ಧಾರವಾಡದ ಕವಯತ್ರಿ ಮಾಧವಿ ಕುಲಕರ್ಣಿ ಅವರ ಲೇಖನಿಯಿಂದ ಹೊಮ್ಮಿದ ಭಕ್ತಿಗೀತೆ.
**ನಮ್ಮೂರಿನ ರಾಮನವಮಿ ಸುದ್ದಿ**
ಚೈತ್ರ ಮಾಸಕ
ರಾಮನವಮಿ ಪಾನಕ
ಕಡ್ಲೀಬ್ಯಾಳಿ ಕೋಸಂಬ್ರಿಯೊಳಗ
ಮುರುಕ ಮೆಣಸಿನಕಾಯಿ ಬಾಳಕ
ಮಾವಿನ ತಳಿರು ರಾಮನ ತೊಟ್ಟಿಲಕ
ಹುಡುಗರ ಎದಿ ಝಲ್ಲಂತು ಹೆಣ್ಮಕ್ಕಳ ಕೋಲಾಟಕ...
ಕಾಲತೊಳಿಯೋ ಮುತ್ತೈದಯಿಂದ
ಸುಡೋ ಕಾಲಿಗೆ ತಣ್ಣನೆರಕ...
ನೀವೂ ಬಂದು ಹೌದ ಹೌದ ಅನಬೇಕ
ನಮ್ಮೂರ ಸಿಂಗಾರಕ....
ರುಚಿಯರೆ ಅಷ್ಟ ಛಂದ
ಮಠದಾಗಿನ ಹಯಗ್ರೀವಕ...
ರಾಮನ ಕೃಪಾನೂ ರಾಯರ ಆಶೀವಾ೯ದಾನೂ ಅದ ನಮ್ ಹುನಗುಂದಕ....
ಕೈ ಮುಗೀತೀನಿ ಉಡುಪಿ ಸ್ವಾಮಿ ಶಿಷ್ತರ ಬಳಗಕ...
ದರಾ ವಷ೯ ಬರತಾರ ಜ್ಞಾನ ಸತ್ರಕ....
ಬಿಸಲ ಭಾಳಂತ್ಹೇಳಿ ಹೆದರೀಕ್ಯಾಕ
ಮಾಳಗೀ ಮನೀಗೋಳ ಇರಲಿಕ್ಕ....
ದೊಡ್ಡ ಮನಸಿನ ಮಂದೀನ ಊರತುಂಬ
ಬ್ಯಾಡನ್ನೂದಿಲ್ ನೀವ್ ಬರಾಕ..
ಹಾಜರಿ ಕೊಟ್ಟ ಬಿಡ್ರಿ ಬಿಸಲೂರಿನ ಭಕ್ತಿ ಸಂಭ್ರಮಕ
ಅದಽಽ ನನ್ನ ತವರೂರು ಹುನಗುಂದಕ.........
ಜೈ ಶ್ರೀ ರಾಮ್
🚩🚩🚩🚩🚩🚩🚩
ಚೆನ್ನಾಗಿದೆ
ಪ್ರತ್ಯುತ್ತರಅಳಿಸಿ