ಮಂಗಳವಾರ, ಜುಲೈ 26, 2016

ಕಾರ್ಗಿಲ್ ವಿಜಯದಿವಸ

"ವಂದೇ ಮಾತರಂ"
"ಕಾರ್ಗಿಲ್ ಕದನ" : ಕೆಲವು ವಿವರಗಳು

ಕಾಲಮಿತಿ :
ಯುದ್ಧ ನಡೆದ ಒಟ್ಟು ಅವಧಿ : 74 ದಿನಗಳು
ಯುದ್ಧಕ್ಷೇತ್ರದ ಒಟ್ಟು ಅವಧಿ : 150 ಕಿ.ಮೀ.

ಬಳಸಿದ ಬಲಾಬಲ
ಭಾರತೀಯ ಸೇನೆ : 20,000
ಪಾಕಿಸ್ತಾನಿ ಸೇನೆ : ಅಘೋಷಿತ
ಅತಿಕ್ರಮಣಕಾರಿಗಳು : 1500

ಶಸ್ತ್ರಾಸ್ತ್ರ ಬಳಕೆ
ಆರ್ಟಿಲರಿ : 300 (100 ಬೊಫೋರ್ಸ್ ಬಂದೂಕುಗಳೂ ಸೇರಿದಂತೆ)
ಶೆಲ್‍ಗಳು (ಪ್ರತಿನಿತ್ಯ) : 5000
ಟೋನೇಜ್ (ಪ್ರತಿನಿತ್ಯ) : 15000

ವಾಯುಬಲ
ಸ್ಟ್ರೈಕ್ ಮಿಶನ್ಸ್ : 550
ರೆಕನೈಸಾನ್ಸ್ : 150
ಎಸ್ಕಾರ್ಟ್ ಮಿಶನ್ : 500
ಚಾಪರ್ ಸಾರ್ಟೀಸ್ : 2185

ಮಡಿದವರು
ಭಾರತಸೇನೆ : 407
ಗಾಯಗೊಂಡವರು : 584
ನಾಪತ್ತೆಯಾದವರು : 9
ಪಾಕ್ ಸೇನೆ ಮಡಿದವರು : 969

ಯುದ್ಧ ವೆಚ್ಚ
ದೈನಂದಿನ ಸರಾಸರಿ ವೆಚ್ಚ : 15 ಕೋಟಿ ರೂ.
ಒಟ್ಟು ವೆಚ್ಚ : 1100 ಕೋಟಿ ರೂ.

ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ ಕನ್ನಡದ ಕೆಲವರು ಕಡುಗಲಿಗಳು..

*ಭಾರತೀಯ ವಾಯುಪಡೆಯ ಪ್ಲೈಟ್ ಲೆಫ್ಟಿನೆಂಟ್ ಎಂ.ಸುಬ್ರಹ್ಮಣ್ಯಂ (ಬೆಳಗಾವಿ)
* ಮಡಿವಾಳಪ್ಪ ನಾಯ್ಕರ್ (ಆಸುಂಡಿ ಗ್ರಾಮ, ಸವದತ್ತಿ ತಾಲೂಕು, ಬೆಳಗಾವಿ)
* ಸಿಪಾಯಿ ಧೋಂಡಿಬಾ ದೇಸಾಯಿ (ವಡಗಾಂವ, ಖಾನಾಪುರ, ತಾಲೂಕು, ಬೆಳಗಾವಿ)
ಸಿದ್ಧನಗೌಡ ಬಸನಗೌಡ ಪಾಟೀಲ, ಸಿ.ಆರ್.ಪಿ.ಎಫ್. (ಕೆರೂರು ಗ್ರಾಮ, ಚಿಕ್ಕೋಡಿ ತಾಲೂಕು, ಬೆಳಗಾವಿ ಜಿಲ್ಲೆ)
* ಅಪ್ಪಾಸಾಹೇಬ ಪೀರಪ್ಪ ಧನವಾಡೆ, ಸಿ.ಆರ್.ಪಿ.ಎಫ್. (ಇಂಗಳಿ ಗ್ರಾಮ, ಚಿಕ್ಕೋಡಿ ತಾಲೂಕು, ಬೆಳಗಾವಿ)
* ನಾಯಕ ಶಿವಬಸಯ್ಯ ಕುಲಕರ್ಣಿ, ೨೦ನೆಯ ರಾಷ್ಟ್ರೀಯ ರೈಫಲ್ಸ್ (ಚೊಳಚಗುಡ್ಡ ಗ್ರಾಮ, ಬಾದಾಮಿ, ಬಾಗಲಕೋಟ ಜಿಲ್ಲೆ)
* ಸಿದ್ಧರಾಮಪ್ಪ (ರೇಕುಳಿ ಗ್ರಾಮ, ಬೀದರ್ ಜಿಲ್ಲೆ)
* ಲ್ಯಾನ್ಸ್ ಹವಿಲ್ದಾರ್ ಮಲ್ಲಯ್ಯ ಚನ್ನಬಸಯ್ಯ ಮೇಗಳಮಠ (ಅಳವಂಡಿ ಗ್ರಾಮ, ಕೊಪ್ಪಳ ತಾಲ್ಲೂಕು, ಕೊಪ್ಪಳ ಜಿಲ್ಲೆ)
* ಎಸ್.ಕೆ.ಮೇದಪ್

