ಯಾರಿಗಾದರೂ ಕೇಳಿ ನೋಡಿ, ಅವರ ವಂಶದ ಬಗ್ಗೆ ಅವರ ಹೆಸರು,ಅವರಪ್ಪನ ಹೆಸರು,ಅವರಜ್ಜನ ಹೆಸರು ಹೇಳುತ್ತಾರೆ.ಅಬ್ಬಬ್ಬಾ..ಅಂದರೆ ಅವರ ಮುತ್ತಜ್ಜನ ಹೆಸರು ಹೇಳಬಹುದು.ಇತಿಹಾಸ ಶೋಧಿಸಿದಾಗ ಕೆಲ ರಾಜಕುಟುಂಬಗಳ ವಂಶಾವಳಿ ದೊರಕಬಹುದು.ಆದರೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಭೋಗೇನಾಗರಕೊಪ್ಪದ ದೇಶಕುಲಕಣಿ೯ (ದೇಸಾಯಿ)ಅವರು ,ಕಳೆದ 8 ತಲೆಮಾರಿನ ವಂಶವೃಕ್ಷವನ್ನು ಬರೆದಿಡುತ್ತಾ ಬಂದಿದ್ದಾರೆ.
ಭೋಗೇನಾಗರಕೊಪ್ಪ ದೇಸಾಯರ ಪೂವ೯ಜರು ಬಿದರಿಕೋಟೆ ಗ್ರಾಮದ ದೇಸಾಯರಾಗಿದ್ದರು.ಆ ಅಧಿಕಾರ ತ್ಯಜಿಸಿ ಹಂಪೆ ಪಂಪಾಪತಿ ದೇಗುಲದ ಅಚ೯ಕರಾದರು.ಬಿದರಿಕೋಟೆ ಗ್ರಾಮ ಈಗ ಬೇಚರಾಕ್ ಆಗಿದೆ.ವಿಜಯನಗರ ಸಾಮ್ರಾಜ್ಯದ ಇರುವವರೆಗೂ ಅಚ೯ಕರಾಗಿದ್ದರು.ವಿಜಯನಗರ ಸಾಮ್ರಾಜ್ಯ ಪತನಾನಂತರ ಧಾರವಾಡದತ್ತ ವಲಸೆ ಬಂದರು.ವಲಸೆ ಬಂದ ಮೂಲಪುರುಷರು ಪಂಪಪ್ಪ,ಬಸಪ್ಪ,ಶಿವಪ್ಪ.
ಧಾರವಾಡದಲ್ಲಿ ಮರಾಠಾ ಸಾಮ್ರಾಜ್ಯ ಆಡಳಿತವಿತ್ತು.ಛತ್ರಪತಿ ಶಿವಾಜಿ ಮುಂದೆ ವಿದ್ವತ್ ಪ್ರದಶಿ೯ಸಿದಾಗ ಮೂವರ ಪೂವ೯ಜರ ರಾಜನೀತಿ,ಧಾಮಿ೯ಕನೀತಿಯ ಹಿನ್ನಲೆ ಪಾಂಡಿತ್ಯ ಅರಿತು ತಲಾ ಐದು ಹಳ್ಳಿ ಇನಾಮು ಆಗಿ ನೀಡಿದನು.ಪಂಪಪ್ಪ ತಾನು ಭೋಗೇನಾಗರಕೊಪ್ಪ ಆಯ್ದುಕೊಂಡು ಶಿವಾಜಿ ಕಟ್ಟಿಸಿದ ವಾಡೆದಲ್ಲಿ ಆಡಳಿತ ನಡೆಸತೊಡಗಿದ.ಬಸಪ್ಪ ಜಮ್ಮಿಹಾಳವನ್ನು,ಶಿವಪ್ಪ ಹುಲ್ಲಂಬಿಯನ್ನು ಆಡಳಿತ ಕೇಂದ್ರ ಮಾಡಿಕೊಂಡರು.
