ಗುರುವಾರ, ಏಪ್ರಿಲ್ 30, 2015

ಶಾಸ್ತ್ರೀ ದೇಶದ ಆಸ್ತೀರಿ....

ಸ್ವಾಭಿಮಾನಿ, ದೇಶಾಭಿಮಾನಿ
ಪ್ರಾಮಾಣಿಕ ಜೀವಿ "ಶಾಸ್ತ್ರೀಜಿ
ಹಸಿದುಣ್ಣದೆ,ತ್ಯಾಗವ ಮೆರೆದ
ಮಾಡಿರಿ ಸೆಲ್ಯೂಟ್ ಬಹದ್ದೂರಜಿಗೆ       ಅಂಗಿಯ ಹರಿದರೂ...ಕೋಟಿನಿಂದ ಮುಚ್ಚಿ       ದೇಶದ ದಾರಿದ್ರ್ಯವ ಹೋಗಲಾಡಿಸಲು

     ಸ್ವತಃ  ತಪಗೈದರು ಮನಬಿಚ್ಚಿ
     ತಿಳಿ ಹೇಳಿದರು ಪರದೇಶ ನಡುಗಿಸಲು
 ಆಧುನಿಕ ಹರಿಶ್ಚಂದ್ರರೆನಿಸಿದರು
ಪ್ರಜೆಗಳ ಮನದಲಿ ನೆಲೆಸಿದರು  ರೈತರನ್ನು-ಸೈನಿಕರನ್ನು ಹುರಿದುಂಬಿಸಿದರು
  ಪ್ರಧಾನಿ ಹುದ್ದೆಯ ಗೌರವ ಹೆಚ್ಚಿಸಿದರು        ಅಧಿಕಾರ ದರ್ಪವ ಮೆರೆಯುವವರೆ...
  ಅರಿಯಿರಿ ಇವರ ಚರಿತೆಯ
  ದುಂದುವೆಚ್ಚವ ಮಾಡುವವರೆ......      ಕಲಿಯಿರಿ ಇವರಂತೆ ಮಿತವ್ಯಯವ;ಅಮರ, ಅಮರವೀ ಶಾಸ್ತ್ರೀಜಿ ಧ್ಯೇಯ-ನೀತಿಯು
ನೆನೆಯಿರಿ, ವಂದಿಸಿರಿ ಅವರ ವ್ಯಕ್ತಿಗತಕೆ-

*ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೆನಾಗರಕೊಪ್ಪ-581196

ಸ್ವದೇಶಿ ಚಳುವಳಿಯ ಅಜಾದ್ ರು

    ಸ್ವದೇಶಿ ಚಳುವಳಿಯ ನೇತಾರ ರಾಜೀವ್ ದೀಕ್ಷಿತರ ನೆನಪು ನನಗೆ ಸದಾ ಹಸಿರು. ಅದಕ್ಕೆ ಕಾರಣವೂ ಇದೆ ಆ ನೇತಾರನ ಜನುಮದಿನ ಮತ್ತು ನಿಧನದ ದಿನ ಒಂದೇ ಆಗಿದ್ದು ನೆನಪಿಟ್ಟುಕೊಳ್ಳಲು ಸುಲಭವಾದರೂ ನನ್ನ ಜನುಮದಿನವೂ ನವೆಂಬರ್ 30 ಆಗಿದೆ.ರಾಜೀವ್ ದೀಕ್ಷಿತರು 30.11.1967ದಲ್ಲಿ ಜನಿಸಿದರು
       ಸ್ವದೇಶಿ ವಸ್ತುಗಳ ಬಳಕೆ ಮತ್ತು ದೇಶೀಯ ಸಂಸ್ಕೃತಿಯ ಬಗ್ಗೆ ಎಲ್ಲರಿಗೂ ವಿವರಿಸಿದರು. ವಿದೇಶೀ ವಸ್ತುಗಳ ಬಳಕೆಯಿಂದ ಭಾರತದಿಂದ ಅಪಾರ ಪ್ರಮಾಣದ ಹಣ ಪೋಲು ಆಗುತ್ತದೆ.ಸ್ವದೇಶಿ ಕೈಗಾರಿಕೆಗಳ ಅಭಿವೃದ್ಧಿಯ ಹಿತದೃಷ್ಟಿಯಿಂದ ಮತ್ತು ಎರಡನೇ ಸಲ ಭಾರತ ಪರೋಕ್ಷವಾಗಿ ಗುಲಾಮರಾದಂತೆ ಎಂದು ಸ್ವಾವಲಂಬನೆಯ ಕೆಚ್ಚನ್ನು ಹೊತ್ತಿಸಿದರು.ಬಹುರಾಷ್ಟ್ರೀಯ ಕಂಪನಿ ಭಾರತದಲ್ಲಿ ಹೆಚ್ಚುತ್ತಿರುವುದನ್ನು ಖಂಡಿಸಿದರು.

      ರಾಜೀವ್ ದೀಕ್ಷಿತರು ಹಳ್ಳಿಯೊಂದರಲ್ಲಿ ಜನಿಸಿದರೂ ಸ್ವಪ್ರತಿಭೆಯಿಂದ ಸಿ.ಎಸ್.ಐ.ಆರ್.ನಲ್ಲಿ ವಿಜ್ಞಾನಿಯಾದರು.ಸಾಕಷ್ಟು ಸಂಬಳ ಪಡೆಯುವ ವೃತ್ತಿಯನ್ನು ತ್ಯಜಿಸಿ ತಮ್ಮ ಗುರುಗಳ ಸಲಹೆಯಂತೆ ರಾಷ್ಟ್ರದ ಸೇವೆಗೆ ತಮ್ಮನ್ನು ತಾವು ಸಮಪಿ೯ಸಿಕೊಂಡರು.ಅವರು ತಮ್ಮ ಪ್ರಖರ ಮಾತು-ವಾದಗಳಿಂದ ಪ್ರಸಿದ್ಧರಾದರು."ಮೇರಾ ಭಾರತ ಮಹಾನ್" ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. 'ಅಜಾದಿ ಬಚಾವ್ ' ಆಂದೋಲನದ ಹರಿಕಾರರಾಗಿ ಯುವಕರಿಗೆ ಸ್ಫೂರ್ತಿ ತುಂಬಿದರು.
      ಅಥ೯ವ್ಯವಸ್ಥೆ ಉತ್ತಮಗೊಳ್ಳಲು ಪ್ರತಿಯೊಬ್ಬರು ಸ್ವದೇಶಿ ಉತ್ಪನ್ನ ಬಳಸಲು ಕರೆ ನೀಡಿದರು. ವಿದೇಶಿ ಕಂಪನಿಯ ರಾಸಾಯನಿಕ ವಿಷಮಿಶ್ರಿತ ಕೀಟನಾಶಕ ಬಳಸದೆ ಸಾವಯವ ಕೃಷಿ ಮಾಡಿ ಭೂಮಿ ಬಂಜರುಗೊಳಿಸಬೇಡಿ ಎಂದರು.ಗೋವಿನ ಬಗ್ಗೆ ವಿಶೇಷ ಹೋರಾಟ ಮಾಡಿದರು."ಹಸು ಎಂದಿಗೂ ಹೊಗೆ ಉಗುಳುವುದಿಲ್ಲ, ಟ್ರ್ಯಾಕ್ಟರ್ ಎಂದಿಗೂ ಸಗಣಿ ಹಾಕುವುದಿಲ್ಲ".ಅವರ ಜನಪ್ರಿಯ ಘೋಷಣೆ.
    ಸ್ವದೇಶಿ ಬಗ್ಗೆ ಮಾತಾಡುವಾಗ ಇವರ ಹೆಸರು ಮೊದಲು ಚಚೆ೯ಗೆ ಬರುತ್ತದೆ.ಅವಿವಾಹಿತರಾಗಿ ಉಳಿದ ಇವರು ನವೆಂಬರ್ 30, 2010ರಂದು ಅವರು ಮರೆಯಾದರು.ಅವರ ಜನುಮದಿನವನ್ನು "ಸ್ವದೇಶಿ ದಿನ"ವನ್ನಾಗಿ ಸರಕಾರವೇ ಮುಂದೆ ನಿಂತು ಆಚರಿಸಬೇಕು.

-ಹನುಮಂತ.ಮ.ದೇಶಕುಲಕಣಿ೯.
ಸಾ.ಭೋಗೇನಾಗರಕೊಪ್ಪ-581196
9480364915

ಮಸ್ತಕಕ್ಕೆ ಬೇಕು ಪುಸ್ತಕ ..

    ಪುಸ್ತಕವನ್ನು ಜ್ಞಾನದಖಣಿ ಎನ್ನಬಹುದು.ಏಕೆಂದರೆ ಹಿರಿಯರು ಹೇಳಿದ ಹಾಗೆ "ದೇಶ ಸುತ್ತು ಕೋಶ ಓದು "ಎನ್ನುವ ಮಾತು ಜನಜನಿತ.ಪುಸ್ತಕ ಬರೆಯುವುದು ಸಾಹಿತ್ಯವಾದರೆ,ಪುಸ್ತಕ ಓದುವುದು ಅಭಿರುಚಿ.ಪುಸ್ತಕವೆಂದರೆ ಅಕ್ಷರಗಳಿಂದ ತುಂಬಿದ ಹಾಳೆಗಳ ಕಟ್ಟು ಅಲ್ಲ.ಜ್ಞಾನವಾಹಿನಿಯು ಪ್ರತಿಯೊಂದು ಶಬ್ಧದಲ್ಲೂ ಜ್ಞಾನದ ಬಿಂದು ಇರುತ್ತದೆ.ಆ ಬಿಂದುಗಳಲ್ಲಿ ಮಿಂದರೆ ಹೊಸ ಚೈತನ್ಯ ದೊರೆಯುತ್ತದೆ.

       ವಿದ್ಯೆ ಯಾರೂ ಕದಿಯದ ಸಂಪತ್ತು.ಹೌದು ನಿಜ,ಯಾರೂ ಮೆದುಳಿಗೆ ಕೈ ಹಾಕಿ ಅಮೂಲ್ಯ ವಿದ್ಯೆಯನ್ನು ದೋಚುವುದಿಲ್ಲ.ಪುಸ್ತಕಕ್ಕಿಂತ ಅತ್ಯುತ್ತಮ ಗೆಳೆಯ ಮತ್ತೊಂದಿಲ್ಲ.ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಮೊದಲಿಗೆ ಹಿಂಜರಿಕೆಯಾಗಬಹುದು.ಆದರೆ ಬರುಬರುತ್ತ ಓದುವ ಗೀಳಿನ ರುಚಿ ಹತ್ತಿದರೆ ಮುಗಿಯಿತು,ನೀವಾಯಿತು-ನಿಮ್ಮ ಪುಸ್ತಕವಾಯಿತು ಹಾಗೆ ಇರುತ್ತೀರಿ.


      ಪಠ್ಯಪುಸ್ತಕಗಳ ಜ್ಞಾನ ಜೊತೆಗೆ ಪಠ್ಯೇತರ ಪುಸ್ತಕಗಳ ಜ್ಞಾನವು ಇರಬೇಕು.ಪೌರಾಣಿಕ ಕಥೆಗಳಿಂದ ಆದಶ೯ಗಳು,ಐತಿಹಾಸಿಕ ಕಥೆಗಳಿಂದ ಶೂರರ ಗುಣಗಳು ಜೊತೆಗೆ ಪರಚಯ,ಕಾದಂಬರಿಗಳಿಂದ ಸುದೀಘ೯ಜ್ಞಾನ, ಪತ್ತೇದಾರಿ ಕಾದಂಬರಿಗಳಿಂದ ಸೂಕ್ಷ್ಮ ಆಲೋಚನೆ, ದಾಶ೯ನಿಕರ ಜೀವನಚರಿತ್ರೆಯಿಂದ ಮಾಗ೯ದಶ೯ನ ಮುಂತಾದ ಮೌಲ್ಯಯುಕ್ತ ಮಾಹಿತಿಗಳು ಜ್ಞಾನಾಜ೯ನೆಗೆ,ಶಬ್ಧಸಂಪತ್ತು ವೃದ್ಧಿಗೆ ಸಹಾಯಕವಾಗುತ್ತವೆ.
       ನಿಮ್ಮ ಪ್ರೀತಿಪಾತ್ರರ ಹುಟ್ಟುಹಬ್ಬ ಮತ್ತು ವಿಶಿಷ್ಟ ದಿನಗಳಂದು ಉಡುಗೊರೆಯಾಗಿ ಪುಸ್ತಕಗಳನ್ನೇ ನೀಡಿ.ಆಧುನಿಕಯುಗದಲ್ಲಿ ಪುಸ್ತಕಓದು ಕಡಿಮೆಯಾಗಿಲ್ಲ.ಇ-ಬುಕ್,ಇ-ಪೇಪರ್ ಓದುತ್ತಿದ್ದಾರೆ.ಒಳ್ಳೆಯ ಹವ್ಯಾಸದಲ್ಲಿ ಇದು ಒಂದು.ಗ್ರಂಥಾಲಯದೊಂದಿಗೆ ನಿಮ್ಮ ಒಡನಾಟವಿರಲಿ.
    (ದಿನಾಂಕ:23.4.2015ರಂದು ಪುಸ್ತಕಗಳ ದಿನದ ತನ್ನಿಮಿತ್ತ ಈ ಲೇಖನ)

-ಹನುಮಂತ.ಮ.ದೇಶಕುಲಕಣಿ೯
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397
  -ಹನುಮಂತ.ಮ.ದೇಶಕುಲಕಣಿ೯.
   ಸಾ.ಭೋಗೇನಾಗರಕೊಪ್ಪ-581196
   ತಾ.ಕಲಘಟಗಿ ಜಿ.ಧಾರವಾಡ
    ಮೊ.ನ಼ಂ.9731741397ತ

ಸುಗ್ಗಿಯ ಸಂಭ್ರಮ ಈಗೆಲ್ಲಿ?!

ಸುಗ್ಗಿಯು ಬಂದಿತು ಹಿಗ್ಗನು ತಂದಿತು ನಮ್ಮಯ ನಾಡಿನ ಜನಕ್ಕೆಲ್ಲ... ಎಂಬ ಹಾಡನ್ನು ಹಾಡುತ್ತ ಸುಗ್ಗಿಯ ಸಂಭ್ರಮ಼ ನಾಡಹಬ್ಬದಂತೆ ಆಚರಿಸುತ್ತಿದ್ದ ಆ ವೈಭವದ ದಿನಗಳು ಈಗ ರೈತಮಾನಸದಿಂದ ಮರೆಯಾಗುತ್ತಿರುವುದು ವಿಷಾದದ ಸಂಗತಿ.ಕಾರಣ ,ಆಧುನಿಕವಾಗಿ ಮುಂದುವರೆದ ಕೃಷಿಯ ಪರಂಪರೆ.
          ಸುಗ್ಗಿ ಸಂಭ್ರಮ಼ದ ಮೊದಲು ಹೊಲದಲ್ಲಿರುವ ಅನುಕೂಲ ಜಗವನ್ನು ಆಯ್ಕೆ ಮಾಡಿ ಆ ಭೂಮಿಯನ್ನು ಕಣವನ್ನಾಗಿ ಪರಿವತಿ೯ಸುತ್ತಾರೆ.ಅದಕ್ಕಾಗಿ ಹದಿನೈದು ದಿನಗಟ್ಟಲೇ ನೆರೆಹೊರೆಯವರ ಜಾನುವಾರುಗಳಿಂದ ಸಗಣಿಯನ್ನು ಸಂಗ್ರಹಿಸಿ ಕಣದ ಭೂಮಿಯನ್ನು ಸಾರಿಸಿ ಹದ ಮಾಡಿ ಭೂಮಿಯ ಬಿರುಕು ಮುಚ್ಚುತ್ತಾರೆ.ಮತ್ತು ಕನಿಷ್ಠ ನಾಲ್ಕೈದು ದಿನವಾದರೂ ರೈತನ ವಸತಿ ಹೊಲದಲ್ಲಿಯೇ,ಅಲ್ಲಿಯೇ ಚಹಾ-ಉಪ್ಪಿಟ್ಟು ತಯಾರಿಸಲು ಒಲೆ ಮತ್ತು ಗುಡಿಸಲು ಹಾಕುತ್ತಾರೆ.ಬೆಳಕಿಗೆ ಲಾಟೀನು ಇರುತ್ತಿದ್ದವು.ರೈತರ ಮಕ್ಕಳಿಗಂತೂ ತಂದೆಗೆ ಚಹಾ-ತಿಂಡಿ,ನೀರು-ಊಟ,ಮತ್ತು ಇನ್ನಿತರ ಸಣ್ಣಪುಟ್ಟ ಖುಷಿ ಕೊಡುವ ಕೆಲಸಗಳು! ಅಹಾ! ಏನ್ ಚೆಂದಾ ಅಂದಿನ ಸುಗ್ಗಿಯ ಹಿಗ್ಗು!ಹುಲ್ಲು-ಸೊಪ್ಪುಗಳ ಬಣಿವೆಯನ್ನು ಬೇರೆ ಹಾಕುವುದು,ಮೇಟಿ ಕಟ್ಟಿ ಕಾಳುಗಳನ್ನು ಜಾನುವಾರುಗಳಿಂದ ತುಳಿಸಿ ಬೇಪ೯ಡಿಸುತ್ತಿದ್ದರು.ಈಗ ಟ್ರ್ಯಾಕ್ಟರ್ ಆ ಜಾಗ ಆಕ್ರಮಿಸಿಕೊಂಡಿವೆ.

         ರೈತಾಪಿ ಜನರ ಮೂಲದೇವರೇ ಭೂತಾಯಿ! ಭೂತಾಯಿ ಯಾವಾಗಲೂ ಅನ್ನ ನೀಡುವ ಬದುಕು ಕಟ್ಟಿಕೊಳ್ಳುವತ್ತ ಶ್ರೀರಕ್ಷೆ ನೀಡುವ ಅನ್ನಪೂಣೆ೯ಯ ಮೇಲೆ ರೈತರಿಗೆ ಬಲು ಆದರ,ಪ್ರೀತಿ.ಭೂತಾಯಿಗೆ ಬೆಳೆ ಬೆಳೆಯುವ,ಮೊದಲು ಭೂಮಿಪೂಜೆ,ಮಾಡುತ್ತಾರೆ.ನಂತರ ಬಂಗಾರದ ಬೆಳೆ ಬಂದರೆ ಕಟಾವು ಮಾಡಿ ಕಣದ ಪೂಜೆಯನ್ನು ಮಾಡುತ್ತಿದ್ದರು.ಆ ಸಂಭ್ರಮ಼ದ ಪೂಜೆಗೆ,ನೆರೆಹೊರೆಯವರನ್ನು ಕರೆಯುತ್ತಿದ್ದರು,
   ಕಾಳುಗಳನ್ನು ರಾಶಿ-ರಾಶಿಯಾಗಿ ಗುಡ್ಡೆ ಹಾಕಿ;ಅವುಗಳನ್ನು ಆಯತಾಕಾರವಾಗಿರಿಸಿ ರಾಶಿಯ,ಮೇಲೆ ಚಿತ್ರ ಬರೆದು ರಾಶಿಯ ಸುತ್ತಲೂ ಅದೇ ಕಾಳುಗಳ ಮಂಡಲ ಕೊರೆದು ರಾಶಿಯ ಮುಂದೆ ಸುಗ್ಗಿ ಸಾಧನಗಳಾದ ಮ್ಯಾರ್ಽಕೋಲು,ಜಂತ್ಽಕುಂಟಿ,ನೆದಿಹಲಿಗೆ,ಸವರ ಬಡಿಗೆ ಇಟ್ಟು ಪೂಜೆಗೆ ಅಣಿಯಾಗುತ್ತಿದ್ದರು.
         ಪೂಜೆಯಾದ ಬಳಿಕ ಪ್ರಸಾದವೆಂದು ಬಾಳೆಹಣ್ಣು,ಕೊಬ್ಭರಿ ಚೂರು,ಚುರುಮರಿ-ಖಾರ ನೀಡಲಾಗುತ್ತಿತ್ತು.ವಿಶೇಷ ವಿಸ್ಮಯವೆಂದರೆ ಮಾಲೀಕನು ಯಾರಿಗೂ ಗೊತ್ತಾಗದಂತೆ ರಾಶಿಯೊಳಗಡೆ ತೆಂಗಿನಕಾಯಿ ಇಟ್ಟು ಬೇಗ-ಬೇಗ ಕಾಳುಗಳನ್ನು ಚೀಲಕ್ಕೆ ತುಂಬಿ ರಾಶಿಯಲ್ಲಿ ತೆಂಗಿನಕಾಯಿ ಇದೆಯೆಂದು ಹೇಳಿ ಕೆಲಸ ಬೇಗವಾಗುವಂತೆ ನೋಡಿಕೊಳ್ಳುತ್ತಿದ್ದರು.ನಂತರ ಆ ಕಾಯಿ ಸಿಕ್ಕವರ ಖುಷಿ ಹೇಳತೀರದು,ಜಗತ್ತೆ ಗೆದ್ದ ಭಾವ!
      ಆದರೀಗ ಸುಗ್ಗಿಯ ಸಂಭ್ರಮವು ಇಲ್ಲ.ಉತ್ಸಾಹ-ಹುರುಪು ಇಲ್ಲವಾಗುತ್ತಿದೆ.ಕಲ್ಟಿವೇಟೆಡ್ ಮಶೀನ್,ತುಳಿಸುವ ಯಂತ್ರ ಬಂದಿವೆ.ಮೊದಲಿಗಿಂತ ಕಷ್ಟ ಪಡಬೇಕಿಲ್ಲ,ಆದರೆ ಯಂತ್ರದಿಂದ ತುಳಿಸುವುದರಿಂದ ಜಾನುವಾರುಗಳಿಗೆ ಮೇವು ಶುದ್ಧವಾಗುವುದಿಲ್ಲವಾಗಿದೆ.ಆಧುನಿಕವಾಗಿ ಮುಂದುವರೆದ ಕೃಷಿಯಲ್ಲಿ ಜನಪದರ ಸಂಸ್ಕ್ರತಿ ಕ್ಷೀಣಿಸುತ್ತಿದೆಯೆಂದು ಭಾಸವಾಗುತ್ತದೆ.
    -ಹನುಮಂತ.ಮ.ದೇಶಕುಲಕಣಿ೯.
   ಸಾ.ಭೋಗೇನಾಗರಕೊಪ್ಪ-581196
   ತಾ.ಕಲಘಟಗಿ ಜಿ.ಧಾರವಾಡ
    ಮೊ.ನ಼ಂ.9731741397

ಬುಧವಾರ, ಏಪ್ರಿಲ್ 29, 2015

ಭಗವದ್ಗೀತೆ ಕುರಿತು...

ಭಗವದ್ಗೀತೆಯನ್ನು ಯಾರು ಯಾರಿಗೆ
ಬೋಧಿಸಿದರು..?
ಉತ್ತರ : ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ.

* ಯಾವಾಗ ಬೋಧಿಸಿದ..?
ಉತ್ತರ : ಇಂದಿನಿಂದ ಸುಮಾರು ೭ ಸಾವಿರ ವರ್ಷಗಳ ಹಿಂದೆ.

* ಯಾವ ದಿನ ಬೋಧಿಸಿದ..?
ಉತ್ತರ : ರವಿವಾರ.

* ಯಾವ ತಿಥಿಯಲ್ಲಿ..?
ಉತ್ತರ : ಏಕಾದಶಿಯಂದು.

* ಎಲ್ಲಿ ಬೋಧಿಸಿದ..?
ಉತ್ತರ : ಕುರುಕ್ಷೇತ್ರದ ರಣಭೂಮಿಯಲ್ಲಿ.

* ಎಷ್ಟು ಸಮಯ ಬೋಧಿಸಿದ..?
ಉತ್ತರ : ೪೫ ನಿಮಿಷ.

* ಅರ್ಜುನನಿಗೇಕೆ ಗೀತೆಯನ್ನು ಬೋಧಿಸಿದ..?
ಉತ್ತರ : ಕ್ಷತ್ರಿಯನಿಗೆ
ಕರ್ತವ್ಯವಾದದ್ದು ಯುದ್ಧ..
ತನ್ನ ಕರ್ತವ್ಯದಿಂದ ಅರ್ಜುನ
ವಿಮುಖನಾಗಲು ಬಯಸುತ್ತಾನೆ..
ಯುದ್ಧಮಾಡದಿರಲು ನಿಶ್ಚಯಿಸುತ್ತಾನೆ..
ಆತನಿಗೆ ತನ್ನ ಕರ್ತವ್ಯಗಳನ್ನು ಮನದಟ್ಟು
ಮಾಡಲು ಹಾಗೂ ಭವಿಷ್ಯದ
ಮಾನವಸಂತತಿಗೆ ಧರ್ಮಜ್ಞಾನವನ್ನು
ನೀಡಲು ಕೃಷ್ಣ ಗೀತೆಯನ್ನು ಬೋಧಿಸಿದ.

* ಭಗವದ್ಗೀತೆಯಲ್ಲಿ ಎಷ್ಟು ಅಧ್ಯಾಯಗಳಿವೆ..?
ಉತ್ತರ : ಹದಿನೆಂಟು.

* ಎಷ್ಟು ಶ್ಲೋಕಗಳಿವೆ..?
ಉತ್ತರ : ೭೦೦ ಶ್ಲೋಕಗಳು.

