ಶುಕ್ರವಾರ, ಮಾರ್ಚ್ 11, 2016

ಕರ್ನಾಟಕದ ಕನ್ನಡ ವಿಶ್ವಕೋಶ

1 ದಾನ ಚಿಂತಾಮಣಿ→ ಅತ್ತಿಮಬ್ಬೆ
2 ಕನ್ನಡ ಕುಲಪುರೋಹಿತ→ ಆಲೂರು ವೆಂಕಟರಾಯ
3 ಕನ್ನಡದ ಶೇಕ್ಸ್ಪಿಯರ್→ ಕಂದಗಲ್ ಹನುಮಂತರಾಯ
4 ಕನ್ನಡದ ಕೋಗಿಲೆ→ ಪಿ.ಕಾಳಿಂಗರಾವ್
5 ಕನ್ನಡದ ವರ್ಡ್ಸ್ವರ್ತ್→ ಕುವೆಂಪು
6 ಕಾದಂಬರಿ ಸಾರ್ವಭೌಮ→ ಅ.ನ.ಕೃಷ್ನರಾಯ
7 ಕರ್ನಾಟಕ ಪ್ರಹಸನ ಪಿತಾಮಹ→ ಟಿ.ಪಿ.ಕೈಲಾಸಂ
8 ಕರ್ನಾಟಕದ ಕೇಸರಿ→ ಗಂಗಾಧರರಾವ್ ದೇಶಪಾಂಡೆ
9 ಸಂಗೀತ ಗಂಗಾದೇವಿ→ ಗಂಗೂಬಾಯಿ ಹಾನಗಲ್
10 ನಾಟಕರತ್ನ→ ಗುಬ್ಬಿ ವೀರಣ್ಣ
11 ಚುಟುಕು ಬ್ರಹ್ಮ→ ದಿನಕರ ದೇಸಾಯಿ
12 ಅಭಿನವ ಪಂಪ→ ನಾಗಚಂದ್ರ
13 ಕರ್ನಾಟಕ ಸಂಗೀತ ಪಿತಾಮಹ→ ಪುರಂದರ ದಾಸ
14 ಕರ್ನಾಟಕದ ಮಾರ್ಟಿನ್ ಲೂಥರ್→ ಬಸವಣ್ಣ
15 ಅಭಿನವ ಕಾಳಿದಾಸ→ ಬಸವಪ್ಪಶಾಸ್ತ್ರಿ
16 ಕನ್ನಡದ ಆಸ್ತಿ→ ಮಾಸ್ತಿ ವೆಂಕಟೇಶ ಅಯ್ಯಂಗಾರ್
17 ಕನ್ನಡದ ದಾಸಯ್ಯ→ ಶಾಂತಕವಿ
18 ಕಾದಂಬರಿ ಪಿತಾಮಹ→ ಗಳಗನಾಥ
19 ತ್ರಿಪದಿ ಚಕ್ರವರ್ತಿ→ ಸರ್ವಜ್ಞ
20 ಸಂತಕವಿ→ ಪು.ತಿ.ನ.
21 ಷಟ್ಪದಿ ಬ್ರಹ್ಮ→ ರಾಘವಾಂಕ
22 ಸಾವಿರ ಹಾಡುಗಳ ಸರದಾರ→ ಬಾಳಪ್ಪ ಹುಕ್ಕೇರಿ
23 ಕನ್ನಡದ ನಾಡೋಜ→ ಮುಳಿಯ ತಿಮ್ಮಪ್ಪಯ್ಯ
24 ಸಣ್ಣ ಕತೆಗಳ ಜನಕ→ ಮಾಸ್ತಿ ವೆಂಕಟೇಶ ಅಯ್ಯಂಗಾರ್
25 ಕರ್ನಾಟಕ ಶಾಸನಗಳ ಪಿತಾಮಹ→ ಬಿ.ಎಲ್.ರೈಸ್
26 ಹರಿದಾಸ ಪಿತಾಮಹ→ ಶ್ರೀಪಾದರಾಯ
27 ಅಭಿನವ ಸರ್ವಜ್ಞ→ ರೆ. ಉತ್ತಂಗಿ ಚೆನ್ನಪ್ಪ
28 ವಚನಶಾಸ್ತ್ರ ಪಿತಾಮಹ→ ಫ.ಗು.ಹಳಕಟ್ಟಿ
29 ಕವಿ ಚಕ್ರವರ್ತಿ→ ರನ್ನ
30 ಆದಿಕವಿ→ ಪಂಪ
31 ಉಭಯ ಚಕ್ರವರ್ತಿ→ ಪೊನ್ನ
32 ರಗಳೆಯ ಕವಿ→ ಹರಿಹರ
33 ಕನ್ನಡದ ಕಣ್ವ→ ಬಿ.ಎಂ.ಶ್ರೀ
34 ಕನ್ನಡದ ಸೇನಾನಿ→ ಎ.ಆರ್.ಕೃಷ್ಣಾಶಾಸ್ತ್ರಿ
35 ಕರ್ನಾಟಕದ ಉಕ್ಕಿನ ಮನುಷ್ಯ→ ಹಳ್ಳಿಕೇರಿ ಗುದ್ಲೆಪ್ಪ
36 ಯಲಹಂಕ ನಾಡಪ್ರಭು→ ಕೆಂಪೇಗೌಡ
37 ವರಕವಿ→ ಬೇಂದ್ರೆ
38 ಕುಂದರ ನಾಡಿನ ಕಂದ→ ಬಸವರಾಜ ಕಟ್ಟೀಮನಿ
39 ಪ್ರೇಮಕವಿ→ ಕೆ.ಎಸ್.ನರಸಿಂಹಸ್ವಾಮಿ
40 ಚಲಿಸುವ ವಿಶ್ವಕೋಶ→ ಕೆ.ಶಿವರಾಮಕಾರಂತ
41 ಚಲಿಸುವ ನಿಘಂಟು→ ಡಿ.ಎಲ್.ನರಸಿಂಹಾಚಾರ್
42 ದಲಿತಕವಿ→ ಸಿದ್ದಲಿಂಗಯ್ಯ
43 ಅಭಿನವ ಭೋಜರಾಜ→ ಮುಮ್ಮಡಿ ಕೃಷ್ಣರಾಜ ಒಡೆಯರು
44 ಪ್ರಾಕ್ತನ ವಿಮರ್ಶಕ ವಿಚಕ್ಷಣ→ ಆರ್.ನರಸಿಂಹಾಚಾರ್ಯ್
   -ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಹಸಿರುಮನೆ ಪರಿಣಾಮ

ಭೂಮಿಯ ವಾತಾವರಣ, ಭೂಮಿಯ ಮೇಲ್ಮೈ ಮತ್ತು ಬಾಹ್ಯಾಕಾಶಗಳ ನಡುವೆ ನಡೆಯುವ ಶಕ್ತಿ ವಿನಿಮಯಗಳ ಯೋಜಿತ ನಿರೂಪಣೆ.ಭೂ ಮೇಲ್ಮೈ ಹೊರಸೂಸಿದ ಶಕ್ತಿಯನ್ನು ಹಿಡಿದಿಡುವ ಮತ್ತು ಮರುಬಳಸುವ ವಾತಾವರಣದ ಸಾಮರ್ಥ್ಯವು ಹಸಿರುಮನೆ ಪರಿಣಾಮದ ಗುಣಲಕ್ಷಣಗಳನ್ನು ವಿವರಿಸುತ್ತದೆ.   
   ಅವಗೆಂಪು ವಿಕಿರಣಗಳನ್ನು ಹೀರಿಕೊಳ್ಳುವ ಮತ್ತು ಅದನ್ನು ಹೊರಹಾಕುವ ವಿವಿಧ ಅನಿಲಗಳು ವಾತಾವರಣವೊಂದರಲ್ಲಿ ಸಂಗ್ರಹವಾಗುವ ಕಾರಣದಿಂದ ಗ್ರಹ ಅಥವಾ ಉಪಗ್ರಹವೊಂದರ ಮೇಲ್ಮೈ ಬಿಸಿಯಾಗುವುದನ್ನು ಹಸಿರುಮನೆ ಪರಿಣಾಮ ಎಂದು ಕರೆಯುತ್ತಾರೆ.
   ಈ ರೀತಿಯಾಗಿ ಹಸಿರುಮನೆ ಅನಿಲಗಳು ಬಿಸಿಯನ್ನು ಮೇಲ್ಮೈ-ವಾಯುಮಂಡಲ ವ್ಯವಸ್ಥೆಯೊಳಗಡೆ ಬಂಧಿಸಿಡುತ್ತವೆ. ಈ ಕಾರ್ಯವಿಧಾನವು ವಾಸ್ತವಿಕ ಹಸಿರು ಮನೆಯೊಂದರದ್ದಕ್ಕಿಂತ ಮೂಲಭೂತವಾಗಿ ಭಿನ್ನವಾಗಿದ್ದು, ಅದು ಬಿಸಿ ಗಾಳಿಯನ್ನು ವ್ಯವಸ್ಥೆಯನ್ನು ಒಳಗೇ ಪ್ರತ್ಯೇಕಿಸುವ ಮೂಲಕ ಕಾರ್ಯ ನಿರ್ವಹಿಸುವುದರಿಂದ,  ತಾಪವು ನಷ್ಟವಾಗುವುದಿಲ್ಲ. ಹಸಿರುಮನೆ ಪರಿಣಾಮದ ಪರಿಕಲ್ಪನೆಯನ್ನು ಮೊದಲು 1824ರಲ್ಲಿ ಜೋಸೆಫ್ ಫೂರಿಯರ್  ಆವಿಷ್ಕರಿಸಿರು; ಜಾನ್‌ ಟಿಂಡಾಲ್‌ 1858ರಲ್ಲಿ ಇದರ ಕುರಿತು ಮತ್ತಷ್ಟು ಖಾತರಿಯಾದ ಪ್ರಯೋಗವನ್ನು ನಡೆಸಿದರು; ನಂತರ ಸ್ವಾಂಟೆ ಅರ್ರೇನಿಯಸ್ ಎಂಬ ವಿಜ್ಞಾನಿ 1896ರಲ್ಲಿ ಇದರ ಕುರಿತು ಪರಿಮಾಣಾತ್ಮಕವಾಗಿ ವರದಿ ಮಾಡಿದರು.
   ಭೂಮಿಯ ಮೇಲ್ಮೈಯಲ್ಲಿ ಹಸಿರುಮನೆ ಪರಿಣಾಮ ಮತ್ತು ವಾತಾವರಣ ಇಲ್ಲವಾದರೆ, 14 °C (57 °F) ಇರುವ ಭೂಮಿಯ ಸರಾಸರಿ ಮೇಲ್ಮೈ ತಾಪಮಾನವು ಭೂಮಿಯ ಕೃಷ್ಣಕಾಯ  ತಾಪಮಾನ ಎಂದು ಹೇಳಲಾಗುವ -18 °C (−0.4 °F)ನಷ್ಟು ಅತಿ ಕಡಿಮೆ ಮಟ್ಟದವರೆಗೂ ಇಳಿಯಬಹುದು.
     ಭೂಮಿಯ ಮೇಲ್ಮೈ ಮತ್ತು ಕೆಳ ವಾತಾವರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಉಂಟಾಗುತ್ತಿರುವ ಕಾವೇರುವಿಕೆಯಾದ ಮಾನವಜನ್ಯ ಜಾಗತಿಕ ತಾಪಮಾನ ಏರಿಕೆಯು ಹೆಚ್ಚಳಗೊಂಡಿರುವ ಹಸಿರುಮನೆ ಪರಿಣಾಮ"ದಿಂದ ಉಂಟಾಗಿದೆ ಎಂದು ನಂಬಲಾಗಿದ್ದು, ಇದಕ್ಕೆ ವಾತಾವರಣದ ಹಸಿರುಮನೆ ಅನಿಲಗಳಲ್ಲಿನ ಮಾನವನಿರ್ಮಿತ ಏರಿಕೆಯೇ ಪ್ರಮುಖ ಕಾರಣವಾಗಿದೆ.
    ಭೂಮಿಯ ಶಕ್ತಿಯ ಮೂಲ ಸೂರ್ಯ. ಈ ಶಕ್ತಿಯ ಬಹುತೇಕ ಭಾಗ ಕಣ್ಣಿಗೆ ಕಾಣುವ ಬೆಳಕಿನ ರೂಪದಲ್ಲಿ ಮತ್ತು ಹತ್ತಿರದ ತರಂಗಾಂತರಗಳ ರೂಪದಲ್ಲಿ ಭೂಮಿಗೆ ದೊರೆಯುತ್ತದೆ. ಸೂರ್ಯನ ಶಕ್ತಿಯ ಸುಮಾರು 50%ರಷ್ಟು ಭಾಗವನ್ನು ಭೂಮಿಯ ಮೇಲ್ಮೈ ಹೀರಿಕೊಳ್ಳುತ್ತದೆ. ಸಂಪೂರ್ಣ ಶೂನ್ಯಕ್ಕಿಂತ ಜಾಸ್ತಿಯಿರುವ ವಾತಾವರಣ ಹೊಂದಿರುವ ಎಲ್ಲ ಕಾಯಗಳಂತೆ ಭೂಮಿಯ ಮೇಲ್ಮೈ ಕೂಡಾ ಶಕ್ತಿಯನ್ನು ಅವಗೆಂಪು ಶ್ರೇಣಿಯಲ್ಲಿ ಹೊರಸೂಸುತ್ತದೆ. ಮೇಲ್ಮೈ ಹೊರಸೂಸಿದ ಬಹುತೇಕ ಅವಗೆಂಪು ವಿಕಿರಣವನ್ನು ವಾತಾವರಣದಲ್ಲಿರುವ ಹಸಿರುಮನೆ ಅನಿಲಗಳು ಹೀರಿಕೊಳ್ಳುತ್ತವೆ ಮತ್ತು ಹೀಗೆ ಹೀರಿಕೊಂಡ ಶಾಖವನ್ನು ಅಣುಗಳ ಸಂಘರ್ಷಣೆಯ ಮೂಲಕ ವಾಯುಮಂಡಲದ ಇತರೆ ಅನಿಲಗಳಿಗೂ ಸಾಗಿಸುತ್ತವೆ. ಹಸಿರುಮನೆ ಅನಿಲಗಳು ಅವಗೆಂಪು ಶ್ರೇಣಿಯಲ್ಲೂ ವಿಕಿರಣವನ್ನು ಹೊರಸೂಸುತ್ತವೆ. ವಿಕಿರಣವು ಮೇಲ್ಮುಖ ಮತ್ತು ಕೆಳಮುಖ ದಿಕ್ಕುಗಳೆರಡರ ಕಡೆಗೂ ಹೊರಹೊಮ್ಮಿ, ಒಂದಷ್ಟು ಭಾಗ ಬಾಹ್ಯಾಕಾಶದ ಕಡೆಗೆ ಮತ್ತಷ್ಟು ಭಾಗ ಭೂಮಿಯ ಮೇಲ್ಮೈ ಕಡೆಗೆ ಚಲಿಸುತ್ತದೆ. ಈ ರೀತಿ ಕೆಳಮುಖವಾಗಿ ಸೂಸಲ್ಪಟ್ಟ ಶಕ್ತಿಯ ಒಂದಷ್ಟು ಭಾಗದಿಂದ ಮೈಲ್ಮೈ ಮತ್ತು ಕೆಳ ವಾಯುಮಂಡಲ ಬಿಸಿಯಾಗುತ್ತವೆ. 
    ನೀರಿನ ಆವಿ ,ಇಂಗಾಲದ ಡೈ ಆಕ್ಸೈಡ್,‌ ಮೀಥೇನ್ನೈಟ್ರಸ್‌ ಆಕ್ಸೈಡ್,ಓಝೋ‌ನ್‌ ಕ್ಲೋರೋಫೋರೋಕಾರ್ಬನ್‌,ಕ್ಲೋರೋ ಫೋರೋ ಸಂಯುಕ್ತಗಳು. ಅನಿಲಗಳು ಹಸಿರುಮನೆ ಪರಿಣಾಮಕ್ಕೆ ಇವುಗಳ ಕೊಡುಗೆಯನ್ನು ಆಧರಿಸಿ ನೈಜ ವಾತಾವರಣ ನಿರ್ಧರಿಸಲ್ಪಡುತ್ತದೆ:
          (ವಿವಿಧ ಮೂಲಗಳಿಂದ)
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಹಾರುವ ತಟ್ಟೆ

