ಕಪ್ಪು ಎಂದರೆ ಎಲ್ಲರಿಗೂ ಅದೊಂಥರಾ ಅಸಹನೆ.ಆದರೆ ಕಪ್ಪು ಯಾವುತ್ತಲೂ ಬೌಂಡರಿ ಲೈನ್ ಇದ್ದ ಹಾಗೆ! ವಿದ್ಯಾಥಿ೯ ಜೀವನ ಎನ್ನುವುದು ಕಗ್ಗತ್ತಲಲ್ಲಿ ಇರುವುದು ಅದನ್ನು ಬೆಳಗಿಸಿ ಬಣ್ಣದ ಬೆಳಕಿನೆಡೆಗೆ ನಡೆಸುವುದು ಬ್ಲ್ಯಾಕ್ ಬೋಡ್೯.ಕಪ್ಪು ಎಂದು ಹೀಗಳೆಯದಿರಿ, ಕರಿಮೋಡದಿಂದ ಮಳೆ ಬರುತ್ತದೆ ವಿನಃ ಬಿಳಿಮೋಡದಿಂದಲ್ಲ!
ಪ್ರತಿಯೊಬ್ಬ ವ್ಯಕ್ತಿ ನಗಣ್ಯದಿಂದ ಗಣ್ಯನಾಗುವುದಕ್ಕೆ ಕಾರಣ ಕಪ್ಪುಹಲಗೆ.
ಹಿಂದೆ ಸಮತಟ್ಟಾದ ಪಾಟಿಗಲ್ಲಿನ ಮೇಲೆ ಇದ್ದಿಲು ತುಂಡು, ಮಟ್ಟಿಯಿಂದ ಬರಯುತ್ತಿದ್ದರು. ಕ್ರಮೇಣ ಕಪ್ಪು ಹಲಗೆ ಮೇಲೆ ಬಿಳಿ ಸೀಮೆಸುಣ್ಣದಿಂದ (ಬಳಪ) ಬರೆದು ಕಲಿಸತೊಡಗಿದರು.ಅದೇ ರೀತಿ ವಿದ್ಯಾರ್ಥಿಗಳು ಪಾಟಿಯ ಮೇಲೆ ಬರೆಯುತ್ತಿದ್ದರು.ಆದರೆ ಇಂದು ಪಾಟಿಗಳ ಮೇಲೆ ಬರೆಯದೆ ಇರುವುದರಿಂದ ಮರೆಯಾಗುತ್ತಿವೆ.
ಪಾಠದ ಸಮಯದಲ್ಲಿ ಯಾರಾದರೂ ಏಕಾಗ್ರತೆಗೆ ಭಂಗ ತಂದರೆ ಅವರಿಗೆ ಚಡಿ ಏಟಿಗಿಂತ ಕಪ್ಪುಹಲಗೆ ಹತ್ತಿರ ಬಂದು ಲೆಕ್ಕ ನ್ನೋ ಸೂತ್ರವನ್ನೊ ಅಥವಾ ಕನ್ನಡ ವ್ಯಾಕರಣದ ಲಘು ಗುರು ಹಾಕುವ ಶಿಕ್ಷೆ ಎದುರಾಗುತ್ತಿತ್ತು. ಅದು ಸಾಧ್ಯವಾಗದೆ ಸಪ್ಪೆಮೋರೆ ಹಾಕಿದಾಗ ಕಿವಿಯನ್ನು ಹಿಂಡಿ ಕೈಯಿಂದ ಹಿಡಿದು ಬೋಡ್೯ಗೆ ಢಗ್ ಎಂದು ಹಾಯಿಸುತ್ತಿದ್ದರು!.