* ಗೀತೆಯಲ್ಲಿರುವ ವಿಷಯಗಳಾವವು..?
ಉತ್ತರ : ಜ್ಞಾನ - ಭಕ್ತಿ - ಕರ್ಮ - ಯೋಗ
ಮಾರ್ಗಗಳ ವಿಸ್ತೃತವಾದ ವ್ಯಾಖ್ಯಾನ..ಈ
ಮಾರ್ಗಗಳಲ್ಲಿ
ನಡೆಯುವವರು ಖಂಡಿತವಾಗಲೂ ಪರಮಸ್ಥಾನವನ್ನು ಪಡೆಯುತ್ತಾರೆಂದು ಹೇಳಲಾಗಿದೆ..

* ಅರ್ಜುನನನ್ನು ಬಿಟ್ಟರೆ
ಗೀತೆಯನ್ನು ಮತ್ತ್ಯಾರು ಕೇಳಿದ್ದಾರೆ..?
ಉತ್ತರ : ಧೃತರಾಷ್ಟ್ರ ಹಾಗೂ ಸಂಜಯ.

* ಅರ್ಜುನನಿಗಿಂತಲೂ ಮೊದಲು ಗೀತೆಯ ಪವಿತ್ರ
ಜ್ಞಾನ ಯಾರಿಗೆ ತಿಳಿದಿತ್ತು...?
ಉತ್ತರ : ಭಗವಾನ್ ಸೂರ್ಯದೇವನಿಗೆ.

* ಭಗವದ್ಗೀತೆಯನ್ನು ಯಾವ ಧರ್ಮಗ್ರಂಥದಲ್ಲಿ
ಸೇರಿಸಲಾಗಿದೆ..?
ಉತ್ತರ : ಉಪನಿಷತ್ತಿನಲ್ಲಿ.

* ಗೀತೆ ಯಾವ ಗ್ರಂಥದ ಭಾಗವಾಗಿದೆ..?
ಉತ್ತರ : ಮಹಾಭಾರತದ ಭೀಷ್ಮಪರ್ವದ
ಒಂದು ಭಾಗವಾಗಿದೆ.

* ಭಗವದ್ಗೀತೆಯ ಇನ್ನೊಂದು ಹೆಸರು..?
ಉತ್ತರ : ಗೀತೋಪನಿಷತ್.

* ಗೀತೆಯ ಸಾರವೇನು..?
ಉತ್ತರ : ಕರ್ಮಫಲಗಳನ್ನು ಬಿಟ್ಟು , ಭಗವಂತನಲ್ಲಿ
ಶರಣಾಗತಿಯನ್ನು ಹೊಂದುವುದು..

* ಭಗವದ್ಗೀತೆಯಲ್ಲಿ
ಯಾರು ಎಷ್ಟು ಶ್ಲೋಕಗಳನ್ನು ಹೇಳಿದ್ದಾರೆ..?
ಉತ್ತರ : ಶ್ರೀಕೃಷ್ಣ - ೫೭೪.
ಅರ್ಜುನ - ೮೫
ಧೃತರಾಷ್ಟ್ರ - ೦೧ಚಿ
ಸಂಜಯ - ೪೦

ಶ್ರೀಕೃಷ್ಣಾರ್ಪಣಮಸ್ತು

-ಹನುಮಂತ.ಮ.ದೇಶಕುಲಕಣಿ೯
ಸಾ.ಭೋಗೇನಾಗರಕೊಪ್ಪ-581196
9731741397

ಸರದಾರ ವಲ್ಲಭಬಾಯಿ ನೆನಪು ಸದಾ

ಭಾರತದ ಉಕ್ಕಿನ ಮನುಷ್ಯ" ಎಂದೇ ಖ್ಯಾತರಾದ ಭಾರತದ ಪ್ರಥಮ ಉಪಪ್ರಧಾನಿ ಸದಾ೯ರ ವಲ್ಲಭಬಾಯಿ ಪಟೇಲ್ ಅವರ ಜೀವನವೇ ಹೋರಾಟ ಮನೋಭಾವದಿಂದ ಕೂಡಿತ್ತೆಂದು ಹೇಳಬಹುದು.ಅವರು ಅಖಂಡಭಾರತದ ನಿಮಾ೯ಪಕರು.ಭಾಷಾವಾರು ಪ್ರಾಂತ್ಯದ ವಿಂಗಡಣೆಯಿಂದ ಶಾಂತಿಯುತ ಪ್ರದೇಶ ಮಾಡುವ ದೂರದೃಷ್ಟಿ ಇಂದಿಗೂ ಪ್ರಸ್ತುತವಾಗಿದೆ.
      ಅವರೆಂದು ಅಧಿಕಾರ ಬಯಸಿದವರಲ್ಲ ,ಇದ್ದ ಅಧಿಕಾರವನ್ನು ದೇಶದ ಹಿತಕ್ಕಾಗಿ ಯಾರಿಗೂ ಅಂಜದೆ,ಜಗ್ಗದೇ ಬಳಸಿಕೊಂಡರು.ಗಾಂಧೀಜಿಯ ಶಿಷ್ಯ ಮತ್ತು ಗಾಂಧಿವಾದಿಯಾದರೂ ಅನ್ಯಾಯದ ವಿರುದ್ಧ ಕಠೋರ ನಿಧಾ೯ರ ತೆಗೆದುಕೊಳ್ಳುತ್ತಿದ್ದರು.ಅಕ್ಟೋಬರ್ 31ರಂದು ಇಂದಿರಾಗಾಂಧಿ ಪುಣ್ಯಸ್ಮರಣೆಯ ದಿನವೆಂದು ಖ್ಯಾತವಾಗಿದೆ.ಆದರೆ ಅದೇ ದಿನವೇ ಸದಾ೯ರ ವಲ್ಲಭಬಾಯಿ ಪಟೇಲ್ ಜನ್ಮದಿನಾಚರಣೆ,ಆದರೆ ಆ ದಿನ ಇವರು ನಮ್ಮ ಪ್ರಜಾಪ್ರತಿನಿಧಿಗಳಿಗೆ ನೆನಪೇ ಬರುವುದಿಲ್ಲ.ಇದಕ್ಕೆ ಜಾಣಕಿವುಡು,ಜಾಣಕುರುಡು,ಜಾಣಮರೆವು ಅನ್ನಬೇಕೋ ಗೊತ್ತಾಗುತ್ತಿಲ್ಲ.

      ಬಾಲ್ಯದಲ್ಲಿ ತುಂಟ ವಿದ್ಯಾಥಿ೯ ಆಗಿದ್ದ ಪಟೇಲ್ ಹೋರಾಟ ಮನೋಭಾವ ಆಗಲೇ ರೂಢಿಸಿಕೊಂಡರು.ಮೆಟ್ರಿಕ್ಯುಲೇಷನ್ ನಂತರ ಆಗ ವಕೀಲ ವೃತ್ತಿ ಎಂದು ಕರೆಯುತ್ತಿದ್ದ" ಪ್ಲೀಡರ್" ಪರೀಕ್ಷೆ ಪಾಸಾಗಿ ವೃತ್ತಿ ಆರಂಭಿಸಿದರು.ಆ ಸಮಯದಲ್ಲಿ ಎಲ್ಲ ವಕೀಲರಂತೆ ತಾನು ಬ್ಯಾರಿಸ್ಟರ್ ಆಗಬೇಕೆಂದುಕೊಂಡಿದ್ದರು.ಆದರೆ ಅವರ ಅವಕಾಶ ಅಣ್ಣನಿಗೆ ಮಾಡಿಕೊಟ್ಟು ಅವರು ಮುಗಿಸಿ ಬಂದ,ನಂತರ ತಮ್ಮ35ನೇ ವಯಸ್ಸಿನಲ್ಲಿ ಇಂಗ್ಲೆಂಡ್ಽಗೆ ಹೋಗಿ ಮೂರು ವಷ೯ದ ಅಭ್ಯಾಸ ಒಂದುವರೆ ವಷ೯ದಲ್ಲಿ ಮುಗಿಸಿ ಭಾರತಕ್ಕೆ ಬಂದರು.
       ತಾವು ನಡೆಸಿದ ವಾದದಲ್ಲಿ ಸೋಲು ಕಂಡವರೇ ಅಲ್ಲ! ಪಟೇಲ್ ನ್ಯಾಯಾಲಯದಲ್ಲಿ ವಾದ ಮಾಡುತ್ತಿದ್ದಾಗ  ತಮ್ಮ ಪತ್ನಿ ನಿಧನವಾದ ಸುದ್ದಿ ತಂತಿ ಮೂಲಕ ಬಂದಾಗ ಅದನ್ನು ಜೇಬಿನಲ್ಲಿಟ್ಟುಕೊಂಡು ವಾದ ಮುಗಿದ ಮೇಲೆ ಮನೆಗೆ ಹೋದರು.ಎಂತಹ ವಾಕ್ಽಪಟುತ್ವ ತಮ್ಮ ಕಕ್ಷಿಗಾರನಿಗಾಗಿ ತನ್ನ ದುಃಖ ಪರಿಗಣಿಸದ ಮಹಾನ್ ವ್ಯಕ್ತಿ! ನಂತರ ರಾಜಕೀಯಕ್ಕೆ ಧುಮುಕಿ ಪುರಸಭೆಗೆ ಸ್ಪಧಿ೯ಸಿ ಗೆದ್ದರು.ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಖೇಡಾ ಸತ್ಯಾಗ್ರಹ ,ಬಾಡೋ೯ಲಿ ಸತ್ಯಾಗ್ರಹದಲ್ಲಿ ಇವರ ಸಂಘಟನಾ ಕೌಶಲ್ಯ ಕಂಡ ಗಾಂಧೀಜಿ "ಸದಾ೯ರ" ಪದವಿ ನೀಡಿದರು.ಜೈಲುವಾಸವನ್ನು ಅನುಭವಿಸಿದರು,


   ಭಾರತ ಸ್ವತಂತ್ರವಾದ ಮೇಲೆ ದೇಶದ ಉಪಪ್ರಧಾನಿ ಆದರು.15 .8.1947ರಂದು ಸ್ವತಂತ್ರದ ಜೊತೆ ದೇಶ ಇಬ್ಭಾಗವಾದ ನೋವು ಎಲ್ಲರಲ್ಲಿ ಇದ್ದಾಗ ಪಾಕಿಸ್ತಾನದ ತನ್ನ ಸೇನೆ ಕಳಿಸಿ ಲಕ್ಷದ್ವೀಪವನ್ನು ವಶಪಡಿಸಿಕೊಳ್ಳುವ ಸುಳಿವು ಅರಿತು ಅವರು ಕೊಚ್ಚಿನ್ಽಗೆ ಭಾರತದ ನೌಕಾಸೇನೆ ಕಳಿಸಿ ದುಷ್ಟಪ್ರಯತ್ನ ವಿಫಲಗೊಳಿಸಿ ಭಾರತದ ಧ್ವಜ ಹಾರಿಸಿದರು.ಒಂದು ವೇಳೆ ಅದು ಪಾಕಿಸ್ತಾನಕ್ಕೆ ದಕ್ಕಿದ್ದರೆ ನಮ್ಮ ಸ್ಥಿತಿ ಅಡಕೊತ್ತದಲ್ಲಿ ಸಿಕ್ಕಂತಾಗುತ್ತಿತ್ತು. ನಾವು ಪಟೇಲ್ಽರಿಗೆ ಸೆಲ್ಯುಟ್ ಹೊಡೆಯಲೇಬೇಕು.!
          ನೆಹರೂ ಮತ್ತು ರಾಜಾಜಿ ಅವರು ಹೈದರಾಬಾದ್ ನಿಜಾಮನ ಸಾಮ್ರಾಜ್ಯ ಭಾರತದಲ್ಲಿ ಒಗ್ಗೂಡಿಸಲು ಸಹಕರಿಸದೇ ಅಡ್ಡಗಾಲು ಹಾಕುತ್ತಿದ್ದಾಗ ಸದಾ೯ರ ಅವರು "ಒಂದು ಕಡೆ ಪೂವ೯ ಪಾಕಿಸ್ತಾನ, ಇನ್ನೊಂದೆಡೆ ಪಶ್ಚಿಮ ಪಾಕಿಸ್ತಾನ ;ಭಾರತದ ಒಡಲಲ್ಲಿ ಮತ್ತೊಂದು ಪಾಕಿಸ್ತಾನ ಆಗಿ ಮುಂದಿನ ಪೀಳಿಗೆ ನಮ್ಮನ್ನು ಶಪಿಸುವಂತಾಗಬಾರದು! ನೀವಿಬ್ಬರು(ನೆಹರೂ-ರಾಜಾಜಿ) ಎಷ್ಟು ದಿನ ಗೃಹ ಸಚಿವಾಲಯವನ್ನು ಅಂಚಿನಲ್ಲಿ ನಿಲ್ಲಿಸಿ,ನಿಮ್ಮದೇ ನಿಧಾ೯ರ ಕೈಗೊಳ್ಳುತ್ತಾ ಕೂರುವಿರಿ" ಎಂದು 13.9.1948 ದಲ್ಲಿ ನೇರವಾಗಿ ಮಾತಾಡಿದ್ದರೆಂದು ಮತ್ತು ಕಾಶ್ಮೀರ ವಿಷಯದಲ್ಲಿ ನೆಹರೂರವರ ದುಬ೯ಲ ಒಪ್ಪಂದದಿಂದ ಪಶ್ಚಾತ್ತಾಪ ಪಡಲಿದ್ದಾರೆಂದು ಹಾಗೂ ನೆಹರೂ ಆಪ್ತರ ಮುಂದೆ 23.7.1949ರಂದು ಅಧ೯೦ಬಧ೯ ಕಾಶ್ಮೀರದ ಬದಲಾಗಿ ಇಡೀ ಪ್ರದೇಶ ಯುಧ್ಧ ಮಾಡಿಯಾದರೂ ಪಡೆದು ತೀರುತ್ತೇವೆಂದು ಬಹಿರಂಗವಾಗಿ ಘೋಷಿಸಿದ್ದರು. ಮಗಳು ಮಣಿಬೆನ್ ರು ತಮ್ಮ ಡೈರಿಯಲ್ಲಿ ವಿವರಿಸಿದ್ದಾರೆ
     ಚೀನಾದ ಬಗ್ಗೆ ಹುಷಾರಾಗಿರುವಂತೆ ಸದಾ೯ರ ನೆಹರೂರವರನ್ನು ಎಚ್ಚರಿಸಿದ್ದರು.ಹಿಂದಿ-ಚೀನಿ ಭಾಯಿ ಭಾಯಿ ಎನ್ನುತ್ತಿದ್ದ ನೆಹರೂಗೆ ಅರಿವಾಗಿದ್ದು 1962ರಲ್ಲಿ ! 15.12.1950 ರಂದು ಪಟೇಲ್ ನಿಧನರಾದಾಗ ಶ್ರದ್ಧಾಂಜಲಿ ಸಲ್ಲಿಸುವ ನಾಲ್ಕು ಮಾತು ನೆಹರೂ ಆಡದೆ ಮಹಾನ್ ವ್ಯಕ್ತಿಯ ಮುಂದೆ ನೆಹರೂ ಕುಬ್ಜರಾದರು.ನಿಧನದ ನಂತರವೂ ವೈರತ್ವ ಪಂಡಿತ್ ನೆಹರೂರವರಿಗೆ ಶೋಭೆ ತರದಾಯಿತು.ಆದರೆ ಇಂದಿರಾಗಾಂಧಿ ಪಟೇಲ್ ರಂತೆ ಆಕ್ರಮಣಕಾರಿ ದಾಳಿ ನಡೆಸಿ ಪ್ರತ್ಯೇಕ ಖಲಿಸ್ಥಾನದ ಬಾಯಿ ಮುಚ್ಚಿಸಿ; ಪೂವ೯ ಪಾಕಿಸ್ತಾನವೆಂದು ಪಾಕಿಸ್ತಾನ ಹಿಡಿತದಲ್ಲಿದ್ದ ಆಡಳಿತವನ್ನು ಸೇನಾ ಕಾಯ೯ಚರಣೆ ಮೂಲಕ ಬಾಂಗ್ಲಾದೇಶ ಮಾಡಿದ್ದು ಐತಿಹಾಸಿಕ!ಅವರ ಜನ್ಮದಿನಾಚರಣೆ ಏಕತಾ ದಿನ ಎಂದು ಆಚರಿಸಲಾಗುತ್ತಿದೆ
  (ಅಕ್ಟೋಬರ್ 31ರಂದು ಸದಾ೯ರ ವಲ್ಲಭಬಾಯಿ ಪಟೇಲ್ ಜನ್ಮದಿನ ತನ್ನಿಮಿತ್ತ ಈ ಲೇಖನ)
-ಹನುಮಂತ.ಮ.ದೇಶಕುಲಕಣಿ೯.
ಸಾ.ಭೋಗೇನಾಗರಕೊಪ್ಪ-581196
9731741397

ಭಾನುವಾರ, ಏಪ್ರಿಲ್ 26, 2015

ಅಕ್ಷಯ ತೃತೀಯಾ

 'ಅಕ್ಷಯ ತೃತೀಯ'. ಹಿಂದೂ ಧರ್ಮದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ಅವುಗಳೆಂದರೆ: -

1) ನಾಲ್ಕು ಯುಗಗಳಾದ ಸತ್ಯ, ತ್ರೇತಾ, ದ್ವಾಪರ ಮತ್ತು ಕಲಿಯುಗಗಳಲ್ಲಿ, ಸತ್ಯ ಅಥವಾ ಕೃತಯುಗ ಪ್ರಾರಂಭವಾಗಿದ್ದು 'ಅಕ್ಷಯ ತೃತೀಯ' ದಿನದಂದು.

2) ವೇದವ್ಯಾಸರು ಮಹಾಭಾರತವನ್ನು ರಚಿಸುವ ಸಂದರ್ಭದಲ್ಲಿ ಅವರಿಗೆ ಸಹಾಯಕನಾಗಿ ಗಣೇಶನು ನೆರವಾಗಿದ್ದು 'ಅಕ್ಷಯ ತೃತೀಯ' ದಿನದಂದು.

3) ಭಗೀರಥನ ಪ್ರಯತ್ನದಿಂದ ಗಂಗಾವತರಣವಾಗಿದ್ದು (ಶಿವನ ಜಟೆಯಿಂದ ಗಂಗೆ ಭೂಮಿಗೆ ಇಳಿದದ್ದು) 'ಅಕ್ಷಯ ತೃತೀಯ' ದಿನದಂದು.

4) ದಶಾವತಾರಗಳಲ್ಲಿ ಒಂದಾದ 'ಪರಶುರಾಮಾವತಾರ' ಪ್ರಾರಂಭವಾಗಿದ್ದು (ಹುಟ್ಟಿದ ದಿನ) 'ಅಕ್ಷಯ ತೃತೀಯ' ದಿನದಂದು.

5) ಸಂಪತ್ತಿನ ಒಡೆಯ ಮತ್ತು ಯಕ್ಷರ ರಾಜ 'ಕುಬೇರ'ನಿಗೆ ನಿಧಿ/ಸಂಪತ್ತು ದೊರೆತದ್ದು 'ಅಕ್ಷಯ ತೃತೀಯ' ದಿನದಂದು.

6) ಕುಚೇಲನಿಗೆ ಗೆಳೆಯ ಶ್ರೀಕೃಷ್ಣನಿಂದ ಅನುಗ್ರಹ ಪ್ರಾಪ್ತಿಯಾಗಿದ್ದು 'ಅಕ್ಷಯ ತೃತೀಯ' ದಿನದಂದು.

7) ಅಮೃತ ಪ್ರಾಪ್ತಿಗಾಗಿ ದೇವತೆಗಳು ಮತ್ತು ರಾಕ್ಷಸರು ಸಮುದ್ರ ಮಂಥನ ಮಾಡುತ್ತಿದ್ದ ವೇಳೆ ಲಕ್ಷ್ಮೀ ಹುಟ್ಟಿದ್ದು 'ಅಕ್ಷಯ ತೃತೀಯ' ದಿನದಂದು.

8) ದುಶ್ಯಾಸನನು ದ್ರೌಪದಿಯ ವಸ್ತ್ರಾಪಹರಣ ಮಾಡುತ್ತಿದ್ದ ವೇಳೆ ಶ್ರೀಕೃಷ್ಣನು ಆಕೆಯ ಮಾನವನ್ನು (ಸೀರೆಯನ್ನು ನೀಡುವುದರ ಮೂಲಕ) ಕಾಪಾಡಿದ್ದು 'ಅಕ್ಷಯ ತೃತೀಯ' ದಿನದಂದು.

ಅಕ್ಷಯ ತೃತೀಯ ದಿನದ ಬಗ್ಗೆ ಇವಿಷ್ಟು ಪುರಾಣದ ಸಂಗತಿಗಳಾದರೆ, ನಾವಿರುವ ಕಲಿಯುಗದಲ್ಲಿ ಈ ಕೆಳಗಿನ ಸಂಗತಿಗಳು ಈ ರೀತಿ ಇವೆ:

1) ಆಂಧ್ರಪ್ರದೇಶದ ವಿಶಾಖಾಪಟ್ಟಣಂ ಬಳಿ ಇರುವ ಸಿಂಹಾದ್ರಿ ಅಥವಾ ಸಿಂಹಾಚಲಂ ದೇವಾಲಯದಲ್ಲಿ (ಹಿರಣ್ಯಕಶಿಪುವನ್ನು ಮಹಾವಿಷ್ಣುವು 'ನರಸಿಂಹಾವತಾರ'ದಲ್ಲಿ ಸಂಹರಿಸಿದ ಸ್ಥಳ) ವರ್ಷದ 364 ದಿನಗಳ ಕಾಲವೂ ಮೂಲದೇವರಾದ ನರಸಿಂಹಸ್ವಾಮಿಯ ಮುಖವನ್ನು ಚಂದನದಿಂದ ಮರೆಮಾಡಿರುತ್ತಾರೆ. ಕಾರಣ ನರಸಿಂಹಸ್ವಾಮಿಯ ಅತಿ ಉಗ್ರಸ್ವರೂಪ ಮೂರ್ತಿಯನ್ನು ನೋಡಲಾಗುವುದಿಲ್ಲ. ಆ.ದ.ರೆ.... 'ಅಕ್ಷಯ ತೃತೀಯ' ದಿನದಂದು ಮಾತ್ರ ದೇವರ ಮುಖವನ್ನು ಚಂದನದಿಂದ ಮರೆಮಾಚದೇ ನೈಜ ದರ್ಶಕಕ್ಕೆ ಅವಕಾಶವಿರುತ್ತದೆ. ಹೀಗಾಗಿ ಅಂದು ಬಹುತೇಕ ಆಂಧ್ರಪ್ರದೇಶ ಮತ್ತು ಇನ್ನೀತರ ಭಾಗದ ಜನರು ಅಲ್ಲಿ ನೆರೆದಿರುತ್ತಾರೆ.

2) 'ಅಕ್ಷಯ ತೃತೀಯ' ದಿನದಂದು ತಮ್ಮ ಸಾಮರ್ಥ್ಯಾನುಸಾರ ಹೋಮವನ್ನು ನೇರವೇರಿಸಿದ್ದಲ್ಲಿ ಅಥವಾ ಸಾರ್ವಜನಿಕವಾಗಿ ಹೋಮ ಆಯೋಜಿಸಿದ ಸ್ಥಳದಲ್ಲಿ ಭಾಗವಹಿಸಿದರೆ "ಅಶ್ವಮೇಘ" ಯಾಗ ಮಾಡಿದ ಪುಣ್ಯಪ್ರಾಪ್ತಿಯಾಗುತ್ತದೆ.

3) 'ಅಕ್ಷಯ ತೃತೀಯ' ದಿನದಂದು ತಮ್ಮ ಶಕ್ತ್ಯಾನುಸಾರ ಯಾವುದೇ ಹೊಸ ವಸ್ತುಗಳನ್ನು ಖರೀದಿಸಬಹುದಾಗಿದೆ. (ಧನಿಕರು ಮತ್ತು ಅನುಕೂಲಸ್ಥರು ಚಿನ್ನವನ್ನು ಖರೀದಿಸಬಹುದು, ಆದರೆ ಕಡ್ಡಯವಲ್ಲ) ಏನೂ ಬೇಡವೆಂದರೂ ಅಡಿಗೆಗೆ ಬಳಸುವ ಉಪ್ಪಿನ ಪ್ಯಾಕೇಟನ್ನಾದರೂ ಖರೀದಿಸಿದರೆ ಚಿನ್ನವನ್ನು ಖರೀದಿಸಿದ ಫಲವೇ ಪ್ರಾಪ್ತಿಯಾಗುತ್ತದೆ.

4) 'ಅಕ್ಷಯ ತೃತೀಯ' ದಿನದ ಇಡೀ ದಿನದ ಪ್ರತಿಯೊಂದು ಘಳಿಗೆಯೂ ಶುಭ ಮುಹೂರ್ತದ್ದೇ ಆಗಿರುತ್ತದೆ. ಅಂದು ಮಾತ್ರ ಯಾವುದೇ ರಾಹುಕಾಲ, ಗುಳಿಕಕಾಲ ಅಥವಾ ಇನ್ಯಾವುದೇ ಅಶುಭಕಾಲದ ಮಹತ್ವ ಇರುವುದಿಲ್ಲ.

