ಮಂಗಳವಾರ, ಮಾರ್ಚ್ 24, 2015

ರಾಶಿಗಳಲ್ಲಿ ಸವ೯ಜ್ಞ ವಚನ

ವಚನಕಾರ ಸವ೯ಜ್ಞನು ಮಳೆ-ಗಾಳಿಗಳ ಕುರಿತು ರೈತರಿಗೆ ತನ್ನ ವಚನಗಳ ಮೂಲಕ ಭೋಧಿಸಿದ್ದಾನೆ. ಅವುಗಳಲ್ಲಿ ರಾಶಿನಕ್ಷತ್ರಗಳ ಮೂಲಕ ತನ್ನ ಭವಿಷ್ಯ ನುಡಿದಿದ್ದಾನೆ.
*ಮೇಷರಾಶಿ: ಕುರಿಯನೇರಲು!ಗುರುವು,ಧರೆಗೆ ಹೆಮ್ಮಳಿಯಕ್ಕು ಪರಿಪರಿಯ ಧಾನ್ಯ ಬೆಳೆಯಕ್ಕು ಪ್ರಜೆಗಳಿಗೆ ನೆರೆ ಹರುಷವಕ್ಕು ಸವ೯ಜ್ಞ.
    ಮೇಷರಾಶಿಗೆ ಗುರುವು ಕೂಡಿದರೆ ಭೂಮಿಯ ಮೇಲೆ ಬಹಳ ಮಳೆಯಾಗುವುದು.ನಾನಾ ಬಗೆಯ ಧಾನ್ಯಗಳು ಬೆಳೆಯುತ್ತವೆ.ಪ್ರಜೆಗಳು ಹರುಷದಿಂದ ಇರುವರು.
*ವೃಷಭರಾಶಿ: ವೃಷಭವನೇರಲು ಗುರುವು,ವಸುಧೆಯೊಳು ಮಳೆಯಕ್ಕು ಶಿಸು ಪಶು ಸ್ತ್ರೀ ಜಯವಕ್ಕು ಜನವೆಲ್ಲ ಮಿಸುನಿಯಂತಕ್ಕು ಸವ೯ಜ್ಞ.
   ಗುರುವು ವೃಷಭರಾಶಿಗೆ ಬಂದರೆ,ಧರೆಗೆ ಮಳೆಯಾಗುವುದು.ಮಕ್ಕಳಿಗೂ,ಮಹಿಳೆಯರಿಗೂ,ಪಶುಗಳಿಗೂ ಯಶ ಸಿಕ್ಕುವುದು.ಜನರೆಲ್ಲ ಹರುಷದಿಂದ ಇರುವುರು.
  *ಮಿಥುನರಾಶಿ: ಮಿಥುನರಾಶಿಗೆ ಗುರುವು ಬಂದರೆ, ಹೆಚ್ಚಾಗಿ ಬಡಿದಾಟಗಳು ಲೋಕದಲ್ಲಿ ಉಂಟಾಗುವವು.ಭೂಮಿಯಲ್ಲಿ ಬರಗಾಲ ಉಂಟಾಗಿ ಮನುಷ್ಯ-ಪಶುಗಳು ನಾಶವಾಗುವವು.
   ಕಕ೯ರಾಶಿ:ಏಡಿ ಏರಲು ಗುರುವು,ನೋಡೆ ಕಡೆ ಮಳೆಯಕ್ಕು ನಾಡೊಳಗೆಲ್ಲ ಬೆಳೆಸಕ್ಕು ಪ್ರಜೆಗಳು ಈಡೇರಲಕ್ಕು ಸವ೯ಜ್ಞ.
       ಕಕ೯ರಾಶಿಗೆ ಗುರುವು ಬಂದರೆ,ಹಿಂಗಾರಿ ಮಳೆಗಳು ಚೆನ್ನಾಗಿ ಆಗಿ ದೇಶದಲ್ಲಿ ಬೆಳೆಗಳು ಸಮೃದ್ಧವಾಗಿ ಎಲ್ಲರೂ ಸುಖವಾಗಿ ಬಾಳುವರು.
*ಸಿಂಹರಾಶಿ: ಸಿಂಗಕ್ಕೆ ಗುರು ಬರಲು,ಸಂಗರವು ಘನವಕ್ಕು ಅಂಗನೆಗೆ ಬಾಧೆ ಪಿರಿದಕ್ಕು ಕಡೆಯ ಮಳೆ ಹಿಂಗಾರಿಯಕ್ಕು ಸವ೯ಜ್ಞ.
