ಸೋಮವಾರ, ಮೇ 4, 2020

ಶಿವಾನಂದ ಲಹರೀ ಮೂಲ ಶ್ಲೋಕ ಹಾಗೂ ತಾತ್ಪರ್ಯ ಸಹಿತ* ಗಿರಿಜಾ.ಎಸ್.ದೇಶಪಾಂಡೆ.ಬೆಂಗಳೂರು

*ಆದಿ ಶಂಕರಾಚಾರ್ಯ ಕೃತ ಶಿವಾನಂದ ಲಹರೀ ಮೂಲ ಶ್ಲೋಕ ಹಾಗೂ ತಾತ್ಪರ್ಯ ಸಹಿತ*   ಈ ಭಗವಂತನ ಸೃಷ್ಟಿಯಲ್ಲಿ ಮೊಟ್ಟಮೊದಲು ಜನಿಸಿದ್ದು ನಾರಾ. ನಾರಾ ಅಂದರೆ ಜಲ. ಈ ಜಲದಿಂದ ಜನಿಸಿದವನೇ ಬಲದೀಶನಾದ ನಾರಾಯಣ.ಈ ನಮ್ಮ ಸೃಷ್ಟಿಯಲ್ಲಿ ಆದಿ ದಂಪತಿಗಳೆಂದರೆ ಪಾರ್ವತಿಪರಮೇಶ್ವರರು. ಆದಿ ಪ್ರಕೃತಿ ಆದಿಪರ ಶಕ್ತಿಯಾದ ಪಾರ್ವತೀದೇವಿ ,ಗೌರಿ ಎನ್ನುವ ಹೆಸರಿನಿಂದ ಕರೆಯುತ್ತೇವೆ. ಸೃಷ್ಟಿಯಲ್ಲಿ ಆದಿ ಮದವಣಗಿತ್ತಿಎಂದರೆ ಅದು ಗೌರೀದೇವಿ. ಗೌರೀಪೂಜೆಯನ್ನು ಮದುವೆ ಸಮಯದಲ್ಲಿ ಮಾಡಿಸುವ ಪದ್ಧತಿ ನಮ್ಮಲ್ಲಿದೆ. ಶಿವನ ದೇವಾಲಯದಲ್ಲಿ ಶಿವನು ಲಿಂಗಾಕಾರದಲ್ಲಿ ಇರುತ್ತಾನೆ. ಲಿಂಗಾಕಾರದ ಕೆಳಗಿನ ಭಾಗದಲ್ಲಿರುವ ಪಾನವಾಟವೇ ಪಾರ್ವತಿ. ಮೇಲಿನ ಭಾಗವೇ ಪರಮೇಶ್ವರ. ಶಿವ ಪರ್ವತಿಯರ ಏಕತ್ವ ರೂಪವೇ ಶಿವಲಿಂಗ. ಅನ್ಯೋನ್ಯ ದಾಂಪತ್ಯಕ್ಕೆ ಆದರ್ಶ ,ಶಾಶ್ವತ ಬಾಂಧವ್ಯಕ್ಕೆ ಪ್ರತಿರೂಪವಾಗಿ ನಿಲ್ಲುತ್ತಾರೆ ಆದಿ ದಂಪತಿಗಳಾದ ಶಿವ ಪಾರ್ವತಿಯರು. ಆದ್ದರಿಂದ ಶಾಶ್ವತ ದಾಂಪತ್ಯ ಪಡೆಯುವದಕ್ಕೆ ಪಾರ್ವತಿ ಪರಮೇಶ್ವರರನ್ನು ಪೂಜಿಸುತ್ತಾರೆ. ನಮ್ಮ ವೇದದಲ್ಲಿ ",ಜಗತ್ ಪಿತರಂ ವಂದೇ ಪಾರ್ವತಿ ಪರಮೇಶ್ವರ " ಎಂದು ಹೇಳಿದ್ದಾರೆ.  ಶ್ರೀ ಶಂಕರ ಭಗವತ್ಪಾದರು ಪ್ರಕೃತಿ ಪುರುಷ ಸ್ವರೂಪಿಗಳೂ ,ಜಗದ್ರಕ್ಷಕರಾದ  ಪಾರ್ವತಿ ಪರಮೇಶ್ವರರನ್ನು ಸ್ತುತಿಸುವ ಶಿವಭಕ್ತಿಯ ಮಹಾಪೂರವನ್ನು ತಮ್ಮ "ಶಿವಾನಂದ ಲಹರಿ ಕೃತಿಯಲ್ಲಿ ಭಗವದ್ಭಕ್ತಿಯ ಸುಂದರ ಹೊನಲನ್ನಾಗಿ ಹರಿಸಿದ್ದಾರೆ.       ಈ ಮಹಾನ್ ಕೃತಿಯಲ್ಲಿ ಅಲಂಕಾರಿಕ ಗುಣ ಓತಪ್ರೋತವಾಗಿ ಹರಿದಿದೆ. ಶಬ್ದಗಳ ಸಂಗೀತಮಯ ಜೋಡಣೆ ,ಔಚಿತ್ಯಪೂರ್ಣ ಬಳಕೆ , ಶಿವಾನಂದ ಲಹರಿಯು ಕಾವ್ಯಲಹರಿಯಾಗಿದೆ. ಅದ್ವೈತ ತತ್ವಗಳ ಮೂಲಸ್ತಂಬಗಳಾದ ಜೀವ ಪರಮಾತ್ಮರ ಏಕತೆ ,ಜ್ಞಾನಸಾಧನೆ, ಭಕ್ತಿಯ ಶ್ರೇಷ್ಟತೆ, ವೈರಾಗ್ಯದ ಮಹತ್ವಗಳನ್ನು ಆಚಾರ್ಯರು ಶಿವಾನಂದ ಲಹರಿಯ ಪ್ರತಿ ಶ್ಲೋಕದಲ್ಲಿ ತುಂಬಿಸಿದ್ದಾರೆ.     ಮುಂದಿನವಾರ ಶ್ಲೋಕಗಳ ಮಹಿಮೆ ಅವುಗಳ ಸಾರ ,ಮಹತ್ವಗಳೊಂದಿಗೆ  ನಿಮ್ಮ ಮುಂದೆ ಬರುವೆ. ಧನ್ಯವಾದಗಳೊಂದಿಗೆಶ್ರೀಮತಿ.ಗಿರಿಜಾ.ಎಸ್.ದೇಶಪಾಂಡೆ. (ಮೀರಾ.ಪ್ರ.ಜೋಶಿ,)ಬೆಂಗಳೂರು..   ಈ ಭಗವಂತನ ಸೃಷ್ಟಿಯಲ್ಲಿ ಮೊಟ್ಟಮೊದಲು ಜನಿಸಿದ್ದು ನಾರಾ. ನಾರಾ ಅಂದರೆ ಜಲ. ಈ ಜಲದಿಂದ ಜನಿಸಿದವನೇ ಬಲದೀಶನಾದ ನಾರಾಯಣ.ಈ ನಮ್ಮ ಸೃಷ್ಟಿಯಲ್ಲಿ ಆದಿ ದಂಪತಿಗಳೆಂದರೆ ಪಾರ್ವತಿಪರಮೇಶ್ವರರು. ಆದಿ ಪ್ರಕೃತಿ ಆದಿಪರ ಶಕ್ತಿಯಾದ ಪಾರ್ವತೀದೇವಿ ,ಗೌರಿ ಎನ್ನುವ ಹೆಸರಿನಿಂದ ಕರೆಯುತ್ತೇವೆ. ಸೃಷ್ಟಿಯಲ್ಲಿ ಆದಿ ಮದವಣಗಿತ್ತಿಎಂದರೆ ಅದು ಗೌರೀದೇವಿ. ಗೌರೀಪೂಜೆಯನ್ನು ಮದುವೆ ಸಮಯದಲ್ಲಿ ಮಾಡಿಸುವ ಪದ್ಧತಿ ನಮ್ಮಲ್ಲಿದೆ. ಶಿವನ ದೇವಾಲಯದಲ್ಲಿ ಶಿವನು ಲಿಂಗಾಕಾರದಲ್ಲಿ ಇರುತ್ತಾನೆ. ಲಿಂಗಾಕಾರದ ಕೆಳಗಿನ ಭಾಗದಲ್ಲಿರುವ ಪಾನವಾಟವೇ ಪಾರ್ವತಿ. ಮೇಲಿನ ಭಾಗವೇ ಪರಮೇಶ್ವರ. ಶಿವ ಪರ್ವತಿಯರ ಏಕತ್ವ ರೂಪವೇ ಶಿವಲಿಂಗ. ಅನ್ಯೋನ್ಯ ದಾಂಪತ್ಯಕ್ಕೆ ಆದರ್ಶ ,ಶಾಶ್ವತ ಬಾಂಧವ್ಯಕ್ಕೆ ಪ್ರತಿರೂಪವಾಗಿ ನಿಲ್ಲುತ್ತಾರೆ ಆದಿ ದಂಪತಿಗಳಾದ ಶಿವ ಪಾರ್ವತಿಯರು. ಆದ್ದರಿಂದ ಶಾಶ್ವತ ದಾಂಪತ್ಯ ಪಡೆಯುವದಕ್ಕೆ ಪಾರ್ವತಿ ಪರಮೇಶ್ವರರನ್ನು ಪೂಜಿಸುತ್ತಾರೆ. ನಮ್ಮ ವೇದದಲ್ಲಿ ",ಜಗತ್ ಪಿತರಂ ವಂದೇ ಪಾರ್ವತಿ ಪರಮೇಶ್ವರ " ಎಂದು ಹೇಳಿದ್ದಾರೆ.       ಶ್ರೀ ಶಂಕರ ಭಗವತ್ಪಾದರು ಪ್ರಕೃತಿ ಪುರುಷ ಸ್ವರೂಪಿಗಳೂ ,ಜಗದ್ರಕ್ಷಕರಾದ  ಪಾರ್ವತಿ ಪರಮೇಶ್ವರರನ್ನು ಸ್ತುತಿಸುವ ಶಿವಭಕ್ತಿಯ ಮಹಾಪೂರವನ್ನು ತಮ್ಮ "ಶಿವಾನಂದ ಲಹರಿ ಕೃತಿಯಲ್ಲಿ ಭಗವದ್ಭಕ್ತಿಯ ಸುಂದರ ಹೊನಲನ್ನಾಗಿ ಹರಿಸಿದ್ದಾರೆ.       ಈ ಮಹಾನ್ ಕೃತಿಯಲ್ಲಿ ಅಲಂಕಾರಿಕ ಗುಣ ಓತಪ್ರೋತವಾಗಿ ಹರಿದಿದೆ. ಶಬ್ದಗಳ ಸಂಗೀತಮಯ ಜೋಡಣೆ ,ಔಚಿತ್ಯಪೂರ್ಣ ಬಳಕೆ , ಶಿವಾನಂದ ಲಹರಿಯು ಕಾವ್ಯಲಹರಿಯಾಗಿದೆ. ಅದ್ವೈತ ತತ್ವಗಳ ಮೂಲಸ್ತಂಬಗಳಾದ ಜೀವ ಪರಮಾತ್ಮರ ಏಕತೆ ,ಜ್ಞಾನಸಾಧನೆ, ಭಕ್ತಿಯ ಶ್ರೇಷ್ಟತೆ, ವೈರಾಗ್ಯದ ಮಹತ್ವಗಳನ್ನು ಆಚಾರ್ಯರು ಶಿವಾನಂದ ಲಹರಿಯ ಪ್ರತಿ ಶ್ಲೋಕದಲ್ಲಿ ತುಂಬಿಸಿದ್ದಾರೆ.     ಮುಂದಿನವಾರ ಶ್ಲೋಕಗಳ ಮಹಿಮೆ ಅವುಗಳ ಸಾರ ,ಮಹತ್ವಗಳೊಂದಿಗೆ  ನಿಮ್ಮ ಮುಂದೆ ಬರುವೆ. ಧನ್ಯವಾದಗಳೊಂದಿಗೆಶ್ರೀಮತಿ.ಗಿರಿಜಾ.ಎಸ್.ದೇಶಪಾಂಡೆ. (ಮೀರಾ.ಪ್ರ.ಜೋಶಿ,)ಬೆಂಗಳೂರು. : ಶ್ರೀ ಶಂಕರಾಚಾರ್ಯರು ಅದ್ವಿತ ತತ್ವಪ್ರತಿಪಾದಕವಾದ ಅನೇಕ ಗ್ರಂಥಗಳನ್ನು ಬ್ರಹ್ಮಸೂತ್ರ,ಗೀತೆ,ಉಪನಿಷತ್ತುಗಳಿಗೆ ಭಾಷ್ಯಗಳನ್ನು ರಚಿಸಿದಲ್ಲದೇ ಭಕ್ತಿಭಾವಪೂರ್ಣವಾದ ಅತ್ಯುತ್ತಮ ಕಾವ್ಯಗುಣಗಳುಳ್ಳ ಅನೇಕ ದೇವತಾ ಸ್ತೋತ್ರಗಳನ್ನು ,ಅಸಂಖ್ಯ ಪ್ರಕರಣಗಳನ್ನು ರಚಿಸಿ ಲೋಕೋತ್ತರವಾದ ಕೀರ್ತಿಗಳಿಸಿದರು. ಇದರಲ್ಲಿ ಅವರು ರಚಿಸಿದ ಮಹಾಗಣೇಶ ಪಂಚರತ್ನಮ್ ಶ್ಲೋಕ ಮತ್ತು ಅರ್ಥ ಮತ್ತು ಪ್ರಥಮ ಪೂಜಿತ ಗಣೇಶನ ಮಹತ್ವದ ಬಗ್ಗೆ ತಿಳಿಯುವದು ಮುಖ್ಯವಾಗಿದೆ.    ‌*ಪ್ರಥಮ ಪೂಜಿತ ಗಣೇಶ*ತನ್ನ ಮನದಿಂದ ಉದಿಸಿದ ಗಣೇಶನೇ ಪ್ರಥಮ ಪೂಜಿತನೆಂದು ಶಿವನು ನಿರ್ಧರಿಸಿದನು. ಯಾರೇ ಜೀವನದಲ್ಲಿ ಯಶಸ್ಸು ಬಯಸಿದರೆ ಗಣೇಶನನ್ನು ಪೂಜಿಸಬೇಕೆಂದು ಗಣೇಶನಿಗೆ ಪ್ರಮುಖ್ಯತೆ ಕೊಡದೇ ಇತರ ದೇವತೆಗಳನ್ನು ಪೂಜಿಸಿದರೆ ಫಲ ದೊರಕದು ಎಂದು ಶಿವ ಸಂಕಲ್ಪಿಸಿದನು. ಇದಾದ ನಂತರ ಶಿವನು ತ್ರಿಪುರಪಟ್ಟಣಕ್ಕೆ ರಾಕ್ಷಸರೊಂದಿಗೆ ಯುದ್ಧಮಾಡಲು ಹೊರಟನು. ಆದರೆ ಯುದ್ಧ ಸನ್ನದ್ಧ ಶಿವ ತಾನೇ ರೂಪಿಸಿದ ನಿಯಮ ಮರೆತುಬಿಟ್ಟನು. ಯುದ್ಧದಲ್ಲಿ ಸೋತು ಭಾರೀ ಮುಖಭಂಗವಾಗುವ ಹಂತಕ್ಕೆ ಶಿವತಲುಪಿದಾಗ ಶಿವನ ರಥದ ಚಕ್ರದ ಗೂಟ ಮುರಿದು ರಥ ನಿಂತಿತು. ಆಗ ಶಿವನಿಗೆ ಗಣಪತಿ ಪೂಜೆ ಮರೆತದ್ದು ನೆನಪಾಗಿ ಆ ಕಷ್ಟಕ್ಕೆ ಕಾರಣ ಅರಿತ ಶಿವ ಗಣಪತಿಯನ್ನು ಪೂಜಿಸಲು ತ್ರಿಪುರಾಂತಕ ಯುದ್ಧವನ್ನು ಯಶಸ್ವಿಯಾಗಿ ಜಯಗಳಿಸಿದನು.      ಶ್ರೀ ಗಣೇಶನ ಮಹಾಗಣೇಶ ಪಂಚರತ್ನಮ್ಮುದಾ ಕರಾತ್ತಮೋದಕಂ ಸದಾ ವಿಮುಕ್ತಿ ಸಾಧಕಂಕಲಾಧರಾವತಂಸಕಂ ವಿಲಾಸಿಲೋಕರಕ್ಷಕಮ್|ಅನಾಯಕೈಕನಾಯಕಂ ವಿನಾಶಿತೇಭದೈತ್ಯಕಂನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್||೧||ಅರ್ಥ- ನಗುನಗುತ್ತ ಕೈಯಲ್ಲಿ ಯಾವಾಗಲೂ ಕಡುಬನ್ನು ಹಿಡಿದಿರುವ ,ಮೋಕ್ಷ ಈಯುವದರಲ್ಲಿ ಆಸಕ್ತನಾದ ,ಚಂದ್ರನನ್ನು ಆಭರಣದಂತೆ ತಲೆಯಲ್ಲಿ ಧರಿಸಿರುವ ,ಲೀಲೆಯಿಂದಲೇ ಜನರನ್ನು ರಕ್ಷಿಸುವ ,ಅನಾಥರಿಗೆ ಒಂದೇ ದಿಕ್ಕಾದ ,ಗಜಾಸುರನನ್ನು ಸಂಹರಿಸಿದ ಮತ್ತು ನಮಸ್ಕರಿಸಿದವರ ತೊಂದರೆಗಳನ್ನು ಬೇಗನೇ ನಾಶಮಾಡುವ ವಿನಾಯಕನನ್ನು ನಮಸ್ಕರಿಸುತ್ತೇನೆ. ನತೇತರಾತಿಭೀಕರಂ ನವೋದಿತಾರ್ಕಭಾಸ್ವರಂನಮತ್ಸರಾರಿನಿರ್ಜರಂ ನತಾಧಿಕಾಪದುದ್ಧರಮ್|ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರಂತರಮ್||೨||ಅರ್ಥ- ನಮಸ್ಕರಿಸದೇ ಉದ್ಧತರಾದವರಿಗೆ ಬಹುಭಯಂಕರನಾದ ,ಆಗತಾನೇ ಉದಯಿಸಿದ ಸೂರ್ಯನಂತೆ ಹೊಳೆಯುತ್ತಿರುವ ,ದೇವದಾನವರಿಂದ ವಂದ್ಯನಾದ ,ನಮಸ್ಕರಿಸಿದ ಭಕ್ತರಸಂಕಟವೆಲ್ಲವನ್ನೂ ನಿವಾರಿಸುವ ,ಮಹೇಶ್ವರನೂ ಮತ್ತು ಅತ್ಯಂತ ಶ್ರೇಷ್ಟನೂ ಆದ ವಿನಾಯಕನನ್ನು ಯಾವಾಗಲೂ ನಮಸ್ಕರಿಸುತ್ತೇನೆ.ಮುಂದಿನ ನಾಲ್ಕು ಮಹಾಗಣೇಶ ಪಂಚರತ್ನ ಸ್ತೋತ್ರ ಮತ್ತು ಅರ್ಥ ತಾತ್ಪರ್ಯದೊಂದಿಗೆ ಮುಂದಿನವಾರ ಅತೀಯಾದ ಭಕ್ತಿಇಂದ ವ್ಯಕ್ತಪಡಿಸುವೆ. ಶ್ರೀಮತಿ.ಗಿರಿಜಾ.ಎಸ್.ದೇಶಪಾಂಡೆ.ಬೆಂಗಳೂರು. ಶಂಕರ ಭಗವತ್ಪಾದರಿಂದ ರಚಿಸಲ್ಪಟ್ಟ ಶ್ರೀ ಮಹಾಗಣೇಶ ಪಂಚರತ್ನ ಸ್ತೋತ್ರ ಬಹಳ ಪ್ರಸಿದ್ಧವಾದುದ್ದಲ್ಲದೇ ಸುಲಭವಾಗಿ ಕಲಿಯಲೂ ಬಹುದು.        ನಮ್ಮ ಭಾರತೀಯ ಪರಂಪರೆಯಲ್ಲಿ ಮೊದಲ ಪೂಜೆ ಸ್ವೀಕರಿಸುವವನು ವಿಘ್ನೇಶ್ವರ,ಗಣಪತಿ,ಬೆನಕ, ಮೋದಕಪ್ರೀಯ, ಲಂಭೋದರ ಎಂದು ಕರೆಯುತ್ತೇವೆ. ತಾಯಿ ಪಾರ್ವತಿ ಬಾಗಿಲಲ್ಲಿ ಕಾವಲಿಗೆ ನಿಲ್ಲಿಸಿದ್ದಳು ಎಂದು ಪುರಾಣ ಕಥೆಗಳಲ್ಲಿ ತಿಳಿಯಲ್ಪಟ್ಟಿದೆ. ಅದರ ಅರ್ಥ ಗಣೇಶ ನಮ್ಮನ್ನು ಕಾಪಾಡುವವನು,ರಕ್ಷಿಸುವವನು, ನಮ್ಮ ಕಷ್ಟಗಳನ್ನು ನಿವಾರಿಸುವವನು ಎಂದಾಗುತ್ತದೆ. ಗಣಪತಿ ಅತೀ ಬುದ್ಧಿಶಾಲಿ ಸೂಕ್ಷ್ಮತರಂಗಗಳನ್ನು ಅತೀ ಸೂಕ್ಷ್ಮವಾದ ಶಬ್ದತರಂಗಗಳನ್ನು ಗ್ರಹಿಸಬಲ್ಲನು. ಮುಂದಾಗುವ ಅಪಾಯದ ಸೂಚನೆ ಬೇರೆಲ್ಲ ಪ್ರಾಣಿಗಳಿಗಿಂತ ಮೊದಲೇ ಗ್ರಹಿಸುವ ಶಕ್ತಿಉಳ್ಳದ್ದು ಆನೆ. ಅಂತಹ ಆನೆಯ ಮೊಗದವನಾದ ಗಣೇಶ ಕೂಡ ಮುಂದಾಗುವ ನಮ್ಮೆಲ್ಲ ಅಪಾಯಗಳನ್ನು ಗ್ರಹಿಸಿ ನಮ್ಮನ್ನು ಪೊರೆಯುವನೆಂಬ ನಂಬಿಕೆ ನಮ್ಮಲ್ಲಿ ತುಂಬಾ ಆಳವಾಗಿ ನೆಲೆಸಿದೆ . ಆ ರೀತಿಯ ಶಕ್ತಿ ಹೊಂದಿದ ಮುಂದಿನ ನಾಲ್ಕು ಪಂಚರತ್ನದ ಶ್ಲೋಕಗಳು ಅದರ ಅರ್ಥ ತಾತ್ಪರ್ಯ ನಿಮ್ಮ ಮುಂದೆ ಇಡುವೆ.*ಸಮಸ್ತ ಲೋಕ ಶಂಕರಂ ನಿರಸ್ತದೈತ್ಯ ಕುಂಜರಂದರೇತರೋದರಂ ವರಂ ವರೇಭವಕ್ತ್ರಮಕ್ಷರಮ್|ಕೃಪಾಕರಂ ಕ್ಷಾಮಾಕರಂ ಮುದಾಕರಂ ಯಶಸ್ಕರಂ ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಮ್||೩||ಅರ್ಥ- ಸರ್ವಲೋಕಕ್ಕೂ ಮಂಗಳಕರನೂ ,ಕುಂಜರಾಸುರನಾಶಕನೂ, ಲಂಭೋಧರನೂ, ಸರ್ವೋತ್ತಮನೂ, ಶ್ರೇಷ್ಟವಾದ ಶನೆಯಮುಖವುಳ್ಳವನೂ ,ಅವಿನಾಶಿಯೂ ಕೃಪಾಕರನೂ , ಸಂತೋಷದಾಯಕನೂ, ಕೀರ್ತಿಪದನೂ, ನಮಸ್ಕರಿಸಿದವರಿಗೆ ಪರಿಶುದ್ಧಾಂತ:ಕರಣವನ್ನು ದಯಪಾಲಿಸುವವನೂ, ಮತ್ತು ತೇಜೋಮಯನೂ ಆದ ವಿನಾಯಕನನ್ನು ನಮಿಸುತ್ತೇನೆ.ಅಕಿಂತನಾರ್ತಿಮಾರ್ಜನಂ ಚಿರಂತನೋಕ್ತಿಭಾಜನಂಪುರಾರಿಪೂರ್ವನಂದನಂ ಸುರಾರಿಗರ್ವಚರ್ವಣಂ|ಪ್ರಪಂಚನಾಶಭೀಷಣಂ ಧನಂಜಯದಿಭೂಷಣಂಕಪೋಲದಾನವಾರಣಂ ಭಜೇಪುರಾಣವಾರಣಮ್||೪||ಅರ್ಥ- ನಿರ್ಗತಿಕರಾದ ಭಕ್ತರ ನೋವನ್ನು ಕಳೆಯುವ, ವೇದಪ್ರತಿಪಾದ್ಯನಾದ ರಾಕ್ಷಸರ ಗರ್ವ ಅಳಿಸಿದ ,ಪ್ರಪಂಚದ ಲಯಕಾರ್ಯದಲ್ಲಿ ಭಯಂಕರನಾದ ,ಅಗ್ನಿಮೊದಲಾದ ದೇವತೆಗಳಿಗೆ ಅಲಂಕಾರಪ್ರಾಯನಾದ, ಗಂಡಸ್ಥಲದಲ್ಲಿ ಸುರಿಯುತ್ತಿರುವ ಮದೋದಕವನ್ನು ಸೊಂಡಿಲಿನಿಂದ ವರೆಸೆಕೊಳ್ಳುತ್ತಿರುವ ,ಪುರಾತನ ವಾರಣನಾದ ವಿನಾಯಕನನ್ನು ವಂದಿಸುತ್ತೇನೆ.ನಿತಾಂತಕಾಂತದಂತಕಾಂತಮಂತಕಾತ್ಮಜಂಅಚಿಂತ್ಯರೂಪಮಂತಹೀನಮಂತರಾಯಕೃಂತನಮ್|ಹೃದಂತರೇ ನಿರಂತರಮಂ ವಸಂತಮೇವಯೋಗಿನಾಂತಮೇಕದಂತಮೇಕಮೇವ ಚಿಂತಯಾಮಿ ಸಂತತಮ್||೫||ಅರ್ಥ- ವಿಶೇಷವಾಗಿ ಹೊಳೆಯುತ್ತಿರುವ ದಂತಕಾಂತಿಯುಳ್ಳವನೂ ,ಈಶ್ವರನ ಪುತ್ರನೂ ,ಅಚಿಂತ್ಯರೂಪನೂ, ಅವನಾಶಿಯೂ,ವಿಘ್ನಧ್ವಂಸಿಯೂ, ಮತ್ತು ಯೋಗಿಗಳ ಹೃದಯದಲ್ಲಿ ಯಾವಾಗಲೂ ವಾಸಿಸುವವನೂ ಆದ ಏಕದಂತನೊಬ್ಬನನ್ನೇ ಯಾವಾಗಲೂ ಚಿಂತಿಸುತ್ತೇನೆ.ಮಹಾಗಣೇಶ ಪಂಚರತ್ನಮಾದರೇಣ ಯೋನ್ವಹಂಪ್ರಜತ್ಪಲೀ ಪ್ರಭಾತಕೇ ಹೃದಿ ಸ್ಮರನ್ಗಣೇಶ್ವರಮ್|ಆರೋಗಾಮದೋಷತಾಂ ಸುಸಾಹಿತೀಂ ಸುಪುತ್ರತಾಂಸಮೀಹಿತಾಯುರಷ್ಟಭೂತಿಮಭ್ಯುಪೈತಿ ಸೋಚಿರಾತ್||೬||ಪ್ರತಿದಿನವೂ ಪ್ರಾತಃಕಾಲದಲ್ಲಿ ಗಣೇಶ್ವರನನ್ನು ಸ್ಮರಿಸುತ್ತ ಮಹಾಗಣೇಶ ಪಂಚರತ್ನವನ್ನು ಆದರದಿಂದ ಪಠಿಸುವವರಿಗೆ ಆರೋಗ್ಯ,ಸದ್ಗುಣ ,ಪಾಂಡಿತ್ಯ, ಸತ್ಸಂತಾನ ,ಬಯಿಸಿದ ಪೂರ್ಣಾಯುಷ್ಯ ಮತ್ತು ಅಸ್ಟೈಶ್ವರ್ಯಗಳು ಲಭಿಸುವವು.**************************ಶ್ರೀಮತಿ.ಗಿರಿಜಾ.ಎಸ್.ದೇಶಪಾಂಡೆ. [4/20, 13:51] Girija DESHPANDE: ಅಂಕಣ-೪ಶ್ರೀ ಶಂಕರ ಭಗವತ್ಪಾದರು ಹಲವಾರು ಭಕ್ತಿಪೂರ್ಣ ಸ್ತೋತ್ರಗಳನ್ನು ರಚಿಸಿ ,ವೇದಾಂತದ ಗಹನ ತತ್ವಗಳನ್ನು ಭಕ್ತಿ ಮಾರ್ಗದ ಮೂಲಕ ಜನಸಾಮಾನ್ಯರಿಗೂ ತಿಳಿಯುವಂತೆ ಪ್ರಚುರಪಡಿಸಿದ್ದಾರೆ. ಆಚಾರ್ಯರ ಸ್ತೋತ್ರ ಸಾಹಿತ್ಯದಲ್ಲಿ ಭಜಗೋವಿಂದಂ ಸ್ತೋತ್ರ, ಸೌಂದರ್ಯಲಹರಿ, ಕನಕಧಾರಾ ಸ್ತೋತ್ರ, ಶಿವಾನಂದ ಲಹರಿ ಕೃತಿಗಳು ನಮ್ಮ ದೇಶದ್ದಾದ್ಯಂತ ಜನಾದರಣೀಯವಾಗಿವೆ.       ಶಿವಾನಂದ ಲಹರಿಯು ಪೂರ್ಣ ಭಕ್ತಿಯ ಧಾರೆಯಾಗಿದೆ. ಇಲ್ಲಿ ಒಟ್ಟು ೧೦೦ ಶ್ಲೋಕಗಳಿವೆ. ಇವು ಬೇರೆ ಬೇರೆ ಛಂದೋರೀತಿಯಲ್ಲಿ ರಚಿತವಾಗಿವೆ. ಅದ್ವೈತ ತತ್ವದ ಸಾರವನ್ನು ಭಕ್ತಿ ಮಾರ್ಗದ ಮೂಲಕ ಇಲ್ಲಿ ಹಂತವಾಗಿ ಹೃದಯಂಗಮವಾಗಿ ನಿರೂಪಿಸಿದ್ದಾರೆ.      ಈ ಕೃತಿಯ ಮೊದಲನೇಯ ಪದ್ಯವು ಮಂಗಳ ಪದ್ಯವಾಗಿದೆ. ಇದರಲ್ಲಿ ಪ್ರಕೃತಿ ಪುರುಷ ಸ್ವರೂಪಿಗಳೂ ,ಜಗದ್ರಕ್ಷಕರೂ ಆದ ಪಾರ್ವತಿ ಪರಮೇಶ್ವರರನ್ನು ಸ್ತುತಿಸಲಾಗಿದೆ. ನಂತರದ ಪದ್ಯಗಳಲ್ಲಿ ಶಿವ ಭಕ್ತಿಯ ಮಹಾಪೂರವನ್ನೇ ಶಂಕರರು ಇಲ್ಲಿಭಗವದ್ಭಕ್ತಿಯ ಸುಂದರ ಹೊನಲನ್ನಾಗಿ ಹರಿಸಿದ್ದಾರೆ.      ಶಿವ ಎಂದರೆ ಪಾರ್ವತಿ ಪತಿಯಾದ ಬರೀ ಶಂಕರನಷ್ಟೆ ಅಲ್ಲ ; ಆತನು ಪರಮಾತ್ಮನೂ ,ಪರಂಜೋತಯೂ, ಆದ ಪರಶಿವನು ಹೌದು ಎಂಬುದನ್ನು ಶಂಕರರು ಇಲ್ಲಿ ನಿರೂಪಿಸಿರುವರು.      ಶಿವಾನಂದ ಲಹರಿಯು ಒಂದು ಕಾವ್ಯ ಲಹರಿಯಾಗಿ ಅದ್ವೈತ ತತ್ವದ ಮೂಲ ಸ್ತಂಬಗಳಾದ ಜೀವ ಪರಮಾತ್ಮರ ಏಕತೆ, ಅವಿದ್ಯಾನಾಶ, ಜ್ಞಾನಸಾಧನೆ, ಭಕ್ತಿಯ ಶ್ರೇಷ್ಟತೆ,ವೈರಾಗ್ಯದ ಮಹತ್ವಗಳನ್ನು ಆಚಾರ್ಯರು ಶಿವಾನಂದ ಲಹರಿಯ ಪ್ರತೀ ಶ್ಲೋಕದಲ್ಲಿ ತುಂಬಿದ್ದಾರೆ.     ಭಗವನ್ ನಾಮ ಸ್ಮರಣೆ ,ಪ್ರಸ್ತುತ ಶಿವಾನಂದ ಲಹರಿಯ ೧೦೦ ಶ್ಲೋಕಗಳನ್ನು ಸರಳ ಕನ್ನಡ ಅನುವಾದದೊಂದಿಗೆ ಜನತೆಗೆ ಅರ್ಪಿಸುತ್ತದ್ದೇನೆ.* ಶಿವಾನಂದಲಹರೀ**ಕಲಾಭ್ಯಾಂ ಚೂಡಾಲಂಕೃತಶಶಿಕಲಾಭ್ಯಾಂ ನಿಜತಪಃ ಫಲಾಭ್ಯಾಂ ಭಕ್ತೇಷು ಪ್ರಕಟಿತಫಲಾಭ್ಯಾಂ ಭವತು ಮೇ|ಶಿವಾಭ್ಯಾಮಸೋಕ್ತತ್ರಿಭುವನಶಿವಾಭ್ಯಂ ಹೃದಿ ಪುನರ್ಭವಾಭ್ಯಾಮಾನಂದಸ್ಪುರದನುಭವಾಭ್ಯಾಂ ನತಿರಿಯಮ್||೧||ಅರ್ಥ- ಕಲಾಸ್ವರೂಪಿಗಳೂ ,ಚಂದ್ರಕಲೆಯನ್ನು ಮುಡಿದವರೂ, ತಮ್ಮ ತಪಃ ಫಲಸ್ವರೂಪರೂ ,ಭಕ್ತರ ಅಭೀಷ್ಟಗಳನು ಅನುಗ್ರಹಿಸುವವರೂ, ಮೂರು ಲೋಕಗಳಿಗೆ ಮಂಗಳವನ್ನುಂಟು ಮಾಡುವವರೂ ,ಭಕ್ತರಹೃದಯವಾಸಿಗಳೂ, ಆನಂದಮಯರೂ ಆದ ಶಿವ ಶಿವೆಯರಿಗೆ ನಮ್ಮ ನಮಸ್ಕಾರಗಳಿರಲಿ. ಶಿವ ಪರ್ವತಿಯರು ಜೊತೆಯಾಗಿ ಇರುವರೆಂಬ ಭಾವನೆಯಿಂದ ಆಚಾರ್ಯ ಶಂಕರರು ಇಬ್ಬರನ್ನೂ ಪ್ರಾರ್ಥಿಸಿದ್ದಾರೆ.ಗಲಂತೀ ಶಂಭೋ ತ್ವಚ್ಚರಿತಸರಿತಃ ಕಿಲ್ಬಿಷರಜೋದಲಂತೀ ಧೀಕುಲ್ಯಾಸರಣಿಷು ಪತಂತೀ ವಿಜಯತಾಮ್|ದಿಶಂತೀ ಸಂಸಾರಭ್ರಮಣಪರಿತಾಪೋಪಶಮನಂವಸಂತೀ ಮಚ್ಚೇತೋಹ್ರದಭುವಿ ಶಿವಾನಂದಲಹರಿ||೨||ಅರ್ಥ- ಹೇ ಶಂಭು! ನಿನ್ನ ಮಹಿಮೆಯ ಚರಿತ್ರೆಯು ನದಿಇಂದ ಕವಲಾಗಿ ಹರಿದು ಪಾಪಕಳೆವ ,ಬುದ್ಧಿಯೆಂಬ ಕಾಲುವೆಯಾಗಿ ಹರಿದು ,ಸಂಸಾರ ತಾಪಕ್ಕೆ ತಂಪೆರೆಯುವ ಈ ಶಿವಾನಂದ ಲಹರಿಯು ನನ್ನ ಮನಸ್ಸಿನ ಮಡುವಿನಲ್ಲಿ ವಾಸಿಸಿ ,ಬೆಳಗಲಿ.ಶ್ರಿಮತಿ.ಗಿರಿಜಾ.ಎಸ್.ದೇಶಪಾಂಡೆ.ಬೆಂಗಳೂರು. ಅಂಕಣ-೬ಇಂದು ಮೊದಲನೇಯ ಶ್ರಾವಣ ಸೋಮವಾರ. ಶಿವಪುರಾಣದ ಪ್ರಕಾರ ಶಿವನಿಗೆ ಪ್ರೀಯವಾದ ಮಾಸವೇ ಶ್ರಾವಣಮಾಸ. ಆದಕಾರಣ ಶ್ರಾವಣ ಮಾಸಾದ್ಯಂತ ಶಿವನ ಆರಾಧನೆ ನಡೆಯುತ್ತದೆ. ಈ ಮಾಸದಲ್ಲಿ ಶಿವನನ್ನು ಆರಾಧಿಸಿದರೆ,ಧ್ಯಾನಿಸಿದರೆ ಅಪೇಕ್ಷೆಗಳೆಲ್ಲವೂ ನೆರವೇರುತ್ತವೆ ಎಂಬುದು ಭಕ್ತರ ನಂಬಿಕೆ. ವಿವಾಹಾಪೇಕ್ಷಿತ ಕನ್ಯೆಯರು ಶ್ರಾವಣ ಸೋಮವಾರದಂದು ವೃತಕೈಗೊಳ್ಳುವ ವಾಡಿಕೆ ಇದೆ. ಶಿವಪುರಾಣದ ಪ್ರಕಾರ ಭಕ್ತನಾದವನು ಶ್ರಾವಣಮಾಸದಲ್ಲಿ ಈ ಎಂಟು ವಸ್ತುಗಳನ್ನು ತನ್ನೊಂದಿಗೆ ಇಟ್ಟುಕೊಂಡು ಪೂಜೆ ಮಾಡಬೇಕು . ಹಾಗೆ ಮಾಡಿದರೆ ಅವರ ಮನೆ ಸುಭೀಕ್ಷವಾಗುತ್ತದೆ. ಆ ಎಂಟು ವಸ್ತುಗಳೆಂದರೆ ರುದ್ರಾಕ್ಷಿ, ಭಸ್ಮ,ಗಂಗಾಜಲ, ನಂದೀವಿಗ್ರಹ, ಕಂಚಿನಪಾತ್ರೆ,ನಾಗದೇವತೆ, ಡಮರು, ತ್ರಿಶೂಲ. ಅಂದಿನ ದಿನ  ಶಿವನಿಗೆ ವಿಶಿಷ್ಟ ಪೂಜೆ ನಡೆಯುತ್ತದೆ.       ಜನರ ಜೀವನವು ಸುಖಮಯವೂ , ಸದ್ಗುಣಸಂಪದ್ಭರಿತವೂ ಭಗವದ್ಭಕ್ತಪೂರ್ಣವೂ ಆಗಿರುವಂತೆ ಮಾಡಲು ,ಆಚಾರ್ಯ ಶಂಕರರು ಸ್ವಂತ ಸುಖ ವಿಶ್ರಾಂತಿಗಳನ್ನು ಬದಿಗೊತ್ತಿ ತಮ್ಮ ಆಯುಷ್ಯವನ್ನೆಲ್ಲ ಸವೆಸಿದರು. ಅಂಕಣ - ೫ ಅದ್ವೈತ ಸಿದ್ಧಾಂತದ ಪ್ರಮೇಯಗಳು    ದ್ವೈತವಿಲ್ಲದಿರುವದು ಅದ್ವೈತ.