ಗುರುವಾರ, ಜುಲೈ 13, 2017

F.I.R ಅಂದರೆ ಏನು…ಅದನ್ನು ಹೇಗೆ ಫೈಲ್ ಮಾಡುವುದು…ಅದರಿಂದ ಉಪಯೋಗ ಏನು ನಿಮಗೆ ಗೊತ್ತೆ?



ಯಾವುದಾದರೂ ಅಪರಾಧ ನಡೆದಾದ ಪೊಲೀಸರು ಮೊದಲು ಎಫ್ಐಆರ್ (ಫಸ್ಟ್ ಇನ್ಪಾರ್ಮೇಷನ್ ರಿಪೋರ್ಟ್) ನಮೂದಿಸಿಕೊಂಡು ಅದಕ್ಕೆ ತಕ್ಕಂತೆ ಪ್ರಕರಣದ ತನಿಖೆ ಕೈಗೊಳ್ಳುತ್ತಾರೆ ಎಂಬುದು ಎಲ್ಲರಿಗೂ ಸಾಮಾನ್ಯವಾಗಿ ಗೊತ್ತೇ ಇರುತ್ತದೆ. ಆದರೆ ನಿಜಕ್ಕೂ ಎಫ್ಐಆರ್ ಅಂದರೆ ಏನು? ಎಫ್ಐಆರ್‌ನಲ್ಲಿ ಏನೇನಿರುತ್ತದೆ..? ಎಂಬ ವಿವರಗಳು ನಿಮಗೆ ಗೊತ್ತೆ..? ಅವುಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

ಎಫ್ಐಆರ್ ಎಂದರೆ…
ಪೊಲೀಸರು ಯಾವುದಾದರೂ ಕಾಗ್ನಿಜಬಲ್ (ವಿಚಾರಿಸಬಹುದಾದಂತ) ಅಪರಾಧದ ಬಗ್ಗೆ ಗೊತ್ತಾದರೆ ಅದರ ಬಗ್ಗೆ ಮೊದಲು ದಾಖಲಿಸುವ ಸಮಾಚಾರವನ್ನೇ ಎಫ್ಐಆರ್ ಎನ್ನುತ್ತೇನೆ. ಎಂದರೆ ಫಸ್ಟ್ ಇನ್ಫಾರ್ಮೇಷನ್ ರಿಪೋರ್ಟ್ ಎಂದರ್ಥ. ಇದನ್ನು ಕನ್ನಡದಲ್ಲಿ ಪ್ರಥಮ ಮಾಹಿತಿ ವರದಿ ಎನ್ನುತ್ತಾರೆ. ಯಾವುದಾದರೂ ಅಪರಾಧದ ಬಗ್ಗೆ ಪೊಲೀಸರಿಗೆ ಗೊತ್ತಾದರೆ ಅದರ ಬಗ್ಗೆ ಅವರಿಗೆ ಮೊದಲು ಗೊತ್ತಾದ ಮಾಹಿತಿ ಎಫ್ಐಆರ್‌ನಲ್ಲಿ ದಾಖಲು ಮಾಡುತ್ತಾರೆ.

ಎಫ್ಐಆರ್ ಯಾರು ದಾಖಲಿಸಬಹುದು?
ಅಪರಾಧಕ್ಕೆ ಒಳಗಾಗದವರು, ಅಪರಾಧವನ್ನು ನೋಡಿದವರು ಅಥವಾ ಅದರ ಬಗ್ಗೆ ಗೊತ್ತಿರುವವರು ಪೊಲೀಸ್ ಠಾಣೆಗೆ ಹೋಗಿ ಎಫ್ಐಆರ್ ದಾಖಲು ಮಾಡಬಹುದು. ಆದರೆ ಇವರಷ್ಟೇ ಅಲ್ಲ, ಯಾರಾದರೂ ಪೊಲೀಸ್ ಅಧಿಕಾರಿ ಸಹ ತನಗೆ ಯಾವುದಾದರೂ ಅಪರಾಧದ ಬಗ್ಗೆ ಗೊತ್ತಾದದ್ರೆ, ಅದು ವಿಚಾರಣೆಗೆ ತಕ್ಕ ಅಪರಾಧ ಆದರೆ ಅದರ ಬಗ್ಗೆ ಸ್ವಯಂ ಎಫ್ಐಆರ್ ದಾಖಲು ಮಾಡಬಹುದು.

