ಒಬ್ಬ ವ್ಯಕ್ತಿ ದೇವರನ್ನು ಪ್ರಶ್ನಿಸಿದ " ನನ್ನ ಜೀವನದ ಬೆಲೆ ಏನು? "
ಎಂದು.
ಆಗ ದೇವರು ಅವನಿಗೆ ಒಂದು ಕಲ್ಲನ್ನು ಕೊಟ್ಟು "ಈ ಕಲ್ಲಿನ ಬೆಲೆಯನ್ನು ತಿಳಿದುಕೊಂಡು ಬಾ.
ಆದರೆ ಅದನ್ನು ನೀನು ಮಾರಬಾರದು" ಎಂದು ಹೇಳಿದನಂತೆ.
ಆ ವ್ಯಕ್ತಿ ಒಬ್ಬ ಹಣ್ಣಿನ ವ್ಯಾಪಾರಿಯಲ್ಲಿ ಆ ಕಲ್ಲನ್ನು ತೆಗೆದುಕೊಂಡು ಹೋಗಿ ' ಈ ಕಲ್ಲಿನ ಬೆಲೆ ಎಷ್ಟಿರಬಹುದು ? ' ಎಂದು ಕೇಳಿದನಂತೆ.
ಅದಕ್ಕಾ ಹಣ್ಣಿನ ವ್ಯಾಪಾರಿ "ಈ ಕಲ್ಲಿಗೆ ನಾನು ಒಂದು ೫ ಹಣ್ಣುಗಳನ್ನು ಕೊಡುವೆ.
ಮಾರುತ್ತೀಯಾ?" ಎಂದು ಕೇಳಿದನಂತೆ.
ಆದರೆ ದೇವರು ಆ ಕಲ್ಲನ್ನು ಮಾರಬಾರದೆಂದು ಹೇಳಿದ್ದಾನಲ್ಲಾ! ಹಾಗಾಗಿ ಆ ವ್ಯಕ್ತಿ ಆ ಹಣ್ಣಿನ ವ್ಯಾಪಾರಿಯಿಂದ ಹೊರಟು ಮುಂದೆ ನಡೆದನಂತೆ.
ನಂತರ ಆ ವ್ಯಕ್ತಿ ಒಬ್ಬ ತರಕಾರಿ ವ್ಯಾಪಾರಿಯ ಬಳಿ ಹೋಗಿ '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ. " ಈ ಕಲ್ಲಿಗೆ ನಾನು ಒಂದು ೧೦ ಕೆ ಜಿ ತರಕಾರಿಯನ್ನು ಕೊಡುವೆ, ಈ ಕಲ್ಲನ್ನು ಮಾರುತ್ತೀಯಾ?" ಎಂದು ಕೇಳಿದನಂತೆ.
ಆದರೆ ದೇವರು ಆ ಕಲ್ಲಿನ ಬೆಲೆಯನ್ನು ಮಾತ್ರ ತಿಳಿದು ಬಾ ಎಂದು ಹೇಳಿದ್ದಾನಲ್ಲ, ಮಾರಬಾರದೆಂದೂ ಹೇಳಿದ್ದಾನಲ್ಲ, ಹಾಗಾಗಿ ಆ ವ್ಯಕ್ತಿ ಆ ತರಕಾರಿ ಮಾರುವವನಿಂದ ಹೊರಟು ಮುನ್ನಡೆದನಂತೆ.
ಇದಾದಮೇಲೆ ಆ ವ್ಯಕ್ತಿ ಚಿನ್ನದ ಆಭರಣಗಳ ವ್ಯಾಪಾರಿಯಲ್ಲಿ ಹೋಗಿ '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ.
ಆ ಕಲ್ಲನ್ನು ನೋಡಿ, ಆಶ್ಚರ್ಯಚಕಿತನಾಗಿ ಆ ಆಭರಣಗಳ ವ್ಯಾಪಾರಿ " ಒಂದು ೫೦ ಲಕ್ಷ ರೂಗಳನ್ನು ಕೊಡುವೆ, ನನಗೆ ಈ ಕಲ್ಲನ್ನು ಮಾರುತ್ತೀಯಾ?" ಎಂದನಂತೆ.
ಇದನ್ನು ಕೇಳಿ ಅಲ್ಲಿಂದ ಮುಂದಕ್ಕೆ ಹೊರಟು ಹೋಗುತ್ತಿರುವ ವ್ಯಕ್ತಿಗೆ "ಹೋಗಲಿ ೪ ಕೋಟಿ ರೂಗಳನ್ನು ಕೊಡುತ್ತೇನೆ" ಎಂದನಂತೆ ಆ ಚಿನ್ನದ ವ್ಯಾಪಾರಿ.
