ಗುರುವಾರ, ಜುಲೈ 13, 2017

ಒಂದು ಸಲ ಅಣ್ಣ - ತಮ್ಮಂದಿಬ್ಬರು ಸಮುದ್ರ ತೀರದಲ್ಲಿ ಯಾವುದೋ ವಿಷಯಕ್ಕಾಗಿ ಜಗಳ ಆಡುತ್ತಿರುತ್ತಾರೆ. ಆಗ ಅಣ್ಣನು ತಮ್ಮನ ಕೆನ್ನೆಗೆ ಹೊಡೆದಾಗ ತಮ್ಮನು ಏನು ಹೇಳುವುದಿಲ್ಲ. ಬದಲಾಗಿ ಮರಳಿನ ಮೇಲೆ ಈ ರೀತಿಯಾಗಿ ಬರೆಯುತ್ತಾನೆ... " ಇವತ್ತು ನನ್ನ ಅಣ್ಣ ನನ್ನ ಕೆನ್ನೆಗೆ ಹೊಡೆದ." 
ಮತ್ತೇ ಮಾರನೆಯ ದಿನ ಸ್ನಾನ ಮಾಡಲು ಸಮುದ್ರಕ್ಕೆ ಹೋದಾಗ ತಮ್ಮ ಆಕಸ್ಮಿಕವಾಗಿ ಸಮುದ್ರದಲ್ಲಿ ಮುಳುಗಿ ಹೋಗುತ್ತಿರುತ್ತಾನೆ. ಆಗ ಅಣ್ಣನು ತಮ್ಮನ ಪ್ರಾಣವನ್ನು ರಕ್ಷಿಸುತ್ತಾನೆ. ಆಮೇಲೆ ತಮ್ಮನು ಕಲ್ಲಿನ ಮೇಲೆ ಈ ರೀತಿಯಾಗಿ ಬರೆಯುತ್ತಾನೆ... " ಇವತ್ತು ನನ್ನ ಅಣ್ಣ ನನ್ನ ಪ್ರಾಣವನ್ನು ರಕ್ಷಿಸಿದ."

ಅಣ್ಣ: ನಿನ್ನೆ ಹೊಡೆದಾಗ ಮರಳಿನ ಮೇಲೆ ಬರೆದೆ ಹಾಗೂ ಇವತ್ತು ಪ್ರಾಣ ಉಳಿಸಿದಾಗ ಕಲ್ಲಿನ ಮೇಲೆ ಬರೆದೆ ಈ ರೀತಿ ಯಾಕೆ?

ತಮ್ಮ:  ನಮಗೆ ಯಾರಾದರೂ ದುಃಖವನ್ನು ಕೊಟ್ಟರೆ ಅದನ್ನು ಮರಳಿನ ಮೇಲೆ ಬರೆದಿಡಬೇಕು. ಏಕೆಂದರೆ ಅದು ಬಹು ಬೇಗನೆ ಅಳಿಸಿ ಹೋಗುತ್ತದೆ. ಆದರೆ ನಮಗೆ ಯಾರಾದರೂ ಒಳ್ಳೆಯದು ಮಾಡಿದರೆ ಅದನ್ನು ಕಲ್ಲಿನ ಮೇಲೆ ಬರೆದಿಡಬೇಕು. ಏಕೆಂದರೆ ಅದು ಯಾವತ್ತು ಅಳಿಸಿ ಹೋಗುವುದಿಲ್ಲ. 

*ಒಳಾರ್ಥ: ನಮಗೆ ಏನಾದರೂ ಕೆಟ್ಟದ್ದು ಆದರೆ ಅದನ್ನು ಕೂಡಲೇ ಮರೆಯಬೇಕು, ಒಳ್ಳೆಯದು ಆದರೆ ಯಾವಾಗಲೂ ನೆನಪಿನಲ್ಲಿಡಬೇಕು.*

ಹನುಮಂತ. ಮ. ದೇಶಕುಲಕಣಿ೯
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ
   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