ರಾಧೇಯನ ಏಕಮಾತ್ರ ಗುರಿ ಧನುರ್ವಿದ್ಯೆಯ ಸಂಪಾದನೆಯಾಗಿತ್ತು. ಹಸ್ತಿನಾಪುರದಲ್ಲಿ ರಾಜಕುಮಾರರೆಲ್ಲರೂ ದ್ರೋಣನಿಂದ ಕಲಿಯುತ್ತಿರುವ ವಿದ್ಯೆಯ ಪ್ರಖ್ಯಾತಿಯನ್ನು ಅವನು ಕೇಳಿದ್ದ. ಅಲ್ಲಿಗೆ ಹೋಗಿ ದ್ರೋಣನನ್ನು ಕಂಡು, `` ಆಚಾರ್ಯ, ದಯವಿಟ್ಟು ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿ. ನಾನು ನಿಮ್ಮಿಂದ ಧನುರ್ವಿದ್ಯೆಯನ್ನು ಕಲಿಯಬೇಕೆಂದಿರುವೆನು'' ಎಂದು ಬೇಡಿಕೊಡನು. ದ್ರೋಣನು ನೀನು ಯಾರು ಎಂದು ಪರಿಚಯವನ್ನು ಕೇಳಲು, ರಾಧೇಯನು ನಾನು ಅಧಿರಥನೆಂಬ ಸೂತನ ಮಗ, ರಾಧೇಯ ಎಂದನು. ಸೂತನನ್ನು ಶಿಷ್ಯನನ್ನಾಗಿ ತೆಗೆದುಕೊಳ್ಳಕು ದ್ರೋಣ ಮನಸ್ಸು ಒಪ್ಪಲಿಲ್ಲ. `` ನೀನು ಸೂತಪುತ್ರನೆಂದು ಹೇಳುತ್ತಿರುವೆ. ನಾನು ಕೆಳಜಾತಿಯವರಿಗೆ ವಿದ್ಯೆ ಕಲಿಸುವುದಿಲ್ಲ " ಎನ್ನಲು, ರಾಧೇಯನು ಹಿಂದಿರುಗಬೇಕಾಯಿತು. ರಾಧೇಯ ಮನೆಯ ಕಡೆ ನಡೆದ. ಸೂತಪುತ್ರನೆಂಬ ಹೆಸರು ಅವನಿಗೆ ಜೀವನದ ಉದ್ದಕ್ಕೂ ಅಂಟಿಕೊಂಡೇ ಬಂದಿತ್ತು. ಇದರಿಂದಾಗಿ ಅವನು ಅನುಭವಿಸಿದ ಮಾನಸಿಕ ಯಾತನೆ ಅಷ್ಟಿಷ್ಟಲ್ಲ. ರಾತ್ರಿ ಹಗಲು ಅವನಿಗೆ ಅದೇ ಯೋಚನೆ--ಧನುರ್ವಿದ್ಯೆಯನ್ನು ಸಂಪಾದಿಸುವುದು ಹೇಗೆ ಎಂದು. ಸೂತಪುತ್ರನಾಗಿರುವುದರಿಂದ ಯಾವ ಗುರುವಾದರೂ ದ್ರೋಣನಂತೆಯೇ ಹೇಳಬಹುದು. ರಾಧೇಯನಿಗೆ ನಿರಾಸೆಯಾಯಿತು.
