*ನನ್ನವಳು*
ನೀ ಬಂದೆ ಮನೆಯಂಗಳದಲ್ಲಿ
ನಿಂದೆ ನೀ ಎನ್ನ ಮನದಂಗಳದಲಿ!!
ಕಂಡು ನಮ್ಮಿಬ್ಬರ ಪ್ರೀತಿಯ
ಅರಳಿದವು ಕುಸುಮಗಳು
ಬರಡು ಭೂಮಿಯಲ್ಲಿ
ನೀರು ತುಂಬಿದಂತಾಯಿತು
ನಾವಿಬ್ಬರು ನಡೆವ ಹಾದಿಯಲಿ
ನವಿಲು ನಾಚಿ ನೃತ್ಯವಾಡಿದವು
ಹಿರಿಯರು ಆಶೀರ್ವದಿಸಿದರು
ಚಿಕ್ಕವರು ಹಾರೈಸಿದರು!!
ಚಿಮ್ಮುತ ಓಡುವ ಜಿಂಕೆಗಳು
ನೋಡುತ್ತಾ ನಿಂತವು ನಮ್ಮನ್ನು
ನಿನ್ನ ಕಣ್ಣ ನೋಟದಲ್ಲಿ
ಪ್ರೀತಿಯ ಆಸೆ ಕಂಡು!!!
ನನ್ನ ಮನದ ನೀಲಾಕಾಶದಲಿ
ಕಂಡೆ ನಾ ಹುಣ್ಣಿಮೆಯ ಚಂದ್ರನನ್ನು!!!
*ವಿಜಯಾ ನಾಡಿಗೇರ*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