೆಂಬ್ಲಿಯನ್ನ ಉದ್ದೇಶಿಸಿ ಮಾತನಾಡುವ ಅವಕಾಶ ಸಿಕ್ಕಿತ್ತು ಆ ಸಂಧರ್ಬದಲ್ಲಿ ಹಿಂದಿಯಲ್ಲಿ ಅಮೆರಿಕದ ಅಸೆಂಬ್ಲಿಯನ್ನ ಉದ್ದೇಶಿಸಿ ಮಾತನಾಡಿದ ಏಕೈಕ ಭಾರತೀಯ ಅಟಲ್ ಅವರು…… ಅವರಿಗೆ ಇಂಗ್ಲಿಷ್ ಬರೋದಿಲ್ಲ ಅಂತ ಯೋಚನೆ ಮಾಡ್ಬೇಡಿ ಅವರು ಇಂಗ್ಲೀಷ್ ನಲ್ಲೂ ಕೂಡ ಪ್ರಖಾಂಡ ಪಂಡಿತರು.1979 ರಲ್ಲಿ ಮುರಾರ್ಜಿ ದೇಸಾಯಿ ಅವರ ಸರ್ಕಾರ ಪತನಗೊಂಡ ಸಂಧರ್ಬದಲ್ಲಿ ಜನತಾ ಪಾರ್ಟಿಯನ್ನ ವಿಸರ್ಜಿಸಲಾಯಿತು ಆ ಸಂಧರ್ಬದಲ್ಲೂ ದೃತಿಗೆದದ ಅಟಲ್ ಜಿ ಭಾರತೀಯ ಜನ ಸಂಘ ಹಾಗೂ ಆರ್ ಎಸ್ ಎಸ್ ನ ಕೆಲ ಮುಖಂಡರೊಂದಿಗೆ ಸೇರಿ , ಜೊತೆಗೆ ಲಾಲ್ ಕೃಷ್ಣ ಅಡ್ವಾಣಿಯವರ ಜೊತೆಗೂಡಿ 1980 ರಲ್ಲಿ ಭಾರತೀಯ ಜನತಾ ಪಾರ್ಟಿ ಯನ್ನ ಕಟ್ಟಿದರು. 1984 ರಲ್ಲಿ ಆಪರೇಷನ್ ಬ್ಲೂ ಸ್ಟಾರ್ ಅನ್ನ ಅತ್ಯಂತ ಖಟುವಾಗಿ ವಿರೋದಿಸಿದವರು ಅಟಲ್ ಜಿ….. ಅಷ್ಟಕ್ಕೂ ಈ ಬ್ಲೂ ಸ್ಟಾರ್ ಆಪರೇಷನ್ ಅಂದರೆ ಏನು ಗೊತ್ತ? ಪಂಜಾಬ್ ನ ಸಿಕ್ಕ್ ದೇವಾಲಯ ಒಂದರಲ್ಲಿ ಅಕ್ರಮ ಶಸ್ತ್ರಾಸ್ತ್ರ ದಾಸ್ತಾನಿದೆ ಅನ್ನೋ ನೆಪ ಮಾಡಿಕೊಂಡು ಅಲ್ಲಿಗೆ ಸೈನ್ಯವನ್ನ ಕಳುಹಿಸಿ ಜಲಿಯನ್ ವಾಲಭಾಗ್ ಹತ್ಯಾಕಾಂಡಕಿಂತಲೂ ಭಯಾನಕವಾಗಿ ನರ ಮೇಧ ನೆಡೆಸಿದ್ದು!! ಅದರ ರೂವಾರಿ ಯಾರು ಗೊತ್ತ? ಮೇಡಂ ಇಂದಿರ ಗಾಂಧಿ!! ಅಷ್ಟಕ್ಕೂ ಒಡೆದು ಆಳುವ ನೀತಿಯನ್ನ ಮುಂದುವರಿಸಿಕೊಂಡು ಬಂದಿದ್ದ ಆಗಿನ ಸರ್ಕಾರದ, ಹಾಗೂ ಬ್ಲೂ ಸ್ಟಾರ್ ಆಪರೇಷನ್ ವಿರುದ್ದ ಹೋರಾಟ ಮಾಡಲು ಲೋಕ ಸಭೆಯಲ್ಲಿ ಇದ್ದ ಬಿ ಜೆ ಪಿ ಯ ಸದಸ್ಯರ ಒಟ್ಟು ಸಂಖ್ಯಾ ಬಲ ಕೇವಲ 2 ಮಾತ್ರ!! ಹಾಗಿದ್ದರೂ ದೃತಿ ಗೆಡಲಿಲ್ಲ ಅಟಲ್…..ರಾಮ ಜನ್ಮಭೂಮಿಯ ವಿಚಾರದಲ್ಲಿ ಹೋರಾಟ, ನಂತರ 1995 ರಲ್ಲಿ ಮಹಾರಾಷ್ಟ್ರ ಹಾಗೂ ಗುಜರಾತ್ ನಲ್ಲಿ ಮೊದಲ ಬಾರಿಗೆ ಅಧಿಕಾರವನ್ನ ವಹಿಸುವ ಅವಕಾಶ ಬಿ ಜೆ ಪಿ ಗೆ ಒಲಿದು ಬಂತು ನಂತರ ಮಹಾರಾಷ್ಟ್ರದಲ್ಲಿ ಲಾಲ್ ಕೃಷ್ಣ ಅಡ್ವಾಣಿಯವರು ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಮಾನ್ಯ ಅಟಲ್ ಜಿ ಅವರ ಹೆಸರನ್ನ ಘೋಷಿಸಿದರು ಅದರಿಂದಾಗಿ 1996 ರಲ್ಲಿ ಕೇಂದ್ರದಲ್ಲಿ ಮೊದಲ ಬಿ ಜೆ ಪಿ ಯ ಸರ್ಕಾರ ರಚನೆಯಾಯಿತು. ಆದರೆ ದುರಾದೃಷ್ಟ ವಶಾತ್ ಅಟಲ್ ಬಹುಮತ ಸಾಭೀತು ಪಡಿಸುವ ಸಂದರ್ಭದಲ್ಲಿ ಸೋಲೋಪ್ಪಬೇಕಾಯಿತು ಹಾಗಾಗಿ ಮೊದಲಬಾರಿಗೆ ಅಟಲ್ ಕೇವಲ 13 ದಿನಗಳಿಗಾಗಿ ಪ್ರದಾನಿಯಾಗಿದ್ದರು ಅಷ್ಟೇ…1998- 99 ರಲ್ಲಿ ಎನ್ ಡಿ ಎ ಅನ್ನುವ ಸಂಘಟನೆಯಡಿ ಪಕ್ಷಗಳನ್ನ ಒಂದು ಗೂಡಿಸಿ ಮತ್ತೆ ಬಿ ಜೆ ಪಿ ಅಧಿಕಾರಕ್ಕೆ ಬಂತು ಅಟಲ್ ಪ್ರಧಾನಿಯಾದರು. ಮತ್ತೆ ಜಯಲಲಿತ ತಾವು ನೀಡಿದ್ದ ಬೆಂಬಲವನ್ನ ಹಿಂಪಡೆದರು ಅದರಿಂದಾಗಿ  ಬಹುಮತ ಸಾಬೀತು ಮಾಡುವ ಪರೀಕ್ಷೆ ಎದುರಾಯಿತು ಆಗ ಕೇವಲ 1 ವೋಟಿನಿಂದ ಅಟಲ್ ಸರ್ಕಾರ ಮತ್ತೆ ಬಿದ್ದು ಹೋಯಿತು……ಮೇ 1998ರಲ್ಲಿ ಮೊದಲ ಬಾರಿಗೆ ಅಟಲ್ ಸರ್ಕಾರ ಒಂದು ನಿರ್ಧಾರಕ್ಕೆ ಬಂದು, ಅಣ್ವಸ್ತ್ರ ಪರೀಕ್ಷೆಯನ್ನ ಪೊಖ್ರಾನ್ (ರಾಜಸ್ತಾನ ದಲ್ಲಿದೆ) ಎಂಬಲ್ಲಿ ನೆಡೆಸಿತು, ಯಶಸ್ವಿ ಆಯಿತು ಕೂಡ, ಇಡೀ ವಿಶ್ವ ಭಾರತವನ್ನ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಯಿತು, ಅಮೆರಿಕವೆಂಬ ಹೊಟ್ಟೆಕಿಚ್ಚಿನ ದೇಶ ನಮ್ಮ ಮೇಲೆ ಅಣ್ವಸ್ತ್ರ ಪರೀಕ್ಷೆ ಮಾಡಿದ ಕಾರಣವೊಡ್ಡಿ ನಿರ್ಭಂದ ಹೇರಿತು. ಇದಾಗಿ ಎರಡೇ ವಾರದಲ್ಲಿ ನಮ್ಮ ಪರಮಾಪ್ತ!! (?) ರಾಷ್ಟ್ರ ಪಾಕಿಸ್ತಾನ ಅಣು ಶಶ್ತ್ರಾಸ್ತ್ರಗಳನ್ನ ಪರೀಕ್ಷೆ ಮಾಡಿತು ಗೊತ್ತೇ? ನಂತರ ಅಮೆರಿಕ “ಸಿ ಟಿ ಬಿ ಟಿ ಒಪ್ಪಂದಕ್ಕೆ ಸಹಿ ಮಾಡುವಂತೆ ಎಷ್ಟು ಒತ್ತಾಯ ಮಾಡಿತೆಂದರೆ ಅದೆಲ್ಲವನ್ನೂ ಅಟಲ್ ಛಲದಿಂದಲೇ ಎದುರಿಸಿದರು. ಅಷ್ಟಕ್ಕೂ ಈ ಸಿ ಟಿ ಬಿ ಟಿ ಅಂದರೆ ಏನು ಗೊತ್ತೇ? ಕಂಪ್ರಹೆನ್ಸಿವ್ ಟೆಸ್ಟ್ ಬ್ಯಾನ್ ಟ್ರೀಟಿ ಅಂತ, ಅಂದರೆ ನಾವು ಯಾರಮೇಲೂ ಅಣ್ವಸ್ತ್ರ ಪ್ರಯೋಗ ಮಾಡುವಂತಿಲ್ಲ…….ಸರಿ ಹಾಗೆಲ್ಲಾದರೂ ಸಹಿ ಹಾಕಿದರೆ ನಮ್ಮ ನೆಂಟ ರಾಷ್ಟ್ರ ಪಾಕಿಸ್ತಾನ ಸುಮ್ಮನಿರುತ್ತದೆಯೇ? ಸಹಿ ಹಾಕಿದ ಮರುಕ್ಷಣವೇ ಅವರಲ್ಲಿರುವ ಅಕ್ರಮ ಅಣು ಬಾಂಬಗಳನ್ನ ಸಾಲು ಸಾಲಾಗಿ ತಂದು ನಮ್ಮ ಮೇಲೆ ಎಸೆದು ದ್ವಂಸ ಮಾಡಿಬಿಡುವುದಿಲ್ಲವೇ? ಹಾಗೆ ಆಗಲೆಂದೇ ಅಮೆರಿಕ ಸಿ ಟಿ ಬಿ ಟಿ ಅನ್ನೋ ಕುಣಿಕೆಯನ್ನ ನಮಗೆ ಸುತ್ತಲು ಬಂದಿದ್ದು… ಆದರೆ ಅದನ್ನ ಅರಿತಿದ್ದರು ಅಟಲ್.1998 ಹಾಗೂ 1999 ರಲ್ಲಿ ಭಾರತ ಪಾಕಿಸ್ತಾನಗಳನಡುವೆ ಲಾಹೋರ್ ಒಪ್ಪಂದಕ್ಕೂ ಮುಂದಾಗಿದ್ದು ಸ್ವತಃ ಅಟಲ್ ಬಿಹಾರಿ ವಾಜಪೇಯಿಯವರು… ಆದರೆ ಮುಂದಿನಿಂದ ಒಪ್ಪಂದ ಮಾಡಿಕೊಂಡು ಹಿಂದಿನಿಂದ ಬಂದು ಬಾಂಬ್ ಹಾಕುವ ಬುದ್ಧಿಯನ್ನ ಪಾಕ್ ಬಿಡಲೇ ಇಲ್ಲ ….ಜೂನ್ 1999 ರಲ್ಲಿ ಕಾರ್ಗಿಲ್ ಯುದ್ದ ಶುರುವಾಗಿ ಹೋಯಿತು,ಆಪರೇಷನ್ ವಿಜಯ್ ಗೆ ಕರೆ ಕೊಟ್ಟರು ಅಟಲ್, 3 ತಿಂಗಳು ನಡೆದ ಯುದ್ದದಲ್ಲಿ ಪಾಕ್  ಮಾಡಿದ 70% ಅತಿಕ್ರಮ ಪ್ರವೇಶ ವನ್ನು ಹಿಮ್ಮೆಟ್ಟಿಸಲಾಯಿತು, 600 ರಿಂದ ಸುಮಾರು 3000 ಸಾವಿರ ಪಾಕ್ ಉಗ್ರರನ್ನ ಮುಗಿಸಲಾಯಿತು, ನಂತರ ಪಾಕಿಸ್ತಾನ ಅಮೆರಿಕಾದ ಕಾಲು ಹಿಡಿದು ಜೀವ ಉಳಿಸಿಕೊಂಡು ಕದನ ವಿರಾಮ ಘೋಷಣೆ ಮಾಡಿತು….ಆಗ ಅಟಲ್ ತೆಗೆದುಕೊಂಡ ನಿರ್ಧಾರಗಳು, ಅವರ ಧೈರ್ಯ ಮೆಚ್ಚುಗೆಗೆ ಪಾತ್ರವಾಯಿತು.ಮೂರನೇ ಬಾರಿಗೆ ಪ್ರದಾನಿಯಾಗಿದ್ದು 1999 ರಿಂದ 2004 ರ ವರೆಗೆ, ಆ ಸಂದರ್ಭದಲ್ಲಿ ನಡೆದ ಭಾರತೀಯ ವಿಮಾನ ಅಪಹರಣ (ಖಂದಹಾರ್ ನಲ್ಲಿ. – ಹಿಂದೊಮ್ಮೆ ಘಾಂದಾರ ಅಗಿತ್ತಂತೆ ಅದು ) ಕೂಡ ಸುಖಾಂತ್ಯ ಕಾಣುವಲ್ಲಿ ಅಟಲ್ ಹಾಗೂ ಜಸವಂತ್ ಸಿಂಗರ ಕೊಡುಗೆ ಅಪಾರವಾಗಿದೆ. ಮತ್ತೆ ಇನ್ನೂ ಮುಖ್ಯವಾಗಿ ಹೇಳಬೇಕೆಂದರೆ ಅಟಲ್ ಮಾಡಿದ ಮಹತ್ತರ ಸಾಧನೆಗಳಲ್ಲಿ ಪ್ರದಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆ, ಎಷ್ಟರ ಮಟ್ಟಿಗೆ ಇದು ಫಲಪ್ರದವಾಯಿತೆಂದರೆ ಲಕ್ಷಾಂತರ ಹಳ್ಳಿಗಳು ಡಾಂಬರಿನ ರಸ್ತೆಗಳನ್ನು ಕಂಡವು, ಸಂಪರ್ಕ ಹಾಗೂ ರಸ್ತೆ ನಿರ್ಮಾಣದಲ್ಲಿ ಆದ ಕ್ರಾಂತಿ ಅಂದರೆ ಅದೇನು ತಪ್ಪಾಗಲಾರದು.ನಂತರದಲ್ಲಿ 2001 ರ ಪಾರ್ಲಿಮೆಂಟ್ ಮೇಲಿನ ಉಗ್ರರ ದಾಳಿ ಕಹಿ ನೆನಪು , 2005 ರಲ್ಲಿ ರಾಜಕೀಯದಿಂದ ನಿವೃತ್ತಿ ಘೋಷಿಸಿ ಕೊಂಡವರು ಅಟಲ್, ರಾಜಕೀಯವನ್ನ ಬಿಟ್ಟರೆ ಅಟಲ್ ಒಬ್ಬ ಒಳ್ಳೆಯ ಕವಿ ಹಾಗೂ ಸಾಹಿತಿಯೂ ಹೌದು. ಅವರು ಬರೆದ ಪುಸ್ತಕಗಳು ಅನೇಕ. ಹಾಗೆ ಅವರಿಗೆ ಅರಸಿ ಬಂದ ಪ್ರಶಸ್ತಿಗಳೂ ಅಷ್ಟೇ, 1992 ರಲ್ಲಿ ಪಧ್ಮ ವಿಭೂಷಣ, 1994 ರಲ್ಲಿ ಲೋಕಮಾನ್ಯ ತಿಲಕ್ ಪ್ರಶಸ್ತಿ, 1994 ರಲ್ಲಿ ಉತ್ತಮ ರಾಜಕೀಯ ಪಟು ಗೌರವ, ಹಾಗೂ 1994 ರ ಪಂಡಿತ್ ಗೋವಿಂದ್ ವಲ್ಲಭ್ ಪಂತ್ ಪ್ರಶಸ್ತಿಗಳು ಮುಖ್ಯವಾದವು.ಅವರು ಬರೆದ ಕೆಲವು ಪುಸ್ತಕಗಳು:Atal Bihari Vajpayee, meri samsadiya yatra (Hindi Edition). (1999). – ಇದು ಅವರ ಜೀವನ ಚರಿತ್ರೆ.Four decades in parliament. (1996).Atala Bihari Vajpayee, samsada mem tina dasaka. (1992).Pradhanamantri Atala Bihari Vajapeyi, chune hue bhashana. (2000).Values, vision & verses of Vajpayee: India’s man of destiny. (2001).India’s foreign policy: New dimensions. (1977).Assam problem: Repression no solution. (1981).Suvasita pushpa: Atala Bihari Vajapeyi ke sreshtatama bhashana. (1997).ಕವಿತೆಗಳುTwenty-One Poems. (2003).Kya khoya kya paya: Atala Vihari Vajapeyi, vyaktitva aura kavitaem (Hindi Edition). (1999).Meri ikyavana kavitaem. (1995).Meri ikyavana kavitaem (Hindi Edition). (1995).Sreshtha kabita. (1997).Nayi Disha – an album with Jagjit Singh (1999)Samvedna – an album with Jagjit Singh (2002)
     ಎನ್ ಡಿ  ಎ ಆಗಿರಲಿ, ಭಾರತೀಯ ಜನ ಸಂಘ ಆಗಿರಲಿ, ಭಾರತೀಯ ಜನತಾ ಪಾರ್ಟಿ ಆಗಿರಲಿ ಅವೆಲ್ಲವೂ ಹುಟ್ಟಿ ಬೆಳೆದಿದ್ದು ಅಟಲ್ ರ ಮಾರ್ಗದರ್ಶನದಲ್ಲಿಯೇ! ತನಗಾಗಿ ಒಂದು ಸಂಸಾರವನ್ನೂ ಕಟ್ಟಿಕೊಳ್ಳದೆ ದೇಶಕ್ಕಾಗಿ ದೇಶದ ಹಿತಕ್ಕಾಗಿ ಹೋರಾಟ ಮಾಡಿದ ಆಧುನಿಕ ರಾಜಕಾರಣದ ಭೀಷ್ಮ ವಾಜಪೇಯಿಯವರು ಎಲ್ಲರಿಗೂ ಮಾದರಿ. ನಿಷ್ಕಳಂಕ, ಸಜ್ಜನ , ರಾಜಕಾರಣಿಯಾಗಿ ಕವಿಯಾಗಿ ಒಬ್ಬ ಶ್ರೇಷ್ಠ ಮಾನವತಾ ವಾದಿಯಾದ ವಾಜಪೇಯಿಯವರಿಗೆ ಅವರ ಜನುಮದಿನಕ್ಜೆ ಅತ್ಯುನ್ನತ ಭಾರತರತ್ನ ನೀಡಲು ನಿಧ೯ರಿಸಿದೆ.ಅವರ ಆರೋಗ್ಯ ಏರುಪೇರಾಗಿ ತಮ್ಮ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೂ ಆ ಸಂಗತಿ ಅರಿಯದಂತಾಗಿದ್ದಾರೆ.ಅವರ ಆರೋಗ್ಯ ಸುಧಾರಿಸಲಿ ಅವರಿಗೆ 90ನೇ ವಷ೯ಕ್ಕೆ ಕಾಲಿಡುತ್ತಿರುವುದಕ್ಕೆ ಶುಭಾಶಯಗಳು.
                           -(ಆಧಾರ)
-ಹನುಮಂತ.ಮ.ದೇಶಕುಲಕಣಿ೯.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನ಼ಂ.9731741397

