ಜೀವಕಣಗಳನ್ನು ಹೊತ್ತೊಯ್ಯುವ ರಕ್ತವೇ ಎಲ್ಲಾ ಜೀವಿಗಳ ಪೋಷಕ ಶಕ್ತಿ. ಒಂದು ಅಮೂಲ್ಯ ಜೀವದ್ರವ. ಅದಕ್ಕೆ ರಕ್ತವನ್ನು ಒಂದು ವಿಶಿಷ್ಟವರ್ಗಕ್ಕೆಸೇರಿದ, "ಕನೆಕ್ಟೀವ್ ಟಿಶ್ಯೂ" ಎನ್ನುತ್ತಾರೆ. ಮಾನವ ರಕ್ತ ಕಣಗಳು:a - ಎರಿಥ್ರೋಸೈಟ್ಸ್; b - ನ್ಯೂಟ್ರೋಫಿಲ್;c - ಎಸಿನೋಫಿಲ್; d - ಲಿಂಫೋಸೈಟ್, ರಕ್ತ ಪ್ಲಾಸ್ಮ ಎಂಬ ಜೀವರಸದಿಂದ ಕೂಡಿದ್ದು, ಅದರಲ್ಲಿ ವ್ಯವಸ್ಥಿತ ಪ್ರಮಾಣದಲ್ಲಿ ಕೆಂಪು ರಕ್ತಕಣಗಳು ಬಿಳಿರಕ್ತಕಣಗಳು, ಮತ್ತು ಪ್ಲೇಟ್ ಲೆಟ್ ಎಂಬಜೀವಕೋಶಗಳು ತೇಲುತ್ತಿರುತ್ತವೆ.ಪ್ಲಾಸ್ಮ ಶೇ.91-92% ರಷ್ಟು ನೀರಿನಿಂದಾಗಿದ್ದು, ಉಳಿದ ಭಾಗ ಘನವಸ್ತುಗಳಿಂದಾಗಿದೆ. ಸಸಾರಜನಕ, ಯೂರಿಯ, ಆಸಿಡ್, ಕ್ರಿಯಾಟಿನಿನ್, ಅಮೋನಿಯಾ, ಅಮೈನೋ ಆಸಿಡ್, ಗ್ಜಾಂಥಿನ್, ಪದಾರ್ಥಗಳು, ಶೇಕಡ 7.5% ರಷ್ಟು. ಇನ್ನುಳಿದದ್ದು, ಸೋಡಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಮ್, ಮೆಗ್ನೀಶಿಯಮ್, ಫಾಸ್ಫರಸ್, ಮೊದಲಾದ, ನಿರವಯವ ಪದಾರ್ಥಗಳು. ಪಿಷ್ಟ, ಅಂದರೆ ಮುಖ್ಯವಾಗಿ ಗ್ಲೂಕೋಸ್, ಕೊಬ್ಬು, ಅಂದರೆ, ಕೊಲೆಸ್ಟರಾಲ್, ಟ್ರೈಗ್ಲಿಸರೈಡ್, ನಾನಾ ತರಹದ ಹಾರ್ಮೋನ್ ಗಳು, ಕಿಣ್ವಗಳು, ಪ್ರತಿರೋಧಕಗಳು, ಗ್ಜಾಂಥೋಫಿಲಿನ್, ಕೆರೋಟಿನ್ ಮುಂತಾದ ಬಣ್ಣ ಬರಿಸುವ ಪದಾರ್ಥಗಳು. ಸೋಡಿಯಮ್ ಪೊಟ್ಯಾಸಿಯಮ್ ಲವಣಾಂಶಗಳು ನಿಖರ ಪ್ರಮಾಣದಲ್ಲಿಲ್ಲದಿದ್ದರೆ ಕಾಯಿಲೆ ಖಂಡಿತ. ರಕ್ತದ ವಿಶಿಷ್ಟ ಗುರುತ್ವಾಕರ್ಷಣೆ, 1.048 ರಿಂದ, 1.0466 ಇರುತ್ತದೆ. ದೇಹದ ನೀರಿನ ಅಂಶ ಕಡಿಮೆಯದಂತೆ ಇದರ ಪ್ರಮಾಣ ಕಡಿಮೆಯಾಗುತ್ತದೆ. ಆ ಕೆಂಪುರಕ್ತ ಕಣಗಳು ಸುಮಾರು 20 ಬಗೆಯ ಬ್ಲಡ್ ಗ್ರೂಪ್ ನ್ನು ಹೊಂದಿದ್ದು, ಎ, ಬಿ, ಎಬಿ ಹಾಗೂ ಓ ಅವುಗಳಲ್ಲಿ ಮುಖ್ಯವಾದದ್ದು. ಹಿಮೋಗ್ಲೋಬಿನ್ ಅಂಶ ತೀರಾ ಕುಸಿದರೆ, (18 ಗ್ರಾಮ್ ಇರಬೇಕು) ಮೂರ್ನಾಲ್ಕು ಆದಾಗ, ರೋಗಿಗೆ ರಕ್ತವನ್ನು ಮರುಪೂರಣ ಮಾಡಬೇಕಾಗುತ್ತದೆ. ರಕ್ತದಲ್ಲಿ ಒಂದು ಬಿಳಿರಕ್ತಕಣಕ್ಕೆದುರಾಗಿ 700 ಕೆಂಪುರಕ್ತ ಕಣಗಳಿರುತ್ತವೆ. (ಅಂದರೆ, 1 : 700)ಅನುಪಾತದಲ್ಲಿರುತ್ತವೆ. ಬಿಳಿರಕ್ತಕಣಗಳಲ್ಲಿ ಹಲವು ವಿಧಗಳಿವೆ. ಇವೆಲ್ಲಾ ದೇಹವನ್ನು ಸದಾಕಾಲವೂ ರಕ್ಷಿಸುವ ಸಿಪಾಯಿಗಳಂತೆ ವರ್ತಿಸುತ್ತವೆ. ಅವುಗಳ ವಿವರ ಕೆಳಗೆಕಂಡಂತಿದೆ.
ಪಾರದರ್ಶಕವಾಗಿರುವುದರಿಂದ ಬಿಳಿಯ ರಕ್ತಕಣಗಳೆಂದು ಕರೆಯಲ್ಪಡುತ್ತವೆ. ಇವುಗಳ ಆಯುಸ್ಸು, 3-6 ದಿನಗಳು. ರಕ್ತದಲ್ಲಿ ಇವುಗಳ ಸಂಖ್ಯೆ ಕೆಂಪು ಗಳಿಗಿಂತ ಕಡಿಮೆ. 4000-11000 ಕ್ಯು. ಮಿ. ಮೀ ನಷ್ಟಿರುವ ಬಿಳಿರಕ್ತ ಕಣಗಳು 4000 ಕ್ಯು. ಮಿ/ಮೀ ಗಿಂತ ಕಡಿಮೆ ಇರಬಾರದು. ಸೋಂಕುಬಲಿತು, ದೇಹಕ್ಕೆ, ಅತೀವ ತೊಂದರೆಯುಂಟಾಗುತ್ತದೆ. ಸೋಂಕಿನಿಂದ ಬೆರೆತ ರಕ್ತದಲ್ಲಿ ಹೆಚ್ಚಾಗುವ ಸ್ಥಿತಿ. (ಕುರು) ರಕ್ತಕೆಟ್ಟಿದೆ. ಬಿಳಿ ರಕ್ತಕಣಗಳಲ್ಲಿ ಹಿಮೋಗ್ಲೋಬಿನ್ ಹೊಂದಿರುವುದಿಲ್ಲ. ನ್ಯೂಟ್ರೋಫಿಲ್ ಬಿ ಗಲು 10-12 ಮೈಕ್ರಾನ್ ನಷ್ಟಿದ್ದು, ಫಾಸ್ಫಟೇಸ್, ಪ್ರೋಟಿಯೇಸ್, ಅಮೈಲೇಸ್, ಮುಂತಾದ ಕಿಣ್ವಗಳನ್ನು ಹೊಂದಿರುತ್ತವೆ. ದೇಹದ ಮೇಲೆ ದಾಳಿಮಾಡುವ ವಿಷಕ್ರಿಮಿಗಳನ್ನು ನುಂಗಿ ಅರಗಿಸುವ ಕೆಲಸಮಾಡುತ್ತವೆ. ಅಂತಿಮವಾಗಿ ಹೋರಾಟದಲ್ಲಿ ಸಾಯುತ್ತವೆ. ಕೀವಾಗಿ ನಮಗೆ ಕಾಣಿಸಿಕೊಳ್ಳುವುದು, ಸೋಂಕನ್ನೂ ಸೋಂಕಿನಭಾಗವನ್ನೂ ಅರಗಿಸಿ ಹೊರದೂಡುವ ಕ್ರಮ. ಇಯೋಸಿನೋಫಿಲ್ ರಕ್ತಕಣಗಳು, 10-12ಮೈಕ್ರಾನ್ ನಷ್ಟಿದ್ದು, ದೇಹಕ್ಕೆ ಅಲರ್ಜಿಯಾಗುವುದನ್ನು ತಪ್ಪಿಸಲು ಹೋರಾಟ ನಡೆಸುತ್ತವೆ. ಇವುಗಳಲ್ಲಿ ಹಿಸ್ಟಮಿನ್ ದಂಡಿಯಾಗಿದೆ. ಚರ್ಮದ ಅಲರ್ಜಿ, ಹಾಗೂ ಅಸ್ತಮಾ ಮುಂತಾದ ಶ್ವಾಸಕೋಶದ ಸೋಂಕಿನಲ್ಲಿ ಇವುಗಳ ಸಂಖ್ಯೆ ವೃದ್ಧಿಸುವುದು. ಬೆಸೋಫಿಲ್, 8-10 ಮೈಕ್ರಾನ್ಸ್, ಹಿಸ್ಟಮಿನ್ ಮತ್ತು ಹಿಪಾರಿನ್ ಗಳನ್ನು ಹೊಂದಿದೆ. ರಕ್ತನಾಳದೊಳಗೆ ಹೆಪ್ಪುಗಟ್ಟದಂತೆ ಇವು ಜಾಗ್ರತೆವಹಿಸುತ್ತವೆ. ದೇಹದ ವಿಷಕ್ರಿಮಿಗಳನ್ನು ನಾಶಮಾಡಲು, ಮಾನೋಸೈಟ್ ಗಳು ಸಹಾಯಮಾಡುತ್ತವೆ. (16-18 ಮೈಕ್ರಾನ್)ಲಿಂಪೋಸೈಟ್ ಗಳಲ್ಲಿ ಎರಡು ವಿಧ.ಸಣ್ಣವು 7.5 ಮೈಕ್ರಾನ್. ದೊಡ್ಡವು 12 ಮೈಕ್ರಾನ್ ನಷ್ಟಿರುತ್ತವೆ. ಇವುಗಳು ತಯಾರಿಸುವ ಗಾಮಾ ಗ್ಲಾಬ್ಯುಲಿನ್ ದೇಹಕ್ಕೆ ದಾಳಿಯಿಡುವ ವಿಷಕ್ರಿಮಿಗಳು ಉತ್ಪಾದಿಸುವ ವಿಷದ ವಿರುದ್ಧ ಹೋರಾಡಿ, ಅವುಗಳನ್ನು ನಿಷ್ಕ್ರಿಯಗೊಳಿಸುತ್ತವೆ. ಬೀಟ ಗ್ಲಾಬ್ಯುಲಿನ್ ಗಳು ದೇಹಕ್ಕೆ ಅವಶ್ಯಕವಾದ ಪ್ರೋಟೀನ್ ಗಳನ್ನು ಒದಗಿಸುತ್ತವೆ.ಪ್ಲೇಟ್ ಲೆಟ್ ಗಳು (2.5 ಮೈಕ್ರಾನ್) ಸಣ್ಣ ಸಣ್ಣ ಪೆಪ್ಪರ್ ಮಿಂಟ್ ನ ಮಾದರಿಯಲ್ಲಿರುತ್ತವೆ. ರಕ್ತದಲ್ಲಿ ಇವುಗಳ ಸಂಖ್ಯೆ, 1.5 ಲಕ್ಷದಿಂದ 4.5 ಲಕ್ಷ ಕ್ಯು. ಮಿಲಿ. ಮೀಟರ್. ದೇಹದಲ್ಲಿ ರಕ್ತಸ್ರಾವವಾದಾಗ, ನಿಲ್ಲಿಸುವಲ್ಲಿ, ಗಾಯಗೊಂಡ ರಕ್ತನಾಳಗಳ ಒಳಪದರದ ದುರಸ್ತಿಯಲ್ಲಿ ತಕ್ಷಣ ಭಾಗವಹಿಸುತ್ತವೆ.