 ಹಾರುವ ತಟ್ಟೆಗಳ ಒಂದು ಕಾಲ್ಪನಿಕ ಚಿತ್ರಆದಿ,ಅಂತ್ಯಗಳಾವುದೂ ಇಲ್ಲದ ಈ ಬ್ರಹ್ಮಾಂಡವೆಂಬುದು ಕಲ್ಪನಾತೀತವಾದುದು. ಈ ಅಖಂಡ ವಿಶ್ವದ ಯಾವುದೋ ಒಂದು ಕಡೆಯಲ್ಲಿ ಅಡಕವಾಗಿದೆ ಕ್ಷೀರ ಪಥ(Milky way)ವೆಂದು ಕರೆಯಲ್ಪಡುವ ನಮ್ಮ ಆಕಾಶ ಗಂಗೆ (Galaxy). ಈ ಆಕಾಶಗಂಗೆಯೇ ನಾವು ಊಹಿಸಲಾರದಷ್ಟು ವಿಸ್ತಾರವಾಗಿದೆ. ಅದರ ಯಾವುದೋ ಒಂದು ಬಿಂದುವಿನಲ್ಲಿ ನಮ್ಮ ಸೌರ ಮಂಡಲದ ಸದಸ್ಯರಾದ ಸೂರ್ಯ,ಭೂಮಿ ಮತ್ತಿತರ ಗ್ರಹಗಳಿವೆ. ಹೀಗೆ ಅನಂತಾನಂತವಾಗಿ ಹರಡಿರುವ ಈ ವಿಶ್ವದಲ್ಲಿ ಏನೇನಿವೆ ಏನೇನಿಲ್ಲ ಎಂಬುದು ಅಷ್ಟು ಸುಲಭವಾಗಿ ನಿರ್ಧರಿಸಲಾಗದ ವಿಷಯ.
   ವಿಶ್ವದ ಹೊಸ ಹೊಸ ವಿಷಯಗಳನ್ನರಿಯಲು ಮಾನವನು ನಿರಂತರ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾನೆ. ಈ ರೀತಿಯ ಸಂಶೋಧನೆಗಳಲ್ಲಿ ಹಲವಾರು ನೂತನವಾದ ಹಾಗೂ ವಿಸ್ಮಯಕಾರಿಯಾದ ಸಂಗತಿಗಳನ್ನು ಆತ ಕಂಡುಕೊಂಡಿದ್ದಾನೆ ಹಾಗೂ ಮಂಡಿಸಿದ್ದಾನೆ. ಎಲ್ಲ ಪ್ರತಿಪಾದನೆಗಳಿಗೂ ಸಾರ್ವತ್ರಿಕ ಒಪ್ಪಿಗೆ ಸಿಗದೇ ಇರಬಹುದು ಆದರೆ ಹೊಸ ಹೊಸ ಪ್ರತಿಪಾದನೆಗಳು ಬಂದಾಗಲೆಲ್ಲ ಅವು ಜನರಲ್ಲಿ ಹೊಸ ಕುತೂಹಲ ಹಾಗೂ ಸಂಚಲನವನ್ನಂತೂ ಸೃಷ್ಟಿಸಿವೆ. ಅಂತಹ ಒಂದು ಪ್ರಯತ್ನವೇ ಹಾರುವ ತಟ್ಟೆಗಳು ಅಥವಾFlying saucers.
   ಖಗೋಳ ವಿಜ್ಞಾನದ ಭಾಷೆಯಲ್ಲಿ ಹೇಳುವುದಾದರೆ ಹಾರುವ ತಟ್ಟೆಗಳು Unidentified Flying Objects (UFO) ಅಥವಾ ಅಪರಿಚಿತ ಹಾರಾಡುವ ವಸ್ತುಗಳು ಎಂಬ ಗುಂಪಿಗೆ ಸೇರತ್ತವೆ. ಇದುವರೆಗೂ ಗುರುತಿಸಲ್ಪಡದೇ ಇರುವಂಥಹ ವಿಸ್ಮಯಕಾರಿ ವಸ್ತುಗಳೆಲ್ಲವೂ ಇದೇ ಗುಂಪಿಗೆ ಸೇರುತ್ತವೆ. ಹಾಗಾಗಿ ಅಂತರಿಕ್ಷದಲ್ಲಿ ಹಾರಾಡಿದಂತೆ ಕಾಣುವ ವಿಸ್ಮಯಕಾರಿ ಅಪರಿಚಿತ ಆಕಾಶ ಕಾಯಗಳೇ ಹಾರುವ ತಟ್ಟೆಗಳು ಎಂಬುದಾಗಿ ವ್ಯಾಖ್ಯಾನಿಸಬಹುದು. ಭೂಮಿಯನ್ನು ಬಿಟ್ಟು ಜೀವಿಗಳನ್ನು ಹೊಂದಿರುವ ಗ್ರಹಗಳು ಈ ಬ್ರಹ್ಮಾಂಡದಲ್ಲಿ ಬೇರೆಲ್ಲೋ ಇದ್ದು ಅಲ್ಲಿಂದಲೇ ಈ ಹಾರಾಡುವ ವಸ್ತುಗಳು ಬರುತ್ತವೆ ಎಂದೂ ಸಹ ಹಲವರು ನಂಬುತ್ತಾರೆ. 
   ಈ ಹಾರುವ ತಟ್ಟೆಗಳ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಶತಮಾನಗಳಿಂದಲೂ ಈ ವಿಷಯದ ಮೇಲೆ ಚರ್ಚೆಗಳು ನಡೆಯುತ್ತಲೇ ಬಂದಿವೆ. 1947 ರಲ್ಲಿ ಅಮೇರಿಕದ ವಾಶಿಂಗ್ಟನ್ ನಗರದ ಕೆನತ್ ಆರ್ನಾಲ್ಡ್ ಎಂಬ ವ್ಯಕ್ತಿಯೋರ್ವನು ಖಾಸಗಿ ವಿಮಾನವೊಂದರಲ್ಲಿ ಪಯಣಿಸುತ್ತಿದ್ದಾಗ ವಿಚಿತ್ರವಾದ,ತಟ್ಟೆಯಂತಹ ಆಕೃತಿಯುಳ್ಳ ಸುಮಾರು 9 ವಸ್ತುಗಳು ಪರ್ವತಗಳ ಮೇಲಿನಿಂದ ಹಾದು ಹೋದವು, ಹಾಗೂ ಅವು ಅತ್ಯಂತ ವೇಗವಾಗಿ ಅಂದರೆ ಗಂಟೆಗೆ ಸುಮಾರು 2500 ಕಿ.ಮೀ, ಗೂ ಹೆಚ್ಹಿನ ವೇಗದಲ್ಲಿ ಚಲಿಸುತ್ತಿದ್ದವು ಎಂಬುಗಾಗಿ ವರದಿ ಮಾಡಿದನು. 
    ಅನ್ಯಗ್ರಹಗಳಿಂದ ಭೂಮಿಗೆ ಹಾರಿಬರುತ್ತಿರುತ್ತವೆ ಎನ್ನಲಾಗುವ `ಹಾರುವ ತಟ್ಟೆಗಳು' (ಯುಎಫ್ಓ - ಅನ್ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್ಸ್) ನಿಜವಾಗಿಯೂ ಇವೆಯೆ?ಈ ಪ್ರಶ್ನೆಗೆ ಖಚಿತ ಉತ್ತರ ಯಾರಿಗೂ ಗೊತ್ತಿಲ್ಲ. ಆದರೆ ಅವುಗಳನ್ನು ಕಂಡೆವು ಎಂದು  ಸಾವಿರಾರು ಜನರು ನೂರಾರು ವರ್ಷಗಳಿಂದ ಹೇಳಿದ್ದಾರೆ. ಅವುಗಳ ಫೋಟೋಗಳಿವೆ. ವೀಡಿಯೋಗಳಿವೆ. ಆದರೂ ಸರಕಾರಗಳು ಅಧೀಕೃತವಾಗಿ ಅವುಗಳ ಅಸ್ತಿತ್ವವನ್ನು ಖಚಿತಪಡಿಸಿಲ್ಲ.
     ಕೆಲವರು ಸುಳ್ಳು ಹೇಳಬಹುದು. ಕಂಪ್ಯೂಟರ್ ಚಮತ್ಕಾರಿ ಚಿತ್ರಗಳನ್ನು ತಮ್ಮ ಸುಳ್ಳಿಗೆ ಆಧಾರವಾಗಿ ನೀಡಬಹುದು. ಆದರೆ ಬಹಳ ಹಿಂದಿನಿಂದಲೂ ಹಾರುವ ತಟ್ಟೆಗಳ ಬಗ್ಗೆ ವರದಿಗಳಿವೆ. ಅನೇಕ ಚಿತ್ರಗಳು ಚಮತ್ಕಾರಿ ಚಿತ್ರಗಳಲ್ಲ ಎಂಬುದು ಸಾಬೀತಾಗಿದೆ. ಕೆಲವು ವರ್ಷಗಳ ಹಿಂದಷ್ಟೇ ನ್ಯೂಜಿಲ್ಯಾಂಡಿನಲ್ಲಿ ಒಂದು ಹಾರುವ ತಟ್ಟೆ ಕಾಣಿಸಿಕೊಂಡಿದೆ ಎಂದು ದೊಡ್ಡದಾಗಿ ವರದಿಯಾಗಿತ್ತು. ಅದರ ಫೋಟೋ ಸಹ ಪ್ರಕಟವಾಗಿತ್ತು. ಅದಾದ ನಂತರ ಬ್ರಿಟನ್ನ ಹಳ್ಳಿಗಾಡಿನಲ್ಲಿ ರಾತ್ರಿ ಆಕಾಶದಲ್ಲಿ ಐದು ಬೆಳಕಿನ ಚುಕ್ಕೆಗಳು ಒಂದೇ ಸಮನೆ ಹಾರಾಟ ನಡೆಸಿದ್ದನ್ನು ನೂರಾರು ಜನರು ನೋಡಿದ್ದಾಗಿ `ದಿ ಡೈಲಿ ಮೇಲ್' ವರದಿ ಮಾಡಿತ್ತು. ಈ ಬೆಳಕಿನ ಚುಕ್ಕಿಗಳು ಮಾನವ ನಿಮಿ೯ತ ವಸ್ತುಗಳೋ ಅಲ್ಲವೋ ಗೊತ್ತಿರಲಿಲ್ಲ. ಈ ಬಗ್ಗೆ `ಏರ್ ಟ್ರಾಫಿಕ್ ಕಂಟ್ರೋಲ್ ಸೆಂಟರ್' ಬಳಿ ಯಾವುದೇ ಮಾಹಿತಿ ಇರಲಿಲ್ಲ. 
    ಜನರು ನಿಜವಾಗಿಯೂ ಹಾರುವ ತಟ್ಟೆಗಳನ್ನು ನೋಡಿದ್ದಾರೆಯೆ ಎಂಬ ಬಗ್ಗೆ ಬ್ರಿಟಿಷ್ ರಕ್ಷಣಾ ಸಚಿವಾಲಯ ಹಿಂದಿನಿಂದಲೂ ವಿಚಾರಣೆ ನಡೆಸಿಕೊಂಡು ಬರುತ್ತಿದೆ. ಸಚಿವಾಲಯ ಹಾಗೂ ಜನರ ಸಂವಾದವಿರುವ ಫೈಲುಗಳನ್ನು (`ಎಕ್ಸ್-ಫೈಲ್ಸ್') ಅದು ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ. ಹಾರುವ ತಟ್ಟೆಗಳ ಬಗ್ಗೆ ಪ್ರತಿವರ್ಷ ಸಚಿವಾಲಯಕ್ಕೆ ಕನಿಷ್ಠ ನೂರು ವರದಿಗಳು ಬರುತ್ತವಂತೆ. ಅವುಗಳ ಸತ್ಯಾಂಶ ಎಷ್ಟು ಎಂದು ಸಚಿವಾಲಯ ಖಚಿತಪಡಿಸಿಲ್ಲ. ಹಿಂದೆ ಅಮೆರಿಕದ ಸೇನೆ ಸಹ ಈ ರೀತಿ ವಿಚಾರಣೆ (`ಪ್ರಾಜೆಕ್ಟ್ ಬ್ಲ್ಯೂಬುಕ್') ನಡೆಸಿತ್ತು. `ಹಾರುವ ತಟ್ಟೆಗಳೆಲ್ಲ ಕೇವಲ ಕಲ್ಪನೆ' ಎಂದು ವರದಿ ನೀಡಿತ್ತು. ಆದರೆ ಅದು ರಹಸ್ಯವಾಗಿ ತನ್ನ ತನಿಖೆ ಮುಂದುವರಿಸಿದೆ ಎನ್ನುವವರೂ ಇದ್ದಾರೆ.ಹಾರುವ ತಟ್ಟೆಗಳು ನಿಜವೋ ಸುಳ್ಳೋ ಗೊತ್ತಿಲ್ಲ. ಈ ಬಗ್ಗೆ ಯಾವುದನ್ನೂ ಖಚಿತವಾಗಿ ಸಾಬೀತು ಮಾಡಲಾಗಿಲ್ಲ. ಅದನ್ನು ನೋಡಿರುವುದಾಗಿ ಹೇಳುವ ಜನರಂತೂ ತಮ್ಮ ಮಾತು ನಿಜ ಎಂದು ವಾದಿಸುತ್ತಾರೆ.
   1947ನೆಯ ಜೂನ್ 24ರಂದು ಕೆನ್ನೆತ್ ಆರ್ನಾಲ್ಡ್ ಎಂಬ ವೈಮಾನಿಕನೊಬ್ಬನು ಹಾರಾಡುತ್ತಿದ್ದಾಗ ವಾಷಿಂಗ್‌ಟನ್ ಸ್ಟೇಟಿನ ಮೌಂಟ್ ರೇಯ್ನರ್ ಶಿಖರದ ಸುತ್ತಮುತ್ತಣ ಆಕಾಶದಲ್ಲಿ ಗಂಟೆಗೆ ಸಾವಿರ ಮೈಲಿ ವೇಗದಲ್ಲಿ ಹಾರಾಡಿ ಸುತ್ತುಹಾಕುತ್ತಿದ್ದ ಪ್ರಕಾಶಮಾನವಾದ ಚಕ್ರಕಾರದ ತಟ್ಟೆಗಳನ್ನು ಕಂಡನು. ಆ ಒಂದೊಂದು ತಟ್ಟೆಯೂ ಅವನಿಗೆ ಬೋರಲು ಹಾಕಿದ್ದ ಸಾಸರ್‌ಗಳಂತೆ ಕಾಣಿಸಿದ್ದರಿಂದ ಅವನು ಅವುಗಳನ್ನು ಸುದ್ದಿಪತ್ರಿಕೆಗಳಿಗೆ ವರ್ಣಿಸುವ ಫ್ಲೈಯಿಂಗ್ ಸಾಸರ್ಸ್(ಹಾರುವ ತಟ್ಟೆ) ಎಂದು ಹೆಸರು ಕೊಟ್ಟನು. ಅಂದಿನಿಂದ ಆ ಆಕಾಶದ ವಸ್ತುಗಳಿಗೆ ಹಾರುವ ತಟ್ಟೆಗಳು ಎಂಬ ಹೆಸರು ಪ್ರಚಲಿತವಾಯಿತು.
    ಅಮೆರಿಕಾದ ವೈಮಾನಿಕ ಪಡೆಯ ವಿಜ್ಞಾನಿಗಳು ಆ ಅಜ್ಞಾತ ಆಕಾಶವಸ್ತುಗಳಿಗೆ ಗೊತ್ತಿಲ್ಲದ ಹಾರಾಡುವ ವಸ್ತು (ಗೊ.ಹಾ.ವ) U.F.O. (ಯು.ಎಫ್.ಓ.) ಅಥವಾ Umodentified Flying Objects ಎಂದು ನಾಮಕರಣ ಮಾಡಿದ್ದಾರೆ.ಅಂದಿನಿಂದ ಈ ಆಕಾಶದ ಅನಿರ್ವಚನೀಯ ವ್ಯಾಪಾರವನ್ನು ಹತ್ತಲ್ಲ, ನೂರಲ್ಲ, ಸಾವಿರವಲ್ಲ, ಲಕ್ಷಾಂತರ ಜನರು-ಸಾಮಾನ್ಯರು, ತಜ್ಞರು, ಇಂಜಿನಿಯರುಗಳು, ವಿಜ್ಞಾನಿಗಳು, ರಕ್ಷಣಾ ದಳದವರು, ಪ್ರೊಫೆಸರುಗಳು, ಪಾದ್ರಿಗಳು, ಗುಂಪುಗುಂಪಾಗಿ, ಒಬ್ಬೊಬ್ಬರಾಗಿ, ಆಕಸ್ಮಾತ್ತಾಗಿ, ಅದೇ ಪರೀಕ್ಷಾರ್ಥಿವಾಗಿ-ನೋಡಿದ್ದಾರೆ. ಅನೇಕ ಸಚಿತ್ರವಾದ ಪುಸ್ತಕಗಳನ್ನೂ ಬರೆದಿದ್ದಾರೆ. ಕೆಲವರು ಟೆಲಿಸ್ಕೋಪ್‌ಗಳನ್ನು ಉಪಯೋಗಿಸಿ ಫೋಟೊ ಗಳನ್ನೂ ತೆಗೆದಿದ್ದಾರೆ. ಕೆಲವರು ಭೂಮಿಗಿಳಿದ ಹಾರುವ ತಟ್ಟೆಗಳನ್ನು ಸಮೀಪಿಸಿ, ಅದರೊಳಗಿದ್ದವರನ್ನು ಕಂಡೆವು ಎಂದೂ ಹೇಳಿದ್ದಾರೆ. ಮತ್ತೆ ಕೆಲವರು ಆ ಹಾರುವ ತಟ್ಟೆಗಳಿಂದ ಹೊರಗಿಳಿದು ಬಂದ ವಿಚಿತ್ರ ಉಡುಪು ಧರಿಸಿದ ಮನುಷ್ಯರಂತೆಯೆ ಇರುವ ವ್ಯಕ್ತಿಗಳ ಫೋಟೊ ತೆಗೆದುಕೊಂಡು, ಅವರೊಡನೆ ಒಂದು ರೀತಿಯ ಸಂವಾದವನ್ನೂ ನಡೆಸಿ, ಆ ಚಿತ್ರಗಳನ್ನೂ ಸಂವಾದ ಸ್ವರೂಪವನ್ನೂ ಒಳಗೊಂಡ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇಷ್ಟಾದರೂ ಇದುವರೆಗೂ ಆ ಗೊ.ಹಾ. ವಸ್ತುಗಳಲ್ಲಿರುವವರು ಯಾರು? ಎಲ್ಲಿಂದ ಬಂದವರು? ಏಕೆ ಬರುತ್ತಿದ್ದಾರೆ? ಏಕೆ ಮನುಷ್ಯನಾಗರಿಕತೆಯೊಡನೆ ಸಂಬಂಧ ಕಲ್ಪಿಸಿಕೊಳ್ಳದೆ ಹೋಗುತ್ತಿದ್ದಾರೆ? ಎಂಬ ವಿಚಾರವಾಗಿ ಯಾರೂ ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ. 
    ಮೊದಮೊದಲು ಅವರು ನಮ್ಮ ಈ ಸೌರವ್ಯೂಹದ ಬೇರೆ ಗ್ರಹಗಳಿಂದ-ಚಂದ್ರನಿಂದ, ಶುಕ್ರನಿಂದ, ಮಂಗಳನಿಂದ ಇತ್ಯಾದಿ-ಬರುತ್ತಿದ್ದಾರೆ ಎಂದು ಊಹಿಸಿದ್ದರು. ಆದರೆ ಮನುಷ್ಯನೇ ಚಂದ್ರನ ಮೇಲೆ ಕಾಲಿಟ್ಟ ಮೇಲೆ ಮತ್ತು ಮಾನವ ಯಂತ್ರಗಳಲ್ಲಿರುವ ಚಿತ್ರಗ್ರಹಣದ ಸಾಮರ್ಥ್ಯದ ಉಪಕರಣಗಳೇ ಶುಕ್ರ, ಮಂಗಳ, ಗುರು, ಶನಿ ಇತ್ಯಾದಿ ಗ್ರಹಗಳ ಬಳಿಸಾರಿ ಜ್ಞಾನ ಸಂಪಾದಿಸಿದ ಮೇಲೆ ಆ ಫ್ಲೈಯಿಂಗ್‌ಸಾಸರ್‌ನವರು ನಮ್ಮ ಸೌರವ್ಯೂಹದಿಂದ ಬರುತ್ತಿಲ್ಲ. ಸೌರವ್ಯೂಹಾತೀತವಾದ ಬಹುದೂರದ ನಕ್ಷತ್ರಗಳಲ್ಲಿರಬಹುದಾದ ಗ್ರಹಗಳಿಂದ ಬರುತ್ತಿರಬಹುದು ಎಂದು ಊಹಿಸುತ್ತಿದ್ದಾರೆ. ಆದರೆ ಅತ್ಯಂತ ಹತ್ತಿರದ ನಕ್ಷತ್ರವೂ ನಮಗೆ ಒಂಭತ್ತು ಹತ್ತು ಬೆಳಕಿನ ವರ್ಷಗಳ ದೂರದಲ್ಲಿ, ಎಂದರೆ ಕೋಟಿ ಕೋಟಿ ಕೋಟಿ ದಶದಶದಶ ಲಕ್ಷಾಂತರ ಮೈಲಿಗಳ ದೂರದಲ್ಲಿ-ಇವೆ ಎಂಬುದನ್ನು ತಿಳಿದಾಗ, ನಮ್ಮಂತೆಯೆ ಇರಬಹುದಾದ ಆ ಜೀವಿಗಳು ಅಷ್ಟು ತಲೆತಿರುಗಿಸುವಷ್ಟು ದೂರದಿಂದ ಹಾರುವ ತಟ್ಟೆಗಳಲ್ಲಿ ಹೇಗೆ ಪ್ರಯಾಣ ಮಾಡುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲವಾಗಿದೆ. 
    ಹಾಗಾಗಿ, ವಿಜ್ಞಾನ ಇಷ್ಟು ಮುಂದುವರಿದಿರುವ ಈ ಇಪ್ಪತ್ತನೆಯ ಶತಮಾನದ ಯುಗದಲ್ಲಿಯೂ ಈ ಹಾರುವ ತಟ್ಟೆಗಳ  ಸಮಸ್ಯೆ ಅತ್ಯಂತ ಬಿಡಿಸಲಾಗದ ನಿಗೂಢ ರಹಸ್ಯವಾಗಿಯೆ ಉಳಿದು ವಿಜ್ಞಾನಿಗಳ ತಲೆ ತಿನ್ನುತ್ತಿದೆ. ತಲೆ ಕೆಡಿಸುತ್ತಿದೆ. 
    ಈ ಹಾರುವ ತಟ್ಟೆ ಎಂದು ಕರೆಯಿಸಿಕೊಳ್ಳುತ್ತಿರುವ ಆಕಾಶಕಾಯ ವ್ಯಾಪಾರಗಳು ನಮ್ಮ ಭೂಮಿಯ ಮೇಲೆ ಎಷ್ಟೋ ಶತಶತಮಾನಗಳಿಂದಲೂ ತರತರದ ರೂಪದಲ್ಲಿ ನಡೆಯುತ್ತಲೆ ಇವೆ.
              (ವಿವಿಧ ಮೂಲಗಳಿಂದ)
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಲೇಸರ್


ಲೇಸರ್ ನ ವಿಸ್ತೃತಅ ರೂಪ ಲೈಟ್ ಬೈ ಸ್ಟಿಮುಲೇಟೆಡ್ ಎಮಿಶನ್ ಆಫ್ ರೇಡಿಯೇಶನ್. ವಿಕಿರಣ ಚೋದಿತ ಉತ್ಸಜ೯ನೆಯಿಂದ ಬೆಳೆಕಿನ ವಧ೯ನೆ ಎಂಬುದನ್ನು ಸೂಚಿಸುತ್ತದೆ.
   ಲೇಸರ್ ಎಂಬುದು ಸರಿಸುಮಾರು ಏಕವಣಿ೯ಯ ಬೆಳಕಿನ ಅತಿ ತೀವ್ರ ಕಿರಣ ಪುಂಜವನ್ನು ಉತ್ಪಾದಿಸುವ ಸಾಧನ. ಲೇಸರ್ ಬೆಳಕು ಹರಡಿಕೊಳ್ಳದೆ ಬಹಳ ದೂರ ಚಲಿಸಬಲ್ಲದು. ಲೇಸರ್ ಬೆಳಕನ್ನು ಕೇಂದ್ರೀಕರಿಸಿ ಅಗಾಧ ಶಕ್ತಿ ಸಾಂದ್ರತೆಯನ್ನು ಪಡೆಯಬಹುದು. ಶಕ್ತಿ ಸಾಂದ್ರತೆಯ ಪ್ರಮಾಣ 108 ವಾಟ್ / ಸೆಂ.ಮೀ 2 ಆಗಿರುತ್ತದೆ. ಶಕ್ತಿಸಾಂದ್ರತೆಯೆಂದರೆ ಏಕಮಾನ ವಿಸ್ತೀಣ೯ ಅದ ಮೇಲೆ ಒಂದು ಸೆಕೆಂಡಿನಲ್ಲಿ ಅಪಾತವಾಗುವ ಶಕ್ತಿ.ಹೆಚ್ಚಿನ ಶಕ್ತಿಯ ಕಕ್ಷೆಯಿಂದ E2 ಕಡಿಮೆ ಶಕ್ತಿಯ ಕಕ್ಷೆಗೆ E1 ಒಂದು ಇಲೆಕ್ಟ್ರಾನ್ ಜಿಗಿದಾಗ ಒಂದು ಫೋಟಾನ್ ಉತ್ಸಜಿ೯ತವಾಗುತ್ತದೆ. ಈ ಫೋಟಾನಿನ ಶಕ್ತಿಯು E2 - E1= hv ಗೆ ಸಮವಿರುತ್ತದೆ. ಇಲ್ಲಿ v ಎಂಬುದು ಉತ್ಸಜ೯ನೆ ಫೋಟಾನಿನ ಆವೃತ್ತಿ. ಈ ಕ್ರಿಯೆಯು ಸ್ವಪ್ರೇರಿತವಾಗಿ ನಡೆಯುವುದರಿಂದ ಇದನ್ನು ಸ್ವಯಂ ಉತ್ಸಜ೯ನೆ ಎನ್ನುತ್ತೇವೆ.ಯುಕ್ತ ಪ್ರಮಾಣದ ಶಕ್ತಿಯುಳ್ಳ ಒಂದು ಫೋಟಾನ್ ಒಂದು ಪರಮಾಣುವಿನ ಮೇಲೆ ಬಿದ್ದಾಗ, ಅದು ಸಂಪೂಣ೯ ಹೀರಲ್ಪಟ್ಟು ಪರಮಾಣುವಿನ ಒಂದು ಇಲೆಕ್ತ್ರಾನ್ ಕಡಿಮೆ ಶಕ್ತಿ ಸ್ಥಿತಿಯಿಂದ ಹೆಚ್ಚು ಶಕ್ತಿ ಸ್ಥಿತಿಗೆ ಏರುತ್ತದೆ. ಈ ಪ್ರಕ್ರಿಯೆಗೆ ಉದ್ರೇಚನೆ ಎಂದು ಹೆಸರು.ಯುಕ್ತ ಪ್ರಮಾಣದ ಶಕ್ತಿಯುಳ್ಳ ಒಂದು ಫೋಟಾನ್ ಒಂದು ಪರಮಾಣುವಿನ ಮೇಲೆ ಬಿದ್ದಾಗ, ಅದು ಸಂಪೂಣ೯ವಾಗಿ ಹೀರಲ್ಪಟ್ಟು ಪರಮಾಣುವಿನ ಒಂದು ಇಲೆಕ್ಟ್ರಾನ್ ಕಡಿಮೆ ಶಕ್ತಿ ಸ್ಥಿತಿಗೆ ಏರುತ್ತದೆ.ಒಂದು ವ್ಯವಸ್ಥೆಯಲ್ಲಿನ ಬಹುತೇಕ ಪರಮಾಣುಗಳು ಸಾಮಾನ್ಯವಾಗಿ ಅತ್ಯಲ್ಪ ಶಕ್ತಿ ಸ್ಥಿತಿಯಲ್ಲಿರುತ್ತವೆ. ದ್ಯುತಿ ಪ್ರವಧ೯ನೆ ಉಂಟಾಗಬೇಕಾದರೆ ಹೆಚ್ಚು ಪರಮಾಣುಗಳನ್ನು ಅಧಿಕಶಕ್ತಿ ಸ್ಥಿತಿಗೆ ಏರಿಸಬೇಕಾದುದು ಅಗತ್ಯ. ಪರಮಾಣುಗಳನ್ನು ಕಡಿಮೆ ಶಕ್ತಿ ಸ್ಥಿತಿಯಿಂದ ಅಧಿಕ ಶಕ್ತಿ ಸ್ಥಿತಿಗೆ ಏರಿಸುವ ಪ್ರಕ್ರಿಯೆಯನ್ನು ಸಂದಣಿ ವಿಲೋಮನೆ ಎಂದು ಕರೆಯುತ್ತಾರೆ. ಬಾಹ್ಯ ಮೂಲಗಳಿಂದ ಶಕ್ತಿಯನ್ನು ಒದಗಿಸಿ ಸಂದಣಿ ವಿಲೋಮವನ್ನು ಸಾಧಿಸಲಾಗುತ್ತದೆ. ಸಂದಣಿ ವಿಲೋಮನವನ್ನು ಸಾಧಿಸಲು ಬಾಹ್ಯ ಮೂಲಗಳಿಂದ ಶಕ್ತಿಯನ್ನು ಒದಗಿಸುವ ಪ್ರಕ್ರಿಯೆಯನ್ನು ಅಪ್ಟಿಕಲ್ ಅಥವಾ ದ್ಯುತಿ ಪ್ರೇಷಣೆ ಎನ್ನುತ್ತಾರೆ
  ಶತ್ರುವಿನ ಗುರಿ ನಿಖರವಾಗಿ ತಲುಪಬಲ್ಲ ಸಾಮರ್ಥ್ಯವನ್ನೊಳಗೊಂಡ ದೇಶದ ಪ್ರಥಮ ಲೇಸರ್ ನಿಯಂತ್ರಿತ ಬಾಂಬ್ (ಎಲ್‌ಜಿಬಿ)ನ್ನು ಭಾರತ ಅಭಿವೃದ್ಧಿಪಡಿಸಿದೆ. ಬೆಂಗಳೂರಿನ ಎಡಿಇ ಸಂಸ್ಥೆ, ಎಲ್‌ಜಿಬಿಯ ಮಾರ್ಗದರ್ಶಿ ಕಿಟ್ ಅಭಿವೃದ್ಧಿಪಡಿಸಿದ್ದು,ಭಾರತೀಯ ವಾಯುಪಡೆಗೆ ಸೇರಿಕೊಳ್ಳುವ ಸಕಲ ಸಾಮರ್ಥ್ಯವನ್ನು ಈ ಎಲ್‌ಜಿಬಿಗೆ ನೀಡುವಲ್ಲಿ ಯಶಸ್ವಿಯಾಗಿದೆ. ಡೆಹ್ರಾಡೂನ್ ನಗರದ ಸಾಧನ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆ (ಐಆರ್‌ಡಿಇ)ಯ ತಾಂತ್ರಿಕ ಬೆಂಬಲದೊಂದಿಗೆ ಈ ಸಾಧನೆಗೆ ಮುನ್ನುಡಿ ಬರೆಯಲಾಗಿದೆ.
    ರಕ್ಷಣಾ ವಲಯದಲ್ಲಿ ನಡೆಸುವ ಸಂಶೋಧನೆಯಲ್ಲಿ ಸ್ವಯಂ ಅವಲಂಬನೆ ಸಾಧಿಸುವ ನಿಟ್ಟಿನಲ್ಲಿ ಐಆರ್‌ಡಿಇ(IRDE) ಹಾಗೂ ಡಿಆರ್‌ಡಿಒ(DRDO) ಪ್ರಯೋಗಾಲಯದಲ್ಲಿ ಈ ಆವಿಷ್ಕಾರ ನಡೆಸಿರುವುದಾಗಿ ಐಆರ್ ಡಿಇನ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ವಿಜ್ಞಾನಿ ತಿಳಿಸಿದ್ದಾರೆ. ನಿರ್ದಿಷ್ಟ ಗುರಿಯನ್ನು ಸುಲಲಿತವಾಗಿ ತಲುಪಲು ಈ ಎಲ್‌ಜಿಬಿ ಸಾಮರ್ಥ್ಯ ಹೊಂದಿದೆ.
   ಲೇಸರ್ ಬೆಳಕಿನ ಪ್ರತಿಬಿಂಬದಿಂದ ಗುರಿ ತಲುಪುದು ಸುಲಭವಾಗುವುದಲ್ಲದೆ, ಇದರಿಂದಾಗಿ ಸೂಕ್ತ ಸಂದೇಶಗಳು ಪ್ರಯೋಗಾಲಯಕ್ಕೆ ಲಭ್ಯವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಲೇಸರ್ ನಿಯಂತ್ರಿತ ಮೊದಲ ಬಾಂಬನ್ನು ಅಮೆರಿಕ 1960ರಲ್ಲಿ ತಯಾರಿಸುವಲ್ಲಿ ಯಶಸ್ವಿಯಾಗಿತ್ತು. ಇದಾದ ನಂತರ ರಷ್ಯಾ, ಫ್ರಾನ್ಸ್ ಹಾಗೂ ಬ್ರಿಟನ್ ರಾಷ್ಟ್ರಗಳು ಲೇಸರ್ ಬಾಂಬ್‌ಗೆ ಜೀವ ನೀಡಿದ್ದವು.
    ಶಸ್ತ್ರಚಿಕಿತ್ಸೆಯಲ್ಲಿ ಲೇಸರ್‌ ಕಿರಣಗಳು ಯಂತ್ರದಲ್ಲಿರುವ ದ್ರವದ ಮೂಲಕ ಹಾದು ಕಣ್ಣು ತಲುಪುವುದರಿಂದ ನಿಖರತೆ ಹೆಚ್ಚಾಗಿರುತ್ತದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗುವುದು ಗುಣಮಟ್ಟದ ಲೆನ್ಸ್‌ ಬಳಸಿ ದೃಷ್ಟಿಯಲ್ಲಿ ಉತ್ತಮವಾದಾಗ ಮಾತ್ರ. ‘ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಪಡುವವರಿಗೆ ಮಲ್ಟಿಫೋಕಲ್‌ ಲೆನ್ಸ್‌ಗಳು ಸದ್ಯ ಲಭ್ಯವಿರುವ ಅತಿ ಹೆಚ್ಚು ಸ್ಪಷ್ಟತೆ ಹಾಗೂ ನಿಖರತೆ ಹೊಂದಿರುವ ಲೆನ್ಸ್‌ಗಳು. ಇವುಗಳ ಬಳಕೆಯಿಂದ ಬಾಲ್ಯದಲ್ಲಿನ ದೃಷ್ಟಿಯಂತೆಯೇ ದೂರ ಹಾಗೂ ಸಮೀಪದ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಹುದಾಗಿದೆ’.
  ಈ ದಿನಗಳಲ್ಲಿ ಲಾಸಿಕ್ ಲೇಸರ್ ಚಿಕಿತ್ಸೆಯಲ್ಲಿ ಹೊಸ ಆವಿಷ್ಕಾರವೆಂದರೆ  ವೇವ್ ಫ್ರೆಂಟ್  ತಂತ್ರ ಜ್ನಾನ. ಈ ನೂತನ ವೇವ್ ಫ್ರೆಂಟ್ ತಂತ್ರಜ್ನಾನ ಉಪಯೋಗಿಸಿ ಕೇವಲ ಸಾಮಾನ್ಯ ದೃಷ್ಟಿ ದೋಷವಿಲ್ಲದೆ ಕನ್ನಡಕದಿಂದ ಸರಿಪಡಿಸಲಾಗದ ಇನ್ನಿತರ ಸಣ್ಣ ದೃಷ್ಟಿ ದೋಷಗಳನ್ನು ಪತ್ತೆ ಹಚ್ಚಿ ಅದಕ್ಕೆ    ಹೀಗಾಗಿ ಪ್ರತಿಯೊಬ್ಬ ಕನ್ನಡಕ ಧರಿಸುವ ವ್ಯಕ್ತಿಗೂ ಕನ್ನಡಕ ಅಥವಾ ಕಾಂಟ್ಯಾಕ್ಟ್‌ಲೆನ್ಸ್ ಇಲ್ಲದೆ ಸ್ಪಷ್ಟ ದೃಷ್ಟಿ ಪಡೆಯುವ ಅವಕಾಶವಿದೆ.
         ( ವಿವಿಧ ಮೂಲಗಳಿಂದ)
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ವಾಲ್ಮೀಕಿ ಆಗ ರತ್ನಾಕರ