ಭೋಗೇನಾಗರಕೊಪ್ಪದ ಮೂಲಪುರುಷ ಪಂಪಪ್ಪ.ಇವನಿಗೆ ಇಬ್ಬರು ಮಕ್ಕಳು ಹಿರಿಯ ಶೇಷಪ್ಪ(ಶೇಷೋ)ಇವನದು ಮೇಲಿನ ಘರಾಣೆ.ಕಿರಿಯ ಶಿವರಾಯಪ್ಪ ಇವನದು ಕೆಳಗಿನ ಘರಾಣೆ.ಶೇಷೋಗೆ ಲಿಂಗೋ(ಪಂಪಣ್ಣ ಉಫ್೯ ಪಂಪಾಪತಿ)ಮಗ.ಲಿಂಗೋನ ಆಡಳಿತಕ್ಕೆ ಬಂದಾಗ "ಲಿಂಗೋ ಶೇಷೋ ಘರಾಣೆ" ಎಂದು ಪ್ರಸಿದ್ಧವಾಯಿತು. ಇವನ ಮಕ್ಕಳು ಬಸವಂತ,ವಿರೂಪಾಕ್ಷ,ಕೃಷ್ಟರಾವ್,ರಾಮಚಂದ್ರ(ರಾಮಪ್ಪಜ್ಜ).
ಹಿರಿಯ ಬಸವಂತನು ಕುದುರೆ ಸವಾರಿ,ಕುದುರೆ ಪಳಗಿಸುವುದರಲ್ಲಿ ಎತ್ತಿದ ಕೈ.ಬಸವಂತನ ಮಕ್ಕಳು ಇಬ್ಬರು ಅಣ್ಣಾಜಿ, ತಮ್ಮಾಜಿ.ಮರಾಠರ ಪ್ರಭಾವದಿಂದ ತಮ್ಮ ಹೆಸರಿನ ಮುಂದೆ "ಜೀ" ಎಂಬ ಗೌರವಸೂಚಕ ಹೆಸರಿನ ಮುಂದೆ ಇಟ್ಟುಕೊಂಡರು.ಅಣ್ಣಾಜಿಯು ಧಾಮಿ೯ಕ ಕಾಯ೯ಗಳಲ್ಲಿ ಆಸಕ್ತಿಯಿದ್ದನು.ಹೀಗಾಗಿ ಅವರ ಹೆಸರಲ್ಲಿಯೇ ಊರ ಶ್ರೀಮಾರುತಿ,ನಂದೀಶ್ವರ ದೇವಸ್ಥಾನದ ನಿವ೯ಹಣೆಗೆ ತಲಾ 2 ರೂ/- ವಷಾ೯ಶನ ನೀಡುತ್ತಿದ್ದರು.ಆ ಸನದು "ಅಣ್ಣಾಜಿ ಬಸವಂತ" ಹೆಸರಲ್ಲಿ ಇತ್ತು. ತಮ್ಮಾಜಿಯು ಪ್ರಖ್ಯಾತ ಕುಸ್ತಿಪಟುವಾಗಿದ್ದರು.ಆಗಲೇ ಭೋಗೇನಾಗರಕೊಪ್ಪ "ಪ್ರಸಿದ್ಧ ಪೈಲ್ವಾನರ ಊರು" ಎಂದು ಖ್ಯಾತವಾಗಿತ್ತು.
ಅಣ್ಣಾಜಿಗೆ ಬಾಲಕೃಷ್ಣ, ರಂಗೋ ಮಕ್ಕಳಿದ್ದರು.ಹಿರಿಯ ಬಾಲಕೃಷ್ಣ ಊರಗೌಡರಿದ್ದರು.ಇವರು ಆಕಸ್ಮಿಕ ನಿಧನರಾದಾಗ ರಂಗೋ ಗೌಡರಾದರು.ರಂಗೋ ಅವರಿಗೆ ರಘುನಾಥ,ಗುರುನಾಥ,ಸುಭಾಸ್ಚಂದ್ರ ಎಂಬ ಮೂರು ಮಕ್ಕಳಿದ್ದಾರೆ.ರಘುನಾಥರಿಗೆ ದೀಪಕ,ಅಭಯ ಮಕ್ಕಳಿದ್ದಾರೆ.ಗುರುನಾಥರಿಗೆ ಮೂರು ಜನ ಹೆಣ್ಣುಮಕ್ಕಳಿದ್ದಾರೆ.
