ಓಂಕಾರ ಒಂದು ಬೀಜಾಕ್ಷರ. ಈ ಬೀಜಾಕ್ಷರವನ್ನು ಬಿಡಿಸಿದರೆ ಅದು ಸಮಸ್ತ ಭಾರತೀಯ ತತ್ತ್ವ ಶಾಸ್ತ್ರವನ್ನು ತನ್ನ ಗರ್ಭದಲ್ಲಿ ಧರಿಸಿದೆ ಎನ್ನುವುದು ನಮಗೆ ತಿಳಿಯುತ್ತದೆ. ವೇದದ ಸಾರ 'ಓಂಕಾರ'-ಅದೇ ಪ್ರಣವಃ.ವೇದಗಳು ಅನೇಕ. ಋಗ್ವೇದದಲ್ಲಿ 24 ಶಾಖೆ, ಯಜುರ್ವೇದದಲ್ಲಿ 101 ಶಾಖೆ, ಸಾಮವೇದದಲ್ಲಿ 1000 ಶಾಖೆ, ಅಥರ್ವವೇದದಲ್ಲಿ 12 ಶಾಖೆ. ಹೀಗೆ ಒಟ್ಟು 1137 ಸಂಹಿತೆಗಳು. ಅದಕ್ಕೆ ಅಷ್ಟೇ ಬ್ರಾಹ್ಮಣಗಳು, ಅರಣ್ಯಕಗಳು, ಉಪನಿಷತ್ತುಗಳು. ಹೀಗೆ ವೇದವೆಂದರೆ ವಿಪುಲವಾದ ವೈದಿಕ ವಾಙ್ಮಯ. ಎಷ್ಟೇ ವೇದಗಳಿದ್ದರೂ ಕೂಡಾ, ಮೂಲತಃ ವೇದದಲ್ಲಿ ಪ್ರಮುಖವಾದ ಮೂರು ವಿಭಾಗವಿದೆ. ಪದ್ಯರೂಪ(ಋಗ್ವೇದ), ಗದ್ಯರೂಪ(ಯಜುರ್ವೇದ) ಮತ್ತು ಗಾನರೂಪ(ಸಾಮವೇದ). ಈ ಮೂರು ವೇದಗಳ, ಮೂರು ಅಕ್ಷರಗಳನ್ನು ತೆಗೆದುಕೊಂಡು ನಿರ್ಮಾಣವಾಗಿರುವುದು ಓಂಕಾರ. “ಓಂಕಾರಕ್ಕೆ ಸಾರತ್ವವನ್ನು ಕೊಟ್ಟು ಸಾರಭೂತನಾಗಿ ‘ಪ್ರಣವಃ’ ಶಬ್ದವಾಚ್ಯನಾಗಿ ನಾನು ಓಂಕಾರದಲ್ಲಿ ನೆಲೆಸಿದ್ದೇನೆ” ಎಂದು ಗೀತೆಯಲ್ಲಿ ಸ್ವಯಂ ಭಗವಂತನೇ ಹೇಳಿದ್ದಾನೆ(ಗೀತಾ-೭-೦೮).
