ದೇಶದೆಲ್ಲೆಡೆ ಗಣಪತಿಯನ್ನು ಕೂಡ್ರಿಸುವ ಸಡಗರ!ಗಣಪತಿಯನ್ನು ಹನ್ನೊಂದು ದಿನ,ಒಂಭತ್ತು ದಿನ,ಏಳು ದಿನ,ಐದು ದಿನ,ಮೂರು ದಿನ,ಒಂದು ದಿನ ಹೀಗೆ ಬೆಸದಿನಗಳಲ್ಲಿ ಕೂಡ್ರಿಸಿದರೆ ಧಾರವಾಡ ಜಿಲ್ಲಾ ಕಲಘಟಗಿ ತಾಲ್ಲೂಕಿನ ಭೋಗೇನಾಗರಕೊಪ್ಪದ ದೇಸಾಯಿಯವರ ವಾಡೆದಲ್ಲಿ ಗಣಪತಿಯು ಅಧ೯ದಿನ ಮಾತ್ರ ಕೂರುತ್ತಾನೆ.ಇದು ಆಶ್ಚರ್ಯವಾದರೂ ಐತಿಹಾಸಿಕ ಸತ್ಯದಿಂದ ಕೂಡಿದೆ.ಆ ಐತಿಹಾಸಿಕ ಹಿನ್ನೆಲೆ ಹೀಗಿದೆ.
ಈಗಿರುವ ದೇಸಾಯಿಯವರ ಪೂವ೯ಜರು ಬಿದರಿಕೋಟೆಯಲ್ಲಿ ದೇಸಗತಿ ಜಮೀನ್ದಾರರಾಗಿದ್ದರು ತದನಂತರ ಹಂಪೆಯ ಪಂಪಾಪತಿ ದೇಗುಲದ ಅಚ೯ಕರಾದರು.ವಿಜಯನಗರ ಸಾಮ್ರಾಜ್ಯ ಪತನಾನಂತರ ಧಾರವಾಡದತ್ತ ಬಂದಾಗ ಧಾರವಾಡ ಮರಾಠಾಧಿಪತಿ ಛತ್ರಪತಿ ಶಿವಾಜಿ ಆಳ್ವಿಕೆಯಲ್ಲಿತ್ತು. ದೇಸಾಯಿಯವರ ಹಿನ್ನೆಲೆ ಅರಿತು ಅವರ,ಪಾಂಡಿತ್ಯಕ್ಕೆ ಐದು ಹಳ್ಳಿಗಳನ್ನು ಇನಾಮು ನೀಡಿದ.ಮುರಕಟ್ಟಿ,ಮನಗುಂಡಿ,ರಾಮನಾಳ,ಗಂಜೀಗಟ್ಟಿ ಪೈಕಿ ಭೋಗೇನಾಗರಕೊಪ್ಪದಲ್ಲಿ ಶಿವಾಜಿ ಕಟ್ಟಿಸಿದ ವಾಡೆದಲ್ಲಿ ನೆಲೆಸಿ ಆಡಳಿತ ನೋಡಿಕೊಳ್ಳುತ್ತಿದ್ದರು.