ದ್ವೈತವೆಂದರೆ ದ್ವಿತ್ವ ಎರಡು ಎಂಬ ಸಂಖ್ಯೆ. ಸತ್ಯವಾಗಿ ಇರತಕ್ಕದ್ದು ಒಂದೇ ಒಂದು ಅದ್ವಿತೀಯವಾದ ವಸ್ತು. ಎರಡನೇಯ ವಸ್ತುವೇ ಇಲ್ಲ. ಎಂದು ಅದ್ವೈತ ಸಿದ್ಧಾಂತವು ಪ್ರತಿಪಾದಿಸುತ್ತದೆ. ಇದೇ ವೇದಾಂತದರ್ಶನ ಎಂದು ಶ್ರೀ ಶಂಕರಾಚಾರ್ಯರು ನಿರೂಪಿಸಿದ್ದಾರೆ. ಸೃಷ್ಟಿ ಕ್ರಮ- ಸಗುಣ ಬ್ರಹ್ಮನೆದರೆ ಮಾಯೋಪಾದಿಯಿಂದ ಕೂಡಿದ ಈಶ್ವರ, *ಆತ್ಮನ ಆಕಾಶಃ ಸಂಭೂತಃ* ಎಂದು ಸೃಷ್ಟಿಕ್ರಮವನ್ನು ಹೇಳುವ ಶ್ರುತಿವಾಕ್ಯದಲ್ಲಿ ಆತ್ಮನೆಂದರೆ ಈಶ್ವರ.ಆಕಾಶ,ವಾಯು, ಅಗ್ನಿ,ಜಲ, ಪೃಥ್ವಿ ಇವು ಕ್ರಮವಾಗಿ ಹುಟ್ಟಿ ಪಂಚೀಕರಣಪ್ರಕ್ರಿಯೆಯಿಂದ ಪರಸ್ಪರ ಸಂಮಿಶ್ರವಾಗುತ್ತದೆ. ಅನಂತರ ಔಷಧಿಗಳೂ ,ಅನ್ನವೂ ಮನುಷ್ಯನೇ ಮೊದಲಾದ ಪ್ರಾಣಿಗಳು ಜನಿಸಿದವೆಂದು ಶ್ರುತಿಯು ಹೇಳುತ್ತದೆ. ಪ್ರಾಣಿಗಳ ದೇಹೇಂದ್ರಿಯಗಳಲ್ಲವೂ ಆಕಾಶಾದಿ ಪಂಚಭೂತಗಳಿಂದ ಹುಟ್ಟಿದ ವಿಕಾರಗಳು. ಇವೆಲ್ಲವೂ ಜಡ ಪ್ರಪಂಚಕ್ಕೆ ಪ್ರಕೃತಿ .     ಇನ್ನು ಮಾನವಾದಿಗಳ ಜಡಶರೀರದಲ್ಲಿ ಚೇತನಾತ್ಮಕವಾದ ಜೀವವು ಚೇತನಾತ್ಮಕವಾದದ್ದು. 'ತತ್ ಸೃಷ್ವ್ವಾ ತದೇವಾನುಪ್ರಾವಿಶತ್'(ತೈತರೀಯ ಉಪನಿಷತ್) ಇತ್ಯಾದಿ ವೇದಪ್ರಾಮಾಣ್ಯದಿಂದ ,ಮಾನವಾದಿ ಶರೀರಗಳಲ್ಲಿ ಅನುಪ್ರವೇಶ ಮಾಡಿದ ಪರಮಾತ್ಮನೇ ಜೀವಾತ್ಮನೆಂದು ಅದ್ವೈತ ವೇದಾಂತವು ಪ್ರತಿಪಾದಿಸಿದೆ.     ಶಿವಾನಂದ ಲಹರಿಯಲ್ಲಿ ಜೀವಾತ್ಮನು ಪರಶಿವನನ್ನು ಹೊಂದಲು ಪ್ರತಿಯೊಬ್ಬರೂ ಅನುಸರಿಸಬೇಕಾದ್ದು ಭಕ್ತಿಮಾರ್ಗ ಎಂದು ಶಂಕರರು ಹೇಳಿದ್ದಾರೆ.ಆರೀತಿಯ ಮುಂದಿನ ನಾಲ್ಕು ಶ್ಲೋಕಗಳ ಬಗ್ಗೆ ಅರಿಯೋಣ.*ತ್ರಯೀವೇದ್ಯಂ ಹೃದ್ಯಂ ತ್ರಿಪುರಹರಮಾದ್ಯಂ ತ್ರಿನಯನಂಜಟಾಭಾರೋದಾರಂ ಚಲದುರಗಹಾರಂ ಮೃಗಧರಮ್*|ಮಹದೇವಂ ದೇವಂ ಮಯಿ ಸದಯಭಾವಂ ಪಶುಪತಿಂಚಿದಾಲಂಬಂ ಸಾಂಬಂ ಶಿವಮತಿವಿಡಂಬಂ ಹೃದಿ ಭಜೆ||೩||ಅರ್ಥ- ವೇದವೇದ್ಯನೂ ,ರಮಣೀಯನೂ ತ್ರಿಪುರಾಂತಕನೂ ,ಆದಿಪುರುಷನೂ , ತ್ರಿನೇತ್ರನೂ,ಜಟಾಧಾರಿಯೂ, ಸರ್ಪಹಾರನೂ , ಜಿಂಕೆಮರಿಯನ್ನು ಧರಿಸಿ ಪ್ರಕಾಶಸ್ವರೂಪನೂ ನನ್ನಲ್ಲಿ ಕರುಣಾಮಯನೂ ,ಪಶುಪತಿಯೂ, ಚೈತನ್ಯರೂಪಿಯೂ, ಪಾರ್ವತಿಸಹಿತನೂ, ಚಿತ್ರವಿಚಿತ್ರ ವೇಷಗಳಿಂದ ವಿನೋದವಾಗಿ ಕಾಣುವ ಶಿವನನ್ನು ಹೃದಯದಲ್ಲಿ ಭಜಿಸುತ್ತೇನೆ.ಸಹಸ್ರಂ ವರ್ತಂತೇ ಜಗತಿ ವಿಬುಧಾಃ ಕ್ಷುದ್ರಫಲದಾನ ಮನ್ಯೇ ಸ್ವಪ್ನೇ ವಾ ತದನುಸರಣಂ ತತ್ಕೃತಫಲಮ್|ಹರಿಬ್ರಹ್ಮಾದೀನಾಮಪಿ ನಿಕಟಭಾಜಾಮಸುಲಭಂಚಿರಂ ಯಾಚೇ ಶಂಭೋ ಶಿವ ತವ ಪದಾಂಭೋಜಭಜನಮ್||೪||ಹೇ ಶಂಭೋ! ಈ ಜಗತ್ತಿನಲ್ಲಿ ಸಾಮಾನ್ಯವಾದ ಫಲಗಳನ್ನು ಕೊಡಬಲ್ಲ ಸಾವಿರಾರು ದೇವತೆಗಳಿದ್ದಾರೆ. ನಾನು ಅವರನ್ನು ಅನುಸರಿಸಿಯೂ ಇಲ್ಲ. ಅವರೀಯುವ ಫಲಗಳನ್ನು ಕನಸಿನಲ್ಲಿಯೂ ಯೋಚಿಸಿಲ್ಲ ಶಿವನೇ! ನಿನ್ನ ಸನ್ನಿಧಿಯಲ್ಲಿರುವ ಹರಿ ,ಬ್ರಹ್ಮ ಮೊದಲಾದವರಿಗೂ ನಿಲುಕದ ನಿನ್ನ ಚರಣ ಕಮಲಗಳ ಸೇವೆಯನ್ನು ಸದಾ ಬೇಡುತ್ತೇನೆ.ಸ್ಮೃತೌ ಶಾಸ್ತ್ರೇ ವೈದ್ಯೇ ಶಕುನಕವಿತಾಗಾನಫಣಿತೌಪುರಾಣೇ ಮಂತ್ರೇ ವಾಸ್ತುತಿನಟನಹಾಸ್ಯೇಷ್ಟಚತುರಃ|ಕಥಂ ರಾಜ್ಞಾಂ ಪ್ರೀತಿರ್ಭವತಿ ಮಯಿ ಕೋಹಂ ಪಶುಪತೇಪಶುಂ ಮಾಂ ಸರ್ವಜ್ಞ ಪ್ರಥಿತಕೃಪಯಾ ಪಾಲಯ ವಿಭೋ||೫||ಅರ್ಥ- ಪುರಾಣ,ಶಾಸ್ತ್ರ, ವೈದ್ಯ ,ಶಕುನಶಾಸ್ತ್ರ, ಕವಿತಾಗಾನ,ಸ್ತೋತ್ರ, ಮಂತ್ರನಾಟಕ, ಹಾಸ್ಯ ಇವಾವುದರಲ್ಲೂ ನಾನು ಜಾಣನಲ್ಲ,ಹೀಗಿರುವಾಗ ನನ್ನಲ್ಲಿ ಅರಸರಿಗೆ ಹೇಗೆ ಪ್ರೀತಿ ಇರುತ್ತದೆ? ಪಶುಪತಿ,ಸ್ವಾಮಿ, ಸರ್ವಜ್ಞನೆ,ಪಶುವಿನಂತೆ ಅಜ್ಞಾನಿಯಾದ ನನ್ನನ್ನು ಲೋಕಪ್ರಸಿದ್ಧವಾದ ನಿನ್ನ ದಯೆಇಂದ ಕಾಪಾಡು.ಘಟೋ ವಾ ಮೃತ್ಪಿಂಡೋಪ್ಯಣುರಪಿ ಚ ಧೂಮೋಗ್ನಿರಚಲಃಪಟೋ ವಾ ತಂತುರ್ವಾ ಪರಿಹರತಿ ಕಿಂ ಘೋರಶಮನಮ್|ವೃಥಾ ಕಂಠಕ್ಷೋಭಂ ವಹಸಿ ತರಸಾ ತರ್ಕವಚಸಾಪದಾಂಭೋಜಂ ಶಂಭೋರ್ಭಜ ಪರಮಸೌಖ್ಯಂ ವ್ರಜಸುಧೀಃ||೬||ಅರ್ಥ- ಹೇ ವಿದ್ವಾಂಸನೆ ,ಘೋರವಾದ ಮೃತ್ಯುಬಾಧೆಯನ್ನು ಮಡಿಕೆ ,ಪಟ, (ಬಟ್ಟೆ) ಮೃತ್ಪಿಂಡ (ಮಣ್ಣುಂಡೆ) ಪರಮಾಣು ,ಹೊಗೆ,ಬೆಂಕಿ,ಬೆಟ್ಟ, ನೂಲು ಇವು ಪರಿಹರಿಸಾರವು. ಈ ವ್ಯರ್ಥ ತರ್ಕಶಾಸ್ತ್ರದ ಮಾತುಗಳಿಂದ ಗಂಟಲು ನೋವಸ್ಟೆ ಆದೀತು. ಇವುಗಳನ್ನು ಬಿಟ್ಟು ಶಂಭುವಿನ ಪಾದಕಮಲಗಳನ್ನು ಭಜಿಸಿ ಪರಮಸೌಖ್ಯವನ್ನು ಹೊಂದು.ಮುಂದಿನ ಅಂಕಣದಲ್ಲಿ ಇನ್ನೂ ಹೆಚ್ಚಿನ ವಿವರಗಳೊಂದಿಗೆ ಪ್ರಸ್ತಾಪಿಸುವೆ.ಗಿರಿಜಾ.ಎಸ್.ದೇಶಪಾಂಡೆ.ಬೆಂಗಳೂರು. ಭಗವತ್ಪಾದರ ಆಚಾರ ,ವಿಚಾರ, ಸಂಚಾರಗಳೆಲ್ಲದರಲ್ಲಿಯೂ ವಿಶ್ವಪ್ರೇಮ ಉಕ್ಕೇರಿದೆ. ಅದ್ವತೀಯ ತಪೂನುಷ್ಟಾನತತ್ಪರಾದ ಆಚಾರ್ಯರು ಲೋಕಾನುಗ್ರಹಾರ್ಥವಾಗಿ ರಚಿಸಿರುವ ಪ್ರಸ್ಥಾನತ್ರಯ ಭಾಷ್ಯಗಳು ,ವಿವೇಕ ಚೂಡಾಮಣಿ, ಉಪದೇಶ ಸಾಹಸ್ರೀ, ಆತ್ಮ,ಆತ್ಮಬೋಧಾದಿ ಗ್ರಂಥಗಳು ,ಚಿಕ್ಕದಾದರೂ ಚೊಕ್ಕವಾಗಿರುವ ಉಪದೇಶ ಪಂಚಕ ಮೊದಲಾದ ಪ್ರಕರಣಗಳು ವಿದ್ವಜನರ ಕಣ್ಣು ತೆರೆಸುವಂತಿವೆಯಲ್ಲದೇ ಜನಸಾಮಾನ್ಯರಿಗಾಗಿ ಅವರು ರಚಿಸಿರುವ ನಾನಾ ದೇವತಾಸ್ತೋತ್ರಗಳೂ ಅಸಂಖ್ಯವಾಗಿವೆ. ಆಚಾರ್ಯರ ಸೂಕ್ತಿಗಳಿಂದ ಪ್ರಭಾವಿತರೂ ಪೂತರೂ ಆದ ಭಾರತೀಯರಲ್ಲದೇ ವಿಶ್ವದ ಇತರ ದೇಶದ ಜನರೂ ಕೂಡ ಅವರು ಜ್ಞಾನಜಲವನ್ನೆರೆದು ಪೋಷಿಸಿದ ಅದ್ವೈತ ವಟವೃಕ್ಷದ   ಸೊಂಪಾದ ತಂಪು ನೆರಳಲ್ಲಿ ಸುಖಿಗಳಾಗಿದ್ದಾರೆ. ಜಗತ್ತಿನ ಇತರ ದೇಶಗಳಲ್ಲಿ ಪ್ರಜ್ವಲಿಸುತ್ತ ಜನರ ಉದ್ಧಾರಮಾಡುತ್ತಿರುವುದಕ್ಕೆ ಆದಿ ಶಂಕರಾಚಾರ್ಯರ ಸೂಜಿಗಲ್ಲಿನಂತಹ ಆಕರ್ಷಕ ವ್ಯಕ್ತಿತ್ವವೇ ಕಾರಣವಾಗಿದೆ. ಅಂಥಹ ಮಹಾತ್ಮರ ರಚನೆಯ ಶಿವಾನಂದ ಲಹರಿಯ ಮುಂದಿನ ಶ್ಲೋಕಗಳು ಮತ್ತು ಅದರ ಅರ್ಥವಿವರಣೆ ತಿಳಿಯೋಣ.*ಮನಸ್ತೇ ಪಾದಾಬ್ಜೇ ನಿವಸತ ವಚಃ ಸ್ತೋತ್ರಫಣಿತೌ ಕರೌ ಚಾಭ್ಯಚಾರ್ಯಾಂ ಶ್ರುತಿರಪಿ ಕಥಾಕರ್ಣನವಿಧೌ|ತವಧ್ಯಾನೇ ಬುದ್ಧಿರ್ನ ಯನಯುಲಗಂ ಮೂರ್ತಿವಿಭವೇ ಪರಗ್ರಂಥಾನ್ ಕೈರ್ವಾ ಪರಮಶಿವ ಜಾನೇ ಪರಮತಃ||೭||ಅರ್ಥ- ಹೇ ಪರಶಿವನೆ! ನನ್ನ ಮನ ನಿನ್ನ ಪಾದಕಮಲಗಳಲ್ಲಿ ನೆಲೆಸಲಿ. ವದನವು ನಿನ್ನ ಸ್ತೋತ್ರದಲ್ಲಿ ಮಗ್ನವಾಗಲಿ.ಕೈಗಳನ್ನು ನಿನ್ನ ಅರ್ಚನೆಯಲ್ಲಿ ನಿರತವಾಗಲಿ. ಕಿವಿಗಳು ನಿನ್ನ ಮಹಿಮೆ ಆಲಿಸಲಿ. ಬುದ್ಧಿಯು ನಿನ್ನ ಧ್ಯಾನದಲ್ಲಿರಲಿ .ನೇತ್ರಗಳು ನಿನ್ನ ಮೂರ್ತಿಯನ್ನು ವೀಕ್ಷಿಸುವದರಲ್ಲಿ ನಿರತವಾಗಲಿ. ಹೀಗಿರುವಾಗ ಇತರ ದೇವತೆಗಳ ಮಹಿಮೆಗಳನ್ನು ಬಣ್ಣಿಸುವ ಗ್ರಂಥವನ್ನುನಿನ್ನ ಯಾವ ಇಂದ್ರಿಯಗಳಿಂದ ತಿಳಿಯಲಿ.ಯಥಾಬುದ್ಧಿಶ್ಶುಕ್ತೌ ರಜತಮಿತಿ ಕಾಚಾಶ್ಮನಿಮಣಿರ್ಜಲೇ ಪೈಸ್ಟೇ ಕ್ಷೀರಂ ಭವತಿ ಭವದನ್ಯಂ ಜಡಜನೋ ಮಹಾದೇವೇಶಂ ತ್ವಾಂ ಮನಸಿ ಚ ನ ಮತ್ವಾಪಶುಪತೇ||೮||ಅರ್ಥ- ಮಹಾದೇವ ! ಮುತ್ತಿನಚಿಪ್ಪನ್ನು ಬೆಳ್ಳಿ ,ಗಾಜನ್ನು ಮಣಿ,ಹಿಟ್ಟಿನ ನೀರನ್ನು ಹಾಲು- ಎಂಬ ಭ್ರಮೆ , ಬಿಸಿಲುಗುದುರೆಯನ್ನು ನೀರೆಂದು ತಿಳಿಯುವ ಭ್ರಾಂತಿ ಹೇಗಾಗುವದೋ ಹಾಗೆ ಜಡರಾದ ಜನರು ಹೇ ಪಶುಪತಿ ! ಈಶನಾದ ನಿನ್ನನ್ನು ಸ್ಮರಿಸದೇ ದೇವರನ್ನು ಭ್ರಮೆಯಿಂದ ಭಜಿಸುತ್ತಿರುವರಲ್ಲ!ಗಭೀರೇ ಕಾಸಾರೇ ವಿಶತಿ ವಿಜನೇ ಘೋರವಿಪಿನೇ ವಿಶಾಲೇ ಶೈಲೇ  ಚ ಭ್ರಮತಿ ಕುಸುಮಾರ್ಥಂ ಜಡಮತಿಃ|ಸಮರ್ಪ್ಯಕಂ ಚೇತಸ್ಸರಸಿ ಜಮುಮಾನಾಥ ಭವತೇಸುಖೇನೈವ ಸ್ಥಾತುಂ ಜನ ಇಹ ನ ಜಾನಾತಿ ಕಮಹೋ||೯||ಅರ್ಥ- ಹೇ ಉಮಾಪತಿಯೇ ಮಂದಮತಿಯು ಆಳವಾದ ಕೊಳವನ್ನು ಕಮಲದಾಸೆಯಿಂದ ಹೋಗುತ್ತಾನೆ. ಹೂಗಳಿಗಾಗಿ ನಿರ್ಜನವೂ, ಭಯಂಕರವೂ ಆದ ವಿಶಾಲವಾದ ಪರ್ವತದಲ್ಲಿ ಅಲೆಯುತ್ತಾನೆ. ಆದರೆ ಮನಸ್ಸೆಂಬ ಕಮಲವೊಂದನ್ನೇ ನಿನಗರ್ಪಿಸಿ ,ಸುಖದಿಂದ ಇರುವವುದನ್ನು ಜನರು ತಿಳಿಯಲಾರರು ಏನಾಶ್ಚರ್ಯ!ಶ್ಲೋಕ- ನರತ್ವಂ ದೇವತ್ವಂ ನಗವನಮೃಗತ್ವಂ ಮಶಕತಾಪಶುತ್ವಂ ಕೀಟತ್ವಂ ಭವತು ವಿಹಗತ್ವಾದಿಜನನಮ್|ಸದಾ ತ್ವತ್ಪಾದಾಬ್ಜಸ್ಮರಣಪರಮಾನಂದಲಹರೀ ವಿಹಾರಸಕ್ತಂ ಚೇದ್ಧೃದಯಮಿಹ ಕಿಂ ತೇನ ವಪುಷಾ||೧೦||ಅರ್ಥ- ಮನುಷತ್ವ,ದೈವತ್ವ,ಬೆಟ್ಟ- ಕಾಡುಗಳಲ್ಲಿನ ಮೃಗಜನ್ಮ,ಸೊಳ್ಳೆಯ,ಪಶುವಿನ , ಕೀಟ ಪಕ್ಷಿಗಳ, ಜನ್ಮ ಹೀಗೆ ಯಾವಜನ್ಮ ಪ್ರಾಪ್ತವಾಗಲಿ , ಸದಾ ನನ್ನ ಹೃದಯವು ನಿನ್ನ ಪಾದಕಮಲ ಸ್ಮರಣೆಯಿಂದ ಉಂಟಾಗುವ ಪರಮಾನಂದದ ಲಹರಿಯಲ್ಲಿ ವಿಹರಿಸಲಾಗದಿದ್ದರೆ ಈ ಲೋಕದಲ್ಲಿ ಈ ಶರೀರದಿಂದೇನು ಪ್ರಯೋಜನ.------------------ ಅಂಕಣ-೭ ಜಗದ್ಗುರು ಶಂಕರಾಚಾರ್ಯರು ಅವಿದ್ಯೆ, ಬ್ರಹ್ಮಸತ್ಯತ್ವ, ಜಗನ್ಮಥ್ಯಾತ್ಮ, ತತ್ವಮಸಿ ಮುಂತಾದ ಜಟಿಲ ವಿಚಾರಗಳನ್ನು ಮೃದುಮಧುರ ಮತ್ತು ಪ್ರಾಮಾಣಿಕ ಮಾತುಗಳಿಂದ ವಿವರಿಸಿ,ಸ್ವಾರ್ಥದ್ವೇಷಾದಿ ಭಾವನೆಗಳಿಂದ ಕೂಡಿದ್ದ ಪಂಡಿತಪಾಮರ ಜನರೆಲ್ಲರ ಮನಸ್ಸನ್ನು ಆಕರ್ಷಿಸಿ ,ಮಂಡನ ಮಿಶ್ರಾದಿಗಳನ್ನು ವಾದದಲ್ಲಿ ಜಯಿಸಿ ,ಅದ್ವೈತ ಸಿದ್ಧಾಂತ ಪ್ರಚಾರಮಾಡಿ ಭದ್ರವಾಗಿ ನೆಲೆಗೊಳಿಸಿದರು.   ಜಗತ್ತಿನ ಆಧುನಿಕ ವಿಜ್ಞಾನಿಗಳೂ ವಿಚಾರಪರರಾಗಿ ಈ ಅದ್ವೈತ ತತ್ವವನ್ನು ಒಪ್ಪಿಕೊಂಡಿರುವದಕ್ಕೆ ಶ್ರೀ ಶಂಕರರ ಬೋಧನೆಅಸ್ಟೇ ಅಲ್ಲದೇ ಅವರು ಅದನ್ನು ತಮ್ಮ ಜೀವನದಲ್ಲಿ ಅನ್ವಯಿಸಿ ತೋರಿರುವದೂ ಕಾರಣವಾಗಿದೆ. ತಮ್ಮ ಅಲ್ಪಾಯುರ್ಮಾನದಲ್ಲಿ ಭಾರತದ ಉದ್ದಗಲಕ್ಕೂ ಸಂಚರಿಸಿ ,ಜನರು ತಮ್ಮ ತಪ್ಪನ್ನು ತಾವೇ ಅರಿತುಕೊಂಡು ಸನ್ಮಾರ್ಗಾವಲಂಬಿಗಳಾಗುವಂತೆ ಮಾಡಿದ್ದಲ್ಲದೇ ಪ್ರಸ್ಥಾನತ್ರಯಗಳಿಗೂ ಭಾಷ್ಯಗಳನ್ನು ಬರೆದು ಶಿಷ್ಯರಿಗೆ ಬೋಧಿಸಿ ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪ್ರಮುಖ ಮಠಗಳನ್ನು ಅದ್ವೈತ ಧರ್ಮ ಪ್ರಚಾರಕ್ಕಾಗಿ ಸ್ಥಾಪಿಸಿದುದು ಆಚಾರ್ಯರ ಅಪಾರ ಬುದ್ಧಿ ಕುಶಲತೆಗೆ ಸಾಕ್ಷಿಯಾಗಿದೆ.          ಅಂತಹ ಆಚಾರ್ಯ ರಚಿತ ಶಿವಾನಂದ ಲಹರಿಯ ಮುಂದಿನ ಶ್ಲೋಕಗಳು ಮತ್ತು ಅದರ ಅರ್ಥಗಳನ್ನು ತಿಳಿದು ಶ್ರಾವಣಮಾಸದ ಸೋಮವಾರದಂದು ಶಿವನ ಆರಾಧನೆ ಮಾಡೋಣ. ಶ್ಲೋಕ- *ವಟುರ್ವಾ ಗೇಹೀವಾ ಯತಿರಪಿ ಜಟೀ ವಾ ತದಿತರೋನರೋ ವಾ ಯಃ ಕಶ್ವಿದ್ಭವತು ಭವ ಕಿಂ ತೇನ ಭವತಿ|ಯದೀಯಂ ಹೃತ್ಪದ್ಮಂ ಯದಿ ಭವದಧೀನಂ ಪಶುಪತೇತದೀಯಸ್ತ್ವಂ ಶಂಭೋ ಭವಸಿ ಭವಭಾರಂ ಚ ವಹಸಿ ||೧೧|| ಅರ್ಥ- ಹೇ ಭವನೆ! ಬ್ರಹ್ಮವಾರಿಯಾಗಲಿ , ಗೃಹಸ್ಥನಾಗಲೀ, ವಾನಪ್ರಸ್ಥನಾಗಲೀ, ಯತಿಯಾಗಲಿ,ಯಾರಾದರಾಗಲಿ ಅದರಿಂದೇನು? ಎಲೈ ಪಶುಪತಿ ! ಆತನ ಹೃದಯ ಕಮಲವು ನಿನ್ನ ಅಧೀನವಾದರೆ ನೀನು ಅವನವನಾದರೆ ಅವನೆಲ್ಲಾ ಸಂಸಾರಭಾರವನ್ನೂ ವಹಿಸುವೆ. ಶ್ಲೋಕ- ಗುಹಾಯಾಂ ಗೇಹೇ ವಾ ಬಹಿರಪಿ ವನೇ ವಾದ್ರಿಶಿಖರೇಜಲೇ ವಾ ವಹ್ನೌವಾ ವಸತು ವಸತೇಃ ಕಿಂ ವದ ಫಲಮ್|ಸದಾ ಯಸ್ಯೈ ವಾಂತಃಕರಣಮಪಿ ಶಂಭೋ ತವಪದೇಸ್ಥಿತಂ ಚೇದ್ಯೋಗೋಸೌ ಸ ಚ ಪರಮಯೋಗೀ ಸ ಚ ಸುಖೀ||೧೨||ಅರ್ಥ- ಹೇ ಶಂಭೋ ! ಗುಹೆ,ಮನೆ,ವನ,ಗಿರಿಶಿಖರ, ನೀರು,ಬೆಂಕಿ, ಎಲ್ಲಿಯಾದರೂ ವಾಸಿಸಬಹುದು.ಆದರೆ ಬರೀ ಇಂತಹ ವಾಸದಿಂದೇನು ಫಲ? ಆತನ ಅಂತಃಕರಣವು ನಿನ್ನ ಪಾದಗಳಲ್ಲಿ ನೆಲಸುವದಾದರೆ ಅದೇ ಯೋಗ; ಆತನೆ ಪರಮಯೋಗಿ ಹಾಗೂ ಪರಮ ಸುಖಿಯು. ಶ್ಲೋಕ- ಅಸಾರೇ ಸಂಸಾರೇ ನಿಜಭಜನದೂರೇ ಜಡಧಿಯಾಭ್ರಮಂತಂ ಮಾಮಂಧಂ ಪರಮಕೃಪಯಾ ಪಾತುಮುಚಿತಮ್|ಮದನ್ಯಃ ಕೋ ದೀನಸ್ತವ ಕೃಪಣರಕ್ಷಾತಿನಿಪುಣ-ಸ್ತದನ್ಯಃ ಕೋ ವಾ ಮೇ ತ್ರಿಜಗತಿ ಶರಣ್ಯಃ ಪಶುಪತೇ||೧೩|| ಅರ್ಥ- ಹೇ ಪಶುಪತಿ ! ಸಾರವಿಲ್ಲದ ,ನಿನ್ನ ಸ್ಮರಣೆಯಿಂದ ದೂರವಾದ ,ಸಂಸಾರದಲ್ಲಿ ಜಡಬುದ್ಧಿಯಾಗಿ ,ಕುರುಡನಾಗಿ ಅಲೆಯುವ ನನ್ನನ್ನು ನೀನು ಕೃಪೆಯಿಂದ ಸಲಹುವುದು ಉಚಿತ.ಏಕೆಂದರೆ ಮೂರು ಲೋಕಗಳಲ್ಲೂ ನನಗಿಂತ ದೀನನು ನಿನಗ್ಯಾರು ಸಿಗುತ್ತಾರೆ? ನಿನಗಿಂತ ದೀನರಿಗೆ ಶರಣು ನೀಡುವರು ನನಗ್ಯಾರಿದ್ದಾರೆ? ಶ್ಲೋಕ- ಪ್ರಭುಸ್ತ್ವಂ ದೀನಾನಾಂ ಖಲು ಪರಮಬಂಧುಃ ಪಶುಪತೇಪ್ರಮುಖ್ಯಹಂ ತೇಷಾಮಪಿ ಕಿಮುತ ಬಂಧುತ್ವಮನಯೋಃ|ತ್ವಯೈವ ಕ್ಷಂತವ್ಯಾಃ ಶಿವ ಮದಪರಾಧಾಶ್ಚ ಸಕಲಾಃಪ್ರಯತ್ನಾತ್ಕರ್ತವ್ಯಂ  ಮದವನಮಿಯಂ ಬಂಧುಸರಣಿಃ||೧೪|| ಅರ್ಥ- ಹೇ ಪಶುಪತೇ ! ಸ್ವಾಮಿಯಾದ ನೀನು ದೀನಬಂಧುವಲ್ಲವೇ? ಅಂತಹ ದೀನರಲ್ಲಿ ಮೊದಲಿಗ ನಾನು ! ಹೀಗಿರುವಾಗ ನಮ್ಮ ನೆಂಟಸ್ತಿಕೆಯ ಬಗ್ಗೆ ಹೆಚ್ಚು ಹೇಳುವದೇನಿದೆ? ಹೇ ಶಿವ! ನನ್ನ ಸಕಲಾಪರಾಧವನ್ನು ನೀನೇ ಕ್ಷಮಿಸಬೇಕು. ನನ್ನ ರಕ್ಷಣೆಯನ್ನು ಕರ್ತವ್ಯದಂತೆ ಮಾಡಲೇಬೇಕು. ಇದೇ ಬಂಧುವಾದವನ ರೀತಿಯಾಗಿದೆ. ಗಿರಿಜಾ.ಎಸ್.ದೇಶಪಾಂಡೆ.ಬೆಂಗಳೂರು. : *ಅಂಕಣ -೮* ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿಹೇಳಿದ ಆಚಾರ ತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು. ಆದಿ ಶಂಕರರು ಭಗವದ್-ಗೀತೆ, ಉಪನಿಷತ್ ಹಾಗೂ ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರೆನಿಸಿದರು.ಕಾಶ್ಮೀರದ ಆಗ ಸರ್ವಜ್ಞ ಪೀಠದಲ್ಲಿ ಪ್ರವೇಶಮಾಡಿ ಅಲ್ಲಿಯ ಎಲ್ಲ ದರ್ಶನಗಳ ಪಂಡಿತರನ್ನೂ ವಾದದಲ್ಲಿ ಮಣಿಸಿ ಸರ್ವಜ್ಞಪೀಠವನ್ನು (ಶಾರದಾಪೀಠ) ಏರಿದರು. (ಕ್ರಿ.ಶ.೯೨೦-ತತ್ವಪ್ರಕಾಶ ಪುಟದ ಸಂಖ್ಯೆ ೨೨) ಆ ಸರ್ವಜ್ಞ ಪೀಠಕ್ಕೆ ನಾಲ್ಕು ದಿಕ್ಕಿಗೆ ನಾಲ್ಕು ಬಾಗಿಲಿದ್ದು , ದಕ್ಷಿಣ ಭಾರತದಿಂದ ಯಾರೂ ಶ್ರೇಷ್ಟ ಪಂಡಿತರು ಆಗ ಬಾರದೇ ಇದ್ದುದರಿಂದ ದಕ್ಷಿಣದ ಬಾಗಿಲು ತೆರೆದೇಇರಲಿಲ್ಲವಂತೆ. ಇವರು ಅದನ್ನು ತೆರೆಸಿ ಪ್ರವೇಶಮಾಡಿ ಎಲ್ಲರನ್ನೂ ವಾದದಲ್ಲಿ ಜಯಿಸಿದರಂತೆ.       ಅಂತಹ ಮಹಾತ್ಮರಾದ ಶ್ರೀ ಶಂಕರಾಚಾರ್ಯರು ಬರೆದ ಶಿವಾನಂದ ಲಹರಿಯ ಮುಂದಿನ ಶ್ಲೋಕಗಳು ಅದರ ಅರ್ಥ ತಿಳಿಯೋಣ.*ಶ್ಲೋಕ-* *ಉಪೇಕ್ಷಾನೋ ಚೇತ್ಕಿಂ ನ ಹರಸಿ ಭವದ್ಧ್ಯಾನವಿಮುಖಾಂ**ದುರಾಶಾಭೂಯಿಷ್ಠಾಂ ವಿಧಿಲಿಪಿಮಶಕ್ತೋ ಯದಿ ಭವಾನ್|**ಶಿರಸ್ತದ್ವೈಧಾತ್ರಂ ನ ನ ಖಲು ಸುವೃತ್ತಂ ಪಶುಪತೇ**ಕಥಂ ವಾ ನಿರ್ಯತ್ನಂ ಕರನಖಮುಖೇನೈವ ಲುಲಿತಮ್||೧೫||* *ಅರ್ಥ*- ಹೇ ಪಶುಪತಿಯೇ ನಿನಗೆ ನನ್ನ ಬಗ್ಗೆ ಉದಾಸೀನವಿದ್ದರೆ ನಿನ್ನನ್ನು ಮರೆಯುವಂತೆ ಮಾಡಿ ,ದುರಾಸೆಯಿಂದ ಮುಳುಗಿಸಿದ ಈ ನನ್ನ ಹಣೆಯಬರಹವನ್ನೇಕೆ ಹೋಗಲಾಡಿಸಬಾರದು? ನೀನು ಈ ವಿಷಯದಲ್ಲಿ  ಅಶಕ್ಯನಾದರೆ ಆ ಬ್ರಹ್ಮನ ಶಿರವನ್ನು ನಿನ್ನ ಕೈಯುಗುರಿನಿಂದಲೇ ಹೇಗೆ ಕತ್ತರಿಸಿದೆ? *ಶ್ಚತುಷ್ಕಂ ಸಂರಕ್ಷ್ಯಂ ಸ ಖಲು ಭುವಿ ಧೈನ್ಯಂ ಲಿಖತವಾನ್|**ವಿಚಾರಃ ಕೋ ವಾ ಮಾಂ ವಿಶದಕೃಪಯಾ ಪಾತಿ ಶಿವ ತೇ**ಕಟಾಕ್ಷ ವ್ಯಾಪಾರಃ ಸ್ವಯಮಪಿ ಚ ದೀನಾವನಪರಃ ||೧೬||* *ಅರ್ಥ-* ಆ ಬ್ರಹ್ಮದೇವನು ದೀಘಾಯುವಾಗಲಿ! ಹೇ ಶಿವನೇ ಆತನ ಚತುರ್ಮುಖಗಳನ್ನಾದರೂ ನೀನು ರಕ್ಷಿಸು. ಈ ಲೋಕದಲ್ಲಿ ಬಡತನವನ್ನು ಬರೆದವನು ಆತನೇ ಅಲ್ಲವೇ? ದೀನ ರಕ್ಷಣೆಯಲ್ಲಿ ಸ್ವಯಂ ಪ್ರವೃತ್ತವಾಗಿರುವ ನಿನ್ನ ಕಡೆಗಣ್ಣೋಟವೇ ನಮ್ಮನ್ನು ಕಾಪಾಡಲಿ. ಇದರಲ್ಲಿ ಸಂದೇಹವೇನಿದೆ? *ಫಲದ್ವಾ ಪುಣ್ಯಾನಾಂ ಮಯಿಕರುಣಯಾ ವಾ ತ್ವಯಿ ವಿಭೋ**ಪ್ರಸನ್ನೇಪಿ ಸ್ವಾಮಿನ್ ಭವದಮಲಪಾದಾಬ್ಜ ಯುಗಲಮ್|**ಕಥಂ ಪಶ್ಯೇಯಂ ಮಾಂ ಸ್ಥಗಯತಿ ನಮಸ್ಸಂಭ್ರಮಜುಷಾಂ**ನಿಲಿಂಪಾನಾಂ ಶ್ರೇಣರ್ನಿಜಕನಕಮಾಣಿಕ್ಯಮಕುಟೈಃ ||೧೭||* *ಅರ್ಥ*- ಹೇ ಸರ್ವವ್ಯಾಪಿ ಶಿವನೇ ! ನೀನು ನನ್ನ ಸುಕೃತಗಳ ಫಲವಾಗಿ ಅಥವಾ ಕರುಣೆಯಿಂದಲೋ ನನಗೆ ಪ್ರಸನ್ನನಾಗಿರುವೆ.ಆದರೂ ನಿನ್ನ ನಿರ್ಮಲಪಾದಕಮಲಗಳನ್ನು ನಾನು ಹೇಗೆ ತಾನೇ ಕಾಣಬಲ್ಲೆ? ನಿನ್ನನ್ನು ನಮಿಸಲು ಹಾತೊರೆಯುತ್ತಿರುವ ದೇವತಾ ಸಮೂಹವು ತನ್ನ ಹೊನ್ನು ರತ್ನ ಖಚಿತ ಕಿರೀಟಗಳಿಂದ ನನ್ನನ್ನು ಅಡ್ಡಿಪಡಿಸುತ್ತಿದೆ. *ತ್ವಮೇಕೋ ಲೋಕಾನಾಂ ಪರಮಫಲದೋ ದಿವ್ಯಪದವೀಂ**ವಹಂತಸ್ತ್ವನ್ಮೂಲಾಂ ಪುನರಪಿ ಭಜಂತೇ ಹರಿಮುಖಾಃ|**ಕಿಯದ್ವಾ ದಾಕ್ಷಿಣ್ಯಂ ತವ ಶಿವ ಮದಾಶಾ ಚ ಕಿಯತೀ**ಕದಾ ವಾ ಮದ್ರಾಕ್ಷಾಂ ವಹಸಿ ಕರುಣಾಪೂರಿತದೃಶಾ||೧೮||* *ಅರ್ಥ-* ಹೇ ಶಿವನೇ ! ಜೀವಿಗಳಲೆಲ್ಲಾ ಮೋಕ್ಷಪ್ರದನು ನೀನೇ. ನಿನ್ನಿಂದ ಕೊಡಲ್ಪಟ್ಟ ದಿವ್ಯ ಪದವಿಯನ್ನು ವಹಿಸಿರುವ ವಿಷ್ಣುವೇ ಮೊದಲಾದ ದೇವತೆಗಳು ಸದಾ ನಿನ್ನನ್ನೇ ಸೇವಿಸುತ್ತಾರೆ. ನಿನಗಿರುವ ದಾಕ್ಷಣ್ಯವೆಸ್ಟು! ನನ್ನ ಆಸೆಯೆಸ್ಟು? ನನ್ನ ರಕ್ಷಣೆಯನ್ನು ಕರುಣಾಪೂರಿತ ದೃಷ್ಟಿಯಿಂದ ಯಾವಾಗ ವಹಿಸುವೆಯೋ?