ಬುಧವಾರ, ಏಪ್ರಿಲ್ 29, 2015

ಸರದಾರ ವಲ್ಲಭಬಾಯಿ ನೆನಪು ಸದಾ

ಭಾರತದ ಉಕ್ಕಿನ ಮನುಷ್ಯ" ಎಂದೇ ಖ್ಯಾತರಾದ ಭಾರತದ ಪ್ರಥಮ ಉಪಪ್ರಧಾನಿ ಸದಾ೯ರ ವಲ್ಲಭಬಾಯಿ ಪಟೇಲ್ ಅವರ ಜೀವನವೇ ಹೋರಾಟ ಮನೋಭಾವದಿಂದ ಕೂಡಿತ್ತೆಂದು ಹೇಳಬಹುದು.ಅವರು ಅಖಂಡಭಾರತದ ನಿಮಾ೯ಪಕರು.ಭಾಷಾವಾರು ಪ್ರಾಂತ್ಯದ ವಿಂಗಡಣೆಯಿಂದ ಶಾಂತಿಯುತ ಪ್ರದೇಶ ಮಾಡುವ ದೂರದೃಷ್ಟಿ ಇಂದಿಗೂ ಪ್ರಸ್ತುತವಾಗಿದೆ.
      ಅವರೆಂದು ಅಧಿಕಾರ ಬಯಸಿದವರಲ್ಲ ,ಇದ್ದ ಅಧಿಕಾರವನ್ನು ದೇಶದ ಹಿತಕ್ಕಾಗಿ ಯಾರಿಗೂ ಅಂಜದೆ,ಜಗ್ಗದೇ ಬಳಸಿಕೊಂಡರು.ಗಾಂಧೀಜಿಯ ಶಿಷ್ಯ ಮತ್ತು ಗಾಂಧಿವಾದಿಯಾದರೂ ಅನ್ಯಾಯದ ವಿರುದ್ಧ ಕಠೋರ ನಿಧಾ೯ರ ತೆಗೆದುಕೊಳ್ಳುತ್ತಿದ್ದರು.ಅಕ್ಟೋಬರ್ 31ರಂದು ಇಂದಿರಾಗಾಂಧಿ ಪುಣ್ಯಸ್ಮರಣೆಯ ದಿನವೆಂದು ಖ್ಯಾತವಾಗಿದೆ.ಆದರೆ ಅದೇ ದಿನವೇ ಸದಾ೯ರ ವಲ್ಲಭಬಾಯಿ ಪಟೇಲ್ ಜನ್ಮದಿನಾಚರಣೆ,ಆದರೆ ಆ ದಿನ ಇವರು ನಮ್ಮ ಪ್ರಜಾಪ್ರತಿನಿಧಿಗಳಿಗೆ ನೆನಪೇ ಬರುವುದಿಲ್ಲ.ಇದಕ್ಕೆ ಜಾಣಕಿವುಡು,ಜಾಣಕುರುಡು,ಜಾಣಮರೆವು ಅನ್ನಬೇಕೋ ಗೊತ್ತಾಗುತ್ತಿಲ್ಲ.