ಭೋಗೇನಾಗರಕೊಪ್ಪದ ಪಂಪಾ ವಿರೂಪಾಕ್ಷೇಶ್ವರ

      ಕಲಘಟಗಿ ತಾಲೂಕಿನ ಭೋಗೇನಾಗರಕೊಪ್ಪ ಇನಾಂ ಗ್ರಾಮದಲ್ಲಿಯ ದೇಸಾಯಿ ವಾಡೇದಲ್ಲಿ ಪ್ರತಿಷ್ಠಾಪನೆಗೊಂಡಿರುವ ಶ್ರೀ.ಪಂಪಾವಿರೂಪಾಕ್ಷೇಶ್ವರನಿಗೆ ಮಹಾಶಿವರಾತ್ರಿಯಂದು ವಿಶೇಷ ಪೂಜೆ ಜರುಗಲಿದೆ.
 ಮರಾಠಾ-ಪೇಶ್ವೇ ದಬಾ೯ರದಲ್ಲಿಯ ದೇಸಗತಿಯನ್ನು ಇನಾಂ ಹಳ್ಳಿಯಾದ ಭೋಗೇನಾಗರಕೊಪ್ಪದ ದೇಸಾಯಿ ವಾಡೇದಲ್ಲಿ ಪ್ರತಿಷ್ಠಾಪನೆಯಾಗಿದ್ದಕ್ಕೆ ಇತಿಹಾಸವಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಭೋಗೇನಾಗರಕೊಪ್ಪ ದೇಸಾಯರ ಪೂವ೯ಜರು ಹಂಪೆ ಪಂಪಾಪತಿ ದೇವಸ್ಥಾನದ ಅಚ೯ಕರಾಗಿದ್ದರು.ಸಾಮ್ರಾಜ್ಯದ ಪತನಾನಂತರ ಇತ್ತ ಬರುವಾಗ ಹಂಪೆಯಿಂದ ಉತ್ಕೃಷ್ಟ ಸಾಲಿಗ್ರಾಮ ತಮ್ಮೊಡನೆ ತಂದರು.ಈ ಸಾಲಿಗ್ರಾಮದ ಇನ್ನೊಂದು ವಿಶೇಷವೆಂದರೆ ಸಾಲಿಗ್ರಾಮದ ಮುಂದೆ ಗಣಪತಿ ಇದ್ದಾನೆ. "ತಂದೆ-ಮಗನ ಸಮ್ಮಿಲನ " ಅಖಂಡ ಶಿಲೆಯಲ್ಲಿರುವುದು ಮಹತ್ವದ ಸಂಗತಿ!.
     ದೇಶಸಂಚಾರಿಯಾಗಿದ್ದ ಹಂಪೆ ವಿರೂಪಾಕ್ಷ ದೇಗುಲದ ಮುಖ್ಯ ಗೋಪುರ ನಿಮಾ೯ಪಕ ಶ್ರೀ.ಬಿಷ್ಟಪ್ಪಯ್ಯ ಗುರುಗಳು ದೇಸಾಯರ ಆಹ್ವಾನದ ಮೇರೆಗೆ ಶಿವರಾತ್ರಿ ಹಿಂದಿನ ದಿನ ವಾಡೇಗೆ ಆಗಮಿಸಿ ಅತಿಥ್ಯ ಸ್ವೀಕರಿಸಿ ಮರುದಿನ ನಿರಾಹಾರ ಉಪವಾಸ ನಿಷ್ಠರಾಗಿ ಸಾಲಿಗ್ರಾಮನ್ನು ಪುನರ್ ಪ್ರತಿಷ್ಟಾಪಿಸಿ" ಪಂಪಾವಿರೂಪಾಕ್ಷೇಶ್ವರ " ಎಂದು ಕರೆದರು.ಸುಮಾರು 400 ಶತಮಾನಗಳ ಇತಿಹಾಸದ ಸಾಲಿಗ್ರಾಮ ಇದೆ.     ಪಂಪಾವಿರೂಪಾಕ್ಷೇಶ್ವರನಿಗೆ ಜಲಾಭಿಷೇಕ,ಕ್ಷೀರಾಭಿಷೇಕ,ಶ್ರೀಗಂಧ ಲೇಪನ,ಮಹಾಮಂಗಳಾರತಿ ನಡೆಯಲಿದೆ.

-ಹನುಮಂತ.ಮ.ದೇಶಕುಲಕಣಿ೯
ಸಾ.ಭೋಗೇನಾಗರಕೊಪ್ಪ-581196 ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಭೋಗೇನಾಗರಕೊಪ್ಪದ ಅಧ೯ದಿನದ ಗಣಪ.ದೇಶಭಕ್ತ ದೇಶಕುಲಕಣಿ೯ ಕುಟುಂಬ

    ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಭೋಗೇನಾಗರಕೊಪ್ಪದಲ್ಲಿ ನೆಲೆಸಿರುವ ಜಾಗೃತ ಶ್ರೀ ನಂದೀಶ್ವರನ ಮಹಿಮೆ ಅಪಾರವಾದದ್ದು. ಶಾಲ್ಮಲಾ ನದಿ ತಟದ ಸುಂದರ.ಪರಿಸರದಲ್ಲಿ ಬಲಗಾಲು ಮುಂದೆ ಮಾಡಿ  ಪೂವ೯ಕ್ಕೆ ಪ್ರಸನ್ನ ಮುಖಮುದ್ರೆ ಮಾಡಿ ಕುಳಿತಿದ್ದಾನೆ.
ಇತಿಹಾಸ: ದೇವಸ್ಥಾನದ ಧಮ೯ದಶಿ೯ ಅದ ದೇಶಕುಲಕಣಿ೯(ದೇಸಾಯಿ) ಅವರ ಪೂರ್ವಜರು ಬಿದರಿಕೋಟೆ ದೇಸಾಯರು ಆಗಿದ್ದರು.ಆಡಳಿತ ತ್ಯಜಿಸಿ ಹಂಪೆಯ ಪಂಪಾಪತಿ ದೇವಸ್ಥಾನದ ಅಚ೯ಕರಾದರು.ವಿಜಯನಗರ ಸಾಮ್ರಾಜ್ಯ ಪತನಾನಂತರ ಧಾರವಾಡದತ್ತ ವಲಸೆ ಬಂದು ಛತ್ರಪತಿ ಶಿವಾಜಿ ಮಹಾರಾಜರಲ್ಲಿ ವಿದ್ವತ್ ಪ್ರದಶಿ೯ಸಿ ಐದು ಹಳ್ಳಿಗಳನ್ನು ಇನಾಮು ಪಡೆದು ಭೋಗೇನಾಗರಕೊಪ್ಪದ ಕೋಟೆಯಲ್ಲಿ ನೆಲೆ ನಿಂತು ಆಳಿದರು.              ಹೀಗಿರುವಾಗ ದೇಸಾಯಿಯವರಲ್ಲೊಬ್ಬರಿಗೆ ಸಂತಾನವಿರಲಲಿಲ್ಲ. ಅದೇ ಸಮಯದಲ್ಲಿ ಸಿದ್ಧಿ ಪುರುಷರು,ಹಂಪೆ ವಿರೂಪಾಕ್ಷ ದೇಗುಲದ ಮುಖ್ಯ ಗೋಪುರದ ನಿಮಾ೯ಪಕ ಬಿಷ್ಟಪ್ಪಯ್ಯ ಮಹಾಪುರುಷರು ನಾಗನೂರ ಗ್ರಾಮದ ಮಾಮಲೆ ದೇಶಪಾಂಡೆ ಅವರಲ್ಲ್ಲಿತಂಗಿದ್ದರು.ಅವರನ್ನು ತಮ್ಮ ವಾಡೆಗೆ ಕರೆತಂದು ಉಪಚರಿಸಿ ತಮ್ಮ ಸಂತಾನವಿಲ್ಲದೆ ಸಮಸ್ಯೆಗೆ ಪರಿಹಾರ ಕೇಳಿದರಂತೆ.ಆಗ ಬಿಷ್ಟಪ್ಪಯ್ಯನವರು ಶಾಲ್ಮಲಾ ನದಿಗುಂಟ ಸಂಚರಿಸಿ ದಿಬ್ಬದಲ್ಲಿ ಹುದುಗಿದ್ದ ಅಪೂವ೯ ನಂದೀಶ್ವರನ ವಿಗ್ರಹ ಗೋಚರಿಸಿತು.ಅದನ್ನು ಹೊರ ತೆಗೆದು ಅದೇ ಸ್ಥಳದಲ್ಲಿ ಪುನರ್ ಪ್ರತಿಷ್ಟಾಪಿಸಿ ತ್ರಿಕಾಲ ಪೂಜಾ ಮಾಡಲು ತಿಳಿಸಿದರು. ತದನಂತರ ಅವರಿಗೆ ಸಂತಾನ ಪ್ರಾಪ್ತವಾಯಿತು. ಬಿಷ್ಟಪ್ಪಯ್ಯ ಅವರ ಮಹತ್ಕಾರ್ಯ ವಿವರಿಸುವ "ಬಿಷ್ಟೇಶ ಶತಮಾನಗಳು" ಅದರಲ್ಲಿ "ವಂದ್ಯಾಸಂತಾನ ಫಲದಃ| ಖರಶಾಪವಿಮೋಚಕಃ|(ನಂದಿಯ ಶಾಪವಿಮೋಚನೆ ಮಾಡಿ ನಿಸ್ಸಂತಾನರಿಗೆ ಸಂತಾನ ನೀಡಿದವರು).ದಾಖಲಾಗಿದೆ.ಸ
      ನಂದೀಶ್ವರನ ಮುಂದಿರುವ ಬೆಳ್ಳಿಯ ಪಾದುಕೆಗಳು  "ಬಿಷ್ಟೆಶ್ವರ ಪಾದುಕೆಗಳು" ಎಂದು ಅಚಿ೯ಸಲ್ಪಡುತ್ತವೆ.ಭಕ್ತಿಯ ದ್ಯೋತಕವಾಗಿ ದೇಶಕುಲಕಣಿ೯ ಅವರು ಬಿಷ್ಟಪ್ಪಯ್ಯ ವಂಶಸ್ಥರಲ್ಲಿರುವ ರಸಲಿಂಗಕ್ಕೆ ಹಿತ್ತಾಳೆಯ ಸಿಂಹಾಸನ ಮಂಟಪ ಮಾಡಿಸಿದ ಶಾಸನವಿದೆ.ನಂದೀಶ್ವರನು "ಸಂತಾನ ಬಸಪ್ಪ" ಎಂದೇ ಖ್ಯಾತನಾಗಿದ್ದಾನೆ.ಹರಕೆ ಹೊತ್ತು ಗುಡಿಯೊಳಗೆ ಕಟ್ಟಿದ ತೆಂಗಿನಕಾಯಿ,ತೊಟ್ಟಿಲು ಕಾಣಸಿಗುತ್ತವೆ.
    ನಂದೀಶ್ವರನನ್ನು ಪ್ರತಿಷ್ಟಾಪಿಸುವಾಗ ಅದರಡಿಯಲ್ಲಿ ಉತ್ಕೃಷ್ಟ ನರಸಿಂಹ ಸಾಲಿಗ್ರಾಮ ಇರಿಸಿದ್ದಾರೆಂದು ಪ್ರತೀತಿ.ಮುಜರಾಯಿ ಇಲಾಖೆ ಒಮ್ಮೆ ಅಷ್ಟಬಂಧೋತ್ಸವ ನಡೆಸಿದರೆ ನರಸಿಂಹ ಸಾಲಿಗ್ರಾಮದ ಬಗ್ಗೆ ಬೆಳಕು ಚೆಲ್ಲಬಹುದು ಎಂದು ಧಮ೯ದಶಿ೯ಗಳ ಅಭಿಪ್ರಾಯಪಡುತ್ತಾರೆ.
   ಬ್ರಿಟಿಷ್ ಸಕಾ೯ರವಿದ್ದಾಗ  ದೇವಸ್ಥಾನಕ್ಕೆ ಆಗಿನ ಧಾರವಾಡದ ಕಲೆಕ್ಟರ್ ಆಗಿದ್ದ ಸರ್.ಎಂ.ಸಿ.ಗಿಬ್ಬ್ ಮತ್ತು ಜಾರ್ಜ್ ಹಡ್ಸನ್ ವಷಾ೯ಶನ 2 ರೂಪಾಯಿ ನಿವ೯ಹಣೆಗೆ ಮತ್ತು ಪೂಜಾ-ಪುನಸ್ಕಾರಕ್ಕೆ ಧಮ೯ದಶಿ೯ ಅಣ್ಣಾಜಿ ಹಣವಂತ ಅವರ ಹೆಸರಿನಲ್ಲಿ ನೀಡುತ್ತಿದ್ದರು. ಆ ಸನದಿನ ನಕಲು ಪ್ರತಿ ಇದೆ.ಪುಣೆಯ ಪೇಶ್ವೆ ಮ್ಯುಜಿಯಂನಲ್ಲಿ ಗ್ರಾಮದ ದಾಖಲೆ ಸಿಗುತ್ತವೆ.
    ಗಡ್ಡಿ ತೇರಿನ ರಥೋತ್ಸವವು ಪ್ರತಿವಷ೯ ಬನದ ಹುಣ್ಣಿಮೆಗೆ ಜರುಗುತ್ತದೆ.ಶತಮಾನೋತ್ಸವದ ರಥೋತ್ಸವವು ಮೂರು ವಷ೯ದ ಹಿಂದೆ ಜರುಗಿದೆ.ಈ ವಷ೯ ಜನೇವರಿ 5 ರಂದು ಜರುಗುತ್ತದೆ.
-ಹನುಮಂತ.ಮ.ದೇಶಕುಲಕಣಿ೯.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನ಼ಂ.9731741397