[4/20, 13:55] ಅಂಕಣ-೯ ----------------  ಜಗದ್ಗುರು ಶ್ರೀ ಶಂಕರರಿಗೆ ೩ ವರ್ಷ ತುಂಬುವಸ್ಟರಲ್ಲಿ ದೈವಗತಿಯಿಂದ ಅವರ ತಂದೆ ಶಿವಗುರುವು ಸ್ವರ್ಗಸ್ಥರಾದರು. ಒಬ್ಬನೇ ಮಗನಾದ ಶಂಕರನನ್ನು ಆರ್ಯಾಂಬೆ ಪ್ರೀತಿಯಿಂದ ಸಾಕಿ ಸಲಹಿ, ಆತನ ೫ ನೇಯ ವರ್ಷದಲ್ಲಿ ಬಂಧುಗಳಿಂದ ಉಪನಯನ ಮಾಡಿಸಿದರು. ಪ್ರಸಿದ್ಧ ವೇದ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಯಲು ಶಂಕರರು ಅತ್ಯಂತ ಮೇಧಾವಿಯಾದ್ದರಿಂದ ಅಲ್ಪಕಾಲದಲ್ಲಿಯೇ ಸಂಸ್ಕೃತ ಭಾಷೆಯಲ್ಲಿ ಪ್ರಾವೀಣ್ಯತೆ ಗಳಿಸಿ ತರ್ಕ ವ್ಯಾಕರಣಾದಿ ಶಾಸ್ತ್ರಗಳಲ್ಲಿ ಪಂಡಿತರಾಗಿ ವೇದಗಳನ್ನು ಕಂಠಪಾಠ ಮಾಡಿ ನಿರರ್ಗಳವಾಗಿ ಪಠಿಸಲು ಸಮರ್ಥರಾದರು. ಅವರ ಗುರುಗಳು ಬಾಲಕ ಶಂಕರರ ಬುದ್ಧಿ ಸಾಮರ್ಥ್ಯಕ್ಕೆ ತಲೆದೂಗಿ ತಮ್ಮ ಪಾಠಶಾಲೆಯ ವಿದ್ಯಾಭ್ಯಾಸವು ಪೂರ್ಣವಾಯಿತೆಂದು ವಿಸ್ಮಯಾನಂದಗಳಿಂದ ಶಂಕರರನ್ನು ಬೀಳ್ಕೊಟ್ಟರು. ಅಂಥಹ ಮೇಧಾವಿಗಳು  ರಚಿಸಿದ ಶಿವಾನಂದ ಲಹರಿಯ ಮುಂದಿನ ಶ್ಲೋಕ ಅರ್ಥವನ್ನು ,ಶಿವನ ಮಹಿಮೆ ತಿಳಿಯೋಣ. ದುರಾಶಾಭೂಯಿಷ್ಠೇ ದುರಧಿಪಗೃಹದ್ವಾರಘಟಕೇ ದುರಂತೇ ಸಂಸಾರೇ ದುರಿತ ನಿಲಯೇ ದುಃಖಜನಕೇ| ಮದಾಯಾಸಂ ಕಿಂ ನ ವ್ಯಪನಯಸಿ ಕಸ್ಯೋಪಕೃತಯೇ ವದೇಯಂ ಪ್ರೀತಿಶ್ಚೇತ್ತವ ಶಿವ ಕೃತಾರ್ಥಾಃ ಖಲು ವಯಮ್|| ಅರ್ಥ- ಹೇಶಿವನೇ! ದುರಾಶಾಭರಿತರಾದ ,ದುರ್ಜನರಾದ ಆಳರಸರ ಬಾಗಿಲು ಕಾಯುವಂತೆ ಮಾಡುವ ,ದುಃಖಪೂರಿತವಾದ ಈ ಸಂಸಾರದಲ್ಲಿ ನಾನು ಪಡುವ ಆಯಾಸವನ್ನು ನೀನೇಕೆ ಪರಿಹರಿಸುವದಿಲ್ಲ? ಯಾರ ಪ್ರೀತಿಗೆ ಇಂತಹ ಶಿಕ್ಷೆ? ಇದರಿಂದ ನಿನಗೇನಾದರೂ ಪ್ರೀತಿಯಾದರೆ ನಾವು ಧನ್ಯರೇ ಸರಿ. ಶ್ಲೋಕ- *ಸದಾ ಮೋಹಾಟವ್ಯಾಂ ಚರತಿ ಯುವತೀನಾಂ ಕುಚಗಿರೌ ನಟತ್ಯಾಶಾಖಾಕಾಸ್ವಟತಿ ಝಟತಿ ಸ್ವೈರಮಭಿತಃ| ಕಪಾಲಿನ್ ಭಿಕ್ಷೋ ಮೇ ಹೃದಯಕಪಿಮತ್ಯಂತಚಪಲಂ ದೃಢಂ ಭಕ್ತ್ಯಾ ಬದ್ಧ್ವ್ಯಾ ಶಿವ ಭವದಧೀನಂ ಕುರು ವಭೋ|| ಅರ್ಥ- ಹೇ ಕಪಾಲಿ! ನನ್ನ ಮನಸ್ಸೆಂಬ ಕಪಿಯು ಮೋಹವೆಂಬ ಅಡವಿಯಲ್ಲಿ ನೆಗೆಯುತ್ತಾ, ಯುವತಿಯರ ಸ್ತನಗಳೆಂಬ ಬೆಟ್ಟಗಳಲ್ಲಿ ನರ್ತಿಸುತ್ತಿದೆ. ಆಸನಗಳೆಂಬ ಕೊಂಬೆಗಳಲ್ಲಿ ಹೇಗೆಂದರೆ ಹಾಗೆ ಜಿಗಿಯುತ್ತಿದೆ. ಹೇ ಶಿವ ಪ್ರಭೋ ! ಅತೀ ಚಂಚಲವಾದ ಈ ಕಪಿಯನ್ನು ಭಕ್ತಿಯೆಂಬ ಹಗ್ಗದಿಂದ ಬಲವಾಗಿ ಕಟ್ಟಿ ಹಾಕಿ ನಿನ್ನ ಅಧೀನ ಮಾಡಿಕೋ. ಶ್ಲೋಕ- ಧೃತಿಸ್ತಂಭಾಧಾರಾಂ ದೃಢಗುಣನಿಬದ್ಧಾಂ ಸಗಮನಾಂ ವಿಚಿತ್ರಾಂ ಪದ್ಮಾಢ್ಯಾಂ  ಪ್ರತಿದಿವಸಸನ್ಮಾರ್ಗ ಘಟಿತಾಮ್| ಸ್ಮರಾರೇ ಮಚ್ಚೇತಃಸ್ಪುಟಪಟಕುಟೀಂ ಪ್ರಾಪ್ಯ ವಿಶದಾಂ ಜಯ ಸ್ವಾಮಿನ್ ಶಕ್ತ್ಯಾ ಸಹ ಶಿವಗಣೈಸ್ಸೇವಿತ ವಿಭೋ|| ಅರ್ಥ- ಹೇ ಮದನಾರೀ ! ಧೈರವೇ ಆಧಾರಸ್ತಂಬವಾಗಿ ,ನಿಶ್ಚಲವಾದ ಗುಣಗಳೆಂಬ ದೃಢವಾದ ಹಗ್ಗಗಳಿಂದ ಭಂಧಿಸಲ್ಪಟ್ಟು ,ಒಂದು ಕಡೆಯಿಂದ ಇನ್ನೊಂದು ಕಡೆ ಚಲಿಸಬಹುದಾದ ,ಪದ್ಮಾಕಾರವಾದ ರಂಗೋಲಿಗಳಿಂದ ಅಲಂಕೃತವಾಗಿ ,ಸನ್ಮಾರ್ಗವೆಂಬ ಹಾದಿಯಲ್ಲಿರುವ ,ನನ್ನ ಮನಸೆಂಬ ಶುಭ್ರವಾದ ಡೇರೆಯನ್ನು ಪ್ರಮಥ ಗಣ ಸೇವಿತನಾದ ನೀನು ಪರಾಶಕ್ತಿಯಿಂದ ಒಡಗೂಡಿ ,ನೆಲಸಿ ವಿಜೃಂಭಣೆಯಿಂದ ವಿರಾಜಿಸು. ಶ್ಲೋಕ- ಪ್ರಲೋಭಾದ್ಯೈ ರರ್ಥಾಹರಣಪರತಂತ್ರೋ ಧನಿಗ್ರಹೇ ಪ್ರವೇಶೋದ್ಯುಕ್ತಸ್ಸನ್ ಭ್ರಮತಿ ಬಹುಧಾ ತಸ್ಕರಪತೇ| ಇಮಂ ಚೇತಶ್ಚೋರಂ ಕಥಮಿಹ ಸಹೇ ಶಂಕರ ವಿಭೋ ತವಾಧೀನಂ ಕೃತ್ವಾಮಯಿ ನಿರಪರಾಧೇ ಕುರು ಕೃಪಾಮ್|| ಅರ್ಥ- ಹೇ ಚೋರ ಪತಿಯೇ ! ಶಂಕರಾ ಪ್ರಭೋ ! ಈ ಮನವೆಂಬ ಚೋರನು ದುರಾಸೆಯೇ ಮೊದಲಾದ ಕೆಟ್ಟ ಗುಣಗಳಿಂದ ಪ್ರೇರಿತನಾಗಿ ಕದಿಯಲೆಂದು ಧನಿಕರೇ ಮನೆಯೊಳಗೆ ಪ್ರವೇಶಿಸಲು ಹವಣಿಸುತ್ತಿದ್ದಾನೆ. .ಇವನನ್ನು ನಾನು ಹೇಗೆ ಸಹಿಸಲಿ? ನೀನು ಇವನನ್ನು ನಿನ್ನ ವಶಮಾಡಿಕೊಂಡು ಅಪರಾಧವಿಲ್ಲದ ನನ್ನಲ್ಲಿ ಕೃಪೆ ತೋರು. ಗಿರಿಜಾ.ಎಸ್.ದೇಶಪಾಂಡೆ.ಬೆಂಗಳೂರು.ಸಾಹಿತ್ಯಶ್ರೀ  ಅಂಕಣ- ೧೦ ಶ್ರೀ ಶಂಕರರು ಗುರುಕುಲದಿಂದ ಮನೆಗೆ ಬಂದು ವೃದ್ಧೆಯಾದ ತಾಯಿ ಆರ್ಯಾಂಬೆಯ ಶುಶ್ರೂಷೆಯಲ್ಲಿ ತೊಡಗಿದರು. ಆ ಬ್ರಹ್ಮಚಾರಿಯ ತೇಜಸ್ಸು ,ವಿದ್ಯೆ,ಸದ್ಗುಣಗಳ ಕೀರ್ತಿಯು ಬೆಳದಿಂಗಳಿನಂತೆ ಎಲ್ಲೆಲ್ಲಿಯೂ ಹರಡಿತು. ಕೇರಳ ದೇಶದ ರಾಜನು ಈ ಅದ್ಭುತ ವಟುವನ್ನು ನೋಡಬೇಕೆಂಬ ಕುತೂಹಲದಿಂದ ಆಗಮಿಸಿ ವಿದ್ಯಾ ,ವಿನಯ ಸಂಪನ್ನನೂ ವಾಗ್ಮಿಯೂ ಆದ ಬ್ರಹ್ಮಚಾರಿಯನ್ನು ಕಂಡು ಆಶ್ಚರ್ಯಪಟ್ಟನು. ಅಲ್ಲದೇ ರಾಜನು ಸಂಪ್ರೀತನಾಗಿ ಶ್ರೀ ಶಂಕರರಿಗೆ ವಿಫುಲ ಹಣವನ್ನು ಕಾಣಿಕೆಯಾಗಿ ಕೊಡಲು ಬಯಸಿದನು. ಆದರೆ ಶ್ರೀ ಶಂಕರರು ಒಂದು ಕಾಸು ಹಣವನ್ನು ಮುಟ್ಟದೇ ಆ ಹಣವನ್ನು ರಾಜರಿಂದ ಬಡವರಿಗೆ ಕೊಡಿಸಿಬಿಟ್ಟರು.ಕೇರಳ ರಾಜನು ಶ್ರೀ ಶಂಕರರ ನಿಃಸ್ಪೃಹತೆಯನ್ನು ಕಂಡು ಮೆಚ್ಚಿ ಶ್ರೀ ಶಂಕರರಿಗೂ ,ಆರ್ಯಾಂಬೆಗೂ ನಮಿಸಿ " ನನ್ನ ರಾಜ್ಯದಲ್ಲಿ ಒಂದು ದಿವ್ಯಜ್ಯೋತಿ ಉದಿಸಿದೆ. ನಾನು ಧನ್ಯನಾದೆನು!" ಎಂದು ಹೇಳಿ ರಾಜಧಾನಿಗೆ ಹಿಂದಿರುಗಿದನು. ಅಂತಹ ದಿವ್ಯಜ್ಯೋತಿ ರಚಿಸಿದ ಶಿವಾನಂದ ಲಹರಿಯ ಮುಂದಿನ ನುಡಿಗಳನ್ನು ಅದರ ಅರ್ಥವನ್ನು ತಿಳಿಯೋಣ.ಶ್ಲೋಕ- ಕರೋಮಿ ತ್ವತ್ಪೂಜಾಂ ಸಪದಿ ಸುಖದೋ ಮೇ ಭವ ವಿಭೋವಿಧಿತ್ವಂ ವಿಷ್ಣುತ್ವಂ ದಿಶಸಿ ಖಲು ತಸ್ಯಾಃ ಫಲಮಿತಿ|ಪುನಶ್ಚತ್ವಾಂ ದ್ರಷ್ಟುಂ ದಿವಿ ಭುವಿ ವಹನ್ ಪಕ್ಷಿಮೃಗತಾಮದೃಷ್ಟ್ವಾ ತತ್ಖೇದಂಕಥಮಿಹ  ಸಹೇ ಶಂಕರ ವಿಭೋ ||೨೩||ಅರ್ಥ- ಹೇ ಪ್ರಭೋ ಶಂಕರ! ನಿನ್ನನ್ನು ಪೂಜಿಸುವೆ. ನನಗೆ ಬೇಗ ಮೋಕ್ಷ ನೀಡು. ಇದಕ್ಕೆ ಫಲವಾಗಿ ಬ್ರಹ್ಮ ಪದವಿಯನ್ನೋ ಹರಿಯ ಪದವಿಯನ್ನು ನೀಡುವದಾದರೆ ಮತ್ತೆ ನಿನ್ನನ್ನು ಕಾಣಲು ಆಕಾಶದಲ್ಲಿ ಹಕ್ಕಿಯಾಗಿ, ಭೂಮಿಯಲ್ಲಿ ಪ್ರಾಣಿಯಾಗಿ ಬಂದರೂ ನಿನ್ನ ದರ್ಶನ ಭಾಗ್ಯವಿಲ್ಲದ ದುಃಖವನ್ನು ಹೇಗೆ ಸಹಿಸಲಿ?ಕದಾ ವಾ ಕೈಲಾಸೇ ಕನಕಮಣಿಸೌಧೇ ಸಹಗಣೈರ್ವಸನ್ ಶಂಭೋರಗ್ರೇ ಸ್ಫಟಘಟಿತಮೂರ್ಧಾಂಜಲಿಪುಟಃ|ವಿಭೋ ಸಾಂಬ ಸ್ವಾಮಿನ್ ಪರಮಶಿವ ಪಾಹೀತಿ ನಿಗದನ್ವಿಧಾತೃಣಾಂ ಕಲ್ಪಾನ ಕ್ಷಣಮಿವ ವಿನೇಷ್ಯಾಮಿ ಸಖತಃ||೨೪||ಅರ್ಥ- ಕೈಲಾಸ ಪರ್ವತದಲ್ಲಿ ಸ್ವರ್ಣಮಯವಾದ ಮಹಲಿನಲ್ಲಿ ಶಿವಗಣಗಳೊಡನೆ ವಾಸಿಸುತ್ತ ಶಿವನ ಮುಂದೆ ಕರಜೋಡಿಸಿ ಹೇ ವಿಭು,ಸಾಂಬ,ಸ್ವಾಮಿ, ಪರಶಿವಾ,ಕಾಪಾಡು ಎಂದು ಎಂದು ನಾನು ಅಖಂಡ ಕಾಲವನ್ನು ಎಂದು ಸುಖವಾಗಿ ಕಳೆದೇನು?ಶ್ಲೋಕ- ಸ್ತವೈರ್ಬ್ರಹ್ಮಾದೀನಾಂ ಜಯಜಯವಚೋಭಿರ್ನಿಯಮಿನಾಂಗಣಾನಾಂ ಕೇಲೀಭಿರ್ಮದಕಲಮಹೋಕ್ಷಸ್ಯ ಕಕುದಿ|ಸ್ಥಿತಂ ನೀಲಗ್ರೀವಂ ತ್ರಿನಯನಮುಮಾಶ್ಲಿಷ್ಟವಪುಷಂ ಕದಾ ತ್ವಾಂ ಪಶ್ಯೇಯಂ ಕರಧೃತಮೃಗಂ ಖಂಡಪರಶುಮ್||೨೫||ಅರ್ಥ- ಬ್ರಹ್ಮಾದಿ ದೇವತೆಗಳ ಸ್ತೋತ್ರದಿಂದಲೂ ,ಯೋಗಿಗಳ ಜಯಕಾರದಿಂದಲೂ, ಶಿವಗಣಗಳ ಕಲಕಲದಿಂದಲೂ, ಗಂಭೀರನಾದಗೈಯುವ ನಂದಿಯ ಮೇಲೆ ಪಾರ್ವತಿಯನ್ನಾಲಂಗಿಸಿ ಕುಳಿತಿರುವ ಕೈಯಲ್ಲಿ ಜಿಂಕೆ ಗಂಡುಗೊಡಲಿ ಹಿಡಿದಿರುವ ನೀಲಕಂಠನಾದ ನಿನ್ನನ್ನು ನಾನು ಯಾವಾಗ ನೋಡಿಯೇನು?ಶ್ಲೋಕ- ಕದಾ ವಾ ತ್ವಾಂ ದೃಷ್ಟೃ ಗೀರಿಶ ಭವ್ಯಾಂಘ್ರಿಯುಗಲಂಗೃಹೀತ್ವಾ ಹಸ್ತಾಭ್ಯಾಂ ಶಿರಸಿ ನಯನೇ ವಕ್ಷಸಿ ವಹನ್ |ಸಮಾಶ್ಲಿಷ್ಯಾಘ್ರಾಯ ಸ್ಪುಟಜಲಜಗಂಧಾನ್ ಪರಿಮಲಾ ನಲಭ್ಯಾಂ ಬ್ರಹ್ಮಾದ್ಯೈ ರ್ಮುದಮನುಭವಿಷ್ಯಾಮಿ ಹೃದಯೇ||೨೬||ಅರ್ಥ- ಹೇ ಗಿರೀಶಾ!ನಿನ್ನ ಸಾಕ್ಷಾತ್ಕಾರವಾದ ಬಳಿಕ ,ನಿನ್ನ ಪವಿತ್ರ ಚರಣಗಳನ್ನು ಕೈಗಳಲ್ಲಿ ಹಿಡಿದುಕೊಂಡು ,ಅದನ್ನು ನನ್ನ ಶಿರ, ನೇತ್ರ,ಎದೆಯಲ್ಲಿ ಧರಿಸಿ ,ಆಲಂಗಿಸಿ, ಅರಳಿದ ಕಮಲಗಳ ಪರಿಮಳವನ್ನು ಆಘ್ರಾಣಿಸುತ್ತ ,ಬ್ರಹ್ಮಾದಿ ದೇವತೆಗಳಿಗೂ ಲಭ್ಯವಾಗದ ಆನಂದವನ್ನು ನನ್ನ ಹೃದಯದಲ್ಲಿ ಎಂದು ಅನುಭವಿಸಿದನೋ!====================ಗಿರಿಜಾ.ಎಸ್.ದೇಶಪಾಂಡೆ.ಬೆಂಗಳೂರು. ಅಂಕಣ - ೧೧ ಜಗದ್ಗುರು ಶಂಕರಾಚಾರ್ಯರನ್ನು ಕಣ ಭೌತಶಾಸ್ತ್ರದ ಪಿತಾಮಹ ಎಂದಿದ್ದಾರೆ. ಶಂಕರರ ಸಾಧನೆ ಅಪಾರ .ಅದರಲ್ಲಿ ಬೀಜಾಕ್ಷರದ ಅಳವಡಿಕೆಯಿಂದ ಶ್ರೀ ಚಕ್ರದ ಪರಾಶಕ್ತಿಯ ಚಟುವಟಿಕೆ ನಿಗ್ರಹಿಸಿದರು. ಶ್ರೀ ಸೌಂದರ್ಯ ಲಹರಿಯ ಕಮಲದಲ್ಲಿ ಶಕ್ತಿ ತುಂಬಿಸಿ ಕಣ ಭೌತಶಾಸ್ತ್ರಕ್ಕೆ ಸವಾಲು ನೀಡಿದ್ದಾರೆ. ಅವರು ರಚಿಸಿದ ಶ್ರೀ ಚಕ್ರ ನರ ಚಟುವಟಿಕೆಯ ವೈಜ್ಞಾನಿಕ ಪ್ರೇರಕ ಸೂತ್ರವಾಗಿದೆ. ಶ್ರೀಚಕ್ರದ ಚೌಕಟ್ಟು ಜ್ಞಾನೇಂದ್ರಿಯ ಮಟ್ಟದ ಆಧುನಿಕ ನರಶಾಸ್ತ್ರ ವಿವರಣೆಗೆ ಹೋಲಿಕೆ ನೀಡುತ್ತದೆ. ಬಲ,ಮಿದುಳು,ದೃಷ್ಟಿ, ಶ್ರವಣಶಕ್ತಿ ಚೇತಕವೆಂದು ನಂಬಿದ್ದ ಋಷಿಗಳು ಮಾನವ ದೇಹ ಕಾರ್ಯಶೀಲತೆ ವಿಸ್ತಾರ ಜ್ಞಾನ ಪಡೆದದ್ದು ಆಶ್ಚರ್ಯವಲ್ಲ. ಪ್ರಾಚೀನ ಭಾರತದಲ್ಲಿ ರಚನೆಯಾದ ಅತ್ಯಂತ ಜಟಿಲ ಜಾಮೆಟ್ರಿಯ ರೇಖಾನಕ್ಷೆ ಇದಾಗಿದೆ. ಶ್ರೀ ಚಕ್ರವು ಅಧ್ಯಾತ್ಮಿಕ ಸಾಹಿತ್ಯದಲ್ಲಿ ನಿರೂಪಿತ ಮಂಡಲಿಗಳಿಗೆಲ್ಲ ಮಾತೃಸ್ಥಾನದಲ್ಲಿರುವ ಮಂಡಲವೆಂದು ಪರಿಗಣಿಸಲ್ಪಟ್ಟಿದೆ. ಬಿಂದು,ತ್ರಿಕೋನ, ವೃತ್ತ ಮೊದಲಾದವುಗಳ ಸಂಯೋಗದಿಂದ ಪರದೇವತೆ ಉದಯಿಸಿತೆಂಬ ಶ್ಲೋಕವಿದೆ.       ಶಂಕರಾಚಾರ್ಯರು ಶ್ರೀ ಚಕ್ರ ಸ್ಥಾಪನೆಮಾಡಿದ್ದು ಮಧುರೈ ಮೀನಾಕ್ಷಿ ದೇವಸ್ಥಾನದಲ್ಲಿ. ಕಾಳೀ ಸ್ವರೂಪಿಯಾದ ದೇವಿಯನ್ನು ತಮ್ಮ ಸ್ತೋತ್ರಗಳಿಂದ ಸಂಪನ್ನಗೊಳಿಸಿದ ಹಿರಿಮೆ ಇವರದು. ನಂತರದಲ್ಲಿ ಎಲ್ಲ ಶಕ್ತಿ ಪೀಠಗಳಲ್ಲಿ ಶ್ರೀಚಕ್ರಗಳ ರಚನೆಗಳಾದವು. ಕಾಳಿಸ್ವರೂಪದಲ್ಲಿದ್ದ ದೇವಿಯನ್ನು ಬಾಲಕ ಸಾಕ್ಷಾತ ಪರಮೇಶ್ವರ ಸ್ವರೂಪರಾದ ಶಂಕರರು ಪಗಡೆಯ ನೆಪದಲ್ಲಿ ಮಂತ್ರಶಕ್ತಿಯಿಂದ ಗೆರೆಗಳನ್ನು ಎಳೆದು ದೇವಿಯನ್ನು ಅದರಲ್ಲಿ ಬಂಧಿಸಿದಾಗ ತಕ್ಷಣ ದೇವಿಗೆ ತಾನು ಗೆರೆಗಳ ಮಧ್ಯದಲ್ಲಿ ಬಂಧಿತಳಾಗಿರುವದು ಅರಿವಿಗೆ ಬಂದಾಗ ಈ ಬಾಲಕ ಸಾಧಾರಣ ಬಾಲಕನಲ್ಲವೆಂದು ತಿಳಿದು ತನ್ನನ್ನು ಬಂಧನದಿಂದ ಮುಕ್ತಗೊಳಿಸಲು ಕೇಳುತ್ತಾಳೆ. ಆಗ ಶಂಕರರು ನೀನು ನಿನ್ನಲ್ಲಿರುವ ಕಾಳೀ ಶಕ್ತಿ ಬಿಟ್ಡುಮಾತೃ ಸ್ವರೂಪಕ್ಕೆ ಬಂದರೆ ಮಾತ್ರ ಬಂಧನದಿಂದ ಮುಕ್ತಗೊಳಿಸುವೆ ಎಂದು ಸವಾಲು ಹಾಕಿದಾಗ ಮುಗ್ಧಬಾಲಕನ ಮಂತ್ರಶಕ್ತಿಗೆ ತಲೆಬಾಗಿ ದೇವಿ ಮಾತೃಸ್ವರೂಪ ಪಡೆಯುತ್ತಾಳೆ. ಇವತ್ತಿಗೂ ಮಧುರೈ ಮೀನಾಕ್ಷಿ ಮಧುರವಾದ ನಗು ಮುಖದಲ್ಲಿ ಮಾತೃಸ್ವರೂಪಿಯಾಗಿ ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ. ಈ ರೀತಿ ಎಲ್ಲಿ ಶಕ್ತಿಪೀಠಗಳಿವೆಯೋ ಅಲ್ಲಲ್ಲಿ ಶಂಕರರು ಸ್ಥಾಪಿಸಿದ ಶ್ರೀಚಕ್ರಗಳನ್ನು ನಾವುನೋಡಬಹುದು. ಅಂತಹ ಭಗವತ್ಪಾದರು ರಚಿಸಿ ಶಿವನ ಗುಣಗಾನ ಮಾಡಿದ ಶಿವಾನಂದ ಲಹರಿಯ ಮುಂದಿನ ಶ್ಲೋಕ ಅರ್ಥಗಳನ್ನು ಮಹತ್ವವನ್ನು ಅರಿಯೋಣ.ಶ್ಲೋಕ- ಕರಸ್ಥೇ ಹೇಮಾದ್ರೌ ಗಿರೀಶ ನಿಕಟಸ್ಥೇ ಧನಪತೌಗೃಹಸ್ಥೇ ಸ್ವರ್ಭೂಜಾಮರಸುರಭಿಚಿಂತಾಮಣಿಗಣೇ|ಶಿರಸ್ಥೇ ಹಿಮಾಂಶೌ ಚರಣಯುಗಲಸ್ಥೇಖಿಲಶುಭೇಕಮರ್ಥಂ ದಾಸ್ಯೇಹಂ ಭವತು ಭವದರ್ಥಂ ಮಮ ಮನಃ||೨೭||ಹೇ ಗಿರೀಶಾ! ಹೇಮಪರ್ವತವೇ ನಿನ್ನ ಕೈಯಲ್ಲಿರಲು ,ಧನಪತಿ ಕುಬೇರ ನಿನ್ನ ಬಳಿ ನಿಂತಿರಲು ,ಕಲ್ಪವೃಕ್ಷ,ಕಾಮಧೇನು,ಚಿಂತಾಮಣಿ ಎಲ್ಲವೂ ನಿನ್ನ ನಿಲಯದಲ್ಲಿರಲು ,ನಿನ್ನ ಶಿರದಲ್ಲಿ ಶೀತಾಕಾರಕನಾದ ಚಂದ್ರನಿರಲು ಸಕಲ ಶುಭವೂ ನಿನ್ನ ಚರಣದಲ್ಲಿರಲು ನಾನು ನಿನಗೇನು ಕೊಡಬಲ್ಲೆ? ಇರಲಿ ಚಿಂತೆಇಲ್ಲ .ನನ್ನ ಮನಸ್ಸೇ ನಿನಗೆ ಅರ್ಪಿತವಾಗಲಿ.ಶ್ಲೋಕ- ಸಾರೂಪ್ಯಂ ತವ ಪೂಜನೇ ಶಿವಮಹಾದೇವೇತಿ ಸಂಕೀರ್ತನೇಸಾಪೀಪ್ಯಂ ಶಿವಭಕ್ತಿಧುರ್ಯಜನತಾಸಾಂಗತ್ಯಸಂಭಾಷಣೇ|ಸಾಲೋಕ್ಯಂ ಚ ಚರಾಚರಾತ್ಮ ಕತನುಧ್ಯಾನೇ ಭವಾನೀಪತೇಸಾಯುಜ್ಯಂ ಮಮ ಸಿದ್ಧಮತ್ರ ಭವತಿ ಸ್ವಾಮಿನ್ ಕೃತಾರ್ಥೋ ಸ್ಮ್ಯಹಮ್||೨೮||ಅರ್ಥ- ಹೇ ಭವಾನೀಶ !ನಿನ್ನ ಪೂಜೆಯಿಂದ ಸಾರೂಪ್ಯ(ಮುಕ್ತಿ) ಶಿವ,ಮಹದೇವ, ಎಂಬ ನಾಮಸ್ಮರಣೆಯಿಂದ ಸಾಮೀಪ್ಯ ,ಶಿವಭಕ್ತರೊಡನೆ ಸಂಭಾಷಣೆ ಸಹವಾಸದಿಂದ ಸಾಲೋಕ್ಯ ,ನಿನ್ನ ರೂಪಧ್ಯಾನದಿಂದ ಸಾಯುಜ್ಯ ಮುಕ್ತಿಯೂ ನನಗೆ ಸಿದ್ಧವಾಗಿದೆ. ಹೇ ಸ್ವಾಮಿ! ನಾನು ಕೃತಾರ್ಥನಾದೆ.ಶ್ಲೋಕ- ತತ್ಪಾದಾಂಬುಜರ್ಚಯಾಮಿ ಪರಮಂ ತ್ವಾಂ ಚಿಂತಯಾಮ್ಯನ್ವಹಂತ್ವಾಮೀಶಂಶರಣಂ ವ್ರಜಾಮಿ ವಚಸಾ ತ್ವಾಮೇವ ಯಾಚೇ ವಿಭೋ|ವಿಕ್ಷಾಂಮೇ ದಿಶ ಚಾಕ್ಷುಷೀಂ ಸಕರುಣಾಂ ದಿವ್ಯೈಶ್ಚಿರಂ ಪ್ರಾರ್ಥತಾಂ ಶಂಭೋ ಲೋಕಗುರೋ ಮದೀಯಮನಸಃ ಸೌಖ್ಯೋಪದೇಶಂ ಕುರು||೨೯||ಅರ್ಥ- ಹೇ ಪ್ರಭೋ! ನಿನ್ನ ಪಾದಕಮಲ ಪೂಜಿಸುವೆ. ಪರಮಾತ್ಮನಾದ ನಿನ್ನನ್ನು ಸದಾ ಚಿಂತಿಸುವೆ. ಸ್ವಾಮಿಯಾದ ನಿನ್ನನ್ನು ಮೊರೆಹೋಗುವೆ. ಮಾತುಗಳಿಂದ ನಿನ್ನ ಬಾ ಬೇಡುವೆ. ಹೇ ಶಂಭೋ ಲೋಕಗುರುವೇ ಯಾವ ನಿನ್ನ ಕರುಣೆಯ ಕಡೆಗಣ್ಣೋಟಕ್ಕಾಗಿ ದೇವತೆಗಳು ಬಹುಕಾಲದಿಂದ ಪ್ರರ್ಥಿಸುವರೋ ಅದನ್ನು ನನ್ನ ಮೇಲೆ ಬೀರು ,ನನ್ನ ಮನಸ್ಸಿಗೆಸುಖವನ್ನುಂಟು ಮಾಡು.[4/20, 14:02] ಅಂಕಣ -೧೨ ಪ್ರಾಚೀನ ಭಾರತದಲ್ಲಿ ರಚನೆಯಾದ ಶ್ರೀ ಶಂಕರರಿಂದ ರಚಿತವಾದ ಶ್ರೀ ಚಕ್ರ ಅತ್ಯಂತ ಜಟಿಲ ಜಾಮೆಟ್ರಿಯ ರೇಖಾನಕ್ಷೆ. ಆ ರೇಖಾನಕ್ಷೆಯ ಪ್ರಭಾವ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಆದದ್ದು ಕೂಡಾ ಒಂದು ಮಹಿಮೆಯೇ ಸರಿ.    ತಿರುಪತಿ ದೇವಸ್ಥಾನಕ್ಕೆ ಇಸ್ಟೊಂದು ಮಂದಿ ಬೇಟಿನೀಡುವರು ಎನ್ನುವ ಪ್ರಶ್ನೆ ಬಂದಾಗಲೆಲ್ಲ ಒಂದು ಮಾತು ಕೇಳಿ ಬರುತ್ತದೆ. ಅದು ಆದಿ ಶಂಕರರು ತಿರುಪತಿಗೆ ಬೇಟಿನೀಡಿದಾಗ ಜನಾಕರ್ಷಣ ಮತ್ತು ಧನಾಕರ್ಷಣ ಯಂತ್ರವನ್ನು ಸ್ಥಾಪಿಸಿರುವರು ಅದರ ಪ್ರಭಾವವೇ ಇದು ಕ್ಷೇತ್ರದಲ್ಲಿ ಸುಪ್ತವಾಗಿದೆ. ಆ ಕಾರಣದಿಂದ ಅಸ್ಟೊಂದು ಜನಸ್ತೋಮ ,ಕಾಣಿಕೆ ಸಂದಾಯವಾಗುತ್ತಿದೆ. ಎನ್ನುವ ಮಾತು ಕೇಳಿ ಬರುತ್ತಿದೆ. ಜನಾಕರ್ಷಣೆ ಮತ್ತು ಧನಾಕರ್ಷಣೆ ಮಂತ್ರವನ್ನು ಶ್ರೀ ಶಂಕರರು ಸ್ಥಾಪಿಸಿದರು ಎನ್ನುವ ಉಲ್ಲೇಖವಿದೆ. ಶಂಕರಾಚಾರ್ಯರು ತಿರುಪತಿಗೆ ಬೇಟಿನೀಡಿರುವ ಸಂಗತಿಯ ಆಧಾರವಿದೆ. " ತಿರುಪತಿ ಕ್ಷೇತ್ರ ಮಹಾತ್ಮೆ" ಪುಸ್ತಕದಲ್ಲಿ ಸಿಗುವ ಉಲ್ಲೇಖ ಅವರು ಭಗವಂತನ ದರ್ಶನ ಮಾಡಿ ಪುಳಕಿತರಾಗಿ " ವಿಷ್ಣು ಪದಾತಿ ಕೇಶಾಂತ" ಸ್ತೋತ್ರ ರಚಿಸುತ್ತಾರೆ.         ಆ ಸ್ತೋತ್ರದಲ್ಲಿ ಆಚಾರ್ಯರು ಭಗವಂತನ ಅಸಾದೃಶ್ಯ ಸೌಂದರ್ಯವನ್ನು ವರ್ಣಿಸುತ್ತಾರೆ. ಸ್ತೋತ್ರದ ಕೊನೆಯಲ್ಲಿ ನಯನ ಮನೋಹರ ವೆಂಕಟೇಶ್ವರನನ್ನು ಜನರು ದರ್ಶಿಸಿ ಧನ್ಯರಾಗಲಿ ಎಂದು ಆಶಿಸುತ್ತಾರೆ. ಇದೇ ಗ್ರಂಥದಲ್ಲಿ ಮತ್ತೊಂದು ವಿಚಾರ ಉಲ್ಲೇಖವಾಗಿದೆ. ಅದೆಂದರೆ ಶ್ರೀವಾರಿ ಹುಂಡಿ ಮತ್ತು ಕೆಳಭಾಗದಲ್ಲಿ ಸ್ಥಾಪನೆಯಾಗಿರುವ ಶ್ರೀಚಕ್ರ ಇರುವದರಿಂದ ಲಕ್ಷ್ಮೀ ಕಟಾಕ್ಷ ಹರಿದು ಬರುತ್ತಿದೆ ಎನ್ನುವ ನಂಬಿಕೆಯು ನಿದರ್ಶನದಂತೆ ಶ್ರೀವಾರಿ ಹುಂಡಿಯಲ್ಲಿ ಪ್ರತಿನಿತ್ಯ ಭಕ್ತರಿಂದ ಕಾಣಿಕೆ ರೂಪದಲ್ಲಿ ಸಂಗ್ರಹವಾಗುತ್ತಿರುವ ಲಕ್ಷಾಂತರ ರೂಪಾಯಿ ಚಿನ್ನಾಭರಣಗಳೇ ಸಾಕ್ಷಿ. ಅಂತಹ ಭಗವನ್ ಸಾಕ್ಷಾತ್ಕಾರಿ ಶ್ರೀ ಶಂಕರರ ಶಿವಾನಂದ ಲಹರಿಯ ಮುಂದಿನ ಶ್ಲೋಕಗಳು ಅದರ ಅರ್ಥವನ್ನು ತಿಳಿದು ಓದಿ ಪುನೀತರಾಗೋಣ.ಶ್ಲೋಕ- .ನಾಲಂ ವಾ ಪರಮೋಪಕಾರಮಿದಂ ತ್ವೇಕಂ ಪಶೂನಾಂ ಪತೇ ಪಶ್ಯನ್ ಕುಕ್ಷಿಗತಾಶ್ಚರಾಚರಗಣಾನ್ ಬಾಹ್ಯಸ್ಥಿತಾನ್ ರಕ್ಷಿತುಮ್|ಸರ್ವಾಮರ್ತ್ಯಪಲಾಯನೌಷಧಮತಿಜ್ವಾಲಾಕರಂ ಭೀಕರಂನಿಕ್ಷಿಪ್ತಂ ಗರಲಂ ಗಲೇ ನ ಗಿಲಿತಂ ನೋದ್ಗೀರ್ಣಮೇವ ತ್ವಯಾ||೩೧||ಅರ್ಥ- ಹೇ ಪಶುಪತೇ! ಜ್ವಾಲೆಯನ್ನು ಮೀರಿ ಭಯಂಕರವಾದ ವಿಷವನ್ನು ಕಂಡು ದೇವಾಸುರರು ಪಲಾಯನಗೈದರೋ ಅಂತಹ ವಿಷವನ್ನು ನನ್ನ ಉದರದ ಒಳಗೆ ಹಾಗೂ ಹೊರಗಿರುವ ಜೀವರಾಶಿಯನ್ನು ರಕ್ಷಿಸಲೆಂದೇ ನೀನು ನುಂಗದೇ ಉಗಳದೇ ನಿನ್ನ ಕಂಠದಲ್ಲಿರಿಸಿಕೊಂಡೆ.ಈ ನಿನ್ನ ಪರೋಪಕಾರವೇ ನಿನ್ನ ಕಾರುಣ್ಯಕ್ಕೆ ಸಾಲದೇ?ಶ್ಲೋಕ- ಜ್ವಾಲೋಗ್ರಸ್ಸಕಲಾಮರಾತಿಭಯದಃ ಕ್ಷ್ವೇಲಃ ಕಥಂ ವಾತ್ವಯಾದೃಷ್ಟಃ ಕಿಂ ಚ ಕರೇ ಧೃತಃ ಕರತಲೇ ಕಿಂ ಪಕ್ವಜಂಬೂಫಲಂ|ಜಿಹ್ವಾಯಾಂ ನಿಹಿತಶ್ಚಸಿದ್ಧಘುಟಿಕಾ ವಾ ಕಂಠದೇಶೇ ಭೃತಃಕಿಂತೇ ನೀಲಮಣಿರ್ವಿಭೂಷಣಮಯಂ ಶಂಭೋ ಮಹಾತ್ಮನ್ವದ||೩೨||ಅರ್ಥ- ಹೇ ಶಂಭೋ ! ಮಹಾನುಭಾವ ಜ್ವಾಲೆಗಳನ್ನುಗುಳುತ್ತ ಎಲ್ಲರಿಗೂ ಭಯವನ್ನುಂಟುಮಾಡುವ ಈ ಹಾಲಾಹಲ ವಿಷವನ್ನು ನೀನು ಹೇಗೆ ಸಹಿಸಿದೆ? ಹೇಗೆ ಧರಿಸಿದೆ? ಅದನ್ನು ಪಕ್ವವಾದ ಹಣ್ಣೆಂದು ತಿಳಿದು ಅಂಗೈಯಲ್ಲಿ ಧರಿಸಿದೆಯಾ? ಸಿಧ್ಧೌಷಧವೆಂದು ನಾಲಿಗೆಯಲ್ಲಿರಿಸಿದೆಯಾ? ಇದೊಂದು ನೀಲಮಣಿ ,ನನಗಿದು ಭೂಷಣ ವೇ ಆದೀತು ಎಂದು ಭಾವಿಸಿ ಕಂಠದಲ್ಲಿ ಧರಿಸಿದೆಯಾ?