ಈ ಮೇಲ್ಕಂಡ ವಿಷಯಗಳು 'ಅಕ್ಷಯ ತೃತೀಯ' ದಿನದ' ಮಹತ್ವವನ್ನು ಪಡೆದುಕೊಂಡಿದೆ. ಅದು ಬಿಟ್ಟು ಕೇವಲ ಚಿನ್ನವನ್ನು ಖರೀದಿಸಿದರೇ ಮಾತ್ರ 'ಅಕ್ಷಯ ತೃತೀಯ' ದಿನದ ಫಲಪ್ರಾಪ್ತಿ ಎಂದು ನಂಬುವುದು ಶುದ್ಧ ಮೂರ್ಖತನ ಅಥವಾ ಹುಚ್ಚುತನ.  ಜನರ ಈ ಅಂಧಶ್ರದ್ಧೆಯ ಮನ:ಸ್ಥಿತಿಯನ್ನು ಚಿನ್ನದ ವ್ಯಾಪಾರಿಗಳು ಯಥೇಚ್ಛವಾಗಿ ಲಾಭವಾಗಿ ಪಡೆಯುತ್ತಿದ್ದಾರಷ್ಟೆ.

ಅಕ್ಷಯ ತೃತೀಯ ದಿನ. ಈ ದಿನ ಮಾಡಬೇಕಾದ ದಾನ ಮತ್ತು ಖರೀದಿಯಿಂದ ದೊರೆಯುವ ಯೋಗಾಯೋಗಗಳ ಬಗ್ಗೆ ಸಾಕಷ್ಟು ನಂಬಿಕೆಗಳು ಇವೆ. ಅರಶಿನ ಕುಂಕುಮ ಹಾಗೂ ತಾಂಬೂಲ ನೀಡಿದರೆ ರಾಜಯೋಗ ಲಭಿಸುತ್ತದೆ. ಹೊಸ ಬಟ್ಟೆ ದಾನ ಮಾಡಿದರೆ, ಆರೋಗ್ಯ ವೃದ್ಧಿಸುತ್ತದೆ. ತಾವರೆ ಹೂವು ದಾನ ಮಾಡಿದರೆ ಮಹಾವಿಷ್ಣುವಿನ ಕೃಪಾಕಟಾಕ್ಷದ ಸುಯೋಗ ಎನ್ನುವ ಪ್ರತೀತಿ ಇದೆ. ಅಲ್ಲದೆ ನವಧಾನ್ಯಗಳನ್ನು ದಾನ ಮಾಡುವುದರಿಂದ ಮೃತ್ಯುವಿನಂತಹ ದುರಂತಗಳು ದೂರವಾಗುತ್ತವೆ. ಮೊಸರನ್ನ ದಾನ ಮಾಡಿದರೆ ಆಯಸ್ಸು ವೃದ್ಧಿಸುತ್ತದೆ. ಗೋವಿಗೆ ಪೂಜೆ ಮಾಡಿ ಬಾಳೆ ಎಲೆಯಲ್ಲಿ ಸಿಹಿ ತಿನ್ನಿಸಿದರೆ ವಿವಾಹ ದೋಷಗಳು ಪರಿಹಾರವಾಗುವುದಾಗಿ ನಂಬಿಕೆ ಇದೆ. ಹಿಂದಿನ ಕಾಲದಲ್ಲಿ ಮಡಕೆಯಲ್ಲಿ ನೀರು ತುಂಬಿ ಅದರಲ್ಲಿ ಬಂಗಾರದ ನಾಣ್ಯವನ್ನು ಹಾಕಿ ದಾನ ಮಾಡುತ್ತಿದ್ದರು ಎನ್ನಲಾಗುತ್ತಿದ್ದು, ಇದು ಅತ್ಯಂತ ಶ್ರೇಷ್ಠ ದಾನ ಎನ್ನುವ ನಂಬಿಕೆಯೂ ಇತ್ತು.
    ಹೀಗಾಗಿ ದಾನಧರ್ಮ ನೀಡುವ ಮೂಲಕ ಈ ದಿನವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಾರೆ. ಅಂದು ಕೆಲವರು ಪರಮೇಶ್ವರ ಮತ್ತು ವಿಷ್ಣುವನ್ನು ಪೂಜಿಸಿದರೆ, ಮತ್ತೆ ಹಲವರು ಲಕ್ಷ್ಮೀ ಪೂಜೆ ಮಾಡುತ್ತಾರೆ. ಪೂರಿ ಜಗನ್ನಾಥನ 'ಖಂಡೋತ್ಸವ' ಕೂಡಾ ಇದೆ ದಿನದಂದು ನಡೆಯುತ್ತದೆ. ಈ ದಿನ ಸೂರ್ಯ ಚಂದ್ರರು ಉತ್ತುಂಗದಲ್ಲಿ ಇರುತ್ತಾರೆ.ಸುವರ್ಣ ಯುಗದ ಆರಂಭ ,ಈ ದಿನವನ್ನು ಸುವರ್ಣ ಯುಗದ ಆರಂಭದ ಘಟ್ಟ ಎನ್ನಲಾಗುತ್ತದೆ. ಹೀಗಾಗಿ ಯಾವುದೇ ಪೂಜೆ ಪುನಸ್ಕಾರಗಳು, ವೃತ, ದಾನ, ಧರ್ಮ ಮಾಡಿದರೆ ಪುಣ್ಯ ಲಭಿಸುತ್ತದೆ. ಅಕ್ಷಯ ಎಂದರೆ ಮುಗಿಯದ ಅನ್ನುವ ಅರ್ಥ ಇರುವುದರಿಂದ ಈ ದಿನ ಹೊಸ ಕೆಲಸ ಆರಂಭಿಸಿದರೆ, ಶುಭವಾಗುತ್ತದೆ ಮತ್ತು ಹೆಚ್ಚಿನ ಅಭ್ಯುದಯವಾಗುತ್ತದೆ. ಚಿನ್ನ ಕೊಂಡರೆ ಅಥವಾ ಧರಿಸಿದರೆ, ಉತ್ತಮ ಭವಿಷ್ಯ ಲಭಿಸುತ್ತದೆ ಎನ್ನಲಾಗಿದೆ.

-ಹನುಮಂತ.ಮ.ದೇಶಕುಲಕಣಿ೯
ಸಾ.ಭೋಗೇನಾಗರಕೊಪ್ಪ-581196 

ಪ್ರೋಖಾನ್ -2

ಪ್ರತಿಯೊಬ್ಬ ಭಾರತೀಯನೂ ಓದಲೇಬೇಕು.....
" ಅಟಲ್ ಜೀ ಕಣ್ಣಂಚು ಆ ಕ್ಷಣ ಒದ್ದೇಯಾಗಿತ್ತು ".
ಹದಿನೈದು ವರ್ಷಗಳ ಹಿಂದೆ
ಅಟಲ್ಜೀ ಅಂತಹದೊಂದು
ಎದೆಗಾರಿಕೆಯ ಸಾಹಸಕ್ಕೆ ಮುನ್ನುಡಿ ಬರೆದರು. ಅಬ್ದುಲ್
ಕಲಾಮ್
ಸೇರಿದಂತೆ ಅತ್ಯುನ್ನತ
ವಿಜ್ಞಾನಿಗಳು ಜೊತೆಯಾದರು. ಭಾರತ ಜಗತ್ತಿನ
ಅರಿವಿಗೆ ಬಾರದಂತೆ ಯಶಸ್ವಿ ಅಣ್ವಸ್ತ್ರ ಪ್ರಯೋಗ
ನಡೆಸಿಯೇ ಬಿಟ್ಟಿತು. ತನ್ನ ತಾಕತ್ತನ್ನು ಮನವರಿಕೆ
ಮಾಡಿಸಿತು. ಆ
ಪ್ರಯೋಗಕ್ಕೀಗ ಹದಿನೈದರ ಸಂಭ್ರಮ. ಆದರೆ,
ಯಾರಿಗೆಷ್ಟು ನೆನಪಿದೆ! ?
ಮೇ ೧೧ರ ಆ ಕತೆಯೇ ರೋಚಕ. ೧೩ ದಿನಗಳ ಅಧಿಕಾರ
ದಕ್ಕಿದಾಗ
ಅಟಲ್ ಜೀ ಮಾಡಿದ ಮೊದಲ ಕೆಲಸವೇ
ವಿಜ್ಞಾನಿಗಳನ್ನು ಕರೆದು " ಭಾರತವನ್ನು ಗಂಡು
ರಾಷ್ಟ್ರವಾಗಿಸುತ್ತೀರಾ" ಎಂದು ಎಂದು ಕೇಳಿದ್ದು.
ವಿಜ್ಞಾನಿಗಳ ಮುಖದಲ್ಲಿ ಮಂದಹಸ ಮಿನುಗಿತ್ತು.
ಅವರೇನೋ ತಯಾರಿ ಶುರುವಿಟ್ಟರು. ಪಾಪ,
ಸರ್ಕಾರವೇ ೧೩
ದಿನಗಳಲ್ಲಿ ಬಿದ್ದುಹೋಯ್ತು. ರಾಷ್ಟ್ರಕ್ಕೆ
ಅದೆಷ್ಟು ಬೇಸರವಾಯ್ತೋ ,
ಪರಮಾಣು ಸಂಶೋಧನಾನಿರತ
ವಿಜ್ಞಾನಿಗಳಂತೂ ತಲೆಯ ಮೇಲೆ ಕೈ ಹೊತ್ತರು.
ಆಮೇಲೆ ಬಂದ ಐ.ಕೆ.ಗುಜರಾಲ್ ರನ್ನು,
ದೇವೇಗೌದರನ್ನು ಪರಿಪರಿಯಾಗಿ
ಕೇಳಿಕೊಂಡರೂ ಅವರು ಅಣ್ವಸ್ತ್ರ
ಪರೀಕ್ಷೆಗೆ ಒಪ್ಪಲೇ ಇಲ್ಲ. ಇರುವಷ್ಟು ದಿನ
ಆರಾಮಾಗಿ ಕಾಲ ಕಳೆದರೆ ಸಾಕೆಂಬುದು ಅವರ ಇಚ್ಛೆ.
ವಿಜ್ಞಾನಿಗಳಿಗೆ ಆಸೆಯಂತೂ ಇದ್ದೇ ಇತ್ತು.
ಭಾರತವನ್ನು ಜಗತ್ತಿನ ಅಣ್ವಸ್ತ್ರ ರಾಷ್ಟ್ರಗಳ
ಪಟ್ಟಿಯಲ್ಲಿ ನಿಲ್ಲಿಸಬಲ್ಲ ಆ ಧೀರ,
ಪ್ರಧಾನಿಯಾಗಿ ಮತ್ತೆ ಬಂದೇ ಬರುತ್ತಾನೆಂಬ
ಭರವಸೆಯೂ ಇತ್ತು. ಹಾಗೆಯೇ ಆಯಿತು. ೯೮ರಲ್ಲಿ ಅಟಲ್
ಜೀ ಮತ್ತೆ ಪ್ರಧಾನಿಯಾದರು. ಬಹುಮತವಿಲ್ಲದ
ಸರ್ಕಾರ ಅದು. ಹೀಗಾಗಿ ಸರ್ಕಾರ ಉರುಳುವ ಮುನ್ನ
ಕೊಟ್ಟ ಮಾತು ಉಳಿಸಿಕೊಳ್ಳಬೇಕಿತ್ತು.
ಆಗಿಂದಾಗಲೇ ಅವರು ಅಬ್ದುಲ್ ಕಲಾಮರನ್ನು ,
ಚಿದಂಬರಂರನ್ನು ಕರೆದು ಯೋಜನೆ
ನೆರವೇರಿಸುವುದು ಸಾಧ್ಯವೇ ಎಂದು ಕೇಳಿಕೊಂಡರು
. ` ನೀವು ಅಧಿಕಾರ
ಕಳಕೊಂಡರೂ ನಾವು ನಮ್ಮ ಸಂಶೋಧನೆ
ನಿಲ್ಲಿಸಲಿಲ್ಲ. ಹೀಗಾಗಿ ಈ ಬಾರಿ ಬರೀ
ಅಣ್ವಸ್ತ್ರವಲ್ಲ , ಹೈಡ್ರೋಜನ್ ಬಾಂಬನ್ನೇ ಸಿಡಿಸಿ
ಪರೀಕ್ಷಿಸೋಣ ಎಂದುಬಿಟ್ಟರು.
ಪ್ರಧಾನಿಗಂತೂ ಸ್ವರ್ಗಕ್ಕೆ ಮೂರೇ ಗೇಣು.
ಪೋಖರಣ್ನಲ್ಲಿ…
ಸವಾಲು ಸುಲಭವಾಗಿರಲಿಲ್ಲ. ಅಮೆರಿಕಾದ ೪
ಉಪಗ್ರಹಗಳು ಭಾರತವನ್ನೇ ಎಚ್ಚರಿಕೆಯಿಂದ
ಗಮನಿಸುತ್ತಿದ್ದವು. ಅಮೆರಿಕಾದ್
ಗೂಢಚಾರರು ಭಾರತದುದ್ದಗಲಕ್ಕೂ ಕದ್ದುಮುಚ್ಚಿ
ತಿರುಗಾಡುತ್ತಿದ್ದರು.
ಅನೇಕ ಬಾರಿ ಜತೆಗಿದ್ದವರೇ ಅಮೆರಿಕಾದ್ ಏಜೆಂಟರಾಗಿರುವ
ಸಂಭವವೂ ಇತ್ತು. ಕನಸೇನೋ ಭರ್ಜರಿ. ಆದರೆ
ಅದನ್ನು ನನಸು ಮಾಡುವಲ್ಲಿ
ಪ್ರಯಾಸವೂ ಜೋರಾಗಿಯೇ ಇತ್ತು.
ಅಟಲ್ ಜೀ ಎದೆಯೊಡ್ಡಿ ಸಿದ್ಧರಾಗಿದ್ದರು.
ಯೋಜನೆ ರೂಪುಗೊಂಡಿತು. ಕಲಾಂ ,
ಚಿದಂಬರಂ , ಅಟಲ್ ಜೀ ಮತ್ತು ಅವರ
ಕಾರ್ಯದರ್ಶಿ ಬ್ರಜೇಶ್ ಮಿಶ್ರಾರಿಗೆ ಬಿಟ್ಟರೆ ಏನಾಗಲಿದೆ
ಎನ್ನುವುದು ಐದನೆಯವರಿಗೆ ಗೊತ್ತಿರಲಿಲ್ಲ. ನಿಮಗೆ
ಆಶ್ಚರ್ಯವಾದೀತು. ಅಣ್ವಸ್ತ್ರ ಪರೀಕ್ಷೆ
ಮೇ ೧೧ರಂದು ನಿಗದಿಯಾಗಿದೆಯೆಂಬುದು ಅಂದಿನ
ರಕ್ಷಣಾ ಸಚಿವರಿಗೆ, ಗೃಹಸಚಿವರಿಗೆ ತಿಳಿದಿದ್ದು ಮೇ ೧೦ರ
ಸಂಜೆಯೇ!
ಪೋಖರಣ್ ಅನ್ನು ಈ ಯೋಜನೆಗೆ ಆರಿಸಿಕೊಳ್ಳಲಾಗಿತ್ತು.
ಅದಕ್ಕೆ ಕಾರಣವೂ ಇತ್ತು. ಸುತ್ತಲೂ ಮರಳ ರಾಶಿ , ನೀರಿನ
ಸೆಲೆಯೂ ಬಲು ಆಳದಲ್ಲಿತ್ತು. ಹೀಗಾಗಿ
ತಗ್ಗು ತೋಡುವಾಗ
ತೊಂದರೆಯೂ ಇಲ್ಲ , ಆಳಕ್ಕೆ ಹೋದಂತೆ
ನೀರನ್ನು ಬಸಿಯಬೇಕಾದ ಸಮಸ್ಯೆಯೂ ಇಲ್ಲ.
ಸೈನ್ಯದ ೫೮ ಇಂಜಿನಿಯರ್ ಗಳ ಬ್ರಿಗೇಡ್ ಹಳ್ಳ ತೋಡುವ
ಕೆಲಸ ಶುರು ಮಾಡಿತು. ಈ ಕೆಲಸವನ್ನು ಬೆಳಿಗ್ಗೆ
ಮಾಡುವಂತಿಲ್ಲ. ಕತ್ತಲಾದ ಮೇಲೆ ಕೆಲಸ
ಶುರು ಮಾಡಬೇಕು.
ಬೆಳಗಾಗುವುದರೊಳಗಾಗಿ ವಸ್ತುಗಳು ,
ವಾಹನಗಳು ಎಲ್ಲೆಲ್ಲಿದ್ದವೋ
ಅಲ್ಲಲ್ಲಿಯೇ ಇಟ್ಟು ಮಾಯವಾಗಬೇಕು. ಇಲ್ಲವಾದಲ್ಲಿ
ಅಮೆರಿಕಾದ ೪ ಉಪಗ್ರಹಗಳು ಜಗತ್ತಿನಾದ್ಯಂತ
ಬೊಂಬಡಾ ಬಜಾಯಿಸಿಬಿಡುತ್ತವೆ. ಆಮೇಲೆ
ಅಣ್ವಸ್ತ್ರ ಪರೀಕ್ಷೆ ಇರಲಿ , ಅದರ
ಮಾತಾಡುವುದೂ ಕಷ್ಟ. ಸೈನಿಕರು ತಗ್ಗು ತೋಡಿ
ವಿಜ್ಞಾನಿಗಳಿಗೆ ದಾರಿ
ಮಾಡಿಕೊಟ್ಟರು. ದೂರದೂರದಿಂದ ಪರಿಸರ
ವಿಜ್ಞಾನಿಗಳು ಬಂದು ಸುತ್ತಲಿನ ವಾತಾವರಣದ ಅಧ್ಯಯನ್
ಮಾಡಿ ವರದಿ ನೀಡಿ ಹೋಗುತ್ತಿದ್ದರು. ಆದರೆ
ಯಾರೊಬ್ಬರಿಗೂ ತಾವು ಇದನ್ನೆಲ್ಲ ಯಾವ
ಉದ್ದೇಶಕ್ಕಾಗಿ ಮಾಡುತ್ತಿದ್ದೇವೆ ಎಂಬುದು ಮಾತ್ರ
ಗೊತ್ತಿರಲಿಲ್ಲ, ಅಷ್ಟು ಗುಪ್ತವಾಗಿ ಉಳಿದಿತ್ತು
ಯೋಜನೆ!
ಅಬ್ದುಲ್ ಕಲಾಂ , ಚಿದಂಬರಂ , ಕಾಕೋಡ್ಕರ್
ರಂತಹ ವಿಜ್ಞಾನಿಗಳು ಅನುಮಾನ ಬರದಿರಲೆಂದು ಸೈನಿಕ
ವೇಷ ಧರಿಸಿದರು. ಉನ್ನತ ಹುದ್ದೆಯನ್ನೇ ಅವರುಗಳಿಗೆ
ನೀಡಲಾಗಿತ್ತು. ರಾಜಸ್ತಾನದ ಆ ಬಿರುಬಿಸಿಲಿನಲ್ಲಿ,
ಉರಿಯುವ ಟೆಂಟುಗಳಲ್ಲಿ ಎಸಿ ಇರಲಿ , ಫ್ಯಾನೂ ಇಲ್ಲದೆ
ಕೆಲಸ ಮಾಡಬೇಕಿತ್ತು. ಗಾಳಿಗೆ
ವೈರುಗಳು ಒಂದಕ್ಕೊಂದು ತಿಕ್ಕಾಡಿ ಬೆಂಕಿ
ಹೊತ್ತಿಕೊಂಡರೆ
ಪ್ರಮಾದವಾದೀತೆಂಬ ಹೆದರಿಕೆ ಇದ್ದೇ ಇತ್ತು.
ಇತ್ತ ಅಟಲ್ ಜೀ ಕಾಯುತ್ತಲಿದ್ದರು.ಮೇ ೧೦ಕ್ಕೆ
ರಾಷ್ಟ್ರಪತಿಗಳು ವಿದೇಶ ಪ್ರವಾಸ ಮುಗಿಸಿ ಬರಲಿದ್ದಾರೆ.
ಅದರ
ಮರುದಿನವೇ ಪರೀಕ್ಷಣೆ ನಡೆದುಬಿಡಲಿ
ಎಂದು ಅವರ ಯೋಚನೆ. ವಿಜ್ಞಾನಿಗಳೂ ಸಿದ್ಧತೆ
ಪೂರ್ಣಗೊಳಿಸಿದ್ದರು. ವೈಟ್ ಹೌಸ್, ತಾಜ್ ಮಹಲ್
ಎಂಬ ಎರಡು ತಗ್ಗುಗಳು , ನವ್ ತಾಲ್ ಎಂಬ ೪
ಹಳ್ಳಗಳು ನಿರ್ಮಾಣಗೊಂಡಿದ್ದವು. ವೈಟ್ ಹೌಸ್
ನೊಳಗೆ ಹೈಡ್ರೋಜನ್ ಬಾಂಬ್ ಪರೀಕ್ಷೆ.
ತಾಜ್ ಮಹಲ್ ನಿಂದ ಉಡಾಯಿಸಲು ಸಾಮಾನ್ಯ ಬಾಂಬು.
ಉಳಿದವು ಚಿಕ್ಕ ಪ್ರಮಾಣದ ಪರೀಕ್ಷೆಗಳು.
ದೊಡ್ಡ ದೊಡ್ಡ
ರಿಂಗ್ಗಳನ್ನು ತಗ್ಗಿನೊಳಗೆ
ಇಳಿಬಿಡಲು ಮರಳು ತುಂಬಿದ ಚೀಲಗಳನ್ನು
ಮೊದಲು ಇಳಿಸಬೇಕಿತ್ತು. ಅದರ ಂಏಲೆ ರಿಂಗ್
ಗಳು ಇಳಿಯಬೇಕು. ಸಮಯ ಬಲು ಕಡಿಮೆ ಇತ್ತು.ಇದ್ದ
ಕೆಲವೇ ಸೈನಿಕರು ಹಗಲು ರಾತ್ರಿ ಎನ್ನದೆ
ದುಡಿಯುತ್ತಿದ್ದರು.
ನಿಮಿಶಕ್ಕೆ ೩ ಮರಳ ಚೀಲವಾದರೆ ೨೪
ಗಂಟೆಗೆ಼ಷ್ಟು ಎಂಬೆಲ್ಲ ಲೆಕ್ಕಾಚಾರಗಳು ನಡೆದಿದ್ದವು.
ಎಲ್ಲರೂ ಕೆಲಸದಲ್ಲಿ ಮೈಮರೆತಿದ್ದರು.ಇದ್ದಕ್ಕಿದ್ದಂತೆ
ಒಂದೆರಡು ರಕ್ತದ ಹನಿ ಚೆಲ್ಲಿದ್ದು ಕಂಡುಬಂತು.
ಜಾಡು ಹುಡುಕಿಕೊಂಡು ಹೊರಟರೆ , ಸೈನಿಕರ
ಬಟ್ಟೆ ತೊಳೆಯುವ ದೋಭಿ ಎನ್.ಕೆ.ಡೇ , ತಾನೂ ಮರಳ
ಚೀಲ ಹೊರುವ ಕೆಲಸಕ್ಕೆ
ಬಂದುಬಿಟ್ಟಿದ್ದ. ಅವನ ಕೈಗೆ ಮರಳುಗಾಡಿನ ವಿಷಪೂರಿತ
ಚೇಳೊಂದು ಬಲವಾಗಿ ಕುಟುಕಿಬಿಟ್ಟಿತ್ತು.
ಅದರಿಂದ ವನ ಚರ್ಮ ಸೀಳಿ, ರಕ್ತ ಸುರಿದಿತ್ತು.
ಧೋಬಿಗೆ ಮಾತ್ರ ಅದರ ಅರಿವೂ ಆಗಲಿಲ್ಲ. ಆತ ತನ್ನ ಪಾಡಿಗೆ
ತಾನು ಕೆಲಸ ಮುಂದುವರೆಸಿದ್ದ. ಭಾರತದ
ಮಹತ್ಸಾಧನೆಯೊಂದಕ್ಕೆ ಮುನ್ನುಡಿ
ಬರೆಯಲಿದೆ. ಅದರಲ್ಲಿ ತಾನೂ ಭಾಗಿ ಎಂಬ
ಯೋಚನೆಯೇ ಅವನನ್ನು
ರೋಮಾಂಚನಗೊಳಿಸಿಬಿಟ್ಟಿತ್ತು.
ಅತ್ತ ಮುಂಚಿನ ದಿನ ಪೋಖರಣ್ ನ ಪಕ್ಕದ ಹಳ್ಳಿ
ಖಟೋರಿಯಲ್ಲಿ ನಾಳೆ ಮನೆಯಲ್ಲಿ ಯಾರೂ ಇರಬೇಡಿ , ಶಾಲೆಗೆ
ರಜೆ
ಕೊಡಿ, ಸೈನ್ಯದ
ಒಂದಷ್ಟು ಚಟುವಟಿಕೆಗಳನ್ನು ನಡೆಸಬೇಕಿದೆ ಎಂದು
ವಿನಂತಿಸಲು ಅಧಿಕಾರಿಯೊಬ್ಬರು ಹೋಗಿದ್ದರು.
ಸೋಹ್ರಂ ಎಂಬ ವ್ಯಕ್ತಿಯೊಬ್ಬ
ಅಧಿಕಾರಿಯ ಬಳಿ ಬಂದು, ನನಗೆ ಗೊತ್ತು ,
ಬಾಂಬ್ ಪರೀಕ್ಷೆ ನಡೆಸುತ್ತಿದ್ದೀರಿ ತಾನೆ ?
೧೯೭೪ರಲ್ಲೂ ಹೀಗೇ ಆಗಿತ್ತು. ಅವತ್ತು ನಮ್ಮ
ಮನೆಯ ಸೂರು ಸೀಳಿಹೋಗಿತ್ತು. ಮನೆ
ಬಿದ್ದರೂ ಚಿಂತೆಯಿಲ್ಲ, ನೀವು ಮುಂದುವರೆಸಿರಿ ;
ನಾವು ನಿಮ್ಮೊಂದಿಗಿದ್ದೇವೆ ’ ಎಂದಿದ್ದ.
ಅಧಿಕಾರಿ ಅವಾಕ್ಕಾಗಿ
ಸೋಹ್ರಂನನ್ನು ತಬ್ಬಿಕೊಂಡಿದ್ದ.
ಕೊನೆಗೂ ಆ ಸಮಯ ಬಂದುಬಿಟ್ಟಿತ್ತು.
ಮೇ ೧೦ಕ್ಕೆ ಆಕಾಶ ಬಿರಿಯುವಂತಹ ಮಳೆ.
ಗುಡುಗು ಸಿಡಿಲುಗಳು ಎಲ್ಲರನ್ನೂ ಆತಂಕಕ್ಕೆ
ನೂಕಿಬಿಟ್ಟಿದ್ದವು. ಎರಡು ಗೋಲಗಳಲ್ಲಿ ತುಂಬಿಟ್ಟಿದ್ದ
ಪ್ಲುಟೋನಿಯಮ್ ಮಿಸುಕಾಡಿದ್ದರೆ
ಅನಾಹುತವೇ ಕಾದಿತ್ತು. ಇಡಿಯ
ಯೋಜನೆಯ ಮಹತ್ವದ ಕೊಂಡಿಯಾಗಿದ್ದ
ವಿಜ್ಞಾನಿ ಕಾಕೋಡ್ಕರ್ ರ ತಂದೆ
ತೀರಿಕೊಂಡ ಸುದ್ದಿ ಬಂತು. ಎಲ್ಲರ
ಮುಖವೂ ಕಪ್ಪಿಟ್ಟಿತು. ಕಾಕೋಡ್ಕರ್ ಊರಿಗೆ ಧಾವಿಸಿ ,
ತಂದೆಯ
ಅಂತ್ಯ ಸಂಸ್ಕಾರ ಮುಗಿಸಿ , ಮುಂದಿನ
ಅನುಷ್ಠಾನಗಳಿಗೆ ಕಾಯದೇ ಮರಳಿ ಬಂದುಬಿಟ್ಟರು.
` ನಮ್ಮಪ್ಪ ಇದ್ದಿದ್ದರೆ ,
ಹೀಗೇ ಮಾಡಲು ಹೇಳಿರುತ್ತಿದ್ದರು ’ ಎಂದರು.
ಮರುದಿನದ ವೇಳೆಗೆ ಎಲ್ಲ ಬಗೆಯ ಮೋಡಗಳೂ ತಿಳಿಯಾದವು.
ಬಿರುಬಿಸಿಲೂ ಬಂದಿತು. ಇನ್ನೇನು ಪರೀಕ್ಷೆ
ಶುರುವಾಗಬೇಕು, ಅಷ್ಟರಲ್ಲಿ ಅನಿರೀಕ್ಷಿತವಾಗಿ ಬಿರುಗಾಳಿ
ಶುರುವಾಯ್ತು. ಮತ್ತೊಂದು ಬಗೆಯ ಹೆದರಿಕೆ ಈಗ.
ಅಣ್ವಸ್ತ್ರ ಪರೀಕ್ಷೆ ಒಂದು ಗಂಟೆ
ಮುಂದೆ ಹೋಯ್ತು. ಇತ್ತ ವಿಜ್ಞಾನಿಗಳ ಮುಖ
ಬೆಪ್ಪಾಯ್ತು.
ಅತ್ತ ಪ್ರಧಾನಮಂತ್ರಿಗಳ ಮನೆಯಲ್ಲಿ ಅಟಲ್
ಜೀ, ಅಡ್ವಾಣಿ ಮತ್ತು ಜಾರ್ಜ್ ರ ಮುಖದಲ್ಲಿ
ಆತಂಕದ ಗೆರೆಗಳು. ಬ್ರಜೇಶ್ ಮಿಶ್ರಾ ನಿರಂತರ ಫೋನಿಗೆ
ಕಿವಿಗೊಟ್ಟು ಕೂತಿದ್ದಾರೆ. ಯಾವುದನ್ನೂ ನೇರವಾಗಿ
ಕೇಳುವಂತಿಲ್ಲ. ಎಲ್ಲವನ್ನೂ ಸಂಕೇತ
ಭಾಷೆಯಲ್ಲೇ ಕೇಳಬೇಕು.
ಒಂದು ಗಂಟೆಯ ನಂತರ ಬಿರುಗಾಳಿ ನಿಂತಿತು.
ಮರಳು ಶಾಂತವಾಯ್ತು.
ವಿಜ್ಞಾನಿಗಳು ಕಾರ್ಯಪ್ರವೃತ್ತರಾದರು. ಸ್ಪರೀಕ್ಷೆಯ
ಪರಿಣಾಮಗಳನ್ನು
ಸೆರೆಹಿಡಿಯಲು ಕ್ಯಾಮೆರಾವೊಂದನ್ನು
ನೇತುಹಾಕಲಾಗಿತ್ತು. ವಿಜ್ಞಾನಿಗಳು ಗಣನೆ
ಶುರುಮಾಡಿದರು. ೫…೪ …
೩…೨ …೧…. ಅವರೆದುರಿನ ಟೀವಿ ಪರದೆಯಲ್ಲಿ
ಸಹಸ್ರ ಮಿಂಚುಗಳು ಸಿಡಿದಂತಹ ಬೆಳಕು ಧಿಗ್ಗನೆ
ಕಂಡಿತು. ಒಮ್ಮೆ ಕುಳಿತ ಭೂಮಿ ಅಲುಗಾಡಿತು.
ಭೂಮಿಯೊಳಗಿನ ಆ ಅಲುಗಾಟ ರಿಕ್ಟರ್ ಮಾಪಕದಲ್ಲಿ
ಒಂದಷ್ಟು ಸಂಕೇತವನ್ನು ಗೀಚಿತು.
ವಿಜ್ಞಾನಿಗಳ ಪ್ರಯತ್ನ ಸಾರ್ಥಕವಾಯ್ತು.
ಅವರು ಕುಣಿದಾಡುತ್ತ
ಪ್ರಧಾನ ಮಂತ್ರಿಗಳಿಗೆ ಸುದ್ದಿ ಮುಟ್ಟಿಸಿದರು. ` ವೈಟ್ ಹೌಸ್
ಸಿಡಿಯಿತು, ಬುದ್ಧ ಮತ್ತೆ ನಕ್ಕ! ’ ಅಟಲ್
ಜೀ ಕಣ್ಣಂಚು ಒದ್ದೆಯಾಯ್ತು. ಜಾರ್ಜ್,
ಅಡ್ವಾಣಿಯರೂ ಅಷ್ಟೇ ಭಾವುಕರಾಗಿದ್ದರು.
ಅಮೆರಿಕಾ ಬೆಕ್ಕಸ ಬೆರಗಾಗಿತ್ತು. ಕೋಟ್ಯಂತರ
ಡಾಲರುಗಳನ್ನು ಸುರಿದೂ ಅದು ಭಾರತದ ಅಣ್ವಸ್ತ್ರ
ಪರೀಕ್ಷೆಯ ಜಾಡು ಹಿಡಿಯುವಲ್ಲಿ ಸೋತಿತ್ತು. ಭಾರತ
ಮಾತ್ರ ಎದೆಯುಬ್ಬಿಸಿ ಬೀಗುತ್ತ
ಜಗದೆದುರು ನಿಂತಿತ್ತು.
೧೫ ವರ್ಷಗಳು ಸರ್ರನೆ ಕಳೆದುಹೋಯ್ತು. ದೇಶದ ಆತ್ಮಗೌರವ
ರಕ್ಷಣೆಗೆ ಕಣಕಣವನ್ನು ಬಸಿದ ವಿಜ್ಞಾನಿಗಳು ಸಾಮಾನ್ಯ
ಜನರ ಪಾಲಿಗೆ ಹೀರೋಗಳೆನಿಸಲೇ ಇಲ್ಲ. ಕೇವಲ
ಕ್ರಿಕೇಟಿಗರು,
ಸಿನಿಮಾ ತಾರೆಯರೆ ಜನರ
ಪಾಲಿಗೇನಿದ್ದರು ಹಿರೋಗಳೇ ಅನಿಸಿಕೋಳ್ಳುತ್ತಿ
ದ್ದಾರೇ.
ಅಟಲ್ ಜೀ, ಅಬ್ದುಲ್ ಕಲಾಂ ಜೀ ಮತ್ತು ಎಲ್ಲ
ವಿಜ್ಞಾನಿಗಳೇ ಧನ್ಯವಾದಗಳು ನಿಮ್ಮ ದೇಶ ಸೇವೆಗೆ...🙏🙏🙏
-ಹನುಮಂತ.ಮ.ದೇಶಕುಲಕಣಿ೯
ಸಾ.ಭೋಗೇನಾಗರಕೊಪ್ಪ-581196 

