ಚಂದ್ರನ ವ್ಯವಸ್ಥೆಗಳ ವಿಕಾಸಗಳು ಗುರುತ್ವಾಕರ್ಷಣೆಯ ಶಕ್ತಿಗಳಿಂದ ಪ್ರೇರಿತವಾಗಿವೆ.
ಚಂದ್ರನು ಪರಿಭ್ರಮಿಸುವ ಮುಖ್ಯಕಾಯದಲ್ಲಿ ಗುರುತ್ವಬಲದ ವಿರೂಪ ಉಂಟುಮಾಡುತ್ತದೆ. ಮುಖ್ಯಕಾಯದ ವ್ಯಾಸದಲ್ಲಿ ಗುರುತ್ವ ಬಲದ ವ್ಯತ್ಯಾಸವಿರುವ ಕಾರಣದಿಂದ ಹೀಗಾಗುತ್ತದೆ. ಚಂದ್ರನು ಗ್ರಹದ ಪರಿಭ್ರಮಣೆಯ ದಿಕ್ಕಿನಲ್ಲೇ ಸುತ್ತುತ್ತಿದ್ದರೆ ಮತ್ತು ಗ್ರಹವು ಚಂದ್ರನ ಪರಿಭ್ರಮಣ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಸುತ್ತುತ್ತಿದ್ದರೆ, ವಿರೂಪವು ಚಂದ್ರನನ್ನು ಸತತವಾಗಿ ಮುಂದಕ್ಕೆ ಎಳೆಯುತ್ತದೆ. ಈ ಪರಿಸ್ಥಿತಿಯಲ್ಲಿ, ಕೋನೀಯ ಆವೇಗವು ಮುಖ್ಯಕಾಯದ ಪರಿಭ್ರಮಣೆಯಿಂದ ಉಪಗ್ರಹದ ಪರಿಭ್ರಮಣೆಗೆ ವರ್ಗಾವಣೆಯಾಗುತ್ತದೆ.
ಚಂದ್ರನು ಶಕ್ತಿಯನ್ನು ಗಳಿಸಿಕೊಂಡು,ಕ್ರಮೇಣ ಹೊರಮುಖವಾಗಿ ಸುತ್ತುತ್ತದೆ ಹಾಗು ಮುಖ್ಯಕಾಯವು ಕಾಲಾಂತರದಲ್ಲಿ ಹೆಚ್ಚು ನಿಧಾನವಾಗಿ ಪರಿಭ್ರಮಿಸುತ್ತದೆ.ಈ ವಿನ್ಯಾಸದ ಒಂದು ಉದಾ:ಭೂಮಿ ಮತ್ತು ಚಂದ್ರ. ಇಂದು ಚಂದ್ರನು ಭೂಮಿಯತ್ತ ಒಂದೇ ಬದಿಯಲ್ಲಿ ಗುರುತ್ವಬಲದ ಕಾರಣದಿಂದ ಮುಖ ಮಾಡಿರುತ್ತದೆ (ಟೈಡಲಿ ಲಾಕ್ಡ್).ಭೂಮಿಯ ಸುತ್ತ ಅದರ ಒಂದು ಪರಿಭ್ರಮಣೆಯು (ಪ್ರಸಕ್ತ 29 ದಿನಗಳು) ಅದರ ಕಕ್ಷೆಯ ಸುತ್ತ ಒಂದು ಪರಿಭ್ರಮಣೆಗೆ ಸಮನಾಗಿರುತ್ತದೆ. ಆದ್ದರಿಂದ ಅದು ಭೂಮಿಗೆ ಸದಾ ತನ್ನ ಒಂದು ಬದಿಯ ಮುಖವನ್ನು ತೋರಿಸುತ್ತದೆ. ಚಂದ್ರನು ಭೂಮಿಯಿಂದ ಹಿಮ್ಮೆಟ್ಟುವುದನ್ನು ಮುಂದುವರಿಸುತ್ತದೆ. ಮತ್ತು ಭೂಮಿಯ ಪರಿಭ್ರಮಣೆಯು ಕ್ರಮೇಣ ನಿಧಾನವಾಗುತ್ತದೆ.