ಶ್ಲೋಕ- ನಾಲಂ ವಾಸಕೃದೇವ ದೇವ ಭವತಸೇವಾ ನತಿರ್ವಾ ನುತಿಃ ಪೂಜಾ ವಾ ಸ್ಮರಣಂ ಕಥಾಶ್ರವಣಮಪ್ಯಾಲೋಕನಂ ಮಾದೃಶಾಮ್|ಸ್ವಾಮಿನ್ನಸ್ಥಿರದೇವತಾನುಸರಣಾಯಾಸೇನ ಕಿಂ ಲಭ್ಯತೇಕಾ ವಾಮುಕ್ತಿರಿತಃ ಕುತೋ ಭವತಿ ಚೇತ್ಕಿಂ ಪ್ರರ್ಥನೀಯಂ ತದಾ ||೩೩||ಅರ್ಥ- ಹೇ ದೇವಾ!ನಮಗೆ ನಿನ್ನ ಸೇವೆ ,ವಂದನೆ ಸ್ತೋತ್ರ, ಪೂಜೆ ಕಥಾಶ್ರವಣ, ಇವುಗಳನ್ನು ಒಮ್ಮೆ ಮಾಡಿದರೆ ಸಾಲದೇ ?ಹೇ ಸ್ವಾಮಿ !ಇತರ ದೇವತೆಗಳ ಅನುಸರಣೆಯಿಂದ ಏನು ಫಲ? ಇದಕಿಂತ ಬೇರೆ ಮೋಕ್ಷ ಯಾವುದು ? ಅದಕ್ಕೆ ನಿನ್ನ ಹೊರತು ಬೇರೆ ದೇವತೆಯಿಂದ ಲಭಿಸೀತು? ಹಾಗೆ ಲಭಿಸುವದೇ ಆದರೆ ಇದನ್ನು ಬಿಟ್ಟು ಕೇಳಿಕೊಳ್ಳುವದೇನಿದೆ?ಶ್ಲೋಕ- ಕಿಂಬ್ರಮಸ್ತವ ಸಾಹಸಂ ಪಶುಪತೇ ಕಸ್ಯಾಸ್ತಿಶಂಭೋ ಭವದ್ಧೈರ್ಯಂ ಚೇದೃಶಮಾತ್ಮನಃ ಸ್ಥಿತಿರಿಯಂ ಚಾನ್ಯೈಃ ಕಥಂ ಲಭ್ಯತೇ| ಭ್ರಶ್ಯದೇವಗಣಂ ತ್ರಸನ್ಮುನಿಗಣಂನಶ್ಯತ್ಪ್ರಪಂಚಂ ಲಯಂ ಪಶ್ಯನಿರ್ಭಯ ಏಕ ಏವ ವಿಹರಾತ್ಯಾನಂದಸಾಂದ್ರೋ ಭವಾನ್||,೩೪||ಅರ್ಥ- ಹೇ ಪಶುಪತೇ ! ನಿನ್ನ ಸಾಹಸವನ್ನು ಕುರಿತು ಏನು ಹೇಳೋಣ! ನಿನ್ನಲ್ಲಿರುವ ಧೈರ್ಯ ಯಾರಲ್ಲಿದೆ? ನಿನ್ನ ಈ ಸ್ತಿತಿಯನ್ನುಇತರರು ಯಾರು ತಾನೆ ಹೊಂದಬಲ್ಲರು? ದೇವಗಣವು ಪತನವಾಗಲು ,ಋಷಿಗಳು ಭಯಪಡಲು, ಜಗತ್ತು ನಾಶವಾಗಲು ,ಆ ಪ್ರಳಯವನ್ನು ನೋಡುತ್ತ ಆನಂದಘನನಾದ ನಾನು ನೀನು ನಿರ್ಭಯನೂ ಅದ್ವೀತಿಯನೂ ಆಗಿ ವಿಹರಿಸುವೆ.----------------------------------------ಗಿರಿಜಾ.ಶಂಕರ.ದೇಶಪಾಂಡೆ. ಬೆಂಗಳೂರು: ಅಂಕಣ- ೧೩ ಶಂಕರರ ತಾಯಿ ಆರ್ಯಾಂಬೆಯ ಒಪ್ಪಿಗೆ ಪಡೆದು  ಸನ್ಯಾಸತ್ವ ತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಂಡರು. ಆಗ ನರ್ಮದಾನದಿ ತೀರದಲ್ಲಿ ಗೋವಿಂದಬಗವತ್ಪಾದರೆಂಬ ಯತೀಂದ್ರರು ನೆಲೆಸಿದ್ದರು. ಅವರು ಗೌಡಪಾದಾಚಾರ್ಯರ ಸಾಕ್ಷಾತ ಶಿಷ್ಯರು .ಬ್ರಹ್ಮಜ್ಞಾನಿಗಳೆಂದು ವಿಖ್ಯಾರಾಗಿದ್ದ ಅವರ ಬಳಿಗೆ ಶ್ರೀ ಶಂಕರರು ಹೋಗಿ ನಮಸ್ಕರಿಸಿ ತಮ್ಮ ವೃತ್ತಾಂತವನ್ನೆಲ್ಲ ಹೇಳಿಕೊಂಡರು. ಈ ಬಾಲಯತಿಯ ವಿನಯ, ತೇಜಸ್ಸು,ವಾಗ್ಮಿತೆಗಳನ್ನು ಕಂಡು ಸಂತುಷ್ಟರಾದ ಗೋವಿಂದಯತಿಗಳು ಈತನಿಗೆ ವಿಧಿಪೂರ್ವಕವಾಗಿ ಸನ್ಯಾಸದೀಕ್ಷೆಯನ್ನಿತ್ತು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದರು. ಶಂಕರರು ವೇದಾಂತ ಅಧ್ಯಯನ ಮಾಡಿದರು. ಉಪನಿಷತ್ತು,ಭಗವದ್ಗೀತೆ ಶಾರೀರಿಕ ಸೂತ್ರ ಎಂಬ ಪ್ರಸ್ಥಾನತ್ರಯಗಳನ್ನು ಗೋವಿಂದ ಯತಿಗಳು ಶ್ರೀ ಶಂಕರರಿಗೆ ಬೋಧಿಸಿ ಸಾಂಪ್ರದಾಯಕವಾದ ವೈದಿಕ ಸಿದ್ಧಾಂತವು ಕೇವಲ ಬ್ರಹ್ಮಾದ್ವೈತವೆಂದು ತಿಳಿಸಿದರು. ಮಹಾ ಮೇಧಾವಿಯಾದ ಶ್ರೀ ಶಂಕರರು ಬಹುಬೇಗ ಶಾಸ್ತ್ರರಹಸ್ಯವನ್ನರಿತುಕೊಂಡು ಸಕಲ ಶಾಸ್ತ್ರಗಳಲ್ಲೂ ನಿಷ್ಣಾತರಾದರು. ಅನಂತರ ಗುರುಗಳ ಆದೇಶದಂತೆ ಪ್ರಸ್ಥಾನತ್ರಯಕ್ಕೆ ಭಾಷ್ಯಗಳನ್ನು ರಚಿಸಿ ವೇದಾಂತ ಪ್ರತಿಪಾದ್ಯವಾದ ಕೇವಲಾದ್ವೈತ ಸ್ಥಾಪಿಸಬೇಕೆಂದು ಲೋಕ ಸಂಗ್ರಹ ಕಾರ್ಯದಲ್ಲಿ ತೊಡಗಿ ಅವೈದಿಕ ಮತಗಳ ಪ್ರಸರಣ ತಡೆಗಟ್ಟಬೇಕೆಂದು ಸಂಕಲ್ಪಿಸಿ ಗುರುಗಳ ಆಶೀರ್ವಾದ ಪಡೆದು ಕಾಶಿಗೆ ಪ್ರಯಾಣ ಮಾಡಿದರು. ಶ್ರೀ ವಿಶ್ವನಾಥನ ದರ್ಶನ ಮಾಡಿ ಗಂಗಾತೀರದಲ್ಲಿ ' ಕರತಲಭಿಕ್ಷಃ ತರುತಲವಾಸಃ' ಆದರು.ಆರೀತಿಯ ವಿದ್ವತ್ತು ಗಳಿಸಿದ ಶಂಕರ ರಚಿತ ಶಿವಾನಂದ ಲಹರಿಯ ಮುಂದಿನ ಶ್ಲೋಕಗಳು ಅರ್ಥ,ತಾತ್ಪರ್ಯ ತಿಳಿದು ಪುನೀತರಾಗೋಣ.ಶ್ಲೋಕ- *ಯೋಗಕ್ಷೇಮದುರಂಧರಸ್ಯ ಸಕಲಶ್ರೇಯಃದೋದ್ಯೋಗಿನೋದೃಷ್ಟಾದೃಷ್ಟಮತೋಪದೇಶಕೃತಿನೋ ಬ್ರಹ್ಮಾಂತರ ವ್ಯಾಪಿನಃ|ಸರ್ವಜ್ಞಸ್ಯ ದಯಾಕರಸ್ಯ ಭವತಃ ಕಿಂ ವೇದಿತವ್ಯಂ ಮಯಾಶಂಭೋ ತ್ವಂ ಪರಮಾಂತರಂಗ ಇತಿ ಮೇ ಚಿತ್ತೇ ಸ್ಮರಾಮ್ಯನ್ವಹಮ್||ಅರ್ಥ- ಹೇ ಶಂಭೋ! ನಮ್ಮ ಯೋಗಕ್ಷೇಮದ ಭಾರ ವಹಿಸಿರುವ ಸಕಲ ಶ್ರೇಯಸ್ಸನ್ನು ಕೊಡಬಲ್ಲ ಇಹ ಪರ ಫಲಗಳನ್ನು ತಿಳಿಸುವುದಲ್ಲಿ ಸರ್ವ ಸಮರ್ಥನಾದ ,ಒಳಗೆ ಹೊರಗೆ ವ್ಯಾಪಿಸಿರುವ ಸರ್ವಜ್ಞನಾದ ನಿನ್ನಲ್ಲಿ ನಾನು ಕೋರುವದಾದರೂ ಏನಿದೆ? ನೀನೇ ನನ್ನ ಅಂತರ್ಯಾಮಿಯೆಂದು ನನ್ನ ಮನದಲ್ಲಿ ಸದಾ ಸ್ಮರಿಸುವೆ. ಶ್ಲೋಕ- ಭಕ್ತೋ ಭಕ್ತಿಗುಣಾವೃತೇ ಮುದಮೃತಾಪುರ್ಣೇ ಪ್ರಸನ್ನೇ ಮನಃ ಕುಂಭೇ ಸಾಂಬ ತವಾಂಘ್ರಿಪಲ್ಲವಯುಗಂ ಸಂಸ್ಥಾಪ್ಯ ಸಂವಿತ್ಫಲಮ್|ಸತ್ತ್ವಂ ಮಂತ್ರಮುದೀರಯನ್ನೀಜಶರೀರಾಗಾರಶುದ್ಧಿಂ ವಹನ್ಪುಣ್ಯಾಹಂಪ್ರಕಟೀಕರೋಮಿ ರುಚಿರಂ ಕಲ್ಯಾಣಮಾಪಾದಯನ್|| ಅರ್ಥ- ಹೇ ಸಾಂಬ! ನಿನ್ನ ಭಕ್ತನಾದ ನಾನು ,ಭಕ್ತಿಯೆಂಬ ದಾರದಿಂದ ಸುತ್ತಲ್ಪಟ್ಟಿರುವ ,ಆನಂದವೆಂಬ ನೀರಿನಿಂದ ತುಂಬಿದ,ಶಾಂತ ಮನಸ್ಸೆಂಬ ಪೂರ್ಣಕುಂಭದಲ್ಲಿ ,ನಿನ್ನ ಚರಣಕಮಲಗಳೆಂಬ ಚಿಗುರುಗಳನ್ನಿರಿಸಿ ,ಜ್ಞಾನವೆಂಬ ಫಲವನ್ನುಟ್ಟು ,ಭಕ್ತಿಶಾಲಿಯಾದ ನಿನ್ನ ಮಂತ್ರವನ್ನು ಪಠಿಸುತ್ತ ,ನನ್ನ ದೇಹವೆಂಬ ಗೃಹವನ್ನು ಶುದ್ಧಗೊಳಿಸಿ ,ಪುಣ್ಯಾಹ ಕರ್ಮವನ್ನಾಚರಿಸುವೆ.----------------------------------------ಗಿರಿಜಾ.ಎಸ್.ದೇಶಪಾಂಡೆ.ಬೆಂಗಳೂರು.[4/20, 14:04] : ಅಂಕಣ- ೧೪ ರಾತ್ರಿಯ ಅವಧಿ ಕಳೆದು ಸೂರ್ಯನು ಉದಿಸುವದು ತಡವಾಗಬಹುದು. ಸೂರ್ಯೋದಯವಾದ ಮೇಲೆ ಸೂರ್ಯಪ್ರಕಾಶವು ಎಲ್ಲೆಡೆಯೂ ಹರಡಿ ದಿಗಂತ ಮುಟ್ಟುವದು ತಡವಾಗದು. ಅದರಂತೆ ಶಂಕರಾಚಾರ್ಯರ ಕೀರ್ತಿಯು ಬಹುಬೇಗನೇ ಹರಡಿತು. ಅವರ ಘನಪಾಂಡಿತ್ಯವನ್ನೂವಾಕ್ಶಕ್ತಿಯನ್ನು ತಪೋಬಲಾರ್ಜಿತವಾದ ಬ್ರಹ್ಮತೇಜಸ್ಸನ್ನೂ ನೋಡಿ ಬೆರಗಾಗಿ ,ಕಾಶಿಕ್ಷೇತ್ರದ ವಿದ್ವಾಂಸರು ಆಚಾರ್ಯರಿಗೆ ಶರಣಾದರು.ದಕ್ಷಿಣದ ಚೋಳದೇಶದಿಂದ ಸನಂದನೆಂಬ ವಿದ್ವಾಂಸನು ಬಂದು ಶ್ರೀ ಶಂಕರರಿಂದ ಸನ್ಯಾಸವನ್ನು ಸ್ವೀಕರಿಸಿ ,ಪದ್ಮಪಾದಾಚಾರ್ಯರೆಂದು ಪ್ರಸಿದ್ಧರಾದರು. ಶ್ರೀ ಶಂಕರರು ಒಂದು ದಿನ ಸ್ನಾನಕ್ಕಾಗಿ ಗಂಗಾನದಿಗೆ ಹೋಗುತ್ತಿದ್ದರು. ಅವರನ್ನು ಪರೀಕ್ಷಿಸುವದಕ್ಕಾಗಿ ಪರಮೇಶ್ವರನು ಅಂತ್ಯಜವೇಷವನ್ನು ಧರಿಸಿ ನಾಲ್ಕು ನಾಯಿಗಳೊಡನೆ ಎದುರಿಗೆ ಬಂದನು. ಆಚಾರ್ಯರು "ಅಯ್ಯಾ,ನಮಗೆ ದಾರಿಯನ್ನು ಬಿಟ್ಟು ಆಚೆ ಸರಿದುಕೊ" ಎಂದರು. ಅಂತ್ಯಜನು ಸ್ವಾಮಿ ಯಾರು ಸರಿಯಬೇಕು? ನಿಷ್ಕ್ರೀಯವಾದ ಬ್ರಹ್ಮಸರಿಯಬೇಕೋ ಅಥವಾ ಜಡವಾದ ದೇಹವೋ? ಎಂದು ಕೇಳಿದನು. ಆ ಅಂತ್ಯಜನು ಇವರ ತೇಜಸ್ಸು ನೋಡಿ ಬ್ರಹ್ಮಜ್ಞಾನಿಯೆಂದು ತಿಳಿಯಲು ಶ್ರೀ ಶಂಕರರು ಅಲ್ಲಿಯೇ ಮನೀಷಾ ಪಂಚಕವೆಂಬ ಪದ್ಯಮಾಲಿಕೆ ರಚಿಸಿ ಹಾಡಿದರು. ಆ ಪದ್ಯಗಳ ಕಡೆಯ ಸಾಲು" *ಚಂಡಾಲೋಸ್ತು ಸ ತು ದ್ವಿಜೋಸ್ತು ಗುರುರಿತ್ಯೇಷಾ ಮನೀಷಾ ಮಮ*ಎಂದಿರುತ್ತದೆ." ಬ್ರಹ್ಮಜ್ಞಾನಿಯಾದವನು ಚಂಡಾಲನಾಗಿರಲಿ ಬ್ರಾಹ್ಮಣನಾಗಿರಲಿ ,ಆತನೇ ಗುರುವೆಂದು ತನ್ನ ದೃಡವಾದ ನಿಶ್ಚಯ " ಎಂದು ಆ ಸಾಲಿನ ಅರ್ಥ. ಒಡನೆಯೇ ಅಂತ್ಯಜ ವೇಷ ಧರಿಸಿಬಂದಿದ್ದ ವಿಶ್ವನಾಥಸ್ವಾಮಿಯು ತನ್ನ ದಿವ್ಯರೂಪವನ್ನು ತೋರಿಸಿ ಪ್ರಸನ್ನನಾಗಿ ಅಭಯ ಹಸ್ತವನ್ನು ನೀಡಿ ಅಂತರ್ದಾನ ಹೊಂದಿದನು. ಪರಮೇಶ್ವರನ ಅಭಯಹಸ್ತ ತಮ್ಮ ಮುಂದಿನ ಕಾರ್ಯಗಳಿಗೆ ದೊರಕಿತೆಂದು ಆಚಾರ್ಯರು ಸಂತುಷ್ಟರಾದರು.ಅಂತಹ ಆಚಾರ್ಯರು ರಚಿಸಿದ ಶಿವಾನಂದಲಹರಿಯ ಮುಂದಿನ ಶ್ಲೋಕಗಳು ಮತ್ತು ಅರ್ಥವನ್ನು ತಿಳಿಯೋಣ.ಶ್ಲೋಕ- *ಆಮ್ನಾಯಾಂಬುಧಿಮಾದರೇಣ ಸುಮನಸ್ಸಘಾಸ್ಸಮುದ್ಯನ್ಮನೋಮಂಥಾನಂ ದೃಡಭಕ್ತಿರಜ್ಜುರಹಿತಂ ಕೃತ್ವಾಮಥಿತ್ವಾತತಃ|ಸೋಮಂಕಲ್ಪತರುಂ ಸುಪರ್ವಸುರಭಿಂ ಚಿಂತಾಮಣಿಂ ಧೀಮತಾಂನಿತ್ಯಾನಂದಸುಧಾಂ ನಿರಂತರರಮಾಸೌಭಾಗ್ಯಮಾತನ್ವತೇ*||೩೭||ಅರ್ಥ- ನಿರ್ಮಲ ಮನಸ್ಸೆಂಬ ದೇವತೆಗಳು ,ದೃಡಭಕ್ತಿಯನ್ನು ಹಗ್ಗವನ್ನಾಗಿಸಿ ,ಮನಸ್ಸನ್ನು ಕಡಗೋಲನ್ನಾಗಿಸಿ , ವೇದಗಳೆಂಬ ಸಾಗರವನ್ನು ಕಡೆದು ,ಇದರಿಂದ ಚಂದ್ರ,ಕಲ್ಪವೃಕ್ಷ, ಕಾಮಧೇನು ಚಿಂತಾಮಣಿಗೆ ಸದೃಶವಾದ ,ಜ್ಞಾನಿಗಳಿಗೆನಿತ್ಯಾನಂದ ನೀಡುವ ಅಮೃತಸಮಾನನಾದ ನಿನ್ನನ್ನು ಸೌಭಾಗ್ಯದಂತೆ ಭಕ್ತರು ಪಡೆಯುತ್ತಾರೆ.ಶ್ಲೋಕ- ಪ್ರಾಕ್ಷುಣ್ಯಾಚಲಮಾರ್ಗದರ್ಶಿತಸುಧಾಮೂರ್ತಿಃ ಪ್ರಸನ್ನಶ್ಯಿವಃಸೋಮಸ್ಸದ್ಗುಣಸೇವಿತೊ ಮೃಗಧರಃ ಪೂರ್ಣಸ್ತಮೋಮೋಚಕಃ|ಚೇತಃಪುಷ್ಕರಲಕ್ಷತೋ ಭವತಿ ಚೇದಾನಂದಪಾಥೋನಿಧಿಃಪ್ರಾಗಲ್ಭೇನ ವಿಜೃಂಭತೇ ಸುಮನಸಾಂ ವೃತ್ತಸ್ತದ ಜಾಯತೇ||೩೮||ಅರ್ಥ- ಪೂರ್ವಜನ್ಮದ ಸುಕೃತವೆಂಬ ಪವಿತ್ರವಾದ ಉದಯಾದ್ರಿಯ ಮೂಲಕ ಕಂಡ ದಿವ್ಯ ಮಂಗಳ ಮೂರ್ತಿಯೂ ,ಪ್ರಮಥರೆಂಬ ನಕ್ಷತ್ರಗಣ ಸಹಿತನಾದ ,ಮೃಗಧರನು,ಪೂರ್ಣನೂ , ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸುವ ಶಿವನೆಂಬ ಚಂದ್ರನು ಹೃದಯಕಮಲವೆಂಬ ಆಕಾಶದಲ್ಲಿ ಕಂಡರೆ ಆನಂದವೆಂಬ ಕಡಲು ಉಕ್ಕುತ್ತದೆ. ಆಗ ನಿರ್ಮಲಮನಸ್ಸಿನ ಭಕ್ತರಿಗೆ ಬ್ರಹ್ಮಾನಂದ,ದೈವತ್ವುಂಟಾಗುತ್ತದೆ.ಶ್ಲೋಕ- ಧರ್ಮೋ ಮೇ ಚತುರಂಘ್ರಿಕಃ ಸುಚರಿತಃ ಪಾಪಂ ವಿನಾಶಂ ಗತಂಕಾಮಕ್ರೋಧಮದಾದಯೋ ವಿಗಲಿತಾಃ ಕಾಲಾಃ ಸುಖಾವಿಷ್ಕೃತಾಃ|ಜ್ಞಾನಾನಂದ ಮಹೌಷಧಿಃಸುಫಲಿತಾ ಕೈವಲ್ಯನಾಥೇ ಸದಾಮಾನ್ಯೇ ಮಾನಸಪುಂಡರೀಕನಗರೇ ರಾಜಾವತಂಸೇ ಸ್ಥಿತೇ||೩೯||ಅರ್ಥ- ಮೋಕ್ಷ ಸಾಮ್ರಾಜ್ಯದ ಒಡೆಯನೂ ,ಪೂಜ್ಯನೂ, ಆದ ಚಂದ್ರಶೇಖರನೆಂಬ ಚರ್ಕವರ್ತಿಯು,ನನ್ನ ಹೃದಯಕಮಲವೆಂಬ ನಗರದಲ್ಲಿ ವಾಸಿಸುತ್ತಿರಲಾಗಿ ಸದಾ ಧರ್ಮವು ತನ್ನ ನಾಲ್ಕೂ ಕಾಲುಗಳಿಂದ ವಿಜೃಂಭಿಸುತ್ತಿದೆ. ಪಾಪವು ನಾಶವಾಗುತ್ತಿದೆ. ಕಾಮ- ಕ್ರೋಧ- ಮದಾದಿಗಳು ಬಿಟ್ಟು ಹೋಗಿವೆ. ಕಾಲವು ಸುಖ ನೀಡುತ್ತದೆ. ಜ್ಞಾನ,ಆನಂದವೆಂಬ ಶ್ರೇಷ್ಟವಾದ ಸಸ್ಯವು ಫಲಗಳನ್ನೀಡುತ್ತದೆ.----------------------------------------ಗಿರಿಜಾ.ಎಸ್.ದೇಶಪಾಂಡೆ.ಬೆಂಗಳೂರು. ಅಂಕಣ- ೧೫ ಶಿವನ ದರ್ಶನ ಪಡೆದು ಸ್ವಲ್ಪ ದಿನದಲ್ಲೇ ಶ್ರೀ ಶಂಕರರು ಶಿಷ್ಯಪರಿವಾರದೊಂದಿಗೆ ಬದರಿಕಾಶ್ರಮಕ್ಕೆ ತೆರಳಿ ತಪೋನಿರತರಾಗುವರು. ಶ್ರೀಗುರುಪ್ರೇರಣೆಯಂತೆ ಪ್ರಸ್ಥಾನ ತ್ರಯಗಳಿಗೆ ವಿಸ್ತಾರವಾದ ಭಾಷ್ಯ ರಚಿಸಿದರು. ಬದರಿಯ ಕೆಲವು ವಿದ್ವಾಂಸರು ತಪಸ್ವಗಳು ಆ ಭಾಷ್ಯಗಳನ್ನು ಓದಿ ಹರುಷದಿಂದ ಈ ತರುಣ ಯತಿಯನ್ನು ಪ್ರಶಂಷೆಮಾಡಿದರು. ಆ ಭಾಷ್ಯಗಳನ್ನು ಶಿಷ್ಯರಿಗೆ ಬೋಧಿಸತೊಡಗಿದರು.       ಗಂಗಾತೀರದಲ್ಲಿ ಸೂತ್ರಬಾಷ್ಯದ ಅಧ್ಯಾಪನವು ನಡೆಯುತ್ತಿರುವಾಗವೇದವ್ಯಾಸರು ಒಬ್ಬ ಬ್ರಾಹ್ಮಣರ ವೇಷದಲ್ಲಿ ಬಂದು ಆಚಾರ್ಯರ ಬೋಧನಾಕ್ರಮವನ್ನು ವೀಕ್ಷಿಸುತ್ತ ಕುಳಿತರು. ಒಂದು ಸೂತ್ರದ ವಿಷಯದಲ್ಲಿ ಬ್ರಾಹ್ಮಣನಿಗೂ ಆಚಾರ್ಯರಿಗೂ ವಾದ ಪ್ರಾರಂಭವಾಯಿತು. ಬ್ರಾಹ್ಮಣನ ಪ್ರಶ್ನೆಗೆ ಆಚಾರ್ಯರು ಧೀರವಾಣಿಯಿಂದ ಉತ್ತರಿಸುತಿದ್ದರು. ಸಂತುಷ್ಟರಾದ ವ್ಯಾಸರು ತಮ್ಮ ನಿಜರೂಪದಿಂದ ಪ್ರತಕ್ಷರಾಗಿ "ಶಂಕರಯತಿ ! ನಾನು ರಚಿಸಿದ ಈ ಶಾರೀರಕ ಸೂತ್ರಗಳ ಅರ್ಥವನ್ನು ಸಮೀಚೀನನಾಗಿ ತಿಳಿದುಕೊಂಡಿರುವೆ. ನನ್ನ ಹೃದಯ ನೀನು ಬಲ್ಲೆ.ಇದೆಲ್ಲವನ್ನೂ ಭರತಖಂಡದಲ್ಲಿ ಪ್ರಚಾರಮಾಡಿ ವೈದಿಕತತ್ವವವನ್ನು ಸಂರಕ್ಷಿಸು. ನಿನಗೆ ಶುಭವಾಗಲಿ! " ಎಂದು ಹರಸಿ ಅಂತರ್ಹೀನರಾದರು. ಈ ಪ್ರಸಂಗದಿಂದ ಆಚಾರ್ಯರಿಗೆ ಸಂತೋಷ ವಿಸ್ಮಯಗಳೆರಡೂ ಒಟ್ಟಿಗೆ ಆದವು. ಗುರುಗಳಾದ ಶ್ರೀಗುರುಗೋವಿಂದ ಭಗವತ್ಪಾದರ ಆಜ್ಞೆಯೂ ಸ್ಮರಣೆಗೆ ಬಂದಿತು. ಅಂತಹ ಶ್ರೀ ಶಂಕರರು ರಚಿಸಿದ ಶಿವಾನಂದ ಲಹರಿಯ ಶಿವನನ್ನು ಸ್ಮರಿಸಿ ನಮಗೆ ಜ್ಞಾನನೀಡಿದ ಶಿವಾನಂದಲಹರಿಯ ಮುಂದಿನ ಶ್ಲೋಕ ಅದರ ಅರ್ಥ ತಾತ್ಪರ್ಯ ತಿಳಿಯೋಣ.ಶ್ಲೋಕ- ಧಿಯಂತ್ಏಣ ವಚೋಘುಟೇನ ಕವಿತಾಕುಲ್ಯೋಪಕುಲ್ಯಾಕ್ರಮೈರಾನಿತೈಶ್ಚಸದಾಶಿವಶ್ಚ ಸದಾಶಿವಸ್ಯ ಚರಿತಾಂಭೋರಾಶಿದಿವ್ಯಾಮೃತೈಃ|ಹೃತ್ಕೇದಾರಯುತಾಶ್ಚಭಕ್ತಿಕಲಮಾಃ ಸಾಫಲ್ಯಮಾತನ್ವತೇದುರ್ಭಿಕ್ಷಾನ್ಮಮ ಸೇವಕಸ್ಯ ಭಗವನ್ವಶ್ವೇಶ ಭೀತಿಃ ಕುತಃ||೪೦||ಅರ್ಥ- ಹೇ ವಿಶ್ವೇಶ್ವರ ಬುದ್ಧಿಯೆಂಬ ಯಂತ್ರದ ಮೂಲಕ ,ಮಾತುಗಳೆಂಬಮಡಕೆಯಿಂದ ,ಕವಿತೆಯೆಂಬ ಅನೇಕ ಕಾಲುವೆ- ಉಪಕಾಲುವೆಗಳ ಮೂಲಕ ತಂದ ,ಸದಾಶಿವನ ದಿವ್ಯ ಚರಿತ್ರೆಯೆಂಬ ಸಾಗರದ ಅಮೃತೋದ್ಭವದಿಂದ ಹೃದಯವೆಂಬ ಭೂಮಿಯಲ್ಲಿ ಬಿತ್ತಿರುವ ಭಕ್ತಿಯೆಂಬ ಭಕ್ತವು ಫಲಕೊಡುವಾಗ ನನಗೆ ದುರ್ಭಿಕ್ಷೆಯಲ್ಲಿಯದು?ಶ್ಲೋಕ- ಪಾಪೋತ್ಪಾತವಮೋಚನಾಯ ರುಚಿರೈಶ್ವರ್ಯಾಯ ಮೃತ್ಯುಂಜಯಸ್ತೋತ್ರಧ್ಯಾನನತಿಪ್ರದಕ್ಷಿಣಸರ್ಪರ್ಯಾಲೋಕನಾಕರ್ಣನೇ|ಜಿಹ್ವಾಚಿತ್ತ ಶಿರೋಂಘ್ರಿಹಸ್ತನಯನಶ್ರೋತ್ರೈರಹಂ ಪ್ರಾರ್ಥಿತೋಮಾಮಾಜ್ಞಾಪಯ ತನ್ನಿರೂಪಯ ಮುಹುರ್ಮಾಮೇವ ಮಾಮೇಚಃ||೪೧||ಅರ್ಥ- ಹೇ ಮೃತ್ಯುಂಜಯನೇ ಪಾಪಗಳೆಂಬ ಅನಾಹುತಗಳಿಂದ ಬಿಡುಗಡೆ ಹೊಂದಲು ,ಐಶ್ವರ್ಯ ಪ್ರಾಪ್ತಿಗಾಗಿಯೂ ,ನನ್ನ ನಾಲಿಗೆ ಶಿರಸ್ಸು,ಮನಸ್ಸು,ಕಣ್ಣು,ಕಿವಿ,ಕಾಲುಗಳು ನಿನ್ನ ಸ್ತೋತ್ರ ಧ್ಯಾನ ,ನಮಸ್ಕಾರಾದಿಗಳಲ್ಲಿ ನಿಯೋಜಿಸೆಂದು ಪ್ರಾರ್ಥನೆ. ಆದ್ದರಿಂದ ಮತ್ತೆ ಮತ್ತೆ ನಿನ್ನನ್ನು ಸ್ತೋತ್ರಮಾಡಲು ಅನುಮತಿಸು. ಈ ವಿಷಯದಲ್ಲಿ ಉದಾಶೀನ ಬೇಡ.ಶ್ಲೋಕ- ಗಾಂಭೀರ್ಯಂ ಪರಿಖಾಪದಂ ಘನಧೃತಿಃ ಪ್ರಾಕಾರ ಉದ್ಯದ್ಗುಣಸ್ತೋಮಶ್ಚಾಪ್ರಬಲಂ ಘನೇಂದ್ರಿಯಚೋದ್ವಾರಾಣಿ ದೇಹಸ್ಥಿತಃ|ವಿದ್ಯಾ ವಸ್ತುಸಮೃದ್ಧಿರಿತ್ಯಖಿಲಸಾಮಗ್ರೀಸಮೇತೇ ಸದಾ ದುರ್ಗಾತಿಪ್ರೀಯದೇವಮಾಮಕಮನೋದುರ್ಗೇ ನಿವಾಸಂ ಕುರು||೪೨||ಅರ್ಥ- ಹೇ ದುರ್ಗಾಪ್ರೀಯನೇ ನನ್ನ ಮನವೆಂಬ ದುರ್ಗಕ್ಕೆ ಗಾಂಭೀರ್ಯವೇ ಕಂದಕ, ಧೈರ್ಯವೇ ಪ್ರಾಕಾರ, ಸದ್ಗುಣಗಳೇ ಸೈನ್ಯ ,ಇಂದ್ರಿಯಗಳೇಬಾಗಿಲುಗಳು,ವಿದ್ಯೆಯೇ ಸರಕು ಸಾಮಗ್ರಿಗಳು, ಇಂಥಹ ಸಮೃದ್ಧವಾದ ದುರ್ಗದಲ್ಲಿ ನೀನು ಸದಾ ವಾಸಮಾಡು.ಶ್ಲೋಕ- ಮಾಗಚ್ಛ ತ್ವ ಮಿತಸ್ತತೋ ಗಿರೀಶ ಭೋ ಮಯೈವವಾಸಂ ಕುರು ಸ್ವಾಮಿನ್ನಾದಿಕಿರಾತ ಮಾಮಕಮನಃ ಕಾಂತಾರಸೀಮಾಂತರೇ|ವರ್ತಂತೇ ಬಹುಶೋ ಮೃಗಾ ಮದಜುಷೋ ಮಾತ್ಸರ್ಯ ಮೋಹಾದಯ ಸ್ತಾನ್ ಹತ್ವಾ ಮೃಗಯಾವಿನೋದರುಚಿತಾಲಾಭಂ ಚ ಸಂಪ್ರಾಪ್ಸ್ಯಸಿ ||೪೩||ಅರ್ಥ- ಹೇ ಗಿರೀಶ ನನ್ನಲ್ಲೇ ವಾಸಮಾಡು ,ಅಲ್ಲಿ ಇಲ್ಲಿ ಹೋಗದಿರು ಸ್ವಾಮಿ ಬೇಟೆಗಾರನೇ ! ನನ್ನ ಮನವೆಂಬ ಕಾಡಿನಲ್ಲಿ ಕಾಮ ಕ್ರೋಧ ,ಮದ,ಮತ್ಸರಗಳೆಂಬ ಅನೇಕ ಕೊಬ್ಬಿದ ಮೃಗಗಳಿವೆ. ಇವುಗಳನ್ನು ಕೊಂದು ಬೇಟೆಯ ವಿನೋದ ಆನಂದಗಳನ್ನುಹೊಂದುವಿ.ತಾತ್ಪರ್ಯ- ಶಿವನ ಸ್ತೋತ್ರ ಮಾಡಲು ಪ್ರತಿಯೊಬ್ಬರ ಇಂದ್ರಿಯಗಳನ್ನು ಪ್ರಾರ್ಥಿಸಲು ಅನುಮತಿ ನೀಡು ಎನ್ನುವ ಶ್ಲೋಕದ ಅರ್ಥ, ಮನವೆಂಬ ದುರ್ಗದಲ್ಲಿ ನೀನು ಸದಾ ವಾಸಮಾಡು ಎಂದು ಕೇಳುವ ರೀತಿ, ಮನವೆಂಬ ಕಾಡಿನಲ್ಲಿ ಶಿವನ ಸ್ತುತಿಸುತ್ತಭಗವಂತನ ಬೇಟೆಯ ಆನಂದ ಪಡೆ ಎನ್ನುವ ಉಕ್ತಿ ಈ ರೀತಿಯ ಶ್ಲೋಕಗಳು ಮತ್ತು ಅದರ ರಚನೆ ಬರೆದು ಎಲ್ಲ ಆಸಕ್ತರಿಗೂ ಉಣಬಡಿಸುವ ಭಾಗ್ಯ ನೀಡಿದ ನನ್ನ ಭಗವತ್ಪಾದರ ಆಶೀರ್ವಾದ ಸದಾ ನಮ್ಮೆಲ್ಲರ ಮೇಲೆ ಇರಲೆಂದು ಆಶಿಸುವ,ಗಿರಿಜಾ.ಎಸ್.ದೇಶಪಾಂಡೆ.ಬೆಂಗಳೂರು. ಅಂಕಣ - ೧೬ ಆಗ ಮಿಮಾಂಸಾ ಶಾಸ್ತ್ರದಲ್ಲಿ ವಿಖ್ಯಾತಿ ಗಳಿಸಿದ್ದ ಕುಮಾರಿಲಭಟ್ಟರೆಂಬ ಬಹುದೊಡ್ಡ ವಿದ್ವಾಂಸರು ಪ್ರಯಾಗದಲ್ಲಿರುವರು ಎಂಬ ಸುದ್ದಿ ತಿಳಿದು ಶಂಕರರು ತಮ್ಮ ಸೂತ್ರ ಬಾಷ್ಯಕ್ಕೆ ವಾರ್ತಿಕಗಳನ್ನು ಬರೆಸಬೇಕೆಂದು ಶ್ರೀ ಶಂಕರರು ಪ್ರಯಾಗಕ್ಕೆ ಹೋದರು. ಕುಮಾರಿಲಭಟ್ಟರು ಬೌದ್ಧಮತದ ಪ್ರಮೇಯ ತಿಳಿಯುವದಕ್ಕಾಗಿ ಒಬ್ಬ ಬೌದ್ಧ ಗುರುವಿನ ಶಿಷ್ಯರಾಗಿ ಆ ಮತದ ವಿಷಯ ಕಲಿತು ಅನಂತರ ಬೌದ್ಧ ಮತ ಖಂಡಿಸಿದ್ದರು. ಇದರಿಂದ ಗುರುದ್ರೋಹವಾಯಿತೆಂದು ಆ ಧರ್ಮನಿಷ್ಟ ವಿದ್ವಾಂಸರು ಪ್ರಯಶ್ಛಿತಾರ್ಥವಾಗಿ ತಪಾಗ್ನಿಯನ್ನು ಪ್ರವೇಶಿಸಿ ಕುಳಿತಿದ್ದರು. ತುಷಾಗ್ನಿಯಲ್ಲಿ ಸುಟ್ಟು ಸಾಯುವದೇ ಪ್ರಾಯಶ್ಛಿತವೆಂದು ಅವರ ನಿರ್ಣಯವಾಗಿತ್ತು. ಆಚಾರ್ಯರು ಅವರ ಬಳಿಗೆ ಹೋಗಿ ವಿಷಯ ತಿಳಿಸಿದರು.ಆಗ ಕಾಲಾತ್ಯಯವಾಯಿತೆಂದು ವ್ಯಥಿತರಾದ ಕುಮಾರಿಲರು ಆಚಾರ್ಯರೇ ನಿಮ್ಮ ಭಾಷ್ಯಕ್ಕೆ ವಾರ್ತಿಕಗಳೆಂದು ಬರೆಯುವ ಭಾಗ್ಯ ನನಗಿಲ್ಲದೇ ಹೋಯಿತೆಂದು ನನ್ನ ಶಿಷ್ಯನಾದ ವಿಶ್ವರೂಪನು ಮಾಹಿಷ್ಮತೀ ನಗರಲ್ಲಿದ್ದಾನೆ. ಆತನು ಅತ್ಯಂತ ದಕ್ಷ ಪಂಡಿತ ಶ್ರೇಷ್ಟನಾಗಿದ್ದಾನೆ. ಅವನನ್ನು ನೀವು ವಾದದಲ್ಲಿ ಗೆದ್ದು ಜ್ಞಾನಕಾಂಡದ ಶ್ರೇಷ್ಟತೆಯನ್ನು ಸ್ಥಾಪಿಸಿದರೆ ,ನಿಮ್ಮ ಕಾರ್ಯ ಸಿದ್ಧಿಯಾಗುವದು. ಎಂದರು. ಆಗ ಶಂಕರರು ಮಾಹಿಷ್ಮತಿ ನಗರಕ್ಕೆ ಶಿಷ್ಯ ಸಮೇತರಾಗಿ ಹೋದರು. ವಿಶ್ವರೂಪನನ್ನು ಕಂಡು ತಮ್ಮ ವಿಷಯ ಅರುಹಿದರು.       