#
#Salute2OurRealHeros
#July26
*-ಹನುಮಂತ. ಮ.ದೇಶಕುಲಕಣಿ೯*

ಗುರುವಾರ, ಜುಲೈ 21, 2016

ನಕ್ಕರದೇ ಆರೋಗ್ಯ! ನಗು ಆರೋಗ್ಯ ಪೂರ್ಣ ದಿವ್ಯ ಓಷಧಿ


ನಗೆಗಳಲ್ಲಿ ಮುಗುಳು ನಗೆ, ಮೆಲುನಗೆ, ಎಳೆನಗೆ,ತಣ್ನಗೆ,ಬಿಸುನಗೆ, ಹುಸಿನಗೆ,ಗಹಗಹಿ ನಗೆ, ಕಿರುನಗೆ,ನಲ್ನಗೆ, ನೇಹದನಗೆ ಮಂಗಜೇಷ್ಟೇ ನಗೆ, ಸ್ವೇಚ್ಛಾ ನಗೆ,ಉದ್ರಿಕ್ತ ನಗೆ, ತುಂಟನಗೆ ಸರಸ ನಗೆ, ಕುಲುಕುಲು ನಗೆ,ರಸ ನಗೆ ಬೇಕು ಇನ್ನೂ ಯಾವುದಾದರೈ ನಗು ಇದ್ದರೆ ತಿಳಿಸಿ.ಸಂತೋಷ ಉಂಟಾದಾಗಲೇ ಅಥವಾ ಹಾಸ್ಯವನ್ನು ಅರ್ಥ ಮಾಡಿಕೊಂಡಾಗಲೇ ನಾವು ನಗುತ್ತೇವೆ ಮಗು ಕೆಲವು ವಾರಗಳಲ್ಲೇ ನಗುವುದು ಕಲಿಯುತ್ತದೆ ಮಗು ತಾನು ನಗುವದರಿಂದ ಲಾಭವಿದೆ ಅದು ಯತ್ತಮ ಅಭ್ಯಾಸವೆಂದು ಅನ್ನಿಸಿ ನಗುವುವದನ್ನು ನೋಡಿ ಅರ್ಥ ಮಾಡಿಕೊಳ್ಳುತ್ತದೆ, ಇಪ್ಪತ್ತು ವಾರಗಳಾದಾಗ ಸಾಮಾನ್ಯವಾಗಿ ನಗುವುದು ಹೇಗೆಂಬುದನ್ನು ತಿಳಿಯುತ್ತದೆ.
ತದನಂತರ ನಗುವುದನ್ನು ಕಲಿತ ಮಗು ಬೆಳೆಯುತ್ತ ಹೋದಂತೆ ಯಾವಾಗ ನಗಬೇಕು ಯಾವಾಗ ನಗಬಾರದು ಎಂಬುದು ತಿಳಿಯುತ್ತದೆ.ಯಾರಾಸರು ನಮ್ಮ ಕೆಲಸವನ್ನು ಮೆಚ್ಚಿ ಶಹಭಾಷಾ ಎಂದರೆ ಆಗ ಇಂದು ರೀತಿಯ ನಗು ನಮ್ಮಲ್ಲೂ ಅವತಲ್ಲೂ ಹೊರಡುತ್ತದೆ ಇದನ್ನು ಮೆಚಿನಗೆ ಎನ್ನೌಣ. ಗೆಳೆಯನನ್ನು ಕಂಡು ಏನಯ್ಯಾ ನಿನ್ನ ಗಾಯನ ಕೇಲಿದೆ ಕತ್ತಿ ಕಿರಿಚಾಟದಂತಿತ್ತು ಎಂದರೆ ಒಂದು ರೀತಿ ನಗು ಹೊರ ಬರುತ್ತದೆ ಅದು ಚುಚ್ಚುನಗೆ.ಏನೂ ವಿಷಯವಿಲ್ಲದೆ ನಗುವ ಜನರು ಸಾಕಷ್ಟಿದ್ದಾರೆ ತಿಳಿದುನಗುವರಿದ್ದಾರೆ ತಿಳಿಯದೆ  ನಗುವವರು ಅನೇಕರು ಒಮ್ಮೊಮ್ಮೆ ಕೆಲವರು ನಗುವವರೊಡನೆ ನಕ್ಕು ಬಿಡುತ್ತಾರೆ ಕೆಲಹೊತ್ತಿನ ಮೇಲೆ ತಮ್ಮ ಮಂದ ಬುದ್ದಿಯಲ್ಲಿ ಪ್ರಾಕಾಶ ಬಿದ್ದು ನಕ್ಕು ಮಾತಿಗೆ ಕಾರನ ಹೊಳೆಯುತ್ತದೆ ಆಗ ಅವರಿಗೆ ಮತ್ತೊಮ್ಮೆ ನಗೆ ಕೊನೆಗೆ ಮೊದಲು ನಕ್ಕದ್ದುನ್ನು ನೆನೆದು ತಮ್ಮಷ್ಟಕ್ಕೆ ತಾನೇ ನಗುತ್ತಾರೆ. ಇನ್ನು ಕೆಲವರು ಮೇಲಿನ ಅಧಿಕಾರಿಗಳು ನಕ್ಕಾಗ ನಗುವುದುಂಟು ಇಂತಿಲ್ಲಿ ನಗಬಾರದಿದ್ದರೂ ನಗದಿದ್ದರೆ ಎಲ್ಲಿ ಏನು ಕಾದಿದೆಯೋ ಎಂದು ಪ್ರಯತ್ನ ಪೂರ್ವಕವಾಗಿ ಹಲ್ಲು ಕಿರಿದು ಬಲು ಕೆಟ್ಟದಾಗಿ ಕಾಣಿಸಿಕೊಳ್ಳುತ್ತಾರೆ ಇದು ಹುಸಿನಗು ಅವರನ್ನು ಬಲವಂತವಾಗಿ ನಗಿವಂತೆ ಮಾಡುವದೂ ಇಷ್ಟ ನಗುವವರ ಇಷ್ಟ ನಗುವುದು ಬಿಡುವದು ನಗಬೇಡಿ ಎಂದರೆ ನಗು ಪ್ರಸಂಗದಲ್ಲಿ ಜನ ಕೇಲಿಯಾರೆ ಹುಚ್ಚು ನಗೆಯಿಂದ ಕಿರಿಕಿರಿ.ಒಬ್ಬ ಕಾಳು ಜಾರಿ ಬಿದ್ದರೆ ನಗುವುವರು ಇದ್ದಾರೆ ಇನ್ನು ಮುಲ ಗಂಟಿಕ್ಕುಬಾಗ ಕೆಲಸ ಮಾಡುವ ಸ್ನಾಯುಗಳ ಸಂಖ್ಯೆ ಎಪ್ಪತ್ತೆರೆಡು ಆದರೆ ಸಿಡುಕಲು ನಾಲ್ವತ್ತ್ಮೂರು ಸ್ನಾಯುಗಳು ಸಹಕರಿಸಬೇಕಂತೆ ಆದರೆ ನಗಲು ಸ್ನಾಯುಗಳು ಕೆಲಸ ಮಾಡಬೇಕಾದ ಸಂಖ್ಯೆ ಇಪ್ಪತ್ತನಾಲ್ಕು ಸ್ನಾಯುಗಲು ಸಾಕು ನಗುವುದು ಇದ್ದು ಸುಲಭವಾಗಿರುವಾಗ ನಗಬಾರದೇಕೆ?
ವೈದ್ಯರು ಸಹ ಎಲ್ಲರನ್ನೂ ಹೆಚ್ಚಾಗಿನಗುತ್ತಾ ಇರಲು ಹೇಳುತ್ತಾರೆ ಇದು ನಗಿವಿನಿಂದಾ ಆರೋಗ್ಯ ಚನ್ನಾಗಿರುತ್ತದೆಂಬ ದೃಷ್ಟಿಯಿಂದ ಹೇಳಲಾದದ್ದು ನಗು ಕೇವಲ ಮಾನಸಿಕ ದುಗುಡನ್ನು ಕಲಚಿದೆ ಎಂಬಿದೇ ಅಲ್ಲದೇ ಇತಿಹಾಸಗಳನ್ನೇ ನಿರ್ಮಿಸಿದೆ.ಹೆಲನ್ ನಕ್ಕಳು —-ಟ್ರಾಯ್ ನಾಶ ದ್ರೌಪದಿ ನಕ್ಕಳು……. ಅಭಿಮಾನಧರನ ಅಭಿಮಾನವನ್ನೇ ಕೆಣಕಿ ಮಹಾಭಾರತ ಯುದ್ದವೆ ನಿರ್ವಾನವಾಯ್ತು ರಾವಣ ಹನಮಂತನನ್ನು ನೋಡಿ ಕಪಿ ಎಂದು ನಕ್ಕು ಲಂಕೆಯೇ ನಾಶವಾಯಿತು.ಹುಸಿ ಹಾಗೂ ತುಂಟ ನಗುವಿನಲ್ಲೇ ಅದೆಷ್ಟೌ ಸಾಮ್ರಾಜ್ಯಗಳು ಉರುಳಿ ಬಿದ್ದವು.ಬರೀ ನಗುವಿನಿಂದಲೇ ತಮ್ಮ ಸರ್ವವನ್ನೂ ಕಳೆದುಕೊಂಡು ತಿರುಕರಾಗಿ ನಗೆಪಾಟಲಾಗಿರುವವರೂ ಇದ್ದಾರೆ ಇದು ನಿಮಗೆ ತಿಲಿದರೆ ಸಾಕುನಗು ನಗುತ್ತಲೇ ಮಹತ್ತರ ಕೆಲಸವನ್ನು ಸಧಿಸಿರುವವರೂ ಇದ್ದಾರೆ ತನ್ನನ್ನು ತಾನೇ ಹೀಯಾಳಿಸಿಕೊಂಡು ನಕ್ಕು ನಗಿಸಿ ಸಾಕ್ರೆಟಿಸ್ ಮಹಾನ್ ತತ್ವಜ್ಞಾನಿಯಾದ ಇನ್ನೊಂದು ಕವಿಯ ಸಾಲುನಗುವ ಮಗುವಿನಂದವ
ಮನುಜನಾಗಿರುವದೇ ಪುಣ್ಯ ಫಲಮನುಜನಾಗಿರುವದೇ ಪುಣ್ಯಫಲಎಲ್ಲ ಕೂಡಿ ನೋವುಗಳಹಂಚಿಕೊಂಡು ಸುಖವ ಸವಿಯೋದೆನಗು ನಗುನಗುತ ತಮ್ಮ ದುಃಖ ಮರೆಯದೇ ಇದು ನಗು ನಮ್ಮ ಮನಸ್ಸಿನ ಉದ್ವೇಗ ದುಃಖ ದುಮ್ಮಾನಗಳನ್ನು ಶಮನಗೊಳಿಸಿ ಸಂತೋಷವನ್ನು ನೀಡುತ್ತದೆ. ಅದಕ್ಕೆ ಮುಖದ ಮೇಲೆ ಅರಳಿದ ನಗೆಗೆ ಸಮನಾದ ಸಂಪತ್ತು ಬೇರೊಂದಿಲ್ಲ ಎನ್ನಬಹುದು ನಗೆ ಜೀವನದಲ್ಲಿ ಆರೋಗ್ಯ ಪೂರ್ಣ ಮನಸ್ಸಿದ್ದವರಿಗೆ ಮಾತ್ರ ಲಭ್ಯ ಎನ್ನಬಹುದು.ಮನುಷ್ಯನಿಗೆ ಶಾಂತಿ ನಲಿದು ಮನಸ್ಸನ್ನು ಹಗುರ ಮಾಡಿಕೊಳ್ಳಬೇಕು. ನಗು ಒಂದು ಟಾನಿಕ್ ಇದ್ದ ಹಾಗೆ ಸಂತೋಷವನ್ನು ಇತರೊಂದಿಗೆ ಹಂಚಿಕೊಂಡಾಗ ಹೆಚ್ಚಾಗುತ್ತದೆ ಇದು ನಾಲ್ಕು ಜನರಲ್ಲಿ ಹಂಚಿಕೊಂಡು ಗಟ್ಟಿಯಾಗಿ ಮಗುವುದು ಆರೋಗ್ಯಕ್ಕೆ ತುಂಬ ಸಹಕಾರಿ ನಗುವದರಿಂದ ರಕ್ತದ ಒತ್ತಡ ಬಹಳಷ್ಟು ಕಡಿಮೆಯಾಗುವದು ಹಾಸ್ಯ ಪ್ರಜ್ಞೆ ಇರುವವರಲ್ಲಿ ಹಾಸಯಚನ್ನು ಹಂಚಿಕೊಂಡು ನಗುವದು ಅವಶ್ಯಕ ಇತಿಹಾಸ ಕಾಲದಲ್ಲಿ ರಾಜ ಆಸ್ಥಾನದಲ್ಲಿ ವಿದೂಷಕನಿಗೆ ವಿಶೇಷಸ್ಥಾನ ಮಾನವಿತ್ತು ಏಕೆಂದರೆ ಸದಾ ಗಂಬೀರವಾಗುವ ಸಭೆಯಲ್ಲಿ ಸೂಕ್ತವಾದ ಪದಗಳಿಂದ ಯಾರಿಗೂ ನೋವು ಆಗದಂತೆ ಯೋಗ ಘನತೆಗೂ ಚುತಿಯಾಗದಂತೆ ನಗುಸುವದೇ ವಿದೂಷಕನ ಕೆಲಸ ಅದು ಮಂತ್ರಾಲೊಚನೆಯ ಒತ್ತಡ ಮತ್ತು ಅಸಹಜತೆಯನ್ನು ವಿವಾರಿಸಿ ಇತ್ತಡಕ್ಕೆ ಅಲ್ಪ ವಿರಾಮ ಸಿಗುತ್ತಿತ್ತು. ಹಾಸ್ಯ ಪ್ರಜ್ಞೆ ಬೆಳೆಸಿಕೊಂಡು ನಗುವುದು ಆರೋಗ್ಯಕ್ಕೆ ತುಂಬಾ ಬಳೆಯದು ಮುಖ ಮನಸ್ಸಿನ ಕನ್ನಡಿಯಾದರೆ ನಗು ಅದರ ಮುನ್ನಡಿ ಬರಿ ಹಲ್ಲು ಮಾತ್ರ ಶುಭ್ರವಾಗಿದ್ದರೆ ಸಾಲದು ಹೃದಯ ಕೂಡ ಮನಸ್ಸು ಸ್ವಷವಾಗಿರಬೇಕಯ ನಗು ಆನಂದ ಸಂತೋಷಗಳನ್ನು ಸೂಚಿಸಲು ತುಟಿಗಳನ್ನು ಕೊಂಕಿಸು ಅಥವಾ ತೆರೆ ಹಾಸಬೀರು ಎಂದಾಗುತ್ತದೆ ನಗೆ ಗೇಡು ಎಂದರೆ ಹಾಸ್ಸಾಸ್ಪದವಾಗುವಿಕೆ ನಗೆಪಾಟಲುನಗೆಯು ಎಲ್ಲಿಗೂ ಸುಖವನ್ನು ನೀಡುವಂತಹದು ಮಂಗಲಮಯವಾದದು ಮತ್ತು ಲಕ್ಷ್ಮೀ ಸೂಚಕವಾದದು ಹೆಚ್ಚಿನದಾದದು ಇಲ್ಲವೇ ನಗಿರಿ  ಇತರರನ್ನು ನಗಿಸಿ ಆರೋಗ್ಯ ಒಳ್ಳೆಯದು.ನಗೆ ಸಂತೋಷದ ಸಂಕೇತಸಹಜವಾದ ನಗುಹಾಸ್ಯ ವಿನೋದಗಳಿಂದ ಬರುತ್ತದೆ ನಗುತಾ ನಗುತಾ ಮಾತನಾಡಬೇಕು ಬಕ್ಕರೆ ಅದು ಸ್ವರ್ಗ ನಗುವದೇ ಸ್ವರ್ಗ ಅಳುವದೇ ನರಕ ನಾಣ್ಣುಡಿಗಳು ಮಗುವಿನ ಮಹತ್ವ ಹೇಳುತ್ತವೆ ನಗಬೇಕಲ್ಲ ಎಂಬ ಹೊಟ್ಟೆಕಿಚ್ಚಿಗೆ ನಗುದು ಒಣನಗು ಆದರೆ ಭಾರಿ ನಗು ಅಟ್ಟಹಾಸ ತುಟಿ ಅಂಚಿನಲ್ಲೇ ಮಗಿವುದು ಕಿರುನಗು ಭಾವನೆಯೇ ಇಲ್ಲದೆ ನಗುವುದು ಒಣನಗುನಗು ಮಿತ್ರರನ್ನು ಮಾಡಿಕೊಟ್ಟರೆ ನೆಟ್ಟು ಮಿತ್ರರನ್ನು ದೂರಮಾಡುತ್ತದೆ ನಗು ದೇಹಕ್ಕೂ ಮನಸ್ಸಿಗೂ ಒಳ್ಳೆಯದು
ಎಲ್ಲರ ಜೀವನದಲ್ಲೂ ಫಿಟ್‌ನೆಸ್ ಬಹಳ ಮುಖ್ಯವಾದ ಅ೦ಶ. ನೀವು ಉದ್ಯೋಗದಲ್ಲಿದ್ದರೂ, ಇಲ್ಲದಿದ್ದರೂ ನಿಮ್ಮ ಜೀವನದಲ್ಲಿ ನಿರ೦ತರವಾದ ಒತ್ತಡಗಳಿದ್ದು, ನಿಮ್ಮ ಲುಕ್ ನ ಮೇಲೆಯೂ ಅದು ಪರಿಣಾಮ ಬೀರಿ ಹೆಚ್ಚು ವಯಸ್ಸಾದವರ೦ತೆ ಕಾಣುವಿರಿ.ಸೌ೦ದರ್ಯ ಎ೦ದರೆ ಕೇವಲ ನಿಮ್ಮ ಲುಕ್ ಅಷ್ಟೇ ಅಲ್ಲ, ನಿಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವೂ ಇಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊ೦ದಿದೆ ಹಾಗೂ ನಿಮ್ಮ ಆರೋಗ್ಯಕ್ಕೆ ಉತ್ತಮವಾದ ಮದ್ದು ನಗುವ ಯೋಗ.ಈ ವಿಶೇಷವಾದ ವ್ಯಾಯಾಮದಲ್ಲಿ ನಿಮ್ಮ ಎ೦ಡೋರ್ಫಿನ್ ಹಾಗೂ ನೈಸರ್ಗಿಕ ಓಪಿಯೇಟ್‌ಗಳ ಉತ್ಪಾದನೆಯನ್ನು ಉತ್ತೇಜನಗೊಳಿಸುತ್ತವೆ, ಇವುಗಳಿ೦ದ ನಿಮಗೆ ರಿಲಾಕ್ಸೇಶನ್ ಸಿಗುತ್ತವೆ. ಇದು ಒತ್ತಡವನ್ನು ಕಡಿತಗೊಳಿಸಿ ದೈಹಿಕ ಲಕ್ಷಣಗಳಾದ ಚಿ೦ತೆ ಮತ್ತು ಆತ೦ಕಗಳನ್ನು ನಿವಾರಿಸುತ್ತದೆ. ನಗುವ ಯೋಗ ನಿಮ್ಮ ಸ್ನಾಯುಗಳಲ್ಲಿರುವ ಟೆನ್ಷನ್ ನಿವಾರಿಸುತ್ತದೆ ಹಾಗೂ ಪ್ರಶಾ೦ತತೆಯನ್ನು ಒದಗಿಸುತ್ತದೆ. ಕೆಲವು ಥೆರಪಿಸ್ಟ್‌ಗಳು ಹೇಳಿರುವ೦ತೆ ಒ೦ದು ನಿಮಿಷದ ನಗು 45 ನಿಮಿಷಗಳ ರಿಲಾಕ್ಸೇಶನ್ ಗೆ ಸಮಾನವಾಗಿದೆ.ನಗುವ ಯೋಗ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು. ಇದು ಶ್ವಾಸಕೋಶದಲ್ಲಿ ತಾಜಾ ಗಾಳಿಯನ್ನು ಆಡಿಸುತ್ತದೆ. ಹಾಗೆಯೇ ರಕ್ತ ಸ೦ಚಲನೆಯನ್ನು ಹೆಚ್ಚಿಸುತ್ತದೆ. ಈ ವ್ಯಾಯಾಮ ನಿಮ್ಮ ದೇಹ ಹಾಗೂ ಮನಸ್ಸಿಗೆ ಮಾಡುವ ಮಸಾಜಿನ ಹಾಗೆ, ದೇಹದಲ್ಲಿ ಇರುವ ವಿಷಾಣುಗಳನ್ನು ಹಾಗೂ ಅನಗತ್ಯವಾದ ವಸ್ತುಗಳನ್ನು ಶುಚಿಗೊಳಿಸುತ್ತದೆ. ಇದು ನಿಮ್ಮ ಆರೋಗ್ಯ ಹಾಗೂ ಸ೦ತೋಷವನ್ನು ವೃದ್ಧಿಸುತ್ತದೆ.ನಗು ಇನ್ಸೋಮಿಯ, ಖಿನ್ನತೆ, ಹೃದಯ ಕಾಯಿಲೆ, ಸುಸ್ತು ಮು೦ತಾದವುಗಳನ್ನು ಕಡಿಮೆ ಮಾಡುತ್ತವೆ ಹಾಗೂ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎಲ್ಲಾ ಅ೦ಶಗಳಿ೦ದ ನಿಮ್ಮ ಸೌ೦ದರ್ಯ ಹೆಚ್ಚುತ್ತದೆ. ಇದು ಸ್ಟ್ರೆಸ್ ಬಸ್ಟರ್ ಆಗಿ ಕೆಲಸ ನಿರ್ವಹಿಸುತ್ತಾ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊ೦ಡು ಬರುತ್ತವೆ.ನಗುವ ಯೋಗ ವಯಸ್ಸು ನಿರೋಧಕವಾಗಿದೆ :ನಗು ನಿಮ್ಮ ದೇಹದಲ್ಲಿ ರಕ್ತ ಸ೦ಚಲನೆಯನ್ನು ಹೆಚ್ಚಿಸಿ ಮುಖಕ್ಕೆ ರಕ್ತವನ್ನು ಸ೦ಚಲಿಸುವಂತೆ ಮಾಡುತ್ತದೆ. ಇದು ಚರ್ಮವನ್ನು ಪೋಷಿಸಿ ಯೌವ್ವನವಾಗಿ ಕಾಣುವ೦ತೆ ಮಾಡುತ್ತದೆ. ಜೊತೆಗೆ, ಫೇಶಿಯಲ್ ಸ್ನಾಯುಗಳನ್ನು ಟೋನ್ ಮಾಡುತ್ತವೆ.ನಗುವ ಯೋಗಕ್ಕೆ ನಕರಾತ್ಮಕ ಅನುಭವಗಳಾದ ಒತ್ತಡ, ಚಿ೦ತೆ, ಆತ೦ಕವನ್ನು ದೂರ ಮಾಡುವ ಸಾಮರ್ಥ್ಯವಿದೆ. ಇದು ತಮ್ಮ ಬಗ್ಗೆ ಒಳ್ಳೆಯ ಭಾವನೆಯನ್ನು ಉ೦ಟು ಮಾಡುತ್ತದೆ. ಸಂತೋಷ ಹಾಗೂ ಆನ೦ದವನ್ನು ನೀಡುವ ಈ ವ್ಯಾಯಾಮವನ್ನು ಮಾಡಲು ಹೆಚ್ಚು ಪರಿಶ್ರಮ ಪಡುವ ಅಗತ್ಯವಿಲ್ಲ. ಕೆಲವೇ ನಿಮಿಷಗಳ ನಗುವ ಯೋಗ ಬೆಳಿಗ್ಗೆ ಮಾಡಿದರೆ ಸ೦ಪೂರ್ಣವಾಗಿ ತಾಜಾತನವನ್ನು ಹೊ೦ದಿ, ದಿನದುದ್ದಕ್ಕೂ ಚೈತನ್ಯವನ್ನು ಹೊ೦ದಬಹುದು. ನಗುವ ವ್ಯಾಯಾಮದ ಸ೦ದರ್ಭದಲ್ಲಿ ಸಪ್ಲೈ ಆಗುವ ಅಮ್ಲಜನಕ ನಿಮ್ಮ ದೇಹ ಮತ್ತು ಮೆದುಳಿಗೆ ಒಳ್ಳೆಯದು.
ನಗುವಿಗೂ ಆರೋಗ್ಯಕ್ಕೂ ಬಲವಾದ ಸಂಬಂಧವಿದೆ ಎಂಬುದು ಸುಸ್ಪಷ್ಟ. ಆರೋಗ್ಯಕರ, ನೆಮ್ಮದಿಯುತ ಬದುಕಿಗಾಗಿ 'ನಗು' ವನ್ನು ನಿಮ್ಮದಾಗಿಸಿಕೊಳ್ಳಿ. ಕ್ಯಾಲಿಫೋರ್ನಿಯಾದಲ್ಲಿ ನಡೆದ 30 ವರ್ಷಗಳಷ್ಟು ದೀರ್ಘ ಅಧ್ಯಯನವೊಂದು ವಿದ್ಯಾರ್ಥಿಗಳ ಹಳೆಯ 'ಇಯರ್ ಬುಕ್'ನಿಂದ ಅವರ ಮುಖದ ಮೇಲಿನ ನಗುವನ್ನು ಅಭ್ಯಸಿಸಿ, ಅವರ ವೈವಾಹಿಕ ಜೀವನದ ಗುಣಮಟ್ಟವನ್ನು ನಿರ್ಧರಿಸಿದೆ! 2010ರಲ್ಲಿ ವೆಯ್ನ್ ವಿಶ್ವವಿದ್ಯಾಲಯ ಇಂಥದ್ದೇ ಇನ್ನೊಂದು ಅಧ್ಯಯನ ನಡೆಸಿತು. 1950ರ ಬೇಸ್ಬಾಲ್ ಆಟಗಾರರ ಛಾಯಾಚಿತ್ರದ ಕಾರ್ಡ್ ನೋಡಿ ಅವರ ಆಯುಷ್ಯ ಅಳೆಯಲಾಯಿತು! ನಿರೀಕ್ಷಿತ ಊಹೆಯಂತೆ ನಗದೆ ಗಂಭೀರವಾಗಿದ್ದವರು 72.9 ವರ್ಷ ಜೀವಿಸಿದರೆ, ಹಲ್ಲು ಕಿರಿದು ಫೋಸ್ ನೀಡಿದ್ದವರು 80 ವರ್ಷಗಳಷ್ಟು ಜೀವಿಸಿದ್ದರು. ಈಗ ಲಭ್ಯವಿರುವ 3D ಅಲ್ಟ್ರಾಸೌಂಡ್ ಪರೀಕ್ಷೆಯಿಂದಾಗಿ, ಇನ್ನೂ ಭ್ರೂಣಾವಸ್ಥೆಯಲ್ಲಿಯೇ ಮಗು ನಗುತ್ತದೆ ಎಂಬುದು ಸ್ಪಷ್ಟವಾಗಿದೆ. ಅಂಧ ಶಿಶುಗಳೂ ಸಹ ಮನುಷ್ಯರ ಧ್ವನಿಗೆ ನಗುವಿನ ಮೂಲಕ ಸ್ಪಂದಿಸುತ್ತವೆ. ಅಂತೂ 'ನಗು' ಎನ್ನುವುದು ಮೂಲಭೂತವಾದ ಎಲ್ಲಾ ಮನುಷ್ಯರಲ್ಲಿಯೂ ಇರುವ ಒಂದು ಜೈವಿಕವಾದ ಭಾವನೆ, ಸಂವಹನಾ ವಿಧಾನ ಎನ್ನಬಹುದು. ಮಕ್ಕಳು ದಿನಕ್ಕೆ ಸುಮಾರು 400 ಬಾರಿ ನಕ್ಕರೆ, ನಾವು, ದೊಡ್ಡವರು ಸುಮಾರು 20 ಬಾರಿ ನಗುತ್ತೇವೆ. ಸ್ವೀಡನ್ನಲ್ಲಿ ನಡೆದ ಒಂದು ಅಧ್ಯಯನ ಏನು ಹೇಳಿತು ಗೊತ್ತೆ? ನಗುವ ಇನ್ನೊಬ್ಬರ ಮುಖ ನೋಡಿದಾಗ ಉಳಿದವರು ಹುಬ್ಬುಗಂಟಿಕ್ಕುವುದು ಕಷ್ಟ ಅಂತ! ಅಂದರೆ ನಗುವುದು ಸಾಂಕ್ರಾಮಿಕ. ನಗು ನಮ್ಮ ಮುಖದ ಸ್ನಾಯುಗಳ ಮೇಲಿನ ನಿಯಂತ್ರಣವನ್ನು ಸಡಿಲಗೊಳಿಸುತ್ತದೆ. ಇದು ಸಾಮಾನ್ಯವಾಗಿ ಯೋಚಿಸಿರದಿದ್ದರೂ, ಎಲ್ಲರಿಗೂ ಗೊತ್ತಿರುವ, ಅನುಭವಿಸಿರುವ ಅಂಶವೇ. ಆದರೆ ನಗು ಮಿದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಜೀವ ಮೂಲವನ್ನು ಮೊದಲು ಪ್ರತಿಪಾದಿಸಿದ ನಮಗೆಲ್ಲರಿಗೂ ಚಿರಪರಿಚಿತನಾದ ಚಾರ್ಲ್ಸ್ ಡಾರ್ವಿನ್ 'ಫೇಶಿಯಲ್ ಫೀಡ್ಬ್ಯಾಕ್ ರೆಸ್ಪಾನ್ಸ್' ಸಿದ್ಧಾಂತವನ್ನು ಮಂಡಿಸಿದ. ಅಂದರೆ ನಾವು ನಕ್ಕಾಗ ಅದು ಮಿದುಳಿನಲ್ಲಿ ನರವ್ಯೂಹಗಳಲ್ಲಿ ಭಾವನಾತ್ಮಕ ಸುಖಾನುಭವವನ್ನು ಉಂಟು ಮಾಡುತ್ತದೆ. ಅಂದರೆ ಒಂದು ನಗು ನಮ್ಮ ಮಿದುಳಿಗೆ ಸುಮಾರು 2000 ಚಾಕಲೇಟ್ಬಾರ್ ತಿಂದಾಗ ಉಂಟಾಗುವಷ್ಟು ಪ್ರಚೋದನೆ, ಸಂತೋಷ ನೀಡಬಲ್ಲುದು! ಆದರೆ ಚಾಕಲೇಟ್ ತಿಂದರೆ ಆರೋಗ್ಯ ಹಾಳಾಗಬಹುದು, ನಕ್ಕರೆ ಅದು ಆರೋಗ್ಯ ವರ್ಧಕವಾಗಬಲ್ಲದು. ಒತ್ತಡಕ್ಕೆ ಕಾರಣವಾಗುವ ಕಾರ್ಟಿಸಾಲ್, ಆಡ್ರಿನಾಲಿನ್ ಮತ್ತು ಡೋಪಮೀನ್ಗಳನ್ನು ತಗ್ಗಿಸಿ, ನೋವನ್ನು ಕಡಿಮೆ ಮಾಡುವ, ಮನಸ್ಸನ್ನು ಉಲ್ಲಾಸಗೊಳಿಸುವ ಎಂಡಾರ್ಫಿನ್ಗಳನ್ನು ನಗು ಹೆಚ್ಚು ಮಾಡುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ನಾವು ನಗುವಾಗ ಬಾಯಿಯ ಜೊಲ್ಲಿನಲ್ಲಿ ಸ್ರವಿಸುವ 'ಸೈಲೈವರಿ ಇಮ್ಯುನೋಗ್ಲೊಬ್ಯುಲಿನ್' S-IgA ನಮ್ಮ ದಿನನಿತ್ಯದ ಒತ್ತಡಗಳಿಗೆ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಾವು ದೊಡ್ಡವರು, ಆರೋಗ್ಯಕ್ಕೆ 'ನಗು' ಎಷ್ಟೇ ಒಳ್ಳೆಯದೆಂದು ಹೇಳಿದರೂ ಮಕ್ಕಳಷ್ಟು ನಗುವುದಿಲ್ಲವಷ್ಟೆ. 'ನೀವು ಯಾವಾಗ ನಗುತ್ತೀರಿ?' ಎಂಬ ಪ್ರಶ್ನೆಗೆ ಹೆಚ್ಚಿನವರು ಹೇಳುವ ಉತ್ತರ 'ಕಾಮಿಡಿ ನೋಡಿದಾಗ', 'ಜೋಕ್ಸ್ ಓದಿದಾಗ' ಎಂದೇ. ಆದರೆ ಹೆಚ್ಚಿನವರು ನಗುವುದು ಯಾವಾಗ? ಬೇರೆಯವರ ಜೊತೆಯಲ್ಲಿ! ಹೀಗೆ ಬೇರೆಯವರ ಜೊತೆಗೆ ನಗುವಾಗ ನಾವು ನಗುವುದು ಕೇವಲ 'ಜೋಕ್'ಗಲ್ಲ. ಬದಲಾಗಿ ನಗುವುದು 'ನಮಗೆ ಅರ್ಥವಾಗಿದೆ'. 'ನಮಗೆ ಒಪ್ಪಿಗೆಯಿದೆ', 'ನಾನು ನಿಮ್ಮನ್ನು ಇಷ್ಟಪಡುತ್ತೇನೆ, ನಾನು ನಿಮ್ಮದೇ ಗುಂಪು' ಈ ಎಲ್ಲವನ್ನೂ ಸಂವಹಿಸುತ್ತದೆ. ಅಂದರೆ ಸಾಮಾಜಿಕವಾಗಿ ಮಾತು ನೇರವಾಗಿ ಮಾಡಲಾಗದ ಎಷ್ಟೋ ಭಾವನೆಗಳ ಸಂವಹನವನ್ನು ನಗು ಸಾಧ್ಯವಾಗಿಸುತ್ತದೆ. ಮನೋವಿಜ್ಞಾನ ಎರಡು ವಿಧದ 'ನಗು'ಗಳ ಬಗ್ಗೆ ವಿವರಿಸುತ್ತದೆ. ಒಂದು ಸಾಂದರ್ಭಿಕವಾಗಿ ನಾವು ರೂಢಿಸಿಕೊಂಡಿರುವ ಸ್ವಯಂನಿಯಂತ್ರಿತ ನಗು- Voluntary laughter. ನಿಜವಾಗಿ ಸಂತೋಷವಾದಾಗ, ಕಚಗುಳಿ ಇಟ್ಟಾಗ, ಇದ್ದಕ್ಕಿದ್ದಂತೆ ನಾವು 'ಜೋಕ್' ಕೇಳಿದಾಗ ನಗುವುದು 'involuntary' ಅಥವಾ ನಿಜವಾದ (real) ನಗು. ಈ ಎರಡನ್ನೂ ಮಿದುಳು ಗ್ರಹಿಸುವ, ಶಬ್ದವನ್ನು ಹೊರಹಾಕುವ ರೀತಿ ಬೇರೆ ಬೇರೆಯೇ. ಕುತೂಹಲಕಾರಿ ವಿಷಯವೆಂದರೆ, ಈ 'ನಿಜ'ವಾದ ನಗುವನ್ನು, ಇನ್ನೊಂದು ನಗುವನ್ನು ಸರಿಯಾಗಿ ಬೇರೆಯಾಗಿ ಗುರುತಿಸುವ ಸಾಮರ್ಥ್ಯ ಬರುವುದು 30 ವರ್ಷ ದಾಟಿದ ಮೇಲೆಯೇ ಎಂಬುದನ್ನೂ ವಿಜ್ಞಾನಿಗಳು ಸಂಶೋಧನೆಗಳಿಂದ ಕಂಡುಹಿಡಿದಿದ್ದಾರೆ. ಹಾಗೆಯೇ ವಯಸ್ಸು ಹೆಚ್ಚಿದಂತೆ, ನಗುವಿನ ಸಾಂಕ್ರಾಮಿಕತೆಯೂ ಮನುಷ್ಯರಲ್ಲಿ ಕಡಿಮೆಯಾಗುತ್ತಾ ಸಾಗುತ್ತದೆ. ಮಕ್ಕಳ ಗುಂಪಿನಲ್ಲಿ ನಗು ಇದ್ದಷ್ಟು, ಹದಿಹರೆಯದವರಲ್ಲಿರಲಾರದು, ಹದಿಹರೆಯದ ಗುಂಪುಗಳಲ್ಲಿ 'ನಗು' ಕಂಡಷ್ಟು, ವಯಸ್ಕರ ಗುಂಪಿನಲ್ಲಿ ಕಾಣಲಾರದು. ಮನೋವಿಜ್ಞಾನದ ಈ ಎರಡು ಅಂಶಗಳು ಸಾಮಾಜಿಕವಾಗಿ, ಸಂಬಂಧಗಳ ದೃಷ್ಟಿಯಿಂದ ಮುಖ್ಯ ಎನಿಸುತ್ತದೆ. ಮಕ್ಕಳಂತೆ ಮುಕ್ತವಾಗಿ, ಇತರರೊಂದಿಗೆ ಬೆರೆತು ನಗುವುದು, ಬೇರೆಯವರ ಮುಖದಲ್ಲಿ ನಗೆ ಕಂಡಾಕ್ಷಣ ನಮ್ಮ ಮುಖದಲ್ಲಿಯೂ ನಗು ಮೂಡುವುದು ಸಂಬಂಧಗಳ ಸಮಸ್ಯೆಗಳಲ್ಲಿ ತುಂಬಾ ಉಪಯುಕ್ತವಾಗುತ್ತದೆ. ನಗು ರಕ್ತದೊತ್ತಡ ಕಡಿಮೆ ಮಾಡುತ್ತದೆ, ನೋವನ್ನು ಶಮನಗೊಳಿಸುತ್ತದೆ, ನೆನಪಿನ ಶಕ್ತಿ ಹೆಚ್ಚಿಸುತ್ತದೆ ಇತ್ಯಾದಿ ಇತ್ಯಾದಿ. ವಿಜ್ಞಾನವೂ ಹೇಳುತ್ತದೆ 'Laughter is the best medicine' ಅಂತ. ಹಾಗಿದ್ದರೆ 'ನಗುವಿನ ಥೆರಪಿ'ಯನ್ನೇ ಮಾಡಿದರೆ? 'Laughter therapy'-ನಗುವಿನ ಚಿಕಿತ್ಸೆ ಹಾಸ್ಯದ ಕ್ಲಬ್-Humour club ಗಳು ಅಲ್ಲಲ್ಲಿ ಕಾಣುತ್ತವೆ. ನಗುವಿನ ಬಗ್ಗೆ ಸಂಶೋಧನೆಗಳ ಸರಣಿಯನ್ನೇ ಮಾಡಿರುವ ನಗುವಿನ ವಿಜ್ಞಾನಿ ರಾಬರ್ಟ್ ಪ್ರಾವಿನ್ ಹೇಳುವ ಪ್ರಕಾರ ಇಂಥ ನಗುವಿನ ಥೆರಪಿಯ ಬಗೆಗೆ ಅಧ್ಯಯನಗಳಿನ್ನೂ ನಡೆಯಬೇಕಿದೆ. ರಾಬರ್ಟ್ ಪ್ರಾವಿನ್ ಹೇಳುವಂತೆ ನಗು ಒಂದು ಸಾಮಾಜಿಕವಾದ ಭಾವನೆ. ಅತ್ಮೀಯರೊಂದಿಗೆ, ಕುಟುಂಬದವರೊಂದಿಗೆ ನಗುವನ್ನು ಹಂಚಿಕೊಂಡರೆ, ನಕ್ಕರೆ ಆರೋಗ್ಯಕ್ಕೆ ಉಪಯೋಗವಾಗದಿದ್ದೀತೆ? ಅಷ್ಟೇ ಅಲ್ಲ, ನಮಗೆ ನಗುವುದರಿಂದ ಸಂತಸವಾದರೆ, ಅದು ನಮ್ಮ ಜೀವನದ ಗುಣಮಟ್ಟ ಹೆಚ್ಚಿಸುವುದಾದರೆ ನಾವು ನಗುವುದಕ್ಕೆ ಅಷ್ಟು ಕಾರಣ ಸಾಲದೆ? ನಗಲು ಬೇರೆ ಔಷಧಿಗಳಂತೆ ಡಾಕ್ಟರ ಪ್ರಿಸ್ಕ್ರಿಪ್ಷನ್ನೇ ಬೇಕೆ?! ಮನೋವೈದ್ಯಕೀಯವಾಗಿಯೂ ಮಾನಸಿಕ ಒತ್ತಡವನ್ನು ನಿರ್ವಹಿಸಲು 'ಹಾಸ್ಯ' 'ನಗು'ವನ್ನು ಒಂದು ಕೌಶಲವಾಗಿಯೇ ಪರಿಗಣಿಸಲಾಗುತ್ತದೆ. ಮಿದುಳಿನ ಪ್ರಚೋದನೆಯನ್ನು ಹಿಂಸಾತ್ಮಕವಾಗಿ ಹೊರಹೊಮ್ಮಬಹುದಾದ ಹಾಸ್ಯದ ಮೂಲಕ ತಿರುಗಿಸುವಲ್ಲಿ, ಒತ್ತಡವನ್ನು ಬಿಡುಗಡೆಗೊಳಿಸುವಲ್ಲಿ, ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಹಾಸ್ಯ ಒಂದು ಉತ್ತಮ ತಂತ್ರ ಎನಿಸುತ್ತದೆ. ರೋಗಿಗಳ ಜೊತೆಯಲ್ಲಿ ವ್ಯವಹರಿಸುವಾಗಲೂ, ಅವರ ಮನಸ್ಸಿನ ಭಾವನೆಗಳನ್ನು ಹೊರಹಾಕುವಾಗಲೂ 'ಹಾಸ್ಯ' ಕೆಲವೊಮ್ಮೆ ಸಹಾಯಕ ಎನಿಸುತ್ತದೆ. ನಗುವಿಗೂ ಆರೋಗ್ಯಕ್ಕೂ ಬಲವಾದ ಸಂಬಂಧವಿದೆ ಎಂಬುದು ಸುಸ್ಪಷ್ಟ. ಆರೋಗ್ಯಕರ, ನೆಮ್ಮದಿಯುತ ಬದುಕಿಗಾಗಿ 'ನಗು'ವನ್ನು ನಿಮ್ಮದಾಗಿಸಿಕೊಳ್ಳಿ. ನಗು ನಿಮ್ಮ ಕೆಲಸ ಮಾಡಿಕೊಡದಿರಬಹುದು, ಆದರೆ ನಿಮ್ಮ ಒತ್ತಡ ಕಡಿಮೆ ಮಾಡಿ, ನೀವು ಹೆಚ್ಚು ಕ್ಷಮತೆಯಿಂದ ಸಮಸ್ಯೆ ಬಿಡಿಸುವಂತೆ ಮಾಡುತ್ತದೆ. 10-15 ನಿಮಿಷಗಳಷ್ಟು ಪ್ರತಿನಿತ್ಯ ವಿವಿಧ ಕಾರಣಗಳಿಗಾಗಿ ನಗುವುದು 5 ನಿಮಿಷಗಳ ಏರೋಬಿಕ್ ವ್ಯಾಯಾಮಕ್ಕೆ ಸಮ! ಇನ್ನೊಬ್ಬರು ನಕ್ಕಾಗ ಅದನ್ನು ಅಲಕ್ಷಿಸುವುದು, ನೀವು ನಕ್ಕು ಪ್ರತಿಸ್ಪಂದಿಸದಿರುವುದು, ಬೇರೆಯವರಿಗೆ ಬೇಸರ ತರುತ್ತದೆಯೋ ಇಲ್ಲವೋ, ಆದರೆ ನಿಮ್ಮ ಆರೋಗ್ಯಕ್ಕೆ ನಷ್ಟವನ್ನೇ ಉಂಟುಮಾಡುತ್ತದೆ. ಹಾಗೆಯೇ ಬೇರೆಯವರನ್ನು ಗೇಲಿ ಮಾಡಿ ನಗುವುದು, ವ್ಯಂಗ್ಯ ನಗೆ ಇವುಗಳು ಅವುಗಳ ಜೊತೆಗಿರುವ ನಕಾರಾತ್ಮಕ ಭಾವನೆಗಳಿಂದ ನಿಜವಾದ 'ನಗು' ಎನಿಸುವುದಿಲ್ಲ. ಹಾಗಾಗಿ ಅವುಗಳಿಂದ ಹಾಗೆ 'ನಗು'ವವರ ಆರೋಗ್ಯಕ್ಕೂ ಹಾನಿಯೇ. ಉದ್ಯೋಗಗಳಲ್ಲಿ, ಸಹೋದ್ಯೋಗಿಗಳ ಜೊತೆ, ದಾಂಪತ್ಯದಲ್ಲಿ ಹಾಸ್ಯ ಹೊಂದಾಣಿಕೆಯನ್ನು ಸುಲಭ ಮಾಡುತ್ತದೆ. ಇದು ಬಲವಾಗಿ ಸಂಶೋಧನೆಗಳಿಂದ ದೃಢಪಟ್ಟಿರುವ ಅಂಶ. ನಿಮ್ಮನ್ನು ನೀವೇ ಹಾಸ್ಯ ಮಾಡಿಕೊಂಡು ನಗುವ ಕೌಶಲವನ್ನು ಪ್ರಯತ್ನ ಪೂರ್ವಕವಾಗಿಯಾದರೂ ರೂಢಿಸಿಕೊಳ್ಳಿ. ಇದು ಹಲವು ಸಂದರ್ಭಗಳಲ್ಲಿ ಉಪಯುಕ್ತವಾಗಬಲ್ಲದು. ನೆನಪಿಡಿ 'ನಕ್ಕರದೇ ಸ್ವರ್ಗ'ದಂತೆ 'ನಕ್ಕರದೇ ಆರೋಗ್ಯ Show NavigationHide Navigationಮುಖಪುಟಪಿಸುಮಾತುಸ್ನೇಹಲೋಕಚರ್ಚಾಕೂಟಸಮಾಚಾರವಿಮರ್ಶೆಕವನಇತರೆಹಾಸ್ಯಚಿತ್ರಶಾಲೆಢಂಗುರ
You are here
ಮುಖಪುಟ » ನಗಿ, ನಕ್ಕು ಸುಖವಾಗಿರಿ ;)
ನಗಿ, ನಕ್ಕು ಸುಖವಾಗಿರಿ ;)
 By ಉಮಾಶಂಕರ ಬಿ.ಎಸ್ 24 / Jan / 2010ನಗುವು ನಮ್ಮ ಕಿವಿಗೆ ಕೇಳುವ ಭಾವನೆಯ ವ್ಯಕ್ತರೂಪ. ಅತೀವ ಸಂತೋಷವುಂಟಾದರೆ ಮನದಲ್ಲಿ ಆನಂದದ ಭಾವನೆಗಳು ಉಕ್ಕಿದರೆ-ನಗು ಮುಖದ ಮೇಲೆ ಧ್ವನಿಯೊಂದಿಗೆ ಪ್ರಕಟಗೊಳ್ಳುತ್ತದೆ. ಇದು ಜೀವನಕ್ಕೆ ಸ್ಪಂದಿಸುವ ಬಹುಮುಖ್ಯ ಲಕ್ಷಣ. ಒಮ್ಮೊಮ್ಮೆಯಂತೂ ಆನಂದಬಾಷ್ಪಗಳು ಉದುರುತ್ತವೆ. ಸ್ನಾಯುಗಳಿಗೂ ನೋವು ತರಬಲ್ಲದು. ಅದು ಸಂತೋಷದಿಂದ ಉಂಟಾದ ಸಂವೇದನೆ.  ನಗೆಯಲ್ಲಿ ಹಲವಾರು ಬಗೆಗಳಿವೆ. ದೇಶಾವರಿ ನಗು, ಬೂಟಾಟಿಕೆಯ ನಗು, ಕಳ್ಳನಗು, ಇವೆಲ್ಲವೂ ಇನ್ನೊಬ್ಬರನ್ನು ಪ್ರಸನ್ನಗೊಳಿಸಲು ತಂದುಕೊಂಡ ನಗು. ಆದರೆ ಸಹಜವಾದ ನಗೆ ಎಂದರೆ ಅದು ಮಮಕಾರವನ್ನು ಬಿಟ್ಟ ನಗು. ಮನಸ್ಸಿನ ಪ್ರಸನ್ನತೆಯಿಂದ ಬಂದ ನಗು. ಅಂತಃಕರಣ ಸ್ಪಂದಿಸಿದಾಗ ಹುಟ್ಟಿದ ನಗು. ಹೀಗೆ ನಗುವುದು ಜೀವನದ ಧರ್ಮ. ‘ನಕ್ಕರೆ ಅದೇ ಸ್ವರ್ಗ’ಎಂಬ ಮಾತೊಂದಿದೆ. ನಗುವಿನಿಂದ ಮಾನಸಿಕ ನೆಮ್ಮದಿ-ಶಾಂತಿ ದೊರೆಯುವುದು. ಇದರಿಂದ ಸ್ವಾಯತ್ತ ನರಮಂಡಲದ ಸಂವೇದಕ ಹಾಗೂ ಅನುಸಂವೇದಕ ನರಗಳಲ್ಲಿ ಸಮತೋಲನ ಉಂಟಾಗಿ ಮನಸ್ಸಿಗೆ ನಿರಾಳತೆ ಉಂಟಾಗುತ್ತದೆ. ‘ಅಡ್ರಿನಾಲಿನ್’ನಂತಹ ಉದ್ವೇಗಕಾರಕ ರಸದೂತವು ಕಡಿಮೆಗೊಳ್ಳುತ್ತದೆ. ರಕ್ತನಾಳಗಳು ಹಿಗ್ಗಿ ರಕ್ತ ಪ್ರವಾಹವು ಹೆಚ್ಚಾಗುತ್ತದೆ. ಪ್ರಸಿದ್ಧ ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡಾ ಹೇಳುವಂತೆ ಇದು (ನಗು) ಮನೋ ಒತ್ತಡದಿಂದ ಮುಕ್ತಗೊಳಿಸುತ್ತದೆ. ಮನೋಶಕ್ತಿ-ಆತ್ಮನಿರ್ಭರತೆ ಉಂಟಾಗಿ ವ್ಯಕ್ತಿ ಆರೋಗ್ಯವಂತನಾಗುತ್ತಾನೆ. ಮನುಷ್ಯನು ಹತಾಶೆ, ಕೋಪ- ದು:ಖದಲ್ಲಿದ್ದಾಗ ಒಂದು‘ನಗು’ ಮನದ ಭಾರ ಕಡಿಮೆ ಮಾಡುತ್ತದೆ. ಅವಮಾನ-ಅಗೌರವ ಎಂಬ ಭಾವನೆಯುಳ್ಳವರು ನಗುವುದೇ ಇಲ್ಲ. ಅಂಥವರು ಯಾರೂ ಇಲ್ಲದಾಗ ಒಬ್ಬರೇ ನಗುತ್ತಾರೆ. ಅನಾವಶ್ಯಕ ನಗುವುದು, ಒಬ್ಬರೇ ನಗುವುದು ಮನೋವಿಕಾರವೆಂದು ಭಾವಿಸಲಾಗುತ್ತದೆ.ಈಗ ವೈದ್ಯ ವಿಜ್ಞಾನಶಾಸ್ತ್ರದಲ್ಲಿ ಮೆದುಳಿನಲ್ಲಿ ‘ನಗು’ವಿನ ಪಥವನ್ನು ಶೋಧಿಸುತ್ತಿದ್ದಾರೆ. ಮೆದುಳಿನ ಮುಂಭಾಗ ಕವಚದಲ್ಲಿ ಎಂಡಾರ್ಫಿನ್ ಎಂಬ ನರ ರಾಸಾಯನಿಕವು ಉತ್ಪನ್ನವಾಗುವುದರಿಂದ ‘ನಗೆ’ ಹುಟ್ಟುತ್ತದೆ ಎಂದೂ ಹೇಳುತ್ತಾರೆ. ಮೆದುಳಿನ ಮಧ್ಯಭಾಗದಲ್ಲಿ ಅನೇಕ ಕ್ರಿಯಾ ಕೇಂದ್ರಗಳನ್ನು ಪಡೆದಿರುವ ಲಿಂಬಿಕ್ ವ್ಯವಸ್ಥೆಯು ಭಾವನೆಯ ತವರೂರು ಹಾಗೂ ಜನ್ಮತಾಣ, ಇದರೊಡನೆ ‘ಅಮಿಗ್ಡಲಾ’ ಹಾಗೂ ಹಿಪೊಕ್ಯಾಂಪಸ್ ಭಾಗಗಳು ಕೂಡ ಸೇರಿವೆ. ಇವು ನಗೆ ಹುಟ್ಟಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದೂ ಹೇಳುತ್ತಾರೆ.೧೯೮೪ ಡಿಸೆಂಬರ್ ಏಳರ ಅಮೆರಿಕನ್ ಮೆಡಿಕಲ್ ಅಸೋಶಿಯನ್‌ದ ಜರ್ನಲ್ ‘ನಗೆ’ ಕುರಿತು ಪ್ರಕಟಿಸಿದ ವಿಶೇಷ ರಿವ್ಯೆದಲ್ಲಿ-‘ಮೆದುಳಿನಲ್ಲಿ ನಗೆ ಕೇಂದ್ರ ಎಂಬುದು ಇಲ್ಲ. ಇದೊಂದು ನರತಂತುಗಳ ಜಾಲದ ಒಟ್ಟಾರೆ ಪ್ರಕ್ರಿಯೆಗಳಿಂದ ಉಂಟಾಗುವ ಅಭಿವ್ಯಕ್ತತೆಯು. ಹೈಪೊಥಾಲಮಸ್- ಸಬಥಾಲಮಸ್-ಅಲ್ಲದೆ ‘ಲಿಂಬಿಕ್’ ವ್ಯವಸ್ಥೆಯ ಈ ಕ್ರಿಯೆಗಳಿಂದ ವ್ಯಕ್ತವಾಗುವ ಭಾವನೆಯೇ ನಗುವಾಗಿ ಹೊರಬರುವುದು. ಅದು ಆನಂದಪಡುವ ಸಮಯ. ಮುಖ್ಯವಾಗಿ ಮೆದುಳಿನ ಕವಚದ ಕೆಳಗಡೆ ಇರುವ ನರರಚನೆಗಳಾದ ಹೈಪೊಥಾಲಮಸ್ ಹಾಗೂ ಇನ್ನಿತರ ಸಂಬಂಧಿಸಿದ ಕೇಂದ್ರಗಳಿಂದ ನಗೆಯು ಉದ್ಭವಿಸುತ್ತದೆ. ನಂತರ ಮೆದುಳಿನ ಕವಚವು ತನ್ನ ನಿರ್ಣಾಯಕ ಪಾತ್ರದಲ್ಲಿ ನಗುವನ್ನು ಹತ್ತಿಕ್ಕಬಹುದು. ಇಲ್ಲವೇ ಅದಕ್ಕೆ ಹೊಸ ರೂಪ ಕೊಡಬಹುದು. ಇದಕ್ಕೆ ಧ್ವನಿಯ ಏರಿಳಿತ ಪೂರಕವಾಗುವವು. ನಗುವಿನ ಪ್ರಕ್ರಿಯೆಯಲ್ಲಿ ಕಿವಿಗಳು-ಕಣ್ಣುಗಳು- ಮುಖದ ಎಲ್ಲ ಸ್ನಾಯುಗಳು -ಧ್ವನಿಪೆಟ್ಟಿಗೆಯ ಹುರಿಗಳು-ಪುಪ್ಪುಸಗಳು-ಹೊಟ್ಟೆಯ ಸ್ನಾಯುಗಳು-ಎದೆಗೂಡಿನ ಸ್ನಾಯುಗಳು-ಹೀಗೆ ಎಲ್ಲವೂ ಪಾಲ್ಗೊಳ್ಳುತ್ತವೆ. ನಗುವಿಗೊಂದು ಆಂಗಿಕ ಭಾಷೆಯಿರುತ್ತದೆ. ಕೈ-ಕಾಲುಗಳ ಭಂಗಿಯು ನಗುವಿನಲ್ಲಿ ವಿಶಿಷ್ಟ ವಿನ್ಯಾಸಗಳನ್ನು ನೀಡುತ್ತದೆ.ನಗುವಿನಿಂದ ಏನೇನು ಆರೋಗ್ಯ ಲಾಭ?ನಿತ್ಯ ನಗುವುದರಿಂದ ಮನಸ್ಸು ಪ್ರಸನ್ನಚಿತ್ತವಾಗಿದ್ದು ಆತಂಕ, ದುಗುಡ ಕಡಿಮೆಗೊಳ್ಳುವವು. ನೆನಪಿನ ಶಕ್ತಿ ವರ್ಧಿಸುವುದು.ಶ್ವಾಸೋಚ್ಛ್ವಾಸ ಅಂದರೆ ಉಸಿರಾಟದಲ್ಲಿ ಪುಪ್ಪುಸಗಳ ಗಾಳಿ ಎಳೆದುಕೊಳ್ಳುವ ಸಾಮರ್ಥ್ಯ ಹೆಚ್ಚುವುದು. ಅದರಂತೆ ಗಾಳಿ ವಿನಿಮಯ ಕೂಡ ಹೆಚ್ಚಿಗೆ ಆಗುವುದು.ರಕ್ತದ ಏರೊತ್ತಡವು ಕಡಿಮೆಯಾಗುವ ಸಾಧ್ಯತೆಗಳಿವೆ. ಮನೋಒತ್ತಡವುಳ್ಳವರು ತಮ್ಮ ಸುಖ-ದುಃಖ ಹಂಚಿಕೊಂಡಾಗ ಮನಸ್ಸು ನಿರಾಳವಾಗುತ್ತದೆ. ಅದರೊಡನೆ ಹಾಸ್ಯ, ಜೋಕ್ಸ್, ಚೇಷ್ಟೆಗಳಿಂದ ಕೂಡಿದರೆ ಮನಸ್ಸು ಮತ್ತಷ್ಟು ಹಗುರವಾಗಿ ಚೈತನ್ಯ ಶಕ್ತಿ ಒಡಮೂಡುತ್ತದೆ.ನಿತ್ಯ-ನಗುವಿನ-ಹರಟೆ-ಅನುಭವಗಳನ್ನು ಹಾಸ್ಯಲೇಪನದೊಂದಿಗೆ ಇನ್ನೊಬ್ಬರೊಡನೆ ಹಂಚಿಕೊಂಡಾಗ ನಿಮ್ಮ ಬಗ್ಗೆ ಗೌರವ ಭಾವನೆ ಮೂಡುವುದರೊಂದಿಗೆ ಮನಸ್ಸಿಗೆ ಏಕಾಗ್ರತೆ ಉಂಟಾಗಿ ಕೆಲಸ ಮಾಡಲು ‘ಹುರುಪು’ ಬರುವುದು. ಅದು ಸಂತೋಷವುಂಟುಮಾಡಿ ಆತ್ಮವಿಶ್ವಾಸ ವರ್ಧಿಸುತ್ತದೆ ಹಾಗೂ ಆತ್ಮಸೌಂದರ್ಯ ನೀಡುತ್ತದೆ. ಇದರಿಂದ ಸೃಜನಶೀಲ ವಿಚಾರಗಳು ಮನದಲ್ಲಿ ಹುಟ್ಟುತ್ತವೆ. ಇದುವೇ ‘ನಗು’ ಉಂಟು ಮಾಡುವ ಪರಮೌಷಧಿ. ದೇಹದ ನೋವುಗಳಿಗೆ ‘ನಗು’ ಶಮನಕಾರಿಯಾಗಬಲ್ಲದು. ಮಧುಮೇಹದಲ್ಲಿ ಸಕ್ಕರೆ ಮಟ್ಟ-ರಕ್ತದ ಏರೊತ್ತಡ ಸಹಜ ಮಟ್ಟಕ್ಕೆ -ಅಸ್ತಮಾ(ಉಬ್ಬಸ) ತೊಂದರೆಗಳಲ್ಲಿ ಕೂಡ ನಿತ್ಯ ನಗುವಿನ ವ್ಯಾಯಾಮ ಪರಿಣಾಮಕಾರಿಯಾದ ಉದಾಹರಣೆಗಳಿವೆ.ಕಡೆಯದಾಗಿ ಮುಖದಲ್ಲಿ ಸಿಟ್ಟು ತರಿಸಿಕೊೞಲು ೨೯ ಮುಖದ ಸ್ನಾಯುಗಳು ಸಂಕುಚಿತಗೊೞಬೇಕು ಅಂದರೆ ಹೆಚ್ಚು ಶಕ್ತಿಯ ವ್ಯಯ, ಆದರೆ ನಗುವುದಕ್ಕೆ ೧೭ ಸ್ನಾಯುಗಳು ಸಂಕುಚಿತಗೊಡರೆ ಸಾಕು ಗಹಗಹಿಸಿ ನಗಬಹುದು ಅಂದರೆ ಕಡಿಮೆ ಶಕ್ತಿಯ ಖರ್ಚು....ಅಂದ್ರೆ ಸಿಡ್ಕೋದು ಯಾಕೆ? ಈಗಲಾದ್ರೂ ಸ್ವಲ್ಪ ನಗ್ರೀ.-
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಕನ್ಯಾದಾನವಲ್ಲ ಅದು ಕನ್ಯಾ ಆಧಾನ.