   ಬೇಡ ಜಾತಿಯ ರತ್ನಾಕರ ಚ್ಯವನ ಋಷಿಯ ಮಗನಾಗಿದ್ದ. ಗಂಗಾ ತೀರದ ಕ್ರೌಂಚವೆಂಬ ದಟ್ಟಾರಣ್ಯದಲ್ಲಿ ತನ್ನ ಕುಟುಂಬದವರೊಂದಿಗೆ ಇವನು ವಾಸವಾಗಿದ್ದ. ಈ ಅರಣ್ಯದಲ್ಲಿ ಪ್ರಾಣಿ ಪಕ್ಷಿಗಳ ಬೇಟೆಯಾಡುವುದು ದಾರಿಹೋಕರನ್ನು ಕಾಡಿಸಿ ಪೀಡಿಸಿ ಅವರ ತಲೆ ಹೊಡೆದು ಅವರಲ್ಲಿದ್ದುದೆಲ್ಲವನ್ನು ಸುಲಿಗೆ ಮಾಡುವುದು, ವಿರೋಧಿಸಿದರೇ ಹತ್ಯೆ ಮಾಡುವುದು ಈ ಬೇಡನ ನಿತ್ಯದ ಕಾರ್ಯಕ್ರಮಾವಾಗಿತ್ತು. 
   ಇವನ ಧೈರ್ಯ ಸಾಹಸ ಎಂತವರ ಗುಂಡುಗೆಯನ್ನು ಗಡಗಡ ನಡುಗುವಂತೆ ಮಾಡಿತ್ತು. ಈ ಕಾಯಕದಿಂದಲೇ ತನ್ನ ಸಂಸಾರದ ಬಂಡಿ ಸುಖವಾಗಿ ಸಾಗುತಿತ್ತು.ಅದೊಂದು ದಿನ ಈ ಕಿರಾತ ಬೇಟೆಗಾಗಿ ಕಾಡಿಗೆ ಹೊರಟನು. ಅರಣ್ಯದಲ್ಲೆಲ್ಲ ತಿರುಗಾಡಿದರೂ ಒಂದು ಬೇಟೆಯೂ ಇವನಿಗೆ ಸಿಗಲಿಲ್ಲ. ಅಗ ದಟ್ಟಾರಣ್ಯದ ದಾರಿಯಲ್ಲಿ ಸಪ್ತರ್ಷಿಗಳ ಗುಂಪಿನ ದರ್ಶನವಾಯಿತು. ಅವರಲ್ಲಿರುವ ವಸ್ತುಗಳನ್ನು ಕೊಡುವಂತೆ ಪೀಡಿಸಿದ ಕಿರಾತ. ನೋಡು ಕಿರಾತ ಕುಟುಂಬದ ಪೋಷಣೆ ಮಾಡುವುದು ಗೃಹಸ್ಥನ ಕರ್ತವ್ಯವೆಂಬುದೇನೋ ನಿಜ.ಆದರೆ ಮುಗ್ದ ಜನರನ್ನು ಹಿಂಸಿಸಿ ಅವರ ಕೊಲೆ ಸುಲಿಗೆ ಮಾಡಿ ನೀನು ದ್ರವ್ಯಾರ್ಜನೆ ಮಾಡುವುದು ಮಹಾ ಪಾಪಕರ ಕೆಲಸ ಪರರನ್ನು ಹಿಂಸಿಸದೇ ಸತ್ಯದ ಹಾದಿಯಲ್ಲಿ ನಡೆದು ದುಡಿತದ ಶ್ರಮದಿಂದ ಉಪ ಜೀವನ ನಡೆಸಿದರೆ ನಿನಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಕೆಟ್ಟ ಕೆಲಸ ಮಾಡುವುದನ್ನು ಬಿಟ್ಟು ಪುಣ್ಯದ ಹಾದಿಯಲ್ಲಿ ಇಂದಿನಿಂದಲೇ ನೀನು ಸಾಗು.
    ನಿನ್ನ ತಂದೆ ತಾಯಿ ಹೆಂಡತಿ ಮಕ್ಕಳು ಇವರ್ಯಾರೂ ನಿನ್ನ ಪಾಪದಲ್ಲಿ ಪಾಲುದಾರರಾಗುವುದಿಲ್ಲ ಎಂದು ಸಪ್ತರ್ಷಿಗಳು ಬುದ್ದಿವಾದ ಹೇಳಿದರು. ನಮ್ಮ ಬಳಿ ಪವಿತ್ರಗೊಳಿಸುವ ರಾಮನಾಮವಿದೆ. ಈ ರಾಮನಾಮ-ತೀರ್ಥಗಳು, ಬೆಳ್ಳಿ-ಬಂಗಾರದ ಒಡವೆಗಳಲ್ಲಿ . ನಿನ್ನ ಪಾಪದ ರಾಶಿಯನ್ನು ನಾಶ ಮಾಡುವಂತಹ ಅಮೋಘ ಸಾಧನಗಳಿವು. ಇವುಗಳನ್ನು ನಮ್ಮಿಂದ ಸ್ವೀಕರಿಸಿದರೇ ಮಾತ್ರ ನೀನು ಪಾಪದಿಂದ ಮುಕ್ತಿ ಹೊಂದಿ ಉದ್ದಾರವಾಗುವೆ. ಈಗ ನೀನು ಪಕ್ಕದ ಗಂಗೆಯಲ್ಲಿ ಮಿಂದು ಬಾ ಹೋಗು ಎಂದರು ಸಪ್ತರ್ಷಿಗಳು. ಭಕ್ತಿ ಭಾವದಿಂದ ಸಪ್ತರ್ಷಿಗಳ ಸ್ಮರಣೆ ಮಾಡುತ್ತಾ ಗಂಗೆ ಕಡೆಗೆ ಕಿರಾತನಿಗೆ ಕಮಂಡಲದೊಲಗಿನ ತೀರ್ಥ ಕೊಟ್ಟು ಪಾವನಕರವಾದ ರಾಮನಾಮವನ್ನು ಉಪದೇಶಿಸಿದರು.ನೋಡು ಕಿರಾತ ನೀನು ಪಾಪವನ್ನು ನಾಶಗೊಳಿಸುವಂಥ ಪಾವನಕರ ರಾಮನಾಮವನ್ನು ಜಪಿಸುತ್ತ ಕುಳಿತುಕೋ. ಮನಸ್ಸನ್ನು ಅತ್ತಿತ್ತ ಹರಿದಾಡಗೊಡಗಬೇಡ. ತಂದೆ-ತಾಯಿ, ಹೆಂಡತಿ-ಮಕ್ಕಳ ವ್ಯಾಮೋಹಕ್ಕೆ ಒಳಗಾಗಬೇಡ. ನೀನು ನಮ್ಮಂತೆ ರಾಮನಾಮದ ತಪಸ್ಸನ್ನಾಚರಿಸಿದರೆ ನಿನ್ನ ಪಾಪರಾಶಿಯು ನಾಶವಾಗಿ ನಮ್ಮಂತೆ ತಪಸ್ವಿಯಾಗುವೆ.
    ಇವರ ಉಪದೇಶ, ಆಶೀರ್ವಾದ ಪಡೆದು ಕಿರಾತ ಹರ್ಷಿತನಾದ ಅಲ್ಲಿಯೇ ಮರದಡಿಯಲ್ಲಿ ಕುಳಿತು ಏಕಚಿತ್ತದಿಂದ ರಾಮ-ರಾಮ ಎಂದು ಪರಮಾತ್ಮನ ನಾಮಸ್ಮರಣೆ ಮಾಡತೊಡಗಿದನು.ಹಗಲು ರಾತ್ರಿ ಕೆವಲ ರಾಮನಾಮ ಜಪದಲ್ಲಿ ನಿರತನಾದ ಕಿರಾತ ಧ್ಯಾನದಲ್ಲಿ ಮೈಮರೆತ ಇವನ ಮೇಲೆ ದೊಡ್ಡ ಹುತ್ತವೇ ಬೆಳೆಯಿತು. ಆನೇಕ ವರ್ಷಗಳ ನಂತರ ಸಪ್ತರ್ಷಿಗಳು ಮತ್ತೇ ಅದೇ ಅರಣ್ಯದ ಮಾರ್ಗದಲ್ಲಿಯೇ ಬಂದಾಗ ಹಿಂದೆ ತಾವು ಉಪದೇಶಿಸಿದ್ದ ಕಿರಾತನ (ಬೇಡ) ನೆನಪಾಯಿತು. ಸಪ್ತರ್ಷಿಗಳು ಏ ಕಿರಾತ ಎಂದು ಜೋರಗಿ ಕೂಗಿದರು. ಇವರ ಕೂಗನ್ನು ಕೇಳಿ ಧ್ಯಾನದಿಂದ ಎಚ್ಚರಗೊಂಡ ಕಿರಾತ ಹುತ್ತವನ್ನು ಒಡೆದುಕೊಂಡು ಹೊರ ಬಂದನು. ಇವನನ್ನು ಕಂಡ ಸಪ್ತರ್ಷಿಗಳು ಹರ್ಷಗೊಂಡು ನಿಂತು ಕೈಗಳನ್ನೆತ್ತಿ ಆಶೀರ್ವದಿಸಿದರು. ಕಿರಾತನು ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಕೈ ಜೋಡಿಸಿ ಪ್ರಾರ್ಥಿಸತೊಡಗಿದನು. ಸಪ್ತರ್ಷಿಗಳು ಪರಮಾನಂದದಿಂದ ನೀನು ಮೈಮೇಲೆ ವಲ್ಮೀಕ ಬೆಳೆಯುವವರೆಗೂ ತಪಶ್ಚರ್ಯ ಮಾಡಿದ್ದರಿಂದ ನಿನಗೆ ಲೋಕದಲ್ಲಿ ವಾಲ್ಮೀಕಿ ಎಂಬ ಹೆಸರಿನಿಂದ ನಾಮಕರಣ ಮಾಡಿರುವೆವು, ನಿನ್ನ ಪರ್ವತಪ್ರಾಯವದ ಪಾಪರಾಶಿಯೆಲ್ಲವೂ ರಾಮಮಂತ್ರ ಜಪದಿಂದ ನಾಶವಾಗಿ ಅಮೋಘವಾದ ಪುಣ್ಯ ಸಂಚಯ ಮಾಡಿಕೊಂಡಿರುವೆ ನೀನು ಪರಮಜ್ಞಾನಿಯಾದ ಮಹರ್ಷಿಯಾಗುವೆ. ನಿನ್ನಿಂದ ಲೋಕಕಲ್ಯಾಣವಾದ ಕಾರ್ಯವಾಗಲಿ. ವಾಲ್ಮೀಕಿ ಮಹರ್ಷಿಯೇ ನೀನು ವಿಧಿವಸದಿಂದ ಕಿರಾತನಾಗಿ ಜನಿಸಿ ಅದೇ ಸಂಸ್ಕಾರದಿಂದ ಕುಕರ್ಮವನ್ನಾಚರಿಸಿದೆ. ಅದರೆ ಪರಿಪಕ್ವ ಕಾವೊದಗಿದೊಡನೆಯೇ ನಿನಗೆ ನಮ್ಮ ದರ್ಶನವಾಯಿತು. ನೀನು ವಿದ್ಯಾದಾನ ಮಾಡು ಮುಂದೆ ನಿನಗೆ ನಾರದ ಮಹರ್ಷಿಗಳು ಭೇಟಿಯಾಗುವರು ಅವರ ಆಜ್ಞೆಯಂತೆ ನೀನು ನಡೆಯಬೇಕು ಎಂದು ಆಶೀರ್ವದಿಸಿದರು.
   ಸಪ್ತರ್ಷಿಗಳ ಆಶೀರ್ವಚನದಿಂದ ವಾಲ್ಮೀಕಿ ಋಷಿಯು ಸಂತುಷ್ಠನಾದನು. ಭಕ್ತಿ ವಿನಯದಿಂದ ಸಪ್ತರ್ಷಿಗಳು ಕುರಿತು ಮಹಾತ್ಮರೇ ನಿಮ್ಮಂದಲೇ ನಾನು ಪುನರ್ಜನ್ಮ ಪಡೆದಿರುವೆ ದುಷ್ಟನಾಗಿದ್ದ ನನ್ನನ್ನು ನೀವು ಉದ್ದರಿಸಿದಿರಿ ನಿಮ್ಮ ಉಪಕರವನ್ನು ನಾನೆಂದು ಮರೆಯಲಾರೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.ವಾಲ್ಮೀಕಿ ಮಹರ್ಷಿಯೇ ನಾವು ನಿಮಿತ್ತ ಮಾತ್ರರು. ನಿನ್ನನ್ನು ನೀನೇ ಉದ್ದರಿಸಿಕೊಂಡೆ ಏಕನಿಷ್ಠಿಯಿಂದ ರಾಮ ಮಂತ್ರ ಪುರಸ್ಚರನ ಮಾಡಿ ಪಾವನನಾದೆ, ಸರ್ವಸಂಗ ಪರಿತ್ಯಾಗ ಮಾಡಿ ಮನೋನಿಗ್ರಹಗಳಿಂದ ಯೋಗರುಢನಾಗಿ ಮೈಮೇಲೆ ವಲ್ಮೀಕಿ (ಹುತ್ತ) ಬೆಳೆಯುವವರೆಗೆ ಮಾಡಿದ ತಪಸ್ಸು ಸಾಮನ್ಯವಾದುದಲ್ಲ ನಿನ್ನ ನಿಷ್ಠೆಯೇ ನಿನ್ನನ್ನು ಉದ್ದರಿಸಿದೆ. ನೀನು ಪುರಸ್ಚರಣ ಮಾಡಿದ ರಾಮಮಂತ್ರದ ಮಹಿಮೆಯನ್ನು ಚೆನ್ನಾಗಿ ಅರಿತಿರುವೆ ಮುಂದೆ ದೇವರ್ಷಿ ನಾರದರು ಮಹಾಮಹಿಮನಾದ ರಾಮನ ಚರಿತ್ರೆಯನ್ನು ನಿನಗೆ ತಿಳಿಸುವರು ಶ್ರೀ ರಾಮ ಚರಿತೆಯ ಶ್ರವಣದಿಂದ ನಿನಗೆ ಒಳ್ಳೆಯ ಪ್ರಯೋಜನವಾಗುವುದೆಂದು ಶುಭಾಶೀರ್ವದಿಸಿದರು.
   ಸಪ್ತಷಿಗಳ ಅದೇಶದಂತೆ ನಾರದ ಮುನಿಗಳು ವಾಲ್ಮಿಕಿ ಮಹರ್ಷಿಯ ಆಶ್ರಮಕ್ಕೆ ಭೇಟಿ ಕೊಟ್ಟರು. ಸಜ್ಜನರ ರಕ್ಷಣೆಗೆ ಮತ್ತು ದುರ್ಜನರ ನಾಶಕ್ಕಾಗಿ ಈ ಭೂಮಿಯಲ್ಲಿ ಅವತರಿಸಿದ ಶ್ರೀರಾಮ ಚರಿತ್ರೆಯನ್ನು ಬರೆಯುವಂತೆ ನಾರದಮುನಿಗಳು ತಿಳಿಸಿದರು. ಒಮ್ಮೆ ಶಿಷ್ಯನೊಂದಿಗೆ ಗಂಗಾ ಸ್ನಾನಕ್ಕೆ ಹೊರಟ ವಾಲ್ಮೀಕಿಗೆ ಸರಸಸಲ್ಲಾಪದಲ್ಲಿದ್ದ ಕ್ರೌಂಚ ಪಕ್ಷಿ ದಂಪತಿಯನ್ನು ನೋಡಿದರು. ಅವರ ಕಣ್ಣಿದುರಿಗೆ ಬೇಡನ ಬಾಣಕ್ಕೆ ಬಲಿಯಾದ ಗಂಡು ಕ್ರೌಂಚ ಪಕ್ಷಿ ಕಂಡು ಮರುಗಿದ ವಾಲ್ಮೀಕಿ ಈ ಪಕ್ಷಿಯ ಸಾವಿಗೆ ಕಾರಣನಾದ ಬೇಡನಿಗೆ ಎಂದು ಏಳಿಗೆಯಾಗದಿರಲೆಂದು ಶಾಪ ಕೊಟ್ಟರು. ನಂತರ ಬೇಡ ತನ್ನ ಕಾಯಕದ ಬಗ್ಗೆ ವಾಲ್ಮೀಕಿಗೆ ಮನವರಿಕೆ ಮಾಡಿಕೊಟ್ಟಾಗ ಸತ್ಯ ತಿಳಿಯದೇ ಶಾಪ ಕೊಟ್ಟದ್ದು ತಪ್ಪಾಯಿತೆಂದು ವಾಲ್ಮೀಕಿ ಋಷಿಯೂ ಪಶ್ಚಾತ್ತಾಪ ಪಟ್ಟು ಮನಶಾಂತಿಗಾಗಿ ಪರಮಾತ್ಮನ ದರ್ಶನಕ್ಕೆ ತಪಶ್ಚರ್ಯ ಮಾಡಿದರು. ತಪಸ್ಸಿಗೆ ಲೋಕಕರ್ತನಾದ ಬ್ರಹ್ಮದೇವನು ಮೆಚ್ಚಿ ಇವನ ತಪೋವನಕ್ಕೆ ದರ್ಶನವಿತ್ತನು.ಆಗ ಪರಮಾತ್ಮನು ವಾಲ್ಮೀಕಿಯನ್ನು ಕುರಿತು ಪುಣ್ಯ ಶ್ಲೋಕಿಯಾದ ಮಹರ್ಷಿಯೇ ನಿನ್ನಿಂದ ಲೋಕಕಲ್ಯಾಣ ಮಹಾಕಾರ್ಯವು ಜರುಗಬೇಕಾಗಿದೆ. ಅದಕ್ಕಾಗಿಯೇ ಕ್ರೌಂಚವಧೆಯ ಘಟನೆಯು ನಿನ್ನ ಕಣ್ಮಂದೆ ನಡೆಯಿತು. ದೇವರ್ಷಿ ನಾರದರು ಕೇಳಿದ ಶ್ರೀರಾಮ ಚರಿತೆಯು ನಿನಗೆ ಪೂರ್ಣವಾಗಿ ಕರಗತವಾಗಿದೆ. ಈ ಪುಣ್ಯಪುರುಷನ ಚರಿತ್ರೆಯನ್ನು ನೀನು ಕಾವ್ಯರೂಪದಲ್ಲಿ ಬರೆಯಬೇಕು ಪೃಥ್ವಿಯಲ್ಲಿ ಎಲ್ಲಿಯವರೆಗೆ ಗಿರಿಶಿಖರಗಳು, ನದಿ ಸಮುದ್ರಗಳಿರುವವೋ ಅಲ್ಲಿಯವರೆಗೆ ಈ ಲೋಕದಲ್ಲಿ ರಾಮಾಯಣ ಕಥೆಯು ಪ್ರಚಲಿತವಾಗಿರುತ್ತದೆ. ನಿನ್ನ ಶ್ರೀರಾಮಚರಿತ ಮಹಾಕಾವ್ಯದ ದಿವ್ಯಕೃತಿಯಿಂದ ಲೋಕೋಪಕಾರವಾಗುವುದು. ನಿನ್ನ ಕಾವ್ಯವು ತನ್ನ ಘನತೆಯಿಂದ ವೇದ ಪಟ್ಟಕ್ಕೇರುವುದು, ಕಾವ್ಯ ರಚನೆಯ ಕಾರ್ಯದಲ್ಲಿ ನೀನೇ ಮೊದಲಿಗನಾಗುವುದರಿಂದ ಆದಿಕವಿ ಎಂಬ ಖ್ಯಾತಿ ಕೂಡ ನಿನಗೆ ಸಲ್ಲತ್ತದೆ ಎಂದ ಬ್ರಹ್ಮದೇವ ವಾಲ್ಮೀಕಿ ಮಹರ್ಷಿಯೇ ಉಪದೇಶ ಮಾಡಿ ಕಣ್ಮರೆ ಹೊಂದಿದನು.    
  ಮರು ಕ್ಷಣವೇ ಮಹರ್ಷಿಯಲ್ಲಿ ರಾಮಾಯಣ ಕಾವ್ಯ ರಚನೆಯ ಸ್ಪೂರ್ತಿಯ ಉದಯವಾಯಿತು.ವಾಲ್ಮೀಕಿ ಮಹರ್ಷಿ ಪಾವನಕರವಾದ ಶ್ರೀರಾಮಚರಿತೆಯನ್ನು ಕಾವ್ಯರೂಪದಲ್ಲಿ ಶ್ರೀರಾಮ ಜನನದಿಂದ ಹಿಡಿದು ಅವನ ಪಟ್ಟಾಭೀಷೇಕದವರೆಗೆ ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡ, ಯುದ್ದಕಾಂಡಗಳೆಂಬ ಆರು ಕಾಂಡಗಲಲ್ಲಿ ಶ್ರೀರಾಮ ಚರಿತೆಯನ್ನು ರಚಿಸಿ ಹಾಡಿದ್ದಾನೆ. ಇದನ್ನೇ ನಾವು ವಾಲ್ಮೀಕಿ ವಿರಚಿರ ರಾಮಾಯಣವೆಮದು ಕರೆಯುತ್ತೇವೆ.ಆದಿಕವಿ ಮಹರ್ಷಿ ವಾಲ್ಮೀಕಿ ಕೇವಲ ವಾಲ್ಮೀಕಿ ನಾಯಕ ಜನಾಂಗದ ಸ್ವತ್ತಲ್ಲ. ಅವರೊಬ್ಬ ಪುಣ್ಯಪುರುಷ ರಾಗಿದ್ದಾರೆ. ಬೇಟೆಗಾರ, ದರೋಡೆಕೋರ ಪರಾವಲಂಬಿಯಾಗಿದ್ದ ಕಿರಾತ ರತ್ನಾಕರ ಸಪ್ತರ್ಷಿಗಳ ಉಪದೇಶದಿಂದ ಜ್ಞಾನೋದಯವಾಗಿ ರಾಮನಾಮ ಜಪಿಸಿ ಮಹರ್ಷಿ ವಾಲ್ಮೀಕಿಯಾಗಿ ಜಗತ್ಪ್ರಸಿದ್ದ ರಾಮಾಯಾಣ ರಚಿಸಿ ಆದಿಕವಿಯಾದ. ಇವರ ರಾಮಾಯಣ ಮಹಾಕಾವ್ಯ ಇಡೀ ಜಗತ್ತಿಗೆ ದಾರಿದೀಪವಾಗಿದೆ.
  ಇವರ ವಿಚಾರಧಾರೆಗಳು ಇಂದಿನ ತಪ್ಪು ದಾರಿ ತುಳಿವ ಪ್ರತಿಯೊಬ್ಬರಿಗೆ ದಾರಿದೀಪವಾಗಬೇಕು. ಇವರ ಚಿಂತನೆಗಳು ಜನ ಸಾಮಾನ್ಯರ ಮನ ತಲುಪಿ ಸನ್ಮಾರ್ಗದಲ್ಲಿ ನಡೆಯಬೇಕು.ಸಮಾಜದ ಕೆಳ ವರ್ಗದಲ್ಲಿ ಜನಿಸಿದ ಎಷ್ಟೋ ವ್ಯಕ್ತಿಗಳು ಅವರ ಸಾಧನೆಯಿಂದ ಉತ್ತುಂಗಕ್ಕೇರಿ ಇತಿಹಾಸದ ಪುಟಗಳಲ್ಲಿ ಅಜರಾಮರರಾಗಿದ್ದಾರೆ. 
    -ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಕಲ್ಲಿದ್ದಲು, ಪಳೆಯುಳಿಕೆ ಇಂಧನ