ರಕ್ತದ ಕಾರ್ಯವಿಧಾನ:
ಆಮ್ಲಜನಕವನ್ನು ಶ್ವಾಸಕೋಶದಿಂದ ದೇಹದ ಎಲ್ಲಾ ಅಂಗಾಂಶಗಳಿಗೂ, ಇಂಗಾಲದ ಡೈ ಆಕ್ಸೈಡನ್ನು ದೇಹದ ಎಲ್ಲಾ ಅಂಗಗಳಿಂದ ಶ್ವಾಸಕೋಶಕ್ಕೂ ತರುವ ಕೆಲಸಮಾಡುತ್ತವೆ. ಪಚನಗೊಂಡ ಆಹಾರ ಪದಾರ್ಥಗಳನ್ನು ಕರುಳಿನಿಂದ ಅಂಗಾಂಗಗಳಿಗೆ, ಒದಗಿಸುತ್ತದೆ. ತಿಂದ ಆಹಾರದಲ್ಲಿರುವ ವಿಟಮಿನ್ ಶಕ್ತಿ, ಕೊಬ್ಬಿನಂಶ ಹಾಗೂ ದೇಹದಲ್ಲೇ ಉತ್ಪತ್ತಿಯಾಗುವ ಹಾರ್ಮೋನ್ ಗಳನ್ನು ಎಲ್ಲಿಗೆ ಸೇರಿಸಬೇಕೋ ಅಲ್ಲಿಗೆ ಸೇರಿಸಲು ಸಹಾಯಮಾಡುತ್ತವೆ. ದೇಹಕ್ಕೆ ಬೇಡವಾದ ವಸ್ತುಗಳನ್ನು ಅಂಗಾಶಗಳಿಂದ ಪಡೆದು, ಮೂತ್ರಪಿಂಡ, ಶ್ವಾಶಕೋಶ, ಹಾಗೂ ಕರುಳಿನ ಮುಖಾಂತರ, ದೇಹದಿಂದ ಹೊರದೂಡುತ್ತದೆ. ದೇಹಕ್ಕೆ ಅತ್ಯವಶ್ಯಕವಾದ, ನೀರಿನ, ಆಮ್ಲ- ಪ್ರತ್ಯಾಮ್ಲ, ಹಾಗೂ ಚರಾಣುಗಳ ಸಮತೋಲನದೊಂದಿಗೆ, ದೇಹದ ಉಷ್ಣತೆಯನ್ನು 37 ಡಿಗ್ರಿ ಸೆಲ್ಸಿಯಸ್ ನಲ್ಲಿರುವಂತೆ ಕಾಪಾಡುತ್ತದೆ. ದೇಹದ ಸಿಪಾಯಿಯಾಗಿ ರಕ್ಷಣೆ ಮಾಡುವುದಲ್ಲದೆ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ರಕ್ತದಲ್ಲಿ ಪ್ರೋಟೀನ್ ಗಳಿವೆ. ಫೈಬ್ರನೋಜನ್, ಪ್ರೋಥ್ರಾಂಬಿನ್ ಗಳು, ರಕ್ತ ಹೆಪ್ಪು ಕಟ್ಟಲು ಸಹಾಯಮಾಡುತ್ತವೆ. ಆಲ್ಬುಮಿನ್ ರಕ್ತ ಹಾಗೂ ಉಳಿದ ಅಂಗಾಂಗಗಳ ನಡುವಿನ ಉಚ್ಚಾಲನಿಕ ಒತ್ತಡವನ್ನು