ಕೊನೆಗೊಮ್ಮೆ ಭಾರ್ಗವನಲ್ಲಿಗೆ ಹೋಗಿ ಬೇಡುವುದೆಂದು ನಿರ್ಧರಿಸಿದ. ಭಾರ್ಗವನು ಕ್ಷತ್ರಿಯರ ವೈರಿ. ಅವನೆಂತಹ ಶೀಘ್ರಕೋಪಿ ಎಂಬುದೂ ಗೊತ್ತು. ಏನು ಮಾಡುವುದು? ಸೂತ ಎಂದರೆ ಕ್ಷತ್ರಿಯ-ಬ್ರಾಹ್ಮಣ ಸಂಯೋಗದಿಂದ ಹುಟ್ಟಿದವನಾದ್ದರಿಂದ, ತಾನು ಬ್ರಾಹ್ಮಣನೆಂದು ಹೇಳಿಕೊಳ್ಳುವುದು ಎಂದುಕೊಂಡ. ಹಾಗೆ ಮಾಡಿದರೆ, ಭಾರ್ಗವನು ತನ್ನನ್ನು ಶಿಷ್ಯನೆಂದು ಸ್ವೀಕರಿಸುವುದು ಖಂಡಿತ. ಹಾಗೇ ಮಾಡುವೆನು ಎಂದು ನಿರ್ಧರಿಸಿ, ರಾಧೇಯನು ಭಾರ್ಗವನ ಆಶ್ರಮಕ್ಕೆ ಬಂದ. ಹೃದಯದಲ್ಲಿ ಆಸೆಯು ಉರಿಯುತ್ತಿರಲು, ಜಡೆಕಟ್ಟಿದ ಕೂದಲಿನ, ಕೆಂಗಣ್ಣಿನ, ಭಯಂಕರ ರೂಪದ ಋಷಿಯನ್ನು ಕಂಡು ಪಾದಾಕ್ರಾಂತನಾದ. `` ಸ್ವಾಮೀ, ನಾನು ತುಂಬ ಆಸೆ ಭರವಸೆಗಳನಿಟ್ಟುಕೊಂಡು ನಿಮ್ಮಲ್ಲಿಗೆ ಬಂದಿದ್ದೆನೇ. ನನ್ನನ್ನು ಬರಿಗೈಯಲ್ಲಿ ಕಳುಹಿಸಬೇಡಿ'' ಎಂದು ಕಂಬನಿದುಂಬಿ ಬೇಡಿಕೊಂಡ. ಋಷಿಯು ಅವನನ್ನು ಹಿಡಿದೆತ್ತಿದಾಗ ರಾಧೇಯನು ಭಯದಿಂದಲೂ ವಿಚಿತ್ರವಾದ ಉನ್ಮತ್ತತೆಯಿಂದಲೂ ನಡುಗುತ್ತಿದ್ದ. ಎಳೆಯನ ವಿನಯವು ಭಾರ್ಗವನ ಮನವನ್ನು ಗೆದ್ದಿತು. `ರಾಧೇಯನು ತಾನು ಬ್ರಾಹ್ಮಣನೆಂದೂ, ಧನುರ್ವಿದ್ಯೆ ಕಲಿಯಲು ಬಂದಿರುವೆನು ಎಂದು ಬಿನ್ನವಿಸಿಕೊಂಡ. ಭಾರ್ಗವನು ನಕ್ಕು, `` ಆಗಲಿ ನನಗೆ ತಿಳಿದಿರುವುದೆಲ್ಲವನ್ನೂ ಸಂತೋಷದಿಂದ ಹೇಳಿಕೊಡುತ್ತೇನೆ'' ಎಂದ.