ಪ್ರೋಖಾನ್ -2

ಪ್ರತಿಯೊಬ್ಬ ಭಾರತೀಯನೂ ಓದಲೇಬೇಕು.....
" ಅಟಲ್ ಜೀ ಕಣ್ಣಂಚು ಆ ಕ್ಷಣ ಒದ್ದೇಯಾಗಿತ್ತು ".
ಹದಿನೈದು ವರ್ಷಗಳ ಹಿಂದೆ
ಅಟಲ್ಜೀ ಅಂತಹದೊಂದು
ಎದೆಗಾರಿಕೆಯ ಸಾಹಸಕ್ಕೆ ಮುನ್ನುಡಿ ಬರೆದರು. ಅಬ್ದುಲ್
ಕಲಾಮ್
ಸೇರಿದಂತೆ ಅತ್ಯುನ್ನತ
ವಿಜ್ಞಾನಿಗಳು ಜೊತೆಯಾದರು. ಭಾರತ ಜಗತ್ತಿನ
ಅರಿವಿಗೆ ಬಾರದಂತೆ ಯಶಸ್ವಿ ಅಣ್ವಸ್ತ್ರ ಪ್ರಯೋಗ
ನಡೆಸಿಯೇ ಬಿಟ್ಟಿತು. ತನ್ನ ತಾಕತ್ತನ್ನು ಮನವರಿಕೆ
ಮಾಡಿಸಿತು. ಆ
ಪ್ರಯೋಗಕ್ಕೀಗ ಹದಿನೈದರ ಸಂಭ್ರಮ. ಆದರೆ,
ಯಾರಿಗೆಷ್ಟು ನೆನಪಿದೆ! ?
ಮೇ ೧೧ರ ಆ ಕತೆಯೇ ರೋಚಕ. ೧೩ ದಿನಗಳ ಅಧಿಕಾರ
ದಕ್ಕಿದಾಗ
ಅಟಲ್ ಜೀ ಮಾಡಿದ ಮೊದಲ ಕೆಲಸವೇ
ವಿಜ್ಞಾನಿಗಳನ್ನು ಕರೆದು " ಭಾರತವನ್ನು ಗಂಡು
ರಾಷ್ಟ್ರವಾಗಿಸುತ್ತೀರಾ" ಎಂದು ಎಂದು ಕೇಳಿದ್ದು.
ವಿಜ್ಞಾನಿಗಳ ಮುಖದಲ್ಲಿ ಮಂದಹಸ ಮಿನುಗಿತ್ತು.
ಅವರೇನೋ ತಯಾರಿ ಶುರುವಿಟ್ಟರು. ಪಾಪ,
ಸರ್ಕಾರವೇ ೧೩
ದಿನಗಳಲ್ಲಿ ಬಿದ್ದುಹೋಯ್ತು. ರಾಷ್ಟ್ರಕ್ಕೆ
ಅದೆಷ್ಟು ಬೇಸರವಾಯ್ತೋ ,
ಪರಮಾಣು ಸಂಶೋಧನಾನಿರತ
ವಿಜ್ಞಾನಿಗಳಂತೂ ತಲೆಯ ಮೇಲೆ ಕೈ ಹೊತ್ತರು.
ಆಮೇಲೆ ಬಂದ ಐ.ಕೆ.ಗುಜರಾಲ್ ರನ್ನು,
ದೇವೇಗೌದರನ್ನು ಪರಿಪರಿಯಾಗಿ
ಕೇಳಿಕೊಂಡರೂ ಅವರು ಅಣ್ವಸ್ತ್ರ
ಪರೀಕ್ಷೆಗೆ ಒಪ್ಪಲೇ ಇಲ್ಲ. ಇರುವಷ್ಟು ದಿನ
ಆರಾಮಾಗಿ ಕಾಲ ಕಳೆದರೆ ಸಾಕೆಂಬುದು ಅವರ ಇಚ್ಛೆ.
ವಿಜ್ಞಾನಿಗಳಿಗೆ ಆಸೆಯಂತೂ ಇದ್ದೇ ಇತ್ತು.
ಭಾರತವನ್ನು ಜಗತ್ತಿನ ಅಣ್ವಸ್ತ್ರ ರಾಷ್ಟ್ರಗಳ
ಪಟ್ಟಿಯಲ್ಲಿ ನಿಲ್ಲಿಸಬಲ್ಲ ಆ ಧೀರ,
ಪ್ರಧಾನಿಯಾಗಿ ಮತ್ತೆ ಬಂದೇ ಬರುತ್ತಾನೆಂಬ
ಭರವಸೆಯೂ ಇತ್ತು. ಹಾಗೆಯೇ ಆಯಿತು. ೯೮ರಲ್ಲಿ ಅಟಲ್
ಜೀ ಮತ್ತೆ ಪ್ರಧಾನಿಯಾದರು. ಬಹುಮತವಿಲ್ಲದ
ಸರ್ಕಾರ ಅದು. ಹೀಗಾಗಿ ಸರ್ಕಾರ ಉರುಳುವ ಮುನ್ನ
ಕೊಟ್ಟ ಮಾತು ಉಳಿಸಿಕೊಳ್ಳಬೇಕಿತ್ತು.
ಆಗಿಂದಾಗಲೇ ಅವರು ಅಬ್ದುಲ್ ಕಲಾಮರನ್ನು ,
ಚಿದಂಬರಂರನ್ನು ಕರೆದು ಯೋಜನೆ
ನೆರವೇರಿಸುವುದು ಸಾಧ್ಯವೇ ಎಂದು ಕೇಳಿಕೊಂಡರು
. ` ನೀವು ಅಧಿಕಾರ
ಕಳಕೊಂಡರೂ ನಾವು ನಮ್ಮ ಸಂಶೋಧನೆ
ನಿಲ್ಲಿಸಲಿಲ್ಲ. ಹೀಗಾಗಿ ಈ ಬಾರಿ ಬರೀ
ಅಣ್ವಸ್ತ್ರವಲ್ಲ , ಹೈಡ್ರೋಜನ್ ಬಾಂಬನ್ನೇ ಸಿಡಿಸಿ
ಪರೀಕ್ಷಿಸೋಣ ಎಂದುಬಿಟ್ಟರು.
ಪ್ರಧಾನಿಗಂತೂ ಸ್ವರ್ಗಕ್ಕೆ ಮೂರೇ ಗೇಣು.
ಪೋಖರಣ್ನಲ್ಲಿ…
ಸವಾಲು ಸುಲಭವಾಗಿರಲಿಲ್ಲ. ಅಮೆರಿಕಾದ ೪
ಉಪಗ್ರಹಗಳು ಭಾರತವನ್ನೇ ಎಚ್ಚರಿಕೆಯಿಂದ
ಗಮನಿಸುತ್ತಿದ್ದವು. ಅಮೆರಿಕಾದ್
ಗೂಢಚಾರರು ಭಾರತದುದ್ದಗಲಕ್ಕೂ ಕದ್ದುಮುಚ್ಚಿ
ತಿರುಗಾಡುತ್ತಿದ್ದರು.
ಅನೇಕ ಬಾರಿ ಜತೆಗಿದ್ದವರೇ ಅಮೆರಿಕಾದ್ ಏಜೆಂಟರಾಗಿರುವ
ಸಂಭವವೂ ಇತ್ತು. ಕನಸೇನೋ ಭರ್ಜರಿ. ಆದರೆ
ಅದನ್ನು ನನಸು ಮಾಡುವಲ್ಲಿ
ಪ್ರಯಾಸವೂ ಜೋರಾಗಿಯೇ ಇತ್ತು.
ಅಟಲ್ ಜೀ ಎದೆಯೊಡ್ಡಿ ಸಿದ್ಧರಾಗಿದ್ದರು.
ಯೋಜನೆ ರೂಪುಗೊಂಡಿತು. ಕಲಾಂ ,
ಚಿದಂಬರಂ , ಅಟಲ್ ಜೀ ಮತ್ತು ಅವರ
ಕಾರ್ಯದರ್ಶಿ ಬ್ರಜೇಶ್ ಮಿಶ್ರಾರಿಗೆ ಬಿಟ್ಟರೆ ಏನಾಗಲಿದೆ
ಎನ್ನುವುದು ಐದನೆಯವರಿಗೆ ಗೊತ್ತಿರಲಿಲ್ಲ. ನಿಮಗೆ
ಆಶ್ಚರ್ಯವಾದೀತು. ಅಣ್ವಸ್ತ್ರ ಪರೀಕ್ಷೆ
ಮೇ ೧೧ರಂದು ನಿಗದಿಯಾಗಿದೆಯೆಂಬುದು ಅಂದಿನ
ರಕ್ಷಣಾ ಸಚಿವರಿಗೆ, ಗೃಹಸಚಿವರಿಗೆ ತಿಳಿದಿದ್ದು ಮೇ ೧೦ರ
ಸಂಜೆಯೇ!
ಪೋಖರಣ್ ಅನ್ನು ಈ ಯೋಜನೆಗೆ ಆರಿಸಿಕೊಳ್ಳಲಾಗಿತ್ತು.
ಅದಕ್ಕೆ ಕಾರಣವೂ ಇತ್ತು. ಸುತ್ತಲೂ ಮರಳ ರಾಶಿ , ನೀರಿನ
ಸೆಲೆಯೂ ಬಲು ಆಳದಲ್ಲಿತ್ತು. ಹೀಗಾಗಿ
ತಗ್ಗು ತೋಡುವಾಗ
ತೊಂದರೆಯೂ ಇಲ್ಲ , ಆಳಕ್ಕೆ ಹೋದಂತೆ
ನೀರನ್ನು ಬಸಿಯಬೇಕಾದ ಸಮಸ್ಯೆಯೂ ಇಲ್ಲ.
ಸೈನ್ಯದ ೫೮ ಇಂಜಿನಿಯರ್ ಗಳ ಬ್ರಿಗೇಡ್ ಹಳ್ಳ ತೋಡುವ
ಕೆಲಸ ಶುರು ಮಾಡಿತು. ಈ ಕೆಲಸವನ್ನು ಬೆಳಿಗ್ಗೆ
ಮಾಡುವಂತಿಲ್ಲ. ಕತ್ತಲಾದ ಮೇಲೆ ಕೆಲಸ
ಶುರು ಮಾಡಬೇಕು.
ಬೆಳಗಾಗುವುದರೊಳಗಾಗಿ ವಸ್ತುಗಳು ,
ವಾಹನಗಳು ಎಲ್ಲೆಲ್ಲಿದ್ದವೋ
ಅಲ್ಲಲ್ಲಿಯೇ ಇಟ್ಟು ಮಾಯವಾಗಬೇಕು. ಇಲ್ಲವಾದಲ್ಲಿ
ಅಮೆರಿಕಾದ ೪ ಉಪಗ್ರಹಗಳು ಜಗತ್ತಿನಾದ್ಯಂತ
ಬೊಂಬಡಾ ಬಜಾಯಿಸಿಬಿಡುತ್ತವೆ. ಆಮೇಲೆ
ಅಣ್ವಸ್ತ್ರ ಪರೀಕ್ಷೆ ಇರಲಿ , ಅದರ
ಮಾತಾಡುವುದೂ ಕಷ್ಟ. ಸೈನಿಕರು ತಗ್ಗು ತೋಡಿ
ವಿಜ್ಞಾನಿಗಳಿಗೆ ದಾರಿ
ಮಾಡಿಕೊಟ್ಟರು. ದೂರದೂರದಿಂದ ಪರಿಸರ
ವಿಜ್ಞಾನಿಗಳು ಬಂದು ಸುತ್ತಲಿನ ವಾತಾವರಣದ ಅಧ್ಯಯನ್
ಮಾಡಿ ವರದಿ ನೀಡಿ ಹೋಗುತ್ತಿದ್ದರು. ಆದರೆ
ಯಾರೊಬ್ಬರಿಗೂ ತಾವು ಇದನ್ನೆಲ್ಲ ಯಾವ
ಉದ್ದೇಶಕ್ಕಾಗಿ ಮಾಡುತ್ತಿದ್ದೇವೆ ಎಂಬುದು ಮಾತ್ರ
ಗೊತ್ತಿರಲಿಲ್ಲ, ಅಷ್ಟು ಗುಪ್ತವಾಗಿ ಉಳಿದಿತ್ತು
ಯೋಜನೆ!
ಅಬ್ದುಲ್ ಕಲಾಂ , ಚಿದಂಬರಂ , ಕಾಕೋಡ್ಕರ್
ರಂತಹ ವಿಜ್ಞಾನಿಗಳು ಅನುಮಾನ ಬರದಿರಲೆಂದು ಸೈನಿಕ
ವೇಷ ಧರಿಸಿದರು. ಉನ್ನತ ಹುದ್ದೆಯನ್ನೇ ಅವರುಗಳಿಗೆ
ನೀಡಲಾಗಿತ್ತು. ರಾಜಸ್ತಾನದ ಆ ಬಿರುಬಿಸಿಲಿನಲ್ಲಿ,
ಉರಿಯುವ ಟೆಂಟುಗಳಲ್ಲಿ ಎಸಿ ಇರಲಿ , ಫ್ಯಾನೂ ಇಲ್ಲದೆ
ಕೆಲಸ ಮಾಡಬೇಕಿತ್ತು. ಗಾಳಿಗೆ
ವೈರುಗಳು ಒಂದಕ್ಕೊಂದು ತಿಕ್ಕಾಡಿ ಬೆಂಕಿ
ಹೊತ್ತಿಕೊಂಡರೆ
ಪ್ರಮಾದವಾದೀತೆಂಬ ಹೆದರಿಕೆ ಇದ್ದೇ ಇತ್ತು.
ಇತ್ತ ಅಟಲ್ ಜೀ ಕಾಯುತ್ತಲಿದ್ದರು.ಮೇ ೧೦ಕ್ಕೆ
ರಾಷ್ಟ್ರಪತಿಗಳು ವಿದೇಶ ಪ್ರವಾಸ ಮುಗಿಸಿ ಬರಲಿದ್ದಾರೆ.
ಅದರ
ಮರುದಿನವೇ ಪರೀಕ್ಷಣೆ ನಡೆದುಬಿಡಲಿ
ಎಂದು ಅವರ ಯೋಚನೆ. ವಿಜ್ಞಾನಿಗಳೂ ಸಿದ್ಧತೆ
ಪೂರ್ಣಗೊಳಿಸಿದ್ದರು. ವೈಟ್ ಹೌಸ್, ತಾಜ್ ಮಹಲ್
ಎಂಬ ಎರಡು ತಗ್ಗುಗಳು , ನವ್ ತಾಲ್ ಎಂಬ ೪
ಹಳ್ಳಗಳು ನಿರ್ಮಾಣಗೊಂಡಿದ್ದವು. ವೈಟ್ ಹೌಸ್
ನೊಳಗೆ ಹೈಡ್ರೋಜನ್ ಬಾಂಬ್ ಪರೀಕ್ಷೆ.
ತಾಜ್ ಮಹಲ್ ನಿಂದ ಉಡಾಯಿಸಲು ಸಾಮಾನ್ಯ ಬಾಂಬು.
ಉಳಿದವು ಚಿಕ್ಕ ಪ್ರಮಾಣದ ಪರೀಕ್ಷೆಗಳು.
ದೊಡ್ಡ ದೊಡ್ಡ
ರಿಂಗ್ಗಳನ್ನು ತಗ್ಗಿನೊಳಗೆ
ಇಳಿಬಿಡಲು ಮರಳು ತುಂಬಿದ ಚೀಲಗಳನ್ನು
ಮೊದಲು ಇಳಿಸಬೇಕಿತ್ತು. ಅದರ ಂಏಲೆ ರಿಂಗ್
ಗಳು ಇಳಿಯಬೇಕು. ಸಮಯ ಬಲು ಕಡಿಮೆ ಇತ್ತು.ಇದ್ದ
ಕೆಲವೇ ಸೈನಿಕರು ಹಗಲು ರಾತ್ರಿ ಎನ್ನದೆ
ದುಡಿಯುತ್ತಿದ್ದರು.
ನಿಮಿಶಕ್ಕೆ ೩ ಮರಳ ಚೀಲವಾದರೆ ೨೪
ಗಂಟೆಗೆ಼ಷ್ಟು ಎಂಬೆಲ್ಲ ಲೆಕ್ಕಾಚಾರಗಳು ನಡೆದಿದ್ದವು.
ಎಲ್ಲರೂ ಕೆಲಸದಲ್ಲಿ ಮೈಮರೆತಿದ್ದರು.ಇದ್ದಕ್ಕಿದ್ದಂತೆ
ಒಂದೆರಡು ರಕ್ತದ ಹನಿ ಚೆಲ್ಲಿದ್ದು ಕಂಡುಬಂತು.
ಜಾಡು ಹುಡುಕಿಕೊಂಡು ಹೊರಟರೆ , ಸೈನಿಕರ
ಬಟ್ಟೆ ತೊಳೆಯುವ ದೋಭಿ ಎನ್.ಕೆ.ಡೇ , ತಾನೂ ಮರಳ
ಚೀಲ ಹೊರುವ ಕೆಲಸಕ್ಕೆ
ಬಂದುಬಿಟ್ಟಿದ್ದ. ಅವನ ಕೈಗೆ ಮರಳುಗಾಡಿನ ವಿಷಪೂರಿತ
ಚೇಳೊಂದು ಬಲವಾಗಿ ಕುಟುಕಿಬಿಟ್ಟಿತ್ತು.
ಅದರಿಂದ ವನ ಚರ್ಮ ಸೀಳಿ, ರಕ್ತ ಸುರಿದಿತ್ತು.
ಧೋಬಿಗೆ ಮಾತ್ರ ಅದರ ಅರಿವೂ ಆಗಲಿಲ್ಲ. ಆತ ತನ್ನ ಪಾಡಿಗೆ
ತಾನು ಕೆಲಸ ಮುಂದುವರೆಸಿದ್ದ. ಭಾರತದ
ಮಹತ್ಸಾಧನೆಯೊಂದಕ್ಕೆ ಮುನ್ನುಡಿ
ಬರೆಯಲಿದೆ. ಅದರಲ್ಲಿ ತಾನೂ ಭಾಗಿ ಎಂಬ
ಯೋಚನೆಯೇ ಅವನನ್ನು
ರೋಮಾಂಚನಗೊಳಿಸಿಬಿಟ್ಟಿತ್ತು.
ಅತ್ತ ಮುಂಚಿನ ದಿನ ಪೋಖರಣ್ ನ ಪಕ್ಕದ ಹಳ್ಳಿ
ಖಟೋರಿಯಲ್ಲಿ ನಾಳೆ ಮನೆಯಲ್ಲಿ ಯಾರೂ ಇರಬೇಡಿ , ಶಾಲೆಗೆ
ರಜೆ
ಕೊಡಿ, ಸೈನ್ಯದ
ಒಂದಷ್ಟು ಚಟುವಟಿಕೆಗಳನ್ನು ನಡೆಸಬೇಕಿದೆ ಎಂದು
ವಿನಂತಿಸಲು ಅಧಿಕಾರಿಯೊಬ್ಬರು ಹೋಗಿದ್ದರು.
ಸೋಹ್ರಂ ಎಂಬ ವ್ಯಕ್ತಿಯೊಬ್ಬ
ಅಧಿಕಾರಿಯ ಬಳಿ ಬಂದು, ನನಗೆ ಗೊತ್ತು ,
ಬಾಂಬ್ ಪರೀಕ್ಷೆ ನಡೆಸುತ್ತಿದ್ದೀರಿ ತಾನೆ ?
೧೯೭೪ರಲ್ಲೂ ಹೀಗೇ ಆಗಿತ್ತು. ಅವತ್ತು ನಮ್ಮ
ಮನೆಯ ಸೂರು ಸೀಳಿಹೋಗಿತ್ತು. ಮನೆ
ಬಿದ್ದರೂ ಚಿಂತೆಯಿಲ್ಲ, ನೀವು ಮುಂದುವರೆಸಿರಿ ;
ನಾವು ನಿಮ್ಮೊಂದಿಗಿದ್ದೇವೆ ’ ಎಂದಿದ್ದ.
ಅಧಿಕಾರಿ ಅವಾಕ್ಕಾಗಿ
ಸೋಹ್ರಂನನ್ನು ತಬ್ಬಿಕೊಂಡಿದ್ದ.
ಕೊನೆಗೂ ಆ ಸಮಯ ಬಂದುಬಿಟ್ಟಿತ್ತು.
ಮೇ ೧೦ಕ್ಕೆ ಆಕಾಶ ಬಿರಿಯುವಂತಹ ಮಳೆ.
ಗುಡುಗು ಸಿಡಿಲುಗಳು ಎಲ್ಲರನ್ನೂ ಆತಂಕಕ್ಕೆ
ನೂಕಿಬಿಟ್ಟಿದ್ದವು. ಎರಡು ಗೋಲಗಳಲ್ಲಿ ತುಂಬಿಟ್ಟಿದ್ದ
ಪ್ಲುಟೋನಿಯಮ್ ಮಿಸುಕಾಡಿದ್ದರೆ
ಅನಾಹುತವೇ ಕಾದಿತ್ತು. ಇಡಿಯ
ಯೋಜನೆಯ ಮಹತ್ವದ ಕೊಂಡಿಯಾಗಿದ್ದ
ವಿಜ್ಞಾನಿ ಕಾಕೋಡ್ಕರ್ ರ ತಂದೆ
ತೀರಿಕೊಂಡ ಸುದ್ದಿ ಬಂತು. ಎಲ್ಲರ
ಮುಖವೂ ಕಪ್ಪಿಟ್ಟಿತು. ಕಾಕೋಡ್ಕರ್ ಊರಿಗೆ ಧಾವಿಸಿ ,
ತಂದೆಯ
ಅಂತ್ಯ ಸಂಸ್ಕಾರ ಮುಗಿಸಿ , ಮುಂದಿನ
ಅನುಷ್ಠಾನಗಳಿಗೆ ಕಾಯದೇ ಮರಳಿ ಬಂದುಬಿಟ್ಟರು.
` ನಮ್ಮಪ್ಪ ಇದ್ದಿದ್ದರೆ ,
ಹೀಗೇ ಮಾಡಲು ಹೇಳಿರುತ್ತಿದ್ದರು ’ ಎಂದರು.
ಮರುದಿನದ ವೇಳೆಗೆ ಎಲ್ಲ ಬಗೆಯ ಮೋಡಗಳೂ ತಿಳಿಯಾದವು.
ಬಿರುಬಿಸಿಲೂ ಬಂದಿತು. ಇನ್ನೇನು ಪರೀಕ್ಷೆ
ಶುರುವಾಗಬೇಕು, ಅಷ್ಟರಲ್ಲಿ ಅನಿರೀಕ್ಷಿತವಾಗಿ ಬಿರುಗಾಳಿ
ಶುರುವಾಯ್ತು. ಮತ್ತೊಂದು ಬಗೆಯ ಹೆದರಿಕೆ ಈಗ.
ಅಣ್ವಸ್ತ್ರ ಪರೀಕ್ಷೆ ಒಂದು ಗಂಟೆ
ಮುಂದೆ ಹೋಯ್ತು. ಇತ್ತ ವಿಜ್ಞಾನಿಗಳ ಮುಖ
ಬೆಪ್ಪಾಯ್ತು.
ಅತ್ತ ಪ್ರಧಾನಮಂತ್ರಿಗಳ ಮನೆಯಲ್ಲಿ ಅಟಲ್
ಜೀ, ಅಡ್ವಾಣಿ ಮತ್ತು ಜಾರ್ಜ್ ರ ಮುಖದಲ್ಲಿ
ಆತಂಕದ ಗೆರೆಗಳು. ಬ್ರಜೇಶ್ ಮಿಶ್ರಾ ನಿರಂತರ ಫೋನಿಗೆ
ಕಿವಿಗೊಟ್ಟು ಕೂತಿದ್ದಾರೆ. ಯಾವುದನ್ನೂ ನೇರವಾಗಿ
ಕೇಳುವಂತಿಲ್ಲ. ಎಲ್ಲವನ್ನೂ ಸಂಕೇತ
ಭಾಷೆಯಲ್ಲೇ ಕೇಳಬೇಕು.
ಒಂದು ಗಂಟೆಯ ನಂತರ ಬಿರುಗಾಳಿ ನಿಂತಿತು.
ಮರಳು ಶಾಂತವಾಯ್ತು.
ವಿಜ್ಞಾನಿಗಳು ಕಾರ್ಯಪ್ರವೃತ್ತರಾದರು. ಸ್ಪರೀಕ್ಷೆಯ
ಪರಿಣಾಮಗಳನ್ನು
ಸೆರೆಹಿಡಿಯಲು ಕ್ಯಾಮೆರಾವೊಂದನ್ನು
ನೇತುಹಾಕಲಾಗಿತ್ತು. ವಿಜ್ಞಾನಿಗಳು ಗಣನೆ
ಶುರುಮಾಡಿದರು. ೫…೪ …
೩…೨ …೧…. ಅವರೆದುರಿನ ಟೀವಿ ಪರದೆಯಲ್ಲಿ
ಸಹಸ್ರ ಮಿಂಚುಗಳು ಸಿಡಿದಂತಹ ಬೆಳಕು ಧಿಗ್ಗನೆ
ಕಂಡಿತು. ಒಮ್ಮೆ ಕುಳಿತ ಭೂಮಿ ಅಲುಗಾಡಿತು.
ಭೂಮಿಯೊಳಗಿನ ಆ ಅಲುಗಾಟ ರಿಕ್ಟರ್ ಮಾಪಕದಲ್ಲಿ
ಒಂದಷ್ಟು ಸಂಕೇತವನ್ನು ಗೀಚಿತು.
ವಿಜ್ಞಾನಿಗಳ ಪ್ರಯತ್ನ ಸಾರ್ಥಕವಾಯ್ತು.
ಅವರು ಕುಣಿದಾಡುತ್ತ
ಪ್ರಧಾನ ಮಂತ್ರಿಗಳಿಗೆ ಸುದ್ದಿ ಮುಟ್ಟಿಸಿದರು. ` ವೈಟ್ ಹೌಸ್
ಸಿಡಿಯಿತು, ಬುದ್ಧ ಮತ್ತೆ ನಕ್ಕ! ’ ಅಟಲ್
ಜೀ ಕಣ್ಣಂಚು ಒದ್ದೆಯಾಯ್ತು. ಜಾರ್ಜ್,
ಅಡ್ವಾಣಿಯರೂ ಅಷ್ಟೇ ಭಾವುಕರಾಗಿದ್ದರು.
ಅಮೆರಿಕಾ ಬೆಕ್ಕಸ ಬೆರಗಾಗಿತ್ತು. ಕೋಟ್ಯಂತರ
ಡಾಲರುಗಳನ್ನು ಸುರಿದೂ ಅದು ಭಾರತದ ಅಣ್ವಸ್ತ್ರ
ಪರೀಕ್ಷೆಯ ಜಾಡು ಹಿಡಿಯುವಲ್ಲಿ ಸೋತಿತ್ತು. ಭಾರತ
ಮಾತ್ರ ಎದೆಯುಬ್ಬಿಸಿ ಬೀಗುತ್ತ
ಜಗದೆದುರು ನಿಂತಿತ್ತು.
೧೫ ವರ್ಷಗಳು ಸರ್ರನೆ ಕಳೆದುಹೋಯ್ತು. ದೇಶದ ಆತ್ಮಗೌರವ
ರಕ್ಷಣೆಗೆ ಕಣಕಣವನ್ನು ಬಸಿದ ವಿಜ್ಞಾನಿಗಳು ಸಾಮಾನ್ಯ
ಜನರ ಪಾಲಿಗೆ ಹೀರೋಗಳೆನಿಸಲೇ ಇಲ್ಲ. ಕೇವಲ
ಕ್ರಿಕೇಟಿಗರು,
ಸಿನಿಮಾ ತಾರೆಯರೆ ಜನರ
ಪಾಲಿಗೇನಿದ್ದರು ಹಿರೋಗಳೇ ಅನಿಸಿಕೋಳ್ಳುತ್ತಿ
ದ್ದಾರೇ.
ಅಟಲ್ ಜೀ, ಅಬ್ದುಲ್ ಕಲಾಂ ಜೀ ಮತ್ತು ಎಲ್ಲ
ವಿಜ್ಞಾನಿಗಳೇ ಧನ್ಯವಾದಗಳು ನಿಮ್ಮ ದೇಶ ಸೇವೆಗೆ...🙏🙏🙏
-ಹನುಮಂತ.ಮ.ದೇಶಕುಲಕಣಿ೯
ಸಾ.ಭೋಗೇನಾಗರಕೊಪ್ಪ-581196 

