ಶ್ರೀಮದ್ ಜಗದ್ಗುರು
ಶಂಕರಾಚಾರ್ಯ ಅವರು ರಚಿಸಿದ ಸೌಂದರ್ಯ ಲಹರಿಯು ದೇವಿಯನ್ನು ವಿಧವಿಧವಾಗಿ ಸ್ತುತಿಸಿದ ಅದ್ಭುತವಾದ ಹಾಗೂ
ಮಹೋನ್ನತ ಸ್ತೋತ್ರವಾಗಿದೆ.
"ಪ್ರದೀಪಜ್ವಾಲಾಬಿರ್ದಿವಸಕರನೀರಾಜನವಿಧಿಃ
ಸುಧಾಸೂತೇಶ್ವಂದ್ರೋಪಲಜಲಲವೈರರ್ಘ್ಯರಚನಾ
|
ಸ್ವಕೀಯೈರಂಭೋಭಿಃ
ಸಲಿಲನಿಧಿಸಾಹಿತ್ಯಕರಣಂ
ತ್ವದೀಯಾಭಿರ್ವಾಗ್ಭಿಸ್ತವ
ಜನನಿ ವಾಚಾಂ ಸ್ತುತಿರಿಯಮ್"
- (ಸೌಂದರ್ಯ ಲಹರಿ-100)
ಅರ್ಥ: "ಹೇ
ಜಗಜ್ಜನನೀ; ತೇಜೋಮಯನಾದ ಸೂರ್ಯನಿಗೆ ಅವನದೇ ಆದ ದ್ವಿಪಜ್ವಾಲೆಗಳಿಂದ ಆರತಿ ಮಾಡುವಂತೆ, ಅಮೃತವನ್ನು
ಸುರಿಸುವ ಬೆಳದಿಂಗಳ ಚಂದ್ರನಿಗೆ ಅವನದೇ ಆದ ಚಂದ್ರಕಾಂತ ಶಿಲೆಯಿಂದ ಜಿನುಗಿದ ಜಲದಿಂದ ಅರ್ಘ್ಯವನ್ನು
ನೀಡುವಂತೆ, ಸಾಗರಕ್ಕೆ ಅದರದೇ ಆದ ಜಲದಿಂದ ತರ್ಪಣಗೈಯುವಂತೆ,
ಜಗನ್ಮಾತೆಯೇ ನಿನ್ನದೇ ಆದ ಪದಗಳಿಂದ ನಿನ್ನನ್ನು ಸ್ತೋತ್ರ ಮಾಡುತ್ತಿದ್ದೇನೆ.
ಟಿಪ್ಪಣಿ: ದೇವಿಯಲ್ಲಿ
ಸಂಪೂರ್ಣ ಶರಣಾಗತಿಯಾಗಿ ಸ್ತುತಿಸಿದರೆ ಸಂತುಷ್ಟಳಾಗಿ ನಮ್ಮ ಅಭಿಷ್ಠೆಯನ್ನು ಈಡೇರಿಸುವಳು. ಇಲ್ಲಿ
ಆಚಾರ್ಯರು ಶ್ರೇಷ್ಠ ತತ್ವಜ್ಞಾನಿಗಳು ಅಂತ ಅಷ್ಟೇ ಅವರನ್ನು ಅಂದುಕೊಳ್ಳದೇ ಅವರು ಶ್ರೇಷ್ಠ ಭಕ್ತರು,
ದೇವತಾರಾಧಕರು ಆಗಿದ್ದರು. ಜನಸಾಮಾನ್ಯರಿಗೂ ಅರ್ಥವಾಗುವಂತೆ
ಅದ್ವೈತ ತತ್ವವನ್ನು ಸರಳವಾಗಿ ಬೋಧಿಸಿದ ಮಹಾನ್ ತತ್ವಜ್ಞಾನಿ ಲೋಕವಂದ್ಯ ಆಚಾರ್ಯ ಶಂಕರರು.
-ಹನುಮಂತ.ಮ.ದೇಶಕುಲಕರ್ಣಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