ಕಲ್ಲಿದ್ದಲು, ಪಳೆಯುಳಿಕೆ ಇಂಧನಗಳಲ್ಲಿ ಒಂದು.ಪಳೆಯುಳಿಕೆ ಇಂಧನಗಳು  ಹೂಳಲಾದ ಸತ್ತ  ಸಾವಯವ ಜೀವಗಳ  ಆಮ್ಲಜನಕವಿಲ್ಲದೆ ಕೊಳೆತ ಸ್ಥಿತಿಯಂತಹ ನೈಸರ್ಗಿಕ ಸಂಪನ್ಮೂಲಗಳಿಂದ ರಚನೆಯಾಗಿರುವ ಇಂಧನಗಳಾಗಿವೆ. ಸಾವಯವಗಳು ಮತ್ತು ಅದರ ಪಳೆಯುಳಿಕೆ ಇಂಧನಗಳು ನಿರ್ಧಿಷ್ಟವಾಗಿ ಮಿಲಿಯನ್ ವರ್ಷಗಳಷ್ಟು ಹಳೆಯದಾಗಿರುತ್ತವೆ. ಮತ್ತು ಕೆಲವೊಮ್ಮೆ 650 ಮಿಲಿಯನ್ ವರ್ಷಗಳಿಗಿಂತ ಹೆಚ್ಚು ಹಳೆಯದಾಗಿರುವ ಸಾದ್ಯತೆ ಇದೆ.
      ಈ ಇಂಧನಗಳು ಇಂಗಾಲ ಮತ್ತು  ಹೈಡ್ರೋಕಾರ್ಬನ್‌ಗಳನ್ನು ಅತ್ಯಂತ ಅಧಿಕ ಪ್ರಮಾಣದಲ್ಲಿ ಒಳಗೊಂಡಿರುತ್ತದೆ.ಬಾಷ್ಪಶೀಲ ವಸ್ತುಗಳಾದ, ಇಂಗಾಲ, ಜಲಜನಕಗಳ ಕಡಿಮೆ ಪ್ರಮಾಣದಿಂದ ಮಿಥೇನ್ ನಂತಹ ದ್ರವರೂಪದ ಪೆಟ್ರೋಲಿಯಂನಂತಹ ಸಂಯುಕ್ತ ವಸ್ತುಗಳು ಘಟಿಸುತ್ತವೆ. ಮತ್ತು ಬಾಷ್ಪಶೀಲ ರಹಿತ ವಸ್ತುಗಳಾದ ಆಂತ್ರಸೈಟ್  ಕಲ್ಲಿದ್ದಲುಗಳು ಸಂಪೂರ್ಣವಾಗಿ ಇಂಗಾಲವೆಂಬ ಮೂಲವಸ್ತುವಿನ ವಿಘಟನೆಯಿಂದಾಗಿ ರಚನೆಗೊಂಡಿದೆ. ಹೈಡ್ರೋಕಾರ್ಬನ್ ಘಟಕಗಳಲ್ಲಿ ಎಣ್ಣೆಯೊಂದಿಗೆ ಬೆರೆತ ಅಥವಾ ಅದೊಂದನ್ನೇ ಅಥವಾ ಮಿಥೇನ್ ಕ್ಲಾತ್ರೇಟ್ಸ್ ರೂಪದಲ್ಲಿ ಮಿಥೇನ್ ಅನ್ನು ಕಾಣಬಹುದು. ಇವನ್ನು ಸಾಮಾನ್ಯವಾಗಿ ಅಂಗೀಕರಿಸಿ ಬಳಸಲಾಗಿದೆ. ಅದೆಂದರೆ ಅವೆಲ್ಲಾ ಸತ್ತು ನಶಿಸಿದ ಸಸ್ಯಗಳು ಮತ್ತು ಪ್ರಾಣಿಗಳನ್ನು ಭೂಮಿಯ ಆಳವಾದ ಪದರದಲ್ಲಿ ನೂರಾರು ಮಿಲಿಯನ್ ವರ್ಷಗಳ ಕಾಲ, ಶಾಖ ಮತ್ತು ಒತ್ತಡದಿಂದ ವಿಘಟನೆಗೊಳ್ಳುತ್ತಾ,ವಿಭಜನೆಗೊಂಡಂತಹ  ಪಳೆಯುಳಿಕೆ ಅಂಶದ ಘಟಕಗಳಿಂದ  ರಚನೆಯಾಗಿವೆ.
    ಈ ಒಂದು ಬೈಯೋಜೆನಿಕ್ ಥಿಯರಿ ಯನ್ನು 1556 ರಲ್ಲಿ ಜಾರ್ಜ್ ಅಗ್ರಿಕೋಲ್‌  ನಿಂದ ಮೊಟ್ಟ ಮೊದಲ ಬಾರಿಗೆ ಪರಿಚಯಿಸಲ್ಪಟ್ಟಿತ್ತು. ಮತ್ತು ಆನಂತರ 18ನೇ ಶತಮಾನದಲ್ಲಿ ಮಿಕೈಲ್ ಲೊಮೊನೊಸೊವ್ ನಿಂದ ಪರಿಚಯವಾಗಿತ್ತು.ಎನರ್ಜಿ ಇನ್ಫರ್ಮೇಶನ್ ಅಡ್ಮಿನಿಸ್ಟೇಶನ್‌ನಿಂದ 2007ರಲ್ಲಿ ಇಂತಿಷ್ಟು ಖರ್ಚಾದ ಅಂದಾಜಿನ ಪ್ರಮಾಣವನ್ನು ಲೆಕ್ಕಹಾಕಲಾಯಿತು. ಪ್ರಂಪಚದಲ್ಲಿ ಪ್ರಾಥಮಿಕ ಶಕ್ತಿ ಬಳಕೆಗಾಗಿ 86.4% ನಷ್ಟು ಪ್ರಯಾಣದಲ್ಲಿ ಪಳೆಯುಳಿಕೆ ಇಂಧನಗಳಿಗಾ ಗಿ ಹಂಚಿಕೆಯಾಗಿದೆ. ಶಕ್ತಿಯ ಪ್ರಾಥಮಿಕ ಮೂಲಗಳು ಖನಿಜತೈಲ 36.0%, ಕಲ್ಲಿದ್ದಲು 27.4%, ನೈಸರ್ಗಿಕ ಅನಿಲ 23.0%, ನಷ್ಟು ಪ್ರಮಾಣವನ್ನು ಹೊಂದಿವೆ.
     ಪಳೆಯುಳಿಕೆಯಿಲ್ಲದ ಮೂಲಗಳು 2006 ರಲ್ಲಿ ಹೈಡ್ರೋಎಲೆಕ್ಟ್ರಿಕ್ 6.3%, ನ್ಯೂಕ್ಲಿಯರ್ 8.5% ಮತ್ತು (ಜಿಯೋಥರ್ಮಲ್, ಸೋಲಾರ್, ಅಲೆ, ಗಾಳಿ,ಮರ, ಕಸ ಇವೆಲ್ಲವುಗಳ ಪ್ರಮಾಣ 0.9% ರಷ್ಟು ಒಳಗೊಂಡಿವೆ. ಜಗತ್ತಿನಲ್ಲಿ ಶಕ್ತಿಯ ಬಳಕೆಯು ಒಂದು ವರ್ಷಕ್ಕೆ 2.3% ನಷ್ಟು ಏರುತ್ತಲೇ ಇತ್ತು.ಪಳೆಯುಳಿಕೆ ಇಂಧನಗಳು ಪುನರ್ನವೀಕರಣ ಮಾಡಲಾಗದ ಸಂಪನ್ಮೂಲಗಳು  ಏಕೆಂದರೆ ಅವು ರಚನೆಯಾಗಲು ಮಿಲಿಯನ್ ಗಟ್ಟಲೆ ವರ್ಷಗಳನ್ನು ತೆಗೆದುಕೊಳ್ಳುತ್ತವೆ ಮತ್ತು ಈ ಘಟಕಗಳನ್ನು ಹೊಸ ಇಂಧನಗಳು ರೂಪುಗೊಳ್ಳುವುದಕ್ಕಿಂತ ಹೆಚ್ಚು ವೇಗದಲ್ಲಿ ಬರಿದು ಮಾಡಲಾಗುತ್ತಿದೆ. 
     ಪಳೆಯುಳಿಕೆ ಇಂಧನಗಳ ಉತ್ಪಾದನೆ ಮತ್ತು ಉಪಯೋಗವು ಪರಿಸರಕ್ಕೆ ಸಂಬಂಧಪಟ್ಟ ಆತಂಕಗಳನ್ನು ಏರಿಕೆಯಾಗುವಂತೆ ಮಾಡುತ್ತದೆ. ಜಾಗತಿಕರಣ ಚಳುವಳಿಯು ನವೀಕರಣಗೊಳ್ಳುವ ಶಕ್ತಿಯ ಉತ್ಪಾದನೆಗೋಸ್ಕರ ಆರಂಭವಾಗಿದೆ ಆದ್ದರಿಂದ ಏರಿಕೆಯಾಗಿರುವ ಶಕ್ತಿಯ ಅಗತ್ಯತೆಗಳನ್ನು ಮುಟ್ಟಲು ಸಹಾಯವಾಗುವಂಥ ಮಾರ್ಗದಲ್ಲಿ ಸಾಗಲಾಗುತ್ತಿದೆ.ದಹಿಸುತ್ತಿರುವ ಪಳೆಯುಳಿಕೆ ಇಂಧನಗಳು ಒಂದು ವರ್ಷಕ್ಕೆ ಸುಮಾರು 21.3 ಬಿಲಿಯನ್  ಟನ್‌ಗಳಷ್ಟು  ಕಾರ್ಬನ್ ಡೈ ಆಕ್ಸೈಡ್ ಅನ್ನು ಉತ್ಪಾದಿಸುತ್ತವೆ. ಆದರೆ ಸ್ವಾಭಾವಿಕ ವಿಧಾನಗಳು ಅರ್ಧ ಪ್ರಮಾಣವನ್ನು ಹೀರಿಕೊಳ್ಳುತ್ತವೆ ಎಂದು ಅಂದಾಜಿಸ ಲಾಗಿದೆ ಇದರಿಂದಾಗಿ ಪ್ರತಿವರ್ಷ 10.65 ಬಿಲಿಯನ್ ಟನ್‌ಗಳಷ್ಟು ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಹೆಚ್ಚಾಗುತ್ತಲಿದೆ     
     ಕಾರ್ಬನ್ ಡೈಆಕ್ಸೈಡ್, ಗ್ರೀನ್‌ಹೌಸ್ ಗ್ಯಾಸ್‌ಗಳಲ್ಲಿ ಒಂದಾಗಿದೆ, ಇದು ವಿಕಿರಣ ಬಲವನ್ನು ಹೆಚ್ಚು ಮಾಡುತ್ತದೆ ಮತ್ತು ಗ್ಲೋಬಲ್ ವಾರ್ಮಿಂಗ್ ಅನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಸರಾಸರಿ ಭೂಮಿಯ ಮೇಲ್ಮೈ ತಾಪಮಾನ ಹೆಚ್ಚಾಗುತ್ತದೆ  ಹವಾಮಾನ ವಿಜ್ಞಾನಿಗಳು ಇದರಿಂದಾಗುವ ಪ್ರಮುಖವಾದ ಅಡ್ಡ ಪರಿಣಾಮಗಳಾಗುತ್ತವೆಂದು ನಂಬಿದ್ದಾರೆ.
  (ವಿವಿಧ ಮೂಲಗಳಿಂದ)
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಗಾಜು

ಗಾಜು ಅರೆಸ್ಫಟಿಕ ವಸ್ತುಗಳೊಳಗೆ ನಿರಾಕಾರ ವಲಯಗಳಲ್ಲಿ ಗಟ್ಟಿ ಹಾಗೂ ಸುಲಭವಾಗಿ ಒಡೆಯುವ ಸ್ಥಿತಿಯಿಂದ ಕರಗಿದ ಅಥವಾ ರಬ್ಬರ್‌ನಂಥ ಸ್ಥಿತಿಗೆ ವರ್ತಿಸಬಲ್ಲ  ಗಾಜು ಪರಿವರ್ತನೆಯನ್ನು ಪ್ರಕಟಪಡಿಸುವ ಒಂದು ನಿರಾಕಾರ  (ಅಸ್ಫಟಿಕರೂಪದ) ಘನ ಪದಾರ್ಥ. ಗಾಜುಗಳು ವಿಶಿಷ್ಟವಾಗಿ ಮತ್ತು ಅವು ನೋಟದಲ್ಲಿ ಪಾರದರ್ಶಕವಾಗಿರಬಹುದು. ಶೇಕಡ 75 ಸಿಲಿಕಾನ್ ಡೈಆಕ್ಸೈಡ್, ಸೋಡಿಯಮ್ ಆಕ್ಸೈಡ್, ಸುಣ್ಣ, ಮತ್ತು ಹಲವು ಸಣ್ಣ ಸಂಯೋಜನೀಯಗಳಿಂದ ಕೂಡಿದ ಸೋಡಾ-ಲೈಮ್ ಗಾಜು ಕಿಟಕಿಗಳು ಮತ್ತು ಕುಡಿಯುವ ಪಾತ್ರೆಗಳಲ್ಲಿ ಶತಮಾನಗಳಿಂದ ಬಳಸಲಾದ ಅತ್ಯಂತ ಪರಿಚಿತ ಪ್ರಕಾರದ ಗಾಜು. ಕೆಲವು ದ್ರವಪದಾರ್ಥಗಳು ಅತಿಯಾಗಿ ತಣಿಸಲ್ಪಟ್ಟು ತಮ್ಮ ದ್ರವರೂಪವನ್ನು ಕಳೆದುಕೊಂಡರೂ ದ್ರವದ ಲಕ್ಷಣಗಳನ್ನು ಉಳಿಸಿಕೊಂಡಾಗ ದೊರೆಯುವ ಘನವಸ್ತು (ಗ್ಲಾಸ್). ಸಾಮಾನ್ಯ ಉಷ್ಣತಾಮಟ್ಟದಲ್ಲಿ ಇದು ಗಟ್ಟಿಯಾಗಿರುತ್ತದೆ. ಎತ್ತರದಿಂದ ಬಿದ್ದರೆ ಚೂರುಚೂರಾಗುತ್ತದೆ. ಕೆಲವು ನೂರು ಡಿಗ್ರಿ ಉಷ್ಣತೆಗೆ ಬಿಸಿ ಮಾಡಿದಾಗಲೂ ಗಾಜಿನ ಘನರೂಪ ಬದಲಾಗುವುದಿಲ್ಲ. ಆದರೆ ಇದನ್ನು ಮತ್ತಷ್ಟು ಬಿಸಿ ಮಾಡಿದರೆ ನಿಧಾನವಾಗಿ ಮೆತ್ತಗಾಗಿ ಮಂದವಾದ ದ್ರವರೂಪವನ್ನು ಪಡೆಯುತ್ತದೆ. ಮಿಕ್ಕ ಘನಪದಾರ್ಥಗಳಂತೆ ನಿರ್ದಿಷ್ಟವಾದ ಉಷ್ಣತಾಮಟ್ಟದಲ್ಲಿ ಇದು ಒಮ್ಮೆಲೇ ದ್ರವವಾಗುವುದಿಲ್ಲ. ಅಧಿಕ ಉಷ್ಣತಾಮಟ್ಟದಲ್ಲಿ ಗಾಜು ಮಿಕ್ಕ ದ್ರವಗಳಂತೆಯೇ ವರ್ತಿಸುತ್ತದೆ. ಮಿಕ್ಕ ದ್ರವಗಳಂತೆ, ಹರಿಯುವ, ತಾನಿರುವ ಪಾತ್ರೆಯ ಆಕಾರವನ್ನು ಪಡೆಯುವ, ಪಾತ್ರೆಗೆ ಯಾವ ಆಕಾರವಿದ್ದರೂ ತನ್ನ ಮಟ್ಟವನ್ನು ಉಳಿಸಿಕೊಳ್ಳುವ ಗುಣಗಳು ದ್ರವಗಾಜಿಗೂ ಇವೆ.
   ದ್ರವಗಾಜನ್ನು ಘನೀಭವನ ಉಷ್ಣತೆಗೆ ತಣಿಸಿದರೂ ಘನೀಭವಿಸುವುದಿಲ್ಲ. ಗಾಜಿನ ಹರಳುಗಳೂ ಕಾಣಿಸುವುದಿಲ್ಲ. ಅದು ದ್ರವರೂಪದಲ್ಲೇ ತಣಿಸಿ ಅದು ಘನರೂಪವನ್ನು ಹೊಂದುವಂತೆ ಮಾಡಬಹುದು. ಈ ಸ್ಥಿತಿಯಲ್ಲಿ ಅದು ದ್ರವರೂಪದಿಂದಿದ್ದರೂ ಅದರ ಹರಿಯವ ಗುಣ ಅತಿ ಕಡಿಮೆಯಾಗಿ ಅದು ಘನ ಪದಾರ್ಥದಂತೆ ಕಾಣುತ್ತದೆ.
    ಶುದ್ಧವಾದ ಮತ್ತು ಕಬ್ಬಿಣದ ಸಂಯುಕ್ತರಹಿತ ಮರಳು ಸೋಡಿಯಂ ಕಾರ್ಬೊನೇಟ್ ಮತ್ತು ಸುಣ್ಣದ ಕಲ್ಲು ಇವು ಆವಶ್ಯಕ ಘಟಕಾಂಶಗಳು. ಇನ್ನು ಗಾಜಿನ ಬಗೆಯನ್ನು ಅನುಸರಿಸಿ ಕೆಲವೊಮ್ಮೆ  ಪೊಟ್ಯಾಸಿಯಮ್ ಕಾರ್ಬನೇಟ್, ಲೆಡ್ ಮಾನಾಕ್ಸೈಡ್, ಬೋರಾನ್ ಟ್ರೈ ಆಕ್ಸೈಡ್ ಮುಂತಾದವನ್ನು ಸೇರಿಸುವರು. 
    ಕಲೆಟ್ ಎಂಬ ಅನುಪಯುಕ್ತವಾದ ಗಾಜು ಮತ್ತು ಚೂರಾದ ಗಾಜು ಉತ್ಕರ್ಷಣಕಾರಕಗಳು (ಆಕ್ಸಿಡೈಸಿಂಗ್ ಏಜೆಂಟ್ಸ್) ಬಣ್ಣಗಳನ್ನು ಹೋಗಲಾಡಿಸುವ ವಸ್ತುಗಳು ನಿರ್ದಿಷ್ಟ ಬಣ್ಣಗಳನ್ನು ಬರಿಸುವ ವಸ್ತುಗಳು.ಗಾಜಿನ ವಸ್ತುಗಳ ತಯಾರಿಕೆಯಲ್ಲಿ ಹಾಳಾಗಿ ಉಳಿಯುವ ಗಾಜು ಮತ್ತು ಗಾಜಿನ ಚೂರುಗಳು (ಕಲೆಟ್ಸ್) ಗಾಜಿನ ತಯಾರಿಕೆಯಲ್ಲಿ ವಿವಿಧ ರೀತಿಯಲ್ಲಿ ಸಹಾಯಕವಾಗಿವೆ. ಅಲ್ಲದೆ ಗಾಜು ದ್ರವಗೊಳ್ಳುವುದಕ್ಕೆ ಕಲೆಟ್ ತುಂಬ ಸಹಾಯಕವಾಗುವುದು. ಉತ್ಕರ್ಷಣಕಾರಕ ಗಳನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಉಪಯೋಗಿಸುತ್ತಾರೆ. ಉದಾಹರಣೆಗಾಗಿ ಗಾಜಿನ ತಯಾರಿಕೆಯಲ್ಲಿ ಲೆಡ್ ಆಕ್ಸೈಡನ್ನು ಬಳಸಬೇಕಾದಾಗ ಕುಲುಮೆಯ ಅನಿಲಗಳಿಂದಾಗಿ ಅದು ಲೋಹರೂಪಕ್ಕೆ ಮಾರ್ಪಾಡುಗೊಳ್ಳದಂತೆ ಈ ಕಾರಕಗಳನ್ನು ಉಪಯೋಗಿಸಬೇಕಾಗುವುದು. ಅನೇಕ ವೇಳೆ ಗಾಜಿನ ತಯಾರಿಕೆಯಲ್ಲಿ ಉಪಯೋಗಿಸುವ ವಸ್ತುಗಳಲ್ಲಿ ಅನಗತ್ಯವಾದ ಇತರ ವಸ್ತುಗಳು ಬೆರೆತಿರುವುದರಿಂದ ಪುರೈಸಿದ ಗಾಜಿಗೆ ವಿವಿಧ ಬಣ್ಣಗಳು ಬರುತ್ತವೆ. ಹಾಗೆ ಬಣ್ಣ ಬಾರದಂತೆ ಈ ಅನಗತ್ಯ ವಸ್ತುಗಳನ್ನು ನಿಷ್ಕ್ರಿಯಗೊಳಿಸಲು ಉತ್ಕರ್ಷಣಕಾರಕ ವಸ್ತುಗಳನ್ನು ಸೇರಿಸುವರು. ಹೀಗೆ ಅಗತ್ಯವಾದ ಎಲ್ಲ ವಸ್ತುಗಳನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿ, ಮಿಶ್ರಣವನ್ನು ದ್ರವರೂಪ ಬರುವವರೆಗೆ ಕುಲುಮೆಗಳಲ್ಲಿ ಕಾಯಿಸುತ್ತಾರೆ. ಇದಕ್ಕೆ ವಿವಿಧ ರೀತಿಯ ಕುಲುಮೆಗಳನ್ನು ಸಂದರ್ಭಾನುಸಾರ ಉಪಯೋಗಿಸುತ್ತಾರೆ. 
    ದ್ರವರೂಪದಲ್ಲಿದ್ದಾಗ ಗಾಜಿಗೆ ಯಾವ ಆಕೃತಿಯನ್ನು ಕೊಡಲಾಗುವುದೋ ಅದೇ ಆಕೃತಿಯನ್ನು ಅದು ಘನವಸ್ತುವಾದಾಗಲೂ ಇಟ್ಟುಕೊಳ್ಳುವುದು ಗಾಜಿನ ಒಂದು ವಿಶಿಷ್ಟ ಗುಣ. ಗಾಜಿಗೆ ಬೇರೆ ಬೇರೆ ಆಕೃತಿ ಕೊಟ್ಟು ತಣಿಸಿದಾಗ ಅದರಲ್ಲಿ ಒಂದು ಬಗೆಯ ಎಳೆತ ಸೆಳೆತಗಳು ಉಂಟಾಗಿ ಅದು ನಿರ್ಬಲಗೊಳ್ಳುವುದು. ಅದರ ಬಲವನ್ನೂ ಬಾಳುವಿಕೆಯನ್ನೂ ಹೆಚ್ಚಿಸುವ ಸಲುವಾಗಿ ಈ ಎಳೆತ ಸೆಳೆತಗಳನ್ನು ಹೋಗಲಾಡಿಸುವುದು ಅಗತ್ಯ. ಅದಕ್ಕಾಗಿ ಗಾಜಿನ ವಸ್ತುಗಳನ್ನು ಪುನಃ ಒಂದು ನಿರ್ದಿಷ್ಟವಾದ ಉಷ್ಣತೆಗೆ ಬಿಸಿ ಮಾಡಿ ಮತ್ತೆ ನಿಧಾನವಾಗಿ ಅದನ್ನು ತಣಿಸುವ ಕ್ರಮವಿದೆ.  "ಅನ್ನೀಲನ ಕ್ರಿಯೆ "ಎಂದು ಇದರ ಹೆಸರು. ಇದಕ್ಕೆ ಒಳಪಟ್ಟು ಗಾಜಿನ ಬಾಳಿಕೆ ದೀರ್ಘವಾಗುವುದು. ಗಾಜಿನಲ್ಲಿ ವಿವಿಧ ಬಗೆಗಳಿವೆ. ಕುಪ್ಪಿಗಳು, ಪಾತ್ರೆಗಳು, ತಟ್ಟೆಗಳು, ಹಾಳೆಗಳು ಮುಂತಾದವನ್ನು ಸಾಮಾನ್ಯ ಗಾಜಿನಿಂದ ತಯಾರಿಸುವರು. ಈ ಜಾತಿ ಗಾಜಿನಲ್ಲಿ ಶುದ್ಧ ಮರಳು, ಸೋಡಖಾರ ಮತ್ತು ಸುಣ್ಣದ ಕಲ್ಲು ಸೇರಿವೆ. ಇಂಥ ಗಾಜು ಹೆಚ್ಚಿನ ಉಷ್ಣತೆಯನ್ನು ತಡೆದುಕೊಳ್ಳಲಾರದು. 
   ಉಷ್ಣತೆಯ ತೀವ್ರ ಏರಿಳಿತಗಳನ್ನು ತಡೆಯಬಲ್ಲ ಗಾಜನ್ನು ವಿಶಿಷ್ಟವಾಗಿ ನಿರ್ಮಿಸ ಬೇಕಾಗುತ್ತದೆ. ಇದಕ್ಕೆ ಗಟ್ಟಿಗಾಜು ಎಂದು ಹೆಸರು. ಇದರ ತಯಾರಿಕೆಯಲ್ಲಿ ಸೋಡಖಾರದ ಬದಲು ಪೊಟ್ಯಾಸಿಯಮ್ ಕಾರ್ಬನೇಟನ್ನು ಉಪಯೋಗಿಸುವರು. ಇನ್ನು ಬಣ್ಣಬಣ್ಣದ ಗಾಜುಗಳೂ ಇವೆ. ತಯಾರಿಕೆಯ ವೇಳೆ ಕಚ್ಚಾ ಪದಾರ್ಥಗಳೊಡನೆ ಅಗತ್ಯವಾದ ಲೋಹದ ಆಕ್ಸೈಡನ್ನು ಸಣ್ಣ ಪ್ರಮಾಣದಲ್ಲಿ ಸೇರಿಸುವುದರಿಂದ ಗಾಜಿಗೆ ಬೇಕಾದ ಬಣ್ಣ ಬರಿಸಬಹುದು. ಕೊಬಾಲ್ಟ್ ಆಕ್ಸೈಡನ್ನು ಸೇರಿಸುವುದರಿಂದ ನೀಲಿಗಾಜನ್ನೂ ಮ್ಯಾಂಗನೀಸ್ ಡೈ ಆಕ್ಸೈಡ್ನ್ನು ಸೇರಿಸುವುದರಿಂದ ಹಳದಿ ಗಾಜನ್ನೂ ಬಂಗಾರ ಅಥವಾ ಸಿಲೇನಿಯಮ್ ಸೇರಿಸುವುದರಿಂದ ಕೆಂಪು ಬಣ್ಣದ ಗಾಜನ್ನೂ, ಯುರೇನಿಯಮ್ ಆಕ್ಸೈಡನ್ನು ಸೇರಿಸುವುದರಿಂದ ಹಳದಿ ಗಾಜನ್ನೂ ತಯಾರಿಸಬಹುದು. ಕ್ಯಾಲ್ಸಿಯಂ ಫ್ಲೋರೈಡ್,ಅರ್ಸಿನಿಯಸ್ ಆಕ್ಸೈಡ್, ಅಲ್ಯೂಮಿನಿಯಮ್ ಆಕ್ಸೈಡ್, ಜಿಂಕ್ ಮತ್ತು ಕ್ಯಾಲ್ಸಿಯಮ್ ಫಾಸ್ಫೇಟುಗಳನ್ನು ಒಂದೊಂದಾಗಿ ಆಗಲಿ ಅಥವಾ ಕೆಲವುಗಳ ಕೂಟದಲ್ಲಿ ಆಗಲಿ ಬಳಸುವುದರಿಂದ ಗಾಜಿಗೆ ಬಿಳಿಬಣ್ಣವನ್ನು ಅಲ್ಪಪಾರದರ್ಶಕ ಗುಣವನ್ನೂ ಒದಗಿಸಬಹುದು. ಇಂಡಿಯನ್ ಆಕ್ಸೈಡನ್ನು ಸೇರಿಸಿದರೆ ಗಾಜು ಕಪ್ಪುಬಣ್ಣವನ್ನು ಪಡೆಯುತ್ತದೆ. 
    ಇನ್ನೊಂದು ಅತಿ ಉಪಯುಕ್ತವಾದ ಜಾತಿ ಪೈರೆಕ್ಸ್ ಗಾಜು. ಇದರಲ್ಲಿ ಶೇ.80 ರಷ್ಟು ಮರಳು ಸೇರಿರುವುದರಿಂದ ಇದನ್ನು ಹೆಚ್ಚು ಬಿಸಿಮಾಡಿ ಕೂಡಲೆ ತಣಿಯಬಿಟ್ಟರೂ ಅದು ಒಡೆಯುವುದಿಲ್ಲ. ಅಲ್ಲದೆ ಅದು ಅಧಿಕ ಉಷ್ಣತೆಯನ್ನು ತಡೆದುಕೊಳ್ಳುವುದು. ಕನ್ನಡಕ, ಸೂಕ್ಷ್ಮದರ್ಶಕ,ದೂರದರ್ಶಕ  ಮೊದಲಾದ ಉಪಕರಣ ತಯಾರಿಕೆಯಲ್ಲಿ ಆಪ್ಟಿಕಲ್ ಗಾಜು ಎಂಬ ವಿಶಿಷ್ಟ ಜಾತಿಯ ಗಾಜನ್ನು ಉಪಯೋಗಿಸುವರು. ಇದರ ತಯಾರಿಕೆಯಲ್ಲಿ ಕಚ್ಚಾ ಪದಾರ್ಥಗಳನ್ನೂ ತಯಾರಿಕೆಯ ಕ್ರಿಯೆಗಳನ್ನೂ ಚೆನ್ನಾಗಿ ಪರಿಶೀಲಿಸಿ ಅದಕ್ಕೆ ವಿಶಿಷ್ಟ ಗುಣಗಳು ನಿರ್ದಿಷ್ಟ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಲಾಗುವುದು. ತೆಳುವಾದ ಗಾಜಿನ ಪದರಗಳನ್ನು ಸೆಲ್ಯುಲೋಸ್ ಅಸಿಟೇಟ್ ಎಂಬ ವಸ್ತುವಿನಿಂದ ಒಂದಕ್ಕೊಂದು ಜೋಡಿಸಿಕೊಳ್ಳುವ ಹಾಗೆ ಮಾಡುವುದರಿಂದ ಅಪಾಯರಹಿತ ಗಾಜಿನ ಹಾಳೆಯನ್ನು ತಯಾರಿಸಬಹುದು. ಇದರ ಪದರಗಳು ಕಾಣಿಸುವುದಿಲ್ಲ. ಅಲ್ಲದೆ ಈ ಗಾಜು ಪಾರದರ್ಶಕವಾಗಿಯೂ ಇರುತ್ತದೆ. ಅಪಘಾತಕ್ಕೆ ಒಳಗಾದಾಗ ಇಂಥ ಗಾಜು ಪುಡಿಪುಡಿಯಾದರೂ ಅದರ ಚೂರುಗಳು ಸಿಡಿದು ಯಾವ ಹಾನಿಯನ್ನೂ ಮಾಡುವುದಿಲ್ಲ. ಬದಲು ಆ ಚೂರುಗಳು ಇದ್ದಲ್ಲಿಯೇ ಅಂಟಿಕೊಂಡಿರುವುವು. ಇಂಥ ಗಾಜನ್ನು ಮೋಟಾರು ವಾಹನಗಳಲ್ಲಿ ಚಾಲಕರ ಎದುರು ಗಾಳಿರಕ್ಷಕಗಳಾಗಿ ಉಪಯೋಗಿಸುತ್ತಾರೆ.
   ಗಾಜನ್ನು ಶಬ್ದನಿರೋಧಕ, ಶಾಖಹೀರುವಿಕೆ, ಶಾಖಪ್ರತಿಫಲನ, ಹವಾಮಾನ ಪ್ರತಿರೋಧಕ, ಅಗ್ನಿನಿರೋಧಕ ಮತ್ತು ವಿದ್ಯುತ್ ಆಘಾತ ತಡೆಯಬಲ್ಲ ಸಾಧನವಾಗಿ ಬಳಸಬಹುದಾಗಿದೆ.
                  (ವಿವಿಧ ಮೂಲಗಳಿಂದ)
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಸುಧಾಮ ಶ್ರೀಕೃಷ್ಣ..ಸ್ನೇಹಿತ