ಸುಮಾರು 50 ಶತಕೋಟಿ ವರ್ಷಗಳಲ್ಲಿ, ಸೂರ್ಯನ ವಿಸ್ತರಣೆಯಿಂದ ಉಳಿದುಕೊಂಡರೆ ಭೂಮಿ ಮತ್ತು ಚಂದ್ರ ಪರಸ್ಪರ ಒಂದೇ ಮುಖದಲ್ಲಿ ಬಂಧಿತವಾಗಿ ಪರಿಭ್ರಮಣ-ಕಕ್ಷೆ ಅನುರಣನದಲ್ಲಿ ಪ್ರತಿಯೊಂದು ಸಿಕ್ಕಿಬೀಳುತ್ತದೆ. ಇದರಲ್ಲಿ ಚಂದ್ರನು ಭೂಮಿಯನ್ನು 47 ದಿನಗಳಲ್ಲಿ ಸುತ್ತುತ್ತದೆ ಹಾಗೂ ಚಂದ್ರ ಮತ್ತು ಭೂಮಿ ಒಂದೇ ಕಾಲದಲ್ಲಿ ತಮ್ಮ ಕಕ್ಷೆಗಳಲ್ಲಿ ತಿರುಗುತ್ತವೆ. ಪ್ರತಿಯೊಂದು ಇನ್ನೊಂದರ ಅರೆಗೋಳದಿಂದ ಗೋಚರಿಸುತ್ತದೆ.
ಅದೇ ರೀತಿ ಗುರುವಿನ ಗೆಲಿಲಿಯನ್ ಚಂದ್ರರು (ಅದಲ್ಲದೇ ಗುರುವಿನ ಅನೇಕ ಸಣ್ಣ ಚಂದ್ರರು) ಹಾಗೂ ಶನಿಯ ಬಹುತೇಕ ದೊಡ್ಡ ಗಾತ್ರದ ಚಂದ್ರರು.ಮುಖ್ಯಕಾಯ ಕಕ್ಷೆಯ ಸುತ್ತ ಪರಿಭ್ರಮಿಸುವ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಚಂದ್ರನು ಮುಖ್ಯಕಾಯದ ಸುತ್ತ ತಿರುಗುತ್ತಿದ್ದರೆ ಅಥವಾ ಗ್ರಹದ ವಿರುದ್ಧ ದಿಕ್ಕಿನಲ್ಲಿ ತಿರುಗುತ್ತಿದ್ದರೆ ಭಿನ್ನ ಸನ್ನಿವೇಶ ಉಂಟಾಗುತ್ತಿತ್ತು.
ಇದರಲ್ಲಿ, ಗುರುತ್ವದ ವಿರೂಪವು ಚಂದ್ರನನ್ನು ಅದರ ಕಕ್ಷೆಯಲ್ಲಿ ನಿಧಾನಗತಿಯಲ್ಲಿ ತಿರುಗುವಂತೆ ಮಾಡುತ್ತದೆ. ಮುಂಚಿನ ಪ್ರಕರಣದಲ್ಲಿ, ಕೋನೀಯ ಆವೇಗ ವರ್ಗಾವಣೆಯು ಹಿಂದು ಮುಂದಾಗುತ್ತದೆ. ಆದ್ದರಿಂದ ಮುಖ್ಯಕಾಯದ ಕಕ್ಷೆಯ ಪರಿಭ್ರಮಣವು ವೇಗ ಪಡೆಯುತ್ತದೆ ಮತ್ತು ಉಪಗ್ರಹದ ಪರಿಭ್ರಮಣವು ಕ್ಷೀಣಿಸುತ್ತದೆ. ನಂತರದ ಪ್ರಕರಣದಲ್ಲಿ, ಕಕ್ಷೆಯ ಪರಿಭ್ರಮಣ ಮತ್ತು ಗ್ರಹದ ಸುತ್ತ ಪರಿಭ್ರಮಣದ ಕೋನೀಯ ಆವೇಗ ವಿರುದ್ಧ ಚಿಹ್ನೆಗಳಿಂದ ಕೂಡಿರುತ್ತದೆ. ಆದ್ದರಿಂದ ವರ್ಗಾವಣೆಯು ಪ್ರತಿಯೊಂದರ ಗಾತ್ರವನ್ನು ಕುಗ್ಗಿಸುತ್ತದೆ.
