ಲೇಸರ್ ನ ವಿಸ್ತೃತಅ ರೂಪ ಲೈಟ್ ಬೈ ಸ್ಟಿಮುಲೇಟೆಡ್ ಎಮಿಶನ್ ಆಫ್ ರೇಡಿಯೇಶನ್. ವಿಕಿರಣ ಚೋದಿತ ಉತ್ಸಜ೯ನೆಯಿಂದ ಬೆಳೆಕಿನ ವಧ೯ನೆ ಎಂಬುದನ್ನು ಸೂಚಿಸುತ್ತದೆ.
ಲೇಸರ್ ಎಂಬುದು ಸರಿಸುಮಾರು ಏಕವಣಿ೯ಯ ಬೆಳಕಿನ ಅತಿ ತೀವ್ರ ಕಿರಣ ಪುಂಜವನ್ನು ಉತ್ಪಾದಿಸುವ ಸಾಧನ. ಲೇಸರ್ ಬೆಳಕು ಹರಡಿಕೊಳ್ಳದೆ ಬಹಳ ದೂರ ಚಲಿಸಬಲ್ಲದು. ಲೇಸರ್ ಬೆಳಕನ್ನು ಕೇಂದ್ರೀಕರಿಸಿ ಅಗಾಧ ಶಕ್ತಿ ಸಾಂದ್ರತೆಯನ್ನು ಪಡೆಯಬಹುದು. ಶಕ್ತಿ ಸಾಂದ್ರತೆಯ ಪ್ರಮಾಣ 108 ವಾಟ್ / ಸೆಂ.ಮೀ 2 ಆಗಿರುತ್ತದೆ. ಶಕ್ತಿಸಾಂದ್ರತೆಯೆಂದರೆ ಏಕಮಾನ ವಿಸ್ತೀಣ೯ ಅದ ಮೇಲೆ ಒಂದು ಸೆಕೆಂಡಿನಲ್ಲಿ ಅಪಾತವಾಗುವ ಶಕ್ತಿ.ಹೆಚ್ಚಿನ ಶಕ್ತಿಯ ಕಕ್ಷೆಯಿಂದ E2 ಕಡಿಮೆ ಶಕ್ತಿಯ ಕಕ್ಷೆಗೆ E1 ಒಂದು ಇಲೆಕ್ಟ್ರಾನ್ ಜಿಗಿದಾಗ ಒಂದು ಫೋಟಾನ್ ಉತ್ಸಜಿ೯ತವಾಗುತ್ತದೆ. ಈ ಫೋಟಾನಿನ ಶಕ್ತಿಯು E2 - E1= hv ಗೆ ಸಮವಿರುತ್ತದೆ. ಇಲ್ಲಿ v ಎಂಬುದು ಉತ್ಸಜ೯ನೆ ಫೋಟಾನಿನ ಆವೃತ್ತಿ. ಈ ಕ್ರಿಯೆಯು ಸ್ವಪ್ರೇರಿತವಾಗಿ ನಡೆಯುವುದರಿಂದ ಇದನ್ನು ಸ್ವಯಂ ಉತ್ಸಜ೯ನೆ ಎನ್ನುತ್ತೇವೆ.ಯುಕ್ತ ಪ್ರಮಾಣದ ಶಕ್ತಿಯುಳ್ಳ ಒಂದು ಫೋಟಾನ್ ಒಂದು ಪರಮಾಣುವಿನ ಮೇಲೆ ಬಿದ್ದಾಗ, ಅದು ಸಂಪೂಣ೯ ಹೀರಲ್ಪಟ್ಟು ಪರಮಾಣುವಿನ ಒಂದು ಇಲೆಕ್ತ್ರಾನ್ ಕಡಿಮೆ ಶಕ್ತಿ ಸ್ಥಿತಿಯಿಂದ ಹೆಚ್ಚು ಶಕ್ತಿ ಸ್ಥಿತಿಗೆ ಏರುತ್ತದೆ. ಈ ಪ್ರಕ್ರಿಯೆಗೆ ಉದ್ರೇಚನೆ ಎಂದು ಹೆಸರು.ಯುಕ್ತ ಪ್ರಮಾಣದ ಶಕ್ತಿಯುಳ್ಳ ಒಂದು ಫೋಟಾನ್ ಒಂದು ಪರಮಾಣುವಿನ ಮೇಲೆ ಬಿದ್ದಾಗ, ಅದು ಸಂಪೂಣ೯ವಾಗಿ ಹೀರಲ್ಪಟ್ಟು ಪರಮಾಣುವಿನ ಒಂದು ಇಲೆಕ್ಟ್ರಾನ್ ಕಡಿಮೆ ಶಕ್ತಿ ಸ್ಥಿತಿಗೆ ಏರುತ್ತದೆ.