*ತಪ್ಪಿದ ಹೆಜ್ಜೆಗಳು*
ಕಾಲಿಗೆಟುಕಿದ
ಕಲ್ಲುಗಳು....
ಅವು ಬರಿಯ ಕಲ್ಲುಗಳಲ್ಲ
ಅನುಭವದ ಸೋಪಾgನಗಳು..
ಮುಗ್ಗರಿಸಿದ ಹೆಜ್ಜೆಗಳೋ
ಬರಿಯ ಹೆಜ್ಜೆಗಳಲ್ಲ
ಮುಂದಿನ ದಿಕ್ಸೂಚಿಗಳು...
ಘನತೆಯದು ದೊರೆತದ್ದು
ಬದುಕಿನ ಅನಂತ
ಸವಾಲುಗಳ ಒರತೆಯಿಂದ....
ನಿಜ..ಸೋಲುಗಳ ಪಟ್ಟಿಯ ಜಗವು ಮಾಡಿತೆಂದೇ
ನಿನ್ನ ಗೆಲುವಿಗೆ ಮೆಟ್ಟಲುಗಳು
ಹೆಚ್ಚಾದವು......
ಜಗವೊಂದು ಗುರುವಂತೆ
ಪ್ರತಿಫಲಿಪ ಕನ್ನಡಿಯಂತೆ
ದೋಷಗಳನೆತ್ತುವುದೋ?
ಇದ್ದುದನ್ನೇ ತೋರುವುದು....
ತಿದ್ದಲಾರೆನೆಂದವ ತಿರುಗಿ
ಮುಖಮಾಡಿ ಜೀವನ ಪಲಾಯನ ಮಾಡುವ..
ಒಪ್ಪಿದವನನ್ನು
ಮುಂದೊಂದು ದಿನ ಜಗವಪ್ಪುವುದು.....
ಹಾದಿ ತಿರುವಿನಂತೆ
ದೋಷ ಮರೆಯಿತೆಂದು
ಹುಸಿ ಸುಖವು ಬೇಡ.....
ಮುಂದಿನ ತಿರುವಲ್ಲೂ
ಅದೇ ಹೆಜ್ಜೆ ಬಂದೀತು
ನೋಡಾ......
ತಪ್ಪಿದ ಹೆಜ್ಜೆಯ ಫಲಿತಾಂಶವ
ಕಾಲವೇ ಲೆಕ್ಕವಿಟ್ಟು
ಮನವರಿಸೀತು......
ಪಾಠ ಕಲಿಸೀತು.....
ಎಲ್ಲಕೂ ಸದ್ದಿಲ್ಲದೆ ಉತ್ತರಿಸೀತು..........
*ಮಾಧವೀ. ಕುಲಕರ್ಣಿ...*
(ಕೃಷ್ಣಸುತೆ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