ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಭೋಗೇನಾಗರಕೊಪ್ಪದಲ್ಲಿ ನೆಲೆಸಿರುವ ಜಾಗೃತ ಶ್ರೀ ನಂದೀಶ್ವರನ ಮಹಿಮೆ ಅಪಾರವಾದದ್ದು. ಶಾಲ್ಮಲಾ ನದಿ ತಟದ ಸುಂದರ.ಪರಿಸರದಲ್ಲಿ ಬಲಗಾಲು ಮುಂದೆ ಮಾಡಿ ಪೂವ೯ಕ್ಕೆ ಪ್ರಸನ್ನ ಮುಖಮುದ್ರೆ ಮಾಡಿ ಕುಳಿತಿದ್ದಾನೆ.
ಇತಿಹಾಸ: ದೇವಸ್ಥಾನದ ಧಮ೯ದಶಿ೯ ಅದ ದೇಶಕುಲಕಣಿ೯(ದೇಸಾಯಿ) ಅವರ ಪೂರ್ವಜರು ಬಿದರಿಕೋಟೆ ದೇಸಾಯರು ಆಗಿದ್ದರು.ಆಡಳಿತ ತ್ಯಜಿಸಿ ಹಂಪೆಯ ಪಂಪಾಪತಿ ದೇವಸ್ಥಾನದ ಅಚ೯ಕರಾದರು.ವಿಜಯನಗರ ಸಾಮ್ರಾಜ್ಯ ಪತನಾನಂತರ ಧಾರವಾಡದತ್ತ ವಲಸೆ ಬಂದು ಛತ್ರಪತಿ ಶಿವಾಜಿ ಮಹಾರಾಜರಲ್ಲಿ ವಿದ್ವತ್ ಪ್ರದಶಿ೯ಸಿ ಐದು ಹಳ್ಳಿಗಳನ್ನು ಇನಾಮು ಪಡೆದು ಭೋಗೇನಾಗರಕೊಪ್ಪದ ಕೋಟೆಯಲ್ಲಿ ನೆಲೆ ನಿಂತು ಆಳಿದರು. ಹೀಗಿರುವಾಗ ದೇಸಾಯಿಯವರಲ್ಲೊಬ್ಬರಿಗೆ ಸಂತಾನವಿರಲಲಿಲ್ಲ. ಅದೇ ಸಮಯದಲ್ಲಿ ಸಿದ್ಧಿ ಪುರುಷರು,ಹಂಪೆ ವಿರೂಪಾಕ್ಷ ದೇಗುಲದ ಮುಖ್ಯ ಗೋಪುರದ ನಿಮಾ೯ಪಕ ಬಿಷ್ಟಪ್ಪಯ್ಯ ಮಹಾಪುರುಷರು ನಾಗನೂರ ಗ್ರಾಮದ ಮಾಮಲೆ ದೇಶಪಾಂಡೆ ಅವರಲ್ಲ್ಲಿತಂಗಿದ್ದರು.ಅವರನ್ನು ತಮ್ಮ ವಾಡೆಗೆ ಕರೆತಂದು ಉಪಚರಿಸಿ ತಮ್ಮ ಸಂತಾನವಿಲ್ಲದೆ ಸಮಸ್ಯೆಗೆ ಪರಿಹಾರ ಕೇಳಿದರಂತೆ.ಆಗ ಬಿಷ್ಟಪ್ಪಯ್ಯನವರು ಶಾಲ್ಮಲಾ ನದಿಗುಂಟ ಸಂಚರಿಸಿ ದಿಬ್ಬದಲ್ಲಿ ಹುದುಗಿದ್ದ ಅಪೂವ೯ ನಂದೀಶ್ವರನ ವಿಗ್ರಹ ಗೋಚರಿಸಿತು.ಅದನ್ನು ಹೊರ ತೆಗೆದು ಅದೇ ಸ್ಥಳದಲ್ಲಿ ಪುನರ್ ಪ್ರತಿಷ್ಟಾಪಿಸಿ ತ್ರಿಕಾಲ ಪೂಜಾ ಮಾಡಲು ತಿಳಿಸಿದರು. ತದನಂತರ ಅವರಿಗೆ ಸಂತಾನ ಪ್ರಾಪ್ತವಾಯಿತು. ಬಿಷ್ಟಪ್ಪಯ್ಯ ಅವರ ಮಹತ್ಕಾರ್ಯ ವಿವರಿಸುವ "ಬಿಷ್ಟೇಶ ಶತಮಾನಗಳು" ಅದರಲ್ಲಿ "ವಂದ್ಯಾಸಂತಾನ ಫಲದಃ| ಖರಶಾಪವಿಮೋಚಕಃ|(ನಂದಿಯ ಶಾಪವಿಮೋಚನೆ ಮಾಡಿ ನಿಸ್ಸಂತಾನರಿಗೆ ಸಂತಾನ ನೀಡಿದವರು).ದಾಖಲಾಗಿದೆ.ಸ