ಎಫ್ಐಆರ್ ಯಾಕೆ?
ಪ್ರತಿ ಪೊಲೀಸು ತನಗೆ ಬರುವ ದೂರಿಗೆ ಅಥವಾ ತಾನು ಫೈಲ್ ಮಾಡುವ ದೂರನ್ನು ಕಡ್ಡಾಯವಾಗಿ ಎಫ್ಐಆರ್ ದಾಖಲಿಸಬೇಕು. ಇದನ್ನು ಅನುಸರಿಸಿ ವಿಚಾರಣೆ, ತನಿಖೆ ಮುಂದಕ್ಕೆ ಸಾಗುತ್ತದೆ. ಆ ಅಪರಾಧ ಮಾಡಿದ ತಪ್ಪಿತಸ್ಥರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು, ಅವರಿಗೆ ಶಿಕ್ಷೆ ಆಗುವಂತೆ ಮಾಡಲು ಎಫ್ಐಆರ್ ಉಪಯೋಗಕ್ಕೆ ಬರುತ್ತದೆ.

ಎಫ್ಐಆರ್‌ನಲ್ಲಿ ಏನೇನಿರುತ್ತದೆ?
ದೂರು ಕೊಟ್ಟವರ ಹೆಸರು, ವಿಳಾಸ, ದಿನಾಂಕ, ಸಮಯ, ಅಪಾರಾಧ ನಡೆದ ಸ್ಥಳ, ಅಪರಾಧ ಹೇಗೆ ನಡೆಯಿತೆಂಬ ಮಾಹಿತಿ, ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳ ಹೆಸರು, ಇತರೆ ವಿವರಗಳು, ಸದರಿ ಅಪರಾಧ ಯಾವ ಯಾವ ಸೆಕ್ಷನ್ ಅಡಿ ಬರುತ್ತದೆ ಆ ಸೆಕ್ಷನ್ ವಿವರಗಳು, ಪೊಲೀಸ್ ಠಾಣೆ ರೆಫರೆನ್ಸ್ ಸಂಖ್ಯೆ, ಅದರ ಮಾಹಿತಿ ಇನ್ನಿತರೆ ವಿವರಗಳು ಎಫ್ಐಆರ್‌ನಲ್ಲಿ ಇರುತ್ತವೆ.

ಎಫ್ಐಆರ್ ದಾಖಲಿಸದಿದ್ದರೆ?
ಅಪರಾಧದ ಬಗ್ಗೆ ಯಾರಾದರೂ ದೂರು ನೀಡಲು ಬಂದರೆ ಅದಕ್ಕೆ ಸಂಬಂಧಿಸಿದ ಎಫ್ಐಆರ್‍‌ನ್ನು ಪೊಲೀಸ್ ಅಧಿಕಾರಿ ದಾಖಲಿಸಿಕೊಳ್ಳದಿದ್ದರೆ ಆಗ ಸಂತ್ರಸ್ತರು ಸದರಿ ಪೊಲೀಸ್ ಅಧಿಕಾರಿ ಮೇಲಿನ ಉನ್ನತಾಧಿಕಾರಿಗಳಿಗೆ ಪತ್ರರೂಪದಲ್ಲಿ ದೂರು ನೀಡಬಹುದು. ಉನ್ನತಾಧಿಕಾರಿ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳುತ್ತಾರೆ. ಇಲ್ಲದಿದ್ದರೆ ರಾಷ್ಟ್ರೀಯ ಅಥವಾ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಬಹುದು. ಇದರಿಂದ ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ.

