*ಕನಕಧಾರಾ ಸ್ತೋತ್ರದ ಹಿನ್ನೆಲೆ*-
ಶ್ರೀ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಅದ್ವೈತಕೇಸರಿ ಜಗದ್ಗುರು ಶ್ರೀ ಶಂಕರಾಚಾರ್ಯರಿಂದ ವಿರಚಿತವಾದ ಕನಕಧಾರಾ ಸ್ತೋತ್ರಕ್ಕೆ ಒಂದು ಕಥೆಇದೆ. ಪರಮಹಂಸ ಪರಿವ್ರಾಜಕ ಶ್ರೀ ಶಂಕರಭಗವತ್ಪಾದರು ಸನ್ಯಾಸಿಗಳಾದುದರಿಂದ ಮಧುಕರ (ಭಿಕ್ಷೆ) ವೃತ್ತಿಯನ್ನು ಅನುಸರಿಸುತ್ತಿದ್ದರು. ತಮ್ಮ ದಿಗ್ವಿಜಯ ಸಂಚಾರ ಕಾಲದಲ್ಲಿ ಕೇರಳದ ಕುಗ್ರಾಮಕ್ಕೆ ದೈವಭಕ್ತ ಒಬ್ಬ ಬಡಬ್ರಾಹ್ಮಣನ ಮನೆಗೆ ಬಂದು " ಭವತಿ ಭಿಕ್ಷಾಂದೇಹಿ" ಎಂದು ಭಿಕ್ಷೆ ಬೇಡುತ್ತಾರೆ ಬ್ರಾಹ್ಮಣ ತನ್ನ ಪತ್ನಿಗೆ ಭಿಕ್ಷೆನೀಡಲು ಹೇಳುತ್ತಾನೆ . ಆದರೆ ಅವರ ಮನೆಯಲ್ಲಿ ಊಟಕ್ಕೆ ಏನು ಇಲ್ಲದ ಕಾರಣ ಶಂಕರರಿಗೆ ಆ ಮಹಿಳೆ ನಮಸ್ಕರಿಸಿ " ಸ್ವಾಮಿ ನಾವು ಕಡುಬಡವರು ,ಮಹಾತ್ಮರಾದ ತಮ್ಮನ್ನು ಉಪಚರಿಸಲು ಮನೆಯಲ್ಲಿ ಏನು ಇಲ್ಲ. ಇದ್ದ ಒಂದು ಒಂದು ನೆಲ್ಲಿಕಾಯಿಯನ್ನೆ ತಮಗೆ ಭಕ್ತಿಇಂದ ಅರ್ಪಸುತಿದ್ದೇನೆ, ದಯಮಾಡಿ ಸ್ವೀಕರಿಸಿ ಅನುಗ್ರಹಿಸಬೇಕು ." ಎಂದು ಕಾಲಿಗೆ ಬೀಳುತ್ತಾಳೆ. ಸಾಕ್ಷಾತ್ ಶಿವನ ಅವತಾರವಾಗಿದ್ದ ಶಂಕರರು ಆ ಬಡ ಹೆಂಗಸಿನ ತ್ಯಾಗ, ಭಕ್ತಿಯನ್ನು ಮನಗಂಡು ಅವರ ಬಡತನ ಹೋಗಲಾಡಿಸಲು ಆ ಕ್ಷಣವೇ ಸಂಕಲ್ಪಮಾಡಿ ಜಗನ್ಮಾತೆ ಮಹಾಲಕ್ಷ್ಮಿಯನ್ನು ಕುರಿತು ಸ್ತೋತ್ರವನ್ನು ರಚಿಸುತ್ತಾರೆ. ಆ ಬಡ ಕುಟುಂಬ ಉದ್ಧಾರ ಮಾಡಬೇಕೆಂದು ದೇವಿಯನ್ನು ಪ್ರಾರ್ಥಿಸುತ್ತಾರೆ. ಮಹಾಲಕ್ಷ್ಮಿಯ ಅನುಗ್ರಹದಿಂದ ಆ ಬ್ರಾಹ್ಮಣನ ಮನೆಯ ಮುಂದೆ ಬಂಗಾರದ ನೆಲ್ಲಿಕಾಯಿ ಮಳೆ ಆಗುತ್ತದೆ. ಆ ಮಹಾಮಹಿಮ ಸ್ತೋತ್ರವೇ ಕನಕಧಾರಾ ಸ್ತೋತ್ರ. ಇದನ್ನು " ಕನಕವೃಷ್ಟಿ ಸ್ತೋತ್ರ" ವೆಂದೂ ಕರೆಯುವದುಂಟು. ಕನಕಧಾರಾ ಸ್ತೋತ್ರದ ಎರಡೆರಡು ನುಡಿಗಳನ್ನು ಅದರ ತಾತ್ಪರ್ಯವನ್ನು ಎಲ್ಲರ ಮುಂದೆ ಪ್ರಸ್ತಾಪಿಸುವ ಇಚ್ಛೆಹೊಂದಿರುವೆನು. ಧನ, ಕನಕ, ಸಿರಿ -ಸಂಪತ್ತು, ಐಶ್ವರ್ಯ, ಯಶಸ್ಸು, ಸೌಭಾಗ್ಯ, ವಿಜಯಗಳನ್ನು ದಯಪಾಲಿಸುವ ಮಹಾ ಕಾಮಧೇನುವೇ ಕನಕಧಾರಾ ಸ್ತೋತ್ರ.
*ಕನಕಧಾರಾ ಸ್ತೋತ್ರದ ವಿವರಣೆ-* ಭಾಗ್ಯವಂತರ ಮನೆಗಳಲ್ಲಿ ಐಶ್ವರ್ಯ ಸ್ವರೂಪಳಾಗಿ, ಜ್ಞಾನಿಗಳ ಅಂತರಂಗದಲ್ಲಿ ಬುದ್ಧಿಸ್ವರೂಪಳಾಗಿ ,ಮೋಕ್ಷೇಚ್ಛುಗಳ ಅಂತರ್ಯದಲ್ಲಿ ಮುಕ್ತಿಸ್ವರೂಪಳಾಗಿ ರಾರಾಜಿಸುತ್ತಿರುವ ಮಹಾಲಕ್ಷ್ಮಿಯ ಕರುಣಾ ಕಟಾಕ್ಷ ಶ್ರೀ ಶಂಕರಾಚಾರ್ಯರ ಕೃಪಾಶಿರ್ವಾದದಿಂದ ಚಿನ್ನದ ಮಳೆಯನ್ನು ಕರೆದ ಮಹಾಸ್ತೋತ್ರವೇ "ಕನಕಧಾರಾ ಸ್ತೋತ್ರ" ವೆಂದು ಕರೆಯಲ್ಪಡುತ್ತದೆ. ಅದರ ಎರಡು ಶ್ಲೋಕ ಮತ್ತು ೨ ರ ವಿವರಣೆ ಪ್ರಸ್ತುತ ಪಡಿಸುವೆ. ಅಥ ಸ್ತೋತ್ರಂ -
*ಅಂಗಂ ಹರೇ ಪುಲಕ ಭೂಷಣಮಾಶ್ರಯಂತೀ ಭ್ರಂಗಾಗನೇವ ಮುಕುಲಾಭರಣಂ ತಮಾಲಮ್. ಅಂಗೀಕೃತಾಖಿಲವಿಭೂತಿರಪಾಂಗಲೀಲಾ ಮಾಂಗಲ್ಯದಾಸ್ತು ಮಮ ಮಂಗಲದೇವತಾಯಾ೧.* ಅರ್ಥ- ತಮಾಲವೆಂಬ ಮರದ ಆಭರಣಪ್ರಾಯವಾದ ಮೊಗ್ಗನ್ನು ಆಶ್ರಯಿಸಿರುವ ಹೆಣ್ಣುದುಂಬಿಯಂತೆ - ಶ್ರೀ ಮಹಾವಿಷ್ಣುವಿನ ರೋಮಾಂಚಗೊಂಡ ಶರೀರವನ್ನು ಅವಲಂಭಿಸಿರುವ ಮಂಗಳ ದೇವತೆಯಾದ ಮಹಾಲಕ್ಷ್ಮಿಯು ಸಮಗ್ರ ಐಶ್ವರ್ಯಗಳನ್ನು ಅಡಗಿಸಿಕೊಂಡಿರುವ ಕುಡಿಗಣ್ಣಿನ ನೋಟಗಳೆಂಬ ಲೀಲೆಯು ನನಗೆ ಮಂಗಳವನ್ನೀಯಲಿ.
*೨. ಶ್ಲೋಕ- ಮುಗ್ಧಾ ಮುಹುರ್ವಿದಧತೀ ವದನೇ ಮುರಾರೇ. ಪ್ರೇಮತ್ರಪಾಪ್ರಣಿಹಿತಾನಿ ಗತಗತಾನಿ. ಮಾಲಾದೃಶೋರ್ಮಧುಕರೀವ ಮಹೋತ್ಪಲೇ ಯಾ ಸಾ ಮೇ ಶ್ರಿಯಂ ದಿಶತು ಸಾಗರಸಂಭವಾಯಾ:೨.* ಅರ್ಥ- ಶ್ರೀ ಮಹಾವಿಷ್ಣುವಿನ ಮುಖದ ಕಡೆಗೆ ಪ್ರೇಮಪೂರ್ವಕವಾದ ನಾಚಿಕೆಯಿಂದ ನೋಟವನ್ನು ಬೀರುತ್ತ ಹಾಗೆ ಹಿಂತೆಗೆಯುತ್ತ ಮುಗ್ಧವಾದ ರೀತಿಇಂದ ಚಲಿಸುತ್ತಿರುವ ಎರಡು ದೊಡ್ಡ ನೈದಿಲೆಯಂತೆ ಇರುವ ಹಾಗೂ ಹೂಮಾಲೆ ನೋಡುತ್ತಿರುವ ದುಂಬಿಯಂತೆ ಇರುವ ಸಾಗರಕನ್ನಿಕೆಯಾದ ಲಕ್ಷ್ಮೀಯ ಕಟಾಕ್ಷಗಳು ನನಗೆ ಐಶ್ವರ್ಯವನ್ನುಂಟು ಮಾಡಲಿ. ಸರ್ವೇಜನ ಸೊಖಿನೋ ಭವಂತು.
