ಮಂಗಳವಾರ, ಮಾರ್ಚ್ 17, 2020

ಡಾ.ಆರ್.ಶೈಲಜ ಶರ್ಮ ಅವರ ಕವನ

ಅಯ್ಯೋ ವೆಂಕಟರಮಣ
ನಿನ್ನ ನೋಡಲೂ ದಿಗ್ಭಂದನಾ
ಪೂಜೆಗಳಿಗೂ ತಂತು ಕಂಟಕಾನಾ
ಸೃಷ್ಟಿಸಿದೆ ಮತ್ತೊಂದು ಇತಿಹಾಸವನ್ನ

ಕೇಳಬೇಡಿ ತಿಮ್ಮಪ್ಪನಿಗೆ ಮಾತ್ರಾನಾ
ಬೆದರಿಸಿದೆ ಗುರು, ಬಾಬಾ, ನಾಗ, ಶಂಕರರನ್ನ
ಮನುಜನ ಆಸೆ ದುರಾಸೆಗಳ ಫಲವನ್ನ
ಅನುಭವಿಸುತಿಹರು ಆರ್ತನಾದದ ಶಾಪವನ್ನ

ಜರಿಯಲಾಗದು ಒಬ್ಬರಿಗೊಬ್ಬರನ್ನ
ತಡೆದಿದೆ ಕಾಣದ ವೈರಸ್ ನರ್ತನ
ತಂದಿದೆ ಮಾತನಾಡದಂತ ಪರಿಸ್ಥಿತಿಯನ್ನ
ಯೋಚನೆ ಒಂದೇ ಹೋಗುವುದೆಂದು ಕರೋನ.....

ಸ್ಥಬ್ಧವಾಗಿಸಿದೆ ಹೆದರದಿದ್ದ ಜಗತ್ತನ್ನ
ಬಾರಿಸುತಿದೆ ಅಲ್ಲಲ್ಲಿ ಮರಣಮೃದಂಗವನ್ನ
ಮುಚ್ಚಿಸಿದೆ ಬಡಾಯಿಗಳ ಬಾಯನ್ನ
ವಿಶ್ವಕ್ಕೆ ಬಂಧಮುಕ್ತವೆಂದು ಕೇಳುವ ಗಣಪನನ್ನ

ಡಾ. ಆರ್ ಶೈಲಜ ಶರ್ಮ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