ಯುವ ಉತ್ಸಾಹಿ, ನಿರಪೇಕ್ಷ ಮನೋಭಾವದ ಅಪರೂಪ ವ್ಯಕ್ತಿತ್ವದ
7ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ
ದೀಪಾ ಸಂತೋಷ ನೀರಲಕಟ್ಟಿ
*******************************************************************
ಸ್ವಾರ್ಥವಿಲ್ಲದ ಸ್ಥಳ ಇಡೀ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲವೆಂದೇ ಹೇಳಬಹುದು. ಮನುಷ್ಯ ಹುಟ್ತಾನೇ ಸ್ವಾರ್ಥವನ್ನ ಬೆನ್ನಿಗೆ ಕಟ್ಟಿಕೊಂಡು ನಿಂತಿರ್ತಾನೆ. ಮಗುವೊಂದು ಬೆಳೆದು ಮಾನವನಾಗುತ್ತಿದ್ದಂತೆಯೇ ಸ್ವಾರ್ಥವು ಸಹ ನೆರಳಿನಂತೆ ಬೆಳೆದು ಬ್ರಹದಾಕಾರ ರೂಪ ಪಡೆದು ಎಷ್ಟೋ ಭಾಂಧವ್ಯಗಳನ್ನು ಕಳೆದುಕೊಳ್ಳಲು ಸಿದ್ಧವಾಗಿಬಿಡುತ್ತದೆ. ಇಂಥದೊಂದು ಸ್ವಾರ್ಥ ಪ್ರಪಂಚದಲ್ಲಿ ಗುಲಗಂಜಿಯಷ್ಟೂ ಸ್ವಾರ್ಥವಿಟ್ಟುಕೊಳ್ಳದೇ ಸಮಾಜ ಸೇವೆಗೆ ಟೊಂಕ ಕಟ್ಟಿ ನಿಂತಂಥ ವ್ಯಕ್ತಿಯೇನಾದರು ಕಂಡರೆ ಕೈ ಮುಗಿಯಬೇಕೆಂದು ಖಂಡಿತ ಅನ್ನಿಸದೇ ಇರಲಾರದು. ಅಲ್ಲವೇ ? ಅಂಥ ಒಬ್ಬ ಅಪರೂಪದ ವ್ಯಕ್ತಿಯೊಬ್ಬರು ನಮ್ಮ ಸನಿಹದಲ್ಲೇ ಇದ್ದಾರೆ. ಹಲಸಿನ ತೊಳೆ ಹೇಗೆ ತನ್ನ ಹಣ್ಣಿನೊಳಗಿರುವ ಅಂಟು ದ್ರವವನ್ನು ಮೈಗಂಟಿಸಿಕೊಳ್ಳದೇ ಹೇಗೆ ಬರಿಯ ಸಿಹಿಯನ್ನೇ ಕೊಡುತ್ತದೆಯೋ ಹಾಗೇ ಈ ಭ್ರಷ್ಟ ಸಮಾಜದಲ್ಲಿ ಕೇವಲ ಮಾನವೀಯ ಮೌಲ್ಯಗಳನ್ನೇ ಮೈ ಗೂಡಿಸಿಕೊಂಡು, ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಯಶಸ್ಸಿನ ಮೇರು ಶಿಖರವನ್ನೇರಲು ಮುಂಚೂಣಿಯಲ್ಲಿ ನಿಂತಂತಹ ಒಂದು ಅಪರೂಪದ ವ್ಯಕ್ತಿತ್ವದ ಅನಾವರಣ ಮಾಡಲಿಚ್ಚಿಸುತ್ತೇನೆ. ಮುಖತಃ ಅವರನ್ನು ಇದುವರೆಗೂ ಅವರನ್ನ ಭೇಟಿಯಾಗೋಕೆ ಸಾಧ್ಯವಾಗಿಲ್ಲವೆಂಬುದೇ ನನ್ನಲ್ಲಿ ಕೊರಗಿದ್ದರೂ ಸಹ ಅವರಿಂದ ಉಪಕಾರ ಪಡೆದುಕೊಂಡ ಅನೇಕ ಜೀವಗಳ ಉಪಕಾರ ಸ್ಮರಣೆಯಿಂದ ಸಂಗ್ರಹಿಸಿದ ವಾಸ್ತವದ ನುಡಿಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.
ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬುದು ಹೇಗೆ ಜಗಜ್ಜಾಹೀರು ವ್ಯಾಕ್ಯವಾಗಿದೆಯೋ ಹಾಗೆಯೇ ನಮ್ಮ 7 ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀಮತಿ ದೀಪಾ ಸಂತೋಷ್ ನೀರಲಕಟ್ಟಿ ಎಂಬ ಯುವ ಉತ್ಸಾಹಿ ಮಹಿಳಾ ಅಭ್ಯರ್ಥಿಯ ಹಿಂದಿರುವ ಆನೆಬಲ ದುಡ್ಡಲ್ಲ . ಬದಲಾಗಿ ಕೇವಲ ಜನಬಲದಿಂದಲೇ ಅಖಾಡಕ್ಕಿಳಿದ ಅವರ ಪತಿ ಶ್ರೀ ಸಂತೋಷ್ ನೀರಲಕಟ್ಟಿಯವರು. ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸಂತೋಷರವರ ತಂದೆ ಒಬ್ಬ ಕೃಷಿಕರು. ಬಡತನದ ಕಾರಣದಿಂದಾಗಿ ಅವರ ತಾಯಿಯವರೂ ಸಹ ಬೇರೆಯವರ ಹೊಲದಲ್ಲಿಯೂ ದುಡಿದು ಬರುತ್ತಿದ್ದರು. ಬಡತನಕ್ಕೆ ಹಸಿವು ಜಾಸ್ತಿ ಎಂಬಂತೆ ಇವರ ದುಡಿಮೆ ಸಾಲದಾದಾಗ ತುಂಬಾ ಜವಾಬ್ದಾರಿಯುತ ಪುಟ್ಟು ಹುಡುಗ ಸಂತೋಷ್ ಲಾಟರಿ ಟಿಕೆಟ್ ಮಾರುವುದು ಮತ್ತು ತರಕಾರಿ ಮಾರುವ ಕೆಲಸ ಮಾಡಿ ತಮ್ಮ ಶಾಲೆಯ ಖರ್ಚು ವೆಚ್ಚ ನಿಭಾಯಿಸುತ್ತಾರೆ ತಾನು ದುಡಿದು ಕೂಡಿಟ್ಟ ಕಾಸನ್ನು ತನ್ನ ಗೆಳೆಯನ ಶಾಲೆಯ ಶುಲ್ಕ ತುಂಬಲು ಮನಸಾರೆ ನೀಡಿದ ಪುಟ್ಟ ಬಾಲಕನ ಅಂತಃ ಸತ್ವದ ಪರೋಪಕಾರಿ ಗುಣವನ್ನು ನಾವು ಬಾಲ್ಯದ ಸಂಸ್ಕಾರವೆಂದೇ ಅರಿಯಬೇಕು ಇದೇ ಮನಸ್ಥಿತಿ ಅವರನ್ನು ಇಂದಿನವರೆಗೂ ಕೈ ಹಿಡಿದು ಜನ ಬೆಂಬಲ ಸಿಗುವಂತೆ ಮಾಡಿದ್ದು ಸುಳ್ಳಲ್ಲ. ಇವರ ಶರಣ ಕೈಂಕರ್ಯಗಳು ಮುಂದುವರೆಯುತ್ತ ಹೋದಂತೆ ರಾಜಕೀಯ ಧುರೀಣರಾದ ಹಿರಿಯರು ಶ್ರೀ ಶಿವಶಂಕರ ಹಂಪಣ್ಣನವರು ದ್ರೋಣಾಚಾರ್ಯರ ಪಾತ್ರವನ್ನು ನಿರ್ವಹಿಸಿ ರಾಜ - ಗುರುವಾಗುತ್ತಾರೆ. ನಂತರದಲ್ಲಿ ಏರಟೇಲ್ ಸಿಮ್ ಕಾರ್ಡ್ ವಿತರಕಾರಾಗಿ ಕೆಲಸ ನಿರ್ವಹಿಸುತ್ತಿದ್ದ ಸಂತೋಷರವರಿಗೆ ಹು ಧಾ ಮ ಪಾಲಿಕೆಯ ಮಾಜಿ ಸದಸ್ಯರಾದ ಶ್ರೀ ಮತಿ ಸರೋಜಾ ಪಾಟೀಲರು ಇವರನ್ನು ಕಾರ್ಪೊರೇಷನದಲ್ಲಿ ಸದಸ್ಯರನ್ನಾಗಿ ನೇಮಕ ಮಾಡುತ್ತಾರೆ . ಬಾಳ ಮುಸ್ಸಂಜೆಯಲ್ಲಿ ನಿಂತ ಹಿರಿಯ ಜೀವಗಳಿಗೆ ವೃದ್ಯಾಪ್ಯ ವೇತನವನ್ನು, ವಿಶೇಷ ಚೇತನರಿಗೆ ವೇತನವನ್ನು, ಮಧ್ಯಮದಲ್ಲಿರುವ ಅಬಲೆಯರಿಗೆ ಅಣ್ಣನಂತೆ ನಿಂತು ವೇತನವನ್ನು ಅವರವರ ಹಕ್ಕುಗಳಿಗನುಸಾರವಾಗಿ ಸಿಗುವಂತೆ ಮಾಡಿದ್ದಾರೆ. ಧಾರವಾಡ ಶಹರ ಮಾತ್ರವಲ್ಲದೇ ಸುತ್ತಲಿನ ಗ್ರಾಮಗಳ ಅನಾರೋಗ್ಯ ಪೀಡಿತರ ನೋವು ನಿವಾರಿಸುವ ಸಂಜೀವಿನಿಯಾಗಿದ್ದರೆ. ಸಂತೋಷರವರು ತುಂಬ ಹೆಮ್ಮೆಯಿಂದ ಅಣ್ಣ ಎಂದು ಕರೆಯುವ ಮಾಜಿ ಸಚಿವರಾದ ಶ್ರೀ ವಿನಯ್ ಕುಲಕರ್ಣಿಯವರು ಎಳೆಯ ಹುಡುಗನ ಶಿಸ್ತು, ಪ್ರಾಮಾಣಿಕತೆ ಮತ್ತು ನಾಯಕತ್ವದ ಗುಣಗಳನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ಹೋಗಿ ನಿರಪೇಕ್ಷ ಮನೋಭಾವದ ಸಂತೋಷರವರಿಗೆ ಮೊತ್ತ ಮೊದಲ ಬಾರಿಗೆ 2006 ರಲ್ಲಿ ರಾಜಕೀಯದ ಹೆಬ್ಬಾಗಿಲನ್ನು ತೆರೆದು ಆಹ್ವಾನಿಸಿದರು. ಹುಡುಗನ ಸ್ವಾಮಿನಿಷ್ಠೆಯನ್ನು ಕಂಡ ಕುಲರ್ಣಿಯವರು ನಗರದ ಪ್ರತಿಷ್ಠಿತ ಸಿವಿಲ್ ಆಸ್ಪತ್ರೆಯಲ್ಲಿ ಸ್ಥಾಯಿ ಸಮೀತಿಯ ಪ್ರಮುಖ ಸದಸ್ಯರಲ್ಲೊಬ್ಬರನ್ನಾಗಿ ನೇಮಿಸಿದರು. ಮೊದಲೇ ಸಂಜೀವಿನಿಯನ್ನು ಹೊತ್ತು ತಂದು ಜೀವರಕ್ಷಕನಾದ ಹನುಮಂತನಂತೆ ಅವಿರತ ಕೆಲಸ ಮಾಡುತ್ತಿದ್ದ ಸಂತೋಷರಿಗೆ ಈ ಆಸ್ಪತ್ರೆಯ ಸದಸ್ಯತ್ವ ಸಿಕ್ಕಿದ್ದರಿಂದ ಅನೇಕ ಅಮಾಯಕರಿಗೆ ಸಮಯಕ್ಕೆ ಸರಿಯಾಗಿ ಔಷಧೋಪಚಾರ ದೊರೆತು ಆರೋಗ್ಯ ಹೊಂದಿ ಕ್ೃತಜ್ಞತೆ ಸಲ್ಲಿಸಿದ್ದಾರೆ. ಜಗತ್ತನ್ನೇ ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡ ಕೊರೋನ ಮೊದಲ ಬಾರಿಗೆ ಬಂದಾಗ ಇಡೀ ದೇಶವೇ ಜನತಾ ರಕ್ಷಣೆಗೆಂದು ಲಾಕ್ಡೌನ್ ಎಂಬ ಅಸ್ತ್ರವನ್ನು ಹಿಡಿಯಿತು. ಇಂತಹ ಲಾಕ್ ಡೌನ್ ಸಮಯದಲ್ಲಿ ಸಾರಿಗೆ ಹೊಟೇಲು ಎಲ್ಲವೂ ತಾತ್ಕಾಲಿಕ ರಜೆ ಘೋಷಿಸಿದವು. ಈ ಸಂದರ್ಭದಲ್ಲಿ ಧಾರವಾಡದ ಬೇಲೂರು ಕಾರ್ಖಾನೆಗಳಲ್ಲಿ ದುಡಿಯಲು ಬಂದಂತಹ ಪರ ರಾಜ್ಯಗಳ ಜನರು ತಮ್ಮ ತಮ್ಮ ಊರುಗಳಿಗೆ ಮರಳಲು ಸಾರಿಗೆ ಇಲ್ಲದೆ ಹೊಟ್ಟೆಗೆ ಊಟವೂ ಇಲ್ಲದೆ ಅಸಹಾಯಕರಾಗಿದ್ದಾಗ ಮಾತೃ ಹೃದಯಿ ಸಂತೋಷರು ಮನೆಯಲ್ಲಿ ತಾವೇ ಪ್ರತಿನಿತ್ಯ ಊಟ ತಯಾರಿಸಿ ಅವರಿದ್ದಲ್ಲಿಗೇ ಹೋಗಿ ಕೊಟ್ಟು ಬರುತ್ತಿದ್ದರು. ನಮ್ಮವರಲ್ಲದ ನಮ್ಮವರಿಗೆ ಇವರು ಮಾಡಿದ ಅನ್ನಸಂತರ್ಪಣೆ ಸಾಮಾನ್ಯವಲ್ಲದೆ ವಿಶೇಷವಾಗಿದೆ. ಹಾಗೆ ಕೊರೊನಾದಿಂದಾಗಿ ಜೀವ ಕಳೆದುಕೊಂಡವರ ಅಂತ್ಯ ಸಂಸ್ಕಾರಕ್ಕೆ ಸ್ವಲ್ಪವೂ ಅಳುಕಿಲ್ಲದೆ ಮುಂದೆ ನಿಂತು ನೆರವೇರಿಸಿದ್ದಾರೆ. ಪಿ. ಪಿ. ಇ ರಕ್ಷಣಾ ಕವಚನನ್ನು ಧರಿಸದೇ ಜನರ ಕಷ್ಟಕ್ಕೆ ಸ್ಪಂದಿಸಿದ ಹಾಗೂ ಅವರ ಸಂಸ್ಕಾರಗಳಲ್ಲಿ ಖುದ್ದಾಗಿ ಮುಂದೆ ನಿಂತು ಮಡಿದ ಜೀವಕ್ಕೆ ಸಂಸ್ಕಾರ ಕೊಡಿಸಿದ್ದಲ್ಲದೇ ಎಷ್ಟೋ ಜನ ಕೋವಿಡ್ ರೋಗಗಳಿಗೆ ಹೊತ್ತಲ್ಲದ ಹೊತ್ತಲ್ಲಿ ಹಾಸಿಗೆ ವ್ಯವಸ್ಥೆಯನ್ನು , ಹೋಂ ಐಸೋಲೇಶನ್ ವ್ಯವಸ್ಥೆಗಳನ್ನು ಮಾಡಿ ಕೊಟ್ಟು ಉಪಕಾರ ಸ್ಮರಣಿಯರಾಗಿದ್ದರೆ.