ತಮ್ಮಾಜಿ ಅವರಿಗೆ ದತ್ತಾತ್ರೇಯ,ಶಿವಾಜಿ,ಕೃಷ್ಣಾಜಿ ಮೂರು ಜನ ಮಕ್ಕಳು.ದತ್ತಾತ್ರೇಯ ಅವರಿಗೆ ಹನುಮಂತ, ರವಿ ಗಂಡುಮಕ್ಕಳಿದ್ದರು ಅವರು ಚಿಕ್ಕ ವಯಸ್ಸಿನಲ್ಲಿ ನಿಧನರಾಗಿದ್ದಾರೆ,ಮತ್ತು ಐದುಜನ ಹೆಣ್ಣುಮಕ್ಕಳು ಇದ್ದಾರೆ.ಶಿವಾಜಿಗೆ ರಾಮಚಂದ್ರ ಮಗ.ರಾಮಚಂದ್ರ ಅವರಿಗೆ ಗಣೇಶ ಎಂಬ ಮಗನಿದ್ದಾನೆ.ಕೃಷ್ಣಾಜಿ ಅವರಿಗೆ ಆರು ಜನ ಗಂಡುಮಕ್ಕಳು.ಬಸವಂತರಾವ್,ಮಧುಸೂದನ,ಅಶೋಕ ವಸಂತ,ಅರುಣ,ಮೋಹನ.ಹಿರಿಯ ಬಸವಂತರಾವ್ ಅವಿವಾಹಿತರು.ಮಧುಸೂದನ ಅವರಿಗೆ ಹನುಮಂತ,ಗುರುರಾಜ ಗಂಡುಮಕ್ಜಳು.ಅಶೋಕ ಅವರಿಗೆ ಪವನ ಮಗ,ಪವನನಿಗೆ ಸಮಥ೯ ಮಗನಿದ್ದಾನೆ.ವಸಂತ ಅವರಿಗೆ ಚೈತನ್ಯ ಮಗ,ಚೇತನಾ ಮಗಳು ಇದ್ದಾರೆ.ಅರುಣರಿಗೆ ಕೃಷ್ಣ ಎನ್ನುವ ಮಗ.ಮೋಹನರಿಗೆ ನವೀನ,ಪುರುಷೋತ್ತಮ,ಭರತ ಮೂರು ಮಕ್ಕಳಿದ್ದಾರೆ.
ಲಿಂಗೋ(ಪಂಪಣ್ಣ ಉಫ್೯ ಪಂಪಾಪತಿ) ಎರಡನೇ ಮಗ ವಿರೂಪಾಕ್ಷ ಇವರಿಗೆ ಶಂಕರರಾವ್ ಮಗನಿದ್ದ.ಶಂಕರರಾವ್ ಗೆ ಹನುಮಂತ,ರಾಮಚಂದ್ರ,ಲಕ್ಷ್ಮಣ,ಶ್ರೀಪಾದ ಮಕ್ಕಳು.ಹನುಮಂತ ಅವರಿಗೆ ಇಬ್ಬರೂ ಹೆಣ್ಣುಮಕ್ಕಳು.ರಾಮಚಂದ್ರ ಅವರನ್ನು ಲಿಂಗೋ ಅವರ ಮೂರನೇ ಮಗ ಕೃಷ್ಟರಾವ್ ಅವರಿಗೆ ದತ್ತಕ ಹೋದರು.ಲಕ್ಷ್ಮಣ ಆಕಸ್ಮಿಕ ನಿಧನನಾದ.ಶ್ರೀಪಾದರಿಗೆ ಸದ್ಗುರು,ಸಮಥ೯ ಮಕ್ಕಳು.
ಲಿಂಗೋ(ಪಂಪಣ್ಣ ಉಫ್೯ ಪಂಪಾಪತಿ) ಮೂರನೇ ಮಗ ಕೃಷ್ಟರಾವ ಸೋದರನ ಮೊಮ್ಮಗ ರಾಮಚಂದ್ರ ಅವರನ್ನು ದತ್ತಕಮಗ ಮಾಡಿಕೊಂಡರು.ರಾಮಚಂದ್ರ ಅವರು ಅವಿವಾಹಿತ. ಲಿಂಗೋ(ಪಂಪಣ್ಣ ಉಫ್೯ ಪಂಪಾಪತಿ) ಅವರ ಕೊನೆಯ ಮಗ ರಾಮಚಂದ್ರ(ರಾಮಪ್ಪಜ್ಜ) ಅವರಿಗೆ ಸಂತಾನವಿರಲಿಲ್ಲ.