ರಾಧೇಯನ ಕಲಿಕೆ ಆರಂಭವಾಯಿತು. ಭಾರ್ಗವನ ಆಶ್ರಮದಲ್ಲಿ ಅನೇಕ ತಿಂಗಳುಗಳು, ವರ್ಷಗಳೂ ಸುಖವಾಗಿ ಉರುಳಿದವು. ತಾನು ಸೂತಪುತ್ರನೆಂಬ ಕಾರಣಕ್ಕಾಗಿ ಅನುಭವಿಸಿದ ಅಪಮಾನಗಳು, ಅವುಗಳಿಂದಾಗಿ ಬಂದಿದ್ದ ಕೀಳರಿಮೆ, ರಾಧೇಯನಿಗೆ ಮರೆತೇಹೊಗಿತ್ತು. ತನ್ನ ಜನ್ಮರಹಸ್ಯ, ಆ ವಿಚಾರವಾಗಿ ತನಗೆ ಬೀಳುತ್ತಿದ್ದ ಆ ಯಾವುದೋ ಹೆಂಗಸಿನ ಕನಸು ಎಲ್ಲವನ್ನು ಮರೆತ. ಕನಸುಗಳು ಈಗ ಅಪರೂಪವಾಗಿದ್ದವು, ರಾಧೇಯನಿಗೆ ಇಗ ಬೇಕಾಗಿದ್ದುದ್ದು ಒಂದೇ: ಅದು ಧನುರ್ವಿದ್ಯೆ. ವಿದ್ಯೆ ಎಂದರೆ ಬಲ; ವಿದ್ಯೆ ಎಂದರೆ ಕೀರ್ತಿ; ವಿದ್ಯೆ ಎಂದರೆ ಮನ್ನಣೆ. ಮಾನವರ ಪ್ರಪಂಚದಲ್ಲಿ ಪಡೆಯಲು ಯೋಗ್ಯವಾದುದೆಂದರೆ ವಿದ್ಯೆಯೊಂದೇ. ರಾಧೇಯ ಆನಂದಿಸುತ್ತಿದ್ದ ಶಾಂತಿ ತೃಪ್ತಿಗಳ ಬದುಕು ಸಾಕೆಂದು ವಿಧಿಗೆ ಅನಿಸಿರಬೇಕು. ವಿಧಿಯು ನಿಜಕ್ಕೂ ಬಹು ಭಯಂಕರ ಹಠಮಾರಿ ಹೆಣ್ಣು. ಆಕೆಯದು ವಿಕ್ಷಿಪ್ತ ಹಾಸ್ಯ ಪ್ರಜ್ಞೆ ತನ್ನ ಕೈಗೆ ಸಿಕ್ಕಿಬಿದ್ದವರು ಯಾತನೆಯಿಂದ ಅಳುತ್ತಿದ್ದರೆ ಮಾತ್ರ ಅವಳಿಗೆ ಸಂತೋಷ. ರಾಧೇಯನ ವಿಚಾರದಲ್ಲಿಯೂ ಹೀಗೆಯೇ ಆಯಿತು. ಅವನ ಈಗ ಮುಕ್ತಾಯದ ಹಂತಕ್ಕೆ ಬಂದಿತ್ತು. ಭಗವಾನ್ ಭಾರ್ಗವನು ಅವನಿಗೆ ಮಹಾ ಶಕ್ತಿಶಾಲಿಯಾದ ಭಾರ್ಗವಾಸ್ತ್ರವನ್ನೂ ಏಕೆ, ಬ್ರಹ್ಮಾಸ್ತ್ರವನ್ನೂ, ಸಹ ಕಲಿಸಿಕೊಟ್ಟಿದ್ದ. ರಾಧೇಯನು ಭಾರ್ಗವಾಶ್ರಮವನ್ನು ಬಿಡುವ ಕಾಲ ಹತ್ತಿರ ಬಂದಿದ್ದಿತು.
ಭಾರ್ಗವನು ಅವನಿಗೆ ಕೊನೆಯ ಉಪದೇಶವನ್ನು ಕೊಡುತ್ತಿದ್ದ: `` ಪ್ರಿಯ ಶಿಷ್ಯ, ಇಷ್ಟ ದಿನಗಳನ್ನು ನಾನು ಆನಂದದಿಂದ ಕಳೆದೆ. ನಿನಗೆ ಧನುರ್ವಿದ್ಯೆಯನ್ನು ಹೇಳಿಕೊಡುವುದು ನನಗೊಂದು ಸಂತೋಷದ ಸಂಗತಿಯಾಗಿದ್ದಿತು. ನನ್ನಲ್ಲಿದ್ದ ಜ್ಞಾನವೆಲ್ಲವನ್ನೂ ನಿನಗೆ ಧಾರೆಯೆರೆದಿದ್ದನೆ. ನಿನ್ನಂತಹ ಶಿಷ್ಯ ಸಿಕ್ಕಿದ್ದು ನನಗೆ ಹೆಮ್ಮೆಯ ಸಂಗತಿ ಎನಿಸಿದೆ. ನೀನು ಪ್ರಾಮಾಣಿಕ, ಗುರುಹಿರಿಯರಲ್ಲಿ ಗೌರವವುಳ್ಳವನು; ಯಾವಗಲು ಋಜುಮಾರ್ಗದಲ್ಲಿಯೇ ನಡೆಯಬಯಸುವವನು. ಈಗ ಗಳಿಸಿಕೊಡಿರುವ ವಿದ್ಯೆಯನ್ನು ನೀನು ಧರ್ಮವನ್ನು ಎತ್ತಿ ಹಿಡಿಯುವುದಕ್ಕಾಗಿ ಮಾತ್ರ ಬಳಸಬೇಕು. ಅಧರ್ಮವೆನಿಸಬಹುದಾದ ಕಾರಣಗಳಿಗಾಗಿ ಅದನ್ನು ಎಂದಿಗೂ ಬಳಸಬೇಡ.