ಭೋಗೇನಾಗರಕೊಪ್ಪ ಮಾರುತಿ(ಹನುಮಂತ)

  ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕ ಭೋಗೇನಾಗರಕೊಪ್ಪದಲ್ಲಿ ಶ್ರೀ.ಸಮರ್ಥ ರಾಮದಾಸರು ಸ್ಥಾಪಿಸಿದ ಹನುಮಂತನ ವಿಗ್ರಹವಿದೆ.ಈ  ವಿಗ್ರಹವು ಪ್ರಾಚೀನ ಕಾಲದಾಗಿದ್ದು ಮರಾಠ ಸಾಮ್ರಜ್ಯದಲ್ಲಿ ಸ್ಥಾಪನೆಯಾಗಿದೆ. ದೇವಸ್ಥಾನಕ್ಕೆ  ಐತಿಹಾಸಿಕ ಹಿನ್ನಲೆ ಇದೆ.
   ಐತಿಹ್ಯ: ಛತ್ರಪತಿ ಶಿವಾಜಿ ಮಹಾರಾಜರಿಂದ 5 ಹಳ್ಳಿಗಳನ್ನು ಇನಾಂ ಪಡೆದು ಶಿವಾಜಿ ಕಟ್ಟಿಸಿದ ಕೋಟೆಯಲ್ಲಿ ವೈಭವವಾಗಿ ದೇಸಾಯಿಯವರ ಆಳುತ್ತಿದ್ದರು. ಶ್ರೀ.ಸಮರ್ಥ ರಾಮದಾಸರು ಹೈಂದವಿ ಸ್ವರಾಜ್ಯದ ಕನಸಿಗಾಗಿ ಮರಾಠ ಸಾಮ್ರಜ್ಯದ ಆಡಳಿತವಿದ್ದೆಡೆಯೆಲ್ಲಾ ಸಂಚರಿಸುತ್ತಾ ಭೋಗೇನಾಗರಕೊಪ್ಪಕ್ಕೆ ವಾಡೆಗೆ ಬಂದರು.ಆಗ ಮುನಿರಾಮನಕೊಪ್ಪ ಎಂದು ಹೆಸರಾದ ಊರು ಕಾಲಾಂತರ ಭಾಗ್ಯನಗರಕೊಪ್ಪ,ಭೋಗೇನಾಗರಕೊಪ್ಪ ಎಂದಾಯಿತು.
     ಸಮರ್ಥರ ಉದ್ದೇಶ ಜನರಲ್ಲಿ ದೇಹದಾರ್ಡ್ಯ ಬೆಳೆಸುವದರ ಜತೆಗೆ ಭಕ್ತಿಯ ಅರಿವು ಮೂಡಿಸುವುದು ಆಗಿತ್ತು. ಅದರಂತೆ ಕಲಿಯುಗದ ಬ್ರಹ್ಮನಾದ ಆಂಜನೇಯನ ಉಪಾಸನೆ ಮಾಡಲು ಜನರಿಗೆ ಕರೆ ಇತ್ತರು. ಅಂತೆಯೆ ಸಮರ್ಥರು ದೇಶದ ಮೂಲೆಮೂಲೆಗಳಲ್ಲಿ 1200 ಮಾರುತಿ ದೇವಸ್ಥಾನದ ಪಕ್ಕದಲ್ಲಿಯೆ ಗರಡಿಮನೆಗಳನ್ನು ಸ್ಥಾಪಿಸಿದರು. ಅದರಲ್ಲಿ ಭೋಗೇನಾಗರಕೊಪ್ಪವು ಒಂದು.
    ಸಮರ್ಥರು ಗ್ರಾಮಕ್ಕೆ ಆಗಮಿಸಿ ಅದರಾತಿಥ್ಯ ಸ್ವೀಕರಿಸಿ ವಾಡೆದಲ್ಲಿ ಸಂಧ್ಯಾವಂದನೆ,ಪೂಜಾ ಕೈಂಕರ್ಯವನ್ನು ಮುಗಿಸಿಕೊಂಡು ಕೆರೆಯ ಕೋಡೆಯ ಮೇಲೆ ಮಾರುತಿ ವಿಗ್ರಹ ಸ್ಥಾಪಿಸಿದರು.ಮಾರುತಿ ದೇವಸ್ಥಾನದ ಪಕ್ಕದಲ್ಲಿಯೆ ಬಿರುದುಗೋಉಡೆಗೆ ಹೊಂದಿಕೊಂಡಂತೆ ಗರಡಿ ಮನೆ ಈಗಲೂ ಇದೆ.  ದೇವಸ್ಥಾನದ ಜೀರ್ಣೋದ್ದಾರ ಕೆಲಸ ನಡೆಯುತ್ತಿದೆ.
ಈ ಮುಖ್ಯಪ್ರಾಣನಿಗೆ ಹನುಮ ಜಯಂತಿ (ದವನದ ಹುಣ್ಣಿಮೆಯಂದು ಏ.22
ರಂದು) ವಿಶೇಷ ಕುಂಕುಮಾರ್ಚನೆ ', ಪೂಜೆ ನಡೆಯುತ್ತದೆ.                   
  **ಹನುಮಂತ.ಮ.ದೇಶಕುಲಕರ್ಣಿ.      ಸಾ.ಭೋಗೇನಾಗರಕೊಪ್ಪ-581196
   ತಾ.ಕಲಘಟಗಿ.ಜಿ.ಧಾರವಾಡ.
  ಮೊ.ನಂ.9731741397

ರಾಶಿಗಳಲ್ಲಿ ಸವ೯ಜ್ಞ ವಚನ

ವಚನಕಾರ ಸವ೯ಜ್ಞನು ಮಳೆ-ಗಾಳಿಗಳ ಕುರಿತು ರೈತರಿಗೆ ತನ್ನ ವಚನಗಳ ಮೂಲಕ ಭೋಧಿಸಿದ್ದಾನೆ. ಅವುಗಳಲ್ಲಿ ರಾಶಿನಕ್ಷತ್ರಗಳ ಮೂಲಕ ತನ್ನ ಭವಿಷ್ಯ ನುಡಿದಿದ್ದಾನೆ.
*ಮೇಷರಾಶಿ: ಕುರಿಯನೇರಲು!ಗುರುವು,ಧರೆಗೆ ಹೆಮ್ಮಳಿಯಕ್ಕು ಪರಿಪರಿಯ ಧಾನ್ಯ ಬೆಳೆಯಕ್ಕು ಪ್ರಜೆಗಳಿಗೆ ನೆರೆ ಹರುಷವಕ್ಕು ಸವ೯ಜ್ಞ.
    ಮೇಷರಾಶಿಗೆ ಗುರುವು ಕೂಡಿದರೆ ಭೂಮಿಯ ಮೇಲೆ ಬಹಳ ಮಳೆಯಾಗುವುದು.ನಾನಾ ಬಗೆಯ ಧಾನ್ಯಗಳು ಬೆಳೆಯುತ್ತವೆ.ಪ್ರಜೆಗಳು ಹರುಷದಿಂದ ಇರುವರು.
*ವೃಷಭರಾಶಿ: ವೃಷಭವನೇರಲು ಗುರುವು,ವಸುಧೆಯೊಳು ಮಳೆಯಕ್ಕು ಶಿಸು ಪಶು ಸ್ತ್ರೀ ಜಯವಕ್ಕು ಜನವೆಲ್ಲ ಮಿಸುನಿಯಂತಕ್ಕು ಸವ೯ಜ್ಞ.
   ಗುರುವು ವೃಷಭರಾಶಿಗೆ ಬಂದರೆ,ಧರೆಗೆ ಮಳೆಯಾಗುವುದು.ಮಕ್ಕಳಿಗೂ,ಮಹಿಳೆಯರಿಗೂ,ಪಶುಗಳಿಗೂ ಯಶ ಸಿಕ್ಕುವುದು.ಜನರೆಲ್ಲ ಹರುಷದಿಂದ ಇರುವುರು.
  *ಮಿಥುನರಾಶಿ: ಮಿಥುನರಾಶಿಗೆ ಗುರುವು ಬಂದರೆ, ಹೆಚ್ಚಾಗಿ ಬಡಿದಾಟಗಳು ಲೋಕದಲ್ಲಿ ಉಂಟಾಗುವವು.ಭೂಮಿಯಲ್ಲಿ ಬರಗಾಲ ಉಂಟಾಗಿ ಮನುಷ್ಯ-ಪಶುಗಳು ನಾಶವಾಗುವವು.
   ಕಕ೯ರಾಶಿ:ಏಡಿ ಏರಲು ಗುರುವು,ನೋಡೆ ಕಡೆ ಮಳೆಯಕ್ಕು ನಾಡೊಳಗೆಲ್ಲ ಬೆಳೆಸಕ್ಕು ಪ್ರಜೆಗಳು ಈಡೇರಲಕ್ಕು ಸವ೯ಜ್ಞ.
       ಕಕ೯ರಾಶಿಗೆ ಗುರುವು ಬಂದರೆ,ಹಿಂಗಾರಿ ಮಳೆಗಳು ಚೆನ್ನಾಗಿ ಆಗಿ ದೇಶದಲ್ಲಿ ಬೆಳೆಗಳು ಸಮೃದ್ಧವಾಗಿ ಎಲ್ಲರೂ ಸುಖವಾಗಿ ಬಾಳುವರು.
*ಸಿಂಹರಾಶಿ: ಸಿಂಗಕ್ಕೆ ಗುರು ಬರಲು,ಸಂಗರವು ಘನವಕ್ಕು ಅಂಗನೆಗೆ ಬಾಧೆ ಪಿರಿದಕ್ಕು ಕಡೆಯ ಮಳೆ ಹಿಂಗಾರಿಯಕ್ಕು ಸವ೯ಜ್ಞ.
     ಸಿಂಹರಾಶಿಗೆ ಗುರುವು ಬರಲು ದೇಶದಲ್ಲಿ ಭಯಂಕರ ಯುದ್ಧವಾಗುವುದಾಗಲಿ,ಕ್ಷೋಭೆಯುಂಟಾಗುವುದಾಗಲಿ ಸಂಭವಿಸುವುದು .ಸ್ತ್ರೀಯರಿಗೆ ಹೆಚ್ಚು ಬಾಧೆಯಾಗಿ ಕಡೆಯ ಹಿಂಗಾರಿ ಮಳೆ ಬರುವುದು.
   ಕನ್ಯಾರಾಶಿಗೆ ಗುರುವು ಬಂದರೆ ಚಿನ್ನದ ಮಳೆಯಾಗುವುದು.ತುಲಾರಾಶಿಗೆ ಗುರುವು ಬ಼ಂದರೆ ನೆಲೆಯಾಗಿ ಮಳೆಯಾಗುವುದು.ವೃಶ್ಚಿಕ ರಾಶಿಗೆ ಗುರುವು ಬಂದರೆ ಯುದ್ಧವುಂಟಾಗುವುದು.ಧನರಾಶಿಗೆ ಗುರುವು ಬಂದರೆ ಎಲ್ಲೆಡೆ ಸಂಕಟ,ಇಳುವವರಿಲ್ಲದಂತಾಗುವುದು.ಮಕರರಾಶಿಗೆ ಬಂದರೆ ಸಕಲ ಬೆಳೆ ಬೆಳೆದು ಸಂತೋಷದಿಂದ ಇರುವವರು.
  *ಕುಂಭರಾಶಿ:ಕುಂಭಕ್ಕೆ ಗುರು ಬರಲು,ತುಂಬುವವು ಕೆರೆಬಾಂವಿ ಅಂಬರದ ವರೆಗೆ ಬೆಳೆಯೆದ್ದು ಜಗದೊಳಗೆ ಸಂಭ್ರಮವಹುದು ಸವ೯ಜ್ಞ.
     ಕುಂಭರಾಶಿಗೆ ಗುರುವು ಬರಲು ಕೆರೆ-ಬಾವಿಗಳೆಲ್ಲ ತುಂಬಿ ಬೆಳೆಗಳೆಲ್ಲ ಹುಲುಸಾಗಿ ಬೆಳೆದು ಸಂತಸದಿಂದಿರುವವರು.
*ಮೀನರಾಶಿ: ಮೀನಕ್ಕೆ ಗುರು ಬರಲು,ಮಾನ ಖಂಡಗವಕ್ಕು ಕಾನನವೆಲ್ಲ ಬೆಳೆಯಕ್ಕು ಪ್ರಜೆಗಳಿಗೆ ಆನಂದವಕ್ಕು ಸವ೯ಜ್ಞ.
    ಮೀನರಾಶಿಗೆ ಗುರುವು ಬಂದರೆ,ಅಡವಿಯೊಳಗೆಲ್ಲ ಫಸಲು ಹುಲುಸಾಗಿ ಬೆಳೆದು ತೀರ ಅಗ್ಗದ ದರದಲ್ಲಿ ದವಸ-ಧಾನ್ಯಗಳು ಮಾರಾಟವಾಗುವವು.ಬಡವರು ಸಂತಸದಿಂದಿರುವವರು.
                                    (ಆಧಾರ)

-ಹನುಮಂತ.ಮ.ದೇಶಕುಲಕಣಿ೯.
ಸಾ.ಭೋಗೇನಾಗರಕೊಪ್ಪ-58119

ಶಾಲ್ಮಲಾ ಪರಿಮಳಾ

On Mar 24, 2015 8:02 AM, "hanamant desai" <hanamantmd47@gmail.com> wrote:
ಹರಿಯುತಿಹಳು ಇನ್ನೂ,ಆದರೆ ಅಥ೯ವಾಗುತ್ತಿಲ್ಲ ಜನಕ್ಕೆ;
ಅವಳು ಗುಪ್ತವಾಗಿ ಹರಿಯುತ್ತಿದ್ದರೂ ಅವಳಿಗೆ ಗುಪ್ತಗಾಮಿನಿಯ ಶಾಶ್ವತಪಟ್ಟ ಕಟ್ಟಲೇಕೋ ಹವಣಿಕೆ.
ಹಸಿರು ಸೀರೆಯ ಉಟ್ಟು ಬಳ್ಳಿ ಬಳೆಯ ತೊಟ್ಟು
ಇಕ್ಕೆಲಗಳಲ್ಲಿ ತೆವಳುತ್ತ ನೀರನ್ನೇ ನೀರಿಗೆ ಮಾಡಿ.
ನುಸುಳುತ,ಬಳಕುತ ಮುನ್ನುಗ್ಗೋ ನಾಶಿನಿ
ಭೋಗ೯ರೆಯುತ ಬರುವ ಭಾಮಿನಿ
ಈ ರೂಪಸಿಯ ರೂಪ ಅಸ್ವಾದಿಸಲು; ನಿಂತರೆ ಸಿಂಚನಸ್ನಾನ
ನೋಡುಗರ ಮನವನ್ನು ಮಂತ್ರಮುಗ್ಧಗೊಳಿಸುವ ಧ್ಯಾನ.
ಅವಳು ಶಾಲ್ಮಲೆ,ಅವಳು ಕರುನಾಡು ಸರಸ್ವತಿ ಪಾವನೆ
ಅವಳಿರವ ಕಲುಷಿತಗೊಳಿಸಿದ್ದೇವೆ ನಮ್ಮೊಳ ಮನಸಿನಂತೆ;
ಗತಕಾಲದ ಪುರಾಣ ಪ್ರಸಿದ್ಧೆ ಪ್ರಮೋದಿನಿ,
ಬಿಸಿಲಿಗೆ ಹೊಳಿಯುವ ಸಚೇತನಿ,ಶಾಲಿನಿ.

    (ಸ್ವರಚಿತ)
-ಹನುಮಂತ.ಮ.ದೇಶಕುಲಕಣಿ೯
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಶನಿವಾರ, ಮಾರ್ಚ್ 14, 2015

ಭಾರತದ ಮಲ್ಬರಿ ನೋನಿಫಲ.

