ಗುರುವಾರ, ಜುಲೈ 13, 2017


ಅಜಾತಶತ್ರು ಮಾನ್ಯ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದ ತನ್ನಿಮಿತ್ತ ಈ ಲೇಖನ .ಅಟಲ್ ಅವರು ಹುಟ್ಟಿದ್ದು , 25 ಡಿಸೆಂಬರ್ 1924 ರಲ್ಲಿ ಕೃಷ್ಣ ದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅವರಿಗೆ,  ಮಧ್ಯ ಪ್ರದೇಶದ ಗ್ವಾಲಿಯರ್  ಹತ್ತಿರದ  ಶಿಂದೆ ಕಿ ಚವ್ವಾಣಿ ಅನ್ನೋ ಹಳ್ಳಿಯಲ್ಲಿ, ತಂದೆ ಒಬ್ಬ ಕವಿ ಹಾಗೆ ಸಾಮಾನ್ಯ ಶಾಲೆಯ ಶಿಕ್ಷಕ ಹಾಗೆ ಅಟಲ್ ಅವರ ಅಜ್ಜ ಪಂಡಿತ್ ಶ್ಯಾಮ್ ಲಾಲ್  ವಾಜಪೇಯಿಯವರು. ಅಟಲ್ ಅವರ ಪದವಿಯನ್ನ ವಿಕ್ಟೋರಿಯಾ ಕಾಲೇಜಿನಿಂದ (ಈಗ ಲಕ್ಷ್ಮಿ ಬಾಯಿ ಕಾಲೇಜು) ಪಡೆದರು. ಹಿಂದಿ, ಇಂಗ್ಲೀಷ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಗಳಿಸಿದ ಅಟಲ್  ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನ ಕಾನ್ಪುರದ ಡಿ. ಎ. ವಿ ಕಾಲೇಜಿನಿಂದ ಪಡೆದರು. ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ  (ಆರ್. ಎಸ್. ಎಸ್ )ವನ್ನು ಸೇರಿದರು. ವೀರ ಅರ್ಜುನ ಹಾಗೂಪಾಂಚಜನ್ಯ ಅನ್ನುವ ಎರಡು ಪತ್ರಿಕೆಗಳಿಗೆ ಪತ್ರಕರ್ತರಾಗಿ ಕವಿಯಾಗಿ ಸೇವೆ ಸಲ್ಲಿಸಿದರು….

. ನಿಮಗೆ ಗೊತ್ತ? ಭಾರತದ  ಅವಿವಾಹಿತ ಪ್ರದಾನ ಮಂತ್ರಿ ಕೇವಲ ಅಟಲ್ ಜಿ ಮಾತ್ರ…..!!ಅಟಲ್ ಅವರ ಮೊದಲ ರಾಜಕೀಯ ಜೀವನ ಶುರುವಾಗಿದ್ದು 1942 ರಲ್ಲಿ ಕ್ವಿಟ್ ಇಂಡಿಯ (ಬ್ರಿಟಿಷರೇ ಬಾರತ ಬಿಟ್ಟು ತೊಲಗಿ) ಚಳುವಳಿಯಲ್ಲೀ ಭಾಗವಹಿಸುವ ಮೂಲಕ, ನಂತರ 23 ದಿನಗಳ ಕಾಲ ಜೈಲು ವಾಸ ಅನುಭವಿಸ ಬೇಕಾಯಿತು, 1953 ರಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪರಿಚಯ ಭಾರತೀಯ ಜನ ಸಂಘದ ಮೂಲಕ ಆಯಿತು. 