ವಾದಕ್ಕೆ ಸಿದ್ಧನಾದ ವಿಶ್ವರೂಪನಿಗೂ ,ಆಚಾರ್ಯರಿಗೂ ಕೆಲವು ದಿನಗಳವರೆಗೆ ಕರ್ಮ ಜ್ಞಾನ ವಿಷಯದಲ್ಲಿ ಅತ್ಯಂತ ಪ್ರೌಡ ವಿಚಾರವಾಗಿ ವಾದ ನಡೆಯಿತು. ಕರ್ಮವೇ ಮೋಕ್ಷಕ್ಕೆ ಕಾರಣವೆಂದು ವಿಶ್ವರೂಪನ ಪಕ್ಷ. ಜ್ಞಾನವೇ ಮೋಕ್ಷಕ್ಕೆ ಕಾರಣ ವೆನ್ನುವದು ಶಂಕರರ ಪಕ್ಷ. ವಿಶ್ವರೂಪನ ಪತ್ನಿ ಸರ್ವಶಾಸ್ತ್ರ ಪಾರಂಗತಳೂ ಆದ ಉಮಾಭಾರತಿಯ ಮಧ್ಯಸ್ಥಳಾಗಿದ್ದಳು. ವಾದದಲ್ಲಿ ವಿಶ್ವರೂಪ ಸೋತು ಸೋಲನ್ನು ಒಪ್ಪಿಕೊಂಡನು. ಆಮೇಲೆ ಉಮಾಭಾರತಿ ಶಂಕರರೊಂದಿಗೆ ವಾದದಲ್ಲಿ ಸೋತಳು. ವಿಶ್ವರೂಪನು ಶ್ರೀ ಶಂಕರರ ಲೋಕಾತೀತವಾದ ಪಾಂಡಿತ್ಯವೈಖರಿಯನ್ನು ನೋಡಿ ಅವರಿಗೆ ಶರಣಾದನು. ಅವರ ಶಿಷ್ಯವೃತ್ತಿ ಸ್ವೀಕರಿಸಿ ಸನ್ಯಾಸ ಪರಿಗ್ರಹಿಸಿದರು. ಅವರೇ ಸುರೇಶ್ವರಾಚಾರ್ಯರು. ಅಂತಹ ವಿದ್ವತ್ತನ್ನು ಹೊಂದಿದ ಶ್ರೀ ಶಂಕರರು ರಚಿಸಿದ ಶಿವಾನಂದ ಲಹರಿಯ ಶಿವನ ಗುಣಗಾನ ,ಭಕ್ತಿರಸದ ಬಗ್ಗೆ ತಿಳಿಯೋಣ.ಶ್ಲೋಕ- *ಕರಲಗ್ನಮೃಗಃ ಕರೀಂದ್ರಭಂಗೋಘನಶಾರ್ದೂಲವಿಖಂಡನೋಸ್ತಜಂತುಃ|ಗಿರಿಶೋ ವಿಶದಾಕೃತಿಶ್ಚಚೇತಃಕುಹರೇ ಪಂಚಮುಖೋಸ್ತಿಮೇ ಕುತೋ ಭೀಃ||ಅರ್ಥ- ಕೈಯಲ್ಲಿ ಜಿಂಕೆಯನ್ನು ಧರಿಸಿರುವ ,ಗಜಾಸುರನನ್ನು ಸಂಹರಿಸಿದ ಬೃಹದ್ ಗಾತ್ರದ ಹುಲಿಯನ್ನು ಕತ್ತರಿಸುವ ,ಕ್ರೂರ ಪ್ರಾಣಿಗಳಿಗೆ ಮೃತ್ಯುಪ್ರೀಯನಾದ ,ಬೃಹದಾಕಾರನ ಗಿರೀಶನೆಂಬ ಸಿಂಹವು ನನ್ನ ಹೃದಯವೆಂಬ ಗುಹೆಯಲ್ಲಿರುವಾಗ ನನಗೇತರ ಭಯ?ಶ್ಲೋಕ- ಛಂದಶ್ಯಾಖಿಶಿಖಾನ್ವಿತೈರ್ದ್ವಿಜವರೈಃಸಂಸೇವಿತೇ ಶಾಶ್ವತೇ ಸೌಖ್ಯಾಪಾದಿನಿ ಖೇಧಬೇಧಿನಿ ಸುಧಾಸಾರೈಃ ಫಲೈರ್ದಿಪಿತೇ|ಚೇತಃಪಕ್ಷಿಶಿಖಾಮಣೇ ತ್ಯಜವೃಥಾ ಸಮಾಚಾರಮನೈರಲಂ ನಿತ್ಯಂ ಶಂಕರಪಾದಪದ್ಮ ಯುಗಲೀನೀಡೇ ವಿಹಾರಂಕುರು||೪೫||ಹೇ ಮನವೆಂಬ ಪಕ್ಷಿಯೇ ವೇದಗಳೆಂಬ ವೃಕ್ಷದ ಉಪನಿಷತ್ತುಗಳೆಂಬ ತುದಿಯಲ್ಲಿರುವ ಜ್ಞಾನಿಗಳೆಂಬ ಪಕ್ಷಿಗಳಿಂದ ಸೇವಿಸಲ್ಪಡುವ ,ಶಾಶ್ವತವೂ ,ಸೌಖ್ಯದವೂ, ದುಃಖನಾಶಕವೂ ಆದ ಅಮೃತ ಸಮಾನ ಫಲವನ್ನೀಯುವ ಶಿವ ಪಾದಪದ್ಮ ಯುಗಲವೆಂಬ ಗೂಡಿನಲ್ಲಿ ಆನಂದದಿಂದ ವಾಸಿಸು ವೃಥಾ ಸಂಚಾರ ಬೇಡ.ಶ್ಲೋಕ- ಆಕೀರ್ಣೇ ನಖರಾಜಿಕಾಂತಿವಿಭವೈರುದ್ಯತ್ಸುಧಾವೈಭವೈ ರಾಧೌತೇಪಿ ಚ ಪದ್ಮರಾಗಲಲಿತೇ ಹಂಸವ್ರಜೈರಾಶ್ರಿತೇ|ನಿತ್ಯಂಭಕ್ತಿವಧೂಗಣೈಶ್ಚರಹಸಿ ಸ್ವೇಚ್ಛಾವಿಹಾರಂ ಕುರುಸ್ಥತ್ವಾಮಾನಸರಾಜಹಂಸ ಗಿರಿಜಾಗಿರಿಜಾನಾಥಾಂಘ್ರಿಸೌಧಾಂತರೇ||೪೬||ಅರ್ಥ- ಹೇ ಮನಸೆಂಬ ರಾಜಹಂಸವೇ ಉಗುರುಗಳ ಕಾಂತಿಯಿಂದ ,ಚಂದ್ರನ ಅಮೃತಕಿರಣಗಳೆಂಬ ಸುಣ್ಣದ ಲೇಪದಿಂದ ಶುಭ್ರಧವಲ ವರ್ಣದಿಂದ ಶೋಭಿಸುವ ಶುದ್ಧ ತಾವರೆಯ ಅರುಣ ಕಾಂತಿಯ ಪದ್ಮರಾಗದಿಂದ ಸುಂದರವಾದ ಪರಮಹಂಸರೆಂಬ ಯತಿಗಳಿಂದ ಆಶ್ರಯಿಸಲ್ಪಟ್ಟ ಗಿರಿಜಾರಮಣನ ಪಾದಗಳೆಂಬ ಅರಮನೆಯಲ್ಲಿ ನಿಲ್ಲಿಸಿ ಭಕ್ತಿಯೆಂಬ ಯುವತಿಯೊಡನೆ ರಹಸ್ಯವಾಗಿ ಸ್ವೇಚ್ಛೆಯಿಂದ ವಿಹರಿಸು.ತಾತ್ಪರ್ಯ- ಶಿವನ ಗುಣಾನುಗುಣಗಳನ್ನು ಅನೇಕ ರೀತಿಯಲ್ಲಿ ವರ್ಣಿಸಿ ಅದ್ಭುತ ರಹಸ್ಯಗಳಿಂದ ಶೋಭಿಸುವ ಕೃತಿ ಇದಾಗಿದೆ. ತಾಂತ್ರಿಕ ರಹಸ್ಯಗಳ ಗೂಡತೆ ಈ ಕಾವ್ಯದಲ್ಲಿಲ್ಲ. ಭಕ್ತಿಯ ಸರಳ ನೇರವಾದ ಪ್ರತಿಬಿಂಬವಿದೆ. ಜೀವಾತ್ಮನು ಪರಶಿವನನ್ನು ಹೊಂದಲು ಮೊದಲು ಅನುಸರಿಸಬೇಕಾದದ್ದು ಭಕ್ತಿಮಾರ್ಗವೇ ಎಂಬುದನ್ನು ಶಂಕರರು ಹೇಳುವದನ್ನು ಎಲ್ಲಿಯೂ ಮರೆತಿಲ್ಲ.ಗಿರಿಜಾ.ಎಸ್.ದೇಶಪಾಂಡೆ.ಬೆಂಗಳೂರು. ಅಂಕಣ ಬರಹ-೧೭     ಶಂಕರರು ವಾದದಲ್ಲಿ ಗೆಲುವು ಸಾಧಿಸಿ ಸುರೇಶ್ವರಾದಿ ಶಿಷ್ಯರೊಡನೆ ದಕ್ಷಿಣಕ್ಕೆ ಪ್ರಯಾಣ ಮಾಡಿದರು. ಶ್ರೀಶೈಲ,ಗೋಕರ್ಣ,ಕೊಲ್ಲೂರು, ಶಿವಳ್ಳಿ ಮಾರ್ಗವಾಗಿ ಶೃಂಗೇರಿಗೆ ಆಗಮಿಸಿದರು. ಶ್ರೀಬಲಿಯಲ್ಲಿ ಹಸ್ತಾಮಲಕರು ಶಿಷ್ಯರಾದರು. ಶೃಂಗೇರಿಯಲ್ಲಿ ತೋಟಕಾಚಾರ್ಯರು ಆಚಾರ್ಯರಿಗೆ ಶಿಷ್ಯರಾಗಿ ದೊರಕಿದರು. ಪದ್ಮಪಾದ,ಸುರೇಶ್ವರ, ಹಸ್ತಾಮಲಕ ,ತೋಟಕ ಎಂಬ ನಾಲ್ವರು ನಾಲ್ಕು ವೇದಗಳು ಎಂಬಂತೆ ಆಚಾರ್ಯರ ಪ್ರಮುಖ ಶಿಷ್ಯರಾಗಿದ್ದರು. ಶ್ರೀ ಶಂಕರ ಯತೀಂದ್ರರು ವೈದಿಕ  ಧರ್ಮ ರಕ್ಷಣೆಯ ಪ್ರಥಮಕಾರ್ಯವಾಗಿ ಶೃಂಗೇರಿಯಲ್ಲಿ ವಿಧ್ಯಾಧಿದೇವತೆಯಾದ ಶ್ರೀ ಶಾರದಾದೇವಿಯನ್ನು ಪ್ರತಿಷ್ಟಾಪಿಸಿದರು. ಈ ಸ್ಥಳವೇ ಮುಂದೆ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠವೆಂದು ಪ್ರಸಿದ್ಧವಾಯಿತು.       ಶ್ರೀ ಶಂಕರರು ತಮ್ಮ ಪ್ರಸ್ಥಾನತ್ರಯಗಳನ್ನು ಶಿಷ್ಯರಿಗೆ ಬೋಧಿಸುತ್ತ ಶೃಂಗೇರಿಯ ತುಂಗಾತೀರದಲ್ಲಿ ಕೆಲವು ಕಾಲ ನೆಲೆಸಿದ್ದರು. ಈ ಸಮಯದಲ್ಲೇ ಉಪದೇಶ ಸಾಹಶ್ರಿ, ವಿವೇಕಚೂಡಾಮಣಿ ,ಮುಂತಾದ ಕೆಲವು ಪ್ರಕರಣ ಗ್ರಂಥಗಳನ್ನು ಭಕ್ತಿಪೂರ್ಣವಾದ ಶಿವಾನಂದ ಲಹರಿಯನ್ನೂ ರಚಿಸಿದರು. ಅಂತಕ ಕೃತಿಯ ಮುಂದಿನ ಶ್ಲೋಕ ಅದರ ಅರ್ಥ ತಾತ್ಪರ್ಯ ತಿಳಿಯೋಣ.ಶ್ಲೋಕ- ಅಕೀರ್ಣೇ ನಖರಾಜಿಕಾಂತಿವಿಭವೈರುದ್ಯತ್ಸುಧಾವೈಭವೈ ರಾಧೌತೇಪಿ ಚ ಪದ್ಮರಾಗಲಲಿತೇ ಹಂಸವ್ರಜೈರಾಶ್ರಿತೇ|ನಿತ್ಯಂ ಭಕ್ತಿವಧೈಗಣೈಶ್ಚ ರಹಸಿ ಸ್ವೇಚ್ಛಾವಿಹಾರಂ ಕುರುಸ್ಥಿತ್ವಾ ಮಾನಸರಾಜಹಂಸ ಗಿರಿಜಾನಾಥಾಂಘ್ರಿಸೌಧಾಂತರೇ||೪೬||ಅರ್ಥ- ಹೇ ಮನಸೆಂಬ ರಾಜಹಂಸವೇ ! ಉಗುರುಗಳ ಕಾಂತಿಯಿಂದ ,ಚಂದ್ರನಾಮೃತಕಿರಣಗಳೆಂಬ ಸುಣ್ಣದ ಲೇಪದಿಂದ ಶುಭ್ರಧವಲ ವರ್ಣದಿಂದ ಶೋಭಿಸುವ ತಾವರೆಯ ಅರುಣ ಕಾಂತಿಯ ಪದ್ಮರಾಗದಿಂದ ಸುಂದರವಾದ ಪರಮಹಂಸರೆಂಬ ಯತಿಗಳಿಂದ ಆಶ್ರಯಿಸಲ್ಪಟ್ಟ ಗಿರಿಜಾರಮಣನ ಪಾದಗಳೆಂಬ ಅರಮನೆಯಲ್ಲಿ ನಿಲ್ಲಿಸಿ ,ಭಕ್ತಿಯೆಂಬ ಯುವತಿಯೊಡನೆ ರಹಸ್ಯವಾಗಿ ಸ್ವೇಚ್ಛೆಯಿಂದ ವಿಹರಿಸು.ಶ್ಲೋಕ- ಶಂಭುಧ್ಯಾನವಸಂತಸಂಗಿನಿ ಹೃದಾರಾಮೇಘಜೀರ್ಣಛದಾಃಸ್ರಸ್ತಾಭಕ್ತಿಲತಾಚ್ಛಟಾ ವಿಲಸಿತಾಃ ಪುಣ್ಯಪ್ರಲಾವಾಶ್ರಿತಾಃ|ದೀಪಂತೇ ಗುಣಕೋರಕಾ ಜಮವಚಃಪುಷ್ಪಾಣಿ ಸದ್ವಾಸನಾಜ್ಞಾನಾನಂದ ಸುಧಾಮರಂದಲಹರೀ ಸಂವಿತ್ಫಲಾಭ್ಯನ್ನತಿಃ||೪೭||ಅರ್ಥ- ಶಿವಧ್ಯಾನ ಎಂಬ ವಸಂತಮಾಸದ ಸಹವಾಸದಿಂದ ಹೃದಯವೆಂಬ ತೋಟದಲ್ಲಿ ಪಾಪವೆಂಬ ಹಣ್ಣೆಲೆಗಳು ಉದುರಿದವು. ಭಕ್ತಿಯೆಂಬ ಬಳ್ಳಿಗಳು ಪುಣ್ಯವೆಂಬ ಚಿಗುರಿನಿಂದ ಶೋಭಿಸುತ್ತವೆ. ಸದ್ಗುಣಗಳೆಂಬ ಮೊಗ್ಗುಗಳು, ಮಂತ್ರ ಜಪಗಳೆಂಬ ಹೂಗಳು ಅಮೃತಸದೃಶವಾದ ಜ್ಞಾನ ಆನಂದಗಳೆಂಬ ಮಕರಂದದ ಝರಿ ಇವೆಲ್ಲವೂ ಬ್ರಮ್ಮಾನುಭವವೆಂಬ ಫಲವು ಯತೇಚ್ಛವಾಗಿ ನೀಡಿ ಪ್ರಕಾಶಿಸುತ್ತಿವೆ.ಶ್ಲೋಕ- ನಿತ್ಯಾನಂದರಸಾಲಯಂ ಸುರಮುನೀಸ್ವಾತಾಂಬುಜಾತಾಶ್ರಯಂ ಸ್ವಚ್ಛಂ ಸದ್ವೀಜಸೇವಿತಂ ಕಲುಷಹೃತ್ಸದ್ವಾಸನಾವಿಷ್ಕೃತಮ್|ಶಂಭುಧ್ಯಾನಸರೋವರಂ ವೃಜಮನೋಹಂಸಾವತಂಸಸ್ಥಿರಂಕಿಕ್ಷುದ್ರಾಶಯಫಲ್ವಲಭ್ರಮಣಸಂಜಾತಶ್ರಮಂ ಪ್ರಾಪ್ರ್ಯಸಿ||೪೮||ಅರ್ಥ- ಹೇ ಮನವೆಂಬ ರಾಜಹಂಸವೇ ! ನಿತ್ಯಾನಂದವೆಂಬ ನೀರಿಗೆ ಆಶ್ರಯವು ,ಸುರಮುನಿಗಳ ಅಂತರಂಗವೆಂಬ ಕಮಲಗಳಿಗೆ ಆಶ್ರಯವೂ ಸ್ವಚ್ಛವೂ ಸತ್ಪುರುಷರೆಂಬ ಪಕ್ಷಿಗಳಿಂದ ಸೇವಿತವೂ ಕಲಂಕವನ್ನು ನಾಶಪಡಿಸುವ ಪೂರ್ವಜನ್ಮ ಸಂಸ್ಕಾರವೆಂಬ ಪರಿಮಳಯುಕ್ತವಾದ ಶಿವಧ್ಯಾನವೆಂಬ ಸರೋವರದಲ್ಲಿ ಸದಾ ವಿಹರಿಸು. ಕ್ಷುದ್ರಜನರ ಆಶ್ರಯವೆಂಬ ಕೊಳಕು ಭಾವಿಯಲ್ಲಿ ಏಕೆ ಅಲೆದು ಶ್ರಮ ಪಡುವೆ?ಶ್ಲೋಕ- ಆನಂದಾಮೃತಪೂರಿತಾ ಹರಪದಾಂಭೋಜಾಲವಾಲೋದ್ಯತಾ ಸ್ಥೈರ್ಯೋಪಘ್ನಮುಪೇತ್ಯ ಭಕ್ತಿಲತಿಕಾ ಶಾಖೋಪಶಾಖಾನ್ವಿತಾ|ಉಚ್ಚೈರ್ಮಾನಸಕಾಯಮಾನಪಟಲೀಮಾಕ್ರಮ್ಯ ನಿಷ್ಕಲ್ಮಷಾ ನಿತ್ಯಾಭೀಷ್ಟಫಲಪ್ರಧಾ ಭವತು ಮೇ ಸತ್ಕರ್ಮಸಂವರ್ದಿತಾ||೪೯||ಅರ್ಥ- ಆತ್ಮಾನಂದವೆಂಬ ಜಲದಿಂದ ಘೋಷಿಸಲ್ಪಟ್ಟ ಹರನಪಾದಕಮಲವೆಂಬ ಪಾತಿಯಲ್ಲಿ ಮೊಳಕೆಯೊಡೆದ ಸ್ಥೈರ್ಯವೆಂಬ ವೃಕ್ಷವನ್ನಾಶ್ರಯಿಸಿ ಕೊಂಬೆ ರೆಂಭೆಗಳಿಂದ ಕೂಡಿದ ದೇಹವಸ್ಟು ಎತ್ತರವಾದ ಮನವೆಂಬ ಚಪ್ಪರದ ಮೇಲ್ಭಾಗದಲ್ಲಿ ಪುಷ್ಪವಾಗಿ ಬೆಳೆದಿರುವ ಸತ್ಕರ್ಮಗಳಿಂದ ಹುಲುಸಾಗಿ ಹರಡಿರುವ ಭಕ್ತಿಯಿಂದ ಬಳ್ಳಿಯು ಸದಾ ಇಸ್ಟಾರ್ಥಗಳನ್ನು ನೀಡಲಿ.ಈಗ ನಡೆದಿರುವದು ಕಾರ್ತಿಕಮಾಸ. ಶಿವನ ಆರಾಧನೆಯ ಮಾಸ. ಪ್ರತಿ ಸೋಮವಾರ ಶಿವನ ಆರಾಧನೆ ಮಾಡಿ ನಮ್ಮೆಲ್ಲರ ಇಸ್ಟಾರ್ಥಗಳು ಸಿದ್ಧಿಸಲಿ .ಎಲ್ಲರ ಮನೆಯಲ್ಲಿ ಬೆಳಗುವ ಕಾರ್ತಿಕ ದೀಪಗಳು ಮನಗಳನ್ನು ಬೆಳಗಿ ಎಲ್ಲರೂ ಸುಖವಾಗಿ ,ಸಂತಸದಿಂದ ಬಾಳಲಿ ಎನ್ನುವದೇ ಜಗದ್ಗುರು ಶಂಕರಾಚಾರ್ಯ ವಿರಚಿತ ಶಿವಾನಂದ ಲಹರಿಯ ತಾತ್ಪರ್ಯ. ಸಾಹಿತ್ಯಶ್ರಿ ಗಿರಿಜಾ.ಎಸ್.ದೇಶಪಾಂಡೆ.ಬೆಂಗಳೂರು. : ಅಂಕಣ - ೧೮ ಶಂಕರರರು ಅನೇಕ ಗ್ರಂಥಗಳನ್ಮು ರಚಿಸಿದ ನಂತರ ಕಾಲಟಿಯಲ್ಲಿದ್ದ ವೃದ್ಧಮಾತೆ ಆರ್ಯಾಂಬೆ ಮರಣಶಯ್ಯೆಯಲ್ಲಿ ಮಲಗಿ ಪಾತ್ರರಾದ ಶ್ರೀಶಂಕರರನ್ನು ಸ್ಮರಿಸಿಕೊಂಡರು. ಇದು ಆಚಾರ್ಯರ ದಿವ್ಯದೃಷ್ಟಿಗೆ ಗೋಚರವಾದೊಡನೆ ಒಬ್ಬರೇ ಕಾಲಟಿಗೆ ಪ್ರಯಾಣ ಮಾಡಿದರು. ಹಿಂದೆ ತಾವಿದ್ದ ಮನೆ ಪ್ರವೇಶಿಸಿ ಹಾಸಿಗೆಯಲ್ಲಿ ಮಲಗಿದ್ದ ತಾಯಿಯನ್ನು ಕಂಡರು. ಆ ವೃದ್ಧ ಮಾತೆ ಮಗನನ್ನು ನೋಡಿ ಹರ್ಷದಿಂದ ಉಲ್ಲಸಿತರಾದರು. ಆಕೆಯೊಡನೆ ಆಚಾರ್ಯರು ನಾಲ್ಕಾರು ಮಾತು ಆಡುವಷ್ಟರಲ್ಲಿ ಆರ್ಯಾಂಬೆ ದೇಹ ತ್ಯಜಿಸಿದರು.         ‌ಅಂತಹ ಸಮಯದಲ್ಲಿ ಒಬ್ಬ ದಾಯಾದಿಯೂ ಮನೆಯ ಕಡೆ ಸುಳಿಯಲಿಲ್ಲ. ಆಚಾರ್ಯರೇ ಹೋಗಿ ತಾಯಿಯ ಮರಣವನ್ನು ತಿಳಿಸಿ ಅವಳ ಅಂತ್ಯಕ್ರಿಯೆ ಮಾಡಬೇಕೆಂದು ಕೇಳಿಕೊಂಡರು. ಯಾರೂ ಅದಕ್ಕೆ ಒಪ್ಪಿ ಮುಂದೆ ಬರಲಿಲ್ಲ. ಆ ಜನರ ಕಠೋರ ಹೃದಯವರಿತು ಚಕಿತರಾದ ಆಚಾರ್ಯರು ತಾವೇ ಉತ್ತರ ಕ್ರಿಯೆಯನ್ನು ಮಾಡಬೇಕೆಂದು ನಿಚ್ಛಯಿಸಿ ಅಗ್ನಿಯನ್ನು ಯಾಚಿಸಿದರು. ಅಗ್ನಿಯನ್ನು ಕೊಡಲೂ ಆ ಮೂರ್ಖರು ನಿರಾಕರಿಸಿದರು. ಶ್ರೀ ಶಂಕರರು ಜನರ ದುಷ್ಟತನವನ್ನಿರತು ಖಿನ್ನರಾಗಿ ತಾವೇ ಅಗ್ನಿಯನ್ನು ಉತ್ಪಾದಿಸಿ ,ಮನೆಯ ಹಿತ್ತಲಿಗೆ ತಾಯಿಯ ಮೃತದೇಹವನ್ನೊಯ್ದು ವಿಧಿಪೂರ್ವಕ ದಹನಕ್ರಿಯೆ ನೆರವೇರಿಸಿದರು. " ಈ ಜನರು ನನ್ನ ತಾಯಿಗೆ ಯಾವ ಸಹಾಯ ಮಾಡಿರಲಿಕ್ಕಿಲ್ಲ ಮುಪ್ಪಿನಲ್ಲಿ ಅವಳು ತುಂಬಾ ಕಷ್ಟಕ್ಕೀಡಾಗಿರಬೇಕು ಅವಳ ಉತ್ತರಕ್ರಿಯೆ ಮಾಡಲೂ ಇವರು ನಿರಾಕರಿಸಿದರಲ್ಲ," ಎಂದು ಉದ್ವಗ್ನರಾದ ಅಚಾರ್ಯರು " ಎಲೈ ನೀವು ಕರ್ಮಬ್ರಷ್ಟರಾಗಿದ್ದೀರಿ.ನೀವು ವೇದ ಬಾಹ್ಯರಾಗಿರಿ"ಎಂದು ಆ ಬ್ರಾಹ್ಮಣರನ್ನು ಶಪಿಸಿ ಕಾಲಟಿಯಿಂದ ನಿರ್ಗಮಿಸಿದರು.ಆ ರೀತಿಯ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದ ಅವರು ರಚಿಸಿದ ಶಿವಾನಂದ ಲಹರಿಯ ಮುಂದಿನ ಶ್ಲೋಕಗಳನ್ನು ಅದರ ಅರ್ಥ ತಾತ್ಪರ್ಯ ಅರಿಯೋಣ.ಶ್ಲೋಕ- ಸಂಧ್ಯಾರಂಭವಿಜೃಭಿತಂ ಶ್ರುತಿಶಿರಃಸ್ಥಾನಾಂರಾಧಿಷ್ಠಿತಂಸಪ್ರೇಮಭ್ರಮರಾಭಿರಾಮಮಸಕೃತ್ಸದ್ವಾಸನಾಶೋಭಿತಮ್|ಭೋಗೀಂದ್ರಾಭರಣಂ ಸಮಸ್ತ ಸುಮನಃಪೂಜ್ಯಂ ಗುಣಾವಿಷ್ಕೃತಂ ಸೇವೇ ಶ್ರೀಗಿರಿ ಮಲ್ಲಿಕಾರ್ಜುನಮಹಾಲಿಂಗಂ ಶಿವಾಲಿಂಗಿಂತಂ||ಅರ್ಥ- ಮುಸಂಜೆಯಲ್ಲಿ ವೈಭವದಿಂದ ಮೆರೆಯುವ ಉಪನಿಷತ್ತುಗಳಲ್ಲಿ ನೆಲೆಗೊಂಡಿರುವ ಅನುರಾಗಭರಿತಳಾದ ಭ್ರಮರಾಂಭೆಯ ಸಾಮೀಪ್ಯದಿಂದ ಸುಂದರವಾಗಿರುವ ,ಪುಷ್ಪಗಳ ಸುವಾಸನೆಯಿಂದ ಶೋಭಿಸುತ್ತಿರುವ ,ಸರ್ಪರಾಜನನ್ನು ಧರಿಸಿರುವ , ದೇವಪೂಜಿತವಾದ ,ಪಾರ್ವತಿಯಿಂದ ಅಲಂಗಿತವಾದ ,ಶ್ರೀಶೈಲ ಮಲ್ಲಿಕಾರ್ಜುನ ಲಿಂಗವನ್ನು ಭಜಿಸುತ್ತೇನೆ.: ಶ್ಲೋಕ- ಭೃಂಗೀಚ್ಛಾನಟನೋಟತ್ಕತಃ ಕರಿಮದಗ್ರಾಹೀ ಸ್ಫುರನ್ಮಾಧವಾಹ್ಲದೋ ನಾದಯುತೋ ಮಹಾಶಿತವಪುಃ ಪಂಚೇ ಪುಣಾಚಾದೃತಃ|ಸತ್ಪಕ್ಷಸ್ಸಮನೋವನೇಷು ಸ ಪುನಃ ಸಾಕ್ಷ್ಮಾನ್ಮದೀಯೇ ಮನೋರಾಜೀವೇ ಭ್ರಮರಾಧಿಪೋ ವಿಹರತಾಂ ಶ್ರೀಶೈಲವಾಸೀ ವಿಭುಃ||೫೧||ಅರ್ಥ- ಭೃಂಗಿಯ ಬಯಕೆಯಂತೆ ನರ್ತಿಸುವ ಗಜಾಸುರನ ಮದವನ್ನು ಕಳೆಯುವ ವಿಷ್ಣುವಿನ ಸಂತೋಷ ತರುವ ಒಂಕಾರನಾದವನ್ನು ಮಾಡುವ ಅದ್ಭುತ ಪ್ರಮಾಣದ ಶ್ವೇತ ಶರೀರನಾದ ಮನ್ಮಥನಿಂದ ಪೂಜಿತನಾದ ಸತ್ಯವೆಂಬ ರೆಕ್ಕೆಗಳುಳ್ಳ ಶ್ರೀಶೈಲವಾಸಿಯೂ ಪ್ರಭುವೂ ಆದ ಭ್ರಮರಾಂಭಿಕಪತಿಯಾದ ಶಿವನು ನನ್ನ ಮನಸ್ಸೆಂಬ ವನದಲ್ಲಿ ವಿಹರಿಸಲಿ.ಶ್ಲೋಕ- ಕಾರುಣ್ಯಾಮೃತವರ್ಷಿಣಂ ಘನವಿಪಧ್ಗೀಷ್ಮಚ್ಚಿದಾಕರ್ಮತಂವಿದ್ಯಾಸಸ್ಯ ಫಲೋದಯಾಯ ಸುಮನಸಂಸೇವ್ಯ ಮಿಚ್ಛಾಕೃತಿಮ್ನೃತ್ಯದ್ಬಕ್ತಮಯೂರಮದ್ರಿನಿಲಯಂ ಚಂಚಜ್ಜಜಟಾಮಂಡಲಂಶಂಭೋ ವಾಂಛತಿ ನೀಲಕಂಧರ ಸದಾ ತ್ವಾಂ ಮೇ ಮನಶ್ಚಾತಕಃ||ಅರ್ಥ- ಹೇ ನೀಲಕಂಠ ಶಂಭೋ ,ಕರುಣೆಯೆಂಬ ಮಳೆ ಸುರಿಸುವ ವಿಪತ್ತುಗಳೆಂಬ ಬಿಸಿಲಿನ ತಾಪವನ್ನು ಹೋಗಲಾಡಿಸುವ ,ವಿದ್ಯೆಯೆಂಬ ಸಸ್ಯವು ಫಲನೀಡಲಿ. ಎಂಬುದಾಗಿ ವಿದ್ವಾಂಸರಿಂದ ಸದಾ ಸೇವಿತನಾದ ಸ್ವೇಚ್ಛೆಯಿಂದ ಕರ್ಮವನ್ನು ಮಾಡುವ ,ನರ್ತಿಸುವ ಭಕ್ತರೆಂಬ ನವಿಲುಗಳೊಡನೆ ಇರುವ ಪರ್ವತವನ್ನು ಆಶ್ರಿಯಿಸಿರುವ ,ಸುಳಿ ಕುರುಳ ಜಟಾಧಾರಿಯಾದ ನಿನ್ನನ್ನು ನನ್ನ ಮನವೆಂಬ ಜಾತಕಪಕ್ಷಿಯು ಸದಾ ಬಯಸುತ್ತದೆ.ಶ್ಲೋಕ- ಆಕಾಶೇನ ಶಿಖೀ ಸಮಸ್ತ ಫಣಿನಾಂ ನೇತ್ರಾಕಲಾಪಿ ನತಾ ನುಗ್ರಾಹಿಪ್ರಣವೋಪದೇಶನಿನದೈಃ ಕೇಕೀತಿ ಯೊ ಗೀಯತೇ|ಶಾಮಾಂಶೈಲಸಮುದಭವಾಂ ಘನರುಚಿಂ ದೃಷ್ಟ್ವಾಂ ನಟಂತಂ ಮುದಾ ವೇದಾಂತೋಪವನೇ ವಿಹಾರರಸಿಕಂ ತಂ ನೀಲಕಂಠಂ ಭಜೇ||೫೩||ಅರ್ಥ- ಆಕಾಶವೇ ಕೂದಲಾಗಿ ಉಳ್ಳವನೆಂದುದರಿಂದ ನವಿಲೆಂದೂ ,ಹಾವನ್ನೂ ರೆಕ್ಕೆಯಂತೆ ಧರಿಸುವದರಿಂದ ಕಲಾಪಿಯೆಂದೂ ನಮಿಸಿದವರನ್ನು ಪ್ರಣವೋಪದೇಶದಿಂದ ಅನುಗ್ರಹಿಸುವದರಿಂದ ಕೇಕೆಯಂದೂ ಶಾಮಲೆಯೂ ಸುಂದರಿಯೂ ಆದ ಶೈಲಜೆಯಂದು ನೋಡಿ ಆನಂದದಿಂದ ನರ್ತಿಸುವ ,ವೇದಾಂತವೆಂಬ ಕೈತೋಟದಲ್ಲಿ ವಿಹರಿಸುವ ನೀಲಕಂಠನೆಂಬ ನವಿಲನ್ನು ಭಜಿಸುವೆ. ( ಇಲ್ಲಿ ಶಿವನಿಗೂ ನವಿಲಿಗೂ ದ್ವಂದಾರ್ಥವಿದೆ) ನೀಲಕಂಠ, ನಂಜುಂಡೇಶ್ವರ,ಕಾಶಿಪುರಾಧೀಶ್ವರ, ಮಲ್ಲಿಕಾರ್ಜುನ, ನಂಜುಡೇಶ್ವರ, ಕಾಶೀ ವಿಶ್ವೇಶ್ವರ, ಗೋಕರ್ಣೇಶ್ವರ ಎಂದು ನಾನಾ ಹೆಸರಿನಿಂದ ಕರೆದು ಪೂಜಿಸುವ ಈಶ್ವರ ಪಾರ್ವತಿಯರಿಗೆ ಕಾರ್ತಿಕ ಮಾಸದಂದು ಭಕ್ತಿಯಿಂದ ನಮಿಸಿ ಆಶಿರ್ವಾದ ಪಡೆಯೋಣ.ಗಿರಿಜಾ.ಎಸ್.ದೇಶಪಾಂಡೆ.ಬೆಂಗಳೂರು.ನ[4/20, 14:18] *ಅಂಕಣ-೧೯* ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿದ ಶಂಕರರು ಅನೇಕರನ್ನು ಅಧ್ಯಾತ್ಮಕ್ಕೆ ಸಂಭಂಧಪಟ್ಟ ವಾದದಲ್ಲಿ ಸೋಲಿಸಿದರು. ಮಂಡನ ಮಿಶ್ರನ ನಂತರ ಶ್ರೀ ಸುರೇಶ್ವರಾಚಾರ್ಯರು ಎಂಬ ಹೆಸರಿನಿಂದ ಪ್ರಸಿದ್ಧರಾದ ಶಿಷ್ಯರಾದರು.        ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠ ಸ್ಥಾಪಿಸಿ ಪ್ರತೀ ಪೀಠಕ್ಕೆ ಒಬ್ಬೊಬ್ಬ ಶಿಷ್ಯರನ್ನು ಪೀಠಾಧಿಪತಿಯನ್ನಾಗಿಸಿದರು. ಅದ್ವೈತ ಸಿದ್ಧಾಂತ ಜನಪ್ರೀಯಗಳಿಸಿದರು. ಹಲವಾರು ಶಾಸ್ತ್ರವೇತರರನ್ನು ಜಯಿಸಿ ಸರ್ವಜ್ಞ ಪೀಠವನ್ನೇರಿದರು. ಭಾರತದ ದಕ್ಷಿಣದಲ್ಲಿ ವಾದಮಾಡಿ ತಮ್ಮನ್ನು ಜಯಿಸುವವರೇ ಇಲ್ಲವೆಂದು ಹೀಗಳೆದು ಶಾರದೆಯ ದೇಗುಲದ ದಕ್ಷಿಣದ ಬಾಗಿಲನ್ನು ಮುಚ್ಚಿಸಿದ್ದ ಕಾಶ್ಮೀರ ಪಂಡಿತರ ಬಾಯಿ ಮುಚ್ಚಿಸಿದರು. ಉತ್ತರದಲ್ಲಿ ಬದರೀಪೀಠ ಉತ್ತರ ಜ್ಯೋತಿರಮಠದಕ್ಷಿಣದಲ್ಲಿ ಶೃಂಗೇರಿಪೀಠ ದಕ್ಷಿಣ ಶಾರದಾಪೀಠಪೂರ್ವದಲ್ಲಿ ಪೂರೀಪೀಠ ಪೂರ್ವ ಗೋವರ್ಧನ ಮಠಪಶ್ಚಿಮದಲ್ಲಿ ದ್ವಾರಕಾಪೀಠ ಪಶ್ಚಿಮ ಮಠ.    ಈ ನಾಲ್ಕು ಮಠಗಳು ಈಗಲೂ ಗುರುಪರಂಪರೆ‌ ಮುಂದುವರೆಸಿಕೊಂಡು ಬಂದಿದ್ದು ಅಸಂಖ್ಯಾತ ಅನುಯಾಯಿಗಳನ್ನು ಹೊಂದಿದೆ. ಶಂಕರರು ಬಾದರಾಯಣದ ಬ್ರಹ್ಮಸೂತ್ರಗಳಿಗೆ ಭಾಷ್ಯಬರೆದು ಉಪನಿಷತ್ತು ಭಗವದ್ಗೀತೆಗೆ ಭಾಷ್ಯ ಬರೆದರು. ಇವರು ರಚಿಸಿದ" *ಭಜಗೋವಿಂದಮ್* ಸ್ತೋತ್ರ ಅತ್ಯಂತ ಪ್ರಸಿದ್ಧವಾದುದು.ಅವರ ರಚನೆಯೇ ಆದ ಶಿವಾನಂದ ಲಹರಿಯ ಶಿವ ಪಾರ್ವತಿಯರನ್ನು ಕೊಂಡಾಡಿದ ಮುಂದಿನ ಶ್ಲೋಕ ಅರ್ಥ ತಿಳಿಯೋಣ.*ಶ್ಲೋಕ- ಸಂಧ್ಯಾ *ಘರ್ಮದಿನಾತ್ಯಯೋ ಹರಿಕರಾಘಾತ *ಪ್ರಭೋತಾನಕಧ್ವಾನೋ ವಾರಿದಗರ್ಜಿತಂ* *ದಿವಿಷದಾಂದೃಷ್ಟಿಚ್ಛಟಾ ಚಂಚಲಾ|**ಭಕ್ತಾನಾಂ *ಪರಿತೋಷಭಾಷ್ಪವಿತತಿರ್ವೃಷ್ಟಿರ್ಮ* *ಯೂರೀ ಶಿವಾ* *ಯಸ್ಮಿನುಜ್ಜ್ವಲತಾಂಡವಂ ವಿಜಯತೇ ತಂ ನೀಲಕಂಠಂಭಜೇ||*ಅರ್ಥ- ಸಂಜೆಯ ವೇಳೆಯೇ ಮಳೆಗಾಲದ ದಿನ ,ಹರಿಯು ಬಾರಿಸುವ ಮದ್ದಲೆಯೋ ಮೇಘ ಗರ್ಜಿತ.ಈ ನೃತ್ಯನೋಡುವ ದೇವತೆಗಳ ನೇತ್ರಕಾಂತಿಯ ಮಿಂಚು. ಭಕ್ತರಾನಂದಾಶೃಗಳೇ ಮಳೆ; ಶಿವೆಯೇ ಹೆಣ್ಣು ನವಿಲು ಹೀಗಿರುವಾಗ ತಾಂಡವ ನೃತ್ಯ ಮಾಡುವ ನೀಲಕಂಠ ಎಂಬ ನವಿಲನ್ನು ಪೂಜಿಸುತ್ತೇನೆ.