ಪ್ರಾಚೀನರು ಮೂರು ವೇದಗಳನ್ನು ಭಟ್ಟಿ ಇಳಿಸಿ, ಅದರ ಸಾರವಾದ ಮೂರು ವರ್ಗಗಳ ಒಂದು ಸೂಕ್ತ ಮಾಡಿದರು. ಅದೇ ಪುರುಷಸೂಕ್ತ. ಈ ಕಾರಣದಿಂದ ವೇದಸೂಕ್ತಗಳಲ್ಲೇ ಪುರುಷಸೂಕ್ತ ಅತ್ಯಂತ ಶ್ರೇಷ್ಠವಾದ ಸೂಕ್ತ. ಈ ಸೂಕ್ತವನ್ನು ಮತ್ತೆ ಭಟ್ಟಿಇಳಿಸಿ, ಮೂರು ಪಾದಗಳ ಗಾಯತ್ತ್ರಿ ಮಂತ್ರ(ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್) ನಿರ್ಮಾಣವಾಯಿತು. ಇಲ್ಲಿ ‘ತತ್ ಸವಿತುರ್ ವರೇಣ್ಯಂ’ ಋಗ್ವೇದಕ್ಕೆ ಸಂಬಂಧಪಟ್ಟಿದ್ದು, ‘ಭರ್ಗೋ ದೇವಸ್ಯ ಧೀಮಹಿ’ ಯಜುರ್ವೇದಕ್ಕೆ ಸಂಬಂಧಪಟ್ಟಿದ್ದು, ‘ಧೀಯೊ ಯೊ ನಃ ಪ್ರಚೋದಯಾತ್’ ಸಾಮವೇದಕ್ಕೆ ಸಂಬಂಧಪಟ್ಟಿದ್ದು. ಹೀಗೆ ಮೂರು ವೇದಗಳ ಸಾರ ಗಾಯತ್ತ್ರಿಯ ಮೂರುಪಾದಗಳುಳ್ಳ ಒಂದು ಮಂತ್ರದಲ್ಲಿದೆ. ಇದಕ್ಕಾಗಿ ಗಾಯತ್ತ್ರಿ ಮಂತ್ರವನ್ನು ‘ವೇದಮಾತಾ’ ಎನ್ನುತ್ತಾರೆ. ಈ ಗಾಯತ್ತ್ರಿಯಿಂದ ರಸ ತೆಗೆದಾಗ ಮೂರು ಪಾದಗಳಿಂದ ಮೂರು ಪದಗಳುಳ್ಳ ವ್ಯಾಹೃತಿ: “ಭೂಃ ಭುವಃ ಸ್ವಃ”. ಈ ಮೂರು ಪದಗಳ ಸಾರ ಮೂರು ಅಕ್ಷರದ(ಅ, ಉ, ಮ) ಓಂಕಾರ-ॐ.ಓಂಕಾರದಲ್ಲಿ ‘ಅ’ಕಾರ ಋಗ್ವೇದಕ್ಕೆ, ‘ಉ’ಕಾರ ಯಜುರ್ವೇದಕ್ಕೆ ಮತ್ತು ‘ಮ’ಕಾರ ಸಾಮವೇದಕ್ಕೆ ಸಂಬಂಧಪಟ್ಟಿದ್ದು. ಋಗ್ವೇದ " ಅಗ್ನಿಮೀ”ಳೇ ಪುರೋಹಿತಂ ಯಜ್ಞಸ್ಯ ದೇವಂ-ಋತ್ವಿಜಂ” | ಹೋತಾ”ರಂ ರತ್ನ ಧಾತಮಂ |..." ಎಂದು ‘ಅ’ ಕಾರದಿಂದ ಪ್ರಾರಂಭವಾಗುತ್ತದೆ. ಮತ್ತು “....ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ಹಃ: | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ ॥” ಎಂದು ‘ಇ’ಕಾರದಲ್ಲಿ ಕೊನೆಗೊಳ್ಳುತ್ತದೆ. ಅಲ್ಲಿಂದ ಮುಂದುವರಿದು ಯಜುರ್ವೇದ “ಇಷೇ ತ್ವೋರ್ಜೆ ತ್ವಾ …” ಎಂದು ‘ಇ’ಕಾರದಿಂದ ಪ್ರಾರಂಭವಾಗಿ “……..