                ಅದು ಯಾವ ಕಾರಣದಿಂದ ಬಂತು ಎನ್ನುವುದೇ ಆಶ್ಚರ್ಯ! ಕನ್ಯೆಯು ದಾನ ಕೊಡುವ ವಸ್ತುವಲ್ಲ. ಅಲ್ಲಿ ಆಧಾನ ಎಂದಿದೆ. ಅಂದರೆ ವರನಲ್ಲಿ ರಕ್ಷಣೆಗಾಗಿ ನೀಡುವುದು ಎಂದು ಅರ್ಥವಾಗುತ್ತದೆಯೇ ವಿನಃ ದಾನವಾಗುವುದಿಲ್ಲ. ಅದು ಯಾವುದೋ ಕಾರಣದಿಂದ ದಾನ ಎಂದು ಅಪಾರ್ಥವಾಗಿ ಬಳಕೆಯಲ್ಲಿ ಬಂದಿದೆ. ಕನ್ಯಾಧಾನವು ಪುಣ್ಯದ ಕೆಲಸ ಹೌದು. ಅವಳು ಮತ್ತ್ಂದು ವಂಶವನ್ನು ಬೆಳೆಸುವುದರಿಂದ ಅವಳು ಸಂಪಾದಿಸುವ ಪುಣ್ಯವು ಕೊಟ್ಟ ತಂದೆಗೆ ಸಿಕ್ಕೇ ಸಿಗುತ್ತದೆ. ಅದು ದಾನಕೊಟ್ಟ ಪುಣ್ಯವಲ್ಲ. ಕನ್ಯಾ ಆಧಾನ ಎಂದು ಹೇಳಿದೆಯೇ ಹೊರತು ಕನ್ಯಾದಾನವಲ್ಲ! ಕನ್ಯೆಯು ಪ್ರೌಢಳಾಗುವವರೆಗೆ ಪೋಷಿಸುವುದು ತಂದೆಗೆ ಸಾಧ್ಯವಾಗುತ್ತದೆ. ನಂತರ ಪ್ರೌಢತ್ವ ಬಂದ ಮೇಲೆ ಮಗಳನ್ನು ಪೋಷಿಸುವುದು ತಂದೆಗೆ ಸಾಧ್ಯವಿಲ್ಲ. ಹಾಗಾಗಿ ಅವಳನ್ನು ವರನ ಕೈಗೆ ಕೊಡುವಂತಾದ್ದು. ಇವಳನ್ನು ಇನ್ನು ನೀನು ಪೋಷಿಸಬೇಕು ಎಂದು. ಆವಾಗಲೂ ಅವರ ಮುಂದುವರೆದ ವಾಗ್ದಾನವೆಂದರೆ ಇವರಲ್ಲಿ ಉತ್ತಮನಾಗತಕ್ಕಂತಹ ಸಾತ್ಪ್ರಜೆಯನ್ನು ಪಡೆದು ಮಗನ ಸ್ವಾಧೀನಕ್ಕೆ ಮಗಳನ್ನು ಕೊಡುತ್ತೇನೆ ಎಂದು ಹೇಳುವಂತಾದ್ದು ಆಗಿರುತ್ತದೆ. ಹಾಗಾಗಿ ಮೊದಲು ತಂದೆಯಿಂದ ಪೋಷಣೆ, ನಂತರ ಗಂಡನಿಂದ ಪೋಷಣೆ, ಕೊನೆಯಲ್ಲಿ ವೃದ್ಧಾಪ್ಯದಲ್ಲಿ ಮಕ್ಕಳಿಂದ ಪೋಷಿಸಬೇಕು ಎಂದು ಹೇಳಿದೆ. ಅದಲ್ಲದೆ ಕನ್ಯೆಯು ದಾನ ಕೊಡುವ ವಸ್ತುವಲ್ಲ, ದಾನ ಕೊಡುವಂತಹದ್ದಲ್ಲವೆಂದು ಹೇಳಿರುತ್ತದೆ. ಪ್ರಶ್ನೆ ಕೇಳಿದ್ದರೆ ತಕ್ಕ ಉತ್ತರ ಅದು ನಮ್ಮ ಸಂಪ್ರದಾಯ. ಯಾವಾಗಲೂ ಅಗತ್ಯಕ್ಕಿಂತ ಹೆಚ್ಚು ಉತ್ತರ ಕೊಟ್ಟು ಗೊತ್ತಿಲ್ಲ. ಆ ಉತ್ತರವು ಆ ಕಾಲ, ಪರಿಸರಕ್ಕೆ ಸೂಕ್ತವೇ ಎಂದು ನೋಡಿ ಕೊಟ್ಟಿರುತ್ತೇವೆ. ಅದು ನಮ್ಮ ಅಭ್ಯಾಸ. ಯಾವ ಪ್ರಶ್ನೆಗೂ ಉತ್ತರವಿಲ್ಲವೆಂಬುದಿಲ್ಲ.
 
