ಭೂಮಿಯ ವಾತಾವರಣ, ಭೂಮಿಯ ಮೇಲ್ಮೈ ಮತ್ತು ಬಾಹ್ಯಾಕಾಶಗಳ ನಡುವೆ ನಡೆಯುವ ಶಕ್ತಿ ವಿನಿಮಯಗಳ ಯೋಜಿತ ನಿರೂಪಣೆ.ಭೂ ಮೇಲ್ಮೈ ಹೊರಸೂಸಿದ ಶಕ್ತಿಯನ್ನು ಹಿಡಿದಿಡುವ ಮತ್ತು ಮರುಬಳಸುವ ವಾತಾವರಣದ ಸಾಮರ್ಥ್ಯವು ಹಸಿರುಮನೆ ಪರಿಣಾಮದ ಗುಣಲಕ್ಷಣಗಳನ್ನು ವಿವರಿಸುತ್ತದೆ.
ಅವಗೆಂಪು ವಿಕಿರಣಗಳನ್ನು ಹೀರಿಕೊಳ್ಳುವ ಮತ್ತು ಅದನ್ನು ಹೊರಹಾಕುವ ವಿವಿಧ ಅನಿಲಗಳು ವಾತಾವರಣವೊಂದರಲ್ಲಿ ಸಂಗ್ರಹವಾಗುವ ಕಾರಣದಿಂದ ಗ್ರಹ ಅಥವಾ ಉಪಗ್ರಹವೊಂದರ ಮೇಲ್ಮೈ ಬಿಸಿಯಾಗುವುದನ್ನು ಹಸಿರುಮನೆ ಪರಿಣಾಮ ಎಂದು ಕರೆಯುತ್ತಾರೆ.
ಈ ರೀತಿಯಾಗಿ ಹಸಿರುಮನೆ ಅನಿಲಗಳು ಬಿಸಿಯನ್ನು ಮೇಲ್ಮೈ-ವಾಯುಮಂಡಲ ವ್ಯವಸ್ಥೆಯೊಳಗಡೆ ಬಂಧಿಸಿಡುತ್ತವೆ. ಈ ಕಾರ್ಯವಿಧಾನವು ವಾಸ್ತವಿಕ ಹಸಿರು ಮನೆಯೊಂದರದ್ದಕ್ಕಿಂತ ಮೂಲಭೂತವಾಗಿ ಭಿನ್ನವಾಗಿದ್ದು, ಅದು ಬಿಸಿ ಗಾಳಿಯನ್ನು ವ್ಯವಸ್ಥೆಯನ್ನು ಒಳಗೇ ಪ್ರತ್ಯೇಕಿಸುವ ಮೂಲಕ ಕಾರ್ಯ ನಿರ್ವಹಿಸುವುದರಿಂದ, ತಾಪವು ನಷ್ಟವಾಗುವುದಿಲ್ಲ. ಹಸಿರುಮನೆ ಪರಿಣಾಮದ ಪರಿಕಲ್ಪನೆಯನ್ನು ಮೊದಲು 1824ರಲ್ಲಿ ಜೋಸೆಫ್ ಫೂರಿಯರ್ ಆವಿಷ್ಕರಿಸಿರು; ಜಾನ್ ಟಿಂಡಾಲ್ 1858ರಲ್ಲಿ ಇದರ ಕುರಿತು ಮತ್ತಷ್ಟು ಖಾತರಿಯಾದ ಪ್ರಯೋಗವನ್ನು ನಡೆಸಿದರು; ನಂತರ ಸ್ವಾಂಟೆ ಅರ್ರೇನಿಯಸ್ ಎಂಬ ವಿಜ್ಞಾನಿ 1896ರಲ್ಲಿ ಇದರ ಕುರಿತು ಪರಿಮಾಣಾತ್ಮಕವಾಗಿ ವರದಿ ಮಾಡಿದರು.
ಭೂಮಿಯ ಮೇಲ್ಮೈಯಲ್ಲಿ ಹಸಿರುಮನೆ ಪರಿಣಾಮ ಮತ್ತು ವಾತಾವರಣ ಇಲ್ಲವಾದರೆ, 14 °C (57 °F) ಇರುವ ಭೂಮಿಯ ಸರಾಸರಿ ಮೇಲ್ಮೈ ತಾಪಮಾನವು ಭೂಮಿಯ ಕೃಷ್ಣಕಾಯ ತಾಪಮಾನ ಎಂದು ಹೇಳಲಾಗುವ -18 °C (−0.4 °F)ನಷ್ಟು ಅತಿ ಕಡಿಮೆ ಮಟ್ಟದವರೆಗೂ ಇಳಿಯಬಹುದು.