ಒಂದು ವ್ಯವಸ್ಥೆಯಲ್ಲಿನ ಬಹುತೇಕ ಪರಮಾಣುಗಳು ಸಾಮಾನ್ಯವಾಗಿ ಅತ್ಯಲ್ಪ ಶಕ್ತಿ ಸ್ಥಿತಿಯಲ್ಲಿರುತ್ತವೆ. ದ್ಯುತಿ ಪ್ರವಧ೯ನೆ ಉಂಟಾಗಬೇಕಾದರೆ ಹೆಚ್ಚು ಪರಮಾಣುಗಳನ್ನು ಅಧಿಕಶಕ್ತಿ ಸ್ಥಿತಿಗೆ ಏರಿಸಬೇಕಾದುದು ಅಗತ್ಯ. ಪರಮಾಣುಗಳನ್ನು ಕಡಿಮೆ ಶಕ್ತಿ ಸ್ಥಿತಿಯಿಂದ ಅಧಿಕ ಶಕ್ತಿ ಸ್ಥಿತಿಗೆ ಏರಿಸುವ ಪ್ರಕ್ರಿಯೆಯನ್ನು ಸಂದಣಿ ವಿಲೋಮನೆ ಎಂದು ಕರೆಯುತ್ತಾರೆ. ಬಾಹ್ಯ ಮೂಲಗಳಿಂದ ಶಕ್ತಿಯನ್ನು ಒದಗಿಸಿ ಸಂದಣಿ ವಿಲೋಮವನ್ನು ಸಾಧಿಸಲಾಗುತ್ತದೆ. ಸಂದಣಿ ವಿಲೋಮನವನ್ನು ಸಾಧಿಸಲು ಬಾಹ್ಯ ಮೂಲಗಳಿಂದ ಶಕ್ತಿಯನ್ನು ಒದಗಿಸುವ ಪ್ರಕ್ರಿಯೆಯನ್ನು ಅಪ್ಟಿಕಲ್ ಅಥವಾ ದ್ಯುತಿ ಪ್ರೇಷಣೆ ಎನ್ನುತ್ತಾರೆ
ಶತ್ರುವಿನ ಗುರಿ ನಿಖರವಾಗಿ ತಲುಪಬಲ್ಲ ಸಾಮರ್ಥ್ಯವನ್ನೊಳಗೊಂಡ ದೇಶದ ಪ್ರಥಮ ಲೇಸರ್ ನಿಯಂತ್ರಿತ ಬಾಂಬ್ (ಎಲ್‌ಜಿಬಿ)ನ್ನು ಭಾರತ ಅಭಿವೃದ್ಧಿಪಡಿಸಿದೆ. ಬೆಂಗಳೂರಿನ ಎಡಿಇ ಸಂಸ್ಥೆ, ಎಲ್‌ಜಿಬಿಯ ಮಾರ್ಗದರ್ಶಿ ಕಿಟ್ ಅಭಿವೃದ್ಧಿಪಡಿಸಿದ್ದು,ಭಾರತೀಯ ವಾಯುಪಡೆಗೆ ಸೇರಿಕೊಳ್ಳುವ ಸಕಲ ಸಾಮರ್ಥ್ಯವನ್ನು ಈ ಎಲ್‌ಜಿಬಿಗೆ ನೀಡುವಲ್ಲಿ ಯಶಸ್ವಿಯಾಗಿದೆ. ಡೆಹ್ರಾಡೂನ್ ನಗರದ ಸಾಧನ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆ (ಐಆರ್‌ಡಿಇ)ಯ ತಾಂತ್ರಿಕ ಬೆಂಬಲದೊಂದಿಗೆ ಈ ಸಾಧನೆಗೆ ಮುನ್ನುಡಿ ಬರೆಯಲಾಗಿದೆ.
ರಕ್ಷಣಾ ವಲಯದಲ್ಲಿ ನಡೆಸುವ ಸಂಶೋಧನೆಯಲ್ಲಿ ಸ್ವಯಂ ಅವಲಂಬನೆ ಸಾಧಿಸುವ ನಿಟ್ಟಿನಲ್ಲಿ ಐಆರ್‌ಡಿಇ(IRDE) ಹಾಗೂ ಡಿಆರ್‌ಡಿಒ(DRDO) ಪ್ರಯೋಗಾಲಯದಲ್ಲಿ ಈ ಆವಿಷ್ಕಾರ ನಡೆಸಿರುವುದಾಗಿ ಐಆರ್ ಡಿಇನ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ವಿಜ್ಞಾನಿ ತಿಳಿಸಿದ್ದಾರೆ. ನಿರ್ದಿಷ್ಟ ಗುರಿಯನ್ನು ಸುಲಲಿತವಾಗಿ ತಲುಪಲು ಈ ಎಲ್‌ಜಿಬಿ ಸಾಮರ್ಥ್ಯ ಹೊಂದಿದೆ.