    ಚಾಲ್ತಿಯಲ್ಲಿ ಕನ್ಯಾ ಆಧಾನ ಹೋಗಿ ಕನ್ಯಾದಾನವು ಆಯ್ತು. ಮೊದಲು ಹೇಳುವಾಗ ಕನ್ಯಾಧಾನವೆಂದೇ ಸ್ಪಷ್ಟವಾಗಿಯೇ ಹೇಳುತ್ತಿದ್ದರು. ಶಬ್ದವನ್ನು ದೀರ್ಘ ಮಾಡಿರುವ ಕಾರಣ ‘ಆ’ಕಾರವು  ಅದರಲ್ಲಿಯೇ ಸೇರಿಹೋಗುತ್ತದೆ, ಹಾಗಾಗಿ ಕನ್ಯಾಧಾನವಾಯ್ತು. ಕೊನೆಗೆ ‘ಧಾ’ಕಾರವು ಶಬ್ದದ ಮಹಾಪ್ರಾಣ ಅಕ್ಷರ ಉಚ್ಛಾರ ಬಿಟ್ಟು ‘ದಾ’ಕಾರ ಎಂದು ಅಲ್ಪಪ್ರಾಣವಾಗಿ ಕನ್ಯಾದಾನವಾಗಿ ಚಾಲ್ತಿಯಲ್ಲಿ ಬಂದಿತು. ಅಲ್ಲಿ ಆಧಾನವೆಂದರೆ ವರನ ವಶಕ್ಕೆ ಕನ್ಯೆಯನ್ನು ಒಪ್ಪಿಸುವುದು ಎಂದರ್ಥ. ಅಂದರೆ ನ್ಯಾಸರೂಪವಾಗಿ ಇಡುವುದು ಎಂದೇ ಅರ್ಥ ಬರುವುದು. ವಿವಾಹ ಸಂಸ್ಕಾರದಲ್ಲಿ ಕನ್ಯೆಯನ್ನು ಧಾರೆಯೆರೆದು ವರನಿಗೆ ಕೊಡುವಾಗ ಕೆಲವು ಮಂತ್ರಗಳನ್ನು ಹೇಳುತ್ತಾರೆ. ಆ ಮಂತ್ರಗಳು ಹೇಳುವುದು ಇದನ್ನೇ. ಅಂದರೆ ನೀನು ಇವಳನ್ನು ಹೇಗೆ ಪೋಷಿಸಬೇಕು? ನಾನು ಹೇಗೆ ಪೋಷಿಸಿದ್ದೇನೆ? ಇವಳಿಗೆ ಯಾವುದರಲ್ಲಿ ಆಸಕ್ತಿಯಿದೆ? ಏನೇನು ರುಚಿಗಳಿವೆ? ಏನೇನು ಅಪೇಕ್ಷೆಗಳಿವೆ? ಎಂದು ಎಲ್ಲವನ್ನೂ ಹೇಳುತ್ತಾನೆ ವಧುವಿನ ತಂದೆ. ಇಂತಹ ಆಸಕ್ತಿಗೆ ತೊಂದರೆಯಾಗದಂತೆ ಅವಳ ಮನಸ್ಸಿಗೆ ಅನುರೂಪನಾಗ್ ಸ್ವೀಕರಿಸಬೇಕು. ಅಂದರೆ ಈ ಕನ್ಯೆಯನ್ನು ನಿನ್ನಲ್ಲಿ ಇಡುವುದು ಮಾತ್ರ, ಇದು ನನ್ನದಲ್ಲ ಎಂದು ಹೇಳಿರುವುದಿಲ್ಲ! ಆದ್ದರಿಂದ ಇವಳು ನನ್ನ ಮಗಳೇ ಆಗಿದ್ದಾಳೆ. ನಿನ್ನ ಹೆಂಡತಿಯಾಗಿರುತ್ತಾಳೆ, ನೆನಪಿರಲಿ ಎಂದು ಎಚ್ಚರಿಸುತ್ತಾನೆ.
ಈ ರೀತಿ ಹೇಳುತ್ತಾ ಕೊನೆಯಲ್ಲಿ ನಾಲ್ಕು ಕಾಲು ರೂಪಾಯಿ ದಕ್ಷಿಣೆಯನ್ನು ಕೊಡುತ್ತಾನೆ. ಅದನ್ನೇ ಈಗ ಜನ ನಾಲ್ಕಾರು ಲಕ್ಷ, ಕೋಟಿ ಎಂದೆಲ್ಲ ಮನಬಂದಂತೆ ಬಳಸುತ್ತಾರೆ. ಆದರೆ ಒಂದು ಪೈಸೆಯನ್ನೂ ಹೆಚ್ಚು ಕೊಡಬಾರದೆಂದು ಹೇಳಿದ್ದಾರೆ!! ಅಷ್ಟು ಮಾತ್ರ. ಅದಕ್ಕೊಂದು ಮಿತಿಯಿದೆ. ಏಕೆಂದರೆ ಅದು ವರಹ ರೂಪ. ನಾಲ್ಕು ಕಾಲು ಎಂದರೆ ಒಂದು ವರಹ ಎಂದು ಲೆಕ್ಕ. ಸಮಸ್ತ ಪ್ರಕೃತಿ ಒಟ್ಟು ಸೇರಿದರೆ ವರಾಹ ಸ್ವರೂಪ. ಈ ಭೂಮಿಯನ್ನು ವರಾಹ ಎಂದು ಹೇಳುವುದು ಅದರಿಂದಾಗಿಯೇ. ಅಂದರೆ ಈ ಭೂಮಿ ಸಮಾನವಾಗಿ ದಕ್ಷಿಣೆಯನ್ನು ನಿನಗೆ ಕೊಟ್ಟಿದ್ದೇನೆ. ಭೂಮಿಯೆಲ್ಲವನ್ನೂ ದಕ್ಷಿಣಾರೂಪದಲ್ಲಿ ನಿನಗೆ ಕೊಟ್ಟಿದ್ದೇನೆ. ಇನ್ನು ಕೊಡಲಿಕ್ಕೆ ಏನೂ ಉಳಿದಿಲ್ಲ. ಪುರಾಣದಲ್ಲಿ ಉದಾಹರಣೆ ಬರುತ್ತದೆ. ಪರಶುರಾಮನು ಇಡೀ ಭೂಮಿಯನ್ನು ಗೆದ್ದು ಕಶ್ಯಪನಿಗೆ ಧಾರೆಯೆರೆದು ಕೊಡುತ್ತಾನೆ ಎಂದು. ಅಂದರೆ ವರಾಹವನ್ನು ಕೊಟ್ಟ ಅಷ್ಟೆ. ವರಾಹ ಸ್ವರೂಪದಲ್ಲಿ ದಕ್ಷಿಣೆಯನ್ನು ಕೊಟ್ಟ. ಏಕೆಂದರೆ ಅದಕ್ಕಿಂತ ಹೆಚ್ಚು ಭೂಮಿಯಲ್ಲಿ ಇಲ್ಲ. ಹೆಚ್ಚು ಕೊಟ್ಟಿದ್ದೆ ಎಂದರೆ ಅದು ಸುಳ್ಳು, ಮೋಸ ಎಂದಾಯ್ತು. ಈ ಭೂಮಿಗಿಂತ ಹೆಚ್ಚು ಕೊಡಲು ಸಾಧ್ಯವಿಲ್ಲ. ಆ ದಕ್ಷಿಣೆ ಕೊಡುವಾಗ ಇವಳಿಗೆ ಗಂಡು ಮಗುವಾದರೆ ಆತನಿಗೆ ದೌಹಿತ್ರ ಹಕ್ಕು – ಅಂದರೆ ನನ್ನ ಕಡೆಯ ಹಕ್ಕಿನ ಪ್ರಾಪ್ತಿಯಾಗುತ್ತದೆ. ಆ ಪ್ರಾಪ್ತಿಯು ಇಲ್ಲಿ ನಿಸ್ಸಂತತಿಯಾದರೆ ಮಾತ್ರ. ಅದಕ್ಕಾಗಿ ಈಗಲೇ ಕೊಟ್ಟುಬಿಟ್ಟಿದ್ದೇನೆ. ಅಜ್ಜನ ಮನೆಯ ಆಸ್ತಿ ದೌಹಿತ್ರ ಹಕ್ಕು. ನನ್ನ ಮನೆಯಲ್ಲಿ ನಿಸ್ಸಂತತಿಯಾದರೆ ಮಾತ್ರ ನಿನಗೆ ಆಸ್ತಿಯ ಹಕ್ಕು ಬರುತ್ತದೆ. ಇಲ್ಲದಿದ್ದರೆ ಈಗಲೇ ಕೊಟ್ಟಿದ್ದರಲ್ಲಿ ತೀರ್ಮಾನ. ಮುಂದೆ ಆಸ್ತಿಯನ್ನು ಕೇಳುವ ಹಕ್ಕಿರುವುದಿಲ್ಲ.
ಹಾಗಾಗಿ ಎರಡೂ ಚಿಂತನೆಯನ್ನು ಮಾಡುತ್ತಾ ದೌಹಿತ್ರ ಹಕ್ಕನ್ನು ನ್ಯಾಸರೂಪವಾಗಿ ಮೊದಲೇ ವರನ ಕೈಯಲ್ಲಿ ದಕ್ಷಿಣಾರೂಪದಲ್ಲಿ ಕೊಡುವಂತಾದ್ದು ವರಹ ದಕ್ಷಿಣೆಎಂದು. ಅದು ಅಪಭ್ರಂಶವಾಗಿ ಈಗ ವರದಕ್ಷಿಣೆ ಆಗಿಬಿಟ್ಟಿದೆ. ಅದು ಮುಂದೆ ಚಿಂತಿಸುವ ವಿಚಾರವಾದ್ದರಿಂದ ತತ್ಕಾಲದ ಅಂದರೆ ಕನ್ಯೆಯನ್ನು ಆಧಾನ ಮಾಡುವ ಸಮಯದ ಸಮಸ್ಯೆಯಲ್ಲ, ಮುಂದೆ ಚಿಂತನೆಗೆ ಬರತಕ್ಕ ಸಮಸ್ಯೆ. ಹಾಗಾಗಿ ಅದು ಕ್ಷೀಣವಿಚಾರ. ಆದರೆ ಸತ್ಯ. ಏಣ ವಿಚಾರವೂ ಹೌದು, ಸುಳ್ಳು ವಿಚಾರವಲ್ಲ. ಮುಂದೊಂದು ದಿನ ನಿಸ್ಸಂತತಿಯಾಗಿ ಅಜ್ಜ ಅಜ್ಜಿಗೆ ಈ ಮೊಮ್ಮಗನೇ ದಾತಾರನಾಗಬಹುದು ಅನಿವಾರ್ಯ. ಹಾಗಾಗಿ ಈಗಲೇ ಕೊಡಲ್ಪಡತಕ್ಕದ್ದು ದದಾತಿ. ಹಾಗಾಗಿ “ಕ್ಷೀಣ ಏಣ ವಿಚಾರೈಃ ದದಾತಿ ಇತಿ ದಕ್ಷಿಣಾಃ” ಎಂದು ಬ್ರಾಹ್ಮಿಯಲ್ಲಿ ಪ್ರಸಕ್ತ ವಿಚಾರದ ದಕ್ಷಿಣಾ ಎಂಬ ಶಬ್ದೋತ್ಪತ್ತಿ. ಅದು ಕ್ಷೀಣ ವಿಚಾರವೂ ಹೌದು, ಏಣ ವಿಚಾರವೂ ಹೌದು, ಅದನ್ನು ನಿನಗೆ ದತ್ತವಾಗಿ ಕೊಡುತ್ತಾ ಇದ್ದೇನೆ; ಇದು ದಕ್ಷಿಣಾ ಎನ್ನಿಸಿಕೊಳ್ಳುತ್ತದೆ. ಯಾವುದೆಂದರೆ ಅದು ವರಹ. ಅಂದರೆ ಸಮಸ್ತ ಪ್ರಕೃತಿ ಎಂದರ್ಥ.
ಯಾವೊಬ್ಬ ಮನುಷ್ಯನು ತ್ಯಾಗ ಮಾಡುವುದಿದ್ದರೆ ಎಷ್ಟನ್ನು ಮಾಡಬಹುದು? ಯಾವುದು ಯಾವುದೋ ಕಾರಣಕ್ಕೆ ಏನೇನೋ ತ್ಯಾಗ ಮಾಡಬಹುದು. ಆದರೆಆತ್ಮಾರ್ಥೇ ಪೃಥಿವೀಂ ತ್ಯಜೇತ್ ಎಂದು ಹೇಳುತ್ತಾರೆ. ಆತ್ಮೋನ್ನತಿಗಾಗಿ ಸಾಧನೆ ಮಾಡುವುದಿದ್ದರೆ ಈ ಪೃಥ್ವಿಯನ್ನು ತ್ಯಾಗ ಮಾಡಲಿಕ್ಕೆ ಸಿದ್ಧ ಎಂದು ಅಲ್ಲಿಯವರೆಗೂ ಈ ಭೂಮಿಯನ್ನು ಬಿಡುವುದಕ್ಕೆ ಆಗುವುದಿಲ್ಲ. ಆತ್ಮೋನ್ನತಿ ಸಾಧನೆಗಾಗಿ ಪೃಥ್ವಿಯನ್ನೇ ತ್ಯಾಗ ಮಾಡಬಹುದು. ಅದಕ್ಕಾಗಿ ಈ ಪೃಥ್ವೀ ಸ್ವರೂಪದ ವರಹವನ್ನು ನನ್ನ ಆತ್ಮೋನ್ನತಿಗಾಗಿ ಸಾಧನೆಯಾಗುವ ಕಾಲದಲ್ಲಿ ನಿನ್ನಲ್ಲಿ ನ್ಯಾಸರೂಪವಾಗಿ ಕೊಡುತ್ತಿದ್ದೇನೆ. ವರಹ ದಕ್ಷಿಣೆಯು ವರದಕ್ಷಿಣೆಯಾಗಿ ಏನೇನೋ ಅನಾಹುತಕ್ಕೆ ಕಾರಣವಾಗುತ್ತಿದೆ ಈಗ. ಆಧಾನವಾಗಿ ಇಡುವಂತಾದ್ದು, ನ್ಯಾಸರೂಪವಾಗಿಯೇ ಇಡುವಂತಾದ್ದು. ಏಕೆಂದರೆ ಮುಂದೆ ಆತ್ಮೋನ್ನತಿಗಾಗಿ ಈಗ ನಾನು ಪ್ರಾಪಂಚಿಕ, ಮುಂದೆ ಸಾಧನೆಯ ಮುಂದೆ ಅಕಸ್ಮಾತ್ ಆತ್ಮೋನ್ನತಿ ಸಾಧನೆಯಾಗುವುದಾದರೆ ಪೂರಕವಾಗಿ ಈ ನನ್ನ ಮಗಳಲ್ಲಿ ಹುಟ್ಟತಕ್ಕಂತಹ ಮಗನಿಂದ ಸಹಾಯವಾಗುವುದಿದ್ದರೆ ಇದು ದಕ್ಷಿಣಾ ಆಗುತ್ತದೆ ಎಂದು ಹೇಳುತ್ತದೆ. ಹಾಗಾಗಿ ಆ ನಾಲ್ಕು ಕಾಲು ರೂಪಾಯಿಗೆ ಅಷ್ಟು ಜವಾಬ್ದಾರಿಯಿದೆ. ಅಷ್ಟು ವಿಶಾಲ ಅರ್ಥದ ಕೆಲಸವಿದೆ. ಆ ವಿಶಾಲಾರ್ಥಕ ವಿಚಾರವನ್ನು ಸೂಕ್ಷ್ಮವಾಗಿ ಅಲ್ಲಿ ಹೇಳಿ ಕೊಡುವಂತಹ ವಿಧಿಯು “ದತ್ತಂ ನ ಮಮ” ಎಂದು ಮಾತ್ರ ಹೇಳುತ್ತದೆ.
ಈ ದುಡ್ಡನ್ನು ನಾನು ಪುನಃ ಹಿಂದಕ್ಕೆ ಕೇಳುವುದಿಲ್ಲ. ಆದರೆ ಕನ್ಯೆ ನಿನ್ನದ್ದಲ್ಲ. ಅಲ್ಲಿ ಕೊಡತಕ್ಕಂತಹ ದಕ್ಷಿಣೆ ನನ್ನದ್ದಲ್ಲ ಎಂದು ಹೇಳಿದ್ದು ಬಿಟ್ಟರೆ ಕನ್ಯೆ ನನ್ನದ್ದಲ್ಲ ಎಂದು ಹೇಳಲಿಲ್ಲ. ಬೇರೆ ಯಾವುದೇ ದಾನ ಕೊಟ್ಟರೂ “ನ ಮಮ ನ ಮಮ” ಎಂದು ೨ ಸಾರಿ ಹೇಳಬೇಕು. ಅಲ್ಲಿ ಕೊಡುವ ವಸ್ತುವು ಮತ್ತು ದಕ್ಷಿಣೆ ಈ ಎರಡೂ ನನ್ನದಲ್ಲ ಎಂದು ಹೇಳುವುದಕ್ಕಾಗಿ ಆ ರೀತಿ ೨ ಸಾರಿ ಹೇಳುವುದು. ಆದರೆ ಇಲ್ಲಿ ಕನ್ಯಾಧಾನ ಮಾಡುವ ಪ್ರಕ್ರಿಯೆಯಲ್ಲಿ ಮಾತ್ರ ದತ್ತಂ ನ ಮಮಎಮ್ದು ಒಂದು ಸಾರಿ ಮಾತ್ರ ಹೇಳುವುದು. ಅಂದರೆ ಈ ದಕ್ಷಿಣೆ ಮಾತ್ರ ನಿನ್ನದ್ದು, ನನ್ನದ್ದಲ್ಲ ಎಂದು. ಆದರೆ ಕನ್ಯೆ ಮಾತ್ರ ನನ್ನದ್ದು, ನಿನ್ನದ್ದಲ್ಲ ಎಂದು ಅದರ ಅರ್ಥವಾಗಿರುತ್ತದೆ. ಅವಳ ಪೋಷಣೆಯ ಜವಾಬ್ದಾರಿ ನಿನ್ನದು. ನಿನಗೆ ಹೆಂಡತಿಯಾಗಿರುತ್ತಾಳೆ ಅಷ್ಟೆ. ಹಾಗಾಗಿ ಅಲ್ಲಿ ಆಧಾನವೇ ಬಿಟ್ಟರೆ ಕನ್ಯಾದಾನವಲ್ಲ. ದಾನ ಇಲ್ಲ, ಕೊಡಲ್ಪಡುವುದೂ ಇಲ್ಲ, ನ್ಯಾಸರೂಪದಲ್ಲಿ ಇಡಲ್ಪಡುವುದು ಎಂದೆನಿಸಿಕೊಳ್ಳುತ್ತದೆ. ಹಾಗಾಗಿ ಮುಂದೆ ಹುಟ್ಟತಕ್ಕಂತಹ ಮಗುವಿಗೆ ದೌಹಿತ್ರ ಹಕ್ಕಿನ ಅಂಶ ಎಷ್ಟು ರೀತಿಯಲ್ಲಿ ಪ್ರಾಪ್ತವಾಗುತ್ತದೆ? ಎಂದರೆ
·         ತಂದೆ,
·         ತಂದೆಯ ತಂದೆ,
·         ಅಜ್ಜ ಮುತ್ತಜ್ಜ ಇವರ ವಂಶವಾಹಿ ವ್ಯವಸ್ಥೆಗಳು, ಹಾಗೆ ದ್ವಾದಶ ಪಿತೃಗಣ ವಿಭಾಗಿಸಲ್ಪಟ್ಟಂತಹ
·         ತಾಯಿ,
·         ತಾಯಿಯ ತಾಯಿ,
·         ತಾಯಿಯ ತಂದೆ,
·         ತಂದೆಯ ತಾಯಿ,
ಹೀಗೆ ಈ ವಿಭಾಗದಲ್ಲಿ. ಇಷ್ಟು ಭಾಗದಲ್ಲೂ ಮಗುವಿಗೆ ಪ್ರಾಪ್ತವಾಗುತ್ತದೆ ದೌಹಿತ್ರ ಹಕ್ಕು. ಇಲ್ಲಿ ಹಕ್ಕು ಎಂದರೇನು? ಹಕ್ಕು ಎಂದರೆ ಆಸ್ತಿಯ ಹಕ್ಕಲ್ಲ. ನಿಜವಾಗಿ ಹಕ್ಕೆಂದರೆ –
ಅಧ್ವರ್ಯವೋ ದುಗ್ಧಮಂಶುಂ ಜುಹೋತನ ವೃಷಭಾಯ ಕ್ಷಿತೀನಾಮ್ |
ಗೌರಾದ್ ವೇದೀಯಾಙ್ ಅವಪಾನಮಿಂದ್ರೋ ವಿಶ್ವಾಹೇದ್ ಯಾತಿ ಸುತಸೋಮಮಿಚ್ಛನ್ ||
          ಈ ದೌಹಿತ್ರ ಹಕ್ಕು ಇಷ್ಟು ವ್ಯಾಪ್ತಿಯನ್ನು ಹೊಂದುತ್ತದೆ. ಅಂದರೆ ಹಿಂದೆ ಒಬ್ಬ ಸಹಜವಾಗಿ ಮನುಷ್ಯನಾಗಿ ಹುಟ್ಟಿದವನು ತನ್ನ ಬಾಲ್ಯಾದಿ ವಿಧ್ಯಾಭ್ಯಾಸ, ಪ್ರೌಢಾವಸ್ಥೆಯಲ್ಲಿ ಸಾಂಸಾರಿಕ ಜೀವನ, ನಂತರ ಗೃಹಸ್ಥಾಶ್ರಮ ಧರ್ಮದಂತೆ ಆಚಾರ ವಿಚಾರಗಳು, ಜೊತೆಯಲ್ಲಿ ಯಜ್ಞ-ಯಾಗಾದಿಗಳು ಇವುಗಳನ್ನು ಮಾಡುತ್ತಾ ಇದ್ದಂತಹ ಕಾಲವದು. ಹಾಗೆ ಅಕಸ್ಮಾತ್ ಆ ಹುಟ್ಟುವ ಮಗು ಮುಂದೆ ಅಧ್ವರ್ಯು ಆದಂತಹ ಯಾವುದಾದರೂ ಯಾಗ-ಯಜ್ಞ ನಡೆಸಿದರೆ ಇಷ್ಟೂ ಜನರಿಗೆ ಅಲ್ಲಿ ಅವಕಾಶ ಕೊಡು. ಈ ೧೨ ವರ್ಗದ ಎಷ್ಟು ಪಿತೃಗಣವಾಗುತ್ತಾರೆ, ಅಷ್ಟೂ ಜನಕ್ಕೂ ಯಾಗದಲ್ಲಿ ಅವಕಾಶವನ್ನು ಕೊಡು. ಆಗ ನಾವು ಆತ್ಮೋನ್ನತಿಯನ್ನು ಸಾಧಿಸಿಕೊಳ್ಳುತ್ತೇವೆ.
ಜಜ್ಞಾನಃ ಸೋಮಂ ಸಹಸೇ ಪಪಾಥ ಪ್ರತೇ ಮಾತಾ ಮಹಿಮಾನಮುವಾಚ |
ಏಂದ್ರ ಪಪ್ರಾಥೋರ್ವ೧ಂತರಿಕ್ಷಂ ಯುಧಾ ದೇವೇಭ್ಯೋ ವರಿವಶ್ಚಕರ್ಥ ||
ಹಾಗೆ ತಾಯಿಗೆ ಇರತಕ್ಕಂತಹ ಸ್ಥಾನ, ಪ್ರಪಂಚದಲ್ಲಿ ಅತೀ ಮಹತ್ತರವಾದದ್ದು. ಹಾಗಾಗಿ ಮಗುವಿಗೆ ತಾಯಿ ಎಂದು ಹೇಳುವಂತಹ ಮಹಾನ್ ಶಕ್ತಿಯನ್ನು ಕೊಟ್ಟದ್ದು ಈ ಅಜ್ಜ. ಹಾಗಾಗಿ ಆ ಒಂದು ನೆನಪನ್ನು ನೀನು ಮರೆಯಬಾರದು. ಹಾಗಾಗಿ ಮುಂದೆ ನನ್ನ ವಂಶವನ್ನೂ ಉನ್ನತಿ ಮಾಡುವಂತಹ ಲಭ್ಯತೆ ಬಂದಾಗ ನಿನ್ನ ಮಾತೃವರ್ಗ ಎಂದು ಹೇಳತಕ್ಕಂತಹ ಅಂಶವನ್ನು ಯಾವುದೇ ಕಾರಣಕ್ಕೂ ಮರೆಯದಿರು. ಅದಕ್ಕಾಗಿ ನಿನಗೆ ಈ ರೀತಿಯ ಭೂಮಿ ಸ್ವರೂಪದ, ಇದಕ್ಕಿಂತ ಹೆಚ್ಚಿನದ್ದು ಇಲ್ಲದ; ಅಂದರೆ ತಾಯಿಯನ್ನೂ ಭೂಮಿ ಎಂದು ಹೇಳುತ್ತದೆ. ಭೂಮಿಗಿಂತ ದೊಡ್ಡದುಯಾವುದು ಎಂದಾಗ ತಾಯಿ ಎಂದನಂತೆಧರ್ಮರಾಯ. ಹಾಗೆ ಭೂಮಿಯೂ ತಾಯಿಯೂ ಸಮಾನವಾದ್ದರಿಂದ ಆ ತಾಯಿಯ ರೂಪದಲ್ಲಿ ನಿನಗೆ ಕೊಟ್ಟಿದ್ದೇನೆ. ನೀನು ಮಾಡತಕ್ಕಂತಹ ಸತ್ಕಾರ್ಯಗಳಲ್ಲಿ, ಸತ್ಫಲಗಳನ್ನು ಉಂಟುಮಾಡುವ ಎಲ್ಲವೂ ನನ್ನ ವಂಶದ ಅಂದರೆ ಈ ಮಗುವಿನ ತಾಯಿ ವಂಶದ ಎಲ್ಲರಿಗೂ ಪ್ರಾಪ್ತವಾಗುವಂತೆ ನಿನ್ನ ಪ್ರಕ್ರಿಯೆ ಇರಲಿ ಎಂದು ಹೇಳುತ್ತಾ ಬೇಡಿಕೆ ಹೇಳಿಕೆಯವರೆಗೆ ಈ ಆದರ್ಶವಿರುತ್ತದೆ. ಹಾಗಾಗಿ ಅದು ಆಧಾನವಾಗುತ್ತದೆಯೇ ವಿನಃ ದಾನ ಆಗುವುದಿಲ್ಲ.
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಗೋವು

★.
ಗೋವು ಉಸಿರಾಟ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನೇ ಹೊರಗೆ ಬಿಡುತ್ತದೆ !!.
(ಮತ್ಯಾವ ಜೀವಸಂಕುಲದಲ್ಲೂ ಹೀಗಿಲ್ಲ)
★.
ಗೋವಿನ ಒಂದು ಚಮಚ ತುಪ್ಪವನ್ನು ಬೆಂಕಿಗೆ ಸುರಿದಾಗ ಸುಮಾರು ಒಂದು ಟನ್ನುಗಳಷ್ಟು ಆಮ್ಲಜನಕ ಬಿಡುಗಡೆಯಾಗುತ್ತೆ !!.
★.
ಗೋವಿಗೆ ವಿಷವನ್ನು ಸತತ ೯೦ ದಿನಗಳವರೆವಿಗೂ ನೀಡುತ್ತಾ ಬಂದರೂ ಅದರ ಹಾಲಿನಲ್ಲಾಗಲೀ, ಹಾಗೂ ಮಾಂಸದಲ್ಲಾಗಲಿ ವಿಷದ ಪ್ರಮಾಣ ಕಿಂಚಿತ್ತೂ ಇರುವುದಿಲ್ಲ...
(ವಿಷವೆಲ್ಲಾ ಗಂಟಲಿನ ಒಂದು ಬದಿಯಲ್ಲೇ ಶೇಖರಣೆಯಾಗಿರುತ್ತದೆ)
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಯಾವ ದಿನಗಳಂದು ಯಾವ್ಯಾವ ದೇವರನ್ನು ಆರಾಧಿಸಬೇಕು?



ನಮ್ಮ ಹಿಂದೂ ಧರ್ಮವು ತನ್ನದೇ ಆದ ಸಿದ್ಧಾಂತಗಳು ಮತ್ತು ಪಾವಿತ್ರ್ಯತೆಗಳಿಂದ ವಿಶ್ವದಾದ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ನಮ್ಮ ಆಚಾರ ವಿಚಾರಗಳು, ಶಾಸ್ತ್ರ ಸಂಪ್ರದಾಯಗಳಿಗೆ ಸ್ವತಃ ವಿದೇಶೀಯರೇ ಮನಸೋತಿದ್ದು ಸ್ವಇಚ್ಛೆಯಿಂದ ನಮ್ಮ ಧರ್ಮಕ್ಕೆ ಅವರು ಮತಾಂತರಗೊಂಡಿದ್ದಾರೆ.

ಸರ್ವಶಕ್ತನಾದ ಭಗವಂತನನ್ನು ನಂಬುವ ನಾವು ಕಷ್ಟದಲ್ಲೂ ಸುಖದಲ್ಲೂ ಅವನನ್ನೇ ನೆನೆಯುಂತವರು. ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಲಭ್ಯವಾಗಲಿ ಎಂದು ದಿನದಲ್ಲಿ ಒಂದೊಂದು ದೇವರನ್ನು ಸ್ಮರಿಸುತ್ತಾ ಆ ದೇವರುಗಳಿಗೆ ಸಂತೃಪ್ತಿಯನ್ನು ಮಾಡುತ್ತಿರುತ್ತೇವೆ.

ಪೂಜೆ ಪುನಸ್ಕಾರಗಳನ್ನು ನಡೆಸುತ್ತಾ ವೃತ ನಿಷ್ಟೆಗಳನ್ನು ಅನುಸರಿಸುತ್ತಾ ಆಯಾ ವಾರದಲ್ಲಿ ಆಯಾ ದೇವರುಗಳಿಗೆ ಬೇಕಾದ ದೇವತಾ ಕಾರ್ಯಗಳನ್ನು ನಾವು ಮಾಡುತ್ತಿದ್ದೇವೆ. ಇಂದಿನ ಲೇಖನದಲ್ಲಿ ವಾರದಲ್ಲಿ ಯಾವ ದಿನ ಯಾವ ದೇವರುಗಳಿಗೆ ಮಹತ್ವ ನೀಡಬೇಕು ಅವರುಗಳ ಪೂಜೆ ಪುನಸ್ಕಾರಗಳನ್ನು ಹೇಗೆ ನಡೆಸುವುದು ಎಂಬುದನ್ನು ಕೆಳಗಿನ ತಿಳಿಸಿಕೊಡುತ್ತಿದ್ದೇವೆ.


ಆದಿತ್ಯವಾರ :-
ಸೂರ್ಯದೇವರಿಗೆ ಅರ್ಪಣೆ ಆದಿತ್ಯವಾರವನ್ನು ಸೂರ್ಯದೇವರಿಗೆ ಸಮರ್ಪಿಸುತ್ತಿದ್ದು, ಸೂರ್ಯನಾರಾಯಣ ಅಥವಾ ಸೂರ್ಯ ದೇವ ಎಂಬ ಹೆಸರಿನಿಂದ ಇವರನ್ನು ಕರೆಯಲಾಗುತ್ತದೆ. ಈ ದಿನದಂದು ಸೂರ್ಯನ ಭಕ್ತರು, ಧಾರ್ಮಿಕ ಸ್ನಾನಾದಿಗಳಲ್ಲಿ ಪಾಲ್ಗೊಂಡು ತಮ್ಮ ದೇಹ ಮತ್ತು ಮನೆಯನ್ನು ಶುದ್ಧೀಗೊಳಿಸುತ್ತಾರೆ. ದೇವರಿಗೆ ಕೆಂಪು ಹೂಗಳನ್ನು ಸಮರ್ಪಿಸಿ ಕೆಂಪು ಚಂದನದ ಪ್ರಸಾದವನ್ನು ಹಣೆಗೆ ಹಚ್ಚಿಕೊಳ್ಳುತ್ತಾರೆ. ಈ ದಿನದಂದು ಸೂರ್ಯದೇವರು ಎಲ್ಲಾ ಚರ್ಮ ವ್ಯಾಧಿಗಳನ್ನು ಗುಣಪಡಿಸುತ್ತಾರೆ ಎಂಬ ನಂಬಿಕೆ ಇದೆ.

ಸೋಮವಾರ :-
ಸೋಮವಾರವನ್ನು ಶಿವನಿಗೆ ನಾವು ಅರ್ಪಿಸುತ್ತಿದ್ದು ಶಿವನ ಸಹಧರ್ಮಿಣಿ ಪಾರ್ವತಿಯೊಂದಿಗೆ ದೇವರನ್ನು ಸ್ಮರಿಸಿಕೊಳ್ಳುತ್ತೇವೆ. ಈ ದಿನದಂದು ಶಿವನಿಗಾಗಿ ನಡೆಯುವ ವಿಶೇಷ ಪೂಜೆಯಲ್ಲಿ ಅವರು ಪಾಲ್ಗೊಂಡು ದೇವರಿಗೆ ವೃತವನ್ನು ಕೈಗೊಳ್ಳುತ್ತಾರೆ. ದೇವರು ಇದರಿಂದ ಸಂತೃಪ್ತಗೊಂಡು ನಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾರೆ ಎಂಬ ನಂಬಿಕೆ ಭಕ್ತರಲ್ಲಿದೆ.

ಮಂಗಳವಾರ :-
ಹನುಮನ ಪೂಜೆ ಮಂಗಳವಾರವನ್ನು ಭಗವಾನ್ ಹನುಂತನಿಗೆ ಸಮರ್ಪಿಸಲಾಗಿದೆ. ಮಂಗಳವಾರ ವೃತವನ್ನು ಈ ಸಮಯದಲ್ಲಿ ಹನುಮ ಭಕ್ತರು ಕೈಗೊಳ್ಳಲಿದ್ದು 21 ದಿನಗಳವರೆಗೆ ಇದು ಮುಂದುವರಿಯುತ್ತದೆ. ಗೋಧಿ ಮತ್ತು ಬೆಲ್ಲದಿಂದ ತಯಾರಿಸಿದ ಆಹಾರವನ್ನು ಮಾತ್ರ ಈ ವೃತದಂದು ಸೇವಿಸಲಾಗುತ್ತದೆ. ಗಂಡು ಮಗುವಿನ ಬಯಕೆಯುಳ್ಳ ದಂಪತಿಗಳು ಈ ವೃತವನ್ನು ಕೈಗೊಂಡಲ್ಲಿ ಹನುಮಾನ್ ಹರಸುತ್ತಾರೆ ಎಂದಾಗಿದೆ. ಅಲ್ಲದೆ ಈತ ಶಿವನ ಅವತಾರಗಳಲ್ಲಿ ಒಬ್ಬನೆಂದು, ಶಕ್ತಿಯನ್ನು ದಯಪಾಲಿಸುವ ದೇವನೆಂದು ಪರಿಗಣಿಸಲ್ಪಟ್ಟಿದ್ದಾನೆ. ಈತನನ್ನು ಪೂಜಿಸಿದರೆ ನಿಮಗೆ ರಾಮನ ಅನುಗ್ರಹವು ದೊರೆಯುತ್ತದೆ. ಕೆಂಪು ವಸ್ತ್ರ, ಕೆಂಪು ಹೂ, ಕೇಸರಿಯಿಂದ ಸ್ವಾಮಿಯನ್ನು ಪೂಜಿಸಿ. ಕೆಂಪು ಗ್ರಹವಾದ ಮಂಗಳನ ಕೃಪೆಗೆ ಪಾತ್ರರಾಗಿ.

ಬುಧವಾರ :-
ಶ್ರೀ ಕೃಷ್ಣನ ಸ್ಮರಣೆ ಬುಧವಾರದಂದು ಶ್ರೀಕೃಷ್ಣ ಭಜನೆಗಳನ್ನು ಕೈಗೊಳ್ಳಲಾಗುತ್ತದೆ. ಈ ದಿನದಂದು ವೃತವನ್ನು ಕೈಗೊಳ್ಳುವವರು ಹೊಸ ವ್ಯವಹಾರವನ್ನು ಆರಂಭಿಸುವವರಾಗಿರುತ್ತಾರೆ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಯಶಸ್ಸು ಗಳಿಸಲು ಈ ದಿನ ಶ್ರೀಕೃಷ್ಣ ಭಗವಂತನನ್ನು ನೆನೆಯಬಹುದು ಅಂತೆಯೇ ದಂಪತಿಗಳು ತಮ್ಮ ಸುಖಕರ ದಾಂಪತ್ಯಕ್ಕಾಗಿ ಭಗವಾನ್ ಕೃಷ್ಣನನ್ನು ಸ್ಮರಿಸಿಕೊಳ್ಳಬಹುದು.

ಗುರುವಾರ :-
ವಿಷ್ಣುವಿನ ಸ್ಮರಣೆ ವಿಷ್ಣುವಿನ ಭಕ್ತರು ಈ ದಿನದಂದು ಹಳದಿ ವಸ್ತ್ರಗಳನ್ನು ಧರಿಸಿ ಹಳದಿ ಹೂವುಗಳನ್ನು ದೇವರಿಗೆ ಸಮರ್ಪಿಸುತ್ತಾರೆ. ಈ ದಿನದಂದು ವೃತವನ್ನು ಕೈಗೊಳ್ಳುವವರು ಗಜ್ಜರಿ ಮತ್ತು ತುಪ್ಪವನ್ನು ಬಳಸಿದ ವೃತಾಹಾರವನ್ನು ಸೇವಿಸುತ್ತಾರೆ. ಈ ದಿನದಂದು ವೃತವನ್ನು ಕೈಗೊಂಡವರು, ಧನ, ಕೀರ್ತಿ ಮತ್ತು ಯಶಸ್ಸನ್ನು ಪಡೆದುಕೊಳ್ಳುತ್ತಾರೆ.

ಶುಕ್ರವಾರ :-
ದೇವಿಯ ಆರಾಧನೆ ತಾಯಿ ದುರ್ಗಾ ಮಾತೆಗೆ ಈ ದಿನವನ್ನು ಅರ್ಪಿಸಲಾಗುತ್ತಿದ್ದು ಸಂತೋಷಿ ಮಾ ದೇವರ ವೃತವನ್ನು ಕೈಗೊಳ್ಳುತ್ತಾರೆ. ಸೂರ್ಯೋದಯದಿಂದ ಆರಂಭವಾಗಿ ಸೂರ್ಯಾಸ್ತಕ್ಕೆ ಈ ವೃತ ಮುಗಿಯುತ್ತದೆ. ಭಕ್ತರು ಈ ದಿನದಂದು ಬಿಳಿ ವಸ್ತ್ರವನ್ನು ಧರಿಸಿ ರಾತ್ರಿಯೂಟದಲ್ಲಿ ಪಾಲ್ಗೊಳ್ಳುತ್ತಾರೆ. ಬಿಳಿ ಬಣ್ಣದ ಆಹಾರವನ್ನು ಸೇವಿಸುತ್ತಾರೆ.

ಶನಿವಾರ :-
ಶನಿ ದೇವರಿಗೆ ಅರ್ಪಣೆ ಭಯವನ್ನುಂಟು ಮಾಡುವ ದೇವರಾಗಿ ಶನಿಯನ್ನು ಕಾಣುತ್ತಾರೆ. ಬಿಲ್ಲುಗಳ ಧನುಸ್ಸನ್ನು ಕೈಯಲ್ಲಿ ಹಿಡಿದುಕೊಂಡು ಕಾಗೆಯನ್ನೇ ವಾಹನವನ್ನಾಗಿ ಮಾಡಿಕೊಂಡಿದ್ದಾರೆ. ಈ ದಿನದಂದು ಶನಿದೇವಸ್ಥಾನಗಳಿಗೆ ಭೇಟಿ ಕೊಡುವವರು ಕಪ್ಪು ಬಣ್ಣದ ವಸ್ತುಗಳನ್ನು ದೇವರಿಗೆ ಅರ್ಪಿಸುತ್ತಾರೆ. ಎಳ್ಳೆಣ್ಣೆ, ಕಪ್ಪು ಬಟ್ಟೆಗಳು ಮತ್ತು ಕಪ್ಪು ಬಣ್ಣದ ಧಾನ್ಯಗಳನ್ನು ಅರ್ಪಿಸುತ್ತಾರೆ. ಜೀವನದಲ್ಲಿ ಬಂದೊದಗುವ ಕಷ್ಟಗಳನ್ನು ನಿವಾರಿಸುವ ಶನಿ ದೇವರು ಅನಾರೋಗ್ಯವನ್ನು ನಿವಾರಿಸುತ್ತಾರೆ.
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಹೃದಯಘಾತವಾದಗ_ತಕ್ಷಣ_ಏನು_ಮಾಡಬೇಕು ?


ನೀವು ಒಬ್ಬರೇ ಇರುತ್ತೀರಿ. ಎದೆಯ ಎಡಭಾದಲ್ಲಿ ಎದೆ ಭಾರವಾದಂತಹ ಬಿಗಿಹಿದಂತಹ ನೋವು ಕಾಣಿಸಿಕೊಳ್ಲುತ್ತದೆ ಬೆವರಲು ಪ್ರಾರಂಭಿಸುತೀರಿ
       ಕಣ್ಣುಗಳು ಮುಂಜಾಗ ತೊಡಗುತ್ತದೆ ಎಲ್ಲೋ ಪಾತಾಳಕ್ಕೆ ಕುಸಿದಂತಹ ಅನುಭವ ಆಸ್ಪತ್ರೆ ದೊರವಿರುತ್ತದೆ ಮೊಬೈಲ್ ಅಥವಾ 108ಕ್ಕೆ ಕರೆಕೊಟ್ಟರೊ ಅವರು ಬರುವುದು ಕೆಲ ನಿಮಿಷಗಳಾಗಬವುದು ನಿಮ್ಮ ಜ್ಞಾನ ಹೋಗಲು ಇನ್ನೇನು ಕೆಲ ಸೆಕೆಂಡುಗಳಿವೆ 60% ಜನ ಹೃದಯ ಆಘಾತವಾದಾಗ ಮರಣ ಹೊಂದುವ ಸಂಭವವೇ ಹೆಚ್ಚು ಅಂತಹ ಸಮಯದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಏನು ಮಾಡಬೇಕು?
     1. ಪದೇ ಪದೇ ಜೊರಾಗಿ ಕೆಮ್ಮ ಬೇಕು.
      2. ತಕ್ಷಣವೇ ಕೆಳಗೆ ಕುಳಿತುಕೊಳ್ಳಬೇಕು ಎಲ್ಲವೇ ಆಂಗಾತ ಮಲಗಿಕೊಳ್ಲಬೇಕು
     3. ಧಿರ್ಘವಾಗಿ ಉಸಿರು ಎಳೆದುಕೊಳ್ಳುವುದು ಮತ್ತು ಜೋರಾಗಿಕೆಮ್ಮುವುದನ್ನು ಮಾಡಬೇಕು ( ಕಫ ತೆಗೆಯುವ ರೀತಿ)
     4. ಪ್ರತಿ ಎರಡು ಸೆಕೆಂಡುಗಳಿಗೊಮ್ಮೆ ಸತತವಾಗಿ ಕೆಮ್ಮುತ್ತಿರಬೇಕು
     5. ಸಹಾಯಕ್ಕಾಗಿ ಯಾರಾದರು ಬರುವವರೆಗೆ ಸಾಮಾನ್ಯ ಸ್ಥಿತಿಗೆ ಬರುವವರೆಗೂ ಇದನ್ನು ಮುಂದುವರಸುತ್ತಿರಬೇಕು ಇದರಿಂದ ನಾವು ಹೃದಯಾಖತದಿಂದ ಸಾಯದೆ ಬದುಕುಳಿಯುವ ಸಂಭವ ಹೆಚ್ಚು
           ಯಾವ ರೀತಿ ಅನುಕೂಲವಾಗುತ್ತದೆ?
ದೀರ್ಘವಾಗಿ ಉಸಿರು ಎಳೆದುಕೊಳ್ಳುವುದರಿಂದ ಆಮ್ಲಜನಕ (ಆಕ್ಸಿಜನ್)  ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ ಇದನ್ನೆ ಆಸ್ಪತ್ರೆಯಲ್ಲಿ
ಐ.ಸಿ.ಯು.ನಲ್ಲಿ ಮಾಡುವುದು
    
      ಜೋರಾಗಿ ಕೆಮ್ಮುವುದರಿಂದ ಹೃದಯವು ಹಿಸುಕಿದಂತಾಗಿ ಹೃದಯದಿಂದ ರಕ್ತ ಸರಾಗವಾಗಿ ಹರಿಯುತ್ತದೆ ಜೊತೆಗೆ ಹೃದಯ ಬಡಿತವು ಸುಸ್ಥಿಗೆ ಬರುತ್ತದೆ ಕಾರಣ ಆಂತಹ ಸಮಯದಲ್ಲಿ ಹೃದಯ ಸ್ತಂಭನವಾಗುವ ಸಂಭವ ಹೆಚ್ಚಿರುತ್ತದೆ ಸಹಾಯಕ್ಕೆ ಬರುವವರೆಗೂ ಇದನ್ನು ನಾವು ಮುಂದುವರಿಸಿದೇ ಆದಲ್ಲಿ ತಕ್ಷಣವೇ ಸಹಾಯವಾಗುತ್ತದೆ ಇದನ್ನು ಓದಿದವರು ಮತ್ತು ಕೇಳಿದವರು ಹತ್ತು ಜನರೊಂದಿಗೆ ಚರ್ಚಿಸಿ ಎಲ್ಲರಿಗೊ ತಿಳಿಯುವಂತೆ ಮಾಡಿದರೆ ಎಷ್ಟೋ ಪ್ರಾಣಗಳಗಳನ್ನು ಉಳಿಸಬವುದು..
ಗೊತ್ತಿಲ್ಲದ್ದವರಿಗೆ ತಲುಪಿಸಿಕೊಡಿ
🚑🚑🚑🚑🚑🚑
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಗ್ರಾಮ ಪಂಚಾಯಿತಿಯ ರಚನೆ.

