ಶನಿವಾರ, ಮಾರ್ಚ್ 28, 2015

ಭೋಗೇನಾಗರಕೊಪ್ಪದ ಶಾಲ್ಮಲಾ ಧಬೆಧಬೆ..

ಕಲಘಟಗಿ :ತಾಲೂಕಿನ ಭೋಗೇನಾಗರಕೊಪ್ಪ ಗ್ರಾಮದಿಂದ 3 ಕಿ.ಮೀ.ದೂರದಲ್ಲಿರುವ ಭೋಗೇನಾಗರಕೊಪ್ಪ ಧಬೆಧಬೆ ಶಾಲ್ಮಲಾ ಆಣೆಕಟ್ಟು ಇದೆ.  ಭೋಗೇನಾಗರಕೊಪ್ಪ ಅಂದಿನ ದೇಸಗತಿ ವತನದಾರರಾದ ದಿ.ಬಸವಂತ.ಲಿಂಗೋ.ದೇಸಾಯಿ ಅವರ ಸಲಹೆ ಮೇರೆಗೆ 1857ರಲ್ಲಿ ಬ್ರಿಟಿಷರ ಸಕಾ೯ರ ಕೃಷಿ ಜಮೀನುಗಳ  ನೀರಾವರಿಗಾಗಿ ಕಟ್ಟಿಸಿದ್ದರು. ಇದು " ದಿ ಬಾಂಬೆ ಗೆಜೆಟಿಯರ್ ಆಫ್ ಧಾರವಾಡ  ಡಿಸ್ಟ್ರಿಕ್ಟ್"ನಲ್ಲಿ ದಾಖಲಾಗಿದೆ.  ಸುತ್ತಲಿನ ತೋಟಗಳು,ಹೊಲಗಳು ಈ ನೀರನ್ನು ಅವಲಂಬಿಸಿವೆ.ಮೊದಲು ಪರಿಶುಭ್ರ ನೀರು ಬರುತ್ತಿದ್ದಾಗ ಸಂಕ್ರಾಂತಿಗೆ,ಶ್ರಾವಣ ಮಾಸದಲ್ಲಿ ಜನ ಪುಣ್ಯ ಸ್ನಾನಕ್ಕೆ ಬರುತ್ತಿದ್ದರು.ಪಿಕ್ಽನಿಕ್ಽಗೆ ಬರುತ್ತಿದ್ದರು.ಶಾಲ್ಮಲಾ ನದಿ ತಟದಲ್ಲಿ ತ್ರ್ಯಯಂಬಕೇಶ್ವರನಂತೆ ಭೋಗೇನಾಗರಕೊಪ್ಪದ ನಂದೀಶ್ವರ,ಕಾಮಧೇನು ಕಲ್ಮೇಶ್ವರ,ಮಿಶ್ರಿಕೋಟಿ ರಾಮೇಶ್ವರ ಸುತ್ತುವರೆದಿವೆ.                        
   ಆದರೀಗ ಮಹಾಪೂರ ಬಂದಾಗ ಕಲುಷಿತ ನೀರು ಭೋಗ೯ರೆಯುತ್ತಿದೆ.ಕಾರಣ,ಹುಬ್ಬಳ್ಳಿಯ ಚರ಼ಂಡಿ ನೀರು,ಆಮ್ಲೀಯ ನೀರು ಮಿಶ್ರವಾಗಿ ಶಾಲ್ಮಲಾ ಮಲೀನವಾಗಿದೆ.ಆಗಿನ ನೀರಾವರಿ ಸಚಿವರಾದ ಬಸವರಾಜ.ಬೊಮ್ಮಾಯಿಗೆ 2ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.ಶುದ್ದ ನೀರಿಗೆ ಅಶುದ್ಧಗೊಳಿಸುವ ಹಕ್ಕನ್ನು ಕೊಟ್ಟವರಾರು.    
-ಹನುಮಂತ.ಮ.ದೇಶಕುಲಕಣಿ೯       
ಸಾ,ಭೋಗೇನಾಗರಕೊಪ್ಪ -581196 
   ತಾ.ಕಲಘಟಗಿ ಜಿ.ಧಾರವಾಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