ಹಬ್ಬದ ದಿನ ಪ್ರಾತಃಕಾಲ ಪ್ರತಿಷ್ಠಾಪನೆಗೊಂಡು ಮಧ್ಯಾಹ್ನ ವಿಸಜ೯ನೆಯಾಗುತ್ತಾನೆ ಗಣಪ.ಸ್ವಾತಂತ್ರ್ಯ ಪೂವ೯ಕಾಲ ಕಲಘಟಗಿ ಸುತ್ತಲಿನ ಪ್ರದೇಶದಲ್ಲಿಯೂ ತೀವ್ರ ಬರ ಆವರಿಸಿತ್ತು, ಆಗ ಸಂಚಿನಿಂದ ಅಧಿಕಾರ ಪಡೆದ ಬ್ರಿಟಿಷರು ಪ್ರಬಲರಾಗಿದ್ದರು.ಉಪ್ಪಿಗೂ ಸಹಿತ ಕರ ವಿಧಿಸಿದ್ದರು.ಸುತ್ತಲಿನ ದೇಸಗತಿ ಹಳ್ಳಿಗಳು ಕಂದಾಯ ಕಟ್ಟಿರಲಿಲ್ಲ.ಹೀಗಾಗಿ ದೇಸಾಯಿಯವರಿಗೂ-ಬ್ರಿಟಿಷರಿಗೂ ವಾಗ್ವಾದವಾಗಿತ್ತು. ಅವರ ಸಣ್ಣ ಸಂಸ್ಥಾನಗಳ ಮೇಲೆ ಕಣ್ಣು ಬಿದ್ದಿತ್ತು.ದಾಸ್ತಿಕೊಪ್ಪ ಬಂಗಲೆಯಲ್ಲಿರುತ್ತಿದ್ಥ ಬ್ರಿಟಿಷ್ ಅಧಿಕಾರಿ ಭೋಗೇನಾಗರಕೊಪ್ಪ ಗ್ರಾಮದ ಮರಾಠರ ಹಿತ್ತಲನ್ನು ಗಂಜೀಗಟ್ಟಿ ಸರಹದ್ದಿನಲ್ಲಿಟ್ಟು ಗ್ರಾಮನಕಾಶೆ ತಯಾರಿಸಿ ಅಧಿಕಾರ ತಕ್ಕ ಮಟ್ಟಿಗೆ ವಿಕೇಂದ್ರಿಕರಿಸಿದ ಆಗಿನ ಬ್ರಿಟಿಷ್ ಗವನ೯ರ್ ಜನರಲ್ ಆಗಿದ್ದ ಲಾಡ್೯ ಡಾಲ್ಽಹೌಸಿ ಅದೇ ಸಮಯಕ್ಕೆ " ದತ್ತಕಕಾಯ್ದೆ" ಜಾರಿಗೆ ತಂದಿದ್ದ,ಈ ಸಂಸ್ಥಾನವನ್ನು ಕಾಯ್ದೆಯಡಿ ಒಳಪಡಿಸಲು ಮುಂದಾದಾಗ ಆಕ್ರೋಶಗೊಂಡ ದಿ.ಶ್ರೀಮಂತ ವಿರೂಪಾಕ್ಷ.ಅನಂತರಾವ್,ದೇಸಾಯಿ.ಚಳುವಳಿ ಆರಂಭಿಸಿದರು,ಮುಂದೆ ಇವರು ಗೋವಾ ವಿಮೋಚನೆ ಚಳುವಳಿಯಲ್ಲಿ ಭಾಗವಹಿಸಿದ್ದರು.ಜೊತೆಗೆ ಘರಾಣೆದ ಬೇಂದ್ರೆಯವರ ಒಡನಾಡಿಯಾಗಿದ್ದ ದೇಸಾಯಿ ದತ್ತಮೂತಿ೯ ಪತ್ರಿಕೆಗಳಿಗೆ ದೇಶಪ್ರೇಮಿ ಲೇಖನ ಭೂಗತವಾಗಿದ್ದುಕೊಂಡು ಬರೆಯುತ್ತಿದ್ದರು,
ಇದೇ ಸಂದಭ೯ದಲ್ಲಿ ಹುಬ್ಬಳ್ಳಿಗೆ ಆಗಮಿಸಿದ ಲೋಕಮಾನ್ಯ ತಿಲಕರು ಗಣೇಶೋತ್ಸವದ ಬಗ್ಗೆ ವಿವರಿಸಿದ್ದರು.ಸಾವ೯ಜನಿಕವಾಗಿ ಗಣಪತಿ ಪ್ರತಿಷ್ಠಾಪಿಸಿ ಬ್ರಿಟಿಷರ ವಿರುದ್ಧ ಹೇಗೆ ಒಂದಾಗಬಹುದೆಂದು ವಿವರಿಸಿದ್ದರು.ಅವರ ಪ್ರಭಾವಕ್ಕೆ ಒಳಗಾದ ದೇಸಾಯಿಯವರು ತಮ್ಮ ವಾಡೇದಲ್ಲಿ ಐದು ದಿನದ ಗಣೇಶೋತ್ಸವ ಬಹು ವಿಜೃಂಭಣೆಯಿಂದ ಜರುಗಿತು.