ವಿಚಾರಿಸಬಹುದಾದ ಅಪರಾಧ ಎಂದರೆ ಏನು?
ವಾರೆಂಟ್, ನ್ಯಾಯಾಲಯದ ಒಪ್ಪಿಗೆ ಇಲ್ಲದೆ ಪೊಲೀಸರು ತಮ್ಮಷ್ಟಕ್ಕೆ ತಾವು ನೇರವಾಗಿ ಹೋಗಿ ಯಾವುದಾದರೂ ಅಪರಾಧದ ಬಗ್ಗೆ ಯಾವುದೇ ವ್ಯಕ್ತಿಯನ್ನೂ ಬಂಧಿಸಬಹುದು, ಪ್ರಶ್ನಿಸಬಹುದು. ಇದನ್ನು ವಿಚಾರಿಸಬಹುದಾದ ಅಪರಾಧ ಎನ್ನುತ್ತಾರೆ. ಹಾಗಲ್ಲದೆ ಎಫ್ಐಆರ್ ದಾಖಲಿಸಿದರೆ ಆಗ ನ್ಯಾಯಾಲಯದ ಅನುಮತಿ, ವಾರೆಂಟ್ ಇರಬೇಕು. ಅವು ಇದ್ದರೆ ಪೊಲೀಸರು ಪ್ರಕರಣದ ತನಿಖೆಯ ಭಾಗವಾಗಿ ಯಾರನ್ನಾದರೂ ವಿಚಾರಿಸಬಹುದು. ಬಂಧಿಸಬಹುದು.

ಎಫ್ಐಆರ್ ಬಗ್ಗೆ ಕೆಲವೊಂದು ಮುಖ್ಯವಾದ ವಿಷಯಗಳು. 

ಎಫ್ಐಆರ್ ಹೇಗೆ ಫೈಲ್ ಮಾಡಬೇಕು ಎಂಬುದು ಕ್ರಿಮಿನಲ್ ಪ್ರೊಸೀಜರ್ ಕೋಡ್ 1973 ಕಾಯಿದೆ, ಸೆಕ್ಷನ್ 154ರಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಸಂತ್ರಸ್ತರು ಯಾರಾದರೂ ದೂರು ಬರೆದುಕೊಡದಿದ್ದ ಪಕ್ಷದಲ್ಲಿ ಪೊಲೀಸರು ಅವರು ಹೇಳಿದ್ದನ್ನು ಕೇಳಿ ದೂರನ್ನು ದಾಖಲಿಸಿಕೊಳ್ಳಬೇಕು. ಅಷ್ಟೇ ಅಲ್ಲ. ಸಂತ್ರಸ್ತರಿಗೆ ಎಫ್ಐಆರ್ ಕಾಪಿಯನ್ನು ಕಡ್ಡಾಯವಾಗಿ ಕೊಡಬೇಕು. ಒಂದು ವೇಳೆ ಕೊಡದಿದ್ದರೆ ಸಂತ್ರಸ್ತರು ನ್ಯಾಯಾಲಯದ ಮೊರೆ ಹೋಗಬಹುದು. ಎಫ್ಐಆರ್ ಕಾಪಿ ಪಡೆಯಲು ಸಂತ್ರಸ್ತರು ಯಾವುದೇ ಶುಲ್ಕ ನೀಡಬೇಕಾಗಿಲ್ಲ. ಅದನ್ನು ಉಚಿತವಾಗಿ ಪಡೆಯಬಹುದು. ಆದರೆ ಯಾರೂ ತಪ್ಪು ಮಾಹಿತಿಯಿಂದ ಎಫ್ಐಆರ್ ದಾಖಲಿಸಬಾರದು. ಅದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ. ಭಾರತೀಯ ದಂಡ ಸಂಹಿತೆ 1860 ಸೆಕ್ಷನ್ 203ರ ಪ್ರಕಾರ ಪೊಲೀಸರನ್ನು ತಪ್ಪು ಹಾದಿ ಹಿಡಿಸಿದ ಅಪರಾಧಕ್ಕೆ ಗುರಿಯಾಗಬೇಕಾಗುತ್ತದೆ. ಎಫ್ಐಆರ್ ದಾಖಲಿಸುವಾಗ ನಿಜವಾದ ಮಾಹಿತಿ ನೀಡಬೇಕು. ಸುಳ್ಳು ಮಾಹಿತಿ ನೀಡಬಾರದು.  ದೂರು ಸ್ಪಷ್ಟವಾಗಿರಬೇಕು. ತಪ್ಪು ಮಾಹಿತಿಯಿಂದ ತುಂಬಿಸಬಾರದು..

ಹನುಮಂತ. ಮ. ದೇಶಕುಲಕರ್ಣಿ
ಹವ್ಯಾಸಿ ಯುವ ಬರಹಗಾರರು
ಸಾ||ಭೋಗೇನಾಗರಕೊಪ್ಪ. ಮೊ.9480364915
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ
   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