ಸಮುದ್ರೋ ಬಂಧುಃ” ಎಂದು ‘ಉ’ಕಾರದಲ್ಲಿ ಕೊನೆಗೊಳ್ಳುತ್ತದೆ. ಹೀಗೆ ಓಂಕಾರದಲ್ಲಿನ ‘ಅ’ಕಾರ ಮತ್ತು ‘ಉ’ಕಾರ ಋಗ್ವೇದ ಮತ್ತು ಯಜುರ್ವೇದವನ್ನು ಪೂರ್ಣವಾಗಿ ಸೂಚಿಸುವ ಸಂಕ್ಷೇಪಣಾ ರೂಪ. ಇಲ್ಲಿಂದ ಮುಂದೆ ಸಾಮವೇದ. ಸಾಮವೇದ “ಅಗ್ನ ಆ ಯಾಹಿ ………” ಎಂದು ‘ಅ’ಕಾರದಿಂದ ಆರಂಭವಾಗಿ “……ಬ್ರ್ಹಸ್ಪತಿರ್ದಧಾತು” ಎಂದು ‘ಉ’ಕಾರದಲ್ಲಿ ಕೊನೆಗೊಳ್ಳುತ್ತದೆ. ಆದ್ದರಿಂದ ಇಲ್ಲಿ ‘ಮ’ ಕಾರ ಬಂದಿಲ್ಲ. ಆದರೆ ನಮಗೆ ತಿಳಿದಂತೆ ಸಾಮವೇದ ನಾದ ರೂಪದಲ್ಲಿದೆ. ಓಂಕಾರದಲ್ಲಿ ಕೂಡಾ ‘ಮ’ ಎನ್ನುವುದು ನಾದರೂಪದಲ್ಲಿ ಹೊರ ಹೊಮ್ಮುವ ಅಕ್ಷರ- ಅದು ಸಂಗೀತ. ಹೀಗೆ ಓಂಕಾರ ವೇದದ ಸಂಕ್ಷೇಪಣಾರೂಪವಾದ ಬೀಜಾಕ್ಷರ. ಇದು ನಮಗೆ ವೇದವನ್ನು ಗುರುತಿಸುವ ಮಾರ್ಗದರ್ಶಿ. ಆದ್ದರಿಂದ ಇದು ಭಗವಂತನನ್ನು ಸ್ತೋತ್ರ ಮಾಡುವ ಮಂತ್ರಗಳಲ್ಲಿ ಅತ್ಯಂತ ಪ್ರಕೃಷ್ಟವಾದುದ್ದು. ಇದಕ್ಕಿಂತ ದೊಡ್ಡ ಸ್ತೋತ್ರಮಾಡುವ ಶಬ್ದ ಈ ಪ್ರಪಂಚದಲ್ಲಿಲ್ಲ
ಧ್ಯಾನ ಮಾಡುವಾಗ ಓಂಕಾರ ಉಚ್ಛಾರಣೆ ಮಾಡಲು ಹೇಳುತ್ತಾರೆ. ಯೋಗ ಅಭ್ಯಾಸದಲ್ಲೂ ಓಂಕಾರ ಹೇಳಲಾಗುವುದು. ಓಂಕಾರದಿಂದ ಮನಸ್ಸು ಶುದ್ಧವಾಗುತ್ತದೆ ಹಾಗೂ ನೆಮ್ಮದಿಯೂ ಸಿಗುತ್ತದೆ.ಓಂಕಾರವನ್ನು ಹೇಳುತ್ತಾ ಮಂತ್ರ ಹೇಳುವುದು, ಧ್ಯಾನ ಮಾಡುವುದು ಮಾಡಿದರೆ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು.
> 1. ಓಂಕಾರ ಮಾಡಿದರೆ ಸ್ವಚಿಂತನೆ ಬೆಳೆಯುತ್ತದೆ ಹಾಗೂ ಏಕಾಗ್ರತೆ ಅಧಿಕವಾಗುವುದು.
> 2. ಓಂಕಾರ ಮಾಡಿದರೆ ಮನಸ್ಸಿನ ಒತ್ತಡ ಕಡಿಮೆ ಮಾಡಿ ವಿಶ್ರಾಂತಿ ಅನುಭವವನ್ನು ನೀಡುತ್ತದೆ.
> 3. ದೀರ್ಘವಾಗಿ ಓಂಕಾರ ಮಾಡಿದರೆ ಗಾಳಿಯನ್ನು ಅಧಿಕ ಎಳೆದುಕೊಳ್ಳುವುದರಿಂದ ದೇಹಕ್ಕೆ ಹೆಚ್ಚಿನ ಆಮ್ಲಜನಕ ಪೂರೈಕೆ ಆಗುವುದು. ಇದರಿಂದ ದೇಹದ ಹಾಗೂ ಮನಸ್ಸಿನ ಆರೋಗ್ಯ ಹೆಚ್ಚಾಗುವುದು.
> 4. ಓಂಕಾರದಿಂದ ಅಧಿಕ ರಕ್ತದೊತ್ತಡ ಕೂಡ ಕಡಿಮೆಯಾಗುವುದು ಹಾಗೂ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ನಡೆಯಲು ಸಹಕಾರಿಯಾಗುವುದು.
