ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕ ಭೋಗೇನಾಗರಕೊಪ್ಪದಲ್ಲಿ ಶ್ರೀ.ಸಮರ್ಥ ರಾಮದಾಸರು ಸ್ಥಾಪಿಸಿದ ಹನುಮಂತನ ವಿಗ್ರಹವಿದೆ.ಈ ವಿಗ್ರಹವು ಪ್ರಾಚೀನ ಕಾಲದಾಗಿದ್ದು ಮರಾಠ ಸಾಮ್ರಜ್ಯದಲ್ಲಿ ಸ್ಥಾಪನೆಯಾಗಿದೆ. ದೇವಸ್ಥಾನಕ್ಕೆ ಐತಿಹಾಸಿಕ ಹಿನ್ನಲೆ ಇದೆ.
ಐತಿಹ್ಯ: ಛತ್ರಪತಿ ಶಿವಾಜಿ ಮಹಾರಾಜರಿಂದ 5 ಹಳ್ಳಿಗಳನ್ನು ಇನಾಂ ಪಡೆದು ಶಿವಾಜಿ ಕಟ್ಟಿಸಿದ ಕೋಟೆಯಲ್ಲಿ ವೈಭವವಾಗಿ ದೇಸಾಯಿಯವರ ಆಳುತ್ತಿದ್ದರು. ಶ್ರೀ.ಸಮರ್ಥ ರಾಮದಾಸರು ಹೈಂದವಿ ಸ್ವರಾಜ್ಯದ ಕನಸಿಗಾಗಿ ಮರಾಠ ಸಾಮ್ರಜ್ಯದ ಆಡಳಿತವಿದ್ದೆಡೆಯೆಲ್ಲಾ ಸಂಚರಿಸುತ್ತಾ ಭೋಗೇನಾಗರಕೊಪ್ಪಕ್ಕೆ ವಾಡೆಗೆ ಬಂದರು.ಆಗ ಮುನಿರಾಮನಕೊಪ್ಪ ಎಂದು ಹೆಸರಾದ ಊರು ಕಾಲಾಂತರ ಭಾಗ್ಯನಗರಕೊಪ್ಪ,ಭೋಗೇನಾಗರಕೊಪ್ಪ ಎಂದಾಯಿತು.
ಸಮರ್ಥರ ಉದ್ದೇಶ ಜನರಲ್ಲಿ ದೇಹದಾರ್ಡ್ಯ ಬೆಳೆಸುವದರ ಜತೆಗೆ ಭಕ್ತಿಯ ಅರಿವು ಮೂಡಿಸುವುದು ಆಗಿತ್ತು. ಅದರಂತೆ ಕಲಿಯುಗದ ಬ್ರಹ್ಮನಾದ ಆಂಜನೇಯನ ಉಪಾಸನೆ ಮಾಡಲು ಜನರಿಗೆ ಕರೆ ಇತ್ತರು. ಅಂತೆಯೆ ಸಮರ್ಥರು ದೇಶದ ಮೂಲೆಮೂಲೆಗಳಲ್ಲಿ 1200 ಮಾರುತಿ ದೇವಸ್ಥಾನದ ಪಕ್ಕದಲ್ಲಿಯೆ ಗರಡಿಮನೆಗಳನ್ನು ಸ್ಥಾಪಿಸಿದರು. ಅದರಲ್ಲಿ ಭೋಗೇನಾಗರಕೊಪ್ಪವು ಒಂದು.
ಸಮರ್ಥರು ಗ್ರಾಮಕ್ಕೆ ಆಗಮಿಸಿ ಅದರಾತಿಥ್ಯ ಸ್ವೀಕರಿಸಿ ವಾಡೆದಲ್ಲಿ ಸಂಧ್ಯಾವಂದನೆ,ಪೂಜಾ ಕೈಂಕರ್ಯವನ್ನು ಮುಗಿಸಿಕೊಂಡು ಕೆರೆಯ ಕೋಡೆಯ ಮೇಲೆ ಮಾರುತಿ ವಿಗ್ರಹ ಸ್ಥಾಪಿಸಿದರು.ಮಾರುತಿ ದೇವಸ್ಥಾನದ ಪಕ್ಕದಲ್ಲಿಯೆ ಬಿರುದುಗೋಉಡೆಗೆ ಹೊಂದಿಕೊಂಡಂತೆ ಗರಡಿ ಮನೆ ಈಗಲೂ ಇದೆ. ದೇವಸ್ಥಾನದ ಜೀರ್ಣೋದ್ದಾರ ಕೆಲಸ ನಡೆಯುತ್ತಿದೆ.
ಈ ಮುಖ್ಯಪ್ರಾಣನಿಗೆ ಹನುಮ ಜಯಂತಿ (ದವನದ ಹುಣ್ಣಿಮೆಯಂದು ಏ.22
ರಂದು) ವಿಶೇಷ ಕುಂಕುಮಾರ್ಚನೆ ', ಪೂಜೆ ನಡೆಯುತ್ತದೆ.
**ಹನುಮಂತ.ಮ.ದೇಶಕುಲಕರ್ಣಿ. ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ.ಜಿ.ಧಾರವಾಡ.
ಮೊ.ನಂ.9731741397
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