*ಶ್ಲೋಕ- ಆದ್ಯಾಯಾಮಿತತೇಜಸೇ ಶ್ರುತಿಪದೈರ್ವೇದ್ಯಾಯ* *ಸಾಧ್ಯಾಯತೇ**ವಿದ್ಯಾನಂದಮಯಾತ್ಮನೇ* *ತ್ರಿಜಗತಸ್ಸಂರಕ್ಷಣೋದ್ಯೋಗಿನೇ**ಧ್ಯೇಯಾಯಾಖಿಲಯೋಗಿಭಿಸುರಗಣೈರ್ಗೇಯಾಯ ಮಾಯಾವನೇ ಸಮ್ಯಕ್ತಾಂಡವಸಂಭ್ರಮಾಯ ಜಟಿನೇ ಸೇಯಂ ನತಿಶ್ಶಂಭವೇ||*ಅರ್ಥ- ಜಗತ್ತಿನ ಆದಿಅರಣನೂ,ವೇದವೇದ್ಯನೂಸಕಲ ಸಾಧನೆಗಳಗುರಿಯೂ, ಜ್ಞಾನಾನಂದಮಯನೂ ,ತ್ರಿಲೋಕರಕ್ಷಕನೂ ,ಧ್ಯಾನಯೋಗ್ಯನೂ, ಯೋಗಿಗಳೂ ,ದೇವತೆಗಳಿಂದ ಸ್ತುತ್ಯನೂ ,ಮಾಯಾಧಿಪತಿಯೂ ,ತಾಂಡವ ನೃತ್ಯದಲ್ಲಿ ಆನಂದಿರೇಕವುಳ್ಳವನೂ ಜಟಾಧಾರಿಯೂ ಆದ ಶಂಭುವಿಗೆ ನಮಸ್ಕಾರಗಳಿರಲಿ.*ಶ್ಲೋಕ- ನಿತ್ಯಾಯ ತ್ತಿಗುಣಾತ್ಮನೇ* *ಪುರಜಿತೇ ಕಾತ್ಯಾಯನೀಶ್ರೇಸೇ ಸತ್ಯಾಯಾದಿಕುಟುಂಬಿನೇ* *ಮುನಿಮನಃಪ್ರತ್ಯಕ್ಷಚಿನ್ಮೂರ್ತಯೇ|**ಮಾಯಾಸೃಷ್ಟಜಗತ್ಪ್ರಯಾಯ ಸಕಲಾಮ್ನಾಯಾಂತಸಂಚಾರಿಣೇ ಸಾಯಂತಾಂಡವಸಂಭ್ರಮಸಯಜಟಿನೇ ಸೇಯಂ ನತಿಃ ಶಂಭವೇ||* ನಿತ್ಯನೂ, ತ್ರಿಗುಣಾತ್ಮಕನೂ, ತ್ರಿಪುರಸಂಹಾರನೂ, ಪಾರ್ವತಿಗೆ ಶ್ರೇಯೋರೂಪನೂ, ಸತ್ಯರೂಪನೂ ,ಆದಿಕುಟುಂಬಿನಿಯೂ,ಮುನಿಗಳ ಮನಸ್ಸಿನಲ್ಲಿ ಪ್ರಕಟವಾದ ಚಿನ್ಮಾತ್ರನೂ ಮಾಯೆಯಿಂದಲೇ ತ್ರಿಲೋಕವನ್ನು ಸೃಷ್ಟಿಸುವನು,,ಸಕಲವೇದಾಂತ ಪ್ರತಿಪಾದ್ಯನೂ ,ಸಾಯಂನೃತ್ಯ ನಿರತನೂ ಜಟಾಧಾರಿಯೂ ಆದ ಶಂಭುವಿಗೆ ನಮಸ್ಕಾರಗಳು.*ಶ್ಲೋಕ- ನಿತ್ಯಂ ಸ್ವೋದರಪೂರಣಾಯ *ಸಕಲಾನುದ್ಧಿಶ್ಯ ವಿತ್ತಾಶಯಾ ವ್ಯರ್ಥಂ ಪರ್ಯಟನಂ ಕರೋಮಿ* *ಭವತಸ್ಸೇವಾಂ ನ ಜಾನೇ ವಿಭೋ|**ಮಜ್ಜನ್ಮಾಂತರಪುಣ್ಯ ಪಾಕಬಲತಸ್ತ್ವಂ ಶರ್ವ ಸರ್ವಾಂತರ* *ಸ್ತಷ್ಠಸ್ಯೇವ ಹಿ ತೇನ ವಾ ಪಶುಪತೇ ರಕ್ಷಣೆಯೋಸ್ಮ್ಯಹಮ್||*ಅರ್ಥ- ಹಾ ಪ್ರಭುವೇ ನಿತ್ಯವೂ ನನ್ನ ಹೊಟ್ಟೆ ಹೊರೆಯಲು ಹಣದ ಆಸೆಯಿಂದ ಎಲ್ಲರ ಬಳಿಗೂ ವ್ಯರ್ಥವಾಗಿ ಅಲೆಯುತಿದ್ದೇನೆ. ನಿನ್ನ ಸೇವೆಯನ್ಮು ಮಾತ್ರ ಅರಿತಿಲ್ಲ,ಹೇ ಶರ್ವ! ಪಶುಪತೇ! ನನ್ನ ಜನ್ಮಾಂತರ ಪುಣ್ಯ ಫಲಿಸಿದ್ದರಿಂದ ನೀನು ನನ್ನೊಳಗೆ ಇದ್ದೀಯೆ. ಆದ್ದರಿಂದ ನಾನು ನಿನ್ನಿಂದ ರಕ್ಷಿಸಲ್ಪಡಲು ಯೋಗ್ಯನಾಗಿರುವೆ.       ಶಿವನನ್ನು ನಾನಾ ಹೆಸರಿನಿಂದ ಸ್ಮರಣೆಮಾಡಿ ಜಗತ್ತಿನ ಎಲ್ಲ ಜೀವಿಗಳಿಗೆ ರಕ್ಷಣೆ ಸಿಕ್ಕು ಒಳ್ಳೆಯದಾಗಲಿ ಎನ್ಮವದೇ ಧರ್ಮಗುರುಗಳ ಆಶಯವಾಗಿದೆ. *ಗಿರಿಜಾ.ಎಸ್.ದೇಶಪಾಂಡೆ. ಸಾಹಿತ್ಯಶ್ರಿ. ಬೆಂಗಳೂರು. ಅಂಕಣ- ೨೧ ಅದ್ವೈತ ಸಂಪ್ರದಾಯದಲ್ಲಿ ಗುರುವಿನ ಬಗ್ಗೆ ಅರಿಯುವದಾದರೆ ಗುರುವು ಬೇರೆಯಲ್ಲ ಶಿವನು ಬೇರೆಯಲ್ಲ. ಈ ಎರಡೂ ರೂಪಗಳು ಒಂದೇ ಆತ್ಮ ತತ್ವದ ಎರಡು ಮುಖಗಳು  ಎಂದು ಭಗವತ್ಪಾದರು ತಮ್ಮ ದಕ್ಷಿಣಾಮೂರ್ತಿ ಶ್ಲೋಕದಲ್ಲಿ "ತಸ್ಮೈ ಶ್ರೀ ಗುರುಮೂರ್ತಯೇ ನಮಃ ಇದಂ ಶ್ರೀ ದಕ್ಷಿಣಾಮೂರ್ತಯೇ " ಎಂದು ತಿಳಿಸಿದ್ದಾರೆ. " ಯೋ ಗುರುಃ ಸಶಿವಃ ಪ್ರೋಕ್ತಃ ಯಃ ಶಿವಃ ಸ ಗುರುಃ ಸ್ಮೃತಃ.ಎಂದು ಗುರುಗೀತದಲ್ಲಿ ಹೇಳಿದರೆ ಈಶ್ವರೋ ಗುರುರಾತ್ಮೇತಿ ಮೂರ್ತಿಭೇದ ವಿಭಾಗಿನೇ| ಎಂದು ಸುರೇಶ್ವರಾಚಾರ್ಯರ ಮನೋಲ್ಲಾಸಸವು ಹೇಳುತ್ತದೆ.ವೈದಿಕ ಧರ್ಮವು ನಮ್ಮ ಭರತಖಂಡದಲ್ಲಿ ಸ್ಥಿರವಾಗಿ ನಿಲ್ಲಲು ಶಂಕರರು ನಿಮಗೆ ಒಂದು ಮಾತನ್ನು ಹೇಳಲಿಚ್ಛಿಸುತ್ತೇನೆ ಹಿಂದೆ ನಾನು ಶೃಂಗೇರಿಯಲ್ಲಿ ಸ್ಥಾಪಿಸಿದ ಶ್ರೀ ಶಾರದಾ ಪೀಠಕ್ಕೆ ಸುರೇಶ್ವರ ಚಾರ್ಯರು ಅಧಿಪತಿಗಳಾಗಿ ಈ ಧರ್ಮಕಾರ್ಯ ನಿರ್ವಹಿಸಲಿ. ಅದು ದಕ್ಷಿಣಾಮ್ನಾಯ ಪೀಠ ಹಾಗೆಯೇ ಈ ರಾಷ್ಟ್ರದ ಉಳಿದ ಮೂರು ದಿಕ್ಕುಗಳಿಗೂ ಮಠಗಳನ್ನು ಸ್ಥಾಪಿಸತಕ್ಕದ್ದು. ದ್ವಾರಕೆಯಲ್ಲಿ ಪದ್ಮಪಾದರೂ, ಬದರಿಯಲ್ಲಿ ತೋಟಕರೂ, ಜಗನ್ನಾಥಪುರಿಯಲ್ಲಿ ಹಸ್ತಾಮಲಕರೂ ಮಠಾದಿಪತಿಗಳಾಗಿ ಧರ್ಮಕಾರ್ಯ ನಡೆಸಬೇಕು. ಹಿಗೆಯೇ ಉಳಿದ ಯತಿಗಳೂ ಸೂಕ್ಷ್ಮ ಸ್ಥಳಗಳಲ್ಲಿ ವೈದಿಕ ಧರ್ಮದ ಭದ್ರತೆಗಾಗಿ ಕಾರ್ಯಪ್ರವತೃರಾಗಲಿ. ಸಂಪ್ರದಾಯಕ್ರಮದಿಂದ ಬಂದ ಅದ್ವೈತ ದರ್ಶನದ ಸಂರಕ್ಷಣೆಗಾಗಿ ಈ ಯತಿ ಪರಂಪರೆ ಮುಂದುವರೆಯಲಿ. ನೀವೆಲ್ಲರೂ ನಿಷ್ಟೆಯಿಂದ ನನಗೆ ಉಪಕಾರ ಮಾಡಿರುವಿರಿ .ಇನ್ನು ನೀವು ಇಸ್ಟವಾದೆಡೆ ತೆರಳಬಹುದು . ಭಗವಂತ ನಿಮಗೆ ಮಂಗಳವನ್ನನುಗ್ರಹಿಸಲಿ. ಎಂದು ನುಡಿದಂತೆ ಗುರುಗಳ ಆಜ್ಞೆ ಮೀರಲಾರದೆ ಕಣ್ಣೀರು ತುಂಬಿಕೊಂಡು ಅಲ್ಲಿಂದ ನಿಷ್ಕೃಮಿಸಿದರು.     ಅಂತಹ ಜಗದ್ಗುರುಗಳು ರಚಿಸಿದ ಶಿವಾನಂದ ಲಹರಿಯ ಮುಂದಿನ ಶ್ಲೋಕಗಳು ಅದರ ಅರ್ಥ ತಾತ್ಪರ್ಯ ತಿಳಿಯೋಣ.* ಅಂಕೋಲಂ ನಿಜಬೀಜಸಂತತಿರಯಸ್ಕಾತೋಪಲಂ  ಸೂಚಿಕಾ ಸಾದ್ವೀ ನೈಜವಿಭುಂ ಲತಾ ಕ್ಷಿತಿರುಹಂ ಸಿಂಧುಃ ಸರಿದ್ವಲಭಂ|ಪ್ರಪ್ತೋತೀಹ ಯಥಾ ತಥಾ ಪಶುಪತೇಃ ಪಾದಾರವಿಂದದ್ವಯಂಚೇತೋವೃತ್ತಿರಪೇತ್ಯ ತಿಷ್ಟತಿ ಸದಾ ಸಾ ಭಕ್ತಿರಿತ್ಯುಚ್ಯತೇ||೬೧||ಅರ್ಥ- ಈ ಲೋಕದಲ್ಲಿ ಹೇಗೆ ಅಂಕೋಲೆ ಬೀಜಗಳು ಪುನಃ ಅದೇ ಮರವನ್ನು,ಸೂಜಿಯು ಸೂಜಿಗಲ್ಲನ್ನು ಪತೀವೃತೆಯು ತನ್ನ ಪತಿಯನ್ನು ಬಳ್ಳಿಯು ಮರವನ್ನು ,ನದಿಯು ಸಾಗರವನ್ನೂ ಹೇಗೆ ಆಶ್ರಯಿಸುತ್ತವೆಯೋ ಹಾಗೆ ನನ್ನ ಮನಸ್ಸು ಪಶುಪತಿಯ ಪಾದಾರವಿಂದಗಳ ಬಳಿ ಸಾರಿದರೆ ಅದೇ ಭಕ್ತಿ ಎನಿಸುತ್ತದೆ.ಶ್ಲೋಕ- *ಆನಂದಾಶ್ರುಭಿರಾತನೋತಿ ಪುಲಕಂನೈರ್ಮಲ್ಯತಶ್ಛಾದನಂವಾಚಾಶಂಖಮುಖೇ ಸ್ಥಿತೈಶ್ಚಜಠರಾಪೂರ್ತಿಂ ಚರಿತ್ರಾಮೃತ್ಯೆಃ|ರುದ್ರಾಕ್ಷೈರ್ಭಸಿತೇನ ದೇವವಪುಷೋ ರಕ್ಷಾಂ ಭಗವದ್ಭಾವನಾ ಪರ್ಯಂಕೆ ವಿನಿವೇಷ್ಯ ಭಕ್ತಿ ಜನನಿ ಭಕ್ತಾಭಕಂರಕ್ಷತಿ||೬೨||ಅರ್ಥ- ಹೇ ದೇವಾ ಭಕ್ತಿಯೆಂಬ ತಾಯಿ ಭಕ್ತನೆಂಬ ತನ್ನ ಮಗುವನ್ನು ಆನಂದ ಭಾಷ್ಪಗಳಿಂದ ಪುಲಕಿತಗೊಳಿಸುತ್ತಾಳೆ.ನೈರ್ಮಲ್ಯವೆಂಬ ಹೊದಿಕೆಯನ್ನು ಹೊದಿಸಿ ಮಾತೆಂಬಶಂಖದಿಂದ ನಿನ್ನ ಚರಿತಾಮೃತವನ್ನು ಹೊಟ್ಟೆತುಂಬಾ ಕುಡಿಸುತ್ತಾಳೆ. ಭಸ್ಮ ರುದ್ರಾಕ್ಷಗಳಿಂದ ಅಲಂಕರಿಸುತ್ತಾಳೆ ನಿನ್ನ ಧ್ಯಾನವೆಂಬ ಪಲಂಗದಲ್ಲಿಟ್ಟು ರಕ್ಷಿಸುತ್ತಾಳೆ.ಶ್ಲೋಕ- ಮಾರ್ಗಾವರ್ತಿತಪಾದುಕಾ ಪಶುಪತೇರಂಗಸ್ಯ ಕೂರ್ಚಾಯತೇ ಗಂಡೂಶಾಂಭುನಿಷೇಚನಂ ಪುರಿಪೋರ್ದಿವ್ಯಾಭಿಷೇಕಾಯತೇ| ಕಿಂಚಿದ್ಛಕ್ಷಿತಮಾಂಸಶೇಷಕಬಲಂ ನವ್ಯೋಪಹಾರಾಯತೇಭಕ್ತಿಃ ಕಿಂ ನ ಕರೋತ್ಯಹೋ ವನಚರೋ ಭಕ್ತಾವತಂಸಾಯತೇ||೬೩||ಅರ್ಥ- ನಾನು ನಡೆಯುತ್ತಾ ಸವೆಯುವ ಪಾದರಕ್ಷೆಯು ಶಿವನ ದಿವ್ಯ ದೇಹಕ್ಕೆ ದರ್ಭೆಯಾಗುತ್ತದೆ. ಬಾಯಿ ಮುಕ್ಕಳಿಸಿದ ನೀರು ತ್ರಿಪುರಾಂತಕನಿಗೆ ಅಭಿಷೇಕವಾದೀತು. ವ್ಯಾಧನು ಭಕ್ತನಾಗುತ್ತಾನೆ. ಏನಾಶ್ಚರ್ಯ! ಭಕ್ತಿಯು ಏನೆಲ್ಲ ಮಾಡೀತು.ಶ್ಲೋಕ- ವಕ್ಷಸ್ತಾಡನಮಂತಕಸ್ಯ ಕಠಿಣಾಪಸ್ಮಾರಸಂಮರ್ಧನಂ ಭೂಭೃತ್ಪರ್ಯಟನಂ ನಮತ್ಸುರಶಿರಃಕೋಟಿರಸಂಘರ್ಷಣಮ್| ಕರ್ಮೇದಂ ಮೃದುಲಸ್ಯ ತಾವಕಪದದ್ವಂದ್ವಸ್ಯ ಕಿಂ ವೋಚಿತಂ ಮಚ್ಚೇತೋಮಣಿಪಾದುಕಾವಿಹರಣಂ ಶಂಭೋ ಸದಾಂಗೀಕುರು||೬೪||ಅರ್ಥ- ಹೇ ಶಂಭೋ ನಿನ್ನ ಮೃದುವಾದ ಪಾದಗಳಿಗೆ ಯಮನನ್ನು ಒದೆಯುವದು ,ಅಪಸ್ಮಾರವೆಂಬ ಅಸುರ ಸಂಹಾರ ,ಬೆಟ್ಟಗಳಲ್ಲಿ ಅಲೆದಾಟ ,ನಿನ್ನನ್ನು ನಮಿಸುವ ದೇವತೆಗಳ ಕಿರೀಟ ಘರ್ಷಣೆ ಯುಕ್ತವೇ? ಆದ್ದರಿಂದ ಸದಾ ನೀನು ನಿನ್ನ ಮನಸೆಂಬ ರತ್ನ ಪಾದುಕೆ ಧರಿಸಿ ನಡೆಯುವೆಯೆಂದು ಒಪ್ಪಿಕೋ.ತಾತ್ಪರ್ಯ- ಶಿವನ ಒಲಿಸಿಕೊಳ್ಳುವ ಪರಿಯನ್ನು ಪ್ರತಿಯೊಬ್ಬರಿಗೆ ನಾನಾ ರೀತಿಗಳನ್ನು ವಿವಿಧ ರೀತಿಯಲ್ಲಿ ಬಣ್ಣಿಸಿ ಭಕ್ತಿಯೆಂಬ ರಸ ಎಲ್ಲರಲ್ಲಿ ಉದ್ಭವಿಸಲಿ ಎಂಬುದೇ ತಾತ್ಪರ್ಯ.ಗಿರಿಜಾ.ಎಸ್.ದೇಶಪಾಂಡೆ. : ಅಂಕಣ- ೨೦ ಶಂಕರಾಚಾರ್ಯರು ಕೇರಳ ದೇಶದಲ್ಲಿ ಸಂಚರಿಸುತ್ತಿರುವಾಗ ಸುರೇಶ್ವರಾಚಾರ್ಯಾದಿ ಅನೇಕ ಶಿಷ್ಯರು ಆಚಾರ್ಯರ ಬಳಿ ಬಂದು ಸೇರಿದರು. ಶಂಕರಭಗವದ್ಪಾದರು ಅವರೆಲ್ಲರೊಡನೆ ಸಮಾಲೋಚಿಸಿ " ಈಗ ನಮ್ಮ ಪೂರ್ವ ಸಿದ್ಧತೆಗಳಾದವು. ಇನ್ನು ಅವೈದಿಕ ಮತಗಳನ್ನು ಖಂಡಿಸಿ ಅನಾದಿ ಸಂಪ್ರದಾಯಸಿದ್ಧವಾದ ವೇದಾಂತ ಸಿದ್ಧಾಂತವನ್ನು ಭರತಖಂಡದಲ್ಲಿ ಸ್ಥಾಪಿಸಬೇಕಾಗಿದೆ. ವಿಜಯಯಾತ್ರೆ ಕೈಗೊಳ್ಳಲು ಇದು ಸಮಯವಾಗಿದೆ"ಎಂದು ತಮ್ಮ ನಿಶ್ಛಯವನ್ನು ತಿಳಿಸಿದರು. ಅವರೆಲ್ಲರೊಡನೆ ಶ್ರೀ ರಾಮೇಶ್ವರ ಕ್ಷೇತ್ರಕ್ಕೆ ಹೋಗಿ ಸರ್ವ ವಿದ್ಯೆಗಳಿಗೆ ಈಶನನಾದ ಪರಮೇಶ್ವರನನ್ನು ಸ್ತುತಿಸಿ ,ವಿಜಯಯಾತ್ರೆ ಆರಂಭಿಸಿದರು. ಮೊದಲು ಕೇರಳ ವಿದ್ವಾಂಸರರನ್ನು ಜಯಿಸಿ ,ಕರ್ನಾಟಕದಲ್ಲಿ ಸುತ್ತಾಡಿ ತಮಿಳುನಾಡು,ಆಂದ್ರಪ್ರದೇಶ ಮಹಾರಷ್ಟ್ರ ಅದ್ವಯಬ್ರಹ್ಮವಾದ ವಿರೋಧಿಸುವ ಸಮಸ್ತ ವಿದ್ವಾಂಸರರನ್ನು ಜಯಿಸಿ ಗುಜರಾತಗೆ ಹೋಗಿ ತಮ್ಮ ಅಸಾಧಾರಣ ,ಸಪ್ರಮಾಣ ವಾಗ್ವೈಖರಿಯನ್ನು ಮೆರೆಸಿ ಚಾರ್ವಾಕರು,ಬೌದ್ಧರು, ಜೈನರು,ಸಾಂಖ್ಯರು, ಸಮಸ್ತ ಪ್ರತೀವಾದಿಗಳನ್ನು ಪರಾಭವಗೊಳಿಸಿ ಅದ್ವೈತವಾದದ ವಿಜಯ ಪತಾಕೆಯನ್ನು ಎತ್ತಿ ಹಿಡಿದರು. ಇವರ ಚತುರತ್ವಕ್ಕೆ ಸೌರ,ಶಾಕ್ತ,ಪಾಶುಪತ ,ಭೈರವಾದಿ ಮತಗಳೆಲ್ಲವೂ ಮೂಲೆ ಸೇರಿದವು. ಅಂತಹ ಜಗದ್ಗುರುಗಳು ಬರೆದು ರಚಿಸಿದ ಶಿವಾನಂದ ಲಹರಿಯ ಮುಂದಿನ ಶ್ಲೋಕ ಅವುಗಳ ಅರ್ಥ,ತಾತ್ಪರ್ಯದ ಬಗ್ಗೆ ತಿಳಿಯೋಣ.ಶ್ಲೋಕ-*ಏಕೋ ವಾರಿಜಬಾಂಧವಃ ಕ್ಷಿತನಭೋವ್ಯಾಪ್ತ ತಮೋಮಂಡಲಂ ಭಿತ್ವಾಲೋಚನಗೋಚರೋಪಿ ಭವತಿ ತ್ವಂ ಕೋಟಿಸೂರ್ಯಪ್ರಭಃ|ವೇದ್ಯಃ ಕಿಂ ನ ಭವಸ್ಯಹೋ ಘನತರಂ ಕೀದೃಗ್ಭವೇನ್ಮತ್ತಮ ಸ್ತಸರ್ವಂ ವ್ಯಪನೀಯ ಮೇ ಪಶುಪತೇ ಸಾಕ್ಷಾತ್ಪ್ರಸನ್ನೋ ಭವ*||ಅರ್ಥ- ಹೇ ಪಶುಪತೇ ! ಸೂರ್ಯನು ಒಬ್ಬನೇ ಆಗಿದ್ದರೂ ಭೂಮಿ ಆಕಾಶದಲ್ಲಿ ವ್ಯಾಪಿಸಿರುವ ಕತ್ತಲೆ ಬೇಧಿಸಿ ,ಕಣ್ಣಿಗೆ ಕಾಣಿಸುತ್ತಾನೆ. ಆದರೆ ಕೋಟಿ ಸೂರ್ಯ ಪ್ರಭೆಯುಳ್ಳ ನೀನು ನನಗೇಕೆ ಕಾಣುವದಿಲ್ಲ? ನನ್ನ ಅಜ್ಞಾನವೆಂಬ ಕತ್ತಲೆ ಎಸ್ಟರಮಟ್ಟಿಗಿರಬಹುದು! ಅದನ್ನೆಲ್ಲಾ ಹೋಗಲಾಡಿಸಿ ,ಸಾಕ್ಷಾತ್ಕರಿಸು.ಶ್ಲೋಕ- ಹಂಸಪದ್ಮವನಂ ಸಮಿಚ್ಛತಿ ಯಥಾ ನೀಲಾಬುಧಂ ಜಾತಕಃ ಕೋಕಃ ಕೋಕನದಿ ಪ್ರಿಯಂ ಪ್ರತಿದಿನಂ ಚಂದ್ರಂ ಚಕೋರಸ್ತಥಾ|ಚೇತೋವಾಂಛತಿ ಮಾಮಕಂ ಪಶುಪತೆ ಚಿನ್ಮಾರ್ಗಮೃಗ್ಯಂ ವಿಭೋ ಗೌರೀನಾಥ ಭಗವತ್ಪದಾಜ್ಜಯುಗಲಂ ಕೈವಲ್ಯಸೌಖ್ಯ ಪ್ರದಮ್||೫೯||ಅರ್ಥ- ಹೇ ಪಶುಪತಿ ಗೌರೀಪತಿ ಹಂಸವು ಪದ್ಮವನವನ್ನೂ ಜಾತಕಪಕ್ಷಿ ಕರಿಮೋಡವನ್ನೂ ,ಚಕ್ರವಾಕವು ಸೂರ್ಯನನ್ನೂ ,ಚಕೋರವು ಚಂದ್ರನನ್ನೂ ಹೇಗೆ ಪ್ರತಿದಿನ ಬಯಸುತ್ತದೆಅಂತೆಯೆ ಚಿನ್ಮಾರ್ಗದಿಂದ ಅರಸಲ್ಪಟ್ಟ ಮೋಕ್ಷ ಸುಖವನ್ನು ಕೊಡುವ ನಿನ್ನ ಪಾದ ಕಮಲ ಯುಗ್ಮವನ್ನು ನನ್ನ ಚಿತ್ತವು ಆಶಿಸುತ್ತದೆ.ಶ್ಲೋಕ- *ರೋಧಸ್ತೋಯಹೃತಃ ಶ್ರಮೇಣಪಥಿಕಶ್ಛಾಯಾಂ ತರೋರ್ವೃಷ್ಟಿತೋ ಭೀತಃ ಸ್ವಸ್ಥಗೃಹಂಗೃಹಸ್ಥಮತಿಥಿರ್ದೀನಃ ಪ್ರಭು ಧಾರ್ಮಿಕಮ್|ದೀಪಂ ಸಂತಮಸಾಕುಲಶ್ಚಶಿಖಿನಂ ಶೀತಾವೃತಸ್ತ್ವಂ ತಥಾ ಚೇತಃ ಸರ್ವ ಭಯಾಪಹಂ ವ್ರಜ ಸುಖಂ ಶಂಭೋಃ ಪದಾಂಭೋರುಮ್||೬೦||ಅರ್ಥ- ನೀರಿನಲ್ಲಿ ಸಿಕ್ಕಿಹಾಕಿಕೊಂಡಿರುವನು ದಡವನ್ನು ಆಯಾಸಗೊಂಡ ದಾರಿಹೋಕನು ಮರದ ನೆರಳನ್ನೂ ,ಮಳೆಯಿಂದ ಹೆದರಿದವನೂ ಒಳ್ಳೆಯ ಮನೆಯನ್ನು ಅತಿಥಿಯು ಗೃಹಸ್ಥನನ್ನು ,ಬಡವನು ಧಾರ್ಮಿಕನಾದ ದೊರೆಯನ್ನು ಕತ್ತಲೆಯಲ್ಲಿ ಇರುವಾತನು ದೀಪವನ್ನು ,ಚಳಿಯಿಂದ ನಡಗುವಾತನು ಬೆಂಕಿಯನ್ನು ಹೇಗೆ ಆಶ್ರಯಿಸುತ್ತಾನೋ ಹಾಗೆಯೇ ಎಲೈ ಮನವೇ ! ಸಕಲ ಭಯಹರನಾದ ಶಂಭುವಿನ ಪಾದಕಮಲ ಆಶ್ರಯಿಸು.ತಾತ್ಪರ್ಯ- ಶಿವನನ್ನು ಒಲಿಸಿಕೊಳ್ಳುವ ಬಗೆ, ಅವನು ಒಲಿಯುವ ರೀತಿ ಅವನನ್ನು ನಾವು ಆಶ್ರಯಿಸುವ ರೀತಿಯನ್ನು ಹೇಳಿರುವದೇ ಇಲ್ಲಿಯ ಆಚಾರ್ಯರ ತಾತ್ಪರ್ಯವೆನ್ನಬಹುದು."*ಸರ್ವಜ್ಞಸ್ಯ ಭವತಃ ಕಿಂ ವೇದಿತ್ಯವ್ಯಂ?*ಸದಾ ನಮ್ಮಲ್ಲಿ ಶಿವ ಸ್ಮರಣೆ ಇದ್ದರೆ ನಮಗೇನು ಬೇಕೊ ಎಲ್ಲ ಸಿಗುವದು ಎಂದು ಹೇಳಿರುವರು.ಗಿರಿಜಾ.ಎಸ್.ದೇಶಪಾಂಡೆ. : ಅಂಕಣ -೨೨ಅಂದಿನ ಕಾಲದ ಅತ್ಯಂತ ಪ್ರಸಿದ್ಧ ಮಿಮಾಂಸಾ ಪಂಡಿತರಾದ ಕರ್ಮವೇ ವೇದ ತಾತ್ಪರ್ಯವೆಂದು ಹೇಳಲಾದ ಮಂಡನಮಿಶ್ರರನ್ನು ಕಾಣಲು ಶಂಕರರು ಇಂದಿನ ಬಿಹಾರದ ಮಾಹಿಷ್ಮತಿ ನಗರಕ್ಕೆ ಹೋದರು. ಅವರೊಡನೆ ೧೫ ದಿನಗಳ ಕಾಲ ಸತತ ವಾದ ಮಾಡಿ ಮಂಡನಮಿಶ್ರರ ಪತ್ನಿ ಉಭಯ ಭಾರತಿಯೇ ನಿರ್ಣಾಯಕಿ. ಅವಳು ತನ್ನ ಪತಿ ಮಿಶ್ರರು ವಾದದಲ್ಲಿ ಸೋತಿರುವದಾಗಿ ತೀರ್ಪು ಕೊಟ್ಟಳು. ಆದರೆ ತನ್ನನ್ನು ಗೆಲ್ಲಬೇಕೆಂದು ಪಂಥವನ್ನು ಮಾಡಿದಳು. ಅವಳು ಕಾಮಸೂತ್ರದ ಮೇಲಿನ ಸಂಸಾರಿಕ ವಿಚಾರದಲ್ಲಿ ಪ್ರಶ್ನೆ ಕೇಳಿದಳು. ಬಾಲ್ಯ ಸನ್ಯಾಸಿಗಳಾದ ಶಂಕರರಿಗೆ ಉತ್ತರ ಗೊತ್ತಿರಲಿಲ್ಲ. ಅವರು ಆರು ತಿಂಗಳ ಸಮಯ ಕೇಳಿದರು. ಅದರಂತೆ ಅವರು ಅಕಾಲ ಮರಣ ಹೊಂದಿದ ವಿಕ್ರಮರಾಜನ ಶರೀರದಲ್ಲಿ ಪರಕಾಯ ಪ್ರವೇಶ ಮಾಡಿ ಅವನ ಪತ್ನಿಯಿಂದ ಭಾರತಿ ಕೇಳಿದ ಪ್ರಶ್ನೆಗಳಿಗೆ ಉತ್ತರ ತಿಳಿದು ತಮ್ಮ ವಾದ ಬರೆದರು. ಪುನಃ ತಮ್ಮ ದೇಹ ಸೇರಿ ಆ ಗ್ರಂಥವನ್ನು ಭಾರತಿದೇವಿಗೆ ಕೊಟ್ಟು ಉತ್ತರ ಕಂಡುಕೊಳ್ಳಲು ಹೇಳಿದರು. ಅವಳು ಆ ಉತ್ತರ ಒಪ್ಪಲು ಮೊದಲೇ ಮಾಡಿಕೊಂಡ ನಿಯಮದಂತೆ ಮಂಡನ ಮಿಶ್ರರು ಸುರೇಶ್ವರಾಚಾರ್ಯರೆಂಬ ಹೆಸರಿನಲ್ಲಿ ಸನ್ಯಾಸಿಗಳಾಗಿ ಶಂಕರರ ಶಿಷ್ಯರಾದರು. ಉಭಯ ಭಾರತಿ ಅವರನ್ನು ಹಿಂಬಾಲಿಸಿದಳು. ಕೊನೆಗೆ ಶೃಂಗೇರಿ ಶಾರದಾ ಪೀಠದಲ್ಲಿ ನೆಲಸಿದಳೆಂದು ಪ್ರತೀತಿ ಇದೆ.     ಅಂತಹ ವಿದ್ವತ್ತಿನ ಆಚಾರ್ಯರು ರಚಿಸಿದ ಶಿವಾನಂದ ಲಹರಿಯ ಮುಂದಿನ ಶ್ಲೋಕಗಳು ಅದರ ಅರ್ಥ ತಾತ್ಪರ್ಯ ತಿಳಿಯೋಣ.ಶ್ಲೋಕ- *ಕ್ರೀಡಾರ್ಥಂ ಸೃಜಿಸಿ ಪ್ರಪಂಚಮಖಿಲಂ ಕ್ರೀಡಾಮೃಗಾಸ್ತೆ ಜನಾ ಯತ್ಕರ್ಮಾಚರಿತಂ ಮಯಾ ಚ ಭವತಃ ಪ್ರೀತ್ಯೈಭವತ್ಯೇವ ತತ್|ಶಂಭೋ ಸ್ವಸ್ಯ ಕುತೂಹಲಸ್ಯ ಕರಣಂ ಮಚೇಷ್ಟಿತಂ ನಿಶ್ಚಿತಂ ತಸ್ಮಾನ್ಮಾಮಕರಕ್ಷಣಂ ಪಶುಪತೇ ಕರ್ತವ್ಯಮೇವ ತ್ವಯಾ||೬೬||ಅರ್ಥ- ಹೇ ಶಂಭೋ ! ನೀನು ಸಕಲ ಪ್ರಪಂಚವನ್ನು ಲೀಲಾ ವಿನೋದಕ್ಕಾಗಿ ಸೃಜಿಸುವೆ. ಜಗತ್ತೆಲ್ಲ ನಿನ್ನ ಕ್ರೀಡಾಮೃಗಗಳೇ? ನಾನು ಏನು ಕರ್ಮವೆಸಗಿದರೂ ಅದು ನಿನ್ನ ಪೂಜೆಗಾಗಿಯೇ,ಹೇ ಪಶುಪತಿ! ನನ್ನ ಕರ್ಮವೆಲ್ಲಾ ನಿನ್ನ ಔತ್ಸುಕ್ಯದ ಪರಿಣಾಮವೇ ಆಗಿದೆ. ಇದು ನಿಶ್ಚಯ ಆದ್ದರಿಂದ ನನ್ನ ರಕ್ಷಣೆಯು ನಿನ್ನ ಕರ್ತವ್ಯವೇ ಆಗಿದೆ.ಶ್ಲೋಕ- *ಬಹುವಿಧಪರಿತೋಷಭಾಷ್ಪಪೂರಸ್ಪುಟಪುಲಕಾಂಕಿತಚಾರುಭೋಗಭೂಮಿಮ್|ಚಿರಪದಫಲಕಾಂಕ್ಷಿಸೇವ್ಯಮಾನಾಂಪರಮಸದಾಶಿವಭಾವನಾಂ ಪ್ರಪದ್ಯೇ*||೬೭||ಅರ್ಥ- ಆನಂದಭಾಷ್ಪ ಪ್ರವಾಹದಿಂದ ನೆನೆದು,ಮೊಳಕೆಯೊಡೆದು ,ರೋಮಾಂಚನವೆಂವಬ ಮೊಗ್ಗುಗಳಿಂದ ಕೂಡಿ ,ಆನಂದಭವಕ್ಕೆ ಆಶ್ರಯವಾದ , ಮೋಕ್ಷವೆಂಬ ಫಲಾಕಾಂಕ್ಷಿಗಳಿಂದ ಸೇವ್ಯವಾದ,ಸದಾಶಿವನ ಏಕಾಂತ ಭಾವನೆಯಿಂದ ದಿವ್ಯ ಲತೆಯನ್ನು ಶರಣು ಹೋಗುತ್ತೇನೆ.ಶ್ಲೋಕ- *ಅಮಿತಮುದಮೃತಂ ಮುಹುರ್ದಹಂತೀಂ ವಿಮಲಭವತ್ಪದಗೋಷ್ಠಮಾವಸಂತೀಮ್|ಸದಯ ಪಶುಪತೇ ಸುಪುಣ್ಯಪಾಕಾಂ ಮಮ ಪರಿಪಾಲಯ ಭಕ್ತಿದೇನುಮೇಕಾಮ್*||೬೮||ಅರ್ಥ- ಹೇ ದಯಾನಿಧೇ!ಪಶುಪತೇ ಮಿತಿಇಲ್ಲದ ಆನಂದವನ್ನು ಬಾರಿಬಾರಿಗೂ ಕರೆಯುವ ,ಪವಿತ್ರವಾದ ನಿನ್ನ ಪಾದಗಳೆಂಬ ಗೋಶಾಲೆಯಲ್ಲಿ ವಾಸಿಸುವ ನನ್ನ ಪುಣ್ಯವೆಂಬ ಕರವುಳ್ಳ ,ಭಕ್ತಿಯೆಂಬ ನನ್ನ ಹಸುವನ್ನು ರಕ್ಷಿಸು.ಶ್ಲೋಕ- *ಜಡತಾ ಪಶುತಾ ಕಲಂಕಿತಾ ಕುಟಿಲಚರತ್ವಂ ಚ ನಾಸ್ತಿಮಯಿ ದೇವ|ಆಸ್ತಯದೀ ರಾಜಮೌಲೇಭವದಾಭರಣಸ್ಯ ನಾಶ್ಮಿ ಕಿಂ ಪಾತ್ರಮ್||೬೯||ಅರ್ಥ- ಹೇ ದೇವ ! ನನ್ನಲ್ಲಿ ಜಡತ ,ಪಶುತ್ವ ,ಕಲಂಕ ಮೋಸಗಳಾಗಲಿ ಇಲ್ಲ ,ಇದೆಯಾದರೆ ,ಹೇ ಚಂದ್ರಶೇಖರ , ನಿನ್ನ ಆಭರಣವಾಗಲು ನಾನೇಕೆ ಯೋಗ್ಯನಲ್ಲ?ತಾತ್ಪರ್ಯ- ಶಿವನು ನಾನಾ ಹೆಸರಿನಿಂದ ಭಕ್ತರಿಂದ ಕರೆಯಿಸಿಕೊಳ್ಳುವ ಇವನಲ್ಲಿ ಭಕ್ತಯೆಂಬುದು ಒಂದು ಹಸು ಕರುವನ್ನು ಹೇಗೆ ಸಂರಕ್ಷಿಸುತ್ತೋ, ತಾಯಿ ತನ್ನ ಮಗುವನ್ನು ಹೇಗೆ ರಕ್ಷಣೆ ಮಾಡುತ್ತಾಳೋ ಹಾಗೆ ಶಿವನಲ್ಲಿರುವ ಭಕ್ತಿಯನ್ನು ರಕ್ಷಿಸಿ ಕಾಯ್ದು ಅವನಿಗೆ ಅರ್ಪಿಸಿದರೆ ನಮ್ಮನ್ನು ಅವನು ನಿರಂತರ ಕಾಯುವನು ಎಂಬುದೇ ಈ ಶ್ಲೋಕಗಳ ತಾತ್ಪರ್ಯ.ಗಿರಿಜಾ.ಎಸ್.ದೇಶಪಾಂಡೆ.ಸಾಹಿತ್ಯಶ್ರಿ. ಬೆಂಗಳೂರು.