*ಶ್ರೀಮತಿ.ಗಿರಿಜಾ.ಎಸ್. ದೇಶಪಾಂಡೆ.*
[11/17, 21:01] Girija DESHPANDE: *ಕನಕಧಾರ ಸ್ತೋತ್ರ*
*ಅಂಕಣ-೨*
*ಶುಕ್ರವಾರ, ೨೪.೦೮.೨೦೧೮*
ಶೃತಿ ಸ್ಮೃತಿ ಪುರಾಣಮಲಯಮ್ ಕರುಣಾಲಿಯಮ್ ನಮಾಮಿ ಭಗವತ್ಪಾದ ಶಂಕರಮ್ .ಕಲ್ಯಾಣ ಉಂಟುಮಾಡುವ ಕರುಣೆಯಿಂದ ತುಂಬಿದ ಶ್ರೀ ಶಂಕರಭಗವತ್ಪಾದರಿಗೆ ಭಕ್ತಿಪೂರ್ವಕವಾಗಿ ನಮಿಸುತ್ತೇನೆ. ಅಸ್ಟವರ್ಷೇಚತುರ್ವೇದಿ ದ್ವಾದಸೇ ಸರ್ವಶಾಸ್ತ್ರ ವಿತ್ ಷೋಡಸೇ ಕೃತವಾನ್ ಭಾಷಂ ದ್ವಾತ್ರಿಂಶೇ ಮುನಿರಭ್ಯಗಾತ್. ಎಂಟು ವರ್ಷಕ್ಕೆ ನಾಲ್ಕು ವೇದಕಲಿತವರು, ೧೨ ವರ್ಷಕ್ಕೆ ಸರ್ವಶಾಸ್ತ್ರತಿಳಿದವರು ೧೬ನೇಯ ವಯಸ್ಸಿನಲ್ಲಿ ಭಾಷ್ಯ ಬರೆದವರು ೩೨ ವರ್ಷದಲ್ಲಿ ಅಭ್ಯಗತರು(ಹೊರಟುಹೋದರು) ಅಂತಹವಿದ್ವಾಂಸರು ಬರೆದ ಕನಕಧಾರಾ ಸ್ತೋತ್ರದ ಮುಂದಿನ ಎರಡು ನುಡಿ ಮತ್ತು ಅವುಗಳ ಅರ್ಥವಿರಣೆಯನ್ನು ಇಂದು ಅಂದರೆ ಎರಡನೇಯ ಶ್ರಾವಣಶುಕ್ರವಾರ ವರಮಾಹಾಲಕ್ಷ್ಮಿ ಹಬ್ಬದಂದು ತಮ್ಮ ಮುಂದೆ ಪ್ರಸ್ತಾಪಿಸಲು ಬಯಸುವೆ.
ಭಾಗ್ಯವಂತರ ಮನೆಗಳಲ್ಲಿ ಐಶ್ವರ್ಯ ಸ್ವರೂಪಳಾಗಿ, ಜ್ಞಾನಿಗಳ ಅಂತರಂಗದಲ್ಲಿ ಬುದ್ಧಿಸ್ವರೂಪಳಾಗಿ , ಜ್ನಾನಿಗಳ ಅಂತರಂಗದಲ್ಲಿ ಬುದ್ದಿಸ್ವರೂಪಳಾಗಿ , ಭಕ್ತರ ಹೃದಯದಲ್ಲಿ ಶ್ರದ್ಧಾಸ್ವರೂಪಳಾಗಿ , ಮೋಕ್ಷೇಚ್ಚುಗಳ ಅಂತರ್ಯದಲ್ಲಿ ಮುಕ್ತಿಸ್ವರೂಪಳಾಗಿ ರಾರಾಜಿಸುತ್ತಿರುವ ಮಹಾಲಕ್ಷ್ಮಿಯ ಕರುಣಾಕಟಾಕ್ಷ ಶ್ರೀ ಶಂಕರರ ಕೃಪಾಶೀರ್ವಾದದಿಂದ ಚಿನ್ನದಿಂದ ಮಳೆಗರೆದ ಮಹಾಸ್ತೋತ್ರವೇ ಕನಕಧಾರಾ ಸ್ತೋತ್ರ. ಮೊದಲ ಎರಡು ನುಡಿಗಳನ್ನು ಹಿಂದಿನ ಅಂಕಣದಲ್ಲಿ ಪ್ರಸ್ತಾಪಿಸಿರುವೆ. ಈಗ ಮುಂದಿನ ಎರಡು ನುಡಿಗಳನ್ನು ಅದರ ಅರ್ಥವನ್ನು ಪ್ರಸ್ಥಾಪಿಸುವೆ.
ಆಮೀಲಿತಾಕ್ಷಮದಿಗಮ್ಯ ಮುದಾ ಮುಕುಂದಂ- ಆನಂದಕಂದಮನಿಮೇಷಮನಂಗತಂತ್ರಮ್ , ಆಕೇಕರಸ್ಥಿತಕನೀನಿಕಪಕ್ಷ್ಮನೇತ್ರಮ್, ಭೂತ್ಯೈ ಭವೇನ್ಮಮ ಭುಜಂಗಶಯಾಂಗನಾಯಾ:. ಅರ್ಥ- ಸ್ವಲ್ಪವೇ ಮುಚ್ಚಿದ ಕಣ್ಣುಳ್ಳ ಹಾಗೂ ಆನಂದಭರಿತನೂ ರಪ್ಪೆಯಾಡಿಸದವನೂ ಮನ್ಮಥಾವಿಷ್ಟನೂ ಆದ ಮುಕುಂದ- ವಿಷ್ಣುವನ್ನು ಅರಿತವಳಾದ ನಾಗಶಯನನ ಮಡದಿಯಾದ ಲಕ್ಷ್ಮಿಯ ಕುಡಿಗಣ್ಣಿನ ನೋಟವನ್ನು ಅವಲಂಭಿಸಿರುವ ರೆಪ್ಪೆಗಳುಳ್ಳ ನೇತ್ರವು ನನ್ನ ಐಶ್ವರ್ಯ ಸಂವೃದ್ಧಿಗೆ ಕಾರಣವಾಗಲಿ. ಬಾಹ್ವಂತರೇ ಮಧುಜಿತಃ ಶ್ರಿತಕೌಸ್ತುಭೇ ಯಾ, ಹಾರಾವಲೀ ಚ ಹರಿನೀಲಮಣೀ ವಿಭಾತಿ, ಕಾಮಪ್ರದಾ ಭವತೋಪಿಕಟಾಕ್ಷಮಾಲಾ ಕಲ್ಯಾಣಮಾವಹತು ಮೇ ಕಮಲಾಲಯಾಯಾಃ ೪. ಅರ್ಥ- ಮಧುಸೂದನನಾದ ವಿಷ್ಣುವಿನ ತೋಳುಗಳ ನಡುವೆ ಹಾಯ್ದು ಕೌಸ್ತುಭರತ್ನವನ್ನು ಆಶ್ರಯಿಸಿರುವ ಹಸಿರುಮಿಶ್ರವಾದ ಎರಡು ನೀಲಮಣಿಗಳುಳ್ಳ ಯಾವ ಹಾರವು ಹೊಳೆಯುತ್ತಿದೆಯೋ , ಮತ್ತು ಭಗವಂತನ ಹಾಗೂ ಕಮಲವಾಸಿನಿಯಾದ ದೇವಿಯ ಕುಡಿಗಣ್ಣುಗಳ ನೋಟಗಳ ಸಾಲು (ಭಕ್ತರಿಗೆ) ಇಷ್ಟಾರ್ಥಪ್ರದವಾಗಿ ಶೋಭಿಸುತ್ತಿರುವದೋ - ಅದೂ ಸಹ ನನಗೆ ಕಲ್ಯಾಣವನ್ನುಂಟು ಮಾಡಲಿ. ಸರ್ವೇ ಸುಖಿನೋ ಭವಂತು.
*ಶ್ರೀಮತಿ. ಗಿರಿಜಾ.ಎಸ್.ದೇಶಪಾಂಡೆ. ಬೆಂಗಳೂರು.*
[11/17, 21:03] Girija DESHPANDE: ಕನಕಧಾರಾ ಸ್ತೋತ್ರ- ಅಂಕಣ೪- ತಾ-೭-೯-೨೦೧೮.
ಶಂಕರಂ ಶಂಕರಾಚಾರ್ಯ:
ಕೇಶವಂ ಬಾದರಾಯಣಂ
ಸೂತ್ರ ಭಾಷ್ಯಕೃತೌ ವಂದೇ
ಭಗವಂತೌ ಪುನ: ಪುನ:.
ಕೇಶವನಾಗಿಯೂ , ಬಾದರಾಯಣನಾಗಿಯೂ ಅನಂತರ ಶಂಕರಭಗವತ್ಪಾದರಾಗಿ ಅವತರಿಸಿದ , ಜಗತ್ತಿಗೆ ವೇದಾಂತ ಸೂತ್ರಗಳನ್ನೂ , ಭಾಷ್ಯಗಳನ್ನೂ ನೀಡಿದ ಭಗವಾನ್ ಶಂಕರರಿಗೆ ನಾನು ಪುನ: ಪುನ: ನಮಸ್ಕರಿಸುತ್ತೇನೆ.
ಶಂಕರರು ತಮ್ಮ ಅಲ್ಪ ಜೀವಿತಾವಧಿಯಲ್ಲಿ ಕಾಶಿಯಿಂದ ಪ್ರವಾಸ ಮಾಡುತ್ತ ಬದರಿಗೆ ಬಂದರು. ಪ್ರಯಾಗ, ಹರಿದ್ವಾರ, ಹೃಷಿಕೇಶ,ಶ್ರೀನಗರ, ರುದ್ರಪ್ರಯಾಗ,ನಂದಪ್ರಯಾಗ, ಕಾಮರೂಪಿ, ಗೋಮುಖಿ ಮೊದಲಾದ ತೀರ್ಥಕ್ಷೆತ್ರ ಸಂದರ್ಶಿಸಿ ಅಲ್ಲಿನ ದೇವತಾ ಮೂರ್ತಿಗಳನ್ನು ಪೂಜಿಸಿದರು. ಈ ಮೂಲಕ ನಿರ್ಗುಣ ಬ್ರಹ್ಮೋಪಾಸಕನು ಸಗುಣ ಬ್ರಹ್ಮೋಪಾಸನೆಗೆ ವಿಮುಖರಾಗಬೇಕಾದುದಿಲ್ಲವೆಂಬುದನ್ನು ಅವರು ತೋರಿಸಿಕೊಟ್ಟರು. ಬದರಿನಾಥನ ಧವಳ ಹಿಮಾಲಯ ಪರಿಸರದಲ್ಲಿ ಅವರು ಹತ್ತು ಉಪನಿಷತ್ತುಗಳು, ಗೀತೆ ಹಾಗೂ ಬ್ರಹ್ಮಸೂತ್ರಗಳ ಮೇಲೆ ಭಾಷ್ಯಬರೆದರು. ಅಂತ ಮಹಿಮರು ಬರೆದ ಕನಕಧಾರಾ ಸ್ತೋತ್ರಗಳ ಅರ್ಥವನ್ನು ಕಡೆಯ ಶ್ರಾವಣ ಶುಕ್ರವಾದಂದು ಪಠಿಸಿ ಪುನೀತರಾಗೋಣ.
ವಿಶ್ವಾಮರೇಂದ್ರಪದವಿಭ್ರಮದಾನದಕ್ಷ ಮಾನಂದಹೇತುರಧಿಕಂ ಮಧುವಿದ್ವಿಷೋಪಿ.