ಒಂದು ನಾಯಿಗೆ ಬಿಸ್ಕೇಟ್ ಹಾಕಿದ್ದನ್ನೂ ಸಹ ಹತ್ತಾರು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಮನಸೋ ಇಚ್ಛೆ ಹರಿಬಿಡುವವರ ಮಧ್ಯದಲ್ಲಿ ತಾನು ಮಾಡಿದ ಹತ್ತಾರು ಕಾರ್ಯಗಳ ಕುರಿತಾದ ಒಂದೇ ಒಂದು ಫೋಟೋವನ್ನೂ ತೆಗೆದುಕೊಳ್ಳದ,ತೋರಿಕೆಯ ಸಹಾಯವನ್ನು ಮಾಡದ ಮಾನವೀಯ ಕಾಳಜಿಯುಳ್ಳ ಇವರನ್ನು ಜನ ಗುರುತಿಸಿದ್ದಾರೆ.ಅವರ ಬಂಧುಗಳಾದ ಎಲ್ಲ ಕುಟುಂಬಗಳು ಬೆಂಬಲವಾಗಿ ನಿಂತಿವೆ ಮಾತ್ರವಲ್ಲದೆ ಅನೇಕ ಸ್ನೇಹಬಳಗದಲ್ಲೂ ಇವರ ಸಕ್ರೀಯ ಚಟುವಟಿಕೆಗಳ ಪಾಲಿದೆ. ನಿತ್ಯವೂ ಎಷ್ಟೋ ಜನರು ಅವರಿಂದ ಸಹಾಯ ತೆಗೆದುಕೊಳ್ಳುತ್ತಿದ್ದಾರೆ.ನನ್ನ ಅರಿವಿಗೆ ಬಂದಿದ್ದು ಇಷ್ಟಾದರೆ ಬರದಿರುವುದರ ತೂಕದ ಭಾರವೇ ಹೆಚ್ಚಿದೆ ಎನ್ನಬಹುದು. ವೆಷ್ಟಿಯಲ್ಲಿ ಸಮುಷ್ಠಿ ಎಂಬ ಮಂತ್ರವನ್ನಿಟ್ಟುಕೊಂಡು ಪರೋಪಕಾರಿ ಜೀವನವನ್ನು ನಡೆಸುತ್ತಿರುವ "ಸಾಮಾನ್ಯನೊಬ್ಬನ ಶ್ರೇಷ್ಠವಾದ ಕನಸು ಈಡೇರಲಿ".
ತಮ್ಮ ಬದುಕಿನ ಮೌಲ್ಯಗಳನ್ನು ತಮ್ಮ ಧರ್ಮಪತ್ನಿಯ ಮೂಲಕ ಮತ್ತಷ್ಟು ಮಗದಷ್ಟು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಅವರು ಮಾಡುತ್ತಿರುವ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಇಬ್ಬರು ಮುದ್ದು ಮಕ್ಕಳ ತಂದೆಯಾದ ಸಂತೋಷರು ತಮ್ಮ ಪತ್ನಿಯ ಕಾರ್ಯದಲ್ಲಿ ಬೆನ್ನೆಲುಬಾಗಿ ನಿಂತಿದ್ದಾರೆ. ಧನಬಲವಿಲ್ಲದ ಸಾಮಾನ್ಯನೊಬ್ಬನನ್ನು ಜನಬಲ ಕೈ ಹಿಡಿಯಲಿ.