ವರಾಹ ಎಂದರೆ ವಿಷ್ಣುವಿನ ದಶಾವತಾರಗಳಲ್ಲಿ ಒಂದು. ಆದಿವರಾಹ ಮೂರ್ತಿಯೇ ಗೋವಿಂದ, ವಿಷ್ಣು. ತಿರುಪತಿ ತಿರುಮಲ ಮುಖ್ಯವಾಗಿ ಆ ದೇವರ ಕ್ಷೇತ್ರ. ಹಿಂದೂಗಳಿಗೆ ಅಷ್ಟಾದಶ ಪುರಾಣ ಅತ್ಯಂತ ಮಹತ್ವದ್ದು, ಅದರಲ್ಲಿ ‘ವರಾಹ ಪುರಾಣ’ವೂ ಒಂದು. ಮಹಾವಿಷ್ಣು ಲೋಕೋದ್ಧಾರಕ್ಕಾಗಿ ಎತ್ತಿದ ಅಸಂಖ್ಯಾತ ಅಂಶಾವತಾರ, ಪೂರ್ಣಾವತಾರಗಳಲ್ಲಿ ವರಾಹಾವತಾರವೂ ಒಂದು. ಕೃತಯುಗದಲ್ಲಿ ಹಿರಣ್ಯಾಕ್ಷನೆಂಬ ಅಸುರ ಭೂಮಂಡಲ (ಭೂದೇವಿ)ವನ್ನು ಅಪಹರಿಸಿ ರಸಾತಳ ಲೋಕದಲ್ಲಿ ಮುಚ್ಚಿಡುತ್ತಾನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