ಈಶನ್ನಿಷೀದತು ಮಯಿ ಕ್ಷಣಮೀಕ್ಷಣಾರ್ಧ
ಮಿಂದೀವರೋಧರಸಹೋದರಮಿಂದಿರಾಯಾ:.
ಅರ್ಥ- ಸಮಸ್ತ ದೇವತಾಶ್ರೇಷ್ಠರ ಪದವಿಗಳೆಂಬ ಸೌಭಾಗ್ಯವನ್ನು ಕೊಡುವದರಲ್ಲಿ ಸಮರ್ಥವಾದ, ಮತ್ತು ಮದಸೂದನನಿಗೂ ಹೆಚ್ಚಿನ ಆನಂದ ಕಾರಣವಾದ , ಕಮಲದ ಗರ್ಭದಂತೆ ಮೃದುವಾದ ಇಂದಿರಾದೇವಿಯ ಕಣ್ಣಿನ ನೋಟದ ಅರ್ಧ ಭಾಗದಲ್ಲಿ ಒಂದಿಷ್ಟದರೂ ನನ್ನಲಿ ನೆಲೆಗೊಳ್ಳಲಿ.
೮. ಇಷ್ಟಾವಿಶಿಷ್ಟಮತಯೋಪಿನರಾಯಯಾದ್ರಾಗ್
ದೃಷ್ಟಾಸ್ತ್ರಿವಿಷ್ಟಪಪದಂ ಸುಲಭಂ ಲಭಂತೇ.
ದೃಷ್ಟಿ: ಪ್ರಹೃಷ್ಟಕ ಕಮಲೋದರದೀಪ್ತಿರೀಷ್ಟಾಂ
ಪುಷ್ಟಿಂ ಕೃಪೀಷ್ಟಮಮ ಪುಷ್ಕರವಿಷ್ಟರಾಯಾ:.
ಅರ್ಥ- ವಿಶೇಷವಾದ ಪಾಂಡಿತ್ಯವುಳ್ಳ (ದೇವಿಗೆ) ಪ್ರೀಯರಾದ ಮನುಷ್ಯರಾರೂ ಒಮ್ಮೆ ದೇವಿಯ ದೃಷ್ಟಿಗೆ ಪಾತ್ರರಾದದ್ದೆ ಆದರೆ ಸುಲಭವಾಗಿ ಸ್ವರ್ಗ ಪದವಿಯನ್ನು ಹೊಂದುವರು. ಅರಳಿದ ಕಮಲದ ಒಳಭಾಗದಂತೆ ಕಾಂತಿಯುಳ್ಳ , ಕಮಲಾಸನೆಯಾದ ದೇವಿಯ ಅಂಥ ದೃಷ್ಟಿಯು ನನಗೆ ಪುಷ್ಟಯನ್ನುಂಟುಮಾಡಲಿ.
ಸರ್ವೇಜನಾ ಸುಖಿನೋಭವಂತು. ಮುಂದಿನವಾರ ಮತ್ತಷ್ಟು ವಿಷಯದೊಂದಿಗೆ ಬರುವೆ.
ಶ್ರೀಮತಿ. ಗಿರಿಜಾ.ಎಸ್.ದೇಶಪಾಂಡೆ.
[11/17, 21:03] Girija DESHPANDE: *ಕನಕಧಾರಾ ಸ್ತೋತ್ರ*
*ಅಂಕಣ -೩*
*೩೧.೦೮.೨೦೧೮, ಶುಕ್ರವಾರ*
ಭಗವಂತನು ಭಗವದ್ಗೀತೆಯಲ್ಲಿ *ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ ಧರ್ಮಸಂಸ್ಥಾಪನಾಯ ಸಂಭವಾಮಿ ಯುಗೇ ಯುಗೇ'* ಎಂಬುದಾಗಿ ಪ್ರತಿಜ್ಞೆ ಮಾಡಿರುವನು. ಸನಾತನ ಧರ್ಮವನ್ನು ಕಾಪಾಡುವದಕ್ಕೂ ಅಧರ್ಮವನ್ನು ನಾಶಮಾಡುವುದಕ್ಕೂ ತಾನು ಪ್ರತಿಯೊಂದು ಯುಗದಲ್ಲೂ ಈ ಭೂಮಿಯಲ್ಲಿ ಅವತರಿಸುತ್ತೇನೆ ಎಂಬುದು ಇದರ ಅರ್ಥ.ಅದರಂತೆಯೆ ಈ ಕಲಿಯುಗದಲ್ಲಿ ಭಗವಂತನು ಶ್ರೀ ಶಂಕರಭಗವತ್ಪಾದರ ರೂಪದಲ್ಲಿ ಅವತರಿಸಿದರು. ಭಗವಂತನ ನಾಮಗಳಿಗೆ ಅಸಾಧಾರಣ ಶಕ್ತಿ ಇದೆ. ಅದರಿಂದಲೇ ನಾವು ಭಗವಂತನನ್ನು ೨೪ ನಾಮಗಳಿಂದ ,೧೦೮ ನಾಮಗಳಿಂದ ,ಶ್ರಿಶತಿ ನಾಮಗಳಿಂದ ,ಸಹಸ್ರನಾಮಗಳಿಂದ ಪೂಜಿಸುತ್ತೇವೆ.
ಇಂದು ಶ್ರಾವಣದ ಮೂರನೆಯ ಶುಕ್ರವಾರ ಈ ಶುಭದಿನದಂದು ಶ್ರೀ ಶಂಕರಾಚಾರ್ಯ ರಚಿತ ಕನಕಧಾರಾ ಸ್ತೋತ್ರದ ೫-೬ ನುಡಿ ಮತ್ತು ಭಾವಾರ್ಥ ನಿಮ್ಮ ಮುಂದೆ ಪ್ರಸ್ತಾಪಿಸುತ್ತಿರುವೆ.
*ಕಾಲಾಂಬುದಾಲಿಲಲಿತೋರಸಿ ಕೈಟಭಾರೆ- ರ್ಧಾರಾಧರ ಸ್ಪುರತಿ ಯಾ ತಟಿದಂಗನೇವ*
ಮಾತು:ಸಮಸ್ತಜಗತಾಂ ಮಹನೀಯಮೂರ್ತಿ:
ಭದ್ರಾಣಿ ಮೇ ದಿಶತು ಭಾರ್ಗವನಂದನಾಯಾ:೫. ಅರ್ಥ- ಕೈಟಭಶತೃವಾದ (ವಿಷ್ಣುವಿನ) ಕಾಲಮೇಘದಂತೆ ಕಾಂತಿಯುಳ್ಳ ಸುಂದರವಾದ ಎದೆಯಲ್ಲಿ ಮಿಂಚಿನ ಬಳ್ಳಿಯಂತೆ ಹೊಳೆಯುತ್ತಿರುವ ಖಡ್ಗವಿದೆಯೊ, ಅದರೊಡನೆಯೇ ಎದೆಯಲ್ಲಿ ನೆಲೆಸಿರುವ ಸಮಸ್ತ ಜಗತ್ತಿಗೂ ತಾಯಿಯಾದ ಮಹಾಶ್ರೇಷ್ಠವಾದ ಭಾರ್ಗವ ಪುತ್ರಿಯ ದಿವ್ಯರೂಪವು ನಮಗೆ ಮಂಗಳವುಂಟುಮಾಡಲಿ.
೬. ಪ್ರಾಪ್ತಂ ಪದಂ ಪ್ರಥಮತ: ಖಲು ಯತ್ಪ್ರಭಾವಾತ್
ಮಾಂಗಲ್ಯಭಾಜಿ ಮಧುಮಾಥಿನಿ ಮನ್ಮಥೇನ
ಮಯ್ಯಾಪತೇತ್ತದಿಹ ಮಂದರಮೀಕ್ಷಣಾರ್ಥಂ ಮಂದಾಲಸಾಕ್ಷಿ ಮಕರಾಕರಕನ್ಯಕಾಯಾ:.
ಅರ್ಥ- ಯಾವ ದೇವಿಯ ಅನುಗ್ರಹ ದೃಷ್ಟಿಯಿಂದ ಮದಸೂದನನಲ್ಲಿ ಸ್ಥಾನವು ಮೊದಲಬಾರಿಗೆ ಮಂಗಳಕರವಾಗಿ ಮನ್ಮಥನಿಗೆ ದೊರಕಿತೋ (ಆ ದೇವಿಯ) ,ಸಮುದ್ರರಾಜನ ಕನ್ಯೆಯಾದ ಲಕ್ಷಿಯ ಕಟಾಕ್ಷವು ಅಲ್ಪವಾಗಿಯಾದರೂ ಮೆಲ್ಲ ಮೆಲ್ಲನೆ ನಮ್ಮ ಮೇಲೆ ಹರಿಯುವಂತಾಗಲಿ.
ಆಸ್ತಿಕ ಮಹಾಶಯರು, ಸದ್ಭಕ್ತರೂ ಈ ಮಹಿಮಾನ್ವಿತ " ಕನಕಧಾರಾ ಸ್ತೋತ್ರ" ವನ್ನು ನಿತ್ಯ ಪಠಿಸಿ ಕೃತಕೃತ್ಯರಾಗೋಣ.
*ಗಿರಿಜಾ ಎಸ್ ದೇಶಪಾಂಡೆ*
[11/17, 21:03] Girija DESHPANDE: ಅಂಕಣ -೫. ದಿ.೧೪-೯-೨೦೧೮.
ಕನಕಧಾರಾ ಸ್ತೋತ್ರಮ್- ಶಂಕರರು ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಸಿದ್ಧಾಂತವಾದ"ಅದ್ವೈತ " ತತ್ವ ಪ್ರತಿಪಾದಿಸಿ ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದುಧರ್ಮವನ್ನು ಪುನುರುತ್ಥಾನ ಗೊಳಿಸಿದರು. ಶೈವ, ವೈಷ್ಣವ, ಶಾಕ್ತ , ಗಾಣಪತ್ಯ, ಸಾರ, ಸ್ಕಂದ ಮತಗಳನ್ನು ಒಗ್ಗೂಡಿಸಿ ಷಣ್ಮತ ಪ್ರತಿಪಾದಕರಾದರು.ಇವರು ಭಗವದ್-ಗೀತೆ,ಉಪನಿಷತ್ ಹಾಗೂ ಬ್ರಹ್ಮಸೂತ್ರಗಳಿಗೆ ಭಾಷ್ಯಬರೆದ ಮೊದಲ ಆಚಾರ್ಯರೆನಿಸಿದರು.
ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠ ಸ್ಥಾಪಿಸಿ ಪ್ರತಿಯೊಂದು ಪೀಠಕ್ಕೂ ತಮ್ಮ ಒಬ್ಬೊಬ್ಬ ಶಿಷ್ಯರನ್ನು ಪೀಠಾಧಿಪತಿಯಾಗಿಸಿದರು.
ಉತ್ತರದಲ್ಲಿಬದರೀಪೀಠ-_ಉತ್ತರ ಜ್ಯೋತಿರ್ ಮಠ.