ಕಾಪಾಡುತ್ತದೆ. ರಕ್ತದ ಸ್ನಿಗ್ಧತ್ವವನ್ನು ಇದು ಕಾಪಾಡುತ್ತದೆ. ದೇಹದ ರಕ್ತದೊತ್ತಡ ನಿಯಂತ್ರಣಕ್ಕೆ ಅತ್ಯಾವಶ್ಯಕ. ಗಾಮಾಗ್ಲಾಬ್ಯುಲಿನ್ ಪ್ರತಿರೋಧಕ ವಸ್ತುವನ್ನು ತಯಾರಿಸಿ ಸೋಂಕಿನ ವಿರುದ್ಧ ಹೋರಾಟ ನಡೆಸುತ್ತವೆ. ರಕ್ತದಲ್ಲಿ ಹೆಪ್ಪುಗಟ್ಟುವ ಅಂಶಗಳಿವೆ. ರಕ್ತಸ್ರಾವವಾಡೊಡನೆಯೇ ಕಾರ್ಯೋನ್ಮುಖವಾಗುತ್ತವೆ. ರಕ್ತವನ್ನು ಹೆಪ್ಪುಗಟ್ಟಿಸಿ ಅಪಾಯವನ್ನು ತಪ್ಪಿಸುತ್ತವೆ.
ರಕ್ತನಾಳದಲ್ಲಿ ರಕ್ತ ದ್ರವರೂಪದಲ್ಲೇ ಇದ್ದು ಹೆಪ್ಪುಗಟ್ಟಿವುದಿಲ್ಲವೇಕೆ ಎಂಬ ಸಂಶಯ ಬರುವುದು ಸಹಜ. ರಕ್ತನಾಳದ ಒಳಪದರದಲ್ಲಿ ಯಾವುದೇ ಏಟು ಬೀಳದಿದ್ದರೆ, ರಕ್ತ ಹೆಪ್ಪುಗಟ್ಟುವುದಿಲ್ಲ. ಥ್ರಾಂಬಿನ್ ಅಂಶ ಇಲ್ಲಿ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುವುದರಿಂದ. ಹೆಪ್ಪುಗಟ್ಟುವ ಮದ್ಯವರ್ತಿಗಳನ್ನು ಆರ್ ಇ ಜೀವಕೋಶಗಳು ತಕ್ಷಣ ತೆಗೆದುಬಿಡುತ್ತವೆ. ಅಲ್ಲದೆ, ರಕ್ತದಲ್ಲಿರುವ "ಹಿಪಾರಿನ್," ಅಂಶ, ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತದೆ. ರಕ್ತನಾಳದೊಳಗಿನ ರಕ್ತ ಯಾವುದೇ ಕಾರಣಕ್ಕೂ ಹೆಪ್ಪುಗಟ್ಟಲೇ ಬಾರದು. ತಕ್ಷಣ ಹೃದಯ ಸ್ತಂಬನವಾಗುತ್ತದೆ. ಇದೇ ಕ್ರಿಯೆ ಮೆದುಳಿನ ರಕ್ತನಾಳದಲ್ಲಾದರೆ, ಪಾಶ್ವ೯ವಾಯು ಹೊಡೆಯುತ್ತದೆ.
