ಬಾಳೆಹಣ್ಣಿನ ಸಿಪ್ಪೆ, ತೆಂಗಿನಕಾಯಿ ಗೆರಟೆ, ಪ್ಲಾಸ್ಟಿಕ್ ಚೀಲ ಮತ್ತು ಆವರಣದೊಳಗೆ ಬಿದ್ದಿರುವ ಇತರ ಕಸಕಡ್ಡಿಗಳನ್ನು ಎತ್ತಿ ಕಸದಬುಟ್ಟಿಯಲ್ಲಿ ಹಾಕಿರಿ ಮತ್ತು ದೇವಸ್ಥಾನದ ಆವರಣವನ್ನು ಸದಾಕಾಲ ಸ್ವಚ್ಛವಾಗಿಡಿರಿ.ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಿರಿ. ದೇವರ ದರ್ಶನಕ್ಕಾಗಿ ಸಾಲಿನಲ್ಲಿ ನಿಂತಿರುವಾಗ ಪರಸ್ಪರರೊಂದಿಗೆ ಹರಟೆ ಹೊಡೆಯದೇ ಸತತವಾಗಿ ನಾಮಜಪ ಮತ್ತು ಪ್ರಾರ್ಥನೆ ಮಾಡಿರಿ ಅಥವಾ ಸ್ತೋತ್ರ ಪಠಿಸುತ್ತಿರಿ. ದೇವಸ್ಥಾನದಲ್ಲಿ ಆದಷ್ಟು ಸೈಲೆಂಟ್ ಆಗಿರಿ… ದೇವಸ್ಥಾನದ ಆವರಣದಲ್ಲಿ ದೊಡ್ಡ ಸ್ವರದಲ್ಲಿ ಮಾತನಾಡುವುದು, ಚಲನಚಿತ್ರಗೀತೆಗಳನ್ನು ಆಲಿಸುವುದು, ಇಸ್ಪೀಟ್ ಆಡುವುದು ಮುಂತಾದ ಪ್ರವಾಸಕ್ಕೆ ಬಂದಂತೆ ಮಾಡುವ ಕೃತಿಗಳು ಹಾಗೂ ಧೂಮಪಾನ, ಮದ್ಯಪಾನ ಮುಂತಾದ ಅನುಚಿತ ಕೃತ್ಯಗಳನ್ನು ಮಾಡದಿರಿ. ದೇವಸ್ಥಾನವನ್ನು ಪ್ರವೇಶಿಸುವ ಮೊದಲು ಕಾಲುಗಳನ್ನು ತೊಳೆದುಕೊಳ್ಳಬೇಕು. ದೇವಸ್ಥಾನದ ಪ್ರಾಂಗಣದಿಂದ (ಆವರಣದಿಂದ) ಕಲಶಕ್ಕೆ ನಮಸ್ಕಾರ ಮಾಡಬೇಕು. ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತುವಾಗ ಬಲಗೈ ಬೆರಳುಗಳಿಂದ ಮೆಟ್ಟಿಲುಗಳನ್ನು ಸ್ಪರ್ಶಿಸಿ ನಮಸ್ಕಾರ ಮಾಡಬೇಕು. ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತುವಾಗ ಬಲಗೈ ಬೆರಳುಗಳಿಂದ ಮೆಟ್ಟಿಲುಗಳನ್ನು ಸ್ಪರ್ಶಿಸಿ ನಮಸ್ಕಾರ ಮಾಡಬೇಕು. ಘಂಟೆಯನ್ನು ಅತ್ಯಂತ ಮೆಲುಧ್ವನಿಯಲ್ಲಿ ‘ದೇವತೆಯನ್ನು ಜಾಗೃತಗೊಳಿಸುತ್ತಿದ್ದೇವೆ’ ಎಂಬ ಭಾವದಿಂದ ಬಾರಿಸಬೇಕು. ದೇವತೆಯ ಮೂರ್ತಿ ಮತ್ತು ಮೂರ್ತಿಯ ಎದುರಿನಲ್ಲಿರುವ ಆಮೆಯ (ಶಿವನ ದೇವಸ್ಥಾನದಲ್ಲಿ ನಂದಿಯ) ನಡುವೆ ನಿಂತುಕೊಳ್ಳದೇ ಅಥವಾ ಕುಳಿತುಕೊಳ್ಳದೇ, ಮೂರ್ತಿಯ ಬದಿಯಲ್ಲಿ ನಿಂತುಕೊಂಡು ಕೈಗಳನ್ನು ಜೋಡಿಸಿ ನಮ್ರತೆಯಿಂದ ದರ್ಶನವನ್ನು ಪಡೆಯಬೇಕು. ಮೊದಲು ದೇವತೆಯ ಚರಣಗಳಲ್ಲಿ ದೃಷ್ಟಿಯನ್ನು ಇಟ್ಟು ಲೀನರಾಗಬೇಕು, ಅನಂತರ ದೇವತೆಯ ಎದೆಯ ಮೇಲೆ ಮನಸ್ಸನ್ನು ಏಕಾಗ್ರಗೊಳಿಸಬೇಕು. ಕೊನೆಗೆ ದೇವತೆಯ ಕಣ್ಣುಗಳತ್ತ ನೋಡಿ ಅವರ ರೂಪವನ್ನು ಕಣ್ಣುಗಳಲ್ಲಿ ತುಂಬಿಕೊಳ್ಳಬೇಕು. ದೇವತೆಗೆ ಅರ್ಪಿಸುವ ವಸ್ತುಗಳನ್ನು (ಉದಾ. ಹೂವು) ದೇವತೆಯ ಮೈಮೇಲೆ ಎಸೆಯದೇ ಅವರ ಚರಣಗಳಲ್ಲಿ ಅರ್ಪಿಸಬೇಕು. ಮೂರ್ತಿಯು ದೂರದಲ್ಲಿದ್ದರೆ ಆ ವಸ್ತುಗಳನ್ನು ದೇವತೆಯ ಎದುರಿನಲ್ಲಿರುವ ತಟ್ಟೆಯಲ್ಲಿಡಬೇಕು. ಪ್ರದಕ್ಷಿಣೆಗಳನ್ನು ಎರಡೂ ಕೈಗಳನ್ನು ಜೋಡಿಸಿ ಭಾವಪೂರ್ಣವಾಗಿ ನಾಮಜಪ ಮಾಡುತ್ತಾ ಮಧ್ಯಮ ಗತಿಯಲ್ಲಿ ಹಾಕಬೇಕು. ದೇವರಿಗೆ ಸಮ ಸಂಖ್ಯೆಯಲ್ಲಿ (even numbers) ಮತ್ತು ದೇವಿಗೆ ವಿಷಮ ಸಂಖ್ಯೆಯಲ್ಲಿ (odd numbers) ಪ್ರದಕ್ಷಿಣೆಗಳನ್ನು ಹಾಕಬೇಕು. ದೇವಸ್ಥಾನದಲ್ಲಿ ಕುಳಿತುಕೊಂಡು ಸ್ವಲ್ಪ ಹೊತ್ತು ನಾಮಜಪ ಮಾಡಬೇಕು. ಪ್ರಸಾದವನ್ನು ಆದಷ್ಟು ದೇವಸ್ಥಾನದಲ್ಲಿಯೇ ಕುಳಿತುಕೊಂಡು ಸೇವಿಸಬೇಕು.ಹಿಂದಿರುಗುವಾಗ ದೇವತೆಗೆ ನಮಸ್ಕರಿಸಿ ‘ನಿನ್ನ ಕೃಪಾದೃಷ್ಟಿ ಸದಾಕಾಲ ನನ್ನ ಮೇಲಿರಲಿ’, ಎಂದು ಪ್ರಾರ್ಥನೆ ಮಾಡಬೇಕು.ದೇವಸ್ಥಾನದಿಂದ ಹೊರಬರುವಾಗ ನಮ್ಮ ಬೆನ್ನು ದೇವತೆಯ ಕಡೆಗೆ ಆಗದಂತೆ ಕಾಳಜಿ ವಹಿಸಬೇಕು.ತೆಂಗಿನಕಾಯಿಯ ನೀರು, ಎಣ್ಣೆ, ಬೆಲ್ಲ, ಸಕ್ಕರೆಯಂತಹ ವಸ್ತುಗಳನ್ನು ಗರ್ಭಗುಡಿಯಲ್ಲಿ ಅಥವಾ ಸಭಾಮಂಟಪದಲ್ಲಿ ಸಿಂಪಡಿಸಬೇಡಿರಿ ಮತ್ತು ಸಿಂಪಡಿಸಿದ್ದರೆ ಒರೆಸಿ ತೆಗೆಯಿರಿ.ದೇವಸ್ಥಾನದ ಆವರಣದಲ್ಲಿ ಪಾದರಕ್ಷೆಗಳನ್ನು ಧರಿಸಬೇಡಿ ಹಾಗೆಯೇ ಈ ವಿಷಯದಲ್ಲಿ ಇತರರಿಗೂ ಪ್ರಬೋಧನೆ ಮಾಡಿರಿ.ಈ ಕೆಳಗಿನ ನಿಯಮಗಳನ್ನು ಪಾಲಿಸಿ ದೇವರ ಕೃಪೆಗೆ ಪಾತ್ರರಾಗಿ, ದೇವಸ್ಥಾನದ ಪಾವಿತ್ರ್ಯತೆ, ಸಾತ್ತ್ವಿಕತೆಯನ್ನು ಕಾಪಾಡಿ ಮತ್ತು ಹೆಚ್ಚು ಹೆಚ್ಚು ಲಾಭವನ್ನು ಪಡೆಯಿರಿ. ಹನುಮಂತ. ಮ. ದೇಶಕುಲಕಣಿ೯ ಸಾ||ಭೋಗೇನಾಗರಕೊಪ್ಪ. ಮೊ.9731741397 ಪೊ|| ಗಂಜೀಗಟ್ಟಿ-581196 ತಾ||ಕಲಘಟಗಿ ಜಿ||ಧಾರವಾಡ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