ಗುರುವಾರ, ಜುಲೈ 13, 2017

ನೀರಿಗೆ ಪ್ಲಾಸ್ಟಿಕ್ ಬಳಸುತ್ತಿದ್ದೀರಾ?

🍢🍡🍡🍢🍢🍡🍡



ನಾವು ದೂರದ ಊರುಗಳಿಗೆ ಹೋಗೋವಾಗ ಬಾಯರಿಕೆಗೆ ಮಿನರಲ್ ವಾಟರ್ ಬಾಟಲ್ಲನ್ನು ತೆಗೆದುಕೊಳ್ಳುತ್ತೇವೆ ಶುದ್ಧವಾದ ನೀರು ದೊರೆಯುವುದರಿಂದ ಹೀಗೆ ಬಳಸೋದು ಒಳ್ಳೆಯದೇ. ಆದರೆ ಇನ್ನು ಮುಂದೆ ಪ್ಲಾಸ್ಟಿಕ್ ವಾಟರ್ ಬಾಟಲ್ ಕೊಳ್ಳುವಾಗ ಕೆಲವು ವಿಷಯವನ್ನು ನೀವು ಗಮನಿಸಲೇ ಬೇಕು. ಯಾಕೆಂದರೆ ಇದು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ವಿಷಯ..

ಈ ಕೆಳಗಿನ ವಿಷಯಗಳನ್ನು ತಿಳಿಯಿರಿ ಇನ್ನು ಮುಂದೆ ನೀವು ಪ್ಲಾಸ್ಟಿಕ್ ವಾಟರ್ ಬಾಟಲ್ ನೀರನ್ನು ಕುಡಿಯುವಾಗ , ಬಾಟಲ್ ನ ತಳಭಾಗದ ಕಡೆ ಗಮನಹರಿಸಿ. ಅಲ್ಲಿ  PETE, PET HDPE, HDP, PVC, LDPE ಎಂದು ಕೆಲವು ಇಂಗ್ಲಿಷ್ ಅಕ್ಷರಗಳನ್ನು ಬರೆದಿರುತ್ತಾರೆ. ಇವು ಆ ವಾಟರ್ ಬಾಟಲನ್ನು ತಯಾರಿಸಲು ಉಪಯೋಗಿಸಲಾದ ಪ್ಲಾಸ್ಟಿಕ್ ಗಳು. ಹಲವು ರೀತಿಯ ಪ್ಲಾಸ್ಟಿಕ್ ಗಳಿದ್ದರೂ ನೀವು ಖರೀದಿಸಿದ ಬಾಟಲ್ ಯಾವ ರೀತಿಯ ಪ್ಲಾಸ್ಟಿಕ್ ನಿಂದ ತಯಾರಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಇದರಿಂದಾಗಿ ನಮಗೆ ಯಾವುದು ಆರೋಗ್ಯಕರ ಎಂಬುದನ್ನು ತಿಳಿದುಕೊಳ್ಳಬಹುದು.

PP: ಮೊಸರಿನ ಕಪ್ಪುಗಳು, ಟಾನಿಕ್,ಸಿರಪ್ ಬಾಟಲ್ ಗಳನ್ನು ಈ ಪ್ಲಾಸ್ಟಿಕ್ ನಿಂದ ತಯಾರಿಸುತ್ತಾರೆ. ಇವು ನಮಗೆ ಸುರಕ್ಷಿತ.

HDPE ಅಥವಾ HDP : ವಾಟರ್ ಬಾಟಲ್ ನ ತಳಭಾಗದಲ್ಲಿ ಈ ಅಕ್ಷರಗಳಿದ್ದರೆ, ಆ ಬಾಟಲ್ ನಲ್ಲಿರುವ ನೀರನ್ನು ನಾವು ಯಾವುದೇ ಅಂಜಿಕೆಯಿಲ್ಲದೆ ಕುಡಿಯಬಹುದು. ಆ ನೀರಿನಲ್ಲಿ ಯಾವುದೇ ಪ್ಲಾಸ್ಟಿಕ್ ಅವಶೇಷಗಳು ಸೇರುವುದಿಲ್ಲ. ಆ ನೀರು ಸಂಪೂರ್ಣ ಸುರಕ್ಷಿತವಾಗಿದ್ದು, ನಮಗೆ ಯಾವುದೇ ರೀತಿಯ ದುಷ್ಪರಿಣಾಮ ಉಂಟಾಗುವುದಿಲ್ಲ.

PVC ಅಥವಾ 3V: ಈ ಅಕ್ಷರಗಳು ಪ್ಲಾಸ್ಟಿಕ್ ನೀರಿನ ಬಾಟಲ್ ಕೆಳಗೆ ಮುದ್ರಿಸಿದ್ದರೆ, ಜಾಗ್ರತೆವಹಿಸಬೇಕು. ಅಂತಹ ಪ್ಲಾಸ್ಟಿಕ್ ನಿಂದಾಗಿ ರಸಾಯನಿಕ ಪದಾರ್ಥಗಳು ನೀರಿನೊಳಗೆ ಸೇರಿರುತ್ತವೆ. ಆ ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿನ ಹಾರ್ಮೋನ್ ಗಳು ಏರು ಪೇರಾಗುತ್ತವೆ.