1957 ರಲ್ಲಿ ಮೊದಲ ಬಾರಿಗೆ ಲೋಕ ಸಭೆಯ ಸದಸ್ಯರಾಗಿ ಆಯ್ಕೆ ಆದರು. ನಂತರದ ದಿನಗಳಲ್ಲಿ ಇವರ ಚತುರತೆಯನ್ನ ಕಂಡ ನೆಹರು ಜಿ ಹೇಳಿದ್ರಂತೆ, ಈ ವ್ಯಕ್ತಿ ಮುಂದೆ ಪ್ರದಾನಿ ಆಗ್ತಾರೆ ಅಂತ. ಅವರ ಅಸಾಮಾನ್ಯ ಬುದ್ದಿವಂತಿಕೆಯಿಂದಾಗಿ ಎಷ್ಟರ ಮಟ್ಟಿಗೆ ಬೆಳೆದರು ಎಂದರೆ ಜನ ಸಾಮಾನ್ಯರಲ್ಲಿ ಭಾರತೀಯ ಜನ ಸಂಘ ಅನ್ನುವ ಹೆಸರೇ ಕೇಳದ ಪಕ್ಷವನ್ನ ಬುಡದಿಂದ ಕಟ್ಟಿ ಬೆಳಸಿದರು ಅದಕ್ಕೆ ಸಾಥ್ ಕೊಟ್ಟವರು ಲಾಲ್ ಕೃಷ್ಣ ಅಡ್ವಾಣಿ, ನಾನಾಜಿ ದೇಶಮುಖ್ ಹಾಗೂ ಬಾಲರಾಜ್ ಮಧೋಕ್ ಅವರು.ವಿಶೇಷ ಇನ್ನೊಂದಿದೆ ಅವರು 3ನೇ, 10, ಹಾಗೂ 11ನೇ ಲೋಕ ಸಭೆಯನ್ನು ಬಿಟ್ಟು ಉಳಿದೆಲ್ಲ ಸಮಯದಲ್ಲಿ ಲೋಕ ಸಭೆಯ ಸದಸ್ಯರಾಗಿ ಇದ್ದರು. 1977 ರಲ್ಲಿ  ಜನತಾ ಸಂಘದ ಮೊದಲ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಆಯ್ಕೆ ಆದಾಗ  ಅವರು ಅಮೆರಿಕ ದ ಅಸೆಂಬ್ಲಿಯನ್ನ ಉದ್ದೇಶಿಸಿ ಮಾತನಾಡುವ ಅವಕಾಶ ಸಿಕ್ಕಿತ್ತು ಆ ಸಂಧರ್ಬದಲ್ಲಿ ಹಿಂದಿಯಲ್ಲಿ ಅಮೆರಿಕದ ಅಸೆಂಬ್ಲಿಯನ್ನ ಉದ್ದೇಶಿಸಿ ಮಾತನಾಡಿದ ಏಕೈಕ ಭಾರತೀಯ ಅಟಲ್ ಅವರು…… ಅವರಿಗೆ ಇಂಗ್ಲಿಷ್ ಬರೋದಿಲ್ಲ ಅಂತ ಯೋಚನೆ ಮಾಡ್ಬೇಡಿ ಅವರು ಇಂಗ್ಲೀಷ್ ನಲ್ಲೂ ಕೂಡ ಪ್ರಖಾಂಡ ಪಂಡಿತರು.1979 ರಲ್ಲಿ ಮುರಾರ್ಜಿ ದೇಸಾಯಿ ಅವರ ಸರ್ಕಾರ ಪತನಗೊಂಡ ಸಂಧರ್ಬದಲ್ಲಿ ಜನತಾ ಪಾರ್ಟಿಯನ್ನ ವಿಸರ್ಜಿಸಲಾಯಿತು ಆ ಸಂಧರ್ಬದಲ್ಲೂ ದೃತಿಗೆದದ ಅಟಲ್ ಜಿ ಭಾರತೀಯ ಜನ ಸಂಘ ಹಾಗೂ ಆರ್ ಎಸ್ ಎಸ್ ನ ಕೆಲ ಮುಖಂಡರೊಂದಿಗೆ ಸೇರಿ , ಜೊತೆಗೆ ಲಾಲ್ ಕೃಷ್ಣ ಅಡ್ವಾಣಿಯವರ ಜೊತೆಗೂಡಿ 1980 ರಲ್ಲಿ ಭಾರತೀಯ ಜನತಾ ಪಾರ್ಟಿ ಯನ್ನ ಕಟ್ಟಿದರು. 