     ನೋನಿ ಹಣ್ಣು:ಮೊರಿಂಡಾ ಶಿಟ್ರೋ ಪೋಲಿಯ ಜಾತಿಗೆ ಸೇರಿದ ಹಣ್ಣು. ಅಮೆರಿಕದಲ್ಲಿ ನೋನಿ ಪಾನೀಯವನ್ನು ಆಹಾರ ಸೇವನೆಯ ನಂತರ ಆರೋಗ್ಯಕರ ಪೇಯವಾಗಿ ಉಪಯೋಗಿಸಿಲಾಗುತ್ತದೆ.ಡಾ.ನೈಲ್ ಸೋಲೊಮನ್ ಎಂಬಾತ ಇಪ್ಪತ್ತನೇ ಶತಮಾನದ ಕೊನೆಯಲ್ಲಿ ಇದರಲ್ಲಿ ಔಷಧೀಯ ಗುಣ, ಪೌಷ್ಟಿಕಾಂಷ್ ಮತ್ತು ರೋಗನಿರೋಧಕ ಶಕ್ತಿ ಇರುವುದನ್ನು ಪತ್ತೆ ಹಚ್ಚಿದ ಬಗ್ಗೆ ದಾಖಲೆಗಳಿವೆ. ನೋನಿಯನ್ನು "ಭಾರತದ ಮಲ್ಬರಿ ಎಂದು ಕರೆಯುತ್ತಾರೆ.ಪೊದೆಯ ರೂಪದ ಈ ಗಿಡ, ಸಾಮಾನ್ಯವಾಗಿ ಹತ್ತು ಅಡಿ ಎತ್ತರಕ್ಕೆ ಬೆಳೆಯುತ್ತದೆ. ಬಿಳಿ ಹೂ ಬಿಟ್ಟ ನಂತರ ಕಾಯಿಯಾಗುತ್ತದೆ. ನೋನಿ ಹಣ್ಣು ಮೂರರಿಂದ ನಾಲ್ಕು ಡಯಾಮೀಟರಿನಷ್ಟು ದೊಡ್ದದಾಗಿರುತ್ತದೆ. ಬಹೂಪಯೋಗಿ ಹಾಗೂ ನೋವು ನಿವಾರಕ ನೋನಿ ಹಣ್ಣು. ನೋನಿ ಎಂಬ ಕಾಡು ಹಣ್ಣಿನ ಮೇಲೆ ಇಡೀ ಜಗತ್ತಿನ ಕಣ್ಣು ಬಿದ್ದಿದೆ. ವಿಶ್ವದ 20 ದೇಶಗಳ 44 ವಿಶ್ವ ವಿದ್ಯಾಲಯಗಳಲ್ಲಿ  ಔಷಧೀಯ ಗುಣಗಳ ಬಗೆಗೆ  ಸಂಶೋಧನೆ ನಡೆದಿದೆ. ನೋನಿಯ ಮಹತ್ವದ ಬಗೆಗೆ ಅಧ್ಯಯನ ನಡೆಸಿದ ಅಮೇರಿಕಾದ ಮೂವರು ವಿಜ್ಞಾನಿಗಳಾದ ಡಾ|| ರಾಬರ್ಟ್. ಎಫ್.ಫರ್ಟಗಾಟ್, ಡಾ||ಲೂಯಿಸ್ ಜೆ. ಇಗ್ನಾರೊ ಹಾಗೂ ಡಾ||ಫೆಂದ ಮುರಾದ್‌ರಿಗೆ 1998ರಲ್ಲಿ ನೋಬಲ್ ಪುರಸ್ಕಾರ ದೊರಕಿದೆ. ವಿಜ್ಞಾನಿಗಳು ನೋನಿಯಲ್ಲಿ ಕಂಡಿದ್ದು  150 ಸಸ್ಯಪೋಷಕಾಂಶಗಳು! ಮನುಷ್ಯ ಜೀವಕೋಶಗಳ ಆರೋಗ್ಯ ಸಂರಕ್ಷಣೆಗೆ ಅತ್ಯಗತ್ಯವಾದ ‘ನೈಟ್ರಿಕ್ ಆಕ್ಸೈಡ್‘ ಇದರಲ್ಲಿದೆ. . ಅಚುಕ,ಆಯುಷ, ತಗಟೆಮರ, ಕಂಬಲ ಪಂಡು, ವೆನ್ನುವ, ಬರ್ತುಂಡಿ ಹೀಗೆ ದೇಶಾದ್ಯಂತ ಮೂಲಿಕಾ ಪಂಡಿತರಿಗೆ ಪರಿಚಿತವಾಗಿದೆ. ನೋನಿ ನಮ್ಮ ನೆಲದ ಅಮೃತಫಲ.
 ಉಪಯೋಗ:
 ನೋನಿ ರಸವನ್ನು ಗಂಟು ನೋವು, ಕೈ ಮಡಚುವ ತೊಂದರೆ, ಕಾಲು ನೋವು ಮತ್ತು ಮಂಡಿ ನೋವಿಗೆ ಪರಿಹಾರವಾಗಿ ಉಪಯೋಗಿಸುತ್ತಿದ್ದಾರೆ. ಉಸಿರಾಟದ ಸಮಸ್ಯೆ ನಿವಾರಣಿಗೂ ಇದು ಉಪಯುಕ್ತ. ಮುರಿದ ಎಲುಬುಗಳನ್ನು ಮರುಜೋಡಿಸಲು ಹಾಗೂ ಡಯಾಬಿಟಸ, ಏರು ರಕ್ತದೊತ್ತಡ ನಿಯಂತ್ರಣಕ್ಕೂ ಬಳಕೆಯಾಗುತ್ತಿದೆ. ಮಲಬದ್ಧತೆಯ ಸಮಸ್ಯೆ ಇರುವವರೂ ನೋನಿ ರಸ ಸೇವಿಸಬಹುದು.ಅನೇಕ ವಿಶ್ವವಿದ್ಯಾನಿಲಯಗಳು ಸಂಶೋಧನೆ ಸಮೀಕ್ಷೆಗಳ ಪ್ರಕಾರ, ನೋನಿಯ ರಸ ಆರೋಗ್ಯವರ್ಧಕ ಎಂಬುದು ದ್ರಢಪಟ್ಟಿದೆ. ಕೀಲು ನೋವು, ಹ್ರದಯ ಸಂಬಂಧ ಕಾಯಿಲೆ, ಖಿನ್ನತೆ ಹಾಗೂ ನಿದ್ರಾಹೀನತೆಯಿಂದ ತೊಂದರೆ ಅನುಭವಿಸುತ್ತಿರುವವರು ಇದರ ಮೊರೆಹೋಗಬಹುದು.
    ನೋನಿಯನ್ನು ಔಷಧಿಯಾಗಿ ಸೇವಿಸಬಯಸುವವರು ಮೊದಲ ಮೂರು ದಿನ ಬೆಳಗಿನ ಉಪಹಾರಕ್ಕೆ ಮುಂಚಿತವಾಗಿ ಒಂದು ಟೀ ಸ್ಪೂನ್ ಸೇವಿಸಬೇಕು. ಒಂದು ತಿಂಗಳ ಸೇವನೆಯ ನಂತರ ಉಪಹಾರಕ್ಕೆ ಮುಂಚೆ ಎರಡೂ ಸ್ಪೂನ್, ಮಧ್ಯಾಹ್ನ ಊಟಕ್ಕಿಂತ ಮುಂಚೆ ಎರಡೂ ಸ್ಪೂನ್ ರಸ ಸೇವಿಸಬೇಕು. ನೋನಿಯ ಎಲೆಯೂ ಉಪಯುಕ್ತ. ಇದರ ಎಲೆಯಿಂದ ತಗೆದ ರಸ ಅನೇಕ ರೀತಿಯ ಚರ್ಮ ರೋಗಗಳನ್ನು ನಿವಾರಿಸಿದೆ. ಎಲೆಯ ಕಷಾಯ ಜ್ವರ ನಿವಾರಕ
      ನೋನಿ ಗಿಡದ ಎಲೆ, ತೊಗಟೆ, ಬೇರು ಮತ್ತು ಹಣ್ಣನ್ನು ವಿವಿಧ ರೋಗಗಳ ನಿವಾರಣೆಗೆ ಬಳಸಬಹುದಾಗಿದೆ. ಆದರೆ ದುರ್ನಾತ ಬೀರುವ ಬಲಿತ ಹಣ್ಣಿನ ರಸವನ್ನು ಹೆಚ್ಚಾಗಿ ಬಳಸಲಾಗುತ್ತದೆ.ಪ್ರಯೋಜನಗಳು ಬೆನ್ನು ಮತ್ತು ಗಂಟು ನೋವು ಇರುವವರು ಸೇವಿಸಿದರೆ ಕ್ರಮೇಣ ಅದು ವಾಸಿಯಾಗುತ್ತದೆ.ಡಯಾಬಿಟಿಸ್, ರಕ್ತದೊತ್ತಡ ಮತ್ತು ಉಸಿರಾಟದ ಸಮಸ್ಯೆ ಇರುವವರು ವೈದ್ಯರ ಸಲಹೆಯೊಂದಿಗೆ ಬಳಸಿ ಗುಣಮುಖರಾಗಬಹುದು.ತಜ್ಞರ ಸಲಹೆಯೊಂದಿಗೆ ಕ್ರಮಬದ್ಧವಾಗಿ ದೀರ್ಘಕಾಲ ನೋನಿ ರಸ ಸೇವಿಸಿ ಮಲಬದ್ಧತೆಯ ಸಮಸ್ಯೆ ಪರಿಹರಿಸಿಕೊಳ್ಳಬಹುದು. ರಸ ಸೇವಿಸುವ ಕ್ರಮನೋನಿ ಹಣ್ಣಿನ ರಸವಿರಲಿ ಅಥವಾ ಎಲೆಯಿಂದ ತೆಗೆದ ರಸವಿರಲಿ, ಔಷಧವಾಗಿ ಸೇವಿಸಬಯಸುವವರು ಬೆಳಗ್ಗೆ 1 ಟೀ ಸ್ಪೂನ್ ಮತ್ತು ಮಧ್ಯಾಹ್ನ 2 ಟೀ ಸ್ಪೂನ್ ಖಾಲಿ ಹೊಟ್ಟೆಗೆ ಸೇವಿಸಬಹುದು. ಮಾರುಕಟ್ಟೆಯಲ್ಲೂ ನೋನಿ ರಸ ದೊರೆಯುತ್ತದೆ. ದೇಹದ ಸ್ಥಿತಿಗೆ ಅನುಗುಣವಾಗಿ ವೈದ್ಯರ ಸಲಹೆ ಪಡೆದು ಸೇವಿಸುವುದು ಸೂಕ್ತ ನೋನಿ ಗಿಡದ ಎಲೆಯನ್ನು ಬಳಸಿ ತಯಾರಿಸಿದ ಕಷಾಯ ದೇಹದ ತಾಪವನ್ನು ಶಮನಗೊಳಿಸುತ್ತದೆ. ಸದ್ಯಕ್ಕೆ ನೋನಿ ರಸ ಬಳಸಿ ಕ್ಯಾನ್ಸರ್, ಏಡ್ಸ್‌ನಂತಹ ರೋಗಗಳನ್ನು ನಿಯಂತ್ರಿಸುವ ಕುರಿತು ಸಂಶೋಧನೆಗಳು ನಡೆಯುತ್ತಿವೆ.
  -ಹನುಮಂತ. ಮ.ದೇಶಕುಲಕಣಿ೯
 ಸಾ.ಭೋಗೇನಾಗರಕೊಪ್ಪ-581196
 ತಾ.ಕಲಘಟಗಿ.ಜಿ.ಧಾರವಾಡ
 ಮೊ.ನಂ.9731741397

ಭಾರತದ ಮಲ್ಬರಿ ನೋನಿಫಲ

ಗುರುವಾರ, ಮಾರ್ಚ್ 12, 2015

ಶಹೀದ್ ಡೇ ಗೆ 84 ವಷ೯..