ದಕ್ಷಿಣದಲ್ಲಿ ಶೃಂಗೇರಿ ಪೀಠ- ದಕ್ಷಿಣ ಶಾರದಾ ಮಠ.
ಪೂರ್ವದಲ್ಲಿ ಪುರಿ ಪೀಠ - ಪೂರ್ವಾ ಗೋವರ್ಧನ ಮಠ.
ಪಶ್ಛಿಮದಲ್ಲಿ ದ್ವಾರಕಾ ಪೀಠ- ಪಶ್ಛಿಮಮ್.
ಈ ನಾಲ್ಕು ಮಠಗಳು ಇಂದಿಗೂ ತಮ್ಮ ಗುರು ಪರಂಪರೆ ಮುಂದುವರೆಸಿಕೊಂಡು ಬಂದಿದ್ದು ಅಸಂಖ್ಯಾತ ಅನುಯಾಯಿಗಳನ್ನು ಹೊಂದಿದೆ.ಇಂಥಹ ಶಂಕರರು ರಚಿಸಿದ ಕನಕಧಾರಾಸ್ತೋತ್ರದ ಮುಂದಿನ ನುಡಿಗಳನ್ನು ಅದರ ಭಾವಾರ್ಥ ತಿಳಿಯೋಣ ಪಠಿಸಿ ಕೃತಾರ್ಥರಾಗೋಣ.
೯.*ದದ್ಯಾದ್ದಯಾನುಪವನೋ ದ್ರವಿಣಾಂಬುಧಾರಾ
ಮಸ್ಮಿನ್ನ ಕಿಂಚನ ವಿಹಂಗಶಿಶೌ ವಿಷಣ್ಣೇ.
ದುಷ್ಕರ್ಮ ಘರ್ಮಮಪನೀಯಚಿರಾಯದೂರಾ-
ನ್ನಾರಾಯಣಪ್ರಣಯಿನೀನಯನಾಂಬುವಾಹ:.*
ಅರ್ಥ-ನಾರಾಯಣನ ಪ್ರೀಯೆಯಾದ ದೇವಿಯ ಕಟಾಕ್ಷ ಪ್ರಭಾವವು ಕೆಟ್ಟ ಕರ್ಮಗಳೆಂಬ ಬಿಸಿಲನ್ನು ನಿತ್ಯವಾಗಿ ದೂರವಾಗಿ ತೊಡೆದುಹಾಕಿ ವಿಷಾದದಿಂದ ಕೂಡಿರುವ ದರಿದ್ರವೆಂಬ ಪಕ್ಷಿಯ ಮರಿಯಾದ (ನನ್ನಲ್ಲಿ) ದಯೆಇಟ್ಟು ಕೃಪೆಯಿಂದ ಗಾಳಿಇಂದ ಪ್ರೇರಿಸಲ್ಪಟ್ಟ ಐಶ್ವರ್ಯವೆಂಬ ಮಳೆಯು ಧಾರೆಯುಂಟುಮಾಡಲಿ.
೧೦. ಗೀರ್ದೇವತೇತಿ ಗರುಡಧ್ವಜಸುಂದರೀತಿ
ಶಾಕಂಬರೀತಿ ಶಶಿಶೇಖರವಲ್ಲಭೇತಿ.
ಸೃಷ್ಟಿಸ್ಥಿತಿಪ್ರಲಯಕೇಲೀಷು ಸಂಸ್ಥತಾಯೈ
ತಸ್ಮೈ ನಮಸ್ತ್ರಿಭುವನೈಕಗುರೋಸ್ತರುಣ್ಯೈ.
ಅರ್ಥ- ವಾಗ್ದೇವಿಯೆಂದೂ ಗರುಡಧ್ವಜನಾದ ವಿಷ್ಣುವಿನ ಪ್ರೀಯಳೆಂದೂ ,ಶಾಕಾಂಬರಿಯೆಂದೂ, ಚಂದ್ರಶೇಖರನಾದ ಶಿವನ ಪತ್ನಿಯೆಂದೂ ಆಯಾಕಾಲಕ್ಕೆ ಎಂದರೆ ಸೃಷ್ಟಿ- ಸ್ಥಿತಿ - ಸಂಹಾರ ಲೀಲೆಗಳಲ್ಲಿ ತೋರಿಕೊಂಡಿರುವವಳಾದ ,ಮೂರುಲೋಕಕ್ಕೂ ಗುರುವಾದ ಶ್ರೀಮನಾರಾಯಣನ ಮಡದಿಯಾದ ಆಕೆಗೆ ವಂದನೆಗಳು.
ಮುಂದಿನವಾರ ಮುಂದಿನ ಅಂಕಣದೊಂದಿಗೆ.
[11/17, 21:03] Girija DESHPANDE: *ಕನಕಧಾರಾ ಸ್ತೋತ್ರ*
*ಅಂಕಣ-೬.ಶುಕ್ರವಾರ. ೨೧-೯-೨೦೧೮*
*ನಾರಾಯಣವಲ್ಲಭೆ*
ಶಂಕರರು ಆಜನ್ಮ ಬ್ರಹ್ಮಚಾರಿಗಳು. ಇವರು ವಿಶ್ವರೂಪರ ಮಡದಿ ಉಭಯಭಾರತಿಯವರ ಶಾಸ್ತ್ರಸಂಪನ್ನತೆ,ಅಪ್ರತಿಮ ಪಾಂಡಿತ್ಯ ಸೂಕ್ಷ್ಮವಾಗಿ ಗಮನಿಸಿ ಆಕೆಯ ಪ್ರತಿಭೆಗೆ ಮೆಚ್ಚಿ ಉಭಯಭಾರತಿಯವರಿಗೆ ನ್ಯಾಯಾಧೀಶರ ಪಟ್ಟವನ್ನು ಶಂಕರಾಚಾರ್ಯರು ಕೊಡುತ್ತಾರೆ. ಮುಂದೆ ಉಮಯಭಾರತಿ ವಿರಾಗಿಣಿಯಾಗಬೇಕೆಂದಾಗ ಶಂಕರರು " ಅಮ್ಮಾ ತಾವು ಬ್ರಹ್ಮಸ್ವರೂಪಿಣಿಯಾಗಿರುವಿರಿ ತಾವು ಇರುವ ಸ್ಥಳವೇ ಶಾರದಾ ಮಂಡಲ ಪ್ರಭಾವಲಯವಾಗುತ್ತದೆ. ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿರುವ ಶೃಂಗೇರಿಯಲ್ಲಿ ನೀವು ನೆಲೆಸಿ , ವಿದ್ವಾಂಸರನ್ನು ಅನುಗ್ರಹಿಸಬೇಕು. ನನ್ನ ಮಾನಸ ಮತ್ತು ಧೀ: ಶಕ್ತಿಯ ಅಧಿದೇವತೆಯಾಗಿ ,ಸರಸ್ವತಿಯಾಗಿ ,ಮಾತೃಸ್ಥಾನದಲ್ಲಿ ನೆಲಸಿ" ಎಂದು ನಮೃತೆಯಿಂದ ಕೇಳಲು ಅವರ ಮಾತಿನಂತೆ ಉಭಯಭಾರತಿ ಶೃಂಗೇರಿಯಲ್ಲಿ ವಿದ್ಯೆಯ ದೇವತೆಯಾಗಿ ನೆಲೆಸುತ್ತಾರೆ. ಅಂತಹ ಶಂಕರರು ಬರೆದ ಕನಕಧಾರಾ ಸ್ತೋತ್ರದ ಮುಂದಿನ ಎರಡು ನುಡಿಗಳನ್ನು ಪಠಿಸಿ ಅದರ ಅರ್ಥ ತಿಳಿದು ಕೃತಾರ್ಥರಾಗೋಣ.
*ಶ್ರುತ್ಯೈ ಸಮೋಸ್ತು* *ಶುಭಕರ್ಮಫಲಪ್ರಸೂತ್ಯೈ*
*ರತ್ಯೈ ನಮೋಸ್ತು* *ರಮಣೀಯಗುಣಾಶ್ರಯಾಯೈ*
_ *ಶಕ್ತ್ಯೈ ನಮೋಸ್ತು* *ಶತಪತ್ರನಿಕೇತನಾಯೈ*
*ಪುಸ್ಟೈ ನಮೋಸ್ತು* *ಪುರುಷೋತ್ತಮವಲ್ಲಭಾಯೈ.*
*ಅರ್ಥ-* ಶುಭ ಕರ್ಮಗಳ ಫಲವನ್ನು ಉಂಟುಮಾಡುವ ಶ್ರುತಿರೂಪಳಾದ ದೇವಿಗೆ ನಮಸ್ಕಾರವು. ರಮಣೀಯವಾದ ಗುಣಗಳಿಗೆ ಆಶ್ರಯಳಾದ ರತಿಗೆ ನಮಸ್ಕಾರಗಳು. ಕಮಲನಿವಾಸಿನಿಯಾದ ಶಕ್ತಿರೂಪಳಾದ ಲಕ್ಷ್ಮಿಗೆ ನಮಸ್ಕಾರಗಳು. ಪುರುಷೋತ್ತಮನ ಪತ್ನಿಯಾದ ಪುಷ್ಟಿದೇವಿಗೆ ನಮಸ್ಕಾರಗಳು.
*ನಮೋಸ್ತು* *ನಾಲಿಕನಿಭಾನನಾಯೈ*
*ನಮೋಸ್ತು* *ದಿಗ್ಗೋದಧಿಜನ್ಮಭೂಮ್ಯೈ*
*ನಮೋಸ್ತು* *ಸೋಮಾಮೃತಸೋದರಾಯೈ*
*ನಮೋಸ್ತು* *ನಾರಾಯಣವಲ್ಲಭಾಯೈ*
*ಅರ್ಥ*- ಕಮಲದಂತೆ ಸುಂದರವಾದ ಮುಖವುಳ್ಳ ದೇವಿಗೆ ನಮಸ್ಕಾರ. ಕ್ಷೀರ ಸಮುದ್ರವನ್ನು ಜನ್ಮಸ್ಥಾನವಾಗಿ ಹೊಂದಿರುವವಳಿಗೆ ನಮಸ್ಕಾರ. ಸಮುದ್ರ ಮಂಥನ ಕಾಲದಲ್ಲಿ (ಲಕ್ಷ್ಮಿಯೊಡನೆ) ಹುಟ್ಟಿದ ಚಂದ್ರ , ಹಾಗೂ ಅಮೃತಗಳಿಗೆ ಸೋದರಿಯಾದವಳಿಗೆ ನಮಸ್ಕಾರ. ನಾರಾಯಣನ ವಲ್ಲಭೆಗೆ ನಮಸ್ಕಾರ.
ಸರ್ವೇ ಜನೋ ಸುಖಿನೋ ಭವಂತು.