ಆ ವ್ಯಕ್ತಿಯಲ್ಲಿ ಸ್ವಲ್ಪ ಆಸೆ ಮೂಡಿತು.
ಆದರೆ ಆ ಕಲ್ಲನ್ನು ಮಾರಬಾರದೆಂದು ದೇವರು ಹೇಳಿದ್ದನಲ್ಲ, ಹಾಗಾಗಿ ಆ ವ್ಯಕ್ತಿಯು, ' ಇದನ್ನು ಮಾರುವುದಿಲ್ಲ ' ಎಂದು ಹೇಳಿ ಮುಂದಕ್ಕೆ ಹೊರಟನಂತೆ.
ಕಡೆಗೆ ನಮ್ಮ ವ್ಯಕ್ತಿ ಒಬ್ಬ 'ವಜ್ರ' ಗಳ ವ್ಯಾಪಾರಿಯಲ್ಲಿಗೆ ಹೋಗಿ " '' ಈ ಕಲ್ಲಿನ ಬೆಲೆ ಎಷ್ಟಿರಬಹುದು? " ಎಂದು ಕೇಳಿದನಂತೆ.
ಆ ವಜ್ರದ ವ್ಯಾಪಾರಿ ಆ ಕಲ್ಲನ್ನು ಬಹುವಾಗಿ ಪರೀಕ್ಷಿಸಿ " ನಿಮಗೆ ಎಲ್ಲಿ ಸಿಕ್ಕಿತು ಇಷ್ಟು ಬೆಲೆಬಾಳುವ ಕಲ್ಲು? " ಎಂದು ಕೇಳಿದನಂತೆ.
ನಾನು ನನ್ನ ಆಸ್ತಿಯನ್ನೆಲ್ಲಾ
ಅಷ್ಟೇ ಏಕೆ ನನ್ನನ್ನೇ ನಾನು ಮಾರಿಕೊಂಡರೂ ಈ ಕಲ್ಲನ್ನು ಕೊಳ್ಳಲು ಸಾಧ್ಯವಿಲ್ಲ. .........
ಕಡೆಗೆ ಈ ಜಗತ್ತನ್ನೆಲ್ಲಾ ಮಾರಿದರೂ ಈ ಕಲ್ಲಿಗೆ ಬೆಲೆಕಟ್ಟಲು ಸಾಧ್ಯವಿಲ್ಲ " ಎಂದನಂತೆ
ಈ ಮಾತನ್ನು ಕೇಳಿ ನಮ್ಮ ವ್ಯಕ್ತಿಗೆ ಏನು ಹೇಳಬೇಕೆಂದು ತೋಚಲೇ ಇಲ್ಲ.
ತಕ್ಷಣ ಆ ಕಲ್ಲನ್ನು ತೆಗೆದುಕೊಂಡು ದೇವರ ಬಳಿ ಬಂದನಂತೆ.
ಆಗ ದೇವರು " ನಿನ್ನ ಜೀವನದ ಬೆಲೆ ಎಷ್ಟು ಎಂದು ಕೇಳಿದೆಯಲ್ಲಾ!!! ನೋಡು ನೀನು ಮೊದಲು ಈ ಕಲ್ಲನ್ನು ಹಣ್ಣಿನ ವ್ಯಾಪಾರಿಯ ಬಳಿ, ನಂತರ ತರಕಾರಿ ವ್ಯಾಪಾರಿಯ ಬಳಿ, ಬಳಿಕ ಚಿನ್ನದ ಆಭರಣಗಳ ವರ್ತಕನ ಬಳಿ ಕೊಂಡು ಹೋಗಿ ತೋರಿಸಿದಾಗ ಅವರುಗಳು ತಮ್ಮ ತಮ್ಮ ಯೋಗ್ಯತೆಗನುಸಾರ ಈ ಕಲ್ಲಿಗೆ ಬೆಲೆ ಕಟ್ಟಿದರು.
ಆದರೆ ಆ ಕಲ್ಲಿನ ನಿಜವಾದ ಬೆಲೆ ಗೊತ್ತಿದ್ದ ವಜ್ರದ ವ್ಯಾಪಾರಿಗೂ ಕೂಡ ಆ ಕಲ್ಲಿಗೆ ಬೆಲೆಕಟ್ಟಲಾಗಲಿಲ್ಲ, ಅಲ್ಲವೇ?
ಹಾಗೆಯೇ ನಿನಗೂ ಕೂಡ ಬೆಲೆಕಟ್ಟಲಾಗುವುದಿಲ್ಲ, ನಿನ್ನ ಜೀವನವೂ ' ಅಮೂಲ್ಯ ' ಎಂದರೆ ಬೆಲೆಕಟ್ಟಲಾಗದ್ದು.