ನಂದೀಶ್ವರನ ಮುಂದಿರುವ ಬೆಳ್ಳಿಯ ಪಾದುಕೆಗಳು "ಬಿಷ್ಟೆಶ್ವರ ಪಾದುಕೆಗಳು" ಎಂದು ಅಚಿ೯ಸಲ್ಪಡುತ್ತವೆ.ಭಕ್ತಿಯ ದ್ಯೋತಕವಾಗಿ ದೇಶಕುಲಕಣಿ೯ ಅವರು ಬಿಷ್ಟಪ್ಪಯ್ಯ ವಂಶಸ್ಥರಲ್ಲಿರುವ ರಸಲಿಂಗಕ್ಕೆ ಹಿತ್ತಾಳೆಯ ಸಿಂಹಾಸನ ಮಂಟಪ ಮಾಡಿಸಿದ ಶಾಸನವಿದೆ.ನಂದೀಶ್ವರನು "ಸಂತಾನ ಬಸಪ್ಪ" ಎಂದೇ ಖ್ಯಾತನಾಗಿದ್ದಾನೆ.ಹರಕೆ ಹೊತ್ತು ಗುಡಿಯೊಳಗೆ ಕಟ್ಟಿದ ತೆಂಗಿನಕಾಯಿ,ತೊಟ್ಟಿಲು ಕಾಣಸಿಗುತ್ತವೆ.
ನಂದೀಶ್ವರನನ್ನು ಪ್ರತಿಷ್ಟಾಪಿಸುವಾಗ ಅದರಡಿಯಲ್ಲಿ ಉತ್ಕೃಷ್ಟ ನರಸಿಂಹ ಸಾಲಿಗ್ರಾಮ ಇರಿಸಿದ್ದಾರೆಂದು ಪ್ರತೀತಿ.ಮುಜರಾಯಿ ಇಲಾಖೆ ಒಮ್ಮೆ ಅಷ್ಟಬಂಧೋತ್ಸವ ನಡೆಸಿದರೆ ನರಸಿಂಹ ಸಾಲಿಗ್ರಾಮದ ಬಗ್ಗೆ ಬೆಳಕು ಚೆಲ್ಲಬಹುದು ಎಂದು ಧಮ೯ದಶಿ೯ಗಳ ಅಭಿಪ್ರಾಯಪಡುತ್ತಾರೆ.
ಬ್ರಿಟಿಷ್ ಸಕಾ೯ರವಿದ್ದಾಗ ದೇವಸ್ಥಾನಕ್ಕೆ ಆಗಿನ ಧಾರವಾಡದ ಕಲೆಕ್ಟರ್ ಆಗಿದ್ದ ಸರ್.ಎಂ.ಸಿ.ಗಿಬ್ಬ್ ಮತ್ತು ಜಾರ್ಜ್ ಹಡ್ಸನ್ ವಷಾ೯ಶನ 2 ರೂಪಾಯಿ ನಿವ೯ಹಣೆಗೆ ಮತ್ತು ಪೂಜಾ-ಪುನಸ್ಕಾರಕ್ಕೆ ಧಮ೯ದಶಿ೯ ಅಣ್ಣಾಜಿ ಹಣವಂತ ಅವರ ಹೆಸರಿನಲ್ಲಿ ನೀಡುತ್ತಿದ್ದರು. ಆ ಸನದಿನ ನಕಲು ಪ್ರತಿ ಇದೆ.ಪುಣೆಯ ಪೇಶ್ವೆ ಮ್ಯುಜಿಯಂನಲ್ಲಿ ಗ್ರಾಮದ ದಾಖಲೆ ಸಿಗುತ್ತವೆ.
ಗಡ್ಡಿ ತೇರಿನ ರಥೋತ್ಸವವು ಪ್ರತಿವಷ೯ ಬನದ ಹುಣ್ಣಿಮೆಗೆ ಜರುಗುತ್ತದೆ.ಶತಮಾನೋತ್ಸವದ ರಥೋತ್ಸವವು ಮೂರು ವಷ೯ದ ಹಿಂದೆ ಜರುಗಿದೆ.ಈ ವಷ೯ ಜನೇವರಿ 5 ರಂದು ಜರುಗುತ್ತದೆ.
-ಹನುಮಂತ.ಮ.ದೇಶಕುಲಕಣಿ೯.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನ಼ಂ.9731741397
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