ಪ್ರೋಖಾನ್ -2

ಪ್ರತಿಯೊಬ್ಬ ಭಾರತೀಯನೂ ಓದಲೇಬೇಕು.....
" ಅಟಲ್ ಜೀ ಕಣ್ಣಂಚು ಆ ಕ್ಷಣ ಒದ್ದೇಯಾಗಿತ್ತು ".
ಹದಿನೈದು ವರ್ಷಗಳ ಹಿಂದೆ
ಅಟಲ್ಜೀ ಅಂತಹದೊಂದು
ಎದೆಗಾರಿಕೆಯ ಸಾಹಸಕ್ಕೆ ಮುನ್ನುಡಿ ಬರೆದರು. ಅಬ್ದುಲ್
ಕಲಾಮ್
ಸೇರಿದಂತೆ ಅತ್ಯುನ್ನತ
ವಿಜ್ಞಾನಿಗಳು ಜೊತೆಯಾದರು. ಭಾರತ ಜಗತ್ತಿನ
ಅರಿವಿಗೆ ಬಾರದಂತೆ ಯಶಸ್ವಿ ಅಣ್ವಸ್ತ್ರ ಪ್ರಯೋಗ
ನಡೆಸಿಯೇ ಬಿಟ್ಟಿತು. ತನ್ನ ತಾಕತ್ತನ್ನು ಮನವರಿಕೆ
ಮಾಡಿಸಿತು. ಆ
ಪ್ರಯೋಗಕ್ಕೀಗ ಹದಿನೈದರ ಸಂಭ್ರಮ. ಆದರೆ,
ಯಾರಿಗೆಷ್ಟು ನೆನಪಿದೆ! ?
ಮೇ ೧೧ರ ಆ ಕತೆಯೇ ರೋಚಕ. ೧೩ ದಿನಗಳ ಅಧಿಕಾರ
ದಕ್ಕಿದಾಗ
ಅಟಲ್ ಜೀ ಮಾಡಿದ ಮೊದಲ ಕೆಲಸವೇ
ವಿಜ್ಞಾನಿಗಳನ್ನು ಕರೆದು " ಭಾರತವನ್ನು ಗಂಡು
ರಾಷ್ಟ್ರವಾಗಿಸುತ್ತೀರಾ" ಎಂದು ಎಂದು ಕೇಳಿದ್ದು.
ವಿಜ್ಞಾನಿಗಳ ಮುಖದಲ್ಲಿ ಮಂದಹಸ ಮಿನುಗಿತ್ತು.
ಅವರೇನೋ ತಯಾರಿ ಶುರುವಿಟ್ಟರು. ಪಾಪ,
ಸರ್ಕಾರವೇ ೧೩
ದಿನಗಳಲ್ಲಿ ಬಿದ್ದುಹೋಯ್ತು. ರಾಷ್ಟ್ರಕ್ಕೆ
ಅದೆಷ್ಟು ಬೇಸರವಾಯ್ತೋ ,
ಪರಮಾಣು ಸಂಶೋಧನಾನಿರತ
ವಿಜ್ಞಾನಿಗಳಂತೂ ತಲೆಯ ಮೇಲೆ ಕೈ ಹೊತ್ತರು.
ಆಮೇಲೆ ಬಂದ ಐ.ಕೆ.ಗುಜರಾಲ್ ರನ್ನು,
ದೇವೇಗೌದರನ್ನು ಪರಿಪರಿಯಾಗಿ
ಕೇಳಿಕೊಂಡರೂ ಅವರು ಅಣ್ವಸ್ತ್ರ
ಪರೀಕ್ಷೆಗೆ ಒಪ್ಪಲೇ ಇಲ್ಲ. ಇರುವಷ್ಟು ದಿನ
ಆರಾಮಾಗಿ ಕಾಲ ಕಳೆದರೆ ಸಾಕೆಂಬುದು ಅವರ ಇಚ್ಛೆ.
ವಿಜ್ಞಾನಿಗಳಿಗೆ ಆಸೆಯಂತೂ ಇದ್ದೇ ಇತ್ತು.
ಭಾರತವನ್ನು ಜಗತ್ತಿನ ಅಣ್ವಸ್ತ್ರ ರಾಷ್ಟ್ರಗಳ
ಪಟ್ಟಿಯಲ್ಲಿ ನಿಲ್ಲಿಸಬಲ್ಲ ಆ ಧೀರ,
ಪ್ರಧಾನಿಯಾಗಿ ಮತ್ತೆ ಬಂದೇ ಬರುತ್ತಾನೆಂಬ
ಭರವಸೆಯೂ ಇತ್ತು. ಹಾಗೆಯೇ ಆಯಿತು. ೯೮ರಲ್ಲಿ ಅಟಲ್
ಜೀ ಮತ್ತೆ ಪ್ರಧಾನಿಯಾದರು. ಬಹುಮತವಿಲ್ಲದ
ಸರ್ಕಾರ ಅದು. ಹೀಗಾಗಿ ಸರ್ಕಾರ ಉರುಳುವ ಮುನ್ನ
ಕೊಟ್ಟ ಮಾತು ಉಳಿಸಿಕೊಳ್ಳಬೇಕಿತ್ತು.
ಆಗಿಂದಾಗಲೇ ಅವರು ಅಬ್ದುಲ್ ಕಲಾಮರನ್ನು ,
ಚಿದಂಬರಂರನ್ನು ಕರೆದು ಯೋಜನೆ
ನೆರವೇರಿಸುವುದು ಸಾಧ್ಯವೇ ಎಂದು ಕೇಳಿಕೊಂಡರು
. ` ನೀವು ಅಧಿಕಾರ
ಕಳಕೊಂಡರೂ ನಾವು ನಮ್ಮ ಸಂಶೋಧನೆ
ನಿಲ್ಲಿಸಲಿಲ್ಲ. ಹೀಗಾಗಿ ಈ ಬಾರಿ ಬರೀ
ಅಣ್ವಸ್ತ್ರವಲ್ಲ , ಹೈಡ್ರೋಜನ್ ಬಾಂಬನ್ನೇ ಸಿಡಿಸಿ
ಪರೀಕ್ಷಿಸೋಣ ಎಂದುಬಿಟ್ಟರು.
ಪ್ರಧಾನಿಗಂತೂ ಸ್ವರ್ಗಕ್ಕೆ ಮೂರೇ ಗೇಣು.
ಪೋಖರಣ್ನಲ್ಲಿ…
ಸವಾಲು ಸುಲಭವಾಗಿರಲಿಲ್ಲ. ಅಮೆರಿಕಾದ ೪
ಉಪಗ್ರಹಗಳು ಭಾರತವನ್ನೇ ಎಚ್ಚರಿಕೆಯಿಂದ
ಗಮನಿಸುತ್ತಿದ್ದವು. ಅಮೆರಿಕಾದ್
ಗೂಢಚಾರರು ಭಾರತದುದ್ದಗಲಕ್ಕೂ ಕದ್ದುಮುಚ್ಚಿ
ತಿರುಗಾಡುತ್ತಿದ್ದರು.
ಅನೇಕ ಬಾರಿ ಜತೆಗಿದ್ದವರೇ ಅಮೆರಿಕಾದ್ ಏಜೆಂಟರಾಗಿರುವ
ಸಂಭವವೂ ಇತ್ತು. ಕನಸೇನೋ ಭರ್ಜರಿ. ಆದರೆ
ಅದನ್ನು ನನಸು ಮಾಡುವಲ್ಲಿ
ಪ್ರಯಾಸವೂ ಜೋರಾಗಿಯೇ ಇತ್ತು.
ಅಟಲ್ ಜೀ ಎದೆಯೊಡ್ಡಿ ಸಿದ್ಧರಾಗಿದ್ದರು.
ಯೋಜನೆ ರೂಪುಗೊಂಡಿತು. ಕಲಾಂ ,
ಚಿದಂಬರಂ , ಅಟಲ್ ಜೀ ಮತ್ತು ಅವರ
ಕಾರ್ಯದರ್ಶಿ ಬ್ರಜೇಶ್ ಮಿಶ್ರಾರಿಗೆ ಬಿಟ್ಟರೆ ಏನಾಗಲಿದೆ
ಎನ್ನುವುದು ಐದನೆಯವರಿಗೆ ಗೊತ್ತಿರಲಿಲ್ಲ. ನಿಮಗೆ
ಆಶ್ಚರ್ಯವಾದೀತು. ಅಣ್ವಸ್ತ್ರ ಪರೀಕ್ಷೆ
ಮೇ ೧೧ರಂದು ನಿಗದಿಯಾಗಿದೆಯೆಂಬುದು ಅಂದಿನ
ರಕ್ಷಣಾ ಸಚಿವರಿಗೆ, ಗೃಹಸಚಿವರಿಗೆ ತಿಳಿದಿದ್ದು ಮೇ ೧೦ರ
ಸಂಜೆಯೇ!
ಪೋಖರಣ್ ಅನ್ನು ಈ ಯೋಜನೆಗೆ ಆರಿಸಿಕೊಳ್ಳಲಾಗಿತ್ತು.
ಅದಕ್ಕೆ ಕಾರಣವೂ ಇತ್ತು. ಸುತ್ತಲೂ ಮರಳ ರಾಶಿ , ನೀರಿನ
ಸೆಲೆಯೂ ಬಲು ಆಳದಲ್ಲಿತ್ತು. ಹೀಗಾಗಿ
ತಗ್ಗು ತೋಡುವಾಗ
ತೊಂದರೆಯೂ ಇಲ್ಲ , ಆಳಕ್ಕೆ ಹೋದಂತೆ
ನೀರನ್ನು ಬಸಿಯಬೇಕಾದ ಸಮಸ್ಯೆಯೂ ಇಲ್ಲ.
ಸೈನ್ಯದ ೫೮ ಇಂಜಿನಿಯರ್ ಗಳ ಬ್ರಿಗೇಡ್ ಹಳ್ಳ ತೋಡುವ
ಕೆಲಸ ಶುರು ಮಾಡಿತು. ಈ ಕೆಲಸವನ್ನು ಬೆಳಿಗ್ಗೆ
ಮಾಡುವಂತಿಲ್ಲ. ಕತ್ತಲಾದ ಮೇಲೆ ಕೆಲಸ
ಶುರು ಮಾಡಬೇಕು.
ಬೆಳಗಾಗುವುದರೊಳಗಾಗಿ ವಸ್ತುಗಳು ,
ವಾಹನಗಳು ಎಲ್ಲೆಲ್ಲಿದ್ದವೋ
ಅಲ್ಲಲ್ಲಿಯೇ ಇಟ್ಟು ಮಾಯವಾಗಬೇಕು. ಇಲ್ಲವಾದಲ್ಲಿ
ಅಮೆರಿಕಾದ ೪ ಉಪಗ್ರಹಗಳು ಜಗತ್ತಿನಾದ್ಯಂತ
ಬೊಂಬಡಾ ಬಜಾಯಿಸಿಬಿಡುತ್ತವೆ. ಆಮೇಲೆ
ಅಣ್ವಸ್ತ್ರ ಪರೀಕ್ಷೆ ಇರಲಿ , ಅದರ
ಮಾತಾಡುವುದೂ ಕಷ್ಟ. ಸೈನಿಕರು ತಗ್ಗು ತೋಡಿ
ವಿಜ್ಞಾನಿಗಳಿಗೆ ದಾರಿ
ಮಾಡಿಕೊಟ್ಟರು. ದೂರದೂರದಿಂದ ಪರಿಸರ
ವಿಜ್ಞಾನಿಗಳು ಬಂದು ಸುತ್ತಲಿನ ವಾತಾವರಣದ ಅಧ್ಯಯನ್
ಮಾಡಿ ವರದಿ ನೀಡಿ ಹೋಗುತ್ತಿದ್ದರು. ಆದರೆ
ಯಾರೊಬ್ಬರಿಗೂ ತಾವು ಇದನ್ನೆಲ್ಲ ಯಾವ
ಉದ್ದೇಶಕ್ಕಾಗಿ ಮಾಡುತ್ತಿದ್ದೇವೆ ಎಂಬುದು ಮಾತ್ರ
ಗೊತ್ತಿರಲಿಲ್ಲ, ಅಷ್ಟು ಗುಪ್ತವಾಗಿ ಉಳಿದಿತ್ತು
ಯೋಜನೆ!
ಅಬ್ದುಲ್ ಕಲಾಂ , ಚಿದಂಬರಂ , ಕಾಕೋಡ್ಕರ್
ರಂತಹ ವಿಜ್ಞಾನಿಗಳು ಅನುಮಾನ ಬರದಿರಲೆಂದು ಸೈನಿಕ
ವೇಷ ಧರಿಸಿದರು. ಉನ್ನತ ಹುದ್ದೆಯನ್ನೇ ಅವರುಗಳಿಗೆ
ನೀಡಲಾಗಿತ್ತು. ರಾಜಸ್ತಾನದ ಆ ಬಿರುಬಿಸಿಲಿನಲ್ಲಿ,
ಉರಿಯುವ ಟೆಂಟುಗಳಲ್ಲಿ ಎಸಿ ಇರಲಿ , ಫ್ಯಾನೂ ಇಲ್ಲದೆ
ಕೆಲಸ ಮಾಡಬೇಕಿತ್ತು. ಗಾಳಿಗೆ
ವೈರುಗಳು ಒಂದಕ್ಕೊಂದು ತಿಕ್ಕಾಡಿ ಬೆಂಕಿ
ಹೊತ್ತಿಕೊಂಡರೆ
ಪ್ರಮಾದವಾದೀತೆಂಬ ಹೆದರಿಕೆ ಇದ್ದೇ ಇತ್ತು.
ಇತ್ತ ಅಟಲ್ ಜೀ ಕಾಯುತ್ತಲಿದ್ದರು.ಮೇ ೧೦ಕ್ಕೆ
ರಾಷ್ಟ್ರಪತಿಗಳು ವಿದೇಶ ಪ್ರವಾಸ ಮುಗಿಸಿ ಬರಲಿದ್ದಾರೆ.
ಅದರ
ಮರುದಿನವೇ ಪರೀಕ್ಷಣೆ ನಡೆದುಬಿಡಲಿ
ಎಂದು ಅವರ ಯೋಚನೆ. ವಿಜ್ಞಾನಿಗಳೂ ಸಿದ್ಧತೆ
ಪೂರ್ಣಗೊಳಿಸಿದ್ದರು. ವೈಟ್ ಹೌಸ್, ತಾಜ್ ಮಹಲ್
ಎಂಬ ಎರಡು ತಗ್ಗುಗಳು , ನವ್ ತಾಲ್ ಎಂಬ ೪
ಹಳ್ಳಗಳು ನಿರ್ಮಾಣಗೊಂಡಿದ್ದವು. ವೈಟ್ ಹೌಸ್
ನೊಳಗೆ ಹೈಡ್ರೋಜನ್ ಬಾಂಬ್ ಪರೀಕ್ಷೆ.
ತಾಜ್ ಮಹಲ್ ನಿಂದ ಉಡಾಯಿಸಲು ಸಾಮಾನ್ಯ ಬಾಂಬು.
ಉಳಿದವು ಚಿಕ್ಕ ಪ್ರಮಾಣದ ಪರೀಕ್ಷೆಗಳು.
ದೊಡ್ಡ ದೊಡ್ಡ
ರಿಂಗ್ಗಳನ್ನು ತಗ್ಗಿನೊಳಗೆ
ಇಳಿಬಿಡಲು ಮರಳು ತುಂಬಿದ ಚೀಲಗಳನ್ನು
ಮೊದಲು ಇಳಿಸಬೇಕಿತ್ತು. ಅದರ ಂಏಲೆ ರಿಂಗ್
ಗಳು ಇಳಿಯಬೇಕು. ಸಮಯ ಬಲು ಕಡಿಮೆ ಇತ್ತು.ಇದ್ದ
ಕೆಲವೇ ಸೈನಿಕರು ಹಗಲು ರಾತ್ರಿ ಎನ್ನದೆ
ದುಡಿಯುತ್ತಿದ್ದರು.
ನಿಮಿಶಕ್ಕೆ ೩ ಮರಳ ಚೀಲವಾದರೆ ೨೪
ಗಂಟೆಗೆ಼ಷ್ಟು ಎಂಬೆಲ್ಲ ಲೆಕ್ಕಾಚಾರಗಳು ನಡೆದಿದ್ದವು.
ಎಲ್ಲರೂ ಕೆಲಸದಲ್ಲಿ ಮೈಮರೆತಿದ್ದರು.ಇದ್ದಕ್ಕಿದ್ದಂತೆ
ಒಂದೆರಡು ರಕ್ತದ ಹನಿ ಚೆಲ್ಲಿದ್ದು ಕಂಡುಬಂತು.
ಜಾಡು ಹುಡುಕಿಕೊಂಡು ಹೊರಟರೆ , ಸೈನಿಕರ
ಬಟ್ಟೆ ತೊಳೆಯುವ ದೋಭಿ ಎನ್.ಕೆ.ಡೇ , ತಾನೂ ಮರಳ
ಚೀಲ ಹೊರುವ ಕೆಲಸಕ್ಕೆ
ಬಂದುಬಿಟ್ಟಿದ್ದ. ಅವನ ಕೈಗೆ ಮರಳುಗಾಡಿನ ವಿಷಪೂರಿತ
ಚೇಳೊಂದು ಬಲವಾಗಿ ಕುಟುಕಿಬಿಟ್ಟಿತ್ತು.
ಅದರಿಂದ ವನ ಚರ್ಮ ಸೀಳಿ, ರಕ್ತ ಸುರಿದಿತ್ತು.
ಧೋಬಿಗೆ ಮಾತ್ರ ಅದರ ಅರಿವೂ ಆಗಲಿಲ್ಲ. ಆತ ತನ್ನ ಪಾಡಿಗೆ
ತಾನು ಕೆಲಸ ಮುಂದುವರೆಸಿದ್ದ. ಭಾರತದ
ಮಹತ್ಸಾಧನೆಯೊಂದಕ್ಕೆ ಮುನ್ನುಡಿ
ಬರೆಯಲಿದೆ. ಅದರಲ್ಲಿ ತಾನೂ ಭಾಗಿ ಎಂಬ
ಯೋಚನೆಯೇ ಅವನನ್ನು
ರೋಮಾಂಚನಗೊಳಿಸಿಬಿಟ್ಟಿತ್ತು.
ಅತ್ತ ಮುಂಚಿನ ದಿನ ಪೋಖರಣ್ ನ ಪಕ್ಕದ ಹಳ್ಳಿ
ಖಟೋರಿಯಲ್ಲಿ ನಾಳೆ ಮನೆಯಲ್ಲಿ ಯಾರೂ ಇರಬೇಡಿ , ಶಾಲೆಗೆ
ರಜೆ
ಕೊಡಿ, ಸೈನ್ಯದ
ಒಂದಷ್ಟು ಚಟುವಟಿಕೆಗಳನ್ನು ನಡೆಸಬೇಕಿದೆ ಎಂದು
ವಿನಂತಿಸಲು ಅಧಿಕಾರಿಯೊಬ್ಬರು ಹೋಗಿದ್ದರು.
ಸೋಹ್ರಂ ಎಂಬ ವ್ಯಕ್ತಿಯೊಬ್ಬ
ಅಧಿಕಾರಿಯ ಬಳಿ ಬಂದು, ನನಗೆ ಗೊತ್ತು ,
ಬಾಂಬ್ ಪರೀಕ್ಷೆ ನಡೆಸುತ್ತಿದ್ದೀರಿ ತಾನೆ ?
೧೯೭೪ರಲ್ಲೂ ಹೀಗೇ ಆಗಿತ್ತು. ಅವತ್ತು ನಮ್ಮ
ಮನೆಯ ಸೂರು ಸೀಳಿಹೋಗಿತ್ತು. ಮನೆ
ಬಿದ್ದರೂ ಚಿಂತೆಯಿಲ್ಲ, ನೀವು ಮುಂದುವರೆಸಿರಿ ;
ನಾವು ನಿಮ್ಮೊಂದಿಗಿದ್ದೇವೆ ’ ಎಂದಿದ್ದ.
ಅಧಿಕಾರಿ ಅವಾಕ್ಕಾಗಿ
ಸೋಹ್ರಂನನ್ನು ತಬ್ಬಿಕೊಂಡಿದ್ದ.
ಕೊನೆಗೂ ಆ ಸಮಯ ಬಂದುಬಿಟ್ಟಿತ್ತು.
ಮೇ ೧೦ಕ್ಕೆ ಆಕಾಶ ಬಿರಿಯುವಂತಹ ಮಳೆ.
ಗುಡುಗು ಸಿಡಿಲುಗಳು ಎಲ್ಲರನ್ನೂ ಆತಂಕಕ್ಕೆ
ನೂಕಿಬಿಟ್ಟಿದ್ದವು. ಎರಡು ಗೋಲಗಳಲ್ಲಿ ತುಂಬಿಟ್ಟಿದ್ದ
ಪ್ಲುಟೋನಿಯಮ್ ಮಿಸುಕಾಡಿದ್ದರೆ
ಅನಾಹುತವೇ ಕಾದಿತ್ತು. ಇಡಿಯ
ಯೋಜನೆಯ ಮಹತ್ವದ ಕೊಂಡಿಯಾಗಿದ್ದ
ವಿಜ್ಞಾನಿ ಕಾಕೋಡ್ಕರ್ ರ ತಂದೆ
ತೀರಿಕೊಂಡ ಸುದ್ದಿ ಬಂತು. ಎಲ್ಲರ
ಮುಖವೂ ಕಪ್ಪಿಟ್ಟಿತು. ಕಾಕೋಡ್ಕರ್ ಊರಿಗೆ ಧಾವಿಸಿ ,
ತಂದೆಯ
ಅಂತ್ಯ ಸಂಸ್ಕಾರ ಮುಗಿಸಿ , ಮುಂದಿನ
ಅನುಷ್ಠಾನಗಳಿಗೆ ಕಾಯದೇ ಮರಳಿ ಬಂದುಬಿಟ್ಟರು.
` ನಮ್ಮಪ್ಪ ಇದ್ದಿದ್ದರೆ ,
ಹೀಗೇ ಮಾಡಲು ಹೇಳಿರುತ್ತಿದ್ದರು ’ ಎಂದರು.
ಮರುದಿನದ ವೇಳೆಗೆ ಎಲ್ಲ ಬಗೆಯ ಮೋಡಗಳೂ ತಿಳಿಯಾದವು.
ಬಿರುಬಿಸಿಲೂ ಬಂದಿತು. ಇನ್ನೇನು ಪರೀಕ್ಷೆ
ಶುರುವಾಗಬೇಕು, ಅಷ್ಟರಲ್ಲಿ ಅನಿರೀಕ್ಷಿತವಾಗಿ ಬಿರುಗಾಳಿ
ಶುರುವಾಯ್ತು. ಮತ್ತೊಂದು ಬಗೆಯ ಹೆದರಿಕೆ ಈಗ.
ಅಣ್ವಸ್ತ್ರ ಪರೀಕ್ಷೆ ಒಂದು ಗಂಟೆ
ಮುಂದೆ ಹೋಯ್ತು. ಇತ್ತ ವಿಜ್ಞಾನಿಗಳ ಮುಖ
ಬೆಪ್ಪಾಯ್ತು.
ಅತ್ತ ಪ್ರಧಾನಮಂತ್ರಿಗಳ ಮನೆಯಲ್ಲಿ ಅಟಲ್
ಜೀ, ಅಡ್ವಾಣಿ ಮತ್ತು ಜಾರ್ಜ್ ರ ಮುಖದಲ್ಲಿ
ಆತಂಕದ ಗೆರೆಗಳು. ಬ್ರಜೇಶ್ ಮಿಶ್ರಾ ನಿರಂತರ ಫೋನಿಗೆ
ಕಿವಿಗೊಟ್ಟು ಕೂತಿದ್ದಾರೆ. ಯಾವುದನ್ನೂ ನೇರವಾಗಿ
ಕೇಳುವಂತಿಲ್ಲ. ಎಲ್ಲವನ್ನೂ ಸಂಕೇತ
ಭಾಷೆಯಲ್ಲೇ ಕೇಳಬೇಕು.
ಒಂದು ಗಂಟೆಯ ನಂತರ ಬಿರುಗಾಳಿ ನಿಂತಿತು.
ಮರಳು ಶಾಂತವಾಯ್ತು.