ಮನೆ ತುಂಬಾ ಮಕ್ಕಳು..
ಕಿತ್ತು
ತಿನ್ನುವ ಬಡತನ...
ಹಸಿವು...
ಬದುಕಿನ
ನಿಜವಾದ ಬಣ್ಣವನ್ನು ಪರಿಚಯ ಮಾಡಿಸುವದೇ ಈ ಹಸಿವು... !
ಹೆಂಡತಿಗೆ ಸಹಿಸಲಾಗಲಿಲ್ಲ...
"ನಿಮ್ಮ
ಸ್ನೇಹಿತ ಶ್ರೀಕೃಷ್ಣ..
ಈಗ ರಾಜನಾಗಿದ್ದಾನೆ...
ಹೋಗಿ..
ಒಮ್ಮೆ ಭೇಟಿಯಾಗಿ ಬನ್ನಿ..."
ಸುಧಾಮನಿಗೆ ಸಂಕೋಚವಾಯಿತು...
"ಹೇಗೆ ಹೋಗಲಿ.. ?
ಆತ ಚಕ್ರವರ್ತಿ...
ಶ್ರೀಮಂತ..
ಲೋಕವೇ ಅವನನ್ನು ಪೂಜಿಸುತ್ತಿದೆ...
ನನ್ನ
ವೇಷ ಭೂಷಣಕ್ಕೂ ಅವನ ಭೇಟಿಯಾಗುವ ಯೋಗ್ಯತೆ ಇಲ್ಲ...
ನಾವು ಸಣ್ಣವರಿದ್ದಾಗ ಸ್ನೇಹವಿತ್ತು...
ಈಗ
ಆತನಿಗೆ ನನ್ನ ನೆನಪು ಇದೆಯೋ.. ಇಲ್ಲವೋ ಗೊತ್ತಿಲ್ಲ..."...
ಸುಧಾಮನ ಮಡದಿ ಬಿಡಲಿಲ್ಲ..
"ಸ್ನೇಹಕ್ಕೆ
ಅಂತಸ್ತು... ಶ್ರೀಮಂತಿಕೆ..ಇವುಗಳ ಅಗತ್ಯವೇ ಇಲ್ಲ..
ಸ್ನೇಹಕ್ಕೆ
ಕೇವಲ ಭಾವನೆ.. ನೆನಪುಗಳು... ಹೃದಯ ಶ್ರೀಮಂತಿಕೆ ಸಾಕು..
ಹೋಗಿ ಬನ್ನಿ..."
ಸುಧಾಮನಿಗೆ ಮತ್ತೆ ಸಂಕೋಚ..
"ಖಾಲಿ ಕೈಯ್ಯಲ್ಲಿ ಹೇಗೆ ಹೋಗಲಿ ?....
ಏನಾದರೂ
ತೆಗೆದುಕೊಂಡು ಹೋಗಲು ನಮ್ಮ ಬಳಿ ಏನೂ ಇಲ್ಲವಲ್ಲ.."....
ಮಡದಿ ಹಠವಾದಿ...
ಮನೆಯ ಡಬ್ಬಗಳನ್ನೆಲ್ಲ ಹುಡುಕಾಡಿದಳು..
ಎರಡು ಮುಷ್ಟಿ "ಅವಲಕ್ಕಿ" ಸಿಕ್ಕಿತು... !
ಅವನ
ಪಂಚೆಯ ತುದಿಗೆ ಅದನ್ನು ಕಟ್ಟಿ..
"ಹೋಗಿ ಬನ್ನಿ...
ಶ್ರೀಕೃಷ್ಣ ಕೇಳಿದರೆ ಇದನ್ನು ಕೊಡಿ...
ಅರ್ಥವಾಗುವ ಮನಸ್ಸಿಗೆ
ಹೃದಯಕ್ಕೆ
ವಸ್ತುಸ್ಥಿತಿಯನ್ನು ಹೇಳುವ ಅಗತ್ಯವಿರುವದಿಲ್ಲ... ಅರ್ಥವಾಗುತ್ತದೆ..."...
ಸುಧಾಮ
ಬಲು ದೂರ ನಡೆದು..
ಬಳಲಿ.. ಬೆಂಡಾಗಿ..
ಹಸಿವೆಯಿಂದ
ಶ್ರೀಕೃಷ್ಣನ ಮನೆಯ ದ್ವಾರದ ಬಳಿ ಬಂದ....
ದ್ವಾರ ಪಾಲಕ ಒಳಗೆ ಬಿಡಲಿಲ್ಲ...
"ನಾನು
ಶಿಕೃಷ್ಣನ ಗೆಳೆಯ...
ಬಾಲ್ಯ ಸ್ನೇಹಿತ..."....
ದ್ವಾರ ಪಾಲಕ ನಕ್ಕ... !
ಬಡತನಕ್ಕೆ
ಕಣ್ಣೀರು...
ಹಸಿವೆಯನ್ನು ಬಿಟ್ಟು...
ಸುಲಭವಾಗಿ ಮತ್ತೆ ಯಾವುದೂ ದಕ್ಕುವದಿಲ್ಲ...
"ಪುಣ್ಯಾತ್ಮ...
ಒಳಗೆ ಹೋಗಿ ಶ್ರೀಕೃಷ್ಣನಿಗೆ "ಸುಧಾಮ ಬಂದಿದ್ದಾನೆ" ಅಂತಾದರೂ ಹೇಳು...
ಆತನಿಗೆ ನೆನಪು ಇಲ್ಲವಾದಲ್ಲಿ ತಿರುಗಿ ಹೋಗುವೆ... "....
ದ್ವಾರಪಾಲಕ
ಒಳಗೆ ಹೋಗಿ ಕೃಷ್ಣನಿಗೆ ಸುಧಾಮನ ಹೆಸರು ಹೇಳಿದ..
ಕೃಷ್ಣ
ಓಡೋಡಿ ದ್ವಾರದವರೆಗೆ ಬಂದ...
ತನ್ನ ಬಾಲ್ಯದ ಗೆಳೆಯನನ್ನು ತಬ್ಬಿಕೊಂಡ..
ಕಣ್ಣಲ್ಲಿ ನೀರು ಇಳಿಯುತ್ತಿತ್ತು...
ಸುಧಾಮನನ್ನು
ಒಳಗೆ ಕರೆತಂದು ತಾನು ಕುಳಿತುಕೊಳ್ಳುವ ಆಸನದಲ್ಲಿ ಕುಳ್ಳಿರಿಸಿದ...
ಅವನ ಪಾದ ತೊಳೆದ..
ಬಿಸಿಲಲ್ಲಿ
ಬರಿಗಾಲಲ್ಲಿ ನಡೆದು ಬೊಬ್ಬೆಗುಳ್ಳೆಗಳಾಗಿದ್ದ ಗೆಳೆಯನ ಕಾಲುಗಳನ್ನು ನೋಡಿ ಮರುಗಿದ...
ದುಃಖಿಸಿದ...
ತಮ್ಮ ಬಾಲ್ಯದ ತುಂಟಾಟಗಳನ್ನು ನೆನಪಿಸಿದ...
ಹರಟಿದ... ನಗಿಸಿದ...
ಒಂದು
ಕ್ಷಣಕ್ಕಾದರೂ ಸುಧಾಮನ ನೋವುಗಳನ್ನು ಮರೆಸಿದ... !
ಹೊಟ್ಟೆ ತುಂಬಾ ಮೃಷ್ಟಾನ್ನ ಭೋಜನ ಬಡಿಸಿದ...
"ಗೆಳೆಯಾ...
ನನಗಾಗಿ ಏನು ತಂದಿರುವೆ...?..".... 
ಸುಧಾಮ
ನಾಚಿ.. ಸಂಕೋಚದ ಮುದ್ದೆಯಾದ..
ಎಲ್ಲಿಯ ಶ್ರೀಕೃಷ್ಣ.. !
ಆವನ ಅರಮನೆಯ ವೈಭವ... ಮೃಷ್ಟಾನ್ನ ಭೋಜನ..!
ಎಲ್ಲಿಯ
ಕುಚೇಲ
ಸುಧಾಮನ ಎರಡು ಹಿಡಿ ಮುಷ್ಟಿಯ ಒಣ ಅವಲಕ್ಕಿ ?...
ಕೃಷ್ಣ ಬಿಡಲಿಲ್ಲ...
ಪಂಚೆಯ ತುದಿಯಲ್ಲಿ ಕಟ್ಟಿದ ಅವಲಕ್ಕಿ ಕಾಣಿಸಿತು...
ಗಂಟು ಬಿಚ್ಚಿ...
ಅವಲಕ್ಕಿಯನ್ನು ಬಾಯಲ್ಲಿ ಹಾಕಿಕೊಂಡು ಬಾಯಿ ಚಪ್ಪರಿಸಿದ...
ಸುಧಾಮನ ಕಣ್ಣಲ್ಲಿ
ನೀರಿಳಿಯುತ್ತಿತ್ತು..
ಒಂದೆರಡು ದಿನ ಅಲ್ಲಿದ್ದು
ಶ್ರೀಕೃಷ್ಣನಿಂದ ಬಿಳ್ಕೊಟ್ಟು ಮನೆಯ ಕಡೆ ಹೊರಟ..
ಮನೆಯ
ಬಳಿ ಬಂದಾಗ ಅವನ ಮನೆ ಅಲ್ಲಿರಲಿಲ್ಲ...
ದೊಡ್ಡ ಅರಮನೆಯಿತ್ತು...
ಅವನ ಮಕ್ಕಳು ಒಳ್ಳೆಯ ಉಡುಪುಗಳನ್ನು ಧರಿಸಿ ಅಪ್ಪನನ್ನು ಸ್ವಾಗತಿಸಿದರು..
ಮಡದಿ
ರೇಷ್ಮೆ ಸೀರೆ ಉಟ್ಟು... ಮೈ ತುಂಬಾ ಆಭರಣ ಧರಿಸಿ ನಗು ನಗುತ್ತಾ ಸ್ವಾಗತಿಸಿದಳು....
ಕೃಷ್ಣನ ಭೇಟಿಯಲ್ಲಿ
ಸುಧಾಮನಿಗೆ ನಾಲಿಗೆ ಕಟ್ಟಿತ್ತು...
ಸಹಾಯ ಕೇಳಿರಲಿಲ್ಲ...
ಆದರೆ
ಶ್ರಿಕೃಷ್ಣ
ತನ್ನ ಗೆಳೆಯನನ್ನು..
ಗೆಳೆತನವನ್ನು ಮರೆತಿರಲಿಲ್ಲ...
ಒಮ್ಮೆ
ಶುರುವಾದ ಸ್ನೇಹಕ್ಕೆ "ಮರೆವು" ಎನ್ನುವದು ಇರುವದಿಲ್ಲ...
ದೂರ..
ಹತ್ತಿರ...
ಮಾತು.. ಮೌನ
ಎಲ್ಲವನ್ನೂ ಮೀರಿದ ಭಾವ ಸಂಬಂಧ ಇದು.. !
:::::::::::::::::::
ನಮ್ಮ
ಪ್ರತಿ ಮಾತಿನಲ್ಲಿ...
ಮೌನದಲ್ಲಿ...
ಪವಿತ್ರವಾದ ಸ್ನೇಹ ಪರಿಮಳವಿರಲಿ....
ನಮ್ಮ ಪ್ರತಿ ಸಂಬಂಧಗಳಲ್ಲಿ "ಭಾವನೆಗಳಿರಲಿ"...
ನಮ್ಮ
ಪ್ರತಿಯೊಂದು ಸಂಬಂಧಗಳು
ಭಾವ
ಭಾಂಧವ್ಯಗಳಾಗಲಿ..
ಅವುಗಳನ್ನು ನಿಭಾಯಿಸುವ ಶಕ್ತಿ ನಮಗಿರಲಿ...
ನಮ್ಮ
ಪ್ರತಿಯೊಂದೂ ಸಂಬಂಧಗಳಲ್ಲಿ ಒಬ್ಬ ನಗುವ ಗೆಳೆಯನಿರಲಿ...
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ರಾಣಿ ಲಕ್ಷ್ಮೀಬಾಯಿ

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಝಾನ್ಸಿರಾಣಿ ಲಕ್ಮೀಬಾಯಿ ಅವರ ಕತೆ ನೆನೆದಾಗಲೆಲ್ಲಾ ಎಂತಹ ಮೃದುಹೃದಯಿಗಳಲ್ಲೂ ಮೈನವಿರೇಳವಂತಹ ಸಾಹಸದ ಕಿಡಿ ತುಂಬಿಕೊಂಡಂತಹ ಭಾವ ಮೂಡುತ್ತದೆ. ರಾಣಿ ಲಕ್ಷ್ಮೀಬಾಯಿ ಅವರು ನವೆಂಬರ್ 19, 1829ರಲ್ಲಿ ಕಾಶಿಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಮಣಿಕರ್ಣಿಕ ಆಕೆಯ ಬಾಲ್ಯದ ಹೆಸರು. ಮಣಿಕರ್ಣಿಕ ನಾಲ್ಕು ವರ್ಷದ ಎಳೆವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಳು. ತಂದೆ ಮೊರೋಪಂತ್ ತಂಬೆಯವರು ಮುಂದೆ ಝಾನ್ಸಿಯ ಮಹಾರಾಜ ರಾಜ ಬಾಲಗಂಗಾಧರ ರಾವ್ ಅವರ ಆಸ್ಥಾನವನ್ನು ಸೇರಿದರು. 
    ಮಣಿಕರ್ಣಿಕಳಿಗೆ 14 ವರ್ಷವಾದಾಗ ಮಹಾರಾಜ್ ರಾಜ ಬಾಲಗಂಗಾಧರ ರಾವ್ ಅವರೊಡನೆ ಆಕೆಗೆ ವಿವಾಹವಾಯಿತು. ವಿವಾಹದ ಸಂದರ್ಭದಲ್ಲಿ ಆಕೆಯ ಹೆಸರನ್ನು ಲಕ್ಷ್ಮೀಬಾಯಿ ಎಂದು ಬದಲಾಯಿಸಲಾಯಿತು.
    ಲಕ್ಷ್ಮೀಬಾಯಿ ಕುದುರೆ ಸವಾರಿ, ಕತ್ತಿವರಸೆ, ಬಿಲ್ವಿದ್ಯೆ ಮುಂತಾದುವನ್ನು ಕಲಿತು ತನ್ನ ಸ್ತ್ರೀಗೆಳತಿಯರನ್ನು ಜೊತೆಗೂಡಿ ಚಿಕ್ಕ ಸೈನ್ಯವನ್ನೇ ಕಟ್ಟಿದರು. 1851ರಲ್ಲಿ ಲಕ್ಷ್ಮೀಬಾಯಿ ಗಂಡುಮಗುವಿಗೆ ಜನ್ಮವಿತ್ತರು. ಆದರೆ ಆ ಮಗು ಕೇವಲ 4 ತಿಂಗಳಿರುವಾಗಲೇ ಮರಣವಪ್ಪಿತು. ತಮ್ಮ ಮೊದಲನೆಯ ಮಗುವಿನ ಮರಣದ ನಂತರ ಅವರು ದಾಮೋದರ ರಾವ್ ಎಂಬ ಹುಡುಗನನ್ನು ದತ್ತು ಪಡೆದರು. ಆದರೆ ತನ್ನ ಮಗುವಿನ ಸಾವಿನ ದುಃಖದಿಂದ ಹೊರಬರಲಾರದ ಮಹಾರಾಜ ರಾಜ ಬಾಲಗಂಗಾಧರ ರಾವ್ ಅವರು 21, ನವೆಂಬರ್ 1853ರಲ್ಲಿ ಸಾವಿಗೀಡಾದರು.
   ದಾಮೋದರ ರಾವ್ ರವರು ರಾಜನಿಗೆ ರಕ್ತಸಂಬಂಧಿ ಅಲ್ಲದಿದ್ದರಿಂದ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಅಧಿಕಾರಿಯಾದ ಲಾರ್ಡ್ ಡಾಲ್‌ಹೌಸಿಯು ದಾಮೋದರ ರಾವ್ ಅವರಿಗೆ ರಾಜ್ಯಾಭಿಷೇಕ ಮಾಡಲು ಬಿಡಲಿಲ್ಲ. ಲಾರ್ಡ್ ಡಾಲ್‌ಹೌಸಿಯು ಝಾನ್ಸಿಯ ರಕ್ಷಣೆ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಜವಾಬ್ಡಾರಿಯೆಂದು ತಿಳಿಸಿ ರಾಣಿ ಲಕ್ಷ್ಮೀಬಾಯಿಯವರಿಗೆ ರುಪಾಯಿ 60,000 ಪಿಂಚಣಿ ಹಣವನ್ನು ಕೊಟ್ಟು ಝಾನ್ಸಿಕೋಟೆಯನ್ನು ಬಿಟ್ಟು ಹೊಗಲು ಆಜ್ಞೆ ಮಾಡಿದನು.
  ಝಾನ್ಸಿಯಲ್ಲಿ ಇದೆಲ್ಲಾ ನಡೆಯುತ್ತಿರುವ 1857ರ ವರ್ಷದ ಇದೇ ಸಂದರ್ಭದಲ್ಲಿ ಮೀರತ್ತಿನಲ್ಲಿ ಸಿಪಾಯಿ ದಂಗೆ ಮೊದಲ್ಗೊಂಡಿತು. ಬ್ರಿಟಿಷರಿಗೆ ದೇಶದ ಇತರೆ ಪ್ರದೇಶಗಳ ಬಗ್ಗೆ ಹೆಚ್ಹಿನ ಖಾಳಜಿ ವಹಿಸಬೇಕಾದ ಸಂದರ್ಭ ಒದಗಿದ ಕಾರಣದಿಂದಾಗಿ ಝಾನ್ಸಿಯನ್ನು ರಾಣಿ ಲಕ್ಷ್ಮೀಬಾಯಿಯವರ ಆಳ್ವಿಕೆಗೇ ಬಿಟ್ಟುಕೊಟ್ಟರು. ಇದೇ ಸಮಯದಲ್ಲಿ ರಾಣಿ ಲಕ್ಷ್ಮೀಬಾಯಿಯ ಶ್ರೇಷ್ಠತೆಯು ರುಜುವಾತಾಯಿತು.
   ರಾಣಿ ಲಕ್ಷ್ಮೀಬಾಯಿಯವರ ನಾಯಕತ್ವದಲ್ಲಿ ಝಾನ್ಸಿಯಲ್ಲಿ ಶಾಂತಿ ಹಾಗು ನೆಮ್ಮದಿ ನೆಲೆಸಿ ಅವರೊಬ್ಬ ಉತ್ತಮ ನಾಯಕಿ ಎಂದು ಪ್ರಜೆಗಳ ಜೊತೆಗೆ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿ ಕೂಡಾ ಪ್ರಶಂಸಿಸುವಂತಾಯಿತು. ಇಂಥಹ ವಾತಾವರಣದಲ್ಲಿ ರಾಣಿ ಲಕ್ಷ್ಮೀಬಾಯಿಯವರೆಗೆ ಬ್ರಿಟಿಷರ ವಿರುದ್ದವಾಗಿ ಹೋಗುವ ಯಾವುದೇ ಯೋಚನೆಯೂ ಇರಲಿಲ್ಲ.
    ಎಲ್ಲವೂ ಸುಸೂತ್ರವಾಗಿದೆ ಎಂದೆನಿಸಿದ್ದ ಸಂದರ್ಭದಲ್ಲಿ ಸರ್ ಹುಘ್ ರೋಸ್ ನೇತ್ರತ್ವದ ಸೈನ್ಯ ಝಾನ್ಸಿಯನ್ನು ಮಾರ್ಚ 1858ರ ಸಮಯದಲ್ಲಿ ಮುತ್ತಿಗೆ ಹಾಕ್ಕಿದ್ದರಿಂದ ರಾಣಿ ಲಕ್ಷ್ಮೀಬಾಯಿಯವರ ಬ್ರಿಟಿಷರ ಬಗೆಗಿನ ನಿಲುವು ಬದಲಾಯಿತು. ರಾಣಿ ಲಕ್ಷ್ಮೀಬಾಯಿ ಹಾಗೂ ಅವರ ನಿಷ್ಠಾವಂತ ಸೈನಿಕರು ಶರಣಾಗಲು ಒಪ್ಪಲಿಲ್ಲ. ಎರಡು ವಾರಗಳ ವರೆಗೆ ಉಗ್ರ ಹೊರಾಟ ನಡೆಸಿದರು. ಈ ಯುದ್ಧದ ಸಮಯದಲ್ಲಿ ಝಾನ್ಸಿಯ ಸ್ತ್ರೀಸೈನಿಕರು ಸೇನಾನಿಗಳಿಗೆ ಯುದ್ಧಸಾಮಗ್ರಿ ಒದಗಿಸುವುದು ಭೋಜನದ ವ್ಯವಸ್ಥೆ ನಿರ್ವಹಿಸುವುದು ಇವೇ ಮುಂತಾದ ಜವಾಬ್ಧಾರಿಗಳನ್ನು ನಿರ್ವಹಿಸುತ್ತಿದ್ದರು.
   ರಾಣಿ ಲಕ್ಷ್ಮೀಬಾಯಿ ಅವರು ಸ್ವಯಂ ಸೈನಿಕರ ನಡುವಿನಲ್ಲಿ ಓಡಾಡಿಕೊಂದು ಅವರನ್ನು ಹುರಿದುಂಬಿಸಿ ಬಹಳ ದಿಟ್ಟತನದಿಂದ ಹೋರಾಡಿದರು. ಇಪ್ಪತ್ತು ಸಾವಿರ ಸೇನೆಯ ಮುಖಂಡನಾಗಿ ತಾತ್ಯಾ ಟೋಪಿ ಯುದ್ದ ಮಾಡಿ ರಾಣಿ ಲಕ್ಷ್ಮೀಬಾಯಿ ಹಾಗೂ ಝಾನ್ಸಿಯು ಸ್ವತಂತ್ರವಾಗಲು ಸಹಾಯ ಮಾಡಿದರು. ಆದರೆ ಬ್ರಿಟಿಷ್ ಸೈನಿಕರು ಕೆಲವೇ ದಿನಗಳಲ್ಲಿ ಪುನಃ ಆಕ್ರಮಣ ಮಾಡಿದಾಗ ಝಾನ್ಸಿಯ ಸೈನಿಕರಿಂದ 3 ದಿನಗಳಿಗಿಂತ ಹೆಚ್ಚಿನ ಹೋರಾಟ ನಡೆಸಲಾಗಲಿಲ್ಲ.
    ಬ್ರಿಟಿಷ್ ಸೈನಿಕರು ಝಾನ್ಸಿ ನಗರವನ್ನು ಮುತ್ತಿಗೆ ಹಾಕಿದಾಗ ರಾಣಿ ಲಕ್ಷ್ಮೀಬಾಯಿ ತನ್ನ ಕೆಲವು ಮಹಿಳಾ ಸೈನಿಕರು, ಮಗ ದಾಮೋದರ ರಾವ್ ಹಾಗೂ ಹಲವಾರು ರಕ್ಷಕರ ಜೊತೆಗೂಡಿ ತಪ್ಪಿಸಿಕೊಂಡು ತಾತ್ಯಾ ಟೊಪಿ ಹಾಗೂ ಇತರ ದಂಗೆಕೋರರ ಜೊತೆಗೆ ತಮ್ಮ ಸೈನ್ಯವನ್ನು ಸೇರಿಸಿದರು. ರಾಣಿ ಹಾಗೂ ತಾತ್ಯಾ ಟೊಪಿ ಅವರ ಸೇನೆ ಗ್ವಾಲಿಯರ್ಗೆ ಹೋಗಿ ಅಲ್ಲಿನ ಮಹಾರಾಜನ ಸೈನಿಕರನ್ನು ಸೋಲಿಸಿತು. ನಂತರ ಅವರು ಗ್ವಾಲಿಯರ್ ಕೋಟೆಯನ್ನು ವಶಪಡಿಸಿಕೋಂಡರು. ಆದರೆ ಯುದ್ದದ ಎರಡನೆಯ ದಿನ ಅಂದರೆ ಜೂನ್ 18, 1858ರಂದು ರಾಣಿ ಲಕ್ಷ್ಮೀಬಾಯಿ ಯುದ್ಧದಲ್ಲಿ ಸಾವನ್ನಪ್ಪಿದರು. ಬ್ರಿಟಿಷರು ಮೂರು ದಿನಗಳ ನಂತರದಲ್ಲಿ ಗ್ವಾಲಿಯರ್ ಕೋಟೆಯನ್ನು ವಶಪಡಿಸಿಕೊಂಡರು.
    ಸರ್ ಹುಘ್ ರೋಸ್ ತನ್ನ ಯುದ್ದದ ಟಿಪ್ಪಣಿಯಲ್ಲಿ ರಾಣಿಯನ್ನು "ಅತೀ ಸುಂದರಿ, ದೃಢನಿಷ್ಠೆ, ತೀಕ್ಷ್ಣಮತಿ ಹಾಗೂ ಉಗ್ರ ನಾಯಕಿ" ಎಂದು ಪ್ರಶಂಸಿಸಿದ್ದಾನೆ. ರಾಣಿ ಲಕ್ಷ್ಮೀಬಾಯಿ ಅವರ ಕತೆ ಇಂದೂ ಕೂಡಾ ಭಾರತೀಯ ಜನಪದವನ್ನು, ಕಥೆಗಾರರನ್ನು, ಸಿನಿಮಾ, ನಾಟಕ, ದೂರದರ್ಶನ ಧಾರವಾಹಿ ಮುಂತಾದ ಕಲಾಮಾಧ್ಯಮದವರನ್ನು ಆಕರ್ಷಿಸುತ್ತಲೇ ಸಾಗಿದೆ. ಭಾರತೀಯ ಸೈನ್ಯ ಸಹಾ ತನ್ನ ಮಹಿಳಾ ಪಡೆಗೆ 'ಜಾನ್ಸಿ ರಾಣಿ ಲಕ್ಷ್ಮೀಬಾಯಿ ಪಡೆ' ಎಂಬ ಹೆಸರನ್ನಿಟ್ಟು ಗೌರವನೀಡಿದೆ. ರಾಣಿ ಲಕ್ಷ್ಮೀಬಾಯಿವರ ಗೌರವಾರ್ಥವಾಗಿ ದೇಶದೆಲ್ಲೆಡೆ ಅದರಲ್ಲೂ ಪ್ರಮುಖವಾಗಿ ಝಾನ್ಸಿ ಹಾಗು ಗ್ವಾಲಿಯರ್ ನಗರಗಳಲ್ಲಿ ರಾಣಿಯವರ ಕಂಚಿನ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ.
    ನಮ್ಮ ದೇಶಕ್ಕಾಗಿ ಹೋರಾಡಿ ಪ್ರಾಣತೆತ್ತ ಈ ಮಹಾನ್ ಮಾತೆಗೆ ನಮ್ಮ ಸಾಷ್ಟಾಂಗ ನಮನ.
   -ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಚಂದ್ರನ ವ್ಯವಸ್ಥೆಗಳ ವಿಕಾಸಗಳು ಗುರುತ್ವಾಕರ್ಷಣೆಯ ಶಕ್ತಿಗಳಿಂದ ಪ್ರೇರಿತವಾಗಿವೆ.