ಆದರೆ ಮನುಷ್ಯರು ಅವರವರ ಯೋಗ್ಯತೆಗೆ ಅನುಸಾರವಾಗಿ ನಿನಗೆ ಬೆಲೆ ಕಟ್ಟುತ್ತಾರೆ.
ಈ ಜಗತ್ತಿನ ಪ್ರತೀ ವಸ್ತುವಿಗೂ ಮಾನವರು ಆ ವಸ್ತು ತಮಗೆ ಯಾವ ರೀತಿ ಉಪಯೋಗಕ್ಕೆ ಬರುತ್ತದೆ ಎನ್ನುವುದರ ಮೇಲೆ ಅದಕ್ಕೆ ಬೆಲೆಕಟ್ಟುತ್ತಾರೆ.
ನಿನಗೂ ಹಾಗೆ!!!!! ಆದರೆ ಅದು ನಿನ್ನ ಜೀವನದ ನಿಜವಾದ ಬೆಲೆಯಲ್ಲ.
ಅದು ಅವರುಗಳು ಅವರ ಉಪಯೋಗ, ಅನುಕೂಲ ಮತ್ತು ಯೋಗ್ಯತೆಗನುಸಾರ ಕಟ್ಟುವ ಬೆಲೆ. ಅವರು ಕಟ್ಟುವ ಬೆಲೆ ಕೇವಲ ಅವರ ತೋರುತ್ತದೆ.
ಆದರೆ, ನಿನ್ನ ಬೆಲೆ ಮತ್ತು ಮೌಲ್ಯ ನನಗೊಬ್ಬನಿಗೇ ಗೊತ್ತು.
ನೀನು ನನಗೆ ಎಂದೆಂದಿಗೂ ಅತ್ಯಮೂಲ್ಯ. ನಿನ್ನ ಜೀವನಕ್ಕೆ ಬೆಲೆಕಟ್ಟಲು ನನ್ನಿಂದಾಗುವುದಿಲ್ಲ " ಎಂದನಂತೆ ಆ ದೇವರೂ ಸಹ.
ಅದಕ್ಕೆ ನಮ್ಮ ಹಿಂದಿನವರು ಹೇಳಿದ್ದು " ಮಾನವ ಜನ್ಮ ಬಹು ಶ್ರೇಷ್ಠವಾದದ್ದು " ಎಂದು.
ಹಾಗಾಗಿ ನಾವು ನಮ್ಮನ್ನು ನಾವೇ ಅಪಮೌಲ್ಯ ಮಾಡಿಕೊಳ್ಳಬಾರದು ಮತ್ತು ನಮ್ಮ ಅಲ್ಪ ಮತಿಯಿಂದ ಅನ್ಯರಿಗೆ ಬೆಲೆ ಕಟ್ಟಲೂ ಬಾರದು.
ಮಾನವನ ಬದುಕೇ ಹೀಗೆ.
ಕಷ್ಟಪಟ್ಟು ದುಡಿದು
ಮಕ್ಕಳಿಗಾಗಿ ಸಂಪತ್ತು ಗಳಿಸಿ
ಕೊನೆಗೆ ಹಸಿವು ಹಸಿವು ಅಂತಾ
ಕೈಯಲ್ಲಿ ಸಂಪತ್ತನ್ನೆ ಹಿಡಿದು
ಅದೆಷ್ಟೋ ಜನ ಮರಣವನ್ನಪ್ಪಿದ್ದಾರೆ.
ಅಂತಹ ಮೋಹದ ನಿಧಿಯ
ಕಥಾಹಂದರ ಓದಿ.
ಒಂದು ಯುರೋಪಿಯನ್ ಕಥೆ.
ಒಬ್ಬ ಮನುಷ್ಯ ಆಯುಷ್ಯದ ತುಂಬಾ ದುಡಿದು ಅಪಾರ ಸಂಪತ್ತು ಗಳಿಸಿದ್ದ.
ಒಂದು ದೊಡ್ಡ ಮಹಡಿಯ ಮನೆಯ ಕಟ್ಟಿಸಿದ್ದ.
ಮನೆಯ ತುಂಬ ಬಂಧುಬಳಗವಿತ್ತು. ಯಾವುದಕ್ಕೇನೂ ಕೊರತೆಯಿರಲಿಲ್ಲ .
ಈಗ ಆತನಿಗೆ 80 ವರ್ಷ ವಯಸ್ಸು.
ಈ ಮುದುಕ ತನ್ನ ಮನೆಯ ಕೆಳಗೊಂದು ನೆಲಮನೆಯ ಮಾಡಿಸಿದ್ದ.
ಅದರಲ್ಲಿ ತಾನು ಗಳಿಸಿದ್ದ ಸಂಪತ್ತನ್ನೆಲ್ಲ ಸಂಗ್ರಹಿಸಿ ಗುಪ್ತವಾಗಿಟ್ಟಿದ್ದ.