> 5. ಓಂಕಾರವನ್ನು ದೀರ್ಘವಾಗಿ ಎಳೆದು ಹೇಳುವಾಗ ಶರೀರದಲ್ಲಿ ಕಂಪನ ಕಂಡು ಬರುತ್ತದೆ. ಈ ಕಂಪನವು ಬೆನ್ನಿನ ಮೂಳೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
> 6. ಓಂಕಾರವು ಋಣಾತ್ಮಕ ಚಿಂತನೆಯನ್ನು ಬರದಂತೆ ತಡೆದು ನಮ್ಮಲ್ಲಿ ಒಂದು ಧನಾತ್ಮಕವಾದ ಯೋಚನೆ ಮತ್ತು ಉತ್ಸಾಹವನ್ನು ತುಂಬುತ್ತದೆ. ಓಂ.-
ಓಂ ....ಓಂ.. ..ಭಗವಂತನ ಓಂಕಾರ ಸ್ವರೂಪದ ಈ ಆದಿ ಮಂತ್ರದ ಪೂರ್ಣ ಮಹತ್ವದ ಅರಿವಾದದ್ದು ಇತ್ತೀಚೆಗೆ. ಧ್ಯಾನ ಯೋಗದಲ್ಲಿ ಅತ್ಯಂತ ಮಹತ್ವವಿರುವ ಈ ಮಂತ್ರ ಹಲವು ರೀತಿಯಲ್ಲಿ ಉಚ್ಚರಿಸಲ್ಪಡುತ್ತದೆ. ಸಹಜವಾಗಿ ವೇದ ಮಂತ್ರಗಳಲ್ಲಿ ಗುರು ಉಪದೇಶವಾದಂತೆ ನೇರವಾಗಿ ಕುಳಿತು ನಾಭಿಯಿಂದ ಉಚ್ಚರಿಸಲ್ಪಡುವ ಓಂಕಾರ ಕೇವಲ ಉಚ್ಚಾರಕ್ಕೆ ಮಾತ್ರವೇ ಸೀಮಿತವಾದಂತೆ ಈ ಮೊದಲು ಕಂಡಿತ್ತು. ಸ್ವಲ್ಪ ಮಟ್ಟಿಗೆ ಯೋಗಾಭ್ಯಾಸ ಆರಂಭಿಸಿದ ಮೇಲೆ ಧ್ಯಾನದಲ್ಲಿ ಏಕಾಗ್ರತೆಯನ್ನು ಸಾಧಿಸಿ ಭಗವಂತನ ಧ್ಯಾನದಲ್ಲಿ ಲೀನವಾಗುವಾಗ ಓಂಕಾರ ಮಹತ್ವವನ್ನು ಪಡೆಯುತ್ತಿತ್ತು. ಯೋಗ ಮಾಡುತ್ತಿದ್ದಂತೆ ಪ್ರತೀ ಬಾರಿಯೂ ಒಂದು ವಿಶಿಷ್ಟ ಅನುಭವಕ್ಕೆ ನಾನು ಒಳಗಾಗುತ್ತೆದ್ದೆ. ಅದೇ ರೀತಿ ಈ ಬಾರಿಯೂ ವಿಚಿತ್ರವಾದ ಅನುಭವ ಓಂಕಾರ ಧ್ಯಾನದ ಮೂಲಕ ಆದಾಗ ಅದರ ನೆನಪು ಮತ್ತೂ ಮತ್ತೂ ಮರುಕಳಿಸುತ್ತದೆ.
ಧ್ಯಾನಕ್ಕೆ ತೊಡಗುವಾಗ ಆರಂಭದಲ್ಲಿ ಸಹಜವಾಗಿ ಪದ್ಮಾಸನದಲ್ಲಿ ನೇರವಾಗಿ ಕುಳಿತು ಒಂದೇ ಕಡೆಗೆ ಮೇಲ್ಮುಖವಾಗಿ ದಿಟ್ಟಿಸಿ ನಿಧಾನವಾಗಿ ಕಣ್ಣು ಮುಚ್ಚಬೇಕು. ನಿಧಾನವಾದ ದೀರ್ಘವಾದ ಉಸಿರಾಟ ಕೆಲವು ಬಾರಿ ಮಾಡಿದಾಗ ಮನಸ್ಸು ಮತ್ತು ದೇಹ ಒಂದು ಸ್ಥಿರತೆಯನ್ನು ಪಡೆದು ಕೊಳ್ಳುತ್ತದೆ. ಆ ಸ್ಥಿರತೆಯಲ್ಲೆ ಎಲ್ಲವೂ ಲೀನವಾದ ಅನುಭವ. ಬಾಹ್ಯ ಜಗತ್ತಿನ ಸದ್ಧು ಗದ್ದಲ ಕೇಳುತ್ತಿದ್ದರೂ, ನಿಧಾನವಾಗಿ ನಮ್ಮ ಅರಿವಿನ ವರ್ತುಲದಿಂದ ದೂರವಾಗುತ್ತದೆ ಆ ಅವ್ಯಕ್ತ ಅನುಭವವೇ ಯೊಗ. ಯೋಗವೆಂದರೆ ಒಟ್ಟು ಸೇರುವುದು. ಎಲ್ಲಾ ಪ್ರಚೋದನೆಗಳಜತೆಗೆ ದೇಹ ಮತ್ತು ಮನಸ್ಸನ್ನು ಒಂದೇ ಕೇಂದ್ರದಲ್ಲಿ ಒಟ್ಟು ಸೇರಿಸುವುದು.
