ಶನಿವಾರ, ಮಾರ್ಚ್ 14, 2015

ಭಾರತದ ಮಲ್ಬರಿ ನೋನಿಫಲ.

     ನೋನಿ ಹಣ್ಣು:ಮೊರಿಂಡಾ ಶಿಟ್ರೋ ಪೋಲಿಯ ಜಾತಿಗೆ ಸೇರಿದ ಹಣ್ಣು. ಅಮೆರಿಕದಲ್ಲಿ ನೋನಿ ಪಾನೀಯವನ್ನು ಆಹಾರ ಸೇವನೆಯ ನಂತರ ಆರೋಗ್ಯಕರ ಪೇಯವಾಗಿ ಉಪಯೋಗಿಸಿಲಾಗುತ್ತದೆ.ಡಾ.ನೈಲ್ ಸೋಲೊಮನ್ ಎಂಬಾತ ಇಪ್ಪತ್ತನೇ ಶತಮಾನದ ಕೊನೆಯಲ್ಲಿ ಇದರಲ್ಲಿ ಔಷಧೀಯ ಗುಣ, ಪೌಷ್ಟಿಕಾಂಷ್ ಮತ್ತು ರೋಗನಿರೋಧಕ ಶಕ್ತಿ ಇರುವುದನ್ನು ಪತ್ತೆ ಹಚ್ಚಿದ ಬಗ್ಗೆ ದಾಖಲೆಗಳಿವೆ. ನೋನಿಯನ್ನು "ಭಾರತದ ಮಲ್ಬರಿ ಎಂದು ಕರೆಯುತ್ತಾರೆ.ಪೊದೆಯ ರೂಪದ ಈ ಗಿಡ, ಸಾಮಾನ್ಯವಾಗಿ ಹತ್ತು ಅಡಿ ಎತ್ತರಕ್ಕೆ ಬೆಳೆಯುತ್ತದೆ. ಬಿಳಿ ಹೂ ಬಿಟ್ಟ ನಂತರ ಕಾಯಿಯಾಗುತ್ತದೆ. ನೋನಿ ಹಣ್ಣು ಮೂರರಿಂದ ನಾಲ್ಕು ಡಯಾಮೀಟರಿನಷ್ಟು ದೊಡ್ದದಾಗಿರುತ್ತದೆ. ಬಹೂಪಯೋಗಿ ಹಾಗೂ ನೋವು ನಿವಾರಕ ನೋನಿ ಹಣ್ಣು. ನೋನಿ ಎಂಬ ಕಾಡು ಹಣ್ಣಿನ ಮೇಲೆ ಇಡೀ ಜಗತ್ತಿನ ಕಣ್ಣು ಬಿದ್ದಿದೆ. ವಿಶ್ವದ 20 ದೇಶಗಳ 44 ವಿಶ್ವ ವಿದ್ಯಾಲಯಗಳಲ್ಲಿ  ಔಷಧೀಯ ಗುಣಗಳ ಬಗೆಗೆ  ಸಂಶೋಧನೆ ನಡೆದಿದೆ. ನೋನಿಯ ಮಹತ್ವದ ಬಗೆಗೆ ಅಧ್ಯಯನ ನಡೆಸಿದ ಅಮೇರಿಕಾದ ಮೂವರು ವಿಜ್ಞಾನಿಗಳಾದ ಡಾ|| ರಾಬರ್ಟ್. ಎಫ್.ಫರ್ಟಗಾಟ್, ಡಾ||ಲೂಯಿಸ್ ಜೆ. ಇಗ್ನಾರೊ ಹಾಗೂ ಡಾ||ಫೆಂದ ಮುರಾದ್‌ರಿಗೆ 1998ರಲ್ಲಿ ನೋಬಲ್ ಪುರಸ್ಕಾರ ದೊರಕಿದೆ. ವಿಜ್ಞಾನಿಗಳು ನೋನಿಯಲ್ಲಿ ಕಂಡಿದ್ದು  150 ಸಸ್ಯಪೋಷಕಾಂಶಗಳು! ಮನುಷ್ಯ ಜೀವಕೋಶಗಳ ಆರೋಗ್ಯ ಸಂರಕ್ಷಣೆಗೆ ಅತ್ಯಗತ್ಯವಾದ ‘ನೈಟ್ರಿಕ್ ಆಕ್ಸೈಡ್‘ ಇದರಲ್ಲಿದೆ. . ಅಚುಕ,ಆಯುಷ, ತಗಟೆಮರ, ಕಂಬಲ ಪಂಡು, ವೆನ್ನುವ, ಬರ್ತುಂಡಿ ಹೀಗೆ ದೇಶಾದ್ಯಂತ ಮೂಲಿಕಾ ಪಂಡಿತರಿಗೆ ಪರಿಚಿತವಾಗಿದೆ. ನೋನಿ ನಮ್ಮ ನೆಲದ ಅಮೃತಫಲ.
 ಉಪಯೋಗ:
 ನೋನಿ ರಸವನ್ನು ಗಂಟು ನೋವು, ಕೈ ಮಡಚುವ ತೊಂದರೆ, ಕಾಲು ನೋವು ಮತ್ತು ಮಂಡಿ ನೋವಿಗೆ ಪರಿಹಾರವಾಗಿ ಉಪಯೋಗಿಸುತ್ತಿದ್ದಾರೆ. ಉಸಿರಾಟದ ಸಮಸ್ಯೆ ನಿವಾರಣಿಗೂ ಇದು ಉಪಯುಕ್ತ. ಮುರಿದ ಎಲುಬುಗಳನ್ನು ಮರುಜೋಡಿಸಲು ಹಾಗೂ ಡಯಾಬಿಟಸ, ಏರು ರಕ್ತದೊತ್ತಡ ನಿಯಂತ್ರಣಕ್ಕೂ ಬಳಕೆಯಾಗುತ್ತಿದೆ. ಮಲಬದ್ಧತೆಯ ಸಮಸ್ಯೆ ಇರುವವರೂ ನೋನಿ ರಸ ಸೇವಿಸಬಹುದು.ಅನೇಕ ವಿಶ್ವವಿದ್ಯಾನಿಲಯಗಳು ಸಂಶೋಧನೆ ಸಮೀಕ್ಷೆಗಳ ಪ್ರಕಾರ, ನೋನಿಯ ರಸ ಆರೋಗ್ಯವರ್ಧಕ ಎಂಬುದು ದ್ರಢಪಟ್ಟಿದೆ. ಕೀಲು ನೋವು, ಹ್ರದಯ ಸಂಬಂಧ ಕಾಯಿಲೆ, ಖಿನ್ನತೆ ಹಾಗೂ ನಿದ್ರಾಹೀನತೆಯಿಂದ ತೊಂದರೆ ಅನುಭವಿಸುತ್ತಿರುವವರು ಇದರ ಮೊರೆಹೋಗಬಹುದು.