ಅದು ವಿಶೇಷವಾದ ಗಾಳಿ,ಬೆಳಕು ಇರಲಾದ ಕತ್ತಲೆಯ ಕೋಣೆ.
ಅಲ್ಲೊಂದು ಮೇಣದ ಬತ್ತಿ, ಕಡ್ಡಿ ಪೆಟ್ಟಿಗೆ ಇಟ್ಟಿದ್ದ.
ತನಗೆ ಸಂಪತ್ತನ್ನು ನೋಡುವ ಆಶೆಯಾದಾಗ ಯಾರಿಗೂ ಹೇಳದೆ ಒಬ್ಬನೇ ಬಂದು ನೋಡಿಕೊಂಡು ಹೋಗುತ್ತಿದ್ದ.
ಒಂದು ದಿನ ಮಧ್ಯರಾತ್ರಿ
ಮುದುಕನಿಗೆ ಎಚ್ಚರವಾಯಿತು.
ಮೋಹದ ನಿಧಿಯ ನೋಡುವ ಅಪೇಕ್ಷೆಯಾಯಿತು, ಎದ್ದ
ಮನೆಯವರೆಲ್ಲ ಮಲಗಿದ್ದಾರೆ.
ಮುದುಕ ನೆಲಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡ.
ದೀಪ ಬೆಳಗಿಸಿದ.
ಕಣ್ತುಂಬ ನಿಧಿಯ ನೋಡಿ ಸಂತಸಪಟ್ಟ.
ಹಾಗೇ ಎಷ್ಟು ಹೊತ್ತು ನಿಧಿಯ ನೋಡುತ್ತ ಮೈಮರೆತು ಕುಳಿತಿದ್ದನೋ ಏನೋ ?
ಈತನ ಜಡಸಿರಿಯನ್ನೆಲ್ಲ ಬೆಳಗುತ್ತಿದ್ದ ಏಕೈಕ ದೀಪ ನಂದುವ ಸಮಯವಾಯಿತು.
ಮೇಲೆದ್ದು ಬಾಗಿಲು ತೆಗೆಯಲು ಹೋದ. ಬಾಗಿಲು ತೆಗೆಯಲಿಲ್ಲ .
ಅದೇಕೋ ಬಾಗಿಲು ಭದ್ರವಾಗಿ ಮುಚ್ಚಿಕೊಂಡಿತ್ತು.
ಮತ್ತೆ ಮತ್ತೆ ಪ್ರಯತ್ನಿಸಿದ.
ಮುದುಕನ ದುರಾಶೆಗೆ ಮೈ
ಸೋತು ಸಣ್ಣಾಗಿತ್ತು.
ಬಾಗಿಲು ತೆಗೆಯಲು ಶಕ್ತಿ ಸಾಲಲಿಲ್ಲ.
ಮುದುಕ ಗಾಬರಿಯಾದ.
ಅಷ್ಟರಲ್ಲಿ ದೀಪವೂ ನಂದಿತು. ಮುದುಕನಿಗೆ ಜಗತ್ತೆಲ್ಲ ಈಗ ಶೂನ್ಯವಾಯಿತು.
ಸ್ವಲ್ಪ ಸಮಯದ ನಂತರ ಹೊರಗೆ ಬೆಳಕಾಗಿತ್ತು.
ಮುದುಕನ ಪಾಲಿಗೆ ಮಾತ್ರ ಕತ್ತಲೆ ಶಾಶ್ವತವಾಗಿತ್ತು.
ಮಕ್ಕಳು ಮೊಮ್ಮಕ್ಕಳೆಲ್ಲ ಎದ್ದರು.
ಮುದುಕ ಕಾಣಲಿಲ್ಲ.
ಮನೆಯೆಲ್ಲ ನೋಡಿದರು.
ಊರೆಲ್ಲ ಹುಡುಕಿದರು.
ಮುದುಕ ದೊರೆಯಲಿಲ್ಲ.
ಕಳೆದಿದ್ದರಲ್ಲವೆ ದೊರೆಯುವುದು.
ತಮ್ಮ ಮನೆಯ ಕೆಳಗೆಯೇ ನಶ್ವರ ಸಿರಿಯ ಮೋಹದಲ್ಲಿ ಮುಳುಗಿದ್ದ ಮುದುಕನನ್ನು ಅವರು ಕಾಣದೇ ಹೋದರು.
ದಿನಗಳೆದಂತೆ ಮನೆಯವರೆಲ್ಲ ಮುದುಕನನ್ನು
ಹನುಮಂತ. ಮ. ದೇಶಕುಲಕಣಿ೯
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