ಮೊದಲು ಕಪ್ಪು ಹಲಗೆ ಮೇಲೆ ಶಿಕ್ಷಕರನ್ನು ಬಿಟ್ಟರೆ ಬರೆಯಲು ಅಹ೯ತೆ ಇದ್ದವರು ಕ್ಲಾಸ್ ಲೀಡರ್ ಗಳೇ! ಅವರು ಕ್ಲಾಸ್ ಮೆಂಟೆನನ್ಸ್ ಮಾಡಲು ಒಂದು ಕಡೆ ಮೂಲೆಯಲ್ಲಿ ಮಾತ್ರ ಬೋಡ್೯ ಉಪಯೋಗಿಸಲು ಅವಕಾಶವಿತ್ತು.ಬೋಡ್೯ ಮೇಲೆ ದಿನಾಂಕ,ವಾರ, ವಿದ್ಯಾರ್ಥಿಗಳ ಹಾಜರಾತಿ ಮಾಹಿತಿ ನಾಯಕನೇ ಬರೆಯಬೇಕಿತ್ತು. ಮತ್ತು ದಿನಾಲೂ ಒಂದೊಂದು ಗಾದೆಮಾತು ಬರೆಯಬೇಕಿತ್ತು.ಶಿಕ್ಷಕರಿಲ್ಲದಾಗ ಕ್ಲಾಸ್ ಮೆಂಟೆನನ್ಸ್ ನಾಯಕ ಮಾಡುವಾಗ ಯಾರಾದರೂ ಎದುರಾಡಿದರೆ ಅವರ ಹೆಸರು ಬೋಡ್೯ ಮೇಲೆ ಠಳಾಯಿಸುತ್ತಿತ್ತು.ಮರುದಿನ ಶಿಕ್ಷಕರಿಂದ ಆತನಿಗೆ "ಬಿಸಿ ಕಾಯ೯ಕ್ರಮ" ಇರುತ್ತಿತ್ತು.ಅಂತೂ ಬೋಡ್೯+ವಿದ್ಯಾರ್ಥಿಗಳು+ಶಿಕ್ಷಕರುಗಳಿಗೆ ಬಿಡಲಾರದ ಸವಿನಂಟಿನ ನೆನಪು.
ಈಗ ಗ್ರೀನ್ ಬೋಡ್೯ ಬಳಸತೊಡಗಿದ್ದಾರೆ. ಆದರೆ ಕೆಲ ಪಾಠಶಾಲೆ-ಮನೆಪಾಠಶಾಲೆಗಳಲ್ಲಿ ಡಿಜಿಟಲ್ ಕ್ರಾಂತಿಯಾಗುತ್ತದೆ.ಸ್ಮಾಟ್೯ ಕ್ಲಾಸ್ ಶಿಕ್ಷಣ ನೋಡುತ್ತಿದ್ದಾರೆ.ಇದರಿಂದ ಬೌದ್ದಿಕಮಟ್ಟ ವಿಕಸಿತಗೊಳ್ಳುತ್ತಿದೆ.
,
ಚುಮುಚುಮು ಚಳಿಯಲಿ ಇಬ್ನನಿಯ ಮಬ್ಬಿನ ತೆರೆಯಲ್ಲಿ ಸಕ್ಕರೆ ನಿದ್ರೆ ಮಾಡುವುದೆಂದರೆ ಅದೆಂಥಾ ಮಧುರ ಅನುಭೂತಿ!ಆದರೇನು ಮಾಡುವುದು ಸವಿ ನಿದ್ದೆ ಬಂದ ದಿನವೇ ಬೇಗ ಏಳಬೇಕಾಗಿರುತ್ತದೆ.ಕಾರಣ ನಡೆಯದ,ಸಬೂಬು ನಂಬದ ಲೆಕ್ಚರರ್ ಕ್ಲಾಸಿಗೆ ಹಾಜರಾಗಲೇ ಬೇಕಾದ ಸಂಧಿಗ್ಧ ಸ್ಥಿತಿ! ಬೇರೇನೂ ಉಪಾಯ ನಡೆಯದೆ ಶಪಿಸುತ್ತ ಏಳುವುದು ವಿದ್ಯಾರ್ಥಿಗಳಿಗೆ ಬಿಡದ ಕಮ೯.