ಮಧ್ಯಹ್ನದ ಸೂರ್ಯ ನೆತ್ತಿಯ ಮೆಲೇ ಪ್ರಕಾಶಿಸುತ್ತಿದ್ದ. ಸೆಖೆ ಅಸಾಧ್ಯವಾಗಿದ್ದಿತು. ಭಗವಾನ್ ಭಾರ್ಗವನು ಮರದ ನೆರಳಿನಲ್ಲಿ ಸ್ವಲ್ಪ ವಿಶ್ರಮಿಸಿಕೊಳ್ಳಬಯಸಿದ. ``ರಾಧೇಯ, ಹೋಗಿ ಆಶ್ರಮದಿಂದ ಜಿಂಕೆ ಚರ್ಮದ ಸುರುಳಿಯನ್ನು ತಂದುಕೊಡು. ಅದರ ಮೇಲೆ ತಲೆ ಇಟ್ಟು ಸ್ವಲ್ಪ ಮಲಗಿಕೊಳ್ಳುತ್ತೇನೆ. ನನಗೆ ಆಯಾಸವಾಗಿದೆ.'' ``ಗುರುವರ್ಯ, ನಾನಿಲ್ಲವೆ? ನನ್ನ ತೊಡೆಯ ಮೇಲೆ ತಲೆಯಿಟ್ಟು ವಿಶ್ರಮಿಸಿರಿ. ನಾನು ನಿಮಗೆ ನಿದ್ರಾಭಂಗವಾಗದಂತೆ ಅಲುಗಾಡದೆ ಕುಳಿತುಕೊಂಡಿರುತ್ತೇನೆ. ಗುರುವಿಗಾಗಿ ಇಷ್ಟು ಸ್ವಲ್ಪ ಸೇವೆಯನ್ನು ನಾನು ಮಾಡಲಾರೆನೆ?'' ಎಂದನು ರಾಧೇಯ. ಅವನ ಭಕ್ತಿಯನ್ನು ನೋಡಿ ಭಾರ್ಗವನಿಗೆ ಮೆಚ್ಚಿಕೆಯಾಯಿತು. ಹಾಗೆಯೇ ಮರದ ನೆರಳಿನಲ್ಲಿ ಶಿಷ್ಯನ ತೊಡೆಯ ಮೇಲೆ ತಲೆಯಿಟ್ಟು ಮಲಗಿದನು, ರಾಧೇಯನ ಮನಸ್ಸಿನಲ್ಲಿ ಗುರುವು ಹೇಳಿದ ಮಾತುಗಳೇ ಓಡತೊಡಗಿದವು. ಗುರು ತನ್ನನ್ನು ಪ್ರಾಮಾಣಿಕ ಎಂದರು. ತಾನು ಪ್ರಾಮಾಣಿಕನೆ?ಬಹುಶಃ ಅಲ್ಲ. ಬ್ರಾಹ್ಮಣನಲ್ಲದ ತಾನು ಬ್ರಾಹ್ಮಣನೆಂದು ಹೇಳಿಕೊಂಡಿರುವೆ. ವಿದ್ಯಾಭ್ಯಾಸಕ್ಕಾಗಿ ಹಪಹಪಿಸುತ್ತಿದ್ದ ತನ್ನ ಜೀವದ ತೃಪ್ತಿಗಾಗಿ ಹಾಗೆ ಮಾಡುವುದೊಂದೇ ದಾರಿಯಾಗಿತ್ತು. ಪರಿಣಾಮ ಒಳ್ಳೆಯದಾದರೆ ಕಾರಣವೂ ಒಳ್ಳೆಯದೇ ಎಂದು ತಿಳಿದವರು ಹೇಳುವರು. ವಿದ್ಯೆ ಪಡೆದುಕೊಳ್ಳುವುದು ಅವನ ಗುರಿಯಾಗಿತ್ತು; ಅದಕ್ಕಾಗಿ ತಾನು ಸುಳ್ಳು ಹೇಳಬೇಕಾಯಿತು. ಯಾವುದೋ ಪಾಪಕಾರ್ಯವನ್ನು ಸಾಧಿಸಿಕೊಳ್ಳುವುದಕ್ಕಾಗಿ ಸುಳ್ಳು ಹೇಳಿದರೆ ಅದು ಪಾಪ; ತಾನು ಯಾವ ಪಾಪವನ್ನೂ ಮಾಡುತ್ತಿಲ್ಲ. ಆದ್ದರಿಂದ ತಾನು ಹೇಳಿದ ಅನೃತವು ಕ್ಷಮಾರ್ಹ. ಇಂತಹ ಅನೇಕಾನೇಕ ಯೋಚನೆಗಳು ಅವನ ಮನಸ್ಸಿನಲ್ಲಿ ಹಾದು ಹೋಗುತ್ತಿದ್ದವು.
ಕೆಲ ಕಾಲ ಕಳೆಯಿತು. ಇದ್ದಕ್ಕಿದ್ದಂತೆ ರಾಧೇಯನ ತೊಡೆಯನ್ನು ಯಾವುದೋ ಕೀಟ ಕಡಿಯಲಾರಂಬಿಸಿತು. ನೋವು ಅಸಹನೀಯವಾಯಿತು. ಗುರುವಿನ ನಿದ್ರೆಗೆ ತೊಂದರೆಯಾಗದಂತೆ, ಏನು ಕಡಿಯುತ್ತಿದೆ ಎಂದು ನಿಧಾನವಾಗಿ ಬಗ್ಗಿ ನೋಡಿದನು. ನೋಡಿದರೆ ಅದೊಂದು ಭೀಕರ ಕೀಟ. ಹಂದಿಯಂತೆ ಚೂಪಾದ ಮುಖವುಳ್ಳ ಅದಕ್ಕೆ ಚೂಪಾದ ದಾಡೆಗಳು. ಉಕ್ಕಿನಂತೆ ಗಟ್ಟಿಯಾದ ಆ ದಾಡೆಗಳಲ್ಲಿ ಅನೇಕಾನೇಕ ಚೂಪಾದ ಹಲ್ಲು ಸಾಲುಗಳು. ರಾಧೇಯನಿಗೆ ಉಕ್ಕಿನ ಗರಗಸದಿಂದ ತನ್ನ ತೊಡೆಯನ್ನು ಯಾರೋ ಕೊರೆಯುತ್ತಿರುವಂತೆ ಅನಿಸಿತು.ಅವನಿಗೆ ಆ ಕೀಟವನ್ನು ತೆಗೆದು ಹಾಕಲು ಆಗಲಿಲ್ಲ. ಅದು ಕೊರೆಯುತ್ತಲೇ ಇದ್ದಿತು. ನೋವೋ ಅಸಾಧ್ಯ. ಮಾಡುವುದೇನು? ಗುರು ತೊಡೆಯಮೇಲೆ ತಲೆಯಿಟ್ಟು ಮಲಗಿದ್ದಾರೆ; ಅವರ ನಿದ್ರೆಗೆ ಭಂಗ ತರುವುದು ಸರಿಯಲ್ಲ. ಭಯಂಕರವಾದ ನೋವನ್ನು ಅನುಭವಿಸುತ್ತ ರಾಧೇಯನು ಸ್ವಲ್ಪವೂ ಅಲುಗಾಡದೆ ಕುಳಿತ. ಕೊರೆತ ಮುಂದುವರೆದಂತೆ ರಾಧೇಯನ ತೊಡೆಯಿಂದ ರಕ್ತವು ಧಾರೆದಾರೆಯಾಗಿ ಹರಿಯಲಾರಂಭಿಸಿತು. ಬೆಚ್ಚನೆಯ ರಕ್ತವು ಕೆನ್ನೆಗೆ ಹತ್ತಲು, ಭಾರ್ಗವನಿಗೆ ಎಚ್ಚರವಾಯಿತು.