ವಿಜ್ಞಾನಿಗಳು ಕಾರ್ಯಪ್ರವೃತ್ತರಾದರು. ಸ್ಪರೀಕ್ಷೆಯ
ಪರಿಣಾಮಗಳನ್ನು
ಸೆರೆಹಿಡಿಯಲು ಕ್ಯಾಮೆರಾವೊಂದನ್ನು
ನೇತುಹಾಕಲಾಗಿತ್ತು. ವಿಜ್ಞಾನಿಗಳು ಗಣನೆ
ಶುರುಮಾಡಿದರು. ೫…೪ …
೩…೨ …೧…. ಅವರೆದುರಿನ ಟೀವಿ ಪರದೆಯಲ್ಲಿ
ಸಹಸ್ರ ಮಿಂಚುಗಳು ಸಿಡಿದಂತಹ ಬೆಳಕು ಧಿಗ್ಗನೆ
ಕಂಡಿತು. ಒಮ್ಮೆ ಕುಳಿತ ಭೂಮಿ ಅಲುಗಾಡಿತು.
ಭೂಮಿಯೊಳಗಿನ ಆ ಅಲುಗಾಟ ರಿಕ್ಟರ್ ಮಾಪಕದಲ್ಲಿ
ಒಂದಷ್ಟು ಸಂಕೇತವನ್ನು ಗೀಚಿತು.
ವಿಜ್ಞಾನಿಗಳ ಪ್ರಯತ್ನ ಸಾರ್ಥಕವಾಯ್ತು.
ಅವರು ಕುಣಿದಾಡುತ್ತ
ಪ್ರಧಾನ ಮಂತ್ರಿಗಳಿಗೆ ಸುದ್ದಿ ಮುಟ್ಟಿಸಿದರು. ` ವೈಟ್ ಹೌಸ್
ಸಿಡಿಯಿತು, ಬುದ್ಧ ಮತ್ತೆ ನಕ್ಕ! ’ ಅಟಲ್
ಜೀ ಕಣ್ಣಂಚು ಒದ್ದೆಯಾಯ್ತು. ಜಾರ್ಜ್,
ಅಡ್ವಾಣಿಯರೂ ಅಷ್ಟೇ ಭಾವುಕರಾಗಿದ್ದರು.
ಅಮೆರಿಕಾ ಬೆಕ್ಕಸ ಬೆರಗಾಗಿತ್ತು. ಕೋಟ್ಯಂತರ
ಡಾಲರುಗಳನ್ನು ಸುರಿದೂ ಅದು ಭಾರತದ ಅಣ್ವಸ್ತ್ರ
ಪರೀಕ್ಷೆಯ ಜಾಡು ಹಿಡಿಯುವಲ್ಲಿ ಸೋತಿತ್ತು. ಭಾರತ
ಮಾತ್ರ ಎದೆಯುಬ್ಬಿಸಿ ಬೀಗುತ್ತ
ಜಗದೆದುರು ನಿಂತಿತ್ತು.
೧೫ ವರ್ಷಗಳು ಸರ್ರನೆ ಕಳೆದುಹೋಯ್ತು. ದೇಶದ ಆತ್ಮಗೌರವ
ರಕ್ಷಣೆಗೆ ಕಣಕಣವನ್ನು ಬಸಿದ ವಿಜ್ಞಾನಿಗಳು ಸಾಮಾನ್ಯ
ಜನರ ಪಾಲಿಗೆ ಹೀರೋಗಳೆನಿಸಲೇ ಇಲ್ಲ. ಕೇವಲ
ಕ್ರಿಕೇಟಿಗರು,
ಸಿನಿಮಾ ತಾರೆಯರೆ ಜನರ
ಪಾಲಿಗೇನಿದ್ದರು ಹಿರೋಗಳೇ ಅನಿಸಿಕೋಳ್ಳುತ್ತಿ
ದ್ದಾರೇ.
ಅಟಲ್ ಜೀ, ಅಬ್ದುಲ್ ಕಲಾಂ ಜೀ ಮತ್ತು ಎಲ್ಲ
ವಿಜ್ಞಾನಿಗಳೇ ಧನ್ಯವಾದಗಳು ನಿಮ್ಮ ದೇಶ ಸೇವೆಗೆ...🙏🙏🙏
-ಹನುಮಂತ.ಮ.ದೇಶಕುಲಕಣಿ೯
ಸಾ.ಭೋಗೇನಾಗರಕೊಪ್ಪ-581196 

ಶನಿವಾರ, ಏಪ್ರಿಲ್ 25, 2015

ಶಂಕರಾಚಾರ್ಯರು ಅದ್ವೈತ ತತ್ತದ ಹರಿಕಾರರು.

     ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯ ತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು (ಆದಿ ಶಂಕರರು). ಕೇವಲ 32 ವರ್ಷಗಳ ಕಾಲ ಜೀವಿಸಿದ್ದರು, ಈ ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆಗಳಿಗೆ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಸಿದ್ಧಾಂತ ವಾದ "ಅದ್ವೈತ" ತತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ಸಾರಿ, ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು.  ಆದಿಶಂಕರರು ಭಗವದ್-ಗೀತೆ, ಉಪನಿಷತ್ ಹಾಗು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾದರು.
    ಇವರು 8 ನೇ(ಕ್ರಿ.ಶ್.788) ಶತಮಾನದಲ್ಲಿ ಜನಿಸಿದರು ಎಂದು ನಂಬಲಾಗಿದೆ. ಇವರು ಹುಟ್ಟಿದ್ದು ಕೇರಳ ರಾಜ್ಯದ ಕಾಲಡಿ ಎಂಬ ಹಳ್ಳಿಯ ಒಂದು ಬಡ ವಿಶ್ವಬ್ರಾಹ್ಮಣ ಕುಟುಂಬದಲ್ಲಿ. ಹುಟ್ಟಿದ ದಿನ ವಿಭವ ಸಂವತ್ಸರದ ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮೀ ತಿಥಿಯಂದು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರು. ಆಧ್ಯಾತ್ಮಿಕತೆಯಲ್ಲಿ ಆಸಕ್ತಿತಳೆದ ಇವರು ಸನ್ಯಾಸತ್ವವನ್ನು ಸ್ವೀಕರಿಸುವತ್ತ ಒಲವು ತೋರಿದರು. ಆದರೆ ಒಬ್ಬನೇ ಮಗನಾಗಿದ್ದ ಶಂಕರ ರನ್ನು ಸನ್ಯಾಸಿಯಾಗಿ ನೋಡಲು ತಾಯಿಗೆ ಮನಸ್ಸಿರಲಿಲ್ಲ. ಹಾಗಾಗಿ ತಾಯಿಯ ಮನವೊಲಿಸಲು ಶಂಕರರು ಬಹಳ ಕಷ್ಟಪಡಬೇಕಾಯಿತು.ಆಕೆಯ ಅಂತಿಮ ಕ್ಷಣಗಳಲ್ಲಿ ತಾನು ಎಲ್ಲಿದ್ದರೂ ಆಕೆಯ ಎದುರು ಬಂದು ನಿಲ್ಲುವುದಾಗಿ ಮಾತು ಕೊಟ್ಟ ಶಂಕರರು ಸೂಕ್ತ ಗುರುವಿಗಾಗಿ ಹುಡುಕುತ್ತಾ ತಮ್ಮ ಪಯಣವನ್ನಾರಂಭಿಸಿದರು. ತಾಯಿಗೆ ಕೊಟ್ಟ ಮಾತಿನ ಪ್ರಕಾರ ಆಕೆಯ ಕೊನೆಗಾಲದಲ್ಲಿ ಕಾಲಟಿಗೆ ಹಿಂದಿರುಗಿದ ಶಂಕರರು ಆಕೆಯ ಅಂತಿಮ ವಿಧಿಗಳನ್ನು ಪೂರೈಸಿದರು.ನರ್ಮದಾ ನದಿ ತೀರದಲ್ಲಿ ಗೋವಿಂದ ಭಗವತ್ಪಾದರನ್ನು ಭೇಟಿಯಾದ ಶಂಕರರು ಅವರನ್ನು ತನ್ನ ಗುರುಗಳನ್ನಾಗಿ ಸ್ವೀಕರಿಸಿದರು. ಅವರಿಂದ ಯೋಗ, ವೇದ, ಉಪನಿಷತ್, ವೇದಾಂತಗಳನ್ನು ಅಭ್ಯಸಿದದ ನಂತರ ಕಾಶಿಗೆ ತೆರಳಿ ಅಲ್ಲಿ ಕೆಲವರನ್ನು ತಮ್ಮ ಶಿಷ್ಯರನ್ನಾಗಿಸಿಕೊಂಡು ಅವರಿಗೂ ವೇದಾಂತದ ಪಾಠ ಹೇಳಿಕೊಟ್ಟರು.
   ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿದ ಶಂಕರರು ಅನೇಕರನ್ನು ಅಧ್ಯಾತ್ಮಕ್ಕೆ ಸಂಬಂಧಪಟ್ಟ ವಾದದಲ್ಲಿ ಸೋಲಿಸಿದರು. ಇವುಗಳಲ್ಲಿ ಮಂಡನ ಮಿಶ್ರರನ್ನು ವಾದದಲ್ಲಿ ಸೋಲಿಸಿದ ಘಟನೆ ಬಹು ಪ್ರಮುಖವಾದುದು. ಮಂಡನ ಮಿಶ್ರರೇ ನಂತರ ಶ್ರೀ ಸುರೇಶ್ವರಾಚಾಯ೯ ಎಂಬ ಹೆಸರಿನಿಂದ ಪ್ರಸಿದ್ಧರಾದ ಶಿಷ್ಯರಾದರು.ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠ (ಮಠ) ಗಳನ್ನು ಉತ್ತರದಲ್ಲಿ: ಬದರಿ ಪೀಠ - ಉತ್ತರ ಜ್ಯೋತಿರ್ ಮಠದಕ್ಷಿಣದಲ್ಲಿ: ಶೃಂಗೇರಿ ಪೀಠ - ದಕ್ಷಿಣ ಶಾರದಾ ಮಠಪೂರ್ವದಲ್ಲಿ: ಪುರಿ ಪೀಠ - ಪೂರ್ವಾ ಗೋವರ್ಧನ ಮಠಪಶ್ಚಿಮದಲ್ಲಿ ದ್ವಾರಕಾ ಪೀಠ - ಪಶ್ಚಿಮ ಮಠ   ಸ್ಥಾಪಿಸಿ, ಪ್ರತಿಯೊಂದು ಪೀಠಕ್ಕೂ ತಮ್ಮ ಒಬ್ಬೊಬ್ಬ ಶಿಷ್ಯರನ್ನು ಪೀಠಾಧಿಪತಿಯನ್ನಾಗಿಸಿದರು."ಅದ್ವೈತ" ಸಿದ್ಧಾಂತ ವನ್ನು ಜನಪ್ರಿಯಗೊಳಿಸಿದರು. ಹಲವಾರು ಪಂಡಿತರನ್ನೂ ಶಾಸ್ತ್ರವೇತ್ತರನ್ನೂ ಜಯಿಸಿ, ಸರ್ವಜ್ಞ ಪೀಠವನ್ನೇರಿದರು. ಭಾರತದ ದಕ್ಷಿಣದಲ್ಲಿ ವಾದ ಮಾಡಿ ತಮ್ಮನ್ನು ಜಯಿಸುವವರೇ ಇಲ್ಲವೆಂದು ಹೀಗಳೆದು ಶಾರದೆಯ ದೇಗುಲದ ದಕ್ಷಿಣದ ಬಾಗಿಲನ್ನು ಮುಚ್ಚಿಸಿದ್ದ ಕಾಶ್ಮೀರದ ಪಂಡಿತರ ಬಾಯಿ ಮುಚ್ಚಿಸಿದರು;
       ಶಂಕರರು ಬಾದರಾಯಣರ
"ಬ್ರಹ್ಮಸೂತ್ರ"(ವೇದಾಂತಸೂತ್ರ)ಗಳಿಗೆ ಭಾಷ್ಯವನ್ನು ರಚಿಸಿದರು. ಉಪನಿಷತ್ತುಗಳಿಗೆ ವ್ಯಾಖ್ಯಾನ ನೀಡಿದರು;ಅಲ್ಲದೆ ಶ್ರೀಮದ್ಭಗವದ್ಗೀತೆಗೆ ಭಾಷ್ಯವನ್ನು ಬರೆದು ಪ್ರಸ್ಥಾನತ್ರಯಗಳನ್ನು ಪೂರ್ಣಗೊಳಿಸಿದರು. ಇವರು ರಚಿಸಿದ "ಭಜ ಗೋವಿಂದಮ್" ಸ್ತೋತ್ರ ಅತ್ಯಂತ ಪ್ರಸಿದ್ಧವಾದುದು. ಹಲವಾರು ಇತರ ಸ್ತೋತ್ರಗಳನ್ನೂ ಶಂಕರರು ರಚಿಸಿದ್ದಾರೆ
    ಸಂಸ್ಕೃತದಲ್ಲಿ "ದ್ವಿ" ಎಂದರೆ ಎರಡು ಎಂದರ್ಥ. ಹಾಗಾಗಿ "ಅ" + "ದ್ವೈತ" ಅಂದರೆ "ಎರಡಲ್ಲದ್ದು" ಎಂದು ಅರ್ಥೈಸಬಹುದು. ಅದ್ವೈತಸಿಧ್ಧಾಂತದ ಮೂಲ ಸಾರವೇ ಇದು. "ಆತ್ಮ" ಮತ್ತು "ಪರಮಾತ್ಮ" ಎಂಬುದು ಎರಡು ಬೇರೆ ಬೇರೆ ಅಂಶಗಳಲ್ಲ. ಇರುವುದು ಒಂದೇ.ಆತ್ಮನೇ ಪರಮಾತ್ಮ (ದೇವರು). ಪರಮಾತ್ಮನೇ ಆತ್ಮ. "ಅಹಂ ಬ್ರಹ್ಮಾಸ್ಮಿ" (ನನ್ನೊಳಿರುವ ಆತ್ಮವೇ ಪರಂಬ್ರಹ್ಮ), "ತತ್ ತ್ವಮ್ ಅಸಿ" (ನೀನು ಅದೇ ಆತ್ಮದಿಂದ ಆಗಿರುವೆ) ಎಂಬುದು ಅದ್ವೈತ ತತ್ವದ ಮೂಲ ಮಂತ್ರ. ಇದಲ್ಲದೇ ಆದಿ ಶಂಕರಾಚಾರ್ಯರುಪರಮಾತ್ಮ, ಅಂದರೆ "ಆತ್ಮ", ಅದು ಮಾತ್ರ ಸತ್ಯ; ಈ ಜಗತ್ತಿ ನಲ್ಲಿ ಮಿಕ್ಕೆಲ್ಲವೂ ಮಿಥ್ಯ ಹಾಗೂ "ಸರ್ವಂ ಬ್ರಹ್ಮಮಯಂ ಜಗತ್" (ಈ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನಿಂದಲೇ ಆವರಿಸಲ್ಪಟ್ಟಿದೆ) ಎಂಬುದಾಗಿ ಜಗತ್ತಿಗೆ ಸಾರಿದರು:
   (23.4.2015 ರಂದು ಶಂಕರ ಜಯಂತಿ ತನ್ನಿಮಿತ್ತ ಲೇಖನ)
-ಹನುಮಂತ.ಮ.ದೇಶಕುಲಕಣಿ೯
ಸಾ.ಭೋಗೇನಾಗರಕೊಪ್ಪ-581196 

ವಿದ್ಯಾರಣ್ಯರು

ಜಗತ್ತಿನಲ್ಲಿ ಸಾಂಸ್ಕೃತಿಕ-ಸಿರಿವಂತಿಕೆಯ ದಂತಕಥೆಗಳ ದೊಡ್ಡಣ್ಣನೇ ಆದ ವಿಜಯನಗರ  ಸಾಮ್ರಾಜ್ಯದ ಹಿರಿಮೆಗೆ ಪಾತ್ರರಾಗಲು ಅನೇಕ ಸಾಮ್ರಾಜ್ಯಗಳಂತೆ ಇದು ಸಾಧು-ಸಂತರ ಕೃಪಾಶೀವಾ೯ದದಿಂದ ಸ್ಥಾಪಿಸಿದ್ದು ಆಗಿದೆ.ಪರಕೀಯರ ಆಕ್ರಮಣ ತಡೆಯಲು ಬಲಿಷ್ಟ ಸಾಮ್ರಾಜ್ಯ ಕಟ್ಟಿದ ಯತಿವಯ೯ ವಿದ್ಯಾರಣ್ಯರು.
        ವಿದ್ಯಾರಣ್ಯರು ಜನಿಸಿದ್ದು ಸುಮಾರು 1296ರಲ್ಲಿ.ಇವರ ಪೂವಾ೯ಶ್ರಮದ ಹೆಸರು ಮಾಧವಾಚಾಯ೯.ಇವರಿಗೆ ವಿದ್ಯಾತೀಥ೯ರೆಂಬ ಗುರುಗಳಿದ್ದರು.ಇವರು 35ನೇ ವಯಸ್ಸಿನಲ್ಲಿ ಸಂನ್ಯಾಸ ಸ್ವೀಕರಿಸಿ ವಿಜಯನಗರ ಕಟ್ಟಿದ ಮೇಲೆ ಕಾಶಿಗೆ ತೆರಳಿದರು.
   ಕರುನಾಡಿನ ತಾಯಿ ಭುವನೇಶ್ವರಿಗೆ,ಮಾತೃಭೂಮಿಯ ರಕ್ಷಣೆಗೆ ಕಂಕಣಬದ್ಧರಾಗಿ ತುಂಗಭಧ್ರ ತಟದಿಂದ ಯಾತ್ರೆ ಶುರುಮಾಡಿ ಅರಣ್ಯದಲ್ಲಿ ಬಂದಾಗ ಯತಿಗಳಿಗೆ ಶುಭಶಕುನದಂತೆ ಅಲ್ಲಿ ಮರದ ಕೆಳಗೆ  ಕರುನಾಡಿನ ಕುವರರು ನಿದ್ರೆಗೆ ಜಾರಿದ್ದರು. ಅವರು ತುಂಬು ಬಾಹುಬಲವುಳ್ಳ ಶೂರರಂತೆ ಕಂಡರು.ಎಚ್ಚರಗೊಂಡ ಯುವಕರ ಮುಂದೆ ಖಾವಿಧಾರಿ ಸಂತರು ನಿಂತಿದ್ದರು,ಯತಿಗಳಿಗೆ  ಆ ಯುವಕರು ವಂದಿಸಿದಾಗ ಅವರ ಮುಖದಲ್ಲಿನ ತೇಜಸ್ಸು ಕಂಡು ನೀವು ಯಾರು? ಎಂದಾಗ ಯತಿವಯ೯  ನಾವು ಸೋದರರು ನನ್ನ ಹೆಸರು ಹುಕ್ಕ,ಇವನು ಬುಕ್ಕ ಸಂಗಮ ಅರಸನ ಮಕ್ಕಳು .ಒರಂಗಲ್ಲು ಪ್ರತಾಪರುದ್ರದೇವನಲ್ಲಿ ನಾನು ಸೇನಾಪತಿ,ಇವನು ಕೋಶಾಧಿಕಾರಿ;ದೆಹಲಿ ಬಾದಶಾಹನ ದಂಡಯಾತ್ರೆಯಲ್ಲಿ ಸೋತು ಇಲ್ಲಿ ಬಂದಿದ್ದೇವೆ.
      ನೀವು ಹೆದರುವುದರಿಂದ ಉಪಯೋಗವಿಲ್ಲ,ಎಷ್ಟು ದಿನ ದಾಸರಾಗಿರುತ್ತಿರಿ,ಎಂದು ನುಡಿದಾಗ;ಯತಿವಯ೯ ನಾವು ಸಾವಿಗೆ ಅಂಜುವರಲ್ಲ,ನಮ್ಮದು ಯದುವಂಶ.ಹಾಗಾದರೆ ಬನ್ನಿ ಎಂದು ಅವರನ್ನು ಸಾಧುಕುಟೀರಕ್ಕೆ ಕರೆದೊಯ್ದು ಸಾಮ್ರಾಜ್ಯದ ರೂಪುರೇಷೆ ತಯಾರಿಸಿ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ್ದು ಇತಿಹಾಸ!
    1356ರವರೆಗೆ ಹರಿಹರ ಆಳಿದ,ತದನಂತರ ಬುಕ್ಕ ಪಟ್ಟಕ್ಕೆ ಬಂದಾಗ ಮಾಡಿದ ಮೊದಲ ಕೆಲಸವೆಂದರೆ;ಕಾಶಿಯಲ್ಲಿರುವ ವಿದ್ಯಾರಣ್ಯರನ್ನು ಅವರ ಗುರುಗಳಾದ ವಿದ್ಯಾತೀಥ೯ರ ಗುರುವಾಜ್ಞೆ ಮತ್ತು ತನ್ನ ಪತ್ರವನ್ನು ಕಳುಹಿಸಿ ಪುನಃ ವಿಜಯನಗರಕೆ ಕರೆಸಿಕೊಂಡು ಮಂತ್ರಿ ಮಾಡಿಕೊಂಡ.2ನೇ ಹರಿಹರನಿಗೂ ಮಂತ್ರಿಯಾಗಿದ್ದರು.ತಮ್ಮ90ನೇ ವಯಸ್ಸಿನಲ್ಲಿ 1386ರಲಿ ಕಾಲವಾದರು.
      ಮುತ್ತು-ರತ್ನ,ವಜ್ರ-ವೈಢೂಯ೯,ಬ಼ಂಗಾರ-ಬೆಳ್ಳಿಯನ್ನು ಬಳ್ಳದಿಂದ ಅಳೆಯುವ ಸಾಂಸ್ಕೃತಿಕ-ಸಿರಿವಂತಿಕೆಯನ್ನು ಬೆಳೆಸಿ ಪರದೇಶದವರು ಹುಬ್ಬೇರಿಸುವಂತೆ ಮಾಡಿದ,ಅಪಾರ ಕೀತಿ೯ ಗಳಿಸಿ ಭವ್ಯವಾಗಿ ಮೆರೆಯುವ ನಾಡನ್ನಾಗಿ ಮಾಡಿದ ಶ್ರೀ.ವಿದ್ಯಾರಣ್ಯರಿಗೆ ಕೋಟಿ ನಮನಗಳು.
    -ಹನುಮಂತ.ಮ.ದೇಶಕುಲಕಣಿ೯
    ಸಾ.ಭೋಗೇನಾಗರಕೊಪ್ಪ-581196.      ತಾ.ಕಲಘಟಗಿ 

ವಿದ್ಯಾರಣ್ಯರು

ಜಗತ್ತಿನಲ್ಲಿ ಸಾಂಸ್ಕೃತಿಕ-ಸಿರಿವಂತಿಕೆಯ ದಂತಕಥೆಗಳ ದೊಡ್ಡಣ್ಣನೇ ಆದ ವಿಜಯನಗರ  ಸಾಮ್ರಾಜ್ಯದ ಹಿರಿಮೆಗೆ ಪಾತ್ರರಾಗಲು ಅನೇಕ ಸಾಮ್ರಾಜ್ಯಗಳಂತೆ ಇದು ಸಾಧು-ಸಂತರ ಕೃಪಾಶೀವಾ೯ದದಿಂದ ಸ್ಥಾಪಿಸಿದ್ದು ಆಗಿದೆ.ಪರಕೀಯರ ಆಕ್ರಮಣ ತಡೆಯಲು ಬಲಿಷ್ಟ ಸಾಮ್ರಾಜ್ಯ ಕಟ್ಟಿದ ಯತಿವಯ೯ ವಿದ್ಯಾರಣ್ಯರು.
        ವಿದ್ಯಾರಣ್ಯರು ಜನಿಸಿದ್ದು ಸುಮಾರು 1296ರಲ್ಲಿ.ಇವರ ಪೂವಾ೯ಶ್ರಮದ ಹೆಸರು ಮಾಧವಾಚಾಯ೯.ಇವರಿಗೆ ವಿದ್ಯಾತೀಥ೯ರೆಂಬ ಗುರುಗಳಿದ್ದರು.ಇವರು 35ನೇ ವಯಸ್ಸಿನಲ್ಲಿ ಸಂನ್ಯಾಸ ಸ್ವೀಕರಿಸಿ ವಿಜಯನಗರ ಕಟ್ಟಿದ ಮೇಲೆ ಕಾಶಿಗೆ ತೆರಳಿದರು.
   ಕರುನಾಡಿನ ತಾಯಿ ಭುವನೇಶ್ವರಿಗೆ,ಮಾತೃಭೂಮಿಯ ರಕ್ಷಣೆಗೆ ಕಂಕಣಬದ್ಧರಾಗಿ ತುಂಗಭಧ್ರ ತಟದಿಂದ ಯಾತ್ರೆ ಶುರುಮಾಡಿ ಅರಣ್ಯದಲ್ಲಿ ಬಂದಾಗ ಯತಿಗಳಿಗೆ ಶುಭಶಕುನದಂತೆ ಅಲ್ಲಿ ಮರದ ಕೆಳಗೆ  ಕರುನಾಡಿನ ಕುವರರು ನಿದ್ರೆಗೆ ಜಾರಿದ್ದರು. ಅವರು ತುಂಬು ಬಾಹುಬಲವುಳ್ಳ ಶೂರರಂತೆ ಕಂಡರು.ಎಚ್ಚರಗೊಂಡ ಯುವಕರ ಮುಂದೆ ಖಾವಿಧಾರಿ ಸಂತರು ನಿಂತಿದ್ದರು,ಯತಿಗಳಿಗೆ  ಆ ಯುವಕರು ವಂದಿಸಿದಾಗ ಅವರ ಮುಖದಲ್ಲಿನ ತೇಜಸ್ಸು ಕಂಡು ನೀವು ಯಾರು? ಎಂದಾಗ ಯತಿವಯ೯  ನಾವು ಸೋದರರು ನನ್ನ ಹೆಸರು ಹುಕ್ಕ,ಇವನು ಬುಕ್ಕ ಸಂಗಮ ಅರಸನ ಮಕ್ಕಳು .ಒರಂಗಲ್ಲು ಪ್ರತಾಪರುದ್ರದೇವನಲ್ಲಿ ನಾನು ಸೇನಾಪತಿ,ಇವನು ಕೋಶಾಧಿಕಾರಿ;ದೆಹಲಿ ಬಾದಶಾಹನ ದಂಡಯಾತ್ರೆಯಲ್ಲಿ ಸೋತು ಇಲ್ಲಿ ಬಂದಿದ್ದೇವೆ.
      ನೀವು ಹೆದರುವುದರಿಂದ ಉಪಯೋಗವಿಲ್ಲ,ಎಷ್ಟು ದಿನ ದಾಸರಾಗಿರುತ್ತಿರಿ,ಎಂದು ನುಡಿದಾಗ;ಯತಿವಯ೯ ನಾವು ಸಾವಿಗೆ ಅಂಜುವರಲ್ಲ,ನಮ್ಮದು ಯದುವಂಶ.ಹಾಗಾದರೆ ಬನ್ನಿ ಎಂದು ಅವರನ್ನು ಸಾಧುಕುಟೀರಕ್ಕೆ ಕರೆದೊಯ್ದು ಸಾಮ್ರಾಜ್ಯದ ರೂಪುರೇಷೆ ತಯಾರಿಸಿ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ್ದು ಇತಿಹಾಸ!
    1356ರವರೆಗೆ ಹರಿಹರ ಆಳಿದ,ತದನಂತರ ಬುಕ್ಕ ಪಟ್ಟಕ್ಕೆ ಬಂದಾಗ ಮಾಡಿದ ಮೊದಲ ಕೆಲಸವೆಂದರೆ;ಕಾಶಿಯಲ್ಲಿರುವ ವಿದ್ಯಾರಣ್ಯರನ್ನು ಅವರ ಗುರುಗಳಾದ ವಿದ್ಯಾತೀಥ೯ರ ಗುರುವಾಜ್ಞೆ ಮತ್ತು ತನ್ನ ಪತ್ರವನ್ನು ಕಳುಹಿಸಿ ಪುನಃ ವಿಜಯನಗರಕೆ ಕರೆಸಿಕೊಂಡು ಮಂತ್ರಿ ಮಾಡಿಕೊಂಡ.2ನೇ ಹರಿಹರನಿಗೂ ಮಂತ್ರಿಯಾಗಿದ್ದರು.ತಮ್ಮ90ನೇ ವಯಸ್ಸಿನಲ್ಲಿ 1386ರಲಿ ಕಾಲವಾದರು.
      ಮುತ್ತು-ರತ್ನ,ವಜ್ರ-ವೈಢೂಯ೯,ಬ಼ಂಗಾರ-ಬೆಳ್ಳಿಯನ್ನು ಬಳ್ಳದಿಂದ ಅಳೆಯುವ ಸಾಂಸ್ಕೃತಿಕ-ಸಿರಿವಂತಿಕೆಯನ್ನು ಬೆಳೆಸಿ ಪರದೇಶದವರು ಹುಬ್ಬೇರಿಸುವಂತೆ ಮಾಡಿದ,ಅಪಾರ ಕೀತಿ೯ ಗಳಿಸಿ ಭವ್ಯವಾಗಿ ಮೆರೆಯುವ ನಾಡನ್ನಾಗಿ ಮಾಡಿದ ಶ್ರೀ.ವಿದ್ಯಾರಣ್ಯರಿಗೆ ಕೋಟಿ ನಮನಗಳು.
    -ಹನುಮಂತ.ಮ.ದೇಶಕುಲಕಣಿ೯
    ಸಾ.ಭೋಗೇನಾಗರಕೊಪ್ಪ-581196.      ತಾ.ಕಲಘಟಗಿ 

ವಿದ್ಯಾರಣ್ಯರು

ಜಗತ್ತಿನಲ್ಲಿ ಸಾಂಸ್ಕೃತಿಕ-ಸಿರಿವಂತಿಕೆಯ ದಂತಕಥೆಗಳ ದೊಡ್ಡಣ್ಣನೇ ಆದ ವಿಜಯನಗರ  ಸಾಮ್ರಾಜ್ಯದ ಹಿರಿಮೆಗೆ ಪಾತ್ರರಾಗಲು ಅನೇಕ ಸಾಮ್ರಾಜ್ಯಗಳಂತೆ ಇದು ಸಾಧು-ಸಂತರ ಕೃಪಾಶೀವಾ೯ದದಿಂದ ಸ್ಥಾಪಿಸಿದ್ದು ಆಗಿದೆ.ಪರಕೀಯರ ಆಕ್ರಮಣ ತಡೆಯಲು ಬಲಿಷ್ಟ ಸಾಮ್ರಾಜ್ಯ ಕಟ್ಟಿದ ಯತಿವಯ೯ ವಿದ್ಯಾರಣ್ಯರು.
        ವಿದ್ಯಾರಣ್ಯರು ಜನಿಸಿದ್ದು ಸುಮಾರು 1296ರಲ್ಲಿ.ಇವರ ಪೂವಾ೯ಶ್ರಮದ ಹೆಸರು ಮಾಧವಾಚಾಯ೯.ಇವರಿಗೆ ವಿದ್ಯಾತೀಥ೯ರೆಂಬ ಗುರುಗಳಿದ್ದರು.ಇವರು 35ನೇ ವಯಸ್ಸಿನಲ್ಲಿ ಸಂನ್ಯಾಸ ಸ್ವೀಕರಿಸಿ ವಿಜಯನಗರ ಕಟ್ಟಿದ ಮೇಲೆ ಕಾಶಿಗೆ ತೆರಳಿದರು.

   ಕರುನಾಡಿನ ತಾಯಿ ಭುವನೇಶ್ವರಿಗೆ,ಮಾತೃಭೂಮಿಯ ರಕ್ಷಣೆಗೆ ಕಂಕಣಬದ್ಧರಾಗಿ ತುಂಗಭಧ್ರ ತಟದಿಂದ ಯಾತ್ರೆ ಶುರುಮಾಡಿ ಅರಣ್ಯದಲ್ಲಿ ಬಂದಾಗ ಯತಿಗಳಿಗೆ ಶುಭಶಕುನದಂತೆ ಅಲ್ಲಿ ಮರದ ಕೆಳಗೆ  ಕರುನಾಡಿನ ಕುವರರು ನಿದ್ರೆಗೆ ಜಾರಿದ್ದರು. ಅವರು ತುಂಬು ಬಾಹುಬಲವುಳ್ಳ ಶೂರರಂತೆ ಕಂಡರು.ಎಚ್ಚರಗೊಂಡ ಯುವಕರ ಮುಂದೆ ಖಾವಿಧಾರಿ ಸಂತರು ನಿಂತಿದ್ದರು,ಯತಿಗಳಿಗೆ  ಆ ಯುವಕರು ವಂದಿಸಿದಾಗ ಅವರ ಮುಖದಲ್ಲಿನ ತೇಜಸ್ಸು ಕಂಡು ನೀವು ಯಾರು? ಎಂದಾಗ ಯತಿವಯ೯  ನಾವು ಸೋದರರು ನನ್ನ ಹೆಸರು ಹುಕ್ಕ,ಇವನು ಬುಕ್ಕ ಸಂಗಮ ಅರಸನ ಮಕ್ಕಳು .ಒರಂಗಲ್ಲು ಪ್ರತಾಪರುದ್ರದೇವನಲ್ಲಿ ನಾನು ಸೇನಾಪತಿ,ಇವನು ಕೋಶಾಧಿಕಾರಿ;ದೆಹಲಿ ಬಾದಶಾಹನ ದಂಡಯಾತ್ರೆಯಲ್ಲಿ ಸೋತು ಇಲ್ಲಿ ಬಂದಿದ್ದೇವೆ.
      ನೀವು ಹೆದರುವುದರಿಂದ ಉಪಯೋಗವಿಲ್ಲ,ಎಷ್ಟು ದಿನ ದಾಸರಾಗಿರುತ್ತಿರಿ,ಎಂದು ನುಡಿದಾಗ;ಯತಿವಯ೯ ನಾವು ಸಾವಿಗೆ ಅಂಜುವರಲ್ಲ,ನಮ್ಮದು ಯದುವಂಶ.ಹಾಗಾದರೆ ಬನ್ನಿ ಎಂದು ಅವರನ್ನು ಸಾಧುಕುಟೀರಕ್ಕೆ ಕರೆದೊಯ್ದು ಸಾಮ್ರಾಜ್ಯದ ರೂಪುರೇಷೆ ತಯಾರಿಸಿ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ್ದು ಇತಿಹಾಸ!
    1356ರವರೆಗೆ ಹರಿಹರ ಆಳಿದ,ತದನಂತರ ಬುಕ್ಕ ಪಟ್ಟಕ್ಕೆ ಬಂದಾಗ ಮಾಡಿದ ಮೊದಲ ಕೆಲಸವೆಂದರೆ;ಕಾಶಿಯಲ್ಲಿರುವ ವಿದ್ಯಾರಣ್ಯರನ್ನು ಅವರ ಗುರುಗಳಾದ ವಿದ್ಯಾತೀಥ೯ರ ಗುರುವಾಜ್ಞೆ ಮತ್ತು ತನ್ನ ಪತ್ರವನ್ನು ಕಳುಹಿಸಿ ಪುನಃ ವಿಜಯನಗರಕೆ ಕರೆಸಿಕೊಂಡು ಮಂತ್ರಿ ಮಾಡಿಕೊಂಡ.2ನೇ ಹರಿಹರನಿಗೂ ಮಂತ್ರಿಯಾಗಿದ್ದರು.ತಮ್ಮ90ನೇ ವಯಸ್ಸಿನಲ್ಲಿ 1386ರಲಿ ಕಾಲವಾದರು.
      ಮುತ್ತು-ರತ್ನ,ವಜ್ರ-ವೈಢೂಯ೯,ಬ಼ಂಗಾರ-ಬೆಳ್ಳಿಯನ್ನು ಬಳ್ಳದಿಂದ ಅಳೆಯುವ ಸಾಂಸ್ಕೃತಿಕ-ಸಿರಿವಂತಿಕೆಯನ್ನು ಬೆಳೆಸಿ ಪರದೇಶದವರು ಹುಬ್ಬೇರಿಸುವಂತೆ ಮಾಡಿದ,ಅಪಾರ ಕೀತಿ೯ ಗಳಿಸಿ ಭವ್ಯವಾಗಿ ಮೆರೆಯುವ ನಾಡನ್ನಾಗಿ ಮಾಡಿದ ಶ್ರೀ.ವಿದ್ಯಾರಣ್ಯರಿಗೆ ಕೋಟಿ ನಮನಗಳು.
    -ಹನುಮಂತ.ಮ.ದೇಶಕುಲಕಣಿ೯
    ಸಾ.ಭೋಗೇನಾಗರಕೊಪ್ಪ-581196.      ತಾ.ಕಲಘಟಗಿ 

8 ತಲೆಮಾರುಗಳಿಂದ ವಂಶಾವಳಿ ವಂಶವೃಕ್ಷ ಬರೆಯುತ್ತ ಬಂದ ದೇಶಕುಲಕಣಿ೯ (ದೇಸಾಯಿ )ಕುಟುಂಬ.