ಮೇಲಿನ ಎರಡಲ್ಲೂ ಗುರುತ್ವದ ದ್ವಿಗ್ವೇಗಪಾತವು ಚಂದ್ರನನ್ನು ಮುಖ್ಯ ಗ್ರಹದತ್ತ ಸುರುಳಿಯಾಗಿ ಸುತ್ತುವಂತೆ ಮಾಡುತ್ತದೆ. ನಂತರ ಗುರುತ್ವ ಸೆಳೆತದ ಒತ್ತಡಗಳಿಂದ ಚೂರಾಗುತ್ತದೆ ಹಾಗೂ ಗ್ರಹದ ಉಂಗುರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ/ ಗ್ರಹದ ಮೇಲ್ಮೈಗೆ ಅಥವಾ ವಾತಾವರಣಕ್ಕೆ ಘರ್ಷಿಸುತ್ತದೆ. ಇಂತಹ ಗತಿಯು ಮಂಗಳನ ಚಂದ್ರರ ಫೋಬಾಸ್‌ಗಳಿಗೆ(30ರಿಂದ 50ದಶಲಕ್ಷ ವರ್ಷಗಳಲ್ಲಿ),ನೆಪ್ಚೂನ್ ಟ್ರೈಟಾನ್‌ಗೆ ( 3.6 ಶತಕೋಟಿ ವರ್ಷಗಳಲ್ಲಿ),ಗುರುವಿನ ಮೆಟಿಸ್ ಮತ್ತು ಅಡ್ರಾಸ್ಟಿಯಕ್ಕೆ ಮತ್ತು ಯುರೇನಸ್ ಮತ್ತು ನೆಪ್ಚೂನ್‌ನ ಕನಿಷ್ಠ 16 ಸಣ್ಣ ಉಪಗ್ರಹ ಗಳಿಗೆ ಕಾದುಕೊಂಡಿದೆ. ಯುರೇನಸ್ ಡೆಸ್ಡೆಮೋನಾ ತನ್ನ ಒಂದು ನೆರೆಯ ಚಂದ್ರನ ಜತೆ ಡಿಕ್ಕಿಯನ್ನು ಕೂಡ ಹೊಡೆಯಬಹುದು.ಮೂರನೇ ಸಾಧ್ಯತೆಯು ಮುಖ್ಯಗ್ರಹ ಮತ್ತು ಚಂದ್ರ ಪರಸ್ಪರ ಟೈಡಲಿ ಲಾಕ್ಡ್(ಪರಸ್ಪರ ಒಂದೇ ಬದಿ ಮುಖ) ಆಗಿರುವುದು. ಆಗ ಗುರುತ್ವಬಲದ ವಿರೂಪ ನೇರವಾಗಿ ಚಂದ್ರನ ಕೆಳಗಿರುತ್ತದೆ.
2004ರಲ್ಲಿ ಕ್ಯಾಸಿನಿ ಹೈಜೆನ್ಸ್ ಬಾಹ್ಯಾಕಾಶ ನೌಕೆಯ ಆಗಮನಕ್ಕೆ ಮುಂಚಿತವಾಗಿ ಶನಿಯ ಉಂಗುರಗಳು ಸೌರವ್ಯೂಹಕ್ಕಿಂತ ಕಿರಿದಾಗಿದ್ದು, ಇನ್ನೂ 300 ದಶಲಕ್ಷ ವರ್ಷಗಳ ಕಾಲ ಉಳಿಯುವುದಿಲ್ಲವೆಂದು ನಿರೀಕ್ಷಿಸಲಾಗಿತ್ತು. ಶನಿಯ ಚಂದ್ರರ ಗುರುತ್ವ ಸಂಪರ್ಕಗಳು ಉಂಗುರಗಳ ಹೊರತುದಿಯನ್ನು ಕ್ರಮೇಣ ಗ್ರಹದತ್ತ ನೂಕುತ್ತದೆ. ಶನಿಯ ಗುರುತ್ವ ಮತ್ತು ಉಲ್ಕೆಗಳ ಉಜ್ಜುವಿಕೆಯಿಂದ ಶನಿ ಗ್ರಹವು ಸೌಂದರ್ಯ ಕಳೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿತ್ತು.ಆದಾಗ್ಯೂ, ಕ್ ಯಾಸಿನಿ ಯಾತ್ರೆಯ ಅಂಕಿ-ಅಂಶಗಳು ತಮ್ಮ ಮುಂಚಿನ ಅಭಿಪ್ರಾಯವನ್ನು ಪರಿಷ್ಕರಿಸಲು ದಾರಿ ಕಲ್ಪಿಸಿತು. ಸುಮಾರು 10 ಕಿಮೀ ಅಗಲದ ವಸ್ತುವಿನ ಹಿಮಪದರಗಳು ಮತ್ತೆ ಮತ್ತೆ ಒಡೆದುಹೋಗಿ ಪುನಃ ಕೂಡಿಕೊಂಡು, ಉಂಗುರಗಳನ್ನು ಹೊಸದಾಗಿ ಇಡುತ್ತದೆ.
ಇತರೆ ಅನಿಲ ದೈತ್ಯಗಳಿಗಿಂತ ಶನಿಯ ಉಂಗುರಗಳು ಹೆಚ್ಚು ಬೃಹದಾಕಾರ ವಾಗಿದೆ. ಈ ದೊಡ್ಡ ದ್ರವ್ಯರಾಶಿಯು ಶನಿಗ್ರಹವು 4.5ವರ್ಷಗಳ ಹಿಂದೆ ರೂಪುಗೊಂಡಾಗಿನಿಂದ ಅದರ ಉಂಗುರಗಳನ್ನು ರಕ್ಷಿಸಿರಬಹುದು ಹಾಗು ಶತಕೋಟಿ ವರ್ಷಗಳ ಕಾಲ ಅದನ್ನು ರಕ್ಷಿಸುವ ಸಂಭವವಿದೆ.
(ವಿವಿಧ ಮೂಲಗಳಿಂದ)
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397z
ಚಂದ್ರನು ಪರಿಭ್ರಮಿಸುವ ಮುಖ್ಯಕಾಯದಲ್ಲಿ ಗುರುತ್ವಬಲದ ವಿರೂಪ ಉಂಟುಮಾಡುತ್ತದೆ. ಮುಖ್ಯಕಾಯದ ವ್ಯಾಸದಲ್ಲಿ ಗುರುತ್ವ ಬಲದ ವ್ಯತ್ಯಾಸವಿರುವ ಕಾರಣದಿಂದ ಹೀಗಾಗುತ್ತದೆ. ಚಂದ್ರನು ಗ್ರಹದ ಪರಿಭ್ರಮಣೆಯ ದಿಕ್ಕಿನಲ್ಲೇ ಸುತ್ತುತ್ತಿದ್ದರೆ ಮತ್ತು ಗ್ರಹವು ಚಂದ್ರನ ಪರಿಭ್ರಮಣ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಸುತ್ತುತ್ತಿದ್ದರೆ, ವಿರೂಪವು ಚಂದ್ರನನ್ನು ಸತತವಾಗಿ ಮುಂದಕ್ಕೆ ಎಳೆಯುತ್ತದೆ. ಈ ಪರಿಸ್ಥಿತಿಯಲ್ಲಿ, ಕೋನೀಯ ಆವೇಗವು ಮುಖ್ಯಕಾಯದ ಪರಿಭ್ರಮಣೆಯಿಂದ ಉಪಗ್ರಹದ ಪರಿಭ್ರಮಣೆಗೆ ವರ್ಗಾವಣೆಯಾಗುತ್ತದೆ.
ಚಂದ್ರನು ಶಕ್ತಿಯನ್ನು ಗಳಿಸಿಕೊಂಡು,ಕ್ರಮೇಣ ಹೊರಮುಖವಾಗಿ ಸುತ್ತುತ್ತದೆ ಹಾಗು ಮುಖ್ಯಕಾಯವು ಕಾಲಾಂತರದಲ್ಲಿ ಹೆಚ್ಚು ನಿಧಾನವಾಗಿ ಪರಿಭ್ರಮಿಸುತ್ತದೆ.ಈ ವಿನ್ಯಾಸದ ಒಂದು ಉದಾ:ಭೂಮಿ ಮತ್ತು ಚಂದ್ರ. ಇಂದು ಚಂದ್ರನು ಭೂಮಿಯತ್ತ ಒಂದೇ ಬದಿಯಲ್ಲಿ ಗುರುತ್ವಬಲದ ಕಾರಣದಿಂದ ಮುಖ ಮಾಡಿರುತ್ತದೆ (ಟೈಡಲಿ ಲಾಕ್ಡ್).ಭೂಮಿಯ ಸುತ್ತ ಅದರ ಒಂದು ಪರಿಭ್ರಮಣೆಯು (ಪ್ರಸಕ್ತ 29 ದಿನಗಳು) ಅದರ ಕಕ್ಷೆಯ ಸುತ್ತ ಒಂದು ಪರಿಭ್ರಮಣೆಗೆ ಸಮನಾಗಿರುತ್ತದೆ. ಆದ್ದರಿಂದ ಅದು ಭೂಮಿಗೆ ಸದಾ ತನ್ನ ಒಂದು ಬದಿಯ ಮುಖವನ್ನು ತೋರಿಸುತ್ತದೆ. ಚಂದ್ರನು ಭೂಮಿಯಿಂದ ಹಿಮ್ಮೆಟ್ಟುವುದನ್ನು ಮುಂದುವರಿಸುತ್ತದೆ. ಮತ್ತು ಭೂಮಿಯ ಪರಿಭ್ರಮಣೆಯು ಕ್ರಮೇಣ ನಿಧಾನವಾಗುತ್ತದೆ.
ಸುಮಾರು 50 ಶತಕೋಟಿ ವರ್ಷಗಳಲ್ಲಿ, ಸೂರ್ಯನ ವಿಸ್ತರಣೆಯಿಂದ ಉಳಿದುಕೊಂಡರೆ ಭೂಮಿ ಮತ್ತು ಚಂದ್ರ ಪರಸ್ಪರ ಒಂದೇ ಮುಖದಲ್ಲಿ ಬಂಧಿತವಾಗಿ ಪರಿಭ್ರಮಣ-ಕಕ್ಷೆ ಅನುರಣನದಲ್ಲಿ ಪ್ರತಿಯೊಂದು ಸಿಕ್ಕಿಬೀಳುತ್ತದೆ. ಇದರಲ್ಲಿ ಚಂದ್ರನು ಭೂಮಿಯನ್ನು 47 ದಿನಗಳಲ್ಲಿ ಸುತ್ತುತ್ತದೆ ಹಾಗೂ ಚಂದ್ರ ಮತ್ತು ಭೂಮಿ ಒಂದೇ ಕಾಲದಲ್ಲಿ ತಮ್ಮ ಕಕ್ಷೆಗಳಲ್ಲಿ ತಿರುಗುತ್ತವೆ. ಪ್ರತಿಯೊಂದು ಇನ್ನೊಂದರ ಅರೆಗೋಳದಿಂದ ಗೋಚರಿಸುತ್ತದೆ.