ಇದರ ಆರಂಭವೇ ಉಸಿರಾಟದಿಂದ. ಎಲ್ಲವನ್ನೂ ಉಸಿರಾಟದ ಮೂಲಕ ಕೇಂದ್ರಿಕರಿಸುವ ಪ್ರಯತ್ನದಿಂದಲೇ ಶುರು ಮಾಡಬೇಕು. ನಾಸಿಕಾಗ್ರದಿಂದ ಒಳ ಸೇರಿದ ಗಾಳಿ ಅದೇ ಗಮನದಲ್ಲಿ ಗಂಟಲು ಎದೆ ಕೊನೆಗೆ ನಾಭಿಯ ಸುತ್ತಲೂ ವ್ಯಾಪಿಸಿ ಮತ್ತು ಕೆಳಗೆ ಹೋಗಿ ದೇಹದ ತುಂಬೆಲ್ಲ ವ್ಯಾಪಿಸ ತೊಡಗಿ ನಿಧಾನವಾಗಿ ಉಸಿರು ಬಿಟ್ಟಾಗ ನಾಭಿಯ ಸುತ್ತ ನಿರ್ವಾತವಾದ ಅನುಭವವಾಗುತ್ತದೆ. ಇದು ಅಲ್ಪ ಸಮಯದಲ್ಲಿ ಉಂಟಾಗುವ ಪರಿಣಾಮವಲ್ಲ. ನಿರಂತರ ಸಾಧನೆಯಿಂದ ಮಾತ್ರ ಸಾಧ್ಯ. ಹೀಗೆ ಅನುಲೋಮ ವಿಲೋಮ ಆವರ್ತನೆಯಾದಂತೆ ಅದರ ಜತೆಯಲ್ಲೇ ಓಂ... ಓಂ ಎಂದು ಓಂಕಾರವನ್ನು ಎಷ್ಟು ಸಾಧ್ಯವೋ ಅಷ್ಟು ದೀರ್ಘವಾಗಿ ಉಚ್ಚರಿಸುತ್ತಾ ಹೋಗಬೇಕು. ಹಾಗೆ ಉಚ್ಚರಿಸಿದಾಗ ಓ...ದಿಂದ ತೊಡಗಿ ಮಕಾರದಲ್ಲಿ ಉಚ್ಚಾರ ನಿಧಾನವಾಗಿ ಪೂರ್ಣವಾದಾಗ ನಾಭಿ ಪ್ರದೇಶ ಒಳಕ್ಕೆ ಸೆಳೆಯಲ್ಪಡುತ್ತದೆ. ಘಂಟಾ ನಿನಾದದಲ್ಲಿ ಗಂಟೆಯ ನಿರಂತರ ಕಂಪನಸ್ವರ ಹೇಗೆ ಆವರ್ತಿಸುತ್ತ ತನ್ನ ಸುತ್ತ ಕಂಪನಾವಲಯವನ್ನು ನಿರ್ಮಿಸುತ್ತದೋ ತದ್ರೀತಿ ಓಂಕಾರದ ಕಂಪನ ದೇಹದ ಸುತ್ತ ತನ್ನ ಕಂಪನದವಲಯವನ್ನು ನಿರ್ಮಿಸುತ್ತಾ.. ಆ ವಲಯಕ್ಕೆ ಕೇಂದ್ರವು ನಾಭಿಯಾಗಿಬಿಡುತ್ತದೆ.ಹೊಟ್ಟೆಯ ಕರುಳು ತೀವ್ರವಾಗಿ ಕಂಪನದ ಪರಿಣಾಮವನ್ನು ಅನುಭವಿಸುತ್ತದೆ. ಇದು ಹೊಟ್ಟೆಯ ಒಳಗಿನ ಸರ್ವ ಕ್ರಿಯೆಗಳಿಗೂ ಚೈತನ್ಯ ವನ್ನು ಪ್ರಚೋದನೆಯನ್ನು ಒದಗಿಸುತ್ತದೆ. ಹೀಗೆ ನಿರಂತರವಾದ ದೀರ್ಘವಾದ ಓಂಕಾರದ ಉಚ್ಚಾರ ಹಲವು