ಇಂದಿಗೆ ಸರಿಯಾಗಿ 84 ವರ್ಷಗಳ ಹಿಂದೆ ಆ ಮೂವರೂ ಯುವಕರು “ಇನ್ಕಿಲಾಬ್ ಜಿಂದಾಬಾದ್, ಭಾರತ್ ಮಾತಾ ಕೀ ಜೈ, ವಂದೇ ಮಾತರಂ” ಎಂದು ಉಚ್ಛ ಕಂಠದಿಂದ ಘೋಷಿಸುತ್ತಾ, ಉರುಳನ್ನು ಚುಂಬಿಸಿ ಕೊರಳಿಗೆ ಹಾಕಿಕೊಂಡ ಈ ದಿನ.       23 ಮಾರ್ಚ್ 1931ಲಾಹೋರ್ ಸೆಂಟ್ರಲ್ ಜೈಲಿನ ಎದುರು ಸುಮಾರು 25 ಸಾವಿರಕ್ಕೂ ಮಿಕ್ಕಿದ ಜನಪ್ರವಾಹ. ಕ್ರಾಂತಿಕಾರಿಗಳಾದ ಭಗತ್‍ಸಿಂಗ್ ರಾಜಗುರು, ಸುಖದೇವ್‍ರಿಗೆ ಬ್ರಿಟೀಷ್ ಸರ್ಕಾರ ವಿಧಿಸಿದ್ದ ಫಾಸಿ ಶಿಕ್ಷೆಯನ್ನು ರದ್ದುಗೊಳಿಸಬೇಕೆಂಬುದು ಅವರ ಬೇಡಿಕೆಯಾಗಿತ್ತು. ಅದಕ್ಕಾಗಿಯೇ ಭಾರತ ದೇಶಾದ್ಯಂತ ತಿಂಗಳಿಂದಲೇ ಹರತಾಳ, ಮೆರವಣಿಗೆ, ರೈಲುತಡೆ, ಪ್ರತಿಭಟನೆ, ಸರ್ಕಾರಿ ಕೆಲಸ ಕಾರ್ಯಗಳಿಗೆ ಅಡ್ಡಿ, ಧರಣಿ, ಉಪವಾಸ ಸತ್ಯಾಗ್ರಹಗಳು ನಡೆಯುತ್ತಿದ್ದವು. ಇಡೀ ದೇಶ ಹೊತ್ತಿ ಉರಿಯುತ್ತಿತ್ತು. ಇತ್ತ ಬ್ರಿಟೀಷ್ ಸರ್ಕಾರ ಈ ಕ್ರಾಂತಿಕಾರಿಗಳು ಬದುಕಿದ್ದಷ್ಟು ದಿನ ನಾವು ನೆಮ್ಮದಿಯಿಂದ ಇರಲು ಆಗುವುದಿಲ್ಲವೆಂದರಿತು, ಆದಷ್ಟು ಶೀಘ್ರದಲ್ಲಿ ಶಿಕ್ಷೆಯನ್ನು ಜಾರಿಗೊಳಿಸಿಬಿಡಬೇಕೆಂದು ತೀರ್ಮಾನಿಸಿತು. ದೇಶಾದ್ಯಂತ ತಮ್ಮ ವಿರುದ್ಧ ಏಳುತ್ತಿದ್ದ ಪ್ರಬಲ ವಿರೋಧೀ ಅಲೆಯನ್ನು ನೋಡಿ ಅದುರಿಹೋದ ಬ್ರಿಟೀಷ್ ಸರ್ಕಾರ ಮಾರ್ಚ್ 24 ರಂದು ನೀಡಬೇಕಾಗಿದ್ದ ಗಲ್ಲು ಶಿಕ್ಷೆಯನ್ನು ಒಂದು ದಿನ ಮೊದಲೇ ಅಂದರೆ ಮಾರ್ಚ್ 23ನೇ ತಾರೀಖಿನಂದೇ ನೀಡುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಅದಕ್ಕಾಗಿ ಸಕಲ ಸಿದ್ಧತೆಗಳೂ ನಡೆದು ಹೋದವು.
    ಕ್ರಾಂತಿಯ ಕಿಡಿಗಳುಭಗತ್‍ಸಿಂಗ್, ರಾಜಗುರು, ಸುಖದೇವ್. ಮೂವರೂ ಚಿಕ್ಕಂದಿನಲ್ಲೇ ದೇಶಸೇವೆಯ ಕಾರ್ಯಕ್ಕಿಳಿದವರು. ಕ್ರಾಂತಿಕಾರಿಗಳು ಮತ್ತು ಉಜ್ವಲ ದೇಶಭಕ್ತರು. ಸೈಮನ್ ಕಮಿಷನ್‍ನ ಭಾರತ ಭೇಟಿಯನ್ನು ವಿರೋಧಿಸಿ “ಸೈಮನ್ ಗೋ ಬ್ಯಾಕ್” ಎಂದು ಕೂಗುತ್ತಾ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಇವರನ್ನು ಬ್ರಿಟೀಷರು ಕ್ರೂರವಾಗಿ ನಡೆಸಿಕೊಂಡರು. ಇದೇ ಸಂದರ್ಭದಲ್ಲಿ ಭಗತ್‍ಸಿಂಗ್ ಮತ್ತು ಗೆಳೆಯರ ಗುರುಗಳಾದ ‘ಪಂಜಾಬಿನ ಕೇಸರಿ’ ಎಂದೇ ಖ್ಯಾತರಾದ ಲಾಲಾ ಲಜಪತರಾಯರನ್ನು ಬ್ರಿಟೀಷ್ ಅಧಿಕಾರಿ ಸ್ಯಾಂಡರ್ಸ್ ಲಾಠಿಯಿಂದ ಬಡಿದು ಕ್ರೂರವಾಗಿ ಕೊಂದುಹಾಕಿದ. ಅದಕ್ಕಾಗಿಯೇ ಮೂವರೂ ಸ್ಯಾಂಡರ್ಸ್‍ನನ್ನು ಪೋಲೀಸ್ ಠಾಣೆಯ ಎದುರೇ ಗುಂಡಿಟ್ಟು ಕೊಂದು ಸೇಡು ತೀರಿಸಿಕೊಂಡರು.
        ದೇಶಭಕ್ತರ ಮೈ ಮುಟ್ಟಿದವನನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸುವುದರ ಜೊತೆಗೆ ಮತ್ತು ಭಾರತೀಯರ ಸ್ವಾಭಿಮಾನ, ಘನತೆ ಗೌರವಗಳನ್ನು ಎತ್ತಿ ಹಿಡಿದರು. ಆಜಾದ್, ಬಿಸ್ಮಿಲ್, ಮುಂತಾದ ಶ್ರೇಷ್ಠ ಕ್ರಾಂತಿಕಾರಿಗಳ ಜೊತೆ ಸೇರಿ ಕಾಕೋರಿಯಲ್ಲಿ ಬ್ರಿಟೀಷರು ಹೊತ್ತೊಯ್ಯುತ್ತಿದ್ದ ಹಣವನ್ನು ಕ್ರಾಂತಿಕಾರ್ಯಕ್ಕಾಗಿ ದರೋಡೆ ಮಾಡಿದ್ದರು. ಭಗತ್‍ಸಿಂಗ್ ಅಂತೂ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಯಾರಿಗೂ ಅಪಾಯವಾಗದ ರೀತಿಯಲ್ಲಿ ಅಸೆಂಬ್ಲಿಯಲ್ಲಿ ಬಾಂಬ್ ಸ್ಫೋಟ ಮಾಡಿದ್ದ. ಇದರಿಂದಾಗಿ ಭಾರತೀಯರ ಸ್ವಾತಂತ್ರ್ಯದ ಕೂಗು ಇಡೀ ಪ್ರಪಂಚಕ್ಕೆ ಕೇಳಿಸಿತ್ತು. ಬ್ರಿಟೀಷ್ ನ್ಯಾಯಾಲಯ ಈ ಎಲ್ಲಾ ದೇಶಭಕ್ತಿಯ ಅಪರಾಧಗಳಿಗಾಗಿ ಈ ಮೂವರಿಗೂ ಮರಣದಂಡನೆಯನ್ನು ವಿಧಿಸಿತ್ತು. ಆದರೆ ಭಗತ್‍ಸಿಂಗ್ ತನ್ನ ವಿಚಾರಗಳನ್ನು ದೇಶವಾಸಿಗಳಿಗೆ ಮುಟ್ಟಿಸಲು ನ್ಯಾಯಾಲಯವನ್ನೇ ವೇದಿಕೆಯನ್ನಾಗಿ ಮಾಡಿಕೊಂಡಿದ್ದ.
       ಪತ್ರಿಕೆಗಳು ಇವನ ಮಾತುಗಳನ್ನು ಮುಖಪುಟದಲ್ಲಿ ಪ್ರಕಟಿಸತೊಡಗಿದವು. ಇದರಿಂದಾಗಿ ಲಕ್ಷಾಂತರ ಜನರು ಭಗತ್‍ಸಿಂಗ್‍ನನ್ನು ತಮ್ಮ ಆದರ್ಶನಾಯಕನಾಗಿ ಸ್ವೀಕರಿಸಿದರು. ಭಾರತ ಮಾತೆಯನ್ನು ಬಂಧಮುಕ್ತಗೊಳಿಸುವ ಸಲುವಾಗಿ ಸಾವಿರಾರು ಯುವಕ ಯುವತಿಯರು ಕ್ರಾಂತಿ ಕಾರ್ಯಕ್ಕೆ ಧುಮುಕಿದರು. ಆದ್ದರಿಂದಲೇ ಭಗತ್‍ಸಿಂಗ್, ರಾಜಗುರು, ಸುಖದೇವರಿಗೆ ನೀಡಲಾಗಿದ್ದ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಅಷ್ಟು ಜನ ಲಾಹೋರ್ ಸೆಂಟ್ರಲ್ ಜೈಲಿನ ಎದುರು ಜಮಾಯಿಸಿದ್ದರು.ಗುಂಡು ಹೊಡೆದು ಸಾಯಿಸಿಇತ್ತ ಜೈಲಿನ ಒಳಗೆ ಜೈಲರನು, ಶಿಕ್ಷೆಯು ಹಿಂದೂಡಲ್ಪಟ್ಟಿರುವ ವಿಷಯವನ್ನು ಮೂವರೂ ಕ್ರಾಂತಿಕಾರಿಗಳಿಗೂ ತಿಳಿಸಿದ. ಸಾಯಲು ಸಿದ್ಧರಾಗುವಂತೆ ಸೂಚಿಸಿದ. ಆ ಸಮಯದಲ್ಲೂ ಪುಸ್ತಕ ಓದುತ್ತಿದ್ದ ಭಗತ್‍ಸಿಂಗ್ ಬೇರೆ ಪ್ರಶ್ನೆಯನ್ನೂ ಕೇಳದೇ ನಗು ನಗುತ್ತಾ ಎದ್ದು ನಿಂತು ಫಾಸಿ ಶಿಕ್ಷೆಗೆ ತಯಾರಾಗಲು ಸೆಲ್‍ನಿಂದ ಹೊರಬಂದ. ಅವನನ್ನು ರಾಜಗುರು ಸುಖದೇವರು ಕೂಡಿಕೊಂಡರು. ಮೂವರ ಮುಖದಲ್ಲೂ ಅಪಾರ ಸಂತೋಷ. ಭಾರತ ಮಾತೆಯ ಅಡಿದಾವರೆಗಳಲ್ಲಿ ತಮ್ಮ ಪ್ರಾಣ ಪುಷ್ಪಗಳನ್ನು ಅರ್ಪಿಸಿ ಹುತಾತ್ಮರಾಗುವ ಈ ಸುಸಂದರ್ಭಕ್ಕಾಗಿ ಬಹುದಿನಗಳಿಂದ ಕಾಯುತ್ತಿದ್ದವರಂತೆ ಮೂವರು ನಿರ್ಭಯವಾಗಿ ನಿಂತಿದ್ದರು. ಸಾಯುವ ಘಳಿಗೆ ಹತ್ತಿರ ಬಂದಿತೆಂದು ಹೆದರಿ ಬೆಚ್ಚುವರೆಂದು ತಿಳಿದಿದ್ದ ಜೈಲರನಿಗೆ ಇದು ವಿಚಿತ್ರವೆನಿಸಿತು. ಸಾಯುವವರ ದೈರ್ಯವನ್ನು ನೋಡಿ ಜೈಲರನಿಗೇ ನಡುಕ ಹುಟ್ಟಿತ್ತು!ಜೈಲರನು ಮೂವರ ಹತ್ತಿರ ಬಂದು “ನಿಮ್ಮ ಕೊನೇ ಆಸೆ ಏನಾದರೂ ಇದ್ದರೆ ಹೇಳಿ” ಎಂದ. ಮೂವರೂ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡರು. ನಸುನಕ್ಕು “ಜೈಲರ್ ಸಾಬ್, ನಮ್ಮ ಮೊದಲ ಆಸೆ ಕೊನೇ ಆಸೆ ಎರಡೂ ಒಂದೇ. ಅದು ನಮ್ಮ ತಾಯಿನಾಡಿಗೆ ಸ್ವಾತಂತ್ರ್ಯ ಕೊಡಿಸುವುದು” ಎಂದರು. ಆಗ ಜೈಲರನು “ನೋಡಿ ಅದು ನಮ್ಮ ಕೈಲಿಲ್ಲ. ಬೇರೆ ಏನಾದರೂ ಕೇಳಿ” ಎಂದನು. ಆಗ ಭಗತ್‍ಸಿಂಗ್ ಹೀಗೆಂದನು. “ಜೈಲರ್ ಸಾಬ್, ನಿಮ್ಮ ನ್ಯಾಯಾಲಯದ ಆದೇಶದ ಪ್ರಕಾರ ನಮ್ಮ ಮೇಲೆ ಯುದ್ಧ ಸಾರಿದ ಆರೋಪವಿದೆ. ಆದ್ದರಿಂದ ನಾವು ಯುದ್ಧ ಖೈದಿಗಳಾಗಿದ್ದೇವೆ. ನಮ್ಮನ್ನು ಯುದ್ಧ ಖೈದಿಗಳಂತೆ ನಡೆಸಿಕೊಳ್ಳಬೇಕೆಂದು ನಾವು ಅಪೇಕ್ಷಿಸುತ್ತೇವೆ. ನಮ್ಮನ್ನು ಯುದ್ಧ ಖೈದಿಗಳಂತೆ ಗುಂಡು ಹೊಡೆದು ಸಾಯಿಸಬೇಕೆಂಬುದು ನಮ್ಮ ಅಪೇಕ್ಷೆಯಾಗಿದೆ. ನಮ್ಮನ್ನು ನೇಣು ಹಾಕಬೇಡಿ ಗುಂಡು ಹೊಡೆದು ಸಾಯಿಸಿ. ನಾವು ಈಗಾಗಲೇ ಪಂಜಾಬ್ ಗವರ್ನರ್‍ಗೆ ಬರೆದಿರುವ ಪತ್ರದಲ್ಲಿ ನಮಗೆ ಗುಂಡು ಹೊಡೆದು ಸಾಯಿಸಲು ಸೈನ್ಯದ ತುಕಡಿಯೊಂದನ್ನು ಕಳುಹಿಸುವಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದೇವೆ” ಎಂದನು.
