ಹನುಮಂತ.ಮ.ದೇಶಕುಲಕರ್ಣಿ ನಾನು ಪತ್ರಕರ್ತ ಹಾಗೂ ಲೇಖಕನಾಗಿ -ಬರಹಗಾರನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನೂರು ಭೋಗೇನಾಗರಕೊಪ್ಪ ಕಲಘಟಗಿ ತಾಲೂಕು ಧಾರವಾಡ ಜಿಲ್ಲೆಯ ಒಂದು ಹಳ್ಳಿ.
ಗುರುವಾರ, ಸೆಪ್ಟೆಂಬರ್ 20, 2018
ಶನಿವಾರ, ಸೆಪ್ಟೆಂಬರ್ 8, 2018
ಗುರುವಾರ, ಸೆಪ್ಟೆಂಬರ್ 6, 2018
ಬುಧವಾರ, ಸೆಪ್ಟೆಂಬರ್ 5, 2018
ವಿಜಯಾ ನಾಡಿಗೇರ ಅವರ ನನ್ನವಳು ಕವನ
*ನನ್ನವಳು*
ನೀ ಬಂದೆ ಮನೆಯಂಗಳದಲ್ಲಿ
ನಿಂದೆ ನೀ ಎನ್ನ ಮನದಂಗಳದಲಿ!!
ಕಂಡು ನಮ್ಮಿಬ್ಬರ ಪ್ರೀತಿಯ
ಅರಳಿದವು ಕುಸುಮಗಳು
ಬರಡು ಭೂಮಿಯಲ್ಲಿ
ನೀರು ತುಂಬಿದಂತಾಯಿತು
ನಾವಿಬ್ಬರು ನಡೆವ ಹಾದಿಯಲಿ
ನವಿಲು ನಾಚಿ ನೃತ್ಯವಾಡಿದವು
ಹಿರಿಯರು ಆಶೀರ್ವದಿಸಿದರು
ಚಿಕ್ಕವರು ಹಾರೈಸಿದರು!!
ಚಿಮ್ಮುತ ಓಡುವ ಜಿಂಕೆಗಳು
ನೋಡುತ್ತಾ ನಿಂತವು ನಮ್ಮನ್ನು
ನಿನ್ನ ಕಣ್ಣ ನೋಟದಲ್ಲಿ
ಪ್ರೀತಿಯ ಆಸೆ ಕಂಡು!!!
ನನ್ನ ಮನದ ನೀಲಾಕಾಶದಲಿ
ಕಂಡೆ ನಾ ಹುಣ್ಣಿಮೆಯ ಚಂದ್ರನನ್ನು!!!
*ವಿಜಯಾ ನಾಡಿಗೇರ*
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)