ಸಲ ಆವರ್ತನೆಯಾದಂತೆ ಉದರದೊಳಗೆ ವಿಶಿಷ್ಟವಾದ ಅನುಭವ ಉಂಟಾಗುತ್ತದೆ. ಹೊಟ್ಟೆಯ ಕೇಂದ್ರವಾದ ನಾಭಿಯಿಂದ ತೊಡಗಿ ದೇಹದ ತುಂಬೆಲ್ಲ ಈ ಕಂಪನ ಪಸರಿಸಿದಂತೆ ನಮ್ಮ ಅಂತರ್ ದೃಷ್ಟಿಯನ್ನು ಭ್ರೂ ಮಧ್ಯ ಇರುವ ನಿರ್ವಾತ ಪ್ರದೇಶದಲ್ಲಿ ಕೇಂದ್ರೀಕರಿಸಲ್ಪಟ್ಟರೆ ಯಾವ ರೂಪದಲ್ಲಿ ನಾವು ಭಗವಂತನನ್ನು ಕಲ್ಪಿಸುತ್ತೇವೊ ಆ ರೂಪದ ಪ್ರತ್ಯಕ್ಷ ಅನುಭವ ಭ್ರೂ ಮಧ್ಯದಲ್ಲಿ ಆಗುತ್ತದೆ. ಆವಾಗ ಕೇವಲ ಅಕ್ಷರ ಮಾತ್ರದ ಓಂಕಾರದ ಮಹತ್ವದ ಅರಿವಾಗುತ್ತದೆ. ಭಗವಂತನನ್ನು ಓಂಕಾರ ಸ್ವರೂಪಿ ಎನ್ನುವುದು ಇದಕ್ಕಾಗಿಯೇ ಇರಬೇಕು ಸರ್ವ ಚೈತನ್ಯರೂಪವೂ ಇದೇ ಅಲ್ಲವೆ? ಕೆಲವು ಸಮಯದ ಮೊದಲು ಓರ್ವರು ಹೀಗೆ ಚರ್ಚಿಸುವಾಗ ಹೇಳೀದ್ದರು ... “ ಪ್ರಾಣಾಯಾಮ ಅಥವಾ ಧ್ಯಾನ ಯೋಗದಲ್ಲಿ ಕ್ಯಾಲೊರಿ ಉರಿಸಲ್ಪಡುವುದಿಲ್ಲ. ಕೇವಲ ಪ್ರಾಣಾಯಾಮ ಒಂದೇ ಸಾಕಾಗುವುದಿಲ್ಲ ಎಂದು.” ಆದರೆ ಆ ಮಾತು ಇಂದು ನಿಜವಲ್ಲ ಎಂದನಿಸುತ್ತದೆ. ನಿರಂತರ ಓಂಕಾರ ಉಚ್ಚಾರದಿಂದ ನಾಭಿವಲಯದಲ್ಲಿ ಕಂಪನವು ನಿರಂತರವಾಗಿ ಪ್ರಚೋದಿಸಲ್ಪಟ್ಟರೆ, ದೈಹಿಕವಾದ ಕ್ರಿಯೆಗಳ ಮೇಲೂ ಅದರ ಪ್ರಭಾವ ಬೀರದೆ ಇರಲಾರದು. ನಿರಂತರವಾದ ಕಂಪನವು ಹೊಟ್ಟೆ;ಯೊಳಗಿನ ಜೀರ್ಣಾಂಗ ವಿಸರ್ಜನಾಂಗ ಮಾತ್ರವಲ್ಲದೆ ಶ್ವಾಸ ಕೋಶ ಸೇರಿದಂತೆ ದೇಹದ ಎಲ್ಲಾ ಭಾಗದಲ್ಲೂ ಆವಶ್ಯಕ ಪ್ರಭಾವವನ್ನು ಬೀರಬಲ್ಲುದು. ಏನೂ ಅರಿವಿಲ್ಲದೆ ಇದು ಪ್ರಾಯೋಗಿಕವಾಗಿ ಸಿದ್ಧಿಸುವಾಗ ಆಗುವ ಅನುಭವವೇ ವಿಶಿಷ್ಟವಾದುದು.