     ಸಿಂಹರಾಶಿಗೆ ಗುರುವು ಬರಲು ದೇಶದಲ್ಲಿ ಭಯಂಕರ ಯುದ್ಧವಾಗುವುದಾಗಲಿ,ಕ್ಷೋಭೆಯುಂಟಾಗುವುದಾಗಲಿ ಸಂಭವಿಸುವುದು .ಸ್ತ್ರೀಯರಿಗೆ ಹೆಚ್ಚು ಬಾಧೆಯಾಗಿ ಕಡೆಯ ಹಿಂಗಾರಿ ಮಳೆ ಬರುವುದು.
   ಕನ್ಯಾರಾಶಿಗೆ ಗುರುವು ಬಂದರೆ ಚಿನ್ನದ ಮಳೆಯಾಗುವುದು.ತುಲಾರಾಶಿಗೆ ಗುರುವು ಬ಼ಂದರೆ ನೆಲೆಯಾಗಿ ಮಳೆಯಾಗುವುದು.ವೃಶ್ಚಿಕ ರಾಶಿಗೆ ಗುರುವು ಬಂದರೆ ಯುದ್ಧವುಂಟಾಗುವುದು.ಧನರಾಶಿಗೆ ಗುರುವು ಬಂದರೆ ಎಲ್ಲೆಡೆ ಸಂಕಟ,ಇಳುವವರಿಲ್ಲದಂತಾಗುವುದು.ಮಕರರಾಶಿಗೆ ಬಂದರೆ ಸಕಲ ಬೆಳೆ ಬೆಳೆದು ಸಂತೋಷದಿಂದ ಇರುವವರು.
  *ಕುಂಭರಾಶಿ:ಕುಂಭಕ್ಕೆ ಗುರು ಬರಲು,ತುಂಬುವವು ಕೆರೆಬಾಂವಿ ಅಂಬರದ ವರೆಗೆ ಬೆಳೆಯೆದ್ದು ಜಗದೊಳಗೆ ಸಂಭ್ರಮವಹುದು ಸವ೯ಜ್ಞ.
     ಕುಂಭರಾಶಿಗೆ ಗುರುವು ಬರಲು ಕೆರೆ-ಬಾವಿಗಳೆಲ್ಲ ತುಂಬಿ ಬೆಳೆಗಳೆಲ್ಲ ಹುಲುಸಾಗಿ ಬೆಳೆದು ಸಂತಸದಿಂದಿರುವವರು.
*ಮೀನರಾಶಿ: ಮೀನಕ್ಕೆ ಗುರು ಬರಲು,ಮಾನ ಖಂಡಗವಕ್ಕು ಕಾನನವೆಲ್ಲ ಬೆಳೆಯಕ್ಕು ಪ್ರಜೆಗಳಿಗೆ ಆನಂದವಕ್ಕು ಸವ೯ಜ್ಞ.
    ಮೀನರಾಶಿಗೆ ಗುರುವು ಬಂದರೆ,ಅಡವಿಯೊಳಗೆಲ್ಲ ಫಸಲು ಹುಲುಸಾಗಿ ಬೆಳೆದು ತೀರ ಅಗ್ಗದ ದರದಲ್ಲಿ ದವಸ-ಧಾನ್ಯಗಳು ಮಾರಾಟವಾಗುವವು.ಬಡವರು ಸಂತಸದಿಂದಿರುವವರು.
                                    (ಆಧಾರ)

-ಹನುಮಂತ.ಮ.ದೇಶಕುಲಕಣಿ೯.
ಸಾ.ಭೋಗೇನಾಗರಕೊಪ್ಪ-58119

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