[ : ಅಂಕಣ- ೨೪ ಶ್ರೀ ಶಂಕರರು ಶೃಂಗೇರಿಯಿಂದ ಕೇರಳಕ್ಕೆಬಂದು ಉತ್ತರಕ್ಕೆ ಹೊರಡುವಾಗ ರಾಜ ಸುಧನ್ವರು ಅವರಿಗೆ ಬೆಂಗಾವಲಾಗಿ ಬಂದನು. ಅವರು ತಮಿಳನಾಡು ಕಂಚಿಯನ್ನು ದಾಟಿ ಆಂದ್ರಪ್ರದೇಶದ ಮೂಲಕ ವಿದರ್ಭಕ್ಕೆ ಬಂದರು. ಅಲ್ಲಿ ಪ್ರಯಾಣ ಮಾಡುವಾಗ ಸಶಸ್ತ್ರ ಕಾಪಾಲಿಕರು ಇವರನ್ನು ಎದುರಿಸಿದರು. ಸುಧನ್ವರಾಜನು ಅವರನ್ನು ನಿವಾರಿಸಿ ಪುನಃ ಕರ್ನಾಟಕಕ್ಕೆ ಬಂದು ಗೋಕರ್ಣಕ್ಕೆ ಸುರಕ್ಷಿತವಾಗಿ ತಲುಪಿಸಿದನು. ಅಲ್ಲಿ ಅವರು ಶೈವಪಂಥದವರೊಡನೆ ವಾದ ಮಾಡಿ ಜಯಿಸಿ ಶಿಷ್ಯರನ್ನಾಗಿ ಮಾಡಿಕೊಂಡು ಅಲ್ಲಿಂದ ಸೌರಾಷ್ಟ್ರಕ್ಕೆ ಬಂದು ಪುಣ್ಯ ಕ್ಷೇತ್ರಗಳಾದ ಗಿರಿವಾರ,ಸೋಮನಾಥ , ಪ್ರಭಾಸ ಕ್ಷೇತ್ರ ಸಂದರ್ಶಿಸಿ ಅಲ್ಲಿಯ ಪಂಡಿತರನ್ನು ವಾದದಲ್ಲಿ ಸೋಲಿಸಿ ಅದ್ವೈತ ತತ್ವ ಎತ್ತಿ ಹಿಡಿದರು. ಅಲ್ಲಿಂದ ದ್ವಾರಕೆಗೆ ಬಂದು ಅಲ್ಲಿ ಪ್ರಸಿದ್ಧರಾದ ಬೇಧಾ ಬೇಧ ಪಂಡಿತರಾದ ಭಟ್ಟ ಭಾಸ್ಕರರನ್ನು ಸೋಲಿಸಿ ದ್ವಾರಕೆಯ ಪಂಡಿತರೆಲ್ಲ ಅದ್ವೈತ ತತ್ವ ಒಪ್ಪಿಕೊಂಡರು. ಬಾಹ್ಲೀಕದಲ್ಲಿ ಜೈನ ಪಂಡಿತರನ್ನು ವಾದದಲ್ಲಿ ಹಿಮ್ಮೆಟಿಸಿದರು. ಅಲ್ಲಿಂದ ಕಾಂಬೋಡಕ್ಕೆ ಬಂದು ಅಲ್ಲಿಯ ಸನ್ಯಾಸಿಗಳನ್ನು ಪಂಡಿತರನ್ನು ವಾದದಲ್ಲಿ ಸೋಲಿಸಿ ಎತ್ತರದ ಶಿಖರ ಕಣಿವೆಗಳನ್ನು ದಾಟಿ ಕಾಶ್ಮೀರದ ನಂತರ ಕಾಯರೂಪಕ್ಕೆ ಬಂದು ಅಲ್ಲಿ ನವಗುಪ್ತನೆಂಬ ತಾಂತ್ರಕನನ್ನು ಎದುರಿಸಿದರು. ಅಂತಹ ವಿದ್ವತ್ ಹೊಂದಿದ ಜಗದ್ಗುರುಗಳು ರಚಿತ ಶಿವಾನಂದ ಲಹರಿಯ ಮುಂದಿನ ಶ್ಲೋಕ ಅರ್ಥ ತಾತ್ಪರ್ಯ ಅರಿಯೋಣ.ಶ್ಲೋಕ- ಆಶಾಪಾಶಕ್ಲೇಷದುರ್ವಾಸನಾದಿಭೇದೋದ್ಯುಕ್ತೈರ್ದಿವ್ಯಗಂಧೈರಮುಂದೈಃ|ಆಶಾಶಾಟೀಕಸ್ಯಪಾದಾರಾವಿಂದಂಚೇತಃಪೇಟೀಂ ವಾಸಿತಾಂ ಮೇ ತನೋತು||೭೪||ಅರ್ಥ- ಆಕಾಶವೇ ವಸ್ತ್ರವಾಗಿರುವ ಶಿವನ ಪಾದಾರವಿಂದವು ನನ್ನ ಮನಸೆಂಬ ಪಠಾರಿಯನ್ನು ಆಸೆ,ಕ್ಲೇಷ ,ದುರ್ಗಂಧ ಮೊದಲಾದವನ್ನು ನಿವಾರಿಸುವದರಲ್ಲಿ ಉದ್ಯುಕ್ತವಾಗಿರುವ ದಿವ್ಯ ಪರಿಮಳದಿಂದ ಯುಕ್ತವಾಗಿರುವಂತೆ ಮಾಡಲೆಂದು ಬಯಸುತ್ತೇನೆ.ಶ್ಲೋಕ- ಕಲ್ಯಾಣಿನ ಸರಸಚಿತ್ರಗತಿಂ ಸವೇಗಂಸರ್ವೇಗೀತಜ್ಞ ಮನಘಂ ಧ್ರುವಲಕ್ಷಣಾಢ್ಯಮ್ ಸರ್ವೇಗಿತಜ್ಞ ಮನಘಂ ಧ್ರುವಲಕ್ಷಣಾಢ್ಯಮ್|ಚೇತಸ್ತುರಂಗಮಧಿರುಹ್ಯ ಚರ ಸ್ಮರಾರೇ ನೇತಸ್ಸಮಸ್ತಜಗತಾಂ ವೃಷಭಾಧಿರೂಢ ||೭೫||ಅರ್ಥ- ಹೇ ಮನ್ಮಥ ವೈರಿ ಜಗದೀಶ, ವೃಷಭವಾಹನ ಶುಭಕರವೂ ಸರಸಗತಿಯ ವೇಗವುಳ್ಳ ,ಎಲ್ಲಾ ಇಂಗಿತಗಳನ್ನು ತಿಳಿಯುವ ದೋಷರಹಿತವಾದ ನನ್ನ ಮನವೆಂಬ ಅಶ್ವವನ್ನು ಸಂಚರಿಸು.ಶ್ಲೋಕ- ಭಕ್ತಿರ್ಮಹೇಶಪದಪುಷ್ಕಮಾವಸಂತೀ ಕಾದಂಬಿನೀವ ಕುರುತೇ ಪರಿತೋಷವರ್ಷಮ್|ಸಂಪೂರಿತೋ ಭವತಿ ಯಸ್ಯ ಮನಸ್ತಾಟಕ ಸ್ತಜನ್ಮ ಸಸ್ಯ ಮುಖಿಲಂ ಸಫಲಂ ಸ ನಾನ್ಯತ್||೭೬||ಅರ್ಥ- ಶಿವನ ಪಾದವೆಂಬ ಆಕಾಶದಲ್ಲಿರುವ ಭಕ್ತಿಯು ಮೋಡಗಳು ಮಳೆಗರೆಯುವಂತೆ ಸಂತೋಷಕರೆಯುತ್ತದೆ. ಯಾರ ಮನಸೆಂಬ ಕೊಳವು ಅದರಿಂದ ತುಂಬಿದೆಯೋ ಅವನ ಜನ್ಮವೆಂಬ ಸಸ್ಯಗಳೆಲ್ಲ ಸಫಲವಾಗುತ್ತವೆ. ಇತರರ ಸಸ್ಯಗಳಲ್ಲ.ಶ್ಲೋಕ- ಬುದ್ಧಿಃಸ್ಥಿರಾ ಭವಿತುಮೀಶ್ವರಪಾದಪದ್ಮಸಕ್ತಾವಧೂರ್ವಿರಹಿಣೀವ ಸದಾ ಸ್ಮರಂತೀ|ಸದ್ಭಾವನಸ್ಮರಣದರ್ಶನಕೀರ್ತನಾದಿಸಮ್ಮೋಹಿತೇವ ಶಿವಮಂತ್ರ ಜಪೇನ ವಿಂತೇ||೭೭||ಅರ್ಥ- ಹೇ ಪರಶಿವನೇ ತನ್ನ ಪತಿಯಿಂದ ದೂರವಿರುವ ಸಾದ್ವಿಯು ತನ್ನ ಚಂಚಲವಾದ ಮನಸ್ಸನ್ನು ಸ್ಥಿರವಾಗಿಡುವದಕ್ಕೆ ಹೇಗೆ ಅವನನ್ನೇ ಸ್ಮರಿಸುತ್ತ ಸದ್ಭಾವನೆ ಹೊಂದಿ ,ಒಳ್ಳೆಯ ವಿಷಯ ವಿಷಯಗಳನ್ನೇ ಯೋಚಿಸುವಳೋ ಅದೇ ರೀತಿ ನನ್ನ ಬುದ್ಧಿಯು ನಿನ್ನ ವಿಯೋಗ ದುಃಖದಿಂದ ಭ್ರಮೆ ಹೊಂದಿದಂತೆ ತೋರಿ ಈಶ್ವರನಾದ ನಿನ್ನ ಪಾದಗಳಲ್ಲಿ ಸಕ್ತವಾಗಿ ಅದನ್ನೇ ಸ್ಮರಿಸುತ್ತ ಸ್ಥೈರ್ಯಕ್ಕಾಗಿ ಶಿವಮಂತ್ತ ಜಪಿಸುತ್ತ ನಿನ್ನ ನಾಮಸ್ಮರಣೆ ,ದರ್ಶನ ,ಕೀರ್ತನೆ ಮೊದಲಾದ ಮಾರ್ಗಗಳನ್ಮು ಆಶ್ರಯಿಸುತ್ತದೆ.ತಾತ್ಪರ್ಯ- ಶಿವನ ಪಾದಗಳಲ್ಲಿ ಇರುವ ಶಕ್ತಿ ಅದ್ಭುತ. ಆ ಪಾದಗಳಿಗೆ ಭಕ್ತಿಇಂದ ವಂದಿಸಿ ಆಶೀರ್ವಾದ ಪಡೆಯೋಣ. ಸದ ಶಿವನ ಸ್ಮರಣೆ ಮಂತ್ರ, ದರ್ಶನ ,ಕೀರ್ತನೆ ಮೊದಲಾದ ಮಾರ್ಗಗಳಿಂದ ಶಿವನನ್ನು ಭಕ್ತಿಯಿಂದ ನೆನೆದು ಸ್ಮರಿಸಿ ಅವನ ಒಳ್ಳೆಯ ವರಗಳನ್ನು ಪಡೆಯೋಣ. ಎಲ್ಲರೂ ಸುಖದಿಂದ ಸಂತಸದಿಂದ ಶಿವನ ಧ್ಯಾನದಿಂದ ಇರೋಣ,ಬಾಳೋಣವೆಂದು ಓಂ ನಮಃ ಶಿವಾಯ ಶಿವಾಯ ನಮಃ ಎಂದು ಧ್ಯಾನ ಮಾಡೋಣ.ಗಿರಿಜಾ.ಎಸ್.ದೇಶಪಾಂಡೆ.ಸಾಹಿತ್ಯಶ್ರಿ. ಬೆಂಗಳೂರು. *ಅಂಕಣ- ೨೩* ಉಭಯ ಭಾರತಿ ಶರದಾಪೀಠದಲ್ಲಿ ನೆಲಸಿದ ನಂತರ ಮಂಡನಮಿಶ್ರರು ದಕ್ಷಾಣಾಮ್ನಾಯ ಪೀಠಾಧಿಪತಿಗಳಾಗಿ ಶಂಕರರ ಗ್ರಂಥಗಳಿಗೆ ವಾರ್ತಿಕಗಳನ್ನು ಬರೆದು ವಾರ್ತಿಕಾರರೆನಿಸಿದರು.      ಶಂಕರರು ಕಾಶಿಇಂದ ಮಹಾರಾಷ್ಟಕ್ಕೆ ಶಿಷ್ಯರೊಡನೆ ಪ್ರಯಾಣಮಾಡಿ ಅಲ್ಲಿಂದ ಶ್ರೀಶೈಲಕ್ಕೆ ಹೋದರು. ಅಲ್ಲಿಯೇ ಅವರು ಶಿವಾನಂದ ಲಹರಿ ರಚಿಸಿದರು. ಈಗಲೂ ಶ್ರೀಶೈಲದಲ್ಲಿ ಶ್ರೀ ಶಂಕರರ ಶ್ರೀಚಕ್ರ ಅಲ್ಲಿಯ ಆಕರ್ಷಣೆ ಮತ್ತು ಭಕ್ತಿಯ ಸ್ಥಳದ ಮಹಿಮೆ ಸಾರುವದು. ಶ್ರೀಶೈಲದಿಂದ ಗೋಕರ್ಣಕ್ಕೆ ಬರುವಾಗ ಒಬ್ಬ ಕಾಪಾಲಿಕನು ಅವರ ಒಪ್ಪಿಗೆ ಹೇಗೋ ಪಡೆದು ಅವರನ್ನೇ ಬಲಿ ಕೊಡಬೇಕೆಂದು ಪ್ರಯತ್ನಿಸಿದನು. ಇದನ್ನು ತಿಳಿದ ಶಂಕರರ ಶಿಷ್ಯ ಪದ್ಮಪಾದರು ನರಸಿಂಹನನ್ನು ಪ್ರಾರ್ಥಿಸಲು ಉಗ್ರ ನರಸಿಂಹ ಪ್ರತ್ಯಕ್ಷನಾಗಿ ಶಂಕರರನ್ನು ಕಾಪಾಡಿದನು. ಆಗ ಶ್ರೀ ಶಂಕರರು ಲಕ್ಷ್ಮಿ ನರಸಿಂಹ ಸ್ತೋತ್ರ ರಚಿಸಿ ನರಸಿಂಹರನ್ನು ಹಾಡಿ ಶಾಂತ ಗೊಳಿಸಿದರು.  ಮುಂದೆ ತಮ್ಮ ಪರಿವಾರದವರೊಂದಿಗೆ ಶೃಂಗೇರಿಗೆ ಬಂದು ತೋಟಕಾಚಾರ್ಯರನ್ನು ಶಿಷ್ಯರನ್ನಾಗಿ ಸ್ವೀಕರಿಸಿದರು. ಶೃಂಗೇರಿಯಲ್ಲಿ ಸುರೇಶ್ವರಾಚಾರ್ಯರನ್ನು ನೆಲೆಗೊಳಿಸಿ ಕೇರಳಕ್ಕೆ ಹೋದರು. ಅಲ್ಲಿಂದ ಪುನಃ ತಮಿಳನಾಡು ,ಕರ್ನಾಟಕ ,ಕಾಶ್ಮೀರ ,ನೇಪಾಳಗಳಿಗೆ ಹೋಗಿ ದಿಗ್ವಿಜಯ ಸಾಧಿಸಿ ಅದ್ವೈತ ತತ್ವ ಪ್ರಚಾರ ಮಾಡಿದರು.   ಶ್ರೀಶೈಲದಲ್ಲಿ ರಚಿಸಿದ ಶಿವಾನಂದ ಲಹರಿಯ ಮುಂದಿನ ಶ್ಲೋಕ ಅದರ ಅರ್ಥ ಮತ್ತು ತಾತ್ಪರ್ಯ ತಿಳಿಯೋಣ.ಶ್ಲೋಕ- *ಅರಹಸಿ ರಹಸಿ *ಸ್ವತಂತ್ರಬುದ್ಧ್ಯಾ ಪರಿವಸಿತುಂ *ಸುಲಭಃ ಪ್ರಸನ್ನಮೂರ್ತಿಃ|**ಅಗಣಿತಫಲದಾಯಕಃ* *ಪ್ರಭುರ್ಮೇಜಗದಧಿಕೋ ಹೃದಿ ರಾಜಶೇಖರೋಸ್ತಿ||೭೦|*|*ಅರ್ಥ- ಅಂತರಂಗದಲ್ಲಾಗಲಿ , ಬಹಿರಂಗದಲ್ಲಾಗಲಿ ,ಭಕ್ತಿಗೆ ಸುಲಭವಾಗಿ ಒಲಿಯುವ ಜಗದೀಶ್ವರನೂ ಪ್ರಸನ್ನ ಮೂರ್ತಿಯೂ ಆದ ರಾಜಶೇಖರನು ನನ್ನ ಹೃದಯದಲ್ಲದ್ದಾನೆ.ಶ್ಲೋಕ- *ಆರೂಢಭಕ್ತಿಗುಣಕುಂಚಿತಭಾವಚಾಪ ಯುಕ್ತೈ *ಶಿವಸ್ಮರಣಬಾಣಗಣೈರಮೋಘೈಃ|**ನಿರ್ಜಿತ್ಯ ಕಿಲ್ಬಿಷರಿಪೂನ್ವಿಜಯೀ ಸುಧೀಂದ್ರಸ್ಸಾನಂದಮಾವಹತಿ ಸುಸ್ಥಿರರಾಜಲಕ್ಷ್ಮೀಮ್||೭೧||*ಅರ್ಥ- ಭಕ್ತಿಯೆಂಬ ಹೆದೆಯಿಂದ ಬಗ್ಗಿಸಲ್ಪಟ್ಟ ಭಾವವೆಂಬ ಬಿಲ್ಲಿನೊಡನೆ ಬಂಧಿಸಲ್ಪಟ್ಟ ,ಶಿವಧ್ನಾನವೆಂಬ ಅಮೋಘವಾದ ಬಾಣಗಳಿಂದ ಜ್ಞಾನಿವರ್ಯನು ಪಾಪವೆಂಬ ಶತೃಗಳನ್ನು ಗೆದ್ದು ಸ್ಥಿರವಾದ ರಾಜ್ಯಲಕ್ಷ್ಮಿ ಮೋಕ್ಷವನ್ನು ಆನಂದದಿಂದ ಪಡೆಯುತ್ತಾನೆ.*ಶ್ಲೋಕ- ಧ್ಯಾನಾಂಜನೇನ ಸಮ**ವೇಕ್ಷ್ಯ ತಮಪ್ರದೇಶಂ ಭಿತ್ತ್ವಾಮಹಾಬಲಿಭಿರೀಶ್ವರನಾಮಮಂತ್ರೈಃ|**ದಿವ್ಯಾಶ್ರತಂ ಭುಜಗಭೂಷಣಮುದ್ವಹಂತಿಯೇ* *ಪಾದಪದ್ಮಮಿಹ ತೇ ಶಿವ ತೇ ಶಿವ ತೇ ಕೃತಾರ್ಥಾಃ||೭೨||*ಅರ್ಥ- ಹೇ ಶಿವನೆ ಧ್ಯಾನವೆಂಬ ಅಂಜನದ ನೆರವಿನಿಂದ ಕತ್ತಲೆಯಿಂದ ಆವರಿಸಿದ ಪ್ರದೇಶವನ್ನು ಕಂಡು ಮಹಾಶಕ್ತಿಶಾಲಿಯಾದ ನಿನ್ನ ಭಗವನ್ನಾಮಗಳೆಂಬ ಮಂತ್ರಗಳಿಂದ ಬೇಧಿಸಿ ,ದೇವತೆಗಳಿಂದ ಸೇವಿತವಾದ ಪಾದಪದ್ಮವೆಂಬ ಸರ್ಪಭೂಷಣ ಮಣಿಯನ್ನು ಯಾರು ಪಡೆದು ತಲೆಯಲ್ಲಿ ಧರಿಸುವರೋ ಅವರೇ ಕೃತಾರ್ಥರು.ಶ್ಲೋಕ- *ಭೂದಾರತಾಮುದವಹದ್ಯದಪೇಕ್ಷಯಾ* *ಶ್ರೀ ಭೂದಾರ ಏವ ಕಿಮತಸ್ಸುಮತೇ ಲಭಸ್ವ|**ಕೇದಾರಮಾಕಲಿತಮುಕ್ತಿ ಮಹೌಷಧೀನಾಂಪಾದಾರವಿಂದ ಭಜನಂಪರಮೇಶ್ವರಸ್ಯ||೭೩||*ಅರ್ಥ- ಹೇ ಜ್ಞಾನಿಯೇ ಯಾವುದರ ಬಯಕೆಯಿಂದ ಶ್ರೀದೇವಿ ಭೂದೇವಿಯರಿಗೆ ಪತಿಯಾದ ಮಹಾವಿಷ್ಣುವು ವರಹಾವತಾರ ಎತ್ತಿದನೋ ಅಂತಹ ಇಚ್ಛಾ ಭಕ್ತಿಯೆಂಬ ಮಹಾ ಸಸ್ಯಗಳಿಗೆ ಕ್ಷೇತ್ರವಾದ ಪರಮೇಶ್ವರನ ಪಾದಾರವಿಂದ ಹೊಂದು.ತಾತ್ಪರ್ಯ- ಶಿವನನ್ನು ಒಲಿಸಿಕೊಳ್ಳುವ ಪರಿಯನ್ನು ನಾನಾ ರೀತಿಯಾಗಿ ಬಣ್ಣಿಸಿ ಕತ್ತಲೆಯಿಂದ ಬೆಳಕನ್ನು ಹೇಗೆ ಕಾಣುತ್ತೇವೆಯೋ ಹಾಗೆ ಭಗವಂತನ ಪದಾರವಿಂದದಲ್ಲಿ ವಂದಿಸಿ ಭಕ್ತಿಯನ್ನು ಕಾಣಬಹುದು. ಅವನ ಒಲಿಸಿಕೊಂಡು ಕೊಂಡಾಡಿ ಭಕ್ತಿ ಮಾರ್ಗದಿಂದ ನಡೆದರೆ ನಾವು ಸುಖಕಾಣಬಹುದು ಎಂಬುದೇ ಶ್ಲೋಕಗಳ ಶ್ಲೋಕಾರ್ಥಗಳ ತಾತ್ಪರ್ಯ ಎನ್ನಬಹುದು.*ಓಂ ನಮಃ ಶಿವಾಯ ಶಿವಾಯ ನಮಃ.**ಗಿರಿಜಾ.ಎಸ್.ದೇಶಪಾಂಡೆ.ಸಾಹಿತ್ಯಶ್ರಿ.ಬೆಂಗಳೂರು. ಅಂಕಣ- ೨೫ ಶ್ರೀ ಶಂಕರರನ್ನು ಷಣ್ಮತ ಸ್ಥಾಪಕರೆಂದು ,ದಶನಾಮಿ ಮತ್ತು ಸ್ಮಾರ್ತ ಸಂಪ್ರದಾಯ ಪ್ರಾರಂಭಿಸಿದವರೆಂದು ಪಂಚಾಯತನ ಪೂಜಾವಿಧಾನ ಪ್ರಾರಂಭಿಸಿದರೆಂದು ಹೇಳುತ್ತಾರೆ. ಸೂರ್ಯ,ಗಣಪತಿ,ಅಂಬಿಕಾ, ಶಿವ,ವಿಷ್ಣು ಮತ್ತು ಸ್ಕಂದ ಇವರ ಆರಾಧಕರು. ಆಗಿನ ಜನ ನಾವು ಮೇಲು ಕೀಳು ಎಂದು ಜಗಳವಾಡುತಿದ್ದಾಗ ಅದನ್ನು ನಿಲ್ಲಿಸಿ ಈಶ್ವರನೊಬ್ಬನೆ ಆದರೆ ಬೇರೆ ಬೇರೆ ರೂಪಗಳಿಂದ ನಾವು ಕಾಣುತ್ತೇವೆ ಎಂದು ಒಪ್ಪಿಸಿ ಆ ಆರೂ ದೇವತೆಗಳನ್ನು ಪರಸ್ಪರ ವಿರೋಧವಿಲ್ಲದೇ ಪೂಜಿಸಬೇಕೆಂದು ನಿಯಮ ಮಾಡಿದರು. ತಾವು ಉಪಾಸನೆಮಾಡುವ ದೇವತೆಯನ್ನು ಮಧ್ಯದಲ್ಲಿ ಇರಿಸಿ ಉಳಿದ ದೇವರನ್ನು ಅದರ ಸುತ್ತ ಇಟ್ಟು ಅವುಗಳನ್ನು ಮುಖ್ಯದೇವತೆಯ ಪರಿವಾರವೆಂದು ಪೂಜಿಸುವದು ಎಂದು ಹೇಳಿದ್ದರಿಂದ ಅವರಿಗೆ ' *ಷಣ್ಮತ*ಸ್ಥಾಪಕರೆಂದು ಹೇಳುತ್ತಾರೆ.  ಉತ್ತರ ಕನ್ನಡ ಜಿಲ್ಲೆ ಕುಮಠಾ ತಾಲೂಕಿನ ಮೂರೂರು ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕಲ್ಲಬ್ಬೆ ಗ್ರಾಮದ ನಂದೀಶ್ವರ ದೇವಸ್ಥಾನದಲ್ಲಿ ಈ ಎಲ್ಲ ಮೂರ್ತಿಗಳನ್ನು ನೋಡಬಹುದು. ಇಡೀ ದಕ್ಷಿಣಭಾರತದಲ್ಲಿ ಇದೊಂದೇ ದೇವಸ್ಥಾನದಲ್ಲಿ ಎಲ್ಲ ಮೂರ್ತಿ ನೋಡಬಹುದು. ಶ್ರೀ ಶಂಕರರು ಷಣ್ಮತ ಸ್ಥಾಪನಾಚಾರ್ಯರೆನ್ನುವದಕ್ಕೆ ಪುರಾವೆ ದೊರೆತಿದೆ.     ಅಂತಹ ಸ್ಥಾಪನಾಚಾರ್ಯರಾದ ಶ್ರೀ ಶಂಕರರ ಶಿವನೊಬ್ಬನೇ ನಾಮ ಹಲವು ಎಂದು ಹೇಳಿ ರಚಿಸಿದ ಶಿವಾನಂದ ಲಹರಿಯ ಮುಂದಿನ ಶ್ಲೋಕ ಅದರ ಅರ್ಥ ತಾತ್ಪರ್ಯ ತಿಳಿಯೋಣ.ಶ್ಲೋಕ- *ಸದುಪಚಾರವಿಧಿಷ್ವನುಬೋಧಿತಾಂ ಸವಿನಯಾಂ ಸುಹೃದಂ ಸಮುಪಾಶ್ರಿತಾಂ|ಮಮ ಸಮುದ್ಧರ ಬುದ್ಧಿಮಿಮಾಂ ಪ್ರಭೋ ವರಗುಣೇನ ನವೋಢವಧುಮಿವ||೭೮||ಅರ್ಥ- ಹೇ ಪ್ರಭು ಸರಿಯಾದ ಉಪಚಾರ ಮಾಡುವದರಲ್ಲಿ ತರಬೇತಿ ಹೊಂದಿದ ವಿನಯಶೀಲವಾದ ,ಸ್ನೇಹಸಹಿತವಾದ ಸದ್ಗುಣಗಳಿಗೆ ಆಶ್ರವಾದ ನವವಧುವಿನಂತಹ ನನ್ನ ಈ ಬುದ್ಧಿಯನ್ನು ಸ್ವೀಕಾರ ಮಾಡಿ ಅನುಗ್ರಹಿಸು.ಶ್ಲೋಕ- *ನಿತ್ಯಂಯೋಗಿಮನಸ್ಓದರಜದಲಸಂಚಾರಕ್ಷಮಸ್ತ್ವತ್ಕ್ರಮಃಶಂಭೋತೇನ ಕಥಂ ಕಠೋರಯಮರಾಡ್ವಕ್ಷಃಕವಾಟಕ್ಷತಿಃ|ಅತ್ಯತಂಮೃದುಲಂತ್ವದಂಧ್ರಿಯುಗಲಂ ಹಾಮೇ ಮನಶ್ಛಿಂತಯ ತ್ಯೇತಲೋಚನಗೋಚರಂ ಕುರು ವಿಭೋ ಹಸ್ಏನ ಸಂವಾಹಯೇ*||ಅರ್ಥ - ಹೇ ಶಂಭೋ ನಿನ್ನ ಪಾದಗಳು ಯೋಗವೆಂಬ ಮನಸೆಂಬ ಕಮಲಗಳ ಮೇಲೆ ನಡೆದಾಡಲು ಯೋಗ್ಯವಾಗಿವೆ. ಇಂತಹ ಪಾದಗಳು ಯಮನ ಕಠಿಣ ,ವಿಶಾಲವೂ ಆದ ಎದೆಯನ್ನು ಹೇಗೆ ಒದ್ದವು? ನಿನ್ನ ಪಾದಗಳು ಅತೀ ಮೃದುವಾಗಿವೆ. ನನ್ನ ಮನಸ್ಸು ಅದನ್ನೇ ಚಿಂತಿಸುತ್ತಿದೆ. ನಿನ್ನ ಪಾದ ದರ್ಶನ ಕೊಡು. ಹೇ ಸ್ವಾಮಿ ನನ್ನ ಹಸ್ತಗಳಿಂದ ಅವುಗಳನ್ನು ಒತ್ತುತ್ತೇನೆ.ಶ್ಲೋಕ- * ಏಷತ್ಯೇಷ ಜನಿಂ ಮನೋಸ್ಯಕಠಿಣಂ ತಸ್ಮಿನ್ನಟಾನೀತಿಮದ್ ರಕ್ಷಾಯೈ ಗಿರಿಸೀಮ್ಮಿ ಕೋಮಲಪದನ್ಯಾಸಃ ಪುರಾಭ್ಯಾಸಿತಃ|ನೋಚೇದ್ದಿವ್ಯಗ್ರಾಂತರೇಷು ಸುಮನಸ್ತಲ್ಪೇಷು ವೇದ್ಯಾಧಿಷು ಪ್ರಾಯಸತ್ಸು ಶಿಲಾತಲೇಷು ನಟನಂ ಶಂಭೋ ಕಿಮರ್ಥಂ ತವ||೮೦||ಅರ್ಥ- ಹೇ ಶಂಭೋ ಇವನು ಮುಂದೆ ಜನ್ಮತಾಳುತ್ತಾನೆ .ಇವನ ಮನಸ್ಸು ಒರಟು ,ಅದರಲ್ಲಿ ನಾನು ಸಂಚರಿಸ ಬೇಕಾಗುತ್ತದೆ. ಎಂದು ಭಾವಿಸಿ ನನ್ನ ರಕ್ಷಣೆಗೋಸ್ಕರ ಕೈಲಾಸ ಪರ್ವತದಲ್ಲಿ ನಿನ್ನ ಕೋಮಲವಾದ ಪಾದಗಳಿಂದ ಚಲಿಸುತ್ತ ಒರಟುತನ ಅಭ್ಯಾಸ ಮಾಡಿಕೊಂಡಿರವಿ ಇಲ್ಲದಿದ್ದರೆ ದಿವ್ಯ ಹಾಸಿಗೆ ನಯವಾದ ನೆಲ ನಿನಗೆ ಲಭ್ಯವಾಗಿದ್ದರೂ ಕಲ್ಲು ಬಂಡೆಯ ಮೇಲೆ ಏತಕ್ಕಾಗಿ ನಿನ್ನ ನೃತ್ಯ ನಡೆಯುತ್ತದೆ.ಶ್ಲೋಕ- ಕಂಚಿತ್ಕಾಲಮುಮಾಮಹೇಶ ಭವತಃ ಪಾದಾರವಿಂದಾರ್ಚನೈಃ ಕಂಚಿದ್ಧ್ಯಾನಸಮಾಧಿಭಿಶ್ಚನತಿಭಿಃಕಂಚಿದ್ಧಶಾಮೀದೃಶೀಂ ಯಃ ಪ್ರಾಪ್ನೋತಿ ಮುದಾತ್ವದರ್ಪಿತಮನಾ ಜೀವನ್ ಸ ಮುಕ್ತಃ ಖಲು||೮೧||ಅರ್ಥ-ಹೇ ಉಮಾ ಮಹೇಶ್ವರ ಸ್ವಲ್ಪ ಸಮಯವನ್ನು ನಿನ್ನ ಪಾದಾರ್ಚನೆಯಿಂದಲೂ ,ಧ್ಯಾನ ಯೋಗದಿಂದಲೂ ,ನಮಸ್ಕಾರಗಳಿಂದಲೂ ,ಕಥಾಶ್ರವಣಗಳಿಂದಲೂ ,ಮೂರ್ತದರ್ಶನದಿಂದಲೂ ಸ್ತೋತ್ರಗಳಿಂದಲೂ ಕಳೆಯುತ್ತ ಯಾರು ಕಾಲ ಕಳೆಯುವರೋ ಅವರು ಆನಂದದಿಂದ ನಿನ್ನಲ್ಲೇ ನೆಟ್ಟ ಮನಸ್ಸುಳ್ಳವರಾಗಿ ಜೀವನ್ಮುಕ್ತರಾಗುವರಲ್ಲವೇ?ತಾತ್ಪರ್ಯ- ಶಿವನ ನಾಮಸ್ಮರಣೆ ಮಾಡುತ್ತ,ಮನದಲ್ಲೇ ನೆನೆಯುತ್ತ ಅವನ ಪಾದ ಸೇವೆ‌ಮಾಡುವ ಅವಕಾಶ ಕೊಟ್ಟರೆ ಅವನ ಪಾದವನ್ನು ಮೆತ್ತಗೆ ಸ್ಪರ್ಶಿಸಿ ಸೇವೆ ಮಾಡಿ ನಾಮಸ್ಮರಣೆಯಲ್ಲಿ ಕಾಲ ಕಳೆದರೆ ಎಸ್ಟು ಜೀವನ ಸಾರ್ಥಕವಾಗುವದಲ್ಲವೇ ಎಂದು ತಮ್ಮ ಕೃತಿಯ ನುಡಿಗಳಲ್ಲಿ ಭಗವಂತನ ನಾಮ ಸ್ಮರಣೆಯ ಬಗ್ಗೆ ಹೇಳಿದ ಬಗೆ ಅನನ್ಯವಾದುದು.ಗಿರಿಜಾ.ಎಸ್.ದೇಶಪಾಂಡೆ.ಬೆಂಗಳೂರು. ಅಂಕಣ ೨೬   ಅದ್ವೈತ ದರ್ಶನ ಮತ್ತು ಶಂಕರ ಸಿದ್ಧಾಂತಸುಮಾರು ಕ್ರಿ.ಶ ೭೦೦ ರಲ್ಲಿ ಬದುಕಿದ ಗೌಡಪಾದಮುನಿಗಳು ಮಾಂಡೂಕ್ಯ ಕಾರಿಕೆಯ ಮೂಲಕ ಮೊಟ್ಟ ಮೊದಲಿಗೆ ಅದ್ವೈತ ಸಿದ್ಧಾಂತವನ್ನು ವ್ಯವಸ್ಥಿತವಾಗಿ ಧೃಡವಾಗಿ ಪ್ರತಿಪಾದಿಸಿದರು. ಅವರ ಶಿಷ್ಯರಾದ ಗೋವಿಂದ ಭಗವದ್ಪಾದರು ಅವರ ಶಿಷ್ಯರು ಶಂಕರಾಚಾರ್ಯರು ಅದ್ವೈತ ಸಿದ್ಧಾಂತಕ್ಕೆ ಸ್ಪಷ್ಟರೂಪ ಕೊಟ್ಟು ಜಗತ್ತಿನ ಮನ್ನಣೆ ಸಿಗುವಂತೆ ಮಾಡಿದರು. ಶಂಕರರು ಒಬ್ಬ ಅಸಾಧಾರಣ ಕ್ರಿಯಾಶೀಲ ಅದ್ಭುತ ವ್ಯಕ್ತಿ. ಕನ್ಯಾಕುಮಾರಿಯಿಂದ ಬದರಿ,ಶೃಂಗೇರಿ,ಕಂಚಿ , ಪೂರಿ,ದ್ವಾರಕಾ,ಬದರಿ ಹೀಗೆ ಭಾರತವನ್ನು ಕಾಲ್ನಡಿಗೆಯಲ್ಲಿ ಎರಡು ಬಾರಿ ಸುತ್ತಿ ತಮ್ಮ ತರ್ಕ ಶಕ್ತಿಯಿಂದ ಪ್ರತಿವಾದಿಗಳನ್ನು ಸೋಲಿಸಿ ಅದ್ವೈತದ ಧ್ವಜ ಎತ್ತಿ ಹಿಡಿದರು. ಅವರು ಬದುಕಿದ್ದು ೩೨ವರ್ಷವಾದರೂ ಪ್ರತೀ ಕ್ಷಣವನ್ನು ಸಾರ್ಥಕ ಪಡಿಸಿಕೊಂಡರು.*ಅಸ್ಟವರ್ಷೇ ಚತುರ್ವೇದೀ ದ್ವಾದಸೇ ಸರ್ವಶಾಸ್ತ್ರ ವಿತ್|ಷೋಡಸೇ ಕೃತಿವಾನ್ ಭಾಷಂದ್ವಾತ್ರಿಂ ಶೇ ಮುನಿರಭ್ಯಗಾತ್||ಎಂಟು ವರ್ಷಕ್ಕೆ ನಾಲ್ಕುವೇದ ಕಲಿತವರು ಹನ್ನೆರಡು ವರ್ಷಕ್ಕೆ ಸರ್ವ ಶಾಸ್ತ್ರ ಕಲಿತವರು, ಹದಿನಾರನೇಯ ವಯಸ್ಸಿಗೆ ಭಾಷ್ಯ ಬರೆದವರು ೩೨ನೇಯ ವರ್ಷದಲ್ಲಿ ಅಭ್ಯಗದರು ಎಂದರೆ ಹೊರಟುಹೋದರು.      ಚಿಕ್ಕ ವಯಸ್ಸಿನಲ್ಲಿ ಸಾಧನೆಗೈದ ಶಂಕರರು ರಚಿಸಿದ ಶಿವಾನಂದ ಲಹರಿಯ ಮುಂದಿನ ಶ್ಲೋಕ ಅದರ ಅರ್ಥ ತಾತ್ಪರ್ಯ ತಿಳಿಯೋಣ.ಶ್ಲೋಕ- *ಬಾಣತ್ವಂ ವೃಷಭತ್ವಮರ್ಧವಪುಷಾಭಾರ್ಯಾತ್ವಮಾರ್ಯಾಪತೇ ಘೋಣಿತ್ವಂಸಖಿತಾಮೃದಂಗವಹತಾಚೇತ್ಯಾದಿರೂಪಂ ದಧೌ|ತ್ವತ್ಪಾದೇ ನಯನಾರ್ಪಣಂ ಚ ಕೃತವಾಂಸ್ತ್ವದ್ಧೇಹಭಾಗೋ ಹರಿಃ ಪೂಜ್ಯಾತ್ಪೂಜ್ಯತರಃ ಸೇವ ಹೀ ನ ಚೇತ್ಕೋ ವಾ ತದನ್ಯೋಧಿಕಃ||ಹೇ ಪಾರ್ವತೀಶ ಭಗವಾನ್ ಮಹಾವಿಷ್ಣುವಿನ ಬಾಣ ,ವೃಷಭ ಅರ್ಧನಾರೀಶ್ವರ, ವರಾಹ,ಗೆಳೆಯ,ಮೃದಂಗ, ವಾದಕ ಮೊದಲಾದ ರೂಪ ಧರಿಸಬೇಕಾಯಿತು. ನಿನ್ನ ಪಾದದಲ್ಲಿ ನನ್ನ ಕಣ್ಣು ಅರ್ಪಿಸಬೇಕಾಯಿತು. ನಿನ್ನ ದೇಹದ ಅರ್ಧ ಭಾಗವಾಗಿರುವ ಹರಿಯು ಸರ್ವಪೂಜ್ಯನೇ ಸರಿ. ಅವನಿಗಿಂತ ಶ್ರೇಷ್ಟರು ಯಾರಿದ್ದಾರೆ?ಶ್ಲೋಕ- ಜನನಮೃತಿಯುತಾನಾಂ ಸೇವಯಾ ದೇವತಾನಾಂ ನ ಭವತಿ ಸುಖಲೇಶಸ್ಸಂಶಯೋ ನಾಸ್ತಿ ತತ್ರ|ಅಜನಿಮಮೃತರೂಪಂ ಸಾಂಬಮೀಶಂ ಭಜಂತೇ ಯ ಇಹ ಪರಮಸೌಖ್ಯಂ ತೇ ಹಿ ಧನ್ಯಾ ಲಭಂತೇ||೮೩||ಅರ್ಥ- ಹುಟ್ಟು ಸಾವುಗಳಿಗೆ ತುತ್ತಾಗುವ ಸಾಮಾನ್ಯ ದೇವತೆಗಳ ಆರಾಧನೆಯಿಂದ ಯಾವ ಸುಖವೂ ದೊರೆಯುವದಿಲ್ಲ. ಇದರಲ್ಲಿ ಸಂಶಯವಿಲ್ಲ. ಯಾರೂ ಹುಟ್ಟು ಸಾವು ಮೀರಿದ ಪಾರ್ವತಿ ಪತಿಯಾದ ಶಿವನನ್ನು ಭಜಿಸುತ್ತಾರೋ ಧನ್ಯರಾದ ಅವರು ಈ ಲೋಕದಲ್ಲಿಯೇ ಪರಮಸುಖವನ್ನು ಪಡೆಯುತ್ತಾರೆ.ಶ್ಲೋಕ- ಶಿವ ತವ ಪರಿಚರ್ಯಾಸನ್ನಿಧಾನಾಯ ಗೌರ್ಯಾ ಭವ ಮಮ ಗುಣದುರ್ಯಾಂ ಬುದ್ಧಿ ಕನ್ಯಾಂ ಪ್ರದಾಸ್ಯೇ ಸಕಲಭುವನಬಂಧೋ ಸಚ್ಚಿದಾನಂದ ಸಿಂಧೋ ಸದಯ ಹೃದಯಗೇಹೇ ಸರ್ವದಾ ಸಂವಸತ್ವಮ್||ಅರ್ಥ- ಹೇ ಶಿವ ಸಕಲಲೋಕ ಬಂಧು ಸಚ್ಚಿದಾನಂದ ಸಾಗರವೇ ನಿನ್ನ ಮತ್ತು ಗೌರೀ ದೇವಿಯ ಪರಿಚಾರಿಕೆಗಾಗಿ ಸದ್ಗುಣಸಂಪನ್ನಳಾದ ಬುದ್ಧಿಯೆಂಬ ಕನ್ಯೆಯನ್ನು ದಾನ ಮಾಡುತ್ತಾನೆ. ಹೇ ಕರುಣಾಳು ನನ್ನ ಹೃದಯವೆಂಬ ಮನೆಯಲ್ಲಿ ಸದಾವಾಸಿಸು.