*ಗಿರಿಜಾ.ಎಸ್. ದೇಶಪಾಂಡೆ*
9739388300
[11/17, 21:03] Girija DESHPANDE: *ಕನಕಧಾರಾ ಸ್ತೋತ್ರ* *ಅಂಕಣ ೭* *ತಾ-೫-೧೦-೨೦೧೮.*
ಶ್ರೀ ಶಂಕರರ ತಂದೆ ಶಿವಗುರು ಇವರು ಚಿಕ್ಕವರಿರುವಾಗಲೇ ತೀರಿಕೊಂಡಾಗ ಇವರ ತಾಯಿ ಆರ್ಯಾಂಬರವರು ಐದು ವರ್ಷಕ್ಕೆ ಇವರಿಗೆ ಉಪನಯನ ನೆರವೇರಿಸಿದರು.
ಅಸಾಧಾರಣ ಮೇಧಾವಿಯಾದ ಇವರು ಎಂಟು ವರ್ಷಕ್ಕೆ ನಾಲ್ಕು ವೇದ ಕಲಿತು ಬೇರೆ ಬೇರೆ ಗುರುಗಳಿಂದ ಷಡ್ದರ್ಶನಗಳನ್ನು ,ಪುರಾಣಗಳನ್ನು, ಸಕಲ ಶಾಸ್ತ್ರಗಳನ್ನು ಕಲಿತು ಸರ್ವ ಶಾಸ್ತ್ರ ವಿಶಾರದರಾದರು.
ಚಿಕ್ಕವಯಸ್ಸಿನಲ್ಲಯೇ ಸನ್ಯಾಸದ ಒಲವಿದ್ದರೂ ತಾಯಿ ಒಪ್ಪಿರಲಿಲ್ಲ ಇದಕ್ಕೆ ಒಂದು ಕಥೆಯೇ ಇದೆ. ಕಾಲಡಿಯ ಪೂರ್ಣಾ ನದಿಯಲ್ಲಿ ಶಂಕರರು ಸ್ನಾನ ಮಾಡುತಿರಲು ಮೊಸಳೆಯೊಂದು ಇವರ ಕಾಲನ್ನು ಹಿಡಿದು ನುಂಗಲು ಬರುವದು.
ಅಲ್ಲೆ ಇದ್ದ ತಾಯಿಗೆ ಶಂಕರರು ನಾನು ಸನ್ಯಾಸಿಯಾಗಲು ನೀನು ಅಪ್ಪಣೆ ನೀಡಿದರೆ ಮೊಸಳೆ ನನ್ನನ್ನು ಬಿಡುವದು ಎಂದಾಗ ತಾಯಿ ಒಲ್ಲದ ಮನಸ್ಸಿನಿಂದ ಒಪ್ಪಿಗೆ ನೀಡಿದರಂತೆ.
ಆಗ ಮೊಸಳೆ ಶಂಕರರ ಕಾಲು ಬಿಟ್ಟಿತಂತೆ. ನಂತರ ಇವರು ಗುರುವನ್ನು ಅರಸುತ್ತಾ ಹೊರಟಾಗ ಅವರಿಗೆ ಗೋವಿಂದ ಭಗವತ್ಪಾದರು ಎದುರಾಗಿ ಯಾರು ನೀನು ಎಂದಾಗ ಶಂಕರರು *"ನಿರ್ವಾಣ ಸತ್ಕಂ" ಅಥವಾ "ಆತ್ಮ ಸತ್ಕಂ"* ಅನ್ನು ಹೇಳುವರು. ಆಗ ಗೋವಿಂದ ಭಗವತ್ಪಾದರು ಶಂಕರರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸುವರು. ಶಂಕರರ ಮಾತಿನ ಓಘ , ಸ್ಥೂಲದಿಂದ ಸೂಕ್ಷ್ಮಕ್ಕೆ, ಸೂಕ್ಷ್ಮದಿಂದ ಅತೀ ಸೂಕ್ಷ್ಮಕ್ಕೆ ಸಾಗುವ ಈ ನಿರ್ವಾಣ ಘಟಕ ಅತ್ಯುನತ ರಚನೆಯಾಗಿದ್ದು ಸಂಪೂರ್ಣ ಸಮಚಿತ್ತತೆ , ಸಂತೋಷ ಮತ್ತು ಶಾಂತಿಯಿಂದ ಕೂಡಿರುತ್ತದೆ. ಹಾಗೂ ಆತ್ಮವೆ ನಿಜವಾದ ಸ್ವರೂಪ .
ಈ ಶ್ಲೋಕದ ಮೂಲಕ ಶಂಕರರು ಗುರುವಿನ. ಮನಸ್ಸನ್ನು ಗೆದ್ದದ್ದು ಅದ್ಭುತವಲ್ಲವೆ? ಅಂಥಹ ಮಹಾನ್ ಶ್ರೀಗಳು ರಚಿಸಿದ ಕನಕಧಾರಾ ಸ್ತೋತ್ರದ ಮುಂದಿನ ನುಡಿ ಅದರ ತಾತ್ಪರ್ಯ ಸ್ತುತಿಸಿ ಪುನೀತರಾಗೋಣವೇ.
*ನಮೋಸ್ತು ಹೇಮಾಂಭುಜಪೀಠಕಾಯೈ*
*ನಮೋಸ್ತು* *ಭೂಮಂಡಲನಾಯಿಕಾಯೈ*
*ನಮೋಸ್ತು* *ದೇವಾದಿದಯಾಪರಾಯೈ*
*ನಮೋಸ್ತು* *ಶಾರ್ಙ್ಗಾಯುಧವಲ್ಲಭಾಯೈ.*
*ಅರ್ಥ-* ಸುವರ್ಣಕಮಲಪೀಠವಾಸಿನಿಯಾದ , ಭೂಮಂಡಲಕ್ಕೆಲ್ಲ ಒಡೆಯಳಾದ, ದೇವಾದಿಸಮಸ್ತಜೀವಿಯಲ್ಲಿಯೂ ದಯೆಯುಳ್ಳ ಮತ್ತು ಶಾರ್ಙ್ಗವೆಂಬ ಬಿಲ್ಲನ್ನು ಧರಿಸಿರುವ ವಿಷ್ಣುವಿನ ಪತ್ನಿಯಾದ ದೇವಿಗೆ ನಮಸ್ಕಾರಗಳು.
*ನಮೋಸ್ತುದೇವ್ಯೈ *ಭೃಗುನಂದನಾಯೈ*
*ನಮೋಸ್ತು ವಿಷ್ಣೋರುರಸಿ *ಸ್ಥಿತಾಯೈ*
*ನಮೋಸ್ತು ಲಕ್ಷ್ಮೈ *ಕಮಲಾಲಯಾಯೈ*
*ನಮೋಸ್ತು ದಾಮೋದರ *ವಲ್ಲಭಾಯೈ*
*ಅರ್ಥ-* ಬೃಗು ಪುತ್ರಿಯಾದ ದೇವಿಗೆ , ವಿಷ್ಣುವಿನ ಹೃದಯವಾಸಿನಿಯಾದವಳಿಗೆ , ಕಮಲನಿವಾಸಿನಿಯಾದ ಲಕ್ಷ್ಮಿಗೆ ದಾಮೋಧರನ ಪತ್ನಿಯಾದ ಮಹಾದೇವಿಗೆ ವಂದನೆಗಳು.
ಸರ್ವೇಜನ ಸುಖಿನೋಭವಂತು.
ಎಲ್ಲರಿಗೂ ಮಂಗಳವಾಗಲಿ.
*ಶ್ರೀಮತಿ.ಗಿರಿಜಾ.ಎಸ್.ದೇಶಪಾಂಡೆ.*
[11/17, 21:03] Girija DESHPANDE: *ಕನಕಧಾರಾ ಸ್ತೋತ್ರ*
*ಅಂಕಣ- ೮*.
*ತಾ-೧೨-೧೦-೨೦೧೮.ನವರಾತ್ರಿ ತದಿಗೆ*
ಶಂಕರರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಮೊದಲನೇಯದು ಶೃಂಗೇರಿ ಶಾರದಾ ಪೀಠ. ಇದನ್ನು ದಕ್ಷಿಣಾಮ್ನಾಯ ಪೀಠವೆನ್ನುತ್ತಾರೆ.
ನವರಾತ್ರಿ ಸಂದರ್ಭದಲ್ಲಿ ಶಾರದಾ ದೇವಿಗೆ ಚಂಡಿಕಾ ಹವನ ,ರಥೋತ್ಸವ, ಕುಂಕುಮಾರ್ಚನೆ, ಚಿನ್ನರಥಸೇವೆ ,ಮುಂತಾದ ಸೇವೆಗಳು ನಡೆಯುತ್ತವೆ. ಶಂಕರರು ತಾಯಿ ಶಾರದೆಯನ್ನು ಪ್ರತಿಷ್ಟಾಪಿಸಿ ಮಠ ಸ್ಥಾಪಿಸಲು ಕಾರಣ ಕಥೆ ಇದೆ.
ಒಮ್ಮೆ ತುಂಗಾ ನದಿಯ ದಡದಲ್ಲಿ ಶಂಕರರು ಇರಲು ಧಾರಾಕಾರ ಮಳೆ ಸುರಿಯಲು ಆ ಸಂದರ್ಭದಲ್ಲಿ ಹಾವೊಂದು ಹೆಡೆಬಿಚ್ಚಿ ಕಪ್ಪೆಗೆ ಆಶ್ರಯ ನೀಡಿದ್ದು ನೋಡಿ ಶತ್ರುಗಳು ಮಿತ್ರರಿಗೆ ಸಹಕಾರ ನೀಡುವ ಈ ಸ್ಥಳದಲ್ಲಿ ಅಭೂತಪೂರ್ವ ಶಕ್ತಿಇದೆ ಎಂಬುದನ್ನು ಮನಗಂಡ ಆಚಾರ್ಯರು ಈ ಕ್ಷೇತ್ರ ಪುಣ್ಯಕ್ಷೇತ್ರವೆಂದು ಗುರುತಿಸಿದರು.
ಅಂದಿನಿಂದ ಶಂಕರರಿಂದ ಹಿಡಿದು ಇಂದಿನ ವರೆಗೆ ೩೬ ಯತಿವರೇಣ್ಯರು ಈ ಮಠದ ಪೀಠಾದಿಪತಿಗಳಾಗಿದ್ದಾರೆ.
ಶ್ರೀ ಭಗವತ್ಪಾದರ ವ್ಯಕ್ತಿತ್ವವು ಹಿಮಾಲಯ ಪರ್ವತ ಸ್ತೋಮದಂತೆ .ಹಿಮಾಲಯ ಪರ್ವತದಲ್ಲಿ ಅನೇಕ ಮಹಾನದಿಗಳು ಉದ್ಭವಿಸುವವು. ಅಂತೆಯೇ ಹಲವು ಝರಿಗಳು ಉದ್ಭವಿಸಿ ,ಲಾಸ್ಯವಾಡುತ್ತ ಮುಂದುವರಿದು ಯಾವುದಾದರು ಮಹಾನದಿ ಸೇರಿ ಕೊನೆಗೆ ಮಹಾಸಾಗರದಲ್ಲಿ ಲೀನವಾಗುವವು.