      ಬಾಲ್ಯದಲ್ಲಿ ತುಂಟ ವಿದ್ಯಾಥಿ೯ ಆಗಿದ್ದ ಪಟೇಲ್ ಹೋರಾಟ ಮನೋಭಾವ ಆಗಲೇ ರೂಢಿಸಿಕೊಂಡರು.ಮೆಟ್ರಿಕ್ಯುಲೇಷನ್ ನಂತರ ಆಗ ವಕೀಲ ವೃತ್ತಿ ಎಂದು ಕರೆಯುತ್ತಿದ್ದ" ಪ್ಲೀಡರ್" ಪರೀಕ್ಷೆ ಪಾಸಾಗಿ ವೃತ್ತಿ ಆರಂಭಿಸಿದರು.ಆ ಸಮಯದಲ್ಲಿ ಎಲ್ಲ ವಕೀಲರಂತೆ ತಾನು ಬ್ಯಾರಿಸ್ಟರ್ ಆಗಬೇಕೆಂದುಕೊಂಡಿದ್ದರು.ಆದರೆ ಅವರ ಅವಕಾಶ ಅಣ್ಣನಿಗೆ ಮಾಡಿಕೊಟ್ಟು ಅವರು ಮುಗಿಸಿ ಬಂದ,ನಂತರ ತಮ್ಮ35ನೇ ವಯಸ್ಸಿನಲ್ಲಿ ಇಂಗ್ಲೆಂಡ್ಽಗೆ ಹೋಗಿ ಮೂರು ವಷ೯ದ ಅಭ್ಯಾಸ ಒಂದುವರೆ ವಷ೯ದಲ್ಲಿ ಮುಗಿಸಿ ಭಾರತಕ್ಕೆ ಬಂದರು.
       ತಾವು ನಡೆಸಿದ ವಾದದಲ್ಲಿ ಸೋಲು ಕಂಡವರೇ ಅಲ್ಲ! ಪಟೇಲ್ ನ್ಯಾಯಾಲಯದಲ್ಲಿ ವಾದ ಮಾಡುತ್ತಿದ್ದಾಗ  ತಮ್ಮ ಪತ್ನಿ ನಿಧನವಾದ ಸುದ್ದಿ ತಂತಿ ಮೂಲಕ ಬಂದಾಗ ಅದನ್ನು ಜೇಬಿನಲ್ಲಿಟ್ಟುಕೊಂಡು ವಾದ ಮುಗಿದ ಮೇಲೆ ಮನೆಗೆ ಹೋದರು.ಎಂತಹ ವಾಕ್ಽಪಟುತ್ವ ತಮ್ಮ ಕಕ್ಷಿಗಾರನಿಗಾಗಿ ತನ್ನ ದುಃಖ ಪರಿಗಣಿಸದ ಮಹಾನ್ ವ್ಯಕ್ತಿ! ನಂತರ ರಾಜಕೀಯಕ್ಕೆ ಧುಮುಕಿ ಪುರಸಭೆಗೆ ಸ್ಪಧಿ೯ಸಿ ಗೆದ್ದರು.ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಖೇಡಾ ಸತ್ಯಾಗ್ರಹ ,ಬಾಡೋ೯ಲಿ ಸತ್ಯಾಗ್ರಹದಲ್ಲಿ ಇವರ ಸಂಘಟನಾ ಕೌಶಲ್ಯ ಕಂಡ ಗಾಂಧೀಜಿ "ಸದಾ೯ರ" ಪದವಿ ನೀಡಿದರು.ಜೈಲುವಾಸವನ್ನು ಅನುಭವಿಸಿದರು,