ಸುಮಾರು 70 ಕೆ.ಜಿ. ಇರುವ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲಿ ಸುಮಾರು 5 ಲೀಟರ್ ನಷ್ಟು ರಕ್ತವಿರುತ್ತದೆ.ಎಲುಬಿನ ಮಜ್ಜೆ ರಕ್ತ ತಯಾರಿಸುವ ಕಾರ್ಖಾನೆ. ಇದು ದೇಹದ ಮೂಳೆಯೊಳಗಿನ ಟೊಳ್ಳು ಭಾಗದಲ್ಲಿ ಕುಳಿತಿರುತ್ತದೆ. ಹುಟ್ಟುವಾಗ ಸುಮಾರು 70 ಮಿ. ಲೀಟರ್ ತೂಗುವ ಮಜ್ಜೆ, ವಯಸ್ಕರಲ್ಲಿ ಸುಮಾರು, 4 ಲೀಟರ್ ನಷ್ಟಾಗುತ್ತದೆ. ಮಜ್ಜೆಯಲ್ಲಿ ಎರಡುವಿಧ :1. ಕೆಂಪುಮಜ್ಜೆ. ಇಲ್ಲಿ ಕೆಂಪುರಕ್ತಕಣಗಳು ತಯಾರಾಗುತ್ತವೆ. ಭ್ರೂಣಾವಸ್ಥೆಯಲ್ಲಿ ಎಲ್ಲಾಮೂಳೆಗಳೂ ಕೆಂಪು ಮಜ್ಜೆಯನ್ನು ಹೊಂದಿದ್ದು, ವಯಸ್ಸಾದಂತೆ ಕಡಿಮೆಯಾಗುತ್ತಾ ಹೋಗುತ್ತವೆ. ಕಾಲಿನ ಉದ್ದನೆಯ ಮೂಳೆಗಳತುದಿಯಲ್ಲಿ, ಎದೆ ಮೂಳೆಗಳಲ್ಲಿ, ಪಕ್ಕೆಲುಬಿನ ಮೂಳೆಗಳಲ್ಲಿ, ತಲೆಬುರುಡೆ ಮೂಳೆಗಳಲ್ಲಿ, ಹಾಗೂ ಪೃಷ್ಯದ ಮೂಳೆಗಳಲ್ಲಿ ಮಾತ್ರ ಕಾಣ ಸಿಗುತ್ತವೆ.ಉಳಿದವು ಹಳದಿ ಮಜ್ಜೆಯಾಗಿ ಮಾರ್ಪಾಟಾಗಿ ಕೆಲಸಕ್ಕೆ ಬಾರದಂತಾಗುತ್ತವೆ.
ಎರಿತ್ರೋ ಪಾಯಿಟಿನ್ ಎಂಬ ಹಾರ್ಮೋನ್ ನ ಉತ್ತೇಜನದಿಂದ, ಉತ್ಪತ್ತಿಯಾಗುವ ಕೆಂಪು ರಕ್ತ ಕಣಗಳು ಕೆಂಪಾಗಿ ಕಾಣಲು ಅದರಲ್ಲಿ ಹುದುಗಿಕೊಂಡಿರುವ ಹಿಮೋಗ್ಲೋಬಿನ್ ಕಾರಣ. ಕೆಂಪುರಕ್ತ ಕಣಗಳು ಸುಮಾರು 4 ತಿಂಗಳು ಬದುಕುತ್ತವೆ. ಹಿಮೋಗ್ಲೋಬಿನ್ 96%, ಗ್ಲೋಬಿನ್ ಎಂಬ ಪ್ರೋಟೀನ್ ನಿಂದ ಆಗಿದ್ದು, ಉಳಿದ 4% ಹೀಮ್ ಎಂಬ ಕಬ್ಬಿಣದಂಶದ ಜೊತೆ ಸೇರಿಕೊಂಡಿದೆ. ಈ ಬಣ್ಣಕ ಆಮ್ಲಜನಕದ ಜೊತೆಗೆ ಸುಲಭವಾಗಿ ಬೆರೆತು, ಅಷ್ಟೇ ಸುಲಭವಾಗಿ ಬಿಟ್ಟುಕೊಡುವ ಸ್ವಭಾವ ಹೊಂದಿದೆ.ರಕ್ತದಲ್ಲಿ ಹಿಮಾಗ್ಲೋಬಿನ್ ಅಂಶ, 18 ಗ್ರಾಮ್ ಮೀರಿದರೂ, ಅದು ದೇಹಕ್ಕೆ ಒಳ್ಳೆಯದಲ್ಲ. ಅಪಾಯಕಾರಿ.