ಹೀಗೆ ಒಂದುವಷ೯ ಗಣೇಶೋತ್ಸವದಲ್ಲಿ ದೇಸಾಯಿಯವರು ಬ್ರಿಟಿಷ್ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆಂದು ಸೈನ್ಯ ದಾಳಿ ನಡೆಸಿತು.ದಾಳಿ ಮಾಡಿದ್ದು ಮಧ್ಯಾಹ್ನದ ಸಮಯ ಗಣಪತಿಯ ಪೂಜೆಯನ್ನು ಮುಗಿಸಿ ತೀಥ೯-ಪ್ರಸಾದ ಗ್ರಾಮಸ್ಥರಿಗೆ ವಿತರಿಸಿಯಾಗಿತ್ತು.ಇನ್ನೇನು ದೇಸಾಯಿಯವರು ಊಟಕ್ಕೆ ಕೂಡ್ರುವವರಿದ್ದರು,ದಾಳಿ ಮನೆ ಬಾಗಿಲಿಗೆ ಬಂದ ವಿಷಯ ತಿಳಿದು ;ಬ್ರಿಟಿಷರು ಒಳಬಂದು ಗಣಪತಿಗೆ ಧಕ್ಕೆ ಮಾಡುವವರೆಂದು ವಾಡೇದಲ್ಲಿರುವ,ಬಾವಿಯಲ್ಲಿ ವಿಸಜ೯ನೆ ಮಾಡಿ ಪಶ್ಚಿಮದ್ವಾರದ ಮುಖಾಂತರ ಪರಾರಿಯಾದರು.ತಾವು ಬರುವ ಮುಂಚೆ ಏನು ನಡೆದಿದೆಯೆಂದು ತಿಳಿಯಲಿಲ್ಲ.ಚಿಕ್ಕ ಕೋಟೆಯ ಮೇಲೆ ದಾಳಿ ನಡೆಸಿದ ಭಾರಿ ಸೈನ್ಯ ಹಾಸ್ಯಾಸ್ಪದವಾಗಿ ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿತು.
ಭೋಗೇನಾಗರಕೊಪ್ಪ ಕೋಟೆಯ ಮೇಲೆ ದಾಳಿಯ ಇತಿಹಾಸ ಮರೆಯದ ದೇಸಾಯಿಯವರು ಇಂದಿಗೂ ಅಧ೯ದಿನ ಗಣಪತಿ ಕೂರಿಸುವ ಪರಿಪಾಠ ಮುಂದುವರೆಸಿಕೊಂಡು ಬಂದಿದ್ದಾರೆ.ಬೆಳಿಗ್ಗೆ ಗಣಪತಿ ಪ್ರತಿಷ್ಠಾಪಿಸಿ ಪೂಜೆ,ನೈವೇದ್ಯ,ಮಹಾಮಂಗಳಾರತಿ ನಂತರ ಮಧ್ಯಾಹ್ನದ ಊಟಕ್ಕೂ ಮುನ್ನವೇ ವಿಸಜಿಸಲಾಗುತ್ತಿದೆಯೆಂದು ಮನೆತನದ ಹಿರಿಯರಾದ ಬಸವಂತರಾವ್ ದೇಶಕುಲಕಣಿ೯ ,ರಾಮಚಂದ್ರ ದೇಶಕುಲಕಣಿ೯ ಇತಿಹಾಸ ನೆನಪಿಸಿಕೊಳ್ಳುತ್ತಾರೆ.
ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಕುಟುಂಬ ಪರಂಪರಾಗತವಾಗಿ ಬಂದ ಭಕ್ತಿಗೆ ಧಕ್ಕೆ ಆಗದಂತೆ ಬ್ರಿಟಿಷರಿಗೂ ಮಣಿಯದಂತೆ ದೇಶಭಕ್ತಿ ಮೆರೆದ ಪರಿ ಇದು!.
-ಹನುಮಂತ.ಮ.ದೇಶಕುಲಕಣಿ೯.
ಸಾ.ಭೋಗೇನಾಗರಕೊಪ್ಪ-581196 ತಾ.ಕಲಘಟಗಿ ಜಿ.ಧಾರವಾಡ
ಮೊ.ನ಼ಂ.9731741397
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