    ಚಂದ್ರನ ವ್ಯವಸ್ಥೆಗಳ ವಿಕಾಸಗಳು ಗುರುತ್ವಾಕರ್ಷಣೆಯ ಶಕ್ತಿಗಳಿಂದ ಪ್ರೇರಿತವಾಗಿವೆ.
       ಚಂದ್ರನು ಪರಿಭ್ರಮಿಸುವ ಮುಖ್ಯಕಾಯದಲ್ಲಿ ಗುರುತ್ವಬಲದ ವಿರೂಪ ಉಂಟುಮಾಡುತ್ತದೆ. ಮುಖ್ಯಕಾಯದ ವ್ಯಾಸದಲ್ಲಿ ಗುರುತ್ವ ಬಲದ ವ್ಯತ್ಯಾಸವಿರುವ ಕಾರಣದಿಂದ ಹೀಗಾಗುತ್ತದೆ. ಚಂದ್ರನು ಗ್ರಹದ ಪರಿಭ್ರಮಣೆಯ ದಿಕ್ಕಿನಲ್ಲೇ ಸುತ್ತುತ್ತಿದ್ದರೆ ಮತ್ತು ಗ್ರಹವು ಚಂದ್ರನ ಪರಿಭ್ರಮಣ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಸುತ್ತುತ್ತಿದ್ದರೆ, ವಿರೂಪವು ಚಂದ್ರನನ್ನು ಸತತವಾಗಿ ಮುಂದಕ್ಕೆ ಎಳೆಯುತ್ತದೆ. ಈ ಪರಿಸ್ಥಿತಿಯಲ್ಲಿ, ಕೋನೀಯ ಆವೇಗವು ಮುಖ್ಯಕಾಯದ ಪರಿಭ್ರಮಣೆಯಿಂದ ಉಪಗ್ರಹದ ಪರಿಭ್ರಮಣೆಗೆ ವರ್ಗಾವಣೆಯಾಗುತ್ತದೆ.
      ಚಂದ್ರನು ಶಕ್ತಿಯನ್ನು ಗಳಿಸಿಕೊಂಡು,ಕ್ರಮೇಣ ಹೊರಮುಖವಾಗಿ ಸುತ್ತುತ್ತದೆ ಹಾಗು ಮುಖ್ಯಕಾಯವು ಕಾಲಾಂತರದಲ್ಲಿ ಹೆಚ್ಚು ನಿಧಾನವಾಗಿ ಪರಿಭ್ರಮಿಸುತ್ತದೆ.ಈ ವಿನ್ಯಾಸದ ಒಂದು ಉದಾ:ಭೂಮಿ ಮತ್ತು ಚಂದ್ರ. ಇಂದು ಚಂದ್ರನು ಭೂಮಿಯತ್ತ ಒಂದೇ ಬದಿಯಲ್ಲಿ ಗುರುತ್ವಬಲದ ಕಾರಣದಿಂದ ಮುಖ ಮಾಡಿರುತ್ತದೆ (ಟೈಡಲಿ ಲಾಕ್ಡ್).ಭೂಮಿಯ ಸುತ್ತ ಅದರ ಒಂದು ಪರಿಭ್ರಮಣೆಯು (ಪ್ರಸಕ್ತ 29 ದಿನಗಳು) ಅದರ ಕಕ್ಷೆಯ ಸುತ್ತ ಒಂದು ಪರಿಭ್ರಮಣೆಗೆ ಸಮನಾಗಿರುತ್ತದೆ. ಆದ್ದರಿಂದ ಅದು ಭೂಮಿಗೆ ಸದಾ ತನ್ನ ಒಂದು ಬದಿಯ ಮುಖವನ್ನು ತೋರಿಸುತ್ತದೆ. ಚಂದ್ರನು ಭೂಮಿಯಿಂದ ಹಿಮ್ಮೆಟ್ಟುವುದನ್ನು ಮುಂದುವರಿಸುತ್ತದೆ. ಮತ್ತು ಭೂಮಿಯ ಪರಿಭ್ರಮಣೆಯು ಕ್ರಮೇಣ ನಿಧಾನವಾಗುತ್ತದೆ.
   ಸುಮಾರು 50 ಶತಕೋಟಿ ವರ್ಷಗಳಲ್ಲಿ, ಸೂರ್ಯನ ವಿಸ್ತರಣೆಯಿಂದ ಉಳಿದುಕೊಂಡರೆ ಭೂಮಿ ಮತ್ತು ಚಂದ್ರ ಪರಸ್ಪರ ಒಂದೇ ಮುಖದಲ್ಲಿ ಬಂಧಿತವಾಗಿ ಪರಿಭ್ರಮಣ-ಕಕ್ಷೆ ಅನುರಣನದಲ್ಲಿ ಪ್ರತಿಯೊಂದು ಸಿಕ್ಕಿಬೀಳುತ್ತದೆ. ಇದರಲ್ಲಿ ಚಂದ್ರನು ಭೂಮಿಯನ್ನು 47 ದಿನಗಳಲ್ಲಿ ಸುತ್ತುತ್ತದೆ ಹಾಗೂ ಚಂದ್ರ ಮತ್ತು ಭೂಮಿ ಒಂದೇ ಕಾಲದಲ್ಲಿ ತಮ್ಮ ಕಕ್ಷೆಗಳಲ್ಲಿ ತಿರುಗುತ್ತವೆ. ಪ್ರತಿಯೊಂದು ಇನ್ನೊಂದರ ಅರೆಗೋಳದಿಂದ ಗೋಚರಿಸುತ್ತದೆ.
   ಅದೇ ರೀತಿ ಗುರುವಿನ ಗೆಲಿಲಿಯನ್ ಚಂದ್ರರು (ಅದಲ್ಲದೇ ಗುರುವಿನ ಅನೇಕ ಸಣ್ಣ ಚಂದ್ರರು) ಹಾಗೂ ಶನಿಯ ಬಹುತೇಕ ದೊಡ್ಡ ಗಾತ್ರದ ಚಂದ್ರರು.ಮುಖ್ಯಕಾಯ ಕಕ್ಷೆಯ ಸುತ್ತ ಪರಿಭ್ರಮಿಸುವ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಚಂದ್ರನು ಮುಖ್ಯಕಾಯದ ಸುತ್ತ ತಿರುಗುತ್ತಿದ್ದರೆ ಅಥವಾ ಗ್ರಹದ ವಿರುದ್ಧ ದಿಕ್ಕಿನಲ್ಲಿ ತಿರುಗುತ್ತಿದ್ದರೆ ಭಿನ್ನ ಸನ್ನಿವೇಶ ಉಂಟಾಗುತ್ತಿತ್ತು.
     ಇದರಲ್ಲಿ, ಗುರುತ್ವದ ವಿರೂಪವು ಚಂದ್ರನನ್ನು ಅದರ ಕಕ್ಷೆಯಲ್ಲಿ ನಿಧಾನಗತಿಯಲ್ಲಿ ತಿರುಗುವಂತೆ ಮಾಡುತ್ತದೆ. ಮುಂಚಿನ ಪ್ರಕರಣದಲ್ಲಿ, ಕೋನೀಯ ಆವೇಗ ವರ್ಗಾವಣೆಯು ಹಿಂದು ಮುಂದಾಗುತ್ತದೆ. ಆದ್ದರಿಂದ ಮುಖ್ಯಕಾಯದ ಕಕ್ಷೆಯ ಪರಿಭ್ರಮಣವು ವೇಗ ಪಡೆಯುತ್ತದೆ ಮತ್ತು ಉಪಗ್ರಹದ ಪರಿಭ್ರಮಣವು ಕ್ಷೀಣಿಸುತ್ತದೆ. ನಂತರದ ಪ್ರಕರಣದಲ್ಲಿ, ಕಕ್ಷೆಯ ಪರಿಭ್ರಮಣ ಮತ್ತು ಗ್ರಹದ ಸುತ್ತ ಪರಿಭ್ರಮಣದ ಕೋನೀಯ ಆವೇಗ ವಿರುದ್ಧ ಚಿಹ್ನೆಗಳಿಂದ ಕೂಡಿರುತ್ತದೆ. ಆದ್ದರಿಂದ ವರ್ಗಾವಣೆಯು ಪ್ರತಿಯೊಂದರ ಗಾತ್ರವನ್ನು ಕುಗ್ಗಿಸುತ್ತದೆ.
    ಮೇಲಿನ ಎರಡಲ್ಲೂ ಗುರುತ್ವದ ದ್ವಿಗ್ವೇಗಪಾತವು ಚಂದ್ರನನ್ನು ಮುಖ್ಯ ಗ್ರಹದತ್ತ ಸುರುಳಿಯಾಗಿ ಸುತ್ತುವಂತೆ ಮಾಡುತ್ತದೆ. ನಂತರ ಗುರುತ್ವ ಸೆಳೆತದ ಒತ್ತಡಗಳಿಂದ ಚೂರಾಗುತ್ತದೆ ಹಾಗೂ ಗ್ರಹದ ಉಂಗುರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ/ ಗ್ರಹದ ಮೇಲ್ಮೈಗೆ ಅಥವಾ ವಾತಾವರಣಕ್ಕೆ ಘರ್ಷಿಸುತ್ತದೆ. ಇಂತಹ ಗತಿಯು ಮಂಗಳನ ಚಂದ್ರರ ಫೋಬಾಸ್‌ಗಳಿಗೆ(30ರಿಂದ 50ದಶಲಕ್ಷ ವರ್ಷಗಳಲ್ಲಿ),ನೆಪ್ಚೂನ್‌ ಟ್ರೈಟಾನ್‌ಗೆ ( 3.6 ಶತಕೋಟಿ ವರ್ಷಗಳಲ್ಲಿ),ಗುರುವಿನ ಮೆಟಿಸ್ ‌ಮತ್ತು ಅಡ್ರಾಸ್ಟಿಯ‌ಕ್ಕೆ  ಮತ್ತು ಯುರೇನಸ್ ಮತ್ತು ನೆಪ್ಚೂನ್‌ನ ಕನಿಷ್ಠ 16 ಸಣ್ಣ ಉಪಗ್ರಹ ಗಳಿಗೆ ಕಾದುಕೊಂಡಿದೆ. ಯುರೇನಸ್ ಡೆಸ್ಡೆಮೋನಾ ತನ್ನ ಒಂದು ನೆರೆಯ ಚಂದ್ರನ ಜತೆ ಡಿಕ್ಕಿಯನ್ನು ಕೂಡ ಹೊಡೆಯಬಹುದು.ಮೂರನೇ ಸಾಧ್ಯತೆಯು ಮುಖ್ಯಗ್ರಹ ಮತ್ತು ಚಂದ್ರ ಪರಸ್ಪರ ಟೈಡಲಿ ಲಾಕ್ಡ್(ಪರಸ್ಪರ ಒಂದೇ ಬದಿ ಮುಖ) ಆಗಿರುವುದು. ಆಗ ಗುರುತ್ವಬಲದ ವಿರೂಪ ನೇರವಾಗಿ ಚಂದ್ರನ ಕೆಳಗಿರುತ್ತದೆ.
     2004ರಲ್ಲಿ ಕ್ಯಾಸಿನಿ ಹೈಜೆನ್ಸ್  ಬಾಹ್ಯಾಕಾಶ ನೌಕೆಯ ಆಗಮನಕ್ಕೆ ಮುಂಚಿತವಾಗಿ ಶನಿಯ ಉಂಗುರಗಳು ಸೌರವ್ಯೂಹಕ್ಕಿಂತ ಕಿರಿದಾಗಿದ್ದು, ಇನ್ನೂ 300 ದಶಲಕ್ಷ ವರ್ಷಗಳ ಕಾಲ ಉಳಿಯುವುದಿಲ್ಲವೆಂದು ನಿರೀಕ್ಷಿಸಲಾಗಿತ್ತು. ಶನಿಯ ಚಂದ್ರರ ಗುರುತ್ವ ಸಂಪರ್ಕಗಳು ಉಂಗುರಗಳ ಹೊರತುದಿಯನ್ನು ಕ್ರಮೇಣ ಗ್ರಹದತ್ತ ನೂಕುತ್ತದೆ. ಶನಿಯ ಗುರುತ್ವ ಮತ್ತು ಉಲ್ಕೆಗಳ ಉಜ್ಜುವಿಕೆಯಿಂದ ಶನಿ ಗ್ರಹವು ಸೌಂದರ್ಯ ಕಳೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿತ್ತು.ಆದಾಗ್ಯೂ, ಕ್ಯಾಸಿನಿ ಯಾತ್ರೆಯ ಅಂಕಿ-ಅಂಶಗಳು ತಮ್ಮ ಮುಂಚಿನ ಅಭಿಪ್ರಾಯವನ್ನು ಪರಿಷ್ಕರಿಸಲು ದಾರಿ ಕಲ್ಪಿಸಿತು. ಸುಮಾರು 10 ಕಿಮೀ ಅಗಲದ ವಸ್ತುವಿನ ಹಿಮಪದರಗಳು ಮತ್ತೆ ಮತ್ತೆ ಒಡೆದುಹೋಗಿ ಪುನಃ ಕೂಡಿಕೊಂಡು, ಉಂಗುರಗಳನ್ನು ಹೊಸದಾಗಿ ಇಡುತ್ತದೆ.
   ಇತರೆ ಅನಿಲ ದೈತ್ಯಗಳಿಗಿಂತ ಶನಿಯ ಉಂಗುರಗಳು ಹೆಚ್ಚು ಬೃಹದಾಕಾರ ವಾಗಿದೆ. ಈ ದೊಡ್ಡ ದ್ರವ್ಯರಾಶಿಯು ಶನಿಗ್ರಹವು 4.5ವರ್ಷಗಳ ಹಿಂದೆ ರೂಪುಗೊಂಡಾಗಿನಿಂದ ಅದರ ಉಂಗುರಗಳನ್ನು ರಕ್ಷಿಸಿರಬಹುದು ಹಾಗು ಶತಕೋಟಿ ವರ್ಷಗಳ ಕಾಲ ಅದನ್ನು ರಕ್ಷಿಸುವ ಸಂಭವವಿದೆ.
           (ವಿವಿಧ ಮೂಲಗಳಿಂದ)
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397z

ವ್ಯಾಸರು

ವ್ಯಾಸರು ಬಹು ಮುಖ್ಯ ಹಿಂದೂ ಮಹಾಕಾವ್ಯವಾದವ್ಯಾಸರು  ಶತಮಾನಗಳಷ್ಟು ಹಳೆಯದಾದ ಭಾರತದ ಚಾರಿತ್ರಿಕ ಘಟನೆಗಳನ್ನು ಆಧರಿಸಿ ಮಹಾಭಾರತವು ರಚಿತವಾಗಿದ್ದರೂ ಕೂಡ, ಇದು ಪ್ರಾಚೀನ ಭಾರತದ ದಂತಕಥೆಗಳು, ಪುರಾಣಗಳು, ದಾರ್ಶನಿಕತೆ ಮತ್ತು ಅರೆಚಾರಿತ್ರಿಕ ಘಟನೆಗಳ ಒಂದು ಬೃಹತ್ ಕಾವ್ಯ. ಈ ಕಾರಣದಿಂದ ಚಾರಿತ್ರಿಕವಾಗಿ ವ್ಯಾಸರ ಕಾಲ ಮತ್ತು ದೇಶಗಳನ್ನು ದಂತಕಥೆಗಳಿಂದ ಬೇರ್ಪಡಿಸುವುದು ಬಹಳ ಕಷ್ಟ.
    ಮಹಾಭಾರತದ ಪ್ರಕಾರ, ವ್ಯಾಸರು ಪರಾಶರ ಮುನಿ ಮತ್ತು ಮೀನುಗಾರನ ಮಗಳಾದ ಮತ್ಸ್ಯಗಂಧಿನಿ ಅಥವಾ ಸತ್ಯವತಿಯ ಪುತ್ರ. ಜನ್ಮ ಯಮುನಾ ನದಿ ಯ ಒಂದು ದ್ವೀಪದಲ್ಲಿ. ಇದು ಈಗಿನ ಕಾಲದ ಉತ್ತರ ಪ್ರದೇಶದ ಜಲುವಾ ಜಿಲ್ಲೆಯ 'ಕಲ್ಪಿ' ಎನ್ನುವ ಸ್ಥಳದ ಬಳಿಯಿದೆ. ವ್ಯಾಸರ ಬಣ್ಣ ಕಪ್ಪಾಗಿದ್ದ ಕಾರಣ 'ಕೃಷ್ಣ' ಎಂದು ಕರೆಯಲಾಗುತ್ತಿತ್ತು. ದ್ವೀಪದಲ್ಲಿ ಜನಿಸಿದ ಕಾರಣ 'ದ್ವೈಪಾಯನ' ಎಂದೂ ಹೆಸರಿತ್ತು. ಈ ಕಾರಣದಿಂದ ಇವರನ್ನು "ಕೃಷ್ಣ-ದ್ವೈಪಾಯನ" ಎಂದೂ ಕರೆಯಲಾಗುತ್ತದೆ. 
   ಮಗುವಾಗಿ ಹುಟ್ಟಿದ ಕ್ಷಣವೇ ದೊಡ್ಡವರಾಗಿ ಬೆಳೆದು, ತಾಪಸ ಜೀವನ ನಡೆಸಿ ಅತಿ ಪ್ರಮುಖ ಋಷಿಗಳಲ್ಲಿ ಒಬ್ಬರಾಗಿ ಪರಿಗಣಿತರಾಗಿದ್ದಾರೆ. ಹಿಂದೂ ಪುರಾಣದ ಪ್ರಕಾರ ಇವರು ಏಳು  ಚಿರಂಜೀವಿಗಳಲ್ಲಿ ಒಬ್ಬರು.
     ಹಿಂದೂಗಳು ನಂಬುವ ಪ್ರಕಾರ ಇವರು ಪ್ರಾಚೀನ ಕಾಲದ ಒಂದು ವೇದವನ್ನು ನಾಲ್ಕು ವೇದಗಳನ್ನಾಗಿ ವಿಂಗಡಿಸಿದ ಕಾರಣ ವೇದವ್ಯಾಸ ಎಂಬ ಹೆಸರು ಬಂತು. ಈ ಹೆಸರಿನಲ್ಲಿಯೇ ಇವರು ಬಹಳ ಪರಿಚಿತರು. ವ್ಯಾಸರು ಒಬ್ಬ ವ್ಯಕ್ತಿಯೇ ಅಥವಾ ಮೇಧಾವಿಗಳ ಗುಂಪೇ ಎಂದು ತರ್ಕಿಸಲಾಗಿದೆ. ವಿಷ್ಣು ಪುರಾಣದಲ್ಲಿ ಇದರ ಬಗ್ಗೆ ಒಂದು ಕುತೂಹಲಕಾರೀ ವಿವರಣೆಯಿದೆ. 
   ಪ್ರತಿ ಮೂರನೇ (ದ್ವಾಪರ)ಯುಗದಲ್ಲಿ ವಿಷ್ಣು ವ್ಯಾಸರ ರೂಪದಲ್ಲಿ ಬಂದು ಮಾನವ ಕುಲದ ಉದ್ಧಾರಕಾಗಿ ವೇದವನ್ನು ವಿಂಗಡಿಸುತ್ತಾನೆ.ವೇದವನ್ನು ಇಪ್ಪತ್ತೆಂಟು ಬಾರಿ ವೈವಸ್ವತ ಮನ್ವಂತರದ ಮಹರ್ಷಿಗಳಿಂದ ವಿಂಗಡಿಸಲಾಗಿದೆ. ಆದ್ದರಿಂದ ಇಪ್ಪತ್ತೆಂಟು ವ್ಯಾಸರು ಬಂದು ಹೋಗಿದ್ದಾರೆ. ಇದರಲ್ಲಿ ಪ್ರಥಮವಾಗಿ ವೇದವನ್ನು ವಿಂಗಡಿಸಿದ ಸ್ವಯಂಭೂ (ಬ್ರಹ್ಮ); ಅದರ ನಂತರ ವೇದವನ್ನು ವಿಂಗಡಿಸಿದ್ದು ಪ್ರಜಾಪತಿ... (ಹೀಗೇ ಇಪ್ಪತ್ತೆಂಟು ಬಾರಿ).
    ಇವರ ತಾಯಿ ನಂತರ ಹಸ್ತಿನಾಪುರದ ರಾಜ ಶಂತನುವನ್ನು ಮದುವೆಯಾಗಿ ಇಬ್ಬರು ಗಂಡು ಮಕ್ಕಳನ್ನು ಹೆತ್ತಳು. ಈ ಇಬ್ಬರೂ ಸಂತಾನವಿಲ್ಲದೇ ತೀರಿಕೊಂಡರು. ಪ್ರಾಚೀನ ಪದ್ಧತಿ ನಿಯೋಗವನ್ನು ಅನುಸರಿಸಿ ಸತ್ಯವತಿಯು ವ್ಯಾಸರಿಗೆ ತನ್ನ ಸತ್ತ ಮಗನಾದ ವಿಚಿತ್ರವೀರ್ಯನ ಪರವಾಗಿ ಗಂಡು ಮಕ್ಕಳನ್ನು ಹುಟ್ಟಿಸುವಂತೆ ಕೋರುತ್ತಾಳೆ. ಈ ಪ್ರಕಾರ ವ್ಯಾಸರು ತೀರಿಕೊಂಡ ರಾಜನ ಪತ್ನಿಯರಾದ  ಅಂಬಿಕೆ ಮತ್ತು  ಅಂಬಾಲಿಕೆಯಿಂದ  ಧೃತರಾಷ್ಟ್ರ ಮತ್ತು ಪಾಂಡುವಿನ ತಂದೆಯಾಗುತ್ತಾರೆ.ಇದೇ ಸಂಪ್ರದಾಯದಿಂದ ರಾಣಿಯರ ಸೇವಕಿಯಿಂದ "ವಿದುರ" ನ ಜನ್ಮವಾಗುತ್ತದೆ.ಪ್ರಾಯಶಃ ಈ ಮೂರು ಜನ ವ್ಯಾಸರ ಪುತ್ರರಾಗಿ ಪರಿಗಣಿತರಾಗುವುದಿಲ್ಲ. ಇವರ ಇನ್ನೊಬ್ಬ ಪುತ್ರ ಶುಕನು ಇವರ ನಿಜವಾದ ಆಧ್ಯಾತ್ಮಿಕ ಪುತ್ರನೆಂದು ಕರೆಸಿಕೊಳ್ಳುತ್ತಾನೆ. 
   ಈ ಪ್ರಕಾರ ವ್ಯಾಸರು ಮಹಾಭಾರತ ಯುದ್ಧದಲ್ಲಿ ಕಾದಾಡಿದ ಕೌರವರು ಮತ್ತು ಪಾಂಡವರ ತಾತರಾಗುತ್ತಾರೆ. ತದ ನಂತರ ಮಹಾಭಾರತದಲ್ಲಿ ಆಧ್ಯಾತ್ಮಿಕ ಗುರುವಾಗಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾರೆ.ಮಹಾಭಾರತದ ಮೊದಲ ಗ್ರಂಥದಲ್ಲಿ ಇವರು ಈ ಮಹಾಕಾವ್ಯವನ್ನು ರಚಿಸಲು ಗಣೇಶನನ್ನು ಕೇಳಿಕೊಂಡರು. ಈ ಪ್ರತೀತಿಯ ಪ್ರಕಾರ ಗಣೇಶನು ವ್ಯಾಸರಿಗೆ ಮಹಾಕಾವ್ಯವನ್ನು ಒಂದು ಕ್ಷಣವನ್ನೂ ನಿಲ್ಲಿಸಿದೇ ಹೇಳಲು ಷರತ್ತು ವಿಧಿಸಿದನು. ಇದಕ್ಕೆ ಪ್ರತಿಯಾಗಿ ವ್ಯಾಸರು ಹಾಕಿದ ಷರತ್ತೇನೆಂದರೆ ತಾವು ಹೇಳಿದ ಪ್ರತಿ ಶ್ಲೋಕವನ್ನು ಗಣೇಶನು ಅರ್ಥ ಮಾಡಿ ಕೊಂಡ ನಂತರವಷ್ಟೇ ಬರೆಯಬೇಕೆಂದು. ಹೀಗೆ ವ್ಯಾಸರಿಗೆ ವಿಶ್ರಾಂತಿ ಬೇಕಿದ್ದಾಗ ಕಷ್ಟಕರವಾದ ಸಂಸ್ಕೃತ ಶ್ಲೋಕಗಳನ್ನು ಹೇಳುತ್ತಿದ್ದರು.
    ವೇದವ್ಯಾಸ ಹಿಂದೂ ಧರ್ಮ ಪರಂಪರೆ ಮತ್ತು ಸಾಹಿತ್ಯದಲ್ಲಿ ಬಹಳ ಪ್ರಮುಖರು. ಬ್ರಹ್ಮನ ಸಾರ್ಥಕತೆಯನ್ನು ತಿಳಿದ ಇವರನ್ನು ಆದರ್ಶ ಬ್ರಹ್ಮರ್ಷಿಎಂದು ಕರೆಯಲಾಗುತ್ತದೆ.
    -ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ರಾಧೇಯ ಸೂತಪುತ್ರ

