ಭಾನುವಾರ, ಮಾರ್ಚ್ 29, 2020

-ಹನುಮಂತ.ಮ.ದೇಶಕುಲಕರ್ಣಿ🚩:ಏನಿದು ಬ್ರಹ್ಮಜ್ಞಾನ ? ಬ್ರಹ್ಮನೆ೦ದರೆ ಏನು?

ಏನಿದು ಬ್ರಹ್ಮಜ್ಞಾನ ? ಬ್ರಹ್ಮನೆ೦ದರೆ ಏನು?

ಬ್ರಹ್ಮ ಸತ್ಯ ಜಗನ್ಮಿಥ್ಯೇತ್ಯೇವ೦ರೂಪೋ ವಿನಿಶ್ಚಯಃ
ಸೋಯ೦ ನಿತ್ಯಾನಿತ್ಯ - ವಸ್ತು ವಿವೇಕಃ ಸಮುದಾಹೃತಃ

   ಆದಿಗುರು ಶ್ರೀ ಶಂಕರಾಚಾರ್ಯರ ಸಾಧನಾ ಚತುಷ್ಟಯ ಮತ್ತು ಪಂಚಕಗಳು ಮೋಕ್ಷ ಸಾಧನೆಯ ಮೆಟ್ಟಿಲುಗಳಾಗಿವೆ. ಮುಮುಕ್ಷುವು ಅಂದರೆ ಮೋಕ್ಷ ಸಾಧನಾಪೇಕ್ಷಿಯು ಬ್ರಹ್ಮಜ್ಞಾನವನ್ನು ತಿಳಿಯಲು ಅವನಿಗಿರಬೇಕಾದ ಅರ್ಹತೆ, ಸಾಧನೆಯ ಹಾದಿಯನ್ನು ವಿವೇಕಚೂಡಾಮಣಿಯಲ್ಲಿ  ಬ್ರಹ್ಮಜ್ಞಾನ ಎಂದರೇನು? ಬ್ರಹ್ಮನೆಂದರೆ ಏನು? ಎಂದು ವಿವರಿಸಿದ್ದಾರೆ.
ನಮ್ಮೊಳಗಿನ ಬ್ರಹ್ಮನೇ ಶಾಶ್ವತ. ಯಾರು ತನ್ನೊಳಗಿರುವ ಬ್ರಹ್ಮನನ್ನು ತಿಳಿದುಕೊಳ್ಳುವನೋ ಅವನು ವಿಷಯ ವಸ್ತುಗಳ ಮೋಹಕ್ಕೆ ಸಿಲುಕುವುದಿಲ್ಲ.
ಬ್ರಹ್ಮ ಸತ್ಯ ಅರಿಯುವುದು ಹೇಗೆ ಎಂದು ಶಂಕರಾಚಾರ್ಯರು ಪ್ರತಿಪಾದಿಸಿದ್ದಾರೆ.
  
ಪ್ರತ್ಯಗೇಕರಸ೦ ಪೂರ್ಣಮನ೦ತಂ ಸರ್ವತೋಮುಖಮ್
ಏಕಮೇವಾದ್ವಯ೦ ಬ್ರಹ್ಮ ನೇಹ ನಾನಾಸ್ತಿ ಕಿ೦ಚನ

ಬ್ರಹ್ಮವು ಎಲ್ಲಿರುತ್ತದೆ ಎಂದು ಪ್ರಶ್ನಿಸದೇ ಅದು ನಮ್ಮೊಳಗೇ ಇರುತ್ತದೆ ಎಂದು ತಿಳಿಯೇಕು. ಎಲ್ಲರೊಳಗೂ ಹಾಗೂ ಎಲ್ಲದರಲ್ಲೂ ಬ್ರಹ್ಮನಿದ್ದಾನೆ. ತಾರತಮ್ಯ ಮಾಡದೇ ಸಮವಾಗಿ ನೆಲೆಸಿದ್ದಾನೆ.
ಅದು ವಸ್ತುವಲ್ಲ, ಅನಂತವಾಗಿದ್ದು ಪೂರ್ಣತೆಯದ್ದಾಗಿದೆ, ಸರ್ವವ್ಯಾಪಿಯಾಗಿದೆ. ಹೀಗಿರುವ ಬ್ರಹ್ಮವು ಒಂದೇ ಆಗಿದ್ದರಿಂದ ಬೇರೇ ಬೇರೇ ಸ್ವರೂಪಗಳಿಲ್ಲ.
  
ಈ ಬ್ರಹ್ಮನ ವಿಷಯವನ್ನು ತಿಳಿಯಲು ನಾಲ್ಕು ಸಾಧನಗಳನ್ನು ಮುಖ್ಯ. ಲೌಕಿಕ ಜೀವನದಲ್ಲಿರುವ ಕ್ಷಣಿಕ ಆನಂದಕ್ಕಿಂತ ಇರುವುದೇ ಬ್ರಹ್ಮಾನಂದ. ಅದನ್ನು ಗಳಿಸಿಕೊಳ್ಳಬಹುದು.

ಆದೌ ನಿತ್ಯಾನಿತ್ಯ ವಸ್ತು ವಿವೇಕಃ ಪರಿಗಣ್ಯತೇ
ಇಹಾಮುತ್ರ ಫಲಭೋಗ ವಿರಾಗಸ್ತದನ೦ತರಮ್
ಶಮಾದಿ ಷಟ್ಕ ಸ೦ಪತ್ತಿರ್ಮುಮುಕ್ಷುತ್ವಮಿತಿ ಸ್ಫುಟಮ್

   ಪ್ರಪಂಚದಲ್ಲಿ ಕ್ಷಣಿಕ ಮತ್ತು ಶಾಶ್ವತವಾದ ವಸ್ತುಗಳ ಮೇಲಿನ ವಿವೇಕವು ಸಾಧನೆಯ ಮೊದಲನೇ ಮೆಟ್ಟಿಲಾಗಿದೆ. ಪ್ರಾಪಂಚಿಕವಾದುವೆಲ್ಲವೂ
 ಕ್ಷಣಿಕವೇ ಆಗಿವೆ. ಲೌಕಿಕ ಸಂಪತ್ತುಗಳೆನಿಸಿದ
ಹಣ, ಕೀರ್ತಿ, ವಸ್ತು, ಒಡವೆ,  ಎಲ್ಲವೂ ಒಂದಲ್ಲ ಒಂದು ದಿನ ನಶಿಸಿ ಹೋಗುವಂಥದ್ದು ಅದೇ ರೀತಿ ಈ ಜಗತ್ತು ಕೂಡ ಒಂದಲ್ಲಾ ಒಂದು ದಿನ ನಶಿಸಿ ಹೋಗುತ್ತದೆ. ನಾಶವಾಗದೇ ಇರುವುದು ಒಂದೇ ಅದುವೇ ಬ್ರಹ್ಮ. ಬ್ರಹ್ಮ ಸತ್ಯ ಜಗನ್ಮಿಥ್ಯ.
-ಹನುಮಂತ.ಮ.ದೇಶಕುಲಕರ್ಣಿ🚩:

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