    ಅಬ್ಭಾ! ಸಾಯುವ ಕೊನೇ ಕ್ಷಣದಲ್ಲೂ ಎಂಥಾ ಧೈರ್ಯ! ಇಂಥಾ ಪರಿಸ್ಥಿತಿಯಲ್ಲೂ ಈ ಪರಿಯ ವೀರವಾಣಿ.ಅಸ್ಪೃಶ್ಯತೆ ಒಂದು ರಾಷ್ಟ್ರೀಯ ಕಳಂಕ ಜೈಲರ್ ಒಂದು ಕ್ಷಣ ಮೂಕವಿಸ್ಮಿತನಾದ. ಭಗತ್‍ಸಿಂಗ್ ಮತ್ತು ಸಂಗಡಿಗರ ಈ ಮಾತು ಕೇಳಿ ಜೈಲರನ ಗುಂಡಿಗೆಯೇ ಅದುರಿಹೋಗಿತ್ತು. ಅವನು ಇನ್ನೇನನ್ನಾದರೂ ಕೇಳುವಂತೆ ಮನವೊಲಿಸಲು ಪ್ರಯತ್ನಿಸಿದ. ಆಗ ಭಗತ್‍ಸಿಂಗ್ ತನ್ನ ತಾಯಿಯ ಕೈಯಿಂದ ಮಾಡಿದ ರೊಟ್ಟಿಯನ್ನು ತಿನ್ನಬೇಕೆಂಬ ಆಸೆಯನ್ನು ಹೇಳಿಕೊಂಡ. ಆಗ ಜೈಲರ್ “ನಿಮಗೆ ಕುಟುಂಬದವರನ್ನು ನೋಡುವ ಅವಕಾಶವನ್ನು ನಿರಾಕರಿಸಲಾಗಿದೆ. ಅಂದ ಮೇಲೆ ಅವರು ಮಾಡಿಕೊಟ್ಟ ರೊಟ್ಟಿಯನ್ನು ನೀನು ತಿನ್ನುವುದಾದರೂ ಹೇಗೆ?” ಎಂದು ಕೇಳಿದ. ಭಗತ್‍ಸಿಂಗ್ ನಸುನಗುತ್ತಾ “ಜೈಲರ್ ಸಾಬ್, ಅದು ನನಗೆ ಗೊತ್ತಿದೆ. ನಾನು ಹೇಳಿದ್ದು ನನ್ನ ಹೆತ್ತ ತಾಯಿಯ ಬಗ್ಗೆ ಅಲ್ಲ. ಈ ಜೈಲಿನ ಸಫಾಯಿ ಕರ್ಮಾಚಾರಿ ತೇಲೂರಾಮನ ಬಗ್ಗೆ. ಬಾಲ್ಯದಲ್ಲಿ ನನ್ನ ತಾಯಿ ಹೇಗೆ ನನ್ನ ಹೊಲಸನ್ನು ಸ್ವಚ್ಛಗೊಳಿಸುತ್ತಿದ್ದಳೋ ಅದೇ ರೀತಿ ಇಷ್ಟು ದಿನ ಈ ಜೈಲಿನಲ್ಲಿ ತೇಲೂರಾಮನೂ ಸ್ವಚ್ಛಗೊಳಿಸುತ್ತಿದ್ದಾನೆ. ಆದ್ದರಿಂದ ಈತ ನನ್ನ ತಾಯಿಯ ಸಮಾನ” ಎಂದು ಹೇಳಿ ತೇಲೂರಾಮ ಮಾಡಿಕೊಟ್ಟ ರೊಟ್ಟಿಯನ್ನು ಅತ್ಯಂತ ಪ್ರೀತಿಯಿಂದ ತಿಂದನು.ವಾಹ್..! ತನ್ನ ಕ್ರಾಂತಿ ಕಾರ್ಯದ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದ ಭಗತ್‍ಸಿಂಗ್, ಭಾರತದಲ್ಲಿ ಬೇರು ಬಿಟ್ಟಿದ್ದ ಅಸ್ಪøಶ್ಯತೆ, ಜಾತಿಪದ್ಧತಿಗಳನ್ನು ನಿರ್ಮೂಲನೆ ಮಾಡುವುದಕ್ಕಾಗಿ ಇತರರಿಗೆ ಎಂತಹಾ ಉತ್ತಮ ಮೇಲ್ಪಂಕ್ತಿಯನ್ನು ಹಾಕಿಕೊಟ್ಟ. ಭಗತ್‍ಸಿಂಗ್ ಸಾಮಾಜಿಕ ಸಮಾನತೆಯ ಬಗ್ಗೆ ಎಂಥಾ ದೂರದೃಷ್ಟಿ ಹೊಂದಿದ್ದನೆಂಬುದು ಈ ಘಟನೆಯಿಂದ ನಮಗೆ ತಿಳಿಯುತ್ತದೆ.ಜೈಲರನು ಮೂವರಿಗೂ ಸಾಯುವ ಮೊದಲು ಸ್ನಾನ ಮಾಡಿಕೊಂಡು ಬರುವಂತೆ ಸೂಚಿಸಿದ. ತಾಯಿ ಭಾರತಿಯ ಚರಣ ಕಮಲಗಳಿಗೆ ಅರ್ಪಿತವಾಗಲಿದ್ದ ತಮ್ಮ ದೇಹಕುಸುಮಗಳನ್ನು ಶುಭ್ರಗೊಳಿಸುವುದಕ್ಕಾಗಿ ಮೂವರೂ ಸ್ನಾನ ಗೃಹದತ್ತ ನಡೆದರು.
    ಸ್ನಾನವನ್ನು ಮುಗಿಸಿ ಶುಭ್ರವಾದ ಕಪ್ಪು ಬಟ್ಟೆಗಳನ್ನು ಧರಿಸಿದರು. ಮೂವರೂ ಕ್ರಾಂತಿಕಾರಿ ಗೆಳೆಯರು ಒಬ್ಬರನ್ನೊಬ್ಬರು ಅಪ್ಪಿಕೊಂಡರು. ನಂತರ ಒಬ್ಬರ ಹೆಗಲ ಮೇಲೊಬ್ಬರು ಕೈ ಹಾಕಿಕೊಂಡು, ಕ್ರಾಂತಿಕಾರಿ ರಾಮಪ್ರಸಾದ ಬಿಸ್ಮಿಲ್‍ರು ಬರೆದಿದ್ದ “ಮೇರಾ ರಂಗ್ ದೇ ಬಸಂತಿ ಚೋಲಾ” ಗೀತೆಯನ್ನು ಹಾಡುತ್ತಾ ಸಂತೋಷದಿಂದ ಬಲಿವೇದಿಕೆಯ ಕಡೆ ಧೀರೋದ್ಧಾತ್ತ ಹೆಜ್ಜೆ ಹಾಕತೊಡಗಿದರು. ಎಳ್ಳಷ್ಟು ಸಾವಿನ ಭಯವಿಲ್ಲದೇ ನೇಣುಗಂಬದತ್ತ ಸಾಗುತ್ತಿರುವ ಕ್ರಾಂತಿವೀರರನ್ನು ಕಂಡು ಬ್ರಿಟೀಷ್ ಅಧಿಕಾರಿಗಳಿಗೇ ಭಯವಾಗುತ್ತಿತ್ತು. ಇದನ್ನು ಗಮನಿಸಿದ ಭಗತ್‍ಸಿಂಗ್, ಅವರನ್ನು ಕುರಿತು “ನೀವು ಅದೃಷ್ಟವಂತರು” ಎಂದ. ಅಧಿಕಾರಿಗಳಿಗೆ ಗರಬಡಿದಂತಾಯಿತು.“ಸಾಯುವ ಕೊನೆ ಕ್ಷಣಗಳನ್ನು ಏಣಿಸುತ್ತಿರುವ ಈತ ನಮ್ಮ ಅದೃಷ್ಟದ ಬಗ್ಗೆ ಮಾತನಾಡುತ್ತಿದ್ದಾನಲ್ಲ!” ಎಂದು ಅಶ್ಚರ್ಯಪಟ್ಟರು. ಭಗತ್‍ಸಿಂಗ್ ಮುಂದುವರೆದು ಹೀಗೆ ಹೇಳಿದ. “ಅಧಿಕಾರಿಗಳೇ, ಜೈಲಿನ ಹೊರಗಡೆ ನಮಗಾಗಿ ಕಾಯುತ್ತಿರುವ ಸಹಸ್ರಾರು ಜನರಿದ್ದಾರೆ. ಹುತಾತ್ಮರಾಗಲಿರುವ ನಮ್ಮನ್ನು ನೋಡಿ ಕಣ್ತುಂಬಿಕೊಳ್ಳಲು ದೇಶಾದ್ಯಂತ ಕೋಟ್ಯಾಂತರ ಜನ ದೇಶಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಅವರಾರಿಗೂ ಭಾರತದ ಈ ಕ್ರಾಂತಿಕಾರಿಗಳು ತಮ್ಮ ಘನ ಉದ್ದೇಶ ಪ್ರಾಪ್ತಿಗಾಗಿ ಸಾವನ್ನೂ ಕೂಡಾ ಅತ್ಯಂತ ಸಂತೋಷದಿಂದ ಬಿಗಿದಪ್ಪಿಕೊಳ್ಳುವುದನ್ನು ವೀಕ್ಷಿಸುವ ಭಾಗ್ಯವಿಲ್ಲ. ಅವರಿಗೆ ಇಲ್ಲದ ಭಾಗ್ಯ ನಿಮಗೆ ಮಾತ್ರ ಲಭಿಸಿದೆ. ಆದ್ದರಿಂದ ನೀವೇ ಭಾಗ್ಯವಂತರು” ಎಂದ. ಅಧಿಕಾರಿಗಳಿಗೆ ಬಾಯಿಂದ ಮಾತೇ ಹೊರಡಲಿಲ್ಲ.
     ಭಾರತ್ ಮಾತಾ ಕೀ ಜೈಮೂವರೂ ಕ್ರಾಂತಿಕಾರಿಗಳು ಲಗುಬಗೆಯಿಂದ ಬಲಿಗಂಬದ ಮೆಟ್ಟಿಲುಗಳನ್ನು ಹತ್ತಿದರು. ಭಗತ್ ಸಿಂಗ್ ಉಚ್ಛಕಂಠದಿಂದ ಘೋಷಿಸಿದ. “ಭಾರತ್ ಮಾತಾ ಕೀ ಜೈ”“ಭಾರತ್ ಮಾತಾ ಕೀ ಜೈ” ಏಕೆ?ಸರಿಯಾಗಿ 20 ದಿನಗಳ ಹಿಂದೆ ಭಗತ್‍ಸಿಂಗ್‍ನ ತಾಯಿ ವಿದ್ಯಾವತಿ ಅವನನ್ನು ಭೇಟಿ ಮಾಡುವ ಸಲುವಾಗಿ ಜೈಲಿಗೆ ಬಂದಿದ್ದರು. ಮಗನನ್ನು ಮದುವೆ ದಿಬ್ಬಣದಲ್ಲಿ ಮದುಮಗನಂತೆ ಕಣ್ತುಂಬ ನೋಡಿ ಆನಂದಿಸಬೇಕೆಂದುಕೊಂಡಿದ್ದ ಆ ತಾಯಿಗೆ ಬಲಿಗಂಬವನ್ನೇರಿ ಹುತಾತ್ಮನಾಗಲು ಹೊರಟ ಮಗನನ್ನು ನೋಡುವ ಸ್ಥಿತಿ ಬಂದಿತ್ತು. ಮಗನ ಮುಖವನ್ನು ನೋಡಿ ಕರುಳು ಕಿತ್ತು ಬಂದಂತಾಯಿತು. ಕಣ್ಣಿಂದ ಅಶ್ರುಧಾರೆ ಸುರಿಯಿತು. ಇದನ್ನು ನೋಡಿದ ಭಗತ್‍ಸಿಂಗ್‍ನಿಗೆ ಏನನ್ನಿಸಿತೋ. ತಾಯಿಗೆ ಒಂದು ಮಾತು ಕೇಳಿದ. “ಅಮ್ಮ. ದಯವಿಟ್ಟು ನನ್ನ ಒಂದು ಕೊನೆಯ ಆಸೆಯನ್ನು ನೆರವೇರಿಸಿಕೊಡುತ್ತೀಯಾ?” ತಾಯಿಗೆ ಕರುಳೇ ಬಾಯಿಗೆ ಬಂದಂತಾಯಿತು. ತಾನು ಸಾಯುವ ಹೊತ್ತಿನಲ್ಲಿ ಮಗನ ತೊಡೆಯ ಮೇಲೆ ತಲೆ ಇಟ್ಟು ಕೇಳಬೇಕೆಂದಿದ್ದ ಮಾತನ್ನು ಮಗನೇ ಕೇಳುತ್ತಿದ್ದಾನೆ. ಎಂಥಾ ವಿಪರ್ಯಾಸ. ಕೇವಲ 24ರ ಎಳೇ ಪ್ರಾಯದ ಮಗ ತಾಯಿಯ ಬಳಿ ತನ್ನ ಕೊನೆ ಆಸೆಯನ್ನು ನೆರವೇರಿಸಿಕೊಡುವಂತೆ ಕೇಳುತ್ತಿದ್ದ ಆ ದೃಶ್ಯವನ್ನು ನೋಡಿದ್ದರೆ ಎಂಥಾ ಕಟುಕನ ಕಣ್ಣಲ್ಲೂ ನೀರು ಬರುತ್ತಿತ್ತು.ನಿನ್ನ ಕಣ್ಣಿಂದ ಹನಿ ನೀರೂ ಬರಬಾರದುತಾಯಿ ಹೂಂ… ಎಂಬಂತೆ ತಲೆ ಆಡಿಸಿದಳು. ಮಾತನಾಡಲು ಆಕೆಯ ಬಳಿ ತ್ರಾಣವೇ ಉಳಿದಿರಲಿಲ್ಲ. ತನಗಿಂತಲೂ ಎತ್ತರ ಬೆಳೆದ ಮಗನನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿ ಆಕೆಗೆ ಮೌನ ಮತ್ತು ಕಣ್ಣೀರು ಇವೆರಡನ್ನೂ ಬಿಟ್ಟರೆ ಬೇರೇನೂ ಉಳಿದಿರಲಿಲ್ಲ. ಭಗತ್‍ಸಿಂಗ್ ಮುಂದುವರೆದ, “ಅಮ್ಮಾ ನಿನ್ನ ಮಗ ಇಡೀ ಬ್ರಿಟೀಷ್ ಸಾಮ್ರಾಜ್ಯಶಾಹಿಯ ಎದೆಗುಂಡಿಗೆ ಅದುರುವಂತೆ ಮಾಡಿ ಹೆಮ್ಮೆಯಿಂದ ಗಲ್ಲಿಗೇರುತ್ತಿದ್ದಾನೆ. ನಾನು ನಿನಗೆ ಮಾತು ಕೊಡುತ್ತಿದ್ದೇನೆ. ನಾನು ಗಲ್ಲಿಗೇರುವಾಗ ಖಂಡಿತಾ ನಗುನಗುತ್ತಿರುತ್ತೇನೆ. ನನ್ನ ಕಣ್ಣಲ್ಲಿ ಸಾವಿನ ಹೆದರಿಕೆಯನ್ನು ಆಂಗ್ಲರು ಖಂಡಿತ ನೋಡಲಾರರು. ಅದೇ ರೀತಿ ನನ್ನ ತಾಯಿಯೂ ತನ್ನ ಮಗನ ಸಾವಿನಿಂದ ಧೈರ್ಯಗೆಟ್ಟು ಕಣ್ಣೀರಿಡಬಾರದು. ಏಕೆಂದರೆ ಜನರ ಕಣ್ಣಲ್ಲಿ ನಿನ್ನ ಮಗ ಹುತಾತ್ಮ. ಒಂದು ವೇಳೆ ನೀನು ಕಣ್ಣೀರಿಟ್ಟರೆ ಬ್ರಿಟೀಷರು ಹೇಳುತ್ತಾರೆ “ನೋಡಿ ಭಗತ್‍ಸಿಂಗ್‍ನ ತಾಯಿ ಅಸಹಾಯಕಳಾಗಿ ಕಣ್ಣೀರಿಡುತ್ತಿದ್ದಾಳೆ” ಅಂತ. “ಅವರು ಹಾಗೆನ್ನುವುದು ನನಗೆ ಖಂಡಿತಾ ಇಷ್ಟವಿಲ್ಲವಮ್ಮಾ. ನಾನು ಸತ್ತಾಗ ನಿನ್ನ ಕಣ್ಣಿಂದ ಒಂದೇ ಒಂದು ಹನಿ ಕಣ್ಣೀರು ಬರಬಾರದು. ಇದೇ ನನ್ನ ಕೊನೆಯ ಆಸೆ. ನೆರವೇರಿಸಿಕೊಡುತ್ತೀಯ ಅಲ್ಲವೇನಮ್ಮಾ?”ಆ ತಾಯಿಗೆ ಕಣ್ಣೀರು ಬಿಟ್ಟು ಮತ್ತೇನೂ ಉಳಿದಿರಲಿಲ್ಲ. ಈಗ ಅದನ್ನೂ ಮಗ ಬೇಡವೆನ್ನುತ್ತಿದ್ದಾನೆ. ಆ ತಾಯಿ ಮಗನಿಗೆ ಹೀಗೆ ಹೇಳಿದಳು. “ಮಗೂ ಭಗತ್ ನಿನ್ನನ್ನು ನಾನು ಪುಟ್ಟ ಹುಡುಗ ಎಂದುಕೊಂಡುಬಿಟ್ಟಿದ್ದೆ. ಅದು ತಪ್ಪು. ನನ್ನ ಮಗ ತನ್ನ ಮಾತೃಭೂಮಿಯನ್ನು ಪರಕೀಯರ ಆಳ್ವಿಕೆಯಿಂದ ಸ್ವಾತಂತ್ರ್ಯಗೊಳಿಸಲು ತನ್ನ ಪ್ರಾಣವನ್ನೇ ಅರ್ಪಿಸುತ್ತಿದ್ದಾನೆ. ಈ ಸಮಯದಲ್ಲಿ ನಾನು ಕಣ್ಣೀರು ಹಾಕಿ ಹುತಾತ್ಮನಾಗಲಿರುವ ಆ ಮಗನ ಗೌರವಕ್ಕೆ ಚ್ಯುತಿ ತರುವುದಿಲ್ಲ. ಆದರೆ ಮಗನೇ, ನಾನು ನಿನಗೆ ಮಾತು ಕೊಟ್ಟಂತೆ, ನೀನು ನನ್ನ ಒಂದು ಮಾತನ್ನು ನಡೆಸಿಕೊಡುತ್ತೀಯಾ? ಭಗತ್ ಹೂಂ.. ಎಂದು ತಲೆ ಆಡಿಸಿದ.ಆಕೆ ಬರೀ ಮಾತೆಯಲ್ಲ. ಭಾರತ ಮಾತೆ.ಇಡೀ ಪ್ರಪಂಚದ ಇತಿಹಾಸ ಕಂಡು ಕೇಳರಿಯದ ಅಭೂತಪೂರ್ವ ಘಟನೆ ಅಂದು ನಡೆಯಿತು. ಭಾರತದ ತಾಯಂದಿರ ಶ್ರೇಷ್ಠ ಪರಂಪರೆ ಅಂದು ಜಗತ್ತಿಗೆ ತಿಳಿಯಿತು. ಆ ತಾಯಿ ಕೇಳಿದಳು. “ಮಗೂ ಭಗತ್ ನಾಳೆ ನೀನು ಮತ್ತು ನಿನ್ನ ಸ್ನೇಹಿತರು ಉರುಳನ್ನು ಚುಂಬಿಸಿ ಕೊರಳಿಗೆ ಹಾಕಿಕೊಳ್ಳುವಾಗ ನಿನ್ನ ಬಾಯಿಂದ ಬರುವ ಕೊನೆಯ ಮಾತು ‘ಭಾರತ್ ಮಾತಾ ಕೀ ಜೈ’ ಆಗಿರಬೇಕು!!!”ಅಬ್ಭಾ! ಮಗನನ್ನು ಕಳೆದುಕೊಳ್ಳುವ ಅಂಥಾ ಸಂದರ್ಭದಲ್ಲೂ ಆ ತಾಯಿಯ ಬಾಯಲ್ಲಿ ಎಂಥಾ ದೇಶಪ್ರೇಮದ ಮಾತುಗಳು.