ಅವನು ರಾಧೇಯನನು ನೋಡಿ ``ನನ್ನ ಮುಖದ ಮೇಲೆ ರಕ್ತ! ಎಲ್ಲಿಂದ ಬಂದಿತು ಇದು?'' ಎಂದು ವಿಚಾರಿಸಿದ. ರಾಧೇಯನು, ``ಗುರುಗಳೆ, ಅದು ನನ್ನ ತೊಡೆಯಿಂದಲೇ ಬಂದುದು. ನಿವು ನಿದ್ರಿಸುತ್ತಿದ್ದಾಗ ಕೀಟವೊಂದು ನನ್ನ ತೊಡೆಯನ್ನು ಕೊರೆಯಲಾರಂಭಿಸಿತು. ಆ ಗಾಯದಿಂದಲೇ ರಕ್ತ ಬರುತ್ತಿರುವುದು'' ಎಂದನು . ಋಷಿಯು ರಾಧೇಯನ ರಕ್ತವನ್ನು ಕುಡಿದು ಮತ್ತವಾದ ಆ ಕೀಟವನ್ನು ನೋಡಿದನು. ಅವನಿಗೆ ಅಚ್ಚರಿಯಾಯಿತು. ``ಅಯ್ಯಾ, ಈ ಕೀಟವು ಇಷ್ಟು ಹೊತ್ತು ಕಡಿಯುತ್ತಿದ್ದರೂ ನೋವನ್ನು ಸಹಿಸಿಕೊಂಡಿದ್ದೆಯಾ? ತಕ್ಷಣ ಮೇಲೇಳಲಿಲ್ಲವೇಕೆ?'' ``ಗುರುವೆ, ನೀವು ನನ್ನ ತೊಡೆಯ ಮೇಲೆ ನಿದ್ರಿಸುತ್ತಿದ್ದಿರಿ. ನಿಮಗೆ ಆಯಾಸವಾಗಿದ್ದಿತು. ವಿಶ್ರಮಿಸಿಕೊಳ್ಳುತ್ತಿದ್ದಿರಿ. ನಾನು ನನ್ನ ನೋವಿಗಿಂತ ನಿಮ್ಮ ನಿದ್ರೆ ಭಂಗವಾಗದಿರಲಿ ಎಂದು ಯೋಚಿಸಿದೆ; ನೋವಿಗೆ ಹೆಚ್ಚು ಗಮನ ಕೊಡಲಿಲ್ಲ.'' ಭಾರ್ಗವನಿಗೆ ತನ್ನ ಕಿವಿಗಳನ್ನು ತಾನೇ ನಂಬಲಾಗಲಿಲ್ಲ. ``ಇದು ಹೇಗೆಂಬುದೇ ನನಗೆ ಅರ್ಥವಾಗುತ್ತಿಲ್ಲ. ಬ್ರಾಹ್ಮಣನಾದ ನೀನು ಇಷ್ಟು ನೋವನ್ನು ಹೇಗೆತಾನೆ ಸಹಿಸಿಕೊಂಡೆ?ಬ್ರಾಹ್ಮಣರು ನೋವನ್ನಾಗಲಿ ರಕ್ತ ಕಣ್ಣೆದುರಿಗೆ ಹರಿಯುವುದನ್ನಾಗಲಿ ತಡೆದು ಕೊಳ್ಳಲಾರರು ಎಂಬುದು ಗೊತ್ತೇ ಇದೆ. ನಿಜ ಹೇಳು! ನೀನು ಬ್ರಾಹ್ಮಣನಲ್ಲ. ನಿನು ಬ್ರಾಹ್ಮಣನಾಗಿರುವುದು ಸಾಧ್ಯವೇ ಇಲ್ಲ. ಕ್ಷತ್ರಿಯನಾದವನು ಮಾತ್ರವೇ ನೀನು ಈಗ ಮಾಡಿರುವುದನ್ನು ಮಾಡಲು ಸಾಧ್ಯ . ಇಷ್ಟೆಲ್ಲ ವರ್ಷಗಳು ನಾನು ನನ್ನ ಅಮೂಲ್ಯವಾದ ವಿದ್ಯೆಯನ್ನು ಒಬ್ಬ ಪಾಪಿ ಕ್ಷತ್ರಿಯನಿಗೆ ಧಾರೆಯೆರೆದೆನೆ? ನನಗೆ ಕ್ಷತ್ರಿಯರನ್ನು ಕಂಡರಾಗದು. ನಾನು ಈ ನಿನ್ನ ಮೋಸವನ್ನು ಕ್ಷಮಿಸಲಾರೆ. ನೀನು ಕ್ಷತ್ರಿಯ ತಾನೆ? ನಿಜವನ್ನೊಪ್ಪಿಕೋ!'' ಎಂದು ಗರ್ಜಿಸಿದನು.