ಲೇಸರ್ ಬೆಳಕಿನ ಪ್ರತಿಬಿಂಬದಿಂದ ಗುರಿ ತಲುಪುದು ಸುಲಭವಾಗುವುದಲ್ಲದೆ, ಇದರಿಂದಾಗಿ ಸೂಕ್ತ ಸಂದೇಶಗಳು ಪ್ರಯೋಗಾಲಯಕ್ಕೆ ಲಭ್ಯವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಲೇಸರ್ ನಿಯಂತ್ರಿತ ಮೊದಲ ಬಾಂಬನ್ನು ಅಮೆರಿಕ 1960ರಲ್ಲಿ ತಯಾರಿಸುವಲ್ಲಿ ಯಶಸ್ವಿಯಾಗಿತ್ತು. ಇದಾದ ನಂತರ ರಷ್ಯಾ, ಫ್ರಾನ್ಸ್ ಹಾಗೂ ಬ್ರಿಟನ್ ರಾಷ್ಟ್ರಗಳು ಲೇಸರ್ ಬಾಂಬ್‌ಗೆ ಜೀವ ನೀಡಿದ್ದವು.
ಶಸ್ತ್ರಚಿಕಿತ್ಸೆಯಲ್ಲಿ ಲೇಸರ್ ಕಿರಣಗಳು ಯಂತ್ರದಲ್ಲಿರುವ ದ್ರವದ ಮೂಲಕ ಹಾದು ಕಣ್ಣು ತಲುಪುವುದರಿಂದ ನಿಖರತೆ ಹೆಚ್ಚಾಗಿರುತ್ತದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗುವುದು ಗುಣಮಟ್ಟದ ಲೆನ್ಸ್ ಬಳಸಿ ದೃಷ್ಟಿಯಲ್ಲಿ ಉತ್ತಮವಾದಾಗ ಮಾತ್ರ. ‘ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಪಡುವವರಿಗೆ ಮಲ್ಟಿಫೋಕಲ್ ಲೆನ್ಸ್‌ಗಳು ಸದ್ಯ ಲಭ್ಯವಿರುವ ಅತಿ ಹೆಚ್ಚು ಸ್ಪಷ್ಟತೆ ಹಾಗೂ ನಿಖರತೆ ಹೊಂದಿರುವ ಲೆನ್ಸ್‌ಗಳು. ಇವುಗಳ ಬಳಕೆಯಿಂದ ಬಾಲ್ಯದಲ್ಲಿನ ದೃಷ್ಟಿಯಂತೆಯೇ ದೂರ ಹಾಗೂ ಸಮೀಪದ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಹುದಾಗಿದೆ’.
ಈ ದಿನಗಳಲ್ಲಿ ಲಾಸಿಕ್ ಲೇಸರ್ ಚಿಕಿತ್ಸೆಯಲ್ಲಿ ಹೊಸ ಆವಿಷ್ಕಾರವೆಂದರೆ ವೇವ್ ಫ್ರೆಂಟ್ ತಂತ್ರ ಜ್ನಾನ. ಈ ನೂತನ ವೇವ್ ಫ್ರೆಂಟ್ ತಂತ್ರಜ್ನಾನ ಉಪಯೋಗಿಸಿ ಕೇವಲ ಸಾಮಾನ್ಯ ದೃಷ್ಟಿ ದೋಷವಿಲ್ಲದೆ ಕನ್ನಡಕದಿಂದ ಸರಿಪಡಿಸಲಾಗದ ಇನ್ನಿತರ ಸಣ್ಣ ದೃಷ್ಟಿ ದೋಷಗಳನ್ನು ಪತ್ತೆ ಹಚ್ಚಿ ಅದಕ್ಕೆ ಹೀಗಾಗಿ ಪ್ರತಿಯೊಬ್ಬ ಕನ್ನಡಕ ಧರಿಸುವ ವ್ಯಕ್ತಿಗೂ ಕನ್ನಡಕ ಅಥವಾ ಕಾಂಟ್ಯಾಕ್ಟ್‌ಲೆನ್ಸ್ ಇಲ್ಲದೆ ಸ್ಪಷ್ಟ ದೃಷ್ಟಿ ಪಡೆಯುವ ಅವಕಾಶವಿದೆ.
( ವಿವಿಧ ಮೂಲಗಳಿಂದ)
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