ಅದೇ ರೀತಿ ಗುರುವಿನ ಗೆಲಿಲಿಯನ್ ಚಂದ್ರರು (ಅದಲ್ಲದೇ ಗುರುವಿನ ಅನೇಕ ಸಣ್ಣ ಚಂದ್ರರು) ಹಾಗೂ ಶನಿಯ ಬಹುತೇಕ ದೊಡ್ಡ ಗಾತ್ರದ ಚಂದ್ರರು.ಮುಖ್ಯಕಾಯ ಕಕ್ಷೆಯ ಸುತ್ತ ಪರಿಭ್ರಮಿಸುವ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಚಂದ್ರನು ಮುಖ್ಯಕಾಯದ ಸುತ್ತ ತಿರುಗುತ್ತಿದ್ದರೆ ಅಥವಾ ಗ್ರಹದ ವಿರುದ್ಧ ದಿಕ್ಕಿನಲ್ಲಿ ತಿರುಗುತ್ತಿದ್ದರೆ ಭಿನ್ನ ಸನ್ನಿವೇಶ ಉಂಟಾಗುತ್ತಿತ್ತು.
ಇದರಲ್ಲಿ, ಗುರುತ್ವದ ವಿರೂಪವು ಚಂದ್ರನನ್ನು ಅದರ ಕಕ್ಷೆಯಲ್ಲಿ ನಿಧಾನಗತಿಯಲ್ಲಿ ತಿರುಗುವಂತೆ ಮಾಡುತ್ತದೆ. ಮುಂಚಿನ ಪ್ರಕರಣದಲ್ಲಿ, ಕೋನೀಯ ಆವೇಗ ವರ್ಗಾವಣೆಯು ಹಿಂದು ಮುಂದಾಗುತ್ತದೆ. ಆದ್ದರಿಂದ ಮುಖ್ಯಕಾಯದ ಕಕ್ಷೆಯ ಪರಿಭ್ರಮಣವು ವೇಗ ಪಡೆಯುತ್ತದೆ ಮತ್ತು ಉಪಗ್ರಹದ ಪರಿಭ್ರಮಣವು ಕ್ಷೀಣಿಸುತ್ತದೆ. ನಂತರದ ಪ್ರಕರಣದಲ್ಲಿ, ಕಕ್ಷೆಯ ಪರಿಭ್ರಮಣ ಮತ್ತು ಗ್ರಹದ ಸುತ್ತ ಪರಿಭ್ರಮಣದ ಕೋನೀಯ ಆವೇಗ ವಿರುದ್ಧ ಚಿಹ್ನೆಗಳಿಂದ ಕೂಡಿರುತ್ತದೆ. ಆದ್ದರಿಂದ ವರ್ಗಾವಣೆಯು ಪ್ರತಿಯೊಂದರ ಗಾತ್ರವನ್ನು ಕುಗ್ಗಿಸುತ್ತದೆ.
ಮೇಲಿನ ಎರಡಲ್ಲೂ ಗುರುತ್ವದ ದ್ವಿಗ್ವೇಗಪಾತವು ಚಂದ್ರನನ್ನು ಮುಖ್ಯ ಗ್ರಹದತ್ತ ಸುರುಳಿಯಾಗಿ ಸುತ್ತುವಂತೆ ಮಾಡುತ್ತದೆ. ನಂತರ ಗುರುತ್ವ ಸೆಳೆತದ ಒತ್ತಡಗಳಿಂದ ಚೂರಾಗುತ್ತದೆ ಹಾಗೂ ಗ್ರಹದ ಉಂಗುರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ/ ಗ್ರಹದ ಮೇಲ್ಮೈಗೆ ಅಥವಾ ವಾತಾವರಣಕ್ಕೆ ಘರ್ಷಿಸುತ್ತದೆ. ಇಂತಹ ಗತಿಯು ಮಂಗಳನ ಚಂದ್ರರ ಫೋಬಾಸ್‌ಗಳಿಗೆ(30ರಿಂದ 50ದಶಲಕ್ಷ ವರ್ಷಗಳಲ್ಲಿ),ನೆಪ್ಚೂನ್ ಟ್ರೈಟಾನ್‌ಗೆ ( 3.6 ಶತಕೋಟಿ ವರ್ಷಗಳಲ್ಲಿ),ಗುರುವಿನ ಮೆಟಿಸ್ ಮತ್ತು ಅಡ್ರಾಸ್ಟಿಯಕ್ಕೆ ಮತ್ತು ಯುರೇನಸ್ ಮತ್ತು ನೆಪ್ಚೂನ್‌ನ ಕನಿಷ್ಠ 16 ಸಣ್ಣ ಉಪಗ್ರಹ ಗಳಿಗೆ ಕಾದುಕೊಂಡಿದೆ. ಯುರೇನಸ್ ಡೆಸ್ಡೆಮೋನಾ ತನ್ನ ಒಂದು ನೆರೆಯ ಚಂದ್ರನ ಜತೆ ಡಿಕ್ಕಿಯನ್ನು ಕೂಡ ಹೊಡೆಯಬಹುದು.ಮೂರನೇ ಸಾಧ್ಯತೆಯು ಮುಖ್ಯಗ್ರಹ ಮತ್ತು ಚಂದ್ರ ಪರಸ್ಪರ ಟೈಡಲಿ ಲಾಕ್ಡ್(ಪರಸ್ಪರ ಒಂದೇ ಬದಿ ಮುಖ) ಆಗಿರುವುದು. ಆಗ ಗುರುತ್ವಬಲದ ವಿರೂಪ ನೇರವಾಗಿ ಚಂದ್ರನ ಕೆಳಗಿರುತ್ತದೆ.
2004ರಲ್ಲಿ ಕ್ಯಾಸಿನಿ ಹೈಜೆನ್ಸ್ ಬಾಹ್ಯಾಕಾಶ ನೌಕೆಯ ಆಗಮನಕ್ಕೆ ಮುಂಚಿತವಾಗಿ ಶನಿಯ ಉಂಗುರಗಳು ಸೌರವ್ಯೂಹಕ್ಕಿಂತ ಕಿರಿದಾಗಿದ್ದು, ಇನ್ನೂ 300 ದಶಲಕ್ಷ ವರ್ಷಗಳ ಕಾಲ ಉಳಿಯುವುದಿಲ್ಲವೆಂದು ನಿರೀಕ್ಷಿಸಲಾಗಿತ್ತು. ಶನಿಯ ಚಂದ್ರರ ಗುರುತ್ವ ಸಂಪರ್ಕಗಳು ಉಂಗುರಗಳ ಹೊರತುದಿಯನ್ನು ಕ್ರಮೇಣ ಗ್ರಹದತ್ತ ನೂಕುತ್ತದೆ. ಶನಿಯ ಗುರುತ್ವ ಮತ್ತು ಉಲ್ಕೆಗಳ ಉಜ್ಜುವಿಕೆಯಿಂದ ಶನಿ ಗ್ರಹವು ಸೌಂದರ್ಯ ಕಳೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿತ್ತು.ಆದಾಗ್ಯೂ, ಕ್
ಇತರೆ ಅನಿಲ ದೈತ್ಯಗಳಿಗಿಂತ ಶನಿಯ ಉಂಗುರಗಳು ಹೆಚ್ಚು ಬೃಹದಾಕಾರ ವಾಗಿದೆ. ಈ ದೊಡ್ಡ ದ್ರವ್ಯರಾಶಿಯು ಶನಿಗ್ರಹವು 4.5ವರ್ಷಗಳ ಹಿಂದೆ ರೂಪುಗೊಂಡಾಗಿನಿಂದ ಅದರ ಉಂಗುರಗಳನ್ನು ರಕ್ಷಿಸಿರಬಹುದು ಹಾಗು ಶತಕೋಟಿ ವರ್ಷಗಳ ಕಾಲ ಅದನ್ನು ರಕ್ಷಿಸುವ ಸಂಭವವಿದೆ.
(ವಿವಿಧ ಮೂಲಗಳಿಂದ)
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397z
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