ಆಚಾರ್ಯರ ಹಿಮವತ್ಪರ್ವತ ಸದೃಶವಾದ ವ್ಯಕ್ತಿತ್ವದಿಂದ ಉದ್ಭವಿಸಿರುವ ಕೃತಿಪರಂಪರೆ ಹೀಗೆಯೇ. ಅವರ ಪ್ರಸ್ಥಾನತ್ರಯ ಭಾಷ್ಯಗಳೇ *"ಅಹಂ ಬ್ರಹ್ಮಾಸ್ಮಿ"* ಎಂದು ಭೋರ್ಗರೆಯುತ್ತ ಪ್ರಚಂಡ ಪ್ರವಾಹಯುಕ್ತವಾಗಿ ಹರಿಯುತ್ತಿರುವ ಮಹಾನದಿಗಳು. ಅಂತಹ ಅವರ ಬರಹದಲ್ಲಿ ಕನಕಧಾರಾ ಸ್ತೋತ್ರದ ಪಠಣೆ ನವರಾತ್ರಿ ತದಿಗೆಯಂದು ಮಾಡಿ ಪುನೀತರಾಗೋಣ.
*ನಮೋಸ್ತು ಕಾಂತ್ಯೈ ಕಮಲೇಕ್ಷಣಾಯೈ*
*ನಮೋಸ್ತು ಭೂತ್ಯೈ ಭುವನಪ್ರಸೂತ್ಯೈ*
*ನಮೋಸ್ತು* *ದೇವಾದಿಭಿರರ್ಚಿತಾಯೈ*
*ನಮೋಸ್ತು* *ನಂದಾತ್ಮಜವಲ್ಲಭಾಯೈ.*
*ಅರ್ಥ-* ಕಮಲದಂತೆ ಕಣ್ಣುಳ್ಳ ಪ್ರಕಾಶಮಾನಳಾಗಿರುವವಳಿಗೂ ,ಜಗತ್ತನ್ನು ಹಡೆದಿರುವ ಮಹಿಮಾವಂತಳಿಗೂ ದೇವತೆಗಳು ಮೊದಲಾದವರಿಂದ ಪೂಜಿಸಲ್ಪಟ್ಟವಳಿಗೂ ನಂದಗೋಪನ ಮಜಗಳಾದ ದುರ್ಗೆಗೆ ಪ್ರೀಯಳಾಗಿಯೂ ಇರುವ ಮಹಾಲಕ್ಷ್ಮಿಗೆ ನಮಸ್ಕಾರಗಳು.
*ಸಂಪತ್ಕರಾಣಿಸಕಲೇಂದ್ರಿಯ ನಂದನಾನಿ*
*ಸಾಮ್ರಾಜ್ಯದಾನವಿಭವಾನಿ ಸರೋರುಹಾಣಿ*
*ತ್ವದ್ವಂದನಾನಿ* *ದುರಿತಾಹರಣೋದ್ಯತಾನಿ*
*ಮೂಮೇವ ಮಾತರನಿಶಂ* *ಕಲಯಂತುಮಾನ್ಯೇ.*
*ಅರ್ಥ*- ಸಂಪತ್ತುಗಳನ್ನು ನೀಡುವ ,ಎಲ್ಲಾ ಇಂದ್ರಿಯಗಳಿಗೂ ಆನಂದವನ್ನುಂಟುಮಾಡುವ ,ಸಾಮ್ರಾಜ್ಯ ಪದವಿಯನ್ನು ದಯಪಾಲಿಸುವ ನಿನ್ನ ಪಾದಕಮಲಗಳನ್ನು ನಮಸ್ಕರಿಸುವಿಕೆಯು ಸಕಲ ಪಾಪಗಳನ್ನು ಕಳೆಯುವದರಲ್ಲಿ ಮುಂದಾಗಿರುವವು.
ಎಲೌ ತಾಯೇ ,ಮಾನವೀಯಳೆ ,ಆ ವಂದನೆಗಳು ಯಾವಾಗಲು ನನಗೆ ಸಂಭವಿಸುತ್ತಿರಲಿ.
*ಸರ್ವೇ ಜನೋ ಸುಖಿನೋ ಭವಂತು.*
*ಎಲ್ಲರಿಗೂ ನವರಾತ್ರಿ ಮಂಗಳವನ್ನುಂಟು ಮಾಡಲಿ*.
*-ಶ್ರೀಮತಿ.ಗಿರಿಜಾ ಎಸ್
ದೇಶಪಾಂಡೆ*
[11/17, 21:03] Girija DESHPANDE: *ಕನಕಧಾರಾ ಸ್ತೋತ್ರ*
*ಅಂಕಣ-೯*
*ಶುಕ್ರವಾರ ನವರಾತ್ರಿ ದಶಮಿ*.
*ತಾ- ೧೯-೧೦-೨೦೧೮*
*ಶ್ರುತಿ ಸ್ಮೃತಿ ಪುರಾಣಾನಾಂ ಆಲಯಂ ಕರುಣಾಲಯಂ*
*ನಮಾಮಿ ಭಗವತ್ಪಾದಂ ಶಕರಂ ಲೋಕಶಂಕರಮ್.*
ಶ್ರುತಿ ಸ್ಮೃತಿ ಪುರಾಣಗಳ ಸೆಲೆಯೂ ,ಕರುಣಾಲಯವೂ ,ಲೋಕಚಿಂತನ ಪರರೂ ಆದ ಶಂಕರ ಭಗವತ್ಪಾದರಿಗೆ ನಮಿಸುತ್ತೇನೆ.
ಭಾರತ ಮಾತೆಯ ಉದರದಲ್ಲಿ ಜನಿಸಿ ಸರ್ವ ಶ್ರೇಷ್ಟ ಯತಿಗಳಾಗಿ ,ವೈರಾಗ್ಯ ಚರ್ಕವರ್ತಿಗಳಾಗಿ ,ಜಗದ್ಗುರುಗಳಾಗಿ, ಜಗನಾನ್ಯರಾಗಿ, ಮಹಾಕವಿ, ದಾರ್ಶನಿಕರಾಗಿ ,ಯುಗಪುರುಷ,ಧರ್ಮ ಉಪದೇಶಕರಾಗಿ ಬೆಳಗಿದ ಅಸಮಾನ್ಯ ಚೇತನ ಶ್ರೀ ಶಂಕರಾಚಾರ್ಯರು ತಮ್ಮ ಅಲ್ಪಾಯುಷ್ಯದಲ್ಲಿ ಕಲ್ಪವನ್ನು ಸಾಧಿಸಿದ ಅವರಸ್ಟು ಸಗುಣ ದೇವರ ಸ್ತೋತ್ರಗಳನ್ನು ರಚಿಸಿದ ಇನ್ನೊಬ್ಬ ಋಷಿ ಕವಿ ಇಲ್ಲ.
*ನಾನೃಷ್ಟಿಃ ಕರುತೇ ಕಾವ್ಯಂ ಋಷಿಶ್ಚ ಕಿಲದರ್ಶನಾತ್*
*ದರ್ಶನಾತ್ ವರ್ಣನಾಚ್ಛೈವ ರೂಢಾಲೋಕೇ ಕವಿಶ್ರುತಿ:*
ಎಂಬಂತೆ ದಾರ್ಶನಿಕ ಪ್ರಜ್ಞೆಯುಳ್ಳವನೇ ಋಷಿ,ತಾನು ಕಂಡ ದರ್ಶನವನ್ನು ಬೇರೆಯವರ ಕಣ್ಣಿಗೆ ಕಟ್ಟುವಂತೆ ವರ್ಣಿಸಬಲ್ಲವನೇ ಋಷಿ ಕವಿ ಎನಿಸುತ್ತಾನೆ. ನಿರ್ಗುಣ ಬ್ರಹ್ಮೋಪಾಸನೆಗೆ ಸುಗುಣ ಬ್ರಹ್ಮೋಪಾಸನೆಯೂ ಸಾಧನ. ಇದನ್ನರಿತೇ ಶಂಕರರು ಅದ್ವೈತಿಗಳಾದರೂ ನಾನಾ ದೇವತೆಗಳನ್ನು ಸ್ತುತಿಸಿದ್ದಾರೆ.
*'ಮೋಕ್ಷಸಾಧನಾ ಸಾಮಗ್ರ್ಯಾಂಭಕ್ತಿರೇವ* *ಗರೀಯಸಿ '* ಎಂಬಂತೆ ಭಕ್ತಿಯೇ ಮುಕ್ತಿಯು ಶ್ರೇಷ್ಟ ಸಾಧನವೆಂದು ಇವರು ರಚಿಸಿದ ಸ್ತೋತ್ರಗಳಿಂದ ಸ್ಪಷ್ಟವಾಗುತ್ತದೆ. ಅಂಥ ಸ್ತೋತ್ರಗಳೇ ಕನಕಧಾರಾ ಸ್ತೋತ್ರಗಳು. ಮುಂದಿನ ಸೋತ್ರಗಳನ್ನು ಪಠಿಸಿ ಅದರ ಅರ್ಥ ತಿಳಿದು ಪುನೀತರಾಗೋಣ.
*ಯತ್ಕಟಾಕ್ಷಸಮುಪಾಸನಾವಿಧ:* *ಸೇವಕಸ್ಯ ಸಕಲಾರ್ಥಸಂಪದ:*
*ಸಂತನೋತಿ* *ವಚನಾಂಗಮಾನಸೈಸ್ತ್ವಾಂ*
*ಮುರಾರಿಹೃದಯೇಶ್ವರೀಂ* *ಭಜೇ.*
*ಅರ್ಥ-* ಯಾವ ದೇವಿಯ ಕುಡಿಗಣ್ಣಿನ ನೋಟದ ಚಿಂತನೆಯು ಸೇವಕನಾದ ಭಕ್ತನಿಗೆ ಸಮಸ್ತ ಇಷ್ಟಾರ್ಥಗಳನ್ನು ಕೊಡುವುದೋ ಅಂಥ, ಮುರಾರಿಯಾದ ನಾರಾಯಣನ ಹೃದಯೇಶ್ವರಿಯಾದ ನಿನ್ನನ್ನು ಕಾಯೇನ- ಮನಸಾ- ವಾಚಾ- ಭಜಿಸುವೆನು.
*ಸರಸಿಜನಯನೇ ಸರೋಜಹಸ್ತೇ*
*ಧವಲತಮಾಂಶುಕಗಂಧಮಾಲ್ಯಶೋಭೇ*
*ಭಗವತೀ ಹರಿವಲ್ಲಭೇ ಮನೋಜ್ಞೇ*
*ತ್ರಿಭುವನಭೂತಿಕರೀ ಪ್ರಸೀದ ಮಹ್ಯಮ್.*
*ಅರ್ಥ* ಕಮಲದಂತೆ ಕಣ್ಣುಳ್ಳವಳೇ, ಕೈಯಲ್ಲಿ ಕಮಲವನ್ನು ಹಿಡಿದಿರುವವಳೆ, ಅತ್ಯಂತ ಶುಭ್ರವಾದ ವಸ್ತ್ರ, ಗಂಧ,ಹೂಮಾಲೆಗಳಿಂದ ಶೋಭಿಸುತ್ತಿರುವವಳೇ,ಪೂಜ್ಯಳೆ, ಶ್ರೀ ಹರಿಯ ಪ್ರೀಯಳೆ,ಮನೋಜ್ಞಳೆ, ಮೂರು ಲೋಕಗಳ ಐಶ್ವರ್ಯವನ್ನು ಕೊಡುವವಳೆ ನನಗೆ ಪ್ರಸನ್ನಳಾಗು.