    ನೋನಿಯನ್ನು ಔಷಧಿಯಾಗಿ ಸೇವಿಸಬಯಸುವವರು ಮೊದಲ ಮೂರು ದಿನ ಬೆಳಗಿನ ಉಪಹಾರಕ್ಕೆ ಮುಂಚಿತವಾಗಿ ಒಂದು ಟೀ ಸ್ಪೂನ್ ಸೇವಿಸಬೇಕು. ಒಂದು ತಿಂಗಳ ಸೇವನೆಯ ನಂತರ ಉಪಹಾರಕ್ಕೆ ಮುಂಚೆ ಎರಡೂ ಸ್ಪೂನ್, ಮಧ್ಯಾಹ್ನ ಊಟಕ್ಕಿಂತ ಮುಂಚೆ ಎರಡೂ ಸ್ಪೂನ್ ರಸ ಸೇವಿಸಬೇಕು. ನೋನಿಯ ಎಲೆಯೂ ಉಪಯುಕ್ತ. ಇದರ ಎಲೆಯಿಂದ ತಗೆದ ರಸ ಅನೇಕ ರೀತಿಯ ಚರ್ಮ ರೋಗಗಳನ್ನು ನಿವಾರಿಸಿದೆ. ಎಲೆಯ ಕಷಾಯ ಜ್ವರ ನಿವಾರಕ
      ನೋನಿ ಗಿಡದ ಎಲೆ, ತೊಗಟೆ, ಬೇರು ಮತ್ತು ಹಣ್ಣನ್ನು ವಿವಿಧ ರೋಗಗಳ ನಿವಾರಣೆಗೆ ಬಳಸಬಹುದಾಗಿದೆ. ಆದರೆ ದುರ್ನಾತ ಬೀರುವ ಬಲಿತ ಹಣ್ಣಿನ ರಸವನ್ನು ಹೆಚ್ಚಾಗಿ ಬಳಸಲಾಗುತ್ತದೆ.ಪ್ರಯೋಜನಗಳು ಬೆನ್ನು ಮತ್ತು ಗಂಟು ನೋವು ಇರುವವರು ಸೇವಿಸಿದರೆ ಕ್ರಮೇಣ ಅದು ವಾಸಿಯಾಗುತ್ತದೆ.ಡಯಾಬಿಟಿಸ್, ರಕ್ತದೊತ್ತಡ ಮತ್ತು ಉಸಿರಾಟದ ಸಮಸ್ಯೆ ಇರುವವರು ವೈದ್ಯರ ಸಲಹೆಯೊಂದಿಗೆ ಬಳಸಿ ಗುಣಮುಖರಾಗಬಹುದು.ತಜ್ಞರ ಸಲಹೆಯೊಂದಿಗೆ ಕ್ರಮಬದ್ಧವಾಗಿ ದೀರ್ಘಕಾಲ ನೋನಿ ರಸ ಸೇವಿಸಿ ಮಲಬದ್ಧತೆಯ ಸಮಸ್ಯೆ ಪರಿಹರಿಸಿಕೊಳ್ಳಬಹುದು. ರಸ ಸೇವಿಸುವ ಕ್ರಮನೋನಿ ಹಣ್ಣಿನ ರಸವಿರಲಿ ಅಥವಾ ಎಲೆಯಿಂದ ತೆಗೆದ ರಸವಿರಲಿ, ಔಷಧವಾಗಿ ಸೇವಿಸಬಯಸುವವರು ಬೆಳಗ್ಗೆ 1 ಟೀ ಸ್ಪೂನ್ ಮತ್ತು ಮಧ್ಯಾಹ್ನ 2 ಟೀ ಸ್ಪೂನ್ ಖಾಲಿ ಹೊಟ್ಟೆಗೆ ಸೇವಿಸಬಹುದು. ಮಾರುಕಟ್ಟೆಯಲ್ಲೂ ನೋನಿ ರಸ ದೊರೆಯುತ್ತದೆ. ದೇಹದ ಸ್ಥಿತಿಗೆ ಅನುಗುಣವಾಗಿ ವೈದ್ಯರ ಸಲಹೆ ಪಡೆದು ಸೇವಿಸುವುದು ಸೂಕ್ತ ನೋನಿ ಗಿಡದ ಎಲೆಯನ್ನು ಬಳಸಿ ತಯಾರಿಸಿದ ಕಷಾಯ ದೇಹದ ತಾಪವನ್ನು ಶಮನಗೊಳಿಸುತ್ತದೆ. ಸದ್ಯಕ್ಕೆ ನೋನಿ ರಸ ಬಳಸಿ ಕ್ಯಾನ್ಸರ್, ಏಡ್ಸ್‌ನಂತಹ ರೋಗಗಳನ್ನು ನಿಯಂತ್ರಿಸುವ ಕುರಿತು ಸಂಶೋಧನೆಗಳು ನಡೆಯುತ್ತಿವೆ.
  -ಹನುಮಂತ. ಮ.ದೇಶಕುಲಕಣಿ೯
 ಸಾ.ಭೋಗೇನಾಗರಕೊಪ್ಪ-581196
 ತಾ.ಕಲಘಟಗಿ.ಜಿ.ಧಾರವಾಡ
 ಮೊ.ನಂ.9731741397

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