ಪ್ರತಿ 5000 – 7000 ಜನಸಂಖ್ಯೆಗೆ ಒಂದರಂತೆ ಗ್ರಾಮ ಪಂಚಾಯಿತಿಯ ರಚನೆ.
2. ಮಲೆನಾಡು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ( ಉದಾ. ಬೇಳಗಾಂ , ಚಿಕ್ಕಮಗಳೂರು , ದಕ್ಷಿಣಕನ್ನಡ , ಧಾರವಾಡ , ಹಾಸನ , ಕೊಡಗು , ಶಿವಮೊಗ್ಗ , ಉಡುಪಿ , ಹಾವೇರಿ , ಹಾಗೂ ಉತ್ತರ ಕನ್ನಡ ಜಿಲ್ಲೆಗಳು ) 2500 ಜನಸಂಖ್ಯೆಗೆ ಕಡಿಮೆ ಇಲ್ಲದ ಪ್ರದೇಶವನ್ನು ಒಳಗೊಂಡಂತೆ ಪಂಚಾಯಿತಿ ರಚಿಸಬಹುದಾಗಿದೆ.
3. ಅವಶ್ಯಕವೆಂದು ಕಂಡುಬಂದಲ್ಲಿ , ಗ್ರಾಮದ ಕೇಂದ್ರದಿಂದ ಐದು ಕಿ.ಮೀ. ಸುತ್ತಳತೆಯಲ್ಲಿರುವ ಪ್ರದೇಶವನ್ನು ಸಹ ಪಂಚಾಯಿತಿ ವ್ಯಾಪ್ತಿಯೆಂದು ಪರಿಗಣಿಸಬಹುದು.
4. ಪ್ರತಿ 400 ಜನಸಂಖ್ಯೆಗೆ ಒಬ್ಬರಂತೆ ಗ್ರಾಮ ಪಂಚಾಯಿತಿಗೆ ಸದಸ್ಯರ ಆಯ್ಕೆ ನಡೆಯುತ್ತದೆ.
5. ಪಟ್ಟಣ ಪಂಚಾಯಿತಿ ಅಥವಾ ಕೈಗಾರಿಕಾ ಉಪನಗರ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇರುವ ಜಾಗಗಳನ್ನು ಹೊರತುಪಡಿಸಿ ಇಡೀ ತಾಲ್ಲೂಕಿನ ಮೇಲೆ ತಾಲ್ಲೂಕು ಪಂಚಾಯಿತಿ ನಿಯಂತ್ರಣ ಹೊಂದಿದೆ.
6. ತಾಲ್ಲೂಕಿನ ಒಟ್ಟು ಜನಸಂಖ್ಯೆಯಲ್ಲಿ 10,000 ಕ್ಕೆ ಒಬ್ಬರಂತೆ ತಾಲ್ಲೂಕು ಪಂಚಾಯಿತಿ ಸದಸ್ಯರ ಆಯ್ಕೆ ನಡೆಯುತ್ತದೆ.
7. ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ತಾಲ್ಲೂಕುಗಳಲ್ಲಿ ಕನಿಷ್ಠ 11 ಮಂದಿ ಚುನಾಯಿತ ಸದಸ್ಯರಿರಬೇಕು.
8. ಪ್ರತಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಚುನಾವಣೆಯ ಮೂಲಕ ಸದಸ್ಯರ ಆಯ್ಕೆ ನಡೆಯುತ್ತದೆ. ಮಾತ್ರವಲ್ಲದೆ. ತಾಲ್ಲೂಕನ್ನು ಪ್ರತಿನಿಧಿಸುವ ಲೋಕಸಭಾ , ವಿಧಾನಸಭಾ , ರಾಜ್ಯಸಭಾ , ವಿಧಾನ ಪರಿಷತ್ ಸದಸ್ಯರು ಜೊತೆಗೆ ಒಂದು ವರ್ಷದ ಅವಧಿಗೆ , ಸರದಿ ಪ್ರಕಾರ ತಾಲ್ಲೂಕಿನ 1/5 ಭಾಗದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳು ಸದಸ್ಯರಾಗಿರುತ್ತಾರೆ.
9. ಪಟ್ಟಣ ಪಂಚಾಯಿತಿ ಅಥವಾ ಕೈಗಾರಿಕಾ ಉಪನಗರ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇರುವ ಜಾಗಗಳನ್ನು ಹೊರತುಪಡಿಸಿ ಇಡೀ ಜಿಲ್ಲೆಯ ಮೇಲೆ ಜಿಲ್ಲಾ ಪಂಚಾಯಿತಿ ನಿಯಂತ್ರಣ ಹೊಂದಿದೆ.
10. 40,000 ಜನಸಂಖ್ಯೆಗೆ ಒಬ್ಬರಂತೆ ಜಿಲ್ಲಾ ಪಂಚಾಯಿತಿ ಸದಸ್ಯರ ಆಯ್ಕೆ ನಡೆಯುತ್ತದೆ.
11. ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 30,000 ಜನಸಂಖ್ಯೆಗೆ ಹಾಗೂ ಕೊಡಗು ಜಿಲ್ಲೆಗೆ 18,000 ಜನಸಂಖ್ಯೆಗೆ ಒಬ್ಬರಂತೆ ಒಬ್ಬ ಸದಸ್ಯರನ್ನು ಆಯ್ಕೆ ಮಾಡಬೇಕಿದೆ.
12. ಪ್ರತಿ ಜಿಲ್ಲಾ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಚುನಾಯಿತ ಸದಸ್ಯರಲ್ಲದೇ ಜಿಲ್ಲೆಯನ್ನು ಪ್ರತಿನಿಧಿಸುವ ಲೋಕಸಭಾ , ವಿಧಾನಾಸಭಾ , ರಾಜ್ಯಸಭಾ , ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷರುಗಳು ಸದಸ್ಯರಾಗಿರುತ್ತಾರೆ.
13. ಮೀಸಲಿಟ್ಟ ಹಾಗೂ ಮೀಸಲಿರಿಸದ ( ಸಮಾನ್ಯ ) ಒಟ್ಟು ಸ್ಥಾನಗಳಲ್ಲಿ 1/3 ಕ್ಕಿಂತ ಕಡಿಮೆಯಿಲ್ಲದ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು.
14. ಚುನಾಯಿತರಾದ ಸದಸ್ಯರ ಅವಧಿಯು ಗ್ರಾಮ ಪಂಚಾಯಿತಿಯ ಪ್ರಥಮ ಸಭೆ ಅಂದರೆ ಅಧ್ಯಕ್ಷ / ಉಪಾಧ್ಯಕ್ಷರ ಆಯ್ಕೆಗಾಗಿ ಗೊತ್ತುಪಡಿಸಿದ ಸಭೆಯ ದಿನಾಂಕದಿಂದ ಮುಂದಿನ ಐದು ವರ್ಷಗಳವೆರೆಗೆ ಇರುತ್ತದೆ.
15. ಗ್ರಾಮ ಪಂಚಾಯಿತಿಯ ಅನುಮತಿ ಇಲ್ಲದೆ. ಗ್ರಾಮ ಪಂಚಾಯಿತಿಯ ಮೂರಕ್ಕಿಂತ ಹೆಚ್ಚು ಸಾಮಾನ್ಯ ಸಭೆಗಳಿಗೆ ಅನುಕ್ರಮವಾಗಿ ಗೈರುಹಾಜರಾದರೆ ಅವರು ಸದಸ್ಯತ್ವ ಕಳೆದುಕೊಳ್ಳುತ್ತಾರೆ.
16. ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಸಹಿ ಸಹಿತ ಬರಹದಲ್ಲಿ ಬರೆದು ರಾಜೀನಾಮೆಯನ್ನು ಅಧ್ಯಕ್ಷರಿಗೆ ಸಲ್ಲಿಸಬಹುದು. ಹೀಗೆ ಬರೆದ ಬರಹವನ್ನು 15 ದಿನಗಳೊಳಗೆ ಬರಹದ ಮೂಲಕ ಹಿಂತೆಗೆದುಕೊಳ್ಳದಿದ್ದಲ್ಲಿ , ಅವರ ಸ್ಥಾನ ಖಾಲಿಯಾಗುತ್ತದೆ.
17. ಸದಸ್ಯರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅಸಮರ್ಥರಾದರೆ ಅಥವಾ ಅಪಕೀರ್ತಿಕರ ನಡತೆಯುಳ್ಳವರಾದರೆ , ಅವರಿಗೆ ಅಹವಾಲನ್ನು ಹೇಳಲು ಅವಕಾಶವನ್ನು ಕೊಟ್ಟ ತರುವಾಯ ವಿಚಾರಣೆಯನ್ನು ನಡೆಸಿ ನಂತರ ಸದಸ್ಯತ್ವದಿಂದ ತೆಗೆದುಹಾಕಬಹುದು.
18. ಗ್ರಾಮ ಪಂಚಾಯಿತಿಯು ಅದರ ಅಧಿಕಾರವನ್ನು ಮೀರಿದರೆ ಅಥವಾ ದುರುಪಯೋಗ ಪಡಿಸಿದರೆ ವಿಸರ್ಜನೆ ಮಾಡಬಹುದು.
19. ಗ್ರಾಮ ಪಂಚಾಯಿತಿಗೆ ವಿಧಿಸಿದ ಕರ್ತವ್ಯಗಳನ್ನು ನೆರವೇರಿಸಲು ಅಸಮರ್ಥವಾದರೆ ಅಥವಾ ಮೇಲಿಂದ ಮೇಲೆ ವಿಫಲವಾದರೆ ಅಂತಹ ಗ್ರಾಮ ಪಂಚಾಯಿತಿಯನ್ನು ವಿಸರ್ಜಿಸಬಹುದು.
20. ಪ್ರತಿ ಸಮಿತಿಯಲ್ಲಿ ಸಮಿತಿಯ ಅಧ್ಯಕ್ಷರು ಸೇರಿದಂತೆ 3 – 5 ಸದಸ್ಯರಿರುತ್ತಾರೆ. ಸಮಿತಿಯ ಅವಧಿಯು ಚುನಾವಣೆಯ ದಿನಾಂಕದಿಂದ 30 ತಿಂಗಳು
21. ಗ್ರಾಮ ಪಂಚಾಯಿತಿ ಅಧ್ಯಕ್ಷರು ಉತ್ಪಾದನಾ ಹಾಗೂ ಸೌಕರ್ಯ ಸಮಿತಿಗಳ ಅಧ್ಯಕ್ಷರಾಗಿರುತ್ತಾರೆ. ಉಪಾಧ್ಯಕ್ಷರು ಸಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷನಾಗುತ್ತಾನೆ.
22. ಸಾಮಾಜಿಕ ನ್ಯಾಯ ಸಮಿತಿಯಲ್ಲಿ ಕನಿಷ್ಟ ಪಕ್ಷ ತಲಾ ಒಬ್ಬ ಮಹಿಳಾ ಸದಸ್ಯೆ ಮತ್ತು ಪರಿಶಿಷ್ಟ ಜಾತಿ / ವರ್ಗದ ಸದಸ್ಯರಿಬೇಕು . ಪ್ರತಿ ಸಮಿತಿಯಲ್ಲಿ ಸರ್ಕಾರವು ಅಂಗೀಕರಿಸಿದ ಮಂಡಲಿಗಳು ಸದಸ್ಯರೊಬ್ಬರನ್ನು ಸೇರ್ಪಡೆ ಮಾಡಿಕೊಳ್ಳಲು ಅವಕಾಸವಿದೆ.
23. ಇದೇ ರೀತಿ ತಾಲ್ಲೂಕು ಪಂಚಾಯಿತಿ ಮೂರು ಸ್ಥಾಯಿ ಸಮಿತಿಗಳನ್ನು , ಜಿಲ್ಲಾ ಪಂಚಾಯಿತಿ ಐದು ಸ್ಥಾಯಿ ಸಮಿತಿಗಳನ್ನು ರಚಿಸಬೇಕಿದೆ.
24. ಕರ್ನಾಟಕ ಪಂಚಾಯಿತಿ ರಾಜ್ ಅಧಿನಿಯಮದ ಪ್ರಕರಣ 61 ( ಎ ) ಪ್ರಕಾರ ಗ್ರಾಮ ಪಂಚಾಯಿತಿಯು ನಿರ್ದಿಷ್ಟ ಉದ್ದೇಶಗಳಿಗೆ ಉಪ ಸಮಿತಿಗಳನ್ನು ರಚಿಸಬಹುದು.
25. ಸಾಮಾನ್ಯ ಸಭೆಯು ಕನಿಷ್ಠ ಪ್ರತಿ ತಿಂಗಳಿಗೊಮ್ಮೆ ಸಾಮಾನ್ಯ ಸಭೆಯನ್ನು ನಡೆಸಬೇಕು .
26. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು / ಕಾರ್ಯದರ್ಶಿಯು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಎಲ್ಲಾ ಅಧಿಕಾರಿ / ಕ್ಷೇತ್ರ ಸಿಬ್ಬಂದಿಗಳಿಗೆ ಸಭೆಯ ನೋಟಿಸನ್ನು ನೀಡಬೇಕು .
27. ಗ್ರಾಮ ಪಂಚಾಯಿತಿಗೆ ಸಾಮಾನ್. ಸಭೆಗೆ ಏಳು ಪೂರ್ಣ ದಿನಗಳ ನೋಟೀಸನ್ನು ನೀಡಬೇಕು . ಸಭೆಯ ಸೂಚನಾ ಪತ್ರದ ಪ್ರತಿಯನ್ನು ಗ್ರಾಮ ಪಂಚಾಯಿತಿ ಕಛೇರಿಯ ಸೂಚನಾ ಫಲಕದಲ್ಲಿ ಹಚ್ಚಿರಬೇಕು.
28. ಗ್ರಾಮ ಪಂಚಾಯಿತಿಯ ಒಟ್ಟು ಸದಸ್ಯರ ಅರ್ಧ ಭಾಗ ( ಶೇ.50 ) ಸಭೆಯ ಕೋರಂ ಆಗಿರುತ್ತದೆ.
29. ಗ್ರಾಮ ಪಂಚಾಯಿತಿ ಸಭೆಗೆ ನಿಗದಿಪಡಿಸಿದ ಸಮಯದಲ್ಲಿ ಕೋರಂ ಇಲ್ಲದಿದ್ದರೆ ಸಭೆಯ ಅಧ್ಯಕ್ಷರು 30 ನಿಮಿಷಗಳವರೆಗೆ ಕಾಯಬೇಕು.
30. ಕೋರಂ ಇಲ್ಲದಿದ್ದರೆ ಸಭೆಯ ಅಧ್ಯಕ್ಷರು ಸಭೆಯನ್ನು ಮುಂದಿನ ದಿನಕ್ಕೆ ಅಥವಾ ತರುವಾಯದ ದಿನಕ್ಕೆ ಮುಂದೂಡಬಹುದು , ಹಾಗೆ ನಿಗದಿಪಡಿಸಿದ ಸಭೆಯ ನೋಟೀಸನ್ನು ಗ್ರಾಮ ಪಂಚಾಯಿತಿ ಕಛೇರಿಯ ನೋಟೀಸ್ ಬೋರ್ಡಿನಲ್ಲಿ ಅಂಟಿಸಬೇಕು.
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397

ಆಲೂರು ವೆಂಕಟರಾಯ

  ಕನ್ನಡ ಸಾಹಿತ್ಯ, ಪತ್ರಿಕೋದ್ಯಮ, ಸಾಂಸ್ಕೃತಿಕ ವಲಯದಲ್ಲಿ ನೀಡಿರುವ ಕಾಯಕಲ್ಪದಿಂದಾಗಿ ಕನ್ನಡ ಕುಲಪುರೋಹಿತರು ಎಂದು ಗೌರವಾನ್ವಿತ ಸ್ಥಾನ ಪಡೆದವರಾಗಿದ್ದಾರೆ.
>     ಆಲೂರು ವೆಂಕಟರಾಯರು ಜುಲೈ 12 1880ರಂದು ಬಿಜಾಪುರದಲ್ಲಿ ಜನಿಸಿದರು. ಇವರ ವಂಶಜರು ಧಾರವಾಡದ ಬಳಿಯ ಆಲೂರಿಗೆ ಬಂದು ನೆಲೆಸಿದ್ದರಿಂದ ಆಲೂರು ಇವರ ಮನೆತನದ ಹೆಸರಾಯಿತು. ತಂದೆ ಭೀಮರಾಯರು ಶಿರಸ್ತೇದಾರರು, ತಾಯಿ ಭಾಗೀರಥಿಬಾಯಿ. ಅವರ ಪ್ರಾರಂಭಿಕ ಶಿಕ್ಷಣ ಧಾರವಾಡದಲ್ಲಿ ನೆರವೇರಿತು.ಆಲೂರರು 1903ರಲ್ಲಿ ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ಬಿ. ಎ ಪದವಿ ಪಡೆದು, ಮುಂಬಯಿಯಲ್ಲಿ ಕಾನೂನಿನ ಅಭ್ಯಾಸಕ್ಕೆ ತೊಡಗಿ 1905ರಲ್ಲಿ ವಕೀಲರಾದರು.
>      ಬೇಸಿಗೆ ರಜೆಯಲ್ಲಿ, ನವ ವೃಂದಾವನ, ಆನೆಗೊಂದಿಗಳನ್ನು ಸಂದರ್ಶಿಸಿ ಅಲ್ಲಿಂದ ಹಂಪಿಗೆ ಹೋದರು. ಹಂಪಿಯ ಅವಶೇಷಗಳು ಅವರ ಮನಸ್ಸಿನ ಮೇಲೆ ಅಪೂರ್ವ ಪರಿಣಾಮ ಉಂಟುಮಾಡಿದವು. ಅವರ ಮಾತಿನಲ್ಲೇ ಹೇಳುವುದಾದರೆ: "ನಮ್ಮ ವಿಜಯನಗರವು ಅಲ್ಲಿ ಪ್ರತ್ಯಕ್ಷವಾಗಿಯೂ ವಿಸ್ತಾರವಾಗಿಯೂ ನನ್ನ ಮುಂದೆ ಬಿದ್ದಿದೆ. ಆ ದರ್ಶನವು ನನ್ನ ಮನದಲ್ಲಿ ವಿದ್ಯುತ್ತಿನ ಸಂಚಾರವನ್ನು ಮೂಡಿಸಿತು. ಚಲನಚಿತ್ರ ಪಟದಲ್ಲಿ ವಿದ್ಯುದ್ದೀಪದ ಬಲದಿಂದ ಮೂರ್ತಿಗಳು ಮೂಡುವಂತೆ ನನ್ನ ಹೃದಯದಲ್ಲಿ ಕರ್ನಾಟಕ ದೇವಿಯ ಸುಂದರ ಮೂರ್ತಿಯು ಒಡಮೂಡಹತ್ತಿತು. ಆ ದರ್ಶನವು ನನ್ನ ತಲೆಯಲ್ಲಿ ನಾನಾ ವಿದ ತರಂಗಗಳಿಗೆ ಇಂಬುಗೊಟ್ಟಿತು. ಹೃದಯ ಸಮುದ್ರವು ಅಲ್ಲೋಲ ಕಲ್ಲೋಲವಾಯಿತು. ಆ ದಿವಸವು ನನ್ನ ಜೀವನದ ಕ್ರಮದಲ್ಲಿ ಕ್ರಾಂತಿಯನ್ನು ಮಾಡಲಿಕ್ಕೆ ಕಾರಣವಾಯಿತು."
>      ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಪ್ರವೇಶಿಸಿದರು. ಸಂಘದ ಸ್ಥಿತಿ ಅಷ್ಟೊಂದು ಸಮರ್ಪಕವಾಗಿಲ್ಲದ ಕಾರಣ, ಅದರ ಕಾರ್ಯಭಾರವನ್ನು ಹೊತ್ತುಕೊಂಡರು. 'ವಾಗ್ಭೂಷಣ' ಪತ್ರಿಕೆಯ ಸಂಪಾದಕತ್ವ ವನ್ನು ವಹಿಸಿಕೊಂಡರು. ತಮ್ಮ ಸಾಮರ್ಥ್ಯದಿಂದ ಆ ಪತ್ರಿಕೆಗೆ ಹೊಸ ರೂಪವನ್ನು ಕೊಟ್ಟರು.ಅಂದಿನ ದಿನಗಳಲ್ಲಿ ಕನ್ನಡದಲ್ಲಿ ಪುಸ್ತಕಗಳ ಕೊರತೆಯನ್ನು ನೀಗಿಸಲು ಕರ್ನಾಟಕದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಎರಡು ಬಾರಿ ಗ್ರಂಥಕರ್ತರ ಸಮಾವೇಶವನ್ನು ಕರೆದರು. ಮೂರನೆಯ ಅಧಿವೇಶನ ಬೆಂಗಳೂರಿನಲ್ಲಿ ನಡೆಸಬೇಕೆಂಬ ಆಶಯ ರೂಪುಗೊಂಡಿದ್ದು ಆರು ವರ್ಷಗಳ ನಂತರ. 1915ರಲ್ಲಿ ನಡೆದ ಆ ಘಟನೆ ಕರ್ನಾಟಕ ಸಾಹಿತ್ಯ ಪರಿಷತ್ತಿಗೆ ನಾಂದಿ ಹಾಡಿತು. ಧಾರವಾಡದಲ್ಲಿದ್ದುಕೊಂಡೆ ಆಲೂರರು ಈ ಕಾರ್ಯವನ್ನು  ಮಾಡಿದರು.
>      ಸಾಹಿತ್ಯ ರಚನೆಯನ್ನು ಗಂಭೀರವಾಗಿ ಸ್ವೀಕರಿಸಿದ ಆಲೂರರು ಶಿಕ್ಷಣ ಮೀಮಾಂಸೆ, ಶ್ರೀ ವಿದ್ಯಾರಣ್ಯರ ಚರಿತ್ರೆ, ಕರ್ನಾಟಕ ಗತವೈಭವ, ಸಂಸಾರ ಸುಖ, ಕರ್ನಾಟಕದ ವೀರರತ್ನಗಳು, ಕರ್ನಾಟಕತ್ವದ ಸೂತ್ರಗಳು, ಕರ್ನಾಟಕತ್ವದ ವಿಕಾಸ, ರಾಷ್ರೀಯತ್ವದ ಮೀಮಾಂಸೆ, ಗೀತಾ ರಹಸ್ಯ, ನಾವು ಈಗ ಬೇಡುವ ಸ್ವರಾಜ್ಯ, ಸ್ವರಾಜ್ಯವೆಂದರೇನು?, ಸುಖವೂ ಶಾಂತಿಯೂ, ಸ್ವಾತಂತ್ರ್ಯ ಸಂಗ್ರಾಮ, ಗೀತಾಪ್ರಕಾಶ, ಗೀತಾಪರಿಮಳ, ಗೀತಾ ಸಂದೇಶ, ನನ್ನ ಜೀವನ ಸ್ಮೃತಿಗಳು, ಪೂರ್ವತರಂಗ, ಉತ್ತರತರಂಗ, ಮಧ್ವಸಿದ್ಧಾಂತ ಪ್ರವೇಶಿಕೆ, ಗೀತಾಭಾವ ಪ್ರದೀಪ ಪೂರ್ಣಬ್ರಹ್ಮವಾದ, ಬಿಡಿ ನುಡಿಗಳು ಮುಂತಾದವುಗಳನ್ನು ಪ್ರಕಟಿಸಿದರು.
>     ಆಲೂರರ 'ಗತವೈಭವ'ದಲ್ಲಿನ ಈ ಕೆಳಗಿನ ಮಾತುಗಳಲ್ಲಿನ ವೀರ್ಯವತ್ತಾದ ಶೈಲಿ ಇಂತಿದೆ... "ನಾನು ಕನ್ನಡಿಗನು, ಕರ್ನಾಟಕವು ನನ್ನದು ಎಂಬ ಸದ್ವಿಚಾರ ತರಂಗಗಳಿಂದ ಯಾವನ ಹೃದಯವು ಆತ್ಮಾನಂದದಿಂದ ಪುಳಕಿತಗೊಳ್ಳುವುದಿಲ್ಲವೋ ಕನ್ನಡ ತಾಯಿಗೆ ಈಗ ಬಂದೊದಗಿರುವ ವಿಷಮ ಸ್ಥಿತಿಯಲ್ಲಿ ಯಾವಾತನ ಹೃದಯವು ತಲ್ಲಣಿಸುವುದಿಲ್ಲವೋ ಅದು ಹೃದಯವಲ್ಲ, ಕಲ್ಲಿನ ಬಂಡೆ; ದೇಹವಲ್ಲ, ಮೋಟು ಮರ". ಈ ಮಾತುಗಳು ಅಲೂರರು ಕಂಡ ಅಂದಿನ ಕನ್ನಡದ ದುರ್ಗತಿ, ಅದಕ್ಕಾಗಿ ಅವರು ರೂಢಿಸಿಕೊಂಡ ಮನೋಧರ್ಮ ತೋರುತ್ತವೆ. ಅವರು ಮಾಡಿದ ಕೆಲಸಗಳಾದರೋ ಅವರು ಮುಂದೆ ಕನ್ನಡಕ್ಕೆ ನೀಡಿದ ಕಾಯಕಲ್ಪವನ್ನು ಸಾರಿ ಹೇಳುತ್ತವೆ. ಕನ್ನಡದಲ್ಲಿ ಮುಂದೆ ಆದ ಕೆಲಸಗಳು, ಪಡೆದ ಕೀರ್ತಿ ಇವೆಲ್ಲಕ್ಕೂ ಆಲೂರು ವೆಂಕಟರಾಯರು ಮಾಡಿದ ಕಾರ್ಯಗಳು ಬುನಾದಿ ಒದಗಿಸಿವೆ.
>     ಆಲೂರರು ಪ್ರಸಿದ್ಧ 'ಜಯಕರ್ನಾಟಕ' ಪತ್ರಿಕೆಯನ್ನು 1922ರಲ್ಲಿ ಸ್ಥಾಪಿಸಿದರು. ಆಲೂರರು ತಮ್ಮನ್ನು ತಾವು ಒಬ್ಬ ಸಾಹಿತಿಯೆಂದು ಎಲ್ಲಿಯೂ ಬಣ್ಣಿಸಿಕೊಂಡೇ ಇಲ್ಲ. ಆದರೆ, ದ.ರಾ ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಶ್ರೀರಂಗ, ಶಂ.ಭಾ ಜೋಷಿ, ರಂಗರಾವ್ ದಿವಕಾರ ಮುಂತಾದ ಹಲವು ಜನಪ್ರಿಯ ಸಾಹಿತಿ ಶ್ರೇಷ್ಠರಿಗೆ ಪೋಷಣೆ, ಪ್ರೋತ್ಸಾಹಗಳನ್ನು ನೀಡಿದರು. ಜಯಕರ್ನಾಟಕದ ಸಂಪಾದಕೀಯದಲ್ಲಿನ ಅವರು ಮಾತುಗಳು ಇಲ್ಲಿ ಉಲ್ಲೇಖನೀಯ. "ಕಚ್ಚಾ ಲೇಖಕರಿಗೂ, ಕಚ್ಚಾ ಕವಿಗಳಿಗೂ, ಅಶುದ್ಧ ಬರಹಗಳಿಗೂ ಆಸ್ಪದ ಕೊಟ್ಟಿರುವೆ. ಕರ್ನಾಟಕದ ಸಕಲಭಾಗಗಳಲ್ಲಿಯೂ ಲೇಖಕರು ಕವಿಗಳೂ ಹುಟ್ಟಬೇಕೆಂಬುದೇ ನನ್ನ ಉದ್ದೇಶ."
>      ಆಲೂರರು ಮೂಲತಃ ಧಾರ್ಮಿಕ ವ್ಯಕ್ತಿ. ಬಾಲಗಂಗಾಧರ ತಿಲಕರ 'ಗೀತಾರಹಸ್ಯ'ದ ಅನುವಾದ ಕಾರ್ಯ, ಅವರ ರಾಜಕಾರಣ ಮತ್ತು ಧರ್ಮದೃಷ್ಟಿಗಳ ಸಮನ್ವಯಕ್ಕೆ ಒಂದು ದಾರಿ ಮಾಡಿಕೊಟ್ಟಿತು ಎನ್ನಬಹುದು. 'ಗೀತಾ ರಹಸ್ಯ'ದ ಅನುವಾದ ಕಾರ್ಯ ಕೈಗೊಂಡದ್ದು, ತಿಲಕರ ಒತ್ತಾಯದ ಮೇರೆಗೆ. ಅನುವಾದ ಎಲ್ಲರಿಗೂ ಸಮ್ಮತವಾಗಬೇಕೆಂಬ ದೃಷ್ಟಿಯಿಂದ, ಬಿ.ಎಂ.ಶ್ರೀ ಮತ್ತಿತರರ ಅಭಿಪ್ರಾಯ ಪಡೆದು ಅದನ್ನು ಪರಿಷ್ಕರಿಸಿದರು. ಆಲೂರರ ಜೊತೆಗೆ ಕೆರೂರು ವಾಸುದೇವಾಚಾರ್ಯರು ಕೊನೆಯ ಭಾಗದ ಕೆಲವು ಶ್ಲೋಕಗಳನ್ನು ಅನುವಾದ ಮಾಡಿ ಸಹಕರಿಸಿದರು.ಅಲೂರ ವೆಂಕಟರಾಯರದು ಆಧ್ಯಾತ್ಮಿಕ ಪ್ರವೃತ್ತಿ. 1931ರಲ್ಲಿ ಬ್ರಿಟಿಷ್ ಸರ್ಕಾರ ಅವರಿಗಾಗಿ 'ಸರ್ಚ್ ವಾರೆಂಟ್' ಅನ್ನು ಹೊರಡಿಸಿತು. ಅವರನ್ನು ಸೆರೆಹಿಡಿದು ಕಲಘಟಗಿಯಲ್ಲಿ ದಿಗ್ಭಂದನದಲ್ಲಿ ಇರಿಸಿದರು.
>     ಇದರ ಪರಿಣಾಮ ಆಲೂರರ ಮೇಲೆ ಒಳ್ಳೆಯದನ್ನೇ ಮಾಡಿತು. ಅವರ ಆಧ್ಯಾತ್ಮ ಚಿಂತನೆಗೆ, ಅಧ್ಯಯನಕ್ಕೆ ಈ ಬಿಡುವು ಅನುವು ಮಾಡಿಕೊಟ್ಟಿತು. ಅವರು ಗೀತೆಯ ಬಗ್ಗೆ ಅನಂತರ ಬರೆದ ನಾಲ್ಕು ವಿದ್ವತ್ ಪೂರ್ಣ ಗ್ರಂಥಗಳ ಬರವಣಿಗೆಗೆ ಇಲ್ಲಿ ನಡೆಸಿದ ಚಿಂತನೆ ಮತ್ತು ಅಧ್ಯಯನಗಳೇ ಬುನಾದಿ ಹಾಕಿದವು. ಒಬ್ಬ ಮಾಧ್ವ ಧರ್ಮಾನುಯಾಯಿಯಾಗಿಯೂ ವೆಂಕಟರಾಯರು ಹಲವು ವಿಭಿನ್ನ ಮನೋಧರ್ಮದ ಗ್ರಂಥಗಳನ್ನು ಬರೆದರು.
>     ರಾಜಕಾರಣದಿಂದ ದೂರವಾದ ಆಲೂರರು ಇನ್ನೊಂದು ಕಡೆ ಆಧ್ಯಾತ್ಮಿಕ ಜೀವನದತ್ತ ಒಲವು - ಇವರು ಸಾರ್ವಜನಿಕವಾಗಿ ದೂರಸರಿಯಲು ಕಾರಣವಾಯಿತು.
>        ವರಕವಿ ದ.ರಾ. ಬೇಂದ್ರೆಯವರು ಅಲೂರರನ್ನು 'ಕರ್ನಾಟಕದ ಪ್ರಾಣೋಪಾಸಕರು' ಎಂದು ಕರೆದದ್ದು ಅರ್ಥಪೂರ್ಣವಾಗಿದೆ. ಇವರು ನಿಧನರಾದದ್ದು ಫೆಬ್ರುವರಿ 25 1964ರಲ್ಲಿ. ಹಾಗಾಗಿ ಅವರು ಕನ್ನಡ ಕುಲಪುರೋಹಿತರಾಗಿ ಕನ್ನಡಿಗರಲ್ಲಿ ನೆಲೆಸಿದ್ದಾರೆ.
>        ("ಆಲೂರು ವೆಂಕಟರಾಯರ ಜನ್ಮದಿನ ಜುಲೈ 12 ರ ತನ್ನಿಮಿತ್ತ ಈ ಲೇಖನ.)
> -ಹನುಮಂತ.ಮ.ದೇಶಕುಲಕರ್ಣಿ.
> ಸಾ.ಭೋಗೇನಾಗರಕೊಪ್ಪ-581196
> ತಾ.ಕಲಘಟಗಿ ಜಿ.ಧಾರವಾಡ
> ಮೊ.ನಂ.9731741397