ಶ್ಲೋಕ- ಜಲಧಿಮಥನದಕ್ಷೋ ನೈವ ಪಾತಾಲಬೇಧೀ ನ ಚ ವನಮೃಗಯಾಯಾಂ ನೈವ ಲುಬ್ಧ ಪ್ರವೀಣಃ|ಅಶನಕುಸುಮಭೂಷಾಸ್ತ್ರಮುಖ್ಯಾಂ ಸಪರ್ಯಾಂ ಕಥಯ ಕಥಮಹಂ ತೇ ಕಲ್ಪಯಾನೀಂದುಮೌಲೇ||೮೫||ಅರ್ಥ- ಹೇ ಚಂದ್ರಮೌಳೀ ಸಮುದ್ರಮಥನ ,ಪಾತಾಳಭೇದನ , ವನಮೃಗಗಳ ಬೇಟೆ ಇವು ಯಾವುದರಲ್ಲೂ ಸಮರ್ಥನಲ್ಲ. ಹೀಗಿರುವಾಗ ಪುಷ್ಪ,ಆಭರಣ, ಭೋಜನ ,ವಸ್ತ್ರ ಇವುಗಳು ಪ್ರಧಾನವಾಗಿರುವ ನಿನ್ನ ಸಾತ್ವಿಕ ಪೂಜೆ ಹೇಗೆ ಮಾಡಲಿ?ತಾತ್ಪರ್ಯ- ಶಿವನ ನಾಮ ಹಲವು ಹಲವು ನಾಮದಿಂದ ಬೇರೆ ವಿದ್ಯೆ ಗೊತ್ತಿಲ್ಲದ ಬರೀ ಧ್ಯಾನ ಮಾಡುವದನ್ನು ಅರಿತ ನಾನು ನೀನು ಒಲಿಯಲು ಯಾವ ಬಗೆಯ ಪೂಜೆ‌ಮಾಡಲಿ? ಯಾವ ಮಾರ್ಗದಿಂದ ನಾನು ಧ್ಯಾನಿಸಲಿ ಎಂದು ಶಂಕರರು ಭಗವಂತನ ನಾಮಸ್ಮರಣೆಯ ವಿವರಣೆಯನ್ನು ಕೇಳುತ್ತಲಿರುವರು. ಧ್ಯಾನದಿಂದ ಮಾತ್ರ , ಒಳ್ಳೆಯ ಮನಸ್ಸಿನಿಂದ ಮಾತ್ರ ಸಾಧ್ಯ ಎನ್ನುವದೇ ತಾತ್ಪರ್ಯ.ಗಿರಿಜಾ.ಎಸ್.ದೇಶಪಾಂಡೆ. ಅಂಕಣ - ೨೭ ದಶನಾಮಿ ಪದ್ಧತಿ- ಸನ್ಯಾಸದಲ್ಲಿ ಏಕದಂಡೀ ( ಒಂದು ದಂಡ) ಸಂಪ್ರದಾಯ ಪ್ರಾರಂಭಿಸಿದರು. ಆ ಸಂಪ್ರದಾಯದ ಸನ್ಯಾಸಿಗಳು ತಮ್ಮ ಹೆಸರಿನ ಮುಂದೆ ದಶನಾಮಗಳಲ್ಲಿ ಒಂದನ್ನು ಇಟ್ಟುಕೊಳ್ಳುತ್ತಾರೆ. ಅವು ಸರಸ್ವತಿ,ತೀರ್ಥ, ಅರಣ್ಯ,ಭಾರತಿ, ಆಶ್ರಮ,ಗಿರಿ, ಪರ್ವತ,ಸಾಗರ, ವನ,ಪುರಿ.ಸರಸ್ವತಿ,ಪುರಿ,ಭಾರತಿ, ಉಪನಾಮಗಳು ಶೃಂಗೇರಿ ಪೀಠಕ್ಕೆ, ತೀರ್ಥ, ಆಶ್ರಮ ನಾಮಗಳು ದ್ವಾರಕಾ ಪೀಠಕ್ಕೆ ಸೇರಿವೆ. ಗಿರಿ, ಪರ್ವತ, ಸಾಗರ ಇವು ಜ್ಯೋತಿರ್ ಮಠಕ್ಕೆ ಸೇರಿವೆ. ವನ,ಅರಣ್ಯ ನಾಮಗಳು ಪುರಿಯ ಮಠಕ್ಕೆ‌ಸೇರಿವೆ.ಪಂಚಾಯನನ ಪೂಜೆ- ವೇದ ಪದ್ಧತಿಯಲ್ಲಿ ಮನುಸ್ಮೃತಿ ಮೊದಲಾದವು ಪೂಜಾದಿ ವಿಧಿಗಳನ್ನು ಹೋಮ ಹವನಗಳನ್ನು ಸಂಸ್ಕಾರ ಮಾಡುವ ಕ್ರಮ ಸ್ಮಾರ್ತ ಸಂಪ್ರದಾಯ ಪೂಜೆಯಲ್ಲಿ ಸೂರ್ಯ,ಗಣಪತಿ,ಅಂಬಿಕಾ, ಶಿವ,ವಿಷ್ಣು ಈ ಐದು ದೇವತೆಗಳನ್ನು ಮಧ್ಯದಲ್ಲಿಟ್ಟು ಪೂಜಿಸುತ್ತಾರೆ. ಅಂತಹ ಅದ್ವೈತ ತತ್ವ ಸಿದ್ಧಾಂತಕರಾದ ಶ್ರೀ ಶಂಕರಾಚಾರ್ಯ ವಿರಚಿತ ಶಿವಾನಂದ ಲಹರಿಯ ಮುಂದಿನ ಶ್ಲೋಕ,ಅದರ ಅರ್ಥ,ತಾತ್ಪರ್ಯ ತಿಳಿಯೋಣ.ಶ್ಲೋಕ- ಪೂಜಾದ್ರವ್ಯಸಮೃದ್ಧಯೋ ವಿರಚಿತಾಃ ಪೂಜಾ ಕಥಂ ಕುರ್ಮಹೇ ಪಕ್ಷತ್ವ ನ ಚ ವಾಕಿಟತ್ವಮಪಿ ನ ಪ್ರಾಪ್ತಂ ಮಯಾ ದುರ್ಲಭಮಂ|ಚಾನೇ ಮಸ್ತಕಮಂಘ್ರಿಪಲ್ಲವಮುಮಾಚಾನೇ ನ ತೇಹಂ ವಿಭೋ ನಜ್ಞಾತಂಹಿ ಪಿತಾಮಹೇನ ಹರಿಣಾ ತತ್ತವೇನತದ್ರೂಪಿಣಾ||೮೬||ಅರ್ಥ- ಹೇ ಉಮಾಪತಿ ಪ್ರಭೋ ಪೂಜಾದ್ರವ್ಯಗಳು ಸಾಕಷ್ಟಿದ್ದರೂ ನಿನ್ನ ಪೂಜೆ ಹೇಗೆ ಮಾಡಲಿ. ನಾನು ಹಕ್ಕಿಯ ರೂಪವನ್ನಾಗಲಿ ,ವರಾಹರೂಪವನ್ನು ಹೊಂದಲಾರೆ. ನಿನ್ನ ಶಿರವನ್ನಾಗಲಿ ಪಾದವನ್ನಾಗಲಿ ಅರಿಯಲಾರೆ. ಪಕ್ಷಿಯ ರೂಪವನ್ನು ಹೊಂದಿದ ಬ್ರಹ್ಮ ,ವರಾಹ ರೂಪ ಹೊಂದಿದ ವಿಷ್ಣು ಇವರಿಗೆ ನಿನ್ನ ಶಿರಸ್ಸು ಪಾದಗಳ ನಿಜ ಸ್ವರೂಪ ತಿಳಿಯಲಿಲ್ಲವೆಂದ ಮೇಲೆ ನನ್ನ ಪಾಡೇನು?ಶ್ಲೋಕ- ಆಶನಂ ಗರಲಂ ಫಣೀ ಕಲಾಪೋ ವಸನಂ ಚರ್ಮ ಚ ವಾಹನಂ ಮಹೋಕ್ಷ|ಮಮ ದಾಸ್ಯಸಿ ಕಿಂ ಕಿಮಸ್ತಿ ಶಂಭೋ ತವ ಪಾದಾಂಬುಜ ಭಕ್ತಿಮೇವ ದೇಹಿ||೮೭||ಅರ್ಥ- ಹೇ ಶಂಭೋ ವಿಷವೇ ನಿನ್ನ ಆಹಾರ, ಹಾವುಗಳೇ ಆಭರಣ, ಚರ್ಮವೇ ಉಡುಗೆ, ಎತ್ತೇ ವಾಹನ ಹೀಗಿರುವಾಗ ನೀನು ನನಗೇನು ಕೊಡಬಲ್ಲೆ? ನಿನ್ನಲಿ ಕೊಡಲಿಕ್ಕಾದರೂ ಏನಿದೆ? ಆದ್ದರಿಂದ ನಿನ್ನ ಪಾದಕಮಲಗಳ ಭಕ್ತಿಯನ್ನಸ್ಟೆ ಕೊಡು ಸಾಕು.ಶ್ಲೋಕ- ಯಥಾಕೃತಾಂಭೋನಿಧಿಸೇತು ಬಂಧನಃ ಕರಸ್ಥಲಾಧಃ ಕೃತಪರ್ವತಾಧಿಪಃ|ಭವಾನಿತೇ ಲಂಘಿತಪದ್ಮಸಂಭವಸ್ತದಾ ಶಿವಾರ್ಚಾಸ್ತವಭಾವನಕ್ಷಮಃ||ಅರ್ಥ- ಹೇ ಶಿವನೇ ಯಾವಾಗ ನಾನು ಸಮುದ್ರಕ್ಕೆ ಸೇತುವೆಯನ್ನು ನಿರ್ಮಿಸಬಲ್ಲೆನೋ ,ವಿಂದ್ಯಪರ್ವತವನ್ನು ಕೈಯಿಂದ ಬೆಳೆಯದ ಹಾಗೆ ತಡೆಯುವೆನೊ ,ಬ್ರಹ್ಮನಗಿಂತ ಶ್ರೇಸ್ಟನಾಗುವೆನೋ ಆಗಮಾತ್ರನಿನ್ನ ಪೂಜೆ ,ಸ್ತೋತ್ರ ಮತ್ತು ಧ್ಯಾನಗಳಲ್ಲಿ ಸಮರ್ಥನಾಗಬಹುದು ಎಂದು ತೋರುತ್ತದೆ.ಶ್ಲೋಕ- ನತಿಭಿರ್ನುತಿಭಿಸ್ತ್ವಮೀಶ ಪೂಜಾ ವಿಧಿಭಿರ್ಧ್ಯನಸಮಾಧಿಭಿರ್ನ ತುಷ್ಟಃ|ಧನುಷಾಮುಸಲೇನ ಚಾಷ್ಮಭಿರ್ವಾ ವದತೇ ಪ್ರೀತಿಕರಂ ತಥಾಕರೋಮಿ||೮೯||ಅರ್ಥ- ಹೇ ಈಶ್ವರನೇ ನಮಸ್ಕಾರ ಸ್ತೋತ್ರ ಪೂಜಾವಿಧಿ ಧ್ಯಾನಸಮಾಧಿ ಇವುಗಳಿಂದ ನೀನು ತೃಪ್ತವಾಗುವದಿಲ್ಲ ಬಿಲ್ಲು ಒನಕೆ ಕಲ್ಲು  ಇವುಗಳಿಂದಾದರೂ ನಿನಗೆ ತೃಪ್ತಿಯೇ? ಹೇಳು ಅದು ನಿನಗೆ ಪ್ರೀತಿಕರವಾದರೆ ನಾನು ಹಾಗೆಯೇ ಮಾಡುವೆ.ತಾತ್ಪರ್ಯ- ಬ್ರಹ್ಮ,ವಿಷ್ಣು ಪ್ರಾಣಿಗಳ ಅವತಾರ ಹೊಂದಿ ನಿನ್ನ ಶಿರ ಪಾದಗಳ ದರ್ಶನ ಪಡೆಯದವರು ನಾನು ಪ್ರಾಣಿರೂಪದಲ್ಲಿ ಅಲ್ಲದೇ ಮನುಷ್ಯ ರೂಪದಲ್ಲಿಯೇ ನಿನ್ನ ಶಿರ,ಪಾದಗಳ ದರ್ಶನ ಮಾಡಲು ಇಚ್ಛಿಸುವೆ. ನನಗೆ ಭಕ್ತಿ ಮಾತ್ರ ನೀಡು ಎಂದು ಶಿವನನ್ನು ಕೇಳಿಕೊಳ್ಳುವ ಪರಿ ಈ ಶ್ಲೋಕಗಳ ತಾತ್ಪರ್ಯ. ಈ ಶ್ಲೋಕಗಳ ಪಠಣ ಮತ್ತು ಅರ್ಥ ತಾತ್ಪರ್ಯ ನಾವೂ ತಿಳಿದು ಈಶ್ವರನ ಕೃಪೆಗೆ ಪಾತ್ರರಾಗೋಣ.ಗಿರಿಜಾ.ಎಸ್.ದೇಶಪಾಂಡೆ. ಬೆಂಗಳೂರು. ಅಂಕಣ - ೨೮ ಜಗದ್ಗುರು ಶಂಕರರ ಅತ್ಯಂತ ಪ್ರಸಿದ್ಧ ಕೃತಿ " ಬ್ರಹ್ಮಸೂತ್ರಭಾಷ್ಯ" .ತಾರ್ಕಿಕ ಸಮಂಜಸತೆ, ಉಜ್ವಲ ದಾರ್ಶನಿಕ ಪ್ರತಿಭೆ, ಮನೋಹರ ಶೈಲಿಗಳ ಸಂಗಮ. ಅದೊಂದು ಅಮೋಘ ಕೃತಿ. ಹಾಗೆಯೇ ಉಪನಿಷತ್ತು, ಭಗವದ್ಗೀತೆಯ ಅವರ ಭಾಷ್ಯಗಳು ಅದರ ಸರಳ ನಿರೂಪಣೆ ಅಸಾಧಾರಣ ತರ್ಕಕ್ಕೆ ಪ್ರಸಿದ್ಧಿ ಮತ್ತು ಜನಪ್ರೀಯತೆ ಪಡೆದಿವೆ. ಈ ಮೇಲಿನ ಮೂರು ವಿಷಯಕ್ಕೆ " ಪ್ರಸ್ತಾನತ್ರಯ" ಎಂದು ಹೆಸರು. ಶಂಕರರು ಪ್ರಸ್ಥಾನತ್ರಯದ ಮೊದಲ ಭಾಷ್ಯಾಕಾರರೆಂದು ಹೆಸರು ಪಡೆದಿದ್ದಾರೆ. ಅಲ್ಲದೇ ಅವರು "ಆತ್ಮಬೋಧೆ" ಮೊದಲಾದ ಗ್ರಂಥಗಳನ್ನು ಸ್ತೋತ್ರಗಳನ್ನು ರಚಿಸಿದ್ದಾರೆ. ಅವರ ಶಿಷ್ಯರಾದ ಮಂಡನಮಿಶ್ರರು ಅವರ ಸಮಕಾಲೀನ ಮತ್ತೊಂದು ಅದ್ವೈತಿ. ಅವರು ಸುರೇಶ್ವರಾಚಾರ್ಯರೆಂದೂ ವಾರ್ತಿಕಕಾರರೆಂದು ಪ್ರಸಿದ್ಧಿ. ಶಂಕರ ಬಾಷ್ಯಕ್ಕೆ ಟೀಕೆ ವಾರ್ತಿಕವನ್ನು ಬರೆದಿದ್ದಾರೆ. ಶಂಕರರ ಇನ್ನೊಬ್ಬ ಶಿಷ್ಯ ಪದ್ಮಪಾದರು ಬ್ರಹ್ಮಸೂತ್ರ ಭಾಷ್ಯದ ಮೇಲೆ " ಪಂಚಪಾದಿಕಾ" ಎಂಬ ವ್ಯಾಖ್ಯಾನವನ್ನು ರಚಿಸಿದ್ದಾರೆ. ಅಂತಹ ವಿದ್ವತ್ತು ಪಡೆದ ಆಚಾರ್ಯರು ಬರೆದ ಶಿವಾನಂದ ಲಹರಿಯ ಮುಂದಿನ ಶ್ಲೋಕ ಅದರ ಅದರ ಅರ್ಥ ತಾತ್ಪರ್ಯ ತಿಳಿಯೋಣ.ಶ್ಲೋಕ- *ವಚಸಾಚರಿತಂ ವದಾಮಿ ಶಂಭೋ ರಹಮುದ್ಯೋಗವಿಧಾಸುತೇಪ್ರಸಕ್ತಃ|ಮನಸಾಕೃತಿಮೀಶ್ವರಸ್ಯ ಸೇವೇ ಶಿರಸಾ ಚೈವಸದಾಶಿವಂ ನಮಾಮಿ ||೯೦||ಅರ್ಥ- ನಾನು ಮಾತುಗಳಿಂದ ಶಿವಚರಿತೆ ಹೇಳುವೆ. ನನಗೆ ಯೋಗಮಾರ್ಗ ತಿಳಿದಿಲ್ಲ. ಮನಸ್ಸಿನಿಂದ ಈಶ್ವರನ ಆಕಾರ ಸೇವಿಸುತ್ತೇನೆ. ತಲೆಯಿಂದ ಸದಾಶಿವನನ್ನು ವಂದಿಸುತ್ತೇನೆ.ಶ್ಲೋಕ- ಆದ್ಯಾ ವಿದ್ಯಾ ಹೃದ್ಗತಾ ತ್ವತ್ಪ್ರಸಾದಾತ್ ಸೇವೇ ನಿತ್ಯಂ ಶ್ರೀಕರಂ ತ್ವತ್ಪದಾಬ್ಜಂ ಭಾವೇ ಮುಕ್ತೇರ್ಭಾಜನಂ ರಾಜಮೌಲೇ||೯೧||ಅರ್ಥ- ಹೇ ರಾಜಶೇಖರ ಅನಾದಿ ಕಾಲದಿಂದಲೂ ಇದ್ದ ಮಾಯೆಯು ನಾಶವಾಗಿ ನಿನ್ನ ಪ್ರಸಾದದಿಂದ ಮನೋಜ್ಞವಾದ ವಿದ್ಯೆಯು ಮನಸ್ಸನ್ನು ಹೊಕ್ಕಿದೆ. ಮಂಗಳಕರವೂ ಮೋಕ್ಷಪ್ರದವೂ ಆದ ನಿನ್ನ ಪಾದಕಮಲವನ್ನು ನಾನು ಸೇವಿಸುತ್ತ ಧ್ಯಾನಿಸುತ್ತೇನೆ.ಶ್ಲೋಕ- ದೂರಿಕೃತಾನಿ ದುರಿತಾನಿ ದುರಾಕ್ಷರಾಣಿ ದೌರ್ಭಾಗ್ಯದುಃಖ ದುರಹಂಕೃತಿದುರ್ವಚಾಂಷಿ|ಸಾರಂ ತ್ವದೀಯ ಚರಿತಂ ನಿತರಾ ಪಿಬಂತಂ ಗೌರೀಶ ಮಾಮಿಹ ಸಮುದ್ಧರ ಸತ್ಕಟಾಕ್ಷೈಃ||೯೨||ಅರ್ಥ- ಹೇ ಗೌರೀಶ ಪಾಪ,ಕೆಟ್ಟ ಹಣೆಬರಹ,ದೌರ್ಭಾಗ್ಯ, ದುರಹಂಕಾರ,ಕೆಟ್ಟಮಾತು, ಇವೆಲ್ಲ ನನ್ನಿಂದ ದೂರಹೋದವು. ಸಾರಭೂತನಾದ ನಿನ್ನ ಕಥಾಮೃತವನ್ನು ಯಾವಾಗಲೂ ಪಾನಮಾಡುತ್ತಿರುವ ನನ್ನನ್ನು ನಿನ್ನ ಸತ್ಕಟಾಕ್ಷಗಳಿಂದ ಉದ್ಧರಿಸು.ಶ್ಲೋಕ- ಸೋಮಕಲಾಧರಮೌಲೌ ಕೋಮಲಘನಕಂದರೇ ಮಹಾಮಹಸಿ | ಸ್ವಾಮಿನಿ ಗಿರಿಜಾನಾಥೇ ಮಾಮಕಹೃದಯಂ ನಿರಂತರಂ ರಮತಾಮ್||೯೩||ಅರ್ಥ- ಶಿರದಲ್ಲಿ ಚಂದ್ರಕಲೆ ಧರಿಸಿರುವ ,ಕೋಮಲವಾದ ನೀಲ ಮೇಘವರ್ಣದ ಕಂಠವುಳ್ಳ ,ಪರಂಜ್ಯೋತಿರೂಪನೂ ,ಪ್ರಭುವೂ ಆದ ಗಿರಿಜಾರಮಣನಲ್ಲಿ ನನ್ನ ಹೃದಯವು ನಿರಂತರವೂ ರಮಿಸಲಿ.ತಾತ್ಪರ್ಯ- ಶಿವನ ರೂಪವನ್ನು ಮನದಲ್ಲೇ ಸೃಷ್ಟಿಸಿಕೊಂಡು ಅವನ ನಾಮ ಸ್ಮರಣೆ ಮಾಡುತ್ತ ಅವನ ಪಾದಗಳಿಗೆ ನಮ್ಮ ತಲೆ ಬಗ್ಗಿಸಿ ಭಕ್ತಿಯಿಂದ ನಮಸ್ಕರಿಸಿದರೆ ನಮಗೆ ಅವನು ಒಲಿದಂತೆ. ನಾನಾ ಅವನ ನಾಮಗಳಿಂದ ಮನದಲ್ಲಿ ಪೂಜಿಸಿ ಆರಾಧಿಸಿದರೆ ನಮಗೆ ಬರುವ ಕಷ್ಟಗಳಿಂದ ಶಿವನು ರಕ್ಷಣೆ ಮಾಡಿ ತನ್ನ ಕೃಪೆಬೀರುವನು. ಶಿವನು ಪರಂಜ್ಯೋತಿರೂಪನೂ, ಗಿರಿಜಾರಮಣನಾದ ಅವನಲ್ಲಿ ನಮ್ಮ ಹೃದಯವು ನಿರಂತರವಾಗಿ ಲೀನವಾಗಿರಲಿ. ಶಿವನ ಮಹಿಮೆ ಅಪಾರ . ನನ್ನ ಪ್ರಕಾರ ವ್ಯಕ್ತಪಡಿಸುವದಾದರೆ ಈ ಶಿವಾನಂದ ಲಹರಿ ಅಂಕಣ ಬರೆಯುವಾಗ ನನಗೆ ಕಷ್ಟವೆನಿಸುತಿತ್ತು. ಮುಂದೆ ಒಂದೇ ಮನಸ್ಸಿನಿಂದ ಶಿವನ ರೂಪ ಮನದಲ್ಲಿ ಸೃಷ್ಟಿಸಿಕೊಂಡು ಬರೆಯತೊಡಗಿದಾಗ ನನಗೆ ಬರೆದದ್ದೇ ಗೊತ್ತಾಗದಾಗೆ ಅಂಕಣ ಬರಹ ಮುಗಿಸುತ್ತ ಬಂದಿರುವೆ. ಶ್ರೀ ಶಂಕರರ ಮತ್ತು ನಮ್ಮ ಮನೆ ಆರಾಧಕ ನಂಜುಂಡೇಶ್ವರನ ಕೃಪೆ ನನ್ನ ಸಂಸಾರವನ್ನೂ ನನ್ನ ಈ ಬಳಗದ ಮೇಲೆ ಸದಾ ಇರಲೆಂದು ಹೃದಯಪೂರ್ವಕವಾಗಿ ಬೇಡುವೆನು.ಓಂ ನಮಃಶಿವಾಯ| : ಅಂಕಣ- ೨೯ ಅದ್ವೈತ ಸಿದ್ಧಾಂತ- ಸಂಸ್ಕೃತದಲ್ಲಿ ದ್ವಿ ಎಂದರೆ ಎರಡು ಎಂದರ್ಥ. ಹಾಗಾಗಿ ಅದ್ವೈತ ಎಂದರೆ ಎರಡಲ್ಲದ್ದು. ಇದೇ ಅದ್ವೈತದ ಮೂಲ ಸಿದ್ಧಾಂತವಾಗಿದೆ. ಆತ್ಮ ಪರಮಾತ್ಮ ಎರಡೂ ಬೇರೆ ಬೇರೆ ಅಂಶಗಳಲ್ಲ. ಇರುವದು ಒಂದೇ. ಆತ್ಮನೇ ಪರಮಾತ್ಮನು.ಪರಮಾನ್ಮತೇ ಆತ್ಮನು.         ಅಹಂ ಬ್ರಹ್ಮಾಸ್ಮಿ ಅಂದರೆ ನನ್ನೊಳಗಿನ ಆತ್ಮವೇ ಪರಬ್ರಹ್ಮ. ತತ್ವಮಸಿ ಅಸಿ ಎಂದರೆ ನೀನು ಅದೇ ಆತ್ಮನಾಗಿರುವೆ. ಎಂಬುದು ಮೂಲ ಮಂತ್ರ. ಶಂಕರಾಚಾರ್ಯರು ಪರಮಾತ್ಮ ಎಂದರೆ ಆತ್ಮ. ಅದು ಮಾತ್ರ ಸತ್ಯ. ಉಳಿದೆಲ್ಲವೂ ಮಿಥ್ಯ ಅಂತಲೂ ಸರ್ವಂ ಬ್ರಹ್ಮಮಯಂ ಜಗತ್ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನಿಂದಲೇ ಆವರಿಸಲ್ಪಟ್ಟಿದೆ ಎಂಬುದಕ್ಕೆ ಜಗತ್ತಿಗೆ ಸಾರಿದರು. ಅಂತಹ ಶಂಕರರು ರಚಿಸಿದ ಶಿವಾನಂದ ಲಹರಿಯ ಮುಂದಿನ ಶ್ಲೋಕ ಅದರ ಅರ್ಥ ತಾತ್ಪರ್ಯ ತಿಳಿಯೋಣ.ಶ್ಲೋಕ- ಸಾ ರಸನಾ ತೇ ನಯನೇ ತಾವೇವ ಕರೌ ಸ ಏಕ ಕೃತಕೃತ್ಯಃ|ಯಾ ಯೇ ಯೌ ಯೋ ಭರ್ಗಂ ವದತಿಕ್ಷೇತ್ರೇ ಸದಾರ್ಚತಃ ಸ್ಮರತಿ||೯೪||ಅರ್ಥ- ಯಾವ ನಾಲಿಗೆ ಶಿವನಾಮ ನುಡಿಯುತ್ತದೋ ಅದೇ ನಿಜವಾದ ನಾಲಿಗೆ ಯಾವ ಕಣ್ಣು ಶಿವನನ್ನು ದರ್ಶನ ಮಾಡುತ್ತದೋ ಅದೇ ಸಾರ್ಥಕ ಕಣ್ಣುಗಳು, ಯಾವ ಕರಗಳು ಶಿವನನ್ನು ಅರ್ಚಿಸುತ್ತವೆಯೋ ಅವೇ ನಿಜವಾದ ಕರಗಳೆನಿಸುತ್ತವೆ. ಯಾವನು ಶಿವನನ್ನು ಸ್ಮರಿಸುವನೋ ಆತನೇ ಧನ್ಯನು.ಶ್ಲೋಕ- ತಿಮೃದುಲೌ ಮಮ ಚರಣಾವತಿಕಠಿಣಂ ತೆ ಮನೋ ಭವಾನೀಶ |ಇತಿ ವಿಚಿಕಿತ್ಸಾಂ ಸನ್ತ್ಯಜ ಶಿವ ಕಥಮಾಸೀದ್ಗಿರೌ ತಥಾ ಪ್ರವೇಶಃ||೯೫||ಅರ್ಥ- ಹೇ ಭವಾನೀಪತಿ ಶಿವನೇ ನೀನು ನನ್ನ ಪಾದ ಅತೀ ಮೃದು ನಿನ್ನ ಮನಸು ಒರಟು ಎಂಬುದನ್ನು ಬಿಡು. ನಿನಗೆ ಕೈಲಾಸ ಪರ್ವತ ದಲ್ಲಿ ವಾಸ ಹೇಗೆ ಮಾಡಿದೆ.ಶ್ಲೋಕ- ಧೈರ್ಯಾಕುಶೇನ ನಿರ್ಭತಂ ರಭಸಾದಾಕೃಷ್ಯ ಭಕ್ತಿಶೃಂಖಲಯಾ|ಪುರಹರ ಚರಣಾಲಲಾನೇ ಹೃದಯಮದೇಭಂ ಬಧಾನ ಚಿದ್ಯಂತ್ರೈಃ||೯೬||ಅರ್ಥ- ಹೇ ತ್ರಿಪುರಾರಿ ನನ್ನ ಮನವೆಂಬ ಮದಿಸಿದ ಗಜವನ್ನು ದೈರ್ಯವೆಂಬ ಅಂಕುಶದಿಂದ ನಿಯಂತ್ರಿಸಿ ,ಭಕ್ತಿಯೆಂಬ ಸರಪಳಿಯಿಂದ ಬಲವಾಗಿ ಬಿಗಿದು ಚಿತ್ ಯೆಂಬ ಯಂತ್ರದಿಂದ ನಿನ್ನ ಪಾದವೆಂಬ ಕಂಭಕ್ಕೆ ಕಟ್ಟಿಹಾಕು.ಶ್ಲೋಕ- ಪ್ರಚರತ್ಯಭಿತಃ ಪ್ರಗಲ್ಬವೃತ್ತ್ಯಾ ಮದವಾನೇಷ ಮನಕರೀ ಗರೀಯಾಸ್|ಪರಿಗ್ರಹ್ಯ ನಯೇನ ಭಕ್ತಿರಜ್ವ್ವಾ ಪರಮ ಸ್ಥಾಣುಪದಂ ದೃಢಂ ನಯಾಮುಮ್||೯೭||ಅರ್ಥ- ಹೇ ಪರಶಿವನೇ ನನ್ನ ಮನವೆಂಬ ಬಲಿಷ್ಟ ಮದ್ದಾನೆಯು ಸ್ವೇಚ್ಛೇಯಿಂದ ಎಲ್ಲ ಕಡೆ ಸಂಚರಿಸುತ್ತಿದೆ. ಅದನ್ನು ಭಕ್ತಿಯೆಂಬ ಹಗ್ಗದಿಂದ ಉಪಾಯವಾಗಿ ಹಿಡಿದು ಶಿವ ಪಾದವೆಂಬ ಮರದ ಬುಡಕ್ಕೆ ಧೃಡವಾಗಿ ಬಂಧಿಸು.ತಾತ್ಪರ್ಯ- ಭಕ್ತಿ ಇದ್ದರೆ ಧರ್ಮಾಚರಣೆ ಸಾಧ್ಯ,ಇದರಿಂದ ಪಾಪನಾಶ ,ಕಾಮ ಕ್ರೋದಾಧಿಗಳ ನಾಶ .ಆಗಲೇ ಸುಖ ,ಜ್ಞಾನ , ಆನಂದಗಳೆಂಬ ಸಸ್ಯಗಳು ಮೋಕ್ಷ ಫಲ ನೀಡುತ್ತವೆ. ಶಿವನ ಪಾದಾಂಭುಜದಲ್ಲಿ ಭಕ್ತಿಯನ್ನು ಕೊಡು ಎಂದು ಕೇಳುವದಾಗಿದೆ. ಭಕ್ತನಾದವನು ಮಾತಿನಿಂದ ಪರಮಾತ್ಮನಾದ ಶಿವನನ್ನು ಮಹಿಮೆಯ ವರ್ಣನೆ ಮಾಡುತ್ತಾನೆ. ಮನಸ್ಸಿನಿಂದ ಶಿವನ ವಿಗ್ರಹವನ್ನು ಆಕೃತಿಯನ್ನು ಪೂಜಿಸುತ್ತಾನೆ. ಶಿರಸ್ಸಿನಿಂದ ನಮಿಸುತ್ತಾನೆ. ಇದಕ್ಕಿಂತ ಹೆಚ್ಚು ಪರಮಾತ್ಮನಲ್ಲಿ ಅರ್ಪಿಸಲು ನಮ್ಮ ಬಳಿ ಏನೂ ಇಲ್ಲ ಭಕ್ತಿಯೊಂದೆ ಪ್ರತಿಯೊಬ್ಬರ ಹತ್ತಿರ ಇರುವ ಸಾಧನವಾಗಿದೆ ಎನ್ನುವದೇ ಮೇಲಿನ ಶ್ಲೋಕಗಳ ತಾತ್ಪರ್ಯವಾಗಿದೆ. ಗಿರಿಜಾ.ಎಸ್.ದೇಶಪಾಂಡೆ.ಬೆಂಗಳೂರು ಅಂಕಣ- ೩೦ ಶಂಕರರ ಜೀವನದ ಕೊನೆಯ ಭಾಗದಲ್ಲಿ ಹಿಮಾಲಯಕ್ಕೆ ಪ್ರಯಾಣ ಮಾಡಿ ಅಲ್ಲಿ ಕೇದಾರ ದೇವಾಲಯದ ಹತ್ತಿರ ವಿದೇಹ ಮುಕ್ತಿ ಪಡೆದರೆಂದು ಹೇಳುತ್ತಾರೆ. ಕೇದಾರದ ಕೇದಾರನಾಥ ದೇವಾಲಯದ ಹಿಂಭಾಗದಲ್ಲಿ ಶ್ರೀ ಶಂಕರರ ಸಮಾಧಿ ಇದೆ. ಶಿಲಾ ಪ್ರತಿಮೆಯೂ ಇದೆ. ಕೇರಳದವರು ತಮ್ಮ ತ್ರಿಶೂರಿನಲ್ಲಿ ವಿದೇಹ ಮುಕ್ತಿ ಪಡೆದರೆಂದು ಹೇಳಿದರೆ ತಮಿಳು ನಾಡಿನವರು ಕಂಚಿಯಲ್ಲಿ ವಿದೇಹ ಮುಕ್ತಿ ಹೊಂದಿದರೆಂದು  ಹೇಳುತ್ತಾರೆ .ಎರಡು ಕಡೆಗೂ ಶಂಕರರ ಸಮಾಧಿಗಳಿವೆ. ಆದರೆ ಎಲ್ಲಕ್ಕೂ ಪ್ರಚೀನವಾದ "ಮಾಧವ ಶಂಕರ ವಿಜಯ" ದಲ್ಲಿ ಕೇದಾರದಲ್ಲಿ ಶಂಕರರು ವಿದೇಹಮುಕ್ತಿ ಹೊಂದಿದರೆಂದು ಹೇಳಿದೆ.       ಇತ್ತೀಚಿನ ಕಾಂಬೋಡಿಯಾದಲ್ಲಿ ಶಂಕರರ ಶಿಷ್ಯ ಶಿವಸೋಮರ ಕ್ರಿ.ಶ ೮೮೦ ರಶಾಸನ ಸಿಕ್ಕಿರುವದಾಗಿ ತಿಳಿದು ಬಂದಿದೆ. ಆ ಶಾಸನದ ಪ್ರಕಾರ ಶಂಕರರು ಕ್ರಿ.ಶ ೮೨೦ ರಲ್ಲಿ ಕಾಲವಶರಾದರೆಂದು ಹೇಳಿದೆ.      ಅವರು ಈಗಲೂ ನಮ್ಮೊಟ್ಟಿಗೆ ಇದ್ದು ನಮಗೆ ಶಿವಾನಂದ ಲಹರಿಯ ಬಗ್ಗೆ ನಮಗೆ ವರ್ಣನೆ ಮಾಡಿ ಹೇಳುತ್ತಿರುವರೇನೋ ಎಂದು ಅನಿಸುತಿದೆ. ಅಂತಹ ಶಿವಾನಂದ ಲಹರಿಯ ಶ್ಲೋಕ ಅರ್ಥ,ಅದರ ಮಹತ್ವ ಅರಿಯೋಣ.ಶ್ಲೋಕ- ಸರ್ವಾಲಂಕಾರಯುಕ್ತಾಂ ಸರಲಪದಯುತಾಂ ಸಾಧುವೃತಾಂ ಸುವರ್ಣಾಂಸದ್ಬಿಃ ಸಂಸ್ತೂಯಮಾನಾಂ ಸರಸಗುಣಯುತಾಂ ಲಕ್ಷಿತಾಂ ಲಕ್ಷಣಡ್ಯಾಮ್|ಉದ್ಯದ್ಭೂಷಾವಶೇಷಾಮುಪಗತವಿನಯಾಂ ದ್ಯೋತಮಾನಾರ್ಥರೇಖಾಂ ಕಲ್ಯಾಣಿಂ ದೇವ ಗೌರಿಪ್ರೀಯ ಮಮ ಕವಿತಾಕನ್ಯಕಾಂ ತಂ ಗೃಣಾನ ||೯೮||ಅರ್ಥ- ಹೆ ಗೌರೀವಲ್ಲಭ ಸರ್ವಾಲಂಕಾರ ಭೂಷಿತೆಯೂ ,ಸರಳ ಪದಗಳ,ಸೂಕ್ತ ವೃತ್ತಗಳು, ಒಳ್ಳೆಯ ಅಕ್ಷರಗಳಿಂದ ಕೂಡಿ ,ವಿದ್ವಾಂಸರಿಂದ ಪ್ರಶಂಷೆಗೊಂಡ ರಸ ಗುಣಸಹಿತವೂ ಸಕಲಕಾವ್ಯಲಕ್ಷಣಯುತವೂ ,ವಿನಯಪೂರಿತವೂ ,ವ್ಯಂಗ್ಯಾರ್ಥವೆಂಬ ಧನ ರೇಖೆಯುಳ್ಳ ನನ್ನ ಕವಿತಾ ಕನ್ಯೆಯನ್ನು ಒಪ್ಪಿಕೊ.ಶ್ಲೋಕ- ಇದಂತೇಯುಕ್ತ ವಾ ಪರಮಶಿವ ಕಾರುಣ್ಯಜಲಧೇ ಗತೌತೀರ್ಯಗ್ರೂಪಂ ತವಪದಶಿರೋದರ್ಶನಧಿಯಾ|ಹರಿಬ್ರಹ್ಮಾಣೌತೌ ದಿವಿ ಭುವಿಚರಂತೌ ಸಮಯುತೌ ತಥಂ ಶಂಭೋ ಸ್ವಾಮಿನ್ ಕಥಯಂ ಮಮ ವೇದೋಶಿಪುರತಃ||೯೯||ಅರ್ಥ- ಪರಮಶಿವ ಕರುಣಾಸಾಗರ ಶಿವ ಇದು ನಿನಗೆ ತರವೇ ?ನಿನ್ನ ಪಾದ ಶಿರಗಳನ್ನು ಕಾಣಲು ಹಂಬಲವಾದ ಈ ಹರಿಬ್ರಹ್ಮರು ಪಕ್ಷಿ ಪ್ರಾಣಿಗಳಾಗಿ ಭೂಮಿ ಆಕಾಶದಲ್ಲಿ ಸಂಚರಿಸಿ ವೃಥಾಶ್ರಮವಾಯಿತು. ಹೀಗಿರುವಾಗ ಹೇ ಶಂಭೋ ನೀನು ಯಾವ ರೀತಿ ನನಗೆ ದರ್ಶನ ನೀಡುವಿ? ನೀನೇ ಹೇಳು!ಶ್ಲೋಕ- ಸ್ತೋತ್ರೇಣಾಲಮಹಂ ಪ್ರವಚ್ಛಿನ ಮೃಷಾ ದೇವಾ ವಿರಿಂಚಾದಯಃ ಸ್ತುತ್ಯಾನಾಂ ಗಣನಾಪ್ರಸಂಗಸಮಯೇ ತ್ವಾಮಗ್ರಗಣ್ಯಂ ವಿಧುಃ|ಮಹಾತ್ಮ್ಯಾಗ್ರ ವಿಚಾರಣಪ್ರಕರಣೇ ಧಾನಾತುಷಸ್ತೋಮವದ್ಧೂತಾಸ್ತ್ವಾಂ ವಿದುರೊತ್ತಮೋತ್ತಮಫಲಂ ಶಂಭೋ ಭವತ್ಸೇವಕಾಃ||೧೦೦||ಅರ್ಥ- ಹೇ ಶಂಭೋ ಇನ್ನು ಸ್ತೋತ್ರ ಸಾಕು ನಾನು ಸುಳ್ಳು ಹೇಳುವದಿಲ್ಲ ಸ್ತೋತ್ರಯೋಗ್ಯರಲ್ಲಿ ಬ್ರಹ್ಮಾದಿ ದೇವತೆಗಳು ನೀನೇ ಶ್ರೇಷ್ಟವೆನ್ನುತ್ತಾರೆ. ಮಹಾತ್ಮೆಯಲ್ಲಿ ಇತರ ದೇವತೆಗಳು ಹಗುರವಾಗಿ ಹಾರಿ ಹೋಗುತ್ತಾರೆ. ನೀನೊಬ್ಬನೆ ದೃಢ ಎಂದು ನಿನ್ನ ಸೇವಕರು ತಿಳಿದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