ನಮ್ಮ ಪ್ರಾಥಮಿಕ ಶಾಲೆಯಲ್ಲಿ ಗುರುಗಳೊಬ್ಬರಿದ್ದರು.ಅವರ ಮೊದಲ ಗುರಿ ಏನೆಂದರೆ ಅದು ಶನಿವಾರ ಹಾಫಡೇ ಇದ್ಧದ್ದಕ್ಕೆ ಬೆಳಿಗ್ಗೆ ಬೇಗ ಹೋಗಬೇಕು. ತಡವಾಗಿ ಬಂದವರಿಗೆ ಪ್ರತ್ಯೇಕ ಸಾಲು ಮಾಡಲು ಹೇಳಿ ಅವರಗಾಗಿ ಸ್ವಾಗತ ಸಮಾರಂಭ ಇರುತ್ತಿತ್ತು, ಅದೇ "ಬಿಸಿ ಕಾಯ೯ಕ್ರಮ" ಹೆಸರೇ ಹೇಳುವಂತೆ ಚಳಿ ಬಿಡಿಸುತ್ತಿದ್ದರು.
ಚಡಿ ಚಂ ಚಂ ವಿದ್ಯೆ ಘಂ ಘಂ ಎನ್ನುವುದರ ಪ್ರಾತ್ಯಕ್ಷಿಕೆ ತೋರಿಸುತ್ತಿದ್ದರು.ನಮ್ಮ. ಕೈ ಅಂಗೈ ಕೆಂಪಾಗಿ ನಮ್ಮ ಮೈ ಚಳಿಗೆ ಡಾಕ್ಟರ್ ಇಂಜೆಕ್ಷನ್ ಕೊಟ್ಟಂತೆ ಅವರ ಕೋಲೇಟು ಇರುತ್ತಿದ್ದವು.!ಪ್ರಾಥ೯ನೆ ಮುಗಿದ ನಂತರ ಡ್ರೀಲ್ ಪಿರಿಯಡ್ಡನಲ್ಲಿ ಮೈಗಳ್ಳತನ ಮಾಡಿದರೆ ಮತ್ತೆ ಬಿಸಿ ಕಾಯ೯ಕ್ರಮ;ಲಾಠಿ ಝಳಪಿಸುತ್ತಿತ್ತು!ಮಾರನೆ ದಿನ ಭಾನುವಾರ, ಬಹಳ ಹೊತ್ತು ನಿದ್ದೆ ಮಾಡಬೇಕೆಂದು ಹಿಂದಿನ ದಿನ ನಿಶ್ಚಯಿಸಿದಂತೆ ಆಗದೇ ಭಾನುವಾರ ಬೇಗನೇ ಎಚ್ಚರವಾಗಿಬಿಡುತ್ತದೆ.ಅದು ತೀವ್ರ ನಿರಾಶೆಯಾಗಿ ಬಿಡುತ್ತದೆ(ಶನಿವಾರದ ನಿದ್ರೆಗೆ ಹೋಲಿಸಿದರೇ!)
ಚಳಿಯಲ್ಲಿ ಹಿತವಿದೆ,ಚಳಿಯಲ್ಲಿ ಅವಣ೯ನೀಯ ಸುಖವಿದೆ.ತರಗತಿಯ ಹೊರಗಡೆ ನಿಂತು ಮಾಸ್ತರರು ಇಲ್ಲದಿದ್ದಾಗ ಎಳೆಬಿಸಿಲನ್ನು ಅಸ್ವಾದಿಸುವಾಗ ಹಿಂದಿನಿಂದ ಅವರು ಬಂದು ಚಳಿ ಬಿಡಿಸಿದ್ದು ಮರೆಯಲಾದೀತೆ!?.
-ಹನುಮಂತ.ಮ.ದೇಶಕುಲಕಣಿ೯
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