   ಯಾರಿಗಾದರೂ ಕೇಳಿ ನೋಡಿ, ಅವರ ವಂಶದ ಬಗ್ಗೆ ಅವರ ಹೆಸರು,ಅವರಪ್ಪನ ಹೆಸರು,ಅವರಜ್ಜನ ಹೆಸರು ಹೇಳುತ್ತಾರೆ.ಅಬ್ಬಬ್ಬಾ..ಅಂದರೆ ಅವರ ಮುತ್ತಜ್ಜನ ಹೆಸರು ಹೇಳಬಹುದು.ಇತಿಹಾಸ ಶೋಧಿಸಿದಾಗ ಕೆಲ ರಾಜಕುಟುಂಬಗಳ ವಂಶಾವಳಿ ದೊರಕಬಹುದು.ಆದರೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಭೋಗೇನಾಗರಕೊಪ್ಪದ ದೇಶಕುಲಕಣಿ೯ (ದೇಸಾಯಿ)ಅವರು ,ಕಳೆದ 8 ತಲೆಮಾರಿನ ವಂಶವೃಕ್ಷವನ್ನು ಬರೆದಿಡುತ್ತಾ ಬಂದಿದ್ದಾರೆ.
          ಭೋಗೇನಾಗರಕೊಪ್ಪ ದೇಸಾಯರ ಪೂವ೯ಜರು ಬಿದರಿಕೋಟೆ ಗ್ರಾಮದ ದೇಸಾಯರಾಗಿದ್ದರು.ಆ ಅಧಿಕಾರ ತ್ಯಜಿಸಿ ಹಂಪೆ ಪಂಪಾಪತಿ ದೇಗುಲದ ಅಚ೯ಕರಾದರು.ಬಿದರಿಕೋಟೆ ಗ್ರಾಮ ಈಗ ಬೇಚರಾಕ್ ಆಗಿದೆ.ವಿಜಯನಗರ ಸಾಮ್ರಾಜ್ಯದ ಇರುವವರೆಗೂ ಅಚ೯ಕರಾಗಿದ್ದರು.ವಿಜಯನಗರ ಸಾಮ್ರಾಜ್ಯ ಪತನಾನಂತರ ಧಾರವಾಡದತ್ತ ವಲಸೆ ಬಂದರು.ವಲಸೆ ಬಂದ ಮೂಲಪುರುಷರು ಪಂಪಪ್ಪ,ಬಸಪ್ಪ,ಶಿವಪ್ಪ.
        ಧಾರವಾಡದಲ್ಲಿ ಮರಾಠಾ ಸಾಮ್ರಾಜ್ಯ ಆಡಳಿತವಿತ್ತು.ಛತ್ರಪತಿ ಶಿವಾಜಿ ಮುಂದೆ ವಿದ್ವತ್ ಪ್ರದಶಿ೯ಸಿದಾಗ ಮೂವರ ಪೂವ೯ಜರ ರಾಜನೀತಿ,ಧಾಮಿ೯ಕನೀತಿಯ ಹಿನ್ನಲೆ ಪಾಂಡಿತ್ಯ ಅರಿತು ತಲಾ ಐದು ಹಳ್ಳಿ ಇನಾಮು ಆಗಿ ನೀಡಿದನು.ಪಂಪಪ್ಪ ತಾನು ಭೋಗೇನಾಗರಕೊಪ್ಪ ಆಯ್ದುಕೊಂಡು ಶಿವಾಜಿ ಕಟ್ಟಿಸಿದ ವಾಡೆದಲ್ಲಿ ಆಡಳಿತ ನಡೆಸತೊಡಗಿದ.ಬಸಪ್ಪ ಜಮ್ಮಿಹಾಳವನ್ನು,ಶಿವಪ್ಪ ಹುಲ್ಲಂಬಿಯನ್ನು ಆಡಳಿತ ಕೇಂದ್ರ ಮಾಡಿಕೊಂಡರು.
    ಭೋಗೇನಾಗರಕೊಪ್ಪದ ಮೂಲಪುರುಷ ಪಂಪಪ್ಪ.ಇವನಿಗೆ ಇಬ್ಬರು ಮಕ್ಕಳು ಹಿರಿಯ ಶೇಷಪ್ಪ(ಶೇಷೋ)ಇವನದು ಮೇಲಿನ ಘರಾಣೆ.ಕಿರಿಯ ಶಿವರಾಯಪ್ಪ ಇವನದು ಕೆಳಗಿನ ಘರಾಣೆ.ಶೇಷೋಗೆ  ಲಿಂಗೋ(ಪಂಪಣ್ಣ ಉಫ್೯ ಪಂಪಾಪತಿ)ಮಗ.ಲಿಂಗೋನ ಆಡಳಿತಕ್ಕೆ ಬಂದಾಗ "ಲಿಂಗೋ ಶೇಷೋ ಘರಾಣೆ" ಎಂದು ಪ್ರಸಿದ್ಧವಾಯಿತು. ಇವನ ಮಕ್ಕಳು ಬಸವಂತ,ವಿರೂಪಾಕ್ಷ,ಕೃಷ್ಟರಾವ್,ರಾಮಚಂದ್ರ(ರಾಮಪ್ಪಜ್ಜ).
       ಹಿರಿಯ ಬಸವಂತನು ಕುದುರೆ ಸವಾರಿ,ಕುದುರೆ ಪಳಗಿಸುವುದರಲ್ಲಿ ಎತ್ತಿದ ಕೈ.ಬಸವಂತನ ಮಕ್ಕಳು ಇಬ್ಬರು ಅಣ್ಣಾಜಿ, ತಮ್ಮಾಜಿ.ಮರಾಠರ ಪ್ರಭಾವದಿಂದ ತಮ್ಮ ಹೆಸರಿನ ಮುಂದೆ "ಜೀ" ಎಂಬ ಗೌರವಸೂಚಕ ಹೆಸರಿನ ಮುಂದೆ ಇಟ್ಟುಕೊಂಡರು.ಅಣ್ಣಾಜಿಯು ಧಾಮಿ೯ಕ ಕಾಯ೯ಗಳಲ್ಲಿ ಆಸಕ್ತಿಯಿದ್ದನು.ಹೀಗಾಗಿ ಅವರ ಹೆಸರಲ್ಲಿಯೇ ಊರ ಶ್ರೀಮಾರುತಿ,ನಂದೀಶ್ವರ ದೇವಸ್ಥಾನದ ನಿವ೯ಹಣೆಗೆ ತಲಾ 2 ರೂ/- ವಷಾ೯ಶನ ನೀಡುತ್ತಿದ್ದರು.ಆ ಸನದು "ಅಣ್ಣಾಜಿ ಬಸವಂತ" ಹೆಸರಲ್ಲಿ ಇತ್ತು. ತಮ್ಮಾಜಿಯು ಪ್ರಖ್ಯಾತ ಕುಸ್ತಿಪಟುವಾಗಿದ್ದರು.ಆಗಲೇ ಭೋಗೇನಾಗರಕೊಪ್ಪ "ಪ್ರಸಿದ್ಧ ಪೈಲ್ವಾನರ ಊರು" ಎಂದು ಖ್ಯಾತವಾಗಿತ್ತು.
         ಅಣ್ಣಾಜಿಗೆ ಬಾಲಕೃಷ್ಣ, ರಂಗೋ ಮಕ್ಕಳಿದ್ದರು.ಹಿರಿಯ ಬಾಲಕೃಷ್ಣ ಊರಗೌಡರಿದ್ದರು.ಇವರು ಆಕಸ್ಮಿಕ ನಿಧನರಾದಾಗ ರಂಗೋ ಗೌಡರಾದರು.ರಂಗೋ ಅವರಿಗೆ ರಘುನಾಥ,ಗುರುನಾಥ,ಸುಭಾಸ್ಚಂದ್ರ ಎಂಬ ಮೂರು ಮಕ್ಕಳಿದ್ದಾರೆ.ರಘುನಾಥರಿಗೆ ದೀಪಕ,ಅಭಯ ಮಕ್ಕಳಿದ್ದಾರೆ.ಗುರುನಾಥರಿಗೆ ಮೂರು ಜನ ಹೆಣ್ಣುಮಕ್ಕಳಿದ್ದಾರೆ.
      ತಮ್ಮಾಜಿ ಅವರಿಗೆ ದತ್ತಾತ್ರೇಯ,ಶಿವಾಜಿ,ಕೃಷ್ಣಾಜಿ ಮೂರು ಜನ ಮಕ್ಕಳು.ದತ್ತಾತ್ರೇಯ ಅವರಿಗೆ ಹನುಮಂತ, ರವಿ ಗಂಡುಮಕ್ಕಳಿದ್ದರು ಅವರು ಚಿಕ್ಕ ವಯಸ್ಸಿನಲ್ಲಿ ನಿಧನರಾಗಿದ್ದಾರೆ,ಮತ್ತು  ಐದುಜನ ಹೆಣ್ಣುಮಕ್ಕಳು ಇದ್ದಾರೆ.ಶಿವಾಜಿಗೆ ರಾಮಚಂದ್ರ ಮಗ.ರಾಮಚಂದ್ರ ಅವರಿಗೆ ಗಣೇಶ ಎಂಬ ಮಗನಿದ್ದಾನೆ.ಕೃಷ್ಣಾಜಿ ಅವರಿಗೆ ಆರು ಜನ ಗಂಡುಮಕ್ಕಳು.ಬಸವಂತರಾವ್,ಮಧುಸೂದನ,ಅಶೋಕ ವಸಂತ,ಅರುಣ,ಮೋಹನ.ಹಿರಿಯ ಬಸವಂತರಾವ್ ಅವಿವಾಹಿತರು.ಮಧುಸೂದನ ಅವರಿಗೆ ಹನುಮಂತ,ಗುರುರಾಜ ಗಂಡುಮಕ್ಜಳು.ಅಶೋಕ ಅವರಿಗೆ ಪವನ ಮಗ,ಪವನನಿಗೆ ಸಮಥ೯ ಮಗನಿದ್ದಾನೆ.ವಸಂತ ಅವರಿಗೆ ಚೈತನ್ಯ ಮಗ,ಚೇತನಾ ಮಗಳು ಇದ್ದಾರೆ.ಅರುಣರಿಗೆ ಕೃಷ್ಣ ಎನ್ನುವ ಮಗ.ಮೋಹನರಿಗೆ ನವೀನ,ಪುರುಷೋತ್ತಮ,ಭರತ ಮೂರು ಮಕ್ಕಳಿದ್ದಾರೆ.
      ಲಿಂಗೋ(ಪಂಪಣ್ಣ ಉಫ್೯ ಪಂಪಾಪತಿ) ಎರಡನೇ ಮಗ ವಿರೂಪಾಕ್ಷ ಇವರಿಗೆ ಶಂಕರರಾವ್ ಮಗನಿದ್ದ.ಶಂಕರರಾವ್ ಗೆ ಹನುಮಂತ,ರಾಮಚಂದ್ರ,ಲಕ್ಷ್ಮಣ,ಶ್ರೀಪಾದ ಮಕ್ಕಳು.ಹನುಮಂತ ಅವರಿಗೆ ಇಬ್ಬರೂ ಹೆಣ್ಣುಮಕ್ಕಳು.ರಾಮಚಂದ್ರ ಅವರನ್ನು ಲಿಂಗೋ ಅವರ ಮೂರನೇ ಮಗ ಕೃಷ್ಟರಾವ್ ಅವರಿಗೆ ದತ್ತಕ ಹೋದರು.ಲಕ್ಷ್ಮಣ ಆಕಸ್ಮಿಕ ನಿಧನನಾದ.ಶ್ರೀಪಾದರಿಗೆ ಸದ್ಗುರು,ಸಮಥ೯ ಮಕ್ಕಳು.
      ಲಿಂಗೋ(ಪಂಪಣ್ಣ ಉಫ್೯ ಪಂಪಾಪತಿ) ಮೂರನೇ ಮಗ ಕೃಷ್ಟರಾವ ಸೋದರನ ಮೊಮ್ಮಗ ರಾಮಚಂದ್ರ ಅವರನ್ನು ದತ್ತಕಮಗ ಮಾಡಿಕೊಂಡರು.ರಾಮಚಂದ್ರ ಅವರು ಅವಿವಾಹಿತ. ಲಿಂಗೋ(ಪಂಪಣ್ಣ ಉಫ್೯ ಪಂಪಾಪತಿ) ಅವರ ಕೊನೆಯ ಮಗ ರಾಮಚಂದ್ರ(ರಾಮಪ್ಪಜ್ಜ) ಅವರಿಗೆ ಸಂತಾನವಿರಲಿಲ್ಲ.
      9ನೇ ತಲೆಮಾರಿನತ್ತ ಮುನ್ನುಗ್ಗುತ್ತಿರುವ   ಈ ವಂಶವೃಕ್ಷದಲ್ಲಿ ಬರೀ ಪುರುಷರಿಗೆ ಪ್ರಾಧಾನ್ಯತೆ ಇದೆ.ಆಗ ಪಿತೃಪ್ರಧಾನ ಕುಟುಂಬವಿತ್ತು.ಇದೇ ರೀತಿಯಾಗಿ ಮೇಲಿನಮನೆ ಘರಾಣೆಯಂತೆ ಕೆಳಗಿನಮನೆ ವಂಶಾವಳಿಯನ್ನು ಬರೆದಿಡಲಾಗಿದೆ.ಅವರಲ್ಲಿ ಪ್ರಮುಖರಾದವರು ವಿರೂಪಾಕ್ಚ.ಅನಂತರಾವ್.ದೇಸಾಯಿ.ಅವರು ದತ್ತಕಕಾಯ್ದೆ ವಿರುದ್ಧ ಬ್ರಿಟಿಷರ ವಿರುದ್ಧ ಹೋರಾಡಿದ್ದರು.ಮುಂದೆ ಗೋವಾವಿಮೋಚನಾ ಚಳವಳಿಯಲ್ಲಿ ಭಾಗವಹಿಸಿದ್ದರು.ಇವರಿಗೆ ಸ್ವಾತಂತ್ರ್ಯಯೋಧರ ಪಿಂಚಣಿ ಬರುತ್ತಿತ್ತು.ಇನ್ನೋವ೯ರು ದೇಸಾಯಿ ದತ್ತಮೂತಿ೯.ಭೀಮರಾವ್. ಇವರು ಸಾಹಿತಿಗಳಾಗಿದ್ದರು.ದ.ರಾ.ಬೇಂದ್ರೆ ಆಪ್ತರಲ್ಲಿ ಒಬ್ಬರಾಗಿದ್ದರು.ಇವರು ಆಗ ಸುಲಲಿತವಾಗಿ ಆಂಗ್ಲ ಭಾಷೆ ಬರೆಯುವ,ಮಾತಾಡುವ ಪಾಂಡಿತ್ಯವಿತ್ತು.ಕೆಲ ಇಂಗ್ಲಿಷ್ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಆ ಕಾಲದಲ್ಲಿ ಶ್ರೇಷ್ಠ ಅನುವಾದಕರಾಗಿದ್ದಾರೆ.ಇವರು ಸಂಸ್ಕೃತದಲ್ಲಿ ಪಂಡಿತರು.ದೇಶಪ್ರೇಮ ಲೇಖನಗಳನ್ನು ಬರೆಯುತ್ತಿದ್ದರು.ಇವರ ಕಾವ್ಯಾಮ "ದೇವದತ್ತ"ಆಗಿತ್ತು.
      ಇವರ ವಾಡೆಗೆ ಹಂಪೆ ಗೋಪುರದ ಮುಖ್ಯ ಗೋಪುರ ನಿಮಾ೯ಪಕ ಬಿಷ್ಟಪ್ಪಯ್ಯ ಮಹಾಪುರುಷರು,ಸಮಥ೯ ರಾಮದಾಸ ಮುನಿಗಳು ಆಗಮಿಸಿ ಅಶೀವ೯ದಿಸಿದ್ದರು.ದೇಸಾಯರ ಸಂತಾನ ಸಮಸ್ಯೆ ಪರಿಹರಿಸಿ ನಂದೀಶ್ವರನನ್ನು ಪ್ರತಿಷ್ಟಾಪಿಸಿದರು.ಅದರಂತೆ ಭಕ್ತಿ-ಶಕ್ತಿಯ ದ್ಯೋತಕವಾಗಿ ಮಾರುತಿ ದೇವಸ್ಥಾನದ ಪಕ್ಕದಲ್ಲಿ ಗರಡಿಮನೆಯ ಸ್ಥಾಪಿಸಿದ್ದು ಶ್ರೀ. ಸಮಥ೯ ರಾಮದಾಸರು.
   ಇಷ್ಟೆಲ್ಲಾವಿವರ ನೀಡಿದವರು ಮನೆತನದ ಹಿರಿಯರಾದ ಬಸವಂತರಾವ್.ಕೃಷ್ಣಾಜಿ.ದೇಶಕುಲಕಣಿ೯.
   
     -ಹನುಮಂತ.ಮ.ದೇಶಕುಲಕಣಿ೯
     ಸಾ.ಭೋಗೇನಾಗರಕೊಪ್ಪ-581196 

ಗುರುವಾರ, ಏಪ್ರಿಲ್ 9, 2015

ಕಪ್ಪುಹಲಗೆ ಮತ್ತು ಚಳಿ ಸಂಭ್ರ ಮ

ಕಪ್ಪು ಎಂದರೆ ಎಲ್ಲರಿಗೂ ಅದೊಂಥರಾ ಅಸಹನೆ.ಆದರೆ ಕಪ್ಪು ಯಾವುತ್ತಲೂ ಬೌಂಡರಿ ಲೈನ್ ಇದ್ದ ಹಾಗೆ! ವಿದ್ಯಾಥಿ೯ ಜೀವನ ಎನ್ನುವುದು ಕಗ್ಗತ್ತಲಲ್ಲಿ ಇರುವುದು ಅದನ್ನು ಬೆಳಗಿಸಿ ಬಣ್ಣದ ಬೆಳಕಿನೆಡೆಗೆ ನಡೆಸುವುದು ಬ್ಲ್ಯಾಕ್ ಬೋಡ್೯.ಕಪ್ಪು ಎಂದು ಹೀಗಳೆಯದಿರಿ, ಕರಿಮೋಡದಿಂದ ಮಳೆ ಬರುತ್ತದೆ ವಿನಃ ಬಿಳಿಮೋಡದಿಂದಲ್ಲ!
ಪ್ರತಿಯೊಬ್ಬ ವ್ಯಕ್ತಿ ನಗಣ್ಯದಿಂದ ಗಣ್ಯನಾಗುವುದಕ್ಕೆ ಕಾರಣ ಕಪ್ಪುಹಲಗೆ.
          ಹಿಂದೆ ಸಮತಟ್ಟಾದ ಪಾಟಿಗಲ್ಲಿನ ಮೇಲೆ ಇದ್ದಿಲು ತುಂಡು, ಮಟ್ಟಿಯಿಂದ ಬರಯುತ್ತಿದ್ದರು. ಕ್ರಮೇಣ ಕಪ್ಪು ಹಲಗೆ ಮೇಲೆ ಬಿಳಿ ಸೀಮೆಸುಣ್ಣದಿಂದ (ಬಳಪ) ಬರೆದು ಕಲಿಸತೊಡಗಿದರು.ಅದೇ ರೀತಿ ವಿದ್ಯಾರ್ಥಿಗಳು ಪಾಟಿಯ ಮೇಲೆ ಬರೆಯುತ್ತಿದ್ದರು.ಆದರೆ ಇಂದು ಪಾಟಿಗಳ ಮೇಲೆ ಬರೆಯದೆ ಇರುವುದರಿಂದ ಮರೆಯಾಗುತ್ತಿವೆ.
     ಪಾಠದ ಸಮಯದಲ್ಲಿ ಯಾರಾದರೂ ಏಕಾಗ್ರತೆಗೆ ಭಂಗ ತಂದರೆ ಅವರಿಗೆ ಚಡಿ ಏಟಿಗಿಂತ ಕಪ್ಪುಹಲಗೆ ಹತ್ತಿರ ಬಂದು ಲೆಕ್ಕ ನ್ನೋ ಸೂತ್ರವನ್ನೊ ಅಥವಾ ಕನ್ನಡ ವ್ಯಾಕರಣದ ಲಘು ಗುರು ಹಾಕುವ ಶಿಕ್ಷೆ ಎದುರಾಗುತ್ತಿತ್ತು. ಅದು ಸಾಧ್ಯವಾಗದೆ ಸಪ್ಪೆಮೋರೆ ಹಾಕಿದಾಗ ಕಿವಿಯನ್ನು ಹಿಂಡಿ ಕೈಯಿಂದ ಹಿಡಿದು ಬೋಡ್೯ಗೆ ಢಗ್ ಎಂದು ಹಾಯಿಸುತ್ತಿದ್ದರು!.
       ಮೊದಲು ಕಪ್ಪು ಹಲಗೆ ಮೇಲೆ ಶಿಕ್ಷಕರನ್ನು ಬಿಟ್ಟರೆ ಬರೆಯಲು ಅಹ೯ತೆ ಇದ್ದವರು ಕ್ಲಾಸ್ ಲೀಡರ್ ಗಳೇ! ಅವರು ಕ್ಲಾಸ್ ಮೆಂಟೆನನ್ಸ್ ಮಾಡಲು ಒಂದು ಕಡೆ ಮೂಲೆಯಲ್ಲಿ ಮಾತ್ರ ಬೋಡ್೯ ಉಪಯೋಗಿಸಲು ಅವಕಾಶವಿತ್ತು.ಬೋಡ್೯ ಮೇಲೆ ದಿನಾಂಕ,ವಾರ, ವಿದ್ಯಾರ್ಥಿಗಳ ಹಾಜರಾತಿ ಮಾಹಿತಿ ನಾಯಕನೇ ಬರೆಯಬೇಕಿತ್ತು. ಮತ್ತು ದಿನಾಲೂ ಒಂದೊಂದು ಗಾದೆಮಾತು ಬರೆಯಬೇಕಿತ್ತು.ಶಿಕ್ಷಕರಿಲ್ಲದಾಗ ಕ್ಲಾಸ್ ಮೆಂಟೆನನ್ಸ್ ನಾಯಕ ಮಾಡುವಾಗ ಯಾರಾದರೂ ಎದುರಾಡಿದರೆ ಅವರ ಹೆಸರು ಬೋಡ್೯ ಮೇಲೆ ಠಳಾಯಿಸುತ್ತಿತ್ತು.ಮರುದಿನ ಶಿಕ್ಷಕರಿಂದ ಆತನಿಗೆ "ಬಿಸಿ ಕಾಯ೯ಕ್ರಮ" ಇರುತ್ತಿತ್ತು.ಅಂತೂ ಬೋಡ್೯+ವಿದ್ಯಾರ್ಥಿಗಳು+ಶಿಕ್ಷಕರುಗಳಿಗೆ ಬಿಡಲಾರದ ಸವಿನಂಟಿನ ನೆನಪು.
   ಈಗ ಗ್ರೀನ್ ಬೋಡ್೯ ಬಳಸತೊಡಗಿದ್ದಾರೆ. ಆದರೆ ಕೆಲ ಪಾಠಶಾಲೆ-ಮನೆಪಾಠಶಾಲೆಗಳಲ್ಲಿ ಡಿಜಿಟಲ್ ಕ್ರಾಂತಿಯಾಗುತ್ತದೆ.ಸ್ಮಾಟ್೯ ಕ್ಲಾಸ್ ಶಿಕ್ಷಣ ನೋಡುತ್ತಿದ್ದಾರೆ.ಇದರಿಂದ ಬೌದ್ದಿಕಮಟ್ಟ ವಿಕಸಿತಗೊಳ್ಳುತ್ತಿದೆ.

,
ಚುಮುಚುಮು ಚಳಿಯಲಿ ಇಬ್ನನಿಯ ಮಬ್ಬಿನ ತೆರೆಯಲ್ಲಿ ಸಕ್ಕರೆ ನಿದ್ರೆ ಮಾಡುವುದೆಂದರೆ ಅದೆಂಥಾ ಮಧುರ ಅನುಭೂತಿ!ಆದರೇನು ಮಾಡುವುದು ಸವಿ ನಿದ್ದೆ ಬಂದ ದಿನವೇ ಬೇಗ ಏಳಬೇಕಾಗಿರುತ್ತದೆ.ಕಾರಣ ನಡೆಯದ,ಸಬೂಬು ನಂಬದ ಲೆಕ್ಚರರ್ ಕ್ಲಾಸಿಗೆ ಹಾಜರಾಗಲೇ ಬೇಕಾದ ಸಂಧಿಗ್ಧ ಸ್ಥಿತಿ! ಬೇರೇನೂ ಉಪಾಯ ನಡೆಯದೆ ಶಪಿಸುತ್ತ ಏಳುವುದು ವಿದ್ಯಾರ್ಥಿಗಳಿಗೆ ಬಿಡದ ಕಮ೯.
    ನಮ್ಮ ಪ್ರಾಥಮಿಕ ಶಾಲೆಯಲ್ಲಿ ಗುರುಗಳೊಬ್ಬರಿದ್ದರು.ಅವರ ಮೊದಲ ಗುರಿ ಏನೆಂದರೆ ಅದು ಶನಿವಾರ ಹಾಫಡೇ ಇದ್ಧದ್ದಕ್ಕೆ ಬೆಳಿಗ್ಗೆ ಬೇಗ ಹೋಗಬೇಕು. ತಡವಾಗಿ ಬಂದವರಿಗೆ ಪ್ರತ್ಯೇಕ ಸಾಲು ಮಾಡಲು ಹೇಳಿ ಅವರಗಾಗಿ ಸ್ವಾಗತ ಸಮಾರಂಭ ಇರುತ್ತಿತ್ತು, ಅದೇ "ಬಿಸಿ ಕಾಯ೯ಕ್ರಮ"  ಹೆಸರೇ ಹೇಳುವಂತೆ ಚಳಿ ಬಿಡಿಸುತ್ತಿದ್ದರು.
    ಚಡಿ ಚಂ ಚಂ ವಿದ್ಯೆ ಘಂ ಘಂ ಎನ್ನುವುದರ ಪ್ರಾತ್ಯಕ್ಷಿಕೆ ತೋರಿಸುತ್ತಿದ್ದರು.ನಮ್ಮ. ಕೈ ಅಂಗೈ ಕೆಂಪಾಗಿ ನಮ್ಮ ಮೈ ಚಳಿಗೆ ಡಾಕ್ಟರ್ ಇಂಜೆಕ್ಷನ್ ಕೊಟ್ಟಂತೆ ಅವರ ಕೋಲೇಟು ಇರುತ್ತಿದ್ದವು.!ಪ್ರಾಥ೯ನೆ ಮುಗಿದ ನಂತರ ಡ್ರೀಲ್ ಪಿರಿಯಡ್ಡನಲ್ಲಿ ಮೈಗಳ್ಳತನ ಮಾಡಿದರೆ ಮತ್ತೆ ಬಿಸಿ ಕಾಯ೯ಕ್ರಮ;ಲಾಠಿ ಝಳಪಿಸುತ್ತಿತ್ತು!ಮಾರನೆ ದಿನ ಭಾನುವಾರ, ಬಹಳ ಹೊತ್ತು ನಿದ್ದೆ ಮಾಡಬೇಕೆಂದು ಹಿಂದಿನ ದಿನ ನಿಶ್ಚಯಿಸಿದಂತೆ ಆಗದೇ ಭಾನುವಾರ ಬೇಗನೇ ಎಚ್ಚರವಾಗಿಬಿಡುತ್ತದೆ.ಅದು ತೀವ್ರ ನಿರಾಶೆಯಾಗಿ ಬಿಡುತ್ತದೆ(ಶನಿವಾರದ ನಿದ್ರೆಗೆ ಹೋಲಿಸಿದರೇ!)
     ಚಳಿಯಲ್ಲಿ ಹಿತವಿದೆ,ಚಳಿಯಲ್ಲಿ ಅವಣ೯ನೀಯ ಸುಖವಿದೆ.ತರಗತಿಯ ಹೊರಗಡೆ ನಿಂತು ಮಾಸ್ತರರು ಇಲ್ಲದಿದ್ದಾಗ ಎಳೆಬಿಸಿಲನ್ನು ಅಸ್ವಾದಿಸುವಾಗ ಹಿಂದಿನಿಂದ ಅವರು ಬಂದು ಚಳಿ ಬಿಡಿಸಿದ್ದು ಮರೆಯಲಾದೀತೆ!?.

-ಹನುಮಂತ.ಮ.ದೇಶಕುಲಕಣಿ೯
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