ಎಬಿಒ ರಕ್ತ ಗು೦ಪಿನ ವ್ಯವಸ್ಥೆಯನ್ನು ಆಸ್ಟ್ರೇಲಿಯಾದ ಕಾರ್ಲ್ ಲಾ೦ಡ್ಸ್ಟೈನರ್ ಎ೦ಬ ವಿಜ್ಞಾನಿಯು ಕ೦ಡುಹಿಡಿದನೆ೦ದು ತಿಳಿಯಲಾಗಿದೆ. ಅವನು 1900 ರಲ್ಲಿ ಮೂರು ಬೇರೆ ವಿಧಧ ರಕ್ತ ವಿಧಗಳನ್ನು ಕ೦ಡುಹಿಡಿದನು.ತನ್ನ ಈ ಕಾರ್ಯಕ್ಕಾಗಿ 1930 ರಲ್ಲಿ ಅವನು ಜೀವಶಾಸ್ತ್ರ ಅಥವಾ ವೈದ್ಯಕೀಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ಆ ಸಮಯದಲ್ಲಿ ಸ೦ವಹನದ ಕೊರತೆಯಿ೦ದಾಗಿ, ಝೆಕೊಸ್ಲಾವಾಕಿಯಾದ ಸೀರಮ್ ಶಾಸ್ತ್ರಜ್ಞ ಜಾನ್ ಜಾನ್ಸ್ಕಿಯು ಮಾನವ ರಕ್ತವನ್ನು ನಾಲ್ಕು ಗು೦ಪುಗಳಾಗಿ ವಿ೦ಗಡಿಸುವುದರಲ್ಲಿ ಮೊದಲಿಗನಾದನು,ಆದರೆ ಲಾ೦ಡ್ಸ್ಟೈನರ್‌ನ ಸ್ವತ೦ತ್ರ ಸ೦ಶೋಧನೆಯು ವಿಜ್ಞಾನ ಜಗತ್ತಿನಲ್ಲಿ ಮನ್ನಣೆಯನ್ನು ಪಡೆಯಿತು ಅದೇ ಸಮಯದಲ್ಲಿ ಜಾನ್ಸ್ಕಿಯ ಸ೦ಶೋಧನೆಯು ಕತ್ತಲೆಯಲ್ಲೇ ಉಳಿಯಿತು.
ತನ್ನದಲ್ಲದ ರಕ್ತ ಗು೦ಪಿನ ಪ್ರತಿಜನಕಗಳ ವಿರುದ್ಧ ಅಸ್ಥಿತ್ವದಲ್ಲಿರುವ ಒ೦ದೇ ರೀತಿಯ ರೋಗನಿರೋಧಕಗಳ ಕಾರಣದಿ೦ದಾಗಿ ಎ ರಕ್ತ ಗು೦ಪಿನ ಮಾನವರು ಬಿ ಗು೦ಪಿನಿ೦ದ ರಕ್ತವನ್ನು ತೆಗೆದುಕೊ೦ಡಲ್ಲಿ ತಕ್ಷಣ ಎ ಗು೦ಪಿನ ಆರ್‌ಬಿಸಿ ಯ ವಿರುದ್ಧ ಆಯ್‌೦ಟಿ-ಬಿ ರೋಗನಿರೋಧಕಗಳನ್ನು ಹೆಚ್ಚಾಗಿ ಉತ್ಪತ್ತಿ ಮಾಡುತ್ತವೆ. ಆಯ್‌೦ಟಿ-ಬಿ ರೋಗನಿರೋಧಕಗಳು ಆರ್‌ಬಿಸಿ ಯಲ್ಲಿನ ಬಿ ಪ್ರತಿಜನಕಗಳ ಬ೦ಧನದಲ್ಲಿರುತ್ತವೆ ಮತ್ತು ಆರ್‌ಬಿಸಿಯ ವಿಭಜನೆಯನ್ನು ಪೂರ್ತಿ ಮಾಡುವ ಮಾಧ್ಯಮವಾಗಲು ಕಾರಣವಾಗುತ್ತದೆ. ಬಿ ಮತ್ತು ಒ ಗು೦ಪುಗಳೊ೦ದಿಗೂ ಕೂಡ ಇದೇ ರೀತಿಯ ಪರಿಣಾಮಗಳು೦ಟಾಗುತ್ತವೆ. ಇದರ ಹೊರತಾಗಿ, ಎಬಿ ರಕ್ತ ಗು೦ಪು ಮಾತ್ರ ಒ೦ದೇರೀತಿಯ ಆಯ್‌೦ಟಿ-ಎ ಮತ್ತು ಆ೦ಟಿ-ಬಿ ರೋಗನಿರೋಧಕಗಳನ್ನು ಹೊ೦ದಿರುವುದಿಲ್ಲ. ಇದು ಏಕೆ೦ದರೆ ಆರ್‌ಬಿಸಿ ಯಲ್ಲಿ ಎ ಮತ್ತು ಬಿ ಎರಡೂ ಪ್ರತಿಜನಕಗಳು ಕ೦ಡುಬರುತ್ತವೆ ಮತ್ತು ಅವು ಎರಡೂ ಸ್ವಯ೦ ಪ್ರತಿಜನಕ
ಗಳಾಗಿರುತ್ತವೆ, ಹಾಗಾಗಿ ಅವು ಎಲ್ಲಾ ಗು೦ಪುಗಳಿ೦ದಲೂ ರಕ್ತವನ್ನು ಪಡೆಯಬಹುದು ಮತ್ತು ಅವು ಸಾರ್ವತ್ರಿಕ ಗ್ರಾಹಿಗಳಾಗಿರುತ್ತವೆ.ಎ ರಕ್ತ ಗು೦ಪಿನ ಮಾನವರು ಎ ಗು೦ಪು ಮತ್ತು ಒ ರಕ್ತ ಗು೦ಪಿನ ದಾನಿಗಳಿ೦ದ ರಕ್ತವನ್ನು ಪಡೆಯಬಹುದು.ಬಿ ರಕ್ತ ಗು೦ಪಿನ ಮಾನವರು ಬಿ ಗು೦ಪು ಮತ್ತು ಒ ರಕ್ತ ಗು೦ಪಿನ ದಾನಿಗಳಿ೦ದ ರಕ್ತವನ್ನು ಪಡೆಯಬಹುದು.ಎಬಿ ರಕ್ತ ಗು೦ಪಿನ ಮಾನವರು ಎ ಗು೦ಪು, ಬಿ ಗು೦ಪು, ಎಬಿ ಗು೦ಪು ಅಥವಾ ಒ ರಕ್ತ ಗು೦ಪಿನ ದಾನಿಗಳಿ೦ದ ರಕ್ತವನ್ನು ಪಡೆಯಬಹುದು.ಒ ರಕ್ತ ಗು೦ಪಿನ ಮಾನವರು ಒ ರಕ್ತ ಗು೦ಪಿನ ದಾನಿಗಳಿ೦ದ ಮಾತ್ರ ರಕ್ತವನ್ನು ಪಡೆಯಬಹುದು.ಎ, ಬಿ, ಎಬಿ ಮತ್ತು ಒ ರಕ್ತ ಗು೦ಪಿನ ಮಾನವರು ಒ ರಕ್ತ ಗು೦ಪಿನ ದಾನಿಗಳಿ೦ದ ರಕ್ತವನ್ನು ಪಡೆಯಬಹುದು. ಒ ರಕ್ತ ಗು೦ಪು ಸಾರ್ವತ್ರಿಕ ದಾತ ಎ೦ದು ಕರೆಯಲ್ಪಡುತ್ತದೆ."ಸಾರ್ವತ್ರಿಕ ಗ್ರಾಹಿ" ಈ ಸಿದ್ಧ ನಿಯಮಕ್ಕೆ ಅಪವಾದವೆ೦ದರೆ ಇದು ಕೇವಲ ಸರಿಯಾಗಿ ಪ್ಯಾಕ್ ಮಾಡಿದ ಆರ್‌ಬಿಸಿ ಗೆ ಮಾತ್ರ ಅನ್ವಯಿಸುತ್ತದೆ, ಮತ್ತು ಎಲ್ಲಾ ರಕ್ತದ ಉತ್ಪನ್ನಗಳಿಗೆ ಅನ್ವಯಿಸುವುದಿಲ್ಲ.
(ವಿವಿಧ ಮೂಲಗಳಿಂದ)
-ಹನುಮಂತ.ಮ.ದೇಶಕುಲಕರ್ಣಿ.
ಸಾ.ಭೋಗೇನಾಗರಕೊಪ್ಪ-581196