ಸರ್ವೇ ಜನೋ ಸುಖಿನೋ ಬವಂತು:. ಎಲ್ಲರಿಗೂ ಶುಭಶುಕ್ರವಾರ ಮಂಗಳವಾಗಲಿ.
*ಶ್ರೀಮತಿ.ಗಿರಿಜಾ.ಎಸ್.ದೇಶಪಾಂಡೆ.*
[11/17, 21:03] Girija DESHPANDE: *ಕನಕಧಾರಾ ಸ್ತೋತ್ರ*
*ಅಂಕಣ-೧೦,ಶುಕ್ರವಾರ,*
*ತಾ-೨೬-೧೦-೨೦೧೮*
ಸನ್ಯಾಸತ್ವದ ನಂತರ ಶಂಕರರು ನರ್ಮದಾ ನದಿ ತೀರದಲ್ಲಿ ಗೋವಿಂದಭಗವತ್ಪಾದರನ್ನು ಭೇಟಿಯಾಗಿ ಅವರನ್ನು ತಮ್ಮ ಗುರುಗಳನ್ನಾಗಿ ಸ್ವೀಕರಿಸಿದರು. ಅವರಿಂದ ಯೋಗ,ವೇದ,ಉಪನಿಷತ್,ವೇದಾಂತಗಳನ್ನು ಅಭ್ಯಸಿಸಿದ ನಂತರ ಕಾಶಿಗೆ ತೆರಳಿ ಅಲ್ಲಿ ಕೆಲವರನ್ನು ಶಿಷ್ಯರನ್ನಾಗಿಸಿಕೊಂಡು ವೇದಾಂತದ ಪಾಠ ಅವರಿಗೆ ಹೇಳಿಕೊಟ್ಟರು.
ದೇಶದ ಮೂಲೆ ಮೂಲೆ ಸಂಚರಿಸಿದ ಇವರು ಅನೇಕರನ್ನು ಅಧ್ಯಾತ್ಮಕ್ಕೆ ಸಂಬಂಧಪಟ್ಟ ವಾದದಲ್ಲಿ ಸೋಲಿಸಿದರು. ಇವುಗಳಲ್ಲಿ ಮಂಡನಮಿಶ್ರರನ್ನು ವಾದದಲ್ಲಿ ಸೋಲಿಸಿದ ಘಟನೆ ಬಹು ಪ್ರಮುಖವಾದುದು. ಮಂಡನಮಿಶ್ರರೆ ನಂತರ ಸುರೇಶಾಚಾರ್ಯ ಎಂಬ ಹೆಸರಿನಿಂದ ಶೃಂಗೇರಿ ಪೀಠಕ್ಕೆ ಅಧಿಪತಿಯಾದರು.
ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿ ಪ್ರತಿಯೊಂದು ಪೀಠಕ್ಕೆ ತಮ್ಮ ಒಬ್ಬೊಬ್ಬ ಶಿಷ್ಯರನ್ನು ಪೀಠಾಧಿಪತಿಯನ್ನಾಗಿಸಿದರು. ಈ ಮಠಗಳು ನಾಲ್ಕು ಸಿದ್ಧಾಂತ, ನಾಲ್ಕು ವೇದಗಳ ಆಧಾರಗಳ ಮೇಲೆ ನಿಂತಿವೆ.
೧. ದಕ್ಷಿಣ ಕರ್ನಾಟಕದಲ್ಲಿರುವ ಶೃಂಗೇರಿ ಪೀಠ ,ಸುರೇಶ್ವರಾಚಾರ್ಯರು, ಯಜುರ್ವೇದ.
೨. ಪಶ್ಛಿಮದಲ್ಲಿ ಗುಜರಾತಿನಲ್ಲಿರುವ ದ್ವಾರಕೆಯ ದ್ವಾರಕಾಪೀಠ,ಪದ್ಮಪಾದಾಚಾರ್ಯರು,ಸಾಮವೇದ.
೩. ಪೂರ್ವದಲ್ಲಿ ಓರಿಸ್ಸಾದಲ್ಲಿರುವ ಜಗನ್ನಾಥಪುರಿಯಲ್ಲಿರುವ ಶ್ರೀಶಂಕರ ಪೀಠ, (ಗೋವರ್ಧನ ಮಠ) ಹಸ್ತಾಮಲಕಾಪೀಠಾಚಾರ್ಯರು, ಋಗ್ವೇದ.
೪. ಈಗಿನ ಉತ್ತರಾಖಾಂಡದಲ್ಲಿರುವ ಜ್ಯೋತಿರ್ಮಠ, (ಜೋಶಿ ಮಠ) ತೋಟಕಾಚಾರ್ಯರು, ಅಥರ್ವ ವೇದ.
ಇಂಥಹ ಪ್ರಸಿದ್ಧ ನಾಲ್ಕು ಆಮ್ನಾಯ ಪೀಠ ಮಠ ಸ್ಥಾಪಿಸಿದ ಶ್ರೀ ಶಂಕರಾಚಾರ್ಯ ವಿರಚಿತ ಕನಕಧಾರಾ ಸ್ತೋತ್ರದ ಮುಂದಿನ ಸ್ತೋತ್ರ ಪಠಿಸಿ ಅದರ ಅರ್ಥ ತಿಳಿಯೋಣ.
*ದಿಗ್ಹಸ್ತಿಭಿ: ಕನಕಕುಂಭಮುಖಾವಸೃಷ್ಟ-*
*ಸ್ವರ್ವಾಹಿನೀವಿಮಲಚಾರುಜಲಾಪ್ಲುತಾಂಗೀಮ್|*
*ಪ್ರಾತರ್ನಮಾಮಿ ಜಗತಾಂ*
*ಜನನೀಮಶೇಷಲೋಕಾದಿನಾಥಗೃಹಿಣೀಮಮೃತಾಬ್ಧಿಪುತ್ರೀಮ್|*
ಅರ್ಥ- ದಿಗ್ಗಜಗಳ ( ಸೊಂಡಿಲುಗಳಲ್ಲಿರುವ ) ಚಿನ್ನದ ಕಲಶಗಳ ಬಾಯಿಂದ ಸುರಿಯಲ್ಪಟ್ಟ ಆಕಾಶಗಂಗೆಯ ದಿವ್ಯಜಲದಿಂದ ತೋಯಿಸಲ್ಪಟ್ಟ ಶರೀರವುಳ್ಳವಳೂ, ಜಗತ್ತಿಗೆ ತಾಯಿಯೂ ,ಸಮಸ್ತ ಲೋಕಗಳ ಒಡೆಯನಾದ (ವಿಷ್ಣುವಿನ) ಪತ್ನಿಯೂ,ಅಮೃತಸಮುದ್ರರಾಜನ ಮಗಳೂ ಆದ ದೇವಿಯನ್ನು ನಾನು ಪ್ರಾತ:ಕಾಲದಲ್ಲಿ ವಂದಿಸುವೆನು.
*ಕಮಲೇಕಮಲಾಕ್ಷವಲ್ಲಭೇ ತ್ವಂ*
*ಕರುಣಾಪೂರತರಂಗಿತೈರಪಾಂಗೈ:|*
*ಅವಲೋಕಯಮಾಮಕಿಂಚನಾನಾಂ*
*ಪ್ರಥಮಂ ಪಾತ್ರಮಕೃತಿಮಂ* *ದಯಾಯಾ:||*
ಅರ್ಥ- ಎಲೌ ಕಮಲಾದೇವಿಯೇ,ಕಮಲನಯನನಾದ ವಿಷ್ಣುವಿನ ಪ್ರೀಯಳೆ,ನೀನು ಕರುಣೆಯಿಂದ ತುಂಬಿದ ಚಂಚಲವಾದ ಕುಡಿನೋಟಗಳಿಂದ ನನ್ನನ್ನು ನೋಡುವಳಾಗು.ದರಿದ್ರದಲ್ಲಿ ಮೊದಲಿಗನೂ ದಯೆತೋರಬೇಕಾದವರ ಗುಂಪಿನಲ್ಲಿ ಅರ್ಹನೂ ಕಪಟವಿಲ್ಲದವನೂ ನಾನಾಗಿರುವೆನಷ್ಟೆ?
ಸರ್ವೇಜನ ಸುಖಿನೋಭವಂತು.ಎಲ್ಲರಿಗೂ ಮಂಗಳವಾಗಲಿ.
*ಶ್ರೀಮತಿ.ಗಿರಿಜಾ.ಎಸ್.ದೇಶಪಾಂಡೆ.ಬೆಂಗಳೂರು.*
[11/17, 21:26] Girija DESHPANDE: *ಕನಕಧಾರಾ ಸ್ತೋತ್ರ- ಅಂಕಣ -೧೧*
*೨-೧೧-೨೦೧೮,ಶುಕ್ರವಾರ*
ನಮ್ಮ ಭಾರತದೇಶವು ಒಂದು ಧರ್ಮಭೂಮಿ,ಪುಣ್ಯಭೂಮಿ. ಜಗದಲ್ಲಿಯೇ ಅಧ್ಯಾತ್ಮಿಕ ತಳಹದಿಯ ಮೇಲೆ ನಿಂತ ಏಕೈಕ ನಾಗರಿಕತೆ ನಮ್ಮದು.ಅಂತೆಯೇ ಮಾನವನ ಪರಿಪೂರ್ಣತೆಗೆ ಬೇಕಾದ ಸಂಸ್ಕಾರವನ್ನು ನಮ್ಮ ಸನಾತನ ಸಂಸ್ಕೃತಿ ಅನಾದಿ ಕಾಲದಿಂದಲೂ ನಮಗೆ ಶಾಸ್ತ್ರ ಬದ್ಧವಾಗಿ ನೀಡುತ್ತಲೇ ಬಂದಿದೆ.ದೇವರು,ದೇವಸ್ಥಾನ ,ಗುರುಹಿರಿಯರು,ತಂದೆ-ತಾಯಿ ಇವರೆಲ್ಲ ಅವುಗಳನ್ನು ನೀಡಿದ ಕಾಮಧೇನು-ಕಲ್ಪವೃಕ್ಷಗಳು.ಕಾಲದ ಮಹಿಮೆಯಂತೆ ನಾವು ಸಂಸ್ಕಾರದಿಂದ ,ನಡತೆಯಿಂದ ವಿಮುಖರಾಗದಂತೆ ಕಾಪಾಡಿದ ಋಷಿಮುನಿಗಳು ಹಾಗೂ ಗುರುಪರಂಪರೆಯನ್ನು ನಾವು ಸದಾ ಸ್ಮರಿಸಲೇಬೇಕು.