LDPE: ಈ ಪ್ಲಾಸ್ಟಿಕ್ ನಿಂದ ತಯಾರಿಸಲಾದ ವಾಟರ್ ಬಾಟಲ್ ಗಳ ನೀರು ಶ್ರೇಯಸ್ಕರ. ಈ ಪ್ಲಾಸ್ಟಿಕ್ ನಿಂದ ಯಾವುದೇ ರೀತಿಯ ವಿಷಪದಾರ್ಥಗಳು ನೀರೊಳಗೆ ಸೇರುವುದಿಲ್ಲ. ಆದರೆ ಈ ಪ್ಲಾಸ್ಟಿಕ್ ನಿಂದ ಬಾಟಲ್ ಗಳನ್ನು ತಯಾರಿಸಲಾಗುವುದಿಲ್ಲ. ಇದರಿಂದ ಪ್ಲಾಸ್ಟಿಕ್ ಬ್ಯಾಗ್ ಗಳನ್ನು ತಯಾರಿಸುತ್ತಾರೆ.

PS: ಇಂತಹ ಪ್ಲಾಸ್ಟಿಕ್ ನಿಂದ ಕಾಫೀ,ಟೀ ಕಪ್ಪುಗಳನ್ನು ತಯಾರಿಸುತ್ತಾರೆ. ಇಂತಹ ಪ್ಲಾಸ್ಟಿಕ್ ಗಳು ಕಾರ್ಸಿನೋಜೆನಿಕ್ ಪದಾರ್ಥಗಳನ್ನು ಬಿಡುಗಡೆ ಮಾಡುತ್ತವೆ. ಆದುದರಿಂದ ಇಂತಹ ಪ್ಲಾಸ್ಟಿಕ್ ನಿಂದ ತಯಾರಿಸಲಾದ ವಸ್ತುಗಳನ್ನು ಉಪಯೋಗಿಸಬಾರದು.

PETE ಅಥವಾ PET: ವಾಟರ್ ಬಾಟಲ್ ಕೆಳಗೆ ಈ ಅಕ್ಷರಗಳನ್ನು ಮುದ್ರಿಸಿದ್ದರೆ, ಎಚ್ಚರವಹಿಸಬೇಕು. ಯಾಕೆಂದರೆ,ಈ ರೀತಿಯ ಪ್ಲಾಸ್ಟಿಕ್ ನಿಂದ ತಯಾರಿಸಲಾದ ಬಾಟಲ್ ಗಳಲ್ಲಿ ನೀರು ಹಾಕಿದರೆ, ಆ ನೀರಿನೊಳಗೆ ಅಪಾಯಕಾರಿಯಾದ ವಿಷ ಪದಾರ್ಥಗಳು ಬಿಡುಗಡೆಯಾಗುತ್ತವೆ. ಈ ನಿಟ್ಟಿನಲ್ಲಿ ಆ ನೀರನ್ನು ಕುಡಿಯುವುದು ಒಳ್ಳೆಯದಲ್ಲವಂತೆ. ಲೇಬಲ್ ಇಲ್ಲದಿದ್ದರೂ ಅಥವಾ

PC: ಈ ರೀತಿಯ ಪ್ಲಾಸ್ಟಿಕ್ ಬಹಳ ಅಪಾಯಕಾರಿ. ಇದರಿಂದ ತಯಾರಿಸಲಾದ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸುವುದು ಅತ್ಯಂತ ಅಪಾಯಕರ. ಕೆಲವರು ಪ್ಲಾಸ್ಟಿಕ್ ನಿಂದಲೆ ಆಹಾರ ಡಬ್ಬಿಗಳನ್ನು, ನೀರಿನ ಬಾಟಲ್ ಗಳನ್ನು ತಯಾರು ಮಾಡುತ್ತಾರೆ. ಆದುದರಿಂದ ನೀವು ಉಪಯೋಗಿಸುತ್ತಿರುವ ವಸ್ತುಗಳು ಇದರಿಂದ ತಯಾರಾಗಿವೆಯೆ ಎಂದು ಒಮ್ಮೆ ಪರೀಕ್ಷಿಸಿ

ಹನುಮಂತ. ಮ. ದೇಶಕುಲಕಣಿ೯
ಸಾ||ಭೋಗೇನಾಗರಕೊಪ್ಪ. ಮೊ.9731741397
ಪೊ|| ಗಂಜೀಗಟ್ಟಿ-581196
ತಾ||ಕಲಘಟಗಿ ಜಿ||ಧಾರವಾಡ
   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