     ತಾಯಿಯ ಮಾತುಗಳನ್ನು ಭಗತ್ ಸಿಂಗ್ ಈಗ ನೆನಪಿಸಿಕೊಂಡಿದ್ದ. ಅದಕ್ಕಾಗಿಯೇ ಆತ ಸಾಯುವ ಆ ಕೊನೇ ಕ್ಷಣಗಳಲ್ಲಿ ದಿಕ್‍ತಟಗಳು ಅನುರಣಿತವಾಗುವಂತೆ ಘರ್ಜಿಸಿದ್ದ. “ಭಾರತ್ ಮಾತಾ ಕೀ ಜೈ” ಜೈಲಿನ ಹೊರಗಿದ್ದ ತಾಯಿಗೆ ಅದು ಭಗತ್ ಸಿಂಗ್ ಮತ್ತು ಗೆಳೆಯರ ಅಂತಿಮ ನುಡಿಗಳೆಂದು ಅರಿವಾಯಿತು. ಆ ತಾಯಿಯ ಕಣ್ಣುಗಳಲ್ಲಿ ನೀರು ಜಿನುಗಲಿಲ್ಲ. ಬದಲಾಗಿ ಮಗ ಹುತಾತ್ಮನಾಗುತ್ತಿದ್ದಾನೆಂಬ ಹೆಮ್ಮೆಯಿಂದ ತನ್ನೆಲ್ಲಾ ದುಃಖವನ್ನು ಒಳಗೇ ಅದುಮಿಟ್ಟುಕೊಂಡು ಬಿಟ್ಟಳು ಮಹಾತಾಯಿ.ಉರುಳನ್ನು ಚುಂಬಿಸಿದರು“ಇನ್ಕಿಲಾಬ್ ಜಿಂದಾಬಾದ್” ಸುಖದೇವ್ ಘೋಷಿಸಿದ. ರಾಜಗುರು ಉಚ್ಛ ಕಂಠದಿಂದ ಕೂಗಿದ. ಮೂವರು ಒಬ್ಬರನ್ನೊಬ್ಬರು ಬಿಗಿದಪ್ಪಿಕೊಂಡರು. ಮತ್ತೊಮ್ಮೆ ಮೂವರೂ ಕೂಡಿ ಬ್ರಿಟೀಷ್ ಸಿಂಹಾಸನವೇ ಅದುರುವಂತೆ ಭಾರತ್ ಮಾತಾ ಕೀ ಜೈ ಮಂತ್ರವನ್ನು ಘೋಷಿಸಿದರು. ಜೈಲಿನ ಗೋಡೆಗಳು ಆ ಮಂತ್ರವನ್ನು ಪ್ರತಿಧ್ವನಿಸಿದವು. ಮಧ್ಯದಲ್ಲಿ ಭಗತ್‍ಸಿಂಗ್, ಎಡಗಡೆ ಸುಖದೇವ್, ಬಲಗಡೆ ರಾಜಗುರು ಬಲಿ ವೇದಿಕೆಯ ಮೇಲೆ ನಿಂತು ಹುತಾತ್ಮರಾಗಲು ಸಿದ್ಧರಾದರು. ಉರುಳನ್ನು ಚುಂಬಿಸಿ ತಾವೇ ತಮ್ಮ ಕೈಯ್ಯಾರೆ ಕೊರಳಿಗೆ ಹಾಕಿಕೊಂಡರು. ಅಧಿಕಾರಿಗಳಿಗೆ ನಿಮ್ಮ ಕರ್ತವ್ಯ ಮುಂದುವರೆಸಿ ಎಂಬಂತೆ ಸೂಚನೆ ನೀಡಿದರು. ಜೈಲು ಸಿಬ್ಬಂದಿಗಳು ತಮ್ಮ ಕೆಲಸ ಪ್ರಾರಂಭಿಸಿದರು. ಮೂವರ ಕೈಗಳನ್ನು ಹಗ್ಗದಿಂದ ಕಟ್ಟಿದರು. ಮುಖಕ್ಕೆ ಕಪ್ಪು ಮುಸುಕು ಹಾಕಿದರು. ಸಮಯ ಸಂಜೆ 7 ಗಂಟೆ 27 ನಿಮಿಷಗಳಾಗಿದ್ದವು. ಆ ಮೂವರು ಕ್ರಾಂತಿ ಸೋದರರು ನಿಂತಿದ್ದ ಬಲಿವೇದಿಕೆಯ ನೇಣು ಹಲಗೆ ‘ಕಟಕ್’ ಎಂದು ಶಬ್ಧ ಮಾಡಿ ಕೆಳಕ್ಕೆ ಕಳಚಿಕೊಂಡಿತ್ತು. ಮೂವರ ಪ್ರಾಣಪುಷ್ಪಗಳು ತಾಯಿ ಭಾರತಿಯ ಅಡಿದಾವರೆಗಳಲ್ಲಿ ಸೇರಿಹೋದವು.
    ನನಗೆ ಇನ್ನೂ ಇಬ್ಬರು ಮಕ್ಕಳಿದ್ದಾರೆ.ಭಗತ್ ಸಿಂಗನ ಸಾವಿನ ವಿಷಯ ತಿಳಿದ ತಾಯಿ ಮಗನಿಗೆ ಕೊಟ್ಟ ಮಾತಿನಂತೆ ಕಣ್ಣೀರು ಹಾಕಲಿಲ್ಲ. ಆ ತಾಯಿಗೆ ಯಾರೋ ಕೇಳಿದರು. ನಿನ್ನ ಮಗ ಸತ್ತು ಹೋದುದಕ್ಕೆ ನಿನಗೆ ದುಃಖವಾಗುತ್ತಿಲ್ಲವೇ? ಅಂತ. ಆ ತಾಯಿ ಹೇಳಿದಳು. “ನನ್ನ ಒಬ್ಬ ಮಗನನ್ನು ಬ್ರಿಟೀಷರು ನೇಣುಹಾಕಿ ಕೊಂದರು. ಮೈದುನ ಸರ್ದಾರ್ ಸ್ವರ್ಣಸಿಂಗ್‍ನನ್ನು ಜೈಲಿನಲ್ಲಿ ಚಿತ್ರಹಿಂಸೆ ನೀಡಿ ಸಾಯಿಸಿದರು. ಇನ್ನೊಬ್ಬ ಮೈದುನ ಅಜಿತ್‍ಸಿಂಗ್‍ನನ್ನು ದೇಶದಿಂದಲೇ ಹೊರಹಾಕಿದರು. ಈಗ ಇನ್ನುಳಿದ ಇಬ್ಬರು ಮಕ್ಕಳನ್ನು ಕಾರಣವಿಲ್ಲದೇ ಜೈಲಿಗೆ ಹಾಕಿದ್ದಾರೆ. ಇವೆಲ್ಲವುಗಳಿಂದ ನಾನು ಹೆದರಿದ್ದೇನೆಂದು ಭಾವಿಸಿದ್ದರೆ ಅದು ಬ್ರಿಟೀಷರ ಮೂರ್ಖತನ. ನಾನು ಬ್ರಿಟೀಷ್ ಸಾಮ್ರಾಜ್ಯಕ್ಕೆ ಸವಾಲೆಸೆಯುತ್ತಿದ್ದೇನೆ. ನಾನಿಂದು ನನ್ನ ಉಳಿದ ಇಬ್ಬರು ಮಕ್ಕಳನ್ನೂ ದೇಶಕ್ಕಾಗಿ ಅರ್ಪಿಸುತ್ತಿದ್ದೇನೆ. ನಿಮಗೆ ಗುಂಡಿಗೆ ಇದ್ದರೆ ಅವರನ್ನು ಕರೆದೊಯ್ಯಿರಿ.”ಧನ್ಯ ಭಾರತ ಮಾತೆ ಧನ್ಯ. ಭಗತ್‍ಸಿಂಗ್ತಹ ಮಗನನ್ನು, ಇಂತಹಾ ವೀರ ಮಾತೆಯರನ್ನು ಪಡೆದ ತಾಯಿ ಭಾರತಿಯೇ ಧನ್ಯ.
    ಶವಗಳನ್ನೂ ಬಿಡದ ಪಾಪಿಗಳು ಗಲ್ಲು ಶಿಕ್ಷೆಯನ್ನು ಪೂರ್ಣಗೊಳಿಸಿದ ಬ್ರಿಟೀಷರಿಗೆ ಈಗ ಹೊಸದೊಂದು ಹೆದರಿಕೆ ಶುರುವಾಗಿತ್ತು. ಭಗತ್ ಸಿಂಗ್, ರಾಜಗುರು, ಸುಖದೇವರು ಈಗಾಗಲೇ ದೇಶಾದ್ಯಂತ ಹೀರೋಗಳಾಗಿದ್ದರು. ಮೂವರು ಯುವಕರು ಸಾವಿನ ಕೊನೇ ಕ್ಷಣದಲ್ಲೂ ನಿರ್ಭಿತಿಯಿಂದ ನಗುನಗುತ್ತಾ ಪ್ರಾಣ ಅರ್ಪಿಸಿದರೆಂಬ ವಾರ್ತೆಯನ್ನು ಕೇಳಿದ ಯುವಕ ಯುವತಿಯರು ರೋಮಾಂಚನಗೊಂಡು ಬ್ರಿಟೀಷರ ವಿರುದ್ದ ಹೋರಾಡಲು ಪಣತೊಡುತ್ತಿದ್ದರು. ಹುತಾತ್ಮರ ಪಾರ್ಥೀವ ಶರೀರಗಳೇನಾದರೂ ಹೊರಗಿರುವ ಜನರಿಗೆ ಸಿಕ್ಕಿಬಿಟ್ಟರೆ ಅದರ ಸ್ಫೂರ್ತಿಯಿಂದಲೇ ಬ್ರಿಟೀಷರ ಸರ್ವನಾಶವಾದೀತೆಂದು ಹೆದರಿದ ಬ್ರಿಟೀಷ್ ಸರ್ಕಾರ, ಅವರ ಶವವನ್ನು ಯಾರಿಗೂ ತಿಳಿಯದಂತೆ ಗುಟ್ಟಾಗಿ ಸುಟ್ಟುಹಾಕಿಬಿಡಲು ಆದೇಶಿಸಿತು. ಜೈಲು ಅಧಿಕಾರಿಗಳು ಮೂವರ ಶವಗಳನ್ನು ತುಂಡು ತುಂಡುಗಳಾಗಿ ಕತ್ತರಿಸಿ ಚೀಲದಲ್ಲಿ ತುಂಬಿದರು. ಹಿಂದಿನ ಬಾಗಿಲ ಮೂಲಕ ಜೈಲಿನಿಂದ ಹೊರಕ್ಕೆ ಸಾಗಿಸಿದರು. ಟ್ರಕ್‍ವೊಂದಕ್ಕೆ ಆ ಚೀಲಗಳನ್ನು ತುಂಬಿಕೊಂಡು ಸಟ್ಲೇಜ್ ನದಿ ತೀರಕ್ಕೆ ಸಾಗಿಸಿದರು. ಅಲ್ಲಿ ಶವಗಳನ್ನು ಕೆಳಗಿಳಿಸಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದರು. ದೂರದಿಂದಲೇ ಬೆಂಕಿಯನ್ನು ನೋಡಿದ ಜನಕ್ಕೆ ವಿಷಯ ಅರ್ಥವಾಗಿಹೋಯಿತು. ಕೂಡಲೇ ಜನ ಸಾಗರೋಪಾದಿಯಲ್ಲಿ ಅಲ್ಲಿಗೆ ಧಾವಿಸತೊಡಗಿದರು. ಪಂಜು ಹಿಡಿದು ಪ್ರವಾಹದಂತೆ ಬರುತ್ತಿದ್ದ ಜನರನ್ನು ಕಂಡು ಅಧೀರರಾದ ಅಧಿಕಾರಿಗಳು ಅರ್ಧ ಬೆಂದ ಶವಗಳನ್ನು ಸಟ್ಲೇಜ್ ನದಿಯಲ್ಲಿ ಎಸೆದು ಪ್ರಾಣ ಉಳಿಸಿಕೊಳ್ಳಲು ಕತ್ತಲಲ್ಲಿ ಪರಾರಿಯಾದರು. ಇದನ್ನು ನೋಡಿದ ಜನರು ನದಿಗಿಳಿದು ಶವಗಳನ್ನು ಹುಡುಕಿ ತಂದರು. ಅಪಾರ ಗೌರವದಿಂದ ಪೂಜ್ಯಭಾವದಿಂದ ವಿಧಿವತ್ತಾಗಿ ಶವ ಸಂಸ್ಕಾರ ಮಾಡಿದರು.ಸತ್ತ ಮೇಲೂ ನನ್ನ ದೇಹದಿಂದ ಭೂಮಾತೆಯ ಸುವಾಸನೆ ಹೊರಹೊಮ್ಮುತ್ತದೆ.ಭಗತ್‍ಸಿಂಗ್ ಸಾಯುವ ಮುನ್ನ ಹೀಗೆ ಹೇಳಿದ್ದ. “ನನ್ನೊಬ್ಬನನ್ನು ಗಲ್ಲಿಗೆ ಹಾಕಿ ಈ ಬ್ರಿಟೀಷ್ ಸರ್ಕಾರ ಸಾದಿಸುವುದೇನೂ ಇಲ್ಲ. ಬದಲಾಗಿ ನನ್ನ ಬಲಿದಾನದಿಂದ ಈ ದೇಶದಲ್ಲಿ ಕ್ರಾಂತಿಕಾರ್ಯ ಬಹುಬೇಗ ವ್ಯಾಪಿಸಿಕೊಳ್ಳುತ್ತದೆ.  ಹಿಂದೂಸ್ಥಾನದ ತಾಯಂದಿರು ತಮ್ಮ ಒಡಲಲ್ಲಿ ಭಗತ್‍ಸಿಂಗ್ ನಂತಹಾ ಮಕ್ಕಳು ಜನಿಸಲಿ ಎಂದು ಬಯಸುತ್ತಾರೆ. ನಾನು ಸತ್ತ ಮೇಲೆ ನನ್ನ ದೇಹದಿಂದಲೂ ಭೂಮಾತೆಯ ಸುವಾಸನೆ ಹೊರಹೊಮ್ಮುತ್ತದೆ. ಸಾವಿರಾರು ಜನ ಭಗತ್‍ಸಿಂಗ್‍ರು ಆ ಸುಗಂಧದಿಂದ ಉದ್ಭವಿಸುತ್ತಾರೆ. ಬ್ರಿಟೀಷ್ ಸಿಂಹಾಸನವನ್ನು ಕಿತ್ತೊಗೆದು ಈ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುತ್ತಾರೆ.”
    ಮುಂದೆ ಆ ಮಾತು ನಿಜವಾಯಿತು. ಭಗತ್‍ಸಿಂಗ್‍ನ ಆತ್ಮಾರ್ಪಣೆಯಿಂದ ಸ್ಫೂರ್ತಿಗೊಂಡ ಅನೇಕ ಯುವಕ ಯುವತಿಯರು ಸಾಗರೋಪಾದಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಅಸೀಮ ಪರಿಶ್ರಮದ ಫಲವಾಗಿ 1947 ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದಿತು.            
              (ಹವ್ಯಾಸಿ ಲೇಖಕರು)

