ಗುರುವಾರ, ಏಪ್ರಿಲ್ 30, 2015

ಮಸ್ತಕಕ್ಕೆ ಬೇಕು ಪುಸ್ತಕ ..

    ಪುಸ್ತಕವನ್ನು ಜ್ಞಾನದಖಣಿ ಎನ್ನಬಹುದು.ಏಕೆಂದರೆ ಹಿರಿಯರು ಹೇಳಿದ ಹಾಗೆ "ದೇಶ ಸುತ್ತು ಕೋಶ ಓದು "ಎನ್ನುವ ಮಾತು ಜನಜನಿತ.ಪುಸ್ತಕ ಬರೆಯುವುದು ಸಾಹಿತ್ಯವಾದರೆ,ಪುಸ್ತಕ ಓದುವುದು ಅಭಿರುಚಿ.ಪುಸ್ತಕವೆಂದರೆ ಅಕ್ಷರಗಳಿಂದ ತುಂಬಿದ ಹಾಳೆಗಳ ಕಟ್ಟು ಅಲ್ಲ.ಜ್ಞಾನವಾಹಿನಿಯು ಪ್ರತಿಯೊಂದು ಶಬ್ಧದಲ್ಲೂ ಜ್ಞಾನದ ಬಿಂದು ಇರುತ್ತದೆ.ಆ ಬಿಂದುಗಳಲ್ಲಿ ಮಿಂದರೆ ಹೊಸ ಚೈತನ್ಯ ದೊರೆಯುತ್ತದೆ.

       ವಿದ್ಯೆ ಯಾರೂ ಕದಿಯದ ಸಂಪತ್ತು.ಹೌದು ನಿಜ,ಯಾರೂ ಮೆದುಳಿಗೆ ಕೈ ಹಾಕಿ ಅಮೂಲ್ಯ ವಿದ್ಯೆಯನ್ನು ದೋಚುವುದಿಲ್ಲ.ಪುಸ್ತಕಕ್ಕಿಂತ ಅತ್ಯುತ್ತಮ ಗೆಳೆಯ ಮತ್ತೊಂದಿಲ್ಲ.ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಮೊದಲಿಗೆ ಹಿಂಜರಿಕೆಯಾಗಬಹುದು.ಆದರೆ ಬರುಬರುತ್ತ ಓದುವ ಗೀಳಿನ ರುಚಿ ಹತ್ತಿದರೆ ಮುಗಿಯಿತು,ನೀವಾಯಿತು-ನಿಮ್ಮ ಪುಸ್ತಕವಾಯಿತು ಹಾಗೆ ಇರುತ್ತೀರಿ.


      ಪಠ್ಯಪುಸ್ತಕಗಳ ಜ್ಞಾನ ಜೊತೆಗೆ ಪಠ್ಯೇತರ ಪುಸ್ತಕಗಳ ಜ್ಞಾನವು ಇರಬೇಕು.ಪೌರಾಣಿಕ ಕಥೆಗಳಿಂದ ಆದಶ೯ಗಳು,ಐತಿಹಾಸಿಕ ಕಥೆಗಳಿಂದ ಶೂರರ ಗುಣಗಳು ಜೊತೆಗೆ ಪರಚಯ,ಕಾದಂಬರಿಗಳಿಂದ ಸುದೀಘ೯ಜ್ಞಾನ, ಪತ್ತೇದಾರಿ ಕಾದಂಬರಿಗಳಿಂದ ಸೂಕ್ಷ್ಮ ಆಲೋಚನೆ, ದಾಶ೯ನಿಕರ ಜೀವನಚರಿತ್ರೆಯಿಂದ ಮಾಗ೯ದಶ೯ನ ಮುಂತಾದ ಮೌಲ್ಯಯುಕ್ತ ಮಾಹಿತಿಗಳು ಜ್ಞಾನಾಜ೯ನೆಗೆ,ಶಬ್ಧಸಂಪತ್ತು ವೃದ್ಧಿಗೆ ಸಹಾಯಕವಾಗುತ್ತವೆ.
       ನಿಮ್ಮ ಪ್ರೀತಿಪಾತ್ರರ ಹುಟ್ಟುಹಬ್ಬ ಮತ್ತು ವಿಶಿಷ್ಟ ದಿನಗಳಂದು ಉಡುಗೊರೆಯಾಗಿ ಪುಸ್ತಕಗಳನ್ನೇ ನೀಡಿ.ಆಧುನಿಕಯುಗದಲ್ಲಿ ಪುಸ್ತಕಓದು ಕಡಿಮೆಯಾಗಿಲ್ಲ.ಇ-ಬುಕ್,ಇ-ಪೇಪರ್ ಓದುತ್ತಿದ್ದಾರೆ.ಒಳ್ಳೆಯ ಹವ್ಯಾಸದಲ್ಲಿ ಇದು ಒಂದು.ಗ್ರಂಥಾಲಯದೊಂದಿಗೆ ನಿಮ್ಮ ಒಡನಾಟವಿರಲಿ.
    (ದಿನಾಂಕ:23.4.2015ರಂದು ಪುಸ್ತಕಗಳ ದಿನದ ತನ್ನಿಮಿತ್ತ ಈ ಲೇಖನ)

-ಹನುಮಂತ.ಮ.ದೇಶಕುಲಕಣಿ೯
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397
  -ಹನುಮಂತ.ಮ.ದೇಶಕುಲಕಣಿ೯.
   ಸಾ.ಭೋಗೇನಾಗರಕೊಪ್ಪ-581196
   ತಾ.ಕಲಘಟಗಿ ಜಿ.ಧಾರವಾಡ
    ಮೊ.ನ಼ಂ.9731741397ತ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