ಈ ಪ್ರಕೃತಿ ಎಷ್ಟೊಂದು ವೈವಿಧ್ಯಮಯವಾಗಿದೆ. ಪರಮಾತ್ಮನೇ ಲೀನವಾಗಿ ಪರಮಾತ್ಮನಲ್ಲೇ ಒಂದಾಗಿ ಯಾವ ಬಗೆಯಲ್ಲೂ ಕಾಣಬಹುದಾದ ವೈವಿಧ್ಯತೆ ಅಚ್ಚರಿಪಡುವಂತಹುದು. ಇದಕ್ಕೆ ಅತಿ ಸುಲಭದ ಮಾರ್ಗವೇ ಈ ಧ್ಯಾನ ಯೋಗ .
ಓಂಕಾರ ಜಪಿಸುವುದರಿಂದಾಗುವ ಉಪಯೋಗಗಳು:*ಹತ್ತು ಸಾರಿ ಓಂಕಾರವನ್ನು ಕ್ರಮಬದ್ಧವಾಗಿ ಜಪಿಸಿದರೆ ಪ್ರಜ್ಞೆ ಅರಳುತ್ತದೆ. ರಕ್ತದ ಒತ್ತಡ ಮತ್ತು ಹೃದಯ ಬಡಿತ ಕೆಳಗೆ ಬರುತ್ತದೆ.*ನಿದ್ರಾಭಂಗ ನಿವಾರಣೆಯಾಗುತ್ತದೆ.*ಗಮನಾರ್ಹ ರೀತಿಯಲ್ಲಿ ಶರೀರದಲ್ಲಿನ ಶರ್ಕರಾಂಶ ಬಳಕೆ ಹೆಚ್ಚುತ್ತದೆ.*ದೇಹದಲ್ಲಿನ ಆಮ್ಲಜನಕ ಸಂಚಾರ ಉನ್ನತ ಮಟ್ಟದಲ್ಲಿರುತ್ತದೆ.*ಮನೋಖಿನ್ನತೆ, ನಕರಾತ್ಮಕ ಧೋರಣೆ, ಕುತೂಹಲದ ಉಪಟಳ ಇರುವುದಿಲ್ಲ. ನಿರಾಶೆ ಕುಗ್ಗುತ್ತದೆ. *ಮನೋಲ್ಲಾಸ, ಪ್ರಫುಲ್ಲತೆ, ಮನೋಶಾಂತಿ ವೃದ್ಧಿಸುತ್ತದೆ.*ಮನೋದುಗುಡ, ಉದ್ರೇಕ, ಕಳವಳ ಶಮನಕಾರಿ.*ಶರೀರದ ಅಂಗಕ್ರಿಯೆಗಳು ವೃದ್ಧಿಸುತ್ತವೆ.*ಏಕಾಗ್ರತೆ ಹೆಚ್ಚುತ್ತದೆ. ಗ್ರಹಣಶಕ್ತಿ ಹೆಚ್ಚುತ್ತದೆ.*ಬೇಸರ ಹತ್ತಿರ ಸುಳಿಯುವುದಿಲ್ಲ.*ಜನಾನುರಾಗ ಗುಣ ಉದ್ದೀಪನಗೊಳ್ಳುತ್ತದೆ.*ವೃತ್ತಿ ತತ್ಪರತೆ - ಕಾರ್ಯ ಕೌಶಲ್ಯ ಶ್ರೇಷ್ಠ ಮಟ್ಟದಲ್ಲಿರುತ್ತದೆ. *ನೋವಿನಿಂದ ನಿರಾಳತೆ ಲಭಿಸುತ್ತದೆ.*ನೆನಪಿನ ಶಕ್ತಿ ವೃದ್ಧಿಸುತ್ತದೆ.*ವೈದ್ಯ ವಿಜ್ಞಾನದ ಪ್ರಕಾರ ಓಂಕಾರ ಮಾನವನ ಸೃಷ್ಟ್ಯಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ. ಪ್ರೇರಕ ಶಕ್ತಿಯ ಸಂಚಾರ ನರಮಂಡಲವನ್ನು ಜಾಗೃತಗೊಳಿಸುತ್ತದೆ. ಇದರಿಂದ ಸ್ಮೃತಿ ವರ್ಧಿಸುತ್ತದೆ..
(ವಿವಿಧ ಮೂಲಗಳಿಂದ)
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196