1984 ರಲ್ಲಿ ಆಪರೇಷನ್ ಬ್ಲೂ ಸ್ಟಾರ್ ಅನ್ನ ಅತ್ಯಂತ ಖಟುವಾಗಿ ವಿರೋದಿಸಿದವರು ಅಟಲ್ ಜಿ….. ಅಷ್ಟಕ್ಕೂ ಈ ಬ್ಲೂ ಸ್ಟಾರ್ ಆಪರೇಷನ್ ಅಂದರೆ ಏನು ಗೊತ್ತ? ಪಂಜಾಬ್ ನ ಸಿಕ್ಕ್ ದೇವಾಲಯ ಒಂದರಲ್ಲಿ ಅಕ್ರಮ ಶಸ್ತ್ರಾಸ್ತ್ರ ದಾಸ್ತಾನಿದೆ ಅನ್ನೋ ನೆಪ ಮಾಡಿಕೊಂಡು ಅಲ್ಲಿಗೆ ಸೈನ್ಯವನ್ನ ಕಳುಹಿಸಿ ಜಲಿಯನ್ ವಾಲಭಾಗ್ ಹತ್ಯಾಕಾಂಡಕಿಂತಲೂ ಭಯಾನಕವಾಗಿ ನರ ಮೇಧ ನೆಡೆಸಿದ್ದು!! ಅದರ ರೂವಾರಿ ಯಾರು ಗೊತ್ತ? ಮೇಡಂ ಇಂದಿರ ಗಾಂಧಿ!! ಅಷ್ಟಕ್ಕೂ ಒಡೆದು ಆಳುವ ನೀತಿಯನ್ನ ಮುಂದುವರಿಸಿಕೊಂಡು ಬಂದಿದ್ದ ಆಗಿನ ಸರ್ಕಾರದ, ಹಾಗೂ ಬ್ಲೂ ಸ್ಟಾರ್ ಆಪರೇಷನ್ ವಿರುದ್ದ ಹೋರಾಟ ಮಾಡಲು ಲೋಕ ಸಭೆಯಲ್ಲಿ ಇದ್ದ ಬಿ ಜೆ ಪಿ ಯ ಸದಸ್ಯರ ಒಟ್ಟು ಸಂಖ್ಯಾ ಬಲ ಕೇವಲ 2 ಮಾತ್ರ!! ಹಾಗಿದ್ದರೂ ದೃತಿ ಗೆಡಲಿಲ್ಲ ಅಟಲ್…..ರಾಮ ಜನ್ಮಭೂಮಿಯ ವಿಚಾರದಲ್ಲಿ ಹೋರಾಟ, ನಂತರ 1995 ರಲ್ಲಿ ಮಹಾರಾಷ್ಟ್ರ ಹಾಗೂ ಗುಜರಾತ್ ನಲ್ಲಿ ಮೊದಲ ಬಾರಿಗೆ ಅಧಿಕಾರವನ್ನ ವಹಿಸುವ ಅವಕಾಶ ಬಿ ಜೆ ಪಿ ಗೆ ಒಲಿದು ಬಂತು ನಂತರ ಮಹಾರಾಷ್ಟ್ರದಲ್ಲಿ ಲಾಲ್ ಕೃಷ್ಣ ಅಡ್ವಾಣಿಯವರು ಮುಂದಿನ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಮಾನ್ಯ ಅಟಲ್ ಜಿ ಅವರ ಹೆಸರನ್ನ ಘೋಷಿಸಿದರು ಅದರಿಂದಾಗಿ 1996 ರಲ್ಲಿ ಕೇಂದ್ರದಲ್ಲಿ ಮೊದಲ ಬಿ ಜೆ ಪಿ ಯ ಸರ್ಕಾರ ರಚನೆಯಾಯಿತು. ಆದರೆ ದುರಾದೃಷ್ಟ ವಶಾತ್ ಅಟಲ್ ಬಹುಮತ ಸಾಭೀತು ಪಡಿಸುವ ಸಂದರ್ಭದಲ್ಲಿ ಸೋಲೋಪ್ಪಬೇಕಾಯಿತು ಹಾಗಾಗಿ ಮೊದಲಬಾರಿಗೆ ಅಟಲ್ ಕೇವಲ 13 ದಿನಗಳಿಗಾಗಿ ಪ್ರದಾನಿಯಾಗಿದ್ದರು ಅಷ್ಟೇ…1998- 99 ರಲ್ಲಿ ಎನ್ ಡಿ ಎ ಅನ್ನುವ ಸಂಘಟನೆಯಡಿ ಪಕ್ಷಗಳನ್ನ ಒಂದು ಗೂಡಿಸಿ ಮತ್ತೆ ಬಿ ಜೆ ಪಿ ಅಧಿಕಾರಕ್ಕೆ ಬಂತು ಅಟಲ್ ಪ್ರಧಾನಿಯಾದರು. ಮತ್ತೆ ಜಯಲಲಿತ ತಾವು ನೀಡಿದ್ದ ಬೆಂಬಲವನ್ನ ಹಿಂಪಡೆದರು ಅದರಿಂದಾಗಿ  ಬಹುಮತ ಸಾಬೀತು ಮಾಡುವ ಪರೀಕ್ಷೆ ಎದುರಾಯಿತು ಆಗ ಕೇವಲ 1 ವೋಟಿನಿಂದ ಅಟಲ್ ಸರ್ಕಾರ ಮತ್ತೆ ಬಿದ್ದು ಹೋಯಿತು……ಮೇ 1998ರಲ್ಲಿ ಮೊದಲ ಬಾರಿಗೆ ಅಟಲ್ ಸರ್ಕಾರ ಒಂದು ನಿರ್ಧಾರಕ್ಕೆ ಬಂದು, ಅಣ್ವಸ್ತ್ರ ಪರೀಕ್ಷೆಯನ್ನ ಪೊಖ್ರಾನ್ (ರಾಜಸ್ತಾನ ದಲ್ಲಿದೆ) ಎಂಬಲ್ಲಿ ನೆಡೆಸಿತು, ಯಶಸ್ವಿ ಆಯಿತು ಕೂಡ, ಇಡೀ ವಿಶ್ವ ಭಾರತವನ್ನ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಯಿತು, ಅಮೆರಿಕವೆಂಬ ಹೊಟ್ಟೆಕಿಚ್ಚಿನ ದೇಶ ನಮ್ಮ ಮೇಲೆ ಅಣ್ವಸ್ತ್ರ ಪರೀಕ್ಷೆ ಮಾಡಿದ ಕಾರಣವೊಡ್ಡಿ ನಿರ್ಭಂದ ಹೇರಿತು. ಇದಾಗಿ ಎರಡೇ ವಾರದಲ್ಲಿ ನಮ್ಮ ಪರಮಾಪ್ತ!! (?) ರಾಷ್ಟ್ರ ಪಾಕಿಸ್ತಾನ ಅಣು ಶಶ್ತ್ರಾಸ್ತ್ರಗಳನ್ನ ಪರೀಕ್ಷೆ ಮಾಡಿತು ಗೊತ್ತೇ? ನಂತರ ಅಮೆರಿಕ “ಸಿ ಟಿ ಬಿ ಟಿ ಒಪ್ಪಂದಕ್ಕೆ ಸಹಿ ಮಾಡುವಂತೆ ಎಷ್ಟು ಒತ್ತಾಯ ಮಾಡಿತೆಂದರೆ ಅದೆಲ್ಲವನ್ನೂ ಅಟಲ್ ಛಲದಿಂದಲೇ ಎದುರಿಸಿದರು. ಅಷ್ಟಕ್ಕೂ ಈ ಸಿ ಟಿ ಬಿ ಟಿ ಅಂದರೆ ಏನು ಗೊತ್ತೇ? ಕಂಪ್ರಹೆನ್ಸಿವ್ ಟೆಸ್ಟ್ ಬ್ಯಾನ್ ಟ್ರೀಟಿ ಅಂತ, ಅಂದರೆ ನಾವು ಯಾರಮೇಲೂ ಅಣ್ವಸ್ತ್ರ ಪ್ರಯೋಗ ಮಾಡುವಂತಿಲ್ಲ…….