ರಾಧೇಯನ ಏಕಮಾತ್ರ ಗುರಿ ಧನುರ್ವಿದ್ಯೆಯ ಸಂಪಾದನೆಯಾಗಿತ್ತು. ಹಸ್ತಿನಾಪುರದಲ್ಲಿ ರಾಜಕುಮಾರರೆಲ್ಲರೂ ದ್ರೋಣನಿಂದ ಕಲಿಯುತ್ತಿರುವ ವಿದ್ಯೆಯ ಪ್ರಖ್ಯಾತಿಯನ್ನು ಅವನು ಕೇಳಿದ್ದ. ಅಲ್ಲಿಗೆ ಹೋಗಿ ದ್ರೋಣನನ್ನು ಕಂಡು, `` ಆಚಾರ್ಯ, ದಯವಿಟ್ಟು ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ. ನಾನು ನಿಮ್ಮಿಂದ ಧನುರ್ವಿದ್ಯೆಯನ್ನು ಕಲಿಯಬೇಕೆಂದಿರುವೆನು'' ಎಂದು ಬೇಡಿಕೊಡನು. ದ್ರೋಣನು ನೀನು ಯಾರು ಎಂದು ಪರಿಚಯವನ್ನು ಕೇಳಲು, ರಾಧೇಯನು ನಾನು ಅಧಿರಥನೆಂಬ ಸೂತನ ಮಗ, ರಾಧೇಯ ಎಂದನು. ಸೂತನನ್ನು ಶಿಷ್ಯನನ್ನಾಗಿ ತೆಗೆದುಕೊಳ್ಳಕು ದ್ರೋಣ ಮನಸ್ಸು ಒಪ್ಪಲಿಲ್ಲ. `` ನೀನು ಸೂತಪುತ್ರನೆಂದು ಹೇಳುತ್ತಿರುವೆ. ನಾನು ಕೆಳಜಾತಿಯವರಿಗೆ ವಿದ್ಯೆ ಕಲಿಸುವುದಿಲ್ಲ " ಎನ್ನಲು, ರಾಧೇಯನು ಹಿಂದಿರುಗಬೇಕಾಯಿತು. ರಾಧೇಯ ಮನೆಯ ಕಡೆ ನಡೆದ. ಸೂತಪುತ್ರನೆಂಬ ಹೆಸರು ಅವನಿಗೆ ಜೀವನದ ಉದ್ದಕ್ಕೂ ಅಂಟಿಕೊಂಡೇ ಬಂದಿತ್ತು. ಇದರಿಂದಾಗಿ ಅವನು ಅನುಭವಿಸಿದ ಮಾನಸಿಕ ಯಾತನೆ ಅಷ್ಟಿಷ್ಟಲ್ಲ. ರಾತ್ರಿ ಹಗಲು ಅವನಿಗೆ ಅದೇ ಯೋಚನೆ--ಧನುರ್ವಿದ್ಯೆಯನ್ನು ಸಂಪಾದಿಸುವುದು ಹೇಗೆ ಎಂದು. ಸೂತಪುತ್ರನಾಗಿರುವುದರಿಂದ ಯಾವ ಗುರುವಾದರೂ ದ್ರೋಣನಂತೆಯೇ ಹೇಳಬಹುದು. ರಾಧೇಯನಿಗೆ ನಿರಾಸೆಯಾಯಿತು. 
    ಕೊನೆಗೊಮ್ಮೆ ಭಾರ್ಗವನಲ್ಲಿಗೆ ಹೋಗಿ ಬೇಡುವುದೆಂದು ನಿರ್ಧರಿಸಿದ. ಭಾರ್ಗವನು ಕ್ಷತ್ರಿಯರ ವೈರಿ. ಅವನೆಂತಹ ಶೀಘ್ರಕೋಪಿ ಎಂಬುದೂ ಗೊತ್ತು. ಏನು ಮಾಡುವುದು? ಸೂತ ಎಂದರೆ ಕ್ಷತ್ರಿಯ-ಬ್ರಾಹ್ಮಣ ಸಂಯೋಗದಿಂದ ಹುಟ್ಟಿದವನಾದ್ದರಿಂದ, ತಾನು ಬ್ರಾಹ್ಮಣನೆಂದು ಹೇಳಿಕೊಳ್ಳುವುದು ಎಂದುಕೊಂಡ. ಹಾಗೆ ಮಾಡಿದರೆ, ಭಾರ್ಗವನು ತನ್ನನ್ನು ಶಿಷ್ಯನೆಂದು ಸ್ವೀಕರಿಸುವುದು ಖಂಡಿತ. ಹಾಗೇ ಮಾಡುವೆನು ಎಂದು ನಿರ್ಧರಿಸಿ, ರಾಧೇಯನು ಭಾರ್ಗವನ ಆಶ್ರಮಕ್ಕೆ ಬಂದ. ಹೃದಯದಲ್ಲಿ ಆಸೆಯು ಉರಿಯುತ್ತಿರಲು, ಜಡೆಕಟ್ಟಿದ ಕೂದಲಿನ, ಕೆಂಗಣ್ಣಿನ, ಭಯಂಕರ ರೂಪದ ಋಷಿಯನ್ನು ಕಂಡು ಪಾದಾಕ್ರಾಂತನಾದ. `` ಸ್ವಾಮೀ, ನಾನು ತುಂಬ ಆಸೆ ಭರವಸೆಗಳನಿಟ್ಟುಕೊಂಡು ನಿಮ್ಮಲ್ಲಿಗೆ ಬಂದಿದ್ದೆನೇ. ನನ್ನನ್ನು ಬರಿಗೈಯಲ್ಲಿ ಕಳುಹಿಸಬೇಡಿ'' ಎಂದು ಕಂಬನಿದುಂಬಿ ಬೇಡಿಕೊಂಡ. ಋಷಿಯು ಅವನನ್ನು ಹಿಡಿದೆತ್ತಿದಾಗ ರಾಧೇಯನು ಭಯದಿಂದಲೂ ವಿಚಿತ್ರವಾದ ಉನ್ಮತ್ತತೆಯಿಂದಲೂ ನಡುಗುತ್ತಿದ್ದ. ಎಳೆಯನ ವಿನಯವು ಭಾರ್ಗವನ ಮನವನ್ನು ಗೆದ್ದಿತು. `ರಾಧೇಯನು ತಾನು ಬ್ರಾಹ್ಮಣನೆಂದೂ, ಧನುರ್ವಿದ್ಯೆ ಕಲಿಯಲು ಬಂದಿರುವೆನು ಎಂದು ಬಿನ್ನವಿಸಿಕೊಂಡ. ಭಾರ್ಗವನು ನಕ್ಕು, `` ಆಗಲಿ ನನಗೆ ತಿಳಿದಿರುವುದೆಲ್ಲವನ್ನೂ ಸಂತೋಷದಿಂದ ಹೇಳಿಕೊಡುತ್ತೇನೆ'' ಎಂದ.
        ರಾಧೇಯನ ಕಲಿಕೆ ಆರಂಭವಾಯಿತು. ಭಾರ್ಗವನ ಆಶ್ರಮದಲ್ಲಿ ಅನೇಕ ತಿಂಗಳುಗಳು, ವರ್ಷಗಳೂ ಸುಖವಾಗಿ ಉರುಳಿದವು. ತಾನು ಸೂತಪುತ್ರನೆಂಬ ಕಾರಣಕ್ಕಾಗಿ ಅನುಭವಿಸಿದ ಅಪಮಾನಗಳು, ಅವುಗಳಿಂದಾಗಿ ಬಂದಿದ್ದ ಕೀಳರಿಮೆ, ರಾಧೇಯನಿಗೆ ಮರೆತೇಹೊಗಿತ್ತು. ತನ್ನ ಜನ್ಮರಹಸ್ಯ, ಆ ವಿಚಾರವಾಗಿ ತನಗೆ ಬೀಳುತ್ತಿದ್ದ ಆ ಯಾವುದೋ ಹೆಂಗಸಿನ ಕನಸು ಎಲ್ಲವನ್ನು ಮರೆತ. ಕನಸುಗಳು ಈಗ ಅಪರೂಪವಾಗಿದ್ದವು, ರಾಧೇಯನಿಗೆ ಇಗ ಬೇಕಾಗಿದ್ದುದ್ದು ಒಂದೇ: ಅದು ಧನುರ್ವಿದ್ಯೆ. ವಿದ್ಯೆ ಎಂದರೆ ಬಲ; ವಿದ್ಯೆ ಎಂದರೆ ಕೀರ್ತಿ; ವಿದ್ಯೆ ಎಂದರೆ ಮನ್ನಣೆ. ಮಾನವರ ಪ್ರಪಂಚದಲ್ಲಿ ಪಡೆಯಲು ಯೋಗ್ಯವಾದುದೆಂದರೆ ವಿದ್ಯೆಯೊಂದೇ. ರಾಧೇಯ ಆನಂದಿಸುತ್ತಿದ್ದ ಶಾಂತಿ ತೃಪ್ತಿಗಳ ಬದುಕು ಸಾಕೆಂದು ವಿಧಿಗೆ ಅನಿಸಿರಬೇಕು. ವಿಧಿಯು ನಿಜಕ್ಕೂ ಬಹು ಭಯಂಕರ ಹಠಮಾರಿ ಹೆಣ್ಣು. ಆಕೆಯದು ವಿಕ್ಷಿಪ್ತ ಹಾಸ್ಯ ಪ್ರಜ್ಞೆ ತನ್ನ ಕೈಗೆ ಸಿಕ್ಕಿಬಿದ್ದವರು ಯಾತನೆಯಿಂದ ಅಳುತ್ತಿದ್ದರೆ ಮಾತ್ರ ಅವಳಿಗೆ ಸಂತೋಷ. ರಾಧೇಯನ ವಿಚಾರದಲ್ಲಿಯೂ ಹೀಗೆಯೇ ಆಯಿತು. ಅವನ ಈಗ ಮುಕ್ತಾಯದ ಹಂತಕ್ಕೆ ಬಂದಿತ್ತು. ಭಗವಾನ್ ಭಾರ್ಗವನು ಅವನಿಗೆ ಮಹಾ ಶಕ್ತಿಶಾಲಿಯಾದ ಭಾರ್ಗವಾಸ್ತ್ರವನ್ನೂ ಏಕೆ, ಬ್ರಹ್ಮಾಸ್ತ್ರವನ್ನೂ, ಸಹ ಕಲಿಸಿಕೊಟ್ಟಿದ್ದ. ರಾಧೇಯನು ಭಾರ್ಗವಾಶ್ರಮವನ್ನು ಬಿಡುವ ಕಾಲ ಹತ್ತಿರ ಬಂದಿದ್ದಿತು. 
     ಭಾರ್ಗವನು ಅವನಿಗೆ ಕೊನೆಯ ಉಪದೇಶವನ್ನು ಕೊಡುತ್ತಿದ್ದ: `` ಪ್ರಿಯ ಶಿಷ್ಯ, ಇಷ್ಟ ದಿನಗಳನ್ನು ನಾನು ಆನಂದದಿಂದ ಕಳೆದೆ. ನಿನಗೆ ಧನುರ್ವಿದ್ಯೆಯನ್ನು ಹೇಳಿಕೊಡುವುದು ನನಗೊಂದು ಸಂತೋಷದ ಸಂಗತಿಯಾಗಿದ್ದಿತು. ನನ್ನಲ್ಲಿದ್ದ ಜ್ಞಾನವೆಲ್ಲವನ್ನೂ ನಿನಗೆ ಧಾರೆಯೆರೆದಿದ್ದನೆ. ನಿನ್ನಂತಹ ಶಿಷ್ಯ ಸಿಕ್ಕಿದ್ದು ನನಗೆ ಹೆಮ್ಮೆಯ ಸಂಗತಿ ಎನಿಸಿದೆ. ನೀನು ಪ್ರಾಮಾಣಿಕ, ಗುರುಹಿರಿಯರಲ್ಲಿ ಗೌರವವುಳ್ಳವನು; ಯಾವಗಲು ಋಜುಮಾರ್ಗದಲ್ಲಿಯೇ ನಡೆಯಬಯಸುವವನು. ಈಗ ಗಳಿಸಿಕೊಡಿರುವ ವಿದ್ಯೆಯನ್ನು ನೀನು ಧರ್ಮವನ್ನು ಎತ್ತಿ ಹಿಡಿಯುವುದಕ್ಕಾಗಿ ಮಾತ್ರ ಬಳಸಬೇಕು. ಅಧರ್ಮವೆನಿಸಬಹುದಾದ ಕಾರಣಗಳಿಗಾಗಿ ಅದನ್ನು ಎಂದಿಗೂ ಬಳಸಬೇಡ.
      ಮಧ್ಯಹ್ನದ ಸೂರ್ಯ ನೆತ್ತಿಯ ಮೆಲೇ ಪ್ರಕಾಶಿಸುತ್ತಿದ್ದ. ಸೆಖೆ ಅಸಾಧ್ಯವಾಗಿದ್ದಿತು. ಭಗವಾನ್ ಭಾರ್ಗವನು ಮರದ ನೆರಳಿನಲ್ಲಿ ಸ್ವಲ್ಪ ವಿಶ್ರಮಿಸಿಕೊಳ್ಳಬಯಸಿದ. ``ರಾಧೇಯ, ಹೋಗಿ ಆಶ್ರಮದಿಂದ ಜಿಂಕೆ ಚರ್ಮದ ಸುರುಳಿಯನ್ನು ತಂದುಕೊಡು. ಅದರ ಮೇಲೆ ತಲೆ ಇಟ್ಟು ಸ್ವಲ್ಪ ಮಲಗಿಕೊಳ್ಳುತ್ತೇನೆ. ನನಗೆ ಆಯಾಸವಾಗಿದೆ.'' ``ಗುರುವರ್ಯ, ನಾನಿಲ್ಲವೆ? ನನ್ನ ತೊಡೆಯ ಮೇಲೆ ತಲೆಯಿಟ್ಟು ವಿಶ್ರಮಿಸಿರಿ. ನಾನು ನಿಮಗೆ ನಿದ್ರಾಭಂಗವಾಗದಂತೆ ಅಲುಗಾಡದೆ ಕುಳಿತುಕೊಂಡಿರುತ್ತೇನೆ. ಗುರುವಿಗಾಗಿ ಇಷ್ಟು ಸ್ವಲ್ಪ ಸೇವೆಯನ್ನು ನಾನು ಮಾಡಲಾರೆನೆ?'' ಎಂದನು ರಾಧೇಯ. ಅವನ ಭಕ್ತಿಯನ್ನು ನೋಡಿ ಭಾರ್ಗವನಿಗೆ ಮೆಚ್ಚಿಕೆಯಾಯಿತು. ಹಾಗೆಯೇ ಮರದ ನೆರಳಿನಲ್ಲಿ ಶಿಷ್ಯನ ತೊಡೆಯ ಮೇಲೆ ತಲೆಯಿಟ್ಟು ಮಲಗಿದನು, ರಾಧೇಯನ ಮನಸ್ಸಿನಲ್ಲಿ ಗುರುವು ಹೇಳಿದ ಮಾತುಗಳೇ ಓಡತೊಡಗಿದವು. ಗುರು ತನ್ನನ್ನು ಪ್ರಾಮಾಣಿಕ ಎಂದರು. ತಾನು ಪ್ರಾಮಾಣಿಕನೆ?ಬಹುಶಃ ಅಲ್ಲ. ಬ್ರಾಹ್ಮಣನಲ್ಲದ ತಾನು ಬ್ರಾಹ್ಮಣನೆಂದು ಹೇಳಿಕೊಂಡಿರುವೆ. ವಿದ್ಯಾಭ್ಯಾಸಕ್ಕಾಗಿ ಹಪಹಪಿಸುತ್ತಿದ್ದ ತನ್ನ ಜೀವದ ತೃಪ್ತಿಗಾಗಿ ಹಾಗೆ ಮಾಡುವುದೊಂದೇ ದಾರಿಯಾಗಿತ್ತು. ಪರಿಣಾಮ ಒಳ್ಳೆಯದಾದರೆ ಕಾರಣವೂ ಒಳ್ಳೆಯದೇ ಎಂದು ತಿಳಿದವರು ಹೇಳುವರು. ವಿದ್ಯೆ ಪಡೆದುಕೊಳ್ಳುವುದು ಅವನ ಗುರಿಯಾಗಿತ್ತು; ಅದಕ್ಕಾಗಿ ತಾನು ಸುಳ್ಳು ಹೇಳಬೇಕಾಯಿತು. ಯಾವುದೋ ಪಾಪಕಾರ್ಯವನ್ನು ಸಾಧಿಸಿಕೊಳ್ಳುವುದಕ್ಕಾಗಿ ಸುಳ್ಳು ಹೇಳಿದರೆ ಅದು ಪಾಪ; ತಾನು ಯಾವ ಪಾಪವನ್ನೂ ಮಾಡುತ್ತಿಲ್ಲ. ಆದ್ದರಿಂದ ತಾನು ಹೇಳಿದ ಅನೃತವು ಕ್ಷಮಾರ್ಹ. ಇಂತಹ ಅನೇಕಾನೇಕ ಯೋಚನೆಗಳು ಅವನ ಮನಸ್ಸಿನಲ್ಲಿ ಹಾದು ಹೋಗುತ್ತಿದ್ದವು.
     ಕೆಲ ಕಾಲ ಕಳೆಯಿತು. ಇದ್ದಕ್ಕಿದ್ದಂತೆ ರಾಧೇಯನ ತೊಡೆಯನ್ನು ಯಾವುದೋ ಕೀಟ ಕಡಿಯಲಾರಂಬಿಸಿತು. ನೋವು ಅಸಹನೀಯವಾಯಿತು. ಗುರುವಿನ ನಿದ್ರೆಗೆ ತೊಂದರೆಯಾಗದಂತೆ, ಏನು ಕಡಿಯುತ್ತಿದೆ ಎಂದು ನಿಧಾನವಾಗಿ ಬಗ್ಗಿ ನೋಡಿದನು. ನೋಡಿದರೆ ಅದೊಂದು ಭೀಕರ ಕೀಟ. ಹಂದಿಯಂತೆ ಚೂಪಾದ ಮುಖವುಳ್ಳ ಅದಕ್ಕೆ ಚೂಪಾದ ದಾಡೆಗಳು. ಉಕ್ಕಿನಂತೆ ಗಟ್ಟಿಯಾದ ಆ ದಾಡೆಗಳಲ್ಲಿ ಅನೇಕಾನೇಕ ಚೂಪಾದ ಹಲ್ಲು ಸಾಲುಗಳು. ರಾಧೇಯನಿಗೆ ಉಕ್ಕಿನ ಗರಗಸದಿಂದ ತನ್ನ ತೊಡೆಯನ್ನು ಯಾರೋ ಕೊರೆಯುತ್ತಿರುವಂತೆ ಅನಿಸಿತು.ಅವನಿಗೆ ಆ ಕೀಟವನ್ನು ತೆಗೆದು ಹಾಕಲು ಆಗಲಿಲ್ಲ. ಅದು ಕೊರೆಯುತ್ತಲೇ ಇದ್ದಿತು. ನೋವೋ ಅಸಾಧ್ಯ. ಮಾಡುವುದೇನು? ಗುರು ತೊಡೆಯಮೇಲೆ ತಲೆಯಿಟ್ಟು ಮಲಗಿದ್ದಾರೆ; ಅವರ ನಿದ್ರೆಗೆ ಭಂಗ ತರುವುದು ಸರಿಯಲ್ಲ. ಭಯಂಕರವಾದ ನೋವನ್ನು ಅನುಭವಿಸುತ್ತ ರಾಧೇಯನು ಸ್ವಲ್ಪವೂ ಅಲುಗಾಡದೆ ಕುಳಿತ. ಕೊರೆತ ಮುಂದುವರೆದಂತೆ ರಾಧೇಯನ ತೊಡೆಯಿಂದ ರಕ್ತವು ಧಾರೆದಾರೆಯಾಗಿ ಹರಿಯಲಾರಂಭಿಸಿತು. ಬೆಚ್ಚನೆಯ ರಕ್ತವು ಕೆನ್ನೆಗೆ ಹತ್ತಲು, ಭಾರ್ಗವನಿಗೆ ಎಚ್ಚರವಾಯಿತು. 
          ಅವನು ರಾಧೇಯನನು ನೋಡಿ ``ನನ್ನ ಮುಖದ ಮೇಲೆ ರಕ್ತ! ಎಲ್ಲಿಂದ ಬಂದಿತು ಇದು?'' ಎಂದು ವಿಚಾರಿಸಿದ. ರಾಧೇಯನು, ``ಗುರುಗಳೆ, ಅದು ನನ್ನ ತೊಡೆಯಿಂದಲೇ ಬಂದುದು. ನಿವು ನಿದ್ರಿಸುತ್ತಿದ್ದಾಗ ಕೀಟವೊಂದು ನನ್ನ ತೊಡೆಯನ್ನು ಕೊರೆಯಲಾರಂಭಿಸಿತು. ಆ ಗಾಯದಿಂದಲೇ ರಕ್ತ ಬರುತ್ತಿರುವುದು'' ಎಂದನು . ಋಷಿಯು ರಾಧೇಯನ ರಕ್ತವನ್ನು ಕುಡಿದು ಮತ್ತವಾದ ಆ ಕೀಟವನ್ನು ನೋಡಿದನು. ಅವನಿಗೆ ಅಚ್ಚರಿಯಾಯಿತು. ``ಅಯ್ಯಾ, ಈ ಕೀಟವು ಇಷ್ಟು ಹೊತ್ತು ಕಡಿಯುತ್ತಿದ್ದರೂ ನೋವನ್ನು ಸಹಿಸಿಕೊಂಡಿದ್ದೆಯಾ? ತಕ್ಷಣ ಮೇಲೇಳಲಿಲ್ಲವೇಕೆ?'' ``ಗುರುವೆ, ನೀವು ನನ್ನ ತೊಡೆಯ ಮೇಲೆ ನಿದ್ರಿಸುತ್ತಿದ್ದಿರಿ. ನಿಮಗೆ ಆಯಾಸವಾಗಿದ್ದಿತು. ವಿಶ್ರಮಿಸಿಕೊಳ್ಳುತ್ತಿದ್ದಿರಿ. ನಾನು ನನ್ನ ನೋವಿಗಿಂತ ನಿಮ್ಮ ನಿದ್ರೆ ಭಂಗವಾಗದಿರಲಿ ಎಂದು ಯೋಚಿಸಿದೆ; ನೋವಿಗೆ ಹೆಚ್ಚು ಗಮನ ಕೊಡಲಿಲ್ಲ.'' ಭಾರ್ಗವನಿಗೆ ತನ್ನ ಕಿವಿಗಳನ್ನು ತಾನೇ ನಂಬಲಾಗಲಿಲ್ಲ. ``ಇದು ಹೇಗೆಂಬುದೇ ನನಗೆ ಅರ್ಥವಾಗುತ್ತಿಲ್ಲ. ಬ್ರಾಹ್ಮಣನಾದ ನೀನು ಇಷ್ಟು ನೋವನ್ನು ಹೇಗೆತಾನೆ ಸಹಿಸಿಕೊಂಡೆ?ಬ್ರಾಹ್ಮಣರು ನೋವನ್ನಾಗಲಿ ರಕ್ತ ಕಣ್ಣೆದುರಿಗೆ ಹರಿಯುವುದನ್ನಾಗಲಿ ತಡೆದು ಕೊಳ್ಳಲಾರರು ಎಂಬುದು ಗೊತ್ತೇ ಇದೆ. ನಿಜ ಹೇಳು! ನೀನು ಬ್ರಾಹ್ಮಣನಲ್ಲ. ನಿನು ಬ್ರಾಹ್ಮಣನಾಗಿರುವುದು ಸಾಧ್ಯವೇ ಇಲ್ಲ. ಕ್ಷತ್ರಿಯನಾದವನು ಮಾತ್ರವೇ ನೀನು ಈಗ ಮಾಡಿರುವುದನ್ನು ಮಾಡಲು ಸಾಧ್ಯ . ಇಷ್ಟೆಲ್ಲ ವರ್ಷಗಳು ನಾನು ನನ್ನ ಅಮೂಲ್ಯವಾದ ವಿದ್ಯೆಯನ್ನು ಒಬ್ಬ ಪಾಪಿ ಕ್ಷತ್ರಿಯನಿಗೆ ಧಾರೆಯೆರೆದೆನೆ? ನನಗೆ ಕ್ಷತ್ರಿಯರನ್ನು ಕಂಡರಾಗದು. ನಾನು ಈ ನಿನ್ನ ಮೋಸವನ್ನು ಕ್ಷಮಿಸಲಾರೆ. ನೀನು ಕ್ಷತ್ರಿಯ ತಾನೆ? ನಿಜವನ್ನೊಪ್ಪಿಕೋ!'' ಎಂದು ಗರ್ಜಿಸಿದನು.
     ರಾಧೇಯನು ಗುರುವಿನ ಪಾದಗಳ ಮೇಲೆ ಬಿದ್ದು ಹೊರಳಾಡತೊಡಗಿದನು. ಅವನ ಕಣ್ಣೇರು ಧಾರೆಧಾರೆಯಾಗಿ ಹರಿಯುತ್ತಿತ್ತು. ಅಯ್ಯೋ, ಎಷ್ಟೆಲ್ಲ ಕಷ್ಟಪಟ್ಟು ಕಲಿತಿದ್ದೆಲ್ಲವೊ ವ್ಯರ್ಥವಾಯಿತೆ? ಎಂಬ ಯೋಚನೆಯಿಂದ ಅವನ ಹೃದಯ ಜರ್ಜರಿತವಾಯಿತು. ಭಾರ್ಗವನ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ರೋದಿಸುತ್ತ,``ಆಚಾರ್ಯ, ದಯವಿಟ್ಟು ನನ್ನನ್ನು ಕ್ಷಮಿಸಿ. ನಿವು ನನ್ನ ತಂದೆಗಿಂತಲೂ ಹೆಚ್ಚು. ಮಗನು ಮಾಡಿದ ತಪ್ಪನ್ನು ತಂದೆ ಕ್ಷಮಿಸಬೇಕು. ನಾನು ಬ್ರಾಹ್ಮಣನಲ್ಲ ಕ್ಷತ್ರಿಯನೂ ಅಲ್ಲ. ನಾನು ಸೂತಪುತ್ರ, ನನ್ನ ತಂದೆ ಅಧಿರಥ. ಸೂತನೊಬ್ಬನು ಹುಟ್ಟುವುದು ಬ್ರಾಹ್ಮಣ ಕ್ಷತ್ರಿಯರ ಸಂಯೋಗದಿಂದ. ಆದ್ದರಿಂದಲೇ ನಾನು ಬ್ರಾಹ್ಮಣನೆಂದು ಹೇಳಿಕೊಡೆ. ನನಗೆ ಬೇಕಾಗಿದ್ದುದು ವಿದ್ಯೆಯೊಂದೇ. ವಿದ್ಯೆಗೆ ಜಾತಿ, ಕುಲಗಳ ಕಟ್ಟು ಇಲ್ಲವೆಂದು ತಿಳಿದವರು ಹೇಳುವರು. ಮಹಾತ್ಮರಾದ ನೀವು ನನ್ನ ಈ ತಪ್ಪನ್ನು ಕ್ಷಮಿಸಬೆಕು, ನಿಮಗೆ ನಾನು ಸುಳ್ಳು ಹೇಳಿದೆ, ನಿಜ, ಆದರ ಅದು ಕೇವಲ ನಿಮ್ಮ ಶಿಷ್ಯನಾಗುವುದಕ್ಕಾಗಿ. ನಿಮಗೆ ನಾನು ವಿಧೇಯನಾಗಿರುವೆ. ನಿಮಗಿಂತ ಪ್ರಿಯರಾದವರು ನನಗೆ ಈ ಪ್ರಪಂಚದಲ್ಲಿ ಇನ್ನು ಯಾರೂ ಇಲ್ಲ. ಬೆಡಿಕೊಳ್ಳುತ್ತಿದ್ದೇನೆ, ಕೃಪೆಮಾಡಿ ನನ್ನನ್ನು ಕ್ಷಮಿಸಿರಿ'' ಎಂದನು. ಭಾರ್ಗವನ ಸಿಟ್ಟು ತಣಿಯಲಿಲ್ಲ. ರಾಧೆಯನ ಭಕ್ತಿಯಾಗಲಿ ಋಷಿಯಾದ ನಾನು ಕ್ರೋಧ ವಶನಾಗಬಾರದೆಂಬುದಾಗಲಿ ಅವನ ಮನಸ್ಸಿಗೆ ಬರಲಿಲ್ಲ. ರಾಧೇಯನು ಕೀಟಬಾಧೆಯನ್ನು ಸಹಿಸಿದ್ದು ತನ್ನ ಮೇಲಣ ಪ್ರೀತಿಯಿಂದ ಮಾತ್ರವೇ ಎಂಬುದನ್ನೂ ಮರೆತ. ಅವನು ಸುಳ್ಳು ಹೇಳಿದನೆಂಬುದೊಂದೇ ಮುಖ್ಯವಾಯಿತು. ``ನೀನು ಸುಳ್ಳು ಹೇಳಿ ಧನುರ್ವಿದ್ಯೆಯನ್ನು ಕಲಿತಿರುವೆ. ಮುಂದೆ ನಿನ್ನ ಪ್ರಾಣಾಂತಿಕ ಸಮಯದಲ್ಲಿ ಅಗತ್ಯವಾದ ಅಸ್ತ್ರವು ನಿನಗೆ ನೆನಪಾಗದೇ ಹೋಗಲಿ!'' ಎಂದು ಶಾಪ ಕೊಟ್ಟೇಬಿಟ್ಟನು. ರಾಧೇಯನು ಅವನ ಪಾದಗಳ ಮೇಲೆ ಪ್ರಜ್ಞೆ ತಪ್ಪಿ ಬಿದ್ದನು. ಎಚ್ಚೆತ್ತು ವಿಧವಿಧವಾಗಿ ಬೇಡಿಕೊಂಡನು. ಆದರೂ ಭಾರ್ಗವನಿಗೆ ಕರುಣೆ ಬರಲಿಲ್ಲ. ಬ್ರಾಹ್ಮಣನ ಮಾತು ಹೊರಬಿದ್ದ ಮೇಲೆ ಮುಗಿದೇ ಹೋಯಿತು: ಅದಕ್ಕೆ ಉಪಸಂಹಾರವಿಲ್ಲ. 
     ಸ್ವಲ್ಪ ಶಾಂತನಾದ ಮೇಲೆ ಭಾರ್ಗವನು ``ನೀನು ಖ್ಯಾತಿಯನ್ನು ಬಯಸಿದೆ. ಅದು ನಿನಗೆ ಸಿಕ್ಕುತ್ತದೆ. ಈ ಭೂಮಿಯ ಮೇಲೆ ನಡೆದಾಡಿದ ಉತ್ತಮೋತ್ತಮ ಧನುರ್ಧಾರಿಯೆಂದು ಜನರು ನಿನ್ನನ್ನು ಸ್ಮರಿಸುತ್ತಾರೆ'' ಎಂದು ಹೇಳಿ ಋಷಿಯು ಅಲ್ಲಿಂದ ಹೊರಟುಹೋದನು. ದುಃಖಿತನಾದ ರಾಧೇಯನು ಮೇಲೆದ್ದು ಹೊರಟನು. ಎಲ್ಲಿಗೆ ಹೋಗಗೇಕೆಂಬುದನ್ನು ಅರಿಯದೆ ನಡೆದೇ ನಡೆದನು.
          -ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196 
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ನೀಲಿ ಬಣ್ಣದ ಎಲ್‌ಇಡಿ,ಅಂದರೆ 'ಲೈಟ್ ಎಮಿಟಿಂಗ್ ಡಯೋಡ್‌'

ನೀಲಿ ಬಣ್ಣದ ಎಲ್‌ಇಡಿ,ಅಂದರೆ 'ಲೈಟ್ ಎಮಿಟಿಂಗ್ ಡಯೋಡ್‌'ಗಳ ಬಗ್ಗೆ ಅರಿಯಲು ಬಳಕೆದಾರರಿಗೆಲ್ಲಾ ಅತ್ಯಂತ ಕುತೂಹಲ. ಈ 'ನೀಲಿಬಣ್ಣದ ಡಯೋಡ್'ಗಳನ್ನು ರೂಪಿಸಿದ ಪರಿಣಾಮಕ್ಕಾಗಿ 2014ನೇ ಸಾಲಿನ ಭೌತವಿಜ್ಞಾನ ಮೂವರು ವಿಜ್ಞಾನಿಗಳು ನೊಬೆಲ್ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟರು. ಈಗಾಗಲೇ ಬಳಕೆದಾರರ ಗಮನಕ್ಕೆ ಬಂದಿರುವ 'ಎಲ್‌ಇಡಿ ಡಯೋಡ್‌'ಗಳ ಬಗ್ಗೆ ಹೆಚ್ಚು ಹೆಚ್ಚು ವಿವರಗಳು ಮಾರುಕಟ್ಟೆಯಲ್ಲಿ ಬರುವ ಹಿನ್ನೆಲೆಯಲ್ಲಿ ಖರೀದಿಗಾರರ ಆಸಕ್ತಿಯೂ ಹೆಚ್ಚುತ್ತಿದೆ. ಮಕ್ಕಳ ಆಟಿಕೆ, ಅಲಂಕಾರದ ಸೀರಿಯಲ್ ಸೆಟ್, ಬಸ್ಸು, ರೈಲಿನ ಬೋರ್ಡು ಮೊದಲಾದವುಗಳಿಂದ ಆರಂಭಿಸಿ ಅತ್ಯಾಧುನಿಕ ಟೀವಿ-ಮೊಬೈಲುಗಳವರೆಗೆ 'ಎಲ್‌ಇಡಿ'ಗಳು ಈಗ ಬಳಕೆಯಾಗುತ್ತಿರುವುದೂ ಬಹಳ ಜನರಿಗೆ ತಿಳಿದಿದೆ. ಬೇರೆಬೇರೆ ಬಣ್ಣದ ಎಲ್‌ಇಡಿಗಳ ಕಾರ್ಯ ವ್ಯಾಪ್ತಿ ಬಹಳ ವಿಸ್ತಾರವಾದದ್ದು. ಅವುಗಳಲ್ಲಿ ಈಗಾಗಲೇ ಜನರ ಮನಸ್ಸಿನಲ್ಲಿ ಸ್ಥಾನಪಡೆದ 'ಕೆಂಪು ಮತ್ತು ಹಸಿರು ಬಣ್ಣದ ಎಲ್ ಇ ಡಿ' ಗಳು ದಶಕದಿಂದ ಗ್ರಾಹಕರ ಮನಸ್ಸನ್ನು ಗೆದ್ದಿವೆ. ಇತ್ತಿಚೆಗೆ ಮಾರುಕಟ್ಟೆಗ ತಮ್ಮ ಇರುವಿಕೆಯನ್ನು ಸಾರಲು ಬಂದ ಪರಿಕರಗಳಲ್ಲಿ ಮುಖ್ಯವಾದವೆಂದರೆ, ಬಲ್ಬು-ಟ್ಯೂಬ್‌ಲೈಟ್-ಸಿಎಫ್‌ಎಲ್‌ಗಳಿಗೆಲ್ಲ ಪರ್ಯಾಯವಾಗಿ ಬಳಸಬಹುದಾದ 'ಬಿಳಿಯ ಎಲ್‌ಇಡಿ'ಗಳೂ ಬಿಳಿಯ ಬಣ್ಣದವುಗಳಿಗೆ ಅತಿ ಹೆಚ್ಚಿನ ಮಹತ್ವ ದೊರೆತಿದೆ. ಮನೆಯ ದಿವಾನಖಾನೆಯಲ್ಲಿ 'ಬಿಳಿ ಲೈಟ್' ನ ಆವಶ್ಯಕತೆ ಹೆಚ್ಚಾಗಿರುವುದರಿಂದ ಮನೆಯ ಮೂಲ ಬೆಳಕಿನ ಸಾಧನೆಗಾಗಿ ಅವುಗಳನ್ನು ಬಳಸಬಹುದು.
      ಸತತವಾಗಿ ಶ್ರಮವಹಿಸಿ ನಡೆಸಿದ ಸಂಶೋಧನೆಗಳಿಂದ ಪಡೆದ ನೀಲಿ ಬಣ್ಣದ ಕಿರಣಗಳನ್ನು ಹೊರಸೂಸುವ ಎಲ್‌ಇಡಿಯ ಆವಿಷ್ಕಾರ ವಾದದ್ದು, ೧೯೯೦ರ ದಶಕದ ಪ್ರಾರಂಭದಲ್ಲಿ. ಅವುಗಳು ಎಲ್‌ಇಡಿಗಳಿಂದ ಬಿಳಿಯ ಬಣ್ಣದ ಬೆಳಕನ್ನು ಹೊರಹೊಮ್ಮಿಸುವ ಕನಸನ್ನು ನಿಜವಾಗಿಸಿದವು. ಆದರೆ ನೀಲಿ ಬಣ್ಣದ ಬೆಳಕನ್ನು ಸೂಸುವ ಎಲ್‌ಇಡಿಗಳ ಕಾರ್ಯವಿಧಿಯಲ್ಲಿ ವಿಜ್ಞಾನಿಗಳು ಎಣಿಸಿದ ಯಶಸ್ಸನ್ನು ಕಾಣುವಲ್ಲಿ ಬಹಳ ಸಮಯ ಕಳೆಯಿತು. ಕೆಂಪು-ಹಸಿರು ಎಲ್‌ಇಡಿಗಳು ಹಾಗೂ ನೀಲಿ ಬಣ್ಣದ ಎಲ್‌ಇಡಿ-ತಂತ್ರಜ್ಞಾನಗಳನ್ನೂ ಒಟ್ಟಾಗಿ ಬಳಸಿ ಬಿಳಿಯ ಬೆಳಕನ್ನು ಹೊರಹೊಮ್ಮಿಸುವ ಪ್ರಯತ್ನ ಸಫಲವಾಯಿತು. ಎಲ್‌ಇಡಿಗಳ ಉನ್ನತ ಕಾರ್ಯಕ್ಷಮತೆ ಆತಿ ರೊಚಕವಾದ ಸಂಗತಿ. ಸದ್ಯ ಪ್ರಪಂಚದಲ್ಲಿ ಉತ್ಪಾದನೆಯಾಗುತ್ತಿರುವ ವಿದ್ಯುತ್ತಿನ ಶೇ. 20ರಷ್ಟು ಭಾಗ ಬೆಳಕಿಗಾಗಿಯೇ ವ್ಯಯವಾಗುವ ಬಗ್ಗೆ ವರದಿಗಳಿವೆ. ತಜ್ಞರ ಪ್ರಕಾರ, ಎಲ್‌ಇಡಿಗಳ ಸಮರ್ಪಕ ಬಳಕೆಯಿಂದ ಈ ಪ್ರಮಾಣವನ್ನು ಶೇ. 4ರಷ್ಟಕ್ಕೆ ಇಳಿಸುವ ಆಶೆ ಸಫಲವಾಗಲಿದೆ. ಎಲ್ಲಾ ಬೆಳಕಿನ ವ್ಯವಸ್ಥೆಗಳನ್ನು ಎಲ್‌ಇಡಿ ದೀಪಗಳಿಗೆ ಬದಲಾಯಿಸುವುದು ಸಾಧ್ಯವಾದರೆ ವಿದ್ಯುತ್ ಬಳಕೆಯಲ್ಲಿ ಗಮನಾರ್ಹ ಪ್ರಮಾಣದ ಉಳಿತಾಯವಾಗುತ್ತದೆ. ವಿದ್ಯುತ್ ಸಂಪರ್ಕವಿಲ್ಲದ ಹಲವು ಗ್ರಾಮಾಂತರ ಪ್ರದೇಶಗಳಲ್ಲೂ ಎಲ್‌ಇಡಿ ದೀಪಗಳು ಬಹು ಬಳಕೆಯ ಸಾಧನವಾಗಿವೆ. ಸೌರಶಕ್ತಿ ಆಧರಿತ ದೀಪಗಳೂ, ಕಡಿಮೆ ಪ್ರಮಾಣದ ವಿದ್ಯುತ್ತಿನಿಂದ ಹೆಚ್ಚುಕಾಲ ಬೆಳಗಬಲ್ಲ ಎಲ್‌ಇಡಿಗಳು ಹೋಲಿಕೆಯಲ್ಲಿ ಒಂದೆ ಆಗಿವೆ. ಕಡಿಮೆ ವಿದ್ಯುತ್ ಬಳಸುವ ನೀಲಿ ಎಲ್‌ಇಡಿಗಳ ಉಪಯೋಗ ಕೇವಲ ದೀಪಗಳಿಗಷ್ಟೇ ಅಲ್ಲದೆ, ಎಲ್‌ಇಡಿ ಟೀವಿಗಳು, ಕಂಪ್ಯೂಟರ್ ಮಾನಿಟರುಗಳು ಹಾಗೂ ಮೊಬೈಲ್-ಟ್ಯಾಬ್ಲೆಟ್ಟುಗಳ ಪರದೆಗಳನ್ನೆಲ್ಲ ಇದೀಗ ಎಲ್‌ಇಡಿಗಳು ಬೆಳಗುತ್ತಿವೆ. ಇದಲ್ಲದೆ ಉತ್ಕೃಷ್ಟ.ಮಟ್ಟದ ಚಿತ್ರಗಳನ್ನೂ ಮೂಡಿಸುವ ಸಾಮಾರ್ಥ್ಯವನ್ನು ಗಳಿಸಿವೆ.
   ಎಲ್‌ಇಡಿ, ಲೈಟ್ ಎಮಿಟಿಂಗ್ ಡಯೋಡ್ ಪದ ಸಮೂಹದ ಚಿಕ್ಕ ಸ್ವರೂಪವಾಗಿದೆ. 'ಡಯೋಡ್' ಎಂಬ ಅರೆವಾಹಕ (ಸೆಮಿಕಂಡಕ್ಟರ್) ಸಾಧನದ ಮೂಲಕ ವಿದ್ಯುತ್ ಹರಿಸಿದಾಗ ಅದರೊಳಗೆ ಸಂಚರಿಸುವ ಇಲೆಕ್ಟ್ರಾನುಗಳು ಫೋಟಾನ್ ಎಂಬ ಕಣಗಳನ್ನು ಬಿಡುಗಡೆಮಾಡುತ್ತವೆ. ಬೆಳಕಿನ ಮೂಲ ಕಣಗಳೇ ಈ ಫೋಟಾನುಗಳು. ಬಹಳಷ್ಟು ಡಯೋಡುಗಳಿಂದ ಹೊರಸೂಸುವ ಬೆಳಕು ನಮ್ಮ ಕಣ್ಣಿಗೆ ಕಾಣಿಸುತ್ತವೆ. (ಉದಾ: ಇನ್‌ಫ್ರಾರೆಡ್, ಅಂದರೆ ಅತಿರಕ್ತ ಕಿರಣಗಳು) ಡಯೋಡುಗಳ ನಿರ್ಮಾಣದಲ್ಲಿ ನಿರ್ದಿಷ್ಟ ಅರೆವಾಹಕ ವಸ್ತುಗಳನ್ನು ಬಳಸುವ ಮೂಲಕ ನಮ್ಮ ಕಣ್ಣಿಗೆ ಕಾಣುವ ಬೆಳಕು ಹೊರಸೂಸುವಂತೆ ಮಾಡುವುದೂ ಸಾಧ್ಯ. ಎಲ್‌ಇಡಿಗಳು ಇದೇ ಪರಿಕಲ್ಪನೆಯನ್ನು ಬಳಸುತ್ತದೆ.
    ಟ್ರಾಫಿಕ್ ಸಂಕೇತಗಳಲ್ಲಿ, ಜಾಹೀರಾತು ಫಲಕಗಳಲ್ಲಿ, ಭಾರಿ ಪ್ರಮಾಣದ ಹೋರ್ಡಿಂಗ್ ಪ್ರದರ್ಶನ ಫಲಕಗಳಲ್ಲಿ, ಸಾರ್ವಜನಿಕ ವಾಹನಗಳಲ್ಲಿ, ಬಳಕೆಯಾಗುತ್ತಿರುವ ಈ ದೀಪಗಳು ಇದೀಗ ಬಲ್ಬುಗಳನ್ನು, ಟ್ಯೂಬ್‌ಲೈಟ್-ಸಿಎಫ್‌ಎಲ್ ಇತ್ಯಾದಿಗಳನ್ನು ಬದಲಾಯಿಸುವ ದಿಶೆಯಲ್ಲಿ ಕೆಲಸಮಾಡುತ್ತಿವೆ. ಟೀವಿ, ಕಂಪ್ಯೂಟರ್, ಟ್ಯಾಬ್ಲೆಟ್ ಹಾಗೂ ಮೊಬೈಲ್ ದೂರವಾಣಿ ಪರದೆಗಳನ್ನೂ ಎಲ್‌ಇಡಿಗಳು ಬೆಳಗುತ್ತಿವೆ.
    ಆಧುನಿಕ ಜೀವನದಲ್ಲಿ ಕುಡಿಯುವ ನೀರಿನ ಶುದ್ಧೀಕರಣ, ಮಾಹಿತಿ ಸಂವಹನ ಮುಂತಾದ ಕ್ಷೇತ್ರಗಳಲ್ಲೂ ಎಲ್‌ಇಡಿಗಳು ಬಳಕೆಯಾಗಲಿವೆ. ತೀಕ್ಷ್ಣವಾದ ಅಲ್ಟ್ರಾವಯೊಲೆಟ್ (ಯೂವಿ) ಬೆಳಕಿನ ಕಿರಣಗಳನ್ನು ಬಳಸಿ ಕುಡಿಯುವ ನೀರನ್ನು ಶುದ್ಧೀಕರಿಸುವ ಪ್ರಕ್ರಿಯೆ ಈಗ ಜಾರಿಯಲ್ಲಿದೆ. ಇದನ್ನೇ ಅಲ್ಟ್ರಾವಯೊಲೆಟ್ ಬೆಳಕನ್ನು ಪಡೆಯಲು ಹೆಚ್ಚು ವಿದ್ಯುತ್ ಬಳಸುವ ಹಾಗೂ ದುಬಾರಿಯಾದ ಯೂವಿ ದೀಪಗಳನ್ನು ಬಳಸಲಾಗುತ್ತದೆ. ಇಂತಹ ದೀಪಗಳ ಬದಲಿಗೆ ಎಲ್‌ಇಡಿಗಳನ್ನು ಬಳಸಿದರೆ ಬಹಳ ಕಡಿಮೆ ಖರ್ಚಿನಲ್ಲಿ ನೀರಿನ ಶುದ್ಧೀಕರಣ ಸಾಧ್ಯವೆನ್ನುವ ತಿಳುವಳಿಕೆಯನ್ನು ವಿಜ್ಞಾನಿಗಳು ಸಮರ್ಥಿಸುತ್ತಿದ್ದಾರೆ.
   ನಿಸ್ತಂತು (ವೈರ್‌ಲೆಸ್) ಮಾಹಿತಿ ಸಂವಹನದಲ್ಲಿ ರೇಡಿಯೋ ಅಲೆಗಳ ಬದಲಿಗೆ ಬೆಳಕಿನ ಕಿರಣಗಳನ್ನು ಬಳಸಿದರೆ ಕ್ಷಿಪ್ರ ಹಾಗೂ ಸುರಕ್ಷಿತ ಮಾಹಿತಿ ಸಂವಹನ ಸಾಧ್ಯವಾಗುತ್ತದೆ. ವಿಜ್ಞಾನಿಗಳು ಈಗ ಬಳಕೆಯಲ್ಲಿರುವ 'ವೈ-ಫೈ ತಂತ್ರಜ್ಞಾನ'ಕ್ಕೆ ಪರ್ಯಾಯವಾಗಿ ಬೆಳೆಯಬಲ್ಲ ಈ 'ಲೈ-ಫೈ', ಅಂದರೆ, 'ಲೈಟ್ ಎನೇಬಲ್ಡ್ ವೈ-ಫೈ'ಯಲ್ಲಿ 'ಎಲ್‌ಇಡಿ'ಗಳ ಬಳಕೆ ಸಾಧ್ಯವೆಂದು ಪ್ರಯೋಗಗಳಿಂದ ಸಿದ್ಧಪಡಿಸಿದ್ದಾರೆ.
    -ಹನುಮಂತ.ಮ.ದೇಶಕುಲಕರ್ಣಿ.
  ಸಾ.ಭೋಗೇನಾಗರಕೊಪ್ಪ-581196 
   ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397