   ಭಾರತ ಸ್ವತಂತ್ರವಾದ ಮೇಲೆ ದೇಶದ ಉಪಪ್ರಧಾನಿ ಆದರು.15 .8.1947ರಂದು ಸ್ವತಂತ್ರದ ಜೊತೆ ದೇಶ ಇಬ್ಭಾಗವಾದ ನೋವು ಎಲ್ಲರಲ್ಲಿ ಇದ್ದಾಗ ಪಾಕಿಸ್ತಾನದ ತನ್ನ ಸೇನೆ ಕಳಿಸಿ ಲಕ್ಷದ್ವೀಪವನ್ನು ವಶಪಡಿಸಿಕೊಳ್ಳುವ ಸುಳಿವು ಅರಿತು ಅವರು ಕೊಚ್ಚಿನ್ಽಗೆ ಭಾರತದ ನೌಕಾಸೇನೆ ಕಳಿಸಿ ದುಷ್ಟಪ್ರಯತ್ನ ವಿಫಲಗೊಳಿಸಿ ಭಾರತದ ಧ್ವಜ ಹಾರಿಸಿದರು.ಒಂದು ವೇಳೆ ಅದು ಪಾಕಿಸ್ತಾನಕ್ಕೆ ದಕ್ಕಿದ್ದರೆ ನಮ್ಮ ಸ್ಥಿತಿ ಅಡಕೊತ್ತದಲ್ಲಿ ಸಿಕ್ಕಂತಾಗುತ್ತಿತ್ತು. ನಾವು ಪಟೇಲ್ಽರಿಗೆ ಸೆಲ್ಯುಟ್ ಹೊಡೆಯಲೇಬೇಕು.!
          ನೆಹರೂ ಮತ್ತು ರಾಜಾಜಿ ಅವರು ಹೈದರಾಬಾದ್ ನಿಜಾಮನ ಸಾಮ್ರಾಜ್ಯ ಭಾರತದಲ್ಲಿ ಒಗ್ಗೂಡಿಸಲು ಸಹಕರಿಸದೇ ಅಡ್ಡಗಾಲು ಹಾಕುತ್ತಿದ್ದಾಗ ಸದಾ೯ರ ಅವರು "ಒಂದು ಕಡೆ ಪೂವ೯ ಪಾಕಿಸ್ತಾನ, ಇನ್ನೊಂದೆಡೆ ಪಶ್ಚಿಮ ಪಾಕಿಸ್ತಾನ ;ಭಾರತದ ಒಡಲಲ್ಲಿ ಮತ್ತೊಂದು ಪಾಕಿಸ್ತಾನ ಆಗಿ ಮುಂದಿನ ಪೀಳಿಗೆ ನಮ್ಮನ್ನು ಶಪಿಸುವಂತಾಗಬಾರದು! ನೀವಿಬ್ಬರು(ನೆಹರೂ-ರಾಜಾಜಿ) ಎಷ್ಟು ದಿನ ಗೃಹ ಸಚಿವಾಲಯವನ್ನು ಅಂಚಿನಲ್ಲಿ ನಿಲ್ಲಿಸಿ,ನಿಮ್ಮದೇ ನಿಧಾ೯ರ ಕೈಗೊಳ್ಳುತ್ತಾ ಕೂರುವಿರಿ" ಎಂದು 13.9.1948 ದಲ್ಲಿ ನೇರವಾಗಿ ಮಾತಾಡಿದ್ದರೆಂದು ಮತ್ತು ಕಾಶ್ಮೀರ ವಿಷಯದಲ್ಲಿ ನೆಹರೂರವರ ದುಬ೯ಲ ಒಪ್ಪಂದದಿಂದ ಪಶ್ಚಾತ್ತಾಪ ಪಡಲಿದ್ದಾರೆಂದು ಹಾಗೂ ನೆಹರೂ ಆಪ್ತರ ಮುಂದೆ 23.7.1949ರಂದು ಅಧ೯೦ಬಧ೯ ಕಾಶ್ಮೀರದ ಬದಲಾಗಿ ಇಡೀ ಪ್ರದೇಶ ಯುಧ್ಧ ಮಾಡಿಯಾದರೂ ಪಡೆದು ತೀರುತ್ತೇವೆಂದು ಬಹಿರಂಗವಾಗಿ ಘೋಷಿಸಿದ್ದರು. ಮಗಳು ಮಣಿಬೆನ್ ರು ತಮ್ಮ ಡೈರಿಯಲ್ಲಿ ವಿವರಿಸಿದ್ದಾರೆ
     ಚೀನಾದ ಬಗ್ಗೆ ಹುಷಾರಾಗಿರುವಂತೆ ಸದಾ೯ರ ನೆಹರೂರವರನ್ನು ಎಚ್ಚರಿಸಿದ್ದರು.ಹಿಂದಿ-ಚೀನಿ ಭಾಯಿ ಭಾಯಿ ಎನ್ನುತ್ತಿದ್ದ ನೆಹರೂಗೆ ಅರಿವಾಗಿದ್ದು 1962ರಲ್ಲಿ ! 15.12.1950 ರಂದು ಪಟೇಲ್ ನಿಧನರಾದಾಗ ಶ್ರದ್ಧಾಂಜಲಿ ಸಲ್ಲಿಸುವ ನಾಲ್ಕು ಮಾತು ನೆಹರೂ ಆಡದೆ ಮಹಾನ್ ವ್ಯಕ್ತಿಯ ಮುಂದೆ ನೆಹರೂ ಕುಬ್ಜರಾದರು.ನಿಧನದ ನಂತರವೂ ವೈರತ್ವ ಪಂಡಿತ್ ನೆಹರೂರವರಿಗೆ ಶೋಭೆ ತರದಾಯಿತು.ಆದರೆ ಇಂದಿರಾಗಾಂಧಿ ಪಟೇಲ್ ರಂತೆ ಆಕ್ರಮಣಕಾರಿ ದಾಳಿ ನಡೆಸಿ ಪ್ರತ್ಯೇಕ ಖಲಿಸ್ಥಾನದ ಬಾಯಿ ಮುಚ್ಚಿಸಿ; ಪೂವ೯ ಪಾಕಿಸ್ತಾನವೆಂದು ಪಾಕಿಸ್ತಾನ ಹಿಡಿತದಲ್ಲಿದ್ದ ಆಡಳಿತವನ್ನು ಸೇನಾ ಕಾಯ೯ಚರಣೆ ಮೂಲಕ ಬಾಂಗ್ಲಾದೇಶ ಮಾಡಿದ್ದು ಐತಿಹಾಸಿಕ!ಅವರ ಜನ್ಮದಿನಾಚರಣೆ ಏಕತಾ ದಿನ ಎಂದು ಆಚರಿಸಲಾಗುತ್ತಿದೆ
  (ಅಕ್ಟೋಬರ್ 31ರಂದು ಸದಾ೯ರ ವಲ್ಲಭಬಾಯಿ ಪಟೇಲ್ ಜನ್ಮದಿನ ತನ್ನಿಮಿತ್ತ ಈ ಲೇಖನ)
-ಹನುಮಂತ.ಮ.ದೇಶಕುಲಕಣಿ೯.
ಸಾ.ಭೋಗೇನಾಗರಕೊಪ್ಪ-581196
9731741397

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