ಸರಿ ಹಾಗೆಲ್ಲಾದರೂ ಸಹಿ ಹಾಕಿದರೆ ನಮ್ಮ ನೆಂಟ ರಾಷ್ಟ್ರ ಪಾಕಿಸ್ತಾನ ಸುಮ್ಮನಿರುತ್ತದೆಯೇ? ಸಹಿ ಹಾಕಿದ ಮರುಕ್ಷಣವೇ ಅವರಲ್ಲಿರುವ ಅಕ್ರಮ ಅಣು ಬಾಂಬಗಳನ್ನ ಸಾಲು ಸಾಲಾಗಿ ತಂದು ನಮ್ಮ ಮೇಲೆ ಎಸೆದು ದ್ವಂಸ ಮಾಡಿಬಿಡುವುದಿಲ್ಲವೇ? ಹಾಗೆ ಆಗಲೆಂದೇ ಅಮೆರಿಕ ಸಿ ಟಿ ಬಿ ಟಿ ಅನ್ನೋ ಕುಣಿಕೆಯನ್ನ ನಮಗೆ ಸುತ್ತಲು ಬಂದಿದ್ದು… ಆದರೆ ಅದನ್ನ ಅರಿತಿದ್ದರು ಅಟಲ್.1998 ಹಾಗೂ 1999 ರಲ್ಲಿ ಭಾರತ ಪಾಕಿಸ್ತಾನಗಳನಡುವೆ ಲಾಹೋರ್ ಒಪ್ಪಂದಕ್ಕೂ ಮುಂದಾಗಿದ್ದು ಸ್ವತಃ ಅಟಲ್ ಬಿಹಾರಿ ವಾಜಪೇಯಿಯವರು… ಆದರೆ ಮುಂದಿನಿಂದ ಒಪ್ಪಂದ ಮಾಡಿಕೊಂಡು ಹಿಂದಿನಿಂದ ಬಂದು ಬಾಂಬ್ ಹಾಕುವ ಬುದ್ಧಿಯನ್ನ ಪಾಕ್ ಬಿಡಲೇ ಇಲ್ಲ ….ಜೂನ್ 1999 ರಲ್ಲಿ ಕಾರ್ಗಿಲ್ ಯುದ್ದ ಶುರುವಾಗಿ ಹೋಯಿತು,ಆಪರೇಷನ್ ವಿಜಯ್ ಗೆ ಕರೆ ಕೊಟ್ಟರು ಅಟಲ್, 3 ತಿಂಗಳು ನಡೆದ ಯುದ್ದದಲ್ಲಿ ಪಾಕ್  ಮಾಡಿದ 70% ಅತಿಕ್ರಮ ಪ್ರವೇಶ ವನ್ನು ಹಿಮ್ಮೆಟ್ಟಿಸಲಾಯಿತು, 600 ರಿಂದ ಸುಮಾರು 3000 ಸಾವಿರ ಪಾಕ್ ಉಗ್ರರನ್ನ ಮುಗಿಸಲಾಯಿತು, ನಂತರ ಪಾಕಿಸ್ತಾನ ಅಮೆರಿಕಾದ ಕಾಲು ಹಿಡಿದು ಜೀವ ಉಳಿಸಿಕೊಂಡು ಕದನ ವಿರಾಮ ಘೋಷಣೆ ಮಾಡಿತು….ಆಗ ಅಟಲ್ ತೆಗೆದುಕೊಂಡ ನಿರ್ಧಾರಗಳು, ಅವರ ಧೈರ್ಯ ಮೆಚ್ಚುಗೆಗೆ ಪಾತ್ರವಾಯಿತು.ಮೂರನೇ ಬಾರಿಗೆ ಪ್ರದಾನಿಯಾಗಿದ್ದು 1999 ರಿಂದ 2004 ರ ವರೆಗೆ, ಆ ಸಂದರ್ಭದಲ್ಲಿ ನಡೆದ ಭಾರತೀಯ ವಿಮಾನ ಅಪಹರಣ (ಖಂದಹಾರ್ ನಲ್ಲಿ. – ಹಿಂದೊಮ್ಮೆ ಘಾಂದಾರ ಅಗಿತ್ತಂತೆ ಅದು ) ಕೂಡ ಸುಖಾಂತ್ಯ ಕಾಣುವಲ್ಲಿ ಅಟಲ್ ಹಾಗೂ ಜಸವಂತ್ ಸಿಂಗರ ಕೊಡುಗೆ ಅಪಾರವಾಗಿದೆ. ಮತ್ತೆ ಇನ್ನೂ ಮುಖ್ಯವಾಗಿ ಹೇಳಬೇಕೆಂದರೆ ಅಟಲ್ ಮಾಡಿದ ಮಹತ್ತರ ಸಾಧನೆಗಳಲ್ಲಿ ಪ್ರದಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆ, ಎಷ್ಟರ ಮಟ್ಟಿಗೆ ಇದು ಫಲಪ್ರದವಾಯಿತೆಂದರೆ ಲಕ್ಷಾಂತರ ಹಳ್ಳಿಗಳು ಡಾಂಬರಿನ ರಸ್ತೆಗಳನ್ನು ಕಂಡವು, ಸಂಪರ್ಕ ಹಾಗೂ ರಸ್ತೆ ನಿರ್ಮಾಣದಲ್ಲಿ ಆದ ಕ್ರಾಂತಿ ಅಂದರೆ ಅದೇನು ತಪ್ಪಾಗಲಾರದು.ನಂತರದಲ್ಲಿ 2001 ರ ಪಾರ್ಲಿಮೆಂಟ್ ಮೇಲಿನ ಉಗ್ರರ ದಾಳಿ ಕಹಿ ನೆನಪು , 2005 ರಲ್ಲಿ ರಾಜಕೀಯದಿಂದ ನಿವೃತ್ತಿ ಘೋಷಿಸಿ ಕೊಂಡವರು ಅಟಲ್, ರಾಜಕೀಯವನ್ನ ಬಿಟ್ಟರೆ ಅಟಲ್ ಒಬ್ಬ ಒಳ್ಳೆಯ ಕವಿ ಹಾಗೂ ಸಾಹಿತಿಯೂ ಹೌದು. ಅವರು ಬರೆದ ಪುಸ್ತಕಗಳು ಅನೇಕ. ಹಾಗೆ ಅವರಿಗೆ ಅರಸಿ ಬಂದ ಪ್ರಶಸ್ತಿಗಳೂ ಅಷ್ಟೇ, 1992 ರಲ್ಲಿ ಪಧ್ಮ ವಿಭೂಷಣ, 1994 ರಲ್ಲಿ ಲೋಕಮಾನ್ಯ ತಿಲಕ್ ಪ್ರಶಸ್ತಿ, 1994 ರಲ್ಲಿ ಉತ್ತಮ ರಾಜಕೀಯ ಪಟು ಗೌರವ, ಹಾಗೂ 1994 ರ ಪಂಡಿತ್ ಗೋವಿಂದ್ ವಲ್ಲಭ್ ಪಂತ್ ಪ್ರಶಸ್ತಿಗಳು ಮುಖ್ಯವಾದವು.ಅವರು ಬರೆದ ಕೆಲವು ಪುಸ್ತಕಗಳು:Atal Bihari Vajpayee, meri samsadiya yatra (Hindi Edition). (1999). – ಇದು ಅವರ ಜೀವನ ಚರಿತ್ರೆ.Four decades in parliament. (1996).Atala Bihari Vajpayee, samsada mem tina dasaka. (1992).Pradhanamantri Atala Bihari Vajapeyi, chune hue bhashana. (2000).Values, vision & verses of Vajpayee: India’s man of destiny. (2001).India’s foreign policy: New dimensions. (1977).Assam problem: Repression no solution. (1981).Suvasita pushpa: Atala Bihari Vajapeyi ke sreshtatama bhashana. (1997).