ಭೂಮಿಯ ಮೇಲ್ಮೈ ಮತ್ತು ಕೆಳ ವಾತಾವರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಉಂಟಾಗುತ್ತಿರುವ ಕಾವೇರುವಿಕೆಯಾದ ಮಾನವಜನ್ಯ ಜಾಗತಿಕ ತಾಪಮಾನ ಏರಿಕೆಯು ಹೆಚ್ಚಳಗೊಂಡಿರುವ ಹಸಿರುಮನೆ ಪರಿಣಾಮ"ದಿಂದ ಉಂಟಾಗಿದೆ ಎಂದು ನಂಬಲಾಗಿದ್ದು, ಇದಕ್ಕೆ ವಾತಾವರಣದ ಹಸಿರುಮನೆ ಅನಿಲಗಳಲ್ಲಿನ ಮಾನವನಿರ್ಮಿತ ಏರಿಕೆಯೇ ಪ್ರಮುಖ ಕಾರಣವಾಗಿದೆ.
ಭೂಮಿಯ ಶಕ್ತಿಯ ಮೂಲ ಸೂರ್ಯ. ಈ ಶಕ್ತಿಯ ಬಹುತೇಕ ಭಾಗ ಕಣ್ಣಿಗೆ ಕಾಣುವ ಬೆಳಕಿನ ರೂಪದಲ್ಲಿ ಮತ್ತು ಹತ್ತಿರದ ತರಂಗಾಂತರಗಳ ರೂಪದಲ್ಲಿ ಭೂಮಿಗೆ ದೊರೆಯುತ್ತದೆ. ಸೂರ್ಯನ ಶಕ್ತಿಯ ಸುಮಾರು 50%ರಷ್ಟು ಭಾಗವನ್ನು ಭೂಮಿಯ ಮೇಲ್ಮೈ ಹೀರಿಕೊಳ್ಳುತ್ತದೆ. ಸಂಪೂರ್ಣ ಶೂನ್ಯಕ್ಕಿಂತ ಜಾಸ್ತಿಯಿರುವ ವಾತಾವರಣ ಹೊಂದಿರುವ ಎಲ್ಲ ಕಾಯಗಳಂತೆ ಭೂಮಿಯ ಮೇಲ್ಮೈ ಕೂಡಾ ಶಕ್ತಿಯನ್ನು ಅವಗೆಂಪು ಶ್ರೇಣಿಯಲ್ಲಿ ಹೊರಸೂಸುತ್ತದೆ. ಮೇಲ್ಮೈ ಹೊರಸೂಸಿದ ಬಹುತೇಕ ಅವಗೆಂಪು ವಿಕಿರಣವನ್ನು ವಾತಾವರಣದಲ್ಲಿರುವ ಹಸಿರುಮನೆ ಅನಿಲಗಳು ಹೀರಿಕೊಳ್ಳುತ್ತವೆ ಮತ್ತು ಹೀಗೆ ಹೀರಿಕೊಂಡ ಶಾಖವನ್ನು ಅಣುಗಳ ಸಂಘರ್ಷಣೆಯ ಮೂಲಕ ವಾಯುಮಂಡಲದ ಇತರೆ ಅನಿಲಗಳಿಗೂ ಸಾಗಿಸುತ್ತವೆ. ಹಸಿರುಮನೆ ಅನಿಲಗಳು ಅವಗೆಂಪು ಶ್ರೇಣಿಯಲ್ಲೂ ವಿಕಿರಣವನ್ನು ಹೊರಸೂಸುತ್ತವೆ. ವಿಕಿರಣವು ಮೇಲ್ಮುಖ ಮತ್ತು ಕೆಳಮುಖ ದಿಕ್ಕುಗಳೆರಡರ ಕಡೆಗೂ ಹೊರಹೊಮ್ಮಿ, ಒಂದಷ್ಟು ಭಾಗ ಬಾಹ್ಯಾಕಾಶದ ಕಡೆಗೆ ಮತ್ತಷ್ಟು ಭಾಗ ಭೂಮಿಯ ಮೇಲ್ಮೈ ಕಡೆಗೆ ಚಲಿಸುತ್ತದೆ. ಈ ರೀತಿ ಕೆಳಮುಖವಾಗಿ ಸೂಸಲ್ಪಟ್ಟ ಶಕ್ತಿಯ ಒಂದಷ್ಟು ಭಾಗದಿಂದ ಮೈಲ್ಮೈ ಮತ್ತು ಕೆಳ ವಾಯುಮಂಡಲ ಬಿಸಿಯಾಗುತ್ತವೆ.
ನೀರಿನ ಆವಿ ,ಇಂಗಾಲದ ಡೈ ಆಕ್ಸೈಡ್, ಮೀಥೇನ್ನೈಟ್ರಸ್ ಆಕ್ಸೈಡ್,ಓಝೋನ್ ಕ್ಲೋರೋಫೋರೋಕಾರ್ಬನ್,ಕ್ಲೋರೋ ಫೋರೋ ಸಂಯುಕ್ತಗಳು. ಅನಿಲಗಳು ಹಸಿರುಮನೆ ಪರಿಣಾಮಕ್ಕೆ ಇವುಗಳ ಕೊಡುಗೆಯನ್ನು ಆಧರಿಸಿ ನೈಜ ವಾತಾವರಣ ನಿರ್ಧರಿಸಲ್ಪಡುತ್ತದೆ:
(ವಿವಿಧ ಮೂಲಗಳಿಂದ)
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