9ನೇ ತಲೆಮಾರಿನತ್ತ ಮುನ್ನುಗ್ಗುತ್ತಿರುವ ಈ ವಂಶವೃಕ್ಷದಲ್ಲಿ ಬರೀ ಪುರುಷರಿಗೆ ಪ್ರಾಧಾನ್ಯತೆ ಇದೆ.ಆಗ ಪಿತೃಪ್ರಧಾನ ಕುಟುಂಬವಿತ್ತು.ಇದೇ ರೀತಿಯಾಗಿ ಮೇಲಿನಮನೆ ಘರಾಣೆಯಂತೆ ಕೆಳಗಿನಮನೆ ವಂಶಾವಳಿಯನ್ನು ಬರೆದಿಡಲಾಗಿದೆ.ಅವರಲ್ಲಿ ಪ್ರಮುಖರಾದವರು ವಿರೂಪಾಕ್ಚ.ಅನಂತರಾವ್.ದೇಸಾಯಿ.ಅವರು ದತ್ತಕಕಾಯ್ದೆ ವಿರುದ್ಧ ಬ್ರಿಟಿಷರ ವಿರುದ್ಧ ಹೋರಾಡಿದ್ದರು.ಮುಂದೆ ಗೋವಾವಿಮೋಚನಾ ಚಳವಳಿಯಲ್ಲಿ ಭಾಗವಹಿಸಿದ್ದರು.ಇವರಿಗೆ ಸ್ವಾತಂತ್ರ್ಯಯೋಧರ ಪಿಂಚಣಿ ಬರುತ್ತಿತ್ತು.ಇನ್ನೋವ೯ರು ದೇಸಾಯಿ ದತ್ತಮೂತಿ೯.ಭೀಮರಾವ್. ಇವರು ಸಾಹಿತಿಗಳಾಗಿದ್ದರು.ದ.ರಾ.ಬೇಂದ್ರೆ ಆಪ್ತರಲ್ಲಿ ಒಬ್ಬರಾಗಿದ್ದರು.ಇವರು ಆಗ ಸುಲಲಿತವಾಗಿ ಆಂಗ್ಲ ಭಾಷೆ ಬರೆಯುವ,ಮಾತಾಡುವ ಪಾಂಡಿತ್ಯವಿತ್ತು.ಕೆಲ ಇಂಗ್ಲಿಷ್ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಆ ಕಾಲದಲ್ಲಿ ಶ್ರೇಷ್ಠ ಅನುವಾದಕರಾಗಿದ್ದಾರೆ.ಇವರು ಸಂಸ್ಕೃತದಲ್ಲಿ ಪಂಡಿತರು.ದೇಶಪ್ರೇಮ ಲೇಖನಗಳನ್ನು ಬರೆಯುತ್ತಿದ್ದರು.ಇವರ ಕಾವ್ಯಾಮ "ದೇವದತ್ತ"ಆಗಿತ್ತು.
ಇವರ ವಾಡೆಗೆ ಹಂಪೆ ಗೋಪುರದ ಮುಖ್ಯ ಗೋಪುರ ನಿಮಾ೯ಪಕ ಬಿಷ್ಟಪ್ಪಯ್ಯ ಮಹಾಪುರುಷರು,ಸಮಥ೯ ರಾಮದಾಸ ಮುನಿಗಳು ಆಗಮಿಸಿ ಅಶೀವ೯ದಿಸಿದ್ದರು.ದೇಸಾಯರ ಸಂತಾನ ಸಮಸ್ಯೆ ಪರಿಹರಿಸಿ ನಂದೀಶ್ವರನನ್ನು ಪ್ರತಿಷ್ಟಾಪಿಸಿದರು.ಅದರಂತೆ ಭಕ್ತಿ-ಶಕ್ತಿಯ ದ್ಯೋತಕವಾಗಿ ಮಾರುತಿ ದೇವಸ್ಥಾನದ ಪಕ್ಕದಲ್ಲಿ ಗರಡಿಮನೆಯ ಸ್ಥಾಪಿಸಿದ್ದು ಶ್ರೀ. ಸಮಥ೯ ರಾಮದಾಸರು.
ಇಷ್ಟೆಲ್ಲಾವಿವರ ನೀಡಿದವರು ಮನೆತನದ ಹಿರಿಯರಾದ ಬಸವಂತರಾವ್.ಕೃಷ್ಣಾಜಿ.ದೇಶಕುಲಕಣಿ೯.
-ಹನುಮಂತ.ಮ.ದೇಶಕುಲಕಣಿ೯
ಸಾ.ಭೋಗೇನಾಗರಕೊಪ್ಪ-581196

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