ಕವಿತೆಗಳುTwenty-One Poems. (2003).Kya khoya kya paya: Atala Vihari Vajapeyi, vyaktitva aura kavitaem (Hindi Edition). (1999).Meri ikyavana kavitaem. (1995).Meri ikyavana kavitaem (Hindi Edition). (1995).Sreshtha kabita. (1997).Nayi Disha – an album with Jagjit Singh (1999)Samvedna – an album with Jagjit Singh (2002)
     ಎನ್ ಡಿ  ಎ ಆಗಿರಲಿ, ಭಾರತೀಯ ಜನ ಸಂಘ ಆಗಿರಲಿ, ಭಾರತೀಯ ಜನತಾ ಪಾರ್ಟಿ ಆಗಿರಲಿ ಅವೆಲ್ಲವೂ ಹುಟ್ಟಿ ಬೆಳೆದಿದ್ದು ಅಟಲ್ ರ ಮಾರ್ಗದರ್ಶನದಲ್ಲಿಯೇ! ತನಗಾಗಿ ಒಂದು ಸಂಸಾರವನ್ನೂ ಕಟ್ಟಿಕೊಳ್ಳದೆ ದೇಶಕ್ಕಾಗಿ ದೇಶದ ಹಿತಕ್ಕಾಗಿ ಹೋರಾಟ ಮಾಡಿದ ಆಧುನಿಕ ರಾಜಕಾರಣದ ಭೀಷ್ಮ ವಾಜಪೇಯಿಯವರು ಎಲ್ಲರಿಗೂ ಮಾದರಿ. ನಿಷ್ಕಳಂಕ, ಸಜ್ಜನ , ರಾಜಕಾರಣಿಯಾಗಿ ಕವಿಯಾಗಿ ಒಬ್ಬ ಶ್ರೇಷ್ಠ ಮಾನವತಾ ವಾದಿಯಾದ ವಾಜಪೇಯಿಯವರಿಗೆ ಅವರ ಜನುಮದಿನಕ್ಜೆ ಅತ್ಯುನ್ನತ ಭಾರತರತ್ನ ನೀಡಲು ನಿಧ೯ರಿಸಿದೆ.ಅವರ ಆರೋಗ್ಯ ಏರುಪೇರಾಗಿ ತಮ್ಮ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೂ ಆ ಸಂಗತಿ ಅರಿಯದಂತಾಗಿದ್ದಾರೆ.ಅವರ ಆರೋಗ್ಯ ಸುಧಾರಿಸಲಿ ಅವರಿಗೆ 90ನೇ ವಷ೯ಕ್ಕೆ ಕಾಲಿಡುತ್ತಿರುವುದಕ್ಕೆ ಶುಭಾಶಯಗಳು.
                           -(ಆಧಾರ)
-ಹನುಮಂತ.ಮ.ದೇಶಕುಲಕಣಿ೯.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನ಼ಂ.9731741397

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