ಮಂಗಲ್ ಪಾಂಡೆ


ಈ ಹೆಸರು ಕೇಳಿದ ಕೂಡಲೇ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಏನೂ ಒಂದು ರೀತಿ ಸಂಚಲನ ಮೂಡುತ್ತದೆ.
ಇಂದು (ಜುಲೈ 19) ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮ ವೀರ ಸೇನಾನಿ 'ಮಂಗಲ್ ಪಾಂಡೆ' ಅವರ ಜನುಮದಿನ.
ಮಂಗಲ್ ಪಾಂಡೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ, ನಾಗವ ಹಳ್ಳಿಯ ಬಡ ಬ್ರಾಹ್ಮಣ ಕುಟುಂಬವೊಂದರಲ್ಲಿ ದಿವಾಕರ್ ಪಾಂಡೆ ಹಾಗೂ ಅಭಯ್ ರಾಣಿ ಪಾಂಡೆಯವರ ಮಗನಾಗಿ 19 ನೇ ಜುಲೈ 1827ರಂದು ಜನಿಸಿದರು.
ಮಂಗಲ್ ಪಾಂಡೆ ಇನ್ನೂ ಮೂರು ವರ್ಷದ ಮಗುವಾಗಿದ್ದಾಗಲೇ ಅಂದಿನ ಬರಗಾಲದ ಪರಿಣಾಮವಾಗಿ ಕೃಷಿಯನ್ನೇ ಅವಲಂಬಿಸಿದ್ದ ಅವರ ತಂದೆ ದಿವಾಕರ್ ಪಾಂಡೆ ನಿಧನರಾದರು. ಕಷ್ಟಪಟ್ಟು ಬೆಳೆದ ಮಂಗಲ್ ಪಾಂಡೆ  ತಮ್ಮ 22 ನೇ ವಯಸ್ಸಿನಲ್ಲಿ(1849ರಲ್ಲಿ) ಈಸ್ಟ್ ಇಂಡಿಯಾ ಕಂಪನಿಯ ಸೇವೆಗೆ ಸೇರಿದರು.
ಅ ದಿನಗಳಲ್ಲಿ  ಬ್ರಿಟಿಷ್ ಸೇನೆಯಲ್ಲಿದ್ದ ಸೇವೆ ಸಲ್ಲಿಸುತ್ತಿದ್ದ ಭಾರತದ ಸಿಪಾಯಿಗಳನ್ನು ಅಗೌರವದಿಂದ ಕಾಣಲಾಗುತ್ತಿತ್ತು. ಬ್ರಿಟಿಷ್ ಸಿಪಾಯಿಗಳಿಗೆ ಹೋಲಿಸಿದರೆ ಭಾರತೀಯ ಸಿಪಾಯಿಗಳಿಗೆ ಸಿಗುತ್ತಿದ್ದ ಸಂಬಳವೂ ಕಡಿಮೆ ಎಂದು ಹೇಳಲಾಗುತ್ತದೆ. ಯುದ್ಧಗಳಲ್ಲಿ ಹೋರಾಡಲು ಭಾರತದಿಂದ ಬೇರೆ ಕಡೆಗೂ ಹೋಗಬೇಕಿತ್ತು. ಹಣೆಗೆ ತಿಲಕ ಇಟ್ಟುಕೊಳ್ಳುವುದು, ಗಡ್ಡ-ಮೀಸೆ ಬೆಳೆಸುವುದು ಕೂಡ ನಿಷಿದ್ಧವಾಗಿತ್ತು.ಕೊನೆಗೆ ಭಾರತದ ಸಿಪಾಯಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿ ಅವರೆಲ್ಲ ದಂಗೆ ಎದ್ದರು.
1857 ರ ಮಾರ್ಚ 29 ರಂದು ಬಂದೂಕನ್ನು ಕೈಗೆತ್ತಿಕೊಂಡು ಕವಾಯತು ಮೈದಾನಕ್ಕೆ ನುಗ್ಗಿ ತನ್ನ ಸೊದರ ಸಿಪಾಯಿಗಳಿಗೆ “ನಿಮ್ಮ ಧರ್ಮದ ಮೇಲಾಣೆ! ಬನ್ನಿ ವಂಚಕ ಶತ್ರುಗಳ ಮೇಲೆ ಧೈರ್ಯಗೆಡದೆ ಆಕ್ರಮಣ ಮಾಡೋಣ, ನಮ್ಮ ನಾಡಿನ ಸ್ವಾತಂತ್ರ್ಯವನ್ನು ಗಳಿಸೋಣ. ಎಂದು ಮೊದಲಿಗೆ ಕರೆಕೊಟ್ಟವರೇ ಈ ಮಂಗಲ್ ಪಾಂಡೆ.ಅಷ್ಟೇ ಅಲ್ಲ ಬ್ರಿಟಿಷ್ ಅಧಿಕಾರಿಯ ಮೇಲೆ ಗುಂಡು ಹಾರಿಸಿದರು. ಅಲ್ಲಿ ಬಹಳಷ್ಟು ಅಚ್ಚರಿ ಬೆಳವಣಿಗೆಗಳು ನಡೆದವು ಆ ನಂತರದಲ್ಲಿ ಬ್ರಿಟಿಷರಿಗೆ ತಲೆಬಾಗಬಾರದೆಂಬ ಉದ್ದೇಶದಿಂದ ಸ್ವತಃ ಗುಂಡು ಹಾರಿಸಿಕೊಳ್ಳಲು ಯತ್ನಿಸಿದ ಅವರ ಪ್ರಯತ್ನ ವಿಫಲಗೊಂಡಿತು.ಗಾಯಗೊಂಡು ನೆಲಕ್ಕುರುಳಿದ ಮಂಗಲ್ ಪಾಂಡೆಯನ್ನು ಆಸ್ಪತ್ರೆಗೆ ಕರೆ ತರಲಾಯಿತು. ಗಾಯದಿಂದ ಚೇತರಿಸಿಕೊಂಡ ಮಂಗಲ್ ಪಾಂಡೆಯನ್ನು  ವಿಚಾರಣೆಗೊಳಪಡಿಸಲಾಯಿತು. ವಿಚಾರಣೆವೇಳೆ ಕ್ರಾಂತಿಯ ಸೂತ್ರಧಾರಿಗಳ, ಸಹಕಾರಿಗಳ ಹೆಸರುಗಳನ್ನು ತಿಳಸುವಂತೆ ಎಷ್ಟೇ ಬಲವಂತ ಪಡಿಸಿದರು, ಮಂಗಲ್ ಪಾಂಡೆ ಯಾರ ಹೆಸರನ್ನು ಹೇಳಲೇ ಇಲ್ಲ.ಕೊನೆಗೆ ನ್ಯಾಯಾಲಯದ ತೀರ್ಪಿನಂತೆ ಏಪ್ರಿಲ್ 8 ರಂದು ಮಂಗಲ್ ಪಾಂಡೆಯನ್ನು ಗಲ್ಲಿಗೇರಿಸುವಂತೆ ಆದೇಶಿಸಿತು. ಆದರೆ ಇಡೀ  ಊರಿನಲ್ಲಿ ಯಾರು ಮಂಗಲ್ ಪಾಂಡೆಯನ್ನು ನೇಣಿಗೆ ಹಾಕಲು ತಯಾರಿಲ್ಲದ ಕಾರಣಕ್ಕೆ ಕಲ್ಕತ್ತಾದಿಂದ ನಾಲ್ವರು ನೇಣುಹಾಕುವವರನ್ನು ಕರೆಯಿಸಿ, ಏಪ್ರಿಲ್ 8ರಂದು ಬೆಳಗಿನ ಸಮಯದಲ್ಲಿ ಮಂಗಲ್ ಪಾಂಡೆಯನ್ನು ಗಲ್ಲಿಗೇರಿಸಲಾಯಿತು.
ನಂತರ ಅಮರ ಹುತಾತ್ಮರ ಪಂಕ್ತಿಗೆ ಸೇರಿಬಿಟ್ಟರು ಮಂಗಲ್ ಪಾಂಡೆ ಮತ್ತು ಆತನ ಚೇತನ ಮಿಂಚಿನ ರೀತಿಯಲ್ಲಿ ಇಡೀ ದೇಶದ ತುಂಬಾ ಹಬ್ಬಿಕೊಂಡಿತು,ಅದು ಎಷ್ಟರಮಟ್ಟಿಗೆ ಎಂದರೆ ಮೇ 10, 1857ರಂದು ಮೀರತ್‌ನಲ್ಲಿದ್ದ ಬಂಗಾಲ ತುಕಡಿಯಲ್ಲಿನ ಭಾರತದ ಸಿಪಾಯಿಗಳೆಲ್ಲಾ ಬ್ರಿಟಿಷರ ವಿರುದ್ಧ ದಂಗೆ ಎದ್ದರು. ಬ್ರಿಟಿಷ್ ಅಧಿಕಾರಿಗಳ ಆದೇಶವನ್ನು ಸಾಮೂಹಿಕವಾಗಿ ಧಿಕ್ಕರಿಸಿ ಎಲ್ಲರೂ ದೆಹಲಿಯಲ್ಲಿ ಕವಾಯತು ಹೊರಟರು. ವಿವಿಧ ಪ್ರಾಂತ್ಯಗಳ ಸಿಪಾಯಿಗಳೂ ಅವರನ್ನು ಸೇರಿಕೊಳ್ಳತೊಡಗಿದರೆಂದರೆ  ತಿಳಿಯುತ್ತದೆ ಮಂಗಲ್ ಪಾಂಡೆಯ ಕರೆ ಎಷ್ಟರಮಟ್ಟಿಗೆ ಬದಲಾವಣೆಯ ಗಾಳಿ ಬೀಸಿತು ಎಂದು.
ವಿವಿಧ ಪ್ರಾಂತ್ಯದ ಸಿಪಾಯಿಗಳಾದ ನಾನಾಸಾಹೇಬ್ ಪೇಶ್ವೆ, ತಾತ್ಯಾ ಟೋಪೆ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಬಿಹಾರದ ಕುನ್ವರ್‌ಸಿಂಗ್ ಹಾಗೂ ಇನ್ನೂ ಹಲವರು ವಿವಿಧ ಪ್ರಾಂತ್ಯಗಳಲ್ಲಿ ದಂಗೆಯ ನೇತೃತ್ವ ವಹಿಸಿಕೊಂಡಿದ್ದರು. ಉತ್ತರ ಪ್ರದೇಶದ ಬಹುತೇಕ ಹಳ್ಳಿಗಳು, ಪಟ್ಟಣಗಳು ದಂಗೆಯಲ್ಲಿ ಪಾಲ್ಗೊಂಡವು. ಬಂಗಾಲದಿಂದ ಬಿಹಾರ, ಒರಿಸ್ಸಾಗೂ ಸಮರದ ಜ್ವಾಲೆಗಳು ಹಬ್ಬಿದವು. ಔರಂಗಾಬಾದ್, ಕೊಲ್ಹಾಪುರ, ಸತಾರಾ ಹಾಗೂ ನಾಗ್ಪುರಗಳಲ್ಲೂ ಸಿಪಾಯಿಗಳು ದಂಗೆ ಎದ್ದರು.
ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಥಮ ಕಿಚ್ಚನ್ನು ನೀಡಿದ  ಈ ಮಹಾನ್ ಚೇತನಕ್ಕೆ ಕೊನೆಯ ಪಕ್ಷ ಅವರ ಜನುಮ ದಿನದಂದು ನೆನಪಿಸಿಕೊಳ್ಳವುದು ಹಾಗೂ ಇಂತಹ ಮಹಾನ್ ಪುರುಷರ ಬಗ್ಗೆ ಮಕ್ಕಳಿಗೆ ತಿಳಿಸುವುದು ಭಾರತೀಯರಾದ ನಮ್ಮ ಆದ್ಯ ಕರ್ತವ್ಯ ಅಲ್ವೇ ಸ್ನೇಹಿತರೇ ??
#ಜೈಭಾರತಮಾತೆ
ಸಾದ್ಯವಾದಲ್ಲಿ ಈ ಲೇಖನವನ್ನು ಶೇರ್ ಮಾಡಿ, ಮಂಗಲ್b ಪಾಂಡೆಯವರ ಬಗ್ಗೆ ತಿಳುವಳಿಕೆ ಇಲ್ಲದವರಿಗೆ ಸ್ವಲ್ಪ ತಿಳಿಸುವ ಪ್ರಯತ್ನ ಮಾಡೋಣ.
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
ಮೊ.ನಂ.9731741397