ಮಂಗಳವಾರ, ಮಾರ್ಚ್ 24, 2015

ಭೋಗೇನಾಗರಕೊಪ್ಪದ ಪಂಪಾ ವಿರೂಪಾಕ್ಷೇಶ್ವರ


      ಕಲಘಟಗಿ ತಾಲೂಕಿನ ಭೋಗೇನಾಗರಕೊಪ್ಪ ಇನಾಂ ಗ್ರಾಮದಲ್ಲಿಯ ದೇಸಾಯಿ ವಾಡೇದಲ್ಲಿ ಪ್ರತಿಷ್ಠಾಪನೆಗೊಂಡಿರುವ ಶ್ರೀ.ಪಂಪಾವಿರೂಪಾಕ್ಷೇಶ್ವರನಿಗೆ ಮಹಾಶಿವರಾತ್ರಿಯಂದು ವಿಶೇಷ ಪೂಜೆ ಜರುಗಲಿದೆ.
 ಮರಾಠಾ-ಪೇಶ್ವೇ ದಬಾ೯ರದಲ್ಲಿಯ ದೇಸಗತಿಯನ್ನು ಇನಾಂ ಹಳ್ಳಿಯಾದ ಭೋಗೇನಾಗರಕೊಪ್ಪದ ದೇಸಾಯಿ ವಾಡೇದಲ್ಲಿ ಪ್ರತಿಷ್ಠಾಪನೆಯಾಗಿದ್ದಕ್ಕೆ ಇತಿಹಾಸವಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಭೋಗೇನಾಗರಕೊಪ್ಪ ದೇಸಾಯರ ಪೂವ೯ಜರು ಹಂಪೆ ಪಂಪಾಪತಿ ದೇವಸ್ಥಾನದ ಅಚ೯ಕರಾಗಿದ್ದರು.ಸಾಮ್ರಾಜ್ಯದ ಪತನಾನಂತರ ಇತ್ತ ಬರುವಾಗ ಹಂಪೆಯಿಂದ ಉತ್ಕೃಷ್ಟ ಸಾಲಿಗ್ರಾಮ ತಮ್ಮೊಡನೆ ತಂದರು.ಈ ಸಾಲಿಗ್ರಾಮದ ಇನ್ನೊಂದು ವಿಶೇಷವೆಂದರೆ ಸಾಲಿಗ್ರಾಮದ ಮುಂದೆ ಗಣಪತಿ ಇದ್ದಾನೆ. "ತಂದೆ-ಮಗನ ಸಮ್ಮಿಲನ " ಅಖಂಡ ಶಿಲೆಯಲ್ಲಿರುವುದು ಮಹತ್ವದ ಸಂಗತಿ!.
     ದೇಶಸಂಚಾರಿಯಾಗಿದ್ದ ಹಂಪೆ ವಿರೂಪಾಕ್ಷ ದೇಗುಲದ ಮುಖ್ಯ ಗೋಪುರ ನಿಮಾ೯ಪಕ ಶ್ರೀ.ಬಿಷ್ಟಪ್ಪಯ್ಯ ಗುರುಗಳು ದೇಸಾಯರ ಆಹ್ವಾನದ ಮೇರೆಗೆ ಶಿವರಾತ್ರಿ ಹಿಂದಿನ ದಿನ ವಾಡೇಗೆ ಆಗಮಿಸಿ ಅತಿಥ್ಯ ಸ್ವೀಕರಿಸಿ ಮರುದಿನ ನಿರಾಹಾರ ಉಪವಾಸ ನಿಷ್ಠರಾಗಿ ಸಾಲಿಗ್ರಾಮನ್ನು ಪುನರ್ ಪ್ರತಿಷ್ಟಾಪಿಸಿ" ಪಂಪಾವಿರೂಪಾಕ್ಷೇಶ್ವರ " ಎಂದು ಕರೆದರು.ಸುಮಾರು 400 ಶತಮಾನಗಳ ಇತಿಹಾಸದ ಸಾಲಿಗ್ರಾಮ ಇದೆ.     ಪಂಪಾವಿರೂಪಾಕ್ಷೇಶ್ವರನಿಗೆ ಜಲಾಭಿಷೇಕ,ಕ್ಷೀರಾಭಿಷೇಕ,ಶ್ರೀಗಂಧ ಲೇಪನ,ಮಹಾಮಂಗಳಾರತಿ ನಡೆಯಲಿದೆ.

-ಹನುಮಂತ.ಮ.ದೇಶಕುಲಕಣಿ೯
ಸಾ.ಭೋಗೇನಾಗರಕೊಪ್ಪ-581196 ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