ಭಾಗ್ಯವಂತರ ಮನೆಗಳಲ್ಲಿ ಐಶ್ವರ್ಯ ಸ್ವರೂಪಳಾಗಿ, ಜ್ಞಾನಿಗಳ ಅಂತರಂಗದಲ್ಲಿ ಬುದ್ಧಿಸ್ವರೂಪಳಾಗಿ,ಭಕ್ತರ ಹೃದಯದಲ್ಲಿ ಶ್ರದ್ಧಾಸ್ವರೂಪಳಾಗಿ ರಾರಾಜಿಸುತ್ತಿರುವ ಮಹಾಲಕ್ಷ್ಮಿಯ ಕರುಣಾ ಕಟಾಕ್ಷ ಶ್ರೀ ಶಂಕರಾಚಾರ್ಯರ ಕೃಪಾಶೀರ್ವಾದದಿಂದ ಮಹಾಸ್ತೋತ್ರ " ಕನಕಧಾರಾ ಸ್ತೋತ್ರ" ಗಳ ಅಂತಿಮ ಸ್ತೋತ್ರ ಅದರ ಅರ್ಥ ಮತ್ತು ಅವರು ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರರ ದರ್ಶನಮಾಡಿ "ವಿಷ್ಣುಪದಾಂತಿ ಕೇಶಾಂತ ಸ್ತೋತ್ರದ ಮಹಿಮೆಯ ಬಗ್ಗೆ ಇರುವ ನಂಬಿಕೆಯ ಬಗ್ಗೆ ಹೇಳಲು ಪ್ರಯತ್ನಿಸಿದ್ದೇನೆ.
ತಿರುಪತಿ ದೇವಾಲಯದಲ್ಲಿರುವ ಬಾಲಾಜಿ, ಕಲಿಯುಗದ ದೈವ ವೆಂಕಟೇಶ್ವರನನ್ನು ದರ್ಶನ ಮಾಡಿದಷ್ಟೂ ಮತ್ತೆ ಮತ್ತೆ ದರ್ಶನ ಮಾಡಬೇಕೆನಿಸುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನಕ್ಕಾಗಿ ಬರುತ್ತಿರುವುದರಿಂದ ದೇವಾಲಯದ ಆದಾಯವೂ ಸಹ ವಿಶ್ವ ದಾಖಲೆ ನಿರ್ಮಿಸಿ ಶ್ರೀಮಂತ ದೇವಾಲಯ ಎನಿಸಿಕೊಂಡಿದೆ.
ವರ್ಷದಿಂದ ವರ್ಷಕ್ಕೆ ಏಳು ಬೆಟ್ಟಗಳ ಒಡೆಯನ ಭಕ್ತಾದಿಗಳು, ಸಂಪತ್ತು ಎರುತ್ತಲೇ ಇದೆ. ತಿರುಪತಿ ದೇವಾಲಯಕ್ಕೆ ಜನಾಕರ್ಷಣೆ, ಧನಾಕರ್ಷಣೆ ಹಿಂದಿರುವ ಆ ರಹಸ್ಯವಾದರೂ ಏನು ಎಂಬುದರ ಬಗ್ಗೆ ಕುತೂಹಲ ಮೂಡುತ್ತದೆ. ದೇವಾಲಯದ ಆಕರ್ಷಣೆಯ ಬಗ್ಗೆ ಹಲವು ಸ್ವಾರಸ್ಯಕರ ಘಟನಾವಳಿಗಳಿಗಳಿವೆ. ದೇವಾಲಯದ ಹಿಂದಿರುವ ಜನಾಕರ್ಷಣೆ ಹಾಗೂ ಧನಾಕರ್ಷಣೆ ವಿಷಯ ಪ್ರಸ್ತಾಪವಾದಾಗಲೆಲ್ಲಾ ಆದಿ ಶಂಕರಾಚಾರ್ಯರ ಹೆಸರು ಉಲ್ಲೇಖವಾಗುತ್ತದೆ.
ತಿರುಪತಿಗೆ ಆದಿ ಶಂಕರಾಚಾರ್ಯರು ಭೇಟಿ ನೀಡಿದಾಗ, ವೆಂಕಟೇಶ್ವರನ ದರ್ಶನ ಮಾಡಿ ವಿಷ್ಣು ಪದಾತಿ ಕೇಷಾಂತ ಸ್ತ್ರೋತ್ರವನ್ನು ರಚಿಸುತ್ತಾರೆ. ಅದರಲ್ಲಿ ನಯನ ಮನೋಹರವಾದ ವೆಂಕಟೇಶ್ವರನ ಸೌಂದರ್ಯವನ್ನು ವರ್ಣಿಸುತ್ತಾರೆ. ಅಷ್ಟೇ ಅಲ್ಲದೇ ಈಗ ನಾವು ನೋಡುತ್ತಿರುವ ಶ್ರೀವಾರಿ ಹುಂಡಿಯ ತಳಭಾಗದಲ್ಲಿ ಶ್ರೀ ಚಕ್ರ(ಧನಾಕರ್ಷಣೆಗಾಗಿ) ಹಾಗೂ ವೆಂಕಟೇಶ್ವರ ಸ್ವಾಮಿಯ ಪಾದಗಳ ಅಡಿಯಲ್ಲಿ ಜನಾಕರ್ಷಣ ಚಕ್ರಗಳನ್ನು ಸ್ಥಾಪಿಸುತ್ತಾರೆ. ಇದರ ಪ್ರಭಾವದಿಂದಲೇ ಇಂದಿಗೂ ತಿರುಪತಿಗೆ ಸಾಗರೋಪಾದಿಯಲ್ಲಿ ಜನರು ದೇವರನ್ನು ದರ್ಶಿಸಲು ಬರುತ್ತಿದ್ದು, ಶ್ರೀಚಕ್ರ( ಧನಾಕರ್ಷಣ ಚಕ್ರ) ದಿಂದಾಗಿಯೇ ಅಪಾರ ಸಂಪತ್ತು ಸಂಗ್ರಹವಾಗುತ್ತಿದೆ ಎಂಬ ನಂಬಿಕೆ ಇದೆ.
ಇನ್ನು ಇದಕ್ಕೆ ಪೂರಕವೆಂಬಂತೆ ದೇವಾಲಯದ ವಿನ್ಯಾಸವನ್ನು ಕಾಲಕ್ರಮೇಣ ಸ್ವಲ್ಪ ಬದಲಾವಣೆ ಮಾಡಲಾಗಿದ್ದರೂ, ಶಂಕರಾಚಾರ್ಯರು ಶ್ರೀಚಕ್ರ ಸ್ಥಾಪಿಸಿದ್ದ ಸ್ಥಳವಾದ ಶ್ರೀವಾರಿ ಹುಂಡಿಯನ್ನು ಮಾತ್ರ ಶತಶತಮಾನಗಳಿಂದ ಆ ಜಾಗದಿಂದ ಕದಲಿಸಿಲ್ಲ. 1939 ರಲ್ಲಿ ಅಂದಿನ ಮದ್ರಾಸ್ ಸರ್ಕಾರ ಪ್ರಕಟಿಸಿದ್ದ ದಿ ಹೋಲಿ ಶ್ರೈನ್ ಆಫ್ ತಿರುಪತಿ ಪುಸ್ತಕದಲ್ಲೂ ಈ ಬಗ್ಗೆ ಉಲ್ಲೇಖಗಳಿದ್ದು, ಶಂಕರಾಚಾರ್ಯರು ತಿರುಪತಿಯಲ್ಲಿ ಧನಾಕರ್ಷಣ ಚಕ್ರವನ್ನು ಸ್ಥಾಪಿಸಿದ್ದರು ಎನ್ನುವ ಉಲ್ಲೇಖವಿದೆ. ತಿರುಪತಿಯಂತೆಯೇ ಶ್ರೀರಂಗಂ ನಲ್ಲಿಯೂ ಶಂಕರಾಚಾರ್ಯರು ಜನಾಕರ್ಷಣ ಚಕ್ರವನ್ನು ಸ್ಥಾಪನೆ ಮಾಡಿದ್ದಾರೆ ಎಂಬ ಉಲ್ಲೇಖವಿದೆ.
ಆದಿ ಶಂಕರಾಚಾರ್ಯರು ತಿರುಪತಿಗೆ ಭೇಟಿ ನೀಡಿರುವ ಸಂಗತಿಗೆ ತಿರುಪತಿ ಕ್ಷೇತ್ರ ಮಹಾತ್ಮೆ ಪುಸ್ತಕದಲ್ಲಿಯೂ ಉಲ್ಲೇಖವಿದ್ದು, ತಿರುಪತಿ ದೇವಾಲಯಕ್ಕೆ ಜನಾಕರ್ಷಣೆ, ಧನಾಕರ್ಷಣೆ ಹಿಂದಿರುವ ಆ ರಹಸ್ಯ ಆದಿ ಶಂಕರಾಚಾರ್ಯರು ಸ್ಥಾಪಿಸಿರುವ ಜನಾಕರ್ಷಣೆಯ ಚಕ್ರ ಎಂಬ ನಂಬಿಕೆ ಇದೆ.
*ಸ್ತುವಂತಿ ಯೇ ಸ್ತುತಿಭಿರಮೀಭಿರನ್ವಹಂ*
*ತ್ರಯೀಮಯೀಂ ತ್ರಿಭುವನಮಾತರಂ ರಮಾಮ್|*
*ಗುಣಾಧಿಕಾ ಗುರುತರಭಾಗ್ಯಭಾಜಿನೋ*
*ಭವಂತಿ ತೇ ಭುವಿ ಭುಧಭಾವಿತಾಶಯಾಃ||*
*ಅರ್ಥ*- ಯಾರು ಈ ದಿವ್ಯ ಸ್ತುತಿಗಳಿಂದ ವೇದಮಯಳೂ, ಮೂರು ಲೋಕಗಳ ತಾಯಿಯೂ ಆದ ರಮಾದೇವಿಯನ್ನು ಸ್ತೋತ್ರ ಮಾಡುವರೋ ಅವರು ಈ ಭೂಲೋಕದಲ್ಲಿ ಗುಣಸಂಪನ್ನರೂ ,ಅತ್ಯಧಿಕವಾದ ಐಶ್ವರ್ಯಯುಕ್ತರೂ, ವಿದ್ವಾಂಸರಿಂದ ಗೌರವಿಸಲ್ಪಡುವವರೂ ಆಗಿ ಸುಖಿಸುವರು.
*|| ಇತಿ ಶ್ರೀ ಜಗದ್ಗುರು ಆದಿಶಂಕರಾಚಾರ್ಯ ವಿರಚಿತ ಕನಕಧಾರಾ ಸ್ತೋತ್ರಂ ಸಂಪೂರ್ಣಂ ||*
*ಶ್ರೀಮತಿ ಗಿರಿಜಾ ದೇಶಪಾಂಡೆ*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