Bhogenagarakoppa basavanna ಜಾಗೃತದೇವ ಭೋಗೇನಾಗರಕೊಪ್ಪ ನಂದೀಶ್ವರ

    ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಭೋಗೇನಾಗರಕೊಪ್ಪದಲ್ಲಿ ನೆಲೆಸಿರುವ ಜಾಗೃತ ಶ್ರೀ ನಂದೀಶ್ವರನ ಮಹಿಮೆ ಅಪಾರವಾದದ್ದು. ಶಾಲ್ಮಲಾ ನದಿ ತಟದ ಸುಂದರ.ಪರಿಸರದಲ್ಲಿ ಬಲಗಾಲು ಮುಂದೆ ಮಾಡಿ  ಪೂವ೯ಕ್ಕೆ ಪ್ರಸನ್ನ ಮುಖಮುದ್ರೆ ಮಾಡಿ ಕುಳಿತಿದ್ದಾನೆ.
ಇತಿಹಾಸ: ದೇವಸ್ಥಾನದ ಧಮ೯ದಶಿ೯ ಅದ ದೇಶಕುಲಕಣಿ೯(ದೇಸಾಯಿ) ಅವರ ಪೂರ್ವಜರು ಬಿದರಿಕೋಟೆ ದೇಸಾಯರು ಆಗಿದ್ದರು.ಆಡಳಿತ ತ್ಯಜಿಸಿ ಹಂಪೆಯ ಪಂಪಾಪತಿ ದೇವಸ್ಥಾನದ ಅಚ೯ಕರಾದರು.ವಿಜಯನಗರ ಸಾಮ್ರಾಜ್ಯ ಪತನಾನಂತರ ಧಾರವಾಡದತ್ತ ವಲಸೆ ಬಂದು ಛತ್ರಪತಿ ಶಿವಾಜಿ ಮಹಾರಾಜರಲ್ಲಿ ವಿದ್ವತ್ ಪ್ರದಶಿ೯ಸಿ ಐದು ಹಳ್ಳಿಗಳನ್ನು ಇನಾಮು ಪಡೆದು ಭೋಗೇನಾಗರಕೊಪ್ಪದ ಕೋಟೆಯಲ್ಲಿ ನೆಲೆ ನಿಂತು ಆಳಿದರು.              ಹೀಗಿರುವಾಗ ದೇಸಾಯಿಯವರಲ್ಲೊಬ್ಬರಿಗೆ ಸಂತಾನವಿರಲಲಿಲ್ಲ. ಅದೇ ಸಮಯದಲ್ಲಿ ಸಿದ್ಧಿ ಪುರುಷರು,ಹಂಪೆ ವಿರೂಪಾಕ್ಷ ದೇಗುಲದ ಮುಖ್ಯ ಗೋಪುರದ ನಿಮಾ೯ಪಕ ಬಿಷ್ಟಪ್ಪಯ್ಯ ಮಹಾಪುರುಷರು ನಾಗನೂರ ಗ್ರಾಮದ ಮಾಮಲೆ ದೇಶಪಾಂಡೆ ಅವರಲ್ಲ್ಲಿತಂಗಿದ್ದರು.ಅವರನ್ನು ತಮ್ಮ ವಾಡೆಗೆ ಕರೆತಂದು ಉಪಚರಿಸಿ ತಮ್ಮ ಸಂತಾನವಿಲ್ಲದೆ ಸಮಸ್ಯೆಗೆ ಪರಿಹಾರ ಕೇಳಿದರಂತೆ.ಆಗ ಬಿಷ್ಟಪ್ಪಯ್ಯನವರು ಶಾಲ್ಮಲಾ ನದಿಗುಂಟ ಸಂಚರಿಸಿ ದಿಬ್ಬದಲ್ಲಿ ಹುದುಗಿದ್ದ ಅಪೂವ೯ ನಂದೀಶ್ವರನ ವಿಗ್ರಹ ಗೋಚರಿಸಿತು.ಅದನ್ನು ಹೊರ ತೆಗೆದು ಅದೇ ಸ್ಥಳದಲ್ಲಿ ಪುನರ್ ಪ್ರತಿಷ್ಟಾಪಿಸಿ ತ್ರಿಕಾಲ ಪೂಜಾ ಮಾಡಲು ತಿಳಿಸಿದರು. ತದನಂತರ ಅವರಿಗೆ ಸಂತಾನ ಪ್ರಾಪ್ತವಾಯಿತು. ಬಿಷ್ಟಪ್ಪಯ್ಯ ಅವರ ಮಹತ್ಕಾರ್ಯ ವಿವರಿಸುವ "ಬಿಷ್ಟೇಶ ಶತಮಾನಗಳು" ಅದರಲ್ಲಿ "ವಂದ್ಯಾಸಂತಾನ ಫಲದಃ| ಖರಶಾಪವಿಮೋಚಕಃ|(ನಂದಿಯ ಶಾಪವಿಮೋಚನೆ ಮಾಡಿ ನಿಸ್ಸಂತಾನರಿಗೆ ಸಂತಾನ ನೀಡಿದವರು).ದಾಖಲಾಗಿದೆ.ಸ
      ನಂದೀಶ್ವರನ ಮುಂದಿರುವ ಬೆಳ್ಳಿಯ ಪಾದುಕೆಗಳು  "ಬಿಷ್ಟೆಶ್ವರ ಪಾದುಕೆಗಳು" ಎಂದು ಅಚಿ೯ಸಲ್ಪಡುತ್ತವೆ.ಭಕ್ತಿಯ ದ್ಯೋತಕವಾಗಿ ದೇಶಕುಲಕಣಿ೯ ಅವರು ಬಿಷ್ಟಪ್ಪಯ್ಯ ವಂಶಸ್ಥರಲ್ಲಿರುವ ರಸಲಿಂಗಕ್ಕೆ ಹಿತ್ತಾಳೆಯ ಸಿಂಹಾಸನ ಮಂಟಪ ಮಾಡಿಸಿದ ಶಾಸನವಿದೆ.ನಂದೀಶ್ವರನು "ಸಂತಾನ ಬಸಪ್ಪ" ಎಂದೇ ಖ್ಯಾತನಾಗಿದ್ದಾನೆ.ಹರಕೆ ಹೊತ್ತು ಗುಡಿಯೊಳಗೆ ಕಟ್ಟಿದ ತೆಂಗಿನಕಾಯಿ,ತೊಟ್ಟಿಲು ಕಾಣಸಿಗುತ್ತವೆ.
    ನಂದೀಶ್ವರನನ್ನು ಪ್ರತಿಷ್ಟಾಪಿಸುವಾಗ ಅದರಡಿಯಲ್ಲಿ ಉತ್ಕೃಷ್ಟ ನರಸಿಂಹ ಸಾಲಿಗ್ರಾಮ ಇರಿಸಿದ್ದಾರೆಂದು ಪ್ರತೀತಿ.ಮುಜರಾಯಿ ಇಲಾಖೆ ಒಮ್ಮೆ ಅಷ್ಟಬಂಧೋತ್ಸವ ನಡೆಸಿದರೆ ನರಸಿಂಹ ಸಾಲಿಗ್ರಾಮದ ಬಗ್ಗೆ ಬೆಳಕು ಚೆಲ್ಲಬಹುದು ಎಂದು ಧಮ೯ದಶಿ೯ಗಳ ಅಭಿಪ್ರಾಯಪಡುತ್ತಾರೆ.
   ಬ್ರಿಟಿಷ್ ಸಕಾ೯ರವಿದ್ದಾಗ  ದೇವಸ್ಥಾನಕ್ಕೆ ಆಗಿನ ಧಾರವಾಡದ ಕಲೆಕ್ಟರ್ ಆಗಿದ್ದ ಸರ್.ಎಂ.ಸಿ.ಗಿಬ್ಬ್ ಮತ್ತು ಜಾರ್ಜ್ ಹಡ್ಸನ್ ವಷಾ೯ಶನ 2 ರೂಪಾಯಿ ನಿವ೯ಹಣೆಗೆ ಮತ್ತು ಪೂಜಾ-ಪುನಸ್ಕಾರಕ್ಕೆ ಧಮ೯ದಶಿ೯ ಅಣ್ಣಾಜಿ ಹಣವಂತ ಅವರ ಹೆಸರಿನಲ್ಲಿ ನೀಡುತ್ತಿದ್ದರು. ಆ ಸನದಿನ ನಕಲು ಪ್ರತಿ ಇದೆ.ಪುಣೆಯ ಪೇಶ್ವೆ ಮ್ಯುಜಿಯಂನಲ್ಲಿ ಗ್ರಾಮದ ದಾಖಲೆ ಸಿಗುತ್ತವೆ.
    ಗಡ್ಡಿ ತೇರಿನ ರಥೋತ್ಸವವು ಪ್ರತಿವಷ೯ ಬನದ ಹುಣ್ಣಿಮೆಗೆ ಜರುಗುತ್ತದೆ.ಶತಮಾನೋತ್ಸವದ ರಥೋತ್ಸವವು ಮೂರು ವಷ೯ದ ಹಿಂದೆ ಜರುಗಿದೆ.
-ಹನುಮಂತ.ಮ.ದೇಶಕುಲಕಣಿ೯.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನ಼ಂ.9731741397

ಬಂದು ಅಶಿವ೯ದಿಸಿ ಹರಟೇ ಬಿಡುವ ಗಣಪ..

    ದೇಶದೆಲ್ಲೆಡೆ ಗಣಪತಿಯನ್ನು ಕೂಡ್ರಿಸುವ ಸಡಗರ!ಗಣಪತಿಯನ್ನು ಹನ್ನೊಂದು ದಿನ,ಒಂಭತ್ತು ದಿನ,ಏಳು ದಿನ,ಐದು ದಿನ,ಮೂರು ದಿನ,ಒಂದು ದಿನ ಹೀಗೆ ಬೆಸದಿನಗಳಲ್ಲಿ ಕೂಡ್ರಿಸಿದರೆ ಧಾರವಾಡ ಜಿಲ್ಲಾ ಕಲಘಟಗಿ ತಾಲ್ಲೂಕಿನ ಭೋಗೇನಾಗರಕೊಪ್ಪದ ದೇಸಾಯಿಯವರ ವಾಡೆದಲ್ಲಿ  ಗಣಪತಿಯು ಅಧ೯ದಿನ ಮಾತ್ರ ಕೂರುತ್ತಾನೆ.ಇದು ಆಶ್ಚರ್ಯವಾದರೂ ಐತಿಹಾಸಿಕ ಸತ್ಯದಿಂದ ಕೂಡಿದೆ.ಆ ಐತಿಹಾಸಿಕ ಹಿನ್ನೆಲೆ ಹೀಗಿದೆ.
     ಈಗಿರುವ ದೇಸಾಯಿಯವರ ಪೂವ೯ಜರು ಬಿದರಿಕೋಟೆಯಲ್ಲಿ ದೇಸಗತಿ ಜಮೀನ್ದಾರರಾಗಿದ್ದರು ತದನಂತರ ಹಂಪೆಯ ಪಂಪಾಪತಿ ದೇಗುಲದ ಅಚ೯ಕರಾದರು.ವಿಜಯನಗರ ಸಾಮ್ರಾಜ್ಯ ಪತನಾನಂತರ ಧಾರವಾಡದತ್ತ ಬಂದಾಗ ಧಾರವಾಡ ಮರಾಠಾಧಿಪತಿ ಛತ್ರಪತಿ ಶಿವಾಜಿ ಆಳ್ವಿಕೆಯಲ್ಲಿತ್ತು. ದೇಸಾಯಿಯವರ ಹಿನ್ನೆಲೆ ಅರಿತು ಅವರ,ಪಾಂಡಿತ್ಯಕ್ಕೆ ಐದು ಹಳ್ಳಿಗಳನ್ನು ಇನಾಮು ನೀಡಿದ.ಮುರಕಟ್ಟಿ,ಮನಗುಂಡಿ,ರಾಮನಾಳ,ಗಂಜೀಗಟ್ಟಿ ಪೈಕಿ ಭೋಗೇನಾಗರಕೊಪ್ಪದಲ್ಲಿ ಶಿವಾಜಿ ಕಟ್ಟಿಸಿದ ವಾಡೆದಲ್ಲಿ ನೆಲೆಸಿ ಆಡಳಿತ ನೋಡಿಕೊಳ್ಳುತ್ತಿದ್ದರು.
      ಹಬ್ಬದ ದಿನ ಪ್ರಾತಃಕಾಲ ಪ್ರತಿಷ್ಠಾಪನೆಗೊಂಡು ಮಧ್ಯಾಹ್ನ ವಿಸಜ೯ನೆಯಾಗುತ್ತಾನೆ ಗಣಪ.ಸ್ವಾತಂತ್ರ್ಯ ಪೂವ೯ಕಾಲ ಕಲಘಟಗಿ ಸುತ್ತಲಿನ ಪ್ರದೇಶದಲ್ಲಿಯೂ ತೀವ್ರ ಬರ ಆವರಿಸಿತ್ತು,   ಆಗ ಸಂಚಿನಿಂದ ಅಧಿಕಾರ ಪಡೆದ ಬ್ರಿಟಿಷರು ಪ್ರಬಲರಾಗಿದ್ದರು.ಉಪ್ಪಿಗೂ ಸಹಿತ ಕರ ವಿಧಿಸಿದ್ದರು.ಸುತ್ತಲಿನ ದೇಸಗತಿ ಹಳ್ಳಿಗಳು ಕಂದಾಯ ಕಟ್ಟಿರಲಿಲ್ಲ.ಹೀಗಾಗಿ ದೇಸಾಯಿಯವರಿಗೂ-ಬ್ರಿಟಿಷರಿಗೂ ವಾಗ್ವಾದವಾಗಿತ್ತು. ಅವರ ಸಣ್ಣ ಸಂಸ್ಥಾನಗಳ ಮೇಲೆ ಕಣ್ಣು ಬಿದ್ದಿತ್ತು.ದಾಸ್ತಿಕೊಪ್ಪ ಬಂಗಲೆಯಲ್ಲಿರುತ್ತಿದ್ಥ ಬ್ರಿಟಿಷ್ ಅಧಿಕಾರಿ ಭೋಗೇನಾಗರಕೊಪ್ಪ ಗ್ರಾಮದ ಮರಾಠರ ಹಿತ್ತಲನ್ನು ಗಂಜೀಗಟ್ಟಿ ಸರಹದ್ದಿನಲ್ಲಿಟ್ಟು ಗ್ರಾಮನಕಾಶೆ ತಯಾರಿಸಿ ಅಧಿಕಾರ ತಕ್ಕ ಮಟ್ಟಿಗೆ ವಿಕೇಂದ್ರಿಕರಿಸಿದ           ಆಗಿನ ಬ್ರಿಟಿಷ್ ಗವನ೯ರ್ ಜನರಲ್ ಆಗಿದ್ದ ಲಾಡ್೯ ಡಾಲ್ಽಹೌಸಿ  ಅದೇ ಸಮಯಕ್ಕೆ " ದತ್ತಕಕಾಯ್ದೆ"  ಜಾರಿಗೆ ತಂದಿದ್ದ,ಈ ಸಂಸ್ಥಾನವನ್ನು ಕಾಯ್ದೆಯಡಿ ಒಳಪಡಿಸಲು ಮುಂದಾದಾಗ ಆಕ್ರೋಶಗೊಂಡ ದಿ.ಶ್ರೀಮಂತ ವಿರೂಪಾಕ್ಷ.ಅನಂತರಾವ್,ದೇಸಾಯಿ.ಚಳುವಳಿ ಆರಂಭಿಸಿದರು,ಮುಂದೆ ಇವರು ಗೋವಾ ವಿಮೋಚನೆ ಚಳುವಳಿಯಲ್ಲಿ ಭಾಗವಹಿಸಿದ್ದರು.ಜೊತೆಗೆ ಘರಾಣೆದ ಬೇಂದ್ರೆಯವರ ಒಡನಾಡಿಯಾಗಿದ್ದ ದೇಸಾಯಿ ದತ್ತಮೂತಿ೯ ಪತ್ರಿಕೆಗಳಿಗೆ ದೇಶಪ್ರೇಮಿ ಲೇಖನ ಭೂಗತವಾಗಿದ್ದುಕೊಂಡು ಬರೆಯುತ್ತಿದ್ದರು,
     ಇದೇ ಸಂದಭ೯ದಲ್ಲಿ ಹುಬ್ಬಳ್ಳಿಗೆ ಆಗಮಿಸಿದ ಲೋಕಮಾನ್ಯ ತಿಲಕರು ಗಣೇಶೋತ್ಸವದ ಬಗ್ಗೆ ವಿವರಿಸಿದ್ದರು.ಸಾವ೯ಜನಿಕವಾಗಿ ಗಣಪತಿ ಪ್ರತಿಷ್ಠಾಪಿಸಿ ಬ್ರಿಟಿಷರ ವಿರುದ್ಧ ಹೇಗೆ ಒಂದಾಗಬಹುದೆಂದು ವಿವರಿಸಿದ್ದರು.ಅವರ ಪ್ರಭಾವಕ್ಕೆ ಒಳಗಾದ ದೇಸಾಯಿಯವರು ತಮ್ಮ ವಾಡೇದಲ್ಲಿ ಐದು ದಿನದ ಗಣೇಶೋತ್ಸವ ಬಹು ವಿಜೃಂಭಣೆಯಿಂದ ಜರುಗಿತು.
      ಹೀಗೆ ಒಂದುವಷ೯ ಗಣೇಶೋತ್ಸವದಲ್ಲಿ ದೇಸಾಯಿಯವರು ಬ್ರಿಟಿಷ್ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆಂದು ಸೈನ್ಯ ದಾಳಿ ನಡೆಸಿತು.ದಾಳಿ ಮಾಡಿದ್ದು ಮಧ್ಯಾಹ್ನದ ಸಮಯ ಗಣಪತಿಯ ಪೂಜೆಯನ್ನು ಮುಗಿಸಿ ತೀಥ೯-ಪ್ರಸಾದ ಗ್ರಾಮಸ್ಥರಿಗೆ ವಿತರಿಸಿಯಾಗಿತ್ತು.ಇನ್ನೇನು ದೇಸಾಯಿಯವರು ಊಟಕ್ಕೆ ಕೂಡ್ರುವವರಿದ್ದರು,ದಾಳಿ ಮನೆ ಬಾಗಿಲಿಗೆ ಬಂದ ವಿಷಯ ತಿಳಿದು ;ಬ್ರಿಟಿಷರು ಒಳಬಂದು ಗಣಪತಿಗೆ ಧಕ್ಕೆ ಮಾಡುವವರೆಂದು ವಾಡೇದಲ್ಲಿರುವ,ಬಾವಿಯಲ್ಲಿ ವಿಸಜ೯ನೆ ಮಾಡಿ ಪಶ್ಚಿಮದ್ವಾರದ ಮುಖಾಂತರ ಪರಾರಿಯಾದರು.ತಾವು ಬರುವ ಮುಂಚೆ ಏನು ನಡೆದಿದೆಯೆಂದು ತಿಳಿಯಲಿಲ್ಲ.ಚಿಕ್ಕ ಕೋಟೆಯ ಮೇಲೆ ದಾಳಿ ನಡೆಸಿದ ಭಾರಿ ಸೈನ್ಯ ಹಾಸ್ಯಾಸ್ಪದವಾಗಿ ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿತು.
      ಭೋಗೇನಾಗರಕೊಪ್ಪ ಕೋಟೆಯ ಮೇಲೆ ದಾಳಿಯ ಇತಿಹಾಸ ಮರೆಯದ ದೇಸಾಯಿಯವರು ಇಂದಿಗೂ ಅಧ೯ದಿನ ಗಣಪತಿ ಕೂರಿಸುವ ಪರಿಪಾಠ ಮುಂದುವರೆಸಿಕೊಂಡು ಬಂದಿದ್ದಾರೆ.ಬೆಳಿಗ್ಗೆ ಗಣಪತಿ ಪ್ರತಿಷ್ಠಾಪಿಸಿ ಪೂಜೆ,ನೈವೇದ್ಯ,ಮಹಾಮಂಗಳಾರತಿ ನಂತರ ಮಧ್ಯಾಹ್ನದ ಊಟಕ್ಕೂ ಮುನ್ನವೇ ವಿಸಜಿಸಲಾಗುತ್ತಿದೆಯೆಂದು ಮನೆತನದ ಹಿರಿಯರಾದ ಬಸವಂತರಾವ್ ದೇಶಕುಲಕಣಿ೯ ,ರಾಮಚಂದ್ರ ದೇಶಕುಲಕಣಿ೯ ಇತಿಹಾಸ ನೆನಪಿಸಿಕೊಳ್ಳುತ್ತಾರೆ.
      ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಕುಟುಂಬ ಪರಂಪರಾಗತವಾಗಿ ಬಂದ ಭಕ್ತಿಗೆ ಧಕ್ಕೆ ಆಗದಂತೆ ಬ್ರಿಟಿಷರಿಗೂ ಮಣಿಯದಂತೆ ದೇಶಭಕ್ತಿ ಮೆರೆದ ಪರಿ ಇದು!.