ರಾಧೇಯನು ಗುರುವಿನ ಪಾದಗಳ ಮೇಲೆ ಬಿದ್ದು ಹೊರಳಾಡತೊಡಗಿದನು. ಅವನ ಕಣ್ಣೇರು ಧಾರೆಧಾರೆಯಾಗಿ ಹರಿಯುತ್ತಿತ್ತು. ಅಯ್ಯೋ, ಎಷ್ಟೆಲ್ಲ ಕಷ್ಟಪಟ್ಟು ಕಲಿತಿದ್ದೆಲ್ಲವೊ ವ್ಯರ್ಥವಾಯಿತೆ? ಎಂಬ ಯೋಚನೆಯಿಂದ ಅವನ ಹೃದಯ ಜರ್ಜರಿತವಾಯಿತು. ಭಾರ್ಗವನ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ರೋದಿಸುತ್ತ,``ಆಚಾರ್ಯ, ದಯವಿಟ್ಟು ನನ್ನನ್ನು ಕ್ಷಮಿಸಿ. ನಿವು ನನ್ನ ತಂದೆಗಿಂತಲೂ ಹೆಚ್ಚು. ಮಗನು ಮಾಡಿದ ತಪ್ಪನ್ನು ತಂದೆ ಕ್ಷಮಿಸಬೇಕು. ನಾನು ಬ್ರಾಹ್ಮಣನಲ್ಲ ಕ್ಷತ್ರಿಯನೂ ಅಲ್ಲ. ನಾನು ಸೂತಪುತ್ರ, ನನ್ನ ತಂದೆ ಅಧಿರಥ. ಸೂತನೊಬ್ಬನು ಹುಟ್ಟುವುದು ಬ್ರಾಹ್ಮಣ ಕ್ಷತ್ರಿಯರ ಸಂಯೋಗದಿಂದ. ಆದ್ದರಿಂದಲೇ ನಾನು ಬ್ರಾಹ್ಮಣನೆಂದು ಹೇಳಿಕೊಡೆ. ನನಗೆ ಬೇಕಾಗಿದ್ದುದು ವಿದ್ಯೆಯೊಂದೇ. ವಿದ್ಯೆಗೆ ಜಾತಿ, ಕುಲಗಳ ಕಟ್ಟು ಇಲ್ಲವೆಂದು ತಿಳಿದವರು ಹೇಳುವರು. ಮಹಾತ್ಮರಾದ ನೀವು ನನ್ನ ಈ ತಪ್ಪನ್ನು ಕ್ಷಮಿಸಬೆಕು, ನಿಮಗೆ ನಾನು ಸುಳ್ಳು ಹೇಳಿದೆ, ನಿಜ, ಆದರ ಅದು ಕೇವಲ ನಿಮ್ಮ ಶಿಷ್ಯನಾಗುವುದಕ್ಕಾಗಿ. ನಿಮಗೆ ನಾನು ವಿಧೇಯನಾಗಿರುವೆ. ನಿಮಗಿಂತ ಪ್ರಿಯರಾದವರು ನನಗೆ ಈ ಪ್ರಪಂಚದಲ್ಲಿ ಇನ್ನು ಯಾರೂ ಇಲ್ಲ. ಬೆಡಿಕೊಳ್ಳುತ್ತಿದ್ದೇನೆ, ಕೃಪೆಮಾಡಿ ನನ್ನನ್ನು ಕ್ಷಮಿಸಿರಿ'' ಎಂದನು. ಭಾರ್ಗವನ ಸಿಟ್ಟು ತಣಿಯಲಿಲ್ಲ. ರಾಧೆಯನ ಭಕ್ತಿಯಾಗಲಿ ಋಷಿಯಾದ ನಾನು ಕ್ರೋಧ ವಶನಾಗಬಾರದೆಂಬುದಾಗಲಿ ಅವನ ಮನಸ್ಸಿಗೆ ಬರಲಿಲ್ಲ. ರಾಧೇಯನು ಕೀಟಬಾಧೆಯನ್ನು ಸಹಿಸಿದ್ದು ತನ್ನ ಮೇಲಣ ಪ್ರೀತಿಯಿಂದ ಮಾತ್ರವೇ ಎಂಬುದನ್ನೂ ಮರೆತ. ಅವನು ಸುಳ್ಳು ಹೇಳಿದನೆಂಬುದೊಂದೇ ಮುಖ್ಯವಾಯಿತು. ``ನೀನು ಸುಳ್ಳು ಹೇಳಿ ಧನುರ್ವಿದ್ಯೆಯನ್ನು ಕಲಿತಿರುವೆ. ಮುಂದೆ ನಿನ್ನ ಪ್ರಾಣಾಂತಿಕ ಸಮಯದಲ್ಲಿ ಅಗತ್ಯವಾದ ಅಸ್ತ್ರವು ನಿನಗೆ ನೆನಪಾಗದೇ ಹೋಗಲಿ!'' ಎಂದು ಶಾಪ ಕೊಟ್ಟೇಬಿಟ್ಟನು. ರಾಧೇಯನು ಅವನ ಪಾದಗಳ ಮೇಲೆ ಪ್ರಜ್ಞೆ ತಪ್ಪಿ ಬಿದ್ದನು. ಎಚ್ಚೆತ್ತು ವಿಧವಿಧವಾಗಿ ಬೇಡಿಕೊಂಡನು. ಆದರೂ ಭಾರ್ಗವನಿಗೆ ಕರುಣೆ ಬರಲಿಲ್ಲ. ಬ್ರಾಹ್ಮಣನ ಮಾತು ಹೊರಬಿದ್ದ ಮೇಲೆ ಮುಗಿದೇ ಹೋಯಿತು: ಅದಕ್ಕೆ ಉಪಸಂಹಾರವಿಲ್ಲ.
ಸ್ವಲ್ಪ ಶಾಂತನಾದ ಮೇಲೆ ಭಾರ್ಗವನು ``ನೀನು ಖ್ಯಾತಿಯನ್ನು ಬಯಸಿದೆ. ಅದು ನಿನಗೆ ಸಿಕ್ಕುತ್ತದೆ. ಈ ಭೂಮಿಯ ಮೇಲೆ ನಡೆದಾಡಿದ ಉತ್ತಮೋತ್ತಮ ಧನುರ್ಧಾರಿಯೆಂದು ಜನರು ನಿನ್ನನ್ನು ಸ್ಮರಿಸುತ್ತಾರೆ'' ಎಂದು ಹೇಳಿ ಋಷಿಯು ಅಲ್ಲಿಂದ ಹೊರಟುಹೋದನು. ದುಃಖಿತನಾದ ರಾಧೇಯನು ಮೇಲೆದ್ದು ಹೊರಟನು. ಎಲ್ಲಿಗೆ ಹೋಗಗೇಕೆಂಬುದನ್ನು ಅರಿಯದೆ ನಡೆದೇ